Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮೇನಕೆ ಬಂದು ಕುಣಿಯುವವರೆಗೂ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇ ಆಯ್ತು!

ಮೇನಕೆ ಬಂದು ಕುಣಿಯುವವರೆಗೂ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇ ಆಯ್ತು!

ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ಲಾಲಕೃಷ್ಣ ಆಡ್ವಾಣಿ, ನಿತಿನ್ ಗಡ್ಕರಿ ಇವರಲ್ಲಿ ಯಾರನ್ನು ದೂರಬೇಕು? ಯಾರ ಮೇಲೆ ದೋಷಾರೋಪಣೆ ಮಾಡಬೇಕು? ಒಬ್ಬ ವ್ಯಕ್ತಿಯಿಂದಾಗಿ ರಾಜ್ಯ ಬಿಜೆಪಿಗೆ ಈ ಗತಿ ಬಂತೇ? ಅಥವಾ ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸರ್ಕಾರ ಐದು ವರ್ಷಕ್ಕೇ ಅಂತ್ಯಗೊಳ್ಳಲು ಇವರೆಲ್ಲರ ಸಾಂಘಿಕ ಹೊಣೆಗಾರಿಕೆ ಇದೆಯೇ? ನೀವು Bay of Pigs ದಾಳಿ ಬಗ್ಗೆ ಕೇಳಿರಬಹುದು. ಅಮೆರಿಕದ ಗುಪ್ತಚರ ಸಂಸ್ಥೆ CIA, ನೆರೆಯ ಕ್ಯೂಬಾದ ಫೀಡೆಲ್ ಕ್ಯಾಸ್ಟ್ರೋ ಸರ್ಕಾರವನ್ನು ಪದಚ್ಯುತಗೊಳಿಸಲು ಅಲ್ಲಿನ ಬಂಡುಕೋರರನ್ನು ಶಸ್ತ್ರಸಜ್ಜಿತಗೊಳಿಸಿ 1961, ಏಪ್ರಿಲ್ 17 ರಂದು ನಡೆಸಿದ ಆಕ್ರಮಣವೇ Bay of Pigs Invasion. ಆದರೆ ಈ ಆಕ್ರಮಣವನ್ನು ಕ್ಯಾಸ್ಟ್ರೋ ಕೇವಲ ಮೂರು ದಿನಗಳಲ್ಲಿ ಹತ್ತಿಕ್ಕಿದರು. ಇತ್ತ ಆ ದಾಳಿಗೆ ಒಪ್ಪಿಗೆ ನೀಡಿದ್ದ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಮೇಲೆ ಎಲ್ಲರೂ ಸೋಲಿನ ಗೂಬೆ ಕೂರಿಸಿದರು. ಆಗ ಕೆನಡಿಯವರು, Victory has a thousand fathers; defeat is an orphan, ಅಂದರೆ ‘ಗೆಲುವಿಗೆ ಸಾವಿರ ಸರದಾರರು, ಆದರೆ ಸೋಲು ಅನಾಥ’ ಎಂದಿದ್ದರು.

ಆದರೆ…

2008ರಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿಯೇ ಮೊದಲ ಸರ್ಕಾರವನ್ನು ಕರ್ನಾಟಕದಲ್ಲಿ ರಚಿಸಿದಾಗ ಆ ಗೆಲುವಿಗೆ ಬಿ.ಎಸ್. ಯಡಿಯೂರಪ್ಪನವರೊಬ್ಬರೇ ಸರದಾರರಾಗಿದ್ದರು. ಮೊನ್ನೆ ಮೇ 8 ರಂದು ಹೊರಬಿದ್ದ ಫಲಿತಾಂಶವನ್ನು ನೋಡಿದಾಗ ಬಿಜೆಪಿ ಸೋಲಿಗೆ ಮಾತ್ರ ಸಾವಿರ ಸರದಾರರು ಕಾಣುತ್ತಿದ್ದಾರೆ!

ಇಂಥದ್ದೊಂದು ಹೀನಾಯ ಪರಿಸ್ಥಿತಿಗೆ ಬಿಜೆಪಿ ತಲುಪಿದ್ದಾದರೂ ಹೇಗೆ?

ಗುಜರಾತ್ನಲ್ಲಿ ಬಿಜೆಪಿ ಮೂರು ಬಾರಿ ಸತತವಾಗಿ ಗೆದ್ದು ಬಂದಿದ್ದರೆ, ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಮೂರನೇ ಬಾರಿಗೆ ವಿಜಯೋತ್ಸವ ಆಚರಿಸಲು ಬಿಜೆಪಿ ಸರ್ಕಾರಗಳು ಸಿದ್ಧವಾಗುತ್ತಿವೆ. ಗೋವಾದಲ್ಲಿ ಮನೋಹರ್ ಪಾರಿಕ್ಕರ್ ಶಹಬ್ಬಾಷ್ ಎನಿಸಿಕೊಳ್ಳುವಂತೆ ಆಡಳಿತ ನಡೆಸುತ್ತಿದ್ದಾರೆ. ರಾಜಸ್ಥಾನದಲ್ಲಿ ಮತ್ತೆ ಗದ್ದುಗೆ ಏರಲು ಬಿಜೆಪಿ ತಯಾರಿ ನಡೆಸುತ್ತಿದೆ. ಹೀಗೆ ಎಲ್ಲೆಡೆಯೂ ಬಿಜೆಪಿಗೆ ಒಳ್ಳೆಯ ಹೆಸರು ಬರುತ್ತಿದ್ದರೆ ಕರ್ನಾಟಕದಲ್ಲೇಕೆ ಇಷ್ಟೊಂದು ಕಳಂಕಿತಗೊಂಡಿತು? ಒಳ್ಳೆಯದಾದಾಗ ಹೆಗ್ಗಳಿಕೆ ಹೇಗೆ ನಾಯಕನಿಗೆ ಸಲ್ಲುತ್ತದೋ, ಕೆಟ್ಟದಾದಾಗಲೂ ಅದರ ಹೊಣೆಯನ್ನು ಯಾವತ್ತೂ ನಾಯಕನೇ ಹೊರಬೇಕಾಗುತ್ತದೆ. ಹಾಗಾದರೆ ಇಲ್ಲಿನ ಬಿಜೆಪಿ ಸರ್ಕಾರವನ್ನು ರಚಿಸಿದ ಬಿ.ಎಸ್. ಯಡಿಯೂರಪ್ಪನವರು ಮೂಲತಃ ಒಬ್ಬ ಧನದಾಹಿಯಾಗಿದ್ದರೇ? 2006ರಲ್ಲಿ ಕುಮಾರಸ್ವಾಮಿಯವರ ಜತೆ ಸೇರಿ ಸರ್ಕಾರ ರಚಿಸಿದಾಗ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭಲ್ಲಿ ಆಡಳಿತದಲ್ಲಿ ಹೊಣೆಗಾರಿಕೆ ತರಲು ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸಂಘಪರಿವಾರವೇ ತನ್ನೊಬ್ಬ ಸ್ವಯಂಸೇವಕನನ್ನು ಉಪಮುಖ್ಯಮಂತ್ರಿ ಕಚೇರಿಗೆ ವರ್ಗಾಯಿಸಿತ್ತು. ಅದರ ಬಗ್ಗೆ ಯಡಿಯೂರಪ್ಪನವರೂ ಸಹಮತ ಹೊಂದಿದ್ದರು. ಅವರಿಗೂ ರಾಜ್ಯಕ್ಕೆ, ಜನರಿಗೆ ಒಳ್ಳೆಯದು ಮಾಡಬೇಕೆಂಬ ಪ್ರಾಮಾಣಿಕ ಕಳಕಳಿಯಿತ್ತು. ಉಪಮುಖ್ಯಮಂತ್ರಿಯಾಗಿ ಹಣಕಾಸು ಜತೆಗೆ ಅಬಕಾರಿ ಖಾತೆಯನ್ನೂ ಹೊಂದಿದ್ದರು. ಆ ಕಾಲದಲ್ಲಿ ವೈನ್ ಶಾಪ್ಗಳಿಗೆ ಖಾಸಗಿ ಏಜೆಂಟ್ಗಳ ಮೂಲಕ ಮದ್ಯ ಸರಬರಾಜಾಗುತ್ತಿತ್ತು. ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯವನ್ನು ಹೆಚ್ಚಿಸುವ ಸಲುವಾಗಿ ಮದ್ಯ ಸರಬರಾಜನ್ನು ಎಂಎಸ್ಐಎಲ್ ಮೂಲಕ ಮಾಡಲು ಮುಂದಾದಾಗ ಅದನ್ನು ತಪ್ಪಿಸಲು ಖಾಸಗಿ ಏಜೆಂಟರು ಇಡುಗಂಟಿನೊಂದಿಗೆ ಬಂದಾಗ ಎಡಗೈಯಲ್ಲೂ ಮುಟ್ಟದೆ ವಾಪಸ್ಸಟ್ಟಿದ್ದರು ಯಡಿಯೂರಪ್ಪ! ಆಗ ವಾಣಿಜ್ಯ ತೆರಿಗೆ ಕಮಿಷನರ್ ಆಗಿದ್ದ ಹರೀಶ್ ಗೌಡರ ಜತೆ ಸೇರಿ ಆದಾಯವನ್ನು ಹೆಚ್ಚಿಸಲು ಹಾಗೂ ಅದನ್ನು ಜನಪರ ಕಾರ್ಯಗಳಿಗೆ ವಿನಿಯೋಗಿಸಲು ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಏಕಾಏಕಿ ಹೇಳಿದಾಗ ಹಣಕಾಸು ಸಚಿವ ಯಡಿಯೂರಪ್ಪನವರು ಸಾಧ್ಯವೇ ಇಲ್ಲ ಎಂದು ವಿರೋಧಿಸಿದ್ದು ನಿಮಗೆ ನೆನಪಿರಬಹುದು. ಇತ್ತ ಉಪಮುಖ್ಯಮಂತ್ರಿ ಕಚೇರಿ ಸೇರಿದ್ದ ಸಂಘದ ವ್ಯಕ್ತಿ, ಯಡಿಯೂರಪ್ಪನವರು ಹಾಗೂ ಶಾಸಕರು-ಸಂಸದರು-ಪಕ್ಷದ ಮಧ್ಯೆ ಪರಸ್ಪರ ಸಂಪರ್ಕ-ಸಮಾಲೋಚನೆಗೆ ಅವಕಾಶ ಕಲ್ಪಿಸಲು ‘ಬ್ರೇಕ್ ಫಾಸ್ಟ್ ವಿಥ್ ಡೆಪ್ಯುಟಿ ಸಿಎಂ’ ಎಂಬ ಐಡಿಯಾ ಜಾರಿಗೆ ತಂದರು. ಒಂದೊಂದೇ ಜಿಲ್ಲೆಯ ಶಾಸಕರು, ಸಂಸದ ಹಾಗೂ ಪಕ್ಷದ ಸ್ಥಳೀಯ ನಾಯಕರು ಒಂದೊಂದು ದಿನ ಉಪಮುಖ್ಯಮಂತ್ರಿ ಜತೆ ಬೆಳಗಿನ ಉಪಾಹಾರಕ್ಕೆ ಸೇರಿ ತಮ್ಮ ಅಗತ್ಯ, ಅನಿವಾರ್ಯತೆಗಳನ್ನು ಮನವರಿಕೆ ಮಾಡಿಕೊಡಲು, ಅಭಿವೃದ್ಧಿ ಕೆಲಸಗಳಿಗೆ ಹಣಕಾಸು ಮಂಜೂರು ಪಡೆಯಲು, ಪಕ್ಷವನ್ನು ಹೇಗೆ ಬಲಪಡಿಸುವುದು ಎಂಬುದನ್ನು ಸಮಾಲೋಚಿಸಲು ಅವಕಾಶವಾಯಿತು. ಇದರಿಂದ ಉಪಮುಖ್ಯಮಂತ್ರಿ ಹಾಗೂ ಶಾಸಕರು, ಕೆಳಹಂತದ ನಾಯಕರ ನಡುವೆ ನೇರ ಸಂಪರ್ಕಕ್ಕೆ, ಸ್ನೇಹಕ್ಕೆ ಅವಕಾಶ ದೊರೆಯಲಾರಂಭಿತು.

ಇದು ಯಡಿಯೂರಪ್ಪನವರ ಸುತ್ತ ಇದ್ದ ಒಂದಿಬ್ಬರು ಭಟ್ಟಂಗಿಗಳಿಗೆ ಪಥ್ಯವಾಗಲಿಲ್ಲ!

ಇವತ್ತಿಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಬೇಕೆಂದರೆ ಡಾ. ಪರಮೇಶ್ವರರಾಗಲಿ, ಮುಂದಿನ ಮುಖ್ಯಮಂತ್ರಿಯಾಗಲಿರುವ ಸಿದ್ಧರಾಮಯ್ಯನವರಾಗಲಿ ಮೊದಲು ಕರೆ ಮಾಡಬೇಕಾಗಿರುವುದು ಆಸ್ಕರ್ ಫರ್ನಾಂಡಿಸ್ಗೆ. ಈ ಹಿಂದೆ ಮಾರ್ಗರೆಟ್ ಆಳ್ವ ಕೂಡಾ ಹಾಗೇ ಇದ್ದರು. ಆಸ್ಕರ್, ಆಳ್ವ, ಅಹ್ಮದ್ ಪಟೇಲ್ರಂತೆ ಯಡಿಯೂರಪ್ಪನವರ ಸುತ್ತ ಶೋಭಾ, ಸಿದ್ದಲಿಂಗಸ್ವಾಮಿ ಇದ್ದರು. ಇವರು ಕಾರ್ಯಪ್ರವೃತ್ತರಾದರು. ಯಡಿಯೂರಪ್ಪನವರ ಸುತ್ತ ಕೋಟೆ ನಿರ್ಮಾಣವಾಯಿತು. ಜನಪರ ಕಾಳಜಿ ಹೊಂದಿದ್ದ, ರೈತರ ಬಗ್ಗೆ ಅಂತಃಕರಣ ಇಟ್ಟುಕೊಂಡಿದ್ದ ಹಾಗೂ ಧಾರಾಳಿಯೂ ಆಗಿದ್ದ ಯಡಿಯೂರಪ್ಪನವರು ತಮ್ಮದೇ ಆದ ಕೆಲವು ಕಾರಣಗಳಿಂದಾಗಿ ಸುತ್ತ ಇದ್ದವರ ಧನದಾಹವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಿದರು. ಈ ಮಧ್ಯೆ, ಕುಮಾರಸ್ವಾಮಿಯವರ ವಚನಭ್ರಷ್ಟತೆಯಿಂದ ಚುನಾವಣೆ ಘೋಷಣೆಯಾಯಿತು. 2008, ಮೇ 25ರಂದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದಾಗ ಬಿಜೆಪಿ 110 ಸ್ಥಾನಗಳನ್ನು ಗೆದ್ದರೂ ಆತಂಕದ ಪರಿಸ್ಥಿತಿ ಸೃಷ್ಟಿಯಾಯಿತು. 80 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಹಾಗೂ 28 ಸೀಟು ಗೆದ್ದಿದ್ದ ಜೆಡಿಎಸ್ ಸೇರಿ (108 ಸೀಟು) ಸರ್ಕಾರ ರಚಿಸುವ ಅಪಾಯ ಎದುರಾಯಿತು. ಅಂತಹ ಆತಂಕಕಾರಿ ಸನ್ನಿವೇಶದಲ್ಲಿ 6 ಪಕ್ಷೇತರರ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿ ಸರ್ಕಾರ ರಚಿಸಲು ಮುಂದಾಗಿದ್ದೇನೋ ನಿಜ. ಆದರೆ ಪಕ್ಷೇತರರಲ್ಲಿ ಬಹುತೇಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಗಳೇ ಆಗಿದ್ದರಿಂದ ಆಮಿಷ ತೋರಿದರೆ ಮೂಲ ಪಕ್ಷಗಳಿಗೆ ಮರಳುವ ಭಯ ಇದ್ದೇ ಇತ್ತು. ಆರು ಜನರಲ್ಲಿ ಐವರಿಗೆ ಮಂತ್ರಿ ಪದವಿ ಕೊಟ್ಟರೂ ಆ ಆತಂಕ ದೂರವಾಗಲಿಲ್ಲ. ಆಗ ಚುನಾವಣಾ ಪ್ರಜಾತಂತ್ರದ ಮೂಲ ಆಶಯಕ್ಕೆ ಕೊಡಲಿಯೇಟು ಹಾಕಿ ಆಪರೇಷನ್ ಕಮಲಕ್ಕೆ ಕೈಹಾಕಿದರು. ಒಬ್ಬೊಬ್ಬ ಶಾಸಕನನ್ನು ಎಳೆದುಕೊಂಡು ಬರಬೇಕಾದರೆ ಕನಿಷ್ಠ ಐದಾರು ಕೋಟಿ ಕೊಡಬೇಕು. ಮರು ಚುನಾವಣೆಯಲ್ಲಿ ಗೆಲ್ಲಿಸಲು 15-20 ಕೋಟಿ ವ್ಯಯಿಸಬೇಕಾಗಿ ಬಂತು. ಹನ್ನೊಂದು ಶಾಸಕರನ್ನು ಕರೆತರಲು, ಗೆಲ್ಲಿಸಲು ಮಾಡಿದ ವೆಚ್ಚ ಎಷ್ಟಾಗಿರಬಹುದು ಯೋಚಿಸಿ? ಆಗ ಬಳ್ಳಾರಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಸಹಾಯಕ್ಕೆ ಕೈಚಾಚಬೇಕಾಯಿತು. ಅದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ನಾವು ಎಂಬಂತೆ ರೆಡ್ಡಿಗಳು ಬೀಗಲಾರಂಭಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರೂ, ರೆಡ್ಡಿಗಳು ಮುಖ್ಯಮಂತ್ರಿಗೇ ಸಡ್ಡು ಹೊಡೆಯುವ, ತಮ್ಮ ಮೂಗಿನ ನೇರಕ್ಕೆ ವರ್ತಿಸುವಂತೆ ಮಾಡುವ ತಾಕತ್ತು ತಮಗಿದೆಯೆಂಬಂತೆ ದರ್ಪ ತೋರಲಾರಂಭಿಸಿದರು. ಮೊದಲ ಆಪರೇಷನ್ ಕಮಲದಲ್ಲಿ ಎಳೆದು ತಂದ ಶಾಸಕರನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಂಡರು. ಹಾಗಾಗಿ ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಮಟ್ಟಹಾಕಲು ಯಡಿಯೂರಪ್ಪನವರು ಎರಡನೇ ಹಂತದ ಆಪರೇಷನ್ ಕಮಲಕ್ಕೆ ಕೈಹಾಕಿದರು. ಜಾತಿ ಮಕ್ಕಳನ್ನೇ ಮುಖ್ಯವಾಗಿ ಎಳೆದು ತಂದು ಕುರ್ಚಿ ಗಟ್ಟಿಮಾಡಿಕೊಳ್ಳಲು ಹೊರಟರು. ಒಟ್ಟಾರೆ ರಾಜ್ಯದ ಒಳಿತಿನ ಬಗ್ಗೆ ಕನಸು ಕಂಡಿದ್ದ ಯಡಿಯೂರಪ್ಪನವರು ಜನಪರ ಕಾರ್ಯ ಮಾಡುವುದಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದಕ್ಕೇ ಹೆಣಗಬೇಕಾದ ದೈನೇಸಿ ಸ್ಥಿತಿಯನ್ನು ತಲುಪಿದರು!

ಈ ಮಧ್ಯೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡನೇ ವರ್ಷದ ಸಮಾರಂಭ ಅರಮನೆ ಮೈದಾನದಲ್ಲಿ ಆಯೋಜನೆಯದಾಗ ತಾಯಿ ಸುಷ್ಮಾ ಸ್ವರಾಜ್ ಹಾಡಿಹೊಗಳಿದ್ದು ಯಾರನ್ನ? ಆರೋಗ್ಯ ಸಚಿವ ಶ್ರೀರಾಮುಲು ಜತೆ ಮಾತನಾಡಬೇಕೆಂದಾಗ 108ಕ್ಕೆ ಕರೆ ಮಾಡಿ ಎನ್ನುತ್ತೇನೆ. ಈ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿರುವುದು ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಎಂದೆಲ್ಲ ತನ್ನ ದತ್ತು ಪುತ್ರರನ್ನು ಹೊಗಳಿ ಹೋದರೇ ಹೊರತು ಬಹಳಷ್ಟು ಜನಪರ ಕಾರ್ಯಗಳನ್ನು ಮಾಡಿದ್ದರೂ ಮುಖ್ಯಮಂತ್ರಿಯ ಬಗ್ಗೆ ಒಂದೇ ಒಂದು ಒಳ್ಳೆಯ ಮಾತನಾಡಲಿಲ್ಲ! ಇಂಥ ಘಟನೆಗಳು ನಡೆದಾಗ ಸಹಜವಾಗಿಯೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದ ವ್ಯಕ್ತಿ ಆತಂಕಕ್ಕೊಳಗಾಗುವುದಿಲ್ಲವೆ? ಯಡಿಯೂರಪ್ಪನವರ ಪರಿಸ್ಥಿತಿ  ಹೇಗಾಗಿರಬೇಕು ಹೇಳಿ?

ಇತ್ತ ಚಾಲಾಕಿ ಬುದ್ಧಿಯ ಅನಂತ್ ಕುಮಾರ್ ಅವರ ಜತೆ ಉಂಟಾದ ಕಹಿ ಅನುಭವದ ಕಾರಣಕ್ಕೋ ಏನೋ ಎಲ್ಲರ ಬಗ್ಗೆಯೂ ಅನುಮಾನ ಬೆಳೆಸಿಕೊಂಡರು. ಇದರಿಂದಾಗಿ ಮೊದಲೇ ಹೊಂಚುಹಾಕಿಕೊಂಡಿದ್ದ, ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಕೆಲಸವಿಲ್ಲದೆ ಅಧಿಕಾರವಿದ್ದಾಗ ಕಬಳಿಸಿದ್ದನ್ನು ಖರ್ಚು ಮಾಡಿಕೊಂಡು ಕುಳಿತಿದ್ದ ಅನಂತ್ ಕುಮಾರ್ಗೆ ಒಳ್ಳೆಯ ಅವಕಾಶ ಸೃಷ್ಟಿಯಾಯಿತು. ಈ ಅನಂತ್ ಕುಮಾರ್ ಎಂಥ ವ್ಯಕ್ತಿಯೆಂದರೆ ಮತ್ತೊಬ್ಬ ಬ್ರಾಹ್ಮಣ ನಾಯಕ ಬೆಳೆಯುತ್ತಾನೆಂದು ಸಜ್ಜನ ಸುರೇಶ್ ಕುಮಾರ್ರನ್ನೇ ತುಳಿದಿದ್ದರು. 2004ರಲ್ಲಿ ಕಾಂಗ್ರೆಸ್ನ ನರೇಂದ್ರ ಬಾಬುಗೆ ಸಕಲ ಸಹಾಯ ನೀಡಿ ಸುರೇಶ್ ಕುಮಾರರನ್ನು ಸೋಲಿಸಿದ್ದೇ ಅನಂತ್ ಕುಮಾರ್ ಎಂದು ಪರಿವಾರದೊಳಗೇ ಮಾತನಾಡಿಕೊಳ್ಳುತ್ತಾರೆ. ಹಾಗಿರುವಾಗ ಮುಖ್ಯಮಂತ್ರಿಗಾದಿ ಮೇಲೆ ಕಣ್ಣಿಟ್ಟಿರುವ ಅವರು ಯಡಿಯೂರಪ್ಪನವರನ್ನು ಬಿಡುತ್ತಾರೆಯೇ? ಸ್ಪೀಕರ್ ಆಗಿದ್ದ ಶೆಟ್ಟರ್ರನ್ನು ರೆಡ್ಡಿಗಳ ಬಂಡಾಯ ನಾಟಕದ ಮೂಲಕ ಮಂತ್ರಿ ಮಾಡಿಸಿದಾಗಲೇ ಅನಂತ್ ಕುಮಾರ್ ಪಿತೂರಿ ಭೂಮಿಕೆ ಪಡೆದುಕೊಂಡಿತ್ತು. ಆದರೆ ಭಾವುಕ ಜೀವಿ ಯಡಿಯೂರಪ್ಪನವರಿಗೆ ಇಂಥ ಒಳಸುಳಿಗಳು ಸರಿಯಾಗಿ ಅರ್ಥವಾಗಲಿಲ್ಲ.

ಒಟ್ಟಾರೆ ಪಕ್ಷದೊಳಗೇ, ನಾಯಕರ ನಡುವೆಯೇ ಪರಸ್ಪರ ಅಪನಂಬಿಕೆ, ಕುರ್ಚಿಗಾಗಿ ಕಾದಾಟ, ಪಿತೂರಿ ನಡೆದರೆ ಏನಾದೀತು? ರಾಜ್ಯ ಬಿಜೆಪಿಯಲ್ಲೂ ಆಗಿದ್ದು ಇದೇ. ಮೇನಕೆ ಬಂದು ಕುಣಿಯುವವರೆಗೂ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ. ಹಾಗೇ ಅಧಿಕಾರ, ಹಣ ಎದುರಿಗೆ ಬಂದು ನಿಂತಾಗ ಬಿಜೆಪಿಯ ದೌರ್ಬಲ್ಯಗಳು ಮುಂಚೂಣಿಗೆ ಬಂದವು. ಆಗಲಾದರೂ ಕೇಂದ್ರ ನಾಯಕತ್ವ ಧಮೇಂದ್ರ ಪ್ರಧಾನ್ ಎಂಬ ಪೋಸ್ಟ್ಮನ್ನನ್ನು ಬೆಂಗಳೂರಿಗೆ ದೌಡಾಯಿಸುವ ಬದಲು ಸ್ವತಃ ಕಾರ್ಯಪ್ರವೃತ್ತವಾಗಿ, ಒಂದು ಸಮನ್ವಯ ಸಮಿತಿ ರಚನೆ ಮಾಡಿ, ಯಡಿಯೂರಪ್ಪನವರ ನಾಯಕತ್ವದಲ್ಲಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದರೆ ಗಾದಿ ಕಳೆದುಕೊಳ್ಳುವ ಆತಂಕ ದೂರವಾಗುತ್ತಿತ್ತು. ಆಗ ಹೊಣೆಗಾರಿಕೆಯನ್ನು ಯಡಿಯೂರಪ್ಪನವರಿಂದ ಕೇಳಬಹುದಿತ್ತು. ಇದರ ಬದಲು ಸುಷ್ಮಾ ಸ್ವರಾಜ್ ರೆಡ್ಡಿಗಳ ಪ್ರತಿನಿಧಿಯಂತೆ, ಆಡ್ವಾಣಿ ಅನಂತ್ ಕುಮಾರ್ ಮುಖವಾಣಿಯಂತೆ ವರ್ತಿಸಿದರು. ಇದರಿಂದ ಸರ್ಕಾರ ಹಾಗೂ ಪಕ್ಷ ಹಳ್ಳಹಿಡಿಯಿತು. ಯಡಿಯೂರಪ್ಪನವರ ಮನಃಶ್ಶಾಂತಿ ಕದಡಿತು. ಪಕ್ಷದ ಹೈಕಮಾಂಡ್ ವಿರೋಧಿಗಳು ಹಾಗೂ ಮಾಧ್ಯಮದ ನಕಾರಾತ್ಮಕ ಪ್ರಚಾರಾಂದೋಲನದ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದಾಗ ಯಡಿಯೂರಪ್ಪ ವಸ್ತುಶ: ಏಕಾಂಗಿಯಾಗಿ ಬಿಟ್ಟರು.

ಇಂತಹ ದುರ್ಗತಿ, ದುಸ್ಥಿತಿಯ ಲಾಭವನ್ನು ಅವಿಭಜಿತ ದಕ್ಷಿಣ ಕನ್ನಡವಾದ ಮಂಗಳೂರು-ಉಡುಪಿ ಜಿಲ್ಲೆಯಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು ಪಡೆದುಕೊಳ್ಳಲಾರಂಭಿಸಿದರು. ಇವತ್ತು ದಕ್ಷಿಣ ಕನ್ನಡದ 15 ಸೀಟುಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದು ಬಿಜೆಪಿ ಧೂಳೀಪಟವಾಗಿದ್ದರೆ ಅದರ ಸಂಪೂರ್ಣ ಹೊಣೆ, ದೂಷಣೆ ಡಾ. ಪ್ರಭಾಕರ ಭಟ್ಟರಿಗೇ ಸಲ್ಲಬೇಕು. ಅವರು ಆಡಿದ ಆಟಾಟೋಪಗಳೇನು ಸಾಮಾನ್ಯದವೇ? ಎಲ್ಲರೂ ಮರೆಯುವ ಮತ್ತೊಂದು ಸಂಗತಿಯೆಂದರೆ ದಕ್ಷಿಣ ಕನ್ನಡದಲ್ಲಿ ಕಳೆದ 20 ವರ್ಷಗಳಲ್ಲಿ ಸಂಘಕ್ಕಾಗಲಿ, ಭಜರಂಗದಳಕ್ಕಾಗಲಿ ಗಣನೀಯ ಶಕ್ತಿ ತಂದುಕೊಟ್ಟವರು ಜಗದೀಶ ಕಾರಂತರೇ ಹೊರತು, ಪ್ರಭಾಕರ ಭಟ್ಟರಲ್ಲ. ಆದರೆ ಕಟ್ಟಿಬೆಳೆಸಿದ್ದು ತಾವೇ ಎಂಬಂತೆ ಪ್ರಭಾಕರ ಭಟ್ಟರು ಬಿಂಬಿಸಿಕೊಳ್ಳಲಾರಂಭಿಸಿದರು. ಶಾಲೆಯೆಂಬ ಮುಖವಾಡ ಇಟ್ಟುಕೊಂಡು, ‘ಸಂಗ್ರಹಣೆ’ಗೆ ಹೊರಟ ಇವರು ಕೊನೆಗೆ ಕೊಲ್ಲೂರು ದೇವಸ್ಥಾನದ ಮೇಲೂ ಕಾಕದೃಷ್ಟಿ ಬೀರಿದರು. ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟರಿಗೂ ಇವರಿಗೂ ಸಂಘರ್ಷ ಆರಂಭವಾಗಿದ್ದೇ ಅಲ್ಲಿ. ಅವರಿಗೆ ಮಂತ್ರಿಸ್ಥಾನವನ್ನೂ ತಪ್ಪಿಸಿದರು. ಧಾರ್ಮಿಕ ದತ್ತಿ ಸಮಿತಿಯಿಂದ ಹಿಡಿದು, ತುಳು ಅಕಾಡೆಮಿ ಸದಸ್ಯರು, ಅಧ್ಯಕ್ಷರ ಆಯ್ಕೆವರೆಗೂ ಪ್ರಭಾಕರ ಭಟ್ಟರದ್ದೇ ದರ್ಬಾರು. ಇವರ ಸುತ್ತ ಶ್ರೀಕರ ಪ್ರಭುವಿನಂಥ ಭಟ್ಟಂಗಿಗಳು ‘ಪ್ರಕಾಶಿ’ಸತೊಡಗಿದರು, ಭಟ್ಟರಂತೆಯೇ ದರ್ಪದಿಂದ ವರ್ತಿಸಲಾರಂಭಿಸಿದರು. ಇದರಿಂದ  ನಿಷ್ಠಾವಂತ ಕಾರ್ಯಕರ್ತರು ನೊಂದು ಪಕ್ಷದಿಂದ ದೂರವಾಗತೊಡಗಿದರು. ಯೋಗೀಶ ಭಟ್ಟರಂಥ ಸಜ್ಜನ ವ್ಯಕ್ತಿಗೆ ಟಿಕೆಟ್ ತಪ್ಪಿಸಿ ಶ್ರೀಕರ ಪ್ರಭುಗೆ ನೀಡಲು ಭಟ್ಟರು ಮುಂದಾದರು. ಅದು ಕೈಗೂಡದೇ ಇದ್ದಾಗ ಯೋಗೀಶ್ ಭಟ್ಟರನ್ನು ಸೋಲಿಸಲು ಒಳಂಗಿದೊಳಗೇ ಪ್ರಯತ್ನಿಸಲಾರಂಭಿಸಿದರು. ನಾಗರಾಜ ಶೆಟ್ಟಿ, ಶಕುಂತಳಾ ಶೆಟ್ಟಿ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟರ ಪ್ರಕರಣದಿಂದ ದ.ಕ.ದಲ್ಲಿ ಬಂಟ ಸಮುದಾಯ ಬಿಜೆಪಿಯಿಂದ ದೂರವಾಗಿರುವುದು ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಈ ಮೂವರನ್ನೂ ಪಕ್ಷ ಬಿಡಿಸಿದ್ದೇ ಪ್ರಭಾಕರ ಭಟ್ಟರು. ಕುಂಬ್ಳೆ ಸುಂದರರಾವ್, ಅಣ್ಣ ವಿನಯಚಂದ್ರ, ಕಾರ್ಕಳದ ವಿಜಯ್ಕುಮಾರ್, ರುಕ್ಮಯ ಪೂಜಾರಿ, ರಾಮಭಟ್ಟರನ್ನು ಹೇಳಹೆಸರಿಲ್ಲದಂತೆ ಮಾಡಿದರು. ಬೆಳ್ತಂಗಡಿಯಲ್ಲಿ ಪ್ರತಾಪ್ ಸಿಂಹ ನಾಯಕರಂಥ ಅಪ್ರತಿಮ ಸಂಘಟಕರಿದ್ದರೂ ಅವರ ಬದಲಿಗೆ ರಂಜಿತ್ ಗೌಡನೆಂಬ ಎಳಸು ವ್ಯಕ್ತಿಗೆ ಟಿಕೆಟ್ ಕೊಟ್ಟು ಬಿಜೆಪಿ ಸೋಲಿಗೆ ಕಾರಣರಾದರು. ಬಂಟ್ವಾಳದಲ್ಲಿ ಪದ್ಮನಾಭ ಕೊಟ್ಟಾರಿಯವರಂಥ ಯೋಗ್ಯ ವ್ಯಕ್ತಿಯ ಬದಲು ‘ಉದ್ಯಮಿ’ಯೊಬ್ಬರಿಗೆ ಟಿಕೆಟ್ ಕೊಟ್ಟು, ಆ ಸೀಟನ್ನೂ ಬಲಿತೆಗೆದುಕೊಂಡರು. ಇದನ್ನೆಲ್ಲ ನೋಡಿದಾಗ ಪುತ್ತೂರಿನಿಂದ ಶಕುಂತಲಾ ಶೆಟ್ಟರು ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟರು ಸಾಧಿಸಿರುವ ಗೆಲುವು ಪ್ರಭಾಕರ ಭಟ್ಟರಿಗೆ ಮಾಡಿದ ಕಪಾಳಮೋಕ್ಷದಂತೆ ಇಂದು ಕಾಣುತ್ತಿವೆ. ಒಂದೆಡೆ ಬಂಟ ಸಮುದಾಯ ಬಿಜೆಪಿಯಿಂದ ದೂರವಾಗುವಂತೆ ಮಾಡಿದರೆ, ಇನ್ನೊಂದೆಡೆ ಪೆಟ್ಟಿಗೆ ಬೇಕಾದಾಗ ಮಾತ್ರ ಕಾಣುವ ಬಿಲ್ಲವ ಹಾಗೂ ಮೊಗವೀರರು ಅಧಿಕಾರ ಹಂಚಿಕೊಳ್ಳುವ ಸಂದರ್ಭದಲ್ಲಿ ಭಟ್ಟರಿಗೆ ನೆನಪಾಗಲಿಲ್ಲ. ಆ ಸಮುದಾಯಗಳಿಗೆ ಯಾವ ವಿಷಯದಲ್ಲೂ ಸೂಕ್ತ ಪ್ರಾತಿನಿಧ್ಯ ನೀಡಲಿಲ್ಲ. ಇಂದಿಗೂ ಪಬ್ ಹಾಗೂ ಹೋಮ್ಸ್ಟೇ ಗಲಾಟೆಯಲ್ಲಿ ಜೈಲಿಗೆ ಹೋದ ಬಿಲ್ಲವ ಹುಡುಗರು ಜೈಲಲ್ಲೇ ಇದ್ದಾರೆ! ಬ್ರಾಹ್ಮಣರ ಬೆರಳಿಗೆ ಗಾಯವಾದ ಉದಾಹರಣೆಯನ್ನು ದಕ್ಷಿಣ ಕನ್ನಡದಲ್ಲಿ ಕಾಣಲು ಕಷ್ಟ, ಆದರೆ ಸಂಘ-ಪಕ್ಷಕ್ಕಾಗಿ ಪ್ರಾಣ ಕೊಡುವವರು ಮಾತ್ರ ಬಿಲ್ಲವರು-ಮೊಗವೀರರು. ಅವರನ್ನು ಭಟ್ಟರು ಬರೀ ಬಳಸಿಕೊಂಡರು. ಇವೆಲ್ಲವುಗಳ ಪರಿಣಾಮವೇ ಮೊನ್ನೆಯ ಫಲಿತಾಂಶ.

ಅದರ ಜತೆಜತೆಗೇ…

ಯಡಿಯೂರಪ್ಪನವರು ಹೊರಹೋದ ಮೇಲೆ ಬಿಜೆಪಿ ಸ್ಥಿತಿ ಏನಾಗುತ್ತದೆ ಎಂಬುದಕ್ಕೂ ರಾಜ್ಯಾದ್ಯಂತ ಉತ್ತರ ಸಿಕ್ಕಿದೆ. ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಇವರೆಲ್ಲ ಎಂಥ ಖೊಟ್ಟಿ ನಾಯಕರು ಎಂಬುದೂ ಸಾಬೀತಾಗಿದೆ. ಬಹುಶಃ ಈ ವೇಳೆಗಾಗಲೇ ಬಿಜೆಪಿ ಕೇಂದ್ರ ನಾಯಕತ್ವಕ್ಕೂ ಅನಂತ್ ಕುಮಾರ್ ಗ್ಯಾಂಗ್ನ ಯೋಗ್ಯಾಯೋಗ್ಯತೆಯ ಬಗ್ಗೆಯೂ ಜ್ಞಾನೋದಯವಾಗಿರುತ್ತದೆ. ಬಿಜೆಪಿಯ ಗೋ. ಮಧುಸೂದನ್ ಅವರು ಯಡಿಯೂರಪ್ಪನವರ ಬಗ್ಗೆ ಹೇಳುತ್ತಾ “ಅವರು ಶೀಘ್ರ ಕೋಪಿ, ಆದರೆ ದೀರ್ಘ ದ್ವೇಷಿಯಲ್ಲ” ಎಂದಿದ್ದರು. ಹೌದು, ಯಡಿಯೂರಪ್ಪನವರು ಮುಂಗೋಪಿ ಇರಬಹುದು, ಆದರೆ ರಾಜ್ಯ ಬಿಜೆಪಿಯ ಕೆಲ ನಾಯಕರಂತೆ ಕೃತ್ರಿಮರಲ್ಲ. ಇದನ್ನು ಬಿಜೆಪಿ ಕೇಂದ್ರ ನಾಯಕತ್ವ ಆದಷ್ಟು ಬೇಗ ಅರಿತುಕೊಂಡು ಯಡಿಯೂರಪ್ಪನವರ ಜತೆ ರಾಜೀ ಸಂಧಾನಕ್ಕೆ, ಸಂಭವನೀಯ ಪುನರಾಗಮನಕ್ಕೆ ಮುಂದಾದರೆ 2014ರ ಚುನಾವಣೆಯಲ್ಲಿ ಮತ್ತೆ ಸೆಟೆದು ನಿಲ್ಲಬಹುದು, ಇಲ್ಲವಾದರೆ ಬಿಜೆಪಿ ಪಾಲಿಗೆ ಕರ್ನಾಟಕ ಮತ್ತೊಂದು ಉತ್ತರ ಪ್ರದೇಶವಾಗುತ್ತದೆ. ಕಲ್ಯಾಣ್ ಸಿಂಗ್ ಹೊರಹೋದ ಮೇಲೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಹೇಗೆ ನೆಲಕಚ್ಚಿತೋ ಕರ್ನಾಟಕದಲ್ಲೂ ಯಡಿಯೂರಪ್ಪನವರನ್ನು ವಾಪಸ್ ಕರೆತರದಿದ್ದರೆ ಅದೇ ಗತಿಯಾಗುತ್ತದೆ.

36 Responses to “ಮೇನಕೆ ಬಂದು ಕುಣಿಯುವವರೆಗೂ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇ ಆಯ್ತು!”

 1. Sandeep Kharvi says:

  good one pratap…. keep up the good work..

 2. shakthi says:

  SUPER EXCELLENT THOUGHT .. 100% TRUE . AS A PARTY WE SHOULD BE UNITED . I CAN GIVE MY BLOOD IF BJP DOES THAT.WE DONT WANT TO LOOSE THE IDEOLOGIES OF OUR PARTY. WE NEED BSY. WE WANT TO SHOW OUR STRENGTH . KICK ANANT AND ESHWARAPPA , SUSHMA OUT OF THE PARTY.

 3. manu says:

  No depth…

 4. lathesh says:

  let him go.. we doesnt want to see Renukacharya, hallappa in bjp..

 5. girish says:

  really 100% true.i really ike ur article.

 6. Manjunatha says:

  ಸರ್ ಅದು ಎನೆ ಅಗಿರಲ್ಲಿ ಒಟ್ಟಿನಲ್ಲಿ ಇವರುಗಳು ಮಾಡಿದ ತಪ್ಪಿಗೆ ಸರಿಯಾದ ಮುಕಬಂಗ ಅನುಬವಿಸಿದ್ದಾರೆ ಬಿಡಿ

 7. Rohan s. patil says:

  Pratap sir BJP gati nodidre bejar agtide.. devare kapad beku……………. che… en karma

 8. Sudeep says:

  Good one, well written at least now BJP high command should realize, otherwise we can’t survive in congress ruling

 9. Shreepada Rao says:

  ನಮಸ್ತೆ. ನಿಮ್ಮ ಈ ಬರಹದ ಎಲ್ಲವನ್ನೂ ಒಪ್ಪುವ ಪರಿಸ್ತಿತಿ ನನ್ನದಲ್ಲ. ಕಡೆಯ ಪ್ಯಾರ ಮೆಚ್ಚುವ೦ತದ್ದು. ಹಾಗೂ ದಕ್ಶಿಣ ಕನ್ನಡದ ಸೋಲಿನ ವಿಶಯವನ್ನೂ ಮೆಚ್ಚಿದೆ. ಉಳಿದದ್ದು ಮೆಚ್ಚುವ ಹಾಗಿಲ್ಲ. ಬೇಸರ ಬೇಡ.. ಶ್ರೀಪಾದ ರಾವ್..

 10. vaijanath says:

  yes sir nice

 11. Shiva says:

  Perfect truthful article

 12. Trilok says:

  Sir, a typical pratap simha’s. But you haven’t talked about the scandals BSY and other BJPians involved.

 13. madhu says:

  BSY avra thara paksha vannu sangattisalu barae yav B.J.P nayakarinda nu agalla

 14. Sir ,
  As you have written this artical is indeed and hidden fact of Karnataka BJP and Yeddi’s pivotal role in BJP .if we compare this artical with your previous artical which you have written on Yeddi last 4 to 5 months back . their is lots of points has to be shown in this artical on Yeddi .

  Do you agree ? .
  if yes twitt me on cookiechandra or reply on this .

 15. Lava says:

  Prathap simha sir this article is preety true.and people of karnatka should understand the in-out of karnatka politics.Hope it wil happen.. nice article..

 16. Jagadeesh says:

  Hello Pratap,
  Great article and agree with each and every line of this article.

  ~ Jagadeesh

 17. Sandeep says:

  You said exact truth about what happened in dakshina kannada.
  As a RSS person I hated Karnataka BJP, and money,power were given much importance than ideology of the party.
  Nice lesson to BJP

 18. Pratap follower says:

  Hi Pratap,

  You made a meaning full analysis. Advani and Sushma swaraj should retire. Else I personally feel Modi the right person in a wrong party. There is no doubt what happened to BSY in karnataka will happen to Modi in central.

  Thanks!!

 19. Super article sir.
  Dakshina Bharatada modala Bjp sarkarada avanathige Ananth kumaravare kaarana.yadiyoorappa paksha tyajisalu ananth kumaravare moola kaarana kendra bjp nayakarige edannu artha madikolluvastaralli paristithi kai meeri hogide.
  Yadiyoorapparavarallu kelavu nyunathegalive nanna swabhimanakke dhakke bandide adakkagi naanu paksha bjp bittiddene yennuva evaru hindomme Deve gowdara bali hogi nanage bjp sahavasa saakagide nimma pakshadali nanage ondu Sachiva stana kodi yendu keluvaga yelli hoytu Evara swabhimana. Anistakella saneeswarane hone yembanthe karavaliyalli bjp heenaya solige Dr prabhakar bhatt obbare karanaralla Bjp sarkarada kacchata, brastachara, sasakara blue film hagarana, malpe rave party mattu V s aachariyarantha hiriya anubhavigalu ellade eruvudu.
  Prabhakar Bhattarinda kelavu tappu aagirabahudu aadare avarobba uttama nayakaru Chalavadi evattu karavaliyalli sanga balistavagiralu avara kodugeyu ede.ennu haladi srinivas setty badalu Srinivas poojariyavarantha pramanika paksha niste eruva vyakthige sachiva stana ko.ttiddu sariyada nirnaya. Srinivas settaru kundapura khestra bittu bere yelligu hoguttiralilla hechhagi pakshada kaaryakramagalige baruttiralilla sangha parivarada karyakartharu sankastadalliddaga sahaya maadida onde ondu nidarsanavilla hagantha avaru kettavaralla pramanika vyakthi avara manege kasta antha hodara barigaiyalli kalisuvudilla.
  Karavaliyalli bjp paksadalli asamadana erabahudu horetu sanghataneyalli yaavude vadakilla edakke kaleda februvari 2 taarikinandu mangaloorinalli nededa maha Vibhag sanghiknalli serida laksantara kaarya karthare kaarana.
  Dayavittu ennadaru karavali sangha parivarada vicharavagi jathiya bagge bareyuvaga chennagi yochisi bareyiri sir.
  Tamma abhimani.

 20. Neginal says:

  Really true…

 21. venkataravana r k says:

  anna u r obsulutly write thank u so much i love so much u r articals anna

 22. Pruthvi says:

  Hi Pratap ,
  As usual wonderful insight on karnataka politics , but the real irony of the situation is that due to these infightings of BJP the people of karnataka are made to suffer for next 5 years.
  They may say Siddu is a great leader , but as we all know Congress can never ever give a pro-development government. They are all about caste , religion , divide & rule , & give-away-food-for-free scehemes.
  Dont know what state they will leave us after 5 years , let Bhuvaneshwari have mercy on people of karnataka.

 23. aditya doddamani says:

  i’m a strong supporter of BJP . have always asked my friends n family to vote n support them . but this time i didn’t have d face to ask anyone. . . hope that leaders realize n correct their mistake so dat no other BJP supporter has to face this situation again.

 24. Prajwal says:

  Really really…..super…..this must reach bjp people…..

 25. ARUN says:

  Good article this facts are not known to me… we were blaming Yaddiyurappa….. fact is entirely different,….

 26. Mahesh.Hiremath says:

  Respected Sir,

  Your giving BSY too much positive image. An able leader must grow up and overcome all the hurdles in his way. Your always pointing things on Ananth Kumar,Shettar,Eshwarappa.

  BSY had already damaged the image of BJP alot so BJP lost. It doesnt mean that its only because of Ananth Kumar. IF BSY was really a capable leader he wouldnt go behind Women and Money.

  Atleast praise the leaders Ananth Kumar,Shettar,Eshwarappa who are not behind a Womens. Why dont you highlight the weakness of BSY properly…why always try to cover him up ?. He always listened to Shobha and his Sons.

 27. harish says:

  An honest postmortem of the demise of BJP. Let us hope and pray that they get redemption through Modi “F(l)AME”

 28. shivayogi hiremath says:

  Dear sir

  NEMAGE NEVE SATI satyvannu helidre e deshadalli nayave siglla anisutte

 29. Vishwa says:

  nivu istondu hogolo agatya iddilla ankotini…..

 30. maltesh s y says:

  hi pratap brother,

  100 % u r rite
  BSY avru CM aagiddaga yelru tamma bele beyiskondu ega avra viruddha ne matnadtidare, navu tilkolbekirodu yenandre ivattu yaru BSY avra viruddha matnadtidare avra mele criminal case galive, avrella GAAJIN MANELI KUTU BERE YAVRA MANEGE KALLU YESITIDARE, munde 1 fine day avrella suffer agtare…
  Ivtu bjp ge ee paristini baralu nivu point out madiro vyaktigale kaarana.
  result bandmele adru central bjp leaders ge karnataka bjp paristithi artha agtilla ansutte ildidre ishtottigagle damage control madkoltidru..
  innadru avru illin paristiti artha madkolli…

 31. rudramurthy says:

  hello sir,
  i have been reading your articles for more than 3 or 4 years now. and i came to know that you were in RSS and you write in favor of BJP most of the times, now its your personnel thing that whether you support RSS, BJP, CONGRESS or JD(S) but being a journalist you should not mislead you followers by writing in favor of a particular party!! usually people like to know what’s true and what’s wrong going on and they expect the same to hear or read from the media and popular persons like you.so all i am trying to say is do write/tell the readers what’s truly going on.and one more thing like you have mentioned in the above article belthangady alli pratap simharanta apratima sanghatakariddu etc,etc ee ondu vishaya eshtaramattige avashya vagittu haagu adara agtyatya itte?embdu nanage innu arthavagalillavendu tilisalicchusuttene..!!
  inti nimma abhimani.

 32. dasharath says:

  how can u say doctor is responsible for the defet in d k ………D V ananthkumar eshwarappa yanta shanda nayakana navu bembaliseda parinama idu…….

 33. NARESH says:

  Neevu MODI matte YEdurappanavaranna swalpa jasthine hogalutheeri. Neevu nimma sitta iro koteyanna bhedisi, vastunishta varadi prakatisi. Yedurappa avakasha vadi, Modi hatavadi. Ibbaru maggala mullu BJP ge.