Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಗಣೇಶ್ ಮಾತಾಡಿದರೆ ಚಂಪಾ ನಾಲಗೆಯೇಕೆ ತುರಿಸುತ್ತದೆ?

ಗಣೇಶ್ ಮಾತಾಡಿದರೆ ಚಂಪಾ ನಾಲಗೆಯೇಕೆ ತುರಿಸುತ್ತದೆ?

ನಾಲ್ಕೂವರೆ ವರ್ಷಗಳ ಹಿಂದಿನ ಮಾತು.
೨೦೦೪, ಆಗಸ್ಟ್‌ನಲ್ಲಿ ಖ್ಯಾತ ‘ಔಟ್‌ಲುಕ್’ ವಾರಪತ್ರಿಕೆ ಒಂದು ವಿಶೇಷ ಸಂಚಿಕೆಯನ್ನು ಹೊರ ತಂದಿತು. “What if” ಎಂಬ ಅದರ ಶೀರ್ಷಿಕೆಯೇ ಸಾಕಿತ್ತು ಓದುಗರ ಗಮನ ಸೆಳೆಯಲು, ಆಸಕ್ತಿ ಹುಟ್ಟಿಸಲು. ಇಂತಹ ಒಂದು ಸಂಚಿಕೆಯನ್ನು ಹೊರತರುವ ಕಲ್ಪನೆ ಹೊಳೆ ದಿದ್ದು ಕರ್ನಾಟಕ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾದ ಮೈಸೂರಿನ ಕೃಷ್ಣ ಪ್ರಸಾದ್ ತಲೆಯಲ್ಲಿ. ಆ ಸಂಚಿಕೆಗೆ ಕೃಷ್ಣ ಪ್ರಸಾದ್ ಅವರೇ ಸಂಪಾದಕರು.

ಒಂದು ವೇಳೆ ಭಾರತ ಇಬ್ಭಾಗವಾಗದೇ ಹೋಗಿದ್ದರೆ
ಒಂದು ವೇಳೆ ಗೋಡ್ಸೆ ಹಾರಿಸಿದ ಗುಂಡು ಗಾಂಧೀಜಿ ಯವರನ್ನು ತಪ್ಪಿ ಹಾರಿದ್ದರೆ
ಒಂದು ವೇಳೆ ನಾವು ಅಣು ಪರೀಕ್ಷೆ ನಡೆಸದೇ ಹೋಗಿದ್ದರೆ
ಒಂದು ವೇಳೆ ಸಂಜಯ್ ಗಾಂಧಿ ಸಾಯದೇ ಇದ್ದಿದ್ದರೆ


ಒಂದು ವೇಳೆ ೧೯೬೨ರ ಯುದ್ಧದಲ್ಲಿ ಭಾರತ ಗೆದ್ದಿದ್ದರೆ
ಒಂದು ವೇಳೆ ಲತಾ ಮಂಗೇಶ್ಕರ್‌ಗೊಬ್ಬರು ಪ್ರತಿಸ್ಪರ್ಧಿ ಇರುತ್ತಿದ್ದರೆ…

ಇಂತಹ ೩೪ What if ಗಳನ್ನಿಟ್ಟುಕೊಂಡು ಒಂದು ಅದ್ಭುತ ಸಂಚಿಕೆಯನ್ನು ಹೊರತಂದಿದ್ದರು. ಇಂಗ್ಲಿಷ್‌ನಲ್ಲಂತೂ What if,  If ಥಿಯರಿಗಳೇ ಇವೆ. ಕಳೆದ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮತಾಂತರದ ಬಗ್ಗೆ ‘ಮತಾಂತರ: ಸತ್ಯದ ಮೇಲೆ ಹಲ್ಲೆ’ ಎಂಬ ವಿಚಾರಸಂಕಿರಣವೊಂದು ಏರ್ಪಾಟಾಗಿತ್ತು. ಶತಾವಧಾನಿ ಆರ್. ಗಣೇಶ್, ಡಾ. ನವರತ್ನ ರಾಜಾರಾಂ, ಡಾ. ಎಂ. ಚಿದಾನಂದಮೂರ್ತಿ ಮುಂತಾದ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ‘ಮತಾಂತರದ ಬಗ್ಗೆ ಎಲ್ಲರೂ ಸಾಕಷ್ಟು ಮಾತನಾಡಿದ್ದು, ಅದೇ ವಿಷಯದ ಬಗ್ಗೆ ಹೇಳುವುದಕ್ಕೆ ನನ್ನಲ್ಲೇನೂ ಉಳಿದಿಲ್ಲ, ಆದರೆ….’ ಎಂದು ಮಾತು ಆರಂಭಿಸಿದ ಎಸ್.ಎಲ್. ಭೈರಪ್ಪನವರು “What if” ಎಂಬ ಪ್ರಶ್ನೆಯನ್ನೆತ್ತಿದ್ದರು. ಆ What if ಅನ್ನು ಎರಡು ಪ್ರಶ್ನೆಗಳಾಗಿ ವಿಂಗಡಿಸಿ ನೋಡೋಣ.
೧) ಒಂದು ವೇಳೆ ಭಾರತ ಇಸ್ಲಾಮಿಕ್ ರಾಷ್ಟ್ರವಾದರೆ?
೨) ಒಂದು ವೇಳೆ ಭಾರತ ಒಂದು ಕ್ರೈಸ್ತ ರಾಷ್ಟ್ರವಾದರೆ?

ಮೊದಲನೇ ಪ್ರಶ್ನೆಗೆ ಖ್ಯಾತ ಸಾಹಿತಿ ಸುಮತೀಂದ್ರ ನಾಡಿಗರು ನಾವೆಲ್ಲರೂ ಅರಿತುಕೊಳ್ಳುವ ಹಾಗೆ ಸರಳವಾಗಿ ವಿವರಿಸಿದ್ದಾರೆ. ಭಾರತ ಇಸ್ಲಾಮನ್ನು ಅಪ್ಪಿಕೊಂಡರೆ ಏನಾದೀತು?

“ನಾವೆಲ್ಲರೂ ಮುಸಲ್ಮಾನರಾಗಿ ಎಲ್ಲ ದೇವಾಲಯಗಳನ್ನೂ ನಾಶಪಡಿಸಿ ದೇಶದ ತುಂಬೆಲ್ಲ ಮಸೀದಿಗಳನ್ನು ಕಟ್ಟಿದ್ದರೆ, ವೇದ ಶಾಸ್ತ್ರ ಪುರಾಣ ಮಹಾಕಾವ್ಯಗಳನ್ನು ಸುಟ್ಟುಹಾಕಿ ಬೈಬಲ್ಲನ್ನೋ, ಕುರಾನನ್ನೋ ಮನೆ ಮನೆಗಳಲ್ಲೂ ಇಟ್ಟುಕೊಂಡರೆ ನಮ್ಮ ದೇಶದಲ್ಲಿ ಬೌದ್ಧರು, ಜೈನರು, ಸಿಖ್ಖರು, ಫಾರ್ಸಿಗಳು ಅನ್ನುವ ಜನಾಂಗಗಳಿಲ್ಲದೆ ಭಾರತದಲ್ಲಿ ಉದ್ದಕ್ಕೂ ಉರ್ದು ಅಥವಾ ಇಂಗ್ಲಿಷ್ ಎರಡೇ ಭಾಷೆಗಳಾದರೆ, ನಾವೆಲ್ಲರೂ ಮೆಕ್ಕಾ, ಮದೀನಾ, ಜರುಸಲೇಮನ್ನೇ ಪುಣ್ಯಕ್ಷೇತ್ರಗಳು ಎಂದಿಟ್ಟು ಕೊಂಡರೆ, ನಾವೆಲ್ಲರೂ ಮಾಂಸಾಹಾರಿಗಳಾದರೆ ಭಾರತ ದೇಶ ಹೇಗಿರುತ್ತದೆಂದು ಊಹಿಸಿಕೊಳ್ಳಿ. ಯುಗಾದಿ, ದೀಪಾವಳಿ, ಗಣೇಶ ಚತುರ್ಥಿ, ರಾಮನವಮಿ, ಶ್ರೀಕೃಷ್ಣ ಜನ್ಮಾಷ್ಠಮಿ, ಮೊಸರು ಕುಡಿಕೆ, ಜಾತ್ರೆ, ಉತ್ಸವ ಮೊದಲಾದ ಯಾವ ಹಬ್ಬಗಳೂ ಇರುವುದಿಲ್ಲ. ಬಂಗಾಳಿ, ತಮಿಳು, ಕನ್ನಡ, ಮರಾಠಿ, ತೆಲುಗು ಮೊದಲಾದ ಭಾಷೆಗಳೂ ಉಳಿಯುವುದಿಲ್ಲ. ಅಂತಹ ಒಂದು ಭಯಂಕರ ಭವಿಷ್ಯ ನಮಗೆ ಬೇಡವಾದರೆ ನಾವು ಮತಾಂತರವನ್ನು ವಿರೋಧಿಸದೆ ಗತ್ಯಂತರವಿಲ್ಲ.  ನಾನು ಭಾವಪರವಶನಾಗಿ ಮಾತನಾಡಿದ್ದೇನೆ. ಭಾವನೆಗಳಿಲ್ಲದಿದ್ದರೆ ನಾವು ಮನುಷ್ಯರೇ ಅಲ್ಲ. ಭಾರತದಲ್ಲಿರುವ ನಮಗೆ ನಮ್ಮ ಭಾವನೆಯ ಬೇರುಗಳು ಅನಾದಿಕಾಲಕ್ಕೂ ಇಳಿದಿವೆ. ಮತಾಂತರ ಆ ಬೇರುಗಳನ್ನು ತುಂಡರಿಸುತ್ತದೆ. ನಮ್ಮ ಜೀವನದ ಮೌಲ್ಯಗಳನ್ನು ಹಾಳು ಮಾಡುತ್ತದೆ. ನಮ್ಮ ಬದುಕಿನಲ್ಲಿ ವೈವಿಧ್ಯವೂ ಇರು ವುದಿಲ್ಲ, ಆಲೋಚನಾ ಸ್ವಾತಂತ್ರ್ಯವೂ ಇರುವುದಿಲ್ಲ. ನಮಗೆ ಅಲ್ಲಾಹ್‌ನನ್ನು ಬಿಟ್ಟು ಬೇರೆ ದೇವರು ಇರುವುದಿಲ್ಲ. ಗಿಡ-ಮರ-ಬಳ್ಳಿ, ಪ್ರಾಣಿ, ಪಕ್ಷಿಗಳು, ಗುಡ್ಡ-ಬೆಟ್ಟಗಳು, ನದಿಗಳು, ಆಕಾಶ-ಸೂರ್ಯ-ಚಂದ್ರ-ನಕ್ಷತ್ರಾದಿಗಳಲ್ಲಿ ನಾವು ದೇವರನ್ನು ಕಾಣುವುದಕ್ಕಾಗುವುದಿಲ್ಲ” ಎನ್ನುತ್ತಾರೆ ನಾಡಿಗರು.

ಭಾರತವು ಇಡಿಯಾಗಿ ಅಥವಾ ಪ್ರಧಾನವಾಗಿ ಕ್ರೈಸ್ತ ಅಥವಾ ಇಸ್ಲಾಮಿಕ್ ರಾಷ್ಟ್ರವಾದರೆ ನಮ್ಮ ಸಂಸ್ಕೃತಿಗೆ ಏನಾಗಬಹುದೆಂದು ಕಲ್ಪಿಸಿಕೊಳ್ಳೋಣ ಎಂದ ಎಸ್.ಎಲ್. ಭೈರಪ್ಪ ಈ ಮೇಲಿನ ಎರಡೂ ಪ್ರಶ್ನೆಗಳನ್ನಿಟ್ಟುಕೊಂಡು ಮಾತನಾಡಿದರು. ‘ಇಸ್ಲಾಮ್: ದಿ ಅರಬ್ ಇಂಪೀರಿಯಲಿಸಂ’ ಎಂಬ ಪುಸ್ತಕದಲ್ಲಿ ಸ್ವತಃ ಮುಸ್ಲಿಮರಾದ ಅನ್ವರ್ ಶೇಕ್ ಅವರನ್ನು ಉಲ್ಲೇಖಿಸಿದರು. “ಪ್ರವಾದಿ ಮಹಮ್ಮದ್‌ರ ಮೂಲ ಉದ್ದೇಶವಿದ್ದಿದ್ದೇ ಅರಬ್ ಆಳ್ವಿಕೆ, ದೇವರು ಮತ್ತು ಜೀವನ ವಿಧಾನಗಳನ್ನು ಇತರ ಜನಾಂಗಗಳ ಮೇಲೆ ಹೇರುವುದಾಗಿತ್ತು” ಎಂದು ಅನ್ವರ್ ಶೇಕ್ ಹೇರಳವಾದ ಉದಾಹರಣೆಗಳಿಂದ ಸ್ಥಾಪಿಸುತ್ತಾರೆ. ಪ್ರಪಂಚದ ಯಾವುದೇ ಭಾಗದ, ಯಾವುದೇ ಮೂಲ ಸಂಸ್ಕೃತಿಯ, ಯಾವುದೇ ಭಾಷೆಯ ಜನರಾದರೂ ಇಸ್ಲಾಮಿಗೆ ಪರಿವರ್ತಿತರಾದರೆ ಅವರು ಹೆಸರು ಅರೇಬಿಕ್ ಆಗಲೇಬೇಕು. ಅವರ ಪ್ರಾರ್ಥನೆ ಅರೇಬಿಕ್‌ನಲ್ಲೇ ನಡೆಯಬೇಕು. ಮದುವೆ, ಸಂಸಾರ, ಆಸ್ತಿ ವಿಂಗಡಣೆ, ದಾಂಪತ್ಯದ ನಿಯಮಗಳು, ಇತರ ಮತಗಳೊಡನೆಯ ಸಂಬಂಧ ಅರೇಬಿಕ್ ಸಂಪ್ರದಾಯಕ್ಕೆ ತಕ್ಕಂತೆಯೇ ಆಗಬೇಕು. ಆ ದೇಶದ ಕಡೆ ಮುಖ ಮಾಡಿಯೇ (ಕಿಬ್ಲಾ) ಪ್ರಾರ್ಥನೆ ಮಾಡಬೇಕು. ಸಂಗೀತ, ಸಾಹಿತ್ಯ, ಶಿಲ್ಪ, ವಾಸ್ತುಗಳೆಲ್ಲ ಕುರಾನ್‌ನ ನಿಯಮಗಳಂತೆಯೇ ಇರಬೇಕು. ಇದು ಕೇವಲ ಮತವೋ ಅಥವಾ ಅರೇಬಿಕ್ ಸಂಸ್ಕೃತಿಯ ಆಧಿಪತ್ಯವೋ ಎಂದು ಅನ್ವರ್ ಶೇಕ್ ಪ್ರಶ್ನಿಸುವುದನ್ನು ಭೈರಪ್ಪ ಉದಾಹರಿಸಿದರು. ಇನ್ನು ಕಾನ್ವೆಂಟ್‌ಗಳಲ್ಲಿ ಹೆಣ್ಣುಮಕ್ಕಳಿಗೆ ಕುಂಕುಮವನ್ನು ನಿಷೇಧಿಸುವುದು ಕೇವಲ ಹಿಂದೂ ಧರ್ಮದ ವಿರುದ್ಧದ ಅಸಹಿಷ್ಣುತೆ ಮಾತ್ರವಲ್ಲ, ಅದು ಸಾಂಸ್ಕೃತಿಕ ಕ್ರಿಸ್ತೀಕರಣ. ಹಾಗೆಂದು ಹೇಳಿದ ಭೈರಪ್ಪನವರು ಭಾರತ ಕ್ರಿಸ್ತೀಕರಣಗೊಂಡರೆ ಆಗುವ ಅಪಾಯಗಳ ಬಗ್ಗೆ ಎಚ್ಚರಿಸಿದರು.

ಇವುಗಳಿಗೆ ಪೂರಕವಾಗಿ ನಾವೂ ಒಂದು ’What if’ ಅನ್ನು ಕೇಳಿಕೊಳ್ಳಬಹುದು. ಒಂದು ವೇಳೆ ಭಾರತದಲ್ಲಿರುವ ಹಿಂದೂ ಗಳೆಲ್ಲ ನಾಶವಾದರೆ ಏನಾದೀತು? ಅಥವಾ ನಾವೆಲ್ಲ ಅನ್ಯ ಧರ್ಮಗಳಿಗೆ ಮತಾಂತರಗೊಂಡರೆ ಏನಾಗಬಹುದು?

ಹಾಗೊಂದು ವೇಳೆ ಹಿಂದೂ ಧರ್ಮ ಭಾರತದಿಂದ ನಾಶವಾಗಿ ಹೋದರೆ ಉಳಿಯುವುದು ಯಾರು? ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು! ಹಿಂದೂ ಧರ್ಮವೇ ಇಲ್ಲ ಎಂದಾದರೆ ಜಾತಿ ವೈಷಮ್ಯ, ತಾರತಮ್ಯ ಹೊರಟುಹೋಗಿ ಸಾಮಾಜಿಕ ಸಮಾನತೆ ನೆಲೆಗೊಂಡೀತೆ? ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸಹಬಾಳ್ವೆ ನಡೆಸಿಯಾರೆ? ಕಳೆದ ಒಂದೂವರೆ ಸಾವಿರ ವರ್ಷಗಳ ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಈ ಜಗತ್ತಿನ ಬಹುತೇಕ ಯುದ್ಧಗಳು ಮುಸ್ಲಿಮರು ಮತ್ತು ಕ್ರೈಸ್ತರ ನಡುವೆಯೇ ನಡೆದಿವೆ. ೩೦೦ ವರ್ಷಗಳ ಕಾಲ ನಡೆದ ಕ್ರೈಸ್ತರ ಕ್ರುಸೇಡ್ ಮುಸ್ಲಿಮರ ವಿರುದ್ಧವೇ ಅಲ್ಲವೆ? ಅಷ್ಟು ವರ್ಷ ಹೋರಾಡಿದ್ದು ಇಸ್ಲಾಂ ಯುರೋಪ್‌ಗೆ ಹರಡದಂತೆ ತಡೆಯುವುದಕ್ಕಾಗಿಯೇ ಅಲ್ವಾ? ಜಗತ್ತಿನ ಬಹುತೇಕ ಎಲ್ಲ ಖಂಡಗಳಲ್ಲೂ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳ ನಡುವೆ ಸಂಘರ್ಷಗಳಾಗಿವೆ. ಒಂದು ಕೈಯಲ್ಲಿ ಬೈಬಲ್ ಮತ್ತೊಂದು ಕೈಯಲ್ಲಿ ಮೆಡಿಸಿನ್ ಹಿಡಿದುಕೊಂಡು ಕ್ರೈಸ್ತರು ಆಫ್ರಿಕಕ್ಕೆ ಹೋದರೆ, ಮುಸ್ಲಿಮರು ಖಡ್ಗ ತೆಗೆದುಕೊಂಡು ಹೋದರು. ಬುಡಕಟ್ಟು ಜನಾಂಗದವರೇ ತುಂಬಿದ್ದ ಆಫ್ರಿಕನ್ನರಲ್ಲಿ ಒಂದಷ್ಟು ಜನರು ಕ್ರೈಸ್ತರಾದರು, ಉಳಿದವರು ಮುಸ್ಲಿಮರಾದರು. ಇಂದು ಆಫ್ರಿಕಾ ಖಂಡದಲ್ಲಿ ಇರುವುದು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳೆರಡೇ. ಆದರೆ ಆಫ್ರಿಕಾ ನೆಮ್ಮದಿಯಿಂದಿದೆಯೇ? ಮಿಷನರಿಗಳ ಮೆಡಿಸಿನ್ ಆಫ್ರಿಕಾದ ಭಯಂಕರ ರೋಗಗಳಿಗೆ ಮದ್ದಾಗಲಿಲ್ಲ! ಇತ್ತ ಜನ ಬೀದಿ ನಾಯಿಗಳಂತೆ ಕಚ್ಚಾಡಿಕೊಂಡು ಸಾಯುತ್ತಿದ್ದಾರೆ. ಆ ಸಂಘರ್ಷ ಇಂದಿಗೂ ನಿಂತಿಲ್ಲ. ಇಂಡೊನೇಷ್ಯಾ-ಈಸ್ಟ್ ಟಿಮೋರ್‌ನಿಂದ ಅಫ್ಘಾನಿಸ್ತಾನ, ಇರಾಕ್‌ವರೆಗೂ ಮುಸ್ಲಿಮರು ಹಾಗೂ ಕ್ರೈಸ್ತ್ರರು ಯುದ್ಧಮಾಡಿಕೊಂಡಿದ್ದಾರೆ. ಅಮೆರಿಕದ ಮುಂದಿನ ಗುರಿ ಮತ್ತೊಂದು ಇಸ್ಲಾಮಿಕ್ ರಾಷ್ಟ್ರವಾದ ಇರಾನ್. ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ಅಮೆರಿಕ ಮಾಡಿದ, ಮಾಡಲು ಹವಣಿಸುತ್ತಿರುವ ದಾಳಿಯ ವಿರುದ್ಧ ಯಾವ ಕ್ರೈಸ್ತಧರ್ಮಗುರುವಾದರೂ ಚಕಾರವೆತ್ತಿದ್ದಾರೆಯೇ? ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ ವ್ಯಂಗ್ಯಚಿತ್ರ ರಚಿಸಿದವನೂ ಕೂಡ ಒಬ್ಬ ಕ್ರೈಸ್ತನೇ. ಹಿಂದೂ ಧರ್ಮ ನಾಶವಾಗಿ ಕ್ರೈಸ್ತ ಹಾಗೂ ಇಸ್ಲಾಂಗಳೇ ಭಾರತದಲ್ಲಿ ಉಳಿದರೆ ಈ ದೇಶ ಮತ್ತೊಂದು ಆಫ್ರಿಕವಾಗದೇ ಉಳಿದೀತೆ? ಮುಸ್ಲಿಮರು ಹಾಗೂ ಕ್ರೈಸ್ತರು ಕಚ್ಚಾಡದೇ ಇದ್ದಾರೇ? ಇಂದು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ, ಹಿಂದೂಗಳನ್ನು Common enemy  ಎಂದು ಭಾವಿಸಿರುವುದರಿಂದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಕಚ್ಚಾಡುತ್ತಿಲ್ಲ. ಸಂಘಟಿತರಾಗಿ ಹಿಂದೂಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ನಮ್ಮ ಧರ್ಮದ ಮೇಲೆ ಮತಾಂತರ, ಬಲತ್ಕಾರ ದಂತಹ ದೌರ್ಜನ್ಯಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ, ನಾವು ಎಚ್ಚೆತ್ತುಕೊಳ್ಳದಿದ್ದರೆ ರೋಮನ್, ಗ್ರೀಕ್ ನಾಗರಿಕತೆ ಗಳಂತೆ ನಮ್ಮದೂ ನಶಿಸಿ ಇತಿಹಾಸದ ಪುಟ ಸೇರದೇ ಉಳಿದೀತೆ?

ಭೈರಪ್ಪನವರು ‘ಆವರಣ’ದ ಮೂಲಕ ಐತಿಹಾಸಿಕ ಹಾಗೂ ಹಾಲಿ ಸತ್ಯಗಳನ್ನು ತೆರೆದಿಟ್ಟಿದ್ದು ಹಿಂದೂಗಳನ್ನು ಎಚ್ಚರಿಸುವುದಕ್ಕೇ ಹೊರತು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದಕ್ಕಲ್ಲ, ಇತ್ತೀಚೆಗೆ ಮತಾಂತರದ ಬಗ್ಗೆ ಸಂವಾದ ಹುಟ್ಟುಹಾಕಿದ್ದು ಕ್ರೈಸ್ತರ ವಿರುದ್ಧ ವೈಷಮ್ಯವನ್ನು ಬಿತ್ತುವುದಕ್ಕಲ್ಲ, ಮುಂದೆ ಎದುರಾಗಲಿರುವ ಅಪಾಯಗಳ ಬಗ್ಗೆ ಹಿಂದೂಗಳನ್ನು ಜಾಗೃತಗೊಳಿಸಲು. ನಾವೇಕೆ ಕನ್ನಡ ಭಾಷೆಯನ್ನು ಉಳಿಸಬೇಕು ಎಂದು ಹೋರಾ ಡುತ್ತೇವೆ? ಕನ್ನಡ ನಾಮಫಲಕಗಳನ್ನೇ ಹಾಕಬೇಕು ಎಂದು ಕಟ್ಟಾe ಹೊರಡಿಸುವುದೇಕೆ? ಒಂದು ಭಾಷೆಯ ಜತೆ ಒಂದು ಸಂಸ್ಕೃತಿಯೂ ಹೆಣೆದುಕೊಂಡಿರುತ್ತದೆ. ಕನ್ನಡವೆಂದರೆ ಕೇವಲ ಒಂದು ಭಾಷೆಯಲ್ಲ. ತಾಯಿ ಭುವನೇಶ್ವರಿ, ದಸರಾ, ಅಣ್ಣಮ್ಮ ದೇವಿಯ ಆರಾಧನೆ, ಕರಗವೂ ಅದರಲ್ಲಿದೆ. ಈ ದೇಶದ ಅಂತಃಸತ್ವ ಹಾಗೂ ಅಂತಃಶಕ್ತಿಗಳೆರಡೂ ಹಿಂದೂ ಧರ್ಮವೇ. ಅಂತಹ ಧರ್ಮವೇ ನಶಿಸಿ ಹೋದರೆ ಭಾಷೆಯೂ ಉಳಿಯುವುದಿಲ್ಲ, ಸಂಸ್ಕೃತಿಯನ್ನೂ ಉಳಿಸಿಕೊಳ್ಳಲು ಸಾಧ್ಯವಿಲ್ಲ.

ಇಂತಹ ಗಂಭೀರ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು, ಚಿಂತನೆ ನಡೆಸುವುದು ತಪ್ಪಾ?

ಕಳೆದ ಭಾನುವಾರ ಬೆಂಗಳೂರಿನಲ್ಲಿ ಚಿಮೂ, ಗಣೇಶ್, ರಾಜಾರಾಮ್, ಭೈರಪ್ಪ ಮುಂತಾದವರು ಮತಾಂತರದ ಬಗ್ಗೆ ಚರ್ಚೆ ನಡೆಸಿದರೆ, ತಮ್ಮ ವಾದ ಮಂಡಿಸಿದರೆ, ಜನರನ್ನು ಎಚ್ಚರಿಸಿದರೆ ಈ ಪ್ರೊ ಕೆ. ಮರುಳ ಸಿದ್ದಪ್ಪನವರಿಗೇನು ತ್ರಾಸ? ಗಣೇಶ್ ಮಾತನಾಡಿದರೆ ಚಂಪಾ ಅವರ ನಾಲಗೆಯೇಕೆ ತುರಿಸಲು ಆರಂಭವಾಗುತ್ತದೆ? ‘ಚಿಮೂ ಇಳಿ ವಯಸ್ಸಿನಲ್ಲಿ ಯಾವ ಮಟ್ಟದ ಜನರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ’ ಎಂದು ಮರುಳಸಿದ್ದಪ್ಪನವರು ಅರುಳೋ-ಮರುಳೋ ಆಗಿರು ವವರಂತೆ ಅವಹೇಳನಕಾರಿಯಾಗಿ ಏಕೆ ಮಾತನಾಡುತ್ತಿದ್ದಾರೆ? ಇನ್ನು ಕಾಮಾಟಿಪುರದ ವೇಶ್ಯೆಯರಿಗೂ ‘ಸಮಯಸಾಧಕ’ರಿಗೂ ಯಾವ ವ್ಯತ್ಯಾಸವೂ ಇಲ್ಲ ಎಂಬ ಶತಾವಧಾನಿಗಳ ಮಾತಿನ ಅರ್ಥವನ್ನು ಗ್ರಹಿಸದೆ  “ಅವರನ್ನು ಕಾಮಾಟಿಪುರದ ಗಣೇಶ್ ಎಂದು ಕರೆಯೋಣವೇ”? ಎಂದು ಲೇವಡಿ ಮಾಡಿರುವ ಚಂಪಾ ಅವರಿಗೇನಾಗಿದೆ? ಅದಿರಲಿ, ಚಂಪಾ ಅವರು ತಮ್ಮ ಘನತೆಗೆ ತಕ್ಕಂತೆ ವರ್ತಿಸುತ್ತಿದ್ದಾರೆಯೇ? ಹುಬ್ಬಳ್ಳಿ-ಧಾರವಾಡದ ಕಡೆ ಈ ಚಂಪಾ ಎಷ್ಟು ಫೇಮಸ್ ಎಂದರೆ ಯಾವುದಾದರೂ ಬೀದಿ ನಾಯಿ ಇಂಗ್ಲಿಷ್ ಬೋರ್ಡ್ ಮೇಲೆ ಮೂತ್ರ ಮಾಡಿದರೆ, ಆ ನಾಯಿ ತನ್ನದೇ ಎಂದು Claim ಮಾಡುತ್ತಾರೆ ಎಂದು ಜನ ಮುಸಿ ಮುಸಿ ನಗುತ್ತಾ ಲೇವಡಿ ಮಾಡುವುದು ತಾವೇ ಶಾಣ್ಯಾ ಎಂದು ಬೀಗುವ ಈ ಚಂಪಾ ಅವರಿಗೆ ಇನ್ನೂ ಗೊತ್ತಾಗಿಲ್ಲವೆ? ಬೇರೆಯವರ ಹೆಸರನ್ನು ಗೇಲಿ ಮಾಡುವ ಇವರ ಹೆಸರು ಹೇಗಿದೆ? ಚಂಪಾ ಅಂದ್ರೆ ಅದು ಗಂಡೋ, ಹೆಣ್ಣೋ, ತಿಂಡಿಯೋ(ಚಂಪಾಕಲಿ) ಅಥವಾ ಜಿರಲೆ ಮದ್ದೋ?! ಯಾವುದೂ ಗೊತ್ತಾಗೊಲ್ಲ. ಹಾಗಂತ ಲೇವಡಿ ಮಾಡಿದರೆ ಚಂಪಾ ಅವರಿಗೆ ಬೇಸರವಾಗದೇ ಇದ್ದೀತೆ? ಅವಧಾನದಂತಹ ಕಲೆಯನ್ನು ಉಳಿಸಿ ಬೆಳೆಸುತ್ತಿರುವ, ಬ್ರಹ್ಮಚಾರಿಯಾಗಿ ಸಂಶೋ ಧನೆಗೆ ತಮ್ಮನ್ನು ಮುಡಿಪಾಗಿಟ್ಟುಕೊಂಡಿರುವ ಮೆಕ್ಯಾನಿಕಲ್ ಎಂಜಿನಿಯರ್ ಗಣೇಶರಂತಹ ಪ್ರಾಜ್ಞರ ಬಗ್ಗೆ ಲಘುವಾಗಿ ಮಾತನಾಡಿದರೆ ಅವರಿಗೆ ನೋವಾಗುವುದಿಲ್ಲವೆ? ಚಂಪಾ ಅವರು ತುಂಗಭದ್ರೆಯಿಂದಾಚೆಗೆ ಲಿಂಗಾಯತ, ಬೆಂಗಳೂರಿಗೆ ಬಂದರೆ ಜಾತ್ಯತೀತವಾದಿ ಎಂದು ಜನ ಆಡಿಕೊಳ್ಳುತ್ತಾರೆ. ಅಂದರೆ ಉತ್ತರ ಕರ್ನಾಟಕಕ್ಕೆ ಹೋದಾಗ ಸ್ವಾಮೀಜಿಗಳ ಕಾಲಿಗೆ ಬೀಳುವ ಚಂಪಾ, ಬೆಂದಕಾಳೂರಿಗೆ ಬಂದ ಕೂಡಲೇ ಜಾತ್ಯತೀತ ವ್ಯಕ್ತಿಯಂತೆ ಸೋಗುಹಾಕುತ್ತಾರೆ. ಅಭಿಪ್ರಾಯ ಭೇದವಿರಲಿ, ಯಾರೂ ಬೇಡವೆನ್ನುವುದಿಲ್ಲ. ಆದರೆ ಇತರ ಸಮಕಾಲೀನ ಸಾಹಿತಿ, ಬರಹಗಾರರಿಗೆ ಗೌರವ ಕೊಡಬೇಕು ಎನ್ನುವ ಪ್ರeಯೂ ಇಲ್ಲದೇ ಹೋದರೆ, ಉಳಿದವರು ಗೌರವ ಕೊಡುತ್ತಾರೆಯೇ? “ಚಿಮೂ ‘ಎತ್ತರ’ ನಾಡಿಗೆಲ್ಲ ಗೊತ್ತು. ಅವರು ವೇದಿಕೆ ಹಂಚಿ ಕೊಂಡಿದ್ದು ಅದೇ ‘ಎತ್ತರ’ದ ಮಹಾಶಯರೊಂದಿಗೆ!” ಎಂದು ಅವಹೇಳನಕಾರಿಯಾಗಿ ಮಾತನಾಡುವ ಚಂಪಾ, ತಮ್ಮ ‘ಎತ್ತರ’ ವನ್ನು ಎಂದಾದರೂ ಅಳೆದುಕೊಂಡಿದ್ದಾರಾ? ಚಂಪಾ ಅವರು ಯಾವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರೋ ಆ ಕನ್ನಡ ಸಾಹಿತ್ಯ ಪರಿಷತ್ತು ಇರುವ ಚಾಮರಾಜಪೇಟೆ ಕ್ಷೇತ್ರದ ಮತ ದಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಂಪಾ ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದ. ಇನ್ನೂರು ಚಿಲ್ಲರೆ ಮತಗಳು ಬಿದ್ದಾಗಲೇ ತಮ್ಮ ‘ಎತ್ತರ’ ಎಷ್ಟು ಎಂಬುದು ಚಂಪಾ ಅವರಿಗೆ ಗೊತ್ತಾಗಿರಬೇಕಲ್ಲವೆ? ಒಂದೆರಡು ವರ್ಷಗಳ ಹಿಂದೆ ‘ಹಾವು, ಚೇಳು, ಘಟ ಸರ್ಪ, ಮಸಾಲೆದೋಸೆ ಸಾಹಿತಿ’ ಎಂದು ತಾವು ತಾವೇ ಕಚ್ಚಾಡುತ್ತಿದ್ದ ಈ ಬುದ್ಧಿಜೀವಿಗಳಿಗೆ ಎಲ್ಲವನ್ನೂ ಪ್ರಶ್ನೆ ಮಾಡುವ ಹಕ್ಕು ಇದೆ ಎಂದಾದರೆ ಬೇರೆಯವರು ಪ್ರಶ್ನೆ ಮಾಡಿ ದಾಗ ಅವರ ಮೈಮೇಲೆ ಬಿದ್ದು ವಿರೋಧಿಸಲು ಹೊರಡುವುದೇಕೆ?

ಅದಿರಲಿ, ಭೈರಪ್ಪ, ಗಣೇಶ್, ಚಿಮೂ ಮಾತನಾಡಿದರೆ ನಮ್ಮ ಬುದ್ಧಿಜೀವಿಗಳೇಕೆ ಈ ಪರಿ ಉರಿದು ಬೀಳುತ್ತಿದ್ದಾರೆ ಗೊತ್ತೆ?

ಒಂದಿಷ್ಟು ಪುಸ್ತಕ ಬರೆಯುವುದು, ವಿಮರ್ಶೆ ಮಾಡುವುದು, ಒಂದು ಸಿದ್ಧಾಂತದ ಪರ ವಕಾಲತ್ತು ವಹಿಸುವುದೇ ವಿಚಾರವಾದ ಎಂದು ಈ ಮಹಾಶಯರು ಭಾವಿಸಿದ್ದರು, ಹಾಗೆ ಮಾಡಿದವರು ಮಾತ್ರ ಬುದ್ಧಿಜೀವಿ ಎಂದೂ ಅಂದುಕೊಂಡಿದ್ದರು. ಆದರೆ ಇಂದು ನಮ್ಮ ಬಹುತೇಕ ಸಾಹಿತಿ, ಬರಹಗಾರರಿಗಿಂತ ಯುವ ಓದುಗರೇ ಹೆಚ್ಚು ಬುದ್ಧಿವಂತರಾಗಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.೭೦ಕ್ಕೂ ಹೆಚ್ಚಿರುವ ತುರ್ತುಪರಿಸ್ಥಿತಿಯ ನಂತರ ಜನಿಸಿದ ಯುವಜನಾಂಗ ಯಾವುದನ್ನೂ ಸುಲಭ ವಾಗಿ ಒಪ್ಪಿಕೊಳ್ಳುವುದಿಲ್ಲ. ಎಲ್ಲವನ್ನೂ ಪ್ರಶ್ನಿಸುತ್ತದೆ. ಹಳೇ ಕಾಲದಂತೆ ಒಂದು ಅಭಿಪ್ರಾಯಕ್ಕೆ ಬರುವ ಮೊದಲು ಯಾವುದೋ ಪುಸ್ತಕ, ಲೇಖನದ ಬಗ್ಗೆ ವಿಮರ್ಶಕರು ಏನೆಂದು ಹೇಳುತ್ತಾರೆ ಎಂದು ತಿಳಿದುಕೊಳ್ಳಲು ಈಗಿನ ಜನಾಂಗ ಕಾದು ಕುಳಿತು ಕೊಳ್ಳುವುದಿಲ್ಲ. ಸ್ವತಃ ಓದಿ ಅರಗಿಸಿಕೊಳ್ಳುವ, ನಿರ್ಧಾರಕ್ಕೆ ಬರುವ ತಾಕತ್ತು ನಮ್ಮ ಯುವಜನಾಂಗಕ್ಕಿದೆ. ಹಾಗಾಗಿ ಇಂದಿಗೂ ಕಮ್ಯುನಿಸ್ಟ್ ಪಳೆಯುಳಿಕೆಗಳ ಬಗ್ಗೆ ಭಾಷಣ ಬಿಗಿಯುವ, ಬುದ್ಧ-ಬಸವಣ್ಣ-ಜೀಸಸ್ ಹೇಳಿದ್ದು ಒಂದೇ ಎಂದು ತರ್ಕರಹಿತ ವಾದ ಮಾಡುವ ಬುದ್ಧಿಜೀವಿಗಳನ್ನು ಪ್ರತಿಹಂತದಲ್ಲೂ ಪ್ರಶ್ನಿಸಲಾರಂಭಿಸಿದ್ದಾರೆ. ಈ ಹಿಂದೆ ಇವರು ಹೇಳಿದ್ದೇ ಸತ್ಯ, ಅದೇ ವಾಸ್ತವವಾಗುತ್ತಿತ್ತು. ಯಾರೂ ಪ್ರಶ್ನಿಸುತ್ತಿರಲಿಲ್ಲ. ಪ್ರಶ್ನಿಸಲು ವೇದಿಕೆಗಳೂ ಇರಲಿಲ್ಲ, ಪ್ರಶ್ನಿಸಿದರೆ ಎಲ್ಲಿ ‘Outcast’ ಮಾಡಿಬಿಡು ತ್ತಾರೋ ಎಂಬ ಭಯವಿತ್ತು. ಆದರೆ ಇಂದು ಚಂಪಾ, ಅನಂತಮೂರ್ತಿ ಮುಂತಾದವರು ಹುಚ್ಚುಚ್ಚಾಗಿ ಮಾತನಾಡಿದ ಕೂಡಲೇ ಕಂಪ್ಯೂಟರ್ ಸ್ಕ್ರೀನ್ ಮುಂದೆಯೇ ಕುಳಿತಿರುವ ಐಟಿ ಕಂಪನಿಗಳ ಟೆಕ್ಕಿಗಳು ಇವರ ತಲೆಗೆ ಕೀಬೋರ್ಡ್‌ನಿಂದ ಕುಟ್ಟಿ ಬಿಡುತ್ತಾರೆ! ಬ್ಲಾಗ್, ವೆಬ್‌ಸೈಟ್ ಹಾಳೆಗಳ ಮೇಲೆ ಇವರನ್ನು ನಿವಾಳಿಸಿ ಬಿಸಾಕುತ್ತಾರೆ. ಹಾಗಾಗಿ ಬುದ್ಧಿಜೀವಿಗಳು ಸಿಕ್ಕ ಅವಕಾಶಗಳಲ್ಲೆಲ್ಲ ಬ್ಲಾಗರ್‌ಗಳನ್ನೂ ಟೀಕಿಸಲು ಆರಂಭಿಸಿದ್ದಾರೆ. ಅಷ್ಟಕ್ಕೂ ತಮ್ಮ ಪ್ರತಿ ಹೇಳಿಕೆಗಳನ್ನೂ ಪ್ರಶ್ನಿಸುತ್ತಿರುವುದನ್ನು ಇವರಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ಇವರ ‘ಇಂಟಲಿಜೆನ್ಸ್’ ಅನ್ನೇ ಪ್ರಶ್ನಿಸುತ್ತಿರುವುದು ಒಂಥರಾ ‘ಇರಿಟೇಟ್’ ಮಾಡುತ್ತಿದೆ. ಬುದ್ಧಿಜೀವಿಗಳೆಂದರೆ ತಾವು ಮಾತ್ರ ಎಂದುಕೊಂಡಿದ್ದ ಇವರ ಸ್ಥಾನಕ್ಕೆ ಭೈರಪ್ಪ, ಗಣೇಶ್, ಚಿಮೂ, ರಾಜಾರಾಮ್ ಕುತ್ತು ತರುತ್ತಿದ್ದಾರೆ ಎಂದು ಇವರಿಗೆ ಸಿಟ್ಟು ಬರುತ್ತಿದೆ. ಹೀಗೆ ವೈಚಾರಿಕವಾಗಿ ಸೋಲಿಸಲಾಗದ  ಕಾರಣ ಜಾತ್ಯತೀತ ವಾದದ ಡೋಲನ್ನು ಜೋರಾಗಿ ಭಾರಿಸಿ ಪ್ರತಿಸ್ಪರ್ಧಿಗಳನ್ನು ಕೋಮುವಾದಿಗಳು ಎಂದು Discredit ಮಾಡಲು ಯತ್ನಿಸುತ್ತಿದ್ದಾರೆ. ವೈಯಕ್ತಿಕ ನಿಂದನೆಗೂ ಕೈಹಾಕಿದ್ದಾರೆ. ಆದರೆ ಇವರು ಯಾವ ಮೈನಾರಿಟಿಗಳ ಪರವೂ ಅಲ್ಲ. ಇನ್ನು ಕೆಲವರಂತೂ ಕರಾವಳಿ ಭಾಗದ ಒಂದಿಷ್ಟು ಕನ್ನಡ ಬಲ್ಲ ‘ಬ್ಯಾಡ್ರಿ’ಗಳನ್ನಿಟ್ಟುಕೊಂಡು ಓಡಾಡುತ್ತಿದ್ದಾರೆ. ಇವರಿಗೆ ತಮ್ಮ ಸ್ಥಾನ‘ಮಾನ’ವನ್ನು ಉಳಿಸಿಕೊಳ್ಳಲು ಮೈನಾರಿಟಿಗಳು ಬೇಕೇ ಹೊರತು ಮೈನಾರಿಟಿಗಳ ಬಗ್ಗೆ ಇವರಲ್ಲಿ ಯಾವ ಪ್ರೀತಿ, ಪ್ರೇಮವೂ ಇಲ್ಲ. ಮತ್ತೆ ಕೆಲವರಿಗಂತೂ ತಮ್ಮ ವಿಚಾರ ನಪುಂಸಕತೆ ಯನ್ನು ಮರೆಮಾಚಿಕೊಳ್ಳಲಷ್ಟೇ ಜಾತ್ಯತೀತತೆ ಬೇಕಾಗಿದೆ.

‘ಗಾಂಧಿ ಇದ್ದಿದ್ದರೆ ಕಂಪ್ಯೂಟರ್ ಅನ್ನು ಒಪ್ಪಿಕೊಳ್ಳುತ್ತಿದ್ದರು, ಜಾಗತೀಕರಣವನ್ನು ತಿರಸ್ಕರಿಸುತ್ತಿದ್ದರು’, ‘ಬಸವ ಇದ್ದಿದ್ದರೆ ಕೋಮುವಾದಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ’ ಎಂದು ಮನಸ್ಸಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಹೀಗೆ Imaginaryಯಾಗಿ ಮಾತನಾಡುವುದು ಒಬ್ಬ ಬುದ್ಧಿಜೀವಿಯ ಲಕ್ಷಣವಲ್ಲ. ಅಂಕಿ-ಅಂಶ, ನೈಜ ಘಟನೆಗಳನ್ನಿಟ್ಟುಕೊಂಡು ವಿಚಾರ, ವಾದ ಮಂಡಿಸಬೇಕು. ನಾವೂ ಕೂಡ ಇವರ ಮಾರ್ಗವನ್ನೇ ಹಿಡಿದರೆ, ‘ಗಾಂಧಿ ಇದ್ದಿದ್ದರೆ ಅನಂತಮೂರ್ತಿಯವರ ಸೋಗ ಲಾಡಿ ಮಾತುಗಳನ್ನು ಕಂಡು ಥೂ, ಚೀ ಎನ್ನುತ್ತಿದ್ದರು’, ‘ಊರು-ಕೇರಿ ಸ್ವಚ್ಛವಾಗಬೇಕೆಂದರೆ ಹಂದಿಗಳಿರಬೇಕು ಎಂದು ದಾಸರು ಹೇಳಿದ್ದು ಮುಂದೆ ಚಂಪಾ ಅವರ ಜನನದ ಮುಂದಾ ಲೋಚನೆಯಿಂದಲೇ’ ಎಂದರೆ ಹೇಗಾದೀತು?

ಇನ್ನು ಮುಂದಾದರೂ ಮಾತನಾಡುವ ಮೊದಲು ಯೋಚಿಸು ವುದೊಳಿತು. ಅಷ್ಟಕ್ಕೂ ಇತರರನ್ನು ನಿಂದಿಸಿದರೆ ಅವರು ತಿರುಗಿ ಹೂವಿನ ಹಾರ ಹಾಕುವುದಿಲ್ಲ!

50 Responses to “ಗಣೇಶ್ ಮಾತಾಡಿದರೆ ಚಂಪಾ ನಾಲಗೆಯೇಕೆ ತುರಿಸುತ್ತದೆ?”

  1. Subbu says:

    hi pratap…

    chennagide.
    aadre nimge patrakartarige ondu prashne..
    bhuddijeeji andre yaaru?? neevu patrikeyavru naalku akshara bareyalu, uddudda bhashana bigiyalu baro, edapanthiyarannu maatra buddijeevi annodu yaake??

    buddijeevigalige janma kottoru neevu patrakartarugalu. dayavittu uttara kodi.illandre nim lekhana galalli ee pada nusuladante maadbahudalla?

    -Subbu

  2. Hullo….Pratap
    Your article is simply superb. My vocabulary is not rich enough to explain it in words. People around me who are your column readers too are of the same opinion. The strong words you used to cleanse the ‘budhdhi jeevis’ made me jump with joy !! ……………………….Congratulations………..keep going like this

  3. ವೆಂಕಟೇಶ್ says:

    ಒಂದುದಿನ ಮುಂಚೆಯೇ ಇಲ್ಲಿ ಪ್ರಕಟಿಸಿ ಭಾನುವಾರವೇ ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮೊದಲು ಧನ್ಯವಾದಗಳು.
    ಬುದ್ದಿ ಜೀವಿಗಳ ಭಾಷೆಯಲ್ಲೇ ಬುದ್ದಿಜೀವಿಗಳಿಗೆ ಚೆನ್ನಾಗಿ ತರಾಟೆ ತೆಗೆದುಕೊಂದಿದ್ದೀರ. ಈ ಕೆಟ್ಟ ಬುದ್ದಿ ಜೀವಿಗಳಿಗೆ ಸಮರ್ಥವಾಗಿ ಉಗಿಯಲು ನಿಮ್ಮ ಲೇಖನವೇ ಸರಿ. ಸಮಸ್ತ ‘ದೇಶವನ್ನು/ಸಂಸ್ಕೃತಿಯನ್ನು ಪ್ರೀತಿಸುವವರ’ ಪರವಾಗಿ ಧನ್ಯವಾದಗಳು.

    ಶತಾವಧಾನಿ ಅರ್ ಗಣೇಶ್ ರವರ ಬಗ್ಗೆ ಬಹಳ ಕಡಿಮೆ ಜನರಿಗೆ ಮಾಹಿತಿ ಇದೆ.

    ಅವರೊಬ್ಬ ಅಸಾಮಾನ್ಯ ಸಾಧಕ. ವೃತ್ತಿಯಿಂದ ಸಂಶೋಧನಾ ಅಧಿಕಾರಿಯಾಗಿದ್ದರೂ ಕೂಡ ಪ್ರವೃತ್ತಿಯಿಂದ ಅವರೊಬ್ಬ ಅವಧಾನಿ. ‘ಅವಧಾನ’ ಇದೊಂದು ಪ್ರಾಚೀನ ಕಲೆ. ಪ್ರಶ್ನೆಗಳನ್ನ ಕೇಳುವ ಆಯಾ ವಿಷಯದ ಪ್ರವೀಣರಿಂದ ಪ್ರಶ್ನೆಗಳನ್ನ ಕೇಳಿಕೊಂಡು ಅವರಿಗೆ ಸಮಾಧಾನದ ಉತ್ತರವನ್ನು ಕೊಟ್ಟು, ಆ ಉತ್ತರಗಲಿಂದಲೇ ಆಯ್ದುಕೊಂಡು ಅಕ್ಷರ ಅಕ್ಷರವಾಗಿ ಜೋಡಿಸಬೇಕು. ಕಾವ್ಯ/ಕವನ ರಚಿಸುತ್ತಿರುವಂತೆಯೇ ಅದನ್ನೂ ಹದಿ ತಪ್ಪಿಸಲು ಪಂಡಿತರು ಕಾದು ಕುಳಿತಿರುತ್ತಾರೆ. ಅಷ್ಟಾವಧಾನದಲ್ಲಿ ಎಂಟು ಜನ, ಶತಾವಧಾನದಲ್ಲಿ ೧೦೦ ಜನ ಪಂಡಿತರು ಪ್ರಶ್ನೆಗಳನ್ನು ಕೇಳಬಹುದು. ಸುತ್ತ ಕುಳಿತು ಒಬ್ಬರಾದ ಮೇಲೆ ಮತ್ತೊಬ್ಬರು ಪ್ರಶ್ನೆ ಕೇಳುತ್ತಿರುತ್ತಾರೆ. ಮಧ್ಯೆ ಒಬ್ಬ ಆಗಾಗ್ಗೆ ಘಂಟೆ ಹೊಡೆಯುತ್ತಿರುತ್ತಾನೆ. ಅವನು ಎಷ್ಟು ಬಾರಿ ಘಂಟೆ ಹೊಡೆದ ಅನ್ನುವುದನ್ನೂ ಕೂಡ ಕೊನೆಯಲ್ಲಿ ಹೇಳಬೇಕಾಗುತ್ತದೆ. ಇದರ ಗಾ೦ಭೀರ್ಯ/ರಸ ಮೇಲ್ನೋಟಕ್ಕೆ ಗೋಚರಿಸುವುದಿಲ್ಲ. ಈಗಿನ ಪೀಳಿಗೆಯವರಿಗಂತೂ ಇದೊಂದು ಮೂರ್ಖತನದ ಕಲೆ ಆಗ ಬಹುದು. ಆದರೆ ನೀವು ಪ್ರೇಕ್ಷಕರಾಗಿ ವೀಕ್ಷಿಸಿದರೆ ಮಾತ್ರ ಗೊತ್ತಾಗುತ್ತದೆ ಇದಕ್ಕೆ ಎಷ್ಟು ಜ್ನ್ಯಾನ ಮತ್ತು ನೆನಪಿನಶಕ್ತಿ ಬೇಕು ಅಂತ.

    ಇಂಥ ಸಾಧನೆ ಮಾಡಿ ‘ಶತಾವಧಾನಿ’ ಅಗಬೇಕೆ೦ದರೆ ಶ್ರೀ ಗಣೇಶ್ ರವರಿಗೆ ಎಂಥಹ ಶಕ್ತಿ ಇರಬಹುದು?

    ಸಂಸ್ಕ್ರುತದಲ್ಲಿದ್ದರು, ತೆಲುಗಿನಲ್ಲಿ ಇದ್ದರು. ಆದರೆ, ಇವರು ಕನ್ನಡದ ಏಕೈಕ ಶತಾವಧಾನಿ. ಅದರ ಜತೆಗೆ ಇವರು ಉತ್ತಮ ಸಾಹಿತಿ, ಬರಹಗಾರ ಕೂಡ.
    ಅದಿರಲಿ, ಗಣೇಶ್ ರವರು ನಮ್ಮ ಸ೦ಸ್ಕ್ರುತಿಯ, ಭಾಷೆಯ, ದೇಶದ ಬಗ್ಗೆ ಎಂದೂ ಕೆಟ್ಟ ಮಾತನಾಡಿದವರಲ್ಲ.
    ಅವರು ಏನೇ ಮಾಡಿದರೂ ಅದರಲ್ಲಿ ನಮ್ಮ ಸ೦ಸ್ಕ್ರುತಿಯನ್ನು, ಭಾಷೆಯನ್ನು, ಅಭಿಮಾನವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂಥವರ ಬಗ್ಗೆ ಅಭಿಮಾನ ನಮಗೆ ಇರ ಬೇಡವ?

    ಚಂದ್ರಶೇಖರ್ ಪಾಟೀಲ್ (ಚಂಪಾ) ಕೂಡ ಒಬ್ಬ ಸಾಹಿತಿ. ಆದರೆ ಅಂತಹ ಸಾಹಿತಿಗಳು ನಮ್ಮಲ್ಲಿ ಸಾಕಷ್ಟು ಇದ್ದಾರೆ, ಆದರೆ ಅವರು ಶ್ರೀ ಗಣೇಶ್ ರವರ ಬಗ್ಗೆ ಹಗುರವಾಗಿ ಮಾತನಾಡುವುದು ಹೇಸಿಗೆ ಹುಟ್ಟಿಸುವಂಥದ್ದು.
    ಈ ಚಂಪಾಗೂ, ಆ ಲಜ್ಜೆಗೆಟ್ಟ ಅನಂತ ಮೂರ್ತಿಗೂ, ಪ್ರತಾಪಸಿಂಹರು ಖಾರವಾಗಿ, ತಟ್ಟಿ ಹೇಳಿದ್ದು ಅಪ್ಯಾಯಮಾನವಾಗಿದೆ.
    ಅನಂತ, ಕಾರ್ನಾಡು, ಗೌರಿ ಲಂಕೇಶ್, ಗೋವಿಂದ, ರವಿ ಬೆಳೆಗೆರೆ ಗಳ ಅವಹೇಳನಕಾರಿ “ದುರ್ಬುದ್ದಿ ಜೀವಿಗಳ” ಗ್ಯಾಂಗಿಗೆ ಲೇಟೆಸ್ಟ್ ಸೇರ್ಪಡೆ, ಚಂಪಾ ಮತ್ತು ಮರುಳ ಸಿದ್ದ.
    ಇನ್ನೇನು ಅನಾಹುತಗಳನ್ನ ಮಾಡುವ ಕನಸ್ಸು ಹೊತ್ತಿದ್ದಾರೋ, ಕನ್ನಡಿಗರ ದೌರ್ಭಾಗ್ಯ ಏನು ಕಾದಿದೆಯೋ…

    ಹಾಗಾದರೆ ನಮಗೆ ಎಂಥ ಬುದ್ದಿಜೀವಿಗಳು ಬೇಕು?

    * ನಮಗೆ ಬುದ್ದಿಜೀವಿಗಳು ಬೇಕು. ಆದರೆ ನಮ್ಮ ದೇಶವನ್ನೇ ಹೊರದೇಶದವರಿಗೆ ಮಾರುವರು ಬೇಡ.
    * ನಮ್ಮ ಧರ್ಮವನ್ನು ಬೇರೆ ಧರ್ಮದವರಿಗೆ ಮಾರುವ ಬುದ್ದಿಜೀವಿಗಳು ಖಂಡಿತ ಬೇಡ.
    * ನಮ್ಮ ಸಂಸ್ಕೃತಿಯನ್ನು ಬೇರೆ ಸಂಸ್ಕೃತಿಯೊಂದಿಗೆ ಹೋಲಿಸಿ ಅವಮಾನ ಮಾಡುವವರು ಬೇಡವೇ ಬೇಡ.

    ಇ೦ತಹಾ, ನಮ್ಮ ಮಾನವನ್ನು ದೇಶ-ವಿದೇಶದ ಮಟ್ಟದಲ್ಲಿ ಹರಾಜು ಹಾಕುವವರನ್ನು ಏನು ಮಾಡಬೇಕು?

    ಹಾಗೆಯೇ, ಇಷ್ತು ಆಭಾಸದ ವಿರೋಧಗಳಿದ್ದರೂ ನಮ್ಮ ದೇಶವನ್ನು ಪ್ರೀತಿಸುವ, ಇನ್ನೊಂದು ತರಹದ (ಬಲಪಂಥೀಯ) ಬುದ್ದಿಜೀವಿಗಳು ಮುಂದಿನ ಪರಿಸ್ಥಿಗಳ ಬಗ್ಗೆ ಚಿಂತನೆ ನಡೆಸಿರುವುದು ನಿಜಕ್ಕೂ ಮೆಚ್ಚಿಗೆ ಪಡುವಂಥದ್ದು. ಈ ಸಭೆಯಲ್ಲಿ ಮುಂದೆ ಬಾಳಬೇಕಗಿರುವ ಇಂದಿನ ಯುವಕರು ಭಾಗವಹಿಸಲಿಲ್ಲವೇಕೆ ಎಂಬ ಕೊರಗು ಮಾತ್ರ ಕಾಡುತ್ತಿದೆ.

    -ವೆಂಕಟೇಶ್, ಅಮೇರಿಕಾ.

  4. ವೆಂಕಟೇಶ್,
    ಚಂಪಾ ಸಾಹಿತಿಯೆ? ಅವರ ಕೃತಿಗಳು ಯಾವುವು? ಅವರು ಸಾಹಿತಿಯೆಂದು ಅವರಿಗೇ ಮರೆತು ಹೋಗಿರುವಾಗ ನೀವೇಕೆ ಅದನ್ನು ನೆನಪಿಸುತ್ತಿದ್ದೀರಿ? ಅವರೀಗ ಪೂರ್ಣ ಪ್ರಮಾಣದ ಠೇವಣಿಯಿಲ್ಲದ ರಾಜಕಾರಣಿ. ಎಂದೋ ಒಮ್ಮೆ ಯಾವುದೋ ಕೆಲಸಕ್ಕ ಬಾರದ ಸೃಜನಶೀಲ ಓದುಗರೊಬ್ಬರೂ ಓದದ ಯವುದೊ ಒಮ್ದು ಪುಸ್ತಕ ಗೀಚಿದ ತೆವಲಿನವರೆಲ್ಲಾ ಸಾಹಿತಿಗಳೆ?

  5. AMBADAS says:

    TO PRATAP SIR……………WHY ONLY U R BLAMING BUDDHIJEEVIS ???????U R S LOVING PEJAVARA SWAMIJI IN BRAHMIN FUNCTION PROCLAIMED “MANUSMRITI IS THE GREAT BOOK OF HINDUISM”……….”HE ASKED EVERY BRAHNINS TO FOLLOW MANUSMRITI “?????>>>>IS THAT CRUEL BOOK IS TO BE JUSTIFIED????????WHICH DIVIDED T BOOK ON THE BASIS OF BIRTH???????………
    WHY THESE PEOPLE’S ACTION WILL NOT COME TO U R GRT BRAIN??????…..HINDUS R DIVIDED BECAUSE OF CASTE………PPL LIKE GANESH,BYRAPPA ,CHIMU CANT UNITE HINDUS……….EVEN GOD CANT UNITE HINDUS BECOZ MANY BRAHMINS IN 21TH CENTURY R NOT ACCEPTING TAT ALL PEOPLE R EQUAL………..U CAN SEE DIFFERENT ORKUT COMMUNITIES TAT “BRAHMIN ENGINEERS T BEST”,”SANATANA DHARMA”,”BRAHMAN THE SOURCE OF ALL “ETC…………..

    TO STOP CONVERSION FIRST U GREAT PEOPLE HAVE TO GIVE EQUALITY MAN……………….IF EQUALITY PREVAILS THEN CONVERSION AUTOMATICALLY STOPS………….THATS WHAT “KAMALA HAMPANA” TOLD HINDUISM ONLY BELONGS TO SO CALLED 3% ARYA PEOPLE !!!!!!!!!!!!!!!!!!!

  6. AMBADAS says:

    TO ALL……………..”TALK ABOUT EQUALITY FIRST WHICH IS LEAST IN HINDUISM COMPARED TO OTHER RELIGIONS THEN TALK ABOUT CONVERSIONS”………………………………DR BABASAHEB AMBEDKAR RIGHTLY TOLD HINDUISM WHICH PREACHES CASTE SYSTEM ON T BASIS OF BIRTH CANT BE A RELIGION!!!!!!!!!!!!!!!!THE MOST CRUEL RELIGION IN THE EARTH PLANET ACCORDING TO FATHER OF CONSTITUTION………………..

  7. AMBADAS says:

    @ VENKATESH………….U PEOPLE ONLY WANT BRAHMINISM NOT EQUALITY TO ALL>……..ANYWAYS LAKHS OF DALITS N BACKWARD PEOPLE R CONVERTING TO OTHER RELIGIONS……….

  8. Venkat Tx says:

    @ AmbaDas,
    what do you think of yourself?
    Many times people claim themselves they are stupid and backward.
    You belong to such a clan. You din’t know what’s your own religion Hinduism, before converting.

    I know well that you are a Christian agent.
    Your Aim : to break the Hindu unity.
    Your Subject : Hindu literature.
    Your Policy : Divide and rule (taught by ur western pastors)
    Your Target : Brahmins ( since they are just 5%!)

    “If a person understands the ‘Sanatana Dharma’ concepts the then he never think of any other Way of life” said by Dr. Frank Morels, born Christian and became Hindu Acharya after studying the Hindu literatures.

    But you don’t want to understand any thing of Hinduism, you lazy buggers needed free money for country wine. So converted and got some free money and abuse Hindus saying that there is no equality!

    Have you ever read any of the Hindu holy books, before reading the Bible?
    What do you know about Manu Shastra?

    Friends,
    No one mentioned about ‘Manushastra’ here.
    But the very reason this ras*al brought this subject, because his Christian Masters asked them to do so!
    Christian cheating scholar like Max Muller, told these bas*rds that, “ManuShastra is the ‘Backbone’ of Hinduism, just try & break it, if you want to kill Hinduism”
    From the same ambadas’s clan, another christian bit*h, Manorama also, talks always about Manushastra!
    Since long time these cheating Christians preached against the key subject of Hinduism.

    You Converted Dalit Goondas have spread the hatred among the Rural Dalits and spoiled their lives.

    Hey, ambadas, Your wordings made my blood temperature rise.

    Can you tell how your Babasaheb Ambedkar came-up in his life?

    Fool, IF Brahmins never saw them equals, you would’nt have seen Great Personalities like Ambedkar, Shivaji Maharaj, Swami Vivekananda, Shishunal Sharief, Abdul Kalam and many more. They were never Brahmins by birth.

    None of the outsiders have rights to talk about Hinduism.
    Be Hindu & then talk/criticise about Hindu literatures.

  9. Munesh Gowda says:

    ಯೋ, ಲುಚ್ಚಾ ನನ್ ಮಗನೆ ಅಂಬಾದಾಸ,

    ಯಾಕ್ಲ, ಎಂಗೈತೆ? ಅಲ್ಕಣಯ್ಯ, ನೀವ್ ಗುಳು ಸುಚಿಯಾಗಿ ಬಂದರೆ ನಮಗೇನಯ್ಯ ಅತ್ರ ಸೇರ್ಸ್ಕಳಕ್ಕೆ?
    ನೀವ್ ತಿನ್ನದು ನಾವ್ ತಿನ್ನದು ಒಂದೇ ಅಲ್ವ? ಇಲ್ಲಾ ದನದ ಮಾ೦ಸ ಬೇಕು ಅಂತೀಯ?

    ಯಾಕ್ಲ, ಆ ಕ್ರಿಸ್ತಾನರ ಧರ್ಮಕ್ಕೆ ಸೇರ್ಕಂಡೆ? ಹೂ,ಗೊತ್ತಾತ್ ಬುಡು, ಯಾವ್ದೋ ಹುಡ್ಗಿಗೆ ಏಟ್ ಆಕದ?
    ಇಲ್ಲಾ ಕುಡಿಯಾಕೆ ಕೊಟ್ರು ಅಂತ ಹೋಗಿ ಏಸು ಪಾದಕ್ಕೆ ಸರಣು ಅಂದ್ಯ?
    ಥೂ ದರಿದ್ರ ನನ್ ಮಕ್ಳ, ನಿಮಗೇನು ನ್ಯಾಯ-ನೀತಿ ಎನನ ಐತಾ?

    ಗೊರ್ಮೆಂಟು ಸಪೋರ್ಟು ಐತೆ ಅಂತ ಎ೦ಗೆ೦ಗೊ ಬೇರೆಯವರನ್ನ ಬೈದಾಡ್ತೀರ? ನಿಮ್ಮ೦ಥವರನ್ನ ಸಿಗಿದು ಊರ್ ಬಾಗ್ಲೀಗೆ ನೆತಾಕ್ ಬೇಕು, ಧರ್ಮದ್ರೋಹಿ ನನ್ಮಕ್ಳ.

  10. Poornaiah, Kushal Nagar says:

    @ Ambadas,

    Ans to following questions.

    * Have you ever thought why you are a DALIT?
    * Don’t you feel ashamed of being called as dalit? Don’t you want to come forward?
    * Don’t say you are poor financially. Are you? According to govt reports 2006, Brahmins are the poorest financially, NOT Dalits.
    * Have you ever tried to improve your low mentality? If you are dirty who sits with you? * You come clean, well dressed and follow the decency then you are not a Dalit.
    * If you are equal why are you claiming reservation?
    * WHAT IS THE DIFERENCE BETWEEN A DALIT’S CHILD AND A BRAHMIN’S CHILED?
    *How do you raise your children. You want them to become Brahmins or to become another Dalit like you?

    Ambadas, If you are a Hindu you talk. If you are another converted goon, then don’t try to pier your nasty mouth here.
    You have no job here, since you have gone against the feelings of Hindus.

  11. AMBADAS says:

    @Venkat Tx…………THIS GUY IS TELLING MANUSMRITI IS T GRT SCRIPTURE OF HINDUISM………….OUR FATHER OF CONSTITUTION DR.AMBEDKAR RIGTHLY TOLD TAT “”MANUSMRITI””IS THE ONLY BOOK WHICH DIVIDED PEOPLE ON THE BASIS OF BIRTH ONLY!!!!!!!PEOPLE LIKE U R CREATING INEQUALITY IN HINDUS BY TELLING ONLY “”VIPRAS”” R GREAT AND ALL OTHERS AS SHUDRA…………..MANUSMRITI IS ALSO THE ONE WHICH HAVE DISCRIMINATED “””WOMEN”””…………..

  12. AMBADAS says:

    @Venkat Tx………….ASWER ME TO THIS POINT 1)STILL IN MANTRALAYA THERE IS SEPARATE FOOD GIVING FOR BRAHMANS AND OTHER CASTE PEOPLE…………WHY THIS INEQUALITY???????????
    2)YOURS LOVING MANUSMRITI IS CRITICISED BY “AMBEDKAR”,”MAHATMA GHANDI” AND “DAYANANDA SARASWATI”…………
    “”MANUSHASTRA IS THE BOOK WHICH IS T CAUSES FOR ALL PROBLEMS HAPPENING IN INDIA …….IT IS T CAUSES OF CASTE ORGANISATIONS<FIGHTING ETC;;;;;

    3)FINALLY IT IS THE RELIGION WHICH HAVE MORE “”UNITY “” WHICH GROWS NOT JUST IT IS VERY OLD!!!!!!!
    IF EQUALITY ARRIVES MEANS CONVERSIONS AUTOMATICALLY STOPS………..

  13. ಕನ್ನಡದ ಕಂದ says:

    To all who talk about Manusmriti. Have you read it? Do you know where to find it? Simply don’t talk. I don’t think even 99.99% of Hindus have read it. Leave others. Today’s caste problem is not because of Manusmriti, it is because of Politics. Is it OK if caste system is abolished and there will be no reservations based on caste??? Every one should be treated as equal and reservations must be based only on economic condition of an individual and not caste. Throw away the word ‘caste’ from dictionary. There will be nothing called Brahmins or Dalits. Are all those who talk about inequalities ready for this??? Those who think conversion is the solution to inequality, do you think after you are converted, you are treated on par with the people who are born with that religion? Do you think the person who converted you will marry his daughter to you? Come out of these stupid thinkings… Reality is that you are just being used as tools. If you really want equality, be clean, think clean, fight against politicizing caste and fight against reservations. Are you ready to do this??? (Ambadas, are you listening?). Fight against poverty and not against religion.

  14. AMBADAS says:

    @kannadada kanda………….AM NOT SUPPORTING RESERVATIONS HERE…….
    MY POINT IS WHY RACISM MENTALITY IS STILL EXISTING IN UPPER CASTE PEOPLE ESPECIALLY VIPRAS………
    1)U CAN SEE LOTS OF ORKUT COMMUNITIES LIKE “BRAHMIN ENGINEERS THE BEST”,”BRAHMAN THE SUPREME”,”BRAHMAN THE SOURCE OF ALL” ETC………IN THEIR FORUMS U CAN SEE HOW THEY BLAME ABOUT OTHER CASTE……
    WHY THESE UTTER RACISM ,BIGOTISM AM ASKING????????/ANWER ME SIR??
    2)NOWHERE IN CHRISTIANITY ,ISLAM ,BUDDHISM U CANT FIND ORKUT COMMUNITIES LIKE THIS………..IN HINDUISM ONLY THESSE TYPE OF RACISM,CASTEISM EXISTS……….

  15. Ambadas..or anybody who has similar mindset ,

    Have you gone through Dr Bhairappa’s articles on conversion? if not you better do that. But i doubt whether you are able to understand it!! you need some brain for that !! In one way we are grateful to you……… We Hindus unite together to protect our Dharma from barking dogs like you.

  16. Vijay says:

    Posted on 13 Jan 2009 at 1:33 am
    #14AMBADAS

    i think this guy forgot all thigs, what happened in mangalore & orissa & what happened due to christian

  17. ಕನ್ನಡದ ಕಂದ says:

    Ambadas, Two points:

    1. It is true that inequality exists in the mentality of people. But it exists all over the world in almost all major religions and not only in Hindus. Don’t you know about Shiite/Sunni fights? Why there is a term called “Dalit Christian”? Still there is inequality after conversion. May be they don’t have orkut community but inequality exists everywhere. Thats the fact. And orkut is not a platform for spreading hatred. Anyone can report “Abuse” & orkut will remove it if it is really abusive. And, stop thinking that inequality exists only in Hinduism. It is present almost everywhere…

    2. Do you think only minorities are suffering inequalities and not those of General Category? My friend’s uncle was working in a govt. organization and he was very furious one day. Do you know why? All those minorities who joined as his juniors were his Bosses after some time!!! This was just because of reservation. Do you know one more thing? Few years back more than 50% of engineering seats (approx 70%) were reserved under quotas. What should poor general category students do? Is this not inequality against so called upper castes? What happens due to these things? People who suffer due to reservations develop hatred among those who get reservations. Today, the main reason of hatred is more due to these reservations than due to Manusmriti. That’s why I have so many references to the word “Reservation”. People don’t even remember about something called ‘Manusmriti’ till there are some heated arguments.

    Today, people have matured and the hatred is mainly because of inequality on –BOTH– Majority & Minorities and not due to Manusmriti.
    Today, people prefer same caste marriages mainly due to same culture & food habits and not simply because of caste. Things have changed, mentality has changed…

    Finally, I don’t like hatred and I always felt these steps may solve the problem of inequality and hatred among people:
    1. Eliminate poverty and provide good education to all. (Solution to many many problems).
    2. Remove caste based reservation.
    3. Stop politicizing caste.
    4. Don’t vote someone just because he/she if of the same caste.

    These should axe the source of inequality & hatred.

    P.S.: I am not a politician and these are only my sincere thinkings.

  18. jayalakshmi says:

    ಕನ್ನಡದ ಕಂದ,ಕನ್ನಡದಲ್ಲಿ ಹಾಕ್ರೀ ನಿಮ್ಮ ಅಭಿಪ್ರಾಯಗಳನ್ನ….ಓದಲು ನನ್ನಂಥವರಿಗೆ ಸುಲಭವಾಗುತ್ತೆ:-)

  19. ಕನ್ನಡದ ಕಂದ says:

    ಜಯಲಕ್ಶ್ಮೀ, ನನಗೂ ಅದೇ ಇಷ್ಟ, ಆದರೆ ಹೆಚ್ಚು ಬರೆಯಬೇಕಾದರೆ ಕೀಲಿಗಳನ್ನು ಹುಡುಕುವುದೇ ಕಷ್ಟ 🙂

  20. Keshav says:

    Hi….Pratap
    Your article is simply superb…….,
    thanks to venkat tx and kannadada kanda…..
    ಒಂದು ಒಳ್ಳೆ ಪುಸ್ತಕ ಬರೆದು ಜನ ಮೆಚ್ಚುಗೆ ಪಡೆಯೋ ಯೋಗ್ಯತೆ ಇಲ್ಲ ಈ ಬುದ್ದಿ (ಲದ್ದಿ) ಜೀವಿಗಳಿಗೆ, ಸುಮ್ಮನೆ ಪ್ರಚಾರದ ಆಸೆ ಅದಕ್ಕೆ ಒಳ್ಳೆಯವರ ಬಗ್ಗೆ ಅವರ ವಿಚಾರದ ಬಗ್ಗೆ ಏನನನ್ನಾದರೂ (ಅಸಂಬದ್ದ) ಕಾಮೆಂಟ್ ಬರೆಯುವದು…
    ಆ ಪಾಕಿಸ್ತಾನದ ಭಯೋತ್ಪದಕರಿಗಿಂತ ಈ ಲದ್ದಿಜೀವಿಗಳು ತುಂಬ ಅಪಾಯಕಾರಿ ಮೊದಲು ಇವರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದರೆ ……….?

  21. jayalakshmi says:

    ಯಾರ ಬಗೆಗೇ ಆಗಲಿ,ಟೀಕಿಸುವಾಗ ಕೀಳಾದ ಭಾಷೆಯನ್ನು ಉಪಯೋಗಿಸುವುದು ಸಲ್ಲದು.ಗಣೇಶ್ ಅವರಂಥವರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಚಂಪಾ ಅವರ ನೈತಿಕ ಅಧಃಪತನವನ್ನು ತೋರಿಸುತ್ತದೆ.ನಮ್ಮ ಮನಸ್ಸಿನಲ್ಲಿದ್ದ ಭಾವನೆಗಳಿಗೆ ರೂಪು ಕೊಟ್ಟ ಲೇಖನ ನಿಮ್ಮದು ಪ್ರತಾಪ್ ಅವರೇ…ಅಭಿನಂದನೆಗಳು.

  22. Chida says:

    ಅಂಬಾದಾಸ ಮಾತಾಡೋದು ಟಿಪಿಕಲ್ ಚಂಪಾ ತರಹ ಇದೆ 🙂
    ದಲಿತ ಸಮಸ್ಯೆ ಇಂದ ಕ್ರಿಸ್ತಿಯನ್ ಧರ್ಮಕ್ಕೆ ಸೇರೋದಾದ್ರೆ, ಅದರಸ್ಟು ದಡ್ಡತನ ಇನ್ನೊಂದಿಲ್ಲ..
    ಯಾಕಂದ್ರೆ ಮತಾಂತರಗೊಂಡ ಕ್ರೈಸ್ತರನ್ನು “ದಲಿತ ಕ್ರೈಸ್ತರು ” ಅಂತ ಕರೀತಾರೆ 🙂
    ಅವರಿಗೆ ಉಳಿದ ಕ್ರೈಸ್ತರಿಗೆ ಸಿಗುವ ಸ್ಥಾನಮಾನ ಸಿಗುವುದಿಲ್ಲ .. ಬಹುಷಃ ಸ್ವಲ್ಪ ಸಮಯದ ನಂತರ ಹಣ ಕೊಡುವ ಬೇರೆ ಧರ್ಮಕ್ಕೆ ಮತ೦ತರವಾಗುತ್ತಾರೆ ಅನ್ನಿಸುತ್ತದೆ.. ದಲಿತರು ಮೀಸಲಾತಿ,ಒಳ ಮೀಸಲಾತಿಗಾಗಿ ಅಸೆ ಪಡುವುದು ಬಿಟ್ಟು ಬದುಕುವುದನ್ನ ಕಲೀಬೇಕು… ಬದುಕನ್ನ ಯಾವ ರಾಜಕಾರಣಿಯೂ , ಯಾವ ಮೀಸಲಾತಿಯೂ ಬದಲಾಯಿಸುವುದಿಲ್ಲ… ನಾವೇ ಬದಲಾಗಬೇಕು… ನಮಗೆ ಸಮಾನ ಮರ್ಯಾದೆ ಬೇಕಾದರೆ ಮತಾ೦ತರ ಪರಿಹಾರ ಅಲ್ಲ .. ದಲಿತರು ಎಲ್ಲರಂತೆ ಉತ್ತಮ ನಡವಳಿಕೆ, ಉತ್ತಮ ಮಾತು ,ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು , ವಿದ್ಯೆಗೆ ಪ್ರಾಮುಖ್ಯತೆ ಕೊಡಬೇಕು (ಇದೆಲ್ಲ ಎಲ್ಲ ದಲಿತರಲ್ಲೂ ಇಲ್ಲ ಎಂದು ಹೇಳುತ್ತಿಲ್ಲ ಆದರೆ ಸಾಮಾನ್ಯವಾಗಿ ಇದರ ಅಭಾವ ನಾವು ಗಮನಿಸಬಹುದು ) . ಈ ಬದಲಾವಣೆ ಆಗದೆ ಯಾವುದೇ ಧರ್ಮಕ್ಕೆ ಹೋದರು ಸಮಾನ ಸ್ಥಾನ ದೊರೆಯುವುದು ಅನುಮಾನ. ಇದನ್ನ ಅರ್ಥ ಮಾಡಿಕೊಂಡರೆ ಎಲ್ಲರಿಗು ಒಳ್ಳೇದು ಇಲ್ಲ ಅಂದ್ರೆ ದಲಿತರಿಗೆ ನಸ್ಟ.

  23. Raghu says:

    Good one Pratap.
    It is surprise that no body will make noice if there any statements againest Hindus. but, alomost all what so called seculer’s will barcle, if any small statement will be given againest others.

    First thing,”we should ask them, what is the meaning of seculerism?”.
    Is it mean, do what ever you want to hindu’s?.
    I am not againest crists or Muslims. But, as we are disturbing them, they should disturb others.

    Now a days, in all the church’s, we can see the name has been chaned
    like if the name of the church is ”St john’s church”, in kannada they will write as ” sent janara devalaya”. they had gone one step ahead and putting sanskrit sloka for christa like ”Om namo Christha yesuve namah”…..
    I don’t know, whether they are converting hindu’s to christans or they them self converting to hindu’s.

  24. prasadhegde says:

    ಅಂಬಾದಾಸ, ಮೊದಲು article ನ್ನು ಸರಿಯಾಗಿ ಓದು..ಆಮೇಲೆ ಕಾಮೆಂಟ್ ಮಾಡು..ಸುಮ್ಮನೆ ಹುಚ್ಚು ಹುಚ್ಚಾಗಿ ಏನೇನೋ ಟೈಪ್ ಮಾಡಬೇಡ..ಚಂಪಾ,ಮೂರ್ತಿ ಇಂಥವರು ಯಾವತ್ತು ಸಹ ನಮ್ಮ ಸಂಸ್ಕೃತಿ ಬಗ್ಗೆ ಒಳ್ಳೆ ಮಾತಾಡೋದೇ ಆಗಲಿ ಅಥವಾ ಅದರ ಸದಪುಯೋಗವಾಗಲಿ ಮಾಡುವಂಥ ಕಾರ್ಯ ಮಾಡಲ್ಲ..ಅಂಥವರು ಯಾವದೋ ತಗಡು ಕಮ್ಯೂನಿಸ್ಟ್ ಬೂಕ್ಸ್ ಒದಕೊಂದು ಅರ್ಥವಿಲ್ಲದ ಮಾತೆ ಆಡೋದು..ಪಕ್ಕಾ ಕಮ್ಯೂನಿಸ್ಟ್ ದೇಶಗಳೇ ಪ್ರಜಪ್ರಬುತ್ವದ ಕಡೆ ಹೊರಡುತ್ತ ಇರುವಾಗ ಈ ನಮ್ಮ ಬುದ್ದಿಜೀವಿಗಳಿಗೆ ಇನ್ನು ಬೊಗಳೆ ಬಿಟ್ಕೊಂಡು ಮಾನ ಮರ್ಯಾದೆ ಕಳ್ಕೊಲ್ಥಾ ಇದ್ದಾರೆ.. ಇಂಥ ನರಿ ಬುದ್ದಿಯವರಿಗೆ ಸಿಂಹ ಗರ್ಜನೆಯೇ ಸರಿಯಾದ ಉತ್ತರ..
    ಮತ್ತೊಂದು caste,caste ಅಂಥ ಬಡ್ಕೊಂಡು ಸಾಯ್ತಾ ಇರೋದು ಇನ್ನು ಅದೇ ರೀತಿ ಮೆಂಟಾಲಿಟಿ ಜನವೇ ಹೊರತು ಬ್ರಾಹ್ಮಣರಲ್ಲ..ದಲಿತರು ಸ್ವಯಮ್ ಪ್ರಜ್ಞೆ ಬೆಳೆಸ್ಕೊಂದ್ರೆ ಯಾವುದೇ ಸಮಸ್ಯೆ ಇರಲ್ಲ..ಅದು ಬಿಟ್ಟು ಯಾವನೋ ಹೇಳ್ದ ಅಂಥ ಹೇಳಿ ಸುಮ್ಮನೆ ಕಾಲು ಕೆರೆಯಾಕೆ ಹೋದ್ರೆ ಏನೇನೂ ಉಪಯೋಗವಿಲ್ಲ..

  25. Sathish Shetty says:

    ..1 more best out of u as usual..but i am really felt unsfe and unsecured in my own country after reading ur article..anyway lets hope for good(hoping is a crime whn thr is no reason to hope!)…
    but u hav wasted ur valuable time and telent by writing abt ‘champ(e)a’ and ‘anatha moorthi’…they r not ur stuff..they r the materials of ‘karavali ale’ and ‘policenews’ kind of print media. iam requesting all of u journlists! pls don’t write abt those kind of people..don’t giv them publicity..lets people forget the bad things..thr is lot good thong r happening around the world, write abt people like HEGGADE who hav reached the great height of service and society.

  26. ಏಸುದಾಸ says:

    ಹಲೋ ಕಾಮ್ರೇಡ್ ಅಂಬಾದಾಸ,
    ಯಾಕಪಾ, ನಮ್ಮ ಮನ ಮರ್ಯಾದೆ ಕಳೀತಿದೀಯ? ನೀನೆ ಹೇಳು, ನಾವು ಕನ್ವರ್ಟ್ ಆದವರು ಎಷ್ಟು ಜನ ಇವತ್ತು ಚೆನ್ನಾಗಿದೀವಿ? ಫಾದರ್ ಏನೇನೋ ಪ್ರಾಮಿಸ್ ಮಾಡಿದ್ರು. ಅಲ್ಪ ಸ್ವಲ್ಪ ಇಂಗ್ಲಿಶ್ ಕಲಿತಿದ್ದ ನನ್ನನ್ನೇ ಲೀಡರನ್ನಾಗಿ ಮಾಡಿದರು. ಹಿಂದೂಗಳ್ಮೇಲೆ ದಾಳಿ ಮಾಡ್ರಿ ಅಂದ್ರು, ನಾವೂ ಮಾಡುದ್ವಿ, ಏನಾಯ್ತು? ಪೊಲಿಸ್ರು ಒಂದಿಸ್ಟ್ ನಮ್ಮವರನ್ನ ತದುಕಿ ಒಳ ಆಕುದ್ರು.
    ಪಾದರ್ರು ನಿಮ್ಮಗಳಿಗೆ ಹೊಟ್ಟೆ, ಬಟ್ಟೆಗೆ, ಮನೆ-ಮಾಡು ಎಲ್ಲ ಕೊಡ್ತೀವಿ ಅಂತ ಏಳುದ್ರು, ಎನನ ಕೊಟ್ರ ಏಳು? ಕರ್ಚಿಗೆ ಅಂತ ೪ ಸಾವ್ರ ಕೊಟ್ಟಿದ್ರಾಗೇ, ಆ ಏಜೆಂಟು ೧ ಸಾವ್ರ ಇಸ್ಗಂಡ. ಇವತ್ತು ಆ ದುಡ್ಡು ನಮ್ತಾವ ಐತಾ ಏಳು?
    ನಮ್ ಗುಂಪುನಾಗೆ ಒಬ್ರುನ್ನು ಅತ್ರ ಸೇರಸ್ತ ಇಲ್ಲ, ಏನೋ ಅತ್ರ ಬಂದ್ರೆ ವಾಸ್ನೆ ಅಂತವ್ರೆ. ನಮಗಂತೂ ಬ್ಯಸರ ಅಗ್ಬುಟೈತಿ. ನಮ್ಮ ಗುಂಪ್ನವರು ಕನ್ನಡದವರು ಅಂತ ಆ ತಮಿಳು ಚರ್ಚ್ ನವರು ಬೇರೆ ಚರ್ಚಿಗೆ ಆಗು ಅನ್ನೋದು ಸರಿ ಐತಾ, ನೀನೆ ಏಳು?
    ನಿನ್ನೆ ಯಾರೋ ಬುದ್ದನ ಎಜ೦ಟ೦ತೆ, ಬಂದುದ್ದ. ತಲಿಗೆ ಐದು ಸಾವ್ರ, ಸರ್ಕಾರೀ ಚಾಕರಿ ಎಲ್ಲ ಕೊಡುಸ್ತಿವ್ನಿ ಅಂದ. ಇನ್ನೇನ್ ಮಾಡದು? ಅವ್ರು ದುಡ್ಡು ಕೊಟ್ರೆ ಅವ್ರ ಜಾತಿಗೆ ಓಯ್ತೀವಿ.
    ನಂಗೇನ್ ಬ್ರಾ೦ಬ್ರು ಗೌಡ್ರು ತರ ಇದ್ಯೆ ಐತಾ, ಯಾರ್ ದುಡ್ಡು ಕೊಟ್ರೆ ಅವ್ರ ಜಾತಿಗೆ ಸೇರ್ಕತಿವಿ.
    ಅಣ್ಣಾ, ನಿನ್ನ ಒಂದು ಸಾರಿ ಬೇಟಿ ಮಾಡಿದ್ದ ಗ್ಯಪಕ ಐತೆ, ಅದ್ಕೆ ಬರೆದೆ, ಕ್ವಾಪ ಮಾಡ್ಕಬ್ಯಾದ ಕಣನ್ನೋ. ಸರಿ ಬತ್ತೀನಿ ಆಯ್ತಾ?

  27. Venkat Tx says:

    Ambadas, Stop Barking!
    Hope Kannadada Kanda has given right answer to you. You see you own person is in bad shape, first look at him, his group, who are newly converted.

    Am not stupid to discuss Manushastra with you. Nither myself or your self are eligible to talk at that height.
    First you ask your so called Dalits to
    * get education.
    * Leave lazyness behind and study well.
    * Come clean & Better dressed, so that others dont feel bad at you.
    * Dont live to eat, instead eat to live (cow)
    * dont beg for reservation , put effort & come up in life, that lives forever.
    * Educated class is ready to spare their time, if you are ready to take extra tution and study well, but will you??

    Think over, nothing comes out if you just bark on the street.

  28. ಯೋಗೇಶ್ ಗೌಡ. ಆರ್ says:

    Nice artical pratap,ಚಂಪಾ ಮತ್ತು ಅನಂತ್ ಮೂರ್ತಿಗಳು ಇನ್ನೂ ಸಾಹಿತಿಗಳಾಗಿ ಉಳಿದಿಲ್ಲ ಅನ್ನೊದು ಅವರುಗಳ ಮಾತುಗಳಿಂದನೇ ತಿಳಿಯುತ್ತೆ. ಇವರುಗಳು ಬರಹ -ಸಾಹಿತ್ಯಗಳನ್ನು ಬಿಟ್ಟು ಬೇರೆ ಎಲ್ಲಾದರಬಗ್ಗೆ ಮಾತಾಡೋಕೆ ಶುರುಮಾಡಿದ್ದಾರೆ. ನನ್ನ ಪ್ರಕಾರ ಬುದ್ದಿಜೀವಿ ಅನ್ನಿಸಿಕೊಂಡೊರು ರಾಜಕೀಯ ವ್ಯಕ್ತಿಗಳ ಪರಿಚಯ ಇರಬೇಕೆ? ಹೊರತು, ಗೆಳೆತನ ಇರಬಾರದು. ಬುದ್ದಿಜೀವಿಗಳು ಕ್ರಿಕೆಟ್ ಮ್ಯಾಚ್ ನ ತೀರ್ಪುಗಾರರ ಹಾಗಿರಬೇಕು. ಆದರೆ ಈ ಅನಂತ್ ಮೂರ್ತಿಯವರು ಗೌಡರ ಪಕ್ಷ ಸೇರಿರೊ ಹಾಗಿದ್ದಾರೆ!, ಮೊನ್ನೆ ಯಾವುದೊ ಪುಸ್ತಕ ಬೇರೆ ಬರೆದುಕೊಟ್ಟಿದ್ದಾರೆ. ನಮ್ಮ ಭೈರಪ್ಪ ಮತ್ತು “ಚಿಮು” ರವರು ಅಂಕಿ- ಅಂಶ, ದಾಖಲೇ ಪತ್ರಗಳ ಜೊತೆ ಕೋರ್ಟ ನಲ್ಲಿ ನಡೆಯೋರೀತಿ ವಾದ ಮಾಡಿದರೆ, ಈ ಎಡಬಿಡಂಗಿ ಬುದ್ದಿಜೀವಿ ಗಳು ನೀರಿಗಾಗಿ ಕೊಳಾಯಿ ಮುಂದೆ ಜಗಳವಾಡೋ ಹರುಕಲು ಬಾಯಿ ಹೆಂಗಸರ ಹಾಗೆ ಹರುಚುತ್ತಾರೆ. ಆದ್ದರಿಂದ ಇಂತವರನ್ನು ಮನೆ ಬಾಗಿಲ ಮೂಲೆಯಲ್ಲೆ ಇಡಬೇಕು.ಭೈರಪ್ಪ ಅಂತವರಿಗೆ ನಮ್ಮ ಬಾಹ್ಯ ಬೆಂಬಲ ಕೊಡುತ್ತಾ,ಇನ್ನು ಹೆಚ್ಚಿನ ಕಾರ್ಯಸಾದನೆಗೆ ಪ್ರೊತ್ಸಾಹಿಸ ಬೇಕು.

  29. AMBADAS says:

    @VENKAT TX……..
    THHERE R MANY ELITE DALITS WHO HAVE ACHEIVED GREAT THINGS………..CHEIF JUSTICE OF INDIA BALAKRISHNAN IS A DALIT……..
    1)NOWADAYS EVERY ONE IS BECOMING CLEAN…………IT IS NOT THE CASTE WHICH DETERMINES THEIR CLEALINESS………..
    2)U CAN SEEE THAT IN IIMS EACH YEARS ABOUT 200 DALIT STUDENTS HAVE GOT PLACED IN DREAM COMPANIES WHICH SHOWS THEY R HARDWORKING!!!!!

    MY FINAL QUESTION TO U PEOPLE SO CALLED “BORN FROM BRAHMA’S HEAD ”
    PEOPLE (“VIPRAS”)
    1)FOLLOW THE CONSTITUTION OF INDIA NOT SO CALLED BLADY CASTE DIVISION BOOK CALLED “MANUSMRITI”…………
    2)NO ONE BECOMES GREAT BY BIRTH ……..R U THINKING U R GRT BECOZ U R BORN IN VIPRA FMILY???????????………….A PERSON CAN BE ONLY GREAT BY HIS DEEDS!!!!!
    3)STOP RACISM AND ALLOW ALL CASTE,ALL RELIGIONS PEOPLE TO ENTER TEMPLES…….
    ALLOW LEGENDARY SINGER JESUDAS TO TEMPLE…………
    4)STOP COMMUNITIES IN ORKUT LIKE “”BRAHMIN ENGINEERS T BEST”””,””BRAHMAN THE SUPREME ETC”””””””………LEAVIVE WITH HUMANITY……………….
    IT IS THE DIVISION MAKES WHICH HINDUS LESS UNITE…..MIND IT EVEN U R PRAVIN TOGADIA TOLD TAT MAIN BLOT TO HINDUISM IS “CASTE DIVISION ” AND “EQUALITY”……….

    5)KNOWLEDGE CANNOT BE LOST BY SHARING…….U HAVE CONCENTRATED VEDIC KNOWLEGE FOR 3600 YEARS!!!!!!!!!!……SHARE KNOWLEDGE AND TRUTH WITH ALL PEOPLE……….

  30. AMBADAS says:

    @venkatesh tx……remember it is tha mayawati who is a dalit lady has given a “new life ” to brahmans of utterpradesh by giving them equal political power!!!!

  31. Tejas says:

    To ambadas 🙂
    2)U CAN SEEE THAT IN IIMS EACH YEARS ABOUT 200 DALIT STUDENTS HAVE GOT PLACED IN DREAM COMPANIES WHICH SHOWS THEY R HARDWORKING!!!!!
    do you have the data on how many dalits wasted IIM seat by getting it through blooddyyyy reservation and not able to clear the exam ?
    y dont u post that also? r u ashamed of that data ?

  32. Pravs says:

    @ AMBADAS,
    1> F**ker, please get over this reservations, inequality, untouchability and etc. Need of the hour is stand united as single Hindu community and stop conversion
    2> the solitary incidents like not allowing Yesudas or anyone into temple is more a political issue, which is way beyond our control.
    3> Forget Vedas, get basics right… ask your people attend school first, (make use of reservation) get educated this will solve major problems of your lives. Later as B R Ambedkar did, you can study Vedas . ( there are govt vedic schools, off course you can use reservations !!!!).
    4> SLB, Ganesh, Chidu, Prathap are educating people on conversions and its effects on Hindu culture, now its up to all of us to spread the message and take steps to stop this conversions.

  33. AMBADAS says:

    @pravs………thanks for comments………am srry if anybody got hurted by my comments……..
    i made this comments becoz i got hurted too much when upper caste people discriminate on lower caste people……when i was young my family failed to get a rental house just becoz we r lower caste!!!!!!!!!!!

    and also watching unity in other religions and no unity among hindus also made me to make this comment…..
    anyway this is my last comment…..

  34. Tejas says:

    @ambadas
    unity in hindus will come when dalits understand what chida said…

  35. Kiran, UK says:

    Hello Friends,

    This Ambadas has spoiled the whole comments column, when we wanted to write something creative towards the Pratap’s article.
    Do you still think he is a Hindu? Never, he is a christian agent spareheaded by the gospel churches. He don wanna have Hindu unity.
    He just wanna break Hindu back bone. That will be true only in his dreams!
    Look at YESUDAS #26, such people are suffering afte conversion.

    One of my nighbour in Bengaluru is a Dalit. He never claimed for reservation for himself or his sons in his lifetime. He is retired chief Manger in HAL. His two sons, one in UK & one in USA doing extreamly good.

    Am being a Brahmin, had no hesitation to take his advise & got his blessings after touching his feet (namaskara) whenever I visited India. So, why we value such persons?
    He is a Dalit? I never considerd him like that.
    Can This Ambadas take a CUE from this example?

    Thanks to all Hindu supporters, Venkat Tx, Kannadada kanda, Mahesh, chida, Raghu, Prasad, Pravs, Tejas… in particular. We need to unite.

    By the by khudos to Pratap for good article.

  36. Daya Halekote says:

    @ AMBADAS,
    Sudras,Vaisya,Kshatriya,Brahmin are not caste,4 basic types of human consciousness.

    Qualitatively, SUDRAS are those who see life no greater purpose than satisfaction of wants and desires of body; such persons eat, sleep, work, multiply and finally die. Millions today live in the sudra state-concerned merely with the comfort and pleasure of the body.

    The man in the Vaisya or mentally active state is always busy getting things done. Some people of this class think of nothing but business; they live only to earn money, which they usually squander on sense enjoyments. But the best Vaisya type of businessman is much more evolved and creative in nature.

    The Kshatriya class are those who, after having had the experience of earning money and of creating something along business lines, begin to understand what life is all about; they strive by self-control to win the battle with the senses.(The Vaisya man doesn’t engage himself in such effort for inner improvement. He simply earns money and produces children and seldom thinks about the meaning of life except in terms of business).But the Kshatriya class takes life more seriously. Such a man asks himself “Should I not struggle with and destroy my bad habits?” He feels a desire to overcome evil tendencies and to do what is right.

    The Last and highest state of consciousness is called Brahmin,those of contemplative nature, spiritually inspired and inspiring, the wisdom state ,attained by man through his own effort when he has over come all attachment to the senses and remains consciously immersed in Brahma(one self) or God.

    Every human being fits into one of these four basic types of consciousness…… one can attine highest state of consciousness through analyzing and meditating,that is called YOGA.
    By Pramahansa yogananda author…… AUTOBIOGRAPHY OF A YOGI

    AMBADAS, conversion is not solution for happy life, to know that come and stay in Africa like Kenya,Uganda,Rwanda, Congo,Tanzania ……

    Don’t convert †change consciousness,for happy and healthy life.

    Thank you Pratap for very nice article.keep going …….we are with you.

  37. Varaha says:

    Dear All,

    Being a brahmin, I agree that,

    1. There is severe inequality in the practice of Hinduism.
    2. Brahmins are educationally and socially forward than others for many centuries now.
    3. But for the practice of inequality, as popularly made out by everybody, brahmins are not the only reason. The landlords, and rulers, whichever caste thay belonged to, were the main perpetrators of inequality. To keep their property intact, they had to practice inequality.
    4. Brahmins had definetely helped such rulers to propegate inequality, by writing “Manusmritis” from time to time. But any body can see that Brahmins, by their miniscule population are incapable of implementing any Manusmrithi with of muscle power or money power. How can a community which was never more than 5% of total population can control the 95%?
    5. Brahmins, usually think that they are the only intelligent creatures in this Gods creation. They rarely get to see that all human beings are almost equally intelligent.
    6. And another illusion they are always in is, that they are the only “clean” ones. I don’t know how to judge one is clean or not. A human being, whoever he may be, stinks if he doesn’t bath for two days. This is true for even brahmins! Surely there are many brahmins who are very unclean, and many others, who are really very clean.
    7. Mr. R. Ganesh is very talented, that he can memorise a lot, but he is not a creative writer. He is a true “GODDU PANDITHA”
    8. Now many can see the hollowness of Mr. Pratapsimha. He writes all lies, like his guru Bhairappa. His hidden agenda is to create as much support as possible, to BJP, the party of “DESHADROHIS” and cowards.

  38. anchan says:

    pratapsimha,
    Your article shows that your heart and mind is filled with full of hatred. you are in need of psychological counselling.

  39. prasanna says:

    nice article
    last sentence was fine

  40. Rajkumar says:

    @#36Daya Halekote
    Very good explanation.
    Nice article Pratap. Keep going………..

  41. http://www.sendspace.com/file/m21271
    ಮತಾಂತರ ಸತ್ಯದ ಮೇಲೆ ಹಲ್ಲೆ ಕಾರ್ಯಕ್ರಮದಲ್ಲಿ ಭೈರಪ್ಪನವರ ಮಾತುಗಳ ಧ್ವನಿ ಮುದ್ರಿಕೆ ಇಲ್ಲಿದೆ ಇಳಿಸಿಕೊಳ್ಳಿ.

  42. http://www.sendspace.com/file/m2127l
    ಕೊಂಡಿ ತಪ್ಪಾಗಿದೆ ಇಲ್ಲಿ ಪ್ರಯತ್ನಿಸಿ

  43. http://www.sendspace.com/file/ketknr

    ಶತಾವಧಾನಿ ಗಣೇಶ್ ರ ಮಾತುಗಳಿಗಾಗಿ ಇದನ್ನು ಚಿಟುಕಿಸಿ

  44. ಡಿಯರ್ ಕನ್ನಡ ಕಂದ,
    ನೀವು ಕನ್ನಡದಲ್ಲಿ ಟೈಪ್ ಮಾಡುವುದಕ್ಕೆ http://www.googlekannada.com ತೆರೆದು ಇಂಗ್ಲೀಷಲ್ಲಿ ಟೈಪ್ ಮಾಡಿದರು ಕನ್ನಡದ ಅಕ್ಷರ ಬರುತ್ತೆ….!
    ಟ್ರೈ ಮಾಡಿ.!

  45. varthi says:

    #38 anchan nimage bari desha na halmadoru bekantha annasathe deshad bagge gourav hagu uddar maduarannu hagu deshad system annu change madalikke hodare avarnella psychological counselling madbeku antha idera first nemage adu necessary ide annasthe…Anchan nange doubt bartha ide nivu indiadavrige huttidda or pls confirm madkolli nimma parents innda….

  46. kiran says:

    ಅಪ್ಪ ಮಹಾಶಯ ಅಂಬದಾಸ
    ನಿನ್ನ ಎಲ್ಲ ಕಾಮೆಂಟ್ ಗಳನ್ನ ನೋಡು ಒಂದು ಬಾರಿ. ಎಲ್ಲ ಕಡೆ ಮನುಸ್ಮ್ರ್ತಿ ಪೇಜಾವರ,ಮನುಸ್ಮ್ರ್ತಿ ಏಸುದಾಸ್, ಬರೀ ಮನುಸ್ಮ್ರ್ತಿ ಮಾತ್ರ ನಿನ್ನ ಕಣ್ಣಿಗೆ ಕಂಡದ್ದು ಅಲ್ಲವೇ .ಅದನ್ನು ಬಿಟ್ಟು ಹಿಂದೂ ಧರ್ಮ ಎಷ್ಟು ಆಘಾದವಾಗಿದೆ ಒಮ್ಮೆ ನೋಡಿದಿಯ? ವೆದದಿಂದ ಹಿಡಿದು ಭಗವತ್ಗೀಥೆ ತನಕ ನೂರಾರು ಪುಸ್ತಕಗಳು ಸಿಗುತ್ತವೆ ಅಂದರೆ ಹಿಂದೂ ಧರ್ಮ ದಲ್ಲಿ ಎಲ್ಲವು ಒಂದೊಂದು ಗೀತೆ ಇದ್ದ ಹಾಗೆ. ಇದು ಒಂದು ಧರ್ಮ ಕೂಡ ಅಲ್ಲ ಒಂದು ನಾಗರೀಕತೆ ಅನ್ನುವುದನ್ನು ಮರೆಯಬೇಡ . ಧರ್ಮದ ಬಗ್ಗೆ ಇಷ್ಟು ಸಾಕು . ಇನ್ನು ಮಾಯಾವತಿ ಬಗ್ಗೆ ಹೇಳಿದಿಯ ತು… ನಿನ್ನ ಜನ್ಮಕ್ಕೆ ಹೋಗಿ ಹೋಗಿ ಈ ರಾಜಕಾರಿನಿಗಳನ್ನ ಹೊಗಳುತ್ತಿದ್ದೀಯ ನೀನು ಯಾವ ದಿಕ್ಕಿಗೆ ಮಕಾಡೆ ಮಲಗಿದ್ದಿಯ ಒಂದು ಬಾರಿ ನೋಡಿಕೋ. ಈ ನಿನ್ನ ಮಾಯಾವತಿ ,ಸೋನಿಯಾ ,ದೇವೇಗೌಡ,ಯಡ್ಡಿ -ಚಡ್ಡಿ ,ಕೋಡಂಗಿ ಖರ್ಗೆ,ಲಾಲು ,ಲ ಕ ಅಡ್ವಾಣಿ ಅತ್ವವ ಇನ್ನು ಯಾವುದೇ ನೀಚ ದರಿದ್ರ ರಾಜಕರಿನಿಗಳು ನಿಮ್ಮ ಸಹಾಯಕ್ಕೆ ಬರುವುದಿಲ್ಲ ತಿಳ್ಕೋ , ಎಲ್ಲ ಧರ್ಮ ದಲ್ಲೂ ಸಮಸ್ಯೆಗಳಿವೆ ಅದನ್ನೇ ಸರಿ ಪಡಿಸಿಕೊಲ್ಲೋದರಲ್ಲಿ ನಿನ್ನ ಜಾಣತನ ಅಡಗಿದೆ . ಮತ್ತು ನೀನು ಹೇಳಿದ ಹಾಗೆ ನೀನು ಚಕ್ಕವನಿದ್ದಾಗ ಜಾತಿ ಗೋಸ್ಕರ ನಿನಗೆ ಮನೆ ಕೊಡಲಿಲ್ಲ ಅಂಥ ಹೇಳಿದ್ರಲ್ಲ ಯಾಕೆ ಸುಮ್ಮನೆ ಸುಳ್ಳು ಹೇಳುತ್ತೀರಿ. ನಿಮ್ಮ ಬಡತನ ನಿಮ್ಮನ್ನು ಆ ಗತಿಗೆ ತಂದದ್ದು ಯಾಕೆ ಗೊತ್ತ ಅಂಬಿ ನಿಮ್ಮ ಹತ್ತಿರ ದುಡ್ಡು ಇದ್ದಿದ್ರೆ ನೀನು ಬ್ರ್ಹಮಣನೆ ತಿಳ್ಕೋ ನಿಂಗೆ ಮನೆ ಅಲ್ಲ ಅರಮನೆ ಸಿಗುತ್ತಿತ್ತು. ಈ ಸತ್ಯವನ್ನ ಮರಿಬೇಡ ಎಲ್ಲರು ಬದುಕ್ಕುತ್ತಿರುವುದು ಹಣಕ್ಕಾಗಿ . ನೀನು ಕೂಡ ದುಡ್ಡಿಗಾಗಿ ತಾನೆ ಧರ್ಮ ಬಿಟ್ಟದ್ದು ? ಇದನ್ನಾದರು ಒಪ್ಪಿಕೊ .ಒಂದು ಬಾರಿ ಗೀತೆ ಓದು ಬೈಬಲ್ ನಷ್ಟೇ ಚನ್ನಾಗಿದೆ . ನೀವೆಲ್ಲ ಹೇಗೆ ನಮ್ಮ ಸಂನ್ಯಸಿಗಳನ್ನ ಇಷ್ಟ ಪದ್ವುದಿಲ್ಲ್ವೋ ಹಾಗೆ ನಾವು ಕೂಡ ನಿಮ್ಮ ದರಿದ್ರ ಪಾದ್ರಿಗಳನ್ನ ಒದಿಬೇಕು ಅನ್ಸುತ್ತೆ ಆದರೆ ನೆನಪಿತ್ತಿಕೋ ನಾವು ಏಸುವನ್ನು ತುಂಬ ತುಂಬ ಪ್ರೀತಿಸುತ್ತೇವೆ ಮತ್ತು ಆರದಿಸುತ್ತೇವೆ ಯಾಕೆ ಗೊತ್ತ ಅವರು ನಿಮ್ಮ ಪಾದ್ರಿಗಳ ಹಾಗೆ ಹಿಂದೂಗಳ ಮೇಲೆ ಹಗೆ ಸಾಧಿಸಲು ಹೇಳಿಲ್ಲ ಈ ಸತ್ಯವನ್ನ ತಿಳ್ಕೋ ಮುಠ್ಠಾಳ . stupid

  47. supriya says:

    e aritcle odi tumba kushi atu “navu maulya endu tilidukondaddu enodu samakke apamaulya enisibidutade”? ok bye

  48. Nalini says:

    Nice article Pratap. As always, your writing is thought provoking. I think the comments here are totally irrelevant to what has been written by pratap. Unnecessary writings by Ambadas and reply to his stupid comments. Champa has replied to this in “Hi Bangalore” paper in his own childish way. Ravi Belegere has published, as he is a cheap journalist, out there to make money.
    Keep up the good work, Pratap. We are with you.

  49. NS says:

    ಅಂಬಾದಾಸ್‌
    Go and eat ಆಂಬಡಾಸ್‌ (ಆಂಬೊಡೆ) LOL

  50. jeevappa pujar bagalkot says:

    Champa mattu anantmurti ge buddi kettu huchu naayi(beedinaayi) taraha eneno bogaltaare. Inta hesige tinno naayigala bogoluvikege doddoru pratikriyisodilla. Ast saaku ivru enta kachda sahitigalu anta tilkoloke.