Date : 12-07-2008 | 13 Comments. | Read More
“ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿಯೆಂದರೆ ಮನಮೋಹನ್ ಸಿಂಗ್” ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಆಡ್ವಾಣಿಯವರು ಹೇಳುತ್ತಲೇ ಬಂದಿದ್ದಾರೆ. ಅಷ್ಟು ಸಾಲದೆಂಬಂತೆ ಈಗ ಹೊಸ ರಾಗ ಎಳೆದಿದ್ದಾರೆ. ಅಮೆರಿಕದೊಂದಿಗಿನ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿರುವ ಆಡ್ವಾಣಿಯವರು, ‘ಪ್ರಧಾನಿ ಮನಮೋಹನ್ ಸಿಂಗ್ ದೇಶವನ್ನು ದಾರಿತಪ್ಪಿಸಿದ್ದಾರೆ’ ಎಂದು ಹೊಸ ಆರೋಪ ಮಾಡಿದ್ದಾರೆ. ಆದರೆ ಮನಮೋಹನ್ ಸಿಂಗ್ ನಿಜಕ್ಕೂ ದೇಶವನ್ನು ದಾರಿತಪ್ಪಿಸಿದ್ದಾರೆಯೇ? ಒಂದು ವೇಳೆ ಆಡ್ವಾಣಿಯವರು ಹೇಳಿದಂತೆ ಅವರು […]
Date : 05-07-2008 | 21 Comments. | Read More
ಆ ಘಟನೆ ನಡೆದು ೧೨೦೦ ವರ್ಷಗಳೇ ಕಳೆದು ಹೋದವು. ಅದು ಎಂಟನೆಯ ಶತಮಾನ. ಮುಸಲ್ಮಾನರು ಖಡ್ಗ ಹಿಡಿದು ಮತಪ್ರಚಾರಕ್ಕೆ ಹೊರಟಿದ್ದರು. ಅವರ ಧಾರ್ಮಿಕ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲದಂತಾ ಯಿತು. ಹಾಗಂತ ಎದುರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಪಾರ್ಸಿಗಳು ದೇಶವನ್ನೇ ಬಿಟ್ಟು ಹೊರಟರು. ಹಾಗೆ ತಮ್ಮ ಮೂಲಸ್ಥಾನವಾದ ಪರ್ಷಿಯಾವನ್ನು(ಈಗಿನ ಇರಾನ್) ಬಿಟ್ಟು ಹೊರಟ ಒಂದಿಷ್ಟು ಪಾರ್ಸಿಗಳು ಬಂದು ತಲುಪಿದ್ದು ನಮ್ಮ ಗುಜರಾತ್ ಬಳಿ ಇರುವ ‘ದಿಯು’ ದ್ವೀಪವನ್ನು. ಅಲ್ಲಿಂದ ಸಂಜನ್ಗೆ ಆಗಮಿಸಿದರು. ಅದು ಗುಜರಾತ್ನ ರಾಜನಾಗಿದ್ದ ಜಾಧವ್ ರಾಣಾನ […]