Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ?

ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ?

ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ?

ನಾನೂ ಅವರನ್ನು ಬಹಳಷ್ಟು ಸಲ ಕಟುವಾಗಿ ಟೀಕಿಸಿ ಬರೆದಿದ್ದೇನೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ    ಹುಟ್ಟುವೆ, ಕನಾ೯ಟಕದಲ್ಲಿ ಹುಟ್ಟಬಾರದಿತ್ತು, ಮೋದಿ ಪ್ರಧಾನಿಯಾದರೆ ಕನಾ೯ಟಕವನ್ನೇ ತೊರೆಯುವೆ… ಇನ್ನು ಮುಂತಾದ ಹೇಳಿಕೆಗಳು, ಅಲ್ಪಸಂಖ್ಯಾತರನ್ನು ಓಲ್ಯೆಸಲು ಹಿಡಿಯುವ ಮಾಗ೯, ಭಾಷಣಕ್ಕೆ ನಿಂತಾಗ ಬೇಕೆಂದ ಕೂಡಲೇ ಹೊರಬರುವ ಅಶ್ರುಧಾರೆ, ಅವರ ರಾಜಕೀಯ ತಂತ್ರ, ಕುತಂತ್ರ, ಒಳ ಏಟುಗಳು ನಮ್ಮನ್ನೆಲ್ಲ ಆಗಾಗ್ಗೆ ಸಿಟ್ಟಿಗೇಳಿಸಿದ್ದೂ ಇದೆ. ಅದರಲ್ಲೂ ತಮಗೆ ಸರಿಸಮನಾಗಿ ರೈತ ನಾಯಕನಾಗಿ ಬೆಳೆದ ಬಿ.ಎಸ್. ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಲು ಬಿಡಲಿಲ್ಲ ಎಂದಾಗಲಂತೂ ಅಕ್ಷರಶಃ ಅವರನ್ನು ದ್ವೇಷಿಸಿದ್ದೂ  ಇದೆ. ರಾಜಕೀಯ ಕ್ಷೇತ್ರದಲ್ಲಿ ಸಂಸಾರವನ್ನು ಸಮಾಧಾನಪಡಿಸಲು ಹೋಗಿ ಕೌಟುಂಬಿಕ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟ ಪರಿಯನ್ನು ಕಂಡು ರೇಜಿಗೆ ಹುಟ್ಟಿಸಿದ್ದೂ ಇದೇ.

ಆದರೂ…

  ಮತ್ತೆ ಮತ್ತೆ ಕಾಡುವ ಪ್ರಶ್ನೆಯೇನೆಂದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೆಂದರೆ ಇಷ್ಟೇನಾ? ಇಷ್ಟೇ ಆಗಿದ್ದರೆ ಅವರನ್ನು ಗೌರವಿಸುವ, ಪ್ರೀತಿಸುವ, ಬೆನ್ನಿಗೆ ನಿಲ್ಲುವ ಇಷ್ಟೊಂದು  ದೊಡ್ಡ ವಗ೯ ಹೇಗೆ ತಾನೇ ಸೃಷ್ಟಿಯಾಗುತ್ತಿತ್ತು?

ಇಷ್ಟಕ್ಕೂ ದೇವೇಗೌಡರು ಈ ರಾಜ್ಯಕ್ಕೆ ಕೊಟ್ಟ ಕೊಡುಗೆಯಾದರೂ ಏನು?
ಜೂನ್ 1ಕ್ಕೆ ಅವರು ಪ್ರಧಾನಿಯಾಗಿ 20 ವಷ೯ ತುಂಬಲಿದೆ. ಆ ಸಂದಭ೯ದಲ್ಲಿ ಪ್ರಧಾನಿಯಾಗಿ ದೇವೇಗೌಡರು ಮಾಡಿದ ಕೆಲಸವಾದರೂ ಏನು ಎಂದು ಕೇಳಿದರೆ, ಹೇಳಿಕೊಳ್ಳಲು ಏನಿದೆ?

  “Had Mr. Deve Gowda completed the full term of five years, then he would have been the best Prime Minister after Pandit Jawaharlal Nehru’, ಒಂದುವೇಳೆ ಎಚ್.ಡಿ. ದೇವೇಗೌಡರೇನಾದರೂ ಐದು ವಷ೯ ಅಧಿಕಾರಾವಧಿ ಪೂರೈಸಿದ್ದರೆ ಪಂಡಿತ್ ಜವಾಹರಲಾಲ್ ನೆಹರು ನಂತರ ಭಾರತ ಕಂಡ ಅತ್ಯುತ್ತಮ ಪ್ರಧಾನಿಯಾಗಿರುತ್ತಿದ್ದರು ಎಂದು ಟಿಎಸ್‍ಆರ್ ಸುಬ್ರಹ್ಮಣ್ಯನ್ ಹೇಳಿದಾಗ ನಿಜಕ್ಕೂ ಆಶ್ಚಯ೯ ಹಾಗೂ ದಿಗ್ಬಮೆ ಎರಡೂ ಆಗಿತ್ತು!
ಅವರು ಹೇಳುತ್ತಿರುವುದು ನಿಜಾನಾ ಎಂಬ ಗೊಂದಲವುಂಟಾಗಿತ್ತು. ಈ ಸುಬ್ರಹ್ಮಣ್ಯನ್ ಮತ್ತಾರೂ ಅಲ್ಲ, ದೇವೇಗೌಡರು ಪ್ರಧಾನಿಯಾಗಿದ್ದಾಗ ಕ್ಯಾಬಿನೆಟ್ ಸೆಕ್ರೆಟರಿ ಆಗಿದ್ದರು.

ಸಾಮಾನ್ಯವಾಗಿ ಈ ಫಾ ರಿನ್ ಸೆಕ್ರೆಟರಿ, ಕ್ಯಾಬಿನೆಟ್ ಸೆಕ್ರೆಟರಿ ಅಥವಾ ಪ್ರಧಾನಿಯವರ ಪ್ರೈವೇಟ್  ಸೆಕ್ರೆಟರಿಗಳು ನಿವೃತ್ತಿಯ ನಂತರ ಅನುಭವದ ಪುಸ್ತಕ ಬರೆದರೆ ಹೆಚ್ಚಾಗಿ ತಮ್ಮನ್ನು ವೈಭವೀಕರಿಸಿಕೊಂಡು, ಉಳಿದವರ ಹುಳುಕನ್ನೇ ತೋರಿಸಿಬಿಡುತ್ತಾರೆ. ಆದರೆ ಟಿಎಸ್‍ಆರ್ ಸುಬ್ರಹ್ಮಣ್ಯನ್ ಬರೆದಿರುವ “Journeys Through Babudom and Netaland Governance in India’ ಮತ್ತು “India at Turning Point, the Road to Good Governance’ ಪುಸ್ತಕಗಳನ್ನು ಓದಿದರೆ ಕೆಲವು ಆಶ್ಚಯ೯ಕರ ಸಂಗತಿಗಳು ತಿಳಿದುಬರುತ್ತವೆ.

ಅವುಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಬಹಳ ಗೌರವದಿಂದಲೂ ಬರೆಯುತ್ತಾರೆ, ಅದಕ್ಕೆ ಸೂಕ್ತ ಕಾರಣವನ್ನೂ ಆಧಾರ ಸಮೇತ ಕೊಡುತ್ತಾರೆ. ನಾವೆಲ್ಲ ತಿಳಿದಿರುವಂತೆ ಭಾರತ ರಾಷ್ಟ್ರೀಯ ಹೆದ್ದಾರಿ ನಿಮಾ೯ಣಕ್ಕೆ ಹೊಸ ದಿಕ್ಕನ್ನೇ ತೋರಿದವರು ಅಟಲ್ ಬಿಹಾರಿ ವಾಜಪೇಯಿ. ಆದರೆ ದೇಶ ಅಭೀವೃದ್ಧಿ ಹೊಂದಬೇಕಾದರೆ ರಾಷ್ಟ್ರೀಯ ಹೆದ್ದಾರಿ ನಿಮಾ೯ಣ ಅತ್ಯಗತ್ಯ ಎಂಬುದನ್ನು ಮನಗಂಡು ಹೆದ್ದಾರಿ ನಿಮಾ೯ಣದ ರಹದಾರಿ ಬಗ್ಗೆ ಕ್ಯಾಬಿನೆಟ್ ನಿಧಾ೯ರ ಕೈಗೊಂಡು ಚಾಲನೆ ನೀಡಿದ್ದು ದೇವೇಗೌಡರು. ಇಷ್ಟು ಮಾತ್ರವಲ್ಲ, ಕಾಂಗ್ರೆ ಸ್‍ನವರು ತಮ್ಮ ಕೂಸು ಎಂದು ಕೊಚ್ಚಿಕೊಳ್ಳುವ ಮಾಹಿತಿ ಹಕ್ಕು (RTI), ದಿಲ್ಲಿ ಮೆ ಟ್ರೋ, ಲೋಕಪಾಲ ಮಸೂದೆ, ಮಹಿಳಾ ಮೀಸಲು ವಿಧೇಯಕ, ಪೆ ಟ್ರೋಲಿಯಂ ಕ್ಷೇತ್ರದಲ್ಲಿ ಹೊಸ ಶೋಧನೆ ಹಾಗೂ ಲ್ಯೆಸೆನ್ಸ್ ನೀಡಿಕೆ ಮುಂತಾದ ದೇಶದ ಭವಿಷ್ಯಕ್ಕೇ ಹೊಸ ದಿಕ್ಕು ತೋರಿದ ನಿಧಾ೯ರಗಳನ್ನು ಕೈಗೊಂಡಿದ್ದು ದೇವೇಗೌಡರು ಹಾಗೂ ಗುಜ್ರಾಲ್ ಪ್ರಧಾನಿಯಾಗಿದ್ದಾಗ. ಆ ಕಾರಣಕ್ಕೇ “India at Turning Point, the Road to Good Governance’ ಎಂದು ಸುಬ್ರಹ್ಮಣ್ಯನ್ ತಮ್ಮ ಪುಸ್ತಕಕ್ಕೆ ಹೆಸರಿಟ್ಟಿದ್ದು.

   ಇನ್ನು ನಮ್ಮ ರಾಜ್ಯದ ವಿಚಾರಕ್ಕೆ ಬರುವುದಾದರೆ, ಕನಾ೯ಟಕದ ಮುಖ್ಯಮಂತ್ರಿಗಳಲ್ಲಿ ನೀರಾವರಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟವರು ಯಾರೆಂದು ಹುಡುಕಿದರೆ ನಮಗೆ ಕಾಣುವುದು ಎಚ್.ಡಿ. ದೇವೇಗೌಡರು. ನೀರಿದ್ದರೆ ಮಾತ್ರ ಎಲ್ಲವೂ ಎಂಬುದನ್ನು ಮೊದಲು ಮನಗಂಡವರೂ ಅವರೇ. ಅವರ ಯಾವ ಯೋಜನೆಗಳೇ ಇರಲಿ ನೀರಾವರಿ ಎಂಬ ಅಡಿಪಾಯದಿಂದಲೇ ಆರಂಭವಾಗುತ್ತಿದ್ದವು. ಅವರ ರಾಜಕೀಯ ನಡೆಗಳ ಬಗ್ಗೆ ಜನ ಏನೇ ಆಡಿಕೊಂಡರೂ ಅವರ ನೀರಾವರಿ ಯೋಜನೆಗಳ ಬಗ್ಗೆ ಎಲ್ಲರೂ ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಕನಾ೯ಟಕದ ಹತ್ತನೆಯ ಮುಖ್ಯಮಂತ್ರಿಗಳವರೆಗೆ ನಮ್ಮ ನೀರಿನ ಹಕ್ಕುಗಳ ಬಗ್ಗೆ ಒಂದು ದೃಢವಾದ ನಿಲುವು ನಮ್ಮಲ್ಲಿ ವ್ಯಕ್ತವಾಗಿರಲೇ ಇಲ್ಲ. ಹಿಂದಿನ ಸರಕಾರಗಳು ರಾಜ್ಯದ ನೀರಿನ ಹಕ್ಕಿನ ಬಗ್ಗೆ ಸ್ವರ ಎತ್ತಿದ್ದರಾದರೂ ಯಾಕೋ ಕೇಂದ್ರ ಸರಕಾರದ ಮುಲಾಜಿಗೆ ಒಳಗಾದಂತೆ ಇದ್ದವು. ಅವರು ಕೃಷ್ಣಾ ನದಿ ನೀರು ಹಂಚಿಕೆಯನ್ನು ತಮ್ಮ ಆಡಳಿತದ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡವರು. ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗುತ್ತಿದ್ದ ಅನ್ಯಾಯವನ್ನು ಜನ ಸಮಾನ್ಯನಿಗೂ ಮುಟ್ಟಿಸಿ, ಅದನ್ನು ಚಳವಳಿಯ ಸ್ವರೂಪಕ್ಕೆ ತಂದವರು. ಆ ಸಾಧನೆಯ ಪಟ್ಟವನ್ನು ಎಚ್.ಡಿ. ದೇವೇಗೌಡರಿಗಲ್ಲದೆ ಇನ್ಯಾರಿಗೆ ಕೊಡೋಣ? ಒಂದು ವೇಳೆ ರಾಜ್ಯಕ್ಕೆ ದೇವೇಗೌಡರ ಶ್ರಮವಿಲ್ಲದೆ ಇರುತ್ತಿದ್ದರೆ ಮುಂದಿನ ಮುಖ್ಯಮಂತ್ರಿಗಳಿಗೆ ಬೆಂಗಳೂರನ್ನು ಸಿಂಗಾಪುರ ಮಾಡುವ ಕಲ್ಪನೆಯೇ ಬರುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ.

    1962ನೇ ಇಸವಿ. ದೇವೇಗೌಡರಿಗೆ ಆಗ ಕೇವಲ 29 ವಷ೯ ವಯಸ್ಸು. ಯುವ ರಾಜಕಾರಣಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು, ತನಗೆ ಟಿಕೆಟ್ ಕೊಡದ ಕಾಂಗ್ರೆ ಸಿಗೆ ಸೆಡ್ಡು ಹೊಡೆದು ಸ್ವತ೦ತ್ರ ಅಭ್ಯಥಿ೯ಯಾಗಿ ಗೆದ್ದಿದ್ದರು. ಆ ಹೊತ್ತಲ್ಲೂ ಕೂಡ ಕೃಷ್ಣಾ-ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿತ್ತು. ಆಡಳಿತ ಪಕ್ಷ ಎಂದಿನಂತೆ ಕೇಂದ್ರದ ಮುಲಾಜಿಗೆ ಬಿದ್ದಂತೆ ಇತ್ತು. ಪರಿಣಾಮ ರಾಜ್ಯದ ಜನ ಈ ಅನ್ಯಾಯವನ್ನು ಸರಿಪಡಿಸಲು ಯಾವ ರಾಜಕಾರಣಿಗಳಿಂದಲೂ ಸಾಧ್ಯವಿಲ್ಲ ಎಂದು ಮಾತಾಡಿಕೊಳ್ಳುತ್ತಿದ್ದರು. ಕೇಂದ್ರ ಕೂಡ ಅದನ್ನೊಂದು ಮಹತ್ವದ ಸಂಗತಿ ಎಂದು ಭಾವಿಸುತ್ತಿರಲಿಲ್ಲ. ರೈತನ ಮಗನಾಗಿ ಹುಟ್ಟಿದ ದೇವೇಗೌಡರಿಗೆ ಹೇಗಾದರೂ ಈ ಅನ್ಯಾಯವನ್ನು ಸರಿಪಡಿಸಬೇಕು ಎನಿಸುತ್ತಿತ್ತು. ಆರಂಭದಿಂದಲೂ ದೇವೇಗೌಡರು ನೀರಿನ ಹಂಚಿಕೆಯ ಬಗ್ಗೆ ಮಾತಾಡಲಾರಂಭೀಸಿದರು. ವಿಧಾನಸೌಧದಲ್ಲಿ ನೀರಿನ ಚಚೆ೯ ಕಾವೇರತೊಡಗಿತು. ಜನ ನೀರಿನ ಬಗ್ಗೆ ಚಚೆ೯ ಮಾಡಲಾರಂಭೀಸಿದರು. ಪತ್ರಿಕೆಗಳು ಬರೆದವು.

ನೋಡನೋಡುತ್ತಿದ್ದಂತೆಯೇ ಅಂತಾರಾಜ್ಯ ನೀರಿನ ಸಮಸ್ಯೆ ದೇಶದ ಜ್ವಲಂತ ಸಮಸ್ಯೆಯಾಗಿ ಕಾಣತೊಡಗಿತು. ರಾಜ್ಯದ ಧ್ವನಿ ದೆಹಲಿಗೆ ಮುಟ್ಟಿತು. ದೇವೇಗೌಡರು ಜಿದ್ದಿಗೆ ಬಿದ್ದರು. ಕೋಟಿ೯ಗೆ ಹೋದರು. ಚಳವಳಿ ಮಾಡಿದರು. ಜನರನ್ನು ಸಂಘಟಿಸಿದರು. ಈ ಹೋರಾಟದ ಪರಿಣಾಮ 90ರ ದಶಕದಲ್ಲಿ ರಾಜ್ಯಕ್ಕೆ ನ್ಯಾಯದ ಭರವಸೆ ಬರಲಾರಂಭೀಸಿತ್ತು. ಅವರ ನೀರಿನ ಹೋರಾಟ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿಯೂ ಮಾಡಿತು. 1983ರಲ್ಲಿ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದ ಹೊತ್ತಲ್ಲಂತೂ ದೇವೇಗೌಡರು ರಾಜ್ಯ ಮರೆಯದ ಹಲವು ನೀರಾವರಿ ಯೋಜನೆ ಜಾರಿಗೆ ತಂದರು. ಕೃಷ್ಣಾ-ಕಾವೇರಿ ನದಿ ನೀರಿನ ಬಗ್ಗೆ ದೇವೇಗೌಡರಿಗೆ ತಮ್ಮದೇ ಆದ ಹಲವು ಕನಸುಗಳಿದ್ದವು. ತಾವು ಸಚಿವರಾಗಿದ್ದರೂ ಕೆಲವು ಯೋಜನೆಗಳು ಈಡೇರಲಾರದೆಂಬ ನೋವೂ ಅವರನ್ನು ಕಾಡುತ್ತಿತ್ತು. ದೇವೇಗೌಡರು ಹಿಂದೆ ಮುಂದೆ ಆಲೋಚನೆ ಮಾಡಲಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರತ್ತ ನಡೆದರು. ರೈತರಿಗಾಗಿ, ನೀರಾವರಿಗಾಗಿ ಇಷ್ಟು ಹೋರಾಟ ಮಾಡಿದ ಕೆಲವೇ ಕೆಲವು ಹೋರಾಟಗಾರರ ಪ್ಯೆಕಿ ದೇವೇಗೌಡರು ಒಬ್ಬರು. ಅಷ್ಟು ಮಾತ್ರವಲ್ಲ, 1964ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಸ್ವತಂತ್ರ ಶಾಸಕನಾಗಿ ಕಾವೇರಿ ನದಿ ಪಾತ್ರದಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಬೇಕೆಂಬ ಖಾಸಗಿ ವಿಧೇಯಕ ಮಂಡಿಸಿ ಸವಾ೯ನುಮತದಿಂದ ಅಂಗೀಕಾರವಾಗುವಂತೆ ಮಾಡಿ ಹಳೇ ಮ್ಯೆಸೂರಿನ ಜನರ ಮನ ಗೆದ್ದಿದ್ದರು.

    ನಮ್ಮ ದಕ್ಷಿಣ ಕನಾ೯ಟಕಕ್ಕೆ ಕಾವೇರಿ ಹೇಗೋ ಉತ್ತರ ಕನಾ೯ಟಕಕ್ಕೆ ಕೃಷ್ಣೆ. ಆದರೆ ಉತ್ತರ ಕನಾ೯ಟಕದ ಜನರಿಗೆ ಕೃಷ್ಣದೇವರಾಯನ ಕಾಲದಲ್ಲಿ ಕೃಷ್ಣೆ ಏನು ಉದ್ದಾರವಾಗಿತ್ತೋ ಅಷ್ಟು ಮಾತ್ರ ದಕ್ಕಿತ್ತು. ಕೃಷ್ಣಾ ನದಿ ನೀರಿನ ಸಮಪ೯ಕ ಬಳಕೆಯ ಬಗ್ಗೆ ತಜ್ಞರು ಸಾಕಷ್ಟು ಯೋಜನೆಗಳನ್ನು ಹಾಕಿದ್ದರೂ ಯೋಜನೆ ಮುಂದೆ ಸಾಗಿರಲಿಲ್ಲ. ದುಬಾರಿ ಯೋಜನೆ ಎಂದು ನನೆಗುದಿಗೆ ಬಿದ್ದಿತ್ತು. ಕೃಷ್ಣಾ ಯೋಜನೆಗೆ ಯಾವುದೇ ಸರಕಾರಗಳು ಮುತುವಜಿ೯ ವಹಿಸುವಂತೆ ಕಾಣಲಿಲ್ಲ. ಆದರೆ ಬೆಟ್ಟದಂಥ ಸಮಸ್ಯೆಯನ್ನು ದೇವೇಗೌಡರು ಹೂವಿನಂತೆ ಬಗೆಹರಿಸಿದರು. ನಿಜಲಿಂಗಪ್ಪನವರ ಕಾಲದಲ್ಲಿ ಯೋಜಿತ ಕಾಯ೯ಕ್ರಮಕ್ಕೆ ಕಾಯಕಲ್ಪ ಕೊಟ್ಟವರು ದೇವೇಗೌಡರು. ಅದರ ಯಶಸ್ವಿಗಾಗಿ ಕೃಷ್ಣಾ ಜಲಭಾಗ್ಯ ನಿಯಮ ಸ್ಥಾಪಿಸಿದ ಶ್ರೇಯಸ್ಸು ಗೌಡರದ್ದು. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 500 ಕೋಟಿ ರು.ಗಳನ್ನು ಗೌಡರು ಬಿಡುಗಡೆ ಮಾಡಿದರು. ಅಲ್ಲದೆ ಯೋಜನೆಯಿಂದ ಭೂಮಿ ಕಳೆದುಕೊಂಡ 58 ಗ್ರಾಮಗಳ ಜನರ ಪುನವ೯ಸತಿಗಾಗಿ 830 ಕೋಟಿಗಳನ್ನು ಮೀಸಲಿಟ್ಟರು. ಆ ಸಮಯದಲ್ಲಿ ದೇವೇಗೌಡರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದವು. ಯೋಜನೆಗಳಿಗಿಂತ ಹಳ್ಳಿಗಳ ಅಭೀವೃದ್ಧಿಗೆ ಹಣವನ್ನು ಒದಗಿಸಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಆದರೆ ದೇವೇಗೌಡರ ಅಸಲಿ ಉದ್ದೇಶ ನೀರಾವರಿಯ ಜತೆಗೆ ಭೂಮಿ ಕಳೆದುಕೊಂಡ ರೈತರ ಶ್ರೇಯೋಭೀವೃದ್ಧಿಯೂ ಆಗಿತ್ತು. ಯಾವ ರೈತನೂ ಯೋಜನೆಗಳಿಂದ ಮನೆಮಠಗಳನ್ನು ಕಳೆದುಕೊಳ್ಳಬಾರದು ಎಂಬ ಚಿಂತನೆಯಿಂದ ದೇವೇಗೌಡರು ಯೋಜನೆಗಳಿಗಿಂತ ರೈತರ ಶ್ರೇಯೋಭೀವೃದ್ಧಿಗೆ ಹಣ ಮೀಸಲಿಟ್ಟರು.

  1970ರಲ್ಲಿ “ಬಿನ್ನಿ ಮಿಲ್’ ಕಾಖಾ೯ನೆ ಸ್ಥಗಿತಗೊಂಡಾಗ ಅಲ್ಲಿನ ಕಾಮಿ೯ಕರಿಗೆ ಮಾಡಿದ ಸಹಾಯವನ್ನು ಇಂದಿಗೂ ಜನ ನೆನಪು ಮಾಡಿಕೊಳ್ಳುತ್ತಾರೆ. ರೈತರು ಮತ್ತು ಕಾಮಿ೯ಕರು ಸಮಾನ ದುಃಖಿಗಳು ಎಂಬುದನ್ನು ಅಥ೯ಮಾಡಿಕೊಂಡ ಅಪರೂಪದ ರಾಜಕಾರಣಿ ದೇವೇಗೌಡರು. ರೈತರು ಮತ್ತು ಕಾಮಿ೯ಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಾಗ ಲಾಠಿ ಚಾಜ್‍೯ ನಡೆಯುವ ಈ ಕಾಲದಲ್ಲಿ ದೇವೇಗೌಡರ ಮಾನವೀಯ ನಡೆಗಳು ನೆನಪಾಗುತ್ತವೆ. ವಿದ್ಯುತ್ ಕೊರತೆಯುಳ್ಳ ಗ್ರಾಮಕ್ಕೂ ದಿನದಲ್ಲಿ ಸತತ 10 ಗಂಟೆ ವಿದ್ಯುತ್ ಪೂರೈಕೆ ಮಾಡಿದವರು ದೇವೇಗೌಡರು. ರೈತರ ಫಸಲನ್ನು ಕಾಪಾಡಲು ರಾಜ್ಯಾದ್ಯಂತ ಹಲವು ಸುಸಜ್ಜಿತ ದಾಸ್ತಾನು ಮಳಿಗೆಗಳನ್ನು ರಾಜ್ಯದಲ್ಲಿ ಸ್ಥಾಪಿಸಿದರು. ದೇಶದಲ್ಲೇ ಮೊಟ್ಟಮೊದಲು “ರಾಷ್ಟ್ರೀಯ ಕೃಷಿ ಯೋಜನೆ’ ಜಾರಿಗೆ ತರಲು ಕೇಂದ್ರ ಸರಕಾರವನ್ನು ಒತ್ತಾಯಿಸಿದ ಮೊದಲ ಮುಖ್ಯಮಂತ್ರಿ ಗೌಡರು

. ಹಿಂದಿನ ಸರಕಾರಗಳು ವಿದ್ಯಾವಂತ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಲ್ಲಿ ಸೋಲುತ್ತಿದ್ದವು. ಆದರೆ ಗ್ರಾಮೀಣ ವಿದ್ಯಾವಂತರಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲು ಆರಂಭವಾದದ್ದು ಗೌಡರ ಕಾಲದಲ್ಲಿ. ಪಡಿತರ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಅವ್ಯವಹಾರ ಮತ್ತು ಕೊರತೆ ನೀಗಿಸಲು ‘ಗ್ರೀ ನ್ ಕಾಡ್‍೯’ ಯೋಜನೆ ಜಾರಿಗೆ ತಂದರು. ರಾಜ್ಯ ಪಡಿತರ ವ್ಯವಸ್ಥೆಯಲ್ಲಿ ಹಸಿರು ಕಾಡ್‍೯ ಕ್ರಾಂತಿಯನ್ನೇ ಮಾಡಿತ್ತು. ಬಡತನ ರೇಖೆಯ ಕೆಳಗಿದ್ದ 65 ಲಕ್ಷ ಕುಟುಂಬಗಳಿಗೆ ಇದು ಸಹಾಯವಾಯಿತು. ದೇಶಕ್ಕೆ ದೇಶವೇ ಮಹಿಳಾ ಮೀಸಲು ಬಗ್ಗೆ ಚಚೆ೯ ನಡೆಸುತ್ತಿದ್ದ ಹೊತ್ತಲ್ಲಿ ಕನಾ೯ಟಕ ಒಂದು ದೇವೇಗೌಡರ ದಿಟ್ಟ ನಿಧಾ೯ರದಿಂದ ಒಂದು ಹೆಜ್ಜೆ ಮುಂದೆ ನಡೆದಿತ್ತು. ಸರಕಾರಿ ಉದ್ಯೋಗಗಳಲ್ಲಿ ಶೇ.30 ರಷ್ಟು ಮೀಸಲನ್ನು ಮಹಿಳೆಯರಿಗೆ ಒದಗಿಸಲಾಯಿತು. ಇಷ್ಟೇ ಅಲ್ಲ, ಸಾಮಾನ್ಯರ ಸರಕಾರ ಎಂಬ ಬಿರುದನ್ನು ದೇವೇಗೌಡರ ಸರಕಾರ ಸುಖಾಸುಮ್ಮನೆ ಸಂಪಾದಿಸಲಿಲ್ಲ. ಅಧಿಕಾರಕ್ಕೇರಿದ ಮೂರು ತಿಂಗಳಿನಲ್ಲಿ ಅವರ ಸರಕಾರ ಕಂದಾಯ ನಿವೇಶನಗಳಾಗಿದ್ದ ಬೆಂಗಳೂರಿನ ಎಷ್ಟೋ ಜಾಗವನ್ನು ಸಾಮಾನ್ಯ ನಿವೇಶನಗಳಾಗಿ ಮಾಡಿತು. ಹಳೆಯದಾಗಿದ್ದ ಭದ್ರಾವತಿ ಸಕ್ಕರೆ ಕಾಖಾ೯ನೆಗೆ ಬೀಗ ಮುದ್ರೆ ಬೀಳುವುದನ್ನು ತಪ್ಪಿಸಲು 600 ಕೋಟಿ ರು. ನೀಡಿ “ಇಂಡಿಯನ್ ಸ್ವೇಲ್ ಇಂಡಸ್ಟ್ರೀಸ್” ಸುಪದಿ೯ಗೆ ಒಪ್ಪಿಸಿದ್ದು, ಹಲವು ಸಕ್ಕರೆ ಕಾಖಾ೯ನೆಗಳನ್ನು ಸ್ಥಾಪನೆ ಮಾಡಿದ್ದು, ಸೀಬಡ್‍೯ ನೌಕಾ ನೆಲೆಗೆ ಹಣ ಒದಗಿಸಿದ್ದು, ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಗಳ ಗುಣಮಟ್ಟ ಏರಿಕೆಯಾಗಿದ್ದು, ಬೆಂಗಳೂರು ಮತ್ತು ಮ್ಯೆಸೂರಿನಲ್ಲಿ ನ್ಯಾಶನಲ್ ಗೇಮ್ಸ್ ಅನ್ನು ನಡೆಸಿದ್ದು, ಪ್ರಧಾನಿಯಾಗಿದ್ದಾಗ ದೇಶದ ನಾನಾ ಭಾಗಗಳಿಗೆ ನಮ್ಮ ಕೆಎಸ್‍ಆರ್‍ಪಿ ತುಕಡಿ ಕಳುಹಿಸಿ ರಾಜ್ಯದ ಪೊಲೀಸ್ ಗೌರವ ಹೆಚ್ಚಿಸಿದ್ದು ದೇವೇಗೌಡರ ಆಡಳಿತದ ಮ್ಯೆಲುಗಲ್ಲುಗಳು. ದೇವೇಗೌಡರು ನೀರಾವರಿ
ಸಚಿವರಾಗುವುದಕ್ಕಿಂತ ಮುನ್ನ ಬೆಂಗಳೂರು ನಗರದ ಒಂದು ಭಾಗಕ್ಕಷ್ಟೇ ಕಾವೇರಿ ನೀರು ಪೂರೈಕೆಯಾಗುತ್ತಿತ್ತು. ಉಳಿದ ಭಾಗಗಳು ನೀರಿನ ಕೊರತೆಯನ್ನು ಅನುಭವಿಸುತ್ತಿದ್ದವು. ಆಗ ಜಾರಿಗೆ ಬಂದಿದ್ದೇ ಕಾವೇರಿ 4ನೇ ಹಂತದ ಯೋಜನೆ.

   ದೇಶದ ನೀರಾವರಿ ಕ್ಷೇತ್ರದಲ್ಲಿ ಇದೊಂದು ಕ್ರಾಂತಿ. ಮಹಾನಗರವೊಂದಕ್ಕೆ ಇಂಥ ಬೃಹತ್ ಯೋಜನೆ ಜಾರಿಗೊಳಿಸಿದ್ದನ್ನು ನಾವು ಕೇಳಿದ್ದು ವಿಶ್ವೇಶ್ವರಯ್ಯನವರಲ್ಲಿ ಮಾತ್ರ. ಅಂಥ ಯೋಜನೆ ಮತ್ತೊಮ್ಮೆ ಸಾಧ್ಯವಾಗಿದ್ದು ದೇವೇಗೌಡರಿಂದ. ಚೆನ್ನಪಟ್ಟಣ ತಾಲೂಕು ಸಂಪೂಣ೯ ಜಂಜರು ಭೂಮಿಯಾಗುವುದನ್ನು ತಪ್ಪಿಸಿದ ಶ್ರೇಯಸ್ಸು ಇದೇ ದೇವೇಗೌಡರದ್ದು. ವಿಶ್ವೇಶ್ವರಯ್ಯನವರು ಮ್ಯೆಸೂರು- ಮೌಡ್ಯಕ್ಕೆ ಹೇಗೆ ನೀರನ್ನು ಹರಿಸಿದ್ದರೋ ಅದೇ ಎಂಜಿನಿಯರಿಂಗ್ ತಂತ್ರದಿಂದ ದೇವೇಗೌಡರು ಇಗ್ಲೂರು ಅಣೆಕಟ್ಟನ್ನು ಕಟ್ಟಿ ಚೆನ್ನಪಟ್ಟಣಕ್ಕೆ ನೀರು ತಂದರು.

   ಇವುಗಳ ಜತೆಗೆ ದೇವೇಗೌಡರಿಂದ ಉಪಕೃತವಾದ ದೊಡ್ಡ ಅಧಿಕಾರಿ ವಗ೯ವೂ ಇದೆ. ಹಾಗಾಗಿ ಯಾರೇ ಅಧಿಕಾರಕ್ಕೆ ಬಂದರೂ ಆಳುವವರು ಮಾಡುವ ಅವ್ಯಹಾರದ ಫೈಲುಗಳು ಅನಾಯಾಸವಾಗಿ ಗೌಡರ ಮನೆಗೆ ಮೊದಲು ಬರುತ್ತವೆ!

ಅಧಿಕಾರವಿಲ್ಲದಾಗಲೂ ಅಧಿಕಾರಿ ವಗ೯ದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವ ಹಾಗೂ ಅವರ ಗೌರವಕ್ಕೆ ಭಾಜನರಾಗುವ ಏಕಮಾತ್ರ ನಾಯಕ ಗೌಡರು. ಅವರನ್ನು ಬಹಳಷ್ಟು ಜನರು ಇಷ್ಟಪಡಲು ಮತ್ತೊಂದು ಕಾರಣವೂ ಇದೆ. ಈಗಿನ ರಾಜಕಾರಣಿಗಳು ಮೊದಲು ಡೀಲ್ ಫಿಕ್ಸ್ ಆಗಿ, ಪೇಮೆಂಟ್ ಆದ ಮೇಲೆ ಕೆಲಸ ಮಾಡಿಕೊಡುತ್ತಾರೆ. ಆದರೆ ದೇವೇಗೌಡರು ಕೆಲಸ ಮಾಡಿಕೊಟ್ಟ ಮೇಲೂ ಕೈ ನೋಡುವುದಿಲ್ಲ, ಕಾಸಿಗಾಗಿ ಕಡತವನ್ನು ತಡೆಹಿಡಿಯುವ ಜಾಯಮಾನ ಅವರದ್ದಲ್ಲ. ಚುನಾವಣೆ ಸಂದಭ೯ದಲ್ಲೂ ಬಾಯ್ಬಿಟ್ಟು ಕೇಳಲ್ಲ, ಸ್ವಯಿಚ್ಚೆಯಿಂದ ಸಹಾಯ ಹರಿದುಬರುತ್ತದೆ.

   ಅದು 1996, ಜೂನ್ 1. ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕ್ಯಾಬಿನೆಟ್ ಸೆಕ್ರೆಟರಿ ಟಿಎಸ್ ಆರ್ ಸುಬ್ರಹ್ಮಣ್ಯನ್‍ಗೆ ಬುಲಾವ್ ಹೋಗಿತ್ತು. ಇಬ್ಬರೇ ಕುಳಿತಿದ್ದರು. “ನೋಡಿ ಸುಬ್ರಹ್ಮಣ್ಯನ್ ಅವರೇ, ನಾನು ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ವಷ೯ಗಳನ್ನು ಕಳೆದಿದ್ದೇನೆ, ಬಹಳಷ್ಟು ವಿಚಾರಗಳನ್ನು ನೋಡಿದ್ದೇನೆ. ಜೀವನಕ್ಕೆ ಸಾಕಾಗುವಷ್ಟು ಇದೆ. ಪ್ರಧಾನಿಯಾಗಿ ಸೇವೆ ಮಾಡುವ ಅವಕಾಶವನ್ನು ದೇವರು ಅನಿರೀಕ್ಷಿತವಾಗಿ ಕೊಟ್ಟಿದ್ದಾನೆ. ನಾನು ಪ್ರಾಮಾಣಿಕವಾಗಿ, ನೇರ ನಡತೆಯಿಂದ ಕೆಲಸ ಮಾಡಬೇಕು. ಅದಕ್ಕೆ ನೀವು ಮತ್ತು ಸತೀಶ್ ಚಂದ್ರನ್(ಪ್ರಿನ್ಸಿಪಲ್ ಸೆಕ್ರೆಟರಿ) ಸಹಾಯ ಮಾಡಬೇಕು. ನನ್ನ ಮಕ್ಕಳು ಮತ್ತು ಕುಟುಂಬದವರು ತಮ್ಮ ಹಿತಾಸಕ್ತಿಗೆ ನನ್ನ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳಲು ಯತ್ನಿಸಿದರೂ ನೀವು ಅದಕ್ಕೆ ದಾರಿ ಮಾಡಿಕೊಡಬಾರದು’ ಎನ್ನುತ್ತಾರೆ ಗೌಡರು. ಸುಬ್ರಹ್ಮಣ್ಯನ್‍ಗೆ ಗೌಡರ ಬಗ್ಗೆ ಗೌರವ, ಅಭೀಮಾನ ಶುರು ವಾಗುತ್ತದೆ. ಕಾಲಾಂತರದಲ್ಲಿ ಗೌಡರ ಯೋಚನೆಗೆ ವಿರುದ್ಧವಾದ ಘಟನೆಗಳು ನಡೆದಿವೆ,
ಅಸಹಾಯಕತೆಯಿಂದ ಕೆಲವೊಂದನ್ನು ನೋಡಿ ಸುಮ್ಮನಾಗಿದ್ದಾರೆ, ಬಣ್ಣವನ್ನೆಲ್ಲ ಮಸಿ ನುಂಗಿತ್ತು ಎಂಬಂತೆ ಜನ ಏನೆಂದುಕೊಂಡಾರು ಎಂಬು ದನ್ನು ಲೆಕ್ಕಿಸದೇ ತೆಗೆದುಕೊಳ್ಳುವ ಅವರ ಎಗ್ಗಿಲ್ಲದ ರಾಜಕೀಯ ನಿಧಾ೯ರಗಳೂ ಅವರ ಎಷ್ಟೋ ಕೊಡುಗೆಗಳನ್ನು ಮರೆ ಯುಂತೆ ಮಾಡಿವೆ. ಆದರೆ ಇಂದು ನೆನಪು ಮಾಡಿಕೊಳ್ಳುವ ಸಂದಭ೯ ಬಂದಿದೆ.

ಒಮ್ಮೆ ಸುಬ್ರಹ್ಮಣ್ಯನ್ ಅವರನ್ನು “ನೀವು ಜತೆಯಾಗಿ ಕೆಲಸ ಮಾಡಿದ ಅತ್ಯುತ್ತಮ ಪ್ರಧಾನಿ ಯಾರಾಗಿದ್ದರು?’ ಎಂದು ಕೇಳಿದಾಗ, “ನಾನು ವಾಜಪೇಯಿಯವರ ಜತೆ ಕೆಲಸ ಮಾಡಿಲ್ಲ, ಗುಜ್ರಾಲ್ ಒಬ್ಬ ವಿದ್ವಾಂಸರಂತಿದ್ದರು. ಆದರೆ ಭಾರತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೇವೇಗೌಡರಿಗೆ ಎಲ್ಲರಿಗಿಂತ ಹೆಚ್ಚು ಅರಿವಿದೆ’ ಎಂದಿದ್ದರು. ಬಹುಶಃ ಆ ಕಾರಣಕ್ಕೇ ಏನೋ ಪ್ರಧಾನಿ ನರೇಂದ್ರ ಮೋದಿಯವರೂ ದೇವೇಗೌಡರ ಜತೆ ಆಗಾಗ್ಗೆ ಮಾತುಕತೆ ನಡೆಸುತ್ತಿರುತ್ತಾರೆ.

   ಇಂದು ಗೌಡರು 83 ತು೦ಬಿ 84ನೇ ವಷ೯ಕ್ಕೆ ಕಾಲಿಡುತ್ತಿದ್ದಾರೆ. ಗುಣಕ್ಕೇಕೆ ಮತ್ಸರ ಅಲ್ವಾ?

Attachments area

hddn

Comments are closed.