Date : 07-09-2009, Monday | 17 Comments
ಡಾ. ಅಬ್ದುಲ್ ಕಲಾಂ.
ಅವರ ಹೆಸರೇ ನಮಗೆ ಒಂದು ಪ್ರೇರಕಶಕ್ತಿ ಯಾಗಿ ಬಿಟ್ಟಿದೆ. ಹಾಲಿ ರಾಷ್ಟ್ರಪತಿಗಿಂತ ಈ ನಮ್ಮ ಮಾಜಿ ರಾಷ್ಟ್ರಪತಿಯ ಬಗ್ಗೆಯೇ ನಮಗೆ ಹೆಚ್ಚು ಹೆಮ್ಮೆ ಯೆನಿಸುತ್ತದೆ. ಕಲಾಂ ಈ ದೇಶ ಕಂಡ ಅತ್ಯಂತ ಕ್ರಿಯಾಶೀಲ ರಾಷ್ಟ್ರಪತಿ ಹಾಗೂ ಮಾಜಿ ರಾಷ್ಟ್ರಪತಿ! ಅಧಿಕಾರಾವಧಿ ಮುಗಿದ ನಂತರವೂ ಹಾಲಿ ರಾಷ್ಟ್ರಪತಿಗಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಕಲಾಂ ಪಾಲ್ಗೊಳ್ಳುತ್ತಾರೆ. ಒಮ್ಮೆ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ರಾಮಕೃಷ್ಣ ಮಠದ ಸ್ವಾಮೀಜಿ, “ಕಲಾಂರನ್ನು ಕಂಡಾಗ ಮಕ್ಕಳು ಅದ್ಯಾವ ಪರಿ ಚೀರಾಡುತ್ತವೆ. ಅವುಗಳ ಮುಖದಲ್ಲಿ ಅದೆಂತಹ ಉತ್ಸಾಹ ಕಾಣುತ್ತದೆ. ಕಲಾಂರ ಜನ್ಮದಿನವನ್ನು ಮಕ್ಕಳ ದಿನಾಚರಣೆಯೆಂದು ಘೋಷಿಸಿದರೆ ನಿಜಕ್ಕೂ ಅರ್ಥಪೂರ್ಣವೆನಿಸುತ್ತದೆ” ಎಂದರು! ಆದರೆ ಕಲಾಂ ಅವರ ವೆಬ್‌ಸೈಟ್‌ಗೆ ಹೋದರೆ ಅವರಿಗೆ ಪ್ರೇರಣೆ ನೀಡಿದ ಶಿಕ್ಷಕರ ಬಗ್ಗೆ ಬಹಳ ಆಪ್ತವಾಗಿ ಬರೆದುಕೊಂಡಿರುವುದನ್ನು ಕಾಣಬಹುದು. ಅದರಲ್ಲೂ ಮುತ್ತು ಅಯ್ಯರ್ ಹಾಗೂ ಶಿವಸುಬ್ರಹ್ಮಣ್ಯ ಅಯ್ಯರ್ ಬಗ್ಗೆ ಕಲಾಂ ಬರೆದಿರುವುದು ಮನಸ್ಸಿಗೆ ತಟ್ಟುತ್ತದೆ.
“ಅದು 1936. ನನಗಾಗ ಐದು ವರ್ಷ ತುಂಬಿತ್ತು. ರಾಮೇ ಶ್ವರಮ್‌ನ ಪಂಚಾಯಿತಿ ಪ್ರಾಥಮಿಕ ಶಾಲೆಗೆ ಸೇರಿದ್ದೆ. ಅಲ್ಲಿ ಮುತ್ತು ಅಯ್ಯರ್ ಎಂಬ ಮೇಷ್ಟ್ರು ಇದ್ದರು. ನಾನು ಚೆನ್ನಾಗಿ ಓದುತ್ತಿದ್ದೆ ಎಂಬ ಕಾರಣಕ್ಕೆ ನನ್ನ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು. ನನ್ನ ಬಗ್ಗೆ ಮೆಚ್ಚುಗೆಯಾದ ಮರುದಿನವೇ ನಮ್ಮ ಮನೆಗೆ ಖುದ್ದಾಗಿ ಬಂದು ನಾನು ತುಂಬಾ ಒಳ್ಳೆಯ ವಿದ್ಯಾರ್ಥಿ ಎಂದು ನನ್ನ ತಂದೆಗೆ ಹೇಳಿ ಹೋಗಿದ್ದರು. ಅಂದು ನನ್ನ ಅಪ್ಪ-ಅಮ್ಮನಿಗೆ ಎಷ್ಟು ಖುಷಿಯಾಯಿತೆಂದರೆ ನನ್ನ ಇಷ್ಟದ ಸಿಹಿ ತಿಂಡಿಯನ್ನು ಅಮ್ಮ ಮಾಡಿಕೊಟ್ಟಿದ್ದಳು.
ನಾನು ಮೊದಲನೇ ತರಗತಿಯಲ್ಲಿದ್ದೆ.
ಒಂದು ದಿನ ಶಾಲೆಗೆ ಹೋಗಲಾಗಲಿಲ್ಲ. ನನ್ನ ಅನುಪಸ್ಥಿತಿ ಯನ್ನು ಗಮನಿಸಿದ ಮುತ್ತು ಐಯ್ಯರ್, ಅದೇ ದಿನ ಸಂಜೆ ನಮ್ಮ ಮನೆಗೆ ಬಂದರು. ನಾನೇಕೆ ಶಾಲೆಗೆ ಬಂದಿರಲಿಲ್ಲ? ಕಾರಣವೇನು? ಏನಾದರೂ ಸಹಾಯ ಬೇಕಿತ್ತೆ? ಎಂದು ಅಪ್ಪನ ಬಳಿ ಕೇಳಲು ಆಗಮಿಸಿದ್ದರು. ಅವತ್ತು ನನಗೆ ತುಂಬಾ ಜ್ವರ ಬಂದಿತ್ತು. ಹಾಗಾಗಿ ಶಾಲೆಗೆ ಹೋಗಿರಲಿಲ್ಲ. ಮುತ್ತು ಐಯ್ಯರ್ ಗಮನಿಸಿದ ಮತ್ತೊಂದು ಬಹುಮುಖ್ಯ ಅಂಶವೆಂದರೆ, ನನ್ನ ಕೈಬರಹ ಚೆನ್ನಾಗಿರಲಿಲ್ಲ. ಮನೆಗೆ ಬಂದಿದ್ದ ಮೇಷ್ಟ್ರು, ನಿತ್ಯವೂ ಮೂರು ಪುಟ ಕಾಪಿ ರೈಟಿಂಗ್ ಮಾಡಬೇಕು ಎಂದು ಸೂಚಿಸಿದರು. ನಾನು ಬರೆಯುತ್ತೇನೋ, ಇಲ್ಲವೋ ಎಂದು ನನ್ನ ಮೇಲೆ ಕಣ್ಣಿಟ್ಟಿರಬೇಕು ಎಂದು ಅಪ್ಪನಿಗೂ ಸೂಚಿಸಿದರು. ಆ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ನಮ್ಮ ಮೇಷ್ಟ್ರು ಪ್ರತಿಯೊಬ್ಬ ವಿದ್ಯಾರ್ಥಿಗೂ ಹೇಗೆ ವೈಯಕ್ತಿಕ ಗಮನ ನೀಡುತ್ತಿದ್ದರು, ಬೋಧನೆಯನ್ನು ಎಷ್ಟು ಇಷ್ಟಪಡುತ್ತಿದ್ದರು ಎಂದು ಇಂದಿಗೂ ನನಗೆ ನೆನಪಾಗುತ್ತದೆ”.
“ವಯಸ್ಸು ಹತ್ತಾಯಿತು. ಆಗ ನಾನು 5ನೇ ತರಗತಿಯ ಲ್ಲಿದ್ದೆ. ನನಗೊಬ್ಬರು ಶಿಕ್ಷಕರಿದ್ದರು-ಶಿವ ಸುಬ್ರಹ್ಮಣ್ಯ ಅಯ್ಯರ್. ನಮ್ಮ ಶಾಲೆಯಲ್ಲಿದ್ದ ಅತ್ಯುತ್ತಮ ಶಿಕ್ಷಕರಲ್ಲಿ ಅವರೂ ಒಬ್ಬರು. ಅವರ ತರಗತಿಯೆಂದರೆ ನಮಗೆಲ್ಲರಿಗೂ ಖುಷಿ. ಒಮ್ಮೆ ಅವರು ಹಕ್ಕಿಗಳು ಹೇಗೆ ಹಾರುತ್ತವೆ ಎಂಬುದನ್ನು ವಿವರಿಸುತ್ತಿದ್ದರು. ಕರಿ ಬೋರ್ಡ್ ಮೇಲೆ ಸೀಮೆಸುಣ್ಣದಲ್ಲಿ ಹಕ್ಕಿಯೊಂದರ ರೇಖಾಚಿತ್ರ ಬರೆದರು. ಹೇಗೆ ಪಕ್ಷಿಗಳು ಆಗಸಕ್ಕೆ ಚಿಮ್ಮಿ ಹಾರಬಲ್ಲವು ಎಂಬುದನ್ನು ವಿವರಿಸಲು ಆರಂಭಿಸಿದರು. ಹಾರುವಾಗ ಅವು ಹೇಗೆ ದಿಕ್ಕನ್ನು ಬದಲಾಯಿಸಿಕೊಳ್ಳಬಲ್ಲವು ಎಂಬುದನ್ನೂ ವರ್ಣಿಸಿದರು. ಹಕ್ಕಿಗಳು ಮೇಲೇರುವ ಪರಿ, ಜಿಗಿಯುವ ಬಗೆ, 10, 20, 30 ಹೀಗೆ ಹಕ್ಕಿಗಳು ಹೇಗೆ ಗುಂಪು ಗುಂಪಾಗಿ ಹಾರಬಲ್ಲವು ಎಂಬುದರ ಬಗ್ಗೆ ಇಪ್ಪತ್ತೈದು ನಿಮಿಷ ಉಪನ್ಯಾಸ ನೀಡಿದರು. ಆನಂತರ ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗಿದೆಯೋ ಇಲ್ಲವೋ ಎಂದು ಅವರಿಗೆ ತಿಳಿದುಕೊಳ್ಳಬೇಕೆನಿಸಿತು. ಹಕ್ಕಿಗಳು ಹೇಗೆ ಹಾರಾಡುತ್ತವೆ ಎಂದು ಅರ್ಥವಾಯಿತೇ? ಎಂದು ಕೇಳಿದರು. ನನಗೆ ಗೊತ್ತಾಗಲಿಲ್ಲ ಎಂದೆ! ಹಾಗೆ ಹೇಳಿದ್ದನ್ನು ಕಂಡ ಶಿವ ಸುಬ್ರಹ್ಮಣ್ಯ ಅಯ್ಯರ್, ನಿಮಗೆ ಅರ್ಥವಾಗಿದೆಯೇ? ಎಂದು ಉಳಿದವರನ್ನು ಕೇಳಿದರು. ಬಹಳಷ್ಟು ವಿದ್ಯಾರ್ಥಿ ಗಳಿಗೆ ಅರ್ಥವೇ ಆಗಿರಲಿಲ್ಲ. ಹಾಗಂತ ಮೇಷ್ಟ್ರು ಬೇಸರಿಸಿಕೊಳ್ಳ ಲಿಲ್ಲ. ಅದೇ ದಿನ ಸಂಜೆ ನಮ್ಮನ್ನೆಲ್ಲ ಸಮುದ್ರದ ಕಿನಾರೆಗೆ ಕರೆದುಕೊಂಡು ಹೋದರು. ದಡಕ್ಕೆ, ಬಂಡೆಗಳಿಗೆ ಬಂದು ಅಪ್ಪಳಿಸುತ್ತಿದ್ದ ಅಲೆಗಳ ಬೋರ್ಗರೆತವನ್ನು ನೋಡಿ ನಮಗೆ ಸಂತಸವಾಯಿತು. ಆಗಸದಲ್ಲಿ ಚಿಲಿಪಿಲಿ ಗುಟ್ಟುತ್ತಾ ಹಕ್ಕಿಗಳು ಹಾರಾಟ ನಡೆಸುತ್ತಿದ್ದವು. ಅವುಗಳತ್ತ ಬೆರಳು ಮಾಡಿದ ಮೇಷ್ಟ್ರು, 10, 20 ಸಮುದ್ರದ ಹಕ್ಕಿಗಳು ಗುಂಪು ಗುಂಪಾಗಿ ಹಾರಾಟ ನಡೆಸುತ್ತಿರುವುದನ್ನು ತೋರಿಸಿದರು. ಏಕ ಗುರಿಯಿಂದ ಸಾಲಾಗಿ ಸಾಗುತ್ತಿದ್ದ ಹಕ್ಕಿಗಳನ್ನು ಕಂಡು ನಮಗೆ ಆಶ್ಚರ್ಯವಾಯಿತು. ಆ ಹಕ್ಕಿಗಳ ಸಾಲುಗಳನ್ನೇ ದಿಟ್ಟಿಸಿ ನೋಡುತ್ತಿದ್ದೆವು. ಅವುಗಳತ್ತ ಬೊಟ್ಟು ಮಾಡುತ್ತಾ, ಹಕ್ಕಿಗಳು ಹಾರುವಾಗ ಹೇಗೆ ಕಾಣುತ್ತವೆ ಎಂದು ತಿಳಿಯಿತೋ ಎಂದು ಕೇಳಿದರು. ಅವು ರೆಕ್ಕೆ ಬಡಿಯುತ್ತಿರುವುದು ಕಂಡಿತು. ಮೇಲೇರುವಾಗ, ಮುಂದೆ ಚಲಿಸಬೇಕಾದಾಗ ಅದಕ್ಕೆ ಅನುಗುಣವಾಗಿ ರೆಕ್ಕೆ ಬಡಿಯುತ್ತವೆ ಎಂದು ವಿವರಿಸಿದರು. ಅವು ತಮಗೆ ಬೇಕಾದ ಕಡೆ ಸಾಗುತ್ತಿರುವುದು ನಮಗೆ ಕಂಡಿತು. ಎಲ್ಲಿದೆ ಹಕ್ಕಿಗಳ ಯಂತ್ರ, ಅದಕ್ಕೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು ನಮ್ಮನ್ನು ಕೇಳಿದರು. ಹಕ್ಕಿಗಳಿಗೆ ಬದುಕೇ ದಿಕ್ಕು ಮತ್ತು ಬಯಕೆಯೇ ಪ್ರೇರಣೆ ಎಂದರು. ಹದಿನೈದು ನಿಮಿಷಗಳಲ್ಲಿ ನಮಗೆ ಎಲ್ಲವೂ ಅರ್ಥವಾಯಿತು. ಎಷ್ಟು ಚೆನ್ನ ಅಲ್ವಾ? ನಮ್ಮ ಮೇಷ್ಟ್ರು ಪಾಠ ಮಾಡುವುದರ ಜತೆ ಪ್ರಾಯೋಗಿಕವಾಗಿಯೂ ವಿವರಿಸುತ್ತಿದ್ದರು. ನೈಜ ಶಿಕ್ಷಣ ಅಂದರೆ ಇದೇ.
ನನಗೆ ಅದು ಬರೀ ಹಕ್ಕಿಗಳು ಹಾರುವ ಪರಿಯನ್ನು ತಿಳಿದುಕೊಳ್ಳುವ ಪಾಠವಾಗಿರಲಿಲ್ಲ. ಹಾರಾಟ ನನ್ನೊಳಗೆ ಬಂದು ಕುಳಿತುಕೊಂಡುಬಿಟ್ಟಿತು. ಅಂದಿನಿಂದ ನನ್ನ ಮುಂದಿನ ಶಿಕ್ಷಣ ಹಾರಾಟಕ್ಕೆ ಸಂಬಂಧ ಪಟ್ಟಿದ್ದೇ ಆಗಿರಬೇಕೆಂಬ ಯೋಚನೆ ನನ್ನಲ್ಲಿ ಚಿಗುರೊಡೆಯಿತು. ಫ್ಲೈಟ್ ಸೈನ್ಸ್‌ನತ್ತ ನಾನು ಸಾಗುತ್ತೇನೆ ಎಂದು ಆ ಕ್ಷಣದಲ್ಲಿ ನನಗೆ ಅರಿವಾಗಲಿಲ್ಲ. ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ, ನನ್ನ ಶಿಕ್ಷಕರು ಕೊಟ್ಟ ಶಿಕ್ಷಣ ನನಗೆ ಪ್ರೇರಣೆ ಕೊಟ್ಟು ಬದುಕಿನ ಗುರಿಯತ್ತ ನನ್ನನ್ನು ಕೊಂಡೊಯ್ಯಿತು. ಜೀವನದ ಧ್ಯೇಯವನ್ನು ತೋರಿತು. ಕಾಲೇಜಿಗೆ ಸೇರಿದಾಗ ಭೌತಶಾಸ್ತ್ರವನ್ನು ಆಯ್ದುಕೊಂಡೆ. ಆನಂತರ ಮದ್ರಾಸ್ ತಾಂತ್ರಿಕ ಶಿಕ್ಷಣ ಸಂಸ್ಥೆ ಸೇರಿ, ಏರೋನಾ ಟಿಕಲ್ ಎಂಜಿನಿಯರಿಂಗ್ ವಿಷಯವನ್ನು ತೆಗೆದುಕೊಂಡೆ. ಹೀಗೆ ಒಬ್ಬ ರಾಕೆಟ್ ಎಂಜಿನಿಯರ್ ಆದೆ. ಒಬ್ಬ ಸಾಮಾನ್ಯ ವಿದ್ಯಾರ್ಥಿ ಇರಬಹುದು, ಪ್ರತಿಭಾನ್ವಿತರಿರಬಹುದು, ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಲ್ಲೂ eನದ ದೀವಿಗೆಯನ್ನು ಹಚ್ಚಿ ಹೇಗೆ ಬದುಕನ್ನು ರೂಪಿಸಬಲ್ಲರು ಎಂಬುದಕ್ಕೆ ಶಿವ ಸುಬ್ರಹ್ಮಣ್ಯ ಅಯ್ಯರ್ ಒಂದು ಉದಾಹರಣೆಯಾಗಿದ್ದರು”.
ಒಬ್ಬ ಶಿಕ್ಷಕ ಅಥವಾ ನೆಚ್ಚಿನ ಮೇಷ್ಟ್ರು ನಮ್ಮ ಜೀವನದಲ್ಲಿ ಎಂತಹ ಪಾತ್ರ ವಹಿಸುತ್ತಾನೆ ಎಂಬುದಕ್ಕೆ ಕಲಾಂ ಜೀವನದ ಈ ಎರಡು ಘಟನೆಗಳೇ ಸಾಕ್ಷಿ. ಅದಕ್ಕೇ ಇರಬೇಕು ನಮ್ಮ ಸಮಾಜ ಹೆತ್ತು-ಹೊತ್ತ ಅಪ್ಪ-ಅಮ್ಮನ ನಂತರದ ಸ್ಥಾನವನ್ನು ಗುರುವಿಗೆ ನೀಡಿದೆ.
ಗುರು ಬ್ರಹ್ಮ
ಗುರು ವಿಷ್ಣು
ಗುರು ದೇವೋ ಮಹೇಶ್ವರ
ಎನ್ನುತ್ತದೆ ನಮ್ಮ ಪರಂಪರೆ. “ಟೈಮ್ಸ್ ಆಫ್ ಇಂಡಿಯಾ” ದಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿರುವ ಮಿತ್ರರೊಬ್ಬರು ಅನುಭವವೊಂದನ್ನು ಹಂಚಿಕೊಂಡರು. ಕರ್ನಾಟಕದ ಕೆಲವೇ ಶುದ್ಧಹಸ್ತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಜತೆ ಅವರು ಮಾತನಾಡುತ್ತಿದ್ದಾಗ, “ಬಿಡಿ ಸಾರ್.. ಪ್ರಾಮಾಣಿಕರೆಲ್ಲಿದ್ದಾರೆ, ಪ್ರಾಮಾಣಿಕತೆಗೆ ಎಲ್ಲಿ ಬೆಲೆಯಿದೆ” ಎಂದಾಗ ಅಜಯ್ ಕುಮಾರ್ ಸಿಂಗ್ ಶಿಕ್ಷಕರ ನಿಸ್ವಾರ್ಥ ಸೇವೆಯ ಬಗ್ಗೆ ಹೀಗೆ ವಿವರಿಸಿದರಂತೆ… “ನೋಡಿ… 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ ಸುಮಾರು ೩೪ ಕೋಟಿ ಇತ್ತು. ಅವರಲ್ಲಿ ಸಾಕ್ಷರರ ಪ್ರಮಾಣ 20 ಪರ್ಸೆಂಟ್ ಆಗಿತ್ತು. ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಆ 20 ಪರ್ಸೆಂಟ್‌ನಲ್ಲಿ ಹತ್ತು ಪರ್ಸೆಂಟ್ ಎನ್ನಬಹುದು. ಅವತ್ತು ನಮ್ಮ ದೇಶ ಕಟ್ಟಿದವರು ನಮ್ಮನಾಳಿದ ರಾಜಕೀಯ ನೇತಾರರಾರೂ ಅಲ್ಲ, ಪ್ರೈಮರಿ, ಮಿಡ್ಲ್ ಸ್ಕೂಲ್ ಮೇಷ್ಟ್ರು! ಆ ಕಾಲದಲ್ಲಿ ಮೇಷ್ಟ್ರುಗಳಿಗೆ ಕೂಲಿ ಕಾರ್ಮಿಕರಿಗೆ ಸಿಗುವಂಥ ಸಂಬಳ ಸಿಗುತ್ತಿತ್ತು. ಹಾಗಿದ್ದರೂ ಬೇಸರಿಸಿಕೊಳ್ಳದೆ ಹತ್ತಾರು ಮೈಲು ನಡೆದುಕೊಂಡು ಹಳ್ಳಿಗಳಿಗೆ ಹೋಗಿ eನ ದೀವಿಗೆಯನ್ನು ಹಚ್ಚಿದರು. ಆಗ ಎಂಟನೇ ಕ್ಲಾಸು ಪಾಸಾದವರೂ ಮೇಷ್ಟ್ರು ಆಗಬಹುದಿತ್ತು. ಅವರು ತಾವೂ ಕಲಿತು, ಇತರರ ಮಕ್ಕಳಿಗೂ ಅಷ್ಟೇ ಶ್ರದ್ಧೆ ಹಾಗೂ ಉತ್ಸಾಹದಿಂದ ವಿದ್ಯಾದಾನ ಮಾಡಿದರು. ಅವರೆಂದೂ ದುಡ್ಡಿಗಾಗಿ ದುಡಿದವರಲ್ಲ. ಆ ಮೊದಲ ತಲೆಮಾರಿನ ಶಾಲಾ ಶಿಕ್ಷಕರೇ ಈ ದೇಶದ ನಿಜವಾದ ನಿರ್ಮಾತೃಗಳು. ಒಂದು ವೇಳೆ ಅವರು ಭ್ರಷ್ಟರಾಗಿದ್ದರೆ?! ನಮ್ಮ ದೇಶ ಈ ಮಟ್ಟಕ್ಕೆ ಬೆಳೆಯುತ್ತಿತ್ತೆ? Honesty has it’s own reward”.
ಅವರ ಮಾತು ಎಷ್ಟು ಸತ್ಯ ಅಲ್ಲವೆ?
Curiosity leads to new thoughts and inventions ಎಂದಿದ್ದ ಎಡಿಸನ್. ಮಕ್ಕಳ ಮನದಲ್ಲಿ ಕುತೂಹಲ, ಆಸಕ್ತಿಯನ್ನು ಹುಟ್ಟುಹಾಕಿ, ಭವಿಷ್ಯಕ್ಕೆ ದಿಕ್ಕು ತೋರುವವನೇ ಶಿಕ್ಷಕ. ಬ್ರಿಟಿಷರು ಬರುವುದಕ್ಕಿಂತ ಮೊದಲು ನಮ್ಮಲ್ಲಿ ಗುರುಕುಲ ಪದ್ಧತಿ, ಜಾತಿ ಆಧಾರಿತ ಶಿಕ್ಷಣವಿತ್ತು. ‘ಇನ್‌ಟ್ಟಿಟ್ಯೂಟನಲೈಸ್ಡ್ ಎಜುಕೇಶನ್’ ಆರಂಭ ಮಾಡಿದ್ದೇ ಬ್ರಿಟಿಷರು. ಹಾಗೆ ಆರಂಭವಾದ ಶಿಕ್ಷಣಕ್ಕೆ ಅಡಿಗಲ್ಲು ಇಟ್ಟವರೇ ನಮ್ಮ ಶಿಕ್ಷಕರು. ಅವರನ್ನು ನಮ್ಮ ಸಮಾಜವೂ ಗೌರವದಿಂದಲೇ ನೋಡುತ್ತಾ ಬಂದಿದೆ. ನಾವೂ ಕೂಡ ಕಾಲೇಜು ಮೆಟ್ಟಿಲು ಹತ್ತಿದ ನಂತರ ಎಲ್ಲ ಲೆಕ್ಚರರ್‌ಗಳನ್ನೂ ಇಷ್ಟಪಡುವುದಿಲ್ಲ. ಒಬ್ಬ ಲೆಕ್ಚರರ್ ಎದುರಿಗೆ ಬಂದರೆ ನೋಡಿಯೂ ನೋಡದಂತೆ, ಇಲ್ಲವೆ ಮುಖ ತಿರುಗಿಸಿಕೊಂಡು ಹೋದೇವು… ಆದರೆ ಮೇಷ್ಟ್ರು ಎದುರಾದರೆ ನಾವೆಷ್ಟೇ ವಿದ್ಯಾವಂತರಾಗಿದ್ದರೂ ಅಕ್ಷರ ಕಲಿಸಿದ ಗುರುವಿಗೆ ಗೌರವದಿಂದ ನಮಸ್ಕಾರ ಹೇಳುತ್ತೇವೆ. ಕಾಲೇಜು ಉಪನ್ಯಾಸಕರ ಬಗ್ಗೆ ಕೆಲವೊಮ್ಮೆ ಉಡಾಫೆಯಿಂದ, ಹಗುರವಾಗಿ, ಏಕವಚನದಿಂದ ಮಾತನಾಡುವ ನಾವು ಮೇಷ್ಟ್ರುಗಳ ವಿಷಯದಲ್ಲಿ ಯಾವತ್ತೂ ತಲೆಬಾಗಿಸುತ್ತೇವೆ. ದೊಡ್ಡವರಾದ ಮೇಲೂ ಮೇಷ್ಟ್ರುಗಳ ಬಗ್ಗೆ ಒಂದಿಷ್ಟು ಪ್ರೀತಿಪೂರ್ವಕ ಭಯ ನಮ್ಮಲ್ಲಿರುತ್ತದೆ. ಹಿಂದೆಲ್ಲ ಶಿಕ್ಷಕರು ಗಣತಿಗೆ ಬರುತ್ತಾರೆಂದರೆ ಹಳ್ಳಿಯ ಬಡವರ ಮನೆಗಳಲ್ಲಿ ಮಕ್ಕಳನ್ನು ಅವಿತಿಡುವುದನ್ನು ಕಾಣಬಹುದಿತ್ತು. ಎಲ್ಲಿ ಶಾಲೆಗೆ ಕಳುಹಿಸಿ ಎಂದು ತಾಕೀತು ಹಾಕುತ್ತಾರೆಂಬ ಭಯ. ಅದು ಅವರ ಜವಾಬ್ದಾರಿಯಲ್ಲದಿದ್ದರೂ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಜನರಿಗೆ ಹಿತವಚನ ನೀಡುತ್ತಿದ್ದರು, ಕಿವಿ ಮಾತು ಹೇಳುತ್ತಿದ್ದರು. ನಮ್ಮ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿಗಳಲ್ಲಿಂದು, “ಐಐಟಿ ಟೀಚರ್‍ಸ್ ಸಿಂಡ್ರೋಮ್” ಎಂಬುದನ್ನು ಕಾಣಬಹುದು. ಅಂದರೆ ತಮ್ಮ ಬಳಿ ವಿದ್ಯೆ ಕಲಿತು ತಮಗಿಂತಲೂ ದೊಡ್ಡ ಮೊತ್ತದ ಸಂಬಳ ಪಡೆಯುವ ವಿದ್ಯಾರ್ಥಿಗಳ ಏಳಿಗೆ ಬಗ್ಗೆಯೇ ಅಸೂಯೆಪಡುವ ಉಪನ್ಯಾಸಕರಿದ್ದಾರೆ. ಕಾಲೇಜು, ಯೂನಿವರ್ಸಿಟಿಗಳಲ್ಲಿ ಸರಕಾರದ ಸಂಬಳ ತಿಂದುಕೊಂಡು ಎಡ, ಬಲ ಎಂಬ ನಿರುಪಯುಕ್ತ ಸಿದ್ಧಾಂತಗಳನ್ನು ತಲೆಗೆ ತುಂಬುವ, ಕಂಡವರ ಮಕ್ಕಳನ್ನು ಕ್ರಾಂತಿ ಹೆಸರಿನಲ್ಲಿ ಕಾಡಿಗೆ ಕಳುಹಿಸುವ, ಜಾತಿವಾದ ಮಾಡುವ ಉಪನ್ಯಾಸಕರನ್ನು ಕಾಣಬಹುದು. ಆದರೆ ಮೇಷ್ಟ್ರು ಯಾವತ್ತೂ ಪರರ ಮಕ್ಕಳನ್ನು ತನ್ನ ಮಕ್ಕಳೆಂಬಂತೆ ಕಂಡು, ಅವರ ಏಳಿಗೆಯಲ್ಲಿ ತನ್ನ ಖುಷಿಕಂಡುಕೊಳ್ಳುತ್ತಾನೆ. ಇಂತಹ ಗುರುತರ ಜವಾಬ್ದಾರಿಯನ್ನು ನಿರ್ವಹಿಸುವ ಶಿಕ್ಷಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ?
ಇವತ್ತಿಗೂ ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಮೂಲ ವ್ಯವಸ್ಥೆಯಾದ ಶೌಚಾ ಲಯವೇ ಇಲ್ಲದಂತಹ ಸ್ಥಿತಿಯಿದೆ. ಸಂಬಳ, ಸವಲತ್ತಿನ ವಿಚಾರ ಬಂದಾಗ ಆಳುವವರು ಇತರ ಸರಕಾರಿ ಉದ್ಯೋಗಿ ಗಳಂತೆಯೇ ಶಿಕ್ಷಕರನ್ನೂ ಟ್ರೀಟ್ ಮಾಡುತ್ತಾರೆ. ಕಾಲೇಜು, ಯೂನಿವರ್ಸಿಟಿಗಳಲ್ಲಿ ಆ ಸಿದ್ಧಾಂತ, ಈ ಸಿದ್ಧಾಂತ ಅಂತ ತಲೆ ತಿರುಗಿಸುವವರಿಗೆ ಕೈತುಂಬಾ ಪಗಾರ, ವಾರದ 6 ದಿನಗಳೂ ಪಾಠ ಮಾಡುವ ಶಿಕ್ಷಕರಿಗೆ 20 ವರ್ಷ ಸೇವೆ ಸಲ್ಲಿಸಿದರೂ 10 ಸಾವಿರ ಮೀರದ ಸಂಬಳ! ಇನ್ನಾದರೂ ಇದನ್ನೆಲ್ಲಾ ಸರಿಪಡಿಸಬೇಕು ಎಂಬ ಇಚ್ಛೆ ನಮ್ಮನ್ನಾಳುವವರಿಗಿದ್ದರೆ ಕೆಲವೊಂದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು.
1. ಶಿಕ್ಷಕ ವರ್ಗವನ್ನು ಇತರ ಸರಕಾರಿ ಉದ್ಯೋಗಿಗಳಂತೆ ಕಾಣಬಾರದು. ಶಿಕ್ಷಕ ವೃತ್ತಿಯನ್ನು ಪ್ರತ್ಯೇಕಗೊಳಿಸಿ ಸಂಬಳ ಹೆಚ್ಚಳದ ವಿಷಯ ಬಂದಾಗ ವಿಶೇಷ ಆದ್ಯತೆ ನೀಡಬೇಕು.
2. ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆಯನ್ನು ಶಿಕ್ಷಕರಿಗೂ ವಿಸ್ತರಿಸುವ ಮೂಲಕ ಅವರ ಯೋಗಕ್ಷೇಮ ನೋಡಿಕೊಳ್ಳಬೇಕು.
3. ಸಾಧ್ಯವಾದಷ್ಟು ಮಟ್ಟಿಗೆ ಶಿಕ್ಷಕರಿಗೂ ಸರಕಾರಿ ಕ್ವಾರ್ಟರ್ಸ್ (ವಸತಿ) ವ್ಯವಸ್ಥೆ ಮಾಡಬೇಕು.
4. ಆಸಕ್ತಿ ಹೊಂದಿರುವ ಟೀಚರ್‌ಗಳಿಗೆ ಉನ್ನತ ಶಿಕ್ಷಣಕ್ಕೆ ತೆರಳಲು ಪ್ರೋತ್ಸಾಹ ನೀಡಬೇಕು.
5. ಸಂಬಳಕ್ಕೆ ಕತ್ತರಿ ಹಾಕದೆ ಸ್ಟಡಿ ಹಾಲಿಡೆ ನೀಡಬೇಕು.
6. ಸಾಮರ್ಥ್ಯವನ್ನು ಗುರುತಿಸಿ ‘ವರ್ಟಿಕಲ್ ಪ್ರಮೋಷನ್’ (ನೇರವಾಗಿ ಮೇಲಿನ ಸ್ತರಕ್ಕೆ ಬಡ್ತಿ) ಕೊಡುವಂತಹ ವ್ಯವಸ್ಥೆ ಯನ್ನು ರೂಪಿಸಬೇಕು.
“ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡುವುದ ಕ್ಕಿಂತ ತಮ್ಮ ಭವಿಷ್ಯವನ್ನು ಸ್ವತಃ ರೂಪಿಸಿಕೊಳ್ಳುವಂತಹ ಮಕ್ಕಳನ್ನು ಸಿದ್ಧಪಡಿಸುವುದು ಬಹುಮುಖ್ಯ” ಎಂದಿದ್ದರು ಅಮೆರಿಕದ ಅಧ್ಯಕ್ಷ ಪ್ರಾಂಕ್ಲಿನ್ ಡಿ. ರೂಸ್‌ವೆಲ್ಟ್. ನಮ್ಮ ಭವಿಷ್ಯವನ್ನು ರೂಪಿಸುವ, ಶಿಕ್ಷಣದ ಬಗ್ಗೆ ಆಸಕ್ತಿ ಹುಟ್ಟಿಸಿ ಬದುಕಿಗೆ ಗುರಿ ಹಾಕಿಕೊಡುವ ಕೆಲಸವನ್ನು ಮಾಡುತ್ತಿರುವವರು ಪ್ರೈಮರಿ, ಮಿಡ್ಲ್, ಹೈಸ್ಕೂಲ್ ಮೇಷ್ಟ್ರುಗಳು. ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಡಾ. ರಾಧಾಕೃಷ್ಣನ್‌ರನ್ನು ನೆನಪಿಸಿಕೊಂಡು ಶಿಕ್ಷಕರ ದಿನಾಚರಣೆಯೆಂಬ ಶಾಸ್ತ್ರವನ್ನು ಮುಗಿಸಿದರೆ ಸಾಲದು. ನಿಸ್ವಾರ್ಥ ಸೇವೆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿರುವ ಶಿಕ್ಷಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಕಾರ ಸರಿಯಾಗಿ ನಿರ್ವಹಿಸಬೇಕು. ಆಗ ಶಿಕ್ಷಕರೂ ವೈಯಕ್ತಿಕ ಕಷ್ಟಕಾರ್ಪಣ್ಯಗಳ ಚಿಂತೆ ಬಿಟ್ಟು ಎಳೆಯ ಮನಸ್ಸುಗಳ ಬುದ್ಧಿ ವಿಕಾಸ ಕಾರ್ಯ ದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅವರು ಕಲಿಸುವ ಅ.ಆ.ಇ.ಈ ಯಲ್ಲಿ ಪ್ರೀತಿ ಇದೆ, ಅವರಿಗೂ ಅದನ್ನೇ ಕೋಡೋಣ. ನಾವೂ ಕೂಡ ಕೈ ಹಿಡಿದು ಅಕ್ಷರ ತಿದ್ದಿಸಿದ ಕೈಗಳಿಗೆ ಇಂದಾದರೂ ಕೈಮುಗಿದು ನಮಸ್ಕರಿಸೋಣ.
ಹ್ಯಾಪಿ, ಟೀಚರ್‍ಸ್ ಡೇ!
Really a very good article Sir
ಪà³à²°à²¤à²¾à²ªà³,
ಲೇಖನ ಸಮಯೊಚಿತವಾಗಿ ಸà³à²‚ದರರವಾಗಿ ಮೂಡಿ ಬಂದಿದೆ. ಶಿಕà³à²·à²•ರ ಬಗà³à²—ೆ ನನಗೂ ಅತಿಯಾದ ಗೌರವ ಇದೆ. ಆದರೆ, ಕೆಲವೊಂದೠಶಿಕà³à²·à²•ರೠತಮà³à²® ವೃತà³à²¤à²¿à²—ೇ ಕೇಡೠಬಗೆಯà³à²¤à³à²¤à²¿à²°à³à²µà³à²¦à²¨à³à²¨à³ ಕಂಡೠಕೇಳಿರà³à²µ ನನಗೆ à²à³à²°à²·à³à²Ÿà²¾à²šà²¾à²° ಎಲà³à²²à²¿ ಹà³à²Ÿà³à²Ÿà²¿à²•ೊಂಡಿದೆ ಅನà³à²¨à³à²µ ಪà³à²°à²¶à³à²¨à³†à²—ೆ ಉತà³à²¤à²° ಹà³à²¡à³à²•à³à²µà³à²¦à³ ಕಷà³à²Ÿ ಆಗà³à²µà³à²¦à²¿à²²à³à²².
ವಿದà³à²¯à²¾à²°à³à²¥à²¿à²—ಳ ಮà³à²‚ದೆಯೇ ಧೂಮಪಾನ ಮಾಡà³à²µ ಶಿಕà³à²·à²•ರà³, ತಂಬಾಕೠಸೇವನೆ ಮಾಡà³à²µ ಶಿಕà³à²·à²•ರà³, ಸಮಯ ಪಾಲನೆ ಮಾಡದ ಶಿಕà³à²·à²•ರà³, ಶಾಲಾ ಸಮಯದಲà³à²²à²¿ ತಮà³à²® ಅನà³à²¯ ವà³à²¯à²µà²¹à²¾à²° ವà³à²¯à²¾à²ªà²¾à²° ನಡೆಸಿಕೊಳà³à²³à³à²µ ಶಿಕà³à²·à²•ರà³, ರಾಜà³à²¯ ಪà³à²°à²¶à²¸à³à²¤à²¿ ಹಾಗೂ ರಾಷà³à²Ÿà³à²° ಪà³à²°à²¶à²¸à³à²¤à²¿à²—ಳಿಗಾಗಿ ಸà³à²¥à²³à³€à²¯ ಸಂಸತೠಸದಸà³à²¯à²° ಶಿಫಾರಸà³à²¸à²¿à²—ಾಗಿ, ಅವರ ಮನೆ ಮà³à²‚ದೆ ಹೋಗಿ ದಿನಾ ಕಾಯà³à²µà²µà²°à³, ಕೊನೆಗೆ ಲಂಚ ಕೊಟà³à²Ÿà³ ಶಿಫಾರಸà³à²¸à³ ಮಾಡಿಸಿಕೊಂಡà³, ಪà³à²°à²¶à²¸à³à²¤à²¿ ಪಡೆದà³à²•ೊಳà³à²³à³à²µà²µà²°à³ ಸಾಕಷà³à²Ÿà³ ಮಂದಿ ಸಿಗà³à²¤à³à²¤à²¾à²°à³†. ಶಿಕà³à²·à²•ರನà³à²¨à³ ಸರಕಾರ ನಡೆಸಿಕೊಳà³à²³à³à²µ ರೀತಿ ಬದಲಾಗಬೇಕೠನಿಜ. ಜೊತೆಗೆ ಶಿಕà³à²·à²•ರೂ ತಮà³à²®à²¨à³à²¨à³ ಬರೇ ಸರಕಾರೀ ನೌಕರರೠಎಂದೠಅಂದà³à²•ೊಳà³à²³à²¦à³‡, ಈ ಸಮಾಜವನà³à²¨à³ ತಿದà³à²¦à²¿, ತೀಡಿ, à²à²µà³à²¯ à²à²µà²¿à²·à²¤à³ ನಿರà³à²®à²¾à²£ ಮಾಡà³à²µ ಮಹಾನೠಕಾರà³à²¯à²•ರà³à²¤à²°à³ ಎಂಬà³à²¦à²¨à³à²¨à³ ಅರಿತà³à²•ೊಂಡೠಕಾರà³à²¯ ನಿರà³à²µà²¹à²¿à²¸à²¬à³‡à²•à³. ಆಗಷà³à²Ÿà³‡ ಈ ದೇಶ ಉದà³à²§à²¾à²° ಆದೀತà³.
ಧನà³à²¯à²µà²¾à²¦à²—ಳà³.
ಆತà³à²°à²¾à²¡à²¿ ಸà³à²°à³‡à²¶à³ ಹೆಗà³à²¡à³†, ಬೆಂಗಳೂರà³.
Dear Pratap,
Really good one. As you mentioned we have learnt a lot from our school teachers, even today also they are the role models for us. In our higher education institutions hardly we could find just one or two teachers who have dedicated them for student’s welfare. Most of the teachers in collage and universities are involved directly or indirectly in caste politics which has become one of the dominant factors.
I salute the teachers on this occasion. Especially I want to salute my great teacher V.Gopalkrishna. But nowadays educational institutions are running on the basis of caste & religion. The teachers are doing in favor of students of their community. It is not a good development.
Great Stuff..
But could have been a lot better!!
the article reminded me few good teachers i have got in my life.it’s really true that we have more respect towards our school teachers than our college lecturers.that too most of the lecturers we have now are just 5 or 6 years elder and they are teaching only because they have not got any other job.yet we wished them on teachers’ day,some of them really felt happy and some ignored…………..
thanks for mentioning about Kalam’s website,i was not knowing about that.i am happy that Kalam’s b’day(oct 15) has been declared as ‘World Students’ Day’. article is good,but i am feeling it is not ‘a Pratap Simha’s article’….not up to the expectations…………
super article.nanage nimma article tumba istavayitu.nanage nanna primary school teachers nenapige bandru.intha valle article kottidakke tumba thanks.
i like 2 salute all d dedicated teachers… thanks 4 giving nice article pratap,,,,.,
Pratap,
article is good, as you dedicated this to our respected teachers ….
thanks i hope all will now the value of teacher in their life on reading this article.
Hi,
Really a nice article.
Excellent article, Teachers are the poiner for all invention and innovations
Good article and we are Honor our teachers.
once again i salute my teachers……..
Hi maga,
Article is sooper Shisya!
Let me utilize this opp to inform you about my fav teachers.
1. Pushpa Madam, 7th Std, OLV convent, somwarpet
2. Jayaram, St Joseph’s High School, Somwarpet
Ivara pata kelli adeshto students ivattu engineers, doctors, teachers agidaare.
Very good article. your article remembered me my school days, teachers teachers of OLV & St. Joseph’s schools, & classmates, whom I remembered a lot . The teachers are very friendly and so caring. The teaching & in depth knowledge about the subject was superb.
I take this opportunity to salute my favorite and respected teachers
1.OLV Convent, Somwarpet – Ms. Pushpa, Mrs. Lakshmi, Mrs. Juliana, and Mrs. Kumuda Bhatt
2.St. Joseph’s High School, Somwarpet- Mr. Srinivas Bhatt,Mr. Jayram, Mr. Govardan, Mr.Harry Moras, Ms. Marry, Mrs. Anny & HM Mrs. Lobo
The knowledge n support which they have given helped me a lot. We should be thank full to our teachers.Their good teaching, encouraging n support helped us to achieve our goals. Because of thier support so many has become Doctors, Engineers n working in a good companies.
Each and every person should thank their teachers.Once again I salute my teachers.
Hinde guru:munde guri iddare yashassu kattitta buttiyallave.guruvina smaranege ee dina shubhadina.hands up to all respected teachers.saaviraru chittagalariva sodaru belaguva guru bramhanige namonmahaa..nimma sundara lekanakkuu vandane.
Miss My School days, friends and teachers of OLV School Somwarpet and St Josephs High School Somwarpet