Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ಭಾರತೀಯ ಪತ್ರಿಕಾ ಮಂಡಳಿ ಸದಸ್ಯರಾಗಿ ಸಂಸದ ಪ್ರತಾಪ್ ಸಿಂಹ ನೇಮಕ

ಭಾರತೀಯ ಪತ್ರಿಕಾ ಮಂಡಳಿ ಸದಸ್ಯರಾಗಿ ಸಂಸದ ಪ್ರತಾಪ್ ಸಿಂಹ ನೇಮಕ

Screenshot_2015-06-16-13-21-13-1  ಭಾರತೀಯ  ಪತ್ರಿಕಾ ಮಂಡಳಿ ಸದಸ್ಯರಾಗಿ ಸಂಸದ  ಪ್ರತಾಪ್ ಸಿಂಹ ನೇಮಕ

ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಸಂಸದ  ಪ್ರತಾಪ್ ಸಿಂಹ ಅವರನ್ನು ಪ್ರತಿಷ್ಠಿತ ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರನ್ನಾಗಿ ಕೇಂದ್ರ ಮತ್ತು ವಾರ್ತಾ ಪ್ರಸಾರ ಖಾತೆ ಸಚಿವಾಲಯ ನೇಮಕ ಮಾಡಿದೆ. ಸದಸ್ಯತ್ವದ ಅವಧಿಯು ಮೂರು ವರ್ಷಕ್ಕೆ ಸೀಮಿತವಾಗಿರುವಂತೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇದು ಕಾನೂನುಬದ್ಧ ಸಂಸ್ಥೆಯಾಗಿದ್ದು, ಪ್ರಮುಖವಾಗಿ ಮುದ್ರಣ ಮಾಧ್ಯಮದ ರೀತಿ-ರಿವಾಜುಗಳ ಮೇಲೆ ನಿಗಾ ಇಡುತ್ತದೆ. ಪ್ರಜತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಕಾಪಾಡುವ ಅಗ್ರಮಾನ್ಯ ಮಂಡಳಿ ಇದಾಗಿದೆ. ಅಷ್ಟು ಮಾತ್ರವಲ್ಲ,ಅದಾಗ್ಯೂ ಯಾವುದಾದರೂ ಪತ್ರಿಕೆ ಅಥವಾ ಪತ್ರಕರ್ತರ ಬಗ್ಗೆ ದೂರುಗಳು ಬಂದರೆ ಸಂಬಂಧಪಟ್ಟ ಪತ್ರಿಕೆ, ಪತ್ರಕರ್ತನನ್ನು ಕರೆಯಿಸಿ ವಿಚಾರಣೆ ನಡೆಸುವ ಹಾಗೂ ಕ್ರಮಕೈಗೊಳ್ಳುವ ಅಧಿಕಾರ ಹೊಂದಿದೆ. ಇದೊಂದು ಸಂವಿಧಾನಬದ್ಧ ವ್ಯವಸ್ಥೆಯಾಗಿರುವುದರಿಂದ ಅತ್ಯಂತ ಪ್ರಭಾವಿ ಮಂಡಳಿಯಾಗಿದೆ. ಈ ಹಿಂದೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಇದರ ಅಧ್ಯಕ್ಷರಾಗಿದ್ದರು. ಸದ್ಯ 2015ರಿಂದ ನ್ಯಾಯಮೂರ್ತಿ ಚಂದ್ರಮಳಿ ಕುಮಾರ್ ಪ್ರಸಾದ್ ಇದರ ಅಧ್ಯಕ್ಷರಾಗಿದ್ದಾರೆ.

ಭಾರತದ ಮುದ್ರಣ ಮಾಧ್ಯಮದ ಮೇಲೆ ನಿಗಾ ಇಡಲು ಹಾಗೂ ನಿಯಂತ್ರಿಸಲು ಈ ಪತ್ರಿಕಾ ಮಂಡಳಿಯನ್ನು ಸಂಸತ್ತಿನಲ್ಲಿ ಕಾಯಿದೆಯೊಂದನ್ನು ರೂಪಿಸುವ ಮೂಲಕ 1966ರಲ್ಲಿ ಸ್ಥಾಪಿಸಲಾಯಿತು. ಸ್ವತ: ಪತ್ರಕರ್ತರೂ ಆಗಿರುವ ಸಂಸದ  ಪ್ರತಾಪ್ ಸಿಂಹ ಅವರನ್ನು ಅರೆ ನ್ಯಾಯಾಂಗ ವ್ಯವಸ್ಥೆಯಾಗಿರುವ ಈ ಪತ್ರಿಕಾ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದು ಗಮನಾರ್ಹ ಅಂಶ.ಇದರಿಂದಾಗಿ ಮುದ್ರಣ ಮಾಧ್ಯಮದ ಸ್ವಾತಂತ್ರ್ಯ ಕಾಪಾಡುವ ಹಾಗೂ ಎಲ್ಲೆ ಮೀರಿದಾಗ ಕಾನೂನು ಚೌಕಟ್ಟಿಗೆ ಒಳಪಡಿಸುವಂತಹ ಗುರುತರ ಜವಾಬ್ದಾರಿ, ಅವಕಾಶ ಕೇಂದ್ರಸರ್ಕಾರ ಒದಗಿಸಿ ಕೊಟ್ಟಿದೆ. ಈ ನೇಮಕ ಮಾಡಿದ ಪ್ರಧಾನಮಂತ್ರಿ ನರೇಂದ್ರಮೋದಿ, ವಾರ್ತಾ ಸಚಿವ ಅರುಣ್ ಜೇಟ್ಲಿ, ಕೇಂದ್ರ ನಗರಾಭಿವದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಅವರಿಗೆ ಸಂಸದ  ಪ್ರತಾಪ್ ಸಿಂಹ ಕೃತಜ್ಞತೆ ಸಲ್ಲಿಸಿದ್ದಾರೆ.

Comments are closed.