Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ !

ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ !

ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ !

ಡಿವೈಎಸ್‍ಪಿ ಎಂ.ಕೆ ಗಣಪತಿ ಉಟ್ಟ ಸಮವಸ್ತ್ರದಲ್ಲೇ  ಆತ್ಮಹತ್ಯೆ ಮಾಡಿಕೊಂಡಾಗ ತಕ್ಷಣ ಮನಸ್ಸು ಓಡಿದ್ದು 20 ವಷ೯ಗಳ ಹಿಂದೆ. ಆ ಘಟನೆಗೂ ಇಂದಿನ ಗಣಪತಿ ಪ್ರಕರಣಕ್ಕೂ ದಶಕ ಎರಡು ಕಳೆದರೂ ಎಷ್ಟೋಂದು ಸಾಮ್ಯತೆಯಿದೆ ಹಾಗೂ ದೇಶ ಕಾಂಗ್ರೆ ಸ್ ಮುಕ್ತವಾಗದ ಹೊರತು ವಷ೯ ಇಪ್ಪತ್ತಲ್ಲ, ನೂರಿಪ್ಪತ್ತಾದರೂ ದಕ್ಷರ ಜೀವಕ್ಕೆ ಬೆಲೆಯಿಲ್ಲ ಎಂದೇ ಮನಸ್ಸು ಹೇಳುತ್ತಿತ್ತು. 20 ವಷ೯ಗಳ ಹಿಂದೆ ಇದ್ದ ಅದೇ ರಾಜಕೀಯ ಒತ್ತಡ, ಪೊಲೀಸ್ ಇಲಾಖೆಯ ಮೇಲೆ ಪ್ರಭಾವಿಗಳ ಹಸ್ತಕ್ಷೇಪ, ಭಟ್ಟಂಗಿಗಳ ರಕ್ಷಣೆ-ಓಲ್ಯೆಕೆ, ಪ್ರಾಮಾಣಿಕರಿಗೆ ಇನ್ನಿಲ್ಲದಂತೆ ಮಾನಸಿಕ ಕಿರುಕುಳ ಇನ್ನೂ ಹಾಗೆಯೇ ಇದೆಯಲ್ವಾ ಎನಿಸುತ್ತಿತ್ತು. ದಕ್ಷ ಅಧಿಕಾರಿಗಳೆಲ್ಲರೂ ಕಾಂಗ್ರೆ ಸ್ ನಾಯಕರ ಕಾರಣದಿಂದ ಆತ್ಮಹತ್ಯೆಗೆ ಮೊರೆಹೋಗುತ್ತಾರೇಕೆ ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಬಂದಿತ್ತು.

20 ವಷ೯ಗಳ ಹಿಂದೆ ಇದೇ ಮಂಗಳೂರಿನಲ್ಲಿ ನಡೆದ ಘಟನೆಯನ್ನು ತುಲನೆ ಮಾಡಿದರೆ ಗಣಪತಿ ಪ್ರಕರಣ ಸುಲಭವಾಗಿ ಅಥ೯ವಾಗುತ್ತದೆ. ಅವರು ಮನೋಹರ್ ಸೋನ್ಸ್. ದೊಡ್ಡ ದೇಹ, ಹುರಿ ಮೀಸೆ. ನೋಡಲು 80ರ ದಶಕದ ಹಿಂದಿ ಸಿನಿಮಾಗಳಲ್ಲಿ ತೋರಿಸುತ್ತಿದ್ದ ದಕ್ಷ ಪೊಲೀಸ್ ಅಧಿಕಾರಿಯಂತೆ ಕಾಣುತ್ತಿದ್ದರು. ನೇರ ಮತ್ತು ಮುಲಾಜಿ ಲ್ಲದ ಮಾತು, ಕೆಲಸದಲ್ಲಿ ಒತ್ತಡಕ್ಕೆ ಒಳಗಾಗದ ಪ್ರವೃತ್ತಿ ಮನೋಹರ ಸೋನ್ಸ್‍ರದ್ದು. ಆಗ ಮಂಗಳೂರಿನ ಸುರತ್ಕಲ್‍ನಲ್ಲಿ ಮೂಲ್ಕಿ ಠಾಣೆಯ ಔಟ್ ಪೋಸ್ಟ್ ಮಾತ್ರ ಇತ್ತು. ಸೋನ್ಸ್ ಅಲ್ಲಿ ಎಎಸ್‍ಐ ಆಗಿ ಕತ೯ವ್ಯದಲ್ಲಿದ್ದರು. ಆಗ ಸಣ್ಣ ಪೇಟೆಯಾಗಿದ್ದ ಸುರತ್ಕಲ್ಲಿನಲ್ಲಿ ಸೋನ್ಸ್ ಪ್ರಾಮಾಣಿಕ ಪೊಲೀಸ್ ಎಂದು ಹೆಸರು ಗಳಿಸಿದ್ದರು. ಸಾಮಾನ್ಯರೊಟ್ಟಿಗೆ ಬೆರೆಯುವ ಪೊಲೀಸ್ ಎಂದು ಖ್ಯಾತರಾಗಿದ್ದರು. ನಂತರ ಅವರನ್ನು ಆಗ ಮಂಗಳೂರಿನಲ್ಲಿದ್ದ ಜಿಲ್ಲಾ ಅಪರಾಧ ಪತ್ತೆ ದಳ (DCIB)ಗೆ ವಗಾ೯ವಣೆ ಮಾಡಲಾಯಿತು. ಅದೇ ಹೊತ್ತಲ್ಲಿ ಭಟ್ಕಳದಲ್ಲಿ ಕೋಮುಗಲಭೆ ಆರಂಭವಾಗಿತ್ತು. ಅದುವರೆಗೆ ರಾಜ್ಯ ಕಂಡು ಕೇಳರಿಯದ ಭಟ್ಕಳ ಗಲಭೆಯನ್ನು ನಿಯಂತ್ರಿಸಲು ದ.ಕನ್ನಡ ಜಿ ಲ್ಲಾ ಅಪರಾಧ ಪತ್ತೆ ದಳವನ್ನು ಭಟ್ಕಳಕ್ಕೆ ಕಳುಹಿಸಲಾಯಿತು. ಕೆಲವೇ ವಾರಗಳಲ್ಲಿ ದಂಗೆ ಅಡಗಿಸಿ ಸೋನ್ಸ್ ಮತ್ತು ಅವರ ತಂಡ ಮಂಗಳೂರಿಗೆ ಮರಳಿತು. ಭಟ್ಕಳದಲ್ಲಿ ಸೋನ್ಸ್ ಅವರ ಶ್ರಮ, ಕಾಯ೯ತಂತ್ರ, ಯೋಜನೆಗಳನ್ನು ಕಣ್ಣಾರೆ ಕಂಡ ಮಂಗಳೂರಿನ ಅಂದಿನ ಎಸ್‍ಪಿ ಸೋನ್ಸ್ ಅವರಿಗೆ ಬಡ್ತಿ ನೀಡಿ ಮಂಗಳೂರು ನಗರದ ಪಾಂಡೇಶ್ವರ ಎಸ್‍ಐ ಆಗಿ ನೇಮಕ ಮಾಡಿದ್ದರು.

ಮಂಗಳೂರಿನಲ್ಲಿ ಮನೋಹರ್ ಸೋನ್ಸ್ ಖದರು ಅಲ್ಲಿಂದ ಆರಂಭವಾಯಿತು. ಅದು ಮಂಗಳೂರಿನಲ್ಲಿ ಕ್ರೈಮ್ ರೇಟ್ ಏರುತ್ತಿದ್ದ ಸಮಯ. ಗ್ಯಾಂಗ್‍ವಾರ್‍ಗಳು ವಿಪರೀತ ಹೆಚ್ಚಿದ್ದವು. ಮುಂಬ್ಯೆ ಬೇರುಗಳ ಬಲದಿಂದ ನಗರದಲ್ಲಿ ಚಿನ್ನದ ಕಳ್ಳ ಸಾಗಣೆ ಜಾಸ್ತೀಯಾಗಿತ್ತು. ಕಳ್ಳ ಸಾಗಣೆದಾರರಿಗೆ ಮನೋಹರ್ ಸೋನ್ಸ್ ಸಿಂಹ ಸ್ವಪ್ನವಾದರು. ಒಂದಲ್ಲಾ ಒಂದು ದಿನ ತಾನು ಚಿನ್ನ ಕಳ್ಳಸಾಗಣೆದಾರರ ಬೆನ್ನುಮೂಳೆ ಮುರಿಯುವುದಾಗಿ ಸೋನ್ಸ್ ಹೇಳಿಕೊಂಡು ತಿರುಗಾಡುತ್ತಿದ್ದರು. ಒಂದು ದಿನ ಪಾಂಡೇಶ್ವರ ಠಾಣೆಗೆ ಒಂದು ಮಾಹಿತಿ ಬಂತು. ಆ ಮಾಹಿತಿಯ ಪ್ರಕಾರ ಕಾಸರಗೋಡಿನಿಂದ ವ್ಯಕ್ತಿಯೊಬ್ಬ ಮಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದಾನೆಂದೂ, ಮತ್ತು ಆತನ ಬಳಿ ಯತೇಚ್ಛ ಪ್ರಮಾಣದ ಕಳ್ಳ ಚಿನ್ನವಿದೆಯೆಂದೂ, ಆತ ಇಂತಿಂಥ ಬಣ್ಣದ ಬಟ್ಟೆ ಯನ್ನು ಧರಿಸಿದ್ದಾನೆಂದೂ ಪಾಂಡೇಶ್ವರ ಠಾಣೆಗೆ ಮಾಹಿತಿ ಬಂತು. ಮನೋಹರ್ ಸೋನ್ಸ್ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ರೈಲು ನಿಲ್ದಾಣಕ್ಕೆ ಕಳುಹಿಸಿ ಆತನನ್ನು ಬಂಧಿಸಿ ತರುವಂತೆ ತಿಳಿಸಿದರು. ಆದರೆ ಕಾನ್ ಸ್ಟೇಬಲ್‍ಗಳು ಆತನನ್ನು ಬಂಧಿಸುವ ಹೊತ್ತಿಗೆ ಆತ ಚಿನ್ನವನ್ನು ಕೈಬದಲಾಯಿಸಿದ್ದ. ಠಾಣೆಗೆ ಕರೆತಂದ ಕಳ್ಳನಿಂದ ಸೋನ್ಸ್ ಸತ್ಯ ಬಾಯಿ ಬಿಡಿಸಿದರು. ಆತ ಪೊಲೀಸರಿಗೆ ಮಾಹಿತಿದಾರನಾಗುವ ಮಾತು ಕೊಟ್ಟು ಠಾಣೆಯಿಂದ ಹೊರಬಂದ.

ಅಲ್ಲಿಂದ ಕಳ್ಳಸಾಗಣೆದಾರರ ಅಸಲಿ ಆಟ ಶುರುವಾಯಿತು. ಚಿನ್ನ ಕಳ್ಳಸಾಗಣೆದಾರರು ಸೋನ್ಸ್‍ಗೆ ಒಂದು ಗತಿ ಕಾಣಿಸಬೇಕೆಂದು ತಂತ್ರ ಹೆಣೆದರು. ರೈಲು ನಿಲ್ದಾಣದಲ್ಲಿ ಸೆರೆಸಿಕ್ಕ ಆ ಮನುಷ್ಯ ನೇರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರೊಂದನ್ನು ನೀಡಿ ಸೋನ್ಸ್ ನನ್ನಿಂದ ಒಂದು ಲಕ್ಷ ರುಪಾಯಿ ಲಂಚ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ. ಸೋನ್ಸ್ ಅವರ ಪ್ರಾಮಾಣಿಕತೆಯ ಅರಿವಿದ್ದ ಎಸ್ಪಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಆದರೆ ಚಿನ್ನ ಕಳ್ಳರ ಜಾಲ ಬಹಳ ದೊಡ್ಡದಿತ್ತು. ದ.ಕನ್ನಡದ ಅಂದಿನ ಕಾಂಗ್ರೆ ಸ್ ಶಾಸಕರೊಬ್ಬರು ಸ್ವತಃ ಅಂಥ ಅನೇಕ ಕಳ್ಳ ಸಾಗಣೆದಾರರನ್ನು ಸಾಕಿಕೊಂಡಿದ್ದರು ಮತ್ತು ಡಿವೈಎಸ್ಪಿ ಒಬ್ಬರನ್ನು ಬುಟ್ಟಿಗೆ ಹಾಕಿಕೊಂಡರು. ಆ ಡಿವೈಎಸ್ಪಿ ವರಿಷ್ಠಾಧಿಕಾರಿಗಳ ಕಿವಿಯೂದಿದ. ಸೋನ್ಸ್ ಮನೆಯಲ್ಲಿ ಒಂದು ಲಕ್ಷ ರುಪಾಯಿ ಸಿಕ್ಕಿದೆ ಎಂದು ಕಥೆ ಕಟ್ಟಿದ. ಹಿಂದೆ ಮುಂದೆ ಆಲೋಚಿಸದ ವರಿಷ್ಠಾಧಿಕಾರಿಗಳು ತಕ್ಷಣ ಮನೋಹರ್ ಸೋನ್ಸ್‍ರನ್ನು ಅಮಾನತು ಮಾಡಿದರು. ಈ ಘಟನೆಯಿಂದ ಆ ಪ್ರಾಮಾಣಿಕ ಮನಸ್ಸು ಎಷ್ಟೋಂದು ನೊಂದುಕೊಂಡಿತೆಂದರೆ ಪಾಂಡೇಶ್ವರ ಠಾಣೆಯಲ್ಲೇ ಉಟ್ಟ ಸಮವಸ್ತ್ರದಲ್ಲೇ ಪೊಲೀಸ್ ರಿವಾಲ್ವರ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ- ಕೊಂಡರು. ಮಂಗಳೂರಿಗೆ ತುತು೯ ಬೇಕಾಗಿದ್ದ, ಶಾಂತಿಯುತ ಮಂಗಳೂರಿನ ಕನಸ್ಸು ಕಂಡಿದ್ದ ಮನೋಹರ್ ಸೋನ್ಸ್ ಎಂಬ ದಕ್ಷ ಅಧಿಕಾರಿ ಹೀಗೆ ಅಂತ್ಯ ಕಂಡರು
ಡಿವೈಎಸ್ಪಿ ಗಣಪತಿ ಸಮವಸ್ತ್ರ ಸಹಿತ ಹೆಣವಾದಾಗ ಮನೋಹರ್ ಸೋನ್ಸ್ ಘಟನೆ ನಿನ್ನೆ ಮೊನ್ನೆ ನಡೆಯಿತೇನೋ ಎಂಬಂತೆ ಭಾಸವಾಯಿತು. ಏಕೆಂದರೆ ಸೋನ್ಸ್ ಸಮವಸ್ತ್ರದಲ್ಲೇ ಆತ್ಮಹತ್ಯೆ ಮಾಡಿ- ಕೊಳ್ಳಲು ಕಾರಣನಾದವನೂ ಕಾಂಗ್ರೆ ಸ್ ಶಾಸಕ. ಗಣಪತಿ ಆತ್ಮಹತ್ಯೆಗೆ ಕಾರಣರಾದವರೂ ಕಾಂಗ್ರೆ ಸ್ ಮನುಷ್ಯರೇ! ಇಪ್ಪತ್ತು ವಷ೯ಗಳಲ್ಲಿ ಕಾಂಗ್ರೆ ಸ್‍ನ ಮನಸ್ಥಿತಿ ಒಂದು ಚೂರೂ ಬದಲಾಗಿಲ್ಲ. ಅಷ್ಟೇ ಅಲ್ಲ ಎಲ್ಲೆಲ್ಲಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡರೋ ಆಗೆ ಲ್ಲಾ ಇರುವುದು, ಇದ್ದದ್ದು ಕಾಂಗ್ರೆ ಸ್ ಸರಕಾರ ಮಾತ್ರ. ಇದೇಕೆ ಹೀಗೆ? ಕಾಂಗ್ರೆ ಸ್ ಸರಕಾರದಲ್ಲಿ ದಕ್ಷರಿಗೆ ಬೆಲೆ ಇಲ್ಲವೇ? ಕಾಂಗ್ರೆ ಸ್ ಇದ್ದಲ್ಲಿ ದಕ್ಷತೆ, ಪ್ರಾಮಾಣಿಕತೆಗಳನ್ನು ಗಾಳಿಗೆ ತೂರಿ ಕತ೯ವ್ಯ ಮಾಡಬೇಕೆ? ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾಂಗ್ರೆ ಸಿಗರೆ ಬಾಲಬಡುಕರಾಗಿರಬೇಕೆ? ಕಾಂಗ್ರೆ ಸ್ ಸರಕಾರದಲ್ಲಿ ದಕ್ಷತೆ ಎಂಬುದನ್ನು ನಿಷೇಧಿಸಲಾಗಿದೆಯೇ? ಇದನ್ನು ಇಂದು ಸಮಸ್ತ ಕನಾ೯ಟಕ ಕೇಳುತ್ತಿದೆ. ಇನ್ನೆಷ್ಟು ಸೋನ್ಸ್ ಮತ್ತು ಗಣಪತಿಯಂಥವರ ಶವಯಾತ್ರೆ ಯನ್ನು ಸರಕಾರ ನೋಡಲು ಹೊರಟಿದೆ? ಎಂದು ಜನ ಕೇಳುತ್ತಿದ್ದಾರೆ

ಕಾಂಗ್ರೆ ಸ್ ಆಡಳಿತದಲ್ಲಿ ಇಂಥವು ಒಂದೇ ಎರಡೇ? ಅಧಿಕಾರಿಗಳ ಆತ್ಮಹತ್ಯೆ, ರಾಜೀನಾಮೆಗಳ ಸರಣಿಗಳನ್ನು ನೋಡಿದರೆ ದಕ್ಷರಿಗೆ ಕಿರು- ಕುಳ ನೀಡುವುದು, ನೆಹರು ಕಾಲದಲ್ಲಿ ಮಿಲಿಟರಿ ಮುಖಂಡರನ್ನು ನಡೆಸಿಕೊಂಡಂತೆ ಇಂದಿಗೂ ಕಾಂಗ್ರೆ ಸ್ ಮುಖಂಡರು ದಕ್ಷ ಅಧಿಕಾರಿ ಗಳನ್ನು ನಡೆಸಿಕೊಳ್ಳುವುದನ್ನು ನೋಡಿದರೆ ಕಿರುಕುಳ, ಮನಸಿಕ ಹಿಂಸೆಗಳನ್ನು ನೀಡುವುದು ಕಾಂಗ್ರೆ ಸ್‍ನ ಹುಟ್ಟುಗುಣವಾಗಿರಬಹುದೇ ಎಂಬ ಸಂಶಯವೂ ಬರುತ್ತದೆ. ಮಲ್ಲಿಕಾಜು೯ನ ಬಂಡೆಯನ್ನು ವ್ಯವಸ್ಥಿತವಾಗಿ ಹಣಿಯಲಾಯಿತು. ಕಲ್ಲಪ್ಪ ಹಂಡಿಭಾಗ್ ಇಲಾಖೆಯ ಹಿರಿಯ ಅಧಿಕಾರಿಗಳ ಕುಹಕಕ್ಕೆ ಬಲಿಯಾಗಿ ಎರಡು ವಾರ ಕಳೆದಿಲ್ಲ, ಅನುಪಮಾ ಣೈ ರಾಜೀನಾಮೆ ನೀಡಿದರೂ ಸರಕಾರ ಕ್ಯಾರೇ ಅನ್ನಲಿಲ್ಲ, ಡಿ.ಕೆ ರವಿ ಪ್ರಕರಣದಲ್ಲಿ ಜನಾಂದೋಲನಕ್ಕೂ ಸರಕಾರ ಮಣಿಯಲಿಲ್ಲ, ರಶ್ಮಿ ಮಹೇಶ್ ಹಲ್ಲೆ ಪ್ರಕರಣ ತಳಸೇರಿತು, ಮ್ಯೆಸೂರು
ಜಿಲ್ಲಾಧಿಕಾರಿ ಶಿಖಾ ಮೇಲೆ ಬೆದರಿಕೆ ಹಾಕಿದವನನ್ನು ಇನ್ನೂ ಬಂಧಿಸಿಲ್ಲ. ಇವೆಲ್ಲವೂ ಪ್ರಜಾಪ್ರಭುತ್ವದ ಹೆಸರಲ್ಲಿ, ಗಾಂಧಿಹೇಳಿದ ಮೌಲ್ಯಾಧಾರಿತ ರಾಜಕಾರಣದ ಹೆಸರಲ್ಲೇ ರಾಜ್ಯದಲ್ಲಿ ನಡೆಯುತ್ತಿವೆ. ಆದರೆ ಗೋಕಳ್ಳ ಕಬೀರ್ ಎನ್‍ಕೌಂಟರ್ ಪ್ರಕರಣಕ್ಕೆ ಏಕೆ ಸರಕಾರ ಶೀಘ್ರವಾಗಿ ಸ್ಪಂದಿಸಿತು? ದಕ್ಷ ಅಧಿಕಾರಿಗಳಿಗಿಂತ ಕಳ್ಳರೇ ಸರಕಾರಕ್ಕೆ ಹೆಚ್ಚು ಪ್ರಿಯರಾದರೆ? ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ಕಬೀರನನ್ನು ಸತ್ತ ಮೇಲೆ ಮಹಾತ್ಮ ಮಾಡಿದ ಸರಕಾರ ಭಯೋತ್ಪಾದಕರಿಂದ ಧಾರುಣವಾಗಿ ಸತ್ತ ಕುಟ್ಟಪ್ಪನವರನ್ನು ಜಾರಿ ಬಿದ್ದ ಎನ್ನುತ್ತದೆ! ಗಣಪತಿ ಮಾನಸಿಕ ಅಸ್ವಸ್ಥರಾಗುತ್ತಾರೆ. ಆಳುವವರಿಗೆ ಅಳುಕು- ಅಂಜಿಕೆ, ಜನಾಭೀಪ್ರಾಯದ ವಿರುದ್ಧ ಹೋಗುವ ಇಂಥ ಗುಣಗಳನ್ನು ಸವಾ೯ಧಿಕಾರ ಎಂದಲ್ಲದೆ ಇನ್ನಾವ ಪದ ಉಪಯೋಗಿಸೋಣ?

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಮೊದಲ ದಿನದಿಂದಲೂ ಸರಕಾರ ಪ್ರದಶಿ೯ಸುತ್ತಿರುವುದು ಅಂಥ ಸವಾ೯ಧಿಕಾರಿ ಮನೋಭಾವವನ್ನೇ. ಆರಂಭದಲ್ಲಿ ಖಿನ್ನತೆ ಎಂದರು, ನಂತರ ಕೌಟುಂಬಿಕ ಸಮಸ್ಯೆ ಎಂದರು, ನಂತರ ಹೆಂಡತಿಯ ಕಾಟ ಎಂದರು. ಆನಂತರ ವಿಡಿಯೊ ಸಾಚಾ ಎಂದು ನಂಬುವುದು ಹೇಗೆ? ಎಂದು ಪ್ರಶ್ನಿಸಿದರು. ಕೆಲವರು ವಿಡಿಯೊದಲ್ಲಿ ಗಣಪತಿಯವರು ನೇರ ಜಾಜ್‍೯ ಮೇಲೆ ಆರೋಪ ಮಾಡಿಲ್ಲ ಎಂದು ತಿಪ್ಪೆ ಸಾರಿಸಲು ಹೊರಟರು. ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿ ಇದ್ದರೆ ಇಂಥ ಗೊಂದಲದ ಹೇಳಿಕೆಗಳೇಕೆ? ಜನ ಬೀದಿಗಿಳಿದು ಕೇಳುತ್ತಿರುವ ಸಿಬಿಐ ತನಿಖೆಗೆ ಸುತಾರಾಂ ಒಪ್ಪದೇ ಇರುವುದರ ಹಿಂದಿನ ಗುಟ್ಟೇನು? ಸ್ವತಃ ಮುಖ್ಯಮಂತ್ರಿಯೇ ಕುಟ್ಟಪ್ಪ ಸಾವನ್ನು ಜಾರಿಬಿದ್ದು ಸತ್ತರು ಎನ್ನುವಾಗ ಸರಕಾರ ನೇಮಿಸುವ ತನಿಖಾ ತಡದ ತೀಪು೯ ಇನ್ನು ಹೇಗಿರಬಹುದು? ಪ್ರಾಮಾಣಿಕತೆಯನ್ನು ಮಣ್ಣುಮಾಡಲು ಹೊರಟವರು ರಚಿಸುವ ತನಿಖಾ ತಂಡದ ಪ್ರಾಮಾಣಿಕತೆಯನ್ನು ಜನ ಹೇಗಾದರೂ ನಂಬಿಯಾರು? ತನ್ನ ಮತ್ತು ತನ್ನ ಸರಕಾರದ ವಿರುದ್ಧ ನಿಂತವರನ್ನು ಮಟ್ಟಹಾಕುವ ಬುದ್ಧಿ ಇರುವವರು ಅದೆಂಥಾ ತನಿಖಾ ತಂಡಗಳನ್ನು ರಚಿಸಬಹುದು? ದಕ್ಷರಿಗೆ ಕಾಲವಲ್ಲದ ಸರಕಾರದಲ್ಲಿ ಇನ್ನೆಂಥೆಂಥವರು ಸರಕಾರದ ಜತೆ ಆಪ್ತರಾಗಿರಬಹುದು? ರಾಜ್ಯದ ಸಮಸ್ತ ಜನಕ್ಕೆ ಬೇಕಾಗಿರುವುದು ಸರಕಾರಕ್ಕೆ ಮಾತ್ರ ಯಾಕೆ ಬೇಕಾಗಿಲ್ಲ? ಮುಖ್ಯಮಂತ್ರಿಗಳ ಮತ್ತು ಜಾಜ್‍೯ ಪ್ರೇಮದ ಹಿಂದಿನ ಗುಟ್ಟೇನು

ಗಣಪತಿ ಆತ್ಮಹತ್ಯೆಗೆ ಕಾರಣರಾದವರನ್ನು ಬ೦ಧಿಸಬೇಕೆಂದು ಮೊನ್ನೆ ಸಮಸ್ತ ಕೊಡಗು ಜಿಲ್ಲೆ ಸ್ತಬಟ್ಧವಾಯಿತು. ಏಕೆ? ಕೊಡಗಿನ ಜನ ಸ್ವಾತಂತ್ರ್ಯ ಸಿಕ್ಕಿಂದಿನಿಂದಲೂ ತಮಗಾಗಿ ಏನೆಂದರೆ ಏನನ್ನೂ ಕೇಳಲಿಲ್ಲ. ಬೇರೆ ಜಿಲ್ಲೆಗಳು ಕುಡಿಯುವ ನೀರು, ಒಳ್ಳೆಯ ರಸ್ತೆ, ಬೆಂಬಲ ಬೆಲೆ, ರಾಜಕೀಯ ಮಾನ್ಯತೆಗಳಿಗಾಗಿ ಬಂದ್‍ಗಳನ್ನು ನಡೆಸಿರಬಹುದು. ಆದರೆ ಕೊಡಗು ಅಂಥ ಒಂದೇ ಒಂದು ಕಾರಣಕ್ಕೆ ಇದುವರೆಗೆ ಬೀದಿಗಿಳಿಯಲಿಲ್ಲ. ಅವರು ಸಮಸ್ಯೆಗಳನ್ನೆತ್ತಿಕೊಂಡು ವಿಧಾನಸೌಧದ ಅಂಗಳದಲ್ಲಿ ಠಳಾಯಿಸಲಿಲ್ಲ. ಏಕೆಂದರೆ ಅದು ಕೊಡಗಿನ ಮಣ್ಣಿನ ಗುಣ. ಅಲ್ಲಿ ಸಾವಿರಾರು ಯೋಧರ ಪದಚಿಹ್ನೆಗಳಿವೆ ನೂರಾರು ಪ್ರತಿಭೆಗಳು ನಡೆದಾಡಿದ ಇತಿಹಾಸವಿದೆ. ಅವರಲ್ಲಿ ತಾಕತ್ತಿದೆ, ಸ್ವಾಭೀಮಾನವಿದೆ. ಮುಗಟ್ಧತೆಯಿದೆ, ನಂಬಿದವರಿಗೆ ಜೀವ ಕೊಡುವ ಪ್ರಾಮಾಣಿಕತೆಯಿದೆ. ನ್ಯಾಯಾನ್ಯಾಯದ ಪರಿಜ್ಞಾನವಿದೆ. ಗಣಪತಿಯವರ ಸಮವಸ್ತ್ರ ಸಹಿತ ಆತ್ಮಹತ್ಯೆಯನ್ನು ಕೊಡಗಿನ ಜನ ಇದೊಂದು ರಾಜಕೀಯ ಕೊಲೆ ಎಂದು ಮೊದಲ ದಿನವೇ ಭಾವಿಸಿಬಿಟ್ಟಿದ್ದರು. ಏಕೆಂದರೆ ಪೊಲೀಸ್ ಮತ್ತು ಸೇನಾ ಸಮವಸ್ತ್ರಕ್ಕೆ ಕೊಡಗಿನವರು ಕೊಡುವಷ್ಟು ಗೌರವವನ್ನು ಇನ್ನಾರೂ ಕೊಡಲಾರರು. ಇದುವರೆಗೆ ಯಾವ ಕೊಡಗಿನ ವ್ಯಕ್ತಿಯೂ ಬೆನ್ನಿಗೆ ಗುಂಡು ತಗುಲಿ ಸತ್ತ ಒಂದೇ ಒಂದು ಉದಾಹರಣೆಯಿಲ್ಲ. ಅಲ್ಲದೆ ಪ್ರತೀ ಕೊಡವನೂ ಹೋರಾಡಿ ಸಾಯಲು ಇಷ್ಟಪಡುತ್ತಾನೆಯೇ ಹೊರತು ಆತ್ಮಹತ್ಯೆಗೆ ಶರಣಾಗುವುದನ್ನು ಪಾಪ, ಹೇಡಿತನ ಎಂದೇ ಭಾವಿಸುತ್ತಾನೆ. ಅಂಥಲ್ಲಿ ಗಣಪತಿಯವರಂಥ ಖಡಕ್ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೇ ನೇಣು ಬಿಗಿದುಕೊಳ್ಳಬೇಕೆಂದರೆ ದೊಡ್ಡವರು ಅದೆಂಥ ಮಾನಸಿಕ ಕಿರುಕುಳ ನೀಡಿರಬಹುದು? ಕೊಡಗು ಬಂದ್ ಸಂಪೂಣ೯ ಯಶಸ್ವಿಯಾಗಿದ್ದು ಈ ಹಿನ್ನೆಲೆಯಲ್ಲಿ. ಆ ಯಶಸ್ಸಿನ ಹಿಂದೆ ಕಾಂಗ್ರೆ ಸ್ ಕಾಯ೯ಕತ೯ರದ್ದೂ ಪಾಲಿತ್ತು ಎಂದರೆ ಈ ಸರಕಾರದ ಮೇಲೆ ಕೊಡಗಿನ ಜನ ಅದೆಷ್ಟು ನೊಂದಿರಬಹುದು ಯೋಚಿಸಿ! ಇದುವರೆಗೆ ಸರಕಾರದಿಂದ ಏನನ್ನೂ ಕೇಳದ ಕೊಡಗಿನ ಜನರು ಸ್ವಾಭೀಮಾನಕ್ಕೆ ಬೆಲೆ ಕೊಡಿ ಎಂದು ಕೇಳಿದರೂ ಸರಕಾರ ಕೈ ಅಲ್ಲಾ ಡಿಸಿದರೆ ಕೊಡಗಿನ ಜನ ಏನು ಮಾಡಬೇಕು?

ಸ್ವಾಭೀಮಾನದ ಪ್ರಶ್ನೆ ಒಂದೆಡೆ ಇರಲಿ. ಗಣಪತಿ ಕೊನೆಗೆ ಉಲ್ಲೇಖಿಸಿದ್ದ ಮುಖ್ಯಮಂತ್ರಿಗಳ ಆಪ್ತರ ಜಾತಕವನ್ನೂ ಕೊಡಗಿನವರು ಹತ್ತಿರದಿಂದ ನೋಡಿದ್ದಾರೆ
ಕೇರಳ ಮತ್ತು ಕೊಡಗಿನ ಸಂಬಂಧ ಹಲವು ಶತಮಾನಗಳಷ್ಟು ಪುರಾತನವಾದದ್ದು. ಕೊಡಗಿನಿಂದ ಅಕ್ಕಿ-ಬತ್ತ, ಕಾಡುತ್ಪನ್ನಗಳು ಕೇರಳ
ಸಾಗುವುದು, ಕೇರಳದ ವ್ಯಾಪಾರಿಗಳು ಕೊಡಗಿನಲ್ಲಿ ನೆಲೆಯೂರುವುದು ರಾಜರ ಕಾಲದಿಂದಲೇ ನಡೆಯುತ್ತಿತ್ತು. ಕಾಲಕ್ರಮೇಣ ಕೇರಳದ ಕೆಲವು ಕಳ್ಳಕಾಕರಿಗೆ ಕೊಡಗಿನ ಪ್ರಕೃತಿ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಣ್ಣಿಗೆ ರಾಚಿತು. ಮರಕಳ್ಳರು, ಕಾಡುತ್ಪನ್ನಗಳ ಕಳ್ಳರು ಹಿಂಡುಹಿಂಡಾಗಿ ಕೊಡಗಿಗೆ ಲಗ್ಗೆ ಇಟ್ಟರು. ಅದುವರೆಗೆ ಕಳ್ಳರನ್ನೇ ಕಾಣದ ಕೊಡಗಿನ ಮುಗ್ಧ  ಜನರು ಅವರನ್ನೂ ನಂಬಿದರು. ಅಂಥ ಕಾಲದಲ್ಲಿ ಬಿಳಿ ಮುಂಡುಟ್ಟ ಒಬ್ಬ ಮನುಷ್ಯ ವೀರಾಜಪೇಟೆಗೆ ಬಂದ. ಆತನ ಕೈಯಲ್ಲಿ ಉದ್ದದ ಒಂದು ಗರಗಸ ಇತ್ತು. ಜನ ಆತನನ್ನು ಈರ್ಚೆಕ್ಕಾರ (ಮರ ಸೀಳು ವ ನು) ಎಂದು ಕರೆದು ಸತ್ಕರಿಸಿದರು. ಆ ಮುಂಡುಟ್ಟ ಈರ್ಚೆಕ್ಕಾರನಿಗೆ ಕೊಡಗಿನ ಜನ ಚಿಲ್ಲರೆ ಬೆಲೆಗೆ ತಮ್ಮ ಮರವನ್ನು ಮಾರಿದರು. ಆ ಈರ್ಚೆಕ್ಕಾರನಿಗೆ ಈ ಕೊಡಗಿನ ಜನರನ್ನು ಸುಲಭವಾಗಿ ಕೊಳ್ಳೆಹೊಡೆಯಬಹುದು ಎಂಬುದು ಕೆಲವೇ ದಿನಗಳಲ್ಲಿ ತಿಳಿದುಹೋಯಿತು. ಆತ ಕೊಡಗಿನಲ್ಲಿ ಕಳ್ಳರ ತಂಡವನ್ನೇ ಕಟ್ಟಿದ. ಬೆಲೆಬಾಳುವ ಕಾಡುಮರಗಳನ್ನು ಕತ್ತರಿಸಿ ಕೊಡಗಿನಲ್ಲಿ ಮರ ಸೀಳುವ ಮಿಲ್ಲನ್ನು ಕೂಡ ತೆರೆದ. ಲಕ್ಷಾಂತರ ಕಾಡುಮರಗಳು ಮಿಲ್ಲಿನ ಯಂತ್ರಗಳಿಗೆ ಆಹುತಿಯಾದವು. ನೋಡನೋಡುತ್ತಲೇ ಆ ಈರ್ಚೆಕ್ಕಾರ ಶ್ರೀಮಂತನಾದ. ಜಮೀನು ವ್ಯವಹಾರಕ್ಕೆ ಕೈಹಾಕಿದ. ಅಷ್ಟರಲ್ಲಿ ರಾಜಕಾರಣಿಗಳು ಪರಿಚಯ ವಾದರು. ಮುಂದೆ ಆತ ಬೆಂಗಳೂರಿನಲ್ಲೂ ಭೂ ವ್ಯವಹಾರಕ್ಕಿಳಿದ. ಪೂರ್ಣಪ್ರಮಾಣದ ರಾಜಕಾರಣಿಯಾದ. ಮಂತ್ರಿಯೂ ಆದ. ಕೊಡಗಿನ ಪ್ರತಿ ವ್ಯಕ್ತಿಗೂ ಈ ಈರ್ಚೆಕ್ಕಾರನ ಜಾತಕ ನಾಲಿಗೆ ತುದಿಯಲ್ಲಿದೆ. ಈಗ ಅಂಥವನ ರಕ್ಷಣೆಗೆ ಸರಕಾರವೇ ನಿಂತಿದೆಯೆಂದರೆ ಇಲ್ಲಿನ ಜನಕ್ಕೆ ಹೇಗಾಗಬೇಡ?

ಗೃಹ ಸಚಿವ ಡಾ. ಜಿ. ಪರಮೇಶ್ವರರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ವಿಧಾನಸಭೆಯಲ್ಲಿ ಉತ್ತರ ಕೊಡುತ್ತಾ ಕೌಟುಂಬಿಕ ಸಮಸ್ಯೆ ಗಣಪತಿ ಸಾವಿಗೆ ಕಾರಣ ಎನ್ನುವ ಮೂಲಕ ನೊಂದಿರುವ ಕುಟುಂಬಕ್ಕೆ ಮತ್ತೊಂದು ಗುದ್ದು ಹಾಕಿದರಲ್ಲಾ, ಇವರಿಗೆಲ್ಲಾ ಏನಾಗಿದೆ? ಸಿದ್ದರಾಮಯ್ಯನವರ ಜಾಢ್ಯ ಇವರಿಗೂ ಅಂಟಿಕೊಂಡಿತಾ? ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗದ್ದುಗೆ ಏರಿದ ಮೇಲೆ ಯಾರಿಗೆ ನ್ಯಾಯ ಕೊಟ್ಟಿದ್ದಾರೆ? ಮಲ್ಲಿಕಾಜು೯ನ ಬಂಡೆಗೆ ನ್ಯಾಯಕೊಟ್ಟರಾ? ಡಿ.ಕೆ. ರವಿಗೆ ನ್ಯಾಯ ಸಿಕ್ಕಿತಾ? ಪ್ರಶಾಂತ್ ಪೂಜಾರಿ, ಕೊಡಗಿನ ಕುಟ್ಟಪ್ಪ, ಮ್ಯೆಸೂರಿನ ರಾಜು, ಪ್ರಾದೇಶಿಕ ಆಯುಕ್ತಯಾಗಿದ್ದ ರಶ್ಮಿ ಮಹೇಶ್, ಅನುಪಮಾ ಶೆಣೈ  ಯಾರಿಗೆ ನ್ಯಾಯ ಸಿಕ್ಕಿದೆ? ಕಲ್ಲಪ್ಪ ಹಂಡ್ಹಿಬಾಗ್ ನೊಂದು ನೇಣಿಗೆ ಶರಣಾಗಲು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉದ್ದೇಶಪೂವ೯ಕವಾಗಿ ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆಡಿಯೊ ರೆಕಾಡ್‍೯ ಕಾರಣವಲ್ಲವೆ? ಆದರೂ ಏಕೆ ಕ್ರಮ ಕೈಗೊಂಡಿಲ್ಲ?ಅಸಾದುದ್ದೀನ್ ಓವೈಸಿ ಸಹೋದರ ಹಾಗೂ ಶಾಸಕ ಅಕ್ಬರುದ್ದಿನ್ ಓವೈಸಿ ಗೊತ್ತಲ್ಲವೆ? ಈತ 15 ನಿಮಿಷ ಪೊಲೀಸರನ್ನು ಹಿಂತೆಗೆದುಕೊಳ್ಳಿ, ಹಿಂದೂಗಳನ್ನು ಮುಗಿಸಿ ಬಿಡುತ್ತೇವೆ ಎಂದಿದ್ದ. ಮಲ್ಲಿಕಾಜು೯ನ ಬಂಡೆ, ಎಸ್‍ಐ ಜಗದೀಶ್, ಕಲ್ಲಪ್ಪ ಹಂಡ್ಹಿಬಾಗ್ ಹಾಗೂ ಗಣಪತಿ ಪ್ರಕರಣಗಳನ್ನು ನೋಡುತ್ತಿದ್ದರೆ ಪೊಲೀಸ್ ಇಲಾಖೆಯನ್ನು ನಾನೇ ಮುಗಿಸುತ್ತೇನೆ, ನೀನು ಹಿಂದೂಗಳನ್ನು ಮುಗಿಸು ಅಂಥ ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಓವೈಸಿಯಿಂದ ಸುಪಾರಿ ಪಡೆದಿದ್ದಾರೆ ಎಂದು ಕಾಣಿಸುತ್ತದೆ! ಇನ್ನೊಂದೆಡೆ 2011ರ ಚಚ್‍೯ ದಾಳಿಯ ಸಂದಭ೯ದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದ ಡಿವೈಎಸ್ಪಿ ಗಣಪತಿಯವರು ಚಚಿ೯ನ ಏಜೆಂಟ್ ಜಾಜ್‍೯ರ ಪ್ರತೀಕಾರಕ್ಕೆ ಬಲಿಯಾಗಿದ್ದಾರೆ ಎಂದೆನಿಸುತ್ತದೆ!

ganapathy

Comments are closed.