Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಮತಾ ಮೇಲೆ ನಮಗೇಕಿರಬೇಕು ಮಮತೆ?

ಮಮತಾ ಮೇಲೆ ನಮಗೇಕಿರಬೇಕು ಮಮತೆ?

ಅಂಥದ್ದೊಂದು ಕಾರನ್ನು ಮಾಡಲು ಸಾಧ್ಯವೇ ಇಲ್ಲ. ಒಂದು ಲಕ್ಷಕ್ಕೆ ಕಾರು ತಯಾರು ಮಾಡಲು  ಖಂಡಿತ ಆಗದು ಅಂತ ನಮ್ಮ ಇಂಜಿನಿಯರ್‌ಗಳೂ ಹೇಳಿದ್ದಾರೆ ಎಂದಿದ್ದರು ಸುಝುಕಿ ಕಂಪನಿಯ ಮುಖ್ಯಸ್ಥ ಶಿನ್ಝೋ ನಕಾನಿಶಿ. ಆದರೆ ಜನವರಿ ೧೦ರಂದು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ. ಅಂದು ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿದ್ದ ಕಾರು ಪ್ರದರ್ಶನದ ವೇಳೆ ವಿಶ್ವದ ಅತ್ಯಂತ ಅಗ್ಗದ ಕಾರಿನ ಮುಖಪರಿಚಯ ಮಾಡಿದ ರತನ್ ಟಾಟಾ, “ಈ ಕಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರ ದ್ಯೋತಕವಾಗಿ ‘ಬುದ್ಧ’ ಎಂಬ ಹೆಸರಿಡಬಹುದಿತ್ತು, ಮಮತಾ ನೆನಪಿಗಾಗಿ ‘Despite  ಮಮತಾ’ ಎಂದೂ ನಾಮಕರಣ ಮಾಡಬಹುದಿತ್ತು! ಆದರೆ ‘ನ್ಯಾನೋ’ ಎಂಬ ಹೆಸರಿಟ್ಟಿದ್ದೇವೆ ಎಂದು ವಿಡಂಬನಾತ್ಮಕವಾಗಿ ಹೇಳಿದ್ದರು. ಅಂದು ಮಮತಾ ಬ್ಯಾನರ್ಜಿಯವರ ಕಾಲು ಎಳೆದಿದ್ದ ರತನ್ ಟಾಟಾ ಇಂದು ಮಮತಾ ಕಾಲ ಬಳಿ ಕೈಕಟ್ಟಿ ನಿಲ್ಲುವಂತಾಗಿದೆ.

ಖಂಡಿತ ರತನ್ ಅಥವಾ ಟಾಟಾ ಕಂಪನಿಯ ಸಮಗ್ರತೆ ಯನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ.

ಅದು ದೇಶ ಕಟ್ಟಿದ ಕಂಪನಿ. What is good for General Motors is good for America  ಎಂದು ಜನರಲ್ ಮೋಟಾರ್‍ಸ್ ಕಂಪನಿಯ ಬಗ್ಗೆ ಹೇಳುತ್ತಿದ್ದ ಕಾಲವೊಂದಿತ್ತು. ಆದರೆ ನಮ್ಮ ಟಾಟಾ ಕಂಪನಿ ಮಾತ್ರ What is good for India is good for Tata ಎಂಬಂತೆಯೇ ನಡೆದುಕೊಂಡು ಬಂದಿದೆ. ಅಂತಹ ವಿಶ್ವಾಸಾರ್ಹತೆ, ಸಮಗ್ರತೆಯನ್ನು ಗುರುತಿಸಿಯೇ ಜೆ.ಆರ್.ಡಿ. ಟಾಟಾ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ‘ಭಾರತ ರತ್ನ’ವನ್ನು ಕೊಟ್ಟು ಗೌರವಿಸಲಾಗಿದೆ. ಭಾರತ ರತ್ನವನ್ನು ಪಡೆದ ಉದ್ಯಮಿ ಅವರೊಬ್ಬರೇ. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಟಾಟಾ ಕಂಪನಿ ಮಾತ್ರ ದೇಶಭಕ್ತಿಯನ್ನು ಮರೆತಿಲ್ಲ. ನಮ್ಮ ಇನ್ಫೋಸಿಸ್, ವಿಪ್ರೋಗಳಂತೆ ಸರ್ಜಾಪುರ ರಸ್ತೆ ಬಳಿಯೇ ಭೂಮಿ ಬೇಕೆಂದು ಕೇಳುವುದಿಲ್ಲ, ರಸ್ತೆ ಸರಿಯಿಲ್ಲ ಅಂತ ಗೊಣಗುವುದಿಲ್ಲ. ಒಬ್ಬ ಸಾಮಾನ್ಯ ಭಾರತೀಯನ ಅಳಲನ್ನು ಅರ್ಥಮಾಡಿಕೊಂಡು ಒಂದು ಲಕ್ಷಕ್ಕೆ ಕಾರು ತಯಾರು ಮಾಡಿಕೊಡಲು ಹೊರಟಿದೆ. ಅಂತಹ ಟಾಟಾ ಕಂಪನಿ ಇಂದು ವಿವಾದದ ಕೇಂದ್ರವಾಗಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ.

ಹಾಗಂತ ಮಮತಾ ಅವರನ್ನು ಖಂಡಿಸುವುದಕ್ಕೂ ಆಗುತ್ತಿಲ್ಲ!

ಆಕೆಯ ಧರಣಿ, ಮುಷ್ಕರ, ದಿನಕ್ಕೊಂದು ಹೇಳಿಕೆ, ರಂಪ, ರಗಳೆಯನ್ನು ಕಂಡು ನಿಮಗೆ ಕೋಪ ಬಂದಿರಲೂಬಹುದು. ನಾಲ್ಕುನೂರು ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿದ್ದರೆ ಆಕೆ ಕಳೆದುಕೊಳ್ಳುತ್ತಿದ್ದುದಾದರೂ ಏನು? ನ್ಯಾನೋದಂಥ ಮಹತ್ವಾಕಾಂಕ್ಷಿ ಯೋಜನೆಗೆ ಈ ರೀತಿ ಅಡ್ಡಿಪಡಿಸುವುದು ಸರಿಯೇ? ಈಗಾಗಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ಕಾರು ತಯಾರಿಕೆ ಘಟಕವನ್ನು ಸ್ಥಗಿತಗೊಳಿಸಿದರೆ ಟಾಟಾ ಕಂಪನಿಗೆ ೧೫೦೦ ಕೋಟಿ ರೂ. ನಷ್ಟವಾಗುವುದಿಲ್ಲವೆ? ಯಾರುತಾನೇ ಪಶ್ಚಿಮ ಬಂಗಾಳದಲ್ಲಿ ಬಂಡವಾಳ ತೊಡಗಿಸಲು ಮುಂದೆ ಬರುತ್ತಾರೆ? ಇಂತಹ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಆ-ದರೆ ಮಮತಾ ಬ್ಯಾನರ್ಜಿ ಎಂಬ ಒಬ್ಬ ಹೆಣ್ಣುಮಗಳು ದೈತ್ಯ ಟಾಟಾಕ್ಕೆ ಅಡ್ಡ ನಿಂತಿದ್ದರೆ ನ್ಯಾನೋ ಕಾರೇ ಆಕೆಯನ್ನು ಹೊಸಕಿ ಹಾಕಿ ಮುಂದೆ ಹೋಗುತ್ತಿತ್ತು. ಆದರೆ ಇಂದು ಟಾಟಾಕ್ಕೆ ಅಡ್ಡವಾಗಿ ನಿಂತಿರುವುದು ಮಮತಾ ಬ್ಯಾನರ್ಜಿ ಎಂಬ ಒಬ್ಬ ಹೋರಾಟಗಾರ್ತಿಯೂ ಅಲ್ಲ, ರಾಜಕೀಯ ಪಕ್ಷವೊಂದರ ನಾಯಕಿಯೂ ಅಲ್ಲ. ಆದರೆ ಪ್ರಜಾಶಕ್ತಿ. ನಂದಿಗ್ರಾಮದಲ್ಲಿ ಮೂವತ್ಮೂರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಒಂದು ಹೋರಾಟವನ್ನೇ ಹೊಸಕಿ ಹಾಕಿದ ಸಿಪಿಎಂನ ಗೂಂಡಾಗಳಿಂದಲೂ ಸಿಂಗೂರಿನಲ್ಲಿ ಎದ್ದ ಜನಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ ಎಂದಾದರೆ ಅದರ ಹಿಂದಿರುವ ಶಕ್ತಿ ಎಂಥದ್ದಿರಬಹುದು?

ಇಂತಹ ಚಳವಳಿಯನ್ನು ನೋಡಿ ಅದೆಷ್ಟು ವರ್ಷ ಗಳಾಗಿದ್ದವೋ ಏನೋ!

ಜೆಪಿ ಚಳವಳಿ, ತುರ್ತುಪರಿಸ್ಥಿತಿ ವಿರುದ್ಧದ ಹೋರಾಟ ಅಂತ ಆ ಕಾಲವನ್ನು ಕಂಡವರು ಹೇಳುತ್ತಾರೆ. ಆದರೆ ತುರ್ತುಪರಿಸ್ಥಿತಿಯ ನಂತರ ಜನಿಸಿರುವ ನಮಗೆ ಆರ್ಥಿಕ ಉದಾರೀಕರಣದ ನಂತರ ಇಂಥದ್ದೊಂದು ಹೋರಾಟವನ್ನು ಕಾಣಲು ಸಾಧ್ಯವಾಗಿರಲಿಲ್ಲ. ಒಬ್ಬ ಮಹಿಳೆ ಇಂತಹ ಒಂದು ಉಗ್ರ ಹೋರಾಟವನ್ನು ಮಾಡಬಲ್ಲಳು, ಸರಕಾರವನ್ನೇ ಬಗ್ಗಿಸಬಲ್ಲಳು ಎಂದರೆ ಆಕೆ ಅದೆಂಥ ಗಟ್ಟಿಗಿತ್ತಿ ಇರಬಹುದು? ಎಂಎ, ಎಲ್‌ಎಲ್‌ಬಿ ಓದಿರುವ ಮಮತಾ ಸುಖವನ್ನರಸಿದ್ದರೆ ಉತ್ತಮ ಉದ್ಯೋಗವೂ ದೊರೆಯುತ್ತಿತ್ತು, ಆರಾಮದಾಯಕ ಜೀವನವನ್ನೂ ನಡೆಸಬಹುದಿತ್ತು. ಆದರೆ ರಾಜಕೀಯ ಲಾಭಕ್ಕೋಸ್ಕರ ಕಾರ್ಮಿಕರನ್ನು ಎತ್ತಿಕಟ್ಟಿ, ಪೊಲೀಸರ ಜತೆ ಬೀದಿ ಕಾಳಗ ಮಾಡಿ ಅಧಿಕಾರ ಹಿಡಿದಿದ್ದ ಕಮ್ಯುನಿಸ್ಟರ ಬಗ್ಗೆ ಆಕೆಯ ಮನದಲ್ಲಿ ತೀವ್ರ ಅಸಮಾಧಾನಗಳಿದ್ದವು. ಹಾಗಾಗಿ ೧೯೭೦ರ ದಶಕದಲ್ಲಿ ಕಾಂಗ್ರೆಸ್ ಸೇರಿದ ಆಕೆ, ೧೯೮೪ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ೧೯೯೧ರಲ್ಲಿ ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಮಮತಾ ಅವರಿಗೆ ನರಸಿಂಹರಾವ್ ಮಂತ್ರಿಮಂಡಲದಲ್ಲಿ ಯುವಜನ ಹಾಗೂ ಕ್ರೀಡಾ ಖಾತೆ ದೊರೆಯಿತು. ಆದರೆ ಕ್ರೀಡಾ ಖಾತೆಯ ಬಗ್ಗೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಪ್ರತಿಭಟಿಸಿ ೧೯೯೩ರಲ್ಲಿ ಮಂತ್ರಿಸ್ಥಾನಕ್ಕೇ ರಾಜೀ ನಾಮೆ ನೀಡಿದರು. ಒಬ್ಬ ಯುವ ಸಚಿವೆಯಾಗಿ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಮಂತ್ರಿ ಸ್ಥಾನವನ್ನೇ ತೊರೆದರೆಂದರೆ ಆಕೆಯ ನಿಸ್ವಾರ್ಥತೆ ಹಾಗೂ ಹೋರಾಟ ಮನೋಭಾವನೆ ಎಂಥದ್ದಿರಬಹುದು? ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂಬ ಕಾರಣಕ್ಕೆ ೧೯೯೭ರಲ್ಲಿ ಪಕ್ಷವನ್ನೇ ತೊರೆದು ತೃಣಮೂಲ(ಗ್ರಾಸ್‌ರೂಟ್) ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನೇ ಕಟ್ಟಿದರು. ಪ್ರಣಬ್ ಮುಖರ್ಜಿ, ಘನಿಖಾನ್ ಚೌಧುರಿ, ಪ್ರಿಯರಂಜನ್‌ದಾಸ್ ಮುನ್ಷಿ ಅವರಂತಹ ಹಿರಿಯ ನಾಯಕರಿದ್ದರೂ ಮಮತಾ ಜನಪ್ರಿಯತೆ ಮುಂದೆ ಕಾಂಗ್ರೆಸ್ ಕ್ಷೀಣಿಸಿ ಹೋಯಿತು. ತೃಣಮೂಲ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಯಿತು. ನಮಗೆ ಹುಚ್ಚುತನವೆನಿಸಬಹುದು. ಆದರೆ ಮಮತಾ ಯಾರನ್ನೂ ಲೆಕ್ಕಿಸುವುದಿಲ್ಲ. ೧೯೯೮ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ‘ಮಹಿಳಾ ಮೀಸಲು’ ವಿಧೇ ಯಕವನ್ನು ಲೋಕಸಭೆಯ ಮುಂದಿಟ್ಟಾಗ ತೀವ್ರ ಅಡಚಣೆಯನ್ನಂಟುಮಾಡಿದ ಸಮಾಜವಾದಿ(ಎಸ್ಪಿ) ಪಕ್ಷದ ಸಂಸದ ದುರ್ಗಾಪ್ರಸಾದ್ ಸರೋಜ್ ಅವರನ್ನು ಕಾಲರ್ ಹಿಡಿದುಕೊಂಡು ಸದನದ ಆವರಣಕ್ಕೆ ಎಳೆದು ತಂದಿದ್ದರು ಮಮತಾ!! ಪಿ.ಎ. ಸಂಗ್ಮಾ ಸ್ಪೀಕರ್ ಆಗಿದ್ದಾಗ ಒಮ್ಮೆ ರೊಚ್ಚಿಗೆದ್ದು ಹೊದ್ದಿದ್ದ ಶಾಲನ್ನೇ ಸ್ಪೀಕರ್ ಚೇರ್‌ನತ್ತ ಎಸೆದಿದ್ದರು. ೨೦೦೫ರಲ್ಲಿ ಬಾಂಗ್ಲಾದೇಶಿ ಅತಿಕ್ರಮಣಕಾರರ ಬಗ್ಗೆ ಚರ್ಚಿಸುವ ಸಲುವಾಗಿ ‘ನಿಲುವಳಿ ಸೂಚನೆ’ ಮಂಡಿಸಲು ಅವಕಾಶ ನೀಡಬೇಕೆಂದು ಆಕೆ ಮಾಡಿದ್ದ ಕೋರಿಕೆಯನ್ನು ಸ್ಪೀಕರ್ ಸೋಮನಾಥ ಚಟರ್ಜಿ ತಿರಸ್ಕರಿಸಿರುವ ವಿಷಯ ತಿಳಿದು ಆ ಸಂದರ್ಭದಲ್ಲಿ ಸ್ಪೀಕರ್ ಚೇರ್ ಮೇಲೆ ಕುಳಿತಿದ್ದ  ಡೆಪ್ಯುಟಿ ಸ್ಪೀಕರ್ ಚರಣ್‌ಜಿತ್ ಸಿಂಗ್ ಅತ್ವಾಲ್ ಮುಖದತ್ತ ಪೇಪರ್‌ಗಳನ್ನು ಎಸೆದಿದ್ದರು. ಅಷ್ಟೇ ಅಲ್ಲ, ಪಶ್ಚಿಮ ಬಂಗಾಳದಲ್ಲಿ ಬಂಡವಾಳ ತೊಡಗಿಸುವ ವಾಗ್ದಾನ ಮಾಡಿದ ಇಂಡೋನೇಷ್ಯಾದ ಸಲೀಂ ಗ್ರೂಪ್‌ಗೆ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಹೌರಾ ಬಳಿ ಕೃಷಿ ಭೂಮಿಯನ್ನು ನೀಡಿದಾಗ ಒಪ್ಪಂದಕ್ಕೆ ಸಹಿ ಹಾಕಲು ಸಲೀಂ ಗ್ರೂಪ್‌ನ ಮುಖ್ಯಸ್ಥ ಬೆನ್ನಿ ಸ್ಯಾಂಟೊಸೋ ಆಗಮಿಸಲಿದ್ದ ತಾಜ್ ಹೋಟೆಲ್‌ನೆದುರು ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ನಿಂತು ಪ್ರತಿಭಟಸಿದ್ದರು ಮಮತಾ ಬ್ಯಾನರ್ಜಿ.

ಇಂತಹ ಕಾಳಜಿ ಹಾಗೂ ಗಟ್ಟಿತನಗಳಿಂದಾಗಿಯೇ ನಂದಿ ಗ್ರಾಮ ಹಾಗೂ ಸಿಂಗೂರಿನ ಜನ ಪ್ರಾಣವನ್ನು ಒತ್ತೆಯಿಟ್ಟು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟಾಗಿಯೂ ಆಕೆಯೇನು ಕಾರ್ಮಿಕ ನಾಯಕಿಯಲ್ಲ, ಆಕೆಯ ಬೆಂಬಲಕ್ಕೆ ನಿಲ್ಲುವಂಥ ಕಾರ್ಮಿಕ ಒಕ್ಕೂಟಗಳೂ ಇಲ್ಲ. ಇರುವುದು ಪ್ರಾಮಾಣಿಕ ಕಾಳಜಿಯೊಂದೇ. ಈ ಹಿಂದೆ ಕಾರ್ಮಿಕರು, ಭೂರಹಿತರು ಅಂತ ಹೋರಾಡುತ್ತಿದ್ದವರೆಲ್ಲ ಕಮ್ಯುನಿಸ್ಟರೇ ಆಗಿದ್ದರು. ಆದರೆ ಅವರ ಹೋರಾಟಗಳು ರಾಜಕೀಯ ಹಿತಾಸಕ್ತಿ ಹಾಗೂ ರಾಜಕೀಯ ಲಾಭದ ಉದ್ದೇಶ ಹೊಂದಿರುತ್ತಿದ್ದವು. ಹಾಗಾಗಿ ಅಧಿಕಾರಕ್ಕೇರಿದ ಕೂಡಲೇ ಹೋರಾಟ ನಿಂತು ಹೋಗುತ್ತಿತ್ತು. ಇಂದು ನಕ್ಸಲ್ ಪಿಡುಗು ಇಡೀ ದೇಶವನ್ನೇ ಕಾಡುತ್ತಿದ್ದರೂ ಪಶ್ಚಿಮ ಬಂಗಾಳ, ಕೇರಳ, ತ್ರಿಪುರಗಳಲ್ಲಿ ಈ ಸಮಸ್ಯೆಯಿಲ್ಲ. ಏಕೆಂದರೆ ನಕ್ಸಲರ ಕೈಯಲ್ಲೇ ಅಧಿಕಾರವಿದೆ. ದಟ್ಟದಾರಿದ್ರ್ಯದಿಂದ ಕೂಡಿದ್ದರೂ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಯಾವ ಹೋರಾಟ, ಓರಾಟ, ಚೀರಾಟಗಳೂ ಕಾಣುತ್ತಿರಲಿಲ್ಲ. ಕಮ್ಯುನಿಸ್ಟರ ಇಂತಹ ಇಬ್ಬಂದಿ ನಿಲುವಿನಿಂದಾಗಿ ಮಮತಾ ಪ್ರಾಮುಖ್ಯತೆಗೆ ಬಂದರು. ಇಂದು ‘ಲೆಫ್ಟಿಸ್ಟ್ ಐಡಿಯಾಲಜಿ’ಯನ್ನೇ ಹೈಜಾಕ್ ಮಾಡಿರುವ ಆಕೆ, ಕಮ್ಯುನಿಸ್ಟರಿಗೆ ಅವರದ್ದೇ ಭಾಷೆಯಲ್ಲಿ ಬಿಸಿ ಮುಟ್ಟಿಸುತ್ತಿದ್ದಾರೆ. ಅಂದಮಾತ್ರಕ್ಕೆ ಆಕೆ ಯಿಂದಾಗಿ ಪಶ್ಚಿಮ ಬಂಗಾಳ ಅವನತಿಯತ್ತ ಸಾಗುತ್ತದೆ ಎಂದು ಟೀಕಿಸುವುದು ತಪ್ಪು. ಅಷ್ಟಕ್ಕೂ ಬ್ರಿಟಿಷರ ಕಾಲ ದಿಂದಲೂ ದೇಶದಲ್ಲಿಯೇ ಅತ್ಯಂತ ಪ್ರಗತಿಪರ ಹಾಗೂ ಕೈಗಾರಿಕೀಕರಣಗೊಂಡ ರಾಜ್ಯವೆಂಬ ಹೆಗ್ಗಳಿಕೆಯನ್ನು ಪಶ್ಚಿಮ ಬಂಗಾಳ ಪಡೆದಿತ್ತು. ಅದನ್ನು ಈ ಸ್ಥಿತಿಗೆ ತಂದವರಾರು? ಅಲ್ಲಿನ ಕಾರ್ಖಾನೆಗಳು ಮುಚ್ಚುವಂತಾಗಿದ್ದು ಕಮ್ಯುನಿಸ್ಟರ ಮಿಲಿಟೆಂಟ್ ಟ್ರೇಡ್‌ಯೂನಿಯನಿಸಂನಿಂದಲೇ ಅಲ್ಲವೆ? ಇಂದು ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಬಡತನ, ನಿರುದ್ಯೋಗವನ್ನು ತರುವ ಓಬಿರಾಯನ ಕಾಲದ ಕಮ್ಯುನಿಸ್ಟ್ ಸಿದ್ಧಾಂತದಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ ಎಂಬುದು ಅರಿವಾಗಿರಬಹುದು. ಹಾಗಂತ ಎಡಬಿಡಂಗಿ ಎಡಪಂಥೀಯರ ಪಾಪದ ಕೊಡ ಅಷ್ಟು ಸುಲಭವಾಗಿ ಖಾಲಿಯಾದೀತೆ? ೧೯೬೦, ೭೦ರ ದಶಕದಲ್ಲಿ ಕಮ್ಯುನಿಸ್ಟರು ಯಾವ ಹೋರಾಟ ಮಾಡುತ್ತಿದ್ದರೋ ಅದೇ ಕೆಲಸವನ್ನು ಇಂದು ಮಮತಾ ಮಾಡುತ್ತಿದ್ದಾರೆ. ಅಂದು ಬಂಡವಾಳಶಾಹಿ ಎಂದು ಅಮೆರಿಕವನ್ನು ದೂರುತ್ತಿದ್ದವರು ಈಗ ಸಲೀಂ ಗ್ರೂಪ್, ಸಿಂಗೂರ್ ಮಂತ್ರ ಜಪಿಸುತ್ತಿದ್ದಾರೆ. ಹಾಗಂತ ಕಮ್ಯುನಿಸ್ಟರಂತೆ ಮಮತಾ ಧೂರ್ತತನ ತೋರುತ್ತಿಲ್ಲ. “ಪಶ್ಚಿಮ ಬಂಗಾಳದಲ್ಲಿ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳೆರಡೂ ಸಾಂಘಿಕವಾಗಿ ಪ್ರಗತಿ ಕಾಣಬೇಕು ಎಂಬುದಷ್ಟೇ ನನ್ನ ಉದ್ದೇಶ. ಹಾಗಾಗಲು ನಾನು ಯಾವ ತ್ಯಾಗಕ್ಕೂ ಸಿದ್ಧ” ಎಂದಿದ್ದಾರೆ. ಸಿಂಗೂರಿನಲ್ಲಿ ಟಾಟಾಕ್ಕೆ ನೀಡಲಾಗಿರುವ ಸಾವಿರ ಎಕರೆ ಭೂಮಿಯಲ್ಲಿ ೪೦೦ ಎಕರೆಯನ್ನು ಬಿಡಲೊಪ್ಪದ ರೈತರಿಗೆ ಬೇರೆ ಕಡೆ ಭೂಮಿಗೆ ಪ್ರತಿಯಾಗಿ ಭೂಮಿಯನ್ನೇ ನೀಡಿದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದೂ ಹೇಳಿದ್ದಾರೆ. ಇದಕ್ಕಿಂತ ಪ್ರಾಮಾಣಿಕ ಕಾಳಜಿ ಇನ್ನೇನು ಬೇಕು? ಮಮತಾ ಬ್ಯಾನರ್ಜಿಗೆ ಗಂಡನಿಲ್ಲ, ಮಕ್ಕಳಿಲ್ಲ. ಅಷ್ಟೇಕೆ, ಮದುವೆಯನ್ನೇ ಆಗಿಲ್ಲ. ಒಂದು ವೇಳೆ, ಆಕೆಯೂ ನಮ್ಮಂತೆ ಕಂಫರ್ಟ್ ಹುಡುಕಿಕೊಂಡು ಹೋಗಿದ್ದರೆ ಅಥವಾ ಅಧಿಕಾರವೇ ಪರಮೋಚ್ಚ ಗುರಿಯಾಗಿದ್ದಿದ್ದರೆ ಕಾಂಗ್ರೆಸ್ ಜತೆ ಕೈಜೋಡಿಸಿ ಕೇಂದ್ರದಲ್ಲಿ ಸಚಿವೆಯಾಗಿ ಹಾಯಾಗಿರಬಹುದಿತ್ತು. ಆದರೆ ಆಧಿಕಾರವೆಂಬ ಮರೀಚಿಕೆಯನ್ನು ಅರಸುತ್ತಾ ಕುಳಿತುಕೊಳ್ಳುವ ಬದಲು ಬೀದಿಗಿಳಿದು ಹೋರಾಡುತ್ತಿರುವ ಆಕೆಯ ಬಗ್ಗೆ ಕಿಂಚಿತ್ತಾದರೂ ಮಮಕಾರ ಬೇಡವೆ?

ಇಂದಿನ ಹಣಬಲದ ಮುಂದೆ ಎಂತಹ ಚಳವಳಿಗಳೂ ನಂದಿ ಹೋಗುತ್ತವೆ ಅಥವಾ ಚಳವಳಿಗಳನ್ನು ಹೊಸಕಿ ಹಾಕುವ ತಾಕತ್ತು ಹಣಕ್ಕಿದೆ. ಒಂದು ವೇಳೆ, ಭೂಮಿ ನೀಡಲು ನಿರಾಕರಿಸಿರುವ ೨೦೦ ರೈತರನ್ನು ಸರಕಾರ ಅಥವಾ ಟಾಟಾ ಕಂಪನಿ ಹಣದ ಆಮಿಷ ತೋರಿ ಕೊಂಡುಕೊಂಡಿದ್ದರೆ ಪ್ರತಿಭಟನೆಯೇ ನಿಂತುಹೋಗು ತ್ತಿತ್ತು ಅಲ್ಲವೆ? ಆದರೂ ರೈತರು ಹಣಕ್ಕೆ ತಮ್ಮನ್ನು, ಅಸ್ತಿತ್ವವನ್ನು ಮಾರಿಕೊಂಡಿಲ್ಲವೆಂದರೆ ಅವರ ವೇದನೆ, ಹತಾಶೆಯೇನೆಂಬುದನ್ನು ಅರ್ಥಮಾಡಿಕೊಳ್ಳಿ. ಭೂಮಿ ಯನ್ನು ಕಿತ್ತುಕೊಂಡರೆ ವಿಷ ಕುಡಿಯುತ್ತೇವೆಯೇ ಹೊರತು ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಿದ್ದಾರೆಂದರೆ ಅವರ ನೋವೇನಿರಬಹುದು? ಟಾಟಾ ಹಿಂತೆಗೆದರೆ ೧೫೦೦ ಕೋಟಿ ನಷ್ಟವಾಗು-ದರ ಬಗ್ಗೆ ಎಲ್ಲರೂ ಲೆಕ್ಕಹಾಕುತ್ತಿದ್ದಾರೆ. ಆದರೆ ಭೂಮಿ ಕಳೆದುಕೊಂಡ ರೈತ ಶಾಶ್ವತವಾಗಿ, ನಿರಂತರವಾಗಿ ಕಳೆದುಕೊಳ್ಳುವ ಆದಾಯವನ್ನೂ ಲೆಕ್ಕಹಾಕಿ. ಸಿಂಗೂರಿನ ಜನರಿಗೆ ಎಕರೆಗೆ ೨ ಲಕ್ಷ ರೂ. ಪರಿಹಾರವನ್ನು ಕೊಟ್ಟರೂ ಕುಡಿಕೆ ಹಣ ಖರ್ಚಾಗಲು ಎಷ್ಟು ಸಮಯ ಬೇಕು? ಭೂಮಿಯನ್ನು ಉತ್ತು, ಬಿತ್ತುವ ವಿದ್ಯೆ ಮಾತ್ರ ಗೊತ್ತಿರುವ ರೈತನಿಗೆ ಬದಲಿ ಉದ್ಯೋಗವನ್ನು ಕಲ್ಪಿಸುವವರಾರು? ಯಾವ ಉದ್ಯೋಗ ಕೊಡುತ್ತಾರೆ? ಖಂಡಿತ ಆರ್ಥಿಕ ಅಭಿವೃದ್ಧಿ ಬೇಕು. ಆದರೆ ಸಾಮಾಜಿಕ ಕಳಕಳಿಯ ಜತೆಜತೆಗೇ ಆರ್ಥಿಕ ಅಭಿವೃದ್ಧಿಯಾಗಬೇಕೇ ಹೊರತು ‘ಇಕನಾಮಿಕ್ ಗ್ರೋಥ್’ಗಾಗಿ ‘ಸೋಷಿಯಲ್ ಕನ್ಸರ್ನ್’ ಅನ್ನು ಬಲಿತೆಗೆದುಕೊಳ್ಳಬಾರದು. ಟಾಟಾಕ್ಕೆ ೧೦೦೦ ಎಕರೆ ಭೂಮಿ ಕೊಟ್ಟರೆ ೫ ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ ಎನ್ನುವುದೇನೋ ಸರಿ. ವಿದ್ಯೆ ಕಲಿತವರಿಗೆ ಉದ್ಯೋಗ ದೊರೆತರೆ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡ ರೈತನ ದುಡಿಮೆಗೆ ಶಾಶ್ವತವಾಗಿ ಕಲ್ಲು ಬೀಳುವುದಿಲ್ಲವೆ? ಕೈಗಾರಿಕಾ ಅಭಿವೃದ್ಧಿಗೆ ಕೃಷಿ ಭೂಮಿಯೇ ಏಕೆ ಬೇಕು? ಗುಜರಾತ್‌ನಲ್ಲಿ ನೀಡಿದಂತೆ ಬಂಜರು ಭೂಮಿಯನ್ನೇಕೆ ಕೊಡಬಾರದು? ಕಡಿಮೆ ಬೆಲೆಗೆ ಸರಕಾರ ಭೂಸ್ವಾಧೀನ ಮಾಡಿಕೊಂಡು ಕಂಪನಿಗಳಿಗೆ ನೀಡುವ ಬದಲು ಮಾರುವ ಆಸಕ್ತಿ ಹೊಂದಿರುವ ರೈತರಿಗೆ ಮಾರುಕಟ್ಟೆ ಬೆಲೆಯನ್ನು ನೀಡಿ ನೇರವಾಗಿ ಖರೀದಿ ಮಾಡಿ  ಎಂದು ನಾಲ್ಕು ವರ್ಷಗಳ ಹಿಂದೆಯೇ ನರೇಂದ್ರ ಮೋದಿಯವರು ಹೇಳಿದಂತೆ ಉಳಿದ ರಾಜ್ಯಗಳೂ ಏಕೆ ಸೂಚಿಸಬಾರದು?

ಇದು ಟಾಟಾ ಕಂಪನಿಯೊಂದಕ್ಕೇ ಪಾಠವಲ್ಲ. ಎಲ್ಲ ಕಂಪನಿಗಳಿಗೂ ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಹಾಗಾಗಬೇಕಾದರೆ ದೇಶದ ಎಲ್ಲ ಭಾಗಗಳಲ್ಲೂ ಕೃಷಿ ಭೂಮಿಯನ್ನು ಯದ್ವಾತದ್ವ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಹೋರಾಟಗಳೇಳಬೇಕು. ಅಷ್ಟಕ್ಕೂ ತನಗಿಷ್ಟ ಬಂದ ಬೆಲೆ ನಿಗದಿ ಮಾಡಿ, ಬೇಕೆಂದಾಗ ಭೂಸ್ವಾಧೀನ ಮಾಡಿಕೊಳ್ಳಲು ಭೂಮಿಯೇನು ಸರಕಾರದ ಸ್ವತ್ತಲ್ಲ, ಉಳುವವನ ಆಸ್ತಿ. ನಮ್ಮ ಕರ್ನಾಟಕದಲ್ಲೂ ೪೫ ಎಸ್‌ಇಝೆಡ್‌ಗಳು ನಿರ್ಮಾಣಗೊಳ್ಳುತ್ತಿವೆ. ಆದರೆ ಎಂಆರ್‌ಪಿಎಲ್‌ನವರು ಭೂಮಿ ನುಂಗುತ್ತಿದ್ದಾರೆ ಎಂದು ಕೊರಗುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯವರು ಬೀದಿಗಿಳಿದು ಹೋರಾಟವನ್ನು ಮಾತ್ರ ಮಾಡುವುದಿಲ್ಲ. ಬ್ಯಾಂಕ್, ಬಾರ್, ಹೋಟೆಲ್ ಅಂತ ದುಡ್ಡು ಮಾಡುವ ಯೋಚನೆಯನ್ನು ಸ್ವಲ್ಪ ಕಡಿಮೆ ಮಾಡಿ ಸ್ವತಃ ಹೋರಾಟ ಮಾಡದಿದ್ದರೆ ಯಾರೂ ಇತರರ ಸಹಾಯಕ್ಕೆ ಬರುವುದಿಲ್ಲ.—– ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಬಿಟ್ಟುಕೊಡೋಣ. ಆದರೆ ಎಸ್‌ಇಝೆಡ್, ಕೈಗಾರಿಕಾ ಅಭಿವೃದ್ಧಿ ಪ್ರದೇಶ ಅಂತ ಸುಖಾಸುಮ್ಮನೆ ಭೂಮಿ ಕಿತ್ತುಕೊಂಡು ಉದ್ಯಮಿಗಳಿಗೆ ಧಾರೆ ಎರೆಯಲು ಬಂದರೆ ಸುಮ್ಮನಿರಬೇಡಿ. ಭೂಮಿ ಎನ್ನುವುದು ಬರೀ ತುಂಡು ಜಾಗವಲ್ಲ. ನಮಗೆ ಜನ್ಮ ನೀಡುವ, ಅನ್ನ ಕೊಡುವ ಪವಿತ್ರ ಸ್ಥಳ. ಅದನ್ನು ನಾವೇ ಹೋರಾಡಿ ಉಳಿಸಿಕೊಳ್ಳಬೇಕು.

ಆದರೆ ಮಮತಾ ನಮ್ಮ ಪರವಾಗಿ ಹೋರಾಡುತ್ತಿದ್ದಾರೆ. ಆಕೆಯ ಮುಂದಿನ ಗುರಿ ನಮ್ಮ ಕಿರಾಣಿ ಅಂಗಡಿಗಳಿಗೆ ಕಂಟಕವಾಗಿರುವ ಧೈತ್ಯ ರಿಟೈಲ್ ಕಂಪನಿಗಳು. ಆಕೆ ಇಷ್ಟವಾಗುವುದು ಇದೇ ಕಾರಣಕ್ಕೆ.

10 Responses to “ಮಮತಾ ಮೇಲೆ ನಮಗೇಕಿರಬೇಕು ಮಮತೆ?”

  1. shreevatsa says:

    I dont think whatever the protest is going its being done by formers..

    Yes i agree the point that the govt can not take lands as if it is granted by formers…but the formers needs to compensated properly not in terms of money..but they should get land in some other part and it should be as good as the one which they have sacrificed.

    the IT companies are grabbing land in every state about 300-400 acres.. are they doing real estate business there or they are unknown DLF developers..for the company of about 10k or 15k employees how much land or office space you think they need..if you calculate that you will wonder what they do with 300-400 Acress of land….!!!!!!!!and they dont give a damn to the localites…at least TATA’s are giving job to approx ly some 4000 local people

    Coming back to the issue…i dont accept the Retail MNC are threat …its compitiion you have to face…its a nature rule… ..you can not run away…from truth..you have to face and conquer it..in my area i have a kirani shop where i love to go and purchase..because i like that guys attitude and service….and the personal touch…i am customer to them from years..

    and you wonder when you see a small shop in Tyagraj nagar who does a business more than some medium sized supermarket.

    if they are Foreign Retailers yes i accept the protest they take away the money from country.. in that case why somebody does not protest against coffee day saying that its blocking customers of tea shop..i know this is absurd way of arguing but i just wanted to make point …

    anyway i accept taking a land from somebody is not fair and it should be planned …and Reailer MNC and kirani shops should do fair business…to customers …

    no offense ..but i am not convinced with this article completely even though i accept the cause for it is right. and i dont think Mamta banerjee is so innocent…

    Best regards,

    Shreevatsa

  2. ವೆಂಕಟೇಶ್ says:

    ಪ್ರತಾಪರೆ, ನಮಸ್ಕಾರ.
    ಎಂದಿನಂತೆ ನಿಮ್ಮ ಲೇಖನ ಉತ್ತಮವಾಗಿದ್ದಿದ್ದೇನೋ ನಿಜ. ಆದರೆ, ಒಂದೆರಡು ಅನುಮಾನಗಳು….

    ೧) ಟಾಟಾಗೆ ಕೊಟ್ಟಿದ್ದು ‘ಕೃಷಿ’ ಭೂಮಿ ಅಂತ ಇದೆಯಾದರೂ, ಎಷ್ಟರ ಮಟ್ಟಿಗೆ ‘ಕೃಷಿ’ ಎಂಬ ಸ್ಪಷ್ಟನೆ ಇಲ್ಲ.
    ನೀವು ಯಾವುದಾದರೂ ಹಳ್ಳಿಗೆ ಹೋಗಿ ಕೇಳಿ, “ನಿಮಗೆಷ್ಟು ಭೂಮಿ ಇದೆ, ಏನು ಬೆಳೆಯುತ್ತೀರಿ?” ಎಂದು.
    ಅವರು ತಮಗಿರುವ ಭೂಮಿ ಅದು.. ಇದು.. ಎಲ್ಲ ಬೆಳೆಯುತ್ತೇವೆ, ನೀರು, ಪೈರು ಎಲ್ಲಾ ಚೆನ್ನಾಗಿವೆ…. ಎಂದು ಮೊದಲಿಗೆ ಹೇಳಬಹುದು. ನ೦ತರ ಸ್ವಲ್ಪ ಆತ್ಮೀಯರಾದ ಮೇಲೆ ವಿಚಾರಿಸಿ, ಇಲ್ಲ ಸ್ವಾಮೀ, ಇದರಲ್ಲಿ ಅರ್ದಭಾಗ ಮಳೆಕಂಡ ಬೆಳೆ…..ಮುಂತಾಗಿ ಮಾರ್ಮಿಕವಾಗಿ ಬಿಚ್ಚಿಡುತ್ತಾರೆ. ಹೀಗಾಗಿ ಅಲ್ಲಿ ಇರುವುದೆಲ್ಲಾ ಕೃಷಿ ಭೂಮಿ ಅಲ್ಲ….. ನನಗೆ ಹಳ್ಳಿಯ ಜೀವನ, ನೆಲ ಜಲದ ಅನುಭವ ಇರುವುದರಿಂದ ಈ ಮಾತು ಹೇಳುತ್ತಿದ್ದೇನೆ.
    ೨) ನಮ್ಮ ದೇಶದಲ್ಲಿ ೭೦% ಭಾಗ ಕೃಷಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆವೆಯೇ ಹೊರತು, ಸುಧಾರಿತ ಬೆಳೆ ಪದ್ಧತಿ ನಿರ್ಮಾಣ ಆಗಿಲ್ಲ. ರೆಕಾರ್ಡ್ ಗಳಲ್ಲಿ ಇವೆಲ್ಲವೂ ಕೃಷಿ ಭೂಮಿ ಗಳೇ!
    ನಿಮಗೆ ಆಶ್ಚರ್ಯ ಆಗಬಹುದು, ಶ್ರೀಲಂಕಾ ದಂತ ದೇಶದಲ್ಲಿ ಶೇಖಡ ೨೦ಕ್ಕಿನ್ತಲೋ ಹೆಚ್ಚು ಭಾಗ ಸುಧಾರಿತ ಕೃಷಿ ಬೆಳೆ ಯಾಂತ್ರೀಕರಣವಾಗಿದೆ. ಪ್ರಪಂಚದಲ್ಲೇ ಮೂರನೇ ದೊಡ್ಡ ಆರ್ಥಿಕ ಬೆಳವಣಿಗೆ ಕಂಡಿರುವ ನಮ್ಮ ಭಾರತ ದೇಶದಲ್ಲಿ, ಕೃಷಿ ಯಾಂತ್ರೀಕರಣ ೪% ಮಾತ್ರ! ಒಂದು ನೊಗದ ಹಲ್ಲು ಹೋದರೆ ರೈತ ಹತ್ತಿಪ್ಪತ್ತು ಮೈಲು ದೂರ ಹೋಗಿ ಸರಿ ಮಾಡಿಸಿಕೊಂಡು ಬರಬೇಕು.
    ಈ ಪರಿಸ್ತಿತಿ ಸುಧಾರಿಸುವ ವರೆಗೂ ಹಳ್ಳಿಯು ಯಾರಿಗೂ ಆಕರ್ಷಣೆ ಆಗುವುದಿಲ್ಲ. ರೈತರಿಗೆ ಸಾಲಮನ್ನ, ಬಡ್ಡಿ ಮನ್ನ, ಮಾಡುವುದರ ಜತೆಗೆ / ಅದರ ಬದಲಾಗಿ ಕೃಷಿ ಪದ್ದತಿಯಲ್ಲಿ ಸುಧಾರಣೆ ಆಗ ಬೇಕು…ಅದಕ್ಕೆ ಪೂರಕವಾದ ಯಂತ್ರೀಕರಣಕ್ಕೆ ಪ್ರೋತ್ಸಾಹ ನೀಡ ಬೇಕು, ಇದು ಆಗುತ್ತಿಲ್ಲ. ಇದು ಆಗದೆ ಭೂಮಿ ಇದ್ದೂ ನಿಷ್ಪ್ರಯೋಜಕ, ಹಾಗಂತ ಇದನ್ನೆಲ್ಲಾ ಕೈಗಾರಿಕೆ ಗಳಿಗೆ ಕೊಟ್ಟುಬಿಡಿ ಅಂತ ನಾನು ಹೇಳುತ್ತಿಲ್ಲ.

    ೩) ಈ ಲೇಖನದಲ್ಲಿ ಒಂದು ದ್ವಂದ್ವವನ್ನು ಕಂಡೆ. ಒಂದು ಕಡೆ, ಕೃಷಿ ಭೂಮಿಯನ್ನು ಕೈಗಾರಿಕೆ ಗಳಿಗೆ ಕಡಿಮೆ ಬೆಲೆಗೆ ಕೊಟ್ಟರೆ ಆ ಹಣ ಖರ್ಚಾಗಲು ಎಷ್ಟು ಸಮಯ ಬೇಕು? , ಇನ್ನೊಂದು ಕಡೆ, ಮಾರುಕಟ್ಟೆ ಬೆಲೆಗೆ ಬೇಕಾದರೆ ತೆಗೆದು ಕೊಳ್ಳಲಿ ಎಂದು. ಎರಡೂ ಕಡೆ ಹಣವೇ ಅಲ್ಲವೇ? ಅದನ್ನು ಹೇಗೆ ಕರ್ಚು ಮಾಡ ಬೇಕು ಅಂತ ಗೊತ್ತಿರದ ರೈತ, ಹಣ ಕರಗಿ ಹೋದಮೇಲೆ, ನೀವೇ ಹೇಳಿದ ಹಾಗೆ “ಏನು ಮಾಡುತ್ತಾನೆ?”

    ೪)ಮಮತಾ ಬಗ್ಗೆ: ಮಮತಾರ ಬಗ್ಗೆ ಹೆಚ್ಚಿನ ಜನರಲ್ಲಿ ಬೇಸರವಿದೆ. ಅವರೇನೋ ಒಳ್ಳೆಯದಕ್ಕಾಗಿ ಮಾಡಬಹುದು. ಆದರೆ ಅವರು ಮಾಡುವ ಕೆಲಸ ನಮ್ಮ ರೀತಿ-ನೀತಿಗೆ, ಅಗತ್ಯಕ್ಕೆ, ಸಮಾಜಕ್ಕೆ ಹತ್ತಿರವಾಗಿರಬೇಕು. ಇಲ್ಲವಾದಲ್ಲಿ ಎಲ್ಲ ಕೆಲಸಕ್ಕೂ ಮುಷ್ಕರ, ಎಲ್ಲರ ಮೇಲೆ ಸಮರ ಮಾಡುತ್ತಿದ್ದರೆ ನಾಳೆದಿನ ಇವರು ಮೇಧಾ ಪಾಟ್ಕರ್, ಸುಜಾನ ಅರುಂಧತಿ ರಾಯಿ, ರಾಮಚಂದ್ರ ಗುಹ ಸಾಲಿಗೆ ಸೇರಿಬಿಡಬಹುದು.

    ೫) ಇದು ಇಲ್ಲಿ ಅಸಮಂಜಸ ಅನಿಸ ಬಹುದು, ಆದರೂ ಇದಕ್ಕೆ ಉತ್ತರ ಕೊಡಲು ಪ್ರತಾಪ ಸಿಂಹರೆ ಸಮರ್ಥ ಎಂದು ನನ್ನ ನಂಬಿಕೆ. ನಮ್ಮ ದೇಶದ ಮೂರನೇ ಅತಿಹೆಚ್ಚು ಭೂ ಭಾಗ ಕ್ರಿಶ್ಚಿಯನ್ ಮಿಷಿನರಿ ಗಳಹತ್ತಿರ ಇದೆ ಎಂದು ಯಾವುದೋ ಪುಸ್ತಕದಲ್ಲಿ ಓದಿದ್ದೇನೆ. ನಿಜವೇ?
    ನಿಜವಾಗಿದ್ದರೆ, ಬರೀ ೨% ಜನಸಂಖ್ಯೆ ಇದ್ದು ಕೊಂಡು ಧರ್ಮ ಪ್ರಚಾರ ಮಾಡಲು, ಮತಾಂತರ ಮಾಡಲು ಇಷ್ಟು ಬೂಮಿ ಏಕೆ?
    ಯಾವುದೊ ಮಠಕ್ಕೆ ಜಾಗ ಕೊಟ್ಟರೆ ಹೌಹಾರುವ ನಮ್ಮ ಜನಕ್ಕೆ ಈ ವಿಷಯ ಗೊತ್ತಿಲ್ಲವೇ? ತಲತಲಾಂತರದಿಂದಲೇ ಇರಬಹುದು, ಆದ್ರೆ ನಾವು ದೇವರಾಜ ಅರಸರ ಕಾಲದಲ್ಲಿ ಹೆಚ್ಚಾಗಿರುವ ಭೂಮಿಯನ್ನು ಕಳೆದು ಕೊಳ್ಳಲಿಲ್ಲವೇ? ಹಾಗೇ, ಬ್ರಿಟೀಷರ ಕಾಲದಲ್ಲಿ ಕೊಟ್ಟ ಈ ಭೂಮಿಯನ್ನು ವಶಪಡಿಸಿಕೊಳ್ಳಲಿ? ಇದು ಸರ್ಕಾರದ ದೌರ್ಬಲ್ಯವೇ??

    ನಾನು ನಿಮ್ಮ ಲೇಖನವನ್ನು ಯಾವುದೇ ರೀತಿಯಲ್ಲಿ ಪ್ರಶ್ನೆ ಮಾಡುತ್ತಿಲ್ಲ ಆದರೆ ನನ್ನ ಅನುಮಾನ ಪರಿಹರಿಸಿ ಕೊಳ್ಳುತ್ತಿದ್ದೇನೆ ಅಷ್ಟೇ.
    ಧನ್ಯವಾದಗಳು.
    ವೆಂಕಟೇಶ್

  3. sandesh says:

    Dear freinds,
    Of course its a land of farmers, many MNC’s like DLF aquires the farmers land with no proper compensate to the land owner. And we will not question those companies. But in this case ‘THE NANO PROJECT’ is a pride for india. And tata is ready for better compenssate to farmer needs.And even offering job oppurtunities for localates.
    And i hope the supporting hands for ‘Mamtha’ may be other car manufactures, to delay the project intentionally, so that they can come up with thier product mean while.And even there is no doubt , that competetors for ‘TATA’ are worried about their market status after the launch on ‘NANo’.

    And this seems to be the issue of ‘MAMTHA BANNERJI’ rather farmer issue, to improve her political statstics.

  4. Harsha says:

    Dear friends,
    This is in response to the comments above.
    Firstly,Venkatesh,it is farmers land and was being farmed completely.I have a friend from Kharagpur who has visited the site and knows the realities.The communists are supposedly taking the land from the farmers by force.And Pratap Sir was right in telling that the land should be bought in the market price.How the farmers spend it,is their problem.Why shouldn’t they get it for market price?I dont see the logic behind your statement,Venkatesh.So what if its a question of money?Ultimately that is what matters.The farmers have the right to get it for market price.Atleast they will have the satisfaction of getting a fair deal and can invest in land elsewhere or start some new ventures.
    Secondly,Sandesh,yes,it is true that the same thing is being done by other companies.But sadly,we do not have Mamata Banerjees in every state so it goes unnoticed.Instead of blaming her and accusing her recklessly,please appreciate the good work she is doing.
    Thirdly,people please shed your anti-MNC or foriegn retailers attitude in this era of globalisation.If we do not allow foreign companies to do business in our country,people from our country also cannot do business in foreign land.Besides,MNC s and foreign retailers create lots of job opportunities to our countrymen.
    Pratap Sirs article,as usual was perfect if you ask me.

    Regards,
    Harsha Karanth

  5. Kiran says:

    The core of the article, better could have been to cite the SEZ policy, which came with it’s own ‘intentional flaws to cater both national economic interest and personal interests. Unlike other double-edged gov policies, the impact of SEZ is direct and instant-declaration on the lives of farmers.

    The flaw lies in our inability to understand Crony-Capitalism. Think this- In the congress-raj Ramadoss, Home Patil to the Prez Patil, they have ‘enabled’ some businessmen in their own circles. But that is dirty use of power.Crony-ism can’t be a policy objective but a small dosage of it is needed to stengthen the economy. SEZ got coined by the same congress-men and very few have dissected into it. Interestingly many local and international co.s had a fair deal from the goverments. Naidu & SM Krishna are two examples who worked in self-styled policies but a vision-oriented; This was much before we heard the word SEZ. So this new coinage should have a definite meaning and a purpose. I am surprised, why Pratap didn’t present that picture.

    If we have to talk about NANO issue, I concur with Sandesh. It is obvious that the world was awaiting a $2500 car and that too from India. It was not a shockwave but was definitely a mild tremor. So there is nothing wrong to ‘guess’ it as a knavish plot by other automotive MNCs.

    If Pratap had to make a point, he could have even written about the huge land grabs in YS Reddy’s regime too. WB only got so much attention because of the very charisma of the people invovled, What about the land-grabs in Anantapur district of AP, just 150Km away from Banagalore?

    And, if Pratap had to give a recognition for Mamata, he could have done it little earlier too. Not under the light of current demand for TATA pullback. It is some times surprising to see how Pratap bumbles with few inches more emotion at the cost of logic. Something for sure, not exprected by hardcrore Pratap fans like me.

  6. shiva says:

    I heard mamata is supported by bajaj is it true.
    If nano is hit that worst hit will be bajaj 2 and 3 wheelers

  7. Murthy D R says:

    Its true that land shouldn’t be forcibly taken from farmers. But my only question is about the timing of the protests. Why is it being done now, when all the infrastructures for the factory have been completed and the plant is almost set for production of cars? why didn’t these people protest when the project started? what were they doing till now? Because of this bad timing, poor Tata is loosing Rs.1500 crores. When somebody (Ratan Tata) is doing something (Nano) which would make evry indian proud, we should support them.

    – DR

  8. anu says:

    An Old Story:

    The Ant works hard in the withering heat all summer building its house and
    laying up supplies for the winter.
    The Grasshopper thinks the Ant is a fool and laughs & dances & plays the
    summer away.
    Come winter, the Ant is warm and well fed. The Grasshopper has no food or
    shelter so he dies out in the cold.

    Indian Version:

    The Ant works hard in the withering heat all summer building its house and
    laying up supplies for the winter.

    The Grasshopper thinks the Ant’s a fool and laughs & dances & plays the
    summer away.

    Come winter, the shivering Grasshopper calls a press conference and
    demands to know why the Ant should be allowed to be warm and well fed
    while others are cold and starving.
    NDTV, BBC, CNN show up to provide pictures of the shivering Grasshopper
    next to a video of the Ant in his comfortable home with a table filled
    with food.

    The World is stunned by the sharp contrast. How can this be that this poor
    Grasshopper is allowed to suffer so?

    Mayawati states this as `injustice’ done on Minorities.
    Amnesty International and Koffi Annan criticize the Indian Government for
    not upholding the fundamental rights of the Grasshopper.
    The Internet is flooded with online petitions seeking support to the
    Grasshopper (many promising Heaven and Everlasting Peace for prompt
    support as against the wrath of God for non-compliance).

    Opposition MPs stage a walkout. Left parties call for ‘Bengal Bandh’ in
    West Bengal and Kerala demanding a Judicial Enquiry.
    CPM in Kerala immediately passes a law preventing Ants from working hard
    in the heat so as to bring about equality of poverty among Ants and
    Grasshoppers.
    Lalu Prasad allocates one free coach to Grasshoppers on all Indian Railway
    Trains, aptly named as the ‘Grasshopper Rath’.
    Finally, the Judicial Committee drafts the ‘ Prevention of Terrorism
    Against Grasshoppers Act’ [POTAGA], with effect from the beginning of the
    winter.
    Arjun Singh makes ‘Special Reservation ‘ for Grasshoppers in Educational
    Institutions & in Government Services.
    The Ant is fined for failing to comply with POTAGA and having nothing left
    to pay his retroactive taxes,it’s home is confiscated by the Government
    and handed over to the Grasshopper in a ceremony covered by NDTV.

    Lalu calls it ‘Socialistic Justice ‘.

    CPM calls it the ‘ Revolutionary Resurgence of the Downtrodden ‘

    Koffi Annan invites the Grasshopper to address the UN General Assembly.
    Many years later…

    The ant has since migrated to the US and set up a multi-billion dollar company in Silicon Valley,
    100s of Grasshoppers still die of starvation despite reservation somewhere in India,

    ..AND

    As a result of loosing lot of hard working Ants and feeding the
    grasshoppers,

    India is still a developing country…!!!
    WHY ? 75% of Indians are DEVELOPERS

  9. anu says:

    An Old Story:

    The Ant works hard in the withering heat all summer building its house and
    laying up supplies for the winter.
    The Grasshopper thinks the Ant is a fool and laughs & dances & plays the
    summer away.
    Come winter, the Ant is warm and well fed. The Grasshopper has no food or
    shelter so he dies out in the cold.

    Indian Version:

    The Ant works hard in the withering heat all summer building its house and
    laying up supplies for the winter.

    The Grasshopper thinks the Ant’s a fool and laughs & dances & plays the
    summer away.

    Come winter, the shivering Grasshopper calls a press conference and
    demands to know why the Ant should be allowed to be warm and well fed
    while others are cold and starving.
    NDTV, BBC, CNN show up to provide pictures of the shivering Grasshopper
    next to a video of the Ant in his comfortable home with a table filled
    with food.

    The World is stunned by the sharp contrast. How can this be that this poor
    Grasshopper is allowed to suffer so?

    Mayawati states this as `injustice’ done on Minorities.
    Amnesty International and Koffi Annan criticize the Indian Government for
    not upholding the fundamental rights of the Grasshopper.
    The Internet is flooded with online petitions seeking support to the
    Grasshopper (many promising Heaven and Everlasting Peace for prompt
    support as against the wrath of God for non-compliance).

    Opposition MPs stage a walkout. Left parties call for ‘Bengal Bandh’ in
    West Bengal and Kerala demanding a Judicial Enquiry.
    CPM in Kerala immediately passes a law preventing Ants from working hard
    in the heat so as to bring about equality of poverty among Ants and
    Grasshoppers.
    Lalu Prasad allocates one free coach to Grasshoppers on all Indian Railway
    Trains, aptly named as the ‘Grasshopper Rath’.
    Finally, the Judicial Committee drafts the ‘ Prevention of Terrorism
    Against Grasshoppers Act’ [POTAGA], with effect from the beginning of the
    winter.
    Arjun Singh makes ‘Special Reservation ‘ for Grasshoppers in Educational
    Institutions & in Government Services.
    The Ant is fined for failing to comply with POTAGA and having nothing left
    to pay his retroactive taxes,it’s home is confiscated by the Government
    and handed over to the Grasshopper in a ceremony covered by NDTV.

    Lalu calls it ‘Socialistic Justice ‘.

    CPM calls it the ‘ Revolutionary Resurgence of the Downtrodden ‘

    Koffi Annan invites the Grasshopper to address the UN General Assembly.
    Many years later…
    The ant has since migrated to the US and set up a multi-billion dollar company in Silicon Valley,
    100s of Grasshoppers still die of starvation despite reservation somewhere in India,
    ..AND

    As a result of loosing lot of hard working Ants and feeding the
    grasshoppers,

    India is still a developing country…!!!
    WHY ? 75% of Indians are DEVELOPERS

  10. lovely lamp says:

    testing,anu, really a good story…….. poor democracy and secularism………