Pratap Simha

ಹನ್ನೊಂದು ತುಂಬುತ್ತಿರುವ ಹೊತ್ತಿನಲಿ ಒತ್ತರಿಸಿ ಬರುತ್ತಿವೆ ನೆನಪುಗಳು!
Death… ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಪಲ್ ಕಂಪನಿಯ ಸ್ಥಾಪಕ, ಮಾಲೀಕ ಸ್ಟೀವ್ ಜಾಬ್ಸ್ ಅವರು ಯಮನ ಮನೆಯ ಕದತಟ್ಟಿ ವಾಪಸ್ ಬಂದ ಮೇಲೆ ಸಾವನ್ನು “Life’s change agent” ಎಂದು ವರ್ಣಿಸಿದ್ದರು. ಒಬ್ಬ ಸೈನಿಕನ ಪಾಲಿಗೆ ಸಾವೇ ಪ್ರಾರಬ್ಧ-Death is destiny.

ಎಷ್ಟು ನಿಜ ಅಲ್ವಾ?

ಹಾಗಂತ ಸಾವು ಇಂಥದ್ದೇ ದಿನ, ಕ್ಷಣ, ಸಂದರ್ಭದಲ್ಲಿ ಬರುತ್ತದೆ ಎಂದು ಊಹಿಸುವುದಕ್ಕಾಗುತ್ತಾ? ಬರುವ ಮುನ್ನ ಅದೇನಾದರೂ ಮುನ್ಸೂಚನೆ ಕೊಡುತ್ತದಾ? ಈ ಕೆಳಗಿನ ಪತ್ರವನ್ನೊಮ್ಮೆ ಓದಿ…

“ಆತ್ಮೀಯ ಅಪ್ಪ, ಅಮ್ಮಾ,

ಈ ಪತ್ರ ನಿಮ್ಮ ಕೈ ಸೇರುವ ಮೊದಲೇ ನಾನು ಆಗಸದಲ್ಲಿ ಅಪ್ಸರೆಯ ಆತಿಥ್ಯ ಸ್ವೀಕರಿಸುತ್ತಾ ನಿಮ್ಮನ್ನೆಲ್ಲಾ ನೋಡುತ್ತಿರುತ್ತೇನೆ. ಹಾಗೆಂದು ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ಒಂದು ವೇಳೆ ನಾನು ಮತ್ತೆ ಮನುಷ್ಯನಾಗಿ ಜನ್ಮವೆತ್ತಿದರೂ ಭಾರತೀಯ ಸೇನೆಯನ್ನೇ ಸೇರುತ್ತೇನೆ, ಈ ದೇಶಕ್ಕಾಗಿ ಹೋರಾಡುತ್ತೇನೆ. ನಿಮಗೆ ಸಾಧ್ಯವಾದರೆ, ಇಂಡಿಯನ್ ಆರ್ಮಿ ನಿಮ್ಮ ಸುಂದರ ನಾಳೆಗಳ ಸುರಕ್ಷತೆಗಾಗಿ ಎಲ್ಲಿ ಹೋರಾಡಿತೋ ಆ ಜಾಗವನ್ನೊಮ್ಮೆ ದಯವಿಟ್ಟು ನೋಡಿ ಬನ್ನಿ. ಸಮವಸ್ತ್ರ ತೊಟ್ಟ ಸೈನಿಕನ ತ್ಯಾಗವನ್ನು ಎಂದೂ ಮರೆಯಬೇಡಿ. ಮುಂದೊಂದು ದಿನ ನನ್ನ ಭಾವಚಿತ್ರವನ್ನು ಕರ್ಣಿ ಮಾತಾ ಮಂದಿರದಲ್ಲಿಡುತ್ತೀರೆಂದು ಆಶಿಸುತ್ತೇನೆ.

ಅಪ್ಪಾ, ನೀವು ನನ್ನ ಬಗ್ಗೆ ಹೆಮ್ಮೆ ಪಡಲೇಬೇಕು. ಅಮ್ಮಾ, ನೀನೂ ಕೂಡ..  ನಾನು ಮಾಡಿದ ತಪ್ಪುಗಳನ್ನೂ ಮನ್ನಿಸು. ಸರಿ… ನಮ್ಮ ಸೇನಾ ತುಕಡಿಯನ್ನು ಸೇರಿಕೊಳ್ಳುವ ಸಮಯ ಬಂತು. ನಮ್ಮ ತುಕಡಿಯಲ್ಲಿ 12 ಯುವಕರಿದ್ದೇವೆ-Dirty Dozen!

ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.

ವಿಜಯಂತ್ ಥಾಪರ್”

ಒಬ್ಬ ತಂದೆಯ ಜೀವನದಲ್ಲಿ ಬರಬಹುದಾದ ಅತ್ಯಂತ ದುಃಖಕರ ದಿನವೆಂದರೆ ತನ್ನ ಮಗನ ಚಟ್ಟಕ್ಕೆ ಹೆಗಲು ಕೊಡುವ ಸಂದರ್ಭ ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್. ಅಂದು ಕ್ಯಾಪ್ಟನ್ ವಿಜಯಂತ್ ಥಾಪರ್, ತನ್ನ ಅಪ್ಪನನ್ನು ದುಃಖದ ಮಡುವಿಗೆ ದೂಡಲು ಸಿದ್ಧನಾಗಿಯೇ ಹೊರಟಿದ್ದನೇನೋ! 1999, ಮೇ-ಜೂನ್‌ನಲ್ಲಿ ನಡೆದ ಕಾರ್ಗಿಲ್ ಯುದ್ಧವನ್ನು ಒಮ್ಮೆ ನೆನಪಿಸಿಕೊಳ್ಳಿ. ಕಾರ್ಗಿಲ್‌ನ ಪರ್ವತ ಶ್ರೇಣಿಗಳ ತುತ್ತ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡು ಕುಳಿತಿದ್ದ ಭಯೋತ್ಪಾದಕರನ್ನು ನಾಶಪಡಿಸಲು ಹೊರಟಿದ್ದ ನಮ್ಮ ಸೈನಿಕರು, ಸೇನಾಧಿಕಾರಿಗಳಿಗೆ ತಾವು ವಾಪಸ್ ಬರುವುದಿಲ್ಲ ಎಂಬ ಸತ್ಯಸಂಗತಿ ತಿಳಿದೇ ಅಂಥದ್ದೊಂದು ಕಾರ್ಯಾಚರಣೆಗೆ ಹೊರಟಿದ್ದರು. ಅಂತಹವ ರಲ್ಲಿ 22 ವರ್ಷದ ಕ್ಯಾಪ್ಟನ್ ವಿಜಯಂತ್ ಥಾಪರ್ ಕೂಡ ಒಬ್ಬ. ಅವನದ್ದು ಸೇನಾ ಹಿನ್ನೆಲೆ ಹೊಂದಿದ್ದ ಕುಟುಂಬ. ಅಪ್ಪ, ಅಜ್ಜ, ಮುತ್ತಜ್ಜ ಎಲ್ಲರೂ ಭಾರತೀಯ ಸೇನೆ ಸೇರಿ ದೇಶಕ್ಕಾಗಿ ಹೋರಾಡಿದವರೇ. ವಿಜಯಂತ್ ಆ ಸೇನಾ ಪರಂಪರೆಯ ದೀವಿಗೆಯನ್ನು ಮುಂದೆ ಕೊಂಡೊಯ್ಯುತ್ತಿದ್ದನಷ್ಟೇ. ಆತನ ತಾತ ಡಾ. ಕರ್ತಾ ರಾಮ್ ಥಾಪರ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಅಜ್ಜ ಜೆ.ಎಸ್. ಥಾಪರ್ 15  ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಕೊನೆಯ ಪೋಸ್ಟಿಂಗ್ ಜಮ್ಮು-ಕಾಶ್ಮೀರವಾಗಿತ್ತು. ಮೊಮ್ಮಗನನ್ನು ಸೇನೆಗೆ ಸೇರುವಂತೆ ಹುರಿದುಂಬಿಸಿದ್ದೇ ಅವರು. ವಿಜಯಂತ್‌ನ ತಂದೆ ವಿ.ಎನ್. ಥಾಪರ್ ಕರ್ನಲ್ ಆಗಿದ್ದರು. 1958ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿದ ಅವರು, 1962ರಲ್ಲಿ ಮರಾಠ ಕಾಲ್ದಳಕ್ಕೆ ಸೇರ್ಪಡೆಯಾಗಿದ್ದರು. ಚೀನಾ ಯುದ್ಧ, ಬಾಂಗ್ಲಾದೇಶ ವಿಮೋಚನೆಯಲ್ಲಿ ಪಾಲ್ಗೊಂಡಿದ್ದರು. ‘೧೪ ಜಮ್ಮು-ಕಾಶ್ಮೀರ್ ರೈಫಲ್ಸ್’ ತುಕಡಿಯನ್ನು ಮುನ್ನಡೆಸಿದ್ದರು. ಮೂವತ್ತೇಳು ವರ್ಷ ಸೇವೆಯ ನಂತರ 1999ರಲ್ಲಿ ನಿವೃತ್ತರಾದರು.

ಮಗ ವಿಜಯಂತ್ ಥಾಪರ್ ಭಾರತೀಯ ಸೇನೆಯನ್ನು ಸೇರಿ ಕೊಂಡಿದ್ದೂ ಅದೇ ವರ್ಷ.

ಆತ ಜನಿಸಿದ್ದು 1977, ಡಿಸೆಂಬರ್ 26ರಂದು. ಸೇನೆಯನ್ನು ಸೇರಬೇಕೆಂಬ ತುಡಿತ ಸಹಜವಾಗಿಯೇ ಇತ್ತು. ಆತನ ಪ್ರೀತಿಯ ಆಟಿಕೆಗಳು ಗನ್‌ಗಳಾಗಿದ್ದವು! ಅಪ್ಪನ ಮಿಲಿಟರಿ ಕ್ಯಾಪ್, ದಂಡ ಹಿಡಿದು ಅಧಿಕಾರಿಯಂತೆ ಮನೆ ತುಂಬ ವಾಕ್ ಮಾಡುತ್ತಿದ್ದ. ಹೊಸದಿಲ್ಲಿಯ ದೌಲಾ ಕುಂವಾನಲ್ಲಿರುವ ಪ್ರತಿಷ್ಠಿತ ಸೇನಾ ಶಾಲೆಯಲ್ಲಿ ಕಲಿತ ವಿಜಯಂತ್, ಡೆಹ್ರಾಡೂನ್‌ನಲ್ಲಿನ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾದ. 1998, ಡಿಸೆಂಬರ್ 12ರಂದು ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾದ ವಿಜಯಂತ್ ಥಾಪರ್‌ಗೆ, ‘2 ರಜಪೂತ್ ರೈಫಲ್ಸ್’ನಂತಹ ಲೆಜೆಂಡರಿ ಸೇನಾ ತುಕಡಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಗ್ವಾಲಿಯರ್ ಆತನ ಮೊದಲ ಪೋಸ್ಟಿಂಗ್. ಆದರೆ ಒಂದೇ ತಿಂಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ತೆರಳಬೇಕಾಯಿತು. ಅಲ್ಲಿನ ಕುಪ್ವಾರದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ತೊಡಗಿದ. ಎರಡು ಎನ್‌ಕೌಂಟರ್‌ಗಳಲ್ಲಿ ಭಾಗಿಯಾದ. ಈ ಮಧ್ಯೆ, ಭಯೋತ್ಪಾದಕರು ಕಾರ್ಗಿಲ್‌ನ ಪರ್ವತ ತುದಿಗಳನ್ನು ಆಕ್ರಮಿಸಿರುವ ವಿಚಾರ ಬೆಳಕಿಗೆ ಬಂತು. ಪ್ರಧಾನಿ ವಾಜಪೇಯಿಯವರು ಕಾರ್ಗಿಲ್ ಕಾರ್ಯಾಚರಣೆಗೆ ಆದೇಶ ನೀಡಿದರು. ಹಾಗಾಗಿ ಭಯೋತ್ಪಾದನೆ ಮೂಲೋತ್ಪಾಟನೆ ಕಾರ್ಯಾಚರಣೆಯಲ್ಲಿ ತೊಡಗಿರುವಾಗಲೇ ಡ್ರಾಸ್ ಸೆಕ್ಟರ್‌ನಲ್ಲಿ ಬರುವ ತೋಲೋಲಿಂಗ್, ಟೈಗರ್ ಹಿಲ್ಸ್ ಹಾಗೂ ಅದರ ಸುತ್ತಲಿನ ಬೆಟ್ಟಗಳಿಂದ ಭಯೋತ್ಪಾದಕರನ್ನು ಖಾಲಿ ಮಾಡಿಸಬೇಕೆಂದು ‘೨ ರಜಪೂತ್ ರೈಫಲ್ಸ್’ಗೆ ಆದೇಶ ಬಂತು.

ಕಾರ್ಗಿಲ್ ಯುದ್ಧದಲ್ಲೇ ಅತ್ಯಂತ ನಿರ್ಣಾಯಕ ಕದನವೆಂದರೆ ತೋಲೋಲಿಂಗ್‌ನ ಮರುವಶ!

ಶ್ರೀನಗರ ಹಾಗೂ ಲೆಹ್ ರಾಷ್ಟ್ರೀಯ ಹೆದ್ದಾರಿಗೆ ಬೆನ್ನು ಮಾಡಿ ಆಸೀನವಾಗಿರುವ ತೋಲೋಲಿಂಗ್, ಬಹುಮುಖ್ಯ ಸಂಪರ್ಕ ಸ್ಥಳ. ನಮ್ಮ ಸೈನಿಕರು ಕಡಿದಾದ ಬೆಟ್ಟವನ್ನೇರಿ ಶತ್ರು ನಾಶ ಮಾಡಬೇಕು. ಬೆಟ್ಟದ ತುದಿಯಲ್ಲಿ ಕುಳಿತಿರುವ ಶತ್ರುವಿಗೆ ಸೈನಿಕರನ್ನು ಕುರಿಗಳಂತೆ ಹೊಡೆದುರುಳಿಸುವ ಸುವರ್ಣಾವಕಾಶ. ಜತೆಗೆ ಅತ್ಯಾಧುನಿಕ ಜಾಮರ್‌ಗಳನ್ನು ಹೊಂದಿದ್ದ ಭಯೋತ್ಪಾದಕರು ನಮ್ಮ ಸೈನಿಕರ ರೇಡಿಯೋ ಸಂದೇಶಗಳನ್ನು ತಡೆದು ಕದ್ದಾಲಿಕೆ ಮಾಡಿ ಬಿಡುತ್ತಿದ್ದರು, ನಮ್ಮ ಕಾರ್ಯತಂತ್ರಗಳನ್ನು ಮೊದಲೇ ತಿಳಿದುಕೊಳ್ಳುತ್ತಿದ್ದರು. ಹೀಗಾಗಿ ‘2 ರಜಪೂತ್ ರೈಫಲ್ಸ್’ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಎಂ.ಬಿ. ರವೀಂದ್ರನಾಥ್ ಹಾಗೂ ಅವರ ಡೆಪ್ಯುಟಿ ಪದ್ಮಪಾಣಿ ಆಚಾರ್ಯ ಅವರಿಗೆ ದೊಡ್ಡ ಅಪಾಯವೇ ಎದುರಿಗಿತ್ತು. ಅದನ್ನು ಕೆಲವರು ಅಪಾಯದಂತೆ ಕಂಡರೆ, ಕ್ಯಾಪ್ಟನ್ ವಿಜಯಂತ್ ಥಾಪರ್‌ಗೆ ಅದೊಂದು ದೇವರೇ ಸೃಷ್ಟಿಸಿದ ಅವಕಾಶವೆನಿಸಿತು. ಈ ಮಧ್ಯೆ, ಕಾರ್ಯಾಚರಣೆಯೇನೋ ಆರಂಭವಾಯಿತು, ಆದರೆ ಶತ್ರುವನ್ನು ಸದೆಬಡಿಯುವುದು ತೀರಾ ಕಷ್ಟವೆನಿಸತೊಡಗಿತು. 1999, ಜೂನ್ 12ರಂದು ಸ್ವಲ್ಪ ಮಟ್ಟಿನ ಯಶಸ್ಸು ದೊರೆಯಿತು. ಮೇಜರ್ ಮೋಹಿತ್ ಸಕ್ಸೇನಾ ನೇತೃತ್ವದಲ್ಲಿ ಪ್ರಾರಂಭಿಕ ದಾಳಿ ನಡೆಯಿತಾದರೂ ಜೂನ್ 12ರ ರಾತ್ರಿಯ ಕಾರ್ಯಾಚರಣೆಯ ನೇತೃತ್ವವನ್ನು ವಿಜಯಂತ್ ಥಾಪರ್ ಮುಂದಾಳತ್ವದ ತಂಡಕ್ಕೆ ವಹಿಸಲಾಯಿತು. ತೋಲೋಲಿಂಗ್ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಆಯಕಟ್ಟಿನ ಸ್ಥಳವೆಂದರೆ ‘ಬರ್ಬಾದ್ ಬಂಕರ್’. ಅದನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡ ಥಾಪರ್ ನೇತೃತ್ವದ ಸೈನಿಕರು ಮುಂದಿನ ಹಾದಿಯನ್ನು ಸುಗಮಗೊಳಿಸಿದರು.

ಜೂನ್ 13, ಬೆಳಗಿನ ಜಾವ 4.10 ನಿಮಿಷ.

ಕರ್ನಲ್ ರವೀಂದ್ರನಾಥ್ ಅವರಿಂದ ರೇಡಿಯೋ ಸಂದೇಶ ಬಂತು. ಅಲ್ಲಿಂದ 20 ಕಿ.ಮೀ. ದೂರದಲ್ಲಿದ್ದ ಮೇಜರ್ ಜನರಲ್ ಮೋಹಿಂದರ್ ಪುರಿ ಅತ್ತ ಕಡೆ ಇದ್ದರು. ‘ಸರ್, ನಾನು ತೋಲೋಲಿಂಗ್‌ನ ಮೇಲಿದ್ದೇನೆ’! ಈ ಒಂದು ಸಂದೇಶ ನಮ್ಮ ಸೇನೆ ನಿಟ್ಟುಸಿರು ಬಿಡುವಂತೆ ಮಾಡಿತು. ಆದರೆ ಅದಕ್ಕೂ ಮೊದಲು ಸುಮಾರು 3 ವಾರಗಳ ಕಾಲ ನಮ್ಮ ಸೈನಿಕರು ಹಗಲಿರುಳು ಶ್ರಮಪಟ್ಟಿದ್ದರು. ಕಾರ್ಗಿಲ್ ಯುದ್ಧದಲ್ಲೇ ಅತಿ ಹೆಚ್ಚು ಸೈನಿಕರನ್ನು ಕಳೆದುಕೊಂಡ ಕದನವೇ ತೋಲೋಲಿಂಗ್ ಮರುವಶ. ಈ ಕಾರ್ಯಾಚರಣೆಯಲ್ಲಿ ಸುಮಾರು 100 ಸೈನಿಕರು ಹುತಾತ್ಮರಾದರು. ಕೊನೆಯ ದಿನದ ದಾಳಿಯೊಂದರಲ್ಲೇ 23 ಸೈನಿಕರು ಪ್ರಾಣಾರ್ಪಣೆ ಮಾಡಿದ್ದರು. ಮರುವಶದ ಸುದ್ದಿ ಕೇಳಿದ ಸೇನಾ ಜನರಲ್ ವೇದ್ ಪ್ರಕಾಶ್ ಮಲ್ಲಿಕ್, “Well-done” ಎಂದು ಮೆಚ್ಚುಗೆ ಸೂಚಿಸಿದರು. ಆ ವೇಳೆಗಾಗಲೇ ಮೇಜರ್ ರಾಜೇಶ್ ಅಧಿಕಾರಿ, ಕ್ಯಾಪ್ಟನ್ ವಿವೇಕ್ ಗುಪ್ತಾ, ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥ್ ಅವರಂತಹ ಹೆಮ್ಮೆಯ ಪುತ್ರರನ್ನು ಈ ದೇಶ ಕಳೆದುಕೊಂಡಿತ್ತು. ತೋಲೋಲಿಂಗ್ ವಶದ ಬೆನ್ನಲ್ಲೇ ‘ತ್ರಿ ಪಿಂಪಲ್ಸ್’ ಎಂಬ ಪರ್ವತವನ್ನು ವಶಪಡಿಸಿಕೊಳ್ಳುವ ಕೆಲಸ ಕರ್ನಲ್ ಪದ್ಮಪಾಣಿ ಆಚಾರ್ಯ ನೇತೃತ್ವದ ತುಕಡಿಗೆ ವಹಿಸಲಾಯಿತು. ಆಚಾರ್ಯ ಅವರ ಡೆಪ್ಯುಟಿ ಮತ್ತಾರೂ ಅಲ್ಲ ಕ್ಯಾಪ್ಟನ್ ವಿಜಯಂತ್ ಥಾಪರ್. ಇಪ್ಪತ್ತೆರಡು ವರ್ಷದ ಆತ, ತೋಲೋಲಿಂಗ್ ಪರ್ವತ ವಶದ ಖುಷಿಯಲ್ಲೇ ತೇಲಾಡುತ್ತಿದ್ದ, ಹೊಸ ಜವಾಬ್ದಾರಿಗಾಗಿ ಹಾತೊರೆಯುತ್ತಿದ್ದ. ಅದಕ್ಕೆ ತಕ್ಕಂತೆ ಜವಾಬ್ದಾರಿಯೂ ಅರಸಿಕೊಂಡು ಬಂತು. ‘ತ್ರೀ ಪಿಂಪಲ್ಸ್’ ಶಿಖರವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ತೆರಳುವ ಮುನ್ನ, ಅಂದರೆ ಜೂನ್ 13ರಂದು ಅಮ್ಮನಿಗೆ ಕರೆ ಮಾಡಿದ.

ಅಮ್ಮ ತೃಪ್ತಾ ಅವರು ಮಗನ ಧ್ವನಿಯನ್ನು ಆಲಿಸಿದ್ದು ಅದೇ ಕಡೇ ಬಾರಿ!

“ಅಮ್ಮಾ ನಾವು ತೋಲೋಲಿಂಗ್ ಪರ್ವತವನ್ನು ವಶಪಡಿಸಿ ಕೊಂಡಿದ್ದೇವೆ. ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ನ್ಯೂಸ್ ಪೇಪರ್ ಕ್ಲಿಪ್ಪಿಂಗ್‌ಗಳನ್ನು ಕಟ್ ಮಾಡಿ ಇಟ್ಟಿರು, ಪ್ಲೀಸ್…” ಎಂದು ಫೋನನ್ನೇನೋ ಕೆಳಗಿಟ್ಟ. ಆದರೆ ಆ ಕರೆಯ ಬೆನ್ನಲ್ಲೇ ‘ತಾನು ವಾಪಸ್ ಬರುವುದಿಲ್ಲ… ಈ ಪತ್ರ ನಿಮ್ಮ ಕೈ ಸೇರುವ ಮೊದಲೇ ನಾನು ಆಗಸದಲ್ಲಿ ಅಪ್ಸರೆಯ ಆತಿಥ್ಯ ಸ್ವೀಕರಿಸುತ್ತಾ ನಿಮ್ಮನ್ನೆಲ್ಲಾ ನೋಡುತ್ತಿರುತ್ತೇನೆ…’ ಎಂಬ ಸಂದೇಶವನ್ನು ಹೊತ್ತ ಪತ್ರವನ್ನೂ ಪೋಸ್ಟ್ ಮಾಡಿದ! ಬಹುಶಃ ಸಾವು ತನ್ನ ಆಗಮನದ ಬಗ್ಗೆ ಆತನಿಗೆ ಮೊದಲೇ ಸೂಚನೆ ನೀಡಿತ್ತೇನೋ. After all, death is a part of the soldier’s destiny.

ಅದು ಅತಿವೃಷ್ಟಿಯಿರಲಿ, ಅನಾವೃಷ್ಟಿಯಾಗಿರಲಿ, ಕೊಲೆಯಿರಲಿ, ಕದನವಾಗಿರಲಿ ನಿರ್ಭಾವುಕರಾಗಿ ಕೆಲಸ ಮಾಡಬೇಕಾದವರು ಪತ್ರಕರ್ತರು. ಅಂತಹ ಪತ್ರಕರ್ತರೂ ಕೆಲವೊಮ್ಮೆ ಕೆಲವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿ, ಸಾವಿಗೆ ಕಣ್ಣೀರು ಸುರಿಸಿದ ಸಂದರ್ಭಗಳಿವೆ. ‘ಇಂಡಿಯಾ ಟುಡೆ’ ಪತ್ರಿಕೆಯ ಫೋಟೋಗ್ರಾಫರ್ ದಿಲೀಪ್ ಬ್ಯಾನರ್ಜಿ ಅವರಿಗೆ ತೋಲೋಲಿಂಗ್ ಕಾರ್ಯಾಚರಣೆ ವೇಳೆ ಕರ್ನಲ್ ಪದ್ಮಪಾಣಿ ಆಚಾರ್ಯ ಹಾಗೂ ಕ್ಯಾಪ್ಟನ್ ವಿಜಯಂತ್ ಥಾಪರ್ ಜತೆ ಒಂದಿಷ್ಟು ಸಮಯ ಕಳೆಯುವ ಅವಕಾಶ ದೊರೆತಿತ್ತು. ರಣರಂಗದಲ್ಲಿರುವ ಸೈನಿಕರು, ಸೇನಾಧಿಕಾರಿಗಳಿಗೆ ತಮ್ಮ ಮನೆಯವರಿಗೆ ಸಂದೇಶ ಕಳುಹಿಸಬೇಕೆಂದರೂ ಫೋನ್ ವ್ಯವಸ್ಥೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ತಮ್ಮ-ತಂಗಿಗೆ, ಪತ್ನಿಗೆ ಅಥವಾ ಅಮ್ಮ-ಅಪ್ಪನಿಗೆ ನಾನು ಸುರಕ್ಷಿತನಾಗಿದ್ದೇನೆ, ಆದಷ್ಟು ಬೇಗ ವಾಪಸ್ ಬರುತ್ತೇನೆಂದು ತಿಳಿಸಿ ಎಂದು ಪತ್ರಕರ್ತರ ಮೂಲಕ ಸಂದೇಶ ರವಾನಿಸುವುದುಂಟು. ಅವತ್ತು ಕರ್ನಲ್ ಆಚಾರ್ಯ ಮಾತಿಗೆ ಕುಳಿತಿದ್ದರು… “ನಾನು ಮತ್ತು ನನ್ನ ಹೆಂಡತಿ ಚಾರುಲತಾ ಒಂದು ಪಂಥ ಕಟ್ಟಿಕೊಂಡಿದ್ದೆವು. ಅವಳ ಹೊಟ್ಟೆಯಲ್ಲಿರುವುದು ಗಂಡು ಮಗು ಎಂದು ಆಕೆ ಹೇಳಿದಳು, ಇಲ್ಲಾ ಅದು ಹೆಣ್ಣು ಮಗು ಎಂದು ನಾನಂದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ಗಂಡು ಮಗು ಎಂದು ಗೊತ್ತಾಯಿತು. ಬರುವ ಆಗಸ್ಟ್‌ನಲ್ಲಿ ಹೆರಿಗೆಯಾಗುತ್ತದೆ. ಯುದ್ಧದಿಂದ ವಾಪಸ್ಸಾದ ಕೂಡಲೇ ಪಂಥದ ಒಪ್ಪಂದದಂತೆ ನೆಕ್‌ಲೆಸ್ ಕೊಡಿಸುತ್ತೇನೆ. ಹಾಗಂತ ಆಕೆಗೆ ಹೇಳಿ…” ಎಂದು ಮನವಿ ಮಾಡಿಕೊಂಡರು. “ನಾನು ಸುರಕ್ಷಿತನಾಗಿದ್ದೇನೆ ಎಂದು ನಮ್ಮ ಕುಟುಂಬದವರಿಗೂ ಹೇಳಿ” ಎಂದು ಥಾಪರ್ ಕೂಡ ಕೇಳಿಕೊಂಡ. ದಿಲ್ಲಿಗೆ ವಾಪಸ್ಸಾದ ಮೇಲೆ, ಹೈದರಾಬಾದ್‌ನಲ್ಲಿದ್ದ ಆಚಾರ್ಯ ಅವರ ಪತ್ನಿಗೆ ಕರೆ ಮಾಡಿದ ಬ್ಯಾನರ್ಜಿ, ಗಂಡನ ಭರವಸೆಯ ಸಂದೇಶವನ್ನು ಮುಟ್ಟಿಸಿದರು. ತದನಂತರ ದಿಲ್ಲಿಯಲ್ಲಿದ್ದ ವಿಜಯಂತ್ ಥಾಪರ್‌ನ ಅಮ್ಮನಿಗೆ ಕರೆ ಮಾಡಿ, “ನಿಮ್ಮ ಮಗ ಕ್ಷೇಮವಾಗಿದ್ದಾನೆ. ಸದ್ಯದಲ್ಲೇ ವಾಪಸ್ ಬರುತ್ತಾನಂತೆ” ಎಂದರು. ಮುಂದುವರಿದು, ‘ಅವನು ನಿಜಕ್ಕೂ ಧೈರ್ಯವಂತ..’ ಎಂದರು. ಎರಡು ದಿನಗಳ ನಂತರ ವಿಜಯಂತ್ ಥಾಪರ್ ಅಮ್ಮ ತೃಪ್ತಾ ಅವರೇ ದಿಲೀಪ್ ಬ್ಯಾನರ್ಜಿಯವರಿಗೆ ಕರೆ ಮಾಡಿದರು!

“ನನ್ನ ಮಗ ಖಂಡಿತ ಧೈರ್ಯವಂತನೇ… ಅಷ್ಟು ಮಾತ್ರವಲ್ಲ, he is no more”!!

ಅದರ ಬೆನ್ನಲ್ಲೇ ಕರ್ನಲ್ ಪದ್ಮಪಾಣಿ ಆಚಾರ್ಯ ಅವರೂ ಹುತಾತ್ಮರಾಗಿರುವ ಸುದ್ದಿ ಸಿಡಿಲಿನಂತೆ ಬಂದಪ್ಪಳಿಸಿತು. 1999, ಜೂನ್ 28ರ ರಾತ್ರಿ 8 ಗಂಟೆಗೆ ತ್ರೀ ಪಿಂಪಲ್ಸ್ ಶಿಖರವನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟ ಆಚಾರ್ಯ ಹಾಗೂ ಥಾಪರ್ ನೇತೃತ್ವದ ತುಕಡಿ, ಇನ್ನೇನು ವಿಜಯ ಪತಾಕೆ ಹಾರಿಸಬೇಕು ಅಷ್ಟರಲ್ಲಿ ಆಚಾರ್ಯ ಬಲಿಯಾದರು. ಅದನ್ನು ಕಂಡು ಸಿಟ್ಟಿಗೆದ್ದು ಶತ್ರುಗಳತ್ತ ಮುನ್ನುಗ್ಗಿದ ವಿಜಯಂತ್ ಥಾಪರ್‌ನ ತಲೆಯನ್ನು ಗುಂಡೊಂದು ಸೀಳಿಕೊಂಡು ಹೋಯಿತು. ಬೆಳಗಾಗುವಷ್ಟರಲ್ಲಿ ಪರ್ವತವೇನೋ ವಶವಾಗಿತ್ತು. ಆದರೆ ಆಚಾರ್ಯ ಹಾಗೂ ಥಾಪರ್ ಅಗಲಿದ್ದರು. ಅವತ್ತು ವಿಜಯಂತ್ ಥಾಪರ್ ಹುತಾತ್ಮನಾದಾಗ “ನನ್ನಲ್ಲಿರುವ ಒಂದೇ ಕೊರಗೆಂದರೆ ಸೇನೆ ಸೇರಿ ದೇಶ ಸೇವೆ ಮಾಡುವ ನಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಲು ಇನ್ನು ಯಾರೂ  ಉಳಿದಿಲ್ಲ…” ಎಂದು ಆತನ ತಂದೆ ಕರ್ನಲ್ ವಿ.ಎನ್. ಥಾಪರ್ ದುಃಖಿಸುತ್ತಿದ್ದರು.

ಒಬ್ಬ ತಂದೆ-ತಾಯಿಗೆ ದೇವರು ಕೊಡಬಹುದಾದ ಅತ್ಯಂತ ಕ್ರೂರ ಶಿಕ್ಷೆಯೆಂದರೆ ಅವರು ಬದುಕಿರುವಾಗಲೇ ಕರುಳ ಕುಡಿಗಳನ್ನು ಕಿತ್ತುಕೊಳ್ಳುವುದು. ಆದರೆ ಸಾವೆಂಬುದು ಎದುರಿಗೆ ನಿಂತಿದೆ ಎಂದು ಗೊತ್ತಿದ್ದರೂ ಅದನ್ನು ಲೆಕ್ಕಿಸದೇ ಮಕ್ಕಳನ್ನು ದೇಶ ರಕ್ಷಣೆಗೆ ಕಳುಹಿಸುವ ಲಕ್ಷಾಂತರ ತಂದೆ-ತಾಯಂದಿರ ನಿಸ್ವಾರ್ಥತೆಗೆ, ದೇಶಪ್ರೇಮಕ್ಕೆ ಯಾವ ರೀತಿ ಕೃತಜ್ಞತೆ ಹೇಳುವುದು?! ಒಂದು ಕಾಶ್ಮೀರವನ್ನು ಉಳಿಸಿಕೊಳ್ಳುವುದಕ್ಕಾಗಿ ಅಂದು 527 ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363 ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ಯ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಳು, ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು. ಏಕೆ ಇದನ್ನೆಲ್ಲಾ ನೆನಪಿಸಿಕೊಳ್ಳಬೇಕಾಗಿದೆಯೆಂದರೆ ಈಗ ಕಾಶ್ಮೀರ ಮತ್ತೆ ಹೊತ್ತಿ ಉರಿಯುತ್ತಿದೆ. ಅದನ್ನೆಲ್ಲಾ ನೋಡಿ… ನೋಡಿ, ಆ ಒಂದು ಭಾಗವನ್ನು ಉಳಿಸಿಕೊಳ್ಳುವುದಕ್ಕೆ ಇಷ್ಟೆಲ್ಲಾ ಕಷ್ಟಪಡಬೇಕಾ, ಇನ್ನೆಷ್ಟು ವರ್ಷ ಹೋರಾಡಬೇಕು, ಪಾಕಿಸ್ತಾನಕ್ಕೆ ಬಿಟ್ಟುಕೊಡುವುದೇ ಒಳಿತು ಎಂಬ ಸಿನಿಕತನ ಮನದೊಳಗೆ ಸುಳಿಯುವ ಅಪಾಯವಿದೆ. ಹಾಗೇನಾದರೂ ಆದರೆ ಇವರೆಲ್ಲರ ಬಲಿದಾನಕ್ಕೆ ಬೆಲೆಯೇನು?

ಜುಲೈ 26-ಕಾರ್ಗಿಲ್ ವಿಜಯ ದಿನ. ಇಡೀ ಭಾರತವನ್ನೇ ಭಾವನಾತ್ಮಕವಾಗಿ ಒಂದು ಮಾಡಿದ ಆ ಕದನ ನಡೆದು ಹತ್ತು ವರ್ಷ ಕಳೆದು ಹನ್ನೊಂದನೇ ವಾರ್ಷಿಕ ವಿಜಯ ದಿನ ಆಗಮಿಸಿದೆ.

Lest We Forget…..

ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?
Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದ, ಮತಾಂತರ ಮಾಡಲು ಯತ್ನಿಸಿದ ಒಂದು ನಿದರ್ಶನ ತೋರಿಸಿ?

ಹಾಗಿರುವಾಗ ಈ “ಹಿಂದೂ ಟೆರರ್”, “ಹಿಂದೂ ಟೆರರಿಸಂ” ಹಾಗೂ “ಸ್ಯಾಫ್ರನ್ ಟೆರರಿಸಂ” ಎಂಬ ಪದಪ್ರಯೋಗಗಳು ಎಲ್ಲಿಂದ ಹುಟ್ಟಿಕೊಂಡವು?

1. 2006, ಸೆಪ್ಟೆಂಬರ್ 8ರಂದು ಮಾಲೆಗಾಂವ್‌ನಲ್ಲಿ (ಮೊದಲ) ಸ್ಫೋಟ: 37 ಜನರ ಹತ್ಯೆ. ತನಿಖೆ: ಹಿಂದೂ ಭಯೋತ್ಪಾದಕರ ಮೇಲೆ ಶಂಕೆ. 2. 2007, ಫೆಬ್ರವರಿ 18ರಂದು ಸಮ್‌ಜೋತಾ ಎಕ್ಸ್‌ಪ್ರೆಸ್ ಸ್ಫೋಟ: 68 ಪಾಕಿಸ್ತಾನಿಯರ ದುರ್ಮರಣ. ತನಿಖೆ: ಆರೆಸ್ಸೆಸ್ ಪ್ರಚಾರಕರಾದ ಸಂದೀಪ್ ಡಾಂಗೆ ಹಾಗೂ ರಾಮ್‌ಜಿಗಾಗಿ ಪೊಲೀಸರ ತಲಾಷ್. 3. 2007, ಮೇ 18ರಂದು ಮೆಕ್ಕಾ ಮಸೀದಿ ಸ್ಫೋಟ: 14 ಸಾವು. ತನಿಖೆ: ಸಂದೀಪ್ ಡಾಂಗೆ ಹಾಗೂ ರಾಮಚಂದ್ರ ಕಲಸಂಗ್ರ ಅವರನ್ನು ಹುಡುಕಿ ಕೊಟ್ಟವರಿಗೆ 10 ಲಕ್ಷ ಇನಾಮು ನೀಡುವುದಾಗಿ ಸಿಬಿಐನಿಂದ ಘೋಷಣೆ. 4. 2008, ಸೆಪ್ಟೆಂಬರ್ 29. ಮಾಲೆಗಾಂವ್ ಬಾಂಬ್ (ಎರಡನೆ) ಸ್ಫೋಟ: 7 ಸಾವು. ತನಿಖೆ: ಸಾಧ್ವಿ ಪ್ರe ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಹಾಗೂ ಸ್ವಾಮಿ ಅಮೃತಾನಂದ ದೇವ್ ತೀರ್ಥ (ದಯಾನಂದ ಪಾಂಡೆ) ಬಂಧನ.

ಇವುಗಳ ಜತೆಗೆ ಇಬ್ಬರನ್ನು ಬಲಿತೆಗೆದುಕೊಂಡ ಗೋವಾ ಬ್ಲಾಸ್ಟ್, ಮೂವರನ್ನು ಆಹುತಿ ತೆಗೆದುಕೊಂಡ ಅಜ್ಮೀರ್ ಷರೀಫ್ ಸ್ಫೋಟ, ಥಾಣೆ ಸಿನೆಮಾ ಹಾಲ್ ಸ್ಫೋಟ ಪ್ರಕರಣಗಳನ್ನು ಪ್ರಮುಖ ವಾಗಿಟ್ಟುಕೊಂಡಿರುವ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ‘ಔಟ್‌ಲುಕ್’ ತನ್ನ ಜುಲೈ 19ರ ಸಂಚಿಕೆಯಲ್ಲಿ, “Hindu Terror: Conspiracy of Silence” ಎಂಬ ಹೆಡ್‌ಲೈನ್‌ನಡಿ 2006ರಿಂದೀಚೆಗೆ ನಡೆದ 7 ಬಾಂಬ್ ಸ್ಫೋಟಗಳ ಹಿಂದೆ ‘ಹಿಂದೂ ಕೈವಾಡವಿದೆ ಎಂದು ಬರೆದಿದೆ. ಇಷ್ಟಾಗಿಯೂ ಹಿಂದೂ ಭಯೋತ್ಪಾದನೆಯ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಭಾರತೀಯರು ತಯಾರಿಲ್ಲ ಎಂಬುದು ಅದರ ಕೊರಗು. “ನಮ್ಮ ನಡುವೆಯೇ ಇರುವ ಬಾಂಬರ್” ಎಂಬ ಶೀರ್ಷಿಕೆಯಡಿ, ತಮ್ಮ ನಡುವೆಯೇ ತಲೆಯೆತ್ತುತ್ತಿರುವ ಭಯೋತ್ಪಾದನೆ ಬಗ್ಗೆ ಬಹುಸಂಖ್ಯಾತ ಹಿಂದೂಗಳು ಕುರುಡು ದೃಷ್ಟಿ ತೋರಿಸುತ್ತಿದ್ದಾರೆ ಎಂದು ‘ಔಟ್‌ಲುಕ್’ ಕಣ್ಣೀರು ಸುರಿಸಿದೆ. ಅದರಲ್ಲೂ “ಬಿಜೆಪಿ ಸಂಸದರು ಹಾಗೂ ಭಯೋತ್ಪಾದಕರು ಒಂದೇ ‘ಮೂಲ’ದಿಂದ ಬಂದವರಾಗಿದ್ದಾರೆ. ಅದು ನಮಗೆ ತೀರಾ ಆತಂಕ ಹುಟ್ಟಿಸುವಂತಾಗಿದೆ” ಎಂಬುದು ಜ್ಯೋತಿರ್ಮಯಿ ಶರ್ಮಾ ಎಂಬ ಲೇಖಕನೊಬ್ಬನ ಅಂಬೋಣ. ಈ ಮಧ್ಯೆ, ಔಟ್‌ಲುಕ್‌ನ ಮುಖಪುಟ ಲೇಖನವನ್ನೇ ಆಧಾರವಾಗಿಟ್ಟುಕೊಂಡು, “ದೇಶದ ಕೆಲವು ಭಾಗಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಹಿಂದೆ ವಿಎಚ್‌ಪಿ-ಆರೆಸ್ಸೆಸ್‌ಗಳ ಕೈವಾಡವಿದೆ. ದುರದೃಷ್ಟವಶಾತ್, ಅವರೇ ನಮ್ಮ ರಾಜ್ಯದ ಪೋಷಕರಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಣಿಮುತ್ತು ಉದುರಿಸಿದ್ದಾರೆ. ‘ಹೆಡ್‌ಲೈನ್ಸ್ ಟುಡೆ’ ಎಂಬ ಯಾರೂ ವೀಕ್ಷಿಸದ ಮತ್ತೊಂದು ಚಾನೆಲ್ ಕೂಡ ಹಿಂದೂ ಭಯೋತ್ಪಾದನೆಯ ಬಗ್ಗೆ ಬಡಬಡಾಯಿಸಿದೆ.

Gosh…

ಇದ್ಯಾವಾಗ ಹುಟ್ಟಿಕೊಂಡಿತು ಈ ಹಿಂದೂ ಭಯೋತ್ಪಾದನೆ? ನಾವು ಕಾಣುತ್ತಿರುವುದು ನಿಜವಾಗಿಯೂ ‘ಹಿಂದೂ ಭಯೋತ್ಪಾದನೆ’ ಯನ್ನಾ? ಈ ಮೇಲಿನ ಬಾಂಬ್‌ಸ್ಫೋಟಗಳಲ್ಲಿ ಕೆಲವು ಹಿಂದೂ ಸಂಘಟನೆಗಳ ಕೈವಾಡವಿದೆ ಎಂದಾದರೂ ಅದು ಯಾವ ರೀತಿ ‘ಹಿಂದೂ ಟೆರರಿಸಂ’ ಆಗುತ್ತದೆ? To every action there is always an equal and opposite reaction ಎಂದು ಐಸಾಕ್ ನ್ಯೂಟನ್ 17ನೇ ಶತಮಾನದಲ್ಲಿಯೇ ಹೇಳಿದ್ದ. ಅದನ್ನು ೨೦೦೬ರಿಂದೀಚೆಗೆ ನಡೆದ ಕೆಲವು ಬಾಂಬ್ ಸ್ಫೋಟಗಳ ವಿಚಾರದಲ್ಲೂ ಏಕೆ ಅನ್ವಯಿಸಬಾರದು? 1985ರ ನಂತರ 7 ಲಕ್ಷ ಹಿಂದೂಗಳನ್ನು ಕಾಶ್ಮೀರ ಕಣಿವೆಯಿಂದ ಹೊರದಬ್ಬಿದವರಾರು? 2005, ಅಕ್ಟೋಬರ್ 29ರಂದು ಅಂದರೆ ದೀಪಾವಳಿಗೆ 2 ದಿನ ಮುನ್ನ ರಾಜಧಾನಿ ದಿಲ್ಲಿಯ ಮಾರುಕಟ್ಟೆಗಳಲ್ಲಿ ಬಾಂಬಿಟ್ಟು 62 ಹಿಂದೂಗಳನ್ನು ಕೊಂದು ಬೆಳಕಿನ ಹಬ್ಬಕ್ಕೆ ಕತ್ತಲು ಕವಿಸಿದ್ದು ಯಾರು? ಅಕ್ಷರಧಾಮಕ್ಕೆ ಲಗ್ಗೆ ಇಟ್ಟವರಾರು? ಮುಂಬೈನಲ್ಲಿ ಮಾರಣಹೋಮ ಮಾಡಿದ್ದು, ಸಂಸತ್ ಮೇಲೆ ದಾಳಿ ಮಾಡಿದ್ದು, ಹನುಮಾನ್ ಜಯಂತಿ ಮೆರವಣಿಗೆ ಮೇಲೆ ಕಲ್ಲು ಹೊಡೆದು ಕೋಮುದಳ್ಳುರಿ ಆರಂಭಿಸಿದ್ದು, ಇಂಡಿಯಾ ಗೇಟ್ ಎದುರು ಬಾಂಬಿಟ್ಟು 55 ಜನರನ್ನು ಕೊಂದಿದ್ದು, ಪುಣೆಯ ಜರ್ಮನ್ ಬೇಕರಿಯನ್ನು ಸ್ಫೋಟಿಸಿದ್ದು ಯಾವ ಧರ್ಮೀಯರು? ಇಂತಹ ಘಟನೆಗಳು ನಡೆದಾಗ ಬಹುಸಂಖ್ಯಾತ ಹಿಂದೂಗಳ ಮನಸ್ಸಿನಲ್ಲಿ ಯಾವ ಭಾವನೆ ಮೂಡೀತು? ನಮಗೇನಂತೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕೆ? ಒಂದಿಷ್ಟು ನೊಂದ ಜನರಲ್ಲಿ ರೋಷ ಜಾಗೃತವಾಗಿ ಪ್ರತೀಕಾರದ ಕೃತ್ಯಗಳನ್ನೆಸಗಿರಬಹುದು. ಅದು ಸರಿಯೋ, ತಪ್ಪೋ ಬೇರೇ ಮಾತು. ಆದರೆ ನ್ಯೂಟನ್‌ನ action-reaction ಸೂತ್ರವನ್ನು ಇದಕ್ಕೂ ಏಕೆ ಅನ್ವಯಿಸಬಾರದು? ಈ ಹಿನ್ನೆಲೆಯಲ್ಲಿ ಕೆಲವು ಸ್ಫೋಟಗಳನ್ನು ‘ಹಿಂದೂ ರಿಯಾಕ್ಷನ್’ ಎನ್ನಿ, ‘ಹಿಂದೂ ರಿವೇಂಜ್-ರಿಟಾಲಿಯೇಶನ್’ ಎಂದರೂ ಪರವಾಗಿಲ್ಲ, ‘ಹಿಂದೂ ಆಂಗರ್’ ಎಂದರೂ ತಪ್ಪಿಲ್ಲ. ಆದರೆ ಅದು ಹಿಂದೂ ಟೆರರ್ ಹೇಗಾದೀತು? ಇಷ್ಟು ವರ್ಷಗಳ ಕಾಲ ಇಲ್ಲದ ಹಿಂದೂ ಟೆರರಿಸಂ ಈಗ ಎಲ್ಲಿಂದ ಬಂತು? ಏಕಾಗಿ ಹುಟ್ಟಿಕೊಂಡಿತು? ನಕ್ಸಲರ ಮೇಲೆ ಸಿಆರ್‌ಪಿಎಫ್ ಅಥವಾ ಸೇನೆಯನ್ನು ಛೂ ಬಿಡುವ ಮೊದಲು, ಕೂಂಬಿಂಗ್ ಆರಂಭಿಸುವ ಮುಂಚೆ ನಕ್ಸಲಿಸಂಗೆ ಕಾರಣವಾಗಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಯನ್ನು ಪರಿಹರಿಸಿ ಎಂದು ಬೊಬ್ಬೆ ಹಾಕುತ್ತಾರಲ್ಲಾ, ಹಿಂದೂ ಟೆರರಿಸಂ ಎಂದು ಬೊಬ್ಬಿಡುವ ಮೊದಲು ಅಂಥದ್ದೊಂದು ಅಪಾಯ ಎದುರಾಗಿದೆ ಎನ್ನುವುದಾದರೆ ಅದರ ಹಿಂದಿರುವ ಕಾರಣದ ಬಗ್ಗೆಯೂ ಏಕೆ ಗಮನಹರಿಸಬಾರದು? ಹಿಂದೂ ಭಯೋತ್ಪಾದನೆಯ ಹುಟ್ಟಿಗೆ ಕಾರಣವಾಗಿರುವ ಮುಸ್ಲಿಂ ಮೂಲಭೂತವಾದವನ್ನು ಮೊದಲು ಮಟ್ಟಹಾಕಬಾರದೇಕೆ? ಧರ್ಮವನ್ನು ಮುಂದಿಟ್ಟುಕೊಂಡು 1947ರಲ್ಲಿ  ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡ ಮೇಲೂ, ಕಾಶ್ಮೀರದ ವಿಷಯವನ್ನಿಟ್ಟುಕೊಂಡು ಈ ದೇಶದಲ್ಲಿ ಭಯೋತ್ಪಾದನೆಯನ್ನು ಆರಂಭಿಸಿದವರಾರು?  ಈ ಮೇಲಿನ ಘಟನೆಗಳಲ್ಲಿ ಕೆಲವು ಹಿಂದೂ ಸಂಘಟನೆಗಳ ಕೈವಾಡವಿದೆಯೆಂಬ ಶಂಕೆ ಇದೆಯೇ ಹೊರತು, ಸಾಬೀತಾಗಿದೆಯೇ? ಹಾಗಿದ್ದರೂ ಯಾವ ಆಧಾರದ ಮೇಲೆ ಅದನ್ನು ಹಿಂದೂ ಭಯೋತ್ಪಾದನೆ ಎಂದು ಕರೆಯುತ್ತಿದ್ದಾರೆ? ಆರುಷಿಯನ್ನು ಕೊಲ್ಲಿಸಿದ್ದು ಆಕೆಯ ಅಪ್ಪನೇ ಎಂದು ಇಂಗ್ಲಿಷ್ ಮಾಧ್ಯಮಗಳು ಸಾರಿದ್ದವು. ಆದರೆ ಸಿಬಿಐ ತನಿಖೆ ಮಾಡಿದರೂ ಅದನ್ನು ಸಾಬೀತುಪಡಿಸಲಾಯಿತೆ? ಅಂದು ಕಂಚಿಶ್ರೀಗಳನ್ನು ಕಟಕಟೆಗೆ ತಂದುನಿಲ್ಲಿಸಿದರಲ್ಲಾ, ಇದುವರೆಗೂ ಒಂದಾದರೂ ಆರೋಪವನ್ನು ಸಾಬೀತುಪಡಿಸಲಾಗಿದೆಯೆ? 2000ನೇ ಸಾಲಿನಲ್ಲಿ  ದಕ್ಷಿಣ ಹಾಗೂ ಮಧ್ಯ ಭಾರತದಲ್ಲಿ ಹಲವಾರು ಚರ್ಚ್‌ಗಳ ಮೇಲೆ ದಾಳಿಯಾದಾಗಲೂ ಹಿಂದೂ ಸಂಘಟನೆಗಳ ಮೇಲೆ ದೋಷಾರೋಪ ಹೊರಿಸಿದ್ದರು. ಕೊನೆಗೆ ಸಿಕ್ಕಿಬಿದ್ದಿದ್ದು ಯಾರು? ಮುಸ್ಲಿಮರ ದೀನ್‌ದಾರ್ ಸಂಘಟನೆಯಲ್ಲವೆ?

ಏಕೆ ಸತ್ಯ ಸಾಬೀತಾಗುವ ಮೊದಲೇ ಮಾಧ್ಯಮಗಳು ತೀರ್ಪು ನೀಡುತ್ತವೆ?

Would Jehadis target Muslim devout at a dargah? (ಜಿಹಾದಿಗಳು ಸ್ವಧರ್ಮೀಯರ ಮೇಲೆಯೇ ದಾಳಿ ಮಾಡುತ್ತಾರೆಯೇ?) ಎಂಬ ಘನವೆತ್ತ ಪ್ರಶ್ನೆ ಕೇಳುತ್ತಿರುವವರು ನಮ್ಮ ಪ್ರಶ್ನೆಗೂ ಉತ್ತರಿಸಲಿ…. ಅಜ್ಮೀರ್ ದರ್ಗಾಕ್ಕೆ ಬಾಂಬಿಟ್ಟವರು ‘ಅಭಿನವ ಭಾರತ’ದ ಕಾರ್ಯಕರ್ತರು ಎನ್ನುವುದಾದರೆ ಕರಾಚಿ, ಬಲೂಚಿಸ್ತಾನದ ಬೀದಿ, ಮಸೀದಿಗಳಲ್ಲಿ ಬಾಂಬಿಡುತ್ತಿರುವವರು ಯಾರು? ಏಳನೇ ಶತಮಾನದಿಂದ ಇದುವರೆಗೂ ನಡೆದುಕೊಂಡು ಬರುತ್ತಿರುವ ಶಿಯಾ-ಸುನ್ನಿಗಳ ಬಡಿದಾಟಕ್ಕೆ ಯಾರು ಕಾರಣ? ಇರಾನ್-ಇರಾಕ್‌ಗಳ ನಡುವೆ ನಡೆದ ಒಂಬತ್ತು ವರ್ಷಗಳ ಕದನಕ್ಕೆ ರಣ ಕಹಣೆ ಊದಿದವರು, ಮುಸ್ಲಿಂ ರಾಷ್ಟ್ರವಾದ ಕುವೈತ್ ಮೇಲೆ ಮತ್ತೊಂದು ಮುಸ್ಲಿಂ ರಾಷ್ಟ್ರವಾದ ಇರಾಕ್ ಆಕ್ರಮಣ ಮಾಡುವಂತೆ ಮಾಡಿದವರು ಆರೆಸ್ಸೆಸ್ಸಿಗರೇನು? ಬಲೂಚಿಸ್ತಾನ, ವಜೀರಿಸ್ತಾನಗಳಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟಗಳ ಹಿಂದೆಯೂ ಆರೆಸ್ಸೆಸ್ ಪ್ರಚಾರಕರ ಕೈವಾಡವಿದೆಯೇ? ಬೇನಝೀರ್ ಭುಟ್ಟೋರನ್ನು ಕೊಂದಿದ್ದು ಯಾವ ಹಿಂದೂ ಭಯೋತ್ಪಾದಕ? ಪಾಕಿಸ್ತಾನವನ್ನು ದಟ್ಟದಾರಿದ್ರ್ಯ ರಾಷ್ಟ್ರಗಳ ಸಾಲಿಗೆ ಸೇರಿಸಿದ್ದು ಅಭಿನವ ಭಾರತದ ಕಾರ್ಯಕರ್ತರಾ?

ಅದಿರಲಿ, ಈ ಜಗತ್ತಿನಲ್ಲಿ ಮುಸ್ಲಿಂ ಮೂಲಭೂತವಾದದ ಬಗ್ಗೆ ಭಯಭೀತರಾಗಿರುವುದು, ತೀವ್ರವಾಗಿ ಪ್ರತಿಕ್ರಿಯಿಸುತ್ತಿರುವುದು ಭಾರತೀಯ ಹಿಂದೂಗಳು ಮಾತ್ರವೇನು?

ಇತ್ತೀಚೆಗೆ ಫ್ರಾನ್ಸ್, ಸ್ಪೇನ್, ಬ್ರಿಟನ್, ಜರ್ಮನಿ ಹಾಗೂ ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆ ಏನು ಹೇಳುತ್ತದೆ ಗೊತ್ತೆ? ಸರಿಸುಮಾರು 82 ಪರ್ಸೆಂಟ್ ಫ್ರಾನ್ಸ್ ಜನರು ಬುರ್ಖಾವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯದಲ್ಲಿ ಫ್ರಾನ್ಸ್‌ನ ನಂತರದ ಸ್ಥಾನದಲ್ಲಿರುವ ಜರ್ಮನಿಯ ಶೇ 71ರಷ್ಟು ಜನರು ಬುರ್ಖಾಕ್ಕೆ ನೋ ಎಂದಿದ್ದಾರೆ. ಬ್ರಿಟನ್‌ನ ಶೇ. 62ರಷ್ಟು ಹಾಗೂ ಸ್ಪೇನ್‌ನ ಶೇ. 59ರಷ್ಟು ಜನರು ಬುರ್ಖಾ ಮೇಲೆ ಬ್ಯಾನ್ ಹಾಕಬೇಕೆಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ಡೆನ್ಮಾರ್ಕ್ ದೇಶ ಮುಸ್ಲಿಮರನ್ನೇ ದೃಷ್ಟಿಯಲ್ಲಿಟ್ಟುಕೊಂಡು, ವಲಸೆ ಬರುವವರ ಮದುವೆ ವಯಸ್ಸನ್ನು 24ಕ್ಕೆ ನಿಗದಿ ಪಡಿಸಿದೆ.  ಹಾಲೆಂಡ್ ತನ್ನ ನೆಲಕ್ಕೆ ವಲಸೆ ಬರುವವರಿಗಾಗಿ ಭಾಷೆ ಹಾಗೂ ಸಾಂಸ್ಕೃತಿಕ ಪರೀಕ್ಷೆಯನ್ನಿಟ್ಟಿದೆ.  ಮಿನಾರ್‌ಗಳ (ಮುಸ್ಲಿಮರು ನಿರ್ಮಿಸುವ ಗೋಪುರ) ನಿರ್ಮಾಣದ ಮೇಲೆ ಸ್ವಿಜರ್‌ಲ್ಯಾಂಡ್ ನಿಷೇಧ ಹಾಕಿದೆ. ಬುರ್ಖಾ ನಿಷೇಧಿಸಿ ಬೆಲ್ಜಿಯಂ ಸಂಸತ್ ವಿಧೇಯಕ ಪಾಸು ಮಾಡಿದೆ. ಪೋಲೆಂಡ್ ಮತ್ತು ಆಸ್ಟ್ರಿಯಾದಲ್ಲಿ “Down with Jehad” ಎಂಬ ಭಿತ್ತಿಪತ್ರಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆದಿದೆ. ಏಕೆ?

Islamophobia!

ಅದನ್ನು “Christian Terror” ಎನ್ನುತ್ತೀರಾ? ಇವತ್ತು ಬರೀ ಹಿಂದೂಗಳಷ್ಟೇ ಮುಸ್ಲಿಂ ಕಟ್ಟರ್‌ಪಂಥೀಯವಾದದ ಬಗ್ಗೆ ರೊಚ್ಚಿಗೇಳುತ್ತಿದ್ದರೆ ಖಂಡಿತ ಹಿಂದೂಗಳನ್ನು ದೂಷಿಸಬಹುದಿತ್ತು. ಆದರೆ ಆಧುನಿಕತೆಯ ಹರಿಕಾರರಾದ, ಪ್ರಜಾತಂತ್ರ ವ್ಯವಸ್ಥೆಯ ಪ್ರತಿಪಾದಕರಾದ, ಮಾನವ ಹಕ್ಕು ಸಂಸ್ಥೆಗಳ ಸ್ಥಾಪಕರಾದ, ಜಾತ್ಯ ತೀತತೆಯ ಬಗ್ಗೆ ಭಾಷಣ ಕೊಡುವ ಯುರೋಪಿನ ಕ್ರೈಸ್ತ ರಾಷ್ಟ್ರಗಳು ಮಾಡುತ್ತಿರುವುದೇನು? ಅಫ್ಫಾನಿಸ್ತಾನವನ್ನು ಮಟ್ಟಹಾಕಿದ, ಇರಾಕ್ ಮೇಲೆ ಆಕ್ರಮಣ ಮಾಡಿದ ಜಾರ್ಜ್ ಬುಷ್ ಅವರನ್ನು ಜಾತ್ಯತೀತವಾದಿಗಳಾದ ಅಮೆರಿಕನ್ನರು 2004ರಲ್ಲಿ ಏಕೆ ಮರು ಆಯ್ಕೆ ಮಾಡಿದರು? ಭಯೋತ್ಪಾದಕ ದಾಳಿಯ ಭಯದಿಂದಲೇ ಅಲ್ಲವೆ? ಇವತ್ತು ಯುರೋಪಿನ ಬಹುತೇಕ ರಾಷ್ಟ್ರಗಳು ಏಕೆ ಬುರ್ಖಾವನ್ನು ಬ್ಯಾನ್ ಮಾಡಲು ಮುಂದಾಗುತ್ತಿವೆ? ಅಲ್ಲಿನ ಜನರು ಬುರ್ಖಾ ಮೇಲೆ ನಿಷೇಧ ಹೇರಬೇಕೆಂದು ಸಮೀಕ್ಷೆಗಳ ಮೂಲಕ ಏಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ? ಅವರ ಭಯವಿರುವುದು ಬುರ್ಖಾ ಮೇಲಲ್ಲ, ಒಟ್ಟಾರೆ ಮುಸ್ಲಿಂ ಮೂಲಭೂತವಾದ ಹಾಗೂ ಯುರೋಪ್‌ನಲ್ಲಿ ಹೆಚ್ಚಾಗುತ್ತಿರುವ ಮುಸ್ಲಿಮರ ಜನಸಂಖ್ಯೆ ಬಗ್ಗೆ… ಹತ್ತು ಪರ್ಸೆಂಟ್ ಅಥವಾ ಹದಿನೈದು-ಇಪ್ಪತ್ತು ಲಕ್ಷ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳೇ ಇಷ್ಟು ಭಯಭೀತವಾಗಿರಬೇಕಾದರೆ ಸರಿಸುಮಾರು 20 ಕೋಟಿ ಮುಸ್ಲಿಮರನ್ನು ಹೊಂದಿರುವ ಭಾರತ, ‘ಜನೋತ್ಪಾದನೆ’ಯಲ್ಲಿ ತೊಡಗಿರುವವರ ಬಗ್ಗೆ ಎಷ್ಟು ಭೀತಿಗೊಳಗಾಗಬೇಕು?

ಇಷ್ಟಾಗಿಯೂ ಭಾರತ ಹೇಗೆ ನಡೆದುಕೊಂಡು ಬಂದಿದೆ?

1947ರಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ನಮಗೆ ಎಲ್ಲ ಕಾರಣಗಳೂ ಇದ್ದವು. ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ತಾನವನ್ನು ನೀಡಿಯೂ ಆಗಿತ್ತು. ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದ್ದರೆ ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಸಯ್ಯದ್ ಮೊಹಮದ್ ಸಾದುಲ್ಲಾ ಹೊರತುಪಡಿಸಿ ಸಂವಿಧಾನದ ಡ್ರಾಫ್ಟಿಂಗ್ ಕಮಿಟಿಯಲ್ಲಿ ಇದ್ದ ಅಷ್ಟೂ ಸದಸ್ಯರು ಹಿಂದೂಗಳಾಗಿದ್ದರು. ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ 1941ರಲ್ಲಿಯೇ “ಥಾಟ್ಸ್ ಆನ್ ಪಾಕಿಸ್ತಾನ್’ ಎಂಬ ಪುಸ್ತಕ ಬರೆದು ಏಕೆ ಹಿಂದೂ-ಮುಸ್ಲಿಮರು ಒಂದೇ ಸೂರಿನಡಿ ಇರಲು ಸಾಧ್ಯವಿಲ್ಲ, ಮುಸ್ಲಿಮರ ಸಹೋದರತ್ವ ಯೂನಿವರ್ಸಲ್ ಬ್ರದರ್‌ಹುಡ್ ಅಲ್ಲ, ಇಸ್ಲಾಮಿಕ್ ಬ್ರದರ್‌ಹುಡ್. ಹಾಗಾಗಿ ಭಾರತ ವಿಭಜನೆಯಾಗುವುದೇ ಒಳಿತು. ಇಬ್ಭಾಗವಾದ ನಂತರ ಇಲ್ಲಿಯ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿರುವ ಹಿಂದೂಗಳು ಭಾರತಕ್ಕೆ ಎಕ್ಸ್‌ಚೇಂಜ್ ಮಾಡಿಕೊಳ್ಳಬೇಕು ಎಂದು ವಾದಿಸಿದ್ದ ವ್ಯಕ್ತಿ. ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿಕೊಳ್ಳಲು ನಮಗೆ ಯಾವ ಅಡ್ಡಿ-ಅಡಚಣೆಗಳೂ ಇರಲಿಲ್ಲ. ಆದರೂ ನಾವೇಕೆ ಈ ದೇಶವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಿಸಿಕೊಂಡೆವು? ಅದು ನಮ್ಮ ಧರ್ಮಸಹಿಷ್ಣುತೆಯನ್ನು ತೋರಿಸುತ್ತದೆ. ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಧರ್ಮವಾದ ಬುದ್ಧಿಸಂ ಹುಟ್ಟಿದ್ದೂ ಭಾರತದಲ್ಲಿ, ಜೈನಿಸಂ ಜನ್ಮತಳೆದಿದ್ದೂ ನಮ್ಮ ನೆಲದಲ್ಲೇ. ಜಗತ್ತಿನ ಯಾವ ದೇಶ, ಯಾವ ಧರ್ಮ, ಇತರ ಮತಗಳ ಉದಯಕ್ಕೆ ಅವಕಾಶ ಮಾಡಿಕೊಟ್ಟಿದೆ ಹೇಳಿ? ಮತಾನುಯಾಯಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ‘ನಂಬರ್ ಗೇಮ್’ನಲ್ಲಿ ನಾವೆಂದೂ ನಂಬಿಕೆ ಇಟ್ಟವರಲ್ಲ, ನಮ್ಮದೆಂದೂ ವಿಸ್ತರಣಾವಾದಿ(Expansionist) ರಾಷ್ಟ್ರವಾಗಿರಲಿಲ್ಲ. ಆದರೆ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಬಾಹುಳ್ಯ ಹೊಂದಿದ್ದು ತಾನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿಕೊಂಡ ಒಂದೇ ಒಂದು ದೇಶದ ಉದಾಹರಣೆ ಕೊಡಿ? ಇತರ ರಾಷ್ಟ್ರಗಳ ಮೇಲೆ ದಾಳಿ, ಆಕ್ರಮಣ ಮಾಡದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಜಗತ್ತಿನ ಎಲ್ಲ ಧರ್ಮಗಳಿಗೂ ಆಶ್ರಯ, ನೆಲೆ ನೀಡಿದ ಏಕಮಾತ್ರ ದೇಶ ಭರತ ಖಂಡ. ರೋಮನ್ನರಿಂದ ದೌರ್ಜನ್ಯಕ್ಕೊಳಗಾದ ಯಹೂದಿಗಳಿಗೂ ಆಶ್ರಯ ನೀಡಿದೆ, ಮುಸ್ಲಿಮರಿಂದ ತಾಯ್ನೆಲ ಕಳೆದುಕೊಂಡ ಇರಾನಿನ ಪಾರ್ಸಿಗಳಿಗೂ ನೆಲೆ ನೀಡಿದೆ. ಇವತ್ತಿಗೂ ಭಾರತ ಪರಧರ್ಮಸಹಿಷ್ಣು ಹಾಗೂ ಸೆಕ್ಯುಲರ್ ರಾಷ್ಟ್ರವಾಗಿದ್ದರೆ ಅದಕ್ಕೆ ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಮುಸ್ಲಿಮರು ಬಹುಸಂಖ್ಯಾತರಾದರೆ ಏನಾಗುತ್ತದೆ ಎಂಬುದಕ್ಕೆ ಕಾಶ್ಮೀರಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ, ಕ್ರೈಸ್ತರ ಸಂಖ್ಯೆ ಹೆಚ್ಚಾ ದರೆ ಯಾವ ಅಪಾಯ ಎದುರಾಗುತ್ತದೆ ಎಂಬುದಕ್ಕೆ ಈಶಾನ್ಯ ರಾಜ್ಯ ಗಳಿಗಿಂತ ಉತ್ತಮ ಉದಾಹರಣೆ ಬೇರಿಲ್ಲ.

ಈ ಹಿನ್ನೆಲೆಯಲ್ಲಿ ಧರ್ಮದ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಒಂದಿಷ್ಟು ಜನರು ರೊಚ್ಚಿಗೆದ್ದು ಉಗ್ರವಾಗಿ ಪ್ರತಿಕ್ರಿಯೆ ನೀಡಲು ಮುಂದಾದರೆ ಅದು ‘ಹಿಂದೂ ಟೆರರಿಸಂ’ ಆಗಿ ಬಿಡುತ್ತದೆಯೇ? ಹಿಂದೂ ಪ್ರತಿಕ್ರಿಯೆಯನ್ನು ಹಿಂದೂ ಭಯೋತ್ಪಾದನೆ ಎನ್ನುವುದಾದರೆ, ಕೇರಳದ ಉಪನ್ಯಾಸಕ  T.J. ಜೋಸೆಫ್ ಅವರ ಕೈ ಕತ್ತರಿಸಿದ ಬೆನ್ನಲ್ಲೇ ಮುಸ್ಲಿಮರ ಅಂಗಡಿ, ವಾಹನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ ಚರ್ಚ್‌ನ ಕ್ರಮವನ್ನು ‘ಕ್ರಿಶ್ಚಿಯನ್ ಟೆರರಿಸಂ’ ಎನ್ನುತ್ತೀರಾ? ಏಕೆ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ? ಯಾವ ಧರ್ಮೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕು?  ಹಿಂದೂಗಳ ಮೇಲೆ ಯಾರಾದರೂ ಕೈ ಎತ್ತಿದರೆ ಕೈ ಕಡಿಯುತ್ತೇನೆ ಎಂದು ವರುಣ್ ಗಾಂಧಿ ಬಾಯಲ್ಲಿ ಹೇಳಿದರು. ಆದರೆ T.J. ಜೋಸೆಫ್‌ರ ಕೈ ಕಡಿಯುವ ಮೂಲಕ ಮುಸ್ಲಿಂ ಮೂಲಭೂತ ವಾದಿಗಳು ಅದನ್ನು ಕೃತಿಯಲ್ಲಿ ತೋರಿದ್ದಾರೆ. ಈ ಎರಡೂ ಪ್ರಕರಣಗಳಿಗೆ ಸಿಕ್ಕ ಪ್ರಚಾರದಲ್ಲಿನ ವ್ಯತ್ಯಾಸವನ್ನು ನೋಡಿ? ಕೈ ಕಡಿಯುತ್ತೇನೆ ಎಂದಿದ್ದು ತಿಂಗಳಾನುಗಟ್ಟಲೆ ಸುದ್ದಿಯಾಯಿತು, ವರುಣ್ ಜೈಲಿಗೂ ಹೋಗಿ ಬಂದರು. ಆದರೆ ಕೇರಳದಲ್ಲಿ ಕ್ರೈಸ್ತ ಉಪನ್ಯಾಸಕನ ಕೈ ಕಡಿದವರಿಗೆ ಏನಾಯಿತು?! ನೀವೇ ಯೋಚನೆ ಮಾಡಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರೇನಾದರೂ ಜೋಸೆಫ್ ಅವರ ಕೈ ಕಡಿದಿದ್ದರೆ….? ರೋಮನ್ ಕ್ಯಾಥೋಲಿಕ್ ಚರ್ಚ್ ಪ್ರತಿಕ್ರಿಯೆ ನೀಡುತ್ತಿತ್ತು, ಒಬಾಮ ಹೇಳಿಕೆ ನೀಡುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಕಾರಾತ್ಮಕ ಪ್ರಚಾರ ಸಿಕ್ಕಿ, ಮುತಾಲಿಕ್‌ರನ್ನು ದೊಡ್ಡ ಕ್ರಿಮಿನಲ್ ಎಂಬಂತೆ ಬಿಂಬಿಸುತ್ತಿದ್ದರು. ಜೋಸೆಫ್ ಅವರ ಕೈ ಕಡಿದವರನ್ನು ಯಾವ ಮಾಧ್ಯಮ, ಸೆಕ್ಯುಲರ್‌ವಾದಿಗಳು ಎದ್ದು ನಿಂತು ಪ್ರತಿಭಟಿಸುತ್ತಿದ್ದಾರೆ? ಅದು ಕೇವಲ ಒಂದು ದಿನದ ಸುದ್ದಿಯಾಗಿ ಏಕೆ ಕಳೆದುಹೋಗುತ್ತದೆ?

ಮೋದಿ ‘ಎನ್‌ಕೌಂಟರ್’ಗೆ ಹೊರಟವರು ಈಗೇನು ಹೇಳುತ್ತಾರೆ?
ಗುಜರಾತ್ ಪೊಲೀಸರು ನಡೆಸಿದ ಮತ್ತೊಂದು ಎನ್‌ಕೌಂಟರ್ ಕೂಡ “ನಕಲಿ” ಎಂದು ಮಹಾನಗರ ಮ್ಯಾಜಿಸ್ಟ್ರೇಟ್ ವರದಿ ಸಾಬೀತು ಮಾಡಿದೆ. ಇನ್ನೂ ಎಷ್ಟು ಅಮಾನವೀಯರಾದಾರು ಇವರು?

No limits…

ಇಶ್ರತ್ ಜಹಾನ್ ಶಮೀಮ್ ರಾಝಾಳ ಹತ್ಯೆ ಒಂದು ನಕಲಿ ಎನ್‌ಕೌಂಟರ್ ಎಂದು ಮಹಾನಗರ ನ್ಯಾಯಾಧೀಶ ಎಸ್ಪಿ ತಮಾಂಗ್ ಅವರು 2009, ಸೆಪ್ಟೆಂಬರ್ 7ರಂದು 240 ಪುಟಗಳ ವರದಿಯನ್ನು ನೀಡಿದಾಗ ಇಂಗ್ಲಿಷ್ ಮಾಧ್ಯಮಗಳು ಈ ಮೇಲಿನಂತೆ ವರ್ಣಿಸಿದ್ದವು. ಕುಖ್ಯಾತ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ ಗುಜರಾತ್ ಪೊಲೀಸ್ ಅಧಿಕಾರಿ ಡಿ.ಜಿ. ವನ್ಝಾರಾ ನೇತೃತ್ವದ ತಂಡವೇ ಇಶ್ರತ್‌ಳನ್ನೂ ಹತ್ಯೆ ಮಾಡಿದ್ದು ಎಂಬ ಮಾತು ಕೇಳಿ ಬಂದ ನಂತರವಂತೂ ಮಾಜಿಸ್ಟ್ರೇಟ್ ವರದಿ ನೂರಕ್ಕೆ ನೂರರಷ್ಟು ಸತ್ಯ ಎಂದೇ ಎಲ್ಲರೂ ನಂಬುವಂತಾಗಿತ್ತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರಕಾರದಲ್ಲಿ ಮುಸ್ಲಿಮರಿಗೆ ಉಳಿಗಾಲವಿಲ್ಲ ಎಂದು ಬಿಂಬಿಸಲಾಗಿತ್ತು. ಇಷ್ಟು ದಿನ ಎಲ್ಲರೂ ಅದನ್ನೇ ನಂಬಿಕೊಂಡು ಬಂದಿದ್ದರು.

ಆದರೆ…..

ಆ ಘಟನೆ ಈಗ ಯಾವ ತಿರುವು ಪಡೆದುಕೊಂಡಿದೆ? ಅಮೆರಿಕದ ಜೈಲಿನಲ್ಲಿರುವ ಮುಂಬೈ ದಾಳಿಯ ರೂವಾರಿ ಡೆವಿಡ್ ಹೆಡ್ಲಿ ಏನು ಹೇಳಿದ್ದಾನೆ? ಆತನ ವಿಚಾರಣೆಗೆಂದು ಅಮೆರಿಕಕ್ಕೆ ತೆರಳಿದ್ದ ಅಧಿಕಾರಿಗಳ ಮುಂದೆ ಆತ ಬಾಯ್ಬಿಟ್ಟಿದ್ದೇನು? 2004, ಜೂನ್ 15ರಂದು ಹತ್ಯೆಯಾದ ಇಶ್ರತ್ ಜಹಾನ್ ನಿಜಕ್ಕೂ ಅಮಾಯಕಿಯೆ?

ಇಶ್ರತ್‌ಗೆ ಆಗ 19 ವರ್ಷ. ಮುಂಬಯಿನ ಹೊರವಲಯದಲ್ಲಿ ರುವ ಮುಂಬ್ರಾದ ಅಝ್ಮತ್ ಪಾರ್ಕ್ ನಿವಾಸಿ. ಆಂಟಿ ಮನೆಗೆ ಹೋಗುತ್ತೇನೆಂದು ಅಮ್ಮನಿಗೆ ಹೇಳಿ ಜೂನ್ 12 ರಂದು ಮನೆ ಬಿಟ್ಟಿದ್ದಾಳೆ. ಇತ್ತ ಗೋಪಿನಾಥ್ ಪಿಳ್ಳೈ ಎಂಬುವರ ಪುತ್ರ ಪ್ರಾಣೇಶ್ ಕುಮಾರ್ ಪಿಳ್ಳೈ ಕೇರಳದ ತಾಮರಕ್ಕುಲಂನವನು. ಸಾಜಿದಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಪ್ರಾಣೇಶ್, ಆಕೆಯನ್ನು ವಿವಾಹವಾಗುವ ಸಲುವಾಗಿ ಇಸ್ಲಾಂಗೆ ಮತಾಂತರ ಗೊಂಡು ಜಾವೆದ್ ಗುಲಾಂ ಮೊಹಮದ್ ಶೇಕ್ ಆಗಿದ್ದ. ಜಾವೆದ್‌ಗೆ ಎಲೆಕ್ಟ್ರಿಷಿಯನ್ ಆಗುವ ಹಂಬಲ. ತರಬೇತಿಗಾಗಿ 1988ರಲ್ಲಿ ಮಹಾರಾಷ್ಟ್ರದ ಪುಣೆಗೆ ಬಂದಿದ್ದ. ಆಗ ಇಶ್ರತ್‌ಳ ಅಪ್ಪನ ಪರಿಚಯವಾಯಿತು. 1992ರಲ್ಲಿ ಅವರ ಬಳಿಯೇ ಕೆಲಸಕ್ಕೆ ಸೇರಿದ. 1998ರಲ್ಲಿ ದುಬೈಗೆ ಹಾರಿದ ಜಾವೆದ್ ವಾಪಸ್ಸಾಗಿದ್ದು 2002ರಲ್ಲಿ. ಪ್ರಾಣೇಶ್ ಮತ್ತು ಜಾವೆದ್ ಎಂಬ ಎರಡೂ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಾಸ್‌ಪೋರ್ಟ್ ಹೊಂದಿದ್ದ ಆತ ಮುಂಬಯಿಗೆ ಮರಳಿದ್ದೇ ತಡ ಮೂರು ಹಲ್ಲೆ ಪ್ರಕರಣಗಳು ಹಾಗೂ ಮಾರಕಾಸ್ತ್ರ ಹೊಂದಿದ ಅಪರಾಧಕ್ಕಾಗಿ ಪೊಲೀಸರ ಅತಿಥ್ಯವನ್ನೂ ಸ್ವೀಕರಿಸಿದ.

ಇಂತಹ ಜಾವೆದ್ ಮತ್ತು ಆಂಟಿ ಮನೆಗೆಂದು ಹೇಳಿ ಕಾಲ್ತೆಗೆದ ಇಶ್ರತ್, ಜೂನ್ 12 ರಂದು ಅಹಮದಾಬಾದ್‌ಗೆ ಹೊರಟಿದ್ದಾರೆ. ಆ ದಿನ ರಾತ್ರಿ ಮಾಲೆಗಾಂವ್‌ನಲ್ಲಿ ತಂಗಿದ್ದು, ಜೂನ್ ೧೩ರಂದು ಅಹಮದಾಬಾದ್ ತಲುಪಿದ್ದಾರೆ. ಅಲ್ಲಿ ಅಮ್ಜದ್ ಅಲಿ ಆಲಿಯಾಸ್ ರಾಜ್‌ಕುಮಾರ್ ಅಕ್ಬರ್ ಅಲಿ ರಾಣಾ ಮತ್ತು ಜಿಸಾನ್ ಜೋಹರ್ ಅಬ್ದುಲ್ ಘನಿ ಜತೆಗೂಡಿದ್ದಾರೆ. ನಾಲ್ವರೂ ಸೇರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿವಾಸವನ್ನು ವೀಕ್ಷಿಸಿದ್ದಾರೆ. ಈ ನಡುವೆ ನೀಲಿ ಇಂಡಿಕಾ ಕಾರಿನಲ್ಲಿ ತೆರಳುತ್ತಿರುವ ನಾಲ್ವರು, ಸಂಶಯಾಸ್ಪದ ಭಯೋತ್ಪಾದಕರು ಎಂಬ ಮಾಹಿತಿ ಜೂನ್ ೧೪ರ ರಾತ್ರಿ ೧೧ ಗಂಟೆಗೆ ಗುಪ್ತಚರ ಏಜೆನ್ಸಿಗಳಿಂದ ಅಹಮದಾಬಾದ್ ಪೊಲೀಸ್‌ನ ಅಪರಾಧ ದಳಕ್ಕೆ ಬಂದು ಮುಟ್ಟಿದೆ. ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆಸುತ್ತಿದ್ದಾರೆಂಬ ಗುಮಾನಿ ಬಂದಿದೆ. ಈ ಸುದ್ದಿ ಮುಟ್ಟಿದ ಕೂಡಲೇ ಅಹಮದಾಬಾದ್ ಪೊಲೀಸರು 6 ತಂಡಗಳಲ್ಲಿ ನಗರದ ಎಲ್ಲ ಪ್ರವೇಶ ದ್ವಾರಗಳ ಮೇಲೂ ಹದ್ದಿನಗಣ್ಣು ಇಟ್ಟಿದ್ದಾರೆ. ಜೂನ್ 15 ರಂದು ಬೆಳಗಿನ ಜಾವ 4 ಗಂಟೆಗೆ ಮುಂಬೈನಿಂದ ನರೋಲಾ ಕಡೆಗೆ ತೆರಳುತ್ತಿರುವ ನೀಲಿ ಇಂಡಿಕಾ ಕಾರು ಎಸಿಪಿ ನರೇಂದ್ರ ಅಮೀನ್ ಕಣ್ಣಿಗೆ ಬಿದ್ದಿದೆ. ಸುಮಾರು 15 ಕಿ.ಮೀ. ದೂರ ಬೆನ್ನಟ್ಟಿದ ನಂತರ ಅಮೀನ್ ತಂಡದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ತಮ್ಮ ಎ.ಕೆ. -47 ರೈಫಲ್ ಮೂಲಕ ಕಾರಿನ ಟೈಯರ್‌ಗಳಿಗೆ ಗುಂಡು ಹಾರಿಸಿದ್ದಾರೆ. ಪಂಕ್ಚರ್ ಆಗಿ ಕಾರು ನಿಂತಿದೆ. ಆಗ ಬೆಳಗಿನ ಜಾವ 4 ಗಂಟೆ 30 ನಿಮಿಷ. ಕಾರಿನಿಂದ ಕೆಳಗಿಳಿದ ಒಬ್ಬ ವ್ಯಕ್ತಿ ತನ್ನ ಎ.ಕೆ.-56 ರೈಫಲ್ ತೆಗೆದು ಪೊಲೀಸರತ್ತ ಗುಂಡು ಹಾರಿಸಲು ಆರಂಭಿಸಿದ್ದಾನೆ. ಆ ವೇಳೆಗಾಗಲೇ ಎಸಿಪಿ ಪಿ. ಸಿಂಘಾಲ್ ನೇತೃತ್ವದ ತಂಡ ಇನ್ನೊಂದು ಬದಿಯಿಂದ ದಾಳಿ ಮಾಡಿದೆ. ಎಂಟು ನಿಮಿಷಗಳ ಗುಂಡಿನ ಚಕಮಕಿಯ ನಂತರ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ಜಾವೆದ್, ಅಮ್ಜದ್ ಅಲಿ, ಜಿಸಾನ್ ಜೋಹರ್ ಮತ್ತು ಇಶ್ರತ್ ಜಹಾನ್ ಹೆಣವಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಒಂದು ಎ.ಕೆ.-56 ರೈಫಲ್, ಒಂದು ಪಿಸ್ತೂಲು, ಸೆಟಲೈಟ್ ಫೋನ್ ಮತ್ತು ಡೈರಿಗಳು ಸಿಕ್ಕಿವೆ.

ಅಲ್ಲಿಗೆ ಪೊಲೀಸರ ಎನ್‌ಕೌಂಟರ್ ಏನೋ ಮುಗಿಯಿತು, ಆದರೆ ಮಾಧ್ಯಮಗಳ ಅನುಮಾನ ಆರಂಭವಾಯಿತು!

ಅದೇ ಸಮಯಕ್ಕೆ ಗುಜರಾತ್‌ನಲ್ಲಿ ಮೋದಿಯವರ ನಾಯ ಕತ್ವದ ವಿರುದ್ಧ ರಾಜ್ಯ ಬಿಜೆಪಿಯಲ್ಲಿ ಬಂಡಾಯವೆದ್ದಿತ್ತು. ಅದನ್ನು ದಿಕ್ಕುತಪ್ಪಿಸುವ ಸಲುವಾಗಿ ಮೋದಿ ಮಾಡಿದ ಹುನ್ನಾರವೇ ಅಮಾಯಕಿ ಇಶ್ರತ್ ಜಹಾನ್‌ಳ ಎನ್‌ಕೌಂಟರ್ ಎಂದು ಮಾಧ್ಯಮ ಗಳು ಶರಾ ಬರೆದವು. ನನ್ನ ಮಗ ಮುಸ್ಲಿಂ ಯುವತಿಯನ್ನು ವಿವಾಹವಾಗಿ, ಇಸ್ಲಾಂಗೆ ಮತಾಂತರಗೊಂಡ ಮಾತ್ರಕ್ಕೆ ಆತ ಭಯೋತ್ಪಾದಕನಾಗಲು ಸಾಧ್ಯವೆ? ಎಂದು ಗೋಪಿನಾಥ್ ಪಿಳ್ಳೈ ಪ್ರಶ್ನಿಸಿದರು. ಇತ್ತ ಖಾಲ್ಸಾ ಕಾಲೇಜಿನ ಉಪನ್ಯಾಸಕರು, ಸಹಪಾಠಿ ಗಳು ಇಶ್ರತ್  ಭಯೋತ್ಪಾದಕಳಾಗಿರಲು ಸಾಧ್ಯವೇ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು. ಒಂದು ವೇಳೆ ಇದೆಲ್ಲಾ ನಿಜವೇ ಆಗಿದ್ದಿದ್ದರೆ ಅರ್ಧರಾತ್ರಿಯಲ್ಲಿ ಆಕೆ ಜಾವೆದ್ ಜತೆ ತೆರಳಿದ್ದೇಕೆ? ಜಾವೆದ್‌ಗೂ ಆಕೆಗೂ ಏನು ಸಂಬಂಧ? ಆಂಟಿ ಮನೆಗೆ ಎಂದು ಅಮ್ಮನ ಬಳಿ, ಸ್ನೇಹಿತೆಯ ಮನೆಗೆ ಹೋಗುತ್ತಿದ್ದೇನೆ ಎಂದು ಸಹೋದರಿಗೆ ಸುಳ್ಳು ಹೇಳಿ ಅಹಮದಾಬಾದ್‌ಗೆ ಹೋಗಿದ್ದೇಕೆ? ಆಕೆ ಮನೆ ಬಿಟ್ಟಿದ್ದು ಜೂನ್ 12ರಂದು, ಎನ್‌ಕೌಂಟರ್ ಆಗಿದ್ದು ಜೂನ್ ೧೫ರಂದು. ಈ ನಡುವಿನ ಮೂರು ದಿನ ಆಕೆ ಎಲ್ಲಿದ್ದಳು? ಮೂರು ದಿನ ಕಳೆದರೂ ಮಗಳು ಮನೆಗೆ ಬರಲಿಲ್ಲ ಎಂದು ಗೊತ್ತಾದ ಕೂಡಲೇ ಏಕೆ ಪೊಲೀಸರಿಗೆ ದೂರು ನೀಡಲಿಲ್ಲ? ಎನ್‌ಕೌಂಟರ್‌ನಲ್ಲಿ ಬಲಿಯಾದ ನಾಲ್ವರು ಅಮಾಯಕರಾಗಿದ್ದರೆ ಎಕೆ-56 ರೈಫಲ್, ಪಿಸ್ತೂಲ್ ಎಲ್ಲಿಂದ ಬಂದವು?

ಆಕೆ ದೇಶವಿರೋಧಿ ಶಕ್ತಿಗಳ ಜತೆ ಭಾಗಿಯಾಗಿದ್ದಳು ಎಂಬುದಕ್ಕೆ ಇವಿಷ್ಟೇ ಕಾರಣಗಳು ಸಾಕಿದ್ದವು. ಜತೆಗೆ ಎನ್‌ಕೌಂಟರ್‌ನ ಬೆನ್ನಲ್ಲೇ ಆಕೆ ತಮ್ಮ ಸಂಘಟನೆಗೆ ಸೇರಿದವಳು ಎಂದು ಲಷ್ಕರೆ ತಯ್ಯೆಬಾ ಪ್ರತಿಪಾದಿಸಿತು. ಇಷ್ಟಾಗಿಯೂ ಆಕೆ ಮುಸ್ಲಿಮಳು, ಎನ್‌ಕೌಂಟರ್ ನಡೆದಿದ್ದು ನರೇಂದ್ರ ಮೋದಿಯವರ ಗುಜರಾತ್‌ನಲ್ಲಿ ಎಂಬ ಅಂಶಗಳು ಮಾತ್ರ ಅನುಮಾನದ ಸರಮಾಲೆಯನ್ನು ಉದ್ದ ಮಾಡುತ್ತಲೇ ಹೋದವು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಸಾಹಿತ್ಯ ರಚನೆಗಿಂತ ಅಲ್ಪಸಂಖ್ಯಾತರ ಪರ ಹೋರಾಟವನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿರುವ ಜಾವೆದ್ ಅಖ್ತರ್ ಹಾಗೂ ಅವರ ಪತ್ನಿ ಶಬಾನಾ ಆಜ್ಮಿಯವರು ಗುಜರಾತ್‌ನಲ್ಲಿ ನಡೆದಿರುವ ಎಲ್ಲ ಎನ್‌ಕೌಂಟರ್‌ಗಳೂ ನಕಲಿಯಾಗಿದ್ದು ಅವುಗಳ ಬಗ್ಗೆ ಕೂಲಂಕಷ ತನಿಖೆಯಾಗಬೇಕು ಎಂದು 2007ರಲ್ಲಿ ಸುಪ್ರೀಂಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು(PIL)ಹಾಕಿದರು. ಇಶ್ರತ್‌ಳ ಅಮ್ಮ ಶಮೀಮಾ ಶೇಕ್ ಕೂಡ, ‘ನನ್ನ ಮಗಳು ಅಮಾಯಕಿ, ಸರಕಾರ ಉತ್ತರ ಕೊಡಬೇಕು’ ಎಂದು ಪ್ರಶ್ನಿಸಲಾರಂಭಿಸಿದರು. ಅದೊಂದು ನಕಲಿ ಎನ್‌ಕೌಂಟರ್ ಎಂದು ಕೋರ್ಟ್ ಮುಂದೆ ಪ್ರತಿಪಾದಿಸಿದರು. ಇಂತಹ ವಾದಗಳನ್ನೆಲ್ಲ ಆಲಿಸಿದ ಗುಜರಾತ್ ಹೈಕೋರ್ಟ್, 2009, ಆಗಸ್ಟ್‌ನಲ್ಲಿ ಮೂವರು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತು. 2009, ಸೆಪ್ಟೆಂಬರ್ 7ರಂದು ವರದಿ ನೀಡಿದ ಜಿಲ್ಲಾ ಮಾಜಿಸ್ಟ್ರೇಟ್ ತಮಾಂಗ್, ಇಶ್ರತ್  ಅಮಾಯಕಿ ಎಂದುಬಿಟ್ಟರು. 2004, ಜೂನ್ 15ರಂದು ನಡೆದ ‘ನಕಲಿ’ ಎನ್‌ಕೌಂಟರ್‌ನಲ್ಲಿ ಜಾವೆದ್ ಗುಲಾಂ ಮೊಹಮದ್ ಶೇಕ್, ಅಮ್ಜದ್ ಅಲಿ ಹಾಗೂ ಜಿಹಾನ್ ಜೋಹರ್ ಜತೆ ಅಬ್ದುಲ್ ಘನಿ ಎಂಬ ಮೂವರ ಜತೆ ಇಶ್ರತ್‌ಳನ್ನೂ ಗುಜರಾತ್ ಪೊಲೀಸರು ಹತ್ಯೆಗೈದರು ಎಂದು ವರದಿಯಲ್ಲಿ ಹೇಳಿದರು! ಹತ್ಯೆಗೀಡಾದ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿಯರು ಎಂಬ ಗುಜರಾತ್ ಪೊಲೀ ಸರ ಪ್ರತಿಪಾದನೆ ಕೂಡ ಸುಳ್ಳು, ಎಲ್ಲರೂ ಭಾರತೀಯರೇ ಎಂದು ಉಪಸಂಹಾರ ಮಾಡಿದರು. ಅಷ್ಟೇ ಅಲ್ಲ, ಅವರೆಲ್ಲರೂ ಅಮಾ ಯಕರು ಎಂದು ತೀರ್ಪು ನೀಡಿದರು. ಅಲ್ಲಿಗೆ ನರೇಂದ್ರ ಮೋದಿ ಮುಸ್ಲಿಮರ ಪಾಲಿಗೆ ಮತ್ತೊಮ್ಮೆ ಖಳನಾಯಕನಾಗಿ ಬಿಟ್ಟರು.

ಆದರೇನಂತೆ…

ಮ್ಯಾಜಿಸ್ಟ್ರೇಟ್ ವರದಿ ಹೊರಬಿದ್ದು ಹತ್ತು ತಿಂಗಳು ತುಂಬುವ ಮೊದಲೇ ಇಶ್ರತ್  ಜಹಾನ್ ಎನ್‌ಕೌಂಟರ್ ಘಟನೆ ಯಾವ ತಿರುವು ಪಡೆದಿದೆ? ಅಂದು ಯಾವ ಮಾಧ್ಯಮಗಳು ಮೋದಿ ಯವರನ್ನು ದೂಷಿಸುತ್ತಿದ್ದವೋ ಅದೇ ಮಾಧ್ಯಮಗಳಲ್ಲಿ 2010, ಜುಲೈ 5ರಂದು ಪ್ರಕಟವಾದ ವರದಿಗಳು ಏನು ಹೇಳುತ್ತಿವೆ?

Ishrat was a fidayeen: Headley

ಇಂತಹ ಶೀರ್ಷಿಕೆಗಳನ್ನು ಹೊತ್ತ ವರದಿಗಳು ಮೊನ್ನೆ ಜುಲೈ 5ರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗಾದರೆ ಮುಂಬೈ ದಾಳಿಯ ಮುಖ್ಯ ಪಿತೂರಿದಾರ ಅಮೆರಿಕ ಮೂಲದ ಪಾಕಿಸ್ತಾನಿ ಭಯೋತ್ಪಾದಕ ಡೆವಿಡ್ ಹೆಡ್ಲಿ ಹೇಳಿದ್ದಾದರೂ ಏನು? ಪ್ರಸ್ತುತ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿಯನ್ನು ವಿಚಾರಣೆ ಮಾಡಲು ಭಾರತದ ‘ರಾಷ್ಟ್ರೀಯ ತನಿಖಾ ಏಜೆನ್ಸಿ’(NIA) ಅಧಿಕಾರಿಗಳು ತೆರಳಿದ್ದರು. 2004ರಲ್ಲಿ ಹತ್ಯೆಯಾದ ಮುಂಬೈ ಯುವತಿ ವಾಸ್ತವದಲ್ಲಿ ಲಷ್ಟರೆ ತಯ್ಯೆಬಾದ ಫಿದಾಯಿನ್(ಆತ್ಮಹತ್ಯಾ ಬಾಂಬರ್). 2007ರವರೆಗೂ ಲಷ್ಕರೆ ತಯ್ಯೆಬಾದ ಭಾರತದ ಕಾರ್ಯಾಚರಣೆಯ ಮುಖ್ಯ ಪಿತೂರಿದಾರನಾಗಿದ್ದ ಕಮಾಂಡರ್ ಮುಝಾಮಿಲ್ ಆಕೆಯನ್ನು ಸಂಘಟನೆಗೆ ಸೇರ್ಪಡೆ ಮಾಡಿ ಕೊಂಡಿದ್ದ ಎಂಬ ವಿಷಯವನ್ನು ಬಹಿರಂಗ ಮಾಡಿದ್ದಾನೆ!  ಅವರಲ್ಲಿ ಇಬ್ಬರು ಪಾಕಿಸ್ತಾನಿಯರು ಎಂದೂ ಹೇಳಿದ್ದಾನೆ. ಕೆಲವು ವಿಐಪಿಗಳನ್ನು ಹತ್ಯೆ ಮಾಡುವ ಸಲುವಾಗಿ ಮುಝಾಮಿಲ್, ಇಶ್ರತ್  ಹಾಗೂ ಇತರ ಮೂವರನ್ನು ಗುಜರಾತ್‌ಗೆ ಕಳುಹಿ ಸಿದ್ದ ಎಂದು ಗುಜರಾತ್ ಪೊಲೀಸರು ಹಾಗೂ ಕೇಂದ್ರ ಸರಕಾರ ಮಾಡಿದ್ದ ಪ್ರತಿಪಾದನೆ ಹೆಡ್ಲಿ ಮಾಹಿತಿಯಿಂದ ನಿಜವಾದಂತಾಗಿದೆ. ಇಶ್ರತ್  ಹತ್ಯೆಯ ಬೆನ್ನಲ್ಲೇ ಆಕೆ ನಮ್ಮ ಸಂಘಟನೆಗೆ ಸೇರಿದವಳು ಎಂದು ಪಾಕಿಸ್ತಾನದಲ್ಲಿರುವ ಲಷ್ಕರೆ ತಯ್ಯೆಬಾದ ಮುಖವಾಣಿ ‘ಘಾಝ್ವಾ ಟೈಮ್ಸ್’ ಪ್ರತಿಪಾದಿಸಿತ್ತು. ಈ ಎಲ್ಲವನ್ನೂ ಡೆವಿಡ್ ಹೆಡ್ಲಿ ಹೊರಹಾಕಿರುವ ಅಂಶಗಳು ನಿಜವಾಗಿಸಿವೆ!

ಮಾಜಿಸ್ಟ್ರೇಟ್ ತಮಾಂಗ್ ಹಾಗೂ ಜಾವೆದ್ ಅಖ್ತರ್ ಈಗ ಎಲ್ಲಿದ್ದಾರೆ? ಹೆಡ್ಲಿ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ?

ತಮಾಂಗ್ ಅವರು ವರದಿಯಲ್ಲಿ ಹೇಳಿದಂತೆ ಎನ್‌ಕೌಂಟರ್ ನಲ್ಲಿ ಹತ್ಯೆಯಾದ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿ ನಾಗರೀಕರಲ್ಲ, ಭಾರತೀಯರೇ ಆಗಿದ್ದರು ಎಂದಾದರೂ ಹೆಣಗಳನ್ನು ತೆಗೆದು ಕೊಂಡು ಹೋಗಲು ಯಾರೂ ಏಕೆ ಮುಂದೆ ಬರಲಿಲ್ಲ? ಇಶ್ರತ್  ಜಹಾನ್ ಹಾಗೂ ಜಾವೆದ್ ಶೇಕ್‌ನ ಹೆಣಗಳು ತಮ್ಮ ಮಕ್ಕಳ ದೆಂದು ಅವರವರ ತಂದೆ-ತಾಯಂದಿರು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವುದಾದರೆ ಉಳಿದ ಇಬ್ಬರಿಗೂ ಯಾರಾದರೂ ತಂದೆ-ತಾಯಿ ಇರಲೇಬೇಕಿತ್ತಲ್ಲವೆ? ಇದಕ್ಕಿಂತ ದೊಡ್ಡ ತಮಾಷೆ ನೋಡಿ… “ಹೆಡ್ಲಿ ಪ್ರತಿಪಾದನೆ ಸುಳ್ಳು. ಇಶ್ರತ್  ಜಹಾನ್, ಜಾವೆದ್‌ನ ಬ್ಯಾಂಕ್ ಖಾತೆಗಳನ್ನಷ್ಟೇ ನಿಭಾಯಿ ಸುತ್ತಿದ್ದಳು. ಆಕೆ ಭಯೋತ್ಪಾದಕಿಯಾಗಿರಲು ಸಾಧ್ಯವೇ ಇಲ್ಲ” ಎಂದು “Encountered on Saffron Agenda” ಎಂಬ ಸಾಕ್ಷ್ಯ ಚಿತ್ರ ರೂಪಿಸಿದ್ದ ಸುಬ್ರದೀಪ್ ಚಕ್ರವರ್ತಿ ಎಂಬ ಪಾರ್ಟ್‌ಟೈಮ್ ಪತ್ರಕರ್ತ ಹೇಳಿಕೆ ನೀಡಿದ್ದಾರೆ. ಅಲ್ಲಾ, ಜಾವೆದ್‌ನ ಬ್ಯಾಂಕ್ ಖಾತೆಗಳನ್ನು ಇಶ್ರತ್  ನಿಭಾಯಿಸುತಿದ್ದಳು ಎನ್ನುವುದಕ್ಕೆ ಎಲೆಕ್ಟ್ರಿಶಿಯನ್ ಕೆಲಸ ಮಾಡಿಕೊಂಡಿದ್ದ ಜಾವೆದ್ ಏನು ದೊಡ್ಡ ಉದ್ಯಮಿಯೇ? ಎರಡೆರಡು ಪಾಸ್‌ಪೋರ್ಟ್ ಇಟ್ಟುಕೊಂಡಿದ್ದ ದೇಶದ್ರೋಹಿ ವ್ಯಕ್ತಿ ಜತೆ ಸಂಪರ್ಕ, ವ್ಯವಹಾರ ಇಟ್ಟುಕೊಂಡಿ ರುವವರ ಸಾಚಾತನದ ಬಗ್ಗೆ ಅನುಮಾನಗಳಿರುವುದಿಲ್ಲವೆ?

ಅದಿರಲಿ, ಮಾಜಿಸ್ಟ್ರೇಟ್ ತಮಾಂಗ್ ವರದಿ ಹೊರಬಿದ್ದಾಗ, ಇಶ್ರತ್  ಜಹಾನ್ ಎನ್‌ಕೌಂಟರ್ ಅನ್ನು  ‘ಅಮಾನವೀಯ’, ‘ತಪ್ಪಿತಸ್ಥರನ್ನು ಶಿಕ್ಷಿಸಲೇಬೇಕು’ ಎಂದೆಲ್ಲ ಮಾತನಾಡಿದ್ದ ಕಾನೂನು ಸಚಿವ ವೀರಪ್ಪ ಮೊಯಿಲಿಯವರು ಏಕೆ ಬಾಯಿ ತೆರೆಯುತ್ತಿಲ್ಲ? 2004ರಲ್ಲಿ ಎನ್‌ಕೌಂಟರ್ ನಡೆದಾಗ ಇಶ್ರತ್  ತಾಯಿ ಗುಜರಾತ್ ಹೈಕೋರ್ಟ್‌ನಲ್ಲಿ ‘ನಕಲಿ ಎನ್‌ಕೌಂಟರ್’ ಎಂದು ಪ್ರತಿಪಾದಿಸಿ ರಿಟ್ ಅರ್ಜಿ ಹಾಕಿದಾಗ, ‘ಇಶ್ರತ್  ಲಷ್ಕರೆ ತಯ್ಯೆಬಾ ಜತೆ ಸಂಪರ್ಕ ಹೊಂದಿದ್ದಳು’ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ತಮಾಂಗ್ ವರದಿಯ ನಂತರ ರಾಗ ಬದಲಿಸಿದ ಅದು, ಹೊಸದಾಗಿ ಅಫಿಡವಿಟ್ ಸಲ್ಲಿಸಿ ಇಶ್ರತ್  ಜಹಾನ್ ಹಾಗೂ ಇತರ ಮೂವರು ಕೆಲವು ವಿಐಪಿಗಳನ್ನು ಕೊಲ್ಲಲು ಹೊರಟಿದ್ದಾರೆ ಎಂಬ ಗುಪ್ತಚರ ಮಾಹಿತಿಗೆ ಯಾವುದೇ ಸಾಕ್ಷ್ಯಗಳಿರಲಿಲ್ಲ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದಿತು!

ಈಗ ಕೇಂದ್ರ ಏನು ಹೇಳುತ್ತದೆ?

ಅಮೆರಿಕದಲ್ಲಿ ಕಂಬಿ ಎಣಿಸುತ್ತಿರುವ ವ್ಯಕ್ತಿಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನುಸಿಂಘ್ವಿ ಹೇಳಿದ್ದಾರೆ. ಹಾಗಾದರೆ ಇನ್ಯಾರ ಮಾತನ್ನು ನಂಬಬೇಕು? ಮುಂಬೈ ದಾಳಿ ಪಿತೂರಿ ಬಗ್ಗೆ ಡೆವಿಡ್ ಹೆಡ್ಲಿ ಯಾವುದಾದರೂ ಮಾಹಿತಿ ನೀಡಿದರೆ ಅದರ ಬಗ್ಗೆಯೂ ಹೀಗೆಯೇ ಹೇಳುತ್ತಾರೆಯೇ? ಭಯೋತ್ಪಾದನೆ ವಿಷಯ ಬಂದಾಗ ಕಾಂಗ್ರೆಸ್ ಬಾಯಿಂದ ಏಕೆ ಮಾತೇ ಹೊರಡುವುದಿಲ್ಲ? ಗುಜರಾತ್ ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳನ್ನು “State terrorism” ಎನ್ನುತ್ತಾ ಬರುತ್ತಿದ್ದರಲ್ಲಾ, ಹಾಗಾದರೆ ನರೇಂದ್ರ ಮೋದಿ ವಿರುದ್ಧ ಮಾಧ್ಯಮಗಳು ಹಾಗೂ ಬುದ್ಧಿಜೀವಿಗಳು ನಡೆಸುತ್ತಿರುವುದನ್ನು “Secular terrorism” ಎನ್ನಬಹುದಲ್ಲವೆ? ಇಂತಹ ಸಂದರ್ಭದಲ್ಲಿ ನಮ್ಮ ಸೆಕ್ಯುಲರ್ ಬ್ರಿಗೇಡ್ ಏಕೆ ಬಾಯಿ ತೆರೆಯುವುದಿಲ್ಲ? ನಮ್ಮ ದೇಶದಲ್ಲಿ ಮುಸ್ಲಿಂ ತುಷ್ಟೀಕರಣ ಯಾವ ಮಟ್ಟಿಗೆ ಹೋಗಿದೆಯೆಂದರೆ ಕೇರಳದ ಕ್ರೈಸ್ತ ಉಪನ್ಯಾಸಕ ಟಿ.ಡಿ. ಜೋಸೆಫ್ ಅವರ ಕೈಕಡಿದವರನ್ನು ಖಂಡಿಸುವುದಕ್ಕೂ ಅಂಜುತ್ತಿದ್ದಾರೆ.

ಈಗ ಹೇಳಿ, Where does the buck stop?

ಹತಾಶ, ನಿರ್ಲಜ್ಜ ಗಳಿಗೆಯಲ್ಲಿ ಈ ವಿಶ್ವಾಸದ “ವಾಣಿ’ ಅಗತ್ಯವಿತ್ತು!
By ಪ್ರತಾಪ್ ಸಿಂಹ, 04, July, Sunday

‘ಯಾವ ಕಾರಣಕ್ಕೂ ನಾನು ರಾಜೀನಾಮೆ ವಾಪಸು ಪಡೆಯಲಾರೆ’ ರಾಜೀನಾಮೆ ನೀಡಿದಾಗಿನಿಂದ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ನಿರಂತರವಾಗಿ ಹೇಳಿಕೊಂಡು ಬಂದ ಮಾತು  ಇದು. ಅವರ ಆ ನಿರ್ಧಾರದ ನುಡಿಯಲ್ಲಿ ಯಾವ ಅನುಮಾನಕ್ಕೂ ಆಸ್ಪದ ಇರಲಿಲ್ಲ. ಅವರ ನಿರ್ಧಾರದಲ್ಲಿ ಯಾವ ರಾಜಕೀಯ ಸೋಂಕು ಇರಲಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಎಲ್ಲ ರಾಜಕಾರಣಿಗಳೂ ಭ್ರಷ್ಟಾಚಾರದ ವಿಷಯದಲ್ಲಿ ಒಂದೇ, ಅವರೆಲ್ಲ ಒಂದೇ ಶಾಲೆಯಲ್ಲಿ ತರಬೇತಿ ಪಡೆದವರು ಎಂದು ಅವರು ಬಹಿರಂಗವಾಗಿ ಹೇಳಿಯೂ ಇದ್ದರು. ಅಷ್ಟರಮಟ್ಟಿಗೆ ಇನ್ನಾಗದು ಎಂಬ ಹತಾಶೆ ಅವರನ್ನು ಕಾಡಿತ್ತು.

ಶುಕ್ರವಾರ ಈಶ್ವರಪ್ಪ, ಸುರೇಶ್‌ಕುಮಾರ್, ವಿ. ಎಸ್. ಆಚಾರ್‍ಯ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಭೇಟಿ ಮಾಡಿದಾಗಲೂ ಅವರು ಮೆತ್ತಗಾದ ಸೂಚನೆ ಇರಲಿಲ್ಲ. ಸಚಿವರ ಕತೆ ಹಾಗಿರಲಿ, ಮುಖ್ಯಮಂತ್ರಿ ಹೇಳಿದ್ದರೂ ಲೋಕಾಯುಕ್ತರು ಜಗ್ಗುತ್ತಿರಲಿಲ್ಲ. ಏಕೆಂದರೆ ಈ ವಿಷಯದಲ್ಲಿ ಸಮಾಧಾನದ ಭರವಸೆಗಳನ್ನು ಕೊಡಬಹುದೇ ಹೊರತು ಏನೂ ಮಾಡುವ ಹಂತದಲ್ಲಿಲ್ಲ ಎಂಬುದು ಅವರಿಗೂ ಅರ್ಥವಾದಂತಿತ್ತು.

ಇವೆಲ್ಲದರ ನಡುವೆ ಒಂದು ಕರೆ ಲೋಕಾಯುಕ್ತರನ್ನು ಏಕಾಏಕಿ ಮೆತ್ತಗಾಗಿಸಿದೆ. ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿಯವರ ವ್ಯಕ್ತಿತ್ವದ ಝಲಕು ಸೂಕ್ತ ಸಮಯದಲ್ಲಿ ನಿರ್ಣಾಯಕ ಹಂತದಲ್ಲಿ ಅನಾವರಣಗೊಂಡಿದೆ. ಇಂಥ ಒಂದು ನಡೆಗೆ ಆಡ್ವಾಣಿಯವರಿಗೆ ದೇಶ ಕಾಳಜಿ ಉಳ್ಳ ಮನಸ್ಸುಗಳು ಒಂದು ಧನ್ಯವಾದ ಹೇಳಲೇಬೇಕು. ಇದು ಲೋಕಾಯುಕ್ತರ ರಾಜೀನಾಮೆ ಹಿಂದಕ್ಕೆ ತೆಗೆದುಕೊಂಡ ಕ್ರಮ ಎಂಬ ಸೀಮಿತ ಪರಿಧಿಯಲ್ಲಿ ವಿಶ್ಲೇಷಣೆ ಮಾಡಹೊರಟರೆ ಇದರ ಪ್ರಾಮುಖ್ಯ ಖಂಡಿತ ಅರ್ಥವಾಗುವುದಿಲ್ಲ.

ಸ್ವಲ್ಪ ಗಮನವಿಟ್ಟು ನೋಡಿ. ಕಳೆದ ಒಂದು ವಾರದಲ್ಲಿ ಅದೆಂಥ ಹತಾಶೆಯ ವಾತಾವರಣ ಕವಿದುಕೊಂಡು ಕಾಡುತ್ತಿತ್ತು. ಅದು ಒಂದು ಬಿಜೆಪಿಯ, ಒಬ್ಬ ಯಡಿಯೂರಪ್ಪನವರ, ಲೋಕಾಯುಕ್ತರ ಪ್ರಶ್ನೆಯಾಗಿರಲೇ ಇಲ್ಲ. ಒಂದಿಡೀ ವ್ಯವಸ್ಥೆಯಲ್ಲಿ ವಿಶ್ವಾಸದ ಚಿಕ್ಕ ಗೆರೆಯೂ ಕಾಣುತ್ತಿಲ್ಲವಲ್ಲ? ಇಲ್ಲಿಯವರೆಗೆ ಭ್ರಷ್ಟಾಚಾರಕ್ಕೆ ವ್ಯವಸ್ಥೆ ನಿರ್ಲಿಪ್ತವಾಗಿತ್ತು. ಆದರೀಗ ನಿರ್ದಿಷ್ಟ ಲಾಬಿಯೊಂದು ಸರಕಾರವನ್ನೇ ಅಂಗೈಯಲ್ಲಿ ಕುಣಿಸುತ್ತಿದ್ದರೂ ಪ್ರತಿರೋಧದ ದನಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲವಲ್ಲ? ಈ ಪ್ರತಿರೋಧದ ಪ್ರಾಮಾಣಿಕ ಪ್ರತಿನಿಧಿ ಎಂಬಂತಿದ್ದ ಲೋಕಾಯುಕ್ತರೂ ಆ ಲಾಬಿಗೆ ಬಲಿಯಾಗಿ ಸ್ಥಾನ ತೊರೆದು ಹೋಗುತ್ತಿದ್ದರೆ ಮುಖ್ಯಮಂತ್ರಿಯಾಗಿದ್ದವರಿಗೆ ಔಪಚಾರಿಕತೆಗೂ ‘ಹೋಗಬೇಡಿ’ ಎನ್ನಲಾಗುತ್ತಿಲ್ಲವಲ್ಲ? ಇದೆಂಥ ಸ್ಥಿತಿ ಬಂತು? ಮಾತೃಭೂಮಿ, ತತ್ತ್ವ ಸಿದ್ಧಾಂತ ಎನ್ನುತ್ತಿದ್ದ ಬಿಜೆಪಿಗೂ ಇಂಥ ದುರ್ಗತಿ ಬಂದಿದೆ ಎಂದರೆ ವ್ಯವಸ್ಥೆಯಲ್ಲಿ ಯಾರ ಮೇಲೆ ವಿಶ್ವಾಸವಿಡುವುದು? ಭ್ರಷ್ಟಾಚಾರದೊಂದಿಗೆ ರಾಜಿಯೇ ಏಕೈಕ ಅನಿವಾರ್‍ಯ ಮಾರ್ಗವೇ? ಎಂಬೆಲ್ಲ ಪರಮ ಹತಾಶೆಯ ಪ್ರಶ್ನೆಗಳು ಏಳುತ್ತಿದ್ದಾಗ ಆಡ್ವಾಣಿಯವರ ಒಂದು ನಡೆ ಸಾಂತ್ವನದ ಗಾಳಿ ಸೋಕಿಸಿದೆ. ‘ಇಲ್ಲ, ವ್ಯವಸ್ಥೆಯಲ್ಲಿ ಸಂವೇದನೆಗಳು ಇನ್ನೂ ಜೀವಂತ ಇವೆ. ಪ್ರಮಾದಗಳನ್ನು ಸರಿಪಡಿಸಿಕೊಳ್ಳಬೇಕು ಎಂಬ ಮನಸ್ಸು ಉಳ್ಳವರು ರಾಜಕೀಯದಲ್ಲಿ ಇದ್ದಾರೆ ’ ಎಂಬ  ಸಂದೇಶವನ್ನು ಆಡ್ವಾಣಿಯವರ ನಡೆ ದೃಢಪಡಿಸಿದೆ.

‘ಆಡ್ವಾಣಿಯವರು ನನ್ನ ತಂದೆಯ ಸಮಾನ. ಅವರ ಮಾತನ್ನು ಮೀರಲು ಸಾಧ್ಯವಿರಲಿಲ್ಲ’ ಎಂಬ ಲೋಕಾಯುಕ್ತರ ಹೇಳಿಕೆಯನ್ನೂ ಕೂಡ ರಾಜಕೀಯದ ಪರಿಧಿಯಲ್ಲೇ ನೋಡುವ ಅಗತ್ಯವಿಲ್ಲ. ಆಡ್ವಾಣಿ ಹಾಗೂ ಹೆಗ್ಡೆಯವರ ವೈಯಕ್ತಿಕ ಸಂಬಂಧ ಕೂಡ ಪರಸ್ಪರ ಗೌರವ, ಶುದ್ಧಹಸ್ತತೆ, ಪ್ರಾಮಾಣಿಕತೆಯನ್ನೇ ಬುನಾದಿಯನ್ನಾಗಿ ಹೊಂದಿದೆ. ಜೈನ್ ಹವಾಲಾ ಆರೋಪ ಬಂದಾಗ ಸ್ವಯಿಚ್ಛೆಯಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾಗೂ ದೋಷಮುಕ್ತರಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದ ವ್ಯಕ್ತಿ ಆಡ್ವಾಣಿ. ಅವರ ಪಕ್ಷ, ಸಿದ್ಧಾಂತ ಬೇರೆಯಾಗಿರಬಹುದು. ಆದರೆ ವೈಯಕ್ತಿಕ ಚಾರಿತ್ರ್ಯ ಎಲ್ಲವನ್ನೂ ಮೀರಿ ಸ್ನೇಹ, ವಿಶ್ವಾಸ, ಗೌರವವನ್ನು ಗಳಿಸಿಕೊಡಬಲ್ಲದು. ಆಡ್ವಾಣಿಯವರ ಕರೆ ಹಾಗೂ ಲೋಕಾಯುಕ್ತರ ನಿರ್ಧಾರ ಬದಲು ಇವುಗಳಲ್ಲಿ ಕಾಣುವುದು ಇವೇ. ಅದರಲ್ಲೂ ಆಡ್ವಾಣಿಯವರು ಎಂತಹ ಸಂದರ್ಭದಲ್ಲಿ ಕರೆ ಮಾಡಿದ್ದಾರೆ ನೋಡಿ?

ಅವರು ಯಾವ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬಿಟ್ಟುಕೊಟ್ಟು ಒಂದು ರೀತಿಯಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಸರಿದರೋ ಅವರ ಸ್ಥಾನಕ್ಕೆ ಬಂದ ಸುಷ್ಮಾ ಸ್ವರಾಜ್ ನಡತೆಗೂ, ಆಡ್ವಾಣಿಯವರು ನಡೆದುಕೊಂಡ ರೀತಿಗೂ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಿ. ಒಂದು ಕಡೆ, ಲೋಕಾಯುಕ್ತರ ರಾಜೀನಾಮೆಗೆ ಕಾರಣರಾದವರ ಜತೆ  ಸಾಧನಾ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡಿದ್ದಲ್ಲದೆ, ಗಣಿ ಕುಳಗಳನ್ನೇ ವಾಕರಿಕೆ ಹುಟ್ಟಿಸುವಂತೆ ಹೊಗಳುವ ಕೆಲಸವನ್ನು ಸುಷ್ಮಾ ಮಾಡಿದರು. ಲೋಕಾಯುಕ್ತರ ರಾಜೀನಾಮೆಗೆ ಕಾರಣವಾಗಿದ್ದ ದುಷ್ಟಶಕ್ತಿಗಳ ಬಗ್ಗೆ ಆಕೆಯ ಬಾಯಿಂದ ಒಂದು ಮಾತೂ ಹೊರಡಲಿಲ್ಲ. ಇನ್ನೊಂದೆಡೆ, ಆಡ್ವಾಣಿಯವರು ಹೆಚ್ಚೂಕಡಿಮೆ ರಾಜಕೀಯದಿಂದಲೇ ದೂರ ಸರಿದಿದ್ದಾರೆ. ಪಕ್ಷದ ಹಿರಿಯ ನಾಯಕ ಎನ್ನುವುದನ್ನು ಬಿಟ್ಟರೆ ಅಧಿಕಾರ ಚಲಾಯಿಸಬಹುದಾದ ಯಾವ ಹುದ್ದೆಯೂ ಇಲ್ಲ. ರಾಜಕೀಯಲ್ಲಿ ಇನ್ನೂ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವ ವಯಸ್ಸೂ ಅವರದ್ದಾಗಿಲ್ಲ. ಹಾಗಿರುವಾಗ ನನಗೇಕು ಇಲ್ಲದ ಉಸಾಬರಿ ಎಂದು ಸುಮ್ಮನಾಗಬಹುದಿತ್ತು. ಇಷ್ಟಾಗಿಯೂ ಲೋಕಾಯುಕ್ತರಿಗೆ ಖುದ್ದಾಗಿ ಕರೆ ಮಾಡಿ, ರಾಜೀನಾಮೆಯನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಯುಡಿಯೂರಪ್ಪನವರನ್ನು ಲೋಕಾಯುಕ್ತರ ಮನೆಗೆ ಓಡಿಸಿದರು. ಭರವಸೆ ಕೊಡುವಂತೆ ಮಾಡಿದರು. ಆ ಮೂಲಕ ಒಳ್ಳೆಯ ಕೆಲಸ ಮಾಡುವವರಿಗೆ ಆಡ್ವಾಣಿಯವರ ಬೆಂಬಲ, ಪ್ರೋತ್ಸಾಹ ಸದಾ ಇದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇನ್ನೊಂದು ಗಮನಾರ್ಹ ಅಂಶ ಎಂದರೆ ಈ ಎಲ್ಲ ಪ್ರಕ್ರಿಯೆಗಳೂ ಖುಲ್ಲಂಖುಲ್ಲ ಆಗಿ ನಡೆದಿವೆ. ಆಡ್ವಾಣಿಯವರು ತಮ್ಮ ಸ್ನೇಹವನ್ನು ಮಾತ್ರ ಉಪಯೋಗಿಸಿಕೊಂಡು ತಮ್ಮ ಹೆಸರು ಪ್ರಸ್ತಾವವಾಗದಂತೆ ಲೋಕಾಯುಕ್ತರ ಮೇಲೆ ಒತ್ತಡ ಹೇರುವ ಕ್ರಮವನ್ನೇನೂ ಅನುಸರಿಸಿಲ್ಲ. ಈ ಮೂಲಕ ಇದೊಂದು ಜವಾಬ್ದಾರಿಯುತ ನಡೆಯಾಗಿದ್ದು, ಕೇವಲ ಬಿಜೆಪಿಯನ್ನು ಇರಿಸುಮುರಿಸಿನಿಂದ ಪಾರು ಮಾಡುವುದಕ್ಕೆ ಮುಂದಾಗಿ ಮಾಡಿದ ಕ್ರಮವಲ್ಲ ಎಂಬ ವಿಶ್ವಾಸ ಬಂದಿದೆ.

ಒಟ್ಟಿನಲ್ಲಿ ಬಿಜೆಪಿ ಕೂಡ ಎಲ್ಲ ಪಕ್ಷಗಳಂತೆಯೇ ಆಗಿದೆ, ಸಂವೇದನೆಯನ್ನೇ ಕಳೆದುಕೊಂಡಿದೆ ಎಂಬ ಹತಾಶೆಯ ಮಡುವಿನಲ್ಲಿರುವಾಗಲೇ ಆಡ್ವಾಣಿಯವರ ಒಂದು ಕರೆ, ಅದಕ್ಕೆ ಲೋಕಾಯುಕ್ತರು ಸ್ಪಂದಿಸಿದ ಬಗೆ ಜನರಲ್ಲಿ ಮತ್ತೆ ಒಂದಿಷ್ಟು ಆಶಾಭಾವನೆಯನ್ನು ಸೃಷ್ಟಿಸಿದೆ. ಒಂದು ವೇಳೆ, ಯಡಿಯೂರಪ್ಪನವರಿಂದ ಭರವಸೆ ವ್ಯಕ್ತವಾಗಿದ್ದರೆ ನಂಬಲು ಕಷ್ಟವಾಗುತ್ತಿತ್ತು. ಏಕೆಂದರೆ ಅವರು ಮತ್ತೆ ಕೈಕೊಟ್ಟಿದ್ದರೆ ಕೇಳಲು ಯಾರಿದ್ದರು? ಅಕೌಂಟೆಬಿಲಿಟಿಗೆ ಯಾರಿದ್ದರು? ಆದರೆ ಈಗ ಸರಕಾರ ಭರವಸೆಯನ್ನು ಈಡೇರಿಸಲಿಲ್ಲವೆಂದಾದರೆ ಲೋಕಾಯುಕ್ತರು ನೇರವಾಗಿ ಆಡ್ವಾಣಿಯವರನ್ನೋ, ನಿತಿನ್ ಗಡ್ಕರಿಯವರನ್ನೋ ಸಂಪರ್ಕಿಸಬಹುದು. ಆ ಮಟ್ಟಿಗಾದರೂ ಸರಕಾರದ ಕಿವಿ ಹಿಂಡಲು ಯಾರೋ ಇದ್ದಾರೆ ಎಂದಾಯಿತು.

ಲೋಕಾಯುಕ್ತರು ತಮ್ಮ ಗಟ್ಟಿ ನಿರ್ಧಾರದಿಂದ ಏಕೆ ಹಿಂದೆ ಸರಿದರು, ಇದು ಸರಕಾರಕ್ಕೆ ಸಿಕ್ಕ ಗೆಲುವು ಅಥವಾ ಲೋಕಾಯುಕ್ತ ವರ್ಸಸ್ ಸರಕಾರ ಅಂತ ಈಗಲೂ ಏಕೆ ನೋಡಬೇಕು? ಆಡ್ವಾಣಿಯವರ ಕರೆ, ಲೋಕಾಯುಕ್ತರ ಸ್ಪಂದನೆಯನ್ನು ಪ್ರಾಮಾಣಿಕತೆಗೆ ಸಿಕ್ಕ ಜಯ, ಪ್ರಾಮಾಣಿಕತೆ ಹಾಗೂ ಸಮಗ್ರತೆ ಇಂದಿಗೂ ಬೆಲೆ ಇದೆ, ಬೆಲೆ ಕೊಡುವವರೂ ಇದ್ದಾರೆ ಎಂದು ಏಕೆ ನೋಡಬಾರದು?

ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!
Reddys remain Sushma’s blue-eyed boys!

ಅದು ಬಿಜೆಪಿಯ ಅತ್ಯುನ್ನತ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಹೊರಬಿದ್ದ ಸ್ಪಷ್ಟ ಸಂದೇಶ-ಬಳ್ಳಾರಿ ರೆಡ್ಡಿ ಸಹೋದರರಷ್ಟೇ ಆಕೆಗೆ ಪ್ರೀತಿಪಾತ್ರರು! ಬಿಜೆಪಿಯ ಎರಡು ವರ್ಷಗಳ ಸಾಧನಾ ಸಮಾವೇಶದ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡ ಆಕೆ, ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಹಾಗೂ ಗಾಲಿ ಸೋಮಶೇಖರ ರೆಡ್ಡಿಯೇ ತಮ್ಮ ನಂಬಿಕಸ್ತ ಬಂಟರು ಎಂಬುದನ್ನು ಪುನರುಚ್ಚರಿಸಿದರು. ಇವರೆಲ್ಲ ಸಚಿವರಾಗಿರುವ ಆರೋಗ್ಯ, ಕಂದಾಯ, ಮೂಲಭೂತ ಸೌಕರ್ಯ ಇಲಾಖೆ ಹಾಗೂ ಕೆಎಂಎಫ್ ಅನ್ನು ಮಾತ್ರ ಬೊಟ್ಟು ಮಾಡಿ ಹೊಗಳಿದರು. ಸಮಯದ ಅಭಾವದಿಂದ ಎಲ್ಲ ಇಲಾಖೆಗಳ ಬಗ್ಗೆಯೂ ಹೇಳಲಾಗುತ್ತಿಲ್ಲ ಎಂದು ಭಾಷಣ ಮುಗಿಸಿದರು!

ಜೂನ್ 25ರಂದು ನಡೆದ ಬಿಜೆಪಿ ಸಾಧನಾ ಸಮಾವೇಶದಲ್ಲಿ ರೆಡ್ಡಿಗಳು ಹಾಗೂ ಶ್ರೀರಾಮುಲು ಅವರನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಸಿಗೆ ಬರುವಂತೆ ಹೊಗಳಿದ್ದನ್ನು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ತನ್ನ ಮುಖಪುಟದಲ್ಲಿ ಈ ಮೇಲಿನ ಶೀರ್ಷಿಕೆಯಡಿ ಪ್ರಕಟ ಮಾಡಿತು. ಅದನ್ನು ಓದಿ ನಿಜಕ್ಕೂ ಆಶ್ಚರ್ಯವಾಯಿತು. ಈ ಸರಕಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡಿದವರಿದ್ದಾರಾ ಎಂದು ಯಾರನ್ನೇ ಕೇಳಿದರೂ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ನಿಸ್ಸಂಶಯವಾಗಿ ಹೇಳುತ್ತಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾತಿಗೆ ನಿಂತಿದ್ದ ಬಿಜೆಪಿಯ ‘ಮಹಾನ್’ ನಾಯಕಿ ಸುಷ್ಮಾಸ್ವರಾಜ್ ಕಣ್ಣಿಗೆ ಇವರ್‍ಯಾರೂ ಕಾಣಲಿಲ್ಲವೆ? ಇವರು ಮಾಡುತ್ತಿರುವ ಒಳ್ಳೆಯ ಕೆಲಸಗಳು ಅವರ ಗಮನಕ್ಕೇ ಬಂದೇ ಇಲ್ಲವೆ? ತಾನು ಯಾರನ್ನು ಹೊಗಳುತ್ತಿದ್ದೇನೆ, ಅವರ ಹಿನ್ನೆಲೆ ಎಂಥದ್ದು, ಕರ್ನಾಟಕದ ಮಹಾಜನತೆ ಈ ನಾಲ್ವರ ಬಗ್ಗೆ ಯಾವ ಅಭಿಪ್ರಾಯ ಹೊಂದಿದೆ ಎಂಬುದರ ಅರಿವಾದರೂ ಆಕೆಗಿದೆಯೇ? ಪ್ರತಿ ಸಾರಿಯೂ, ನಾಮ್ ಕೇ ವಾಸ್ಥೆಗೆ ಯಡಿಯೂರಪ್ಪನವರ ಬಗ್ಗೆ ತುಟಿಯಂಚಿನಲ್ಲಿ ಒಂದೆರಡು ಮಾತನಾಡಿ ಅಂತರಾತ್ಮದಿಂದ ರೆಡ್ಡಿ ಸಹೋದರರನ್ನು ಹೊಗಳಲು ಆರಂಭಿಸುತ್ತಾರೆ. ಏಕೆ?

ನಿಮಗೆ ದಿಲೀಪ್ ಸಿಂಗ್ ಜುದೇವ್ ಹೆಸರು ನೆನಪಿರಬಹುದಲ್ಲವೆ?

ಛತ್ತೀಸ್‌ಗಢದ ಜುದೇವ್, ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಪರಿಸರ ಹಾಗೂ ಅರಣ್ಯ ಖಾತೆ ಸಚಿವರಾಗಿದ್ದರು. ಛತ್ತೀಸ್‌ಗಢದಲ್ಲಿ ಮೈನಿಂಗ್ ಲೈಸೆನ್ಸ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾದ ಕಂಪನಿಯೊಂದರಿಂದ ಜುದೇವ್ ಲಂಚ ಪಡೆದಿದ್ದಾರೆ ಎಂದು 2003ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ದೊಡ್ಡ ವರದಿ ಮಾಡಿತು. ಆ ಹುಸಿ ಲಂಚ ಪ್ರಕರಣದ ಹಿಂದೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಮಗ ಅಮಿತ್ ಜೋಗಿಯ ಕೈವಾಡವಿತ್ತು. ಆದರೂ ದೋಷಮುಕ್ತರಾಗಿ ಹೊರ ಬನ್ನಿ ಎಂದ ವಾಜಪೇಯಿ, ಜುದೇವ್ ಅವರ ರಾಜೀನಾಮೆ ಪಡೆದುಕೊಂಡರು. ಅದೇ ವೇಳೆಗೆ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯೂ ಮುಗಿದು, ಫಲಿತಾಂಶ ಹೊರಬರಬೇಕಿತ್ತು. ಜುದೇವ್ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನಡೆಸಿದ್ದರು. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಬಹುಮತ ಗಳಿಸಿದರೂ ಜುದೇವ್ ಮುಖ್ಯಮಂತ್ರಿಗಾದಿಯನ್ನು ತಿರಸ್ಕರಿಸಿದರು. ಮುಂದೆ 2005ರಲ್ಲಿ ಜುದೇವ್ ದೋಷಮುಕ್ತರೆಂದು ಸಿಬಿಐ ವರದಿ ನೀಡಿದ್ದು ಬೇರೇ ಮಾತು, ಆದರೆ ಅಂದು ಬಿಜೆಪಿಯ ಕೇಂದ್ರ ನಾಯಕತ್ವ ನೈತಿಕತೆಯನ್ನು ಎತ್ತಿ ಹಿಡಿದಿತ್ತು. ಬಂಗಾರು ಲಕ್ಷಣ್ ಸಿಕ್ಕಿಬಿದ್ದಾಗ ನಿರ್ದಾಕ್ಷಿಣ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಅಷ್ಟೇಕೆ, ತಮ್ಮ ಮೇಲೆ ಹವಾಲಾ ಹಗರಣದ ಆರೋಪ ಬಂದಾಗ ದೋಷಮುಕ್ತರಾಗುವವರೆಗೂ ತಾನು ಯಾವ ಹುದ್ದೆಯನ್ನೂ ಅಲಂಕರಿಸುವುದಿಲ್ಲ ಎಂದು ಆಡ್ವಾಣಿಯವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ೬ ವರ್ಷ ಪ್ರಧಾನಿಯಾಗಿದ್ದರೂ ಅವರ ವಿರುದ್ಧ ಸಣ್ಣ ಆರೋಪ ಮಾಡುವುದಕ್ಕೂ ಅವಕಾಶ ನೀಡಲಿಲ್ಲ. ಅಟಲ್, ಆಡ್ವಾಣಿಯವರಂತಹ ಮೇರು ನಾಯಕರು ಎಂತಹ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂಬುದರ ಕನಿಷ್ಠ ಪರಿeನವಾದರೂ, ಅವರ ಉತ್ತರಾಧಿಕಾರಿಯಾಗುವ ಕನಸು ಕಾಣು ತ್ತಿರುವ ಸುಷ್ಮಾ ಸ್ವರಾಜ್‌ಗಿಲ್ಲವೆ?

ಇಷ್ಟಕ್ಕೂ ಆಕೆ ಹೊಗಳುತ್ತಿರುವುದಾದರೂ ಯಾರನ್ನು? ಈ ಶ್ರೀರಾಮುಲು, ರೆಡ್ಡಿ ಸಹೋದರರು ಬಿಜೆಪಿಗೆ ಬಂದಿದ್ದಾದರೂ ಯಾವ ಹಿನ್ನೆಲೆ, ತತ್ತ್ವಸಿದ್ಧಾಂತವನ್ನಿಟ್ಟುಕೊಂಡು?

ಒಂದು ಇ-ಮೇಲ್ ಓದಿ…

“1987ರಲ್ಲಿ ಹೀಗೊಂದು ಕೊಲೆ ನಡೆದುಹೋಯಿತು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಬಳ್ಳಾರಿಯ ಕಾಂಗ್ರೆಸ್ ಕೌನ್ಸಿಲರ್ ರೈಲ್ವೆ ಬಾಬು ಹಾಡಹಗಲೇ, ಎಲ್ಲರ ಎದುರೇ ಕೊಲೆಯಾಗಿ ಹೋದ. ಆತ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಮುನ್ಸಿಪಲ್ ಕೌನ್ಸಿಲ್‌ನ ವಾರ್ಡ್‌ಗೆ ಮಧ್ಯಂತರ ಚುನಾವಣೆ ಏರ್ಪಾಡಾಯಿತು. ರೈಲ್ವೇ ಬಾಬು ಅವರ ಸಂಬಂಧಿಕ ಹಾಗೂ ಆತನ ಗ್ಯಾಂಗ್ ಸದಸ್ಯನೂ ಆಗಿದ್ದ ರಮಣ್‌ಜಿನಿ ಅಲಿಯಾಸ್ ಕುಂಟ ರಮಣ್‌ಜಿನಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಆ ಕಾಲದಲ್ಲಿ ಬಳ್ಳಾರಿಯಲ್ಲಿ ಯಾವ ಬಲಾಬಲವನ್ನೂ ಹೊಂದಿರದ ಬಿಜೆಪಿ ಪ್ರತಿಷ್ಠಿತ ಆರ್ಕಿಟೆಕ್ಟ್ ಎಂ.ಎಸ್. ರಾವ್ ಅವರನ್ನು ಕಣಕ್ಕಿಳಿಸಿತು. ಅವರಿಗಿದ್ದ ಏಕೈಕ ಅರ್ಹತೆಯೆಂದರೆ ಪ್ರಾಮಾಣಿಕತೆ ಹಾಗೂ ಸಮಗ್ರತೆ. ಆ ಕಾಲದಲ್ಲಿ ಬಿಜೆಪಿಯಲ್ಲಿ ಇದ್ದವರೆಲ್ಲ ಅಂತಹವರೇ ಎಂಬುದು ಬೇರೆ ಮಾತು! ವೋಟಿಂಗ್ ದಿನ ಮತಗಟ್ಟೆಗಳ ಬಳಿ ಸೇರಿದ್ದ ಆರೆಸ್ಸೆಸ್, ಎಬಿವಿಪಿ ಹಾಗೂ ಬಿಜೆಪಿಯ 15 ಕಾರ್ಯಕರ್ತರಲ್ಲಿ ನಾನೂ ಒಬ್ಬನಾಗಿದ್ದೆ. ನನಗಾಗ ಕೇವಲ 18 ವರ್ಷ. ಬಿಜೆಪಿಯ ಏಜೆಂಟನಾಗಿ ಮತಗಟ್ಟೆ ಯೊಳಗೆ ನನ್ನನ್ನು ಕುಳ್ಳಿರಿಸಲಾಯಿತು. ಇದ್ದಕ್ಕಿದ್ದಂತೆಯೇ ಕಾಂಗ್ರೆಸ್‌ನ ಗೂಂಡಾಗಳು ನಕಲಿ ಮತದಾನ ಮಾಡಲು ಆರಂಭಿಸಿದರು. ನಾನು ವಿರೋಧಿಸಿದಾಗ ಸರಿಸುಮಾರು ನನ್ನ ವಯಸ್ಸಿನವನೇ ಆದ ಕುಖ್ಯಾತ ರೌಡಿಯೊಬ್ಬ ನನ್ನನ್ನು ಚೆನ್ನಾಗಿ ಚಚ್ಚಿದ. ಈ ಬಗ್ಗೆ ನನ್ನ ಪಕ್ಷದ ನಾಯಕರಾದ ಶ್ರೀ ರಂಗಣ್ಣ ಶೆಟ್ಟಿಯವರಿಗೆ ದೂರು ಹೇಳಿದೆ. 1999ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಕಾಲಿಡುವವರೆಗೂ ಜಿಲ್ಲೆಯಲ್ಲಿ ರಂಗಣ್ಣ ಶೆಟ್ಟಿಯವರದ್ದು ದೊಡ್ಡ ಹೆಸರು. 4 ದಶಕಗಳ ಕಾಲ ಬಳ್ಳಾರಿಯಲ್ಲಿ ಜನಸಂಘ ಮತ್ತು ಬಿಜೆಪಿಯ ಧ್ವನಿಯಾಗಿದ್ದರು. “ಅವರಿಗೆ ಅಧಿಕಾರ ಇದೆ, ಅವರು ಹೊಡಿತಾರೆ. ನಮಗೆ ಅಧಿಕಾರ ಬಂದಾಗ ಖಂಡಿತ ನಾವೂ ಅವರಿಗೆ ಹೊಡಿಯೋಣ. ನೀನು ಸುಮ್ಮನೆ ಇರು ತಮ್ಮಾ…” ಎಂದು ಅವರು ನನ್ನನ್ನು ಸಮಾಧಾನ ಪಡಿಸಿದ್ದರು. ಅವರು ಹೇಳಿದಂತೆ ಒಂದಲ್ಲ ಒಂದು ದಿನ ನಾವೂ ಅಧಿಕಾರಕ್ಕೆ ಬರುತ್ತೇವೆ, ಪ್ರತಿಕಾರ ತೆಗೆದುಕೊಳ್ಳುವ ಅವಕಾಶ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದೆ. ಅಂತಹ ಅವಕಾಶ ಬರಲೇ ಇಲ್ಲ.

ಏಕೆಂದರೆ….

ಅವತ್ತು ನನ್ನನ್ನು ಬಡಿದು, ಬೆದರಿಕೆ ಹಾಕಿದ್ದ ವ್ಯಕ್ತಿ ಇಂದು ಕರ್ನಾಟಕ ಸರಕಾರದ ಗೌರವಾನ್ವಿತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ! ಅದೂ ನಮ್ಮದೇ ಸರಕಾರದಲ್ಲಿ!! ಅಂದು ಕೊಲೆ, ದರೋಡೆ, ಸುಲಿಗೆ, ಅಪಹರಣದಲ್ಲಿ ತೊಡಗಿದ್ದ ಆ ಕುಖ್ಯಾತ ಗ್ಯಾಂಗ್‌ನ ‘ರಿಂಗ್‌ಮಾಸ್ಟರ್’ ಸಣ್ಣ ಫಕೀರಪ್ಪ ಮುಂದೆ ರಾಯಚೂರು ಜಿಲ್ಲೆಯಿಂದ ನಮ್ಮ ಪಕ್ಷದ ಸಂಸದರಾಗಬಹುದು!! ಕೊಲೆಯಾಗಿದ್ದ ಗೂಂಡಾ ಕೌನ್ಸಿಲರ್ ರೈಲ್ವೇ ಬಾಬುನ ಮಗನೇ ನಮ್ಮ ಪಕ್ಷದ ಕಂಪ್ಲಿ ಎಮ್ಮೆಲ್ಲೆ ಟಿ.ಎಚ್. ಸುರೇಶ್ ಬಾಬು!!”

ಇಂಥದ್ದೊಂದು ಇ-ಮೇಲ್, 2009ರ ಸಂಸತ್ ಚುನಾವಣೆಗೂ ಸ್ವಲ್ಪ ಮುಂಚೆ ಬಿಜೆಪಿಯ ನಾಯಕರೆಲ್ಲರ ‘ಇನ್‌ಬಾಕ್ಸ್’ಗೆ ಬಂದು ಸೇರಿತು. ಬಿಜೆಪಿಯ ಬಲವರ್ಧನೆಗಾಗಿ ಜೀವನದ ಅತ್ಯಮೂಲ್ಯ ವರ್ಷಗಳನ್ನು ಸವೆಸಿದ, ಪೆಟ್ಟನ್ನೂ ತಿಂದಿದ್ದ ವ್ಯಕ್ತಿಯೊಬ್ಬರು ಅದನ್ನು ಬರೆದಿದ್ದರು. ಎಂಥೆಂಥ ಅನರ್ಹರು ಬಿಜೆಪಿಯನ್ನು ಸೇರಿದ್ದಾರೆ, ಯಾರೋ ಶ್ರಮಿಸಿ ಕಟ್ಟಿದ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರು ಅಧಿಕಾರ ಅನುಭವಿಸುತ್ತಿದ್ದಾರೆ ಎಂಬುದನ್ನು ಅದರಲ್ಲಿ ಅನಾವರಣ ಮಾಡಿದ್ದರು. ಆ ಮಿಂಚಂಚೆಯನ್ನು ಬಿಜೆಪಿಯ ಬಹಳಷ್ಟು ಮಂತ್ರಿಗಳು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿಯ ಟಾಪ್‌ಬ್ರಾಸ್ ಗಮ ನಕ್ಕೂ ತಂದಿದ್ದರು. ಸುಷ್ಮ ಸ್ವರಾಜ್ ಕೂಡ ಓದಿರುತ್ತಾರೆ ಬಿಡಿ.

೧೯೯೯ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುವವರೆಗೂ ‘108’ ಶ್ರೀರಾಮುಲು ಹಿನ್ನೆಲೆ ಮೇಲಿನಂತೆಯೇ ಇತ್ತು. ಇತ್ತ “ಎನ್ನೋಬಲ್ ಇಂಡಿಯಾ ಸೇವಿಂಗ್ ಅಂಡ್ ಇನ್‌ವೆಸ್ಟ್‌ಮೆಂಟ್ ಕಂಪನಿ ಲಿಮಿಟೆಡ್” ಎಂಬ ‘ಚೀಟ್’ಫಂಡ್ ಕಂಪನಿ ಹುಟ್ಟು ಹಾಕಿದ್ದ ಜನಾರ್ದನ ರೆಡ್ಡಿ ನೆತ್ತಿಗೆ 1998ರಲ್ಲಿ ರಿಸರ್ವ್ ಬ್ಯಾಂಕ್ ಕುಟ್ಟಿ ಕಡಿವಾಣ ಹಾಕಿತ್ತು. ಅದ್ಯಾವ ಕ್ಷಣದಲ್ಲಿ ಆ ಮಹಾತಾಯಿ(!!) ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದರೋ, ಸೋನಿಯಾ ಗಾಂಧಿಯವರನ್ನು ಸೋಲಿಸಲೇಬೇಕೆಂಬ ಕಾರಣಕ್ಕೆ ಕಳ್ಳರು, ಸುಳ್ಳರು, ದಗಾಕೋರರು, ಕೊಲೆಗಡುಕರು ಎಲ್ಲರ  ಸಹಾಯವನ್ನೂ ತೆಗೆದುಕೊಂಡಿತು ಬಿಜೆಪಿ. ಈ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಸುಷ್ಮಾ ಸ್ವರಾಜ್ ಸಂಪರ್ಕಕ್ಕೆ ಬಂದಿದ್ದು ಆಗಲೇ. ಸೋತ ಸುಷ್ಮಾ ಪ್ರತಿ ವರ್ಷ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿ ದಿಲ್ಲಿಗೆ ಮರಳಿದರು, ಅದಕ್ಕೂ ಮುನ್ನ ರೆಡ್ಡಿ-ಶ್ರೀರಾಮುಲುಗೆ ಜಿಲ್ಲೆಯ ರಾಜ್ಯಭಾರ ವಹಿಸಿಕೊಟ್ಟರು. ಇತ್ತ 2001ರಲ್ಲಿ 10 ಲಕ್ಷ ಪ್ರಾರಂಭಿಕ ಬಂಡವಾಳದೊಂದಿಗೆ ಮೈನಿಂಗ್ ವಹಿವಾಟು ಆರಂಭಿಸಿದ ರೆಡ್ಡಿ ಸಹೋದರರು ಇವತ್ತು 25 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮಿಣಿ ಉಕ್ಕು ಸ್ಥಾವರ ನಿರ್ಮಾಣ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ! ಇಷ್ಟೆಲ್ಲಾ ಹಣವನ್ನು ನ್ಯಾಯಯುತವಾಗಿ ಮಾಡಲು ಸಾಧ್ಯವೆ? ಇನ್ಫೋಸಿಸ್, ವಿಪ್ರೊ, ಟಿಸಿಎಸ್‌ನಂತಹ ಸಾಫ್ಟ್‌ವೇರ್ ಕಂಪನಿಗಳಿಗೇ ಸಾಧ್ಯವಾಗದ ಚಮತ್ಕಾರ, ಪವಾಡ ರೆಡ್ಡಿಗಳಿಗೆ ಹೇಗೆ ಸಾಧ್ಯವಾಯಿತು? ನನ್ನ ರಾಜೀನಾಮೆಗೆ ಮೈನಿಂಗ್ ಮಾಫಿಯಾವೇ ಕಾರಣ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಬೇಲೆಕೇರಿ ಬಳಿ ಸಂಗ್ರಹಿಸಿಡಲಾಗಿದ್ದ ಅದಿರು ಯಾರದ್ದಾ ಗಿತ್ತು, ಅದನ್ನು ಯಾರು ನಾಪತ್ತೆ ಮಾಡಿದರು ಎಂಬುದು ನಮ್ಮ ರಾಜ್ಯದ ಒಬ್ಬ ಅನಕ್ಷರಸ್ತನಿಗೂ ಗೊತ್ತು. ಹಾಗಿದ್ದರೂ ಸುಷ್ಮಾ ಸ್ವರಾಜ್ ಅದ್ದೇಗೆ ರಾಮುಲು, ರೆಡ್ಡಿಗಳನ್ನು ನಿರ್ಲಜ್ಜೆಯಿಂದ ಹೊಗಳುತ್ತಾರೆ? ಈ ರೆಡ್ಡಿಗಳು ಹಾಗೂ ಸುಷ್ಮಾ ಸ್ವರಾಜ್ ನಡುವೆ ಯಾವುದಾದರೂ ‘ಕೊಡು-ಕೊಳ್ಳುವ’ ವ್ಯವಹಾರವಿದೆಯೇ?

ಕಳೆದ ಅಕ್ಟೋಬರ್‌ನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ.

2009ರಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಭಾರೀ ನೆರೆಗೆ ಸಿಲುಕಿ ಸಂಕಷ್ಟಕ್ಕೀಡಾದಾಗ, ನಷ್ಟವನ್ನು ಸರಿದೂಗಿಸುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಕಬ್ಬಿಣದ ಅದಿರು ಸಾಗಿಸುವ ಪ್ರತಿ ಲಾರಿಗಳ ಮೇಲೆ 1 ಸಾವಿರ ರೂ. ಸೆಸ್(ಸುಂಕ) ವಿಧಿಸಲು ನಿರ್ಧ ರಿಸಿದರು. ಈ ನಿರ್ಧಾರವನ್ನು ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಖಂಡಿಸಿ ಬಿಟ್ಟರು. ಅಲ್ಲಿಗೆ ಕದನ ಕಹಳೆ ಮೊಳಗಿತು. ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ ಬಿಜೆಪಿಯ ಮೊದಲ ಸರಕಾರ ಅಧಿಕಾರಕ್ಕೆ ಬಂದು 18 ತಿಂಗಳಲ್ಲೇ ಕುಸಿದುಬೀಳುವ ಅಪಾಯಕ್ಕೆ ಸಿಲುಕಿತು. ರೆಡ್ಡಿಗಳು ಬಲಾಬಲ ಪ್ರದರ್ಶನಕ್ಕೆ ಮುಂದಾದರು. ಇದಾಗಿ ಮೂರೇ ದಿನಗಳಲ್ಲಿ ಬಿಜೆಪಿ ತನ್ನ ಹಿರಿಯ ನಾಯಕ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿದ್ದ ಅರುಣ್ ಜೇಟ್ಲಿಯವರನ್ನು ರಾಜ್ಯಕ್ಕೆ ದೌಡಾಯಿಸಿತು. ಊಹೂಂ, ರೆಡ್ಡಿಗಳು ಅವರನ್ನು ಭೇಟಿ ಮಾಡುವುದಕ್ಕೂ ಬರಲಿಲ್ಲ. ಬಿಜೆಪಿಯ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು, ಆಗಿನ ಹಾಲಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಯಾರೇ ಪ್ರಯತ್ನಿಸಿದರೂ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣಲಿಲ್ಲ. ಆಗ ಕಣ್ಣಿಗೆ ಕಂಡಿದ್ದು ಸುಷ್ಮಾ ಸ್ವರಾಜ್! ಅಷ್ಟಕ್ಕೂ, ಬಳ್ಳಾರಿ ಸಹೋದರರ ದತ್ತು ಅಮ್ಮ ಅವರೇ ಅಲ್ಲವೆ?! 2009, ನವೆಂಬರ್ 9ರಂದು ಸಂಧಾನ ನಾಟಕ ನಡೆಯಿತು. ವಿಧೇಯ ಮಕ್ಕಳಂತೆ ಅಮ್ಮ ಸುಷ್ಮಮ್ಮನ ಮಾತಿಗೆ ತಲೆಯಾಡಿಸಿದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಯಡಿಯೂರಪ್ಪನವರ ಕೈ ಕೈ ಹಿಡಿದುಕೊಂಡು, ಕುಟುಂಬದೊಳಗಿನ ಸಮಸ್ಯೆ ಎಂದು ಕ್ಯಾಮೆರಾಗಳಿಗೆ ಪೋಸು ಕೊಟ್ಟರು. ಪ್ರಶ್ನೆಯಿಷ್ಟೇ- ಇದೆಂಥಾ ತಾಯಿ-ಮಕ್ಕಳ ಸಂಬಂಧ? ಯಾವ ಮುಖ್ಯಮಂತ್ರಿಯ ಮುಖವನ್ನೂ ನೋಡುವುದಿಲ್ಲ ಎಂದು ಸಾರ್ವಜನಿಕವಾಗಿ ಕೊಟ್ಟಿದ್ದ ಹೇಳಿಕೆಯನ್ನೇ ಮರೆತು ಆ ವ್ಯಕ್ತಿಯನ್ನೇ ಜನಾರ್ದನ ರೆಡ್ಡಿ ಬಿಗಿದಪ್ಪುತ್ತಾ ರೆಂದರೆ ಈ ಅಮ್ಮ ಅದೆಂಥ ಮಹಾತಾಯಿ ಇರಬಹುದು? ಅದಿರಲಿ, ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಣೆ ಮಾಡಿಸಿದ್ದಕ್ಕೆ ಸುಷ್ಮಾ ಸ್ವರಾಜ್‌ಗೆ ಸಿಕ್ಕ ಫಲವೇನು ಗೊತ್ತೆ? ಅವರ ಪತಿ ಸ್ವರಾಜ್ ಕೌಶಲ್‌ರನ್ನು ಕರ್ನಾಟಕ ಸರಕಾರದ ವಕೀಲರನ್ನಾಗಿ 2009, ಡಿಸೆಂಬರ್ 5ರಂದು ಆದೇಶ ಹೊರಡಿಸಲಾಯಿತು! ಈಕೆಯೇನು ಸಾಮಾನ್ಯ ಮಹಿಳೆ ಎಂದುಕೊಳ್ಳಬೇಡಿ. ತಾನು ಅರುಣ್ ಜೇಟ್ಲಿಗಿಂತಲೂ ಪವರ್‌ಫುಲ್, ನನ್ನ ಮಾತಿಗೇ ಹೆಚ್ಚು ಬೆಲೆ, ತಾನೇ ಬಿಜೆಪಿಯ ದೊಡ್ಡ ನಾಯಕಿ ಎಂಬ ಭ್ರಮೆ ಇದೆ. ಆ ಭ್ರಮೆಯನ್ನು ಜನರಲ್ಲೂ ಮೂಡಿಸಬೇಕೆಂಬ ತುಡಿತವಿದೆ. ಬಳ್ಳಾರಿ ರೆಡ್ಡಿಗಳನ್ನು ಇಷ್ಟೆಲ್ಲಾ ಹೊಗಳುವ ಈಕೆ ದೇಶದ ನಂಬರ್-1 ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಒಂದಾದರೂ ಒಳ್ಳೆಯ ಮಾತನಾಡಿದ್ದನ್ನು ಕೇಳಿದ್ದೀರಾ? ಏಕೆ ಈ ಅಮ್ಮಾ ರೆಡ್ಡಿಗಳನ್ನು ಮಾತ್ರ ಹೊಗಳುತ್ತಾರೆ? ಈಕೆಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವುದೇ ರೆಡ್ಡಿಗಳ ಗುರಿಯೆಂದು ತೆಹೆಲ್ಕಾ ಪತ್ರಿಕೆ ಬರೆದಿತ್ತು!  ಹಾಗಾಗಿ, ಯಡಿಯೂರಪ್ಪನವರ ಉತ್ತರಾಧಿಕಾರಿಯನ್ನಾಗಿ ಜನಾರ್ದನ ರೆಡ್ಡಿಯವರನ್ನು ಬಿಂಬಿಸುವುದೇ ಈಕೆಯ ಉದ್ದೇಶ ಎಂಬ ಅನುಮಾನ ಕಾಡುವುದಿಲ್ಲವೆ? ಮಕ್ಕಳು ದಾರಿ ತಪ್ಪಿದಾಗ, ಕೆಟ್ಟ ಹೆಸರು ತಂದಾಗ ಬದುಕಿರುವಾಗಲೇ ಮಕ್ಕಳ ಶ್ರಾದ್ಧ ಮಾಡಿದ, ಸಾರ್ವಜನಿಕವಾಗಿ dis-own ಮಾಡಿದ ತಂದೆ-ತಾಯಂದಿರು ನಮ್ಮ ಸಮಾಜದಲ್ಲಿದ್ದಾರೆ. ಅಂಥದ್ದರಲ್ಲಿ ಬಳ್ಳಾರಿ ಸಹೋದರರನ್ನು ಅದ್ಯಾವ ಮುಖ ಇಟ್ಟುಕೊಂಡು ಸುಷ್ಮಾ ಸ್ವರಾಜ್, ತಮ್ಮ ಮಾನಸ ಪುತ್ರರು ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ? 2004ರಲ್ಲಿ ಸೋನಿಯಾ ಗಾಂಧಿಯವರು ಇನ್ನೇನು ಪ್ರಧಾನಿಯಾಗಿ ಬಿಡುವ ಸಂದರ್ಭ ಸೃಷ್ಟಿಯಾದಾಗ, ‘ಆಕೆಯೇನಾದರೂ ಪ್ರಧಾನಿಯಾದರೆ ನಾನು ವಿಧವೆಯಂತೆ ಬಿಳಿ ವಸ್ತ್ರ ಧರಿಸುತ್ತೇನೆ. ಬಳೆ ಒಡೆಯುತ್ತೇನೆ, ಕಾಳು ತಿನ್ನುತ್ತೇನೆ, ನೆಲದ ಮೇಲೆ ಮಲಗುತ್ತೇನೆ’ ಎಂದು ಮೌಲ್ಯಕ್ಕೆ ಮಹಾಬೆಲೆ ಕೊಡುವಂತೆ ವರ್ತಿಸಿದ್ದ ಈಕೆ, ತನ್ನ ಬಳ್ಳಾರಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯದಿರುವಷ್ಟು ಮುಗ್ಧರೇ?  ಮಂದಿರದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಪಕ್ಷದ ಮೇರು ನಾಯಕಿಯಾದ ಈಕೆಗೆ ತನ್ನ ಮಕ್ಕಳು ನಾಶ ಮಾಡಿರುವ ಸುಂಕುಳಮ್ಮನ ದೇವಾಲಯದ ಕಥೆ ತಿಳಿದಿಲ್ಲವೆ? ಈಕೆಯೇನಾದರೂ ಪ್ರಧಾನಿಯಾದರೆ ಈ ದೇಶದ ಗತಿಯೇನಾದೀತು? 2007-08ನೇ ಸಾಲಿನಲ್ಲಿ 3 ಸಾವಿರ ಕೋಟಿ ಮೌಲ್ಯದ ಸುಮಾರು 47.33 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ಪು ಮಾಡಲಾಗಿದೆ. ಹೀಗೆ ಅಕ್ರಮ ಗಣಿಗಾರಿಕೆ ಮಾಡಿ, ಅದಿರು ಸಾಗಾಟ ಮಾಡುತ್ತಿರು ವವರನ್ನು ಒಟ್ಟಾಗಿ ಬಲಿಹಾಕೋಣ ಬನ್ನಿ ಎಂದು ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವುದನ್ನು ಕೇಳಿದರೆ ಅವರಿಗೂ ಅಕ್ರಮ ಗಣಿಗಾರಿಕೆ ಬಗ್ಗೆ ಅಸಮಾಧಾನ, ಹತಾಶೆ, ನೋವು ಎಲ್ಲವೂ ಇವೆ. ಆದರೆ ಬಿಜೆಪಿ ಸಂಸದೀಯ ಪಕ್ಷದ ನಾಯಕಿಯೇ ರೆಡ್ಡಿಗಳ ಬೆಂಬಲಕ್ಕೆ ನಿಂತಿರುವಾಗ ಅವರು ತಾನೇ ಏನು ಮಾಡಿಯಾರು?

“ಶ್ರೀರಾಮುಲು ಜತೆ ಮಾತನಾಡಬೇಕೆಂದಾಗಲೆಲ್ಲ 108ಕ್ಕೆ ಸಂಪರ್ಕಿಸಿ ಎಂದು ನಾನು ಸೂಚಿಸುತ್ತೇನೆ. ಇವತ್ತು ಕರ್ನಾಟಕದಲ್ಲಿ ಶ್ರೀರಾಮುಲು ಎಂದರೆ 108 ಎಂದೇ ಜನ ಗುರುತಿಸುವಷ್ಟು ಪ್ರಸಿದ್ಧ ರಾಗಿದ್ದಾರೆ” ಎಂದು ಸುಷ್ಮಾ ಹೊಗಳಿದ್ದಾರಲ್ಲಾ, ‘ಆಂಬುಲೆನ್ಸ್ ಸೇವೆ’ ಯನ್ನು ಈ ದೇಶದಲ್ಲಿ ಪ್ರಾರಂಭಿಸಿದ್ದೇ ಶ್ರೀರಾಮುಲು ಅವರೇನು? ದಿ ಎಮರ್ಜೆನ್ಸಿ ಮೇನೇಜ್‌ಮೆಂಟ್ ಆಂಡ್ ರೀಸರ್ಚ್ ಇನ್‌ಸ್ಟಿಟ್ಯೂಟ್(EMRI) ಎಂಬ ಸ್ವಯಂ ಸೇವಾಸಂಸ್ಥೆಯನ್ನು  ಸ್ಥಾಪಿಸಿದ ‘ಸತ್ಯಂ’ ಸಾಫ್ಟ್‌ವೇರ್ ಕಂಪನಿಯ ಮಾಲೀಕ ರಾಮಲಿಂಗರಾಜು, ೨೦೦೫ರಲ್ಲೇ ಬಡವರಿಗೆ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದರು. ಸುಮಾರು ೮ ರಾಜ್ಯಗಳಲ್ಲಿ 1534 ಆಂಬುಲೆನ್ಸ್‌ಗಳನ್ನು ಈ ಸಂಸ್ಥೆ ಓಡಾಟಕ್ಕೆ ಬಿಟ್ಟಿದೆ. ಈಗ ರಾಜು ಎಲ್ಲಿದ್ದಾರೆ ಗೊತ್ತಲ್ಲವೆ?! ಜನರಿಗೆ ಮೋಸವೆಸಗಿ ದುಡ್ಡು ಮಾಡಿದವರಿಗೆ ಸಮಾಜಸೇವೆ ಎಂಬುದು ಒಂದು ಮುಖವಾಡವಷ್ಟೇ. ರಾಜು ಸತ್ಯಂ ಕಂಪನಿಯನ್ನು ಮುಳುಗಿಸಿ ಸಮಾಜ ಸೇವೆ ಹೆಸರಿನಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರು, ರಾಮುಲು ಸರಕಾರಿ ದುಡ್ಡಿನಲ್ಲಿ ಸೇವೆಯ ಮುಖವಾಡ ಹಾಕಿಕೊಂಡು ಹೆಸರು ಗಳಿಸಲು ಯತ್ನಿಸುತ್ತಿದ್ದಾರೆ ಅಷ್ಟೇ. ಇಂತಹ ಉದಾಹರಣೆಗಳಿದ್ದರೂ ಏಕೆ ವಾಸ್ತವಕ್ಕೆ ದೂರವಾದ ಚಿತ್ರಣ ನೀಡಿ ಭ್ರಾಮಕ ಜಗತ್ತನ್ನು ಸೃಷ್ಟಿಸಲು ಯತ್ನಿಸುತ್ತಿದ್ದೀರಿ ಸುಷ್ಮಾ ಸ್ವರಾಜ್? ನಿಮ್ಮ ದತ್ತು ಪುತ್ರರ ವ್ಯಾಮೋಹದಲ್ಲಿ ಬಿಜೆಪಿಗಾಗಿ ಜೀವತೇದ ಕರುಳ ಕುಡಿಗಳೇ ಮೂಲೆಗುಂಪಾಗುತ್ತಿದ್ದಾರಲ್ಲಾ ಇದ್ಯಾವ ನ್ಯಾಯ?

ಅಹಾ, ಎಂಥಾ ಅಮ್ಮ ನೀನಮ್ಮಾ?

ರಾಮುಲು-ರೆಡ್ಡಿಗಳಂಥ ಮಕ್ಕಳನ್ನು ಪೋಷಿಸುತ್ತಿರುವ ನಿನ್ನಂಥ ಇನ್ನೊಂದಿಷ್ಟು ಅಮ್ಮಂದಿರಿದ್ದರೆ ನಮ್ಮ ರಾಜ್ಯ ‘ಬೇಕಾರ್’, ‘ಬೆಗ್ಗರ್’ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ ಕಣಮ್ಮಾ…

ಶ್ರದ್ಧೆಯ ತಾಯಂದಿರೇ, ತತ್ತ್ವಾದರ್ಶದ ‘ಶ್ರಾದ್ಧ’ ನೋಡಿ ಸುಮ್ಮನಿರೋದಾ?
ಅಂದು ನಡುರಾತ್ರಿ ಕಳೆದು 2 ಗಂಟೆಯಾಗಿದೆ. ಆ ಹೊತ್ತಿ ನಲ್ಲಿ ಮೊಬೈಲ್ ರಿಂಗ್ ಆಗುತ್ತಿದೆ. ಅತ್ತ ಕಡೆ ಹೆಣ್ಣು ಧ್ವನಿಯೊಂದು ಗದ್ಗದಿತವಾಗಿ ಕೇಳುತ್ತಿದೆ. ತನ್ನ 8 ತಿಂಗಳ ಕಂದಮ್ಮನ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಅಮ್ಮನ ಧ್ವನಿ ಯದು. “ನೀವು ಹೇಳಿ ಸಾರ್, ಅವರು ನಿಮ್ಮ ಮಾತನ್ನು ಕೇಳುತ್ತಾರೆ” ಎಂದು ಅಂಗಲಾಚುತ್ತಿದ್ದಾಳೆ. ಅನಾರೋಗ್ಯದಿಂದ ಮಗು ನರಳುತ್ತಿ ದ್ದರೂ ಬಳ್ಳಾರಿ ಸರಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಕೊಡಲು ಮುಂದಾಗುತ್ತಿಲ್ಲ.

ಆಗ ಆಕೆಗೆ ಕಂಡ ಕಡೆಯ ಆಶಾಕಿರಣ ಯಾವುದೆಂದು ತಿಳಿದಿದ್ದೀರಿ? ಆ ಹೊತ್ತಿನಲ್ಲಿ ಆಕೆ ಕರೆ ಮಾಡಿದ್ದು ಯಾರಿಗೆ ಅಂದುಕೊಂಡಿರಿ?

ಬಳ್ಳಾರಿಯನ್ನೇ ಪ್ರತಿನಿಧಿಸುವ ಆರೋಗ್ಯ ಸಚಿವ, ‘ರಾ ಅಂಟೆ ಶ್ರೀರಾಮುಲು’ ಹಾಗೂ ‘108’ ಮುಖ ಇಟ್ಟುಕೊಂಡಿರುವ ಯಾವ ಯಶವಂತ ಪುರುಷನಿಗೂ ಅಲ್ಲ, “ಒಂದೇ” ಮುಖ ಇಟ್ಟುಕೊಂಡಿರುವ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆಯವರಿಗೆ! ಹೊತ್ತಲ್ಲದ ಹೊತ್ತಿನಲ್ಲೂ ಬಂದ ಕರೆಗೆ ಸ್ಪಂದಿಸಿದ ಲೋಕಾಯುಕ್ತರು ಕೂಡಲೇ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಕರೆ ಮಾಡಿದರು. ಅಧಿಕಾರಿಗಳು ಮನೆ ಬಾಗಿಲಿಗೆ ಬಂದರು. ಚಿಕಿತ್ಸೆಗಾಗಿ ಮಗುವನ್ನು ಕೂಡಲೇ ಬೆಂಗಳೂರಿಗೆ ವರ್ಗಾಯಿಸಲಾಯಿತು. ಪ್ರಾಣ ಉಳಿಯಿತು. ಇಂಥದ್ದೊಂದು ಮನಮುಟ್ಟುವ ಘಟನೆಯ ಮೇಲೆ ‘ಟೈಮ್ಸ್ ಆಫ್ ಇಂಡಿಯಾ’ದ ಹಿರಿಯ ವರದಿಗಾರ ವಿನಯ್ ಮಾಧವ್ ಬೆಳಕು ಚೆಲ್ಲಿದ್ದಾರೆ. ಇವತ್ತು ಮಿಂಟೋ ಆಸ್ಪತ್ರೆಯಲ್ಲಿ ರಾಜೇಂದ್ರ ಜಯರಾಮ್ ಎಂಬವರು ಕ್ಯಾಟರ್‍ಯಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅವರಿಗೆ 98 ವರ್ಷ. ಸ್ವಾತಂತ್ರ್ಯ ಹೋರಾಟಗಾರರು. ಈ ದೇಶಕ್ಕಾಗಿ ಹೋರಾಡಿದ ಆ ವೃದ್ಧ ಹಾಗೂ ಬಡ ಜೀವ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮಿಂಟೋ ಎಂಬ ಬೆಂಗಳೂರಿನ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ, 7 ಸಾವಿರ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದರು. ಅಷ್ಟು ಹಣವನ್ನು ತೆರುವ ಸಾಮರ್ಥ್ಯವಿಲ್ಲದೆ ರಾಜೇಂದ್ರ ಜಯರಾಮ್, ಲೋಕಾಯುಕ್ತ ಸಂತೋಷ್ ಹೆಗ್ಡೆಯವರಲ್ಲಿ ಮೊರೆಯಿಟ್ಟರು. ಅದರ ಫಲವಾಗಿ ಇಂದು ಶಸ್ತ್ರಚಿಕಿತ್ಸೆ ನೆರವೇರುತ್ತಿದೆ.

ಆದರೆ…

ಅನಾರೋಗ್ಯಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದು, ವೃದ್ಧರ ಕಣ್ಣಿನ ಪೊರೆಯ ಆಪರೇಶನ್ ಮಾಡಿಸುವುದು ಯಾರ ಕೆಲಸ? ಲೋಕಾಯುಕ್ತರು ಅದನ್ನೆಲ್ಲಾ ಮಾಡಬೇಕೇನು? ಏಕೆ ಜನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರಿಗೆ ಹೊತ್ತು-ಗೊತ್ತು ನೋಡದೇ ಕರೆ ಮಾಡುತ್ತಾರೆ? ಏಕೆಂದರೆ ಅವರು ಭರವಸೆಯ ಏಕೈಕ ಆಶಾಕಿರಣದಂತೆ ನಮ್ಮ ನಡುವೆ ಇದ್ದರು, ಏಕೆಂದರೆ ನಮ್ಮ ವ್ಯವಸ್ಥೆ ಭ್ರಷ್ಟಗೊಂಡಿದೆ, ಏಕೆಂದರೆ ನಮ್ಮನ್ನಾಳುವವರಿಗೆ ಬಡವರ ಅಳಲು ಕೇಳುತ್ತಿಲ್ಲ. ಹಾಗಿದ್ದರೂ ನಮ್ಮ ಸಮಾಜದ ಸಾಕ್ಷಿಪ್ರeಯಂತಿದ್ದ, ಕಡೆಯ ಆಶಾಕಿರಣದಂತಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನೂ ಉಳಿಸಿಕೊಳ್ಳದೇ ಹೋದೆವಾ ನಾವು? ನಮ್ಮ ವ್ಯವಸ್ಥೆಗಂತೂ ಅದಕ್ಕಂಟಿರುವ ಭ್ರಷ್ಟಾಚಾರದ ಕೊಳೆಯನ್ನು ತೊಳೆಯುವವರು ಬೇಕಿಲ್ಲ. ನಮಗೂ ಬೇಡವಾ? ಸಂತೋಷ್ ಹೆಗ್ಡೆಯವರು ರಾಜೀನಾಮೆ ನೀಡಿ 60 ಗಂಟೆಗಳು ಕಳೆದು ಹೋದರೂ ನಮ್ಮ ಸಮಾಜವೇಕೆ ಕುಪಿತಗೊಂಡಿಲ್ಲ, ಎದ್ದು ಪ್ರತಿಭಟಿಸುತ್ತಿಲ್ಲ? ಅಷ್ಟು ಜಡಗೊಂಡು ಬಿಟ್ಟಿದೆಯೇ ಈ ಸಮಾಜ? ‘ಘೋಷ’ದ ಬಗ್ಗೆ ಬರೆದರೆ ಬೆಳಗಾಗುವಷ್ಟರಲ್ಲಿ ಪೇಟೆ-ಪಟ್ಟಣಗಳಲ್ಲಿ ಕೋಮು ಗಲಭೆ ಆರಂಭವಾಗುತ್ತದೆ, ರಸ್ತೆಯಲ್ಲಿ ಹೋಗುವ ಅಮಾಯಕರಿಗೆ ಚೂರಿ ಹಾಕುತ್ತಾರೆ, ‘ಆನುದೇವ..’ ಕೃತಿ ಬಂದಾಗ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆಯಾಗುತ್ತದೆ, ಗೋಹತ್ಯೆ ನೀಷೇಧ ಮಾಡುತ್ತೇವೆ ಎಂದಾಗ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ದನದ ಮಾಂಸ ಬೇಯಿಸಿ ತಿಂದು ಪ್ರತಿಭಟಿಸುತ್ತಾರೆ, ಪ್ರೆಸ್‌ಮೀಟ್, ಸೆಮಿನಾರ್ ನಡೆಯುತ್ತವೆ. ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಭ್ರಷ್ಟ ವ್ಯವಸ್ಥೆ ಹೊಸಕಿ ಹಾಕಲು ಹೊರಟರೆ ನಮ್ಮ ಆತ್ಮಸಾಕ್ಷಿ ಏಕೆ ಘಾಸಿಗೊಂಡು ಪ್ರತಿಭಟನೆಗೆ ಮುಂದಾಗುವುದಿಲ್ಲ? ಮಹಿಳೆಯರು ಹೆಗಲಿಗೆ ವ್ಯಾನಿಟಿ ಬ್ಯಾಗು ನೇತುಹಾಕಿಕೊಂಡು ಎಂದಿನಂತೆ ಕಚೇರಿಗೆ ತೆರಳುತ್ತಾರೆ, ಗಂಡಸರು ಒಂದು ಕೈಯಲ್ಲಿ ಕಾಫಿ-ಟೀ, ಇನ್ನೊಂದು ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಟೈಮ್‌ಪಾಸ್ ಎಂಬಂತೆ ಕಳ್ಳರು, ಸುಳ್ಳರು, ಖದೀಮರು ಎಂಬಿತ್ಯಾದಿ ಬೈಗುಳಗಳನ್ನು ಉಗಿದು ಮುಂದಿನ ಕೆಲಸಕ್ಕೆ ತೆರಳುತ್ತಾರೆ. ಹಾಗಾದರೆ ಪ್ರತಿಭಟಿಸುವವರು ಯಾರು? ನಿಮ್ಮನ್ನು ಬಡಿದೆಬ್ಬಿಸಲು ಇನ್ನೆಷ್ಟು ಸಂತೋಷ್ ಹೆಗ್ಡೆಗಳು ರಾಜೀನಾಮೆ ಕೊಡಬೇಕು? ಅಂತಹ ಕಟ್ಟಾ ಪ್ರಾಮಾಣಿಕ ವ್ಯಕ್ತಿಯನ್ನೇ ಉಳಿಸಿಕೊಳ್ಳದ ಸಮಾಜದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸ್ಥಾಪಿತ ವ್ಯವಸ್ಥೆಯ ವಿರುದ್ಧ ಈಜಲು ಹೊರಟವರನ್ನು, ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ಮುಂದಾದವರನ್ನು ರಕ್ಷಿಸಿಕೊಳ್ಳಬೇಕಾದುದು ಯಾರು? ಲೋಕಾಯುಕ್ತ ಸಂತೋಷ್ ಹೆಗ್ಡೆ, ಆರ್. ಕೆ. ದತ್ತ, ಮಧುಕರ ಶೆಟ್ಟಿ, ಹರೀಶ್ ಗೌಡ, ಡಿ.ವಿ. ಶೈಲೇಂದ್ರ ಕುಮಾರ್ ಮುಂತಾದವರನ್ನು ಉಳಿಸಿಕೊಳ್ಳದೇ ಹೋದರೆ ಕೊನೆಗೆ ಯಾರು ಉಳಿಯುತ್ತಾರೆ?

“ಯಾವುದೋ ರಾಜಕೀಯ ಪ್ರಭಾವದಿಂದ ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದಾರೆ ಎಂದು ನನಗೆ ಬಲವಾಗಿ ಅನಿಸುತ್ತಿದೆ. ವಿರೋಧ ಪಕ್ಷದ ನಾಯಕನಂತೆ ಅವರು ಮಾತನಾಡಿದ್ದನ್ನು ನೋಡಿ ದರೆ ಇದು ಗೊತ್ತಾಗುತ್ತದೆ”

ಹಾಗೆಂದು ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಎಂತಹ ದರ್ಪ, ಧಾರ್ಷ್ಟ್ಯದ ಮಾತಿದು ನೋಡಿ? ಪ್ರಾಮಾಣಿಕತೆಗೆ ಮತ್ತೊಂದು ಹೆಸರಿನಂತಿರುವ ಸಂತೋಷ್ ಹೆಗ್ಡೆಯವರ ಬಗ್ಗೆ ಮಾತನಾಡುವುದಕ್ಕೂ ಒಂದು ಯೋಗ್ಯತೆ ಬೇಕು. ಅಂಥದ್ದರಲ್ಲಿ ಈಶ್ವರಪ್ಪನವರು ಹೀಗೆ ಲಜ್ಜೆಗೆಟ್ಟು ಮಾತನಾಡಲು ಅವರಿಗೆ ಧೈರ್ಯ ಕೊಟ್ಟಿದ್ದು ಹೋರಾಟಕ್ಕೆ ಬೆನ್ನು ತೋರಿಸುವ ನಮ್ಮ ಮನಃಸ್ಥಿತಿಯೇ ಅಲ್ಲವೆ? ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಿಗೇ ಇಂತಹ ಪರಿಸ್ಥಿತಿ ಎದುರಾಗುವುದಾದರೆ ಸಾಮಾನ್ಯ ವ್ಯಕ್ತಿಯ ಗತಿಯೇನು? ಈ ಸರಕಾರ ಯಾರ ರಕ್ಷಣೆಗೆ ನಿಂತಿದೆ? ಲಂಚ ತೆಗೆದುಕೊಳ್ಳುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡ ಕೆ.ಜಿ.ಎಫ್. ಶಾಸಕ ಸಂಪಂಗಿಗೆ ಸದನ ಸಮಿತಿಯೇ ‘ಕ್ಲೀನ್ ಚಿಟ್’(ಶುದ್ಧಹಸ್ತ) ಕೊಡುತ್ತದೆಂದರೆ ಈ ಸಮಾಜದಲ್ಲಿ ಯಾರಿಗೆ ಕಾಲವಿದೆ? ಕಾಂಗ್ರೆಸ್‌ನವರೋ, ಜೆಡಿಎಸ್‌ನವರೋ ಹೀಗೆ ಮಾಡಿದ್ದರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ಆದರೆ ಸಭೆ, ಸಮಾರಂಭ, ಬೈಠಕ್‌ಗಳಲ್ಲಿ, “ಶ್ರದ್ಧೆಯ ತಾಯಂದಿರೇ…, ಮಾತೆಯರೇ….” ಎಂದು ಭಾಷಣ ಆರಂಭಿಸುವ, ಶಿವಾಜಿ ಮಹಾರಾಜ್, ರಾಣಾ ಪ್ರತಾಪ್, ಸಾವರ್ಕರ್ ಕಥೆ ಹೇಳಿ ಮರುಳು ಮಾಡುವ, ಭಾರತ ಮಾತೆಯ ಗೌರವ ರಕ್ಷಣೆಯ ಹೆಸರಲ್ಲಿ ವೋಟು ಕೇಳುವ ಬಿಜೆಪಿಯವರೇ ಹೀಗೆ ಮಾಡಿದರೆ ಜನ ಯಾರ ಮೇಲೆ ವಿಶ್ವಾಸ, ಭರವಸೆಯನ್ನಿಡಬೇಕು?

ಅಷ್ಟಕ್ಕೂ ಲೋಕಾಯುಕ್ತರು ಈಡೇರಿಸಲಾರದ ಯಾವ ಬೇಡಿಕೆ ಯನ್ನಿಟ್ಟಿದ್ದರು?

1. ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿಹಾಕಿಕೊಂಡ ಅಧಿಕಾರಿ ಗಳನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು.

2. ಮುಂದೆ ಮರು ನೇಮಕ ಮಾಡುವುದಾದರೂ ಲೋಕಾಯುಕ್ತದ ಗಮನಕ್ಕೆ ತರಬೇಕು.

3. ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳಲು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು.

4. ಲೋಕಾಯುಕ್ತ ಅಧಿಕಾರಿಗಳಿಗೆ ಹೆಚ್ಚಿನ ಸಂಬಳ ಸವಲತ್ತು ನೀಡಬೇಕು.

ಇವುಗಳಲ್ಲಿ ಈಡೇರಿಸಲು ಸಾಧ್ಯವಿಲ್ಲ ಎನ್ನುವಂಥದ್ದೇನಿದೆ? ಸರಕಾರ ಮಾಡಿದ್ದೇನು? ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಬೆಸ್ಕಾಂ ಅಧಿಕಾರಿ ಬಿಸ್ಸೇಗೌಡ ಹಾಗೂ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಮತ್ತೆ ಅದೇ ಹುದ್ದೆಗೆ ನೇಮಕ ಮಾಡಿದರೆ ಲೋಕಾಯುಕ್ತದ ಆತ್ಮಸ್ಥೈರ್ಯ ಏನಾಗಬೇಕು? ಇನ್ನು ಉಪಲೋಕಾ ಯುಕ್ತರ ನೇಮಕ ವಿಚಾರಕ್ಕೆ ಬನ್ನಿ. ಆ ಹುದ್ದೆಯನ್ನು ಭರ್ತಿ ಮಾಡಲು 6 ತಿಂಗಳು ಬೇಕಾ? ಅದನ್ನು ಅಲಂಕರಿಸುವ ಯೋಗ್ಯತೆ ಈ ರಾಜ್ಯದಲ್ಲಿ ಯಾರಿಗೂ ಇಲ್ಲವೆ? ಲೋಕಾಯುಕ್ತಕ್ಕೆ ಬರುವವರಲ್ಲಿ ಹೆಚ್ಚಿನವರು ಪ್ರಾಮಾಣಿಕ ಅಧಿಕಾರಿಗಳೇ ಆಗಿರುತ್ತಾರೆ. ಅವರಿಗೆ ಹೆಚ್ಚಿನ ಸಂಬಳ ಸವಲತ್ತು ನೀಡುವುದಕ್ಕೂ ಮೀನ-ಮೇಷ ಎಣಿಸಬೇಕೆ? ಇದಿಷ್ಟೇ ಅಲ್ಲ, ಲಂಚ ಸ್ವೀಕರಿಸಿ ಸಿಕ್ಕಿಬಿದ್ದವರನ್ನು ಪುನಃ ಅದೇ ಹುದ್ದೆಗೆ ನೇಮಕ ಮಾಡುವ ಜತೆಗೆ ಕಳ್ಳರನ್ನು ಹಿಡಿದ ಅಧಿಕಾರಿಗಳಿಗೆ ಅಮಾನತ್ತಿನ ಬಳುವಳಿ ನೀಡುತ್ತಿದೆ ಈ ಸರಕಾರ!

ಬಹುಶಃ ಆರ್. ಗೋಕುಲ್ ಹೆಸರನ್ನು ನೀವು ಇದಕ್ಕೂ ಮೊದಲೇ ಕೇಳಿರುತ್ತೀರಿ. ಕಾವೇರಿ ಎಂಪೋರಿಯಂ ಬೆಂಕಿ ಪ್ರಕರಣದ ಹಿಂದೆ ಅಡಗಿದ್ದ ಪಿತೂರಿ, ಅವ್ಯವಹಾರ ಹಾಗೂ ಭ್ರಷ್ಟಾಚಾರವನ್ನು ಬೆಳಕಿಗೆ ತಂದ ದಕ್ಷ ಅಧಿಕಾರಿ ಅವರು. ಈ ಸರಕಾರಕ್ಕೆ ಪ್ರಾಮಾಣಿಕರು, ದಕ್ಷರು ಅಂದರೆ ವರ್ಜ್ಯ. ಹಾಗಾಗಿ ಗೋಕುಲ್ ಅವರನ್ನು ಎತ್ತಂಗಡಿ ಮಾಡಿ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ(ಡಿಸಿಎಫ್) ಕಳುಹಿಸಿದರು. ಒಳ್ಳೆಯ ಕೆಲಸ ಮಾಡಬೇಕೆಂಬ ಇಚ್ಛೆ ಇರುವವರಿಗೆ ಜಾಗ ಯಾವುದಾದರೇನು? ಬೇಲಿಕೇರಿ ಹಾಗೂ ಕಾರವಾರ ಬಂದರು ಗಳಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಗೋಕುಲ್ ಗಮನಕ್ಕೆ ಬಂತು. ಇದಕ್ಕೂ ಮುನ್ನ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರವಾರ ಬಂದರಿಗೆ ಹೋಗುತ್ತಿದ್ದ 99 ಅದಿರು ಸಾಗಣೆ ಲಾರಿಗಳನ್ನು ಹಿಡಿದು 40 ಗೋಣಿ ಚೀಲದಷ್ಟು ಬೋಗಸ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ಹಾಗೂ ಲೋಕಾಯುಕ್ತದ ಅರಣ್ಯ ಘಟಕದ ಮುಖ್ಯಾಧಿಕಾರಿ ಯು.ವಿ. ಸಿಂಗ್‌ಗೆ  ನೀಡಿದ ಮಾಹಿತಿ ಅವರ ನೆರವಿಗೆ ಬಂತು. ಅವರ ಸಲಹೆಯ ಮೇರೆಗೆ ಅಂಕೋಲಾ ನ್ಯಾಯಾಲಯದ ಮೊರೆ ಹೋದ ಗೋಕುಲ್, ಅಕ್ರಮ ಅದಿರನ್ನು ಮುಟ್ಟುಗೋಲು ಹಾಕಿಕೊಂಡರು. ಅದರ ವಿರುದ್ಧ ಖದೀಮ ಕಂಪನಿಗಳು ಹೈಕೋರ್ಟ್‌ನ ಹಸಿರು ಪೀಠದ ಎದುರು ಮೇಲ್ಮನವಿ ಹಾಕಿದವು. ವಕೀಲರನ್ನು ನೇಮಿಸಿಕೊಂಡು ಹೋರಾಟ ನಡೆಸಿದ ಲೋಕಾಯುಕ್ತಕ್ಕೆ ತಾತ್ಕಾಲಿಕವಾಗಿ ಜಯವೇನೋ ಸಿಕ್ಕಿತು, ಅಷ್ಟರಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ನಾಪತ್ತೆಯಾಗಿತ್ತು! ಈ ಘಟನೆಯ ನಂತರ ಅಕ್ರಮ ಅದಿರು ದಾಸ್ತಾನು ಮಾಡಿದ್ದ 10 ಕಂಪನಿಗಳ ವಿರುದ್ಧ ಗೋಕುಲ್ ಕ್ರಿಮಿನಲ್ ಕೇಸು ಹಾಕಿದರು. ಅದೇ ಸಮಯಕ್ಕೆ,  ೫ ಲಕ್ಷ ಮೆಟ್ರಿಕ್ ಟನ್ ಪತ್ತೆಯಾಗುವುದಕ್ಕೆ ಮೊದಲೇ 35 ಲಕ್ಷ ಮೆಟ್ರಿಕ್ ಟನ್ (2 ಸಾವಿರ ಕೋಟಿ ರೂ. ಮೌಲ್ಯ) ಅದಿರು ಕಾರಾವಾರ ಬಂದರಿನ ಮೂಲಕ ಅಕ್ರಮವಾಗಿ ಸಾಗಣೆಯಾಗಿರುವ ವಿಚಾರ ತಿಳಿದು ಬಂತು. ಈ ನಡುವೆ ಕೋರ್ಟ್ ಕಸ್ಟಡಿಯಲ್ಲಿದ್ದ ೫ ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ಬಂದರು ಸಚಿವ ಕೃಷ್ಣ ಪಾಲೇಮಾರು, ಕಳ್ಳ ಕಂಪನಿಗಳ ಸಭೆ ಕರೆದರು. ಅದಕ್ಕೆ ಗೋಕುಲ್ ಹಾಜರಾಗಲಿಲ್ಲ. ಅವರು 35 ಲಕ್ಷ ಮೆಟ್ರಿಕ್ ಟನ್ ಕಳ್ಳಸಾಗಣೆ ಯಾಗಿರುವುದಕ್ಕೆ ಸಂಬಂಧಪಟ್ಟಂತೆ ದಾಖಲೆ ಕಲೆಹಾಕುವ ಕೆಲಸ ಮಾಡುತ್ತಿದ್ದರು. ಆನಂತರ ಬೆಂಗಳೂರಿಗೆ ಆಗಮಿಸಿದ ಗೋಕುಲ್, ಆಡಳಿತ ಸುಧಾರಣೆ ಮತ್ತು ಒಳಾಡಳಿತ ವಿಭಾಗದ ಮುಖ್ಯಸ್ಥೆ ಮೀರಾ ಸಕ್ಸೇನಾ ಬಳಿಗೆ ಹೋಗಿ, ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಕೋರ್ಟ್ ಮುಂದಿಡಲು ಮತ್ತೊಬ್ಬ ವಕೀಲರನ್ನು ಕೊಡಿ ಎಂದು ಮನವಿ ಮಾಡಿಕೊಂಡರು. ಆಗ ಆಕೆ ಬಾಯ್ಬಿಟ್ಟರು. ದಾಖಲೆ ಕೊಡುವ ಮಾತು ಹಾಗಿರಲಿ, ನಿಮ್ಮನ್ನೇ ಸಸ್ಪೆಂಡ್ ಮಾಡಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರಿಂದ ಶಿಫಾರಸು ಬಂದಿದೆ. ಇನ್ನೇನು ಆದೇಶ ಜಾರಿಯಾಗುತ್ತದೆ ಎಂಬ ಡ್ರಾಫ್ಟ್ ತೋರಿಸಿದರು! ‘ನಾನು ಕರೆದಿದ್ದ ಸಭೆಗೆ ಗೋಕುಲ್ ಆಗಮಿಸದೇ ಇದ್ದಿದ್ದು ಅವರು ಕಳ್ಳ ಕಂಪನಿಗಳ ಜತೆ ಶಾಮೀಲಾಗಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಸಚಿವ ಕೃಷ್ಣ ಪಾಲೇಮಾರು ಕಾರಣ ನೀಡಿದ್ದರು!! ಅಲ್ಲಾ, ಇವರೇನು ಬಂದರು ಸಚಿವರೋ? ಅಥವಾ ‘ಬಂದರು ಕಳ್ಳಸಾಗಣೆ’ ಸಚಿವರೋ? ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನೇ ಭ್ರಷ್ಟ ಎಂದು ಹೇಳುತ್ತಾರಲ್ಲಾ ಸ್ವಾಮಿ, ಇವರಿಗೆ ಏನು ಮಾಡಬೇಕು?

ಈ ವಿಷಯವನ್ನು ಗೋಕುಲ್, ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಗಮನಕ್ಕೆ ತಂದ ನಂತರವೇ ಅವರು ನೊಂದುಕೊಂಡು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದು. ನನ್ನ ಅಧಿಕಾರಿಗಳ ರಕ್ಷಣೆ ಅಸಾಧ್ಯವಾದಾಗ ಜನತೆಗೆ ನನ್ನಿಂದ ಯಾವ ನ್ಯಾಯ ನೀಡಲು ಸಾಧ್ಯ? ಎಂಬ ಲೋಕಾಯುಕ್ತರ ಪ್ರಶ್ನೆಯ ಹಿಂದಿರುವ ಹತಾಶೆ ಹಾಗೂ ಆಳುವ ಬಿಜೆಪಿ ಸರಕಾರದ ಒಟ್ಟು ಧೋರಣೆಯನ್ನು ಅರ್ಥಮಾಡಿಕೊಳ್ಳಿ. ಇದೇ ಬಿಜೆಪಿ 2008 ಮೇ.ನಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೊರಡಿಸಿದ್ದ ‘ಪ್ರಣಾಳಿಕೆ’ಯ 14ನೇ ಪುಟದಲ್ಲಿ ಹೇಳಿದ್ದಿದ್ದೇನು ಗೊತ್ತೆ?

1. ಆಡಳಿತದಲ್ಲಿ ದಕ್ಷತೆ ತರಲು, ಚುರುಕು ಮೂಡಿಸಲು, ಭ್ರಷ್ಟಾಚಾರ ನಿಗ್ರಹಕ್ಕೆ ನಾನಾ ಕ್ರಮ ತೆಗೆದುಕೊಳ್ಳಲಾಗುವುದು.

2. ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಲಾಗುವುದು.

ಹೀಗೆಲ್ಲ ಹೇಳಿ ಅಧಿಕಾರಕ್ಕೆ ಬಂದವರು 2 ವರ್ಷ ಕಳೆದರೂ ಮಾಡಿದ್ದೇನು? ಲೋಕಾ ಯುಕ್ತಕ್ಕೆ ಪರಮಾಧಿಕಾರ ಕೊಡುವುದು ಹಾಗಿರಲಿ, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದವರಿಗೇ ಅಮಾನತ್ತಿನ ಕೊಡುಗೆ ನೀಡಲು ಮುಂದಾಗಿದ್ದು ಯಾವ ನೈತಿಕತೆ ಹೇಳಿ ಯಡಿಯೂರಪ್ಪನವರೇ? ಲೋಕಾಯುಕ್ತರ ರಾಜೀನಾಮೆ ‘ದುರದೃಷ್ಟಕರ’, ‘ಅನಿರೀಕ್ಷಿತ’ ಎಂದು ಮುಖ್ಯಮಂತ್ರಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ವಾಪಸ್ ತೆಗೆದುಕೊಳ್ಳಿ ಎಂಬ ಮಾತು ಬರುತ್ತಿಲ್ಲ! ಎರಡು ವರ್ಷಗಳ ಸಾಧನಾ ಸಮಾವೇಶದ ಪ್ರಯುಕ್ತ ಮೊನ್ನೆ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ವೇಳೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಲೋಕಾಯುಕ್ತರಿಗೆ ಮನವಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, “ಹಾಗೆ ಹೇಳುವ ಮೂಲಕ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಿಗೆ ಮುಜುಗರವನ್ನುಂಟು ಮಾಡಲು ನನಗೆ ಇಷ್ಟವಿಲ್ಲ” ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾ ಸಾತ್ವಿಕ ಮನುಷ್ಯನಂತೆ ಹೇಳಿದ್ದಾರೆ. ರಾಜೀನಾಮೆ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡುವುದು ಸಂತೋಷ್ ಹೆಗ್ಡೆಯವರಿಗೆ ಯಾವ ರೀತಿ ಮುಜುಗರವನ್ನುಂಟು ಮಾಡಲು ಸಾಧ್ಯ ಹೇಳಿ?

ಈ ಸರಕಾರದಲ್ಲಿ ಯಾರಿಗೆ ಆಶ್ರಯ, ಅಭಯ ಸಿಗುತ್ತಿದೆ?

ಬೇಲಿಕೇರಿಯಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅಕ್ರಮ ಅದಿರು ದಾಸ್ತಾನು ಮಾಡಿದ್ದ 10 ಕಂಪನಿಗಳೂ ಬೋಗಸ್ ಡಾಕ್ಯುಮೆಂಟ್ ಹೊಂದಿದ್ದ ಬೇನಾಮಿ ಕಂಪನಿಗಳು. ಅವು ಯಾರದ್ದೆಂದು ಬಿಡಿಸಿ ಹೇಳಬೇಕಾದ ಅಗತ್ಯವಿದೆಯೇ?! ಹಾಲಪ್ಪ, ರೇಣುಕಾಚಾರ್ಯ, ಬಳ್ಳಾರಿಯ ಕಳ್ಳ ಸಹೋದರರು… ಹೀಗೆ ಯಾರು ಮುಖಮುಚ್ಚಿಕೊಂಡು ಓಡಾಡ ಬೇಕಿತ್ತೋ ಅವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ರೈಡ್ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿಯ ಎಸ್ಪಿ ನಿಂಬಾಳ್ಕರ್ ಮೇಲೆ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಕ್ಕೆ ಆತ ಸಂತೋಷ್ ಹೆಗ್ಡೆಯವರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅನುಮಾನಾಸ್ಪದವಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡ ಬೆಂಗಳೂರು ಕಾರ್ಪೊರೇಶನ್ ಕಮಿಷನರ್ ಆಗಿದ್ದ ಸುಬ್ರಹ್ಮಣ್ಯ ಅವರ ಆಪ್ತ ಕಾರ್ಯದರ್ಶಿ ಮೇಲೆ ದಾಳಿ ಮಾಡಿ, ಅಕ್ರಮ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಾಗ ಸುಬ್ರಹ್ಮಣ್ಯ ಕೂಡ ಲೋಕಾಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಡಿ ಎಂದು ಕೇಳಿದರೆ ತಪ್ಪೇನು? ಅದು ಭ್ರಷ್ಟಾಚಾರವಿರಬಹುದು, ಮೈನಿಂಗ್ ಮಾಫಿಯಾ ಆಗಿರಬಹುದು. ಇವುಗಳ ವಿರುದ್ಧ ಸಂತೋಷ್ ಹೆಗ್ಡೆಯವರು ಸಮರ ಸಾರಿರುವುದು ವೈಯಕ್ತಿಕ ಹಿತಾಸಕ್ತಿಯಿಂದೇನು? ಭಾರತ ಮಾತೆ ಎಂದು ಬಾಯಲ್ಲಿ ಹೇಳುತ್ತಾ, ಭೂಮಿಯನ್ನೇ ಅಗೆದು ಚೀನಾಕ್ಕೆ ಕಳುಹಿಸುತ್ತಿದ್ದಾರಲ್ಲಾ….ಇವರ ವಿರುದ್ಧ ಸಮರ ಸಾರಿದ್ದು ತಪ್ಪಾ?

ಸಂತೋಷ್ ಹೆಗ್ಡೆ  ಲೋಕಾಯುಕ್ತರಾಗಿ ನೇಮಕ ಗೊಂಡಾಗ ಇದ್ದಿದ್ದು 1 ಅಪಾರ್ಟ್‌ಮೆಂಟ್, 1 ಕಾರು, ಒಂದಿಷ್ಟು ಬ್ಯಾಂಕ್ ಬ್ಯಾಲೆನ್ಸ್. ಅದನ್ನು ವೈಬ್‌ಸೈಟ್‌ನಲ್ಲೇ ಪ್ರಕಟ ಮಾಡಿದ್ದರು. ಈಗಲೂ ಅಷ್ಟೇ ಇದೆ. ಜನರಿಗೆ ಒಳ್ಳೆಯದನ್ನು ಮಾಡುವುದಕ್ಕಾಗದೇ, ಬರೀ ಸರಕಾರಿ ಬಂಗಲೆ, ಕಾರು, ಸಂಬಳಕ್ಕಾಗಿ ನಾನು ಹುದ್ದೆಯಲ್ಲಿ ಮುಂದುವರಿಯಬೇಕೇ ಎಂಬ ಅವರ ಪ್ರಶ್ನೆಯೇ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಇಂಥವರನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಿಲ್ಲವೆ? ನಮ್ಮ ಜನರಿಗೆ ಯಾಕಿಷ್ಟು ಜಡತ್ವ?ಇದುವರೆಗೂ ಲೋಕಾಯುಕ್ತ ಸಂತೋಷ್ ಹೆಗ್ಡೆ ಇದ್ದರು. ಇವತ್ತು ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಜಯರಾಮ್ ಅವರ ಕಣ್ಣಿನ ಪೊರೆಯ ಆಪರೇಶನ್ ಆಗುತ್ತದೆ. ಆಪರೇಶನ್ ಆದ ಮೇಲೆ ದುಡ್ಡು ಕೇಳಿದರೆ ಯಾರ ಮೊರೆ ಹೋಗಬೇಕು?! ತತ್ತ್ವಾದರ್ಶದ ಶ್ರಾದ್ಧ ನೋಡಿಕೊಂಡು ಸುಮ್ಮನಿರಬೇಕಾ?  ನಿಮ್ಮನ್ನು ತಾಯಿ ಎಂದು ಸಂಬೋಧಿಸುವ, ನಿಮ್ಮನ್ನು ಮರಳು ಮಾಡಿ ವೋಟು ಗಿಟ್ಟಿಸಿಕೊಂಡ ಬಿಜೆಪಿಯವರು ಏನು ಮಾಡುತ್ತಿದ್ದಾರೆ?

ನೀವೇ ಹೇಳಿ, ಶ್ರದ್ಧೆಯ ತಾಯಂದಿರೇ, ಮಾತೆಯರೇ….

ಹದಿನಾರು ಪರ್ಸೆಂಟ್‌ಗೇ ಇಷ್ಟು ಹೆದರುವುದಾದರೆ…?
ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅದರಲ್ಲಿ ಎನ್‌ಡಿಎ ಬಲಾಬಲ 143. ಎನ್‌ಡಿಎ ಅನ್ನು ಒಡೆದು ನೋಡಿದರೆ ಜೆಡಿಯು ಪಾಲು 88 ಹಾಗೂ ಬಿಜೆಪಿ ಸಂಖ್ಯೆ 55. 2005ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಬಳಿ 54 ಶಾಸಕರಿದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕತಾಂತ್ರಿಕ ಜನತಾ ಪಾರ್ಟಿಗೆ ಸಿಕ್ಕಿದ್ದು ಕೇವಲ 10 ಸೀಟುಗಳು!  ಲಾಲು ಹಾಗೂ ಪಾಸ್ವಾನ್ ಅವರಂತೂ ನಿತೀಶ್ ಕುಮಾರ್ ಅವರ ಬದ್ಧವೈರಿಗಳು. ಹೀಗಾಗಿ ಯಾವುದೇ ದೃಷ್ಟಿಯಲ್ಲಿ ನೋಡಿದರೂ  ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದೇ, ಇಂದಿಗೂ ಅಧಿಕಾರದಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿರುವುದೇ ಬಿಜೆಪಿಯ 55 ಶಾಸಕರ ಕೃಪೆಯಿಂದ. ಅಂದು ಬಿಜೆಪಿ ಬೆಂಬಲ ಕೊಡದಿದ್ದರೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಲು ಸಾಧ್ಯವಿತ್ತೆ?  ಇಂತಹ ವಾಸ್ತವದ ಹೊರತಾಗಿಯೂ ನಿತೀಶ್ ಕುಮಾರ್ ಉಡಾಫೆಯಿಂದ, ಸೊಕ್ಕಿನಿಂದ ಏಕೆ ವರ್ತಿಸುತ್ತಿದ್ದಾರೆ?

ಕಳೆದ ಶನಿವಾರ, ಭಾನುವಾರ (ಜೂನ್ 12, 13) ಬಿಹಾರದ ರಾಜಧಾನಿ ಪಟನಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಗಳ ಸಭೆ ಆಯೋಜನೆಯಾಗಿತ್ತು. ಅದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ‘ಸ್ವಾಭಿಮಾನ ಯಾತ್ರೆ’ಯನ್ನು ಹಮ್ಮಿಕೊಂಡಿತ್ತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದರು. ಆ ಸಂಬಂಧ ಅಲ್ಲಿನ ಸ್ಥಳೀಯ ಭಾಷಾ ಪತ್ರಿಕೆಗಳಲ್ಲಿ ಸಹಜ ಹಾಗೂ ಸಾಂಪ್ರದಾಯಿಕವಾಗಿ ಜಾಹೀರಾತು ಗಳನ್ನು ನೀಡಲಾಗಿತ್ತು. ೨೦೦೯ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮಿತ್ರಪಕ್ಷ ಅಕಾಲಿದಳ ಪಂಜಾಬ್‌ನ ಲುಧಿಯಾನಾದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಬೃಹತ್ ರ್‍ಯಾಲಿ ಏರ್ಪಡಿಸಿದ್ದ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಖಾಮುಖಿಯಾಗಿದ್ದ ನಿತೀಶ್ ಕುಮಾರ್ ಹಾಗೂ ಮೋದಿ ಪರಸ್ಪರ ಕೈಹಿಡಿದು ಫೋಟೋಕ್ಕೆ ನಗೆ ಚೆಲ್ಲಿದ್ದರು. ಬಿಹಾರದಲ್ಲಿರುವ ಮೋದಿ ಅಭಿಮಾನಿಗಳು ಜೂನ್ 12ರಂದು ನೀಡಿದ ಪತ್ರಿಕಾ ಜಾಹೀರಾತುಗಳಲ್ಲಿ ಆ ಫೋಟೋವನ್ನು ಛಾಪಿಸಿದ್ದರು. 2008ರಲ್ಲಿ ಕೋಸಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಿ ಬಿಹಾರವೇ ಸಂಕಷ್ಟಕ್ಕೀಡಾಗಿದ್ದಾಗ ಗುಜರಾತ್ ನೀಡಿದ್ದ ಧಾರಾಳ ನೆರವಿನ ಬಗ್ಗೆ ಜಾಹೀರಾತಿನಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಬೆಳಗ್ಗೆ ಪತ್ರಿಕೆಗಳನ್ನು ನೋಡಿದ ಕೂಡಲೇ ಕೆಂಡಾಮಂಡಲರಾದ ನಿತೀಶ್ ಕುಮಾರ್, ಎಷ್ಟು ಬಾಲಿಶವಾಗಿ ವರ್ತಿಸಿದರೆಂದರೆ ಜಾಹೀರಾತು ನೀಡಿದ್ದ ಏಜೆನ್ಸಿಯ ಮೇಲೆ ಪೊಲೀಸ್ ದಾಳಿ ಮಾಡಿಸಿದರು. ಮೋದಿ ಜತೆಗಿನ ತಮ್ಮ ಫೋಟೋವನ್ನು ಪ್ರಕಟಿಸಿದ್ದಕ್ಕಾಗಿ ಬಿಜೆಪಿಯ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಕಾರ್ಯಕಾರಿ ಸಭೆಗಾಗಿ ಪಟನಾಕ್ಕೆ ಬಂದಿದ್ದ ಬಿಜೆಪಿ ಹಿರಿಯ ನಾಯಕರಿಗಾಗಿ ಜೂನ್ 12ರ ಸಂಜೆ ಏರ್ಪಡಿಸಿದ್ದ ಔತಣಕೂಟವನ್ನೂ ರದ್ದು ಮಾಡಿದರು!

ಈ ಬಾರಿ ಬಿಜೆಪಿ ತೆಪ್ಪಗೆ ಕುಳಿತುಕೊಳ್ಳಲಿಲ್ಲ.

“ನಾವು ಮೈತ್ರಿಧರ್ಮವನ್ನು ಪಾಲಿಸುತ್ತೇವೆ, ಆದರೆ ಆತ್ಮಗೌರವ ಬಿಟ್ಟಲ್ಲ” ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಗುಡುಗಿದರು. ಆನಂತರ ನಿತೀಶ್ ಕುಮಾರ್ ಸದ್ಯಕ್ಕೆ ತಣ್ಣಗಾಗಿದ್ದಾರೆ. ಆದರೆ ತಮ್ಮನ್ನು ರಾಜಕೀಯವಾಗಿ ಮೇಲೆ ತಂದ ಜಾರ್ಜ್ ಫರ್ನಾಂಡಿಸ್ ಅವರನ್ನೇ ಪಕ್ಷದಿಂದ ಹೊರಹಾಕಿದ, ಶರದ್ ಯಾದವ್‌ರನ್ನು ಮೂಲೆಗುಂಪು ಮಾಡಿದ ಅವರು ಇನ್ನು ಮೂರ್ನಾಲ್ಕು ತಿಂಗಳು ಗಳಲ್ಲಿ ಬಿಜೆಪಿಯಿಂದ ಹೊರನಡೆದರೂ ಆಶ್ಚರ್ಯವಿಲ್ಲ. ಅದೇನೇ ಇರಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಜತೆಗಿನ ತಮ್ಮ ಒಂದು ಫೋಟೋವನ್ನು ಪ್ರಕಟಸಿದ ಮಾತ್ರಕ್ಕೆ  ಇಷ್ಟೆಲ್ಲಾ ರಂಪ ಮಾಡಬೇಕಿತ್ತಾ? ಅದರಲ್ಲಿ ಕುಪಿತಗೊಳ್ಳುವಂಥದ್ದೇ ನಿತ್ತು? ಜಾಹೀರಾತು ಕಂಪನಿ ಮೇಲೆ ದಾಳಿ ಮಾಡಿಸಿದ್ದೇಕೆ? ಅವರೇನಾದರೂ ಮೋದಿ ಮತ್ತು ನಿತೀಶ್ ಕುಮಾರ್ ಅವರ ಪ್ರತ್ಯೇಕ ಫೋಟೋಗಳನ್ನು ಜೋಡಿಸಿ ಪ್ರಕಟಿಸಿದ್ದರೆ? ಅಥವಾ ಅದೇನು ಕಂಪ್ಯೂಟರ್‌ನಲ್ಲಿ morph  ಮಾಡಿದ ಚಿತ್ರವಾಗಿತ್ತೆ? ಲುಧಿಯಾನಾ ರ್‍ಯಾಲಿಯಲ್ಲಿ ನಗುನಗುತ್ತಾ ಫೋಟೋಕ್ಕೆ ಪೋಸು ಕೊಟ್ಟು ಈಗ ಸಿಡುಕುತ್ತಿರುವುದೇಕೆ? ಜನನಾಯಕರ ಫೋಟೋ, ವಿಡಿಯೋಗಳನ್ನು ಯಾರು ಬೇಕಾದರೂ ಮುಕ್ತವಾಗಿ ಉಪಯೋಗಿಸಿಕೊಳ್ಳಬಹುದು. ಹಾಗಿದ್ದರೂ ನಿತೀಶ್ ಏಕಾಗಿ ಕೋಪ-ತಾಪ ವ್ಯಕ್ತಪಡಿಸುತ್ತಿದ್ದಾರೆ? ಕಷ್ಟದ ಸಮಯದಲ್ಲಿ ನೀಡಿದ್ದ ಸಹಾಯವನ್ನು ಹೇಳಿಕೊಳ್ಳುವುದು ಅನಾಗರಿಕತೆ ಎಂದು ಕೋಪದಿಂದ ಹೇಳಿಕೆ ನೀಡಿದ ನಿತೀಶ್ ಮಾಡಿದ್ದೇನು? ಬಿಜೆಪಿ ಸರಕಾರದಲ್ಲಿ ಕೇಂದ್ರ ರೈಲ್ವೆ ಸಚಿವರಾಗುವುದಕ್ಕೆ ಅಡ್ಡಿಯಿಲ್ಲ, ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವು ದಕ್ಕೂ ಅಭ್ಯಂತರವಿಲ್ಲ. ಹೀಗಿದ್ದರೂ ಬಿಜೆಪಿ ನಾಯಕರಿಗಾಗಿ ಏರ್ಪಡಿಸಿದ್ದ ಔತಣಕೂಟವನ್ನು ರದ್ದು ಮಾಡಿದ್ದು ಯಾವ ನಾಗರಿಕತೆ? ನಿತೀಶ್ ಕುಮಾರ್ ಇದೇ ಮೊದಲು ಈ ರೀತಿ ತಗಾದೆ ತೆಗೆದಿಲ್ಲ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಬಿಜೆಪಿ ಅಭ್ಯರ್ಥಿಗಳ ಪರ ಮೋದಿಯವರು ಪ್ರಚಾರಾಂದೋಲನಕ್ಕೆ ಬರ ಕೂಡದು ಎಂದೂ ಷರತ್ತು ಹಾಕಿದ್ದರು. 2001ರಿಂದ 2010, ಜೂನ್ 12ರವರೆಗೂ ಮೋದಿ ಒಮ್ಮೆಯೂ ಬಿಹಾರಕ್ಕೆ ಕಾಲಿಟ್ಟಿರಲಿಲ್ಲ, ಅದಕ್ಕೆ ಅವಕಾಶವನ್ನೂ ಕೊಟ್ಟಿರಲಿಲ್ಲ. ಆಗ ಲಾಲು, ತದನಂತರ ನಿತೀಶ್ ಕುಮಾರ್. ಏಕೆ? ನರೇಂದ್ರ ಮೋದಿ ಎಂದ ಕೂಡಲೇ ಇವರೆಲ್ಲ ಏಕೆ ಬೆಚ್ಚಿಬೀಳುತ್ತಾರೆ? ಏಕಿಂಥ ದಿಗಿಲು? ಕಳೆದ ನಾಲ್ಕೂವರೆ ವರ್ಷದಿಂದ ಬಿಜೆಪಿಯಿಂದಾಗಿ ಅಧಿಕಾರ ಅನುಭವಿಸುತ್ತಾ ಬಂದಿ ರುವ ನಿತೀಶ್‌ಗೆ ಈಗ ‘Sick’ular ಇಮೇಜ್‌ನ ಚಿಂತೆಯೇಕೆ ಆರಂಭವಾಯಿತು?

ಎಲ್ಲ ಹದಿನಾರು ಪರ್ಸೆಂಟ್ ವೋಟಿಗಾಗಿ!

ಬಿಹಾರದಲ್ಲಿ 16 ಪರ್ಸೆಂಟ್ ಮುಸ್ಲಿಂ ಮತದಾರರಿದ್ದಾರೆ. ಆದರೆ ಆ 16 ಪರ್ಸೆಂಟ್‌ಗಾಗಿ ಎಂಥೆಂಥ ರಾಜಕೀಯ ನಡೆಯುತ್ತದೆ ನೋಡಿ? 2004ರ ಲೋಕಸಭೆ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಹೋಲುವ(Look-alike) ಮೌಲಾನಾ ಮೆರಾಜ್ ಖಾಲಿದ್ ನೂರ್ ಎಂಬಾತನನ್ನು ಮುಸ್ಲಿಮರ ಗಲ್ಲಿ ಗಲ್ಲಿಗಳಿಗೆ ಕರೆದು ಹೋಗಿ ಮತಯಾಚನೆ ಮಾಡಿದ್ದರು! ಆನಂತರ ನಡೆದ ಅಸೆಂಬ್ಲಿ ಚುನಾವಣೆ ವೇಳೆ, ‘ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ಬಿಟ್ಟುಕೊಡಬೇಕು’ ಎಂದು ಹೇಳಿಕೆ ನೀಡಿದರು. ಅದರ ಬೆನ್ನಲ್ಲೇ ಮುಸ್ಲಿಮರಿಗೆ ಪ್ರತ್ಯೇಕ ಮೀಸಲು ನೀಡಬೇಕೆಂದು ಒತ್ತಾಯಿಸಿದ್ದರು. “ತಮ್ಮ ಆಡಳಿತವಿರುವವರೆಗೂ ನರೇಂದ್ರ ಮೋದಿ ಬಿಹಾರಕ್ಕೆ ಕಾಲಿಡುವುದಕ್ಕೂ ಅವಕಾಶ ನೀಡುವುದಿಲ್ಲ” ಎಂದು ಲಾಲು ಯಾದವ್ ಬಹಿರಂಗ ಹೇಳಿಕೆ ನೀಡಿದ್ದರು. ಹಾಗೇ ಮಾಡಿ ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ೨೪೩ ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ೯ ಸೀಟು. ಆದರೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೆಹಬೂಬ್ ಅಲಿ ಕೈಸರ್ ಎಂಬವರನ್ನು ತಂದು ಕೂರಿಸಿದೆ.

ಹದಿನಾರು ಪರ್ಸೆಂಟ್ ವೋಟಿನ ಮಹಿಮೆ ಸ್ವಾಮಿ!!

ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಣ್ಣಿಗೆ ದೊಡ್ಡದಾಗಿ ಕಾಣುತ್ತಿರುವುದೂ ಅದೇ 16 ಪರ್ಸೆಂಟ್. ಇನ್ನೈದು ತಿಂಗಳಲ್ಲಿ ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದರೆ ಪ್ರಶ್ನೆಯೇನೆಂದರೆ ಕೇವಲ 16 ಪರ್ಸೆಂಟ್ ವೋಟುಗಳಿಗಾಗಿ ಲಾಲು, ಪಾಸ್ವಾನ್, ನಿತೀಶ್ ಏಕೆ ಒಬ್ಬರ ಮೇಲೆ ಒಬ್ಬರು ಮುಗಿ ಬೀಳುತ್ತಾರೆ? ಬಿಹಾರದಲ್ಲಿ ಮುಸ್ಲಿಮರನ್ನು ಬಿಟ್ಟರೆ ಯಾರೂ ಮತದಾರರೇ ಇಲ್ಲವೆ? ಇದು ಯಾವುದೋ ಒಂದು ರಾಜ್ಯದ, ಪಕ್ಷದ ಕಥೆಯಲ್ಲ, ದೇಶದ ಎಲ್ಲ ಕಡೆಗಳಲ್ಲೂ, ರಾಜಕಾರಣಿಗಳಲ್ಲೂ ಕಾಣುತ್ತಿರುವ ಜಾಡ್ಯದ ವ್ಯಥೆ. ಈ ದೇಶದ ಸಂಪನ್ಮೂಲದ ಮೇಲೆ ಮುಸ್ಲಿಮರಿಗೇ ಮೊದಲ ಹಕ್ಕು ಎನ್ನುತ್ತಾರೆ ಪ್ರಧಾನಿ ಮನಮೋಹನ್ ಸಿಂಗ್. ಮುಂದಿನ ಜನ್ಮವಿದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಘೋಷಿಸುತ್ತಾರೆ ಮಾಜಿ ಪ್ರಧಾನಿ ದೇವೇಗೌಡ. ಈ ದೇಶದಲ್ಲಿ ಮುಸ್ಲಿಮರನ್ನು ಬಿಟ್ಟರೆ ಬೇರಾರೂ ಇಲ್ಲವೆ?

ಏಕಿಂಥ ತುಷ್ಟೀಕರಣ?

ಮುಸ್ಲಿಮರ ಒಂದು ವೈಶಿಷ್ಟ್ಯವೇನೆಂದರೆ ಅವರು unifocal ಆಗಿ, ಅಂದರೆ ಒಟ್ಟಾಗಿ ಒಂದೇ ಪಕ್ಷ, ಅಭ್ಯರ್ಥಿಗೆ ವೋಟು ಕೊಡುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ, ಮುಸ್ಲಿಮರನ್ನು ಸೆಳೆದುಕೊಂಡರೆ ಅವರ ಸಂಪೂರ್ಣ ಮತಗಳು ಬುಟ್ಟಿಗೆ ಬಿದ್ದಂತೆ. ಹಿಂದೂಗಳಂತೂ ಒಟ್ಟಾಗಿ ಮತಹಾಕುವವರಲ್ಲ. ಅಂತಹ ಅಯೋಧ್ಯಾ ಚಳವಳಿಗೇ ಹಿಂದೂಗಳನ್ನು ಸರಿಯಾಗಿ ಧ್ರುವೀಕರಣ ಗೊಳಿಸಲು ಸಾಧ್ಯವಾಗಲಿಲ್ಲ. ಹಾಗಿರುವಾಗ ಮುಸ್ಲಿಮರ ಮತಗಳ ಜತೆಗೆ ಜಾತಿ ಮತ ಗಳನ್ನು ಸೆಳೆದುಕೊಂಡರೆ ಗೆಲುವು ಖಚಿತ ಎಂಬ ಭಾವನೆ ನೆಲೆಗೊಂಡಿದೆ. ಮುಸ್ಲಿಮರನ್ನು ಸೆಳೆದುಕೊಳ್ಳಬೇಕೆಂದರೆ ಅವರ ಮುಂದೆ ಸೈತಾನನೊಬ್ಬನನ್ನು ಸೃಷ್ಟಿಸಬೇಕು. ದುರದೃಷ್ಟವಶಾತ್, ನರೇಂದ್ರ ಮೋದಿ ಇಂಥದ್ದೊಂದು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರೆ ಅಷ್ಟೇ. ನಿತೀಶ್ ಕುಮಾರ್ ಕೋಪಿಸಿಕೊಂಡಿರುವುದರ ಹಿಂದೆಯೂ ಇಂಥದ್ದೇ ಲೆಕ್ಕಾಚಾರವಿದೆ. ಆದರೆ ಮೋದಿ ನಿಜಕ್ಕೂ ಸೈತಾನರಾ? 2002ರಲ್ಲಿ ಗಲಭೆ, ಹಿಂಸಾಚಾರ ನಡೆದಿರಬಹುದು. ಆದರೆ ಆನಂತರ ಯಾವ ಪರಿಸ್ಥಿತಿ ಸೃಷ್ಟಿಯಾಗಿದೆ? ಅಂತಹ ರಾಜೇಂದ್ರ ಸಾಚಾರ್ ಸಮಿತಿಯೇ, ನರೇಂದ್ರ ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತ್‌ನಲ್ಲಿ ಮುಸ್ಲಿಮರ ಸ್ಥಿತಿಗತಿಯಲ್ಲಿ ಪ್ರಗತಿಯಾಗಿದೆ ಎಂದು ಅಂಕಿ-ಅಂಶ ಸಮೇತ ವರದಿ ನೀಡಿದೆ. ಆದರೂ ಮೋದಿಯವರನ್ನು ಏಕೆ ಮುಸ್ಲಿಮರ ಶತ್ರು ಎಂಬಂತೆ ಚಿತ್ರಿಸುತ್ತಾರೆ? ಮೋದಿಯೆಂದರೆ ಏಕೆ ಎಲ್ಲರೂ ಭಯಭೀತರಾಗುತ್ತಾರೆ?

ಇಂಥದ್ದೊಂದು ಭಯವನ್ನು ಸೃಷ್ಟಿಸಿರುವುದೇ ಮಾಧ್ಯಮಗಳು. 1. ನರೇಂದ್ರ ಮೋದಿಯೆಂದರೆ ಮುಸ್ಲಿಂ ವಿರೋಧಿ ಹಾಗೂ ಅವರೇ ನಾದರೂ ಪ್ರಧಾನಿಯಾದರೆ ಮುಸ್ಲಿಮರಿಗೆ ಅಪಾಯ. 2. ನರೇಂದ್ರ ಮೋದಿಯವರವನ್ನು ಮುಸ್ಲಿಮರೆಂದೂ ಒಪ್ಪಿಕೊಳ್ಳುವುದಿಲ್ಲ. 3. ನರೇಂದ್ರ ಮೋದಿ ಜತೆ ಕೈಜೋಡಿಸಿದರೆ ಮುಸ್ಲಿಮರು ಕುಪಿತ ಗೊಳ್ಳುತ್ತಾರೆ. ಈ ರೀತಿ ಭಯಗಳನ್ನು ಸೃಷ್ಟಿಸುತ್ತಾ ಬಂದಿರುವ ಮಾಧ್ಯಮಗಳು, ಕಳೆದ ೮ ವರ್ಷಗಳಲ್ಲಿ ಮೋದಿಯವರನ್ನು ತುಳಿ ಯಲು ಎಂಥೆಂಥ ಪ್ರಯತ್ನ ಮಾಡಿವೆ ಗೊತ್ತಾ? ೨೦೧೦, ಮಾರ್ಚ್ ೪ರಂದು ಸಂಜೆ ಎನ್‌ಡಿಟಿವಿಯಲ್ಲಿ ಪ್ರಸಾರವಾದ ಸುದ್ದಿಯ ಶೀರ್ಷಿಕೆ ಹೇಗಿತ್ತು ಅಂತಿರಾ?

“”Modi Godman Sex Scandal”

ಆ ದಿನ ಸ್ವಾಮಿ ನಿತ್ಯಾನಂದ ಅವರ ಸೆಕ್ಸ್ ಹಗರಣ ಬಹಿರಂಗವಾಗಿತ್ತು. ಹಿಂದೊಮ್ಮೆ ನಿತ್ಯಾನಂದ ಹಾಗೂ ಮೋದಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದರು. ಆ ಸಂದರ್ಭ ದಲ್ಲಿ ನಿತ್ಯಾನಂದ ಹೆಣ್ಣುಮಕ್ಕಳ ಶಿಕ್ಷಣ ಯೋಜನೆಗೆ 4 ಲಕ್ಷ ರೂ. ದೇಣಿಗೆ ನೀಡಿದ್ದರು. ಅಲ್ಲಿಗೆ ವಿಷಯ ಮುಗಿಯಿತು. ಆದರೆ ಒಂದೇ ವೇದಿಕೆ ಹಂಚಿಕೊಂಡ ಮಾತ್ರಕ್ಕೆ, ಸಹಾಯ ಧನವನ್ನು ಸ್ವೀಕರಿಸಿದ ಕಾರಣಕ್ಕೆ ನಿತ್ಯಾನಂದ ಮೋದಿಯವರ ಗಾಡ್‌ಮ್ಯಾನ್ ಆಗುವುದಕ್ಕೆ ಸಾಧ್ಯವೆ? ಒಂದೆಡೆ ಮಾಧ್ಯಮಗಳು ಮೋದಿಯವರನ್ನು ಕೆಟ್ಟದಾಗಿ ಚಿತ್ರಿಸುವ ಕೆಲಸವನ್ನು ಸಂಧ್ಯಾವಂದನೆಯಂತೆ ಮಾಡಿಕೊಂಡು ಬರುತ್ತಿದ್ದರೆ, ಇನ್ನೊಂದೆಡೆ ಸೋನಿಯಾ ಗಾಂಧಿಯವರ ಕೇಂದ್ರ ಸರಕಾರ ಯಾರ್‍ಯಾರು ಮೋದಿಯವರ ವಿರುದ್ಧ ಪ್ರಚಾರಾಂದೋಲನ ಮಾಡುತ್ತಾರೋ ಅವರಿಗೆ ‘ಪದ್ಮ’ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾ ಹಿಸುವ, ಇಲ್ಲವೆ ರಾಜ್ಯಸಭೆಗೆ ನಾಮಕರಣ ಮಾಡಿ ಸಂತೈಸುವ ಕೆಲಸ ಮಾಡುತ್ತಿದೆ.

ಉದಾಹರಣೆ ಬೇಕಾ?

ಮುಸ್ಲಿಮರನ್ನು ಮದುವೆಯಾದ ನಂತರ ಹಿಂದೂ ವಿರೋಧಿಗಳಾಗಿ ಪರಿವರ್ತನೆಯಾದವರ ದೊಡ್ಡ ಗುಂಪೇ ಇದೆ ಬಿಡಿ. ಅವರಲ್ಲಿ ಇತ್ತೀಚೆಗೆ ಬಹಳ ಗಮನ ಸೆಳೆದಾಕೆ ಅತುಲ್ ಸೆತಲ್ವಾಡ್ ಹಾಗೂ ಸೀತಾ ಸೆತಲ್ವಾಡ್ ಪುತ್ರಿ ತೀಸ್ತಾ ಸೆತಲ್ವಾಡ್. ಜಾವೆದ್ ಆನಂದ್ ಎಂಬುವರನ್ನು ವಿವಾಹವಾಗಿರುವ ಆಕೆ ಅದೆಷ್ಟು ಸುಳ್ಳು ಕಥೆಗಳನ್ನು ಸೃಷ್ಟಿಸಿ ಹರಡಿದ್ದಳು, ಮೋದಿಯವರ ವಿರುದ್ಧ ಪ್ರಚಾರಾಂದೋಲನ ಮಾಡಿದ್ದಳು ಎಂಬುದನ್ನು 2010, ಮಾರ್ಚ್ 25ರ ಸಂಚಿಕೆಯಲ್ಲಿ ‘ಇಂಡಿಯಾ ಟುಡೆ’ಯಂತಹ ಸೆಕ್ಯುಲರ್ ಪತ್ರಿಕೆಯೇ “Inhuman rights” ಶೀರ್ಷಿಕೆಯಡಿ ಬಯಲು ಮಾಡಿದೆ.  ಸುಪ್ರೀಂಕೋರ್ಟನ್ನೇ ದಾರಿತಪ್ಪಿಸಿದ್ದ ಆಕೆಗೆ ಸೋನಿಯಾ ಸರಕಾರ 2007ರಲ್ಲಿ “ಪದ್ಮಶ್ರೀ” ಪ್ರಶಸ್ತಿ ನೀಡಿತು! ಇನ್ನು ಜಾವೆದ್ ಅಖ್ತರ್ ಯಾರಿಗೆ ಗೊತ್ತಿಲ್ಲ ಹೇಳಿ? ಅವರೊಬ್ಬ ಅದ್ಭುತ ಸಿನಿಮಾ ಸಾಹಿತ್ಯ ರಚನೆಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಧರ್ಮ ಪ್ರತಿಪಾದನೆಗಿಳಿದಿರುವ ಜಾವೆದ್ ಅಖ್ತರ್, 2007ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ(PIL)ಯೊಂದನ್ನು ಹಾಕಿದರು. ಗುಜ ರಾತ್‌ನಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಅದರ ಬೆನ್ನಲ್ಲೇ ಅಖ್ತರ್‌ಗೆ (2007ರಲ್ಲಿ ) “ಪದ್ಮ ಭೂಷಣ” ಪ್ರಶಸ್ತಿ ನೀಡಲಾಯಿತು. ‘ಮೌತ್ ಕಾ ಸೌದಾಗರ್’ ಎಂದು ಬರೆದುಕೊಟ್ಟ ಮಹಾಶಯ ಕೂಡ ಇವರೇ ಎಂಬ ಬಲವಾದ ಗುಮಾನಿಗಳಿವೆ! ಅದಕ್ಕೆ ಸಿಕ್ಕ ಪ್ರತಿಫಲವೇನು ಗೊತ್ತೆ? 2010ರಲ್ಲಿ ರಾಜ್ಯಸಭೆಗೆ ನಾಮಕರಣ ಮಾಡಿ ಸಂತೈಸಲಾಗಿದೆ! ತನ್ನ ನೃತ್ಯದಿಂದ ಹೆಸರು ಮಾಡಿದ್ದ ಮಲ್ಲಿಕಾ ಸಾರಾಭಾಯಿ ಎಂಬಾಕೆ ಮೋದಿ ವಿರೋಧಿಯಾಗಿ ಹೊರಹೊಮ್ಮಿದ ಕೂಡಲೇ ಆಕೆಗೆ ‘ಪದ್ಮವಿಭೂಷಣ’(2009ರಲ್ಲಿ) ನೀಡಲಾಯಿತು! ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯನ್ಯಾಯಮೂರ್ತಿ ವಿ.ಎನ್. ಖಾರೆ ಹೆಸರು ಕೇಳಿದ್ದೀರಾ? ತೀಸ್ತಾ ಸೆತೆಲ್ವಾಡ್ ಕಟ್ಟಿದ ಹುಸಿ ಕಥೆ ಗಳನ್ನು ಯಥಾವತ್ತಾಗಿ ನಂಬಿದ ನ್ಯಾಯಮೂರ್ತಿ ಖಾರೆಯವರು, ಮೋದಿಯವರನ್ನು ಕಟುವಾಗಿ ಟೀಕಿಸಿದ್ದರು. ೨೦೦೪ರಲ್ಲಿ ಅವರು ನಿವೃತ್ತರಾದಾಗ ಖ್ಯಾತ ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ಮಾರು ದ್ದದ ಸಂದರ್ಶನ ನೀಡಿ, “ಮೋದಿ ಸರಕಾರ ಗಲಭೆಕೋರರ ಜತೆ ಕೈಜೋಡಿಸಿತ್ತು” ಎಂದು ಆಪಾದನೆ ಮಾಡಿದ್ದರು. ೨೦೦೬ರಲ್ಲಿ “ಪದ್ಮಭೂಷಣ” ಪ್ರಶಸ್ತಿ ಅವರನ್ನು ಅರಸಿಕೊಂಡು ಬಂತು.

ಸೋನಿಯಾ ಗಾಂಧಿಯವರ ಗಮನ ಸೆಳೆಯಬೇಕೆಂದರೆ ಇರುವ ಅತ್ಯಂತ ಸರಳ, ಸುಲಭ ಮಾರ್ಗವೆಂದರೆ ಮೋದಿಯವರನ್ನು ಜರಿಯುವುದು. ಈ ರೀತಿಯ ನಕಾರಾತ್ಮಕ ಪ್ರಚಾರಾಂದೋಲನದ ಮೂಲಕ ಮೋದಿಯೆಂದರೆ ಎಲ್ಲರೂ ಭಯಪಡುವಂತಹ ಪರಿಸ್ಥಿತಿ ಯನ್ನು ಸೃಷ್ಟಿಸಲಾಗಿದೆ. ಖಂಡಿತ 2002ರಲ್ಲಿ ನಡೆದ ಘಟನೆಯನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಹಾಗಂತ ಮೋದಿಯವರನ್ನು, ಹಿಂದೂಗಳನ್ನು ಮಾತ್ರ ದೂಷಿಸುವುದು ಎಷ್ಟು ಸರಿ? ಒಂದು ಮಾತು ನೆನಪಿಟ್ಟುಕೊಳ್ಳಿ, Hindus never act, they only react.. ಗುಜರಾತ್‌ನಲ್ಲಿ ಆಗಿದ್ದೂ ಅದೇ. ಒಂದು ವೇಳೆ, ಗೋಧ್ರಾ ಘಟನೆ ಸಂಭವಿಸದಿದ್ದರೆ ಗುಜರಾತ್ ಹಿಂಸಾಚಾರ ಸಂಭವಿಸುತ್ತಿರಲಿಲ್ಲ. ಹಿಂದೂಗಳು ತಾವಾಗಿಯೇ ಪ್ರಾರಂಭಿಸಿದ ಒಂದು ಕೋಮು ಹಿಂಸಾಚಾರವನ್ನು ಉದಾಹರಿಸಿ ನೋಡೋಣ?

1947ರಲ್ಲಿ ದೇಶ ವಿಭಜನೆಯಾದಾಗ 7 ಪರ್ಸೆಂಟ್ ಮುಸ್ಲಿಮ ರಿದ್ದರು. ಈಗ 16 ಪರ್ಸೆಂಟ್‌ಗೇರಿದ್ದಾರೆ. 2001ರ ಜನಗಣತಿ  ಪ್ರಕಾರ 12 ವರ್ಷ ವಯೋಮಾನದೊಳಗಿನವರನ್ನು ಗಣನೆಗೆ ತೆಗೆದುಕೊಂಡರೆ ಮುಸ್ಲಿಮರ ಪ್ರಮಾಣ 18 ಪರ್ಸೆಂಟ್!! ಇತ್ತ ಸಾಕುವುದಕ್ಕಾಗುವುದಿಲ್ಲ, ಸೊಂಟ ಜಾರಿ ಹೋಗುತ್ತದೆ, ಫಿಗರ್ ಹಾಳಾಗುತ್ತದೆ, ಒಂದೇ ಮಗುವಿಗೆ ಎಲ್ಲ ಸೌಲಭ್ಯ ಕೊಡೋಣ ಎಂಬಂತೆ ವರ್ತಿಸುತ್ತಿರುವ ನವ ಹಿಂದೂ ದಂಪತಿಗಳ ಮನಸ್ಥಿತಿ  ಇನ್ನು 50-60 ವರ್ಷಗಳಲ್ಲಿ ಧಾರ್ಮಿಕ ಜನಸಂಖ್ಯಾ ಅನುಪಾತವನ್ನು ಅಡಿಮೇಲು ಮಾಡುವ, ಹಿಂದೂಗಳೇ ಅಲ್ಪಸಂಖ್ಯಾತರಾಗುವ ಅಪಾಯಕಾರಿ ಸೂಚನೆಗಳನ್ನೂ ತೋರು ತ್ತಿದೆ. ಹಾಗಿರುವಾಗ, 16 ಪರ್ಸೆಂಟ್‌ಗೇ ಇಷ್ಟು ಹೆದರುತ್ತಾರೆ, ಓಲೈಕೆ ಮಾಡುತ್ತಾರೆಂದರೆ ಅವರ ಸಂಖ್ಯೆ 25-30 ಪರ್ಸೆಂಟಾದರೆ ಗತಿಯೇನು?

ಅನಂತಮೂರ್ತಿಯವರೇ, ಮಾವೋ ಏನು ಮಹಾತ್ಮ ಗಾಂಧಿಯೇ?
ಮಾವೋಯಿಸಂ ಅಂದರೆ ಏನು?

ಇಂಥದ್ದೊಂದು ‘ಇಸಂ’ ಹುಟ್ಟಿಕೊಂಡಿದ್ದಾದರೂ ಹೇಗೆ? ಹಾಗೂ ಏಕೆ? ಅದು ಜನ್ಮತಳೆಯುವುದಕ್ಕೂ ಮುನ್ನ ಜರುಗಿದ ಘಟನೆಗಳಾದರೂ ಯಾವುವು? ಅದು ಬೆಳೆದು ಬಂದ ರೀತಿಯನ್ನು ನೋಡಿದರೆ, ಅದರ ಪರಂಪರೆಯನ್ನು ಗಮನಿಸಿ ದರೆ ಮುಂದೆ ಎಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು? ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ನಕ್ಸಲಿಸಂನ(ಹಿಂಸೆ) ಇನ್ನೊಂದು ಹೆಸರಾಗಿರುವ ಮಾವೋಯಿಸಂನ ಅಗತ್ಯ ನಿಜಕ್ಕೂ ನಮ್ಮ ದೇಶಕ್ಕಿದೆಯೇ? ಮಾವೋಯಿಸಂ ಎಂಬುದು ಯಾವ ವ್ಯಕ್ತಿಯ ಹೆಸರನ್ನು ಹೊಂದಿದೆ? ಅದು ಯಾವ ವ್ಯಕ್ತಿಯಿಂದ ಪ್ರೇರಣೆ ಪಡೆಯುತ್ತಿದೆ? ಮಾವೋ ಝೆಡಾಂಗ್ ಯಾರು? ಆತ 1962ರಲ್ಲಿ ಯಾವ ದೇಶದ ಮೇಲೆ ದಾಳಿ ಮಾಡಿದ್ದ? ಅಂದು ಯಾವ ವ್ಯಕ್ತಿ ಭಾರತದ ಮೇಲೆ ಆಕ್ರಮಣ ಮಾಡಿದ್ದನೋ ಅಂತಹ ವ್ಯಕ್ತಿಯಿಂದ ಇಂದು ಪ್ರೇರಣೆ ಪಡೆದುಕೊಂಡಿರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ ಅನಂತಮೂರ್ತಿಯವರೇ?

“ನಮ್ಮಲ್ಲಿ ಎರಡು ಬಗೆಯ ಹಿಂಸೆಗಳಿವೆ ಎಂದು ನಾನು ಹಿಂದೊಮ್ಮೆ ಬರೆದಿದ್ದೆ. ಮೊದಲನೆಯದು ಕೋಮುವಾದಿ ಹಿಂಸೆ. ಎರಡನೆಯದು ನಕ್ಸಲ್ ಹಿಂಸೆ. ಮೊದಲನೆಯದು ರೇಬಿಸ್ ಇದ್ದಂತೆ. ಈ ರೋಗಕ್ಕೆ ಗುಣಪಡಿಸುವ ಚಿಕಿತ್ಸೆಯಿಲ್ಲ. ನಕ್ಸಲ್‌ವಾದದ ಹಿಂಸೆ ಕ್ಯಾನ್ಸರ್ ಇದ್ದಂತೆ. ಇದು ದೇಹವೇ ಹದಗೆಟ್ಟು ತನ್ನೊಳಗೆ ತಾನೇ ಸೃಷ್ಟಿಸಿಕೊಂಡಿರುವ ರೋಗ. ಇದಾಗದಂತೆ ತಡೆಯುವ ಕ್ರಮಗಳೂ ಇವೆ. ಅಂದರೆ ಸರ್ಜರಿ ಮತ್ತು ಚಿಕಿತ್ಸೆಯೂ ಇದೆ”.

ಮೊನ್ನೆ ಬುಧವಾರ ಅನಂತಮೂರ್ತಿಯವರ ಮೂಸೆಯಿಂದ ಮತ್ತದೇ ಹಳಸು ಹಾಗೂ ‘Recycled’ ವಿಚಾರಧಾರೆಯನ್ನು ಹೊತ್ತ ಲೇಖನವೊಂದು ಹರಿದಾಡಿದೆ. ಸಂಬಂಧ, ಅರ್ಥ, ಔಚಿತ್ಯ ಯಾವುವೂ ಇಲ್ಲದೆ ಏನೇನೋ ಬರೆಯುವುದು, ಮಾತನಾಡುವುದು, ಅನಗತ್ಯವಾಗಿ ಯಾವ್ಯಾವುದೋ ವಿಚಾರಗಳನ್ನು ಎಳೆದು ತರುವುದು ಈ ಎಡಪಂಥೀಯರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೂ ಚರಿತ್ರೆಯ ಕತ್ತಲಲ್ಲೂ ಕಾಣುವ ಬಾವಿಯನ್ನು ತೋಡಿದವರು ಕಮ್ಯುನಿಸ್ಟ್ ನಾಯಕರೇ ಎಂಬುದನ್ನು ಮಾತ್ರ ಇವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬದಲಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹೀಗಳೆಯದೆ, ರಾಷ್ಟ್ರವಾದಿಗಳನ್ನು ಜರಿಯದೆ, ಸಂಘಪರಿವಾರವನ್ನು ಅಣಕಿಸದೆ  ಇವರ ಯಾವ ಮಾತು, ಲೇಖನಗಳೂ ಪೂರ್ಣಗೊಳ್ಳುವುದಿಲ್ಲ. ಬುದ್ಧಿಜೀವಿಗಳು, ಚಿಂತಕರು ಎನಿಸಿಕೊಳ್ಳಬೇಕಾದರೆ ಎಡಪಂಥೀಯರೇ ಆಗಿರಬೇಕು ಎಂದು ಬರೆಯುವ ಮತಿ  ಇಲ್ಲದ ಪತ್ರಕರ್ತರಿಗೂ ಅನಂತಮೂರ್ತಿ ಯವರಿಗೂ ಏನಾದರೂ ವ್ಯತ್ಯಾಸವಿದೆಯೇ? ಅದ್ಯಾವ ದೃಷ್ಟಿಯಲ್ಲಿ ಕೋಮುವಾದ ಹಾಗೂ ಮಾವೋವಾದಿ ಹಿಂಸಾಚಾರವನ್ನು ಪರಸ್ಪರ ತಳಕು ಹಾಕುತ್ತೀರಿ ‘eನಪೀಠ ನಂಬರ್-1’?

1. 2010, ಮೇ 28: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ರೈಲನ್ನು ಹಳಿತಪ್ಪಿಸಿದ ನಕ್ಸಲರು. 71 ಪ್ರಯಾಣಿಕರ ದಾರುಣ ಸಾವು.

2. 2010, ಮೇ 16: ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ನಕ್ಸಲರಿಂದ 6 ಗ್ರಾಮಸ್ಥರ ಹತ್ಯೆ.

3. 2010, ಏಪ್ರಿಲ್ 6: ಛತ್ತೀಸ್‌ಗಢದ ದಂತೇವಾಡದಲ್ಲಿ ನಕ್ಸಲರಿಂದ ಕೇಂದ್ರ ಮೀಸಲು ಪಡೆ ಹಾಗೂ ಪೊಲೀಸ್ ವಾಹನ ಸ್ಫೋಟ. 75 ಯೋಧರ ಸಾವು.

4. ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಸೈನಿಕ ನೆಲೆ ಮೇಲೆ ನಕ್ಸಲ್ ದಾಳಿ. 24  ಯೋಧರ ಹತ್ಯೆ.

5. 2009, ಅಕ್ಟೋಬರ್ 8: ಮಹಾರಾಷ್ಟ್ರದ ಗಡಚಿರೋಲಿಯ ಲಹೆರಿ ಪೊಲೀಸ್ ಠಾಣೆ ಮೇಲೆ ನಕ್ಸಲ್ ದಾಳಿ, 17 ಪೊಲೀಸರ ಬರ್ಬರ ಹತ್ಯೆ, ಶಿರಚ್ಛೇದ.

ಇವರ್‍ಯಾರು ಅನಂತಮೂರ್ತಿಯವರೇ?

“ಉದಾಹರಣೆಗೆ ಒಂದು ಊರಿನಲ್ಲಿ ಒಬ್ಬ ದುಷ್ಟ ಅಧಿಕಾರಿ ಇರುತ್ತಾನೆ. ಏನು ಮಾಡಿದರೂ ಅವನ ದರ್ಬಾರು ನಡೆಯುತ್ತಲೇ ಹೋಗುತ್ತದೆ ಎಂದುಕೊಳ್ಳೋಣ. ಅಲ್ಲಿನ ಪ್ರಜೆಗಳು ನಿಸ್ಸಹಾಯಕ ಭಾವನೆಯಲ್ಲಿ ಕುಗ್ಗಿಹೋಗಿದ್ದಾರೆ ಎಂದುಕೊಳ್ಳೋಣ. ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶದ ಕ್ರಾಂತಿಗಾಗಿ ಕಾಯದೆ ಆ ದುಷ್ಟನನ್ನು ಕೊಂದು ಹಾಕಿದರೆ ಜನರಿಗೆ ತಮ್ಮ ಪಾಡು ಸನಾತನವೂ ಅಲ್ಲ, ಶಾಶ್ವತವೂ ಅಲ್ಲ ಎನ್ನುವ ಧೈರ್ಯ ಉಕ್ಕುತ್ತದೆ. ಈ ಬಗೆಯ ಹಿಂಸೆಗಳಿಂದಲೇ ಒಂದಿಡೀ ದೇಶವನ್ನು ಲೆನಿನ್/ಮಾವೋವಾದಿ ಪಕ್ಷ ಕ್ರಾಂತಿಗೆ ಸಿದ್ಧಪಡಿಸುತ್ತದೆ” ಎನ್ನುತ್ತೀರಲ್ಲಾ ಈ ಮೇಲಿನ ಐದು ಘಟನೆಗಳಲ್ಲಿ ಬರ್ಬರವಾಗಿ ಕೊಲೆಗೀಡಾದವರು ದುಷ್ಟ ಅಧಿಕಾರಿಗಳಾ? ನಿಮ್ಮ ಮಾರ್ಕ್ಸ್, ಲೆನಿನ್, ಸ್ಟಾಲಿನ್, ಮಾವೋ ಝೆಡಾಂಗ್ ಹೇಳಿದ, ಪ್ರತಿಪಾದಿಸಿದ “Haves”(ಉಳ್ಳವ) ಮತ್ತು “Have-nots”(ಬಡವ)ಗಳಲ್ಲಿ ಇವರು ಯಾವ ಕೆಟಗರಿಗೆ ಬರುತ್ತಾರೆ? ಮಾವೋವಾದಿ/ನಕ್ಸಲರು ಏಕಾಗಿ ಇವರನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತಿದ್ದಾರೆ? 2010, ಮೇ 16ರಂದು ಕೊಲೆಗೀಡಾದ 6 ಗ್ರಾಮಸ್ಥರು ನಿಮ್ಮ ವ್ಯಾಖ್ಯಾನದಲ್ಲಿ ‘ಉಳ್ಳವರೇನು? ಕಳೆದ ಒಂಬತ್ತು ತಿಂಗಳುಗಳಲ್ಲಿ ನಡೆದ ಐದು ಭಯಾನಕ (deadliest) ಆಕ್ರಮಣ ಗಳೆಲ್ಲ ಮಾವೋವಾದಿ ದಾಳಿಗಳೇ ಆಗಿವೆ. ಇಂಥದ್ದೊಂದು ಗಂಭೀರ ಸಮಸ್ಯೆ ತಲೆದೋರಿರುವಾಗ, ಒಬ್ಬ ಜವಾಬ್ದಾರಿಯುತ ಸಾಹಿತಿಯಾಗಿ ಅದರ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವ ಬದಲು ಕೋಮುವಾದವನ್ನೇಕೆ ಎಳೆದು ತರುತ್ತಿದ್ದೀರಿ?

ನಿಮ್ಮ ಕಾರ್ಲ್ ಮಾರ್ಕ್ಸ್ ಹೇಳಿದ್ದಾದರೂ ಏನು?

ಆತ ಎಂದಾದರೂ ಹಿಂಸೆಯನ್ನು ಪ್ರತಿಪಾದಿಸಿದ್ದನೆ? ಮಾರ್ಕ್ಸ್ ಏನು ಹೇಳಿದ್ದ ಎಂಬುದನ್ನು ಸರಳವಾಗಿ, ಜನರಿಗೆ ಅರ್ಥವಾಗುವಂತೆ  ಹೇಳಿ ನೋಡೋಣ? ಸಮಾಜದಲ್ಲಿ ಎರಡು ವರ್ಗಗಳಿವೆ. Haves ಮತ್ತು Have-nots. ಈ ಬಡವರ ಸಂಘಟನೆ (ಆರ್ಗನೈಝಿಂಗ್) ಹಾಗೂ ಶಿಕ್ಷಣದ ಮೂಲಕ ಆರ್ಥಿಕ ತಾರತಮ್ಯವನ್ನು ಹೋಗಲಾಡಿಸಬೇಕು. ಜನರಿಗೆ ಶಿಕ್ಷಣ ಕೊಟ್ಟರೆ ಅವರೇ Vangauard of the proletariat ಅಥವಾ ಸಮಾಜ ಸುಧಾರಣೆ ಮಾಡುವಂತಹ ಕಾರ್ಮಿಕ ನಾಯಕರಾಗುತ್ತಾರೆ, ಕ್ರಾಂತಿ ಮಾಡುತ್ತಾರೆ. ಮಾಲೀಕ ಭೂಮಿಯನ್ನು ಖರೀದಿಸಿ ಒಡೆಯನಾಗಬಹುದು. ಆದರೆ ಆತನದ್ದು One time investment. ಕಾರ್ಮಿಕರದ್ದು ದೈನಂದಿನ ಹೂಡಿಕೆ. ಪ್ರತಿನಿತ್ಯವೂ ಬೆವರು, ರಕ್ತ ಸುರಿಸುತ್ತಾರೆ. ಹಾಗಾಗಿ ಆದಾಯದಲ್ಲಿ ಸಮಪಾಲು ಸಿಗಬೇಕು. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಬೇಕು. ಖಾಸಗಿ ಇರಲಿ, ಸರಕಾರಿ ಆಗಿರಲಿ, ಕಂಪನಿಗಳು ನೌಕರರ ಶ್ರೇಯೋ ಭಿವೃದ್ಧಿ ಮಾಡಬೇಕು. ಹೀಗೆಲ್ಲ ಮಾರ್ಕ್ಸ್ ಪ್ರತಿಪಾದನೆ ಮಾಡಿದ್ದ. ಆನಂತರ ಬಂದ ಸ್ಟಾಲಿನ್, ತನ್ನ ಸರಕಾರದಲ್ಲಿ ಮಾರ್ಕ್ಸ್ ಥಿಯರಿ ಯನ್ನು ಅಳವಡಿಸಲು ಹೊರಟ. ಜನಸಾಮಾನ್ಯರಿಗೆ ಸ್ವಂತ ಭೂಮಿಯ ಅಗತ್ಯವಿಲ್ಲ. ಉಳ್ಳವರು (Haves) ಅದನ್ನು ಸರಕಾರಕ್ಕೆ ನೀಡಬೇಕು ಎಂದು ಪ್ರತಿಪಾದಿಸಿದ, ಹಿಂಸೆಗಿಳಿದ. ಇತ್ತ 1949ರಿಂದ 1976ರವರೆಗೂ ಸುಮಾರು 27 ವರ್ಷ ಚೀನಾವನ್ನಾಳಿದ ಮಾವೋ ಝೆಡಾಂಗ್ ಇವರೆಲ್ಲರಿಗಿಂತಲೂ ಕ್ರೂರಿ. ಯಾರು ದೌರ್ಜನ್ಯವೆಸಗು ತ್ತಿದ್ದಾರೋ ಅಂತಹವರನ್ನು ಬಡವರು ಕೊಂದು ಹಾಕಿದರೆ ಸಮ ಸ್ಯೆಯೇ ತೀರಿಹೋಗುತ್ತದೆ ಎಂದು ಪ್ರತಿಪಾದಿಸಿದ ಮಹಾನುಭಾವ!

ನಿಮಗೆ ಗೊತ್ತಾ?

ಹಿಟ್ಲರ್‌ನ ನಾಝಿಸಂಗೆ ಬಲಿಯಾದವರ ಸಂಖ್ಯೆ 20 ಲಕ್ಷ. ಸರಕಾರಕ್ಕೆ ಭೂಮಿ ಕೊಡಲೊಪ್ಪದ ಮಾಲೀಕರ ಹತ್ಯೆಗಿಳಿದ ಸ್ಟಾಲಿನ್ ಬಲಿತೆಗೆದುಕೊಂಡಿದ್ದು 70 ಲಕ್ಷ. ಮಾವೋ ಝೆಡಾಂಗ್‌ನ “ಗ್ರೇಟ್ ಲೀಪ್ ಫಾರ್ವರ್ಡ್” ಅಥವಾ “ಗ್ರೇಟ್ ಹಾರ್ವೆಸ್ಟ್” ಹಾಗೂ “ಕಲ್ಚರಲ್ ರೆವಲೂಶನ್”ಗೆ ಬಲಿಯಾದವರ ಸಂಖ್ಯೆ 170 ಲಕ್ಷ!! ಇಂತಹ ಮಾವೋನಿಂದ ಪ್ರೇರಣೆ ಪಡೆಯುತ್ತಿರುವವರು ಇನ್ನೇನು ಮಾಡಿಯಾರು ಸ್ವಾಮಿ? ಅವರ ಉದ್ದೇಶ ಏನಿದ್ದೀತು? 1962ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದವನೇ ಮಾವೋ. ಅಂತಹ ವ್ಯಕ್ತಿಯ ಹೆಸರಿಟ್ಟುಕೊಂಡವರ ಉದ್ದೇಶ ಭಾರತದ ನಾಶವಲ್ಲದೆ ಮತ್ತೇನಿದ್ದೀತು? ಕ್ರಾಂತಿಗೆ ಪ್ರೇರಣೆ ಪಡೆಯಲು ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ ಆಜಾದ್‌ಗಿಂತ ದೊಡ್ಡ ವ್ಯಕ್ತಿಗಳು ಬೇಕೇನು? ಕೋಮುವಾದವನ್ನು ಎಳೆದು ತಂದು ಮಾವೋ ಹಿಂಸೆಯನ್ನು ಮರೆಮಾಚಲು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂಸೆಗೆ ಕಾರಣ ಹುಡುಕಲು ಹೊರಟಿದ್ದೀರಲ್ಲಾ ಅನಂತಮೂರ್ತಿಯವರೇ, ಅಷ್ಟಕ್ಕೂ ಚೀನಾದ ಮಾವೋನೇನು ಮಹಾತ್ಮ ಗಾಂಧಿಯೇ? ಉಳ್ಳವರನ್ನು ಕೊಲ್ಲಿ ಎಂದ ಮಾವೋನನ್ನು ಅನುಸರಿಸಲು, ಮೇಲ್ಪಂಕ್ತಿಯಾಗಿಟ್ಟುಕೊಳ್ಳಲು ಹೊರಟವರು ಏನು ಮಾಡಿಯಾರು ಸಾರ್? ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಗೆ (ಪ್ರಿಯಾಂಬ್ಲ್) ಸೇರಿಸಿದ ಕಾಂಗ್ರೆಸ್ ಪಕ್ಷವೇ  ಮಾವೋ ವಾದಿಗಳು ತಂದೊಡ್ಡಿರುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿ ರುವಾಗ ನೀವೇಕೆ ಕೋಮುವಾದಿಗಳ ಬಗ್ಗೆ ಚಿಂತೆ ಮಾಡುತ್ತಿದ್ದೀರಿ? ನಕ್ಸಲರನ್ನು, ಅವರು ಹಿಡಿದಿರುವ ಮಾರ್ಗವನ್ನು, ಅವರ ಹೋರಾಟದ ಹಿಂದಿರುವ ಅಧಿಕಾರ ದಾಹವನ್ನು ಖಂಡಿಸಲು ನಿಮಗೆ ಸಾಧ್ಯ ವಿಲ್ಲವೆಂದಾದರೆ ಸುಮ್ಮನಿರಿ. ಏಕೆ ವಿನಾಕಾರಣ ಹಿಂದುತ್ವವಾದವನ್ನು ಎಳೆದು ತರುತ್ತೀರಿ?  ನೀವು ಕೋಮುವಾದ ಎಂದ ಕೂಡಲೇ ಅದರ ಗುರಿ ಖಂಡಿತ ಸಂಘ ಪರಿವಾರವೇ ಆಗಿರುತ್ತದೆ. ಏಕೆಂದರೆ ನೀವೆಂದೂ ಮುಸ್ಲಿಂ ಮೂಲಭೂತವಾದವನ್ನು, ವಹಾಬಿಸಂ ಅನ್ನು, ಭಯೋತ್ಪಾದನೆಯನ್ನು ಖಂಡಿಸಿದವರಲ್ಲ. ನೀವೇ ಹೇಳಿ, ಹಿಂದೂ ಮೂಲಭೂತವಾದಿಗಳು ಎಷ್ಟು ಜನರನ್ನು ಕೊಂದಿದ್ದಾರೆ?

ಏಕೆ ಜನರನ್ನು ಫೂಲ್ ಮಾಡುತ್ತಿದ್ದೀರಿ?

ಮಾರ್ಕ್ಸ್ ಪ್ರತಿಪಾದಿಸಿದ “Haves” ಮತ್ತು “Have-nots” ಹಾಗೂ ವರ್ಗ ಸಂಘರ್ಷ ಸೂತ್ರವನ್ನು ಭಾರತಕ್ಕೆ ಅನ್ವಯಿಸಲು ಸಾಧ್ಯವೇ ಇಲ್ಲ. ಭಾರತದಲ್ಲಿರುವುದು ಜಾತಿಗಳೇ ಹೊರತು ವರ್ಗಗಳಲ್ಲ. ಮಾರ್ಕ್ಸ್ ಹೇಳಿದಂತೆ ಬಡವರೆಲ್ಲ ಒಂದು ವರ್ಗ ಎನ್ನುವುದಾದರೆ ಮೇಲ್ಜಾತಿಯ ಬಡವನೊಬ್ಬ ಆತನ ಆರ್ಥಿಕ ಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ದಲಿತನೊಬ್ಬನ ಮನೆಯಲ್ಲಿ ಕುಳಿತು ಊಟ ಮಾಡುತ್ತಾನೆಯೇ? ನಮ್ಮಲ್ಲಿ ನಡೆಯುವ ಚಳವಳಿಗಳಾಗಲಿ, ಹಿಂಸೆಯೇ ಇರಲಿ ಅದು ಜಾತಿ ಆಧಾರಿತವೇ ಆಗಿರುತ್ತದೆ. ಮಾವೋಯಿಸಂ ಎಂದ ಕೂಡಲೇ ಏನೂ ತಿಳಿಯದವರಂತೆ ಬರೀ ಉಳ್ಳವ-ಬಡವನ ಪ್ರಶ್ನೆಯನ್ನು ಎತ್ತಬೇಡಿ. ಭಾರತದಲ್ಲಿ ಚಾರು ಮಜುಂದಾರ್ ಹಾಗೂ ಕಾನು ಸನ್ಯಾಲ್ ಬಿಟ್ಟರೆ ನಿಜವಾದ ನಕ್ಸಲ್ ನಾಯಕರು ಯಾರು ಹೊರಹೊಮ್ಮಿದ್ದಾರೆ ಹೇಳಿ ನೋಡೋಣ? ಉಸ್ಮಾನಿಯಾ, ಜೆಎನ್‌ಯು, ಮೈಸೂರು, ಕುವೆಂಪು ವಿವಿಗಳ ಎಷ್ಟು ಯುಜಿಸಿ ಪ್ರೊಫೆಸರ್‌ಗಳು ಬಡವರಿಗಾಗಿ ಸತ್ತಿದ್ದಾರೆ? ಸಾಯುವವ ರೆಲ್ಲ ಎಸ್ಸಿ, ಎಸ್ಟಿ, ಒಬಿಸಿ ಹುಡುಗರು. ಅವರನ್ನು ದಾರಿ ತಪ್ಪಿಸುವವರು, ಅವರಿಗೆ ಕಾಡುದಾರಿ ತೋರುವವರು ನಿಮ್ಮಂಥವರು. ಅವಕಾಶ ಸಿಕ್ಕಿದಾಗಲೆಲ್ಲ ಮಹಾತ್ಮ ಗಾಂಧಿಯವರನ್ನು ಉದಾಹರಿಸುವ ನೀವು, ಮಾವೋ/ನಕ್ಸಲ್ ಹಿಂಸೆ ವಿಚಾರ ಬಂದಾಗ ಕೋಮುವಾದವನ್ನು ಎಳೆದುತಂದು ತಿಪ್ಪೆ ಸಾರಿಸುತ್ತೀರಿ, ಹಿಂಸೆಗೆ ಸಾಮಾಜಿಕ ಅಸಮಾ ನತೆಯ ಲೇಪ ಹಚ್ಚುತ್ತೀರಿ. ಏಕೆ ಸ್ವಾಮಿ? ನೀವೆಂಥ ಲೋಹಿಯಾ ವಾದಿ ಹಾಗೂ ಗಾಂಧಿತತ್ವ ಪ್ರತಿಪಾದಕ? ಗಾಂಧಿ/ಲೋಹಿಯಾ ಇಬ್ಬರೂ ಮಹಾನ್ ರಾಷ್ಟ್ರವಾದಿಗಳಾಗಿದ್ದರು. ಅವರಿಬ್ಬರ ಅನುಯಾಯಿ ಎಂದು ಹೇಳಿಕೊಳ್ಳುವ ನೀವು, ರಾಷ್ಟ್ರದ ಭದ್ರತೆಗೇ ಅಪಾಯ ತಂದೊಡ್ಡಿರುವ ಮಾವೋವಾದಿಗಳ ಹಿಂಸೆಯನ್ನು ಸಾಮಾಜಿಕ ಅಸಮಾನತೆಯ ಹೆಸರಿನಲ್ಲಿ ಪರೋಕ್ಷವಾಗಿ ಹೇಗೆ ಸಮರ್ಥಿಸುತ್ತಿದ್ದೀರಿ? ಎರಡನೆಯದಾಗಿ, ಗಾಂಧಿ/ಲೋಹಿಯಾ ಇಬ್ಬರೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಾಗಿದ್ದರು. ನಕ್ಸಲರು/ಮಾವೋವಾದಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ.

ಸ್ವಾಮಿ ಅನಂತಮೂರ್ತಿಯವರೇ, ಹಿಂಸೆಗೆ ‘ಲೆಫ್ಟು’, ‘ರೈಟು’ ಎಂಬುದಿಲ್ಲ. ಆದರೆ ವೈಚಾರಿಕತೆಯ ಸೋಗಿನಲ್ಲಿ ನೀವೇಕೆ ಹಿಂಸೆಯ ಸಮರ್ಥನೆಗೆ ಹೊರಟಿದ್ದೀರಿ? ಅಲ್ಲಾ, ಕ್ರಾಂತಿ ಮಾಡಲು, ಅಸಮಾನತೆಯ ವಿರುದ್ಧ ಧ್ವನಿಯೆತ್ತಲು ಡಾ. ಅಂಬೇಡ್ಕರ್‌ಗಿಂತ ದೊಡ್ಡ ಪ್ರೇರಕ ಶಕ್ತಿ ಬೇಕಾ? ಅಮಾನವೀಯ ದೌರ್ಜನ್ಯ, ಸಾಮಾಜಿಕ ಅವಮಾನದ ಹೊರತಾಗಿಯೂ ಅಂಬೇಡ್ಕರ್ ಅವರೆಂದಾದರೂ ಮೇಲ್ಜಾತಿಯವರನ್ನು ಕಡಿಯಿರಿ, ಕೊಲ್ಲಿರಿ ಎಂದು ಕರೆ ನೀಡಿದ್ದರೇ? ಬಾಯಲ್ಲಿ ಗಾಂಧಿ, ಲೋಹಿಯಾ, ಅಂಬೇಡ್ಕರ್ ಎನ್ನುತ್ತಾ ಯಾರನ್ನು ಸಮರ್ಥಿಸುತ್ತಿದ್ದೀರಿ? ನಕ್ಸಲರನ್ನು ಮಟ್ಟಹಾಕಲು ಸೇನೆ ಬಳಕೆ ಮಾಡಿಕೊಳ್ಳಲಾಗುವುದು ಎಂದ ಕೂಡಲೇ, ಆಕಾಶ ದಿಂದ ಬಾಂಬ್ ಹಾಕುತ್ತಾರೆ ಎಂದು ನಿಮಗೆ ಹೇಳಿದ್ದಾರು? ಸರ್ವೈ ವಲೆನ್ಸ್, ಲಾಜಿಸ್ಟಿಕ್ ಸಪೋರ್ಟ್‌ಗೆ ಮಾತ್ರ ಯುದ್ಧ ವಿಮಾನ, ಹೆಲಿ ಕಾಪ್ಟರ್‌ಗಳ ಬಳಕೆ ಮಾಡಿಕೊಳ್ಳಲಾಗುತ್ತದೆ ಅಷ್ಟೇ. ಇನ್ನು ಮಾವೋ ವಾದಿಗಳದ್ದು ಸಾಮಾಜಿಕ ಅಸಮಾನತೆ, ದೌರ್ಜನ್ಯದ ವಿರುದ್ಧದ ಹೋರಾಟ ಎಂದು ನಿಮಗೆ ಹೇಳಿದವರಾರು? ಮಾವೋವಾದಿಗಳಿಗೆ ಎಕೆ-೪೭ ರೈಫಲ್ ಮತ್ತು ಗ್ರನೇಡ್‌ಗಳನ್ನು ಪೂರೈಸುತ್ತಿರುವ ರಾಷ್ಟ್ರ ಯಾವುದು? ಮಾವೋ ಝೆಡಾಂಗ್‌ನ ಚೀನಾ ಅಲ್ಲವೆ? ನೇಪಾಳ ವನ್ನು ಕಬಳಿಸಿದ ಮಾವೋವಾದಿ ನಾಯಕ ಪ್ರಚಂಡ ಪ್ರಧಾನಿಯಾದ ಕೂಡಲೇ ಭೇಟಿ ಕೊಟ್ಟಿದ್ದು ಯಾವ ದೇಶಕ್ಕೆ? ಚೀನಾಕ್ಕೋ ಭಾರತಕ್ಕೋ? ನೇಪಾಳದಲ್ಲಿ ಮಾವೋವಾದಿಗಳನ್ನು ಹುಟ್ಟುಹಾಕಿದ್ದು, ಅವರನ್ನು ಅಧಿಕಾರಕ್ಕೆ ತರುವ ಮೂಲಕ ನೇಪಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಚೀನಾ, ಎಲ್ಟಿಟಿಇಯನ್ನು ಹತ್ತಿಕ್ಕಲು ಸಹಾಯ ಮಾಡುವ ಮೂಲಕ ಶ್ರೀಲಂಕಾ ಸರಕಾರದಿಂದಲೂ ನೌಕಾ ಹಾಗೂ ವಾಯು ನೆಲೆಯನ್ನು ಇತ್ತೀಚಿಗೆ ಪಡೆದುಕೊಂಡಿದೆ. ಆ ಮೂಲಕ ಭಾರತವನ್ನು ಮೂರು ಭಾಗಗಳಿಂದ ಸುತ್ತುವರಿದಿದೆ. ಒಂದು ವೇಳೆ, ಮಾವೋವಾದಿಗಳು ಹಿಂಸೆಯ ಮೂಲಕ ಭಾರತದಲ್ಲೂ ಅಲ್ಲಲ್ಲಿ ಅಧಿಕಾರಕ್ಕೇರಿದರೆ ಯಾರಿಗೆ ನಿಷ್ಠೆ ತೋರುತ್ತಾರೆ? ಸ್ವತಂತ್ರ ನ್ಯಾಯಾಂಗವೇ ಇಲ್ಲದ, ಮಾನವ ಹಕ್ಕು ಇಲ್ಲದ ಚೀನಾದಿಂದ ಕುಮ್ಮಕ್ಕು, ಪ್ರೋತ್ಸಾಹ, ಸಹಾಯ ಪಡೆದುಕೊಳ್ಳುತ್ತಿರುವ ಮಾವೋವಾದಿಗಳನ್ನು “Gandhi, but with guns” ಎಂದು ವರ್ಣಿಸಿದ ಆ ಅರುಂಧತಿ ರಾಯ್‌ಗೂ ನಿಮಗೂ ಯಾವುದಾದರೂ ವ್ಯತ್ಯಾಸವಿದೆಯೇ? ನಕ್ಸಲರು/ಮಾವೋವಾದಿಗಳ ಜೀವಾಳವೇ ಹಿಂಸೆ. ಎಲ್ಲೆಲ್ಲಿ ಬಡತನ, ಅನ್ಯಾಯ, ದೌರ್ಜನ್ಯ, ನಿರುದ್ಯೋಗ ಇರುತ್ತದೋ ಅಲ್ಲೆಲ್ಲ ಕಮ್ಯುನಿಸಂ ಹಾಗೂ ಕಮ್ಯುನಿಸ್ಟರಿರುತ್ತಾರೆ. ಎಲ್ಲೆಲ್ಲಿ ಕಮ್ಯುನಿಸ್ಟರಿರು ತ್ತಾರೋ ಅಲ್ಲೆಲ್ಲ ಬಡತನ, ನಿರುದ್ಯೋಗ, ಅನ್ಯಾಯ ಇರುತ್ತದೆ ಹಾಗೂ ಅದನ್ನು ಹಾಗೇ ಇಟ್ಟಿರುತ್ತಾರೆ. ಇದು ಸಾಬೀತಾಗಿರುವ ಸತ್ಯ. ಇಂತಹ ಹಿನ್ನೆಲೆ ಇರುವಾಗ ಮಾವೋ/ನಕ್ಸಲ್ ವಾದದ ಮೂಲಕ ಭಾರತದ ನವನಿರ್ಮಾಣ ಸಾಧ್ಯವೆ? 2002ರಲ್ಲಿ ನಡೆದ ಹಿಂಸಾಚಾರಕ್ಕಾಗಿ ಇಂದಿಗೂ ನರೇಂದ್ರ ಮೋದಿಯವರನ್ನು ದೂರುವ ನೀವು, ನಿತ್ಯವೂ ನಕ್ಸಲರು ನಡೆಸುವ ಹಿಂಸೆಯನ್ನು ಅದ್ಹೇಗೆ ಸಮರ್ಥಿಸುತ್ತೀರಿ? ಅದು ಮಾರ್ಕ್ಸ್, ಗಾಂಧಿ, ಟಾಲ್‌ಸ್ಟಾಯ್, ಲಿಂಕನ್, ಅಂಬೇಡ್ಕರ್ ಹಾಗೂ ಮತ್ತಾವುದೇ ಮಹಾನ್ ನಾಯಕರಿರಬಹುದು. ಅವರೆಲ್ಲ ಶೋಷಿತರ ಪರವಾಗಿ ಮಾತನಾಡಿದರೇ ಹೊರತು, ಹಿಂಸೆಗೆ ಪ್ರಚೋದಿಸಲಿಲ್ಲ, ಅದನ್ನು ಸಮರ್ಥಿಸಲೂ ಇಲ್ಲ. ಲೇಖಕನೊಬ್ಬ ಸರಕಾರದ ಲೋಪ ದೋಷಗಳ ಬಗ್ಗೆ ದನಿ ಎತ್ತುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅದನ್ನೇ ಹಿಂಸೆಯನ್ನು ಬೆಂಬಲಿಸುವಂತೆ ವ್ಯಾಖ್ಯಾ ನಿಸುವುದು ಸರಿಯಲ್ಲ. ಶೋಷಿತರ ಪರವಾಗಿ ಮಾತನಾಡುವ ಪೋಸು ಕೊಟ್ಟುಕೊಂಡು ತಿರುಗಾಡುವ ನಮ್ಮ ಬುದ್ಧಿಜೀವಿಗಳ ವರ್ಗದ ಮೆಳ್ಳೆಗಣ್ಣತನ ‘ಮಾರ್ಜಾಲ ನ್ಯಾಯ’ದ ಸಂಕೇತವಲ್ಲವೆ? ಇಲ್ಲಿ ಅನಂತಮೂರ್ತಿ ಯವರು ಒಂದು ಸಂಕೇತ ಮಾತ್ರ. ಇಂಥ ರೋಗಗ್ರಸ್ತ ಗ್ರಹಿಕೆ/ಒಮ್ಮುಖ ಚಿಂತನೆಯ ಕೂಪಮಂಡೂಕಗಳಾಗಿ ರುವ ಲೇಖಕರ ದಂಡೇ ನಮ್ಮಲ್ಲಿದೆ. ಮಾತು ಮಾತಿಗೂ ಬುದ್ಧ, ಬಸವಣ್ಣ, ಗಾಂಧಿ, ನಾರಾಯಣ ಗುರು, ಜ್ಯೋತಿ ಬಾಪುಲೆ ಎನ್ನುವ ವರು, ಅವರು ನಿಜವಾಗಿಯೂ ಪ್ರತಿಪಾದಿಸಿದ ಅಹಿಂಸೆಯ ಪ್ರತಿ ಪಾದಕರೂ ಆಗಿರಬೇಕಲ್ಲವೆ? ಹಿಂಸೆ/ರಕ್ತಪಾತಗಳನ್ನು ಆರಂಭಿಸುವುದು ಬಲು ಸುಲಭ. ಆದರೆ ಇದಕ್ಕೇನಾದರೂ ಕೊನೆ ಇದೆಯೇ? ಇಷ್ಟಕ್ಕೂ ಹಿಂಸೆಯಿಂದ ಜಗತ್ತಿನಲ್ಲಿ ಯಾವುದಾದರೂ ಚಾರಿತ್ರಿಕ ಪರಿವರ್ತನೆಗಳು ಸಂಭವಿಸಿವೆಯೇ?

Nah..nah..nah…

ಇಷ್ಟನ್ನೂ ಅರ್ಥಮಾಡಿಕೊಳ್ಳಲಾಗದ ದಡ್ಡರೇ ನೀವು?  ಹಾಗಾದರೆ ನಿಮ್ಮ  ಉದ್ದೇಶವೇನು ತಿಳಿಸಬಲ್ಲಿರಾ?

ಎಲ್ಲಿಯ ಅರಸು, ಎಲ್ಲಿಯ ಯಡಿಯೂರಪ್ಪ, ಹೇಳಿ ಈಶ್ವರಪ್ಪ?
ಕಳೆದ ವರ್ಷ ಇದೇ ಜೂನ್ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆಗಿನ ಇಂಧನ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಯಾವ ರೀತಿ ಬೀದಿಯಲ್ಲಿ ನಿಂತು ಜಗಳವಾಡಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. 2009, ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ಮುಗಿದು ಮೇನಲ್ಲಿ ಫಲಿತಾಂಶ ಹೊರಬಿದ್ದಿತ್ತು. ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅಲ್ಲಿಗೆ ಇಡೀ ಜಿಲ್ಲೆ ಅಪ್ಪ-ಮಗನ ನಿಯಂತ್ರಣಕ್ಕೆ ಒಳಪಟ್ಟಂತಾಯಿತು. ಇತ್ತ ಇಂಧನ ಖಾತೆ ಕೊಟ್ಟಿದ್ದರೂ ಅದನ್ನು ಸ್ವತಂತ್ರವಾಗಿ ‘ಡೀಲ್’ ಮಾಡಲು ಯಡಿಯೂರಪ್ಪನವರು ಅವಕಾಶ ಕೊಡುತ್ತಿಲ್ಲ ಎಂದು ಈಶ್ವರಪ್ಪನವರಿಗೆ ಕೋಪ ಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಸಂದರ್ಭದಲ್ಲೇ ಸಂಘರ್ಷ ಆರಂಭವಾಯಿತು. “ಶಿವಮೊಗ್ಗ ಲೋಕಸಭೆ ಚುನಾವಣೆ ವೇಳೆ ಹಣ, ಹೆಂಡ ಹಂಚಲಾಯಿತು” ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಅಂದು ಮುಖ್ಯಮಂತ್ರಿಯವರ ಮಾನ ಹರಾಜು ಹಾಕಲು ನಿಂತಿದ್ದ ಈಶ್ವರಪ್ಪನವರ ಬಾಯಿಂದ ಇಂದು ಎಂತಹ ಆಣಿಮುತ್ತುಗಳು ಉದುರುತ್ತಿವೆ ನೋಡಿ?

“ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕಾಲದ ದೇವರಾಜ ಅರಸು ಇದ್ದಂತೆ. ಅವರು ಕೈಗೊಂಡ ಹಿಂದುಳಿದ, ಬಡಜನರ ಪರವಾದ ಕಾರ್ಯಕ್ರಮಗಳನ್ನು ನಾಡಿನ ಜನತೆ ಹಾಡಿ ಹೊಗಳುತ್ತಿದೆ”!

ಹಾಗಂತ 2010, ಮೇ 27ರಂದು ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರು ಶಿವಮೊಗ್ಗದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಯವರಿಗೆ ಗೌರವ ಡಾಕ್ಟರೇಟ್ ಬಂದಾಗ, ‘ಯಡಿಯೂರಪ್ಪನವರು ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ‘ವರ್ಷದ ಜೋಕು’ (Joke of the year) ಮಾಡಿದ್ದರು! ಈಶ್ವರಪ್ಪನವರು ಯಡಿಯೂರಪ್ಪನವರನ್ನು ದೇವರಾಜ್ ಅರಸ್‌ಗೆ ಹೋಲಿಸಿರುವುದು ಈ ವರ್ಷದ ಜೋಕು ಎನ್ನಬೇಕೆ?! ಮುಂದೊಂದು ದಿನ ಯಡಿಯೂರಪ್ಪನವರ ಪದಚ್ಯುತಿಯಾದರೆ ಮುಖ್ಯಮಂತ್ರಿ ಸ್ಥಾನ ತನಗೇ ದಕ್ಕಬಹುದು ಅಥವಾ ದಕ್ಕಿಸಿಕೊಳ್ಳೋಣ ಎಂಬ ದೂರಾಲೋಚನೆಯಿಂದ ಮಂತ್ರಿ ಪದವಿ ಬಿಟ್ಟು ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಈಶ್ವರಪ್ಪನವರ ಉದ್ದೇಶವೇನೇ ಇರಲಿ. ಪಕ್ಷದ ಅಧ್ಯಕ್ಷರಾಗಿ ಸರಕಾರ ಹಾಗೂ ಮುಖ್ಯಮಂತ್ರಿಯವರನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ, ಭಟ್ಟಂಗಿತನಗಳೂ ಅತ್ತ ಕಡೆ ಇರಲಿ. ಆದರೆ ಸಮರ್ಥನೆಯ ಭರದಲ್ಲಿ ಕೆಟ್ಟ ಹೋಲಿಕೆಗಳನ್ನು ಮಾಡುವುದು ಎಷ್ಟು ಸರಿ?

ಎಲ್ಲಿಯ ದೇವರಾಜ್ ಅರಸ್, ಎಲ್ಲಿಯ ಯಡಿಯೂರಪ್ಪ?

ಈಶ್ವರಪ್ಪನವರೇ, ಯಾವ ದೃಷ್ಟಿಯಲ್ಲಿ ಯಡಿಯೂರಪ್ಪ ನಿಮಗೆ ದೇವರಾಜ್ ಅರಸ್ ಅವರಂತೆ ಕಾಣುತ್ತಿದ್ದಾರೆ? ಮನಸ್ಸಿಗೆ ಬಂದಂತೆ ಹೋಲಿಕೆ ಮಾಡಲು, ಬಾಯಿಗೆ ಬಂದಂತೆ ಮಾತನಾಡಲು ಡಿ. ದೇವರಾಜ್ ಅರಸ್ ಅವರೇನು ಸಾಮಾನ್ಯ ವ್ಯಕ್ತಿಯೇ? 1972ರಿಂದ 1980ರವರೆಗೂ ಸುಮಾರು ೮ ವರ್ಷ ಕರ್ನಾಟಕವನ್ನಾಳಿದ ಅರಸ್ ಜತೆ ಹೋಲಿಸುವ ಮೊದಲು ಆ ವ್ಯಕ್ತಿ ಮಾಡಿದ ಸಾಧನೆಯಾದರೂ ಎಂಥದ್ದು ಎಂದು ಒಮ್ಮೆ ಯೋಚಿಸಿ? ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಅಕಾಲಿಕ ನಿಧನದ ನಂತರ ಇಂದಿರಾ ಗಾಂಧಿಯವರು ಪ್ರಧಾನಿಯಾದಾಗಲೇ ಕಾಂಗ್ರೆಸ್ ವಿಭಜನೆಯ ದಾರಿ ಹಿಡಿದಿತ್ತು. ಮೊರಾರ್ಜಿ ದೇಸಾಯಿ, ಜಗಜೀವನ್‌ರಾಮ್, ಎಸ್. ನಿಜಲಿಂಗಪ್ಪ, ಕಾಮರಾಜ ನಾಡಾರ್, ಸಂಜೀವ ರೆಡ್ಡಿ, ಸದೋಬಾ ಪಾಟೀಲ್, ಅತುಲ್ಯ ಘೋಷ್ ಮುಂತಾದ ಮಹಾನ್ ಧುರೀಣರು ಇಂದಿರಾ ವಿರುದ್ಧ ಧ್ರುವೀಕರಣಗೊಂಡಿದ್ದರು. ಇವರ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿಯವರ ವಿರುದ್ಧ ವಿ.ವಿ. ಗಿರಿಯವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಉಮೇದುವಾರರನ್ನಾಗಿ ಮಾಡಿ ಇಂದಿರಾ ಗಾಂಧಿಯವರು ಗೆಲ್ಲಿಸಿದ್ದು ನಿರೀಕ್ಷಿತ ಒಡಕಿಗೆ ಔಪಚಾರಿಕ ಚಾಲನೆ ನೀಡಿತು. ಕಾಂಗ್ರೆಸ್(ಎಸ್) ಹಾಗೂ ಕಾಂಗ್ರೆಸ್(ಐ-ಇಂದಿರಾ)ಎಂಬ ಎರಡು ಚೂರಾಯಿತು. ಹೀಗೆ 1969ರಲ್ಲಿ ಕಾಂಗ್ರೆಸ್ ಮೊಟ್ಟಮೊದಲ ಬಾರಿಗೆ ಇಬ್ಭಾಗವಾದಾಗ ಕರ್ನಾಟಕದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದ ದೇವರಾಜ್ ಅರಸ್ ಹೆಚ್ಚೂಕಡಿಮೆ ರಾಜಕೀಯದಿಂದ ನಿವೃತ್ತಿ ಯನ್ನೇ ಹೊಂದಿದ್ದರು. ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಮುಂತಾದ ಬಲಿಷ್ಠ ನಾಯಕರೆಲ್ಲ ಇಂದಿರಾ ವಿರುದ್ಧದ ಪಾಳಯ ಸೇರಿದ್ದರಿಂದಾಗಿ ದೊಡ್ಡ ಬಣ ಅವರದ್ದಾಗಿ ಅಧಿಕಾರವನ್ನು ತಾವೇ ಪಡೆದುಕೊಂಡರು. ಈ ಪಾಳಯದಿಂದ ಆಹ್ವಾನ ಬಂದರೂ ದೇವರಾಜ್ ಅರಸ್ ಮಾತ್ರ ಹೋಗಲಿಲ್ಲ. ಬದಲಿಗೆ ಇಂದಿರಾ ಗಾಂಧಿಯವರ ಜತೆ ಕೈಜೋಡಿಸಿದರು. ಮುಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಜಯಗಳಿಸಿದ ಕಾರಣ ೧೯೭೨, ಮಾರ್ಚ್ ೨೦ರಂದು ದೇವರಾಜ್ ಅರಸ್ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಅದು ‘ಮೂರು’ ದೃಷ್ಟಿಯಲ್ಲಿ ಒಂದು ಹೊಸ ಪರ್ವಕ್ಕೆ ನಾಂದಿ ಯಾಯಿತು.

1. ಸರಕಾರದ ಮಟ್ಟದಲ್ಲಿ:

ಮೈಸೂರು ರಾಜ್ಯವೆಂಬ ಹೆಸರನ್ನೇ ಉಳಿಸಿಕೊಳ್ಳಬೇಕೆಂಬ ಕೂಗು ದೊಡ್ಡದಾಗುತ್ತಿದ್ದರೂ ಗಟ್ಟಿ ಮನಸ್ಸು ಮಾಡಿದ ಮುಖ್ಯಮಂತ್ರಿ ದೇವರಾಜ್ ಅರಸ್, 1973ರಲ್ಲಿ ನಮ್ಮ ರಾಜ್ಯಕ್ಕೆ “ಕರ್ನಾಟಕ”ವೆಂಬ ವಿಸ್ತೃತ ನೆಲೆಗಟ್ಟಿನ ಹೆಸರನ್ನಿಟ್ಟರು. ಅದರ ಬೆನ್ನಲ್ಲೇ (1974) “ಉಳುವವನಿಗೇ ಭೂಮಿ”(Land to the tiller) ಎಂಬ ಕಾಯಿದೆಯನ್ನು ಜಾರಿಗೆ ತಂದರು. ಅರಸು ಹೆಸರನ್ನು ಅಜರಾಮರ ಮಾಡಿದ್ದೇ ಆ ನಿರ್ಧಾರ. ಇಂದಿಗೂ ಕರ್ನಾಟಕದಲ್ಲಿ ನಕ್ಸಲಿಸಂ ಬೇರು ಬಿಡಲು ಸಾಧ್ಯವಾಗಿಲ್ಲ ಎಂದಾದರೆ ಅದಕ್ಕೆ ಅರಸು ಕಾರಣ. ಇಲ್ಲದಿದ್ದರೆ ಕರ್ನಾಟಕ ಇನ್ನೊಂದು ಆಂಧ್ರಪ್ರದೇಶವಾಗುತ್ತಿತ್ತು. ಅವರು ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಎಲ್ಲ ಶೋಷಿತ, ಹಿಂದುಳಿದ, ಅವಕಾಶ ವಂಚಿತ ಸಮುದಾಯಗಳಿಗೂ ಸ್ವಂತ ಭೂಮಿ, ದುಡಿಮೆಗೊಂದು ಮಾರ್ಗ ಸಿಕ್ಕಿತು. ಪ್ರತಿ ಕುಟುಂಬಕ್ಕೆ 52 ಎಕರೆ ಜಾಗ ಮಾತ್ರ ಬಿಟ್ಟು ಉಳಿದದ್ದನ್ನೆಲ್ಲ ಕಿತ್ತುಕೊಂಡು ಭೂರಹಿತರಿಗೆ ಕೊಟ್ಟರು. ಲಿಂಗಾಯತರು ಮತ್ತು ಒಕ್ಕಲಿಗರು ಕರ್ನಾಟಕ ರಾಜಕಾರಣವನ್ನು ಭೋಗ್ಯಕ್ಕೆ ಪಡೆದುಕೊಂಡಂತೆ ವರ್ತಿಸುತ್ತಿದ್ದ ಕಾಲದಲ್ಲಿ, ಆ ಜಾತಿಗಳಿಗೆ ಸೇರಿದ ಶಾಸಕರ ವಿರೋಧದ ಹೊರತಾಗಿಯೂ ಇಂಥದ್ದೊಂದು ಭೂಸುಧಾರಣೆಯನ್ನು ಜಾರಿಗೆ ತರುವುದೆಂದರೆ ಸಾಮಾನ್ಯ ಮಾತೆ?!

ನೀವು ‘ಸ್ಪೆಸಿಫಿಕ್ ರಿಸರ್ವೇಶನ್’ ಅಥವಾ ‘ನಿರ್ದಿಷ್ಟ ಜಾತಿವಾರು ಮೀಸಲು’ ಎಂಬುದನ್ನು ಕೇಳಿದ್ದೀರಾ? ಸಂವಿಧಾನದಲ್ಲೇ ಮೀಸಲು ಅವಕಾಶವನ್ನು ನೀಡಿದ್ದರೂ ಒಬಿಸಿಗಳಲ್ಲಿ (ಇತರ ಹಿಂದುಳಿದ ಜಾತಿ) ಯಾವ ಜಾತಿಗೆ, ಯಾವ ಯಾವ ಹಂತಗಳಲ್ಲಿ ಎಷ್ಟೆಷ್ಟು ಮೀಸಲು ನೀಡಬೇಕು ಎಂದು ನಿರ್ಧರಿಸಿದ್ದು ಹಾಗೂ ಅದನ್ನು ಕರ್ನಾಟಕದಲ್ಲಿ ಮೊದಲು ಜಾರಿಗೆ ತಂದಿದ್ದೇ ಅರಸು. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಆರ್ಥಿಕ ಸಶಕ್ತೀಕರಣವೆಂದರೆ ಬರೀ ಎಸ್ಸಿ/ಎಸ್ಟಿಗಳ ಬಗ್ಗೆ ಗಮನ ಹೋಗುತ್ತಿತ್ತು. ಆದರೆ ದೇವರಾಜ್ ಅರಸು ಒಬಿಸಿಗಳ ಒಗ್ಗೂಡುವಿಕೆಗೆ, ಅವರ ಶ್ರೇಯೋಭಿವೃದ್ಧಿಗೆ ಮುಂದಾದರು. ‘ಹಿಂದುಳಿದ ವರ್ಗಗಳ ಆಯೋಗ’ ಎಂಬ ಶಾಶ್ವತ ವ್ಯವಸ್ಥೆಯನ್ನೇ ರೂಪಿಸಿದರು. ಆ ಮೂಲಕ ಪಾಲಿಸಿ ಮೇಕಿಂಗ್ ಅಥವಾ ನೀತಿ ನಿರೂಪಣೆ ಕಾರ್ಯದಲ್ಲಿ ಸ್ಪಷ್ಟ ಹಾಗೂ ನಿರ್ದಿಷ್ಟ ಚೌಕಟ್ಟು ಹಾಕಿಕೊಟ್ಟರು. ಇಂತಹ ಅಧಿಕಾರಿ, ಇಂತಹ ಜಾತಿಗೆ ಸೇರಿದ ಅಧಿಕಾರಿ ಈ ಹುದ್ದೆಗೆ ಬಂದರೆ ಮಾತ್ರ ನಮಗೆ ಲಾಭವಾಗುತ್ತದೆ ಎಂದು ಲೆಕ್ಕಹಾಕುವುದಕ್ಕೆ ಅಥವಾ ಆತಂಕಪಡುವುದಕ್ಕೆ ಅವಕಾಶವೇ ಇಲ್ಲದಂತೆ ಮಾಡಬೇಕೆಂಬ ಉದ್ದೇಶ ಅದರ ಹಿಂದಿತ್ತು. ಜತೆಗೆ ‘ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ವನ್ನೂ ಆರಂಭಿಸಿದರು. (ಈಗ ಅದಕ್ಕೆ ‘ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ ಎಂದೇ ಹೆಸರಿಡಲಾಗಿದೆ.) ಈ ನಿಗಮದ ಸ್ಥಾಪನೆಯ ಮೂಲಕ ಸಣ್ಣ ಉದ್ದಿಮೆ, ವ್ಯಾಪಾರಕ್ಕೆ ಸಾಲ ಕೊಡುವ ಯೋಜನೆ ಆರಂಭಿಸಿದರು. ಹಿಂದುಳಿಯುವಿಕೆಯ ಆಧಾರದ ಮೇಲೆ ಸಾಲ ಸಿಗಲಾರಂಭಿಸಿತು. ಯಾವ ಖಾತ್ರಿಯೂ ಇಲ್ಲದ ‘ಪೆಟ್ಟಿ ಬ್ಯುಸಿನೆಸ್’ ಅಥವಾ ಚಿಲ್ಲರೆ ವ್ಯಾಪಾರಕ್ಕೆ ಯಾರು ತಾನೇ ಸಾಲ ಕೊಡುತ್ತಿದ್ದರು? ಸಣ್ಣ-ಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿದ್ದವರು ಸಾಮಾನ್ಯವಾಗಿ ಒಬಿಸಿಗಳೇ. ಅವರೆಲ್ಲರಿಗೂ ಅನುಕೂಲವಾಯಿತು.

ಇನ್ನು ಹಾಸ್ಟೆಲ್ ಸೌಲಭ್ಯ ಎಸ್ಸಿ, ಎಸ್ಟಿಗಳಿಗೆ ಮಾತ್ರ ಸೀಮಿತ ವಾಗಿತ್ತು. ಇತರ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆಂದು ಪಟ್ಟಣಕ್ಕೆ ಬಂದು, ಅಡ್ಮಿಶನ್ ಪಡೆದುಕೊಂಡರೂ ವಸತಿ ಸಮಸ್ಯೆಯಿಂದ ನರಳಬೇಕಿತ್ತು. ಈ ಹಿನ್ನೆಲೆಯಲ್ಲಿ ಒಬಿಸಿಗಳಿಗೂ ವಸತಿ ಬೇಕೆಂಬುದನ್ನು ಮನಗಂಡ ಅರಸು, ಬ್ಯಾಕ್‌ವರ್ಡ್ ಕ್ಲಾಸ್ ಹಾಗೂ ಮೈನಾರಿಟಿ ಹಾಸ್ಟೆಲ್‌ಗಳನ್ನು ತೆರೆದರು. ಎಲ್.ಜಿ. ಹಾವನೂರ್ ನೇತ್ವತ್ವದಲ್ಲಿ ಆಯೋಗವೊಂದನ್ನು ರಚಿಸಿ, ಅದರ ಶಿಫಾರಸ್ಸುಗಳಂತೆ ಶಿಕ್ಷಣ ಹಾಗೂ ಔದ್ಯೋಗಿಕ ಮೀಸಲನ್ನು ಜಾರಿಗೆ ತಂದರು. ಅಷ್ಟೇ ಅಲ್ಲ, ಮೀಸಲು ಸೌಲಭ್ಯವಿದ್ದರೂ ಎಸ್ಸಿ, ಎಸ್ಟಿ ಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಲು ‘ರೋಸ್ಟರ್ ಪದ್ಧತಿ’ಯನ್ನು ಜಾರಿಗೆ ತಂದಿದ್ದೇ ಅರಸು.

2) ರಾಜಕೀಯ ಮಟ್ಟದಲ್ಲಿ:

ಖಂಡಿತ ಇಲ್ಲಿ ಜಾತಿ ಹುಡುಕುತ್ತಿಲ್ಲ. ಸ್ವಾತಂತ್ರ್ಯ ಚಳವಳಿಯನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ನೇತಾರರಾಗಿದ್ದವರೆಲ್ಲ ಮೇಲ್ಜಾತಿ ಯವರೇ ಆಗಿದ್ದರು. ಇತರ ಹಿಂದುಳಿದ ವರ್ಗದವರಿಗೂ ರಾಜಕೀಯ ಅಧಿಕಾರ ದಕ್ಕಬೇಕು, ಪ್ರಾತಿನಿಧಿತ್ವ ಸಿಗಬೇಕು ಎಂದು ಸ್ವಾತಂತ್ರ್ಯಾ ನಂತರ ನಮ್ಮ ರಾಜ್ಯದಲ್ಲಿ ಪ್ರಯತ್ನಿಸಿದ ಮೊದಲ ವ್ಯಕ್ತಿ ಅರಸ್. ಸಂಖ್ಯಾಬಲ ಇದ್ದ ಜಾತಿಯವರು ಮಾತ್ರ ಸಿಎಂ ಆಗಲು ಸಾಧ್ಯ ಎಂಬುದನ್ನು ಮುರಿದರು. ಯೋಗ್ಯತೆ ಇದ್ದರೆ ಯಾರೂ ಮುಖ್ಯಮಂತ್ರಿಯಾಗಬಹುದು ಎಂದು ಸಾಬೀತು ಮಾಡಿದರು. ಸಾಮಾಜಿಕ ನ್ಯಾಯದ ಜತೆ ಹಿಂದುಳಿದ ಜಾತಿ/ವರ್ಗಗಳನ್ನು ರಾಜಕೀಯವಾಗಿಯೂ ಮೇಲೆ ತರುವ ಕೆಲಸಕ್ಕೆ ಕೈಹಾಕಿದರು. ತೀರಾ ಸಣ್ಣ ಸಣ್ಣ , ಹೆಸರೂ ಕೇಳಲಾರದ ಜಾತಿಗಳವರಿಗೂ ಟಿಕೆಟ್ ನೀಡಿ ಗೆಲ್ಲಿಸಿದರು. ವೀರಪ್ಪ ಮೊಯಿಲಿ, ದೇವೇಂದ್ರಪ್ಪ ಘಾಳಪ್ಪ, ಬಂಗಾರಪ್ಪ ಮುಂತಾದವರನ್ನು ಸಂಪುಟಕ್ಕೆ ಸೇರಿಸಿಕೊಂಡು ಮಂತ್ರಿಗಳನ್ನಾಗಿ ಮಾಡಿದರು. ಸಾಮಾಜಿಕ ನ್ಯಾಯ ಪರಂಪರೆ ಆರಂಭವಾಗಿದ್ದೇ ಹೀಗೆ. ಬೀದರ್‌ನಲ್ಲಿ ಬಿ. ನಾರಾಯಣ್‌ರಾವ್, ಗುಲ್ಬರ್ಗದಲ್ಲಿ ಧರ್ಮಸಿಂಗ್, ಖರ್ಗೆ, ಬಾಬು ರಾವ್ ಚಿಂಚನ್‌ಸೂರ್, ಬಾಬುರಾವ್ ಚವ್ಹಾಣ್, ಬದಾಮಿಯ ಚಿಮ್ಮನಕಟ್ಟಿ, ಮಂಗಳೂರಿನಲ್ಲಿ ಮೊಯಿಲಿ, ಪೂಜಾರಿ, ಬ್ಲೇಸಿಯಸ್ ಡಿಸೋಜಾ, ಚಿಕ್ಕಬಳ್ಳಾಪುರದ ಆರ್.ಎಲ್. ಜಾಲಪ್ಪ, ರಾಯಚೂರಿನಲ್ಲಿ ಎಚ್.ಜಿ. ರಾಮುಲು, ಇವರಲ್ಲದೆ ಪತ್ತಾರ್, ವಿಶ್ವನಾಥ್, ರಘುಪತಿ ಮುಂತಾದವರನ್ನು ರಾಜಕೀಯಕ್ಕೆ ತಂದು, ಮೆಟ್ಟಿಲು, ಬುನಾದಿ ಹಾಕಿಕೊಟ್ಟವರೇ ಅರಸು.

3)ಸಾಮಾಜಿಕ ಮಟ್ಟದಲ್ಲಿ:

ದಕ್ಷಿಣದಲ್ಲಿ ಒಕ್ಕಲಿಗರು, ಉತ್ತರದಲ್ಲಿ ಲಿಂಗಾಯತರು ಎಂಬ ಪರಂಪರೆಯನ್ನು ಮುರಿದರು. ‘ಅವರು ಆಳುವವರು, ನಾವು ಆಳಿಸಿಕೊಳ್ಳುವವರು’ ಎಂಬ ಹಿಂದುಳಿದ ಜಾತಿ/ವರ್ಗಗಳಲ್ಲಿದ್ದ ಭಾವನೆಯನ್ನು ದೂರ ಮಾಡಲು ಪ್ರಯತ್ನಿಸಿದರು. ನೀವು ಯಾರಿಗೂ ಹೆದರಬೇಕಾಗಿಲ್ಲ, ನಿಮಗೂ ಸ್ವತಂತ್ರವಾಗಿ ಬದುಕುವ, ಆಳ್ವಿಕೆ ನಡೆಸುವ ಹಕ್ಕಿದೆ ಎಂದು ಮನವರಿಕೆ ಮಾಡಿಕೊಟ್ಟರು. ಪಂಚಾಯಿತಿ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದಿದ್ದು, ಅಧಿಕಾರ ವಿಕೇಂದ್ರೀಕರಣಕ್ಕೆ ಮೊದಲು ಪ್ರಯತ್ನಿಸಿದ್ದು ರಾಜಸ್ಥಾನವಾದರೂ, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲನ್ನು ವ್ಯವಸ್ಥಿತವಾಗಿ ಮೊದಲು ಜಾರಿಗೆ ತಂದಿದ್ದು ಅರಸು. ಭಾರತದಲ್ಲಿ ಮೇಲ್ಜಾತಿಯವರ ಪ್ರಮಾಣ ಕೇವಲ 15 ಪರ್ಸೆಂಟ್, ಇತರ ಹಾಗೂ ಹಿಂದುಳಿದ ಜಾತಿ/ವರ್ಗಗಳ ಸಂಖ್ಯೆ 85 ಪರ್ಸೆಂಟ್. ಅದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ‘A curious mix’ ಎಂದಿದ್ದರು. ಅಂದು ಹಿಂದುಳಿದವರಿಗೆ ಸೂಕ್ತ ಮೀಸಲು ಕೊಡದಿದ್ದರೆ ಇಂದಿಗೂ ಸರಿಯಾಗಿ ಪ್ರಾತಿನಿಧಿತ್ವ ಸಿಕ್ಕಿರುತ್ತಿರಲಿಲ್ಲ. ಈ 85 ಪರ್ಸೆಂಟ್ ಜನರ ಬಾಳನ್ನು ಎತ್ತರಿಸಲು ಶ್ರಮಿಸಿದವರ ಸಾಲಿನಲ್ಲಿ ಅರಸು ಬರುತ್ತಾರೆ. ಬಿಹಾರಕ್ಕೆ ಕರ್ಪೂರಿ ಠಾಕೂರ್ ಹೇಗೋ, ಕರ್ನಾಟಕಕ್ಕೆ ಅರಸು ಹಾಗೇ.

ಅಷ್ಟು ಮಾತ್ರವಲ್ಲ, ಕರ್ನಾಟಕದಲ್ಲಿ ಜನತಾದರ್ಶನವನ್ನು ಆರಂಭಿಸಿದ ಹಾಗೂ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸಿದ ವ್ಯಕ್ತಿ ದೇವರಾಜ್ ಅರಸ್. ನಾಡಿನ ಸಂಸ್ಕೃತಿಗಾಗಿ ಕೊಡುಗೆಯನ್ನು ನೀಡಿದ ಹಿರಿಯರಿಗೆ ರಾಜ್ಯ ಪ್ರಶಸ್ತಿ ನೀಡುವ, ಬಡತನದಲ್ಲಿ ಬಳಲುತ್ತಿರುವ ಸಾಹಿತಿ-ಕಲಾವಿದರಿಗೆ ಮಾಸಾಶನ ಕೊಡ ಮಾಡುವ, ಕನ್ನಡವೇ ಆಡಳಿತ ಭಾಷೆ ಎಂದು ಘೋಷಿಸಿದ ಅಂತಹ ಮಹಾನ್ ವ್ಯಕ್ತಿಗೆ ಹಾಲಿ ಮುಖ್ಯಮಂತ್ರಿಯವರನ್ನು ಯಾವ ದೃಷ್ಟಿಯಲ್ಲಿ ಹೋಲಿಸುತ್ತಿದ್ದೀರಿ ಈಶ್ವರಪ್ಪ? ನಿಮ್ಮ ಯಡಿಯೂರಪ್ಪನವರು ಬಡಬಗ್ಗರಿಗೆ, ದೀನದಲಿತರಿಗೆ ಮಾಡಿ ರುವ ಘನಕಾರ್ಯವಾದರೂ ಏನು?

1. ಪಡಿತರ ಚೀಟಿ ವಿತರಣೆ ಮಾಡಿ ೭ ವರ್ಷ ಆಯಿತು.

2. ಪರೀಕ್ಷೆ ಸಮಯದಲ್ಲೂ ಸರಿಯಾಗಿ ಕರೆಂಟ್ ಕೊಡಲಿಲ್ಲ, ಈಗಲೂ ಕೊಡುತ್ತಿಲ್ಲ.

3. ಪ್ರಣಾಳಿಕೆಯಲ್ಲಿ ವರ್ಷಕ್ಕೆ 3 ಲಕ್ಷ ಮನೆ ಕಟ್ಟುವ ಭರವಸೆ ಕೊಟ್ಟಿದ್ದರೂ ಇದುವರೆಗೂ ಆಶ್ರಯ ಮನೆಗಳನ್ನು ಕಟ್ಟಿಲ್ಲ.

4. ಸಿಇಟಿ ಮೂಲಕ ಆಯ್ಕೆ ಮಾಡಿದ ಕೂಡಲೇ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸಬೇಕು ಎಂಬ ನಿಯಮ ಇದ್ದರೂ ೨೦೦೮ರಿಂದ ಇದುವರೆಗೂ ದುಡ್ಡು ಕೊಟ್ಟಿಲ್ಲ.

5. ಅಲ್ಲಾ, ಯಡಿಯೂರಪ್ಪನವರು ಯಾವ ಕೆಳಜಾತಿಯವರನ್ನು ಬೆಳೆಸಿದ್ದಾರೆ?

6. ಆಪರೇಶನ್ ಕಮಲ ಮಾಡಿದಾಗಲೂ ‘ಯಾವ’ ಜಾತಿಯವರಿಗೆ ಗಾಳ ಹಾಕಿದರು?

7. ತಮ್ಮ ಜಾತಿಯನ್ನು ಬಿಟ್ಟು ಹೊರಗಿನವರ ಬಗ್ಗೆ ಯೋಚನೆಯೇ ಮಾಡದ ವ್ಯಕ್ತಿಯನ್ನು ದೇವರಾಜ್ ಅರಸ್‌ಗೆ ಹೋಲಿಸುವುದು ಸರೀನಾ?

ನಾಳೆ ಜೂನ್ 6. ದೇವರಾಜ್ ಅರಸ್ ಅವರ ಪುಣ್ಯತಿಥಿ. ಅವರು ನಿಧನರಾಗಿ 28 ವರ್ಷಗಳು ತುಂಬುತ್ತವೆ. ಈಶ್ವರಪ್ಪನವರೇ, ಏಕೆ ಕೆಟ್ಟ ಹೋಲಿಕೆಗೆ ಅರಸು ಅವರ ಹೆಸರನ್ನು ಬಳಸಿಕೊಳ್ಳುತ್ತೀರಿ?

Let him, Rest in peace.

ಈ ಸ್ವಾಮಿ, ಸಿದ್ದುಗಳಿಗೆ ಕನಿಷ್ಠ ಸಭ್ಯತೆಯೂ ಇಲ್ವೇ?
Unparliamentary.

ನಮ್ಮ ಮಾಜಿ ಪ್ರಧಾನಿ ದೇವೇಗೌಡರಂತೆ ‘ಬ್ಲಡಿ ಬ್ಯಾಸ್ಟರ್ಡ್’ ಎಂದು ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯನ್ನೇ ಅಸಭ್ಯ ಹಾಗೂ ಅನೈತಿಕವಾಗಿ ನಿಂದಿಸುವುದು ಬಿಡಿ, ಆಸ್ಟ್ರೇಲಿಯಾ ಸಂಸತ್ತಿನಲ್ಲಿ “ಸುಳ್ಳುಗಾರ” ಎಂದು ಜರಿದರೂ ‘ಅಸಂಸದೀಯ’ (ಅನ್‌ಪಾರ್ಲಿಯಾಮೆಂಟರಿ) ಪದವಾಗುತ್ತದೆ, ಸಭಾಧ್ಯಕ್ಷರಿಂದ ವಾಗ್ದಂಡನೆಗೆ ಗುರಿಯಾಗಬೇಕಾಗುತ್ತದೆ, ಸಂಸತ್ತಿನ ಕಲಾಪಗಳ ದಾಖಲೆಗೆ ಆ ಪದವನ್ನು ಸೇರಿಸುವುದಿಲ್ಲ. ಕೆನಡಾ ಸಂಸತ್ತಿನಲ್ಲಿ “Evil genius’, “Weathervane’ (ಗಾಳಿ ಬಂದ ಕಡೆ ವಾಲುವವನು) ಎಂದೂ ಕುಟುಕುವಂತಿಲ್ಲ. ಹಾಂಕಾಂಗ್‌ನಲ್ಲಿ, “ಕೊಳಚೆ ಕಾಲುವೆಯಲ್ಲಿ ಬೆಳೆಯುವುದು ಕೊಳಕು ಹುಲ್ಲೇ…” ಎಂಬ ಗಾದೆ ಮಾತನ್ನೂ ಹೇಳುವಂತಿಲ್ಲ. ಐರ್ಲೆಂಡ್‌ನಲ್ಲಿ ‘ಫ್ಯಾಸಿಸ್ಟ್’, ‘ಹೇಡಿ’, ‘ಗೋಮುಖವ್ಯಾಘ್ರ’ ಎಂದರೂ ಜೋಕೆ. ನ್ಯೂಜಿಲ್ಯಾಂಡ್‌ನಲ್ಲಂತೂ “Commo” (ಕಮ್ಯುನಿಸ್ಟ್) ಎಂದು ಕರೆದರೂ ಅಸಂಸದೀಯ ಪದವಾಗಿ ಬಿಡುತ್ತದೆ. ಆಧುನಿಕ ಪ್ರಜಾತಂತ್ರದ ಮೂಲಸ್ಥಾನವಾದ ಬ್ರಿಟನ್‌ನಲ್ಲಿ  ‘ಲೈಯರ್’, ‘ರ್‍ಯಾಟ್’, ‘ಪುಂಡ’ ಎಂದು ದೂಷಿಸುವುದಕ್ಕೂ ಅವಕಾಶವಿಲ್ಲ. ವೇಲ್ಸ್‌ನಲ್ಲಿ ಆತ ‘ಸುಳ್ಳು’ ಹೇಳುತ್ತಿದ್ದಾನೆ ಎಂದೂ ಆರೋಪಿಸುವಂತಿಲ್ಲ.

Unparliamentary, Unbecoming ಎಂದರೆ ಸಂಸತ್ತಿನ ನಿಯಮ ಅಥವಾ ನಡಾವಳಿಗೆ ವಿರುದ್ಧವಾದುವು.  Not in accord with parliamentary procedure ಅಥವಾ ಸಂಸತ್ತಿನಲ್ಲಿ ಬಳಕೆ ಮಾಡಲು ತಕ್ಕನಲ್ಲದ, ಅವಿಧೇಯ ಪದಗಳು ಎಂದರ್ಥ. ಇತಿಹಾಸವನ್ನು ಕೆದಕುತ್ತಾ ಹೋದರೆ ೧೭೮೦ರಲ್ಲೇ ಬ್ರಿಟನ್ ಸಂಸತ್ತಿನಲ್ಲಿ ಸುಳ್ಳುಗಾರ, ಮೋಸಗಾರ, ದೇಶದ್ರೋಹಿ ಎಂಬ ಪದಪ್ರಯೋಗಗಳಾಗಿವೆ! ಅದರ ಬೆನ್ನಲ್ಲೇ ಯಾವ ಯಾವ ಪದಗಳನ್ನು ಪ್ರಯೋಗ ಮಾಡಬಾರದು ಎಂದು ಸಭಾಧ್ಯಕ್ಷರು ಲಕ್ಷ್ಮಣ ರೇಖೆ ಹಾಕಿದ, ಅವುಗಳನ್ನು ಅಸಂಸದೀಯ ಪದಗಳೆಂದು ಪಟ್ಟಿ ಮಾಡಿದ ಬೆಳವಣಿಗೆಗಳಾಗಿವೆ. ಪ್ರಜಾತಂತ್ರ ಎಂಬುದು ಹೇಗಿರಬೇಕೆಂದು ಸಭಾಧ್ಯಕ್ಷರು ಸದನದಲ್ಲಿ ಪಾಠವನ್ನೇ ಮಾಡಿದ್ದಾರೆ. Democracy should generate debate based on thoughts, not on emotions. When you are abusive, you are being emotional and not thougtful….. ಎಂದು ಬಹಳ ಚೆನ್ನಾಗಿ ಸಂಸದೀಯ ಪ್ರಜಾತಂತ್ರ ಹೇಗಿರಬೇಕೆಂದು ತಿಳಿ ಹೇಳಿದ್ದಾರೆ. ಇದರ ನಡುವೆಯೂ ಕೆಲವು ಬ್ರಿಟಿಷ್ ಸಂಸದರು ತಮ್ಮ ಬುದ್ಧಿಮತ್ತೆ ಮತ್ತು ವಾಕ್ಚಾತುರ್ಯದ ಮೂಲಕ ವಿಶಿಷ್ಟ  ವಾಕ್ಯ ರಚನೆ ಮಾಡಿ ಕಳ್ಳ, ಸುಳ್ಳ ಎಂದು ದೂರಿದ್ದೂ ಇದೆ. ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅದರಲ್ಲಿ ದೊಡ್ಡ ಪಂಟರಾಗಿದ್ದರು. “Terminological inexactitude” ಎಂದು ಹೇಳುವ ಮೂಲಕ ಸಂಸದರೊಬ್ಬರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಕುಟುಕಿದ್ದರು. ಆನಂತರ ಬ್ರಿಟನ್‌ನ ಮಾಜಿ ಸಂಪುಟ ಕಾರ್ಯದರ್ಶಿ ರಾಬರ್ಟ್ ಆರ್ಮ್‌ಸ್ಟ್ರಾಂಗ್, ಲೇಬರ್ ಪಕ್ಷದ ಸಂಸದೆ ಕ್ಲೋರ್ ಶಾರ್ಟ್ ‘ಸುಳ್ಳು’ ಹೇಳುತ್ತಿದ್ದಾರೆ, ‘ಮೋಸ’ ಮಾಡುತ್ತಿದ್ದಾರೆ ಎಂಬುದಕ್ಕೆ “Economical with the truth” ಎಂಬ ಮತ್ತೊಂದು ಹೊಸ ಪದಗುಚ್ಚವನ್ನೇ ಸೃಷ್ಟಿಸಿದರು. ಈ ಮಧ್ಯೆ, ಟಿವಿ ಚಾನೆಲ್ಲೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಸಂಸದರಿಬ್ಬರು “You are a bloody Rat” ಹಾಗೂ “You are a filthy Cat” ಎಂದು ಪರಸ್ಪರ ನಿಂದಿಸಿಕೊಂಡಾಗ ಅದನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಯಿತೆಂದರೆ ಅವರ ಸದಸ್ಯತ್ವವನ್ನೇ ರದ್ದು ಮಾಡಲಾಯಿತು.

ಇಂತಹ ಇತಿಹಾಸ ಮುಂದಿದ್ದರೂ ನಮ್ಮ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಈ ರಾಜ್ಯಕ್ಕೆ ಎಂತಹ ಮೇಲ್ಪಂಕ್ತಿ ಹಾಕಿಕೊಡುತ್ತಿದ್ದಾರೆ?

* ಅವನ್ಯಾರು, ಬ್ಲಡಿ ಬ್ಯಾಸ್ಟರ್ಡ್!

-ಎಚ್.ಡಿ. ದೇವೇಗೌಡ, 2010, ಜನವರಿ 10. ನೈಸ್ ವಿರುದ್ಧ ನಡೆದ ಪ್ರತಿಭಟನೆ ವೇಳೆ.

ಮಾಜಿ ಪ್ರಧಾನಿ ಇಂಥದ್ದೊಂದು ತೀರಾ ಅವಹೇಳನಕಾರಿ, ಅನೈತಿಕ, ಅಸಭ್ಯ ಮಾತನಾಡಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಕಾಂಗ್ರೆಸ್ ಸಿದ್ದರಾಮಯ್ಯನವರು ಕಳೆದ ಶುಕ್ರವಾರ ಮುಖ್ಯಮಂತ್ರಿಯವರ ವಿರುದ್ಧ ತೀರಾ ಕೆಳಮಟ್ಟದ ಮಾತನಾಡಿದ್ದಾರೆ.

* ನೆರೆ ಸಂತ್ರಸ್ತರಿಗೆ ಸ್ಪಂದಿಸದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾನ-ಮರ್ಯಾದೆ ಇದೆಯೇ? ಸುಳ್ಳು ಹೇಳುತ್ತಾ ಊರೂರು ತಿರುಗುತ್ತಿರುವ ಯಡಿಯೂರಪ್ಪ ಹಿಪಾಕ್ರೈಟ್.

-ಸಿದ್ದರಾಮಯ್ಯ, 2010, ಮೇ 21, ರಾಜೀವ್ ಪುಣ್ಯತಿಥಿ ಸಂದರ್ಭದಲ್ಲಿ.

* ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಬಂದರೆ ನಮಸ್ಕರಿಸುವ ಬದಲು ಜಾಡಿಸಿ ಒದೆಯಿರಿ. ಪರಿಹಾರ ಬೇಕಿದ್ದರೆ ಒದ್ದು ಬುದ್ಧಿ ಕಲಿಸಿ.

-ಕುಮಾರಸ್ವಾಮಿ, 2010, ಮೇ 21, ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ.

ಏನಾಗಿದೆ ಇವರಿಗೆಲ್ಲ?

ಸಜ್ಜನರು ರಾಜಕಾರಣಕ್ಕೆ ಬರಬೇಕು ಎಂಬ ಕೂಗು ಜೋರಾಗುತ್ತಿರುವ ಈ ಕಾಲದಲ್ಲಿ ಕುಮಾರಸ್ವಾಮಿ, ಸಿದ್ದು ಅವರ ಮಾತುಗಳು ಯಾವ ಸಂದೇಶವನ್ನು ಕೊಟ್ಟಾವು? ನೆರೆ ಸಂತ್ರಸ್ತರ ಬಗ್ಗೆ ಧ್ವನಿಯೆತ್ತಿರುವುದು ಸರಿಯಾದುದೇ ಆಗಿದ್ದರೂ ನಿಮ್ಮ ಕಾಳಜಿ ಸಾತ್ವಿಕವಾದದ್ದೇ ಸ್ವಾಮಿ? ಕನಿಷ್ಠ ಪೌರಪ್ರeಯಾದರೂ ಇದೆಯೇ? ಕಳೆದ ಎರಡು ವರ್ಷಗಳಿಂದ ಪ್ರತಿಪಕ್ಷಗಳ ಸ್ಥಾನದಲ್ಲಿ ಸುಖಾಸುಮ್ಮನೆ ಕುಳಿತುಕೊಂಡಿರುವ ನಿಮ್ಮ ಹಸಿವು, ಅದು ತಂದಿರುವ ಹತಾಶೆ ಅರ್ಥವಾಗುವಂಥವೇ. ಆದರೆ ಈ ರೀತಿ ನಿಂದಿಸುವುದರಿಂದ, ಅವಹೇಳನಕಾರಿಯಾಗಿ ಮಾತನಾಡುವುದರಿಂದ ಅಧಿಕಾರ ಕೈಗೆಟುಕುತ್ತದಾ ಕುಮಾರಸ್ವಾಮಿ? ರಾಜ್ಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನ ಸಿಗುವವರೆಗೂ ಪಕ್ಷದ ನಾಯಕರನ್ನೇ ಟೀಕಿಸುತ್ತಾ ಬಂದ ಸಿದ್ದು ಅವರೇ, ಈಗ ಮುಖ್ಯಮಂತ್ರಿಯವರನ್ನು ನಿಂದಿಸುತ್ತಿದ್ದೀರಿ. ಹಾಗಂತ ಅಧಿಕಾರ ದಕ್ಕುತ್ತಾ? ನಿಮ್ಮ ಅಧಿಕಾರದ ತುಡಿತದ ತೀವ್ರತೆ ಎಷ್ಟೇ ಇದ್ದರೂ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಆಯಾಚಿತವಾಗಿ ಬಂದಿದ್ದಲ್ಲ. ಜನ ವೋಟು ಕೊಟ್ಟು ಆ ಸ್ಥಾನದಲ್ಲಿ ಅವರನ್ನು ಕೂರಿಸಿದ್ದಾರೆ. ಅವರೇನಾದರೂ ತಪ್ಪು ಮಾಡಿದರೆ, ಭ್ರಷ್ಟ ಕಾರ್ಯದಲ್ಲಿ ತೊಡಗಿದರೆ ಪತ್ತೆ ಹಚ್ಚಿ ಜನರ ಗಮನಕ್ಕೆ ತಂದು ಬಣ್ಣಬಯಲು ಮಾಡಿ. ಅಷ್ಟಕ್ಕೂ ಹೇಗ್ಹೇಗೆ ಭ್ರಷ್ಟಾಚಾರ ಮಾಡಬಹುದು ಎಂಬುದು ಸಿದ್ದು ಹಾಗೂ ಕುಮಾರಸ್ವಾಮಿಯವರಿಗೆ ‘ಅನುಭವ’ದಿಂದಲೇ ಚೆನ್ನಾಗಿ ಗೊತ್ತಿದೆ. ಕಳ್ಳರಿಗೆ ಯಾವ ಭಾಗದಲ್ಲಿ ಒಳನುಗ್ಗಬಹುದು, ಎಲ್ಲಿ ಏನು ಸಿಗುತ್ತದೆ ಎಂಬುದು ಗೊತ್ತಿರುತ್ತದೆ. ಹಾಗಿರುವಾಗ ಯಡಿಯೂರಪ್ಪನವರನ್ನು ಹಿಡಿಯುವುದು ಬಹಳ ಸುಲಭ. ಆ ಕೆಲಸ ಮಾಡಿ ಸಾರ್. ಏಕೆ ವೈಯಕ್ತಿಕ ನಿಂದನೆಗಿಳಿಯುತ್ತೀರಿ?

‘ಬ್ಲಡಿ’ ಎಂಬ ಪದವೇ ಅನ್‌ಪಾರ್ಲಿಯಾಮೆಂಟರಿ, ಇನ್ನು ಬ್ಲಡಿ ಬ್ಯಾಸ್ಟರ್ಡ್ ಎಂದರೆ ಏನಾದೀತು? ಬ್ಯಾಸ್ಟರ್ಡ್ ಅಂದ್ರೆ ಏನರ್ಥ? ಇಂತಹ ಕುಲಹೀನ ಮಾತನಾಡಿದರೂ ದೇವೇಗೌಡರ ವಿರುದ್ಧ ಜನ ರೊಚ್ಚಿಗೇಳಲಿಲ್ಲ. ಏಕೆಂದರೆ ಜನರೆಂದೂ ಗೌಡರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ಯಾವುದೇ ಹೋರಾಟ ಕೈಗೆತ್ತಿಕೊಂಡರೂ ಅದರ ಹಿಂದೆ ಯಾವುದೋ ಹಿತಾಸಕ್ತಿ ಖಂಡಿತ ಇದ್ದೇ ಇರುತ್ತದೆ, ಅವರಿಗೆ ಜನಪರ ಕಾಳಜಿ ಇಲ್ಲ ಎಂಬುದು ಕರ್ನಾಟಕದ ಮಹಾಜನತೆಗೆ ಎಂದೋ ಅರ್ಥವಾಗಿ ಬಿಟ್ಟಿದೆ. ನನ್ನ ಹೆಸರಲ್ಲಿ ಒಂದು ಗುಂಟೆ ಜಾಗವಿಲ್ಲ ಎಂದು ಹೇಳುವ ದೇವೇಗೌಡರ ಸತ್ಯಸಂಧತೆ ಬಗ್ಗೆ ಬಿಡಿಸಿ ಹೇಳಬೇಕಾ?! ನೀವೂ ಕೂಡ ಗೌಡರಂತೆ ಮಾತನಾಡಲು, ವರ್ತಿಸಲು ಆರಂಭಿಸಿದರೆ ನಿಮ್ಮ ಬಗ್ಗೆಯೂ ಜನ ಹಾಗೇ ಅಂದುಕೊಂಡಾರು! ಬಿಜೆಪಿಯವರೇನು ಜನಾನುರಾಗಿಗಳು ಎಂದಲ್ಲ. ಕಾಂಗ್ರೆಸ್‌ನವರು ಈ ರಾಜ್ಯವನ್ನು 45ರಿಂದ 50 ವರ್ಷ ಆಳಿದ್ದಾರೆ, ತಮ್ಮ ‘ಬಡತನ’ವನ್ನು ಪರಿಹರಿಸಿಕೊಂಡಿದ್ದಾರೆ. ಜೆಡಿಎಸ್(ಜನತಾ ಪರಿವಾರ)ನವರು 10ರಿಂದ 15 ವರ್ಷ ಆಡಳಿತ ನಡೆಸಿದ್ದಾರೆ, ರೈತರ ಬಗ್ಗೆ ಮಾತನಾಡುತ್ತಾ ರಿಯಲ್ ಎಸ್ಟೇಟ್ ಮಾಲೀಕರಾಗಿದ್ದಾರೆ. ಐವತ್ತು-ಅರವತ್ತು ವರ್ಷದಿಂದ ಹಸಿದುಕೊಂಡಿದ್ದ ಬಿಜೆಪಿಗೆ ಈಗ ಅಧಿಕಾರ ದಕ್ಕಿದೆ, ಹಸಿವು ತೀರಿಸಿಕೊಳ್ಳುತ್ತಿದೆ ಅಷ್ಟೇ! ಹಾಗಂತ ನೀವು ಬೇಸರಿಸಿಕೊಂಡರೆ, ಹತಾಶೆಗೊಂಡರೆ ಏನು ಏನು ಫಲ? ಪ್ರತಿಪಕ್ಷಗಳ ಸ್ಥಾನದಲ್ಲಿದ್ದಾಗ ರಚನಾತ್ಮಕವಾಗಿ ಕಾರ್ಯನಿರ್ವಹಿಸಿ, ಆಡಳಿತ ಪಕ್ಷದ ಜನವಿರೋಧಿ ಧೋರಣೆಯನ್ನು ಬಯಲು ಮಾಡಿದರೆ ಮುಂದಿನ ಬಾರಿ ಜನ ನಿಮಗೆ ವೋಟು ಕೊಡಬಹುದು.

ಇಷ್ಟಾಗಿಯೂ ನೀವು ಮಾಡುತ್ತಿರುವುದೇನು? ನಿಮ್ಮ ಬಾಯಿಂದ ಹೊರಬರುತ್ತಿರುವ ಮಾತುಗಳಾದರೂ ಎಂಥವು?

ಸುಭಾಷ್ ಚಂದ್ರ ಬೋಸ್ ಮಾಡುತ್ತಿದ್ದ ರೇಡಿಯೋ ಭಾಷಣಗಳು, 1947, ಆಗಸ್ಟ್ 14ರ ಮಧ್ಯರಾತ್ರಿ ಜವಾಹರಲಾಲ್ ನೆಹರು ಮಾಡಿದ ‘ಟ್ರೈಸ್ಟ್ ವಿತ್ ಡೆಸ್ಟಿನಿ’ ಭಾಷಣ, ಅಟಲ್ ಬಿಹಾರಿ ವಾಜಪೇಯಿಯವರು ಸಂಸತ್ತಿನಲ್ಲಿ ಆಡುತ್ತಿದ್ದ ಮಾತುಗಳನ್ನು ಕೇಳಿ ದೇಶವಾಸಿಗಳು ಪ್ರೇರೇಪಣೆ ಪಡೆಯುತ್ತಿದ್ದರು. ನಿಮ್ಮ ಮಾತುಗಳು ಯಾರಿಗೆ ಪ್ರೇರೇಪಣೆ ನೀಡುತ್ತಿವೆ ಸಿದ್ದು ಹಾಗೂ ಸ್ವಾಮಿಯವರೇ? ಬೆನ್ನ ಹಿಂದೆ ಬೈದುಕೊಳ್ಳುವ ಮಾತುಗಳನ್ನು ಬೀದಿಯಲ್ಲಿ ನಿಂತು ಆಡಿದರೆ ಸಮಾಜದ ಗತಿಯೇನು? ಮುಖ್ಯಮಂತ್ರಿಯವರನ್ನು ಈ ರೀತಿ ಸಾರ್ವಜನಿಕವಾಗಿ ನಿಂದಿಸಿದರೆ ಆ ಸ್ಥಾನದ ಘನತೆ ಏನಾದೀತು? ನಮ್ಮ ಮಹಾನ್ ನಾಯಕರೇ ಹೀಗೆ ಮಾತನಾಡಿದರೆ ಅವರ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ, ಒಬ್ಬ ಸಾಮಾನ್ಯ ಪ್ರಜೆಗೆ ಯಾವ ಸಂದೇಶ ಸಿಕ್ಕೀತು? ಯಾವ ಪ್ರೇರಣೆ, ಪ್ರಚೋದನೆ ಕೊಟ್ಟಂತಾದೀತು? ಓದೆಯಿರಿ, ಹೊಡೆಯಿರಿ ಎನ್ನುವುದಕ್ಕೆ ನೀವ್ಯಾರು ಕುಮಾರಸ್ವಾಮಿ? ನೀವು ಯಾವ ಉತ್ತರ ಕರ್ನಾಟಕದ ಜನರಿಗೆ ಒದೆಯಿರಿ ಎಂದು ಕರೆ ಕೊಡುತ್ತಿದ್ದೀರೋ, ಅದೇ ಜನರು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನೇ ಒದ್ದು ಕಳುಹಿಸಿದ್ದಾರೆ. ನಿಮ್ಮ ಸ್ಥಾನ ಯಾವುದು ಎಂಬುದನ್ನು, ನಿಮಗೆ ಯಾವ ಬೆಲೆ ಇದೆ ಎಂಬುದನ್ನು ೨೦೦೮ರ ಚುನಾವಣೆಯಲ್ಲಿ ಮತದಾರ ಸ್ಪಷ್ಟ ಪಡಿಸಿದ್ದಾನೆ. ಒಳ್ಳೆಯ ಕೆಲಸ ಮಾಡಿ, ಐದು ವರ್ಷ ಕಾಯಿರಿ. ಅದು ಬಿಟ್ಟು, ನಿಂದನೆಗಿಳಿಯುವುದು ಸರಿಯೇ? ನೀವು ಹೀಗೆ ಮಾತನಾಡುತ್ತಿದ್ದರೆ ಜನ ನಿಮಗೇ ಒದೆಯುತ್ತಾರೆ.

ಅಟಲ್ ಬಿಹಾರಿ ವಾಜಪೇಯಿಯವರ ಬಯೋಗ್ರಫಿ ‘ಅಜಾತಶತ್ರು’ವನ್ನು ಬರೆದಿರುವ ನಮ್ಮ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಹಿಂದೊಮ್ಮೆ ತಮ್ಮ ಲೇಖನದಲ್ಲಿ ಘಟನೆಯೊಂದನ್ನು ಪ್ರಸ್ತಾಪಿಸಿದ್ದರು. ಅದು ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದ ಸಮಯ. ಅದರ ವಿರುದ್ಧ ದೇಶವೇ ರೊಚ್ಚಿಗೆದ್ದಿತ್ತು. ಆಗಿನ ಜನಸಂಘ ಇಂದಿರಾ ಗಾಂಧಿಯವರಿಗೆ ಪ್ರಶ್ನೆಗಳ ಹೊತ್ತಗೆಯೊಂದನ್ನು ಸಿದ್ಧಪಡಿಸಿತ್ತು. ಮುದ್ರಣಕ್ಕೆ ಕಳುಹಿಸುವ ಮೊದಲು ಒಮ್ಮೆ ಕಣ್ಣಾಡಿಸಿ, ಯಾವುದಾದರೂ ಬದಲಾವಣೆ ಇದ್ದರೆ ಸೂಚಿಸಿ ಎಂದು ಅಟಲ್ ಬಿಹಾರಿ ವಾಜಪೇಯಿಯವರಿಗೆ ನೀಡಲಾಯಿತು. ಸೂಕ್ಷ್ಮವಾಗಿ ಗಮನಿಸಿ ಎಲ್ಲಾ ಸರಿಯಾಗಿದೆ ಎಂದ ವಾಜಪೇಯಿಯವರು, ಕೈಪಿಡಿಯ ಶೀರ್ಷಿಕೆ “ಇಂದಿರಾ, ಜವಾಬ್ ದೋ” ಎಂಬುದನ್ನು “ಇಂದಿರಾಜಿ, ಜವಾಬ್ ದೀಜಿಯೇ” ಎಂದು ಬದಲಾಯಿಸಿ ಕೊಟ್ಟಿದ್ದರು! ಇಂದಿರಾಗಾಂಧಿಯವರ ಸೊಸೆ ಸೋನಿಯಾ ಅಂತಹ ಮಹಾನ್ ನಾಯಕನನ್ನೇ “ಗದ್ದಾರ್”, “ಲೈಯರ್” ಎಂದು ಸಾರ್ವಜನಿಕವಾಗಿ ನಿಂದಿಸಿ ತಮ್ಮ ಕೀಳು ಅಭಿರುಚಿಯನ್ನು ತೋರಿಸಿದ್ದು, ಈ ಮಧ್ಯೆ ಸಂಸತ್ತಿನಲ್ಲಿ ಲಾಲು ಅವರನ್ನು ಅಂತಹದ್ದೇ ಹೊಲಸು ಶಬ್ದದ ಮೂಲಕ ನಿಂದಿಸಿ ಸಂಸದ ಅನಂತ್‌ಕುಮಾರ್ ಮಂಗಳಾರತಿ ಮಾಡಿಸಿಕೊಂಡಿದ್ದು ಬೇರೆ ಮಾತು.

ದುರದೃಷ್ಟವಶಾತ್, ಇವತ್ತು ಹೊಲಸು ಪದಗಳ ಬಳಕೆಯನ್ನೇ ಕಟು ಟೀಕೆ ಎಂದು ಭಾವಿಸಿದಂತಿದೆ.

ಬಿ.ಎಸ್. ಯಡಿಯೂರಪ್ಪನವರು ಇವತ್ತು ರಾಜ್ಯದ ಮುಖ್ಯಮಂತ್ರಿಯಾಗಿರಬಹುದು. ಆದರೆ ಅದರ ಹಿಂದೆ ಸಾಕಷ್ಟು ಪರಿಶ್ರಮ ಇದೆ. ಪಂಚಾಯಿತಿ ಮಟ್ಟದಿಂದ ಇಲ್ಲಿಯವರೆಗೂ ಸಾಗಿ ಬಂದಿರುವ ಅವರೂ ಕೂಡ ಹುಟ್ಟುಹೋರಾಟಗಾರರು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ತಿಳಿದುಕೊಳ್ಳಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡು ಎಂಬ ಮಾತಿದೆ. ಇಂದು ಬಿಜೆಪಿ ನಾಯಕ, ಹೋರಾಟಗಾರ ಯಡಿಯೂರಪ್ಪನವರಿಗೂ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಬಹಳ ವ್ಯತ್ಯಾಸ ಕಾಣುತ್ತಿರಬಹುದು. ಆಧಾರಸಮೇತ ಅವರನ್ನು ಭ್ರಷ್ಟಾಚಾರಿ, ಸ್ವಜನಪಕ್ಷಪಾತಿ ಏನು ಬೇಕಾದರೂ ಹೇಳಿ, ಯಾವುದರಲ್ಲೂ ತಪ್ಪಿಲ್ಲ. ಆದರೆ ಯಡಿಯೂರಪ್ಪನವರು ಯಾವತ್ತೂ ಅಸಭ್ಯವಾಗಿ ಮಾತನಾಡಿದವರಲ್ಲ. ದೇವೇಗೌಡರು ಮತ್ತು ಅವರ ಪುತ್ರರತ್ನ ವಚನಭ್ರಷ್ಟ ಕೆಲಸ ಮಾಡಿದಾಗಲೂ ಯಡಿಯೂರಪ್ಪನವರು, ‘ಸನ್ಮಾನ್ಯ ದೇವೇಗೌಡರು, ಸನ್ಮಾನ್ಯ ಕುಮಾರಸ್ವಾಮಿಯವರು….” ಎಂದೇ ಸಂಬೋಧಿಸುತ್ತಿದ್ದರು. ಯಡಿಯೂರಪ್ಪನವರು ಈಗ ಅಲಂಕರಿಸಿರುವ ಸ್ಥಾನ ಹಾಗೂ ಈ ಹಿಂದೆ ಅವರು ನಡೆದುಕೊಂಡಿರುವ ರೀತಿಯನ್ನು ಗಮನದಲ್ಲಿಟ್ಟುಕೊಂಡಾದರೂ ಕನಿಷ್ಠ ಗೌರವ ಕೊಡುವುದನ್ನು ಕಲಿತುಕೊಳ್ಳಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರೇ.

ಇಲ್ಲವಾದರೆ ನಿಮಗೆ ಮರ್ಯಾದೆ ಇದೆಯೇ ಎಂದು ಕೇಳುವ ಕೆಲಸವನ್ನು ಜನರೇ ಮಾಡುತ್ತಾರೆ. ಜೋಕೆ…