Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ!

ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ!

೨೦೦೫ರಲ್ಲಿ ಸಾಯುವಾಗ ಪೋಪ್ ಜಾನ್‌ಪಾಲ್ ಮನದಲ್ಲಿ ಒಂದು ಕೊರಗು ಹಾಗೇ ಉಳಿದಿತ್ತು.

೧೯೭೯ರಲ್ಲಿ ಟರ್ಕಿ, ೧೯೮೧ರಲ್ಲಿ ಪಾಕಿಸ್ತಾನ, ಜಪಾನ್, ೧೯೮೧ ಹಾಗೂ ೧೯೯೫ರಲ್ಲಿ ಫಿಲಿಪ್ಪೀನ್ಸ್, ೧೯೮೪ ಮತ್ತು ೧೯೮೯ರಲ್ಲಿ ದಕ್ಷಿಣ ಕೊರಿಯಾ, ೧೯೮೪ರಲ್ಲಿ ಥಾಯ್ಲೆಂಡ್, ೧೯೮೬ರಲ್ಲಿ ಬಾಂಗ್ಲಾದೇಶ, ಸಿಂಗಪುರ, ೧೯೮೬ ಮತ್ತು ೧೯೯೯ರಲ್ಲಿ ಭಾರತ, ೧೯೮೯ರಲ್ಲಿ ಇಂಡೋನೇಷಿಯಾ ಮತ್ತು ಈಸ್ಟ್ ಟಿಮೋರ್, ೧೯೯೫ರಲ್ಲಿ ಶ್ರೀಲಂಕಾ, ೧೯೯೭ರಲ್ಲಿ ಲೆಬನಾನ್, ೨೦೦೧ರಲ್ಲಿ ಕಝಕಸ್ತಾನ್, ೨೦೦೨ರಲ್ಲಿ ಅಝರ್ ಬೈಜಾನ್- ಹೀಗೆ ೨೬ ವರ್ಷಗಳ ತಮ್ಮ ಪೋಪ್‌ಗಿರಿಯಲ್ಲಿ ಜಾನ್‌ಪಾಲ್ ಏಷ್ಯಾದ ೧೫ ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದರು.

೧೯೯೯ರಲ್ಲಿ ನಮ್ಮ ಹೊಸದಿಲ್ಲಿಗೆ ಭೇಟಿ ನೀಡಿದ್ದಾಗಲಂತೂ “The people of Asia need Jesus Christ and his gospel. Asia is thirsting for the living water that Jesus alone can give…” ಎಂದು ಸಾರ್ವಜನಿಕವಾಗಿ ಘೋಷಣೆಯನ್ನು ಮಾಡುವ ಮೂಲಕ ಮತಾಂತರ ಮಾಡುವ ತಮ್ಮ ಉದ್ದೇಶವನ್ನು ಬಹಿರಂಗಗೊಳಿಸಿದ್ದರು.  ಹಾಗೆಯೇ, “1.3 billion people have been seeking spiritual fulfillment” ಎನ್ನುವ ಮೂಲಕ ಜಗತ್ತಿನ ಅತ್ಯಂತ ಜನಭರಿತ ರಾಷ್ಟ್ರವಾದ ಚೀನಾಕ್ಕೆ ಭೇಟಿ ನೀಡುವ ತಮ್ಮ ಮನದ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ ಚೀನಾ ಸೊಪ್ಪುಹಾಕಲಿಲ್ಲ. ಅಷ್ಟೇಕೆ, ಇಂದಿಗೂ ವ್ಯಾಟಿಕನ್ ಜತೆ ರಾಜತಾಂತ್ರಿಕ ಸಂಬಂಧವನ್ನೇ ಹೊಂದಿರದ ಏಕಮಾತ್ರ ಬಲಿಷ್ಠ ರಾಷ್ಟ್ರವೆಂದರೆ ಚೀನಾವೊಂದೇ! ಅಷ್ಟೇ ಅಲ್ಲ, ಕ್ಯಾಥೋಲಿಕ್ ಚರ್ಚ್‌ಗಳು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅವುಗಳು ವ್ಯಾಟಿಕನ್‌ನ ನೇರ ನಿಯಂತ್ರಣಕ್ಕೊಳಪಟ್ಟಿವೆ. ಆದರೆ ಚೀನಾದಲ್ಲಿ ೧.೨ ಕೋಟಿ ಕ್ಯಾಥೋಲಿಕ್ಕರಿದ್ದರೂ ಅವರು ನಡೆಸುತ್ತಿರುವ ಚರ್ಚ್‌ಗಳು ಚೀನಿ ಸರಕಾರದ ನಿಯಂತ್ರಣದಲ್ಲಿವೆ! ಇಂದಿಗೂ ವ್ಯಾಟಿಕನ್‌ನ ಮಹದಾಸೆಯೆಂದರೆ ಚೀನಾದಲ್ಲಿ ಮತಾಂತರ ಕಾರ್ಯ ನಡೆಸುವುದು. ಅದಕ್ಕಾಗಿ ತನ್ನೆಲ್ಲಾ ಪ್ರಭಾವವನ್ನು ಬಳಸಿ ಪೋಪ್ ಜಾನ್‌ಪಾಲ್ ಅವರ ಚೀನಾ ಭೇಟಿಗೆ ಅವಕಾಶ ಪಡೆದುಕೊಳ್ಳಲು ಯತ್ನಿಸಿತು. ಆದರೆ ಚೀನಾ ವ್ಯಾಟಿಕನ್‌ಗೆ ಕಿಮ್ಮತ್ತು ಕೊಡಲಿಲ್ಲ. ಹಾಗಾಗಿ ಪೋಪ್ ಜಾನ್ ಆಸೆಯೊಂದಿಗೇ ಅಸು ನೀಗಬೇಕಾಯಿತು. ಅವರ ನಂತರ ಪೋಪ್ ಆಗಿ ಬಂದಿರುವ ಬೆನೆಡಿಕ್ಟ್ ಅವರಿಗೆ, “Please come to China to bring us love and democracy” ಎಂದು ಹಾಂಕಾಂಗ್‌ನ ಪ್ರಭಾವಿ ಮಾಧ್ಯಮ ದೊರೆ ಜಿಮ್ಮಿ ಲಾ ಇತ್ತೀಚೆಗೆ ಕರೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ “I will come” ಎಂದು ಬೆನೆಡಿಕ್ಟ್ ಕೂಡ ಹೇಳಿದ್ದಾರೆ. ಆದರೆ “ಯಾವಾಗ” ಭೇಟಿ ನೀಡುತ್ತೀರಿ? ಎಂಬ ಪ್ರಶ್ನೆಗೆ  The timing depends on “God’s wish” ಎಂದಿದ್ದಾರೆ!!

ಪಾಪ… ಪೋಪ್ ಬೆನೆಡಿಕ್ಟ್ ಅವರ ಅಸಹಾಯಕತೆಯನ್ನು ನೋಡಿ.

“ಯಾವಾಗ ಬರುತ್ತೀರಿ” ಅಂತ ಕೇಳಿದರೆ “ದೇವರು ಇಚ್ಛಿಸಿದಾಗ” ಎನ್ನಬೇಕಾಗಿ ಬಂದಿದೆ. ಅಣಕವೆಂದರೆ ಚೀನಾಕ್ಕೆ ಭೇಟಿ ನೀಡಲು ಜೀಸಸ್‌ಗಿಂತ ಚೀನಾ ಅಧ್ಯಕ್ಷ ಹೂ ಜಿಂಟಾವೂ ಅಣತಿ ಮುಖ್ಯವಾಗಿದೆ! ಆದರೆ ನಾಚಿಕೆಯನ್ನುಂಟು ಮಾಡುವ ಸಂಗತಿಯೆಂದರೆ, ವಿಶ್ವದ ಅತ್ಯಂತ ಬಲಿಷ್ಠ ಧರ್ಮಗುರುವಿಗೆ “ನಮ್ಮ ನೆಲದ ಮೇಲೆ ಕಾಲಿಡಲು ಅವಕಾಶ ಕೊಡುವುದಿಲ್ಲ” ಎಂದು ಹೇಳುವ ಎದೆಗಾರಿಕೆಯನ್ನು ಚೀನಾ ತೋರುತ್ತಿದ್ದರೆ ಮೊನ್ನೆ ಆಗಸ್ಟ್ ೨೩ರಂದು ನಮ್ಮ ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಎಂಬ ೮೪ ವರ್ಷದ ವಯೋವೃದ್ಧ ಸನ್ಯಾಸಿಯನ್ನು ಮತಾಂಧ ಕ್ರೈಸ್ತರು ಕೊಲೆಗೈದಿದ್ದರೂ ಶಿಕ್ಷಿಸುವ ತಾಕತ್ತು ನಮ್ಮನ್ನಾಳು ವವರಿಗಿಲ್ಲ!! ಈ ಮಿಷನರಿಗಳು ಬಹುಸಂಖ್ಯಾತ ಧರ್ಮಕ್ಕೆ ಸೇರಿರುವ ಒಬ್ಬ ಸಾಧುವನ್ನೇ ಕೊಲ್ಲುವಷ್ಟು ಬೆಳೆದಿದ್ದಾರೆ ಎಂದರೆ ಅದಕ್ಕೆ ಯಾರನ್ನು ದೂರಬೇಕು? ಇಷ್ಟು ದಿನ ಮತಾಂತರಿಗಳನ್ನು, ಮಿಷನರಿಗಳ ಆಮಿಷವನ್ನು, ಅವರಿಗೆ ಹರಿದು ಬರುತ್ತಿರುವ ಹಣದ ಥೈಲಿಯನ್ನು ದೂರಿದ್ದಾಯಿತು. ಇನ್ನೆಷ್ಟು ದಿನ ಅಂತ ಮಿಷನರಿಗಳತ್ತ ಬೊಟ್ಟು ಮಾಡಬೇಕು? ನಮ್ಮ ಹಿಂದೂ ಧರ್ಮ ಈ ಸ್ಥಿತಿಗೆ ಬರಲು ಕಾರಣ ಯಾರು? ಮಿಷನರಿಗಳೋ, ಅಭಿಮಾನಶೂನ್ಯ ಹಿಂದೂಗಳೋ?

ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ನೆನಪಿಸಿಕೊಳ್ಳಿ.

ನಮ್ಮ ದೇಶದ ಅಧಃಪತನ ಪ್ರಾರಂಭವಾಗಿದ್ದೇ ಬೌದ್ಧ ಧರ್ಮದ ಪ್ರಗತಿಯೊಂದಿಗೆ. ಅಶೋಕನನ್ನು ಮಹಾ ಸಾಮ್ರಾಟ ಅಂತ ನಾವು ಹೊಗಳಬಹುದು. ಆದರೆ ಅಶೋಕ ಮಾಡಿದ್ದೇನು? ಕಳಿಂಗ ಯುದ್ಧದಲ್ಲಿ ಸಂಭವಿಸಿದ ಪ್ರಾಣ ಹಾನಿಯನ್ನು ಕಂಡು ಆತ ಶಸ್ತ್ರತ್ಯಾಗ ಮಾಡಿದ್ದೇನೋ ಸರಿ. ಆದರೆ ಅದರಿಂದುಂಟಾದ ಹಾನಿಯನ್ನು ಗಮನಿಸಿ. ಕ್ಷತ್ರಿಯನಾಗಿ ಉತ್ತಮ ಆಡಳಿತ ನೀಡುವ ಬದಲು, ಜನಸಾಮಾನ್ಯರ ರಕ್ಷಣೆ ಮಾಡುವ ಬದಲಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಸನ್ಯಾಸಿಯಂತೆ ಶಾಂತಿ ಬೋಧನೆ ಗಿಳಿದ. ಮಕ್ಕಳನ್ನೂ ಧರ್ಮಪ್ರಸಾರಕ್ಕೆ ಕಳುಹಿಸಿದ. ಹೀಗೆ ಬೌದ್ಧ ಧರ್ಮ ಜನಪ್ರಿಯಗೊಳ್ಳಲಾರಂಭಿಸಿದಂತೆ ನಮ್ಮ ಆಳುವ ದೊರೆಗಳು ಶೌರ್ಯ ಮರೆತು ಶಾಂತಿ ಮಂತ್ರಪಠಿಸ ಲಾರಂಭಿಸಿದರು. ಹೋರಾಟ ಮನೋಭಾವನೆಯೇ ಕುಂದಿಹೋಯಿತು. ಜತೆಗೆ ಜಾತಿ, ಪಂಥಗಳೆಂಬ ವಿಷಬೀಜಗಳು ನಮ್ಮ ಸಮಾಜವನ್ನೇ ಒಡೆದು ಹಾಕಿದವು. ಹಾಗಾಗಿ ಮುಸಲ್ಮಾನರು ಸಾವಿರಾರು ಮೈಲು ದೂರದಿಂದ ಬಂದು ಭಾರತದ ಮೇಲೆ ಆಕ್ರಮಣ ಮಾಡಿದರೂ ಅವರನ್ನು ಎದುರಿಸುವ, ಮಟ್ಟಹಾಕುವ ತಾಕತ್ತು ನಮ್ಮ ರಾಜರಿಗಿರಲಿಲ್ಲ. ಸಾಲದೆಂಬಂತೆ ಕ್ಷಮೆಯೆಂಬ ದುಬಾರಿ ದೌರ್ಬಲ್ಯವೂ ನಮ್ಮ ರಾಜರ ಮೈಗೂಡಿಕೊಂಡಿತ್ತು. ನೀವೇ ಯೋಚಿಸಿ, ೧೧೯೧ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಸೋತು ಶರಣಾದ ಮೊಹಮದ್ ಘೋರಿಗೆ ಪೃಥ್ವಿರಾಜ್ ಚವ್ಹಾಣ್ ಕ್ಷಮಾದಾನ ನೀಡದೆ ಕೊಲೆಗೈದಿದ್ದರೆ ಮುಂದಾಗುವ ಅನಾಹುತ ತಪ್ಪುತ್ತಿರಲಿಲ್ಲವೆ? ೧೧೯೨ರಲ್ಲಿ ಮತ್ತೆ ದಂಡೆತ್ತಿ ಬಂದ ಮೊಹಮದ್ ಘೋರಿ ಪೃಥ್ವಿರಾಜನನ್ನು ಸೋಲಿಸಿದ್ದಲ್ಲದೆ ಶಿರಚ್ಛೇದವನ್ನೂ ಮಾಡಿದ! ಎಲ್ಲಿಂದಲೋ ಬಂದ ಮುಸಲ್ಮಾನರು ನಮ್ಮ ಮೇಲೆ ಅಧಿಪತ್ಯ ಸ್ಥಾಪಿಸಿದರು. ಆದರೂ ನಾವು ಎಚ್ಚೆತ್ತುಕೊಳ್ಳಲಿಲ್ಲ. ಹಿಂದೂಗಳು ಎಂತಹ ಮೂರ್ಖರೆಂದರೆ ಸೋಮನಾಥ ದೇವಾಲಯದ ಮೇಲೆ ಘಜ್ನಿ ಮೊಹಮದ್ ಆಕ್ರಮಣ ಮಾಡಿದಾಗ “ದೇವಾಲಯವನ್ನು ನಾಶಪಡಿಸುವ ಮುನ್ನ ನಮ್ಮನ್ನು ಕೊಲ್ಲು” ಎಂದು ಪುರೋಹಿತರು ಅಡ್ಡ ನಿಂತರು. ಹಾಗೆ ಹೋರಾಡುವುದನ್ನು ಬಿಟ್ಟು ಕೈಕಟ್ಟಿ ನಿಂತ ಬುದ್ಧಿಗೇಡಿ ಹಿಂದೂಗಳನ್ನು ಮೊದಲು ಕೊಂದ ಘಜ್ನಿ, ನಂತರ ದೇವಸ್ಥಾನವನ್ನು ದೋಚಿಕೊಂಡು ಹೋದ. ಏಕೆಂ ದರೆ  “ಧರ್ಮೋ ರಕ್ಷತಿ ರಕ್ಷಿತಃ”  ಎಂಬ ಶ್ಲೋಕ ಬರೀ ಉಚ್ಛಾರಣೆಯಲ್ಲೇ ಉಳಿದು, ಆಚರಣೆಗೆ ಬರಲಿಲ್ಲ. ನೀವು ಯಾವುದೇ ಪ್ರಾಚೀನ ದೇವಸ್ಥಾನಕ್ಕೆ ಹೋಗಿ. ಗರ್ಭ ಗುಡಿಗೂ ಮೊದಲು ಗಣ ದೇವರನ್ನು ಕಾಣಬಹುದು. ಈ ಗಣದೇವರು ಯಾರು? ನಮ್ಮ ದೇವರ ಕಾವಲುಗಾರರು. ‘ಕಾಯುವ ದೇವರಿಗೇ ಕಾವಲುಗಾರನೆ?’ ಎಂದು ಕೇಳ ಬೇಡಿ. ಧರ್ಮವನ್ನು ರಕ್ಷಿಸಿದರೆ ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎಂಬ ಗೀತೆಯ ಮಾತನ್ನು ನೆನಪಿಸಿಕೊಳ್ಳಿ.

ಹಾಗೆ ನೆನಪಿಸಿಕೊಡುವುದಕ್ಕೋಸ್ಕರವೇ ವಿವೇಕಾನಂದರು ಜನ್ಮವೆತ್ತರು.

“ಈ ಕಾಲದಲ್ಲಿ ಬೃಂದಾವನದಲ್ಲಿ ಕೊಳಲನ್ನೂದುವ ಕೃಷ್ಣನನ್ನು ನೋಡಿಕೊಂಡು ಕುಳಿತರೆ ನಡೆಯುವುದಿಲ್ಲ. ಈಗ ಬೇಕಾಗಿರುವುದು ಗೀತೆಯ ರೂಪದಲ್ಲಿ ಸಿಂಹನಾದ ಮಾಡಿದ ಶ್ರೀಕೃಷ್ಣ, ಧನುರ್ಧಾರಿಯಾದ ರಾಮ, ಮಹಾವೀರ, ಕಾಳೀಮಾತೆ. ಆಗ ಮಾತ್ರ ನಮ್ಮ ಜನ ಉದ್ಯಮಶೀಲರು, ಕರ್ತವ್ಯವಂತರೂ ಆಗಿ ಶಕ್ತಿವಂತರಾಗಿ ಎದ್ದು ನಿಲ್ಲುತ್ತಾರೆ. ಈ ದೇಶದಲ್ಲಿ ಯಾರು ‘ಧರ್ಮ ಧರ್ಮ’ ಎನ್ನುತ್ತಿದ್ದಾರೋ ಅವರಲ್ಲಿ ಅನೇಕರು ದುರ್ಬಲರಾದ ರೋಗಿಗಳು, ಹುಳುಕು ಮೆದುಳಿನವರು ಅಥವಾ ವಿಚಾರಶೂನ್ಯರಾದ ಹುಂಬರು. ಈ ಮಹಾ ರಜೋಗುಣವು ಉದ್ದೀಪ್ತವಾಗದ ಹೊರತು ನಿಮಗೆ ಇಹವೂ ಇಲ್ಲ, ಪರವೂ ಇಲ್ಲ” ಎಂದು ಸ್ವಾಮಿ ವಿವೇಕಾನಂದರು ಝಾಡಿಸುತ್ತಾರೆ.

“ವೇದ್ ಮರ್ಯಾದಾ ಜಗ್ ಮೇ ಚಲಾವೋ
ಗೋವ್ ಘಾತ್ ಕಾ ದೋಷ್ ಜಗ್ ಸೆ ಮಿಠಾವೋ”

ಹಾಗೆಂದು ಗುರು ಗೋವಿಂದ ಸಿಂಗರೂ ಹೇಳಿದರು. ಆದರೆ ಹಿಂದೂಗಳ ಎಮ್ಮೆ ಚರ್ಮದೊಳಕ್ಕೆ ಅದು ಹೊಕ್ಕಲೇ ಇಲ್ಲ. ಇವತ್ತು ಹಿಂದೂ ಧರ್ಮಕ್ಕೆ ಅತಿ ಹೆಚ್ಚು ಅಪಾಯ ಎದುರಾಗಿರುವುದು ಅನ್ಯಧರ್ಮ ಅಥವಾ ಧರ್ಮೀಯರಿಂದಲ್ಲ. ನಮ್ಮಲ್ಲೇ ಇರುವ “Feminish Hinduism”(ಸ್ತ್ರೀ ಸ್ವರೂಪಿ)ನಿಂದ. ಇದನ್ನು ಮೊದಲು ಹುಟ್ಟು ಹಾಕಿದವರು ಚೈತನ್ಯ, ಮೀರಾ ಬಾಯಿ. ಅವ ರೇನೋ ಗೀತೆ, ಭಜನೆ ಹಾಡಿಕೊಂಡು  “Divine Love” ಅನ್ನು ಹುಡುಕಿಕೊಂಡು ಹೋದರು. ಉಳಿದವರೂ ಕೂಡ ವಿಚಾರಶೂನ್ಯರಂತೆ ಅದೇ ಹಾದಿ ತುಳಿದರು. “ಭಗವತಿ, ಪರಮಪತಿ ಪರಮೇಶ್ವರನೇ ನನ್ನ ಪತಿ, ರಾಧೇಯ” ಎಂದು ಎಲ್ಲರೂ ದೇವರಿಗೆ ಶರಣಾಗಲು ಹೊರಟರು. ಇತ್ತ ದೇಶ ಅನ್ಯರಿಗೆ ಶರಣಾಯಿತು! ನೀವು ಯಾವುದೇ ಮಠ, ಮಂದಿರಗಳಿಗೆ ಹೋಗಿ ಶಾಂತಿ, ಶಾಂತಿ ಅಂತ ಬೋಧನೆ ಮಾಡುತ್ತಾರೆ. “ದೇವರಿಗೆ ಶರಣಾಗು, ಉಳಿದಿದ್ದೆಲ್ಲ ದೇವರ ಕೆಲಸ” ಎನ್ನುತ್ತಾರೆ. ನೀವೇ ಯೋಚನೆ ಮಾಡಿ, ಸಂಸಾರಿಗಳಿಗೆ “ಮಂತ್ರದಿಂದ ಮಾವಿನಕಾಯಿ ಉದುರುತ್ತದೆ”, ‘ಬ್ರಹ್ಮ ಸತ್ಯ, ಜಗತ್ ಮಿಥ್ಯ” ಎಂದು ಬೋಧನೆ ಮಾಡಿದರೆ ದೇಶ ಉಳಿಯುತ್ತದೆಯೇ? ಅಪಾಯ ಕಾಲದಲ್ಲಿ ಬೇಕಾಗುವುದು ಕರ್ಮಯೋಗವೇ ಹೊರತು, ಭಕ್ತಿಯೋಗವಲ್ಲ ಅನ್ನುವುದು ನಮ್ಮ ಸ್ವಾಮಿಗಳಿಗೆ ಅರಿವಾಗುವುದು ಯಾವಾಗ? ಮಗು ಬೇಕು ಅಂತ ದೇವರಿಗೆ ಮೊರೆಯಿಟ್ಟರೆ ಸಾಕಾಗುವುದಿಲ್ಲ. ನಮ್ಮ ಪ್ರಯತ್ನವೂ ಬೇಕು ಅಲ್ಲವೆ? ಹಾಗೆಯೇ ‘ಹರೇ ಕೃಷ್ಣ, ಹರೇ ಹರೇ ಹರೇ, ಕೃಷ್ಣ, ಕೃಷ್ಣ, ಕೃಷ್ಣ..’ ಅಂತ ಕುಳಿತುಕೊಂಡಿದ್ದರೆ ಭರತ ಖಂಡ ಖಂಡಿತ ಉಳಿಯುವುದಿಲ್ಲ. ಇವತ್ತು ನಮಗೆ ಬೇಕಾಗಿರುವುದು ದೇವರ ಹೆಗಲಿಗೆ ಹೇರಿ ಕುಳಿತುಕೊಳ್ಳುವ “Passive Hinduism” ಅಥವಾ ‘ಸ್ತ್ರೀ ಸ್ವರೂಪಿ ಹಿಂದೂಯಿಸಂ’ ಅಲ್ಲ, ರಾಣಾ ಪ್ರತಾಪ್, ಶಿವಾಜಿ ಮಹಾರಾಜ, ಗುರು ಗೋವಿಂದ ಸಿಂಗ್, ರಂಜಿತ್ ಸಿಂಗ್ ಅನುಸರಿಸಿದ, ಸ್ವಾಮಿ ವಿವೇಕಾನಂದರು ಹೇಳಿದ “Masculine Hinduism”. ಅದಕ್ಕಾಗಿಯೇ ಶಿವಾಜಿ ಮಹಾರಾಜರು “ಹರ ಹರ ಮಹಾದೇವ್” ಅನ್ನುವುದನ್ನು ಹೇಳಿಕೊಟ್ಟರು, ಗುರು ಗೋವಿಂದ ಸಿಂಗರು “ಸತ್ ಶ್ರೀ ಅಕಾಲ್” ಎನ್ನುತ್ತಾ ಶತ್ರುಗಳನ್ನು ಮಟ್ಟಹಾಕಿ ಎಂದರು. ಸತತ ಹೋರಾಟ ಮಾಡಿದ ರಾಣಾ ಪ್ರತಾಪ್ ಅನುಸರಿಸಿದ್ದೂ  Masculine Hinduism ಅನ್ನೇ. ನಮ್ಮ ಹಳೆಯ ಹನುಮಂತನ ಗುಡಿಗಳನ್ನು ನೆನಪು ಮಾಡಿಕೊಳ್ಳಿ. ಅಲ್ಲಿ ಬರೀ ಭಜನೆಯನ್ನು ಮಾತ್ರ ಮಾಡುತ್ತಿರಲಿಲ್ಲ, ಗರಡಿಗಳೂ ನಡೆಯುತ್ತಿದ್ದವು. ಅಂದರೆ “God realisation”ಗಿಂತ ಮೊದಲು ನೀನೇನು ಎಂಬ “Self realisation” ಅನ್ನು ಜನರಿಗೆ ಮಾಡಿಸಬೇಕು. ಸ್ವರಕ್ಷಣೆಯನ್ನು ನಮ್ಮ ಜನರಿಗೆ ಕಲಿಸಬೇಕು. ಹೋರಾಟ ಮನೋಭಾವನೆಯನ್ನು ಮರಳಿ ತುಂಬಬೇಕು? “ನಮಗೇಕೆ ಮಾರಾಯ?” ಅಂತ ಕುಳಿತರೆ ಗತಿಯೇನು? “ಅಹಿಂಸಾ ಪರಮೋಧರ್ಮ” ಎಂದು ಹೇಳುವ ನಮ್ಮ ಧರ್ಮ, “ಹಸುವನ್ನು ರಕ್ಷಿಸುವ ಸಲುವಾಗಿ ಹುಲಿಯನ್ನು ಕೊಲ್ಲು” ಎಂದೂ ಹೇಳುತ್ತದೆ. ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ತೋರು ಎನ್ನುವ ಮಹಾತ್ಮ ಗಾಂಧೀಜಿಯವರೇ “I prefer violence to cowardice. Non-violence doesn’t mean cowardice” ಎಂದಿದ್ದರು. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಚೀನಾ ಪ್ರೇರಿತ ಮಾವೋ ವಾದಿಗಳು, ಬಾಂಗ್ಲಾ, ಪಾಕಿಸ್ತಾನ ಪ್ರೋತ್ಸಾಹಿತ ಜಿಹಾದಿಗಳು ಹಾಗೂ ವ್ಯಾಟಿಕನ್ ಪೋಷಿತ ಮತಾಂತರಿಗಳಿಗೆ ನಾವು “Sitting Ducks” ಆಗುವುದರಲ್ಲಿ ಯಾವ ಅನು ಮಾನವೂ ಇಲ್ಲ.

ಒಂದು ಕ್ಷಣ ಯೋಚನೆ ಮಾಡಿ, ಯಾರಾದರೂ ನಿಮ್ಮ ಹೆಂಡತಿ ಅಥವಾ ಸಹೋದರಿಯನ್ನು ಅಪಹರಿಸಲು ಅಥವಾ ಅತ್ಯಾಚಾರಗೈಯ್ಯಲು ಬಂದರೆ ಏನು ಮಾಡುತ್ತೀರಿ? ಅತ್ಯಾಚಾರ ಮಾಡಿದರೆ ಪೊಲೀಸರು ಬಂಧಿಸುತ್ತಾರೆ, ಕೋರ್ಟ್ ಶಿಕ್ಷೆ ಕೊಡುತ್ತದೆ ಅಂತ ಕಾಯುತ್ತೀರೋ ಅಥವಾ ಹಿಡಿದು ಚಚ್ಚುತ್ತೀರೋ? ಹಾಗೆಯೇ “ನಿಮ್ಮ ದೇವರ ಮೂಗು ಸರಿಯಿಲ್ಲ, ನಿಮ್ಮ ದೇವರುಗಳೆಲ್ಲ ಕಾಲ್ಪನಿಕ, ಬಲಿ ಕೇಳುವ ನಿಮ್ಮ ದೇವರು ಮಹಾಕ್ರೂರಿ, ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನೇ ಲಕ್ಷ್ಮಣನಿಗೆ ಹೇಳಿ ಸೀತೆಯನ್ನು ಕೊಂದುಹಾಕಿಸಿದ, ನಿಮ್ಮಲ್ಲಿರುವುದು ಅರೆಬೆತ್ತಲೆ ಸ್ವಾಮಿ ಗಳು, ಕೃಷ್ಣ ಕ್ರಿಸ್ತ ಒಂದೇ” ಎಂದು ಯಾರಾದರೂ ಪುಕ್ಕಟೆ ಬೈಬಲ್ ಹಂಚಲು, ಬೊಗಳೆ ಬಿಡಲು, ಮರುಳು ಮಾಡಲು ಬಂದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಇತ್ತೀಚೆಗೆ ದಾವಣಗೆರೆ ಹಾಗೂ ಬೆಂಗಳೂರಿನ ದೊಮ್ಮಲೂರಿನಲ್ಲಿ ಮಾಡಿದಂತೆ ಮತಾಂತರ ಮಾಡಲು ಬಂದವರನ್ನು ಬಂಧಿಸಿ, ಮೈಗೆ ಬಿಸಿ ಮುಟ್ಟಿಸಿ, ಪೊಲೀಸರಿಗೊಪ್ಪಿಸಿ, ಒಂದು ಕೇಸು ಹಾಕಿ. ಅಷ್ಟಕ್ಕೂ ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ, ಶತ್ರುವನ್ನು ಕೊಲ್ಲು ಎಂದು ರಣರಂಗದಲ್ಲೇ ಭಗವದ್ಗೀತೆ ಬೋಧಿಸಿದ ಶ್ರೀಕೃಷ್ಣ!

ಅಂದಮಾತ್ರಕ್ಕೆ, ದೇವರ ಮುಂದೆ ಗೀತೆಗಳನ್ನು ಹಾಡುವುದು, ಭಜನೆ, ನರ್ತನೆ ಮಾಡುವುದು, ಹರೇ ಹರೇ..ಕೃಷ್ಣ ಕೃಷ್ಣ..ಎನ್ನುವುದು ತಪ್ಪು ಎಂದಲ್ಲ. ಆದರೆ ಶಾಂತಿ ಮಂತ್ರ ಎಲ್ಲ ಕಾಲಕ್ಕೂ ಅನ್ವಯವಾಗುವಂಥದ್ದಲ್ಲ. ಅಪಾಯ ಎದುರಾದಾಗ ಹೋರಾಡಬೇಕೇ ಹೊರತು ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳುವುದಲ್ಲ. ಪಾಂಡವರು ಹಾಗೂ ಕೌರವರ ನಡುವಿನ ಯುದ್ಧವನ್ನು ತಪ್ಪಿಸುವುದಕ್ಕೋಸ್ಕರ ಸಂಧಾನಕ್ಕೆ ಮುಂದಾಗಿದ್ದ, ಶಾಂತಿ ಬೋಧನೆಗಿಳಿದಿದ್ದ ಕೃಷ್ಣ, ಅಗತ್ಯ ಬಂದಾಗ ಸ್ವಂತ ಮಾವ ಕಂಸನನ್ನೂ ಕೊಂದ, ಜರಾಸಂದನನ್ನೂ ಕೊಲ್ಲಿಸಿದ. ಅದನ್ನು ನಾವೂ ಅರ್ಥಮಾಡಿಕೊಳ್ಳಬೇಕು. ಈ ಹಿಂದೆ ಕಾಶಿ, ಮಥುರಾ, ಅಯೋಧ್ಯೆ, ಸೋಮನಾಥದಂತಹ ನಮ್ಮ ದೇವಾಲಯಗಳ ಮೇಲೆ ಆಕ್ರಮಣವಾಗುತ್ತಿತ್ತು. ಆದರೆ ಇಂದು ನಮ್ಮ ನಂಬಿಕೆ, ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ಹಾಗೂ ಜನರನ್ನು ದಾರಿ ತಪ್ಪಿಸುತ್ತಿರುವ ಮತಾಂತರಿಗಳು, ಜಿಹಾದಿಗಳು ಹಿಂದೂಧರ್ಮದ ಉಳಿವಿಗೇ ಅಪಾಯ ತಂದೊಡ್ಡಿದ್ದಾರೆ. ಕೇವಲ ಮೂವತ್ತು ವರ್ಷಗಳ ಅಂತರದಲ್ಲಿ ದಕ್ಷಿಣ ಕೊರಿಯಾದಂತಹ ಬೌದ್ಧ ರಾಷ್ಟ್ರ ಮತಾಂತರಿಗಳಿಂದಾಗಿ ಕ್ರೈಸ್ತ ರಾಷ್ಟ್ರವಾಗಿ ಮಾರ್ಪಾಡಾಗಿರುವ ಉದಾಹರಣೆ ನಮ್ಮ ಮುಂದಿದೆ. ಒಂದೆಡೆ ಒರಿಸ್ಸಾದಲ್ಲಿ ನಡೆಯುವ ಘಟನೆಗಳಿಗೆ ವ್ಯಾಟಿಕನ್‌ನಿಂದ ಟೀಕೆ ಬರುತ್ತದೆ, ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ನಾವು ನೀಡುವ ಶುಲ್ಕ ದಲ್ಲಿ ನಡೆಸುತ್ತಿರುವ ಶಾಲೆ, ಕಾಲೇಜುಗಳನ್ನು ಮುಚ್ಚಿ ಬಹುಸಂಖ್ಯಾತರನ್ನೇ ಹೆದರಿಸುತ್ತಾರೆ. ಇನ್ನೊಂದೆಡೆ ಮಲೇ ಷಿಯಾದಲ್ಲಿ ಹಿಂದೂಗಳಿಗೆ ಸರಕಾರ ಸಾಲ ನೀಡುವುದನ್ನೇ ನಿಲ್ಲಿಸಿ ಬೆದರಿಸುತ್ತಿದೆ. ಫಿಜಿಯಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಮಹೇಂದ್ರ ಚೌಧರಿ ಸರಕಾರವನ್ನೇ ಕಿತ್ತೊಗೆದು ಹಿಂದೂಗಳಿಗೆ ಜೀವ ಬೆದರಿಕೆ ಹಾಕುವ ಘಟನೆಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ನಾವೂ ನಿರ್ಲಿಪ್ತರಾಗಿ ಕುಳಿತರೆ, ಮಾಮೂಲಿ ಜಡತ್ವವನ್ನು ಬಿಡದಿದ್ದರೆ, ಆ ಜಾತಿ-ಜಾತಿ ಅಂತ ನಾವೇ ಬಡಿದಾಡಿ ಕೊಂಡಿದ್ದರೆ ಇರುವ ಏಕೈಕ ನೆಲೆಯಾದ ಭಾರತವೂ ಕೈತಪ್ಪಿ ಹೋಗುವುದಿಲ್ಲವೆ? ಇಂತಹ ಸರಳ ಸತ್ಯ ನಮಗೆ ಅರ್ಥವಾಗಲು ಇನ್ನೆಷ್ಟು ಲಕ್ಷ್ಮಣಾನಂದ ಸರಸ್ವತಿಗಳು ದಾರುಣವಾಗಿ ಹತ್ಯೆಯಾಗಬೇಕು?

17 Responses to “ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ!”

  1. Kiran says:

    Fantastic is the word.

    Organized christianity is quite foxy till the level of the individual who takes up. Few months ago I mailed you an incidence of the HR of an MNC intentionally ignoring to celebrate any Hindu festivals! (not sure if you read it)

    This was the only article that wrote what happend to the swamiji. None in any other paper, nor in TV. [ http://www.indianexpress.com/story/354813.html ]
    In a CNN-IBN show we saw John Dayal making a trenchant gestures towards BJP leader B. P. Singhal.

    What has been systematically achieved by the politics and media, Xtian run institutions is that ‘Dont’ feel proud of what your nation is, not your religion is’

    We have a whole bunch of intellectual loons speaking up for the country. Check the self styled RamChandra Guha, Arundhati Roy.. and too many others to count. NDTV, CNN-IBN are too routine to show disfavour.

    What we require is Pratap Simha cloned into other languages and regions too; Much before orisaa is cited as another ‘Bastion of Christianity’!

    (An addendum. It has been a real curious thing to know- how these Xtian conversions are a nice Business. What are the equations of money/power at he global level in this? Do you have any research to publish on that?)

  2. Vinutha Iyengar says:

    Hi Pratap,
    Very good article.
    Namma samskruthiyannu uLisikoLLuva kitchu ellarallu huttali antha haraisuttene.

  3. Ashwini Bhat says:

    Superb… Its the time to act…. And first we have to teach lesson to so called secularist,”jathyathithavadi”s…

  4. ವೆಂಕಟೇಶ says:

    ಅತ್ಯುತ್ತಮ ಮತ್ತು ಸಮಯೋಚಿತವಾದ ಲೇಖನ.

    ಅಸ್ತ್ರೆಲಿಯದಲ್ಲಿ ಯಾವುದೋ ಕಾರಣಕ್ಕೆ ನಮ್ಮ ದೇಶದ ಉಗ್ರಗಾಮಿಯ ಸ೦ಬ೦ಧಿಯನ್ನು ಬ೦ದಿಸಿದರೆ ದೇಶದ ‘ಸೆಕ್ಯುಲರ್’ ರಾಜಕಾರಣಿಗಳೆಲ್ಲ ಬೌ ಬೌ ಬೌ ಅಂತ ಗಲಾಟೆ ಶುರು ಮಾಡುತ್ತಾರೆ. ನಮ್ಮ ದೇಶದ ಪ್ರಧಾನಿಗೆ ನಿದ್ದೆಯೇ ಬರುವುದಿಲ್ಲ. ಸಂಸತ್ತಿನ ಮೇಲೆ ಧಾಳಿ ಮಾಡಿದ ಉಗ್ರಗಾಮಿಗಳನ್ನೂ ಶಿಕ್ಷಿಸಲು ಹಿಂದೆ ಮುಂದೆ ನೋಡುತ್ತಾರೆ. ಹಿಂದೂ ದೇವರ ಅಶ್ಲೀಲ ಚಿತ್ರಗಳನ್ನು ಬರೆದವನನ್ನ, ಆ ಬೇವರ್ಸಿಯನ್ನು ಸರ್ವೋಚ್ಹ ನ್ಯಾಯಾಲಯವೂ ಕೂಡ ‘ಯಾವ ತಪ್ಪೂ ಇಲ್ಲ’ ಎಂದು ಖುಲಾಸೆ ಮಾಡುತ್ತೆ. ಗಂಡಾಂತರಕಾರಿ ಉಗ್ರಗಾಮಿ ಸಂಘಟನೆಯೇ ಮೇಲಿನ ‘ಬ್ಯಾನ್’ ನನ್ನೂ ನ್ಯಾಯಾಲಯವೇ ತೆಗೆದು ಬಿಡುತ್ತೆ! ಆದರೆ ಒಬ್ಬ ಹಿಂದೂ ಸಂತರನ್ನು ಕ್ರಿಶ್ಚಿಯನ್ನರು ಹೊಡೆದು ಸಾಯಿಸಿದಾಗ ಇಡಿ ದೇಶವೇ ಸೆಕ್ಯುಲರ್ ಆಗಿಬಿಡುತ್ತೆ! ಮಲೇಶಿಯಾದಲ್ಲಿ ಕಷ್ಟಪಟ್ಟು ಬದುಕುವ ಹಿಂದೂ ತಮಿಳರನ್ನ ಚಿತ್ರಹಿಂಸೆ ಕೊಟ್ಟು ಸಾಯಿಸುವಾಗ, ಮಾತ್ರುಭೂಮಿಯಿಂದ ಒ೦ದು ಸಾಂತ್ವನದ ಮಾತು ಕೂಡ ಹೊರಡುವುದಿಲ್ಲ. ಅಮಾಯಕ ಹಿಂದೂ ಹೆಂಗಸರು ಮಕ್ಕಳಿರುವ ರೈಲನ್ನು ಸುಟ್ಟು ಬಲಿತೆಗೆದು ಕೊಂಡಾಗ ಬಾರದ ಮಾನವತಾವಾದಿಗಳು, ಹಿಂದೂ ಗಳು ಸೇಡನ್ನು ತೀರಿಸುವಾಗ ಬಂದುಬಿಡುತ್ತವೆ. ಇಲ್ಲಿ ಎಲ್ಲಾ ಕಡೆಯೂ ಬಹುಸಂಖ್ಯಾತ ಹಿಂದೂ ಗಳೇ ಅಪರಾಧಿಗಳು. ಎಲ್ಲಾ ವಿದೇಶಿ ಪತ್ರಿಕೆಗಳಲ್ಲೂ ಇದೇ ಪ್ರಕಟವಾಗೋದು. ವಿದೇಶಿ ಪತ್ರಿಕೆ ಏಕೆ, ನಮ್ಮ ಇಂಗ್ಲೀಶ್ ಮಾಧ್ಯಮದಿಂದ ಹಿಡಿದು ‘ಹಾಯ್’ ಹಡಬೆ ಪತ್ರಿಕೆಯವರೆಗೂ ಇದೇ ಸುದ್ದಿ. ವಿದೇಶೀ ಹಿಡಿತದಲ್ಲಿರುವ ನಮ್ಮದೇಶದ ಎಲ್ಲಾ ಟಿವಿ ಮಾಧ್ಯಮ ಗಳೂ ಮಾಡುವುದೂ ಇದನ್ನೇ, ‘ಅತೀ ಬುದ್ದಿವಂತ’ ಟೀವಿ ವರದಿಗಾರರು ದೇಶ ದ್ರೋಹ, ಧರ್ಮ ದ್ರೋಹ ಮಾಡಿ ಹಣ ಮಾಡುವುದೂ ಹಿಂದೂ ಗಳ ಮೇಲೆ ಪ್ರಹಾರ ಮಾಡಿಯೇ. ಒಟ್ಟಿನಲ್ಲಿ ಹಿಂದೂಗಳು ದುಷ್ಟರು. ನಿಜ ಅಲ್ಲವೇ? ನಾವು ದುಷ್ಟರಾ? ಅಥವಾ ಥೂ…..ಇದು ನಮ್ಮದಲ್ಲ ಅಂತ ಮೈ ಕೊಡವಿಕೊಂಡು ಬಿಡುತ್ತೀರಾ?
    ‘ಇಲ್ಲ’ವೆಂದರೆ ಯಾಕೆ ಇಷ್ಟುದಿನ ಸುಮ್ಮನಿದ್ದೀರಿ?
    ಒಮ್ಮೆ ಯೋಚಿಸಿ, ಭಾರತದಲ್ಲಿರುವ ೮೦% ಗೂ ಹೆಚ್ಚುಜನ ಹಿಂದೂಗಳು. ಆಳುವರನ್ನು ನಾವೇ ಆಯ್ಕೆ ಮಾಡುವುದು. ರಾಜಕಾರಣಿಗಳು ಓಟುಕೇಳಲು ಬಂದಾಗ ನಾವು ಯಾಕೆ ಈ ಪ್ರಶ್ನೆ ಕೇಳುವುದಿಲ್ಲ? ನೀವು ತಿರುಪತಿ ಹುಂಡಿಗೆ ಹಾಕಿದ್ದು, ಹಜ್ ಯಾತ್ರೆಗೋ ಇಲ್ಲಾ ಚರ್ಚ್ ಕಟ್ಟಲೋ ಉಪಯೋಗ ಆಗಬೇಕಾ? ……..
    ಯಾಕೆ ಹೀಗಾಗುತ್ತಿದೆ? ಇದಕ್ಕೆಲ್ಲಾ ನಮ್ಮಲ್ಲಿರಿವ ಕೀಳರಿಮೆ, ಆಲಸ್ಯವೇ ಕಾರಣ. ಇದಕ್ಕೆ ಪ್ರತಾಪ ಸಿಂಹರು ಸಮಯೋಚಿತವಾದ ಲೇಖನ ನಮಗಿತ್ತಿದ್ದಾರೆ. ಇನ್ನಾದರೂ ಎಚ್ಚೆತ್ತು ಕೊಳ್ಳೋಣ.
    ಬಾಡದಲ್ಲಿ ನಡೆದಿದ್ದು ಆಮಿಷ / ಒತ್ತಾಯದ ಮತಾಂತರ. ದಾವಣಗೆರೆಯ ಸುತ್ತ ಹಲವು ಹಳ್ಳಿಗಳಲ್ಲಿ ಇಂತಹ ಮತಾಂತರಗಳು ನಡೆಯುತ್ತಿವೆ ಎಂದು ಈಚೆಗೆ ಕನ್ನಡ ಪತ್ರಿಕೆಯೊಂದು ವರದಿ ಮಾಡಿತ್ತು. ಬಾಡ ಗ್ರಾಮಸ್ತರು ಕೊನೆಗೂ ಧೈರ್ಯವಾದ ಉತ್ತಮ ನಿರ್ಧಾರ ತೊಗೊಂಡಿದ್ದಾರೆ. ಜೈಲಿಗೆ ಹಾಕಿದರೆ ಏನಾಯ್ತು? ಸ್ವಾತಂತ್ರ ಹೋರಾಟಕ್ಕಾಗಿ ಜೈಲಿಗೆ ಹೋಗಲಿಲ್ಲವೆ? ನಿಜವಾಗಿಯು ಊರನ್ನು ಮತಾಂತರದಿಂದ ಉಳಿಸಿದ್ದಾರೆ, ಅವರಿಗೆ ನನ್ನ ಅಭಿನಂದನೆಗಳು.
    ನಿನ್ನೆ ಒರಿಸ್ಸಾ, ನಾಗಲ್ಯಾಂಡ್, ಮಣಿಪುರ, ಬಂಗಾಳ, ಕಾಶ್ಮೀರ..ಇಂದು ದಾವಣಗೆರೆ / ಬಾಡ / ಹಲಸೂರು / ದೊಮ್ಮಲೂರು ,.ಮುಂದೆ ನಿಮ್ಮೂರು, ನಮ್ಮೂರು. ……..
    ಕೊನೆಯಲ್ಲಿ ಒಂದು ಮಾತು, ನಾವು ಅನ್ಯಧರ್ಮೀಯರನ್ನು ಮತಾ೦ತರ ಮಾಡುವುದಿಲ್ಲ ಆದರೆ, ನಮ್ಮವರನ್ನು ಮತಾಂತರ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ನಾವೂ ಒಳ್ಳೆಯವರು, ಅವರೂ ಒಳ್ಳೆಯವರಾಗಿ ಇರಲಿ, ಕೂಡಿ ಬಾಳೋಣ.
    ಜೈ ಕರ್ಣಾಟಕ.

  5. ಮುನೇಗೌಡ says:

    ನಮ್ ದೇಸದಾಗೆ ಆರೆಸ್ಸೆಸ್ / ಹಿಂದೂ ಸಂಘ ಗಳು ಅಂದ್ರೆ ಏನೋ ಮೂಗು ಮುರೀತಾವ್ರೆ. ಆವತ್ತು ಶಿವಾಜಿ ಮಾರಾಜ್ರು ಇಲ್ಲದಿದ್ರೆ ಅಥವಾ ಇವತ್ತು ಹಿಂದೂ ಸಂಘ ಗಳು ಇಲ್ದಿದ್ರೆ ಹಿಂದೂಗಳ ಕಥೆ ಏನಾಗ್ತಿತ್ತು ಅಂತ ಒಂದು ಚಣ ಕೂಡ ಯೇಚ್ನೆ ಮಾಡಾಕಿಲ್ಲ. ಈಗಿನ ‘ಬುದ್ದಿವಂತ’ ಹುಡುಗರಿಗಂತೂ ನಮ್ಮ ದಿಟವಾದ ಚರಿತ್ರೆ ಗೊತ್ತಿಲ್ಲ. ನಮ್ಮವರನ್ನ ಅತಿ ಬುದ್ಧಿಯವರು ಅಂತ ಕರೆಯದಾ, ಇಲ್ಲಾ ಮೂರ್ಖರು ಅಂತ ಕರೆಯದಾ ಗೊತ್ತಾಗಕಿಲ್ಲ. ನಮ್ಮವರಿಗೆ ನಮ್ಮವರೇ ಶತ್ರು ಗಳೇ ವಿನಾ, ಸಾಬ್ರು, ಕ್ರಿಶ್ಚಿಯನ್ನರಲ್ಲ. ನಮ್ಮವರಲ್ಲಿ ಒಗ್ಗಟ್ಟಿದ್ದಿದ್ದರೆ, ಆವರ್ಯಾರೂ ಬಾಲ ಬಿಚ್ತಿರಲಿಲ್ಲ.
    ಆವತ್ತು ಒರಿಸ್ಸಾ ಗಲಾಟೆ ಆದವಾಗ ದೊ೦ಬಿ ಮಾಡಿದ ನಂಮ್ ಗೌಡ, ಸಾಬ್ರು ಗಣೇಸನ್ ಮಂಟಪ್ಪಕೆ ಬೆಂಕಿ ಹಚ್ಹ್ಚಿದಾವಾಗ ಎಲ್ಲಿ ಗೊರಕೆ ಹೊಡಿತಿದ್ದ್ನೋ? ಮಠದಿಂದ ಹಸು ಕೊಡುವಾಗ ಸಂತೋಸವಾಗಿ ತೆಗೆದಕೊಲ್ಲೊ ಈ ಮಣ್ಣಿನ ಗೌಡ, ಹಸುಗಳನ್ನ ಸಾಬ್ರು ಮಾರಣ ಹೋಮ ಮಾಡುವಾಗ ಎಲ್ಲಿ ಮುದ್ದೆ ಮೆಲ್ತಿದ್ದನೋ?
    ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲೆಂದೇ ಇರುವ ಈ ಸಂಗಗುಳ್ಗೆ ರಾಜ್ಕೀಯದವರು ‘ಬ್ರಾಮ್ರು ಸಂಗ’ ಅಂತ ಹೆಸ್ರು ಹಾಕವ್ರೆ. ಇದಕ್ಕೆ ಈ ಕೆಲವು ನಕ್ಸಲೀಯ, ಮಾವೋ ಪತ್ರಕರ್ತರು (ಇದರಲ್ಲಿ ಮು೦ಡೇಮಕ್ಳು, ‘ಅತೀ-ಬುದ್ದಿವ೦ತರೇ’ ಜಾಸ್ತಿ) ಬಣ್ಣ ಹಚ್ಚಿ ‘ ಅನ್ಯ ಧರ್ಮ ವಿರೋಧಿ’ ಅಂತ ಪ್ರಚಾರ ಮಾಡವ್ರೆ. ನಮ್ ದೇಸ್ದಾಗಾಗ್ಲಿ, ನಾಡ್ನಾಗಲಿ, ಬ್ರಾ೦ಬ್ರು ಇರೋದು ೫% ಮಾತ್ರ! ಆರೆಸ್ಸೆಸ್ ಗಾತ್ರದ ಅರಿವಿದ್ದವರು ಇದನ್ನ ನ೦ಬಾಕಿಲ್ಲ. ಇದಕ್ಕೆ ಸರಿಯಾಗಿ ನಮ್ಮ ‘ಜಾತ್ಯಾತೀತ’ ದ ಗಬ್ಬುನನ್ಮಗ ಗೌಡ, ಭಂಡ ಬಡ್ಡಿ ಮಗ ಲಾಲೂ, ಹೇಸಿಗೆ ಹುಟ್ಟಸೋ ಅರ್ಜುನಸಿಂಗ, ನಾಚಿಕೆಯಿಲ್ಲದ ಮಾಯಾ, ಕಮುನಿಸ್ಟ್ ರಾಸ್ಕಲ್ ರಾಜ, ಸೂ..ಮಗ ಕರುಣಾನಿಧಿ, ೬ ತಿಂಗಳಿಗೆ ಹುಟ್ಟಿರೋ ಕರ್ಗೆ…… ಎಲ್ಲಾ ನಮ್ಮವ್ರೆ…..ಇನ್ನು ಇದರ ಜತೆಗೆ ಉಪ್ಪುಕಾರ ಹಾಕಕ್ಕೆ ನೀಚ ಸಾಹಿತಿ ಅನಂತ, ಪಕ್ಕಾ ನಾಟಕ ಮಂಡಳಿಯ ಕಚಡಾ ಗಿರೀಶ, ಈಗಲೋ ಆಗಲೋ ಸಾಯುವಂಗಿರೋ ವಯ್ಯ ದರಿದ್ರ ಗೋವಿಂದರಾವ….. ಇವರಿಗೆಲ್ಲ ಯಾಕೆ ಬೇಕಿತ್ತು? ನಮ್ಮ ಕನ್ನಡಾಂಬೆ ಇವ್ರಿಗೇನ್ ಮೋಸ ಮಾಡವ್ಳ?…… ಇದುಕ್ಕೆಲ್ಲ ಶಿಕರಪ್ರಾಯಳಾಗಿ ಕು೦ತಾವ್ಳೆ ಒಬ್ಳು ಮುಂಡೆ… ಅವಳೇ ಕಾಂಗಿಗಳ ಆರಾದ್ಯ ದೈವ ಸೋನಿಯಾ! ಇವಳು ಬಂದ್ಮೇಲೆ ಮತಾಂತ್ರ ಅತಿ ಆಗೋತು. ಸೋನಿಯಾನ ಅಲ್ಲಿ ಕೂರ್ಸಿದೊರು ಯಾರು? ನಮ್ಮವರೇ…..
    ಹಿಂದೂ ಧರ್ಮ ಎಕ್ಕುಟ್ ಹೋದವಾಗ ಇವರಿಗೂ ಪರಿಣಾಮ ಆಯ್ತದೆ ಅಂತ ಗೊತ್ತಿದ್ರೂ, ಹೆಸ್ರು ಮಾಡಕ್ಕೆ ಹಾತೊರಿತಾವ್ರೆ. ಇಂತವ್ರನ್ನ ಸಾಲಾಗಿ ನಿಲ್ಸಿ (ಸಾಬ್ರು ದೇಸ್ದಗ್ ಮಾಡ್ತಾವ್ರಲ ಆಥರ) ಗುಂಡಾಕಿ ಸಾಯಿಸ್ಬೇಕು. ಇಲ್ದೊದ್ರೆ ನಾವ್ ಉಳಿಯಾಕಿಲ್ಲ.
    ಇದಕ್ಕೆಲ್ಲ ಮೊದ್ಲು “ಮತಾ೦ತರ ನಿಷೇಧ” ಮಾಡಬೇಕು.ಸಧ್ಯಕ್ಕೆ ಅದೇ ಒಳ್ಳೆಯ ನಿರ್ಧಾರ.
    ತಮಿಳ್ ನಾಡ್ನಾಗೆ ನೋಡ್ರೀ, ಆಯಮ್ಮ ಎಲ್ಲರ್ಗೂ ಸಡ್ಡು ಹೊಡ್ದು ನಿಸೇದ ಮಾಡೇ ಬುಟ್ಲು.

    ನೋಡಿ ಸಿವಾ, ಪ್ರತಾಪ ಸಿಮ್ಮ ಏಳ್ದ೦ಗೆ ನಾವ್ ಎಚ್ಚೆತ್ ಕೊಳ್ದೆ ಹೋದ್ರೆ ನಂ ಮಕ್ಳು ಮರಿಗುಳು ಸಾಬ್ರೋ, ಕ್ರಿಶ್ಚಿಯನ್ರೋ ಆಗಿರ್ತಾರೆ ಮುಂದೆ ಆಟೆಯ.

  6. Arpitha says:

    u have made us to know abt the cuurent situation of Bharatha ( called india by western ppl) by giving examples of past thanks 4 tht and keep up ur good work

    Jai Hind

  7. Kiran says:

    @ ಮುನೇಗೌಡ
    ಇದರಲ್ಲಿ ಮು೦ಡೇಮಕ್ಳು, ‘ಅತೀ-ಬುದ್ದಿವ೦ತರೇ’ ಜಾಸ್ತಿ. We hope to see this style in mainstream journalism too!

    ನಮ್ಮವರಿಗೆ ನಮ್ಮವರೇ ಶತ್ರು ಗಳೇ ವಿನಾ, ಸಾಬ್ರು, ಕ್ರಿಶ್ಚಿಯನ್ನರಲ್ಲ. ನಮ್ಮವರಲ್ಲಿ ಒಗ್ಗಟ್ಟಿದ್ದಿದ್ದರೆ, ಆವರ್ಯಾರೂ ಬಾಲ ಬಿಚ್ತಿರಲಿಲ್ಲ. But how did we become enemies for ourselves? The answer lies in Pratap’s lines itself. When we don’t defend/outrage against dangers, it translates to long-term inner frustration and low self-esteem.
    ಗಬ್ಬುನನ್ಮಗ ಗೌಡ, ಭಂಡ ಬಡ್ಡಿ ಮಗ ಲಾಲೂ, ಸೂ..ಮಗ ಕರುಣಾನಿಧಿ are only the long term gross offshoots.

  8. Reader says:

    @ ಮುನೇಗೌಡ
    at the way u wrote i appreciate, but i bit dispointed when u think
    “ನಮ್ ದೇಸದಾಗೆ ಆರೆಸ್ಸೆಸ್ / ಹಿಂದೂ ಸಂಘ ಗಳು ಅಂದ್ರೆ ಏನೋ ಮೂಗು ಮುರೀತಾವ್ರೆ. ಆವತ್ತು ಶಿವಾಜಿ ಮಾರಾಜ್ರು ಇಲ್ಲದಿದ್ರೆ ಅಥವಾ ಇವತ್ತು ಹಿಂದೂ ಸಂಘ ಗಳು ಇಲ್ದಿದ್ರೆ ಹಿಂದೂಗಳ ಕಥೆ ಏನಾಗ್ತಿತ್ತು ಅಂತ ಒಂದು ಚಣ ಕೂಡ ಯೇಚ್ನೆ ಮಾಡಾಕಿಲ್ಲ” these people only saved Hindhuism ………. i do agree these people are doing gr8 work and m also in Bajaranga Dal, but we should not forget the work of Vijaynagar arasu’s. If this kingdom haven’t born at that time India would have been became Muslim Country that time only.

  9. Vijaykumar says:

    Dear Prathap

    I think this is a right time to act, silent protest is not the answer for all the issues some times it requires BLOOD WAR

  10. ರಾಕೇಶ್ ಶೆಟ್ಟಿ says:

    ಪ್ರತಾಪ್,
    ಮತಾಂತರದ ಬಗ್ಗೆ ಬರೆದ ಲೇಖನ ಬಹಳ ಚೆನ್ನಾಗಿದೆ , ಆದರೆ ೧ ಪ್ರಶ್ನೆ ನನ್ನದು, ನೀವು ಹೀಗೆ ಬರಿತಿರ ನಾವು ಓದುತ್ತಿವಿ ರಕ್ತ ಬಿಸಿಯಾಗುತ್ತೆ , ಆಮೇಲೆ ಮತ್ತೆ ಅದೇ ಮಾಮೂಲಿ ಲೈಫ್..
    “ಕಿವುಡರಿಗೂ ಕೇಳುವಂತೆ ಹೇಳುವುದು” ಬೇಡವೇ ಪ್ರತಾಪ್ , ಇದೆಲ್ಲ ಜನ ಸಂಘಟನೆಯಿಂದ ಮಾತ್ರ ಸಾದ್ಯ ಅಂತ ನನಗೆ ಅನ್ನಿಸುತ್ತೆ…
    ಹಾಗೆ ಮತಾಂತರಕ್ಕೆ ಮೂಲ ಕಾರಣ ಇರೋದಾದರೂ ಎಲ್ಲಿ ಅಂತ ಒಮ್ಮೆ ನೋಡಿದರೆ, ಉತ್ತರ ‘ಅಸ್ಪೃಶ್ಯತೆ’..
    ಇಗ ಅದು ಬಹು ಮಟ್ಟಿಗೆ ಕಮ್ಮಿಯಾಗಿರಬಹುದು ಆದರೆ ನಮ್ಮ ‘ಜಾತ್ಯತಿವಾದಿಗಳು’ ಅದನ್ನೇ ಅಸ್ತ್ರವಾಗಿ ಉಪಯೋಗಿಸುತ್ತಾರೆ…
    ಜಾತಿಯ ವಿನಾಶವಾಗದೆ ‘ಧರ್ಮ’ದ ರಕ್ಷಣೆ ಸಾದ್ಯವೇ ಇಲ್ಲ …
    ‘ಧರ್ಮ’ ಉಳಿಸಲು ಕಾರ್ಯ ಪ್ರವೃತ್ತರಾಗಬೇಕು…

    ಹೀಗೆ Blog ನಲ್ಲಿ ಅನಿಸಿಕೆ ಬರೆದರೆ ಬದಲಾವಣೆ ತರೋದು ಬಹಳ ತಡವಾಗುತ್ತೆ.. (ಈ ಮಾತು ನನಗು ಅನ್ವಯಿಸುತ್ತೆ )
    ಇಲ್ಲಿ Comments ಬರೆದಿರೋ ಎಷ್ಟು ಜನಕ್ಕೆ ಸಮಾಜದ ಮುಖ್ಯವಾಹಿನಿಗೆ ಬಂದು ಜಾತಿ ರಾಜಕಾರಣದ ವಿರುದ್ದ ಹೊರಟ ಮಾಡುವ ಆಸೆ ಇದೆ ….

  11. Mune Gowda says:

    ಸ್ನೇಹಿತರೇ,
    ಇದನ್ನು ಇಲ್ಲಿ ಬರೆದಿದ್ದಕ್ಕಾಗಿ ಕ್ಷಮಿಸಿ, ಆದ್ರೆ ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರವೊಂದಿದೆ.
    ಕ್ರಿಶ್ಚಿಯನ್ನರ ಮೋಸ ಇಲ್ಲಿ ಗೊತ್ತಾಗುತ್ತದೆ.
    ದಯಮಾಡಿ ಇದನ್ನು you tube ನಲ್ಲಿ ವೀಕ್ಷಿಸಿ. youtube.com/watch?v=dkvdtzk1pbo

  12. ಆರ್ಡೀವಿ says:

    ನಮಗೆ ಶಾಂತಿ ಬೇಕು, ನಿಜ. ಸಂಯಮ ಇರಬೇಕು ಸತ್ಯ. ನೆಮ್ಮದಿ ನಮ್ಮ ಗುರಿ, ಖಂಡಿತಾ ಹೌದು.
    ಆದರೆ ಇವುಗಳ ಹೆಸರಿನಲ್ಲಿ ನಾವು ಷ೦ಡರಾಗಬಾರದು. ಪರಿಸ್ಥಿತಿ ಬಂದರೆ ಖಡ್ಗ ಹಿಡಿಯಲು ತಯಾರಿರಬೇಕು. ……….ಸ್ವಾಮಿ ವಿವೇಕಾನಂದ.

  13. kiran says:

    hi,

    what mr rakesh shetty told is correct. Now what happened is Hindu itself divided into many pieces and subpieces. so we need to start from the slogan hindu hindu naavella ondu. if it really and seriously affected on majority of us in india then no one can do any thing. but it is not so easy because we have all varities of people like soniya gandi,lk advani,devegowda, prakash karrat, girish karnad,ananta murthi, now so called communist mr RB also and many more . how can we made them to sit in one round table and take one decision . and also one more problem is poverty how to reduce this major problem? if we teach about our culture or religion people ask for food! then what you do ????? taleli sagani itkondu bhagavadgeetha bodane maadakke barbedi anta ugidu kalsalva???????? or else we need to kill all these basterd secularists and communists is it possible???? where is the solution. No where right???? irodu ondu life anta hego baduki bidabeku ashte namma kaili aagodu . maximum we pass one more comment astralli josh hogirutte pratap avru innondu hosa topic tartaare hindu mundu ella martu hogutte enanteera??????????

  14. ಕೇಶವ says:

    ಧನ್ಯವಾದಗಳು ಪ್ರತಾಪ್. ತುಂಬ ಚೆನ್ನಾಗಿ ಬರೆದಿರುವಿರಿ. ನಿಮ್ಮಂತಹ ಕ್ರಾಂತಿಕಾರಿ ಲೇಖಕರ ಅಗತ್ಯ ಇಂದಿನ ಭಾರತಕ್ಕೆ ಅತೀ ಅಗತ್ಯ.

    ನಮ್ಮ ಹಿಂದುಗಳಿಗೆ ಹಿಂದುಗಳೇ ಶತ್ರುಗಳು ಅನ್ನುವುದು ಶತ ಸಿದ್ದ. ಇದಕ್ಕೆ ಉದಾಹರಣೆ ಕೆಲವು ಹೆಸರುಗಳೇ ಸಾಕು. ದೇವೇ ಗೌಡ, ಖರ್ಗೆ, ಮೊಯ್ಲಿ, ಪೂಜಾರಿ, ಲಾಲು, ಐಯ್ಯರ್ ಇಸ್ಟೇ ಸಾಕು. ಹಾಗಂತ ಇವರಿಗೆ ಹಿಂದೂ ಧರ್ಮ ಬೇಕಿಲ್ಲ ಅಂತಲ್ಲ. ನಮ್ಮ ಗೌಡರನ್ನ ನೋಡಿ. ಭೇಟಿ ಮಾಡದ ದೇವಸ್ಥಾನಗಲಿಲ್ಲ, ಮಾಡದ ಹೋಮವಿಲ್ಲ. ಇವರಿಗೆಲ್ಲ ಬೇಕಿರೋದು ಬರೀ ವೋಟು ಬ್ಯಾಂಕ್. ಸೋನಿಯಾ ಎಂಬ ಇಟಲಿ ಹೆಣ್ಣಿನ ಮನ ಓಲೈಸುವ ಒಂದೇ ಗುರಿ. ಸ್ವಲ್ಪ ಯೋಚನೆ ಮಾಡಿದರು ಅರ್ಥ ಆಗುತ್ತಿತ್ತು ಇವರಿಗೆಲ್ಲ, ಇತರರಿಗಿಂತ ಹಿಂದೂಗಳ ಸಂಖ್ಯೆ ಜಾಸ್ತಿ, ಹಾಗಾಗಿ ಹಿಂದುಗಳನ್ನ ಚೆನ್ನಾಗಿ ನೋಡಿಕೊಂಡರೆ ತಮ್ಮ ಬೇಳೆ ಬೇಯಿಸಲು ಸುಲಭ ಎಂದು.

    ಇನ್ನು ನಮ್ಮ ಅತಿ ಬುದ್ದಿವಂತ (ಅ)ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು. ಅನಂತ ಮೂರ್ತಿಗಳು, ಕಾರ್ನಾಡರು, ಬೆಳಗರೆ. ಇವರಿಗೆಲ್ಲ ಏನಾಗಿದೆ ಎಂದು ಅರ್ಥವೇ ಆಗುತ್ತಿಲ್ಲ. ಬಹುಶ ಇವರನ್ನೆಲ್ಲಾ ತಿದ್ದಲು ಸ್ವತಃ ವಿವೇಕಾನಂದರು ಹುಟ್ಟಿ ಬರಬೇಕೋ ಏನೋ. ಒಂದು ವೇಳೆ ಬಂದರೂ ಇವರನ್ನೆಲ್ಲಾ ತಿದ್ದುವುದು ಕಷ್ಟ ಅನ್ನಿಸುತ್ತಿದೆ ನನಗಂತು.

    ಸನಾತನ ಹಿಂದೂ ಧರ್ಮ ರಕ್ಷಣೆಗೆ ಖಂಡಿತ ಗೀತೋಪದೇಶ ದ ಶ್ರೀಕೃಷ್ಣ ನ ಅಗತ್ಯವಿದೆ. ನಾವೆಲ್ಲರೂ ಅರ್ಜುನರಗಬೇಕು. ಇವತ್ತು ನಾವು ಎಚ್ಚೆತ್ತರೆ ನಮ್ಮ ನಾಳೆಯ ಭವಿಷ್ಯ ಕಾಣಬಹುದು. ಇಲ್ಲವಾದರೆ ಬಹಳ ಬೇಗ ದೊಡ್ಡ ದುರಂತ ಕಾದಿದೆ ನಮ್ಮ ಸನಾತನ ಧರ್ಮಕ್ಕೆ.
    ವಂದೇ ಮಾತರಂ. ಜೈ ಹಿಂದ್.

  15. sadanada says:

    The Chinese government is refusing to issue visas to Hindus trying to make the traditional summer pilgrimage to what they hold to be the home of Lord Shiva in Tibet, forcing thousands to delay or cancel the trip.

    Starting in June, Hindus from Nepal and India embark on a multiweek journey to the 22,000-foot Mount Kailash in the Himalayas and nearby Lake Mapam Yutso, known in India as Lake Mansarovar. The trip, a once-in-a-lifetime event for most who make it, includes treacherous off-road drives and several days of arduous trekking, and is believed to bring the traveler closer to the divine.

    This year, though, the Chinese government is refusing to grant any visas for travel to the Tibetan sites from Nepal, tour operators in Nepal say. India’s Foreign Ministry said Tuesday that the Chinese government had cited unspecified “domestic reasons.”

    At the same time, Beijing has retracted permission previously granted to Indian pilgrims who were planning to make the trip in early June. The Olympic torch is scheduled to go through Tibet’s capital, Lhasa, on June 20.
    As far as Pratap Sinha’s article all is not true, who cares for conversion now people are intelligent they know everything, The selfless service for educating, caring the sick and poor is counted for.
    History is full of wars let there not be any more but peace,,,,,,,,,,,,,,,,,,,,,,,, Hindu Christians we all must forget the religion and ask for humanity.

  16. srinivas says:

    Namaskara,
    Sreeyuta Munegoudare nimma barahadalli nagnasatyavannu adubhasheyalli bayalagisiddeeri .Gowda, Khrge, A moorti , R beligere muntada samajoddhaarakaru E bhashe arthamadikollali endu namma manassannu niyantrisuva A Shivappanna beduttene. Yappaa Dhanyavadagalu .

  17. ನಾವೆಲ್ಲಾ ಇಲ್ಲೆ ಒದಿ ಇಲ್ಲೆ ಬಿಟ್ಟು ಹೋಗ್ತಾ ಇದೀವಿ. ನಮ್ಕೈಲಿ ಆಗೋದು ಇಷ್ಟೇನ ಖಂಡಿತ ಇಲ್ಲ. ಕೊನೆ ಪಕ್ಷ ಹಿಂದು ಸಂಘಟನೆಗಳಿಗೆ ತಿಂಗಳಿಗೆ ಇಂತಿಷ್ಟು ವಂತಿಗೆ ಕೊಡಿ ಮನೆ ಮಠ ಬಿಟ್ಟು ಹಿಂದುತ್ವ ರಕ್ಷಿಸಲಿಕ್ಕೆ ಪಣ ತೊಟ್ಟಿದರೆ ಅಂತವರಿಗೆ ಸಹಾಯ ಮಾಡಿ. ಅಯ್ಯೊ ದುರುಪಯೋಗ ಆಗುತ್ತೆ ಅನ್ನುವ ಬೂಟಾಟಿಕೆ ಬೇಡ. ಆದ್ರೂ ಆಗ್ಲಿ ಈಗ ನಾವು ಕಟ್ತಾ ಇರೋ ತೆರಿಗೆಯಿಂದನೆ ಮಿಷನರಿ ಗಳಿಗೆ ಹಣ ಹೋಗ್ಥಾ ಇದೆ ಆದ್ರೆ ಹಿಂದು ಸಂಘಟನೆಗಳಿಗೆ ಹಣ ಸಹಾಯ ಮಾಡುವವರಿಲ್ಲ. ನೆನಪಿರಲಿ ಇವತ್ತು ನಾವೆಲ್ಲಾ ಹಿಂದುಗಳು ಅಂತ ಹೇಳ್ಬಹುದು ಧೈರ್ಯವಾಗಿ ಅಂದ್ರೆ ಅದು ಈ ಸಂಘಟನೆಗಳ ಕೆಲಸವೆ. ನಿಮ್ಗೆ ಬೇರೆ ಏನೂ ಮಾದ್ಲಿಕ್ಕೆ ಆಗಲ್ಲ ಧನ ಸಹಾಯ ಮಾಡಿ. ನಾನು ಆರೆಸ್ಸಿಗನಲ್ಲ ಬಜರಂಗಿಯೂ ಅಲ್ಲ, ಶ್ರೀರಾಮಸೇನೆಯವನಂತೂ ಖಂಡಿತ ಅಲ್ಲ. ಆದರೆ ತಿಂಗಳಿಗಿಷ್ಟು ಎಂದು ವಂತಿಗೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ.