Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?!

ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?!

ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?!

“She found in Panditji the companionship and equality of spirit and intellect that she craved. Each helped overcome loneliness in the other’,  ಆಕೆ ಯಾವುದಕ್ಕಾಗಿ ಹಾತೊರೆಯುತ್ತಿದ್ದಳೋ ಆ ಸಂಗಾತಿಯನ್ನು, ಸಮಾನ ಉತ್ಸಾಹ ಹಾಗೂ ಪಾಂಡಿತ್ಯವನ್ನು ಪಂಡಿತ್‍ಜಿಯಲ್ಲಿ ಆಕೆ ಕಂಡುಕೊಂಡಳು. ಏಕಾಂಗಿತನದಿಂದ ಹೊರಬರಲು ಪರಸ್ಪರರ ಸಹಕಾರ ದೊರೆಯಿತು.

                           ***
“”The four of them — father, mother, daughter and prime minister — would walk out together, but always with Edwina and Nehru together side by side up ahead’, ಆ ನಾಲ್ವರೂ, ತಂದೆ -ತಾಯಿ-ಮಗಳು-ಮೊದಲ ಪ್ರಧಾನಿ ಒಟ್ಟೊಟ್ಟಿಗೇ ಹೊರ ಹೋಗುತ್ತಿದ್ದರು. ಆದರೆ ಎಡ್ವಿನಾ ಮತ್ತು ನೆಹರು ಯಾವತ್ತೂ ಅಕ್ಕಪಕ್ಕ ಮತ್ತು ಎಲ್ಲರಿಗಿಂತ ಮುಂದೆ.
***

“”And I came to realise how deeply he and my mother loved each other”, ಆತ ಮತ್ತು ನನ್ನ ತಾಯಿ ಅದೆಷ್ಟು ಆಳವಾಗಿ ಪ್ರೀತಿಸಿದ್ದರು ಎಂಬುದು ನನಗರಿವಾಯಿತು.

***

ನಾಲ್ಕು ವಷ೯ಗಳ ಹಿಂದೆ ಪ್ರಕಟವಾದ ಭಾರತದ ಕೊನೆಯ ವೈಸರಾಯ್ ಲಾಡ್‍೯ ಮೌಂಟ್ ಬ್ಯಾಟೆನ್ ಅವರ ಕಿರಿಯ ಪುತ್ರಿ ಪಮೀಲಾ ಹಿಕ್ಸ್‌ರ ಆತ್ಮಚರಿತ್ರೆ “Daughter of Empire’ ನಲ್ಲಿ ತನ್ನ ತಾಯಿ ಎಡ್ವಿನಾ ಮತ್ತು ಪಂಡಿತ್‍ಜಿ(ಯಾರು ಅಂತ ಗೊತ್ತು ತಾನೇ?) ನಡುವಿನ ಸ್ನೇಹದ ಬಗ್ಗೆ ಹೀಗೆಲ್ಲ ಬರೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಗೂಢಚಾರ ವ್ಯವಸ್ಥೆಯಲ್ಲಿ ಹೇಗೆ ಹೆಣ್ಣು, ಹೊನ್ನನ್ನು ಬಳಸಿಕೊಂಡು ಶತ್ರುಗಳನ್ನು ಹೆಣೆಯುತ್ತಾರೆ ಎಂಬುದನ್ನು ನಾವೆಲ್ಲ ಓದಿದ್ದೇವೆ. ಆದರೂ ಈ ದೇಶದ ಮೇಲೆ ದಾಸ್ಯದ ಸಂಕೋಲೆಯನ್ನು ಹೇರಿದ ದೇಶದ ರೂಲರ್‍ನ ಪತ್ನಿಯ ಜತೆಗಿದ್ದ ವಿಶೇಷ ಸ್ನೇಹದ ಬಗ್ಗೆ ನಾವೆಂದೂ ಅನುಮಾನಿಸಲಿಲ್ಲ. ಅವರ ನಿಷ್ಠೆ, ದೇಶಪ್ರೇಮದ ಬಗ್ಗೆಯೂ ಪ್ರಶ್ನಿಸಲಿಲ್ಲ. ಸುಭಾಷ್‍ಚಂದ್ರ ಬೋಸರು ಭಾರತ ರಾಷ್ಟ್ರೀಯ ಸೇನೆಯೊಂದಿಗೆ ಬರುತ್ತಿದ್ದೇನೆ ಎಂದು ಬ್ರಿಟಿಷರ ವಿರುದ್ಧ ಸಮರ ಸಾರಿದಾಗ ಸುಭಾಷ್ ವಿರುದ್ಧ ತಾನೇ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಾಗಲೂ ಪಂಡಿತ್‍ಜಿಯನ್ನು ನಾವು ಪ್ರಶ್ನಿಸಲಿಲ್ಲ. ಒನದೆಡೆ ಕ್ರಾಂತಿಕಾರಿಗಳನ್ನು ನಿಧ೯ಯವಾಗಿ ಗುಂಡಿಟ್ಟು ಕೊಲ್ಲುತ್ತಿರುವಾಗ, ನೇಣಿಗೆ ಏರಿಸುತ್ತಿರುವಾಗ ಈ ಕಾಂಗ್ರೆಸ್ಸಿಗರ ವಿರುದ್ಧ ಬ್ರಿಟಿಷರೇಕೆ ಬಂದೂಕು ಬಿಡಿ, ಕನಿಷ್ಠ ಹಲ್ಲುಕಡ್ಡಿಯನ್ನೂ ಎತ್ತುತ್ತಿಲ್ಲವಲ್ಲಾ ಎಂದು ಸಂಶಯಪಡಲಿಲ್ಲ. ಸ್ವಾತಂತ್ರ ಬಂದ ನಂತರವೂ ಸಿಯಾಚಿನ್‍ನ ಒಂದಷ್ಟು ಭಾಗ ಕೈತಪ್ಪಿ ಹೋದಾಗ ಅಲ್ಲ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ ಎಂದು ಪಂಡಿತ್ ಜಿ ಸಮಥಿ೯ಸಿಕೊಂಡಾಗಲೂ ನಾವು ಸುಮ್ಮನಾದೆವು.

   ಆದರೆ…

ಹೆಜ್ಜೆ ಹೆಜ್ಜೆಗೂ ಸಂಶಯ, ಶಂಕೆ, ಅನುಮಾನಕ್ಕೆ ಎಡೆಮಾಡಿ- ಕೊಡುವಂತೆಯೇ ನಡೆದುಕೊಂಡು ಬಂದ ಪಂಡಿತ್‍ಜಿ ಕುಟುಂಬವಗ೯ದವರು ಹಾಗೂ ಅವರ ಭಟ್ಟಂಗಿಗಳು ಮಾತ್ರ ಬೇರೆಯವರ ನಿಷೆಯನ್ನು ಪ್ರಶ್ನಿಸಿಕೊಂಡೇ ಬರುತ್ತಿದ್ದಾರೆ. ಒಂದೇ ವಷ೯ದಲ್ಲಿ ಮಂಡ್ಯದ ಜನರಿಂದ ತಿರಸ್ಕೃತರಾದ ಯಕಶ್ಚಿತ್ ನಾಯಕಿಯೊಬ್ಬರು ರಾಷ್ಟ್ರವಾದಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂದು ಹೇಳಿಕೆ ಕೊಟ್ಟಿದ್ದಾರೆ.

ಪಾಠಕ್, ತದನಂತರ ಕಪೂರ್ ಆಯೋಗದಿಂದ ಖೋಸ್ಲಾ ಆಯೋಗದವರೆಗೂ ಎಲ್ಲ ತನಿಖಾ ಆಯೋಗಗಳು ಆರೆಸ್ಸೆಸ್‍ಗೆ ಕ್ಲೀನ್ ಚಿಟ್ ಕೊಟ್ಟಿದ್ದರೂ “ರಾಷ್ಟ್ರಪಿತ ಗಾಂಧಿಯನ್ನು ಕೊಂದರು’, “ಆರೆಸ್ಸೆಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲಿಲ್ಲ, ಅದು ಬ್ರಿಟಿಷರೊಂದಿಗೆ ಕೈಜೋಡಿಸಿತು’ ಎಂಬ ಆರೋಪವನ್ನು ಇಂದಿಗೂ ಪುನರಾವತ೯ನೆ ಮಾಡಲಾಗುತ್ತಿದೆ.

  ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ಆರೆಸ್ಸೆಸ್‍ನ ಕೊಡುಗೆಯೇ ಇಲ್ಲವೆ?

ಯಾವಾಗ ಕಾಂಗ್ರೆಸ್ ಪಾಳಯ ದೇಶವಿಭಜನೆಗೆ ಅಸ್ತು ಎಂದಿತೋ ಇಂಥದ್ದೊಂದು ಆರೋಪದ ಬೀಜಾಂಕುರವೂ ಆಯಿತು. ನಂತರ ಕಾಂಗ್ರೆಸ್ ತಾನು ಅಸಹಾಯಕ ವಾದಾಗಲೆಲ್ಲಾ ಅದನ್ನು ಹೇಳಿಕೊಂಡು ಬಂತು. ತನ್ನ ಹುಳುಕುಗಳು ಹೊರಬಂದಾಗಲೆಲ್ಲಾ ಅದನ್ನು ಮತ್ತೆ ಮತ್ತೆ ಆಡಿತು. ಭಾರತೀಯ ಜನಸಂಘ ಸ್ಥಾಪನೆಯಾದ ಮೇಲಂತೂ ಈ ಹುಯಿಲು ಮತ್ತಷ್ಟು ಹೆಚ್ಚಾಯಿತು. ಗಾಂಧಿ ಕೊಂದವರು ಎಂಬ ಆರೋಪಕ್ಕೆ ಬಲ ತುಂಬಲು ಸ್ವಾತಂತ್ರ್ಯ ಹೋರಾಟದ ಮಿಥ್ಯಾರೋಪವನ್ನು ಕಾಂಗ್ರೆಸ್ ಹೆಚ್ಚು ಹೆಚ್ಚು ಮಾಡುತ್ತಲೇ ಬಂತು. ಈ ಸುಳ್ಳುಗಳಿಂದಲೇ ಅವರು ತಮ್ಮ ಸೌಧ ಕಟ್ಟಿಕೊಂಡರು. ಕ್ರಮೇಣ ಗಾಂಧಿಯನ್ನು ಕೊಂದವರು ಎಂಬ ಆರೋಪ ಹುಸಿಯಾಗುತ್ತಾ ಬಂದಂತೆ ಕಾಂಗ್ರೆಸ್ ಮತ್ತು ಕಮ್ಯುನಿ ಸ್ಟರಿಗೆ ಆರೆಸ್ಸೆಸ್ ವಿರೋಧಿಸಲು ಉಳಿದಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಲಿಲ್ಲ ಎಂಬ ಮಿಥ್ಯಾರೋಪ ಒಂದೇ.

ನಿಜಕ್ಕೂ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲವೇ? ಹಾಗಾದರೆ ದಾಖಲಾಗಿರುವ ಈ ಇತಿಹಾಸಗಳೆಲ್ಲವೂ ಏನು? ಕಾಂಗ್ರೆಸ್ ಆದರತ್ತ ಕಣ್ಣುಮುಚ್ಚಿದ್ದೇಕೆ?
ಅದರ ಅಸಲಿ ಕಾರಣ ಹೀಗಿದೆ. 1925ರಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರರು ಸಂಸ್ಕೃತಿ, ಧಮ೯, ಸಂಸ್ಕಾರ, ವ್ಯಕ್ತಿ ನಿಮಾ೯ಣದ ಉದ್ದೇಶದಿಂದ ಆರೆಸ್ಸೆಸ್ ಸ್ಥಾಪಿಸಿದಾಗ ಅವರ ಹಿಂದಿದ್ದವರು ಐದಾರು ಜನ ಇನ್ನೂ ಸರಿಯಾಗಿ ಮೀಸೆ ಮೂಡದ ಯುವಕರು ಮಾತ್ರ. ಆದರೆ ಈ ಮೀಸೆ ಮೂಡದ ಹುಡುಗರ ಶ್ರದ್ಧೆ, ಕಾಯ೯ಕ್ಷಮತೆ, ದೇಶಭಕ್ತಿ ಬಹುಬೇಗನೆ ಸಮಾಜದ ಗಮನವನ್ನು ಸೆಳೆಯತೊಡಗಿತು. ದಿನೇ ದಿನೆ ಆರೆಸ್ಸೆಸ್ ಶಾಖೆಗಳಿಗೆ ಹೊಸಬರು ಪ್ರವೇಶಿಸತೊಡಗಿದರು. ಆರೆಸ್ಸೆಸ್ ಸ್ಥಾಪನೆಯ ಆರಂಭದ ದಿನಗಳಲ್ಲೇ ಡಾ. ಹೆಡಗೇವಾರರು ತಮ್ಮ ಕಾಯ೯ಕತ೯ರಿಗೆ ಒಂದು ಗಂಟೆಯ ಶಾಖೆಯ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಸಮಯ ಕೊಡಿ ಎಂದು ಕರೆಕೊಟ್ಟಿದ್ದರು. ಮುಖ್ಯಸ್ಥರ ಆದೇಶಕ್ಕನುಗುಣವಾಗಿ ಆರೆಸ್ಸೆಸ್ ಕಾಯ೯ಕತ೯ರು ಸ್ವಾತಂತ್ರ್ಯ ಚಳವಳಿಗಳ ನಾನಾ ಹೋರಾಟಗಳಲ್ಲಿ, ನಾನಾ ಸಂಘಟನೆಗಳ ಜತೆ ಕೈಜೋಡಿಸಿ ಕೆಲಸ ಮಾಡತೊಡಗಿದರು. ಗುಲಾಮಗಿರಿಯ ವಿರುದ್ಧ ಹೋರಾಟಕ್ಕೆ ಯಾವ ಸಂಘಟನೆಯನ್ನು ಬೇಕಾದರೂ ಸೇರಿಕೊಳ್ಳಿ ಎಂಬ ಮುಖ್ಯಸ್ಥರ ಆದೇಶವನ್ನು ಸ್ವಯಂಸೇವಕರು ಚಾಚೂ ತಪ್ಪದೆ ಪಾಲಿಸಿದರು. ಕೆಲವರು ಭೂಗತ ಹೋರಾಟಕ್ಕೆ ಕೈಜೋಡಿಸಿದರೆ, ಇನ್ನು ಕೆಲವರು ಸತ್ಯಾಗ್ರಹ ನಡೆಸಿ ಜೈಲು ಸೇರಿದರು. ದಿನೇ ದಿನೆ ಆರೆಸ್ಸೆಸ್ ರೂಪಿಸುವ ಹೋರಾಟಗಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೋರಾಟದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಅಂದಿನ ಕಾಂಗ್ರೆಸ್ ನಾಯಕರೂ ಹೋರಾಟಕ್ಕೆ ಆರೆಸ್ಸೆಸ್ ಶಾಖೆಗಳತ್ತ ನೋಡುವ ಸ್ಥಿತಿ ನಿಮಾ೯ಣವಾಯಿತು.

ಈ ಎಲ್ಲಾ ಸಂಗತಿಗಳನ್ನು ಯಾಕೋ ಸ್ವಾತಂತ್ರ್ಯಾನಂತರದ ಭಾರತದ ಇತಿಹಾಸ ವ್ಯವಸ್ಥಿತವಾಗಿ ಮುಚ್ಚಿಹಾಕಿತು. ಇದರ ಜತೆಗೆ ಮತ್ತೂ ಒಂದು ಸಂಗತಿಯನ್ನು ಇತಿಹಾಸ ಮರೆಯಿತು. ಅದೇನೆಂದರೆ, ಕಾಂಗ್ರೆಸ್ 1885ರಲ್ಲಿ ಸ್ಥಾಪನೆಯಾಗಿದ್ದರೂ ಅದು ಸ್ವಾತಂತ್ರ್ಯ ಚಳವಳಿಗೆ ಅಧಿಕೃತ ಕರೆ ಅಂದರೆ ಪೂಣ೯ ಸ್ವರಾಜ್ಯಕ್ಕೆ ಕರೆಯನ್ನು ಕೊಟ್ಟಿದ್ದು1929ರಲ್ಲಿ. ಅಂದರೆ, ಕಾಂಗ್ರೆಸ್ ಸ್ಥಾಪನೆಯಾದ ಬರೋಬ್ಬರಿ 44 ವಷ೯ಗಳ ನಂತರ! ಹೀಗೆ ಮುಚ್ಚಿಡುವ ಕೆಲಸವನ್ನು ಕಾಂಗ್ರೆಸ್ ಸ್ವತಃ ಮಾಡಿತ್ತು. ಇತಿಹಾಸವನ್ನು ಮುಚ್ಚಿಟ್ಟು ಕೆಲವರನ್ನು ಹಣಿಯಬಹುದು ಮತ್ತು ತಾನು ದೊಡ್ಡವನಾಗಬಹುದು ಎಂಬುದನ್ನು ಅಂದಿನ ಕೆಲ ಕಾಂಗ್ರೆ ಸಿಗರು ಚೆನ್ನಾಗಿ ತಿಳಿದು ಕೊಂಡಿದ್ದರು. ಹಾಗಾದರೆ 1929ರವರೆಗೆ ಈ ಕಾಂಗ್ರೆಸ್ ಏನು ಮಾಡುತ್ತಿತ್ತು? ಅಲ್ಲೂ ಒಂದು ತಮಾಷೆಯಿದೆ! 1929ರವರೆಗೂ ಕಾಂಗ್ರೆ ಸಿನ ಬೇಡಿಕೆ “ಭಾರತಕ್ಕೆ ಡೊಮಿನಿಯನ್ ಪ್ರಾಶಸ್ತ್ಯ’ ಕೊಡಿ ಎಂಬುದಾಗಿತ್ತು! ಅಂದರೆ ಬ್ರಿಟಿಷರಿದ್ದರೆ ದೇಶಕ್ಕೆ ತೊಂದರೆ ಇಲ್ಲ, ಕೊಂಚ ಅಧಿಕಾರ ನಮಗೂ ಕೊಡಿ ಎಂಬ ಹೊಂದಾಣಿಕೆಯ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿತ್ತು. ತಮ್ಮ ಚೀಲದಲ್ಲಿ ಕೊಳೆತ ಹಣ್ಣುಗಳನ್ನಿಟ್ಟುಕೊಂಡು ಇನ್ನೊಬ್ಬರ ಕೈಲಿರುವ ಹಣ್ಣು ಇನ್ನೂ ಬಲಿತಿಲ್ಲ ಎನ್ನುತ್ತಿದೆ ಇಂದಿನ ಇಂದಿನ ಕಾ೦ಗ್ರೆ ಸ್! ಕಾಂಗ್ರೆ ಸಿನ ಕಣ್ಣಾ ಮುಚ್ಚಾಲೆ ಆಟದಿಂದ ಇಂದು ಆರೆಸ್ಸೆಸ್, ಆಡುವ ಬಾಯಿಗೆ ಸುಲಭದ ತುತ್ತಾಗುತ್ತಿದೆ. ಸುಭಾಷರನ್ನೇ ನಿಂದಿಸುವ ಕಾಂಗ್ರೆಸ್ ಆರೆಸ್ಸೆಸನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಎನ್ನುವುದು ವಿಶೇಷವೇನಲ್ಲ.

ಡಾ. ಹೆಡಗೇವಾರರು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಇಂಗ್ಲೆಂಡಿನ ರಾಣಿಯ 60ನೇ ವಷ೯ದ ಪಟ್ಟಾಭೀಷೇಕ ಕಾಯ೯ಕ್ರಮ ದೇಶಾದ್ಯಂತ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದರ ಅಂಗವಾಗಿ ಶಾಲೆಯಲ್ಲಿ ಉತ್ಸವವನ್ನು ಆಚರಿಸಿ ನೀಡಲಾಗಿದ್ದ ಸಿಹಿಯನ್ನೇ ಹೆಡಗೇವಾರರು ನಿರಾಕರಿಸಿದ್ದರು. ಸಿಹಿಯನ್ನು ನಿರಾಕರಿಸಿದ ಕಾರಣವನ್ನು ಕೆಲವರು ಕೇಳಿದಾಗ ಹೆಡಗೇವಾರರು “ನಮ್ಮ ಭೋಸ್ಲೇ ರಾಜವಂಶವನ್ನು ಕೊನೆಗೊಳಿಸಿದವರು ಕೊಟ್ಟ ಸಿಹಿಯನ್ನು ನಾನು ತಿನ್ನಬೇಕೇನು?’ ಎಂದು ಉತ್ತರಿಸಿದ್ದರು. ಇನ್ನೊಮ್ಮೆ ಶಾಲೆಯಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಪರಿಶೀಲನೆಗೆ ಬಂದಾಗ ಹೆಡಗೇವಾರ್ ಎದ್ದು ನಿಂತು ವಂದೇ ಮಾತರಂ ಘೋಷಣೆ ಮೊಳಗಿಸಿ ಶಾಲೆಯಿಂದ ಹೊರಹಾಕಲ್ಪಟ್ಟರು. ಮುಂದೆ ಕಲ್ಕತ್ತಾದಲ್ಲಿ ಮೆಡಿಕಲ್ ಮಾಡುತ್ತಿರುವಾಗ ಕ್ರಾಂತಿಕಾರಿಗಳ ಜತೆ ಸೇರಿ ಪೊಲೀಸ್ ಠಾಣೆಯೊಂದಕ್ಕೆ ಬಾಂಬ್ ಕೂಡಾ ಎಸೆದಿದ್ದರು. ಆಗ ಹೆಡಗೇವಾರರ ವಯಸ್ಸು ಕೇವಲ 18. ಏಕೆಂದರೆ ಡಾಕ್ಟರ್‍ಜಿ ಖ್ಯಾತ ಕ್ರಾಂತಿಕಾರಿ ನಾಯಕ ಪುಲಿನ್ ಬಿಹಾರಿ ದಾಸರ ಗರಡಿಯಲ್ಲಿ ಪಳಗಿದ್ದರು. ಕೆಲವೇ ದಿನಗಳಲ್ಲಿ ಡಾಕ್ಟರ್‍ಜಿ, ಯಾವ ಹೆಸರನ್ನು ಕೇಳಿದಾಗ ಬ್ರಿಟಿಷರು ಹೆದರಿ ನಡುಗುತ್ತಿದ್ದರೋ ಅಂಥ “ಅನುಶೀಲನ ಸಮಿತಿ’ಯ ಸಕ್ರೀಯ ಕಾಯ೯ಕತ೯ರಾದರು. ಮುಂದೆ 1927ರಲ್ಲಿ ಮರಳಿ ನಾಗಪುರಕ್ಕೆ ಬಂದ ಡಾಕ್ಟರ್‍ಜಿ ಭಾವುಜಿ ಕಾವರೆ ಮತ್ತು ಅಪ್ಪಾಜೀ ಜೋಶಿಯವರ ಜೊತೆಗೂಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಇತ್ತ ಬಾಲಗಂಗಾಧರನಾಥ ತಿಲಕರು ನಿಧನರಾಗಿದ್ದರು. ಆ ಸಮಯದಲ್ಲಿ ಡಾಕ್ಟರ್‍ಜಿ ಕಾಂಗ್ರೆಸ್ ಪ್ರವೇಶಿಸಿದರು. ಅದೇ ಹೊತ್ತಿಗೆ ಗಾಂಧೀಜಿ ಕೂಡಾ ಆಫ್ರಿಕಾದಿಂದ ಮರಳಿದ್ದರು. ಕಾಂಗ್ರೆ ಸ್‍ನ ಜೊತೆ ಜೊತೆಗೆ ಹೆಡಗೆವಾರರು ನಾಗಪುರದ ತಮ್ಮ ಕೆಲ ಸ್ನೇಹಿತರ ಜೊತೆಗೂಡಿ ನಾಗಪುರ ನ್ಯಾಶನಲ್ ಯೂನಿಯನ್ ಕೂಡ ಶುರು ಮಾಡಿದ್ದರು. ಕಾಂಗ್ರೆಸ್ ಪೂಣ೯ ಸ್ವರಾಜ್ಯವನ್ನು ಘೋಷಿಸುವ ಹತ್ತು ವಷ೯ಗಳ ಮೊದಲೇ ಹೆಡಗೇವಾರರು ಸಂಪೂಣ೯ ಸ್ವಾತಂತ್ರ್ಯಕ್ಕೆ ಬ್ರಿಟಿಷರಿಗೆ ಬೇಡಿಕೆ ಇಟ್ಟಿದ್ದರು! 1921ರಲ್ಲಿ ಗಾಂಧಿಯವರು ಕೈಗೊಂಡ ಅಸಹಕಾರ ಚಳವಳಿಯಲ್ಲಿ ಡಾ.ಹೆಡಗೇವಾರರು ಪಾಲ್ಗೊಂಡು 1 ವಷ೯ ಜೈಲುಪಾಲಾಗಿದ್ದರು. ಜೈಲಿನದ ಹೊರಬಂದ ಹೆಡಗೇವಾರರು 1930ರ ಚಳವಳಿಯಲ್ಲೂ ಗಾಂಧೀಜಿಯ ವರೊಂದಿಗೆ ಕೈಜೋಡಿಸಿದ್ದರು. ಮುಂದೆ ಆರೆಸ್ಸೆಸ್ ಸ್ಥಾಪನೆಯಾದ ನಂತರ ಹೆಡಗೇವಾರ್ ನಡೆಸಿದ ಜಂಗಲ್ ಸತ್ಯಾಗ್ರಹದಲ್ಲಿ 9 ತಿಂಗಳ ಕಾರಾಗ್ರಹ ಶಿಕ್ಷೆಯನ್ನು ಅನುಭವಿಸಿದ್ದರು.

ಹೆಡಗೇವಾರರ ಚಳವಳಿ ತೀವ್ರವಾಗುತ್ತಿದ್ದಂತೆ ಬ್ರಿಟಿಷ್ ಗುಪ್ತಚಕ ಇಲಾಖೆ ಸರಕಾರಿ ಉದ್ಯೋಗದಲ್ಲಿದ್ದ ಆರೆಸ್ಸೆಸ್ ಕಾಯ೯ಕತ೯ರ ಹಿಂದೆ ಬಿತ್ತು. ನೂರಾರು ಜನರು ಉದ್ಯೋಗ ಕಳೆದುಕೊಂಡರು. ಆ ಕಾಲದಲ್ಲಿ ಕಾಂಗ್ರೆಸ್ ಆರೆಸ್ಸೆಸ್ಸಿನ ನಡೆಯನ್ನು ಸಮಥಿ೯ಸಿಯೂ ಇತ್ತು. ಇಂದಿನ ಎಳಸು ಕಾಂಗ್ರೆ ಸಿಗರಿಗೆ ಅವರ ಇತಿಹಾಸವನ್ನಾದರೂ ಅರಿತಿದ್ದರೆ ಆರೆಸ್ಸೆಸ್ ಅಥ೯ವಾಗುತ್ತಿತ್ತು. ಆದರೆ 1932ರಲ್ಲಿ ಮಧ್ಯ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಇ. ಗೋಡಾ೯ನ್ ಆರೆಸ್ಸೆಸ್ ಒಂದು ಸಾಂಪ್ರದಾಯಿಕ ಹಾಗು ರಾಜಕೀಯ ಶಕ್ತಿಯಾಗಿರುವ ಕಾರಣ ಸರಕಾರಿ ನೌಕರರು ಅದಕ್ಕೆ ಸೇರಬಾರದು ಎಂದು ಸುತ್ತೋಲೆಯನ್ನು ಹೊರಡಿಸಿದ. ಮುಂದೆ ಸ್ವಾತಂತ್ರ್ಯಾನಂತರ ಇದೇ ಕೆಲಸವನ್ನು ಕಾಂಗ್ರೆಸ್ ಎರಡು ಭಾರಿ ನಿಷೇಧದ ನೆಪದಲ್ಲಿ ಮಾಡಿತು! ಆರೆಸ್ಸೆಸ್ಸಿನ ಬದ್ಧತೆ ಅದಾಗಲೇ ಖ್ಯಾತವಾಗುತ್ತಿತ್ತು. ಸದಾ೯ರ್ ವಲ್ಲಭ್‌ ಭಾಯಿ ಪಟೇಲರ ಅಣ್ಣ ಹಾಗೂ ಸ್ವರಾಜ್ಯ ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ವಿಠ್ಠಲ್ ಭಾಯ್ ಪಟೇಲರು ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಮದನ್ ಮೋಹನ ಮಾಳವೀಯರು ಆರೆಸ್ಸೆಸ್ ಕಾಯ೯ಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಗಾಂಧಿೀಜಿ ಕೂಡಾ ವಾದಾ೯ದಲ್ಲಿ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿ ಅದರ ಕಾಯ೯ವೈಖರಿಯನ್ನು ಹೊಗಳಿದ್ದರು. ಖ್ಯಾತ ಕಾಂಗ್ರೆಸ್ ನಾಯಕರಾಗಿದ್ದ ಅಪ್ಪಾಜಿ ಜೋಶಿಯವರು ಆರೆಸ್ಸೆಸ್ಸಿನ ಧ್ವಜಕ್ಕೆ ಧ್ವಜಪ್ರಣಾಮ್ ಕೂಡ ಮಾಡಿದ್ದರು! ಇವರೆಲ್ಲರೂ ಕೋಮುವಾದಿಗಳಾಗಿದ್ದರೆ? ಸ್ವಾತಂತ್ರ್ಯ ಹೋರಾಟದ ಈ ಅಧ್ವೆಯು೯ಗಳೆಲ್ಲರೂ ಅಂದು ಆರೆಸ್ಸೆಸ್ ಅನ್ನು ಏಕೆ ಬೆಂಬಲಿಸಿದ್ದರು? ಅಷ್ಟೇ ಅಲ್ಲ ಸಾಕ್ಷಾತ್ ಸುಭಾಷ್ ಚಂದ್ರ ಭೋಸ್ ಕೂಡಾ 1940ರಲ್ಲಿ ಡಾ.ಹೆಡಗೇವಾರರನ್ನು ಭೇಟಿಯಾಗಿ ಚಚಿ೯ಸಿದ್ದರು.

ಈ ಎಲ್ಲಾ ಇತಿಹಾಸವನ್ನು ನಮ್ಮ ಪಠ್ಯಪುಸ್ತಕಗಳು ಹೇಳುವುದಿಲ್ಲ. ಏಕೆಂದರೆ ಹೊಸ ಭಾರತಕ್ಕೆ ಜೀವಮಾನದಲ್ಲಿ ಒಂದೇ ಒಂದು ಲಾಠಿ ಏಟು ತಿನ್ನದ ನೆಹರೂವನ್ನು ಚಾಚಾ ಮಾಡಬೇಕಿತ್ತು! ಮುಂದೆ ಡಾ. ಹೆಡಗೇವಾರರು ತನ್ನ ಉತ್ತರಾಧಿಕಾರಿಯಾಗಿ ಮಹಾ ದಾಶ೯ನಿಕ ಮಾಧವ ಸದಾಶಿವ ಗೋಳವಲಕರರನ್ನು ಸರಸಂಘಚಾಲಕರನ್ನಾಗಿ ನಿಯುಕ್ತಿಗೊಳಿಸಿದರು. 1940ರಲ್ಲಿ ಎರಡನೆ ಸರಸಂಘಚಾಲಕ ಗೋಳವಲ್ಕರ್ ಗುರೂಜಿ ತಮ್ಮ ಸ್ವಯಂಸೇವಕರಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕರೆ ನೀಡಿದ್ದರು. ಆ ಹೊತ್ತಿಗೆ ಆರೆಸ್ಸೆಸ್ ಸ್ವಯಂಸೇವಕರಿಗೆ ಸಂಸ್ಕಾರ, ವ್ಯಕ್ತಿನಿಮಾ೯ಣ, ದೇಶದ ಭವಿಷ್ಯದ ಬಗ್ಗೆ ಮತ್ತಷ್ಟು ಸ್ಪಷ್ಟತೆ ಬಂದಿತ್ತು. ಚಳವಳಿ ಮತ್ತಷ್ಟು ತೀವ್ರವಾಯಿತು. ಮಹಾರಾಷ್ಟ್ರದ ವಿದಭ೯ ಪ್ರಾಂತ್ಯದ ಚಿಮುರ್‍ನಲ್ಲಿ ಸತ್ಯಾಗ್ರಹ ನಡೆಯುವ ವೇಳೆಯಲ್ಲಿ ಖಾಕಿ ಚಡ್ಡಿ ಹಾಕಿಕೊಂಡಿದ್ದ ರಾಷ್ಟ್ರಪ್ರೇಮಿ ಯುವಕನೊಬ್ಬ ತಿರಂಗಾ ಧ್ವಜ ಹಾರಿಸಲು ಹೋದಾಗ ಆರೆಸ್ಸೆಸ್ ಗುಂಡೇಟು ತಿಂದು ಪ್ರಾಣಬಿಟ್ಟಿದ್ದ. ಹಲವು ಸ್ವಯಂಸೇವಕರು ನೇರ ಚಳವಳಿಗಿಳಿದರು. ಮತ್ತೆ ಕೆಲವರು ಚಳವಳಿಗೆ ಬೆಂಬಲವಾಗಿ ನಿಂತರು. ಕ್ವಿಟ್ ಇಂಡಿಯಾ ಚಳವಳಿ ಸಂದಭ೯ದಲ್ಲಿ ಭೂಗತರಾಗಿದ್ದ ಕಾಂಗ್ರೆಸ್ಸಿನ ಕಾಯ೯ಕತ೯ರಿಗೆ ಆರೆಸ್ಸೆಸ್ ಆಶ್ರಯ ಕೊಟ್ಟಿತು. ಬಹುಶಃ ಕಾಂಗ್ರೆಸ್ ಇನದು ಅದನ್ನು ಮರೆತಿದೆ. ಅರುಣಾ ಆಸಫ಼್ ಅಲಿ, ಜಯಪ್ರಕಾಶ ನಾರಾಯಣ ಮೊದಲಾದವರು ದೆಹಲಿಯ ಸಂಘಚಾಲಕ ಲಾಲಾ ಹಂಸರಾಜ ಗುಪ್ತಾರವರ ಮನೆಯಲ್ಲಿ, ಅಚ್ಯುತ್ ಪಟವಧ೯ನ, ಸಾನೆ ಗುರೂಜಿಯವರು ಪುಣೆಯ ಸಂಘಚಾಲಕ ಭಾವುಸಾಹೇಬ್ ದೇಶಮುಖರ ಮನೆಯಲ್ಲಿ ಆಶ್ರಯ ಪಡೆದಿದ್ದರು ಹಾಗೂ ಕ್ರಾಂತಿವೀರ ನಾನಾ ಪಾಟೀಲರು ಔಂಧಿನ ಸಂಘಚಾಲಕರಾಗಿದ್ದ ಎಸ್.ಡಿ. ಸತ್ವಲೇಕರರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಅರುಣಾ ಆಸಫ಼್ ಅಲಿಯವರು 1967ರಲ್ಲಿ ದೆಹಲಿಯ “ಹಿಂದುಸ್ತಾನ್’ ಎಂಬ ಹಿಂದಿ ಪತ್ರಿಕೆಗೆ ನೀಡಿದ ಸಂದಶ೯ನದಲ್ಲಿ 1942ರ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಹೀಗೆ ಹೇಳುತ್ತಾರೆ: “ಪ್ರಮುಖ ನಾಯಕರ ಬಂಧನದ ನಂತರ 1942ರ ಚಳವಳಿಯೊಂದು ದಿಶೆಯಿಲ್ಲದ ಚಳವಳಿಯಾಗಿತ್ತು. ಆಗ ನಾನು ಭೂಗತನಾಗಿ ದೆಹಲಿಯ ಆರೆಸ್ಸೆಸ್ ಪ್ರಾಂತ ಸಂಘಚಾಲಕರಾದ ಲಾಲಾ ಹಂಸರಾಜರ ಮನೆಯಲ್ಲಿ ಆಶ್ರಯ ಪಡೆದಿದ್ದಾಗ ನಾನು ಅವರ ಮನೆಯಲ್ಲಿದ್ದ ವಿಚಾರ ತಮ್ಮ ಕೆಲಸದ ಆಳುಗಳಿಗೂ ಸಂದೇಹ ಬರದಂತೆ 15 ದಿನ ಅವರು ನನಗೆ ವ್ಯವಸ್ಥಿತವಾದ ರಕ್ಷಣೆ ಒದಗಿಸಿದ್ದರು. ಭೂಗತವಾಗಿದ್ದ ವ್ಯಕ್ತಿ ಹೆಚ್ಚು ದಿನ ಒಂದೇ ಸ್ಥಳದಲ್ಲಿ ಇರಲಾಗದ ಕಾರಣ ಲಾಲಾ ಹಂಸರಾಜರು ತಮ್ಮ ಪತ್ನಿಯ ಬಟ್ಟೆಗಳಲ್ಲಿ ನನ್ನನ್ನು ಮುಚ್ಚಿ ಯಾರಿಗೂ ಸಂದೇಹ ಬರದ ರೀತಿಯಲ್ಲಿ ಅಲ್ಲಿಂದ ಬೇರೆಡೆಗೆ ಕಳಿಸಿಕೊಟ್ಟರು.’

ಇದೆಲ್ಲಾ ಸ್ವಾತಂತ್ರ್ಯ ಚಳವಳಿಗೆ ಆರೆಸ್ಸೆಸ್‍ನ ಕೊಡುಗೆಯೇ ಅಲ್ಲವೇ?

  ಕೇರಳದ ಬಹುದೊಡ್ಡ ಕಮ್ಯುನಿಸ್ಟ್ ನಾಯಕರಾಗಿದ್ದಂತೂ ಇಎಂಎಸ್ ನಂಬೂದಿರಿಪಾಡ್ ಅವರಂಥವರೇ, BJP-RSS: In the service of the Right Reaction’ ಎಂಬ ತಮ್ಮ ಕಿರು ಹೊತ್ತಗೆಯಲ್ಲೂ ಡಾ. ಹೆಡಗೇವಾರರು ಗಾಂಧಿ ಅನುಯಾಯಿ ಯಾಗಿದ್ದರು. 1930ರ ದಂಡೀ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಎಂದು ಬರೆದಿರುವಾಗ ರಾಹುಲ್ ಗಾಂಧಿ ಹಾಗೂ ಆತನ ತಿಳಿಗೇಡಿ ಅನುಯಾಯಿಗಳಿಂದ ಆರೆಸ್ಸೆಸ್‍ಗೆ ಸಟಿ೯ಫಿಕೆಟ್ ಬೇಕೇ?

ಕಳೆದ 70 ವಷ೯ಗಳಿ೦ದ ಇಂಥ ಎಷ್ಟೋ ಉಳಿಪೆಟ್ಟುಗಳನ್ನು ತಿನದು ಆರೆಸ್ಸೆಸ್ ಶಿಲ್ಪವಾಗಿದೆ. ತುತು೯ಪರಿಸ್ಥಿತಿ ಸಮಯದಲ್ಲಿ ಅರೆಸ್ಸೆಸ್‍ನ ಪಾತ್ರವನ್ನು ಅರಿತವರಿಗೆ ಸ್ವಾತಂತ್ರ್ಯ ಚಳವಳಿಯಲ್ಲಿನ ಅದರ ಪಾತ್ರದ ಬಗ್ಗೆ ಯಾವ ಸಂಶಯವೂ ಮೂಡುವುದಿಲ್ಲ. ಆದರೆ ತುತು೯ಪರಿಸ್ಥಿಯಲ್ಲಿ ಕಾಂಗ್ರೆಸ್ ನಡೆಸಿದ ದೌಜ೯ನ್ಯವನ್ನು ಕೇಳಿದವರು ಕಾಂಗ್ರೆ ಸಿನ ಜಾಯಮಾನವನ್ನು ಸುಲಭವಾಗಿ ಅಥ೯ಮಾಡಿಕೊಳ್ಳಬಹುದು. ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಕೆದಕಿದರೆ ಇಂಥ ಮತ್ತಷ್ಟು ಸತ್ಯಗಳು ತೆರೆದುಕೊಳ್ಳುತ್ತಾಹೋಗುತ್ತವೆ. ಸತ್ಯ ತೆರೆದುಕೊನಡಷ್ಟೂ ಕಾಂಗ್ರೆಸ್ ಪಾತಾಳಕ್ಕೆ ಕುಸಿಯುತ್ತಾ ಹೋಗುತ್ತದೆ. ಅದರ ಬ್ರಿಟಿಷ್ ನಂಟು ಬೇರೊಂದು ಕಥೆಯನ್ನು ಹೇಳತೊಡಗುತ್ತದೆ. ಆ ಕಥೆ ಬೆಡ್‍ರೂಮುವರೆಗೂ ಮುಟ್ಟುತ್ತದೆ. ಆರೆಸ್ಸೆಸ್ ನಿಷ್ಠೆಯನ್ನು ಅನುಮಾನಿಸುವವರೊಮ್ಮೆ ಅದರ ಬಗ್ಗೆ ಯೋಚಿಸುವುದೊಳಿತು.

 freedom movement

Comments are closed.