Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ

ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ

ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ

ಅದೊಂದು ಕಾಲವಿತ್ತು. ಕೇರಳ ಚುನಾವಣೆಗಳಲ್ಲಿ ವಿಶೇಷವೇನಿರುತ್ತದೆ ಎಂದು ಎಂಥವರಿಗೂ ಅನಿಸುತ್ತಿತ್ತು. ಒಂದೋ ಅದೇ ಹಳೆಯ ಕಾಲದ ಕಮ್ಯುನಿಸ್ಟರು, ಇಲ್ಲಾ ಕಾಂಗ್ರೆಸ್ ನಡುವೆ ಸ್ಪಧೆ೯ ನಡೆಯಬಹುದು ಎಂದು ಹೊರ ರಾಜ್ಯಗಳೂ ಅಂದುಕೊಳ್ಳುತ್ತಿದ್ದವು. ಬಿಜೆಪಿ ದೇಶವಾಳಬಹುದೇ ಹೊರತು ಕೇರಳದಲ್ಲಿ ಅದರ ಆಟ ನಡೆಯದು ಎಂದೇ ಎಲ್ಲರೂ ಆಡಿಕೊಳ್ಳುತ್ತಿದ್ದರು. ಕೇರಳವನ್ನು ಒಮ್ಮೆ ಸುತ್ತಿ ಬಂದವರಿಗೂ ಕೂಡ ಹಾಗೇ ಅನಿಸುತ್ತಿತ್ತು. ಎಲ್ಲೆಲ್ಲೂ ಕಾಣುವ ಕೆಂಪು ಬಾವುಟಗಳು, ಕಮ್ಯುನಿಸ್ಟ್ ಕಚೇರಿಗಳು, ವಿದೇಶಿ ನಾಯಕರ ಚಿತ್ರಗಳೇ ರಾರಾಜಿಸಿ ಸಂಪೂಣ೯ ಕೇರಳವೇ ಕೆಂಪು ಜನರ ಕೋಟೆ, ಉಳಿದಲ್ಲಿ ಗೆಲ್ಲುವವರು ಕಮ್ಯುನಿಸ್ಟರು ಎಂದು ಅಂದಾಜಿಸುತ್ತಿದ್ದರು. ಹೀಗಿರುವಾಗ ಮೂರನೇ ಶಕ್ತಿಯ ಉದ್ಬವ ಹೇಗೆ ತಾನೇ ಸಾಧ್ಯ ಎಂದು ತೀಮಾ೯ನಿಸಿಬಿಡುತ್ತಿದ್ದರು.

   ಆದರೆ ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯನ್ನು ಜನ ಹಾಗೆ ಭಾವಿಸಲಿಲ್ಲ. ಏಳು ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ಕೇರಳ ಈಗ ಮೊದಲಿನಂತಿಲ್ಲ ಎಂಬುದನ್ನು ದೇಶಕ್ಕೇ ತೋರಿಸಿಕೊಟ್ಟಿತ್ತು. ಏಕೆಂದರೆ ತಿರುವನಂತಪುರಂ ಕಾರ್ಪೊರೇಶನಿನಲ್ಲಿ 32 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಪಾಲಕ್ಕಾಡಿನಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಇನ್ನು ಹಲವು ಕಮ್ಯುನಿಸ್ಟ್ ಕೋಟೆಗಳಲ್ಲೂ ಬಿಜೆಪಿ ಖಾತೆ ತೆಗೆದಿತ್ತು. ಇನ್ನು ಕೆಲವೆಡೆ ಕಮ್ಯುನಿಸ್ಟರಿಗೆ ಮತ್ತು ಕಾಂಗ್ರೆ ಸಿಗರಿಗೆ ತೀವ್ರ ಸ್ಪಧೆ೯ಯನ್ನು ಬಿಜೆಪಿ ಒಡ್ಡಿತ್ತು. ಆಗಲೇ ಈ ಎರಡೂ ಪಕ್ಷಗಳು ನಿದ್ದೆಗೆಟ್ಟು ವಿಧಾನಸಭಾ ಪ್ರಚಾರವನ್ನು ಆರಂಭೀಸಿಬಿಟ್ಟಿದ್ದರು. ಕಾಂಗ್ರೆ ಸ್ ನಾಯಕ ಎ.ಕೆ. ಆಂಟನಿಯಂತೂ ಪ್ರಚಾರಕ್ಕೆ ಹೋದಲ್ಲೆಲ್ಲಾ “ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಅವರು ಒಂದು ಸೀಟಿನ ಭರವಸೆಯನ್ನೂ ಇಟ್ಟುಕೊಳ್ಳುವುದು ಬೇಡ. ಕೇರಳದಲ್ಲಿ ಕಾಂಗ್ರೆ ಸ್ ಇರುವವರೆಗೆ ಬಿಜೆಪಿಯವರು ಕೇರಳ ವಿಧಾನಸಭೆಯ ಒಳಭಾಗವನ್ನು ನೋಡಲು ಪಾಸ್ ತೆಗೆದುಕೊಳ್ಳುವುದು ತಪ್ಪುವುದಿಲ್ಲ’ ಎಂದು ಭಾಷಣ ಮಾಡುತ್ತಿದ್ದರು.

     ಈಗ ಎ.ಕೆ ಆಂಟನಿಯೇ ಪಾಸ್ ತೆಗೆದುಕೊಂಡು ವಿಧಾಸಭೆಯ ಒಳಹೋಗಬೇಕಾದ ಪರಿಸ್ಥಿತಿ.
ಕೇರಳ ರಾಜ್ಯ ಬಿಜೆಪಿ ಯುವಮೋಚಾ೯ ಸದಸ್ಯರು ಈಗಾಗಲೇ ಆಂಟನಿಯವರಿಗೆ ಆ ಪಾಸನ್ನು ತಲುಪಿಸಿಯೂ ಆಗಿದೆ! ಏಕೆಂದರೆ ಕೇರಳ ಬಿಜೆಪಿ ಕಾಯ೯ಕತ೯ರ ಪ್ರೀತಿಯ ರಾಜಟನ್ ಈಗ ಶಾಸಕರಾಗಿದ್ದಾರೆ.

   ಮೊನ್ನೆ ಆ ಹೊಸ ಶಾಸಕರು ಕೇರಳ ವಿಧಾನಸಭೆಗೆ ಪ್ರವೇಶಿಸಿದಾಗ ಕೇರಳದ ರಾಷ್ಟ್ರೀಯವಾದಿಗಳು ತಾವೇ ಅಧಿಕಾರ ಹಿಡಿದವರಂತೆ ಸಂಭ್ರಮಿಸಿದರು. ಕಳೆದ ಆರು ದಶಕಗಳಿಂದ ಕಾಯುತ್ತಿದ್ದ ಹೊತ್ತನ್ನು ಅವರು ಸಂತೋಷದಿಂದ ಕಣ್ಣು ತುಂಬಿಕೊಂಡರು. ಪುಳಕಗೊಂಡರು. ಹೆಚ್ಚು ಕಡಿಮೆ ಒಂದೇ ರೀತಿಯಂತೆ ಕಾಣುವ ಎಡಪಂಥೀಯ ಮತ್ತು ಕಾಂಗ್ರೆಸ್‍ಗಳ ಆಟಾಟೋಪಗಳಿಗೆ ದಿಟ್ಟ ಧ್ವನಿಯಾಗುವ ಆ ವ್ಯಕ್ತಿಯನ್ನು ಪೂಜ್ಯ ಭಾವದಿಂದ ಕಂಡರು. ದೀನದಯಾಳ ಉಪಾಧ್ಯಾಯರ ತತ್ವಗಳಿಗೆ ಮಾರುಹೋಗಿ, ಆರೆಸ್ಸೆಸಿನ ಶಾಖೆಗಳಿಗೆ ಹೋಗಿ, ಭಾರತ ಮಾತೆಗೆ ಜಯಕಾರ ಹಾಕಿ ಪ್ರಾಣ ಕಳೆದುಕೊಂಡ ಎಷ್ಟೋ ದೇಶಭಕ್ತರ ಆತ್ಮಗಳಿಗೆ ಈಗ ಶಾಂತಿ ಸಿಕ್ಕಿದೆ ಎಂದು ಜನ ಭಾವುಕರಾದರು.

       ಆ ವ್ಯಕ್ತಿ ಒ. ರಾಜಗೋಪಾಲ್.

     ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರು. ಸಿದ್ಧಾಂತ ನಿಷೆ, ನಿಷ್ಠಾವಂತ ಕಾಯ೯ಕತ೯ ಎಂಬುದರ ಪ್ರತ್ಯಕ್ಷ ಸಾಕ್ಷಿ. ಜನಸಂಘದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದವರು. ಭಾಜಪವನ್ನು ಮೊದಲ ದಿನದಿಂದಲೇ ಕಂಡವರು. ಸತತವಾಗಿ ಸೋತವರು. ಸೋತರೂ ಕುಗ್ಗದವರು, ಸೋತಷ್ಟೂ ಉತ್ಸಾಹದಿಂದ ಮೇಲೆದ್ದು ಪಕ್ಷವನ್ನು ಬಲಪಡಿಸಲು ನಿರಂತರ ಪ್ರವಾಸ ಮಾಡಿದವರು. ಊರೂರುಗಳಿಗೆ ನಡೆದೇಹೋದವರು. ಸೋಲುಗಳಿಂದ ಕಾಯ೯ಕತ೯ರು ಕುಗ್ಗಲು ಬಿಡದೆ ಅವರಲ್ಲಿ ಮತ್ತಷ್ಟು ಶಕ್ತಿ ತುಂಬಿದವರು. ಕಮ್ಯುನಿಸ್ಟರ ಗೂಂಡಾಗಿರಿಗೆ ಹೆದರದಂತೆ ಪಡೆ ಕಟ್ಟಿದವರು. ಅಂಥ ವಯೋವೃದ್ದ ಒ. ರಾಜಗೋಪಾಲರನ್ನು ಕೇರಳದ ಸಮಸ್ತ ರಾಷ್ಟ್ರೀಯವಾದಿಗಳು ಒಂದೇ ಒಂದು ಬಾರಿ ವಿಧಾನಸಭೆಗೆ ಪ್ರವೇಶಿಸಲಿ ಎಂದು ಹಾತೊರೆಯುತ್ತಿದ್ದರು. ಹಾಗಿರುವಾಗ ಈಗ ಅವರ ಸಂತೋಷಕ್ಕೆ ಪಾರವೆಲ್ಲಿ?

    ಆದರೆ ಅವರ ಒ.ರಾಜಗೋಪಾಲ್ ಕೇರಳದ ಜನರ ಪ್ರೀತಿಯ ರಾಜಟನ್ ಆಗಲಿಲ್ಲ. ಅದೊಂದು ವ್ರತ. ಅವರ ರಾಜಕೀಯ ಬದುಕು ಒಂದು ತಪಸ್ಸು. ಏಕೆಂದರೆ ಅದು ಕೇರಳ. ರಾಜ್ಯ ಮಾವೋ-ಸ್ಟಾಲಿನ್‍ಗಳ ಆಸ್ತಿಯೆಂದು ನಂಬಿರುವ ಕಟ್ಟರ್ ಎಡಪಂಥೀಯ ಕಮ್ಯನಿಸ್ಟರ ನಾಡು. ತನ್ನನ್ನು ಒಪ್ಪದವರನ್ನು ಕೊಂದಾದರೂ ಅಧಿಕಾರಕ್ಕೇರುವ ರಕ್ತದಾಹಿ ಜನಗಳ ಕೇಂದ್ರ. ಇನ್ನೊಂದೆಡೆ ತನ್ನ ಅದೇ ಓಲ್ಯೆಕೆಯ ರಾಜಕಾರಣವನ್ನು ಮಾಡುವ ಕಾಂಗ್ರೆ ಸ್ ಎಲ್ಲಾ ಸೇರಿ ಸಮಸ್ತ ಕೇರಳವನ್ನು ಮತಾಂಧರ ಬೀಡಾಗಿಯೂ, ನಿರೊದ್ಯೋಗಿಗಳ ಅಡ್ಡೆಯನ್ನಾಗಿಯೂ ಮಾಡಿಬಿಟ್ಟಿತ್ತು. ಜಾತಿಯ ವಾಸನೆ ಮೇಲುನೋಟಕ್ಕೆ ಅಷ್ಟೊಂದು ರಾಚದಿದ್ದರೂ ಒಳಗೊಳಗೇ ಜಾತಿಸಂಘಟನೆಗಳು ರಾಜಕೀಯ ಪಕ್ಷಗಳಂತೆ ಬೆಳೆಯುತ್ತಿದ್ದವು. ಅಂಥ ಹೊತ್ತಲ್ಲಿ ಕೇರಳ ರಾಜಕೀಯದಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದವರಲ್ಲಿ ಕೆ.ಜಿ ಮರಾರ್ ಒಬ್ಬರಾದರೆ ಮತ್ತೊಬ್ಬರು ಒ.ರಾಜಗೋಪಾಲ್.

     ಜನಸಂಘ ಬಿಜೆಪಿಯಾದಾಗ ದೇಶದ ಉಳಿದ ಭಾಗಗಳಲ್ಲಿದ್ದಂತೆ ಕೇರಳದಲ್ಲೂ ಕಾಯ೯ಕತ೯ರನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತು. ಅಥವಾ ಉಳಿದೆಡೆಗಳಿಗಿಂತಲೂ ಕೇರಳದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಅಂಥ ಹೊತ್ತಲ್ಲಿ ರಾಜ್ಯ ಬಿಜೆಪಿಯ ನೊಗ ಹೊತ್ತವರು ರಾಜಗೋಪಾಲರು. ಅವರು ಹಿಂಡು ಹಿಂಡಾಗಿ ಕಾಯ೯ಕತ೯ರನ್ನು ಗುರುತಿಸಿ ಬೆಳೆಸಿದವರು. ಆ ಹೊತ್ತಲ್ಲಿ ಅವರ ಸಂಘಟನಾ ಚಾತುಯ೯ ಹೇಗಿತ್ತೆಂದರೆ ಕಟ್ಟರ್ ಕಮ್ಯುನಿಸ್ಟ್ ಆಗಿದ್ದ ಸಾವಿರಾರು ಜನರು ಬಿಜೆಪಿಗೆ ಸೇಪ೯ಡೆಗೊಳ್ಳಲಾರಂಭೀಸಿದರು. ಮೊಟ್ಟಮೊದಲ ಬಾರಿಗೆ ಕೇರಳದ ಕಮ್ಯುನಿಸ್ಟರು ತಮ್ಮ ಗಮನವನ್ನು ಕಾಂಗ್ರೆ ಸಿನಿಂದ ಕಿತ್ತು ಬಿಜೆಪಿಯ ಮೇಲೆ ನೆಟ್ಟರು. ಮತ್ತು ಬಿಜೆಪಿಯ ದಮನಕ್ಕಿಳಿದರು. ಮುಂದೊಂದು ದಿನ ಈ ಪಕ್ಷ ದಾರಿಯ ಮುಳ್ಳಾಗಲಿದೆ ಎಂಬುದನ್ನು ಕಮ್ಯುನಿಸ್ಟರು ಕಾಂಗ್ರೆಸಿಗಿಂತ ಬಹುಬೇಗನೆ ಅರಿತುಕೊಂಡರು. ರಾಜ್ಯದಲ್ಲಿ ರಾಜಗೋಪಾಲ್ ಅವರು ಮಾಡಿದ ಸಂಘಟನೆ, ಪಕ್ಷ ಬೆಳೆದ ರೀತಿ ಮತ್ತು ಅಲ್ಲಿನ ಕಾಯ೯ಕತ೯ರ ನಿಷ್ಠೆ-ಪ್ರಾಮಾಣಿಕತೆಯನ್ನು ದೆಹಲಿಯಲ್ಲಿ ಗಮನಿಸುತ್ತಿದ್ದ ಕೇಂದ್ರ ಬಿಜೆಪಿ ಅವರನ್ನು ಅಖಿಲ ಭಾರತೀಯ ಕಾಯ೯ದಶಿ೯ಗಳನ್ನಾಗಿ ನೇಮಕ ಮಾಡಿತು. ಮುಂದೆ ಅವರು ಪಕ್ಷದ ಪ್ರಧಾನ ಕಾಯ೯ದಶಿ೯ಗಳಾದರು. ರಾಷ್ಟ್ರೀಯ ಉಪಾಧ್ಯಕ್ಷರೂ ಆದರು. ಅಷ್ಟು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರೂ ರಾಜಗೋಪಾಲರು ಅದೇ ಸಾಮಾನ್ಯ ಕಾಯ೯ಕತ೯ನಂತೆಯೇ ಪಕ್ಷದೊಳಗಿದ್ದರು. ಕೇರಳ ಕಾಯ೯ಕತ೯ರ ಪ್ರೀತಿಯ ರಾಜಟನ್‍ನಾಗಿಯೇ ಉಳಿದರು.

     ಒಂದೆಡೆ ಕೇರಳದಲ್ಲಿ ಪಕ್ಷ ಬೆಳೆಯುತ್ತಿದ್ದರೂ ತಲೆನೋವು ತರುತ್ತಿದ್ದುದು ಚುನಾವಣೆಗಳ ಸಮಯದಲ್ಲಿ. ಸೋಲುವ ಪಕ್ಷಕ್ಕೆ ಅಭ್ಯಥಿ೯ಗಳಾರು? ಹಾಗಾಗಿ ಸ್ಪಧಿ೯ಸಿದವರೇ ಸ್ಪಧಿ೯ಸಿದರು. ಸೋತರು. ಸೋತವರೇ ಮತ್ತೆ ಸ್ಪಧಿ೯ಸಿದರು. ಮಾತ್ರವಲ್ಲ. ಲೋಕಸಭೆಗೆ ನಿಂತವರೇ ಗ್ರಾಮಪಂಚಾಯಿತಿಗೂ ಸ್ಪಧಿ೯ಸಿದರು. ಪ್ರತೀ ಬಾರಿ ಸೋತಾಗಲೂ ಕಾಯ೯ಕತ೯ರು ಹೆಚ್ಚಿದ ಮತಗಳನ್ನು ಲೆಕ್ಕ ಹಾಕಿ ಖುಷಿ ಪಡುತ್ತಿದ್ದರು. ಕಮ್ಯುನಿಸ್ಟರ ವಿಜಯೋತ್ಸವಗಳೇ ನಾಚುವಂತೆ ಸಂಭ್ರಮಿಸಿದರು. ರಾಜಗೋಪಾಲ್ ಕೂಡ ಇಂಥ ಸತತ ಸೋಲುಗಳಿಂದ ಪಳಗಿದವರು. ಶಿಲ್ಪಿಯ ಉಳಿಯ ಪೆಟ್ಟಿನಿಂದ ಶಿಲೆಯೊಂದು ಸುಂದರ ಶಿಲ್ಪವಾಗುವಂತೆ ಮಾಗಿದರು. ಲೋಕಸಭೆಗೆ ಸ್ಪಧಿ೯ಸಿದಂತೆ ಕಾಪೊ೯ರೇಶನ್ ಚುನಾವಣೆಗೂ ಸ್ಪಧಿ೯ಸಿ ಅಲ್ಲೂ ಸೋತರು. 89ರ ಲೋಕಸಭಾ ಚುನಾವಣೆಯಲ್ಲಿ ಮಂಜೇರಿ ಕ್ಷೇತ್ರದಿಂದ ಸ್ಪಧಿ೯ಸಿ ಸೋತರು. ಎರಡು ವಷ೯ಗಳ ನಂತರ ತಿರುವನಂತಪುರದಲ್ಲಿ ಸ್ಪಧಿ೯ಸಿ ಅಲ್ಲೂ ಸೋತರು. ಆದರೆ ಕೇಂದ್ರ ಬಿಜೆಪಿ ಇಂಥ ಚತುರ ಸಂಘಟಕನನ್ನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿತು. ಅಷ್ಟರಲ್ಲಿ 99ರ ಚುನಾವಣೆ ಬಂತು. ರಾಜಗೋಪಾಲ್ ಅವರು ಪುನಃ ತಿರುವನಂತಪುರಂ ಕ್ಷೇತ್ರದಿ೦ದ ಸ್ಪಧಿ೯ಸಿ ಮತ್ತೆ ಸೋತರು. ಸೋಲುತ್ತಿದ್ದರೂ ರಾಜಗೋಪಾಲರಿಗೆ ಸಿಗುವ ವೋಟುಗಳ ಪ್ರಮಾಣ ಹೆಚ್ಚುತ್ತಲೇ ಹೋಯಿತು. 2004ರ ಚುನಾವಣೆಯಲ್ಲೂ ಮತ್ತೆ ಅಲ್ಲಿಂದಲೇ ಸ್ಪಧಿ೯ಸಿ ಮೂರನೆ ಸ್ಥಾನವನ್ನು ಪಡೆದರು. ಮೂರನೇ ಸ್ಥಾನ ಪಡೆದರೂ ರಾಜಗೋಪಾಲ್ ಅವರು ಶೇ.29.9 ರಷ್ಟು ವೋಟುಗಳನ್ನು ಪಡೆದಿದ್ದರು! ಇದು ಬಿಜೆಪಿ ಕೇರಳದಲ್ಲಿ ಪಡೆದ ಅತ್ಯಧಿಕ ಮತ. ಇದರ ನಡುವೆ 2011ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೇವಲ 6.400 ಮತಗಳ ಅಂತರದಿಂದ ಸೋತರು. 2014ರ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿ೦ದ ಸ್ಪಧಿ೯ಸಿದ ರಾಜಗೋಪಾಲ್ ಶಶಿ ತರೂರ್‍ಗೆ ತೀವ್ರ ಪ್ಯೆಪೋಟಿ ನೀಡಿದ್ದರು. ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದಿದ್ದರು. ಸತತ ಚುನಾವಣೆಗೆ ನಿಂತರೂ ಅವರು ವೋಟುಗಳನ್ನು ಖರೀದಿಸಲಿಲ್ಲ. ಕೇರಳದಲ್ಲಿ ಬಿಜೆಪಿಗೆ ಸಿಕ್ಕಿದ್ದೆಲ್ಲ ಅಅತ್ಯಂತ ಪ್ರಾಮಾಣಿಕ ಮತಗಳು. ಅಲ್ಲದೆ ರಾಜಗೋಪಾಲ್ ಕೇರಳದ ಅತ್ಯಂತ ಪ್ರಭಾವಿ ನಾಯರ್ ಸಮುದಾಯಕ್ಕೆ ಸೇರಿದವರು. ಆದರೆ ಎಲ್ಲೂ ಅವರು ತಮ್ಮನ್ನು ತಾವು ನಾಯರ್ ಎಂದು ಗುರುತಿಸಿಕೊಳ್ಳಲಿಲ್ಲ. ಮತಗಳು ಕಡಿಮೆ ಬಿದ್ದರೂ ತೂಕವನ್ನು ಕಳೆದುಕೊಳ್ಳಬಾರದು ಎಂಬ ನೀತಿಯನ್ನು ಅವರು ಎಲ್ಲಾ ಬೈಠಕ್‍ಗಳಲ್ಲಿ ತಪ್ಪದೇ ಉಲ್ಲೇಖಿಸುತ್ತಿದ್ದರು. ಯಾವ ಪ್ರಚಾರ ಸಭೆಗಳಲ್ಲೂ ಅವರು ವ್ಯಯಕ್ತಿಕ ಟೀಕೆಗಳಿಗೆ ಹೋಗುತ್ತಿರಲಿಲ್ಲ. ಕಮ್ಯುನಿಸ್ಟರ ಕ್ರೌಯ೯ವನ್ನು ಹೇಳುತ್ತಿದ್ದರೇ ಹೊರತು ನಾಯಕರ ತೇಜೋವಧೆ ಮಾಡುತ್ತಿರಲ್ಲ. ನೆನಪಿಡಿ, ಇದು ಒಂದೆರಡು ವಷ೯ಗಳ ವ್ರತವಲ್ಲ. ದಶಕಗಟ್ಟಲೆ ಅದೇ ವ್ರತವನ್ನು ಪಾಲಿಸಿಕೊಂಡು ಬಂದವರು ಒ. ರಾಜಗೋಪಾಲರು. ಸಾಮಾನ್ಯನೊಬ್ಬ ಒಂದು ಸೋಲಿನಿಂದ ಜೀವನವಿಡೀ ಹೊರಬರದೆ ಒದ್ದಾಡುತ್ತಾನೆ. ಅಂಥಲ್ಲಿ ರಾಜಗೋಪಾಲ್ ದೊಡ್ಡವರಾಗಿ ಕಾಣುತ್ತಾರೆ.

   ಹೀಗೆ ರಾಜಗೋಪಾಲ್ ಅವರು ಒಟ್ಟು ಸ್ಪರ್ಧಿಸಿ ಸೋತ ಚುನಾವಣೆಗಳ ಸಂಖ್ಯೆ ಬರೋಬ್ಬರಿ 13! ಯಾವ ರಾಜಕಾರಣಿಗೆ ತಾನೇ ಇದು ಸಾಧ್ಯ? ಜಗತ್ತಿನ ಎಲ್ಲಿ ತಾನೇ ಇಂಥ ಪರಿಸ್ಥಿತಿ ಕಂಡುಬರಲು ಸಾಧ್ಯ? ಯಾವ ರಾಜಕಾರಣಿ ತಾನೇ ಸತತವಾಗಿ ಸೋತು ಕುಗ್ಗದೆ ಇರಲು ಸಾಧ್ಯ? ಹಾಗಾದರೆ ರಾಜಗೋಪಾಲ್ ಅವರ ಮನಸ್ಸು ಅದೆಂಥಾ ಗಟ್ಟಿಯಾಗಿರಬೇಕು? ಗೆಲ್ಲುವ ಭರವಸೆಯೊಂದಿಗೆ ಚುನಾವಣೆಗೆ ನಿಲ್ಲುವವನ ಗಟ್ಟಿತನಕ್ಕೂ ಸೋಲುವೆನೆಂದು ತಿಳಿದಿದ್ದರೂ ಸ್ಪಧಿ೯ಸುವ ರಾಜಕಾರಣಿಯ ಗಟ್ಟಿಗತನಕ್ಕೂ ವ್ಯತ್ಯಾಸವಿಲ್ಲವೇ? ಕೇರಳದ ಕಟ್ಟರ್ ಕಮ್ಯುನಿಸ್ಟರು ಕೂಡ ಎರಡು ಸೋಲುಗಳಿಂದ ಕಳೆದುಹೋದವರೆಷ್ಟೋ ಜನ ಇದ್ದಾರೆ.

   ಒಬ್ಬ ರಾಜಕಾರಣಿ ತನ್ನ ಗೆಲವು, ತನ್ನ ಉನ್ನತಿಯನ್ನು ಯೋಚಿಸುತ್ತಾನೆಯೇ ಹೊರತು ರಾಜಗೋಪಾಲರಂತೆ ತನ್ನ ಸೋಲು ಪಕ್ಷದ ಸೋಲು. ಗೆಲ್ಲುವವರೆಗೂ ಸೋಲುವೆ ಎಂದುಕೊಳ್ಳುವವರು ಅಪರೂಪ. ಪ್ರಪಂಚದ ಇತಿಹಾಸದಲ್ಲಿ ಇಂಥದ್ದು ಕಾಣುವ ಒಂದೇ ಒಂದು ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಒಬ್ಬ ರಾಜಗೋಪಾಲರನ್ನು ಸೃಷ್ಟಿಸಲು ಸಾಧ್ಯವಾಗುವುದು ಕೇವಲ ಬಿಜೆಪಿಗೆ ಮಾತ್ರ. ಅಂಥ ಕಠೋರ ಸಿದ್ದಾಂತ  ನಿಷ್ಠರು ಒ.ರಾಜಗೋಪಾಲರು.

    ತುತು೯ಪರಿಸ್ಥಿಯ ಸಂದಭ೯ದಲ್ಲಿ ರಾಜಗೋಪಾಲರು ತ್ರಿಶೂರು ಮತ್ತು ಶ್ರೀಯೂರು ಜೈಲುಗಳಲ್ಲಿದ್ದರು. ಈ ಎರಡೂ ಜೈಲುಗಳಲ್ಲಿ ಅವರ ಜೊತೆಗಿದ್ದವರು ಖ್ಯಾತ ಕಮ್ಯುನಿಸ್ಟ್ ನಾಯಕ ನಂಬೂದರಿಪಾದ್. ಕೆಲವೇ ದಿನಗಳಲ್ಲಿ ನಂಬೂದರಿಪಾದ್‍ರಿಗೆ ರಾಜಗೋಪಾಲರ ವ್ಯಕ್ತಿತ್ವದ ದಶ೯ನವಾಯಿತು. ರಾಜಗೋಪಾಲರೂ ಸಾಮಾನ್ಯ ಆಸಾಮಿಯಲ್ಲ. ಸಾಕ್ಷಾತ್ ನಂಬೂದರಿಪಾದ್‍ರನ್ನೇ  ಆರ್ ಎಸ್ ಎಸ್  ಮಾಡಲು ಪ್ರಯತ್ನಿಸಿದ್ದರು! ಸ್ವತಃ ನಂಬೂದರಿಪಾದ್‍ರಿಗೆ ಎಲ್ಲಿ ಈ ಮನುಷ್ಯ ತನ್ನ ಜನರ ತಲೆಕೆಡಿಸಿಬಿಡುವನೋ ಎಂದು ಹೆದರಿ ಜೈಲಲ್ಲಿದ್ದ ಕಮ್ಯುನಿಸ್ಟ್ ಕಾಯ೯ಕತ೯ರನ್ನು ಅವರ ಸಮೀಪ ಸುಳಿಯಲು ಬಿಡದೇ ತಾವೇ ಹೆಚ್ಚು ಹೆಚ್ಚು ಅವರ ಜೊತೆಗಿರತೊಡಗಿದರು! ನಿಜಕ್ಕೂ ನಂಬೂದರಿಪಾದ್ ರಾಜಗೋಪಾಲರಿಗೆ ಮರುಳಾಗಿದ್ದರು. ಒಂದು ದಿನ ಸಂಜೆ ನಂಬೂದರಿಪಾದ್‍ರು ರಾಜಗೋಪಾಲರನ್ನು ಜೈಲಿನ ಮೂಲೆಗೆ ಕರೆದೊಯ್ದು ಮೆಲುದನಿಯಲ್ಲಿ “ನೋಡು, ನಿನ್ನಲ್ಲಿ ಸಾಮಥ್ಯ೯ವಿದೆ. ಮಾತಿನಲ್ಲಿ ಮೋಡಿಯಿದೆ. ಜನ ನಿನ್ನನ್ನು ನಂಬಬೇಕು ಎನ್ನುವಂತೆ ನಿನ್ನ ಸ್ವಭಾವವಿದೆ. ನೀನು ನಿನ್ನ ಬದುಕನ್ನು ಆ ಆರೆಸೆಸ್ಸಿನವರ ಜೊತೆ ಸೇರಿ ಯಾಕೆ ಹಾಳು ಮಾಡಿಕೊಳ್ಳುತ್ತಿದ್ದೀಯಾ. ಯಾಕೆ ನಿನಗೆ ಆ ಹುಚ್ಚು. ಅದು ಗೆಲ್ಲುವ ಪಕ್ಷವಾ? ಶಕ್ತಿಯಿದ್ದವರು ಸೋಲಬಾರದು, ಗೆಲ್ಲಬೇಕು. ಗೆಲ್ಲುತ್ತಾ ಹೋಗಬೇಕು. ನೋಡು ನಮ್ಮಲ್ಲಿ ಸಮಾನತೆಯಿದೆ. ಕ್ರಾಂತಿಯ ಕಿಚ್ಚಿದೆ. ನನ್ನೊಡನೆ ಬಾ. ನಿನ್ನ ಭವಿಷ್ಯವನ್ನು ನೋಡು’ ಎಂದರು. ರಾಜಗೋಪಾಲರು “ನೀವು ನನ್ನನ್ನು ಮೂಲೆಗೆ ಕರೆದೊಯ್ದಾಗಲೇ ನನಗೆ ಅಥ೯ವಾಯಿತು. ಆಗಲಿ ಮುಂದಿನ ಚುನಾವಣೆಯಲ್ಲಿ ನಾವು ಭೇಟಿಯಾಗೋಣ. ನಿಮ್ಮ ಜೊತೆಯಲ್ಲಲ್ಲ, ನಿಮ್ಮ ಎದುರಲ್ಲಿ’ ಎಂದುತ್ತರಿಸಿದರು. ಅಂಥ ಕಠೋರ ಸಿದ್ಧಾಂತ ನಿಷ್ಠರು ಒ. ರಾಜಗೋಪಾಲ್
.
ಜೈಲಿನಿಂದ ಹೊರಬಂದ ನಂತರ ಕಾಂಗ್ರೆಸ್‍ನ ತಂಡವೊಂದು ರಾಜಗೋಪಾಲ್ ಅವರ ಮನೆಗೆ ಆಗಮಿಸಿದರು. “ನೋಡಿದ್ರಾ, ಆರೆಸೆಸ್ಸಿನ ಜನ ನಿಮ್ಮ ಮಗನ ತಲೆಕೆಡಿಸಿ ಜೈಲಿಗೆ ಹೋಗುವಂತೆ ಮಾಡಿದರು. ನಿನ್ನ ಅಪ್ಪ, ನಿನ್ನ ಹಿರಿ ತಲೆಗಳೆ ಲ್ಲಾ ನಮ್ಮ ಪಕ್ಷದ ಕಾಯ೯ಕತ೯ರು. ಇವನು ನಮ್ಮ ನಿರೀಕ್ಷೆಗಳನ್ನು ಹುಸಿಮಾಡಿದ. ಇನ್ನೂ ಕಾಲ ಮಿಂಚಿಲ್ಲ. ನಮ್ಮ ಕಚೇರಿಯ ಬಾಗಿಲು ನಿನಗೆ ಯಾವಾಗಲೂ ತೆರೆದಿದೆ’ ಎಂದು ಆಹ್ವಾನವನ್ನು ಕೊಟ್ಟರು. ರಾಜಗೋಪಾಲ್ ಬಂದವರಿಗೆ ಕಟ್ಟಂ ಚಾಯ ನೀಡಿ “ನಮ್ಮ ಆಫೀಸಿನ ಬಾಗಿಲು ಕೂಡಾ ನಿಮಗೆ ಸದಾ ತೆರೆದಿದೆ’ ಎಂದರು. ಇಂಥ ಎಷ್ಟೋ ಘಟನೆಗಳನ್ನು ಅವರು ತಮ್ಮ ಜೀವನಚರಿತ್ರೆ “ಜೀವಿತಾಮೃತ’ ದಲ್ಲಿ ಬರೆದುಕೊಂಡಿದ್ದಾರೆ.

   13 ಚುನಾವಣೆಗಳನ್ನು ಸೋತರೂ ರಾಜಗೋಪಾಲ್ ಕಳೆದುಹೋಗಲಿಲ್ಲ. ಬದಲಿಗೆ ರಾಜ್ಯದ ಪ್ರಭಾವಿ ರಾಜಕಾರಣಿಯಾದರು. ಕೇರಳದ ಆರ್ ಎಸ್ ಎಸ್  ಮುಖಂಡ ಪರಮೇಶ್ವನ್‍ಜಿಯವರ ಸಂಪಕ೯ ಅವರನ್ನು ಹಾಗೆ ರೂಪಿಸಿತ್ತು. ಕೆ.ಜಿ. ಮರಾರ್ ಅವರಂಥ ಮೌಲ್ಯಾಧಾರಿತ ರಾಜಕಾರಣಿಯ ಸಂಪಕ೯ ಅವರಲ್ಲಿ ತ್ಯಾಗ, ಸಾತ್ವಿಕತೆಗಳನ್ನು ಹುಟ್ಟಿಸಿತ್ತು. ವಾಜಪೇಯಿ ಸರಕಾರದಲ್ಲಿ ರಾಜ್ಯ ಸಚಿವರಾಗಿ ರಾಜಗೋಪಾಲರು ಮಾಡಿದ ಕಾಯ೯ವನ್ನು ಕೇರಳ ಪಕ್ಷಭೇದವಿಲ್ಲದೆ ಇಂದಿಗೂ ಹೊಗಳುತ್ತದೆ. ಹೊಸ ರೈಲುಗಳು, ರೈಲು ಮೇಲುಸೇತುವೆಗಳು, ಸುಸಜ್ಜಿತ ರೈಲುಗಳನ್ನು ಕೇರಳಕ್ಕೆ ತಂದವರು ರಾಜಗೋಪಾಲರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿಎಸ್, ಪೊಲೇರ್ ಮಹಾಸಭಾ ಮತ್ತು ಆದಿವಾಸಿ ಗೋತ್ರಸಭಾಗಳನ್ನು ಎನ್‍ಡಿಎ ತೆಕ್ಕೆಗೆ ತಂದು ಕಮ್ಯನಿಸ್ಟರ ನಿದ್ರೆ ಕೆಡಿಸಿದ ತಂತ್ರಗಾರ ರಾಜಗೋಪಾಲ್. ಆದರೂ ಕಮ್ಯುನಿಸ್ಟರು ಅವರನ್ನು ಗೌರವಿಸುತ್ತಾರೆ. ಇಂದಿಗೂ ಸಮಸ್ತ ಮಲಯಾಳಿಗಳನ್ನು ಕೇರಳದ ಇಬ್ಬರು ಯೋಗ್ಯ ರಾಜಕಾರಣಿಗಳಾರೆಂದು ಕೇಳಿದರೆ ಮುಕ್ಕಾಲು ಪಾಲು ಜನರು ಹೇಳುವುದು ಎರಡೇ ಹೆಸರುಗಳನ್ನು ಒಂದು ವಿಎಸ್ ಅಚ್ಯುತಾನಂದನ್ ಮತ್ತೊಬ್ಬರು ಈಗಷ್ಟೇ ಶಾಸಕರಾದ ಒ.ರಾಜಗೋಪಾಲ್!

    ಐದಾರು ವಷ೯ಗಳ ಹಿಂದೆ ಅವರಿಗೆ 80 ವಷ೯ ತುಂಬಿದಾಗ ಅವರ ಅಭಿಮಾನಿಗಳು ಅಭಿನಂದನಾ ಸಮಾರಂಭವೊಂದನ್ನು ತಿರುವನಂತಪುರದಲ್ಲಿ ಆಯೋಜಿಸಿದ್ದರು. ಕಮ್ಯುನಿಸ್ಟ್ ನಾಯಕರು, ಕಾಂಗ್ರೆ ಸಿಗರು ಮತ್ತು ಮುಸ್ಲಿಂ ಲೀಗಿನ ಜನಗಳಿಂದ ಮ್ಯೆದಾನ ಭತಿ೯ಯಾಗಿತ್ತು. ವೇದಿಕೆಯಲ್ಲಿ ಮಾತಾಡಿದ ಕಮ್ಯುನಿಸ್ಟ್ ನಾಯಕರೊಬ್ಬರು “ನಾನು ಇಂಥ ಸಿದ್ಧಾಂತ ನಿಷ್ಠನೊಬ್ಬನನ್ನು ನಮ್ಮ ಪಕ್ಷದಲ್ಲಿ ಕಾಣಲು ಬಯಸುತ್ತೇನೆ’ ಎಂದರು. ಶುಭಾಶಯವನ್ನು ಕಳುಹಿಸಿದ ವಿ.ಎಸ್. ಅಚ್ಯುತಾನಂದನ್ “ರಾಜಗೋಪಾಲ್ ಅವರ ಪ್ರಾಮಾಣಿಕತೆಯನ್ನು ನಮ್ಮ ಕೇರಳ ಹೆಮ್ಮೆ ಪಡುತ್ತದೆ’ ಎಂದಿದ್ದರು. ಉಮ್ಮನ್ ಚಾಂಡಿ ತಮ್ಮ ಸಂದೇಶದಲ್ಲಿ “ನಮ್ಮ ರಾಜ್ಯದಲ್ಲಿ ರೈಲು ಅಭಿವೃದ್ಧಿಯಾಗಲು ಕಾರಣರಾದವರು ರಾಜಗೋಪಾಲ್’ ಎಂದು ಬಣ್ಣಿಸಿದ್ದರು.

    ಅಂಥ ಒ.ರಾಜಗೋಪಾಲ್‍ಜಿ ಮೊನ್ನೆ ಕೇರಳ ವಿಧಾನಸಭೆಗೆ ನಡೆದು ಹೋದಾಗ ಮಲಯಾಳಿಗಳ ಕಣ್ಣಲ್ಲಿ ಕಂಡ ಆ ಮಿಂಚು, ಆ ತೇವಕ್ಕೂ ಒಂದು ಅಥ೯ ಇದೆ ಅನ್ನಿಸುತ್ತದೆ. ಇದ್ದರೆ ಅಂಥ ರಾಜಕಾರಣಿ ಇರಬೇಕು ಅನಿಸುತ್ತದೆ.

orajgopal

Comments are closed.