Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬಸವೇಶ್ವರರ ಭಾವಚಿತ್ರ ಸಲ್ಲಿಕೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬಸವೇಶ್ವರರ ಭಾವಚಿತ್ರ ಸಲ್ಲಿಕೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ  ಬಸವೇಶ್ವರರ ಭಾವಚಿತ್ರ ಸಲ್ಲಿಕೆ

ನವದೆಹಲಿ.  ಮಹಾ ಮಾನವತಾವಾದಿ ಜಗದ್ಗುರು  ಶ್ರೀ   ಬಸವೇಶ್ವರ ಅವರ  ಜಯಂತಿ ಅಂಗವಾಗಿ   ಬಸವೇಶ್ವರರ ಭಾವಚಿತ್ರವನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಸಂಸತ್ ಕಚೇರಿಯಲ್ಲಿಂದು  ಕರ್ನಾಟಕ ರಾಜ್ಯದ  ಕೇಂದ್ರ ಸಚಿವರ ನೇತೃತ್ವದ  ಸಂಸದರ ನಿಯೋಗವು  ಸಲ್ಲಿಸಿತು.

ಸಂಸತ್ ಆವರಣದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಅನಂತ ಕುಮಾರ್, ಕಾನೂನು ಸಚಿವರಾದ ಶ್ರೀ ಸದಾನಂದಗೌಡ, ಮಧ್ಯಮ ಕೈಗಾರಿಗೆ ಸಚಿವರಾದ ಶ್ರೀ ಜಿ.ಎಂ. ಸಿದ್ದೇಶ್ವರ ಅವರು ಮಾಲಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು.

ನಿಯೋಗದಲ್ಲಿ ಸಂಸದರಾದ ಶ್ರೀ  ಪ್ರಹಲ್ಲಾದ ಜೋಶಿ, ಶ್ರೀ  ಬಿ.ಎಸ್. ಯಡಿಯೂರಪ್ಪ, ಕು. ಶೋಭಾ ಕರಂದ್ಲಾಜೆ, ಶ್ರೀ ಪ್ರತಾಪ್‍ಸಿಂಹ, ಶ್ರೀ  ಪಿ.ಸಿ. ಗದ್ದಿಗೌಡರ್, ಶ್ರೀ  ಕಟಿಲು ನಳಿನ ಕುಮಾರ್, ಶ್ರೀ  ಶಿವಕುಮಾರ್  ಉದಾಸಿ,ಶ್ರೀ  ಕರಡಿಸಂಗಣ್ಣ, ಶ್ರೀ ಪಿ.ಸಿ. ಮೋಹನ್, ಶ್ರೀ ಸುರೇಶ್ ಅಂಗಡಿ ಮತ್ತಿತರರು ಭಾಗವಹಿಸಿದ್ದರು. —

 

vkkk

Comments are closed.