*/
Date : 03-06-2012 | 79 Comments. | Read More
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಾಮಾನ್ಯವಾಗಿ ಮುಕ್ತಾಯವಾಗುವುದೇ ಸಾರ್ವಜನಿಕ ರ್ಯಾಲಿಯೊಂದಿಗೆ. ಅದರಲ್ಲಿ ಪಕ್ಷದ ಬಹುತೇಕ ಎಲ್ಲ ಗಣ್ಯಾತಿಗಣ್ಯ ನಾಯಕರೂ ಭಾಗವಹಿಸುತ್ತಾರೆ. ಒಂದು ರೀತಿಯಲ್ಲಿ ಅದು ಶಕ್ತಿ ಹಾಗೂ ನಾಯಕರ ನಡುವಿನ ಸಾಮರಸ್ಯ ಪ್ರದರ್ಶನವೂ ಆಗಿರುತ್ತದೆ. ಆದರೆ ಕಳೆದ ವಾರ (ಮೇ-25) ಮುಂಬೈನಲ್ಲಿ ನಡೆದ ರ್ಯಾಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಹೆಚ್ಚಿನ ಸದಸ್ಯರು ಹಾಗೂ ರಾಷ್ಟ್ರೀಯ ನಾಯಕರು ಕಾಣೆಯಾಗಿದ್ದರು. ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಬಿಟ್ಟರೆ ಹೇಳಿಕೊಳ್ಳುವಂಥ ಯಾವ ನಾಯಕರೂ ಇರಲಿಲ್ಲ. […]
Date : 28-05-2012 | 45 Comments. | Read More
ಶ್ರೀ ನಾರಾಯಣ ಗುರುಗಳು ಯಾರಿಗೆ ತಾನೇ ಗೊತ್ತಿಲ್ಲ? ಒಮ್ಮೆ ಗುರುಗಳು ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಸಹಪ್ರಯಾಣಿಕನಾಗಿದ್ದ ನಂಬೂದರಿಯೊಬ್ಬ,”ನಿಮ್ಮ ಹೆಸರೇನು?’ ಎಂದು ಪ್ರಶ್ನಿಸುತ್ತಾನೆ. ಗುರುಗಳು: ನಾರಾಯಣ ನಂಬೂದರಿ: ನಿಮ್ಮ ಜಾತಿ? ಗುರುಗಳು: ನೋಡಿದರೆ ಗೊತ್ತಾಗುವುದಿಲ್ಲವೆ? ನಂಬೂದರಿ: ಉಹೂಂ ಗುರುಗಳು: ನೋಡಿದರೆ ಗೊತ್ತಾಗದಿದ್ದಾಗ ಹೇಳಿದರೆ ಹೇಗೆ ಗೊತ್ತಾಗುತ್ತದೆ?! ಎಂದು ಕೇಳಿದಾಗ ನಂಬೂದರಿ ತಬ್ಬಿಬ್ಬಾಗುತ್ತಾನೆ.
Date : 22-05-2012 | 64 Comments. | Read More
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್್ನಲ್ಲಿ ನೆಲಸಿರುವ ಭಾರತ ಸಂಜಾತರು ಆರಂಭಿಸಿದ – Bharath Armyಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1990ರ ದಶಕಕ್ಕೆ ಸಾಕ್ಷೀಭೂತರಾದ ಯಾರೊಬ್ಬರನ್ನು ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೇ ಇಲ್ಲ. ಗೋವಿಂದ ರಾವ್ ಖೈರ್ನಾರ್!
Date : 14-05-2012 | 16 Comments. | Read More
ಕುಂಬಾರ ವೀರಭದ್ರಪ್ಪ ಆಲಿಯಾಸ್ ಕುಂ. ವೀರಭದ್ರಪ್ಪ ಅಲಿಯಾಸ್ ಕುಂವೀ! ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್್ಕುಮಾರ್್ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ ಈ ವರ್ಷದ ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ […]
Date : 06-05-2012 | 31 Comments. | Read More
ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ? ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು. ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು […]
Date : 04-05-2012 | 32 Comments. | Read More
ಭಾರತ ಎಂಬುದೇ ಒಂದು ಬೆರಗು. ಈ ದೇಶದ ಉದ್ದಗಲಕ್ಕೂ ಬೆರಗಿನ ನೂರಾರು ಉದಾಹರಣೆಗಳು ಕಾಣಸಿಗುತ್ತವೆ. ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಹೆಜ್ಜೆಗೊಂದು ಉದಾಹರಣೆ ಸಿಗುತ್ತದೆ. ಅತಿ ಸಾಮಾನ್ಯರು ಅಸಾಮಾನ್ಯ ಸಂಶೋಧನೆಗಳನ್ನು ಮಾಡಿದ್ದಾರೆ. ಈ ಸಾಮಾನ್ಯರು ಸುಶಿಕ್ಷಿತ ಪಂಡಿತರಲ್ಲ. ನುರಿತ ಉದ್ಯಮಿಗಳಲ್ಲ. ಆದರೂ ತಮ್ಮ ವಿವೇಚನೆಯ ಇತಿಮಿತಿಯಲ್ಲೇ ರಿಸ್ಕ್ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತಲ ಪರಿಸರದ ಬಾಳು ಹಸನಾಗಿಸುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂಥವರ ಪೈಕಿ ತಮಿಳುನಾಡಿನ ಅರುಣಾಚಲಂ ಮುರುಘನಾಥಂ ಕೂಡ ಒಬ್ಬರು. ಶಾಲೆಯನ್ನು […]
Date : 22-04-2012 | 83 Comments. | Read More
ನಮ್ಮ ಅಭ್ಯಂತರವೇನೂ ಇಲ್ಲ! ಇದನ್ನು ಕೆಸರೆರಚಾಟ ಅನ್ನಿ, ವೈಯಕ್ತಿಕ ಆಕ್ರಮಣ ಅನ್ನಿ, ಮಾಧ್ಯಮದ ದುರ್ಬಳಕೆ ಅನ್ನಿ. ಹಾಗೆ ಅಂದುಕೊಳ್ಳುವ ಮುನ್ನ ಕೆಲ ಮೂಲಭೂತ ಪ್ರಶ್ನೆಗಳ ಬಗ್ಗೆಯೂ ಯೋಚಿಸಿ… 1. ಒಂದು ವೇಳೆ ನಿಮ್ಮ ಅಕ್ಕ, ತಂಗಿಯ ಬಗ್ಗೆ ಪತ್ರಿಕೆಗಳಲ್ಲಿ ಚಾರಿತ್ರ್ಯಹರಣ ಮಾಡಿದರೆ… 2. ನಿಮ್ಮ ತಾಯಿಯನ್ನು ನೀತಿಗೆಟ್ಟವಳು ಎಂದು ಬರೆದರೆ… 3. ನೀವೊಬ್ಬ ಯುವಕ/ಯುವತಿಯಾಗಿದ್ದರೆ ನಿಮ್ಮ ಜೀವನದಲ್ಲೂ ಅಫೇರ್ಗಳು, ಗೆಳೆಯ/ಗೆಳತಿಯರು ಇರುತ್ತಾರೆ. ಅವರ ಜತೆ ನೀವು ವಿಹರಿಸುತ್ತಿರುವುದು ಅಥವಾ ಇಂಟಿಮೇಟ್ ಆಗಿರುವುದು ಟ್ಯಾಬ್ಲಾಯ್ಡ್ಗಳಲ್ಲಿ ವರದಿಯಾಗಿ, ನಿಮ್ಮ […]
Date : 21-04-2012 | 75 Comments. | Read More
ಸತ್ಯಸಂಧ ಪತ್ರಕರ್ತರಾದ ರವಿ ಬೆಳಗೆರೆಯವರು ಕದ್ದುಮುಚ್ಚಿ 2ನೇ ವಿವಾಹವಾಗಿರುವ ವಿಷಯದ ಬಗ್ಗೆ ಟಿವಿ9ನ ಲಕ್ಷಣ್ ಹೂಗಾರ್ ಅವರು ಪ್ರಶ್ನಿಸಿದಾಗ, “ಯಾರೂ ಕೇಳಲಿಲ್ಲ, ನಾನು ಹೇಳಲಿಲ್ಲ” ಎಂದು ಬೆಳಗೆರೆ ಉತ್ತರಿಸಿದ್ದರು. ಯಾರೂ ಕೇಳದೇ ಅತ್ಮರತಿ ಮಾಡಿಕೊಳ್ಳುವುದು, ಬಡಾಯಿ ಕೊಚ್ಚಿಕೊಳ್ಳುವುದು, ಖಯಾಲಿ…ಗಳ ಬಗ್ಗೆ ಬರೆದುಕೊಳ್ಳುವುದು, ಪುಸ್ತಕ ಹಾಗೂ ಪತ್ರಿಕೆಯಲ್ಲಿ ಅಫಿಡವಿಟ್ ನೀಡುವುದು ಅವರಿಗೆ ಅಭ್ಯಾಸ. 2010ರಲ್ಲಿ ನೀಡಿದ ಅಫಿಡವಿಟ್ ಹಾಗೂ 2012ರ ಏಪ್ರಿಲ್ನಲ್ಲಿ(ಹೂಗಾರ್ ನಡೆಸಿದ ಸಂದರ್ಶನದ ನಂತರ) ಮರುಮುದ್ರಣಗೊಂಡ “ಭೀಮಾ ತೀರದ ಹಂತಕರು” ಪುಸ್ತಕದ ಅಫಿಡವಿಟ್ಟನ್ನು(ಅಂಡರ್ಲೈನ್ ಮಾಡಲಾಗಿದೆ) ಗಮನಿಸಿ. ಎರಡನೇ […]
Date : 21-04-2012 | 11 Comments. | Read More
ಮೇಜರ್ ಬಾರ್ಬರಾ! ಇದು ವಿಶ್ವವಿಖ್ಯಾತ ಲೇಖಕ, ವಿಮರ್ಶಕ, ನೊಬೆಲ್ ಪುರಸ್ಕೃತ ಜಾರ್ಜ್ ಬರ್ನಾರ್ಡ್ ಷಾ ಅವರ ನಾಟಕ. ಈ ಬರ್ನಾರ್ಡ್ ಷಾಗೂ ಬ್ರಿಟನ್್ನ ಲೆಜೆಂಡರಿ ಪ್ರಧಾನಿ ವಿನ್್ಸ್ಟನ್ ಚರ್ಚಿಲ್್ಗೂ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತಿತ್ತು. ಅದು ಬಹಳಷ್ಟು ಸಲ ಅವಹೇಳನಕಾರಿಯಾಗಿರುತ್ತಿದ್ದರೂ ಆ ನಿಂದನೆಯಲ್ಲೂ ಒಂದು Class, ಶ್ರೇಷ್ಠತೆ ಇರುತ್ತಿತ್ತು. ಒಮ್ಮೆ ‘ಮೇಜರ್ ಬಾರ್ಬರಾ’ ನಾಟಕ ಏರ್ಪಡಾಯಿತು. ಸಾಮಾನ್ಯವಾಗಿ ನಾಟಕಗಳು ರಾತ್ರಿ ವೇಳೆ ನಡೆಯುತ್ತವೆ. ವಿನ್್ಸ್ಟನ್ ಚರ್ಚಿಲ್್ಗೆ ಟೆಲಿಗ್ರಾಂ ಮಾಡಿದ ಬರ್ನಾರ್ಡ್ ಷಾ, “ಫಸ್ಟ್ ನೈಟ್್”ಗೆ (ಮೊದಲ ಪ್ರದರ್ಶನಕ್ಕೆ) ನಿಮಗಾಗಿ […]
Date : 17-04-2012 | 120 Comments. | Read More
ರವಿ ಬೆಳಗೆರೆಯವರೇ, ಬಂಗಾರಪ್ಪನವರಿಗೆ “ಬಂ”, ಗುಂಡೂರಪ್ಪನವರಿಗೆ “ಗುಮ್”, ತೆಳ್ಳಗಿನ ನಟಿ ವಿಮಲಾ ನಾಯ್ಡುಗೆ “ಹಂಚಿಕಡ್ಡಿ”, ಆರೆಸ್ಸೆಸ್ಸಿಗರಿಗೆ “ಚೆಡ್ಡಿ”… ಹೀಗೆ ತೀರಾ ಕೀಳು ಅರ್ಥ ಬರುವ, ಹೆಸರನ್ನು ತಿರುಚುವ ಪರಂಪರೆಯನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಪಿ. ಲಂಕೇಶ್. ಆ ಕೆಟ್ಟ ಪರಂಪರೆಯನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ಚಾರಿತ್ರ್ಯಕ್ಕೇ ಕಳಂಕ ಅಂಟಿಸುವಂಥ ಅಡ್ಡ ಹೆಸರುಗಳನ್ನು ಇಡಲು ಆರಂಭಿಸಿದ ಅಪಕೀತರ್ಿ ನಿಮಗೆ ಸಲ್ಲಬೇಕು. ನೀವು ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಂಸದೆ ತೇಜಸ್ವಿನಿಯವರನ್ನು ಯಾವ ಹೆಸರಿನಿಂದ ಸಂಭೋದಿಸುತ್ತೀರಿ ಎಂಬುದನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಇನ್ನು […]