Pratap Simha » Featured

ಅವರನ್ನು ನೆನಪಿಸಿಕೊಂಡರೆ ಸ್ವಾಭಿಮಾನ ಪುಟಿಯುತ್ತದೆ!
1893

ಭಾರತೀಯರಾದ ನಾವು ಈ ವರ್ಷ ವನ್ನು ಮರೆಯಲು ಸಾಧ್ಯವೇ? “Sisters and Brothers of America” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾ ನಂದರು ಜಗತ್ತನ್ನು ಗೆದ್ದ ವರ್ಷವದು. ವಿವೇಕಾನಂದರು ಅಮೆರಿಕದಲ್ಲಿ ಮನೆಮಾತಾಗುವಂತೆ ಮಾಡಿತು ಆ  ಭಾಷಣ. ಅಲ್ಲಿನ ಸಂಘ-ಸಂಸ್ಥೆಗಳು ಮುಗಿಬಿದ್ದು ಭಾಷಣಕ್ಕೆ ಆಹ್ವಾನ ನೀಡಲಾರಂಭಿಸಿದವು. ಹಾಗಾಗಿ ವಿಶ್ವಧರ್ಮ ಸಮ್ಮೇಳನ ಮುಗಿದ ನಂತರವೂ ಅವರು ಕೆಲಕಾಲ ಅಮೆರಿಕದಲ್ಲೇ ಉಳಿದುಕೊಂಡರು. ಒಂದಿಷ್ಟು ಜನರಿಗೆ ವಿವೇಕಾನಂದರನ್ನು ವಾದದಲ್ಲಿ ಸೋಲಿಸಿ ಬಿಡಬೇಕೆಂಬ ಹಠ ಬಂದುಬಿಟ್ಟಿತ್ತು. ಕ್ರಿಶ್ಚಿಯಾನಿಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸುವ ಸಲುವಾಗಿ ಹಿಂದೂಧರ್ಮದ ಅವಹೇಳನದಲ್ಲಿ ತೊಡಗಿದ್ದರು. ವಿವೇಕಾನಂದರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲೂ ಹಾಗೇ ಆಯಿತು. ಮಾತಿಗೆ ಎದ್ದು ನಿಂತ ವಿವೇಕಾನಂದರು ಒಂದಿಷ್ಟು ಕಾಲ ವಾಗ್ಝರಿಯನ್ನು ಹರಿಸಿ ಸಭೆಯಲ್ಲಿ ನೆರೆದಿದ್ದವರಿಗೆಲ್ಲ ಒಂದು ಪ್ರಶ್ನೆ ಕೇಳಿದರು.

ನಿಮ್ಮಲ್ಲಿ ಎಷ್ಟು ಜನ ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದೀರಿ?

ಸಾವಿರಾರು ಜನ ನೆರೆದಿದ್ದ ಆ ಸಭೆಯಲ್ಲಿ ಕೈಮೇಲೇರಿದ್ದು ಒಂದಿಬ್ಬರದ್ದು ಮಾತ್ರ!  ನಮ್ಮ ಧರ್ಮದ ಬಗ್ಗೆ ಒಂದಿನಿತೂ ಓದಿ ತಿಳಿದುಕೊಳ್ಳದೆ ಹಿಂದೂ ಧರ್ಮವನ್ನು ಮೌಢ್ಯ, ಮೂಢನಂಬಿಕೆ, ಗೊಡ್ಡುಗಳಿಂದ ಕೂಡಿರುವ ಅನಾಗರಿಕ ಧರ್ಮಎಂದು ಅವಹೇಳನ ಮಾಡುತ್ತಿದ್ದೀರಲ್ಲಾ ನಿಮಗೆಷ್ಟು ಧಾರ್ಷ್ಟ್ಯ?! ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇಡೀ ಸಭೆಯೇ ಮೂಕವಿಸ್ಮಿತವಾಗಿ ಕುಳಿತುಕೊಳ್ಳುತ್ತದೆ.

ಅಲ್ಲಿಂದ ಬ್ರಿಟನ್‌ಗೆ ಬಂದರು.

ಹತ್ತಾರು ಭಾಷಣ, ಸಂವಾದ, ಚರ್ಚಾಕೂಟಗಳಿಗೆ ಅಲ್ಲೂ ಆಹ್ವಾನ ಬಂತು. ಹಾಗೊಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿವೇಕಾನಂದರು ಬ್ರಿಟಿಷ್ ಆಡಳಿತದ ವಿರುದ್ಧ ಕಟು ಟೀಕೆ ಮಾಡುತ್ತಿದ್ದರು. ಅದನ್ನು ಕಂಡ ಬ್ರಿಟಿಷ್ ಪತ್ರಕರ್ತರು ಸಿಡಿಮಿಡಿಗೊಂಡಿದ್ದರು. ಆದರೇನಂತೆ ವಿವೇಕಾನಂದರು ಮಾತ್ರ ಟೀಕಾಪ್ರಹಾರವನ್ನು ಮುಂದುವರಿಸಿಯೇ ಇದ್ದರು. ಹಾಗೆ ಟೀಕೆ ಮಾಡುತ್ತಿದ್ದ ಅವರು ಮಾತಿನ ಮಧ್ಯೆ, “ಆದರೂ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ” ಎಂದುಬಿಟ್ಟರು!!

ಮೊದಲೇ ಕುಪಿತಗೊಂಡಿದ್ದ ಬ್ರಿಟಿಷ್ ಪತ್ರಕರ್ತರಿಗೆ ಬ್ರಹ್ಮಾಸ್ತ್ರ ಸಿಕ್ಕಿದಂತಾಯಿತು. “ಇದುವರೆಗೂ ಬ್ರಿಟಿಷ್ ಸರಕಾರವನ್ನು ಭಾರೀ ಭಾರೀ ಟೀಕೆ ಮಾಡುತ್ತಿದ್ದಿರಲ್ಲಾ, ಇದ್ದಕ್ಕಿದ್ದಂತೆಯೇ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ ಎಂದಿದ್ದೇಕೆ? ಭಯವಾಯಿತೇ?!” ಎಂದು ಕಿಚಾಯಿಸಿದರು. ವಿವೇಕಾನಂದರು ನಿರುತ್ತರರಾಗಿ ನಿಲ್ಲುತ್ತಾರೆ, ಅವಮರ್ಯಾದೆಗೆ ಒಳಗಾಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಹಸನ್ಮುಖಿಯಾಗಿಯೇ ನಿಂತಿದ್ದ ವಿವೇಕಾನಂದರು ಬಾಯಿ ತೆರೆದರು…

“ನೋಡಿ, ಬ್ರಿಟನ್ ರಾಣಿ ವಿಕ್ಟೋರಿಯಾ ವಿಧವೆ. ನಮ್ಮ ಭಾರತ ದಲ್ಲಿ ವಿಧವೆಯರಿಗೆ ಬಹಳ ಗೌರವ ಕೊಡುತ್ತೇವೆ” ಎಂದರು!

ಗಪ್ಪಾಗುವ ಸರದಿ ಪತ್ರಕರ್ತರದ್ದಾಗಿತ್ತು. ವಿವೇಕಾನಂದರು ಬರೀ ಒಬ್ಬ ಸ್ವಾಮೀಜಿ, ಹಿಂದೂಧರ್ಮವನ್ನು ಉದ್ಧಾರ ಮಾಡಲು ಅವತರಿಸಿ ಬಂದ ಮಹಾಪುರುಷ, Messiah ಮಾತ್ರ ಎಂದು ಭಾವಿಸಬೇಡಿ. ಅವರಿಗೆ ತುಂಬಾ ಹಾಸ್ಯಪ್ರeಯೂ ಇತ್ತು, Presence of Mind  ಅಂತಾರಲ್ಲಾ ಅದಂತೂ ಅದ್ಭುತ. ಗಂಭೀರವಾದ, ಅವಹೇಳನಕಾರಿಯಾದ ಪ್ರಶ್ನೆಗಳು, ಟೀಕೆಗಳು ಎದುರಾದಾಗಲೂ ಕೋಪಿಸಿಕೊಳ್ಳದೆ ತುಂಬಾ witty ಆಗಿ ಉತ್ತರಿಸುತ್ತಿದ್ದರು. ಬ್ರಿಟನ್ನಿನಲ್ಲೇ ಮತ್ತೊಂದು ಸಭೆ ನಡೆಯುತ್ತಿತ್ತು. ವಿವೇಕಾನಂದರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಎಲ್ಲರೂ ಆಶ್ಚರ್ಯಚಕಿತರಾಗಿ ಮಾತು ಕೇಳುತ್ತಿದ್ದರೆ ಒಬ್ಬ ಫಿರಂಗಿ ಮಾತ್ರ ವಿವೇಕಾನಂದರ ಕಾಲೆಳೆಯಲು ಹವಣಿಸುತ್ತಿದ್ದ.

ಫಿರಂಗಿ: What is the difference between Monk and a Monkey?

ವಿವೇಕಾನಂದ: Just Arms difference!

ಪ್ರಶ್ನಿಸಿದ ಫಿರಂಗಿ ವಿವೇಕಾನಂದರಿಂದ ಸರಿಸುಮಾರು ಮೊಳಕೈ ದೂರದಲ್ಲಿದ್ದ!! ಹಾಗಂತ ಎಲ್ಲ ಪ್ರಶ್ನೆಗಳಿಗೂ ಅವರು ತಿಳಿಹಾಸ್ಯ ದಲ್ಲೇ ಉತ್ತರಿಸುತ್ತಿ ದ್ದರು ಎಂದರ್ಥವಲ್ಲ. ಒಮ್ಮೆ ಹೀಗೂ ಆಯಿತು. ವಿವೇಕಾನಂದರು ಬುದ್ಧನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆ ಭಾಷಣ ವೊಂದರಲ್ಲಿ ಬುದ್ಧನ ಬಗ್ಗೆಯೇ ಹೇಳುತ್ತಿದ್ದರು, ಬಹುವಾಗಿ ಹೊಗಳುತ್ತಿದ್ದರು. ಇದನ್ನು ಕಂಡ ಬ್ರಿಟಿಷನೊಬ್ಬ ಕೇಳುತ್ತಾನೆ-ಬುದ್ಧ ಅಷ್ಟು ಗ್ರೇಟ್, ಇಷ್ಟು ಗ್ರೇಟ್ ಎನ್ನುತ್ತಿದ್ದೀರಲ್ಲಾ, ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲರೂ ಬ್ರಿಟನ್‌ಗೆ ಬಂದುಹೋಗಿದ್ದಾರೆ. ನಿಮ್ಮ ಬುದ್ಧ ಗ್ರೇಟ್ ಆಗಿದ್ದನೆನ್ನುವುದಾದರೆ ಆತನೇಕೆ ಬ್ರಿಟನ್‌ಗೆ ಭೇಟಿ ಕೊಡಲೇ ಇಲ್ಲ?!

ವಿವೇಕಾನಂದ: ಬುದ್ಧ ಬದುಕಿದ್ದಾಗ ನಿನ್ನ ಯುರೋಪ್ ಎಲ್ಲಿತ್ತು? ನಿನ್ನ ಬ್ರಿಟನ್ ಎಲ್ಲಿತ್ತು? ಅಮೆರಿಕವೆಲ್ಲಿತ್ತು?!

ಅದಕ್ಕಿಂತ ತಪರಾಕಿ ಬೇಕೆ?! ಬುದ್ಧ ಅವತರಿಸಿದ್ದು  ಕ್ರಿಸ್ತ ಪೂರ್ವ ದಲ್ಲಿ. ಆಗ ಬ್ರಿಟನ್ನೂ ಇರಲಿಲ್ಲ, ಯುರೋಪೂ ಇರಲಿಲ್ಲ, ಅಷ್ಟೇಕೆ ಕ್ರಿಶ್ಚಿಯಾನಿಟಿಯೇ ಇರಲಿಲ್ಲ!! ವಿವೇಕಾನಂದರ ಜತೆ ಬ್ರಿಟನ್‌ಗೂ ಆಗಮಿಸಿದ್ದ ಸಿಸ್ಟರ್ ನಿವೇದಿತ ಎಷ್ಟು ಪ್ರಭಾವಿತಳಾಗಿದ್ದಳೆಂದರೆ, ನಾನೂ ಭಾರತಕ್ಕೆ ಬರುತ್ತೇನೆ, ನಿಮ್ಮ ದೇಶಸೇವೆಗೆ ನಾನೂ ಸಹಾಯ ಮಾಡುತ್ತೇನೆ ಎಂದಳು. “ನೋಡು…ಇತರ ಧರ್ಮಗಳ ಕಟ್ಟುಪಾಡುಗಳು, ಕಟ್ಟಳೆಗಳು ಅಷ್ಟಾಗಿ ತಾರ್ಕಿಕವಾಗಿರುವುದಿಲ್ಲ, ವಿeನಕ್ಕೆ ಹತ್ತಿರವಾಗಿರುವುದಿಲ್ಲ. ಹಾಗಾಗಿ ಮೊದಲು ಪರಾಮರ್ಶೆ ಮಾಡಿ, ನಂತರ ಒಪ್ಪಿಕೊಳ್ಳಬೇಕು. ಆದರೆ ಹಿಂದೂ ಧರ್ಮದ ರೀತಿ ರಿವಾಜುಗಳು ತರ್ಕಬದ್ಧವಾಗಿರುತ್ತವೆ, ವಿeನಕ್ಕೆ ಅನುಗುಣವಾಗಿರುತ್ತವೆ. ಅವುಗಳನ್ನು ಮೊದಲು ಒಪ್ಪಿಕೊಂಡು ಅನುಸರಿಸಬೇಕು, ಕ್ರಮೇಣ ಆ ಕಟ್ಟುಪಾಡುಗಳ ಹಿಂದೆ ಇರುವ ತರ್ಕ, ಆಶಯ ಅರಿವಾಗುತ್ತದೆ. ಪಾಶ್ಚಿಮಾತ್ಯಳಾದ ನೀನು ಭಾರತಕ್ಕೆ ಬಂದ ನಂತರ ಅದೇಕೆ, ಇದೇಕೆ ಎಂದು ಪ್ರಾರಂಭದಲ್ಲೇ ಪ್ರಶ್ನಿಸಬೇಡ” ಎನ್ನುತ್ತಾ ಹೀಗೆ ಹೇಳುತ್ತಾರೆ- Anything that is western origin, first you verify it, then accept it. Anything that is Indian origin, first accept it, then verify it if necessary.

ಅವರಿಗೆ ಹಿಂದೂ ಧರ್ಮದ ಬಗ್ಗೆ ಅಷ್ಟೊಂದು ಬಲವಾದ ನಂಬಿಕೆಯಿತ್ತು.

ನೀವು ರೋಮಿ ರೋಲ್ಯಾಂಡ್(Romain Rolland) ಹೆಸರು ಕೇಳಿರಬಹುದು. ಆತ ಫ್ರೆಂಚ್ ನಾಟಕಕಾರ, ಇತಿಹಾಸಕಾರ, ಕಾದಂಬರಿಕಾರ. ಒಮ್ಮೆ ಈ ರೋಮಿ ರೋಲ್ಯಾಂಡ್ ಹಾಗೂ ರವೀಂದ್ರನಾಥ ಟಾಗೋರ್ ಪರಸ್ಪರ ಭೇಟಿಯಾಗುತ್ತಾರೆ. ಇಬ್ಬರೂ ಹೆಚ್ಚೂಕಡಿಮೆ ಸಮಕಾಲೀನರು. ರವೀಂದ್ರನಾಥ್ ಟಾಗೂರರಿಗೆ 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ದೊರೆತರೆ, ರೋಮಿ ರೋಲ್ಯಾಂಡ್ 1915ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಡೆದವರು. ಇಂತಹ ದಿಗ್ಗಜರ ಭೇಟಿ ಚರ್ಚೆಗೆ ತಿರುಗುತ್ತದೆ. ನನಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕು, ಅದಕ್ಕೆ ಯಾವ ಪುಸ್ತಕವನ್ನು ಓದಬೇಕು ಎಂದು ರೋಮಿ ರೋಲ್ಯಾಂಡ್ ಕೇಳುತ್ತಾರೆ. “If you want to know India, study Vivekananda. In him everything is positive, nothing negative” ಎನ್ನುತ್ತಾರೆ ರವೀಂದ್ರನಾಥ ಟಾಗೂರ್!! ರೋಮಿ ರೋಲ್ಯಾಂಡ್‌ಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ವಿವೇಕಾನಂದರ ಎಲ್ಲ ಭಾಷಣ, ಚಿಂತನೆಗಳಿದ್ದಿದ್ದು ಇಂಗ್ಲಿಷ್‌ನಲ್ಲಿ ಮಾತ್ರ. ಕೊನೆಗೆ ತನ್ನ ಅಕ್ಕನಿಂದ ಓದಿಸಿ, ಹೇಳಿಸಿಕೊಂಡು ವಿವೇಕಾನಂದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂತಹ ನೊಬೆಲ್ ಪುರಸ್ಕೃತನೇ ವಿವೇಕಾನಂದರ ಬಗ್ಗೆ ಎಷ್ಟು ಸಮ್ಮೋಹಿತನಾಗುತ್ತಾನೆಂದರೆ, “The Life of Vivekananda and The universal Gospel” ಎಂಬ ಪುಸ್ತಕ ಬರೆಯುತ್ತಾನೆ. “I look upon Swamy Vivekananda as a fire of spiritual energy” ಎಂದು ತನ್ನ ಮೇಲಾದ ಪ್ರಭಾವವನ್ನು ಹೇಳಿಕೊಳ್ಳುತ್ತಾನೆ.

ಅಂತಹ ವಿವೇಕಾನಂದರು ಜನಿಸಿದ ನಾಡು ನಮ್ಮದು.

ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ಅವರನ್ನು “ಹಿಂದೂ ಧರ್ಮದ ರಾಯಭಾರಿ” ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the global face of India. He was the first Ambassador of modern India to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಷನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ Indian ethos, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. “Hands that serve are holier than the lips that pray” (ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮೇಲು)- ಈ ಮಾತನ್ನು ಹೇಳಿದ್ದು ಗಾಂಧಿ ಎನ್ನುವವರಿದ್ದಾರೆ. ಅಲ್ಲಾ… ಅಲ್ಲಾ… ಮದರ್ ತೆರೇಸಾ ಎಂದು ಆಕೆಯ ತಲೆಗೆ ಕಟ್ಟುವವರಿದ್ದಾರೆ. ಸ್ವಾಮಿ ಸುಖಬೋಧಾನಂದ ಹಾಗೂ “ಯು ಕೆನ್ ವಿನ್” ಪುಸ್ತಕ ಬರೆದ ಶಿವ ಖೇರಾ ತಮ್ಮದೇ ಆದ ಪದಗಳಲ್ಲಿ ಅದೇ ವಾಕ್ಯವನ್ನು ರೀಸೈಕ್ಲ್ ಮಾಡಿದ್ದೂ ಇದೆ. Make no mistake, ಆ ಮಾತನ್ನು ಹೇಳಿದ್ದು ಸ್ವಾಮಿ ವಿವೇಕಾನಂದರು! ತುಂಬ articulate ಆಗಿ, extempore ಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು, “Hinduism is not just a religion, it’s a way of life” (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ.  ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ “ನ್ಯೂಯಾರ್ಕ್ ಟೈಮ್ಸ್” ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…”  ಎಂದು ಬರೆದಿತ್ತು!!

ಹಾಗಂತ ವಿವೇಕಾನಂದರು ಹಿಂದೂ ಧರ್ಮವನ್ನು ಬರೀ ರೋಮ್ಯಾಂಟಿಸೈಝ್ ಮಾಡಲಿಲ್ಲ, ಹುಳುಕುಗಳನ್ನೂ ಹೇಳಿದರು. “Hinduism should reform, if not it will collapse on its own weight” ಎಂದು ಅದರ ಲೋಪಗಳನ್ನು ಎತ್ತಿತೋರಿದರು. ಇವತ್ತು ಒಬ್ಬ ಸಮಾಜವಾದಿ, ಸಮತಾವಾದಿ ಕೂಡ ಅವರನ್ನು ಒಪ್ಪಿಕೊಳ್ಳುತ್ತಾನೆ. ಗಾಂಧಿಯನ್ನು ಟೀಕಿಸುವವರಿದ್ದಾರೆ, ಆದರೆ ವಿವೇಕಾನಂದರನ್ನು ಟೀಕಿಸುವವರನ್ನು ಕಾಣುವುದು ಕಷ್ಟ. ಈಗೀಗ ನಮ್ಮ ಪಾರ್ಲಿಮೆಂಟನ್ನು ನೋಡಿ ಕೊಂಡು ಎಲ್ಲರೂ ಯೂತ್ ಪವರ್ ಬಗ್ಗೆ ಮಾತನಾಡುತ್ತಿದ್ದಾರೆ, ಯೂತ್ ಬಂದರೆ ಭಾರತ ಬದಲಾಗುತ್ತದೆ ಎನ್ನುತ್ತಿದ್ದಾರೆ. ವಿವೇಕಾ ನಂದರು 115 ವರ್ಷಗಳ ಹಿಂದೆಯೇ ಯುವಶಕ್ತಿ ಬಗ್ಗೆ ಹೇಳಿದ್ದರು. ಯೂತ್ ಎಂದರೆ ಯೌವನವಲ್ಲ, Free from prejudice, ಬೇರೆಯವರ ಒಳಿತನ್ನೂ ಬಯಸುವ ಮನಃಸ್ಥಿತಿ ಎಂದಿದ್ದರು.

1000 ವರ್ಷಗಳ ಕಾಲ ಬಾಹ್ಯಶಕ್ತಿಗಳ ಆಕ್ರಮಣ, ಆಡಳಿತ, ನಮ್ಮ ಜನರ ಕಗ್ಗೊಲೆ, ಅತ್ಯಾಚಾರ, ಮತಾಂತರ… ಇವುಗಳನ್ನು ತಡೆಯಲು ಒಂದು ವಿಜಯನಗರ ಸಾಮ್ರಾಜ್ಯ, ಒಬ್ಬ ಶಿವಾಜಿ, ಒಬ್ಬ ರಾಣಾ ಪ್ರತಾಪ್, ಒಬ್ಬ ಗುರು ಗೋವಿಂದ ಸಿಂಗ್, ದಯಾನಂದ ಸರಸ್ವತಿ ಅವತರಿಸಿ ಬಂದರು. ಅವರ ನಂತರ ಭಾರತದ Global face ಆಗಿ ಬಂದವರೇ ವಿವೇಕಾನಂದ. ಇಂತಹವರು ಹುಟ್ಟಿಬಂದ ಕಾರಣವೇ ಬಾಹ್ಯಶಕ್ತಿಗಳು ಭಾರತೀಯರನ್ನು ಕೊಂದರೂ ‘ಭಾರತೀಯತೆ’ಯನ್ನು ನಾಶಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಜನವರಿ 12 ವಿವೇಕಾನಂದರ ಜನ್ಮದಿನ.

ಮತ್ತೊಬ್ಬ ವಿವೇಕಾನಂದ ಅವತರಿಸಿ ಬರಲಿ ಎಂದು ನಿರೀಕ್ಷಿಸುವ ಬದಲು ಅವರ ಸಂದೇಶವನ್ನು ಅರಿತುಕೊಂಡು, ಈ ದೇಶ, ಧರ್ಮವನ್ನು ಕಾಪಾಡಿಕೊಳ್ಳುವ ಕೆಲಸವನ್ನು ನಾವೇ ಮಾಡುವುದು ಒಳಿತಲ್ಲವೆ?

ಏನು ಬರೆಯಲಿ ಚೆನ್ನ, ಹೇಗೆ ತೋರಲಿ ನಿನ್ನ?
ಏನು ಬರೆಯಲಿ ಚೆನ್ನ

ಹೇಗೆ ತೋರಲಿ ನಿನ್ನ

ಸಂಪನ್ನ ಸದ್ಗುಣದ ಪೂರ್ಣರೂಪ

ಸೋತುಹೋಗುವ ಸ್ವರ ಓತು ಕಾಣದ ಮನ

ಸೊರಗಿ ಸೊಕ್ಕುವ ವಾಕ್ಯ-ವ್ಯಾಕರಣದಲಿ

ಕರಗಿ ಕಾಳಿಕೆ ಹಿಡಿವ ಶಬ್ದ ಶಾಹಿಯಲಿ

ನಿಶ್ಶಬ್ದನೇ ನಿನ್ನ ಹೇಗೆ ಬರೆಯಲಿ?

ಅವರ ಸಾಧನೆ, ನಾಡು- ನುಡಿ-ಭಾಷೆಗೆ ನೀಡಿದ ಕೊಡುಗೆ, ಬಡ-ನಿರ್ಗತಿಕ ಮಕ್ಕಳ ವಿದ್ಯಾರ್ಜನೆಗೆ ಕೊಟ್ಟ ಕಾಣಿಕೆಯನ್ನು ಸ್ತುತಿಸುವ ಇಂತಹ ನೂರಾರು ಪದ್ಯಗಳೇ ರಚನೆಯಾಗಿವೆ. ‘ಅಪ್ಪಾವರಿದ್ದಾರಲ್ರಿ, ಹೈದರಾಬಾದ್ ನಿಜಾಮನ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಹೇಳಿ ಕೊಡುತ್ತಿದ್ದರು’ ಎಂದು ಅಲ್ಲಿನ ಜನ ಹೇಳುತ್ತಾರೆ. ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಆಂಧ್ರದ ಗಡಿಯಿದೆ, ಮತ್ತೊಂದು ಕಡೆ ಮಹಾರಾಷ್ಟ್ರವಿದೆ. ಆದರೆ ಬೀದರ್ ಜಿಲ್ಲೆಯ ಜನರಾಡುವ ಕನ್ನಡ ಮಾತ್ರ ಕಲಬೆರಕೆಯಾಗಿಲ್ಲ. ಅವರ ಮಾತಿನಲ್ಲಿ ಅನ್ಯ ಭಾಷೆಯ ಕೆಲಪದಗಳು ಸೇರಿಕೊಂಡಿದ್ದರೂ ಅವುಗಳಲ್ಲೂ ಕನ್ನಡದ ಸೊಗಡೇ ಕಾಣುತ್ತದೆ. ಹಾಗಾಗಿ ಅಪ್ಪಾ ಅವರ ಬಗ್ಗೆ ಜನರಾಡುವ ಮಾತುಗಳಲ್ಲಿ ಸತ್ಯವಿದೆ, ಅದು ಆಧಾರವಿಲ್ಲದ ದಂತಕಥೆ ಎಂದನಿಸುವುದಿಲ್ಲ.

ಅಪ್ಪಾವರೆಂದರೆ ೧೦೯ ವರ್ಷ ಬಾಳಿ, ಬೀದರನ್ನು ಬೆಳಗಿ ಲಿಂಗೈಕ್ಯರಾಗಿರುವ ಭಾಲ್ಕಿ ಹಿರೇಮಠದ ಮಠಾಧೀಶರಾದ ಡಾ. ಚನ್ನಬಸವ ಪಟ್ಟದ್ದೇವರು.

ಮಠ-ಮಂದಿರಗಳು ಕನ್ನಡಿಗರಾದ ನಮಗೆ ಅಪರಿಚಿತವೇನಲ್ಲ ಬಿಡಿ. ಎಲ್ಲಾ ಜಾತಿಗಳೂ ಇಂದು ಮಠಗಳನ್ನು ಹೊಂದಿವೆ. ಕರ್ನಾಟಕದ ಉದ್ದಗಲಕ್ಕೂ ಮಠಗಳಿವೆ. ಅವು ಸಾಕಷ್ಟು ಒಳ್ಳೆಯ ಕೆಲಸವನ್ನೂ ಮಾಡುತ್ತಿವೆ. ಅವು ಎಷ್ಟೇ ಘನ ಕಾರ್ಯ ಮಾಡುತ್ತಿದ್ದರೂ, ದೂರದಲ್ಲಿ ನಿಂತು ನೋಡುವವರಿಗೆ ಎಷ್ಟೇ ಚೆನ್ನಾಗಿ ಕಂಡರೂ ಹತ್ತಿರಕ್ಕೆ ಹೋಗಿ ಗಮನಿಸಿದರೆ, ಒಬ್ಬೊಬ್ಬರದ್ದೇ ಅಭಿಪ್ರಾಯ ಕೇಳುತ್ತಾ ಹೋದರೆ ಸ್ಥಳೀಯರ ಟೀಕೆಯಿಂದ ಮುಕ್ತವಾಗಿರುವ ಮಠಗಳು ಖಂಡಿತ ಕಾಣಸಿಗುವುದಿಲ್ಲ. ಶಿಕ್ಷಣದ ವಾಣಿಜ್ಯೀಕರಣದ ಆರೋಪದಿಂದ ಯಾವ ಮಠಗಳೂ ಹೊರತಾಗಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆದರೆ ಬೀದರ್‌ನಿಂದ 40 ಕಿ.ಮೀ. ದೂರದಲ್ಲಿರುವ ಭಾಲ್ಕಿ ತಾಲೂಕಿಗೆ ಹೋದರೆ ಅಲ್ಲಿನ ಹಿರೇಮಠ ಸಂಸ್ಥಾನದ ಬಗ್ಗೆ ಸಣ್ಣ ಅಪಸ್ವರವೂ ಕೇಳುವುದಿಲ್ಲ. ಈ ಮಾತು ಅತಿಶಯೋಕ್ತಿಯಲ್ಲ. ಇಡೀ ಹೈದರಾಬಾದ್ ಕರ್ನಾಟಕಕ್ಕೆ (ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಕೊಪ್ಪಳ) ಕಳಸಪ್ರಾಯವಾದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದವರು ಡಾ. ಚನ್ನಬಸವ ಪಟ್ಟದ್ದೇವರು. ಅವರ ಮೂಲ ಹೆಸರು ಮಹಾರುದ್ರ. ಬದುಕೂ ಹಾಗೆಯೇ ಇದೆ. ನಾಲ್ಕನೇ ವಯಸ್ಸಿಗೆ ಅಪ್ಪ-ಅಮ್ಮನನ್ನು ಕಳೆದುಕೊಂಡು, ಅವರಿವರ ಆಶ್ರಯ, ಒಪ್ಪೊತ್ತಿನ ಕೂಳು ತಿಂದು ಬದುಕು ಕಟ್ಟಿಕೊಂಡವರು. ಇತ್ತ ೧೯೦೪ರಲ್ಲಿ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದ ಹಾನಗಲ್ ಕುಮಾರಸ್ವಾಮಿಗಳು, ಗುರುವರ್ಗವನ್ನು ಸುಧಾರಿಸಲು, ಧಾರ್ಮಿಕ ತರಬೇತಿ ನೀಡಲು ೧೯೦೯ರಲ್ಲಿ ಶಿವಯೋಗ ಮಂದಿರವನ್ನು ಆರಂಭಿಸಿದರು. ಭಾಷಣಕಾರರು, ಕೀರ್ತನಕಾರರು, ಪುರಾಣಿಕರು, ಲೇಖಕರು, ಯೋಗಿಗಳು, ಸಂಗೀತಜ್ಞರು ಮಾತ್ರವಲ್ಲದೆ ನಮ್ಮ ದಕ್ಷಿಣ ಭಾರತದ ಬಹುತೇಕ ವೀರಶೈವ ಮಠಾಧೀಶರು ರೂಪುಗೊಂಡಿದ್ದೇ ಶಿವಯೋಗ ಮಂದಿರದಲ್ಲಿ. ಇಳಕಲ್ ಮಹಾಂತ ಸ್ವಾಮಿಗಳು, ತೋಂಟದ ಸಿದ್ಧಲಿಂಗ ಸ್ವಾಮಿಗಳು, ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ, ಗಾನಯೋಗಿ ಪಂಚಾಕ್ಷರಿ ಗವಾಯಿಗಳು ತಯಾರಾಗಿದ್ದು ಇಲ್ಲಿಯೇ. ಮಹಾರುದ್ರ ಭಾಲ್ಕಿಯ ಚನ್ನಬಸವ ಪಟ್ಟದ್ದೇವರಾಗಿ ರೂಪು ಗೊಂಡಿದ್ದೂ ಇಲ್ಲೇ.

ಒಂದು ದಿನ ಮಹಾರುದ್ರನನ್ನು ಕರೆಸಿಕೊಂಡ ಕುಮಾರಸ್ವಾಮಿ ಗಳು, ‘ನೀನು ಭಾಲ್ಕಿಗೆ ಹೋಗಬೇಕು. ಅಲ್ಲಿನ ಮಠದ ಆಡಳಿತವನ್ನು ನಿರ್ವಹಿಸಬೇಕು’ ಎಂದಾಗ, ‘ನನಗೆ ಅಧಿಕಾರ ಬೇಡ, ಸೇವೆ ಮಾಡಬೇಕೆಂದವನಿಗೆ ಅಧಿಕಾರವೇಕೆ?’ ಎಂದು ನಯವಾಗಿ ತಿರಸ್ಕರಿಸಿದರು. ಆದರೆ ಗುರುಗಳು ಗದರಿಸಿದಾಗ ಮಾತಿಗೆ ಮಣಿದು ಭಾಲ್ಕಿಗೆ ಆಗಮಿಸಿದರು. ಕೊನೆಗೆ ಭಾಲ್ಕಿಯ ಮಠಾಧೀಶರಾಗಬೇಕು ಎಂದು ಕುಮಾರಸ್ವಾಮಿಗಳು ಆeಪಿಸಿ ದರು. ಅದಕ್ಕನುಗುಣವಾಗಿ 1924, ಫೆಬ್ರವರಿಯಲ್ಲಿ ಕಾಶಿ ಮತ್ತು ರಂಭಾಪುರಿ ಜಗದ್ಗುರುಗಳು ಹಾಗೂ ಕುಮಾರಸ್ವಾಮಿಗಳ ಸಮ್ಮುಖದಲ್ಲಿ ಪಟ್ಟಾಭಿಷೇಕ ನಡೆಯಿತು. ಹೀಗೆ ಮಹಾರುದ್ರ, ಚನ್ನಬಸವ ಪಟ್ಟದ್ದೇವರಾದರು. ಅಂದು ಹರಸಲು ಬಂದಿದ್ದ ಕುಮಾರಸ್ವಾಮಿಗಳು, “ನೀನು ಮಠದ ಗುಲಾಮನಾಗಬೇಡ, ಕನ್ನಡ ಭಾಷೆಯ ಪ್ರಸಾರ ಮತ್ತು ವಚನಗಳ ಪ್ರಸಾರ ನಿನ್ನ ಜೀವನದ ಗುರಿಯಾಗಿರಲಿ” ಎಂದು ಕಿವಿಮಾತು ಹೇಳಿದರು. ಅದೇ ಚನ್ನಬಸವ ಪಟ್ಟದ್ದೇವರಿಗೆ ದಾರಿದೀವಿಗೆಯಾಯಿತು. ನಿಮಗೆಲ್ಲ ಗೊತ್ತೇ ಇದೆ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ ಬಂದರೂ ಹೈದರಾಬಾದ್ ಕರ್ನಾಟಕ ನಿಜಾಮನಿಂದ ಸ್ವತಂತ್ರಗೊಳ್ಳಲು ಇನ್ನೂ 13 ತಿಂಗಳುಗಳೇ ಬೇಕಾದವು. ಅಂತಹ ನಿಜಾಮನ ಆಡಳಿತ ಹೇಗಿದ್ದಿರಬಹುದು ಎಂಬುದು ಊಹಿಸಿ. ನಿಜಾಮನ ಸರಕಾರ, ರಝಾಕರ ಕಿರುಕುಳ, ಆಡಳಿತ ಭಾಷೆ ಪರ್ಷಿಯನ್. ಇಂತಹ ಅಪಾಯಗಳಿದ್ದ ಕಾಲದಲ್ಲೂ ಪಟ್ಟದ್ದೇವರು ಹೊರಗೆ ಉರ್ದು ಬೋರ್ಡ್ ನೇತುಹಾಕಿ ಕನ್ನಡ ಕಲಿಸತೊಡಗಿದರು. 1936ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ಕೊಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡಾಗ, “ಶಾಲೆ ತೊಗೊಂಡು ನಮಗೆ ಏನ್ ಮಾಡೋದಿದೆ. ನಾವೇನು ಪಾಟೀಲರಲ್ಲ, ಗೌಡರಲ್ಲ, ಕುಲಕರ್ಣೇರೂ ಅಲ್ಲ. ಹೊಲ-ಮನಿ, ದನ-ಕರು ನೋಡಿಕೊಂಡಿದ್ದರೆ ಸಾಕು” ಎಂಬ ತಿರಸ್ಕಾರದ ಮಾತುಗಳು ಎದುರಾದವು. ಆಗ  “ಮನುಷ್ಯರಿಗೆ ಶಿಕ್ಷಣ ಭಾಳ್ ಜರೂರಿ ಅದ. ಪ್ರಾಣಿಗಳಿಗೆ ಶಿಕ್ಷಣ ಬೇಕಿಲ್ಲ. ಮನುಷ್ಯರಾದ ನಾವು ನಾಲ್ಕು ಅಕ್ಷರ ಕಲಿಯಬೇಕು. ಬುದ್ಧಿವಂತರಾಗಲು ಶಿಕ್ಷಣ ಬೇಕು. ವಿದ್ಯೆಯಿಂದಲೇ ಬುದ್ಧಿ ಬರುತ್ತದೆ. ಎಷ್ಟು ದಿನ ನಿರಕ್ಷರಿಗಳಾಗಿ ಇರುತ್ತೀರಿ” ಎಂದು ಜನರಿಗೆ ಬುದ್ಧಿಮಾತು ಹೇಳಿದರು.

ಭೂಮಿ ನಿನ್ನದಲ್ಲ

ಹೇಮ ನಿನ್ನದಲ್ಲ

ಕಾಮಿನಿ ನಿನ್ನವಳಲ್ಲ

ನಿನ್ನೊಡವೆ ಎಂಬುದು eನರತ್ನ

ಎಂಬ ಅಲ್ಲಮ ಪ್ರಭುವಿನ ವಚನದ ಸಂದೇಶವನ್ನು ಸಾಕಾರ ಗೊಳಿಸಲು ಮುಂದಾದರು. ಅದರ ಫಲವೇ ‘ಪುಷ್ಠಿ ಫಂಡ್’. ಕುದುರೆಯನ್ನೇರಿದ ಚನ್ನಬಸವ ಪಟ್ಟದ್ದೇವರು ಊರೂರು ಅಲೆದರು, ಮನೆಮನೆ ತಿರುಗಿದರು. ಪ್ರತಿಯೊಬ್ಬರು ಒಂದು ಹಿಡಿ(ಮುಷ್ಠಿ) ಅಕ್ಕಿ, ಜೋಳ, ರಾಗಿ ಏನನ್ನಾದರೂ ಕೊಡಲೇಬೇಕು. ಹಾಗೆ ಸಂಗ್ರಹಿಸಿದ ದವಸ-ಧಾನ್ಯಗಳಲ್ಲಿ ಒಂದಿಷ್ಟನ್ನು ಮಾರಾಟ ಮಾಡಿ ಅದರಿಂದ ಬಡಮಕ್ಕಳಿಗೆ ಅಕ್ಷರ ದಾಸೋಹ, ಉಳಿದ ಧಾನ್ಯದಿಂದ ಅನ್ನದಾಸೋಹ ಕಾರ್ಯ ಆರಂಭಿಸಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದು, ಬೆಳಸಿದ್ದೇ ಹೀಗೆ. ಅಪ್ಪಾರಾವ್ ಶಟ್‌ಕಾರ, ನಾರಾಯಣ ಖೇಡ್ ಅವರಂತಹ ಮಹನೀಯರು ಧಾರಾಳವಾಗಿ ಸಹಾಯವನ್ನೂ ನೀಡಿದರು. ಇವತ್ತು ನರ್ಸರಿಯಿಂದ ಎಂಜಿನಿಯರಿಂಗ್ ಕಾಲೇಜಿನವರೆಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ 32 ಶಾಲಾ-ಕಾಲೇಜುಗಳಿವೆ. 1962ರಲ್ಲಿ ಭಾಲ್ಕಿಯವರೇ ಆದ ಭೀಮಣ್ಣ ಖಂಡ್ರೆ ಟ್ರಸ್ಟ್‌ನ ಅಧ್ಯಕ್ಷರಾದರು. ಅವರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟ  ಪಟ್ಟದ್ದೇವರು ನಿರುಮ್ಮಳವಾದರು. ಶಾಸಕ, ಮಂತ್ರಿ ಹೀಗೆ ರಾಜಕೀಯದಲ್ಲೂ ಮೇಲೇರುತ್ತಾ ಹೋದ ಭೀಮಣ್ಣ ಖಂಡ್ರೆ ಸದ್ದಿಲ್ಲದೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನೇ ಲಪಟಾಯಿಸಿ ತಮ್ಮದಾಗಿಸಿಕೊಂಡರು! ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮೀಜಿ ಹಕ್ಕುಪ್ರತಿಪಾದನೆ ಮಾಡದೆ, ಸೇವೆ ಮಾಡುವವನಿಗೆ ಸ್ವತ್ತಿನ ಹಂಗೇಕೆ ಎಂದು ಸುಮ್ಮನಾದರು. ಆದರೆ ಭಾಲ್ಕಿಯ ಜನ ಸುಮ್ಮನಾಗಲಿಲ್ಲ. ಭೀಮಣ್ಣ ಖಂಡ್ರೆಯವರನ್ನು ಸತತ ಎರಡು ಬಾರಿ ಸೋಲಿಸಿ ಅವರ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಿದರು. ಇತ್ತ ಭಾಲ್ಕಿ ಹಿರೇಮಠ ಸಂಸ್ಥಾನದ ಉತ್ತರಾಧಿಕಾರಿಗಳಾಗಿ ಬಂದ ಹಾಗೂ ಹಾಲಿ ಯತಿಗಳಾದ ಬಸವಲಿಂಗ ಪಟ್ಟದ್ದೇವರು ಹಬ್ಬ-ಜಾತ್ರೆ ಮಾಡಿಕೊಂಡು ಸುಖಾಸುಮ್ಮನೆ ಕುಳಿತುಕೊಳ್ಳದೆ 1992ರಲ್ಲಿ ‘ಹಿರೇಮಠ ಸಂಸ್ಥಾನ ವಿದ್ಯಾಪೀಠ(ಟ್ರಸ್ಟ್)’ ಸ್ಥಾಪನೆ ಮಾಡಿದರು. ಇವತ್ತು ಈ ಸಂಸ್ಥೆಯಡಿ 17 ಪ್ರಾಥಮಿಕ ಶಾಲೆಗಳು, 10 ಪ್ರೌಢಶಾಲೆಗಳು, 12 ಕಾಲೇಜುಗಳಿವೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ೪೦೦ಕ್ಕೂ ಹೆಚ್ಚು ಬಡ, ನಿರ್ಗತಿಕ, ಅನಾಥ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ವ್ಯವಸ್ಥೆಯಿದೆ. ಹುಟ್ಟುತ್ತಲೇ ತೊಟ್ಟಿ ಸೇರಿ ನಾಯಿಪಾಲಾಗುವ ಹಸುಳೆಗಳೂ ಅಲ್ಲಿ ಹೊಸ ನಂಟು, ಹೊಸ ಬದುಕು ಕಂಡುಕೊಳ್ಳುತ್ತಿವೆ. ‘ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಉದ್ಯೋಗ ಸ್ಥಳೀಯವಾಗಿ ಸಿಗುವಂತೆ ಮಾಡುವುದೇ ನಿಜವಾದ ಅಭಿವೃದ್ಧಿ, ಪ್ರಗತಿ’ ಎನ್ನುತ್ತಾನೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಜೋಸೆಫ್ ಸ್ಟಿಗ್ಲಿಟ್ಝ್. ಬೀದರ್‌ನಂತಹ ಕರ್ನಾಟಕದ ಒಂದು ಮೂಲೆಯಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿರುವ ಭಾಲ್ಕಿ ಸಂಸ್ಥಾನ ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿದೆ.

ಕಟ್ಟಬೇಕು ಉರುಳಿಹೋಗದ ಕಟ್ಟಡ

ಕಟ್ಟಿದ್ದಾರೆ ಬಸವಲಿಂಗ ಪಟ್ಟದ್ದೇವರ ಗುರುಕುಲ

ಬನ್ನಿರಿ ಮಕ್ಕಳೇ ಅರಳುವ ಹೂಗಳೇ

ವಿದ್ಯೆಯ ಮಂದಿರ ತೆರೆದಿದೆ ನಿಮಗಾಗಿ

ಗುರುಗಳೇ ತೈಲವಾಗಿ ನೀವೆಲ್ಲ ಬತ್ತಿಯಾಗಿ ವಿದ್ಯೆಯ ಜ್ಯೋತಿ

ಬೆಳಗಲು ಬನ್ನಿರಿ ಗುರುಕುಲಕ್ಕೆ

ಇವತ್ತು ಬಸವಲಿಂಗ ಪಟ್ಟದ್ದೇವರ ಬಗ್ಗೆ ಹೊಸ ಪದ್ಯಗಳು ರಚನೆಯಾಗುತ್ತಿವೆ. ಚನ್ನಬಸವ ಪಟ್ಟದ್ದೇವರು ಅಗಲಿ ೧೦ ವರ್ಷಗಳಾದರೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ಉತ್ತರಾಧಿಕಾರಿಯಾಗಿ ಬಂದಿರುವ ಬಸವಲಿಂಗ ಪಟ್ಟದ್ದೇವರೂ ಸಾಗುತ್ತಿದ್ದಾರೆ. ಈ 3R’s ಅಂದರೆ ರೀಡಿಂಗ್, ರೈಟಿಂಗ್, ಅರಿತ್‌ಮಿಟಿಕ್ಸ್(ಓದು-ಬರಹ-ಲೆಕ್ಕ) ಇಂತಹ ಮೂಲ ಶಿಕ್ಷಣ ನೀಡಬೇಕಾದುದು ನಮ್ಮ ಮಠಮಾನ್ಯಗಳ ಕರ್ತವ್ಯ ಹಾಗೂ ಜವಾಬ್ದಾರಿ. ಅದನ್ನು ಮರೆತಿರುವ, ಜಾತಿ ರಾಜಕೀಯ ಹಾಗೂ ವೋಟಿನ ದಲ್ಲಾಳಿ ಕೆಲಸದಲ್ಲಿ ತೊಡಗಿರುವ ನಮ್ಮ ಕರ್ನಾಟಕದ ಕೆಲ ಮಠಗಳು ಭಾಲ್ಕಿ ಹಿರೇಮಠ ಸಂಸ್ಥಾನವನ್ನು ಕಂಡು ಹೊಸ ವರ್ಷದಲ್ಲಾದರೂ ತಮ್ಮ ಮೂಲ ಜವಾಬ್ದಾರಿಯನ್ನ ರಿತುಕೊಳ್ಳಬೇಕು.

Happy New Year!

ಅದೇನು ಕೆಟ್ಟ ಕೆಲಸವನ್ನು ಸಮರ್ಥಿಸಿಕೊಳ್ಳಲು ಇರುವ ‘ಪರ್ಮಿಟ್ಟಾ’?
1.ಆದಾಯವನ್ನು ಮೀರಿ ಸಂಪತ್ತು ಸಂಗ್ರಹ

2. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಮಂಡಳಿಯ ೫ ನಿವೇಶನಗಳ ಖರೀದಿ

3. 1988ರ ಬೇನಾಮಿ ಹಣ ವರ್ಗಾವಣೆ ತಡೆ ಕಾಯಿದೆಯಡಿ ಯಾವುದನ್ನು ನಿಷೇಧಿಸಲಾಗಿದೆಯೋ ಹಾಗೂ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆಯೋ ಅಂತಹ ಬೇನಾಮಿ ಹಣಕಾಸು ವಹಿವಾಟು

4. 1961ರ ತಮಿಳುನಾಡು ಆಸ್ತಿ ಮಿತಿ ಕಾಯಿದೆ ಉಲ್ಲಂಘಿಸಿ ಕೃಷಿ ಭೂಮಿ ಸ್ವಾಧೀನ

5. ಸರಕಾರಿ ಹಾಗೂ ಸಾರ್ವಜನಿಕ ಆಸ್ತಿಯ ಒತ್ತುವರಿ

6. ಆ ಮೂಲಕ ದಲಿತರ ಹಾಗೂ ಬಡವರ ಮಾನವಹಕ್ಕು ಉಲ್ಲಂಘನೆ

7. ಅಧಿಕೃತ ತನಿಖೆ ಸಂದರ್ಭದಲ್ಲಿ ಸಾಕ್ಷ್ಯಗಳ ನಾಶ

8. ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ

9. ಸ್ಟ್ಯಾಂಪ್ ತೆರಿಗೆಯನ್ನು ತಪ್ಪಿಸುವ ಸಲುವಾಗಿ ಆಸ್ತಿ ಖರೀದಿ ಹಾಗೂ ಮಾರಾಟದ ವೇಳೆ ಉದ್ದೇಶಪೂರ್ವಕವಾಗಿ ತೀವ್ರ ಪ್ರಮಾಣದಲ್ಲಿ ಮೌಲ್ಯ ಕಡಿತ

10. ನಗರ ಯೋಜನೆ ಕಾನೂನು ಹಾಗೂ ಅನುಮತಿಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ

11. ಆಸ್ತಿ ಸ್ವಾಧೀನಕ್ಕಾಗಿ ಸ್ಥಾನಮಾನದ ದುರುಪಯೋಗ

12. ಅಪ್ರಾಮಾಣಿಕ ನ್ಯಾಯತೀರ್ಪು ನೀಡಿಕೆ ಹಾಗೂ ಆ ಮೂಲಕ ಹುದ್ದೆಯ ದುರುಪಯೋಗ

ಇವೇನು ಸಾಮಾನ್ಯ ದೋಷಾರೋಪಗಳೇ? ಇಂತಹ ದೋಷಾ ರೋಪಕ್ಕೊಳಗಾಗಿರುವ ವ್ಯಕ್ತಿಯೇನು ಸಾಮಾನ್ಯರೆ? ಅಥವಾ ಆತನೇನು ಅಧಿಕಾರ ದುರುಪಯೋಗ ಮಾಡಿಕೊಂಡು ಹಣ, ಆಸ್ತಿ ಕೂಡಿ ಹಾಕುವ ಭ್ರಷ್ಟ ರಾಜಕಾರಣಿಯೇ?

ಉಹೂಂ….

ಅವರು ಮತ್ತಾರೂ ಅಲ್ಲ ಕರ್ನಾಟಕ ಹೈಕೋರ್ಟ್‌ನ ಹಾಲಿ ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್! “All are equal before law” ಎನ್ನುತ್ತದೆ ನಮ್ಮ ಸಂವಿಧಾನ. ಯಾರಾದರೂ ತಪ್ಪೆಸಗಿದರೆ, ಅನ್ಯಾಯ ಮಾಡಿದರೆ ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ, ಎಂತಹ ಉನ್ನತ ಜಾತಿಗೆ ಸೇರಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನ ಎನ್ನುವುದೇನೋ ಸರಿ. ಆದರೆ ತಪ್ಪಿತಸ್ಥರನ್ನು ವಿಚಾರಣೆಗೆ ಗುರಿಪಡಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿ ಕಾನೂನಿಗೆ ಅನುಗುಣವಾಗಿ ಶಿಕ್ಷೆ ವಿಧಿಸುವ ಘನವೆತ್ತ ನ್ಯಾಯಾಧೀಶರುಗಳೇ ತಪ್ಪೆಸಗಿದರೆ? ಅಥವಾ ದೋಷಾರೋಪಕ್ಕೊಳಗಾದರೆ ಏನು ಮಾಡಬೇಕು? ಅದಿರಲಿ, ದಿನಕರನ್ ಮೇಲಿನ ಆರೋಪ ಗಳಲ್ಲಿ ಯಾವುದೇ ಹುರುಳಿಲ್ಲವೇನು?

ಈ ದಿನಕರನ್ ಯಾರು, ಅವರು ಹೇಗಿದ್ದರು?

ಅವರ ತಂದೆ ಪಾಲ್ ಪೊನ್ನುಸ್ವಾಮಿ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರಕೋಣಮ್‌ನಲ್ಲಿ ಶಾಲಾ ಶಿಕ್ಷಕರಾಗಿದ್ದರು. ಅವರದ್ದು ಶ್ರೀಮಂತ ಕುಟುಂಬವಾಗಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆಸ್ತಿ-ಪಾಸ್ತಿ, ಆದಾಯ ಮೂಲಗಳಿದ್ದವು ಎಂಬುದಕ್ಕೂ ಆಧಾರವಿಲ್ಲ. ದಿನಕರನ್ ಅವರ ಅತ್ತೆ-ಮಾವನ ಕಥೆಯೂ ಭಿನ್ನವಾಗಿಲ್ಲ. ಅವರ ಮಾವ ಎಸ್ಟೇಟೊಂದರಲ್ಲಿ ಉದ್ಯೋಗಿಯಾಗಿದ್ದರು ಹಾಗೂ ಅತ್ತೆ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ. ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾಗ ದಿನಕರನ್ ಬಾಡಿಗೆ ಫ್ಲಾಟ್‌ನಲ್ಲಿದ್ದರು. ನ್ಯಾಯಾಧೀಶರಾಗಿ ನಿಯುಕ್ತಿಯಾಗುವವರೆಗೂ ಅವರ ಸ್ಟೇಟಸ್ ಹಾಗೆಯೇ ಇತ್ತು. ಅಂತಹ ವ್ಯಕ್ತಿ ನ್ಯಾಯಾಧೀಶರಾದ ನಂತರ ಹೇಗೆ ಏಕಾಏಕಿ 500 ಎಕರೆಗೂ ಹೆಚ್ಚು ಕೃಷಿ ಭೂಮಿ, ವಸತಿ ನಿವೇಶನಗಳು, ಭಾರಿ ಹಣಕಾಸು ವಹಿವಾಟಿನ ಒಡೆಯನಾಗಿ ಬಿಟ್ಟರು? ಒಬ್ಬ ನ್ಯಾಯಾಧೀಶರೇ ಇಂತಹ ಆರೋಪಕ್ಕೊಳಗಾದರೆ ಗತಿಯೇನು? ಅಂತಹ ವ್ಯಕ್ತಿಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿದರೆ ನ್ಯಾಯಾಂಗ ವ್ಯವಸ್ಥೆಯ ಗತಿಯೇನಾದೀತು?

ಎಡಪಕ್ಷಗಳು, ಬಿಜೆಪಿ, ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ, ಅಕಾಲಿ ದಳ ಹಾಗೂ ಎಐಎಡಿಎಂಕೆಗೆ ಸೇರಿದ ೭೫ ಸಂಸದರು ರಾಜ್ಯಸಭೆಯಲ್ಲಿ ದಿನಕರನ್ ವಿರುದ್ಧ ಮಹಾಭಿಯೋಗ (ಇಂಪೀಚ್‌ಮೆಂಟ್) ಮಂಡಿಸಲು ಮುಂದಾಗಿರುವುದು ಹಾಗೂ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿಯವರು ಅದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಇದೇ ಕಾರಣಕ್ಕಾಗಿ. ಇಲ್ಲಿರುವುದು ನ್ಯಾಯ-ಅನ್ಯಾಯ, ಸಾರ್ವಜನಿಕ ಜೀವನದಲ್ಲಿನ ಮೌಲ್ಯ-ವಂಚನೆ ಹಾಗೂ ಅಧಿಕಾರ ದುರುಪಯೋಗದ ವಿಚಾರ. ಹೀಗಿರುವಾಗ ಈ ‘ದಲಿತ’ ಎಂಬ ಪ್ರಶ್ನೆ ಅದೆಲ್ಲಿಂದ ಬಂತು? “ಸುಪ್ರೀಂಕೋರ್ಟ್ ಮೇಲ್ಜಾತಿಯವರ ಬೀಡಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶನಾಗುವುದನ್ನು ತಡೆಯುವುದೇ ಆರೋಪಗಳ ಹಿಂದಿರುವ ನಿಜವಾದ ಉದ್ದೇಶ” ಎಂದು ಡಿ.ಎಂ.ಕೆ.ಯ ಜನರಲ್ ಸೆಕ್ರೆಟರಿ ಕೆ. ವೀರಮಣಿ ಹೇಳಿದ್ದಾರೆ! “ಸರಕಾರಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದ ತಾನ್ಸಿ ಭೂಹಗರಣದಲ್ಲಿ ಭಾಗಿಯಾಗಿದ್ದ ಜಯಲಲಿತಾ ಅವರನ್ನು ಸುಪ್ರೀಂಕೋರ್ಟ್ ದೋಷಮುಕ್ತಗೊಳಿ ಸಿತು. ಅಂದರೆ ದಲಿತನಿಗೊಂದು ಬ್ರಾಹ್ಮಣನಿಗೊಂದು ಮಾನ ದಂಡವೇ?” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ತಗಾದೆ ತೆಗೆದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕುಮಾರಿ ಮಾಯಾವತಿಯವರೂ “ದಲಿತ” ಪ್ರಶ್ನೆ ಎತ್ತಿದ್ದಾರೆ?!

ಅಲ್ಲಾ ಈ “ದಲಿತ” ಎಂಬುದೇನು ಗುರಾಣಿಯೇ? ತಪ್ಪಿತಸ್ಥರನ್ನು ರಕ್ಷಿಸಲು, ತಪ್ಪುಗಳನ್ನು ಮುಚ್ಚಿಕೊಳ್ಳಲು ಇರುವ ಅಸ್ತ್ರವೇ? ಅಥವಾ ಕೆಟ್ಟ ಕೆಲಸ ಮಾಡಲು ಕೊಟ್ಟ ಪರ್ಮಿಟ್ಟೆ? ಏನದು? ಮಹಾಭ್ರಷ್ಟೆ ಎಂಬ ಹೆಸರು ಪಡೆದುಕೊಂಡಿರುವ, ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬಡವರಿಂದ ಚಂದಾ ಎತ್ತುವ, ಅಧಿಕಾರಿಗಳಿಂದ ಭಕ್ಷೀಸ್ ಪಡೆಯುವಾತೆ ತನ್ನಂತೆಯೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮತ್ತೊಬ್ಬ ವ್ಯಕ್ತಿಯ ರಕ್ಷಣೆಗೆ ಧಾವಿಸುತ್ತಾರೆಂದರೆ ಈ ದೇಶಕ್ಕೆ ಎಂತಹ ಭವಿಷ್ಯ ಕಾದಿದೆಯೆಂಬುದನ್ನು ಯೋಚಿಸಿ? “ಕಾನೂನಿನ ಮುಂದೆ ಎಲ್ಲ ಸಮಾನರು” ಅಂದರೆ ಕಾನೂನಿಗೆ ಬಡವ-ಬಲ್ಲಿದ, ಮೇಲ್ಜಾತಿ-ಕೆಳಜಾತಿ ಎಂಬ ತಾರತಮ್ಯವಿಲ್ಲ, ಎಲ್ಲರೂ ಒಂದೇ ಎಂದರ್ಥ. ಅದನ್ನು ಇನ್ನೊಂದು ರೀತಿಯಲ್ಲೂ ಅನ್ವಯಿಸಬಹುದು. ಜಾತಿ-ಧರ್ಮದ ಹೆಸರಿನಲ್ಲಿ ಕಾನೂನಿನ ಜಾರಿಗೆ ಅಡ್ಡಿಪಡಿಸುವುದೂ ತಪ್ಪೇ ಅಲ್ಲವೆ? ಹಾಗಾದ ಮೇಲೆ ಈ ದಲಿತ ಎಂಬ ಪ್ರಶ್ನೆ ಬಂದಿದ್ದು ಎಲ್ಲಿಂದ? ಒಂದು ವೇಳೆ, ಮೇಲ್ಜಾತಿಯವರೆಲ್ಲ ಜಾತಿ ವಾದ ಮಾಡುತ್ತಾರೆಂದಾಗಿದ್ದರೆ, ಎಲ್ಲದರಲ್ಲೂ ಜಾತಿ ನೋಡುತ್ತಾರೆ, ಜಾತಿಯೇ ಎಲ್ಲದಕ್ಕೂ ಅಳತೆಗೋಲು ಎಂದಾಗಿದ್ದರೆ ದಲಿತರೇ ಆಗಿರುವ ಕೆ.ಜಿ. ಬಾಲಕೃಷ್ಣನ್ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಾಧೀಶರಾಗಲು ಸಾಧ್ಯವಾಗುತ್ತಿತ್ತೆ? ದಿವಂಗತ ಕೆ.ಆರ್. ನಾರಾಯಣನ್ ರಾಷ್ಟ್ರಪತಿಯಾಗಲು ಆಗುತ್ತಿತ್ತೆ? ದಲಿತ ಪ್ರಶ್ನೆಯೆತ್ತುವ, ಬ್ರಾಹ್ಮಣರನ್ನು ಟೀಕಿಸುವ ಮಾಯಾವತಿಯವರು ಅಧಿಕಾರಕ್ಕೇರಲು ಸತೀಶ್ ಮಿಶ್ರಾನೆಂಬ ಬ್ರಾಹ್ಮಣನ ಸಹಾಯ ಪಡೆದಿದ್ದೇಕೆ? ಆತನನ್ನು ಛೂ ಬಿಟ್ಟು ಪ್ರತಿ ಜಿಲ್ಲೆಗಳಲ್ಲೂ ಬ್ರಾಹ್ಮಣ ಮಹಾಸಭಾಗಳನ್ನು ಆಯೋಜನೆ ಮಾಡಿ, ಮೇಲ್ಜಾತಿಯವರನ್ನು ಬಿಎಸ್‌ಪಿ ತೆಕ್ಕೆಗೆ ಸೆಳೆದುಕೊಂಡಿದ್ದು, ಬಹುಜನ ಸಮಾಜ ಪಕ್ಷ ಸರ್ವ ಸಮಾಜಕ್ಕೆ ಸೇರಿದೆ ಎಂದು ಹೇಳಿದ್ದೇಕೆ? ಅಧಿಕಾರಕ್ಕೇರಲು ಮೇಲ್ಜಾತಿಯವರ ವೋಟು ಬೇಕು, ಕೆಟ್ಟ ಕೆಲಸ ಮಾಡಿದಾಗ ಹುಳುಕು ಮುಚ್ಚಿಕೊಳ್ಳಲು, ವಿಷಯಾಂತರ ಮಾಡಲು,  ಚರ್ಚೆಯನ್ನು ದಿಕ್ಕು ತಪ್ಪಿಸಲೂ ಅವರು ಬೇಕು! ಒಂದು ವೇಳೆ ಮಾಯಾವತಿಯವರಿಗೆ ದಲಿತರ ಶ್ರೇಯೋಭಿವೃದ್ಧಿ ಬಗ್ಗೆ ಅಷ್ಟೊಂದು ಕಾಳಜಿಯಿದೆ ಎಂದಾದರೆ ಆಕೆ ಮುಖ್ಯಮಂತ್ರಿಯಾಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ ಉತ್ತರ ಪ್ರದೇಶದಲ್ಲಿ ದಲಿತರ ಸ್ಥಿತಿ-ಗತಿಯಲ್ಲಿ ಏಕೆ ಯಾವ ಬದಲಾವಣೆಯೂ ಆಗಿಲ್ಲ? ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯರಿಗೆ ಪರಿಹಾರದ ಚೆಕ್ ನೀಡುವ ಕೆಲಸವನ್ನು ಇನ್ನೂ ಮುಂದುವರಿಸಿಕೊಂಡು ಬಂದಿರುವ ಪರಿಸ್ಥಿತಿ ಏಕೆ ಉಳಿದುಕೊಂಡಿದೆ? ಹಾದಿ ಬೀದಿಗೊಂದು ಪ್ರತಿಮೆ ನಿಲ್ಲಿಸಲು ಹಣ ವ್ಯಯ ಮಾಡುವ ಬದಲು ದಲಿತ ಕೇರಿಗಳ ಅಭಿವೃದ್ಧಿಗೇಕೆ ವಿನಿಯೋಗಿಸಲಿಲ್ಲ? ದಲಿತ ನಾಯಕರಿಗೂ ದಲಿತರ ಉದ್ಧಾರ ಬೇಕಿಲ್ಲ. ಅವರು ಹಿಂದುಳಿದವರು, ದಲಿತರಾಗಿಯೇ ಉಳಿಯಬೇಕು. ಏಕೆಂದರೆ  Dalit card  ಅನ್ನು ಸದಾ ಬಳಸಿಕೊಳ್ಳಬಹುದು. ತೀರಾ ಹಾಸ್ಯಾಸ್ಪದ ವಿಚಾರ ವೆಂದರೆ ಈ ಮಾಯಾವತಿಯವರೇಕೆ ಭ್ರಷ್ಟರ ಬಗ್ಗೆಯೇ ಕಾಳಜಿ ಹೊಂದಿದ್ದಾರೆ? ದಿನಕರನ್ ಒಬ್ಬ ವಕೀಲರಾಗಿದ್ದವರು, ಈಗ ನ್ಯಾಯಾಧೀಶರಾಗಿರುವವರು. ಅವರಿಗೆ ತಮ್ಮನ್ನು ಸಮರ್ಥಿಸಿ ಕೊಳ್ಳುವ ವಿಧಾನ ಗೊತ್ತಿದೆ. ಮಾಯಾವತಿಯವರೇಕೆ ಅವರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ?

ಅಲ್ಲಾ ಮಹಿಳೆ, ಮೈನಾರಿಟಿ, ದಲಿತ ಎಂಬ ಟೈಟಲ್‌ಗಳನ್ನು ಕೆಟ್ಟವರ ರಕ್ಷಣೆ, ಸಮರ್ಥನೆಗಷ್ಟೇ ಬಳಸಿಕೊಳ್ಳುತ್ತಿರುವುದೇಕೆ? ಈ ಹಿಂದೆ ಅಜರುದ್ದೀನ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ನಾನು ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಮೈನಾರಿಟಿ ಕಾರ್ಡ್ ಪ್ರಯೋಗಿಸಿದ್ದರು! ಗುಲ್ಷನ್ ಕುಮಾರ್ ಹತ್ಯೆ ಆರೋಪಕ್ಕೊಳಗಾಗಿ ಬ್ರಿಟನ್‌ನಲ್ಲಿ ಅಡಗಿ ಕುಳಿತ ಸಂಗೀತ ನಿರ್ದೇಶಕ ನದೀಂ ಕೈಫಿ ಕೊಟ್ಟಿದ್ದೂ ಇಂತಹ ಸಮಜಾಯಿಷಿಯನ್ನೇ. ಇನ್ನು ತಾನು ದಲಿತ ಎಂಬ ಅಂಶವನ್ನೇ ಬಂಡವಾಳಗಿಸಿಕೊಂಡು ಬೇಳೆ ಬೇಯಿಸಿ ಕೊಳ್ಳುವವರು, ಅನ್ಯ ಜಾತಿಯವರನ್ನು ‘ಅಟ್ರಾಸಿಟಿ ಕೇಸ್’ ಹಾಕುತ್ತೇನೆಂದು ಬೆದರಿಸುವವರು ಇದ್ದಾರೆ. ಈ ರೀತಿ ‘ದಲಿತ’ ಎಂಬುದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿ ಶಿಕ್ಷಿತರು, ಸೋಮಾರಿ ಸರಕಾರಿ ಉದ್ಯೋಗಿಗಳು, ಕಾಲೇಜು ಉಪನ್ಯಾಸಕರೇ ಆಗಿದ್ದಾರೆ. ದಲಿತ ಅನ್ನೋದು ದಗಲ್ಬಾಜಿತನಕ್ಕೆ ಲೈಸೆನ್ಸಾ? ಇವತ್ತು ಸಾಮಾಜಿಕ ನ್ಯಾಯ, ಸಮಾನತೆಯ ಪ್ರಶ್ನೆಗಳೆದ್ದಿರುವ ಕಾರಣ, ಹಿಂದುಳಿದ ಜಾತಿ/ವರ್ಗ ಶ್ರೇಯೋಭಿವೃದ್ಧಿ ಮಾಡಲೇಬೇಕು ಎಂದು ಎಲ್ಲ ಪಕ್ಷಗಳೂ ಪ್ರತಿಪಾದಿಸುವ ಕಾರಣ ‘ದಲಿತ’ ಎಂಬುದೇ ಒಂದು ಅರ್ಹತೆಯಾಗಿದೆ. ಅದರ ಬಗ್ಗೆ ಯಾವ ಬೇಸರವೂ ಇಲ್ಲ ಬಿಡಿ. ಶತಶತಮಾನಗಳ ದೌರ್ಜನ್ಯಕ್ಕೆ ಪ್ರತಿಯಾಗಿ ಅಂಥದ್ದೊಂದು ಅವಕಾಶವನ್ನು ಕಲ್ಪಿಸಬೇಕಿತ್ತು. ಆದರೆ ದಲಿತ ಎಂಬುದನ್ನು ಕೆಟ್ಟ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುವುದನ್ನು ಒಪ್ಪಲಾದೀತೆ? ದಲಿತನೆಂದರೆ ಕಾನೂನಿಗಿಂತ ಮೇಲು ಎಂದರ್ಥವೆ? ಮೊನ್ನೆ ಭಾಲ್ಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದೇ ವಿಚಾರವನ್ನೆತ್ತಿದ ಗದಗಿನ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ‘ದಲಿತ್ ಕಾರ್ಡ್’ ಪ್ರಯೋಗಿಸುತ್ತಿರುವ ಮಾಯಾವತಿಯವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾ, ‘ಸಮಾಜದ ಎಲ್ಲ ವ್ಯವಸ್ಥೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ದಿನಕರನ್ ಪ್ರಕರಣ ತೋರಿಸಿದೆ. ನ್ಯಾಯಾಂಗದ ವಿಷಯದಲ್ಲೂ ಜಾತಿ ಹೆಸರಿನಲ್ಲಿ ಈ ರೀತಿಯ ಹೇಳಿಕೆ ಬರುತ್ತಿರುವುದು ಸಲ್ಲದು. ನ್ಯಾಯಕ್ಕೆ ಬಲ ಬರಬೇಕು, ಬಲಕ್ಕೆ ನ್ಯಾಯ ಬರುವುದಲ್ಲ’  ಎಂದರು. ಎಂತಹ ಅರ್ಥಪೂರ್ಣ ಮಾತದು. ಒಂದು ವೇಳೆ ಅವರೇ ಹೇಳಿಕೊಳ್ಳುತ್ತಿರುವಂತೆ ದಿನಕರನ್ ಮೊದಲೇ ಸಿರಿವಂತರಾಗಿದ್ದರೆ, ಭ್ರಷ್ಟ ಮಾರ್ಗವನ್ನು ಹಿಡಿಯುವ ಅಗತ್ಯವಿಲ್ಲ ಎನ್ನುವುದಾದರೆ ತಮ್ಮ ಆದಾಯದ ‘ಮೂಲ’ ಯಾವುದು ಎಂಬುದನ್ನು ಬಹಿರಂಗಪಡಿಸಿ ತಾವು ಶುದ್ಧಹಸ್ತರೆಂಬುದನ್ನು ಸಾಬೀತುಪಡಿಸಲಿ. ಆದರೆ ದಲಿತ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬ ಬೇಜವಾಬ್ದಾರಿ ಮಾತು ಬೇಡ.

ಅಷ್ಟಕ್ಕೂ ದಲಿತ ಎಂದರೆ ಯಾರು?

ದಲಿತ ಎಂಬುದು ಸಂಸ್ಕೃತದಿಂದ ಬಂದಿದ್ದು ಹಾಗೂ ಆ ಪದವನ್ನು ಮೊದಲು ಬಳಸಿದ್ದು ಡಾ. ಬಿ.ಆರ್. ಅಂಬೇಡ್ಕರ್. ದಲಿತರು ಎಂದರೆ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯಿಂದಾಗಿ ದೌರ್ಜನ್ಯ ಹಾಗೂ ತುಳಿತಕ್ಕೊಳಗಾದವರು. ಈ ದಲಿತರಿಗೂ ಪಿ.ಡಿ. ದಿನಕರನ್ ಅಂದರೆ ಪಾಲ್ ದಿವಾಕರ್ ದಿನಕರನ್ ಎಂಬ ಕ್ರೈಸ್ತ ವ್ಯಕ್ತಿಗೂ ಏನು ಸಂಬಂಧ?! ಸಾಮಾಜಿಕ ಸಮಾನತೆ, ಆತ್ಮಗೌರವವನ್ನರಸಿಕೊಂಡು ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ ಮೇಲೂ ದಲಿತ ಎಂಬ ಪ್ರಶ್ನೆ ಎಲ್ಲಿಂದ ಬರುತ್ತದೆ? ಕ್ರೈಸ್ತರಲ್ಲಿ ಜಾತಿ ಪದ್ಧತಿಯೇ  ಇಲ್ಲ ಎಂದ ಮೇಲೆ ದಲಿತ ಎಂಬುದಾಗಲಿ, ದಲಿತ ಕ್ರೈಸ್ತ ಎಂಬ ವಾದವಾಗಲಿ ಹೇಗೆ ಬರಲು ಸಾಧ್ಯ? Politics is the last refuge of a scoundrelಎಂದು ಆಸ್ಕರ್ ವೈಲ್ಡ್ ಹೇಳಿದ್ದರು. Religion and Caste are the last refuge of scoundrels ಎಂಬ ಹೊಸ ನುಡಿಗಟ್ಟನ್ನು ರೂಪಿಸಬೇಕಾದ ಕಾಲ ಸದ್ಯದಲ್ಲೇ ಬರಬಹುದು.

Stop fooling!

ರಾಯರನು ನೆನೆ ನೆನೆದು…
ಅವರು 1990ರ ಹೊತ್ತಿಗಾಗಲೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದರು. ರಾಜಧಾನಿ ದಿಲ್ಲಿಯಲ್ಲಿದ್ದ ತಮ್ಮ ಬಂಗಲೆಯನ್ನು ಬಿಟ್ಟು ಹೈದರಾಬಾದ್‌ಗೆ ತೆರಳಲು ಅಣಿಯಾಗಿದ್ದರು. ಹಾಗೆಂದುಕೊಂಡು ಗಂಟುಮೂಟೆ ಕಟ್ಟಿ ರೆಡಿಯಾಗಿ 18 ತಿಂಗಳುಗಳೇ ಆಗಿದ್ದವು. ಇನ್ನೇನೂ ಸಾಮಾನು ಸರಂಜಾಮು ಹಾಗೂ ಪುಸ್ತಕ ಭಂಡಾರದೊಂದಿಗೆ ಕಾಲ್ಕೀಳಬೇಕು ಅಷ್ಟರಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು. 1984ರಲ್ಲಿ ಇಂದಿರಾ ಹತ್ಯೆಯಾಗಿದ್ದರು, 1991ರಲ್ಲಿ ರಾಜೀವ್ ಬಲಿಯಾದರು. ಅದರೊಂದಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಳಿತಪ್ಪಿದಂತಾಯಿತು. ಪಕ್ಷವನ್ನು ಮತ್ತೆ ಹಳಿಗೆ ತರಲು ಒಬ್ಬ ಅನುಭವಿ ನಾಯಕನ ತುರ್ತು ಅಗತ್ಯ ಎದುರಾಯಿತು. ಇಂತಹ ಅನಿವಾರ್ಯತೆಯೇ ಪಾಮುಲಪರ್ತಿ ವೆಂಕಟ ನರಸಿಂಹರಾವ್‌ಗೆ ವರದಾನವಾಯಿತು. ಇಷ್ಟಕ್ಕೂ ಏಳು ಭಾರತೀಯ ಭಾಷೆಗಳು. ಜತೆಗೆ ಇಂಗ್ಲಿಷ್, ಫ್ರೆಂಚ್, ಆರೇಬಿಕ್, ಸ್ಪ್ಯಾನಿಶ್ ಹಾಗೂ ಪರ್ಷಿಯನ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದ ಅವರನ್ನು ಒಬ್ಬ ವಿದ್ವಾಂಸರೆನ್ನಲು ಯಾವ ಅಡ್ಡಿಯೂ ಇಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ, ಕೇಂದ್ರ ಗೃಹ, ರಕ್ಷಣೆ ಹಾಗೂ ವಿದೇಶಾಂಗ ಸಚಿವರೂ ಆಗಿ ಅಗಾಧ ರಾಜಕೀಯ ಅನುಭವವೂ ಅವರಿಗಿತ್ತು.

ಇನ್ನು ಒಂದು ವಾರದಲ್ಲಿ ಎಪ್ಪತ್ತನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು, (ಅವರು ಜನಿಸಿದ್ದು ಜೂನ್ 28, 1921) ಅಷ್ಟರಲ್ಲಿ ದೊಡ್ಡ ಉಡುಗೊರೆಯೇ ಅರಸಿಕೊಂಡು ಬಂತು. 1991, ಜೂನ್ 21ರಂದು ದೇಶದ ಒಂಬತ್ತನೇ ಪ್ರಧಾನಿಯಾಗಿ ನರಸಿಂಹರಾವ್ ಅಧಿಕಾರ ವಹಿಸಿಕೊಂಡರು. ಹಾಗಂತ ಆ ಗಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ಭಾರತ ಅತ್ಯಂತ ಕ್ಲಿಷ್ಟಕರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಒಂದೆಡೆ ಹಣದುಬ್ಬರ ಪ್ರಮಾಣ ಶೇ. 17ಕ್ಕೇರಿತ್ತು. ವಿದೇಶಿ ಸಾಲ 50 ಶತಕೋಟಿ ಪೌಂಡ್‌ಗಳಿಗೇರಿತ್ತು. ಇನ್ನೊಂದೆಡೆ ಭಾರತದ ಬಳಿ ಇದ್ದಿದ್ದು ಕೇವಲ ಒಂದು ಶತಕೋಟಿ ವಿದೇಶಿ ವಿನಿಮಯ ಮೀಸಲು ನಿಧಿ! ಅಂದರೆ ಮುಂದಿನ ಮೂರು ವಾರಗಳಿಗಾಗುವಷ್ಟು ಆಮದು ಬೆಲೆಯನ್ನು ತೆರುವಷ್ಟೂ ದುಡ್ಡು ಭಾರತದ ಬಳಿಯಿರಲಿಲ್ಲ!! ಇನ್ನೆರಡು ವಾರಗಳಲ್ಲಿ ದಿವಾಳಿಯಾಗಿದ್ದೇವೆ ಎಂದು ಘೋಷಿಸಿಕೊಳ್ಳಬೇಕಾದ ಹೀನಾಯ ಸ್ಥಿತಿ ನಮ್ಮದಾಗಿತ್ತು.

ರಾವ್ ಖರ್ಚು ಕಡಿತದ ಮಾತನಾಡಿದರು, ಬಡ್ಡಿ ದರವನ್ನು ಹೆಚ್ಚಿಸಿದರು, ರೂಪಾಯಿಯ ಮೌಲ್ಯ ಕಡಿತ ಮಾಡಿದರು, ಕೃಷಿ ಸಬ್ಸಿಡಿಗೂ ಕತ್ತರಿ ಹಾಕಿದರು, ನಿಯಂತ್ರಣ ಹಾಗೂ ನಿಗಾ ಕಾರ್ಯವನ್ನು ಹೆಚ್ಚಿಸಿದರು, ರಕ್ಷಣಾ ವೆಚ್ಚವನ್ನೂ ಕಡಿಮೆ ಮಾಡಿದರು, ಬ್ಯಾಂಕ್‌ಗಳೂ ಸೇರಿದಂತೆ ಸರಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಅರ್ಧದಷ್ಟನ್ನು ಖಾಸಗೀಕರಣ ಮಾಡಿದರು. ಇವೆಲ್ಲವೂ ಉದಾರೀಕರಣವೆಂಬ ದೀರ್ಘಕಾಲಿಕ ಪ್ರಕ್ರಿಯೆಯ ಭಾಗಗಳು ಎಂದು ಘೋಷಿಸಿದರು. ಅಧಿಕೃತವಾಗಿ ಲೈಸೆನ್ಸ್-ಪರ್ಮಿಟ್ ರಾಜ್‌ಗೆ ತೆರೆಯೆಳೆದರು. ನೀವೊಂದು ಉದ್ದಿಮೆ ಪ್ರಾರಂಭಿಸಬೇಕಾದರೆ ಸರಕಾರದ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ ಎಂದರು, ಇಂತಿಷ್ಟೇ ಉತ್ಪಾದನೆ ಮಾಡಬೇಕೆಂಬ ನಿರ್ಬಂಧವೂ ಇಲ್ಲ ಎಂದರು. ಎಲ್ಲವನ್ನೂ ಉದ್ಯಮಿಗಳು, ಮಾರುಕಟ್ಟೆ ಶಕ್ತಿಗಳ ವಿವೇಚನೆಗೆ ಬಿಟ್ಟರು. ಆ ಮೂಲಕ ಉತ್ಪಾದನೆ ಹೆಚ್ಚಳಕ್ಕೆ, ತೀವ್ರ ಸ್ಪರ್ಧೆಗೆ ಅನುವು ಮಾಡಿಕೊಟ್ಟರು. ಒಬ್ಬ ಕಾಂಗ್ರೆಸ್ ಪ್ರಧಾನಿಯಾಗಿ, ನೆಹರೂ ಪ್ರಣೀತ ಅರೆ ಸಮಾಜವಾದವನ್ನು (Quasi Socialism) ತಿಪ್ಪೆಗೆ ಎಸೆಯುವುದು, ಇಂದಿರಾ ಗಾಂಧಿಯವರು ಹುಟ್ಟುಹಾಕಿದ್ದ ‘ಬಾಬು ಸಂಸ್ಕೃತಿ’ಗೆ ತಿಲಾಂಜಲಿ ನೀಡುವುದು ಸಾಮಾನ್ಯ ಮಾತೇನು?

ಅವತ್ತು ನರಸಿಂಹರಾವ್ ಮಾಡಿದ ಗ್ಯಾಂಬಲ್ ಫಲ ಕೊಟ್ಟಿತು.

ಇಂದು ಚೀನಾದ ಜತೆ ಭಾರತ ಕೂಡ ೨೧ನೇ ಶತಮಾನದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದರೆ ಅದಕ್ಕೆ ಮೂಲತಃ ನರಸಿಂಹರಾವ್ ಕಾರಣ. ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ‘ಭಾರತದ ಉದಾರೀಕರಣ ನೀತಿಗಳ ಪಿತಾಮಹ’ ಎಂದು ಕರೆಯಬಹುದು. ಆದರೆ ರಾಜಕೀಯ eನವೇ ಇಲ್ಲದಿದ್ದ ಮನಮೋಹನ್ ಸಿಂಗ್ ಅವರನ್ನು 1991ರಲ್ಲಿ ವಿತ್ತ ಸಚಿವರನ್ನಾಗಿ ಮಾಡಿ, ಬೆಂಗಾವಲಿಗೆ ನಿಂತು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ರಾವ್‌ಗೆ ಕೀರ್ತಿ ಸಲ್ಲಬೇಕು. ಇವತ್ತು ನಾವು ನೀವೆಲ್ಲ ಬಳಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮುಂತಾದ ‘ಪ್ಲಾಸ್ಟಿಕ್ ಮನಿ’, ಸೆಲ್‌ಫೋನ್‌ಗಳು ಭಾರತಕ್ಕೆ ಬಂದಿದ್ದು ಯಾರಿಂದ?

ಆರ್ಥಿಕ ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಜಾರಿಗೆ ತರುವುದರ ಜತೆಯಲ್ಲೇ ಕ್ರಮೇಣವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆಗೂ ರಾವ್ ಕದ ತೆರೆದರು. ೪೯-೫೧ ಅನುಪಾತದಲ್ಲಿ ಹೂಡಿಕೆ ಮಾಡಲು ಒಂದೊಂದೇ ಅವಕಾಶಗಳನ್ನು ನೀಡತೊಡಗಿದರು. ಇದರಿಂದ ಆಟೋಮೊಬೈಲ್, ಟೆಲಿಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್‍ಸ್ ಹಾಗೂ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಅಪಾರ ಅನುಕೂಲವಾಯಿತು. ವಿದೇಶಿ ತಂತ್ರeನ ಆಯಾಚಿತವಾಗಿ ನಮಗೆ ದೊರೆಯಿತು. ಜಾಗತೀಕರಣದಿಂದ ಬಂದಿದ್ದು ಬರೀ Zero Technology ಎಂಬ ಪೊಳ್ಳುವಾದ ಬೇಡ. Broad band Technology ಬಂದಿದ್ದೇ ಜಾಗತೀಕರಣದ ನಂತರ. ಕ್ಷಣಮಾತ್ರದಲ್ಲಿ ಹಣ ವರ್ಗಾವಣೆ ಮಾಡುವಂತಹ ಬ್ಯಾಂಕಿಂಗ್ ವ್ಯವಸ್ಥೆ, ಇನ್ಷೂರೆನ್ಸ್, ಇಂಟರ್‌ನೆಟ್, ಕಾರು, ಖಾಸಗಿ ಏರ್‌ಲೈನ್ಸ್‌ಗಳ ಹಿಂದೆಯೂ ರಾವ್ ದೂರದೃಷ್ಟಿಯಿದೆ. ಇಲ್ಲದಿದ್ದರೆ ಅಂಬಾಸೆಡರ್, ಮಾರುತಿ, ಯೆಝಡಿ, ಎನ್ಫೀಲ್ಡ್‌ಗಳೇ ಇಂದಿಗೂ ನಮ್ಮ ರಸ್ತೆಗಳನ್ನು ಅಲಂಕರಿಸಿರುತ್ತಿದ್ದವು! 30ರಿಂದ 40 ಸಾವಿರ ರೂ. ನೀಡಬೇಕಿದ್ದ ಕಲರ್ ಟಿವಿಗಳು ಇಂದು 7 ಸಾವಿರ ರೂ.ಗೆ ಲಭ್ಯವಾಗಿದ್ದರೆ, ಒಂದೂವರೆ ಲಕ್ಷವಿದ್ದ ಕಂಪ್ಯೂಟರ್ ಬೆಲೆ 12-14 ಸಾವಿರಕ್ಕಿಳಿದಿದ್ದರೆ ಅದಕ್ಕೆ, ಅಂದು ರಾವ್ ಜಾರಿಗೆ ತಂದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ನೀತಿಗಳೇ ಕಾರಣ.

ರಾವ್ ಅವರನ್ನು ಬರೀ ಒಬ್ಬ ಸುಧಾರಣಾವಾದಿ ಎಂದು ಭಾವಿಸಬೇಡಿ.

ಬಹುಶಃ ಅವರಷ್ಟು ಚೆನ್ನಾಗಿ ಎದುರಾಳಿಗಳನ್ನು ಹಣಿಯಲು ಯಾರಿಗೂ ಸಾಧ್ಯವಿಲ್ಲ. ಅದೆಂಥದೋ ‘ಜೈನ್ ಹವಾಲಾ’ ಎಂಬ ಹಗರಣ ಸೃಷ್ಟಿಸಿ ‘ಜೈನ್ ಡೈರಿ’ ಎಂಬ ಕಾಲ್ಪನಿಕ ಡೈರಿ ಮೂಲಕ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಆಡ್ವಾಣಿಯವರ ಮೇಲೆಯೇ ಗೂಬೆ ಕೂರಿಸಿ ದೋಷಮುಕ್ತರಾಗುವವರೆಗೂ ಹುದ್ದೆ ತ್ಯಜಿಸುವಂತೆ ಮಾಡಿದ್ದರು! ಅರ್ಜುನ್ ಸಿಂಗ್, ಎನ್.ಡಿ. ತಿವಾರಿ, ಮಾಧವರಾವ್ ಸಿಂಧಿಯಾ, ಶರದ್ ಪವಾರ್ ಅವರಂತಹ ನಾಯಕರನ್ನೂ ಅರಗಿಸಿಕೊಂಡರು. ಬಾಬರಿ ಮಸೀದಿ ಧ್ವಂಸ, ಲಾತೂರ್ ಭೂಕಂಪ, ಮುಂಬೈ ಸ್ಫೋಟ, ಭಯೋತ್ಪಾದನೆ, ಕಾಶ್ಮೀರ ಸಮಸ್ಯೆಗಳ ಹೊರತಾಗಿಯೂ 5 ವರ್ಷ ಅಧಿಕಾರ ನಡೆಸಿದರು. ಲಖೂಭಾಯ್ ಪಾಠಕ್, ಸೇಂಟ್ ಕೀಟ್ಸ್, ಜೆಎಂಎಂ ಲಂಚ ಪ್ರಕರಣ, ಫೋರ್ಜರಿ, ಯೂರಿಯಾ ಹಗರಣ, ಸಕ್ಕರೆ ಹಗರಣ, ಷೇರುಪೇಟೆ ಹಗರಣಗಳನ್ನಿಟ್ಟುಕೊಂಡು ರಾವ್ ಅವರನ್ನು ನಾವು ಜರಿಯಲೂಬಹುದು. ಆದರೆ ಇನ್ನು ಒಂದು ವಾರದಲ್ಲಿ ನಾವೆಲ್ಲ ಗೌಜು, ಗಮ್ಮತ್ತಿನೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. ನಮಗೆಲ್ಲ ಉದ್ಯೋಗ, ಕಿಸೆಗೆ ಹಣ ತಂದುಕೊಟ್ಟಿರುವುದು ನಮ್ಮ ಸದೃಢ ಅರ್ಥವ್ಯವಸ್ಥೆ. ಆ ಅರ್ಥವ್ಯವಸ್ಥೆಯ ಹಿಂದೆ ಪಿ.ವಿ. ನರಸಿಂಹರಾವ್ ಎಂಬ ಮುತ್ಸದ್ದಿಯ ದೂರದೃಷ್ಟಿಯಿದೆ. ನಾಡಿದ್ದು ಡಿಸೆಂಬರ್ 23ಕ್ಕೆ ರಾವ್ ನಮ್ಮನ್ನಗಲಿ 5 ವರ್ಷಗಳು ತುಂಬಲಿವೆ. ನಾವು ಅವರನ್ನೆಂದೂ ಪ್ರೀತಿಸಲೂ ಇಲ್ಲ, ಆರಾಧಿಸಲೂ ಇಲ್ಲ. ಕನಿಷ್ಠ ನೆನಪನ್ನಾದರೂ ಮಾಡಿಕೊಳ್ಳೋಣವೆನಿಸಿತು.

ನರಸಿಂಹರಾವ್ ಅವರು ಆರೆಸ್ಸೆಸ್‌ನಂಥ ಬಲಪಂಥೀಯ ಗುಂಪಿನ ಕುರಿತು ಸಹಾನುಭೂತಿ ಹೊಂದಿದ್ದರು ಎಂಬುದು ಅವರ ಮೇಲಿನ ಆಕ್ಷೇಪ. ಬಾಬರಿ ಧ್ವಂಸದ ವೇಳೆಯಲ್ಲೂ ಅವರು ತಾಟಸ್ಥ್ಯ ಕಾಯ್ದುಕೊಂಡು ಶೀಘ್ರ ನಿರ್ಣಯದಿಂದ ದೂರ ಉಳಿಯುವ ಮೂಲಕ ಪರೋಕ್ಷವಾಗಿ ಘಟನೆಗೆ ಬೆಂಬಲ ಸೂಚಿಸಿದರು ಎಂಬ ವಾದವಿದೆ. ಅವರ ಅಧಿಕಾರಾವಧಿಯಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರೊಂದಿಗೆ ಅವರದ್ದು ಆಪ್ತಸಖ್ಯ. ‘ಆ ಮನುಷ್ಯನ ಧೋತಿ ಎಳೆದು ನೋಡಿ. ಅದರಡಿಯಲ್ಲಿ ಖಾಕಿ ಚೆಡ್ಡಿಯಿದೆ’ ಎಂಬುದು ಅವರ ಮೇಲಿದ್ದ ಟೀಕೆ.

ವಿಶ್ವಸಂಸ್ಥೆಯಲ್ಲಿ ನಿಶ್ಶಸ್ತ್ರೀಕರಣ ಕುರಿತು ನಡೆದ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ರಾವ್ ಆಯ್ಕೆ ಮಾಡಿಕೊಂಡಿದ್ದು ಪ್ರತಿಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು. ಅಣ್ವಸ್ತ್ರ ಹೊಂದುವುದರ ಪರವಿದ್ದದ್ದು ಇವರಿಬ್ಬರನ್ನೂ ಹತ್ತಿರ ತಂದಿತ್ತು. ಸಮಾರಂಭವೊಂದರಲ್ಲಿ ‘ವಾಜಪೇಯಿ ಅವರು ರಾಜಕೀಯದ ಗುರು’ ಎಂದು ನರಸಿಂಹ್‌ರಾವ್ ಪ್ರಶಂಸಿಸಿದಾಗ, ‘ರಾವ್ ಅವರು ಗುರುಗಳಿಗೇ ಗುರು’ ಎಂದು ವಾಜಪೇಯಿ ಪ್ರತಿಕ್ರಿಯಿಸಿದ್ದರು. ನರಸಿಂಹರಾವ್ ಅವರ ನಿಧನದ ನಂತರ ವಾಜಪೇಯಿ ಅವರು ಒಂದು ವಿಷಯ ಬಹಿರಂಗಗೊಳಿಸಿದರು- ೧೯೯೬ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ನರಸಿಂಹರಾವ್ ಒಂದು ಚಿಕ್ಕ ಚೀಟಿ ನೀಡಿದರು. ಅದರಲ್ಲಿ ಹೀಗೆ ಬರೆಯಲಾಗಿತ್ತು- ‘ಬಾಂಬ್ ರೆಡಿಯಾಗಿದೆ, ಹೋಗಿ ಟೆಸ್ಟ್ ಮಾಡಿ’ (ಅಣ್ವಸ್ತ್ರ ಪರೀಕ್ಷೆ ಬಗ್ಗೆ ಉಲ್ಲೇಖವಾಗಿತ್ತು).

ನೆಹರು-ಗಾಂಧಿ ಪರಿವಾರಕ್ಕೆ ಸೇರಿಲ್ಲದಿದ್ದರೂ ಪ್ರಧಾನಿಯಾಗಿ ೫ ವರ್ಷ ಪೂರೈಸಿದ ಏಕೈಕ ಕಾಂಗ್ರೆಸ್ಸಿಗ ನರಸಿಂಹರಾವ್. ದುರಂತವೆಂದರೆ, ಶ್ರದ್ಧಾಂಜಲಿಗಾಗಿ ಈ ಕಾಂಗ್ರೆಸ್ಸಿಗನ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕಚೇರಿಯೊಳಗೆ ಇಡಲು ಅವಕಾಶ ನಿರಾಕರಿಸಲಾಯಿತು. ರಾವ್ ಅವರನ್ನು ಸ್ಥಾನ ಪಲ್ಲಟಗೊಳಿಸಲು ಮೊದಲಿನಿಂದಲೂ ಪಕ್ಷದಲ್ಲಿ ಪ್ರಯತ್ನ ಸಾಗಿಬಂದಿತ್ತು. ೧೯೯೮ರಲ್ಲಿ ಸೀತಾರಾಂ ಕೇಸರಿ, ರಾವ್‌ಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲು ನಿರಾಕರಿದರು.

ಆತ ಕೋಟೇಶ್ವರ!

ಪಿವಿಎನ್ ಮಾಡಿದ ಕೆಲ ‘ಕೋಟ್’ಗಳು ಇವತ್ತಿಗೂ ಚಲಾವಣೆ ಯಲ್ಲಿವೆ. ಕಾನೂನು-ವಿಚಾರಣೆಯ ವಿಷಯ ಬಂದಾಗಲೆಲ್ಲ  ‘ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್ ಆಫ್ ಆಕ್ಷನ್’ ಎಂದು ಎಲ್ಲರೂ ಹೇಳುತ್ತಾರಲ್ಲ? ಆ ಆಣಿಮುತ್ತನ್ನು ಉದು ರಿಸಿದ್ದು ನರಸಿಂಹರಾವ್. ಬಹುಶಃ, ಅವರು ಮಾಡಿದ ಕೋಟ್‌ಗಳಲ್ಲೇ ಅವರ ಹುಟ್ಟಾಗುಣವೆಂಬಂತಿದ್ದ ನಿರಾಳತೆಯೂ ಬಿಂಬಿತವಾಗಿದೆ. ಕಾನೂನು ತನ್ನ ದಾರಿ ನೋಡಿಕೊಳ್ಳುತ್ತದೆ ಬಿಡಿ ಎಂಬರ್ಥದ ಹೇಳಿಕೆಯ ನಿಟ್ಟಿನಲ್ಲೇ ಅವರ ಬೇರೆ ಆಲೋಚನೆ ಗಳೂ ಹುರಿಗಟ್ಟಿದ್ದವು. ‘ಏನಾಗಬೇಕೋ ಅದು ಆಗುತ್ತದೆ ಬಿಡು’ ಎಂಬ ಮನೋಭಾವ ಅವರ ಆಣಿಮುತ್ತುಗಳ ಉದ್ದಕ್ಕೂ ವ್ಯಕ್ತವಾಗಿದೆ. ‘ಕೆಲ ಸಮಸ್ಯೆಗಳಿಗೆ ಕಾಲವೇ ಪರಿಹಾರ’ ಎಂದು ಅವರು ಪದೇ ಪದೆ ಹೇಳುತ್ತಿದ್ದರು. ಅವರ ಇನ್ನೊಂದು ಪ್ರಸಿದ್ಧ ಹೇಳಿಕೆ ಎಂದರೆ, ‘ನಿರ್ಣಯ ತೆಗೆದುಕೊಳ್ಳದೇ ಇರುವುದೂ ಒಂದು ನಿರ್ಣಯವೇ. ಹೀಗಾಗಿ ನಾನು ಏನೂ ನಿರ್ಣಯಿಸಿಲ್ಲ ಎಂದರೆ ಆ ಬಗ್ಗೆ ಯೋಚಿಸಿಯೇ ಇಲ್ಲ ಎಂದೇನೂ ಅರ್ಥವಲ್ಲ’. ಇದೇ ಜಾಡಿನ ಇನ್ನೊಂದು ಹೇಳಿಕೆ, ‘ಕ್ರಿಯೆಗಿಳಿಯದಿರುವುದೂ ಒಂದು ಕ್ರಿಯೆಯೇ!’

ನರಸಿಂಹರಾವ್ ಅವರು ರಾಜಕಾರಣದಿಂದ ದೂರ ಸರಿದು, ಮೋತಿಲಾಲ್ ನೆಹರು ಮಾರ್ಗದ ತಮ್ಮ ನಿವಾಸದಲ್ಲಿ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದ ಪತ್ರಕರ್ತ, ‘ಇಂಡಿಯನ್ ಎಕ್ಸ್‌ಪ್ರೆಸ್’ ಸಂಪಾದಕ ಶೇಖರ್ ಗುಪ್ತ ಅವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ರಾವ್ ವ್ಯಕ್ತಿತ್ವದ ಹಲವು ಆಯಾಮಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಅಯೋಧ್ಯೆಯ ವಿಚಾರದಲ್ಲಿ ಹೇಳಬೇಕಿರುವುದನ್ನೆಲ್ಲ ಆಯೋ ಗದ ಮುಂದೆ ಹೇಳಿಯಾಗಿದೆ ಎಂಬ ಅವರ ಬಿಗಿಪಟ್ಟಿನ ನಡುವೆಯೂ ಶೇಖರ್ ಒಮ್ಮೆ ರಾವ್ ಅವರನ್ನು ಚುಚ್ಚುತ್ತಾರೆ. ‘ಕೇಂದ್ರ ಪಡೆ ದೊಂಬಿ ನಿರತ ಕರ ಸೇವಕರತ್ತ ಗುಂಡುಹಾರಿಸುವಂತೆ ನೀವೇಕೆ ಆದೇಶಿಸಲಿಲ್ಲ?’ ಎಂಬ ಶೇಖರ್ ಪ್ರಶ್ನೆಗೆ ರಾವ್ ನೀಡಿದ ಉತ್ತರ ಒಂದು ಹೊಸ ಆಯಾಮವನ್ನು ತೆರೆದಿಡುತ್ತದೆಯಲ್ಲದೇ ಬೆನ್ನ ಹುರಿಗುಂಟ ಒಂದು ಚಳಕನ್ನೂ ಮೂಡಿಸುತ್ತದೆ. ‘ರಾಂ ರಾಂ ಎಂದು ಉನ್ಮತ್ತರಾಗಿ ಹೇಳುತ್ತಿದ್ದ ಜನರತ್ತ ಗುಂಡು ಹಾರಿಸಲು ಕಳುಹಿಸಿದವರಲ್ಲೇ ಕೆಲವರು ‘ರಾಂ ರಾಂ’ ಪಾಳಯವನ್ನು ಸೇರಿದ್ದರೆ…. ಆಗ ಭಾರತದ ತುಂಬೆಲ್ಲ ಬೆಂಕಿ ಹೊತ್ತಿಕೊಳ್ಳು ತ್ತಿತ್ತಲ್ಲವೇ?’ ಅಂತ ಗಂಭೀರವಾಗಿ ಹೇಳಿದ್ದರು ಪಿವಿಎನ್.

ಶೇಖರ್ ಗುಪ್ತ ಅವರಿಗೆ ತುಂಬ ತಟ್ಟಿದ ಪಿವಿಎನ್ ಮಾತು ಇದು. ‘ಕೆಲವರು ಹೇಳ್ತಾರೆ ನಾನು ಕೋಳಿ ಕದ್ದೆ ಅಂತ. ಇನ್ನು ಕೆಲ ವರು, ಛೆ ಹಂಗೇನೂ ಇಲ್ಲ; ಅವರು ಕದ್ದಿದ್ದು ಮೊಟ್ಟೆ ಅಂತ. ಒಟ್ಟಿನಲ್ಲಿ ನಾನು ಕಳ್ಳ ಅನ್ನೋದರ ಬಗ್ಗೆ ಯಾರಲ್ಲೂ ಭಿನ್ನಾಭಿ ಪ್ರಾಯ ಇಲ್ಲ’ ಹೀಗೆಂದವರೇ ಒಂದು ವಿಷಣ್ಣ ನಗೆ ನಕ್ಕಿದ್ದರಂತೆ ಪಿವಿಎನ್.

ಪಿವಿಎನ್ ಹಾಸ್ಯಪ್ರಜ್ಞೆ ಹೇಗಿತ್ತು ಎಂಬ ಬಗ್ಗೆ ಇತ್ತೀಚಿನ ಅಂಕಣ ವೊಂದರಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ, ಟಿಜೆಎಸ್ ಜಾರ್ಜ್. ಒಮ್ಮೆ ಪುಸ್ತಕ ಬಿಡುಗಡೆ ಕಾರ್‍ಯಕ್ರಮದಲ್ಲಿ ರಾವ್ ಅವರು ಭಾಗವಹಿಸಬೇಕಿತ್ತು. ಆ ಸಂದರ್ಭದಲ್ಲಿ ತಮ್ಮ ಅನುಪಸ್ಥಿತಿ ವಿವರಿಸಿ ಅವರೊಂದು ಪತ್ರ ಕಳುಹಿಸಿದ್ದರು. ‘ಕಾರ್‍ಯಕ್ರಮದಲ್ಲಿ ಹಾಜರಿರಲು ನನಗೆ ಸಾಧ್ಯವಾಗುತ್ತಿಲ್ಲ. ಕಿತ್ತು ತಿನ್ನುವ ಬೆನ್ನುನೋವಿ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇದಕ್ಕೆ ಸುಲಭದ ಚಿಕಿತ್ಸೆ. ಅದೆಂದರೆ ಸಪಾಟು ಹಾಸಿಗೆಯ ಮೇಲೆ ಮಲಗಿರುವುದು. ಎಷ್ಟು ದಿನ ಅಂತ ಗೊತ್ತಿಲ್ಲ. ಹೀಗಾಗಿ ನಾನು ಎಲ್ಲಿಗಾದರೂ ಹೋಗಬೇ ಕೆಂದರೆ ಹಾಸಿಗೆ ಸಮೇತವೇ ಹೋಗಬೇಕು. ಮಹಾವಿಷ್ಣು ಹಾವಿನ ಹಾಸಿಗೆಯೊಂದಿಗೇ ಚಲಿಸುತ್ತಿದ್ದನಂತೆ. ಆದರೆ, ನಾನು ಮನುಷ್ಯನಾಗಿ ಇದುವರೆಗೆ ಅನುಭವಿಸಿರುವ ಫಜೀತಿಯೇ ಸಾಕಾಗಿರುವುದರಿಂದ ದೈವತ್ವದಿಂದ ದೂರ ಇರುವುದು ಲೇಸೆಂದು ತೀರ್ಮಾನಿಸಿದ್ದೇನೆ

ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?
“ಅದು ಜಗತ್ತಿನ ಅತ್ಯಂತ ಪುರಾತನ ವೃತ್ತಿ ಎಂದು ನೀವೇ ಹೇಳುವುದಾದರೆ, ಕಾನೂನಿನ ಮೂಲಕ ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ಏಕೆ ಕಾನೂನುಬದ್ಧಗೊಳಿಸಬಾರದು? ಮಹಿಳೆಯರ ಮಾರಾಟ, ಸಾಗಾಟವನ್ನು ತಡೆಯಲು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಗೊಳಿಸುವುದೇ ಯೋಗ್ಯ ಮಾರ್ಗ ಹಾಗೂ ಜಗತ್ತಿನ ಯಾವ ರಾಷ್ಟ್ರ ದಲ್ಲೂ ಕಠಿಣ ಕ್ರಮಗಳ ಮೂಲಕ ವೇಶ್ಯಾವಾಟಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ”.

ಹಾಗಂತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಳವೀರ್ ಭಂಡಾರಿ ಮತ್ತು ಎ.ಕೆ. ಪಟ್ನಾಯಕ್ ಡಿಸೆಂಬರ್ ೯ರಂದು ಕೇಂದ್ರದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರನ್ನು ಪ್ರಶ್ನಿಸಿದ್ದಾರೆ!

ನಮ್ಮ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮಾರಾಟ, ಸಾಗಾಟವನ್ನು ತಡೆಯಲು ಸೂಕ್ತಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ಕೋರಿ  ‘ಬಚ್‌ಪನ್ ಬಚಾವೋ ಆಂದೋಲನ್” ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(PIL) ವಿಚಾರಣೆ ನಡೆಸುತ್ತಿದ್ದಾಗ ಸರಕಾರಕ್ಕೆ ಈ ರೀತಿಯ ಪ್ರಶ್ನೆ ಹಾಕಲಾಗಿದೆ. ಸುಪ್ರೀಂಕೋರ್ಟ್‌ನ ಈ ಪ್ರಶ್ನೆಯ ಬಗ್ಗೆ ನಾವೆಲ್ಲರೂ  ಮಡಿವಂತಿಕೆಯನ್ನು ಬಿಟ್ಟು, ಹುಸಿ ನೈತಿಕ ಪ್ರeಯನ್ನು ಬದಿಗಿಟ್ಟು ಚಿಂತನೆ ನಡೆಸಬೇಕಾದ ಕಾಲ ಖಂಡಿತ ಬಂದಿದೆ. After all, there is nothing holy or unholy about sex!  ಒಂದು ಜೋಕು ಕೇಳಿ… ಒಬ್ಬ ರಾಜಕುಮಾರ ಇರುತ್ತಾನೆ. ಅವನ ರಾಜ್ಯದಲ್ಲೇ ಮತ್ತೊಬ್ಬ ವ್ಯಕ್ತಿ ಇರುತ್ತಾನೆ. ಆ ವ್ಯಕ್ತಿ ಹಾಗೂ ರಾಜಕುಮಾರ ಇಬ್ಬರೂ ಒಂದೇ ರೀತಿ ಇರುತ್ತಾರೆ, ಒಬ್ಬರನ್ನೊಬ್ಬರು ನೂರಕ್ಕೆ ನೂರು ಎನ್ನುವಷ್ಟು ಹೋಲುತ್ತಿರುತ್ತಾರೆ. ಆ ವಿಷಯ ರಾಜಕುಮಾರನಿಗೂ ಗೊತ್ತಿರುತ್ತದೆ. ಕಾರಣ ತಿಳಿದುಕೊಳ್ಳಬೇಕೆಂಬ ಆಸಕ್ತಿ ಆತನಿಗಿದ್ದರೂ ಹೇಗೆ ತಾನೇ ಕೇಳುವುದು? ರಾಜಕುಮಾರನಿಗೊಂದು ಉಪಾಯ ಹೊಳೆಯುತ್ತದೆ. ಆ ವ್ಯಕ್ತಿಯನ್ನು ಅರಮನೆಗೆ ಕರೆಸುತ್ತಾನೆ. ಒಂದಿಷ್ಟು ಕುಶಲ ವಿಚಾರಣೆಯ ನಂತರ ಕೇಳುತ್ತಾನೆ.

ರಾಜಕುಮಾರ: ನಿಮ್ಮ ತಾಯಿಯೇನಾದರೂ ಅರಮನೆಗೆ ಕೆಲಸಕ್ಕೆ ಬರುತ್ತಿದ್ದಳೆ?

ವ್ಯಕ್ತಿ: ಇಲ್ಲಾ ಇಲ್ಲಾ.. ಆದರೆ ನಮ್ಮ ಅಪ್ಪ ರಾಣಿಯ ಬಟ್ಟೆ ತೊಳೆ ಯಲು ಆಗಾಗ್ಗೆ ಅಂತಃಪುರಕ್ಕೆ ಹೋಗುತ್ತಿದ್ದ!!

ಸೆಕ್ಸ್ ಅನ್ನುವುದು ಒಂದು ದೈಹಿಕ ಅಗತ್ಯ. ಅದನ್ನು ಒಂದು ದೌರ್ಬಲ್ಯ ಎನ್ನುವುದಾದರೆ ನಮ್ಮ ಋಷಿಮುನಿಗಳು, ದೇವರಲ್ಲೂ ಆ ದೌರ್ಬಲ್ಯವಿತ್ತು. ಮಹಾನ್ ತಪಸ್ವಿ ವಿಶ್ವಾಮಿತ್ರನೇ ಮೇನಕೆಗೆ ಮಾರುಹೋಗಲಿಲ್ಲವೆ? ಋಷಿಪತ್ನಿ ಅಹಲ್ಯೆ ಯನ್ನು ಇಂದ್ರ ಮೋಸದಿಂದ ಸೇರಲಿಲ್ಲವೆ? ಸ್ವಾಮಿ ವಿವೇಕಾನಂದ ಅವರಂತಹ ಕೆಲವರನ್ನು ಬಿಟ್ಟರೆ ಬೇರಾರಿಂದಲೂ ಆ ಬಯಕೆಯನ್ನು ಮೆಟ್ಟಿ ಮೀರಿ ನಿಲ್ಲಲಾಗಲಿಲ್ಲ. ಅದೊಂದು ಸ್ವಾಭಾವಿಕ ಪ್ರಕ್ರಿಯೆ. ಆದರೆ ಮದ್ಯ ಸೇವನೆ ಅಗತ್ಯವೂ ಅಲ್ಲ, ಸ್ವಾಭಾವಿಕವೂ ಅಲ್ಲ. ಹಾಗಿದ್ದರೂ ಮದ್ಯಪಾನವನ್ನು ಕಾನೂನುಬದ್ಧಗೊಳಿಸಿ, ಅದಕ್ಕೆ ತೆರಿಗೆ ಹಾಕಿ ಆದಾಯಗಳಿಸಬಹುದಾದರೆ ವೇಶ್ಯಾವಾಟಿಕೆಯನ್ನು ಏಕೆ ಲೀಗಲೈಸ್ ಮಾಡಬಾರದು? ನೀವೇ ಹೇಳಿ, ಕಾನೂನು ಅಥವಾ ಇನ್ನಾವುದೇ ಮಾರ್ಗಗಳ ಮೂಲಕ ವೇಶ್ಯಾವಾಟಿಕೆಯನ್ನು ತಡೆಗಟ್ಟಲು ಸಾಧ್ಯವೆ?

ಇದೊಂದು timeless ಚರ್ಚೆ!

ವೇಶ್ಯಾವಾಟಿಕೆಯೆಂಬುದು ಇವತ್ತು ಕೇವಲ ನೈತಿಕತೆ ಪ್ರಶ್ನೆಯಾಗಿ ಉಳಿದಿಲ್ಲ. ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ನೈತಿಕವಾಗಿ ಅಧಃಪತನಕ್ಕಿಳಿದಿರುವವರು ಹಾಗೂ ಸಾಮಾಜಿಕ ಪೀಡೆಗಳೋ? ವೇಶ್ಯಾವಾಟಿಕೆಯೆಂಬುದು ಒಂದು ರೀತಿಯ ದೌರ್ಜನ್ಯವಾಗಿದ್ದು ಅದನ್ನು ನಿಷೇಧಿಸಬೇಕೋ ಅಥವಾ ಅದೂ ಒಂದು ವೃತ್ತಿಯಾಗಿದ್ದು ಅದನ್ನು ಕಾನೂನುಬದ್ಧಗೊಳಿಸಬೇಕೋ? ಇಂಥ ವಾದಗಳೆದ್ದಿವೆ. ಇಲ್ಲೂ ಕೂಡ ‘ಐಚ್ಛಿಕ’ ಹಾಗೂ ‘ಅನಿವಾರ್ಯ’ ಎಂಬ ವಾದಗಳಿವೆ. ಅದನ್ನು ನಿಷೇಧಿಸಬೇಕು ಎನ್ನುವವರು, ಭಾರೀ ಸಂಖ್ಯೆಯಲ್ಲಿ ಹೆಣ್ಣುಮಕ್ಕಳನ್ನು ಒತ್ತಡದ ಮೂಲಕ ವೇಶ್ಯಾವಾಟಿಕೆಗೆ ದೂಡುತ್ತಿದ್ದಾರೆ ಎಂಬ ವಾದವನ್ನು ಮುಂದಿಟ್ಟರೆ, ಹಾಗೇನೂ ಇಲ್ಲ ಎಂದು ವಾದಿಸುವವರೂ ಇದ್ದಾರೆ. ಏಯ್ಡ್ಸ್ ಪೀಡಿತ ಭಾರತೀಯ ಬ್ರಾಥೆಲ್‌ಗಳನ್ನು (ವೇಶ್ಯಾಗೃಹ) ಸೇರುವ 10-12 ವರ್ಷದ ನೇಪಾಳಿ ಯುವತಿಯರು ಖಂಡಿತ ಇಂಥದ್ದೊಂದು ಗುಲಾಮಗಿರಿಯನ್ನು ದುಃಸ್ವಪ್ನದಲ್ಲೂ ಬಯಸುವುದಿಲ್ಲ. ಮಾದಕ ವ್ಯಸನಿಗಳು ದೈನಂದಿನ ‘ಡೋಸ್’ಗಾಗಿ ಪಿಂಪ್‌ಗಳು(ತಲೆಹಿಡುಕರ) ಹೇಳಿದಷ್ಟು ಗಿರಾಕಿಗಳಿಗೆ ಮನರಂಜನೆ ನೀಡುವ ಅನಿವಾರ್ಯತೆಯಲ್ಲಿರುತ್ತಾರೆ. ಹಿಂದಿನ ಸೋವಿಯತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರಗಳ ಯುವತಿಯರು ವೃತ್ತಿಯನ್ನರಸಿಕೊಂಡು ಏಷ್ಯಾ, ಯುರೋಪ್‌ಗೆ ಬಂದು ಹೊಟ್ಟೆಪಾಡಿಗಾಗಿ ವೇಶಾಗೃಹ ಸೇರುತ್ತಿರುವುದೂ ಇದೆ. Again, ಉದ್ಯೋಗವೆಂಬ ಮಾರುಕಟ್ಟೆಯಲ್ಲಿ ಯಾವತ್ತು ವೃತ್ತಿ ಆಯ್ಕೆಯ ಸ್ವಾತಂತ್ರ್ಯವಿತ್ತು? ಕೆಮಿಕಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಬಡತನ ರೇಖೆಯಿಂದ ಎಂದೂ ಮೇಲೆ ಬರಲು ಸಾಧ್ಯವಿಲ್ಲ. ಅಂತಹ ಬದುಕನ್ನು ಅವನು ಆಯ್ಕೆ ಮಾಡಿಕೊಂಡಿದ್ದನೆ? ವಿದ್ಯೆ ಅಥವಾ ಯಾವುದೇ ಕೌಶಲಗಳನ್ನು ಗಳಿಸಿಕೊಳ್ಳುವಂತಹ ಸಣ್ಣ ಅವಕಾಶವೂ ಇಲ್ಲದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣೊಬ್ಬಳು ಏನು ಮಾಡಬೇಕು? ಈ ‘ಆಯ್ಕೆ’ ಸ್ವಾತಂತ್ರ್ಯವನ್ನು ವೇಶ್ಯಾವಾಟಿಕೆಗೆ ಮಾತ್ರ ಏಕೆ ಅನ್ವಯ ಮಾಡಬೇಕು? ಹೀಗೂ ವಾದಿಸುವವರಿದ್ದಾರೆ. To get rich is to be glorious ಎಂಬ ಮಾತಿನಂತೆ ಯಾವುದೇ ಪ್ರಭಾವ, ಹಣಬಲ, ಬುದ್ಧಿಬಲ ಇಲ್ಲದ ಹುಡುಗಿಯೊಬ್ಬಳು ಶೀಘ್ರ ಸಂಪಾದನೆಗಾಗಿ ತನ್ನ ದೇಹವನ್ನೇ ಸಂಪನ್‘ಮೂಲ’ವಾಗಿ ಮಾಡಿಕೊಂಡಿರುವುದನ್ನೂ ಕಾಣಬಹುದು. ಯಾವುದೋ ಕಾರ್ಖಾನೆ, ಕಂಪನಿಯಲ್ಲಿ ಮೂರು ಕಾಸಿಗಾಗಿ ದುಡಿಯುವುದಕ್ಕಿಂತ ಈ ಮಾರ್ಗವೇ ಒಳ್ಳೆಯದೆಂಬುದು ಅವಳ ಯೋಚನೆಯಾಗಿರಬಹುದು. ದುಡ್ಡಿಗಾಗಿ ನೇರವಾಗಿ ದೇಹ ಮಾರಿಕೊಳ್ಳುವವಳಿಗೆ ವೇಶ್ಯೆ ಎನ್ನುತ್ತೀರಿ. ಆದರೆ ಯೋಗ್ಯ ಕೆಲಸದ ಹೆಸರಿನಲ್ಲಿ ಅದೇ ದಂಧೆ ನಡೆಯುತ್ತಿಲ್ಲವೆ? ಸಿನಿಮಾಗಳಲ್ಲಿ ಮೈಮಾಟ ತೋರಿಸುತ್ತಿರುವವರೂ ದುಡ್ಡಿಗಾಗಿಯೇ ಅಲ್ಲವೆ? ಇಂತಹ ಹತ್ತಾರು ಪ್ರಶ್ನೆ, ಪ್ರತಿ ಪ್ರಶ್ನೆಗಳಿಂದಾಗಿ ವೇಶ್ಯಾವಾಟಿಕೆಯ ಬಗೆಗಿನ ಚರ್ಚೆ ಕಾಲಾತೀತವಾಗಿ, never ending ಆಗಿ ಬಿಟ್ಟಿದೆ. ಇಷ್ಟಾಗಿಯೂ ಒಂದಂತೂ ಸತ್ಯ, ಇದು ಯಾವ ಕಾನೂನಿನಿಂದಲೂ ತಡೆಯಲಾಗದ, ಯಾವ ಕಾನೂನಿಗೂ ಬಗ್ಗದ ಸಮಸ್ಯೆ.

ಈ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆಯನ್ನು ಲೀಗಲೈಸ್‌ಮಾಡುವುದೇ ಯೋಗ್ಯ ಮಾರ್ಗ ಎಂದೆನಿಸುತ್ತದೆ!

“ಪ್ರಾಸ್ಟಿಟ್ಯೂಶನ್ ಎಂಬುದು ಗಂಡಸು ಸೃಷ್ಟಿಸಿರುವ ಸಮಸ್ಯೆ” ಎಂದು ಚಾಣಕ್ಯ ಆ ಕಾಲದಲ್ಲೇ ಹೇಳಿದ್ದ. ಜತೆಗೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ, ತೆರಿಗೆ ವಿಧಿಸಿದ್ದ. ಇವತ್ತು ಜರ್ಮನಿ, ಗ್ರೀಸ್, ನೆದರ್ಲೆಂಡ್, ನ್ಯೂಜಿಲೆಂಡ್ ಹಾಗೂ ಟರ್ಕಿಯಂತಹ ರಾಷ್ಟ್ರ ಗಳು ಇದನ್ನು ಕಾನೂನುಬದ್ಧಗೊಳಿಸಿವೆ. ವೇಶ್ಯಾವಾಟಿಕೆಯನ್ನು ವ್ಯವಸ್ಥಿತವಾಗಿ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಭಾರತ ಕೂಡ ಈ ದಿಕ್ಕಿನಲ್ಲಿ ಯೋಚಿಸಬೇಕಾದ ತ್ವರಿತ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 25 ಲಕ್ಷ ಎಚ್‌ಐವಿ ಪೀಡಿತರಿ ದ್ದಾರೆ. ಆಫ್ರಿಕಾದ ನಂತರದ ಸ್ಥಾನ ಭಾರತಕ್ಕೆ!  ನಮ್ಮ ಕಾನೂನಿನಲ್ಲಿ ವೇಶ್ಯಾವಾಟಿಕೆಗೆ ಅವಕಾಶವಿಲ್ಲ. ಆದರೂ ಇಷ್ಟೊಂದು ಜನ ರೋಗ ಪೀಡಿತರಾಗಿದ್ದಾದರೂ ಹೇಗೆ? ಮುಂಬೈ ಒಂದರಲ್ಲೇ ಒಂದೂವರೆ ಲಕ್ಷ ವೇಶ್ಯೆಯರಿದ್ದಾರೆ. ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್. ಪಾಟೀಲ್ ಬಾರ್‌ಗರ್ಲ್ಸ್‌ಗಳನ್ನು ನಿಷೇಧ ಮಾಡಿದರು. ಆದರೆ ಅವರು ಏನು ಮಾಡಬೇಕು?

ಈ ಬಗ್ಗೆಯೂ ಯೋಚನೆ ಮಾಡಿ…

ನಾವು ನೈತಿಕತೆಯ ಬಗ್ಗೆ ಎಷ್ಟೇ ಮಾತನಾಡಿದರೂ ವೇಶ್ಯಾವಾಟಿಕೆ ಯನ್ನು ತಪ್ಪಿಸಲು ಸಾಧ್ಯವಿಲ್ಲ. ಆರ್ಥಿಕ ಸಮಸ್ಯೆ, ನೈಸರ್ಗಿಕ ವಿಕೋಪಗಳಿಂದ ಎದುರಾಗುವ ಸಂಕಷ್ಟ, ರಾಜಕೀಯ ಅರಾಜಕತೆ, ಸಂಘರ್ಷ ಇಂತಹ ಸಮಸ್ಯೆಗಳು ಮಹಿಳೆಯರು ಹಾಗೂ ಮಕ್ಕಳನ್ನು ಅಪಾಯದಂಚಿಗೆ ದೂಡುತ್ತವೆ ಎಂಬುದು ಒಪ್ಪುವಂಥದ್ದೇ. ಹಾಗಂತ ದೇಹವನ್ನು ಗುಲಾಮಗಿರಿಗೆ ಇಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ದೈಹಿಕ ಕಾಮನೆಗಳನ್ನು ದೌರ್ಬಲ್ಯ ಅನ್ನುವುದಕ್ಕಿಂತ ಅನಿವಾರ್ಯ ಅಗತ್ಯ ಎನ್ನುವುದೇ ಸರಿ. ಯಾರೋ ಒಬ್ಬನಿಗೆ ಅದು ಬೇಕೆಂದರೆ ಆತ ಯಾವುದಾದರೂ ಮಾರ್ಗದಲ್ಲಿ ಅದನ್ನು ಪಡೆಯಲು ಯತ್ನಿಸುತ್ತಾನೆ. ಅಮೆರಿಕದಂತಹ ರಾಷ್ಟ್ರಕ್ಕೇ ಮಾದಕ ವಸ್ತು ಮಾರಾಟವನ್ನು ತಡೆಯಲು ಸಾಧ್ಯವಾಗಿಲ್ಲ. ಹಾಗಿರುವಾಗ ವೇಶ್ಯಾವಾಟಿಕೆಯನ್ನು ತಡೆಯಲು ಸಾಧ್ಯವೆ? ಇವತ್ತು ಭಾರತದಲ್ಲಿ ಏನಾಗುತ್ತಿದೆ ಗಮನಿಸಿ.. ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆ ದೈಹಿಕ ಹಿಂಸೆಯ ಜತೆ ಆದಾಯ ಹಂಚಿಕೆ ವಿಷಯದಲ್ಲೂ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಕಾನೂನುಬಾಹಿರವಾಗಿ ನಡೆ ಯುವ ವೇಶ್ಯಾವಾಟಿಕೆಯಿಂದ ಫಲಾನುಭವಿಗಳ ಸಂಖ್ಯೆ ಹೆಚ್ಚು. ದೇಹವನ್ನು ಗುಲಾಮಗಿರಿಗೆ ಇಡಬೇಕೆಂದರೂ ಅದನ್ನು ಕದ್ದು ಮುಚ್ಚಿ ಮಾಡಬೇಕು. ಅದಕ್ಕೆ ತಲೆಹಿಡುಕರ ಸಹಾಯ ಬೇಕು, ಅವರಿಗೆ ಪೊಲೀಸರ ಶ್ರೀರಕ್ಷೆ ಅಗತ್ಯ. ಹಾಗಾಗಿ ದೈಹಿಕ ಹಿಂಸೆ ಅನುಭವಿಸುವ ಮಹಿಳೆಗೆ ಬರುವ ಪಾಲು ಅತ್ಯಂತ ಕಡಿಮೆ. ಪೊಲೀಸರು, ಏಜೆಂಟರಿಗೆ ಸಿಂಹಪಾಲು. ಈ ದೃಷ್ಟಿಯಿಂದ ವೇಶ್ಯಾ ವಾಟಿಕೆಯನ್ನು ಲೀಗಲೈಸ್ ಮಾಡುವುದೇ ಉತ್ತಮ. ಅಷ್ಟಕ್ಕೂ ಸಲಿಂಗ ಕಾಮಕ್ಕೆ ಕಾನೂನಿನ ಮುದ್ರೆ ಒತ್ತಲು ಹೊರಟಿರುವವರಿಗೆ ವೇಶ್ಯಾವಾಟಿಕೆಯನ್ನು ಲೀಗಲೈಸ್‌ಮಾಡುವುದಕ್ಕೇಕೆ ಅಂಜಿಕೆ? ಎಚ್‌ಐವಿ ಪೀಡಿತನಿಗೆ ಘನತೆಯಿಂದ ಬದುಕುವ ಹಕ್ಕಿದೆ ಎಂದು ವಾದಿಸುವುದಾದರೆ ಒಬ್ಬ ವೇಶ್ಯೆಗೂ ಗೌರವಯುತ ಬದುಕಿನ ಹಕ್ಕಿಲ್ಲವೆ? ಕಾನೂನುಬಾಹಿರವಾಗಿ ಕಾಮಾಟಿಪುರ, ಬುಧವಾರ ಪೇಟೆಯಂತಹ ರೆಡ್‌ಲೈಟ್ ಏರಿಯಾಗಳು ಬೆಳೆಯಲು ಅವಕಾಶ ನೀಡುವುದಕ್ಕಿಂತ ಲೀಗಲೈಸ್‌ಮಾಡುವುದರಲ್ಲೇ ದೇಶ ಹಾಗೂ ಸಮಾಜದ ಒಳಿತಿದೆ.

1. ಹೀಗೆ ಮಾಡುವುದರಿಂದ ಮಕ್ಕಳ, ಮಹಿಳೆಯರ ಮಾರಾಟ, ಕಳ್ಳಸಾಗಣೆ(ಚೈಲ್ಡ್ ಟ್ರಾಫಿಕಿಂಗ್) ಮೇಲೆ ನಿಗಾ ಇಡಬಹುದು. 2. ಅಮಾಯಕ ಹೆಣ್ಣುಮಕ್ಕಳು ಪಿಂಪ್‌ಗಳ ಪಿತೂರಿಗೆ ಸಿಲುಕುವುದನ್ನು ತಪ್ಪಿಸಬಹುದು. 3. ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ತಳ್ಳಿಸಿಕೊಳ್ಳುವುದನ್ನೂ ನಿಯಂತ್ರಿಸಬಹುದು. 4. ಆದಾಯದ ವಿಷಯದಲ್ಲೂ ಮಹಿಳೆಗೇ ಸಂಪೂರ್ಣ ಫಲ ದೊರೆಯುವಂತೆ ಮಾಡಬಹುದು. 5. ಪಿಂಪ್‌ಗಳ ಕೈಯಲ್ಲಿ ಸಿಕ್ಕಿ ಶಾಶ್ವತವಾಗಿ ನರಳುವುದನ್ನು ತಡೆಯಬಹುದು. 6.  ಇಂಥ ಸ್ಥಳದಲ್ಲಿ ಲಭ್ಯವಿದೆ ಎಂಬ ಮಾಹಿತಿ ಮೊದಲೇ ತಿಳಿದಿರುವುದರಿಂದ ರಸ್ತೆ ಬದಿಯಲ್ಲಿ ನಿಂತು ವಿಚಿತ್ರ ಹಾವ-ಭಾವಗಳ ಮೂಲಕ ಆತ್ಮಗೌರವ ಬಿಟ್ಟು ಗಿರಾಕಿಗಳನ್ನು ಆಕರ್ಷಿಸುವ ಅಗತ್ಯವೂ ಬರುವುದಿಲ್ಲ. 7. ಸೆಕ್ಸ್ ವರ್ಕರ್ಸ್‌ಗಳನ್ನು ಇಂತಿಷ್ಟು ಕಾಲಮಿತಿಗೊಮ್ಮೆ ಆರೋಗ್ಯ ತಪಾ ಸಣೆಗೆ ಒಳಪಡಿಸಬಹುದು. 8. ರೋಗಪೀಡಿತರಿಗೆ ಪುನರ್ವಸತಿ ಕಲ್ಪಿಸಬಹುದು. 9. ಅವರಿಗೆ ಆರೋಗ್ಯ ಸೇವೆ ನೀಡಬಹುದು. 10. ಅವರ ಮಕ್ಕಳಿಗೆ ಸರಕಾರವೇ ಸೂಕ್ತ ಶಿಕ್ಷಣ, ವಸತಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಬಹುದು. 11. ಮಕ್ಕಳನ್ನು ಶಾಲೆಗೆ ಸೇರಿಸುವಾಗಲೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಅಪ್ಪ ಯಾರೆಂದು ಕೇಳುವ, ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಇರುವುದಿಲ್ಲ. ತಾಯಿಯ ಹೆಸರೊಂದನ್ನೇ ತುಂಬುವ ಅವಕಾಶ ನೀಡಿದರೆ ಒಳ್ಳೆಯದಾಗುವುದು. 12. ಒಬ್ಬ ಡ್ರೈವರ್ ರಸ್ತೆ ಬದಿಯಲ್ಲಿ ಅಸುರಕ್ಷಿತವಾಗಿ ಕಾಮತೃಷೆ ತೀರಿಸಿಕೊಂಡು, ಹೆಂಡತಿಗೆ ರೋಗ ಅಂಟಿಸುವುದು, ಮಕ್ಕಳಿಗೂ ಬಳುವಳಿಯಾಗಿ ನೀಡುವುದನ್ನು ತಡೆಯಬಹುದು. 13. ಆ ಮೂಲಕ ಸಮಾಜದ ದೈಹಿಕ ಸ್ವಾಸ್ಥ್ಯವನ್ನೂ ಕಾಪಾಡಬಹುದು. 14. ವೇಶ್ಯಾವಾಟಿಕೆಯನ್ನು ಕಾನೂನು ವ್ಯಾಪ್ತಿಗೆ ತರುವುದರ ಮತ್ತೊಂದು ಲಾಭವೆಂದರೆ ಪೊಲೀಸರ ಜವಾಬ್ದಾರಿ ಕಡಿಮೆಯಾಗಿ ಅವರು ಇತರ ಸಮಸ್ಯೆಗಳತ್ತ ಗಮನಹರಿಸಬಹುದು.

ಮೊದಲೇ ಹೇಳಿದಂತೆ ಭಾರತದಲ್ಲಿ 25 ಲಕ್ಷ ಎಚ್‌ಐವಿ ಪೀಡಿತ ರಿದ್ದು, ಪರಿಸ್ಥಿತಿ  ಇದೇ ರೀತಿ ಮುಂದುವರಿದರೆ ಮತ್ತೊಂದು ಆಫ್ರಿಕಾ ವಾದೀತು ಎಂದು ಭಯಪಡುವುದಕ್ಕಿಂತ ಮಾನ್ಯತೆ ನೀಡುವುದೇ ಒಳಿತು. ರೋಗಪ್ರಸರಣವನ್ನಾದರೂ ತಡೆಯಬಹುದು. ಲೀಗಲೈಸ್ ಮಾಡಿ, ಕಾಂಡೋಮ್ ವಿತರಣೆ ಮೂಲಕ ರೋಗ ಹರಡುವಿಕೆ ಯನ್ನು ಗಣನೀಯವಾಗಿ ನಿಯಂತ್ರಣ ಮಾಡಿರುವ ಥಾಯ್ಲೆಂಡ್ ಉದಾಹರಣೆ ನಮ್ಮ ಕಣ್ಣಮುಂದಿದೆ. ಆಸ್ಪತ್ರೆಗಳ ಮುಂದೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ನೇತುಹಾಕುವುದಕ್ಕಿಂತ ಇದು ಉತ್ತಮ ಮಾರ್ಗ. ಹಾಗೆ ಮಾಡಿದ ಮಾತ್ರಕ್ಕೆ ಸಮಾಜ ಹಾಳಾಗಿ ಹೋಗುತ್ತದೆ, ಉಳಿದವರೂ ಪ್ರೋತ್ಸಾಹಿತರಾಗಿ ವೇಶ್ಯಾವೃತ್ತಿಗೆ ಇಳಿದು ಬಿಡುತ್ತಾರೆ ಎಂದು ಭಾವಿಸಬೇಡಿ. ಅದೊಂದು ಮಿಥ್ ಅಷ್ಟೇ. ದೇಹ ಮಾರಿಕೊಳ್ಳಬೇಕೆಂದುಕೊಂಡವರಿಗೆ ಮಾರ್ಗಗಳು ನೂರಾರಿವೆ.

ಇವತ್ತು ಸೆಕ್ಸ್ ಕೂಡ ಒಂದು ಸರ್ವೀಸ್ ಇಂಡಸ್ಟ್ರಿ. ಅದನ್ನು ‘ಫಿಸಿಕಲ್ ಪ್ರಾಸ್ಟಿಟ್ಯೂಶನ್’ ಅನ್ನುವುದನ್ನು ಬಿಟ್ಟರೆ ಬೇರಾವ ವ್ಯತ್ಯಾಸಗಳೂ ಇಲ್ಲ. ನಮ್ಮ ವಿವಿಗಳಲ್ಲಿ ಐಡಿಯಲಾಜಿಕಲ್, ಇಂಟೆಲೆಕ್ಚುವಲ್ ಪ್ರಾಸ್ಟಿಟ್ಯೂಶನ್ ಮಾಡುವವರು ಅದೆಷ್ಟು ಜನರಿಲ್ಲ ಹೇಳಿ?! ಕೃಷ್ಣ ದೇವರಾಯನಿಗೆ 500 ಪತ್ನಿಯರಿದ್ದರು ಎಂದು ನಮ್ಮ ಇತಿಹಾಸದ ಪುಟಗಳು ಹೇಳುತ್ತವೆ. ೫೦೦ ಪತ್ನಿಯರು ಎಂದರೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರದಂತೆ ಶೌರ್ಯ ಪ್ರಶಸ್ತಿಗಳೇನು? ಈಗಂತೂ ಕಚೇರಿಯಲ್ಲಿರುವ ಕೆಳಸ್ತರದ ಉದ್ಯೋಗಿಗಳನ್ನು ಪುಸಲಾಯಿಸುವುದು, ಪೀಡಿಸುವುದು, ಬಾಲಿವುಡ್ ನಟ ಶೈನಿ ಅಹುಜಾನಂತೆ ಮನೆಗೆಲಸದವಳನ್ನು ಮಂಚಕ್ಕೆ ಎಳೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಅಮರ ಪ್ರೇಮದ ಕಥೆ ಹೇಳುತ್ತಾ ಹೆಂಡತಿ ಇರುವಾಗಲೇ ಮತ್ತೊಬ್ಬಳನ್ನು ಕದ್ದುಮುಚ್ಚಿ ಕಟ್ಟಿಕೊಂಡು ಪುತ್ರಕಾಮೇಷ್ಠಿ ಯಾಗ ಮಾಡಿ, ‘ರಾಧಿಕಾ ಮತ್ತೆ ಮರಿ ಹಾಕಿದಳಾ?’ ಎಂದು ಅನ್ಯರಿಗೆ ನೈತಿಕ ಪಾಠ ಹೇಳುವ ಪತ್ರಕರ್ತರೂ ಕಡಿಮೆಯೇನಿಲ್ಲ! ಆದರೆ ಹೆಣ್ಣನ್ನು ವೇಶ್ಯೆ ಮಾಡಿರುವವನೇ ಗಂಡಸು ಎಂಬುದನ್ನು ಮರೆಯದಿರಿ. ಆಕೆಯ ಬಗ್ಗೆ ಲಘುವಾಗಿ ಮಾತನಾಡುವ, ವೇಶ್ಯೆ ಎಂದು ಜರಿಯುವ ಬದಲು ಗೌರವಿಸುವುದನ್ನೂ ಕಲಿಯಿರಿ.

If woman walk protected on streets today it is because of the brothel in the corner- ವೇಶ್ಯೆಯರಿರುವುದರಿಂದಲೇ ಮರ್ಯಾದಸ್ಥರು ಬೀದಿ ಯಲ್ಲಿ ಗೌರವಯುತವಾಗಿ ಓಡಾಡಲು ಸಾಧ್ಯವಾಗಿದೆ ಎಂಬ ಮಾತು ನಿಜವೆನಿಸುವುದಿಲ್ಲವೆ?

‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು!
‘ಪಾ‘!

ಒಂದು ವೇಳೆ ನೀವು ಈಗಾಗಲೇ ಈ ಚಿತ್ರವನ್ನು ನೋಡಿದ್ದರೆ ನಿಮಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲವಾದರೆ ಅದರ ಒಂದೊಂದು ದೃಶ್ಯಗಳಲ್ಲೂ ಮೈತೆರೆದುಕೊಳ್ಳುತ್ತಾ ಹೋಗುವ ಜೀವನ ಪ್ರೀತಿಯ ಬಗ್ಗೆ ತಿಳಿದುಕೊಳ್ಳುವ ಮೊದಲು ಸ್ವಲ್ಪ ಚಿತ್ರಕಥೆಯನ್ನೂ ಕೇಳಿ. ಹೆಸರು ಆರೋ. ವಯಸ್ಸು 13. ‘ಪ್ರೊಜೇರಿಯಾ’ ಅಂದರೆ ಎಳೆಯ ವಯಸ್ಸಿನಲ್ಲೇ ಮುದಿತನ ತರುವ ಒಂದು ವಿಚಿತ್ರ ಕಾಯಿಲೆ. ಆರೋ ನರಳುತ್ತಿದ್ದುದು ಅದೇ ಕಾಯಿಲೆಯಿಂದ. ಆದರೆ ನೋಡಲು 70 ವರ್ಷದ ಮುದುಕನಂತೆ ಕಂಡರೂ ಅವನ ವರ್ತನೆಯಲ್ಲಿ ಅಂತಹ ಯಾವ ಲಕ್ಷಣಗಳೂ ಕಾಣುತ್ತಿರಲಿಲ್ಲ. ಒಬ್ಬ ಸಾಮಾನ್ಯ, ಸಹಜ 13 ವರ್ಷದ ಬಾಲನಂತೆಯೇ ಆಡುತ್ತಾನೆ, ಹಾಡುತ್ತಾನೆ, ಕುಣಿಯುತ್ತಾನೆ, ಕೋತಿಯಾಟವಾಡುತ್ತಾನೆ, ಶಾಲೆಗೂ ಹೋಗುತ್ತಿರುತ್ತಾನೆ, ಕಲಿಕೆಯಲ್ಲೂ ಹುಷಾರು. ಒಮ್ಮೆ ಶಾಲೆಯ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿರುತ್ತದೆ. ಅದರ ಅಂಗವಾಗಿ ವಸ್ತುಪ್ರದರ್ಶನ ಏರ್ಪಾಡಾಗಿರುತ್ತದೆ. ವಾರ್ಷಿಕೋತ್ಸವ ಸಮಾರಂಭಕ್ಕೆ ಆಗಮಿಸಿದ ಸ್ಥಳೀಯ ಸಂಸದ ಅಮೋಲ್ ಆರ್ತೆ, ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಾ ಹೋಗು ತ್ತಾರೆ. ಕೊನೆಯಲ್ಲಿ ಒಂದು ಭೂಗೋಳ(ಗ್ಲೋಬ್) ಕಾಣುತ್ತದೆ. ಅದೊಂದು ಬಿಳಿ ಭೂಗೋಳ. ಕುತೂಹಲಭರಿತರಾಗುವ ಅಮೋಲ್ ಆರ್ತೆ ಮನದಲ್ಲಿ ಏನೆಲ್ಲಾ ಯೋಚಿಸುತ್ತಾರೆ. ಕೊನೆಗೆ ಈ ಭೂಗೋಳವನ್ನು ರಚಿಸಿದವನಿಗೇ ಬಹುಮಾನ ನೀಡಬೇಕೆಂದು ಆಯೋಜಕರಿಗೆ ತಮ್ಮ ಒತ್ತಾಸೆಯನ್ನು ಅರಿಕೆ ಮಾಡಿಕೊಳ್ಳುತ್ತಾರೆ. ವೇದಿಕೆಯ ಮೇಲಿಂದ ಆರೋ… ಆರೋ… ಎಂಬ ಕರೆ ಮೊಳಗತೊಡಗುತ್ತದೆ.

ಆರೋಗೆ ಮೊದಲ ಬಹುಮಾನ!

ಮನೆಗೆ ಬಂದ ಆರೋನನ್ನು ಕಂಡು ಆಶ್ಚರ್ಯಚಕಿತಳಾದ ಅಮ್ಮ, ‘ಏಕಾಗಿ ನಿನಗೆ ಬಹುಮಾನ ಕೊಟ್ಟರು?’ ಎಂದು ಪ್ರಶ್ನಿಸು ತ್ತಾಳೆ. ಆಗ ಬಹುಮಾನದ ಹಿಂದಿನ ರಹಸ್ಯವನ್ನು ಆರೋ ಹೊರ ಗೆಡವುತ್ತಾನೆ. ಬಿಳಿ ಭೂಗೋಳವನ್ನು ಕಂಡ ಅಮೋಲ್ ಆರ್ತೆ, ಅದು ರಾಜ್ಯ, ದೇಶ, ಖಂಡ ಯಾವ ಗಡಿಗಳೂ ಇಲ್ಲದ, ವಿಶ್ವವೇ ಒಂದು ಎಂಬ ಸಂದೇಶ ಸಾರುತ್ತಿದೆ ಎಂದು ಭಾವಿಸಿರುತ್ತಾರೆ. ಹಾಗಾಗಿ ಆರೋಗೆ ಮೊದಲ ಬಹುಮಾನ ನೀಡಬೇಕೆಂದು ಒತ್ತಾಯಿಸಿ, ಕೊಡಿಸಿರುತ್ತಾರೆ. ಆದರೆ ಅದರ ಹಿಂದೆ ಬೇರೆಯೇ ಕಥೆಯಿರುತ್ತದೆ. ವಸ್ತುಪ್ರದರ್ಶನಕ್ಕೆಂದು ವಿದ್ಯಾರ್ಥಿಗಳೆಲ್ಲರೂ ಒಂದಿಲ್ಲೊಂದು ಚಿತ್ರ, ಸ್ತಬ್ಧಚಿತ್ರಗಳನ್ನು ರೂಪಿಸಿರುತ್ತಾರೆ. ಪ್ರೊಜೇರಿಯಾದಿಂದ ನರಳುತ್ತಿದ್ದ ಆರೋಗೆ ಅಂತಹ ಏನನ್ನೂ ರೂಪಿಸಲು ಸಾಧ್ಯವಾಗಿರಲಿಲ್ಲ. ಶಾಲೆಯಲ್ಲಿದ್ದ ಭೂಗೋಳವೊಂದು ಆತನ ಕಣ್ಣಿಗೆ ಬಿತ್ತು, ಪಕ್ಕದಲ್ಲೇ ಬಣ್ಣದ ಡಬ್ಬಿಯೂ ಕಂಡಿತು. ಆ ಭೂಗೋಳಕ್ಕೆ ಸುಖಾಸುಮ್ಮನೆ ಬಿಳಿ ಬಣ್ಣವನ್ನು ಬಳಿದ ಆರೋ, ವಸ್ತುಪ್ರದರ್ಶನದಲ್ಲಿಟ್ಟಿರುತ್ತಾನೆ!!

“ಪಾ” ಚಿತ್ರದಲ್ಲಿ ಎರಡೆರಡು ಅರ್ಥವನ್ನು ಕೊಡುವ ಇಂತಹ ಹಲವಾರು ದೃಶ್ಯಗಳಿವೆ.

ಆ ಹುಚ್ಚ ಎಂಪಿಗೆ(ಸಂಸದನಿಗೆ) ತಲೆಯೇ ಇಲ್ಲ, ನಾನು ಮಾಡಿದ್ದೇನೋ, ಆತ ಅಂದುಕೊಂಡಿದ್ದೇನೋ ಎಂದು ಗೇಲಿ ಮಾಡುತ್ತಾ ಆರೋ ಮಲಗಲು ಹೋಗುತ್ತಾನೆ. ಇತ್ತ ಅಮ್ಮ ಟಿವಿ ಆನ್ ಮಾಡುತ್ತಾಳೆ. ಚಾನೆಲ್ಲೊಂದರಲ್ಲಿ ಆರೋನ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಸುದ್ದಿ ಬಿತ್ತರವಾಗುತ್ತಿರುವುದು ಕಾಣುತ್ತದೆ. ಅಂದು ಮೆಚ್ಚಿ ಬಹುಮಾನ ಕೊಡಿಸಿದ್ದ ಆ ಹುಚ್ಚು ಸಂಸದ ಅಮೋಲ್ ಆರ್ತೆ ಮತ್ತಾರೂ ಅಲ್ಲ ಆರೋನ  ಅಪ್ಪ!

‘ಪಾ’ ಚಿತ್ರ ಗರಿಗೆದರುತ್ತಾ ಹೋಗುವುದೇ ಇಲ್ಲಿ. ಅಮೋಲ್ ಆರ್ತೆ ಒಬ್ಬ ರಾಜಕಾರಣಿಯ ಮಗ. ಆಕ್ಸ್‌ಫರ್ಡ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುತ್ತಾನೆ. ವಿದ್ಯಾ ಕೂಡ ಅಲ್ಲೇ ಮೆಡಿಸಿನ್ ಕಲಿಯುತ್ತಿರುತ್ತಾಳೆ. ಇಬ್ಬರ ನಡುವೆ ಸ್ನೇಹ ಮೊಳಕೆಯೊಡೆದು ಹಾಸಿಗೆವರೆಗೂ ಕರೆದೊಯ್ಯುತ್ತದೆ. ವಿದ್ಯಾ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ಅಮೋಲ್‌ನನ್ನು ನಿದ್ದೆಗೆಡಿಸುತ್ತದೆ. ನನಗೆ ಈ ಹೆಂಡತಿ, ಮಕ್ಕಳು ಇದ್ಯಾವುದರಲ್ಲಿಯೂ ಆಸಕ್ತಿಯಿಲ್ಲ. ನಾನೊಬ್ಬ ಒಳ್ಳೆಯ ರಾಜಕಾರಣಿಯಾಗಬೇಕು. ಅದೇ ನನ್ನ ಇಚ್ಛೆ ಹಾಗೂ ಮಹತ್ವಾಕಾಂಕ್ಷೆ. ಗರ್ಭಪಾತ ಮಾಡಿಸು ಎಂದು ಒತ್ತಾಯಿಸುತ್ತಾನೆ. ಮಗು ಹಾಗೂ ಬಾಯ್‌ಫ್ರೆಂಡ್ ಇಬ್ಬರ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಇಕ್ಕಟ್ಟಿನ ಪ್ರಸಂಗ ಬಂದಾಗ ಬಾಯ್‌ಫ್ರೆಂಡ್‌ನನ್ನೇ ಬಿಟ್ಟು ಭಾರತಕ್ಕೆ ಮರಳುವ ವಿದ್ಯಾ, ಅಮ್ಮನ ಮನೆ ಸೇರಿ ಆರೋನಿಗೆ ಜನ್ಮ ಕೊಡುತ್ತಾಳೆ. ದುರದೃಷ್ಟವಶಾತ್, ಆರೋನಲ್ಲಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುವ ಪ್ರೊಜೇ ರಿಯಾ ರೋಗವಿರುತ್ತದೆ. ಈ ವಿಷಯ ಗೊತ್ತಾದಾಗ ವಿದ್ಯಾ, ತೀವ್ರ ಬೇಸರಕ್ಕೊಳಗಾದರೂ ನಿಜವಾದ ಜೀವನ ಪ್ರೀತಿ ಅನಾವರಣ ಗೊಳ್ಳುತ್ತಾ ಹೋಗುವುದು ಅಲ್ಲಿಂದಲೇ. ಮುಂದೇನಾಯಿತು ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ದಯವಿಟ್ಟು ಚಿತ್ರವನ್ನೇ ನೋಡಿ. ಆದರೆ ಆ ಚಿತ್ರವನ್ನು ನೋಡುತ್ತಿದ್ದರೆ ಒಬ್ಬ ತಾಯಿಯ ಪ್ರೀತಿ ಎಂಥದ್ದು, ಅಪರಿಮಿತ ಪ್ರೀತಿ ರೋಗಪೀಡಿತರ ಬದುಕನ್ನೂ ಹೇಗೆ ಅರ್ಥಪೂರ್ಣಗೊಳಿಸಬಲ್ಲದು ಎಂಬುದಕ್ಕೆ ‘ಪಾ’ ಚಿತ್ರ ಒಂದು ಅತ್ಯುತ್ತಮ ಉದಾಹರಣೆ. ತಮ್ಮ ಮಕ್ಕಳು ಅನುಭವಿಸುತ್ತಿರುವ ನೋವನ್ನು ಕಂಡು ಪ್ರತಿಕ್ಷಣವೂ ನರಳುವ, ಸಾಯುವ ತಂದೆತಾಯಂದಿರನ್ನು ನಾವು ನೋಡಿದ್ದೇವೆ. ಆದರೆ ‘ಪಾ’ದಲ್ಲಿ ರೋಗವನ್ನಾಗಲಿ, ಅದರ ತೀವ್ರತೆಯನ್ನಾಗಲಿ, 13ನೇ ವರ್ಷಕ್ಕೇ ಬದುಕನ್ನು ಮೊಟಕುಗೊಳಿಸಲಿರುವ ವಿಧಿಯ ಲೀಲೆಯನ್ನಾಗಲಿ ನೀವು ಕಾಣುವುದಿಲ್ಲ. Life is a celebration! ಅದು ಎಷ್ಟೇ ಕ್ಷಣಿಕವಾಗಿರಲಿ ಅಲ್ಪ ಬದುಕನ್ನೂ ಹೇಗೆ ಅರ್ಥಪೂರ್ಣವಾಗಿ ಕಳೆಯಬಹುದು ಎಂಬುದು ಆರೋನಲ್ಲಿ ಕಾಣಬಹುದಾದರೆ, ನತದೃಷ್ಟ ಮಕ್ಕಳ ಬದುಕನ್ನೂ ಹೇಗೆ ಅರ್ಥಪೂರ್ಣಗೊಳಿಸಬಹುದು ಎಂಬುದು ವಿದ್ಯಾ ಎಂಬ ಅಮ್ಮ ತೋರಿಸುತ್ತಾಳೆ. ಅದರಲ್ಲೂ ಎರಡು ದೃಶ್ಯಗಳಂತೂ ತೀರಾ ಮನಮುಟ್ಟುವಂತಿವೆ. ಆರೋ ತನ್ನ ಮಗನೆಂಬುದು ಅಮೋಲ್‌ಗೆ ಗೊತ್ತಾದ ಬಳಿಕ ಮರಳಿ ವಿದ್ಯಾಳ ಜತೆ ಸೇರಲು ಮುಂದಾಗುತ್ತಾನೆ. ವಿದ್ಯಾ ಮಾತ್ರ ಯಾವ ಆಸಕ್ತಿಯನ್ನೂ ತೋರುವುದಿಲ್ಲ. ಗರ್ಭದಲ್ಲಿದ್ದ ತನ್ನ ಕುಡಿಯನ್ನೇ ತೆಗೆಸಿಹಾಕು, ನನಗೆ ಕರಿಯರ್ರೇ ಮುಖ್ಯ ಎಂದಿದ್ದ ಅಮೋಲ್ ಬಗ್ಗೆ ಅವಳ ಮನದಲ್ಲಿ ಯಾವ ಪ್ರೀತಿಯೂ ಉಳಿದಿರಲಿಲ್ಲ. ಆ ಸಂದರ್ಭವನ್ನು ಅತ್ತೆ ‘ಬಮ್’(ಅರುಂಧತಿ ನಾಗ್) ಒಂದೇ ಮಾತಿನಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಡುತ್ತಾಳೆ.

“ಏಕ್ ಔರತ್ ಅಕೇಲಿ ಅಪ್ನೆ ಬಚ್ಚೇ ಕೋ ಪಾಲ್ತಿ ಹೈ, ಉಸ್ಕಾ ದಿಲ್ ಸಕ್ತ್ ಹೋ ಜಾತಾ ಹೈ, ನರ್ಮ್ ಸಿರ್ಫ್ ಅಪ್ನೇ ಬಚ್ಚೇ ಕೆ ಲಿಯೇ”!

ಒಂದು ಹೆಣ್ಣು ಏಕಾಂಗಿಯಾಗಿ ತನ್ನ ಮಗುವನ್ನು ಸಾಕುತ್ತಾ ಹೋದಂತೆ ಆಕೆಯ ಮನಸ್ಸು ಎಲ್ಲರ ವಿಷಯದಲ್ಲೂ ಕಲ್ಲಾಗುತ್ತಾ ಹೋಗುತ್ತದೆ ತನ್ನ ಮಗುವೊಂದನ್ನು ಬಿಟ್ಟು. ಎಂಥ ಅರ್ಥಗರ್ಭಿತ ಮಾತು! ಗಂಡನನ್ನು ಕಳೆದುಕೊಂಡು, ಗಂಡನಿಂದ ತಿರಸ್ಕೃತಳಾಗಿ ಅಥವಾ ಪರಿಸ್ಥಿತಿಯ ಪ್ರಕೋಪಕ್ಕೆ ಒಳಗಾಗಿ ಏಕಾಂಗಿಯಾಗಿ ಮಕ್ಕಳನ್ನು ಸಾಕಿ-ಸಲಹುವ ಅಮ್ಮಂದಿರ ಮನಸ್ಥಿತಿಯೂ ಹೀಗೆ ಇರುತ್ತದೆ. ಮಕ್ಕಳ ಬಗ್ಗೆ ಅಂತಹ ಪೊಸೆಸಿವ್‌ನೆಸ್ ಬೆಳೆಸಿಕೊಂಡಿ ರುತ್ತಾರೆ, ಅದರ ಹಿಂದೆ ಅಂತಹ ಉತ್ಕಟ ಪ್ರೀತಿ ಅಡಗಿರುತ್ತದೆ. ಅದರಲ್ಲೂ “ಆರೋ ನನ್ನ ಮಗನೂ ಹೌದು” ಎಂದು ಅಮೋಲ್ ಹಕ್ಕು ಪ್ರತಿಪಾದಿಸುವಂತೆ ಮಾತನಾಡಿದಾಗ, ಕೆರಳಿ ಕೆಂಡಾಮಂಡಲವಾಗುವ ವಿದ್ಯಾ, “ಹುಟ್ಟಿಸಿದ ಮಾತ್ರಕ್ಕೆ ನೀನು ಅಪ್ಪನಾಗುವುದಿಲ್ಲ”(By lending your bloody sperm you cannot become his father) ಎನ್ನುತ್ತಾಳೆ. ಈ ಮಾತು ಇಡೀ ಗಂಡು ಕುಲವೇ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ.

ಅಂದಮಾತ್ರಕ್ಕೆ ಚಿತ್ರ ಬಹಳ ಫಿಲಾಸಫಿಕಲ್ ಆಗಿದೆ ಎಂದು ಭಾವಿಸಬೇಡಿ. ರೋಗವನ್ನಿಟ್ಟುಕೊಂಡು ನಿಮ್ಮ ಕಣ್ಣಲ್ಲಿ ನೀರು ತರಿಸಲು, ಅನುಕಂಪವನ್ನುಂಟುಮಾಡಲು ಕಿಂಚಿತ್ತೂ ಪ್ರಯತ್ನಿಸಿಲ್ಲ. ಅರ್ಥಪೂರ್ಣ ತಿಳಿಹಾಸ್ಯವೇ ಅದರಲ್ಲಿ ಎದ್ದು ಕಾಣುವ ಅಂಶ. ಒಮ್ಮೆ ನಮ್ಮ ಪಾರ್ಲಿಮೆಂಟ್ ನೋಡಲು ಆರೋ ಅಮೋಲ್ ಜತೆ ದಿಲ್ಲಿಗೆ ಹೋಗುತ್ತಾನೆ. ಅಮೋಲ್ ಯುವ ಸಂಸದ. ಸದಾ ಶುಭ್ರ ಬಿಳಿ ಕುರ್ತಾ, ಪೈಜಾಮ ಧರಿಸಿರುತ್ತಾನೆ. ಸಾಮಾನ್ಯವಾಗಿ ನಮ್ಮ ರಾಜಕಾರಣಿಗಳು ಧರಿಸುವುದೂ ಬಿಳಿ ವಸ್ತ್ರಗಳನ್ನೇ. ಅದನ್ನು ಗಮನಿಸಿದ ಆರೋಗೆ ಕುತೂಹಲವುಂಟಾಗುತ್ತದೆ.

ಆರೋ: ನಮ್ಮ ರಾಜಕಾರಣಿಗಳೇಕೆ ಯಾವಾಗಲು ಬಿಳಿ ಬಟ್ಟೆ ಹಾಕುತ್ತಾರೆ?

ಅಮೋಲ್: ಅದು… ಅದು… ಪರಿಶುದ್ಧತೆಯ ಸಂಕೇತ.

ಆರೋ ಸುಮ್ಮ ನಾಗುವುದಿಲ್ಲ….

ಆರೋ: ನೋಡು… ಯಾರಾದರೂ  ಸತ್ತಾಗ ಮನೆಯವರು ಸೂತಕದ ಸಂಕೇತವಾಗಿ ಬಿಳಿ ಬಟ್ಟೆ ಧರಿಸುತ್ತಾರೆ. ನಮ್ಮ ರಾಜಕಾರಣಿ ಗಳೇಕೆ ಬಿಳಿ ಬಟ್ಟೆ ಧರಿಸುತ್ತಾರೆಂದರೆ ದೇಶ ಸಾಯುತ್ತಿದೆ!!

ಅವನ ಹಾಸ್ಯಪ್ರeಯಂತೂ ಹೇಳಿತೀರದು. ಸಾವನ್ನು ಪಕ್ಕದಲ್ಲೇ ಇಟ್ಟುಕೊಂಡು ಕುಳಿತಿದ್ದರೂ ಆರೋ ಮಾತ್ರ ಶಾಶ್ವತವಾಗಿ ಬದುಕಿರುವವರಂತೆ ಇರುತ್ತಾನೆ. ಕೊನೆಯ ದೃಶ್ಯ. ಆರೋ ಮರಣಶಯ್ಯೆಯ ಮೇಲೆ ಮಲಗಿರುತ್ತಾನೆ. ಅಜ್ಜ(ಅಮೋಲ್‌ನ ತಂದೆ) ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದಿರುತ್ತಾನೆ.

ಅಜ್ಜ: ಮಗು… ಬೇಗ ಹುಷಾರಾಗು… ನಾವು ಆಟ ಆಡೋಣ, ದೇಶ ಸುತ್ತೋಣ.

ಆರೋ: ನನ್ನ ಹತ್ತಿರ ಟೈಮ್ ಇಲ್ಲ!

ಅಜ್ಜ: ಯಾರು ಹೇಳಿದ್ದು, ನಿನಗೆ ಏನೂ ಆಗುವುದಿಲ್ಲ.

ಆರೋ: ಟೈಮ್ ಇಲ್ಲ. ವಿಸಿಟಿಂಗ್ ಟೈಮ್ ಮುಗಿದಿದೆ!!

ಅಂದರೆ ರೋಗಿಗಳನ್ನು ನೋಡಲು ಆಸ್ಪತ್ರೆಯಲ್ಲಿ ನಿಗದಿಪಡಿಸ ಲಾಗಿರುವ ‘ವಿಸಿಟಿಂಗ್ ಅವರ್‍ಸ್’ ಬಗ್ಗೆ ಆರೋ ಹೇಳುತ್ತಿದ್ದಾನೆ ಎಂದು ಗೊತ್ತಾಗಿ ನೀವು ನಕ್ಕರೂ ಅದರ ಗೂಢಾರ್ಥ(ಸಾವು ಸನ್ನಿಹಿತ) ಅರ್ಥವಾದ ಕೂಡಲೇ ಮನಸ್ಸು ಭಾರವಾಗುತ್ತದೆ. ಇಡೀ ಚಿತ್ರದಲ್ಲಿ ಕಣ್ಣಲ್ಲಿ ನೀರು ತುಂಬಿಕೊಳ್ಳುವುದು ಇದೊಂದೇ ಸಂದರ್ಭದಲ್ಲಿ ಮಾತ್ರ. ಆರೋ ಮೊಟ್ಟಮೊದಲ ಬಾರಿಗೆ ಶಾಲೆಗೆ ಹೋದಾಗ ಅಚಾನಕ್ಕಾಗಿ ಆರೋನನ್ನು ನೋಡಿದ ಬಾಲಕಿ ಯೊಬ್ಬಳು ಚೀರಿಕೊಂಡು ಓಡಿಹೋಗುತ್ತಾಳೆ. ಅವನ ವಿಚಿತ್ರ ರೂಪವನ್ನು ಒಮ್ಮೆಲೆ ಕಂಡ ಅವಳು ದಿಗಿಲುಗೊಂಡು ಓಡಿ ಹೋಗಿರುತ್ತಾಳೆ. ಆರೋ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ವಿದ್ಯಾರ್ಥಿಗಳೆಲ್ಲರ ಜತೆಯಲ್ಲೂ ಬೆರೆಯುತ್ತಿದ್ದ ಆರೋ, ಅವಳನ್ನು ಮಾತ್ರ ಎಂದೂ ಮಾತನಾಡಿಸುವುದಿಲ್ಲ. ಆರೋ ಕೊನೆ ಕ್ಷಣವನ್ನು ಎದುರು ನೋಡುತ್ತಾ ಆಸ್ಪತ್ರೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಬರುವ ಆ ಬಾಲಕಿ, ‘ಸಾರಿ’ ಎಂಬ ಪದದಲ್ಲೇ ಆರೋನ ಚಿತ್ರವನ್ನು ಬರೆದಿರುವುದನ್ನು ಮುಂದೆ ಹಿಡಿಯುತ್ತಾಳೆ. ಆಗಲೂ ಆರೋನ ಮನಸ್ಸು ಕರಗುವುದಿಲ್ಲ. ಆಗ ಅವಳೊಂದು ಮಾತು ಹೇಳುತ್ತಾಳೆ.

“ಗಲತಿ ಕರ್‍ನೆ ವಾಲಾ ಗಲತಿ ಸೆಹ್ನೆ ವಾಲೆ ಸೆ ಜ್ಯಾದಾ ಸೆಹನ್ ಕರ್ತಾ ಹೈ”.

ತಪ್ಪಿನಿಂದ ಸಂಕಷ್ಟ ಎದುರಿಸುವವರಿಗಿಂತ ತಪ್ಪು ಮಾಡುವವರೇ ಹೆಚ್ಚು ನೋವುಣ್ಣುತ್ತಾರೆ ಎಂಬ ಅವಳ ಮಾತು ನಿಜಕ್ಕೂ ಅದ್ಭುತ. “ಪಾ” ಚಿತ್ರವನ್ನು ನೋಡಿದ ನಂತರ ಅದರಲ್ಲಿನ ಸಂದೇಶ ಮತ್ತು ಜೀವನ ಪ್ರೀತಿಯನ್ನು ನಿಮ್ಮ ಜತೆ ಹಂಚಿಕೊಳ್ಳಬೇಕೆನಿಸಿತು. ನಮ್ಮೆಲ್ಲರ ಮನೆ, ಕುಟುಂಬ, ನೆಂಟರಿಷ್ಟರಲ್ಲೂ ಕೂಡ ಆರೋಗ್ಯವನ್ನೋ, ಅಂಗಾಂಗಗಳನ್ನೋ, ಇಂದ್ರಿಯಗಳನ್ನೋ ಕಳೆದುಕೊಂಡವರಿರುತ್ತಾರೆ. ನಾವು ಹೇಗೆ ವರ್ತಿಸಿ ಬಿಡುತ್ತೇವೆಂದರೆ ಯಾರಾದರೂ ಹಾಸಿಗೆ ಹಿಡಿದಿದ್ದಾರೆ ಎಂದರೆ ಉಳಿದವರು ಕೊರಗಲು ಆರಂಭಿಸಿ ಅವರ ಜೀವನವನ್ನು ಇನ್ನೂ ನರಕ ಮಾಡಿ ಬಿಡುತ್ತೇವೆ. ಒಂದು ಸಾರಿ ಆರೋ ಪ್ಲೇ ಗ್ರೌಂಡ್‌ನಲ್ಲಿ ಆಟವಾಡುತ್ತಿರುತ್ತಾನೆ. ಅವನ ವಿಚಿತ್ರ ರೂಪವನ್ನು ಕಂಡ ಒಬ್ಬಾಕೆ ಬಂದು, “ಇವನ್ಯಾರು?’ ಎಂದು ಪ್ರಶ್ನಿಸುತ್ತಾಳೆ.

ವಿದ್ಯಾ: ನನ್ನ ಮಗ

ಆಕೆ: ಏನಾಗಿದೆ?

ವಿದ್ಯಾ: ಅವನಿಗೆ ಪ್ರೊಜೇರಿಯಾ ಎಂಬ ರೋಗವಿದೆ. ಅದು ಕೋಟಿಗೊಬ್ಬರಿಗೆ ಮಾತ್ರ ಬರುತ್ತದೆ. He is a lucky boy!! ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.

ಒಮ್ಮೆ ‘ಪಾ’ ಚಿತ್ರವನ್ನು ನೋಡಿ, ನೀವು ಜೀವನವನ್ನು ನೋಡುವ ರೀತಿಯೇ ಬದಲಾಗಿಬಿಡಬಹುದು.

Hats off to Amitabh Bachchan and R. Balki!

ನೋ..ನೋ..ನೋ.. ವಾಚ್ ದಿ ಬಾಲ್, ಹಿಟ್ ದಿ ಬಾಲ್!
“ಸಚಿನ್ ತೆಂಡೂಲ್ಕರ್‌ನನ್ನು ನಾನು ಮೊದಲ ಬಾರಿಗೆ ಟಿವಿ ಪರದೆ ಮೇಲೆ ನೋಡಿದ್ದು 1992ರಲ್ಲಿ. ಅದು ವಿಶ್ವಕಪ್ ಪಂದ್ಯಾವಳಿ. ನಾನಾಗ ೭ನೇ ತರಗತಿಯಲ್ಲಿದ್ದೆ. ಪರೀಕ್ಷೆ ನಡೆಯುತ್ತಿತ್ತು. ಚಕ್ಕರ್ ಹೊಡೆದಿದ್ದೆ. ಏಕೆಂದರೆ ವಿಶ್ವಕಪ್ ನಡೆಯುತ್ತಿದ್ದುದು ಆಸ್ಟ್ರೇಲಿಯಾದಲ್ಲಿ. ಪಂದ್ಯಗಳು ಬೆಳಗಿನ ಜಾವ ಪ್ರಾರಂಭವಾಗುತ್ತಿದ್ದವು. ಸ್ಕೂಲ್ ಟೈಮಿಗೂ ಕ್ರಿಕೆಟ್ ಮ್ಯಾಚುಗಳಿಗೂ ಮಧ್ಯೆ ಸಮಯ ಹೊಂದಾಣಿಕೆ ಯಾಗುತ್ತಿರಲಿಲ್ಲ. ಹಾಗಾಗಿ ಪರೀಕ್ಷೆಗೆ ಶರಣುಹೊಡೆದಿದ್ದೆ. ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡುತ್ತಿದ್ದ ವಿಧಾನ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನೆನಪಿನ ಬುತ್ತಿಯೊಳಗೆ ಇನ್ನೂ ಹಸಿಹಸಿಯಾಗಿದೆ. ನಜಾಫ್‌ಗಢದ ನಮ್ಮ ಹಳೇ ಮನೆಯಲ್ಲಿ ಕೈಯಲ್ಲಿ ಬ್ಯಾಟ್ ಎತ್ತಿಕೊಂಡು, ಟಿವಿ ಮುಂದೆ ನಿಂತುಕೊಂಡು, ಆತನ ಆಟದ ಶೈಲಿಯನ್ನು ಅನುಕರಣೆ ಮಾಡಲಾರಂಭಿಸಿದೆ. ನನ್ನ ದೇಹವನ್ನು ಸ್ಥಿರವಾಗಿಟ್ಟುಕೊಂಡು, ಶಿರವನ್ನೂ ನೆಟ್ಟಗೆ ನೆಟ್ಟುಕೊಂಡು, ಸಚಿನ್‌ನಂತೆ ಸ್ಟ್ರೈಟ್‌ಡ್ರೈವ್ ಮಾಡಲು ಅಥವಾ ಬ್ಯಾಕ್‌ಫುಟ್‌ನಲ್ಲಿ ನಿಂತು ಪಂಚ್ ಮಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿರಲಿಲ್ಲ”.

“1993&94ರ ಸಾಲಿನಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ಮಾಡಿತು. ಮ್ಯಾಚುಗಳು ನಡುರಾತ್ರಿ ಆರಂಭವಾಗುತ್ತಿದ್ದವು. ಆ ಸಮಯಕ್ಕೆ ಎದ್ದು ಟಿವಿ ಹಾಕಿಕೊಂಡು ನೆರೆಹೊರೆಯವರಿಗೆಲ್ಲ ತೊಂದರೆ ಕೊಡುತ್ತಿದ್ದೆ. ಅಷ್ಟೆಲ್ಲಾ ಮಾಡುತ್ತಿದ್ದುದು ಸಚಿನ್ ಆಟ ನೋಡುವುದಕ್ಕಾಗಿ. ಆತ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮೊಟ್ಟಮೊದಲ ಬಾರಿಗೆ ಆಡಿದ್ದೇ ನ್ಯೂಜಿಲೆಂಡ್ ಸರಣಿಯಲ್ಲಿ. ಕಾಲ ಉರುಳುತ್ತಾ ಬಂತು, ನಾನು ಸಚಿನ್‌ನ ಕ್ರೀಡಾ ಜೀವನವನ್ನು ಹಿಂಬಾಲಿಸುತ್ತಲೇ ಬಂದೆ. ಅದರಲ್ಲೂ ಭಾರತದ ತಂಡ ಸೇರಿದ ನಂತರ ಆತನ ಬಹುತೇಕ ಎಲ್ಲ ಇನಿಂಗ್ಸುಗಳನ್ನೂ ನೋಡಿದ್ದೇನೆ. ನಾವಿಬ್ಬರೂ ಬಲುದೂರ ಬಂದಿದ್ದೇವೆ. ‘ನಾನು ಒಬ್ಬ ಬ್ಯಾಟ್ಸ್ ಮನ್ ಆಗಿ ಹೆಚ್ಚೂಕಡಿಮೆ ಆತನ ಶೈಲಿಯನ್ನು ಹೋಲುತ್ತೇನೆ’ ಎಂದು ಸ್ವತಃ ತೆಂಡೂಲ್ಕರ್ ಹೇಳಿದರು. ಅದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು? ಕನಸು ನಿಜವಾಗಿದೆ ಎನಿಸುತ್ತದೆ. ಒಂದು ವೇಳೆ ನಾನು ನಾಳೆಯೇ ಸತ್ತರೂ ಖುಷಿಯಿಂದಲೇ ಸಾಯುತ್ತೇನೆ. ಏಕೆಂದರೆ ನಾನು ಕ್ರಿಕೆಟ್ ಆಡಿದ್ದೇ ತೆಂಡೂಲ್ಕರ್‌ನಿಂದಾಗಿ ಹಾಗೂ ನನ್ನಂತೆಯೇ ಆಡುತ್ತೀಯಾ ಎಂದು ಸ್ವತಃ ತೆಂಡೂಲ್ಕರ್ ಅವರಿಂದಲೇ ಹೇಳಿಸಿಕೊಳ್ಳುವುದಕ್ಕಿಂತ ದೊಡ್ಡ ಮೆಚ್ಚುಗೆ ಯಾವುದಿದೆ?”

ಮೂರ್ನಾಲ್ಕು ತಿಂಗಳ ಹಿಂದೆ ‘ಕ್ರಿಕ್‌ಇನ್ಫೋ ಡಾಟ್‌ಕಾಂ’ನಲ್ಲಿ ಪ್ರಕಟವಾಗಿದ್ದ ಇಂತಹ ತುಣುಕನ್ನು ಓದುವಾಗ ಒಂದು ಕ್ಷಣ ಕಣ್ಣನ್ನೇ ನಂಬುವುದು ಕಷ್ಟವಾಯಿತು!

ಅಷ್ಟಕ್ಕೂ ಹಾಗಂತ ಹೇಳಿದವನು ಒಬ್ಬ ಸಾಮಾನ್ಯ ಸಾಧಕನಾಗಿರಲಿಲ್ಲ. ಆ ಮೆಂಡಿಸ್‌ಗೆ, ಮುರಳಿಗೆ, ಮೆಗ್ರಾಥ್‌ಗೆ, ಶೋಯೆಬ್ ಅಖ್ತರ್‌ಗೆ, ಬ್ರೆಟ್ ಲೀಗೆ ಚೆನ್ನಾಗಿ ಬಾರಿಸಲು ಅವನೇ ಸರಿ ಎಂದು ನಾವೆಲ್ಲ ಹೇಳುವ ವೀರೇಂದ್ರ ಸೆಹವಾಗ್! ಹಿಂದೆಲ್ಲಾ ಟೆಸ್ಟ್ ಮ್ಯಾಚ್ ಪ್ರಾರಂಭವಾಯಿತೆಂದರೆ ಮೊದಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾಗುವುದನ್ನೇ ಕಾದುನೋಡುತ್ತಾ ಕುಳಿತಿರುತ್ತಿದ್ದೆವು. ಸಚಿನ್‌ನ ಆಟ ನೋಡುವ ತವಕ ಹಾಗಿರುತ್ತಿತ್ತು. ಆನೆ ತೂಕದ ಆತನ ಬ್ಯಾಟ್‌ನಿಂದ ಹೊರಹೊಮ್ಮುತ್ತಿದ್ದ ಕವರ್‌ಡ್ರೈವ್, ಸ್ಟ್ರೈಟ್‌ಡ್ರೈವ್‌ಗಳು ಅಷ್ಟು ಮುದಕೊಡುತ್ತಿದ್ದವು. ಇವತ್ತು ಆರಂಭಿಕ ಬ್ಯಾಟ್ಸ್‌ಮನ್ ಸೆಹವಾಗ್ ಇದ್ದರಷ್ಟೇ ಟೆಸ್ಟ್ ಮ್ಯಾಚನ್ನೂ ನೋಡ ಬಹುದು ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕದಿನ, 20:20 ಮ್ಯಾಚ್‌ಗಳ ಅಬ್ಬರದಲ್ಲೂ ಟೆಸ್ಟ್ ಮ್ಯಾಚನ್ನು ನೋಡುವಂತೆ ಮಾಡಿದ್ದಾನೆ. ಸ್ವತಃ ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್ ಆದರೂ ಏಕಲವ್ಯನಂತೆ ತನ್ನೆಲ್ಲ ಏಳಿಗೆಗೆ ಗುರು ತೆಂಡೂಲ್ಕರ್‌ನೇ ಕಾರಣ ಎನ್ನುವ, ನಾನು ಕ್ರಿಕೆಟ್ ಆಡಿದ್ದೇ ಆತನಿಂದಾಗಿ ಎನ್ನುವ ವೀರೇಂದ್ರ ಸೆಹವಾಗ್‌ನ ವಿನಮ್ರತೆಗೊಂದು ಸಲಾಮು.

ಸಚಿನ್-ಸೆಹವಾಗ್ ಸಂಬಂಧ ಗುರು-ಶಿಷ್ಯನ ಬಾಂಧವ್ಯವನ್ನು ಮೀರಿ ಸಾಗುತ್ತದೆ.

ಅದು 2004, ಮಾರ್ಚ್ 29. ಮುಲ್ತಾನ್‌ನಲ್ಲಿ ಭಾರತ- ಪಾಕ್ ನಡುವೆ ಮೊದಲ ಟೆಸ್ಟ್ ನಡೆಯುತ್ತಿತ್ತು. ಸೆಹವಾಗ್-ಸಚಿನ್ ಜತೆಗೂಡಿ ಆಡುತ್ತಿದ್ದರು. ಆ ಪಂದ್ಯದಲ್ಲಿ ಸೆಹವಾಗ್ ಮೊದಲ ತ್ರಿಶತಕ ಬಾರಿಸಿದ. ಪ್ರತಿಬಾರಿ ಸೆಹವಾಗ್ ೯೦ರ ಗಡಿದಾಟಿದಾಗಲೂ ಹತ್ತಿರಕ್ಕೆ ಬರುತ್ತಿದ್ದ ತೆಂಡೂಲ್ಕರ್, ‘ಸಿಕ್ಸ್ ಏನಾದರೂ ಹೊಡೆಯಲು ಯತ್ನಿಸಿದರೆ ನಿನ್ನ ತಿಕದ ಮೇಲೆ ಹೊಡೆಯುತ್ತೇನೆ’ ಎಂದು ಗದರಿಸುತ್ತಿದ್ದ. ಅದನ್ನು ಸೆಹವಾಗ್ ಈ ರೀತಿ ನೆನಪಿಸಿಕೊಳ್ಳುತ್ತಾನೆ-“ಬ್ಯಾಟಿಂಗ್ ವೇಳೆ ಮಾತುಕತೆ ನಡೆಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು ಸಚಿನ್‌ಗೆ ಇಷ್ಟ. ಕೆಲವೊಮ್ಮೆ ಗಂಭೀರವದನನಾಗಿ ಸಲಹೆ, ಸೂಚನೆ, ಎಚ್ಚರಿಕೆಯನ್ನೂ ಕೊಡುತ್ತಾನೆ. ಅವತ್ತು ಇಡೀ ದಿನ ನಾವಿಬ್ಬರೂ ಜತೆಯಾಗಿ ಆಡಿದೆವು. ನೋಡು… 2003ರಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ 195 ರನ್ ಗಳಿಸಿದ್ದಾಗ ನೀನು ಸಿಕ್ಸ್ ಹೊಡೆಯಲು ಯತ್ನಿಸಿ ಔಟಾದೆ. ಹಾಗಾಗಿ ಅದುವರೆಗೂ ಉತ್ತಮ ಸ್ಥಿತಿಯಲ್ಲಿದ್ದರೂ ಭಾರತ ಒಳ್ಳೆಯ ಸ್ಕೋರ್ ಗಳಿಸದೆ, ಪಂದ್ಯವನ್ನೇ ಸೋಲಬೇಕಾಗಿ ಬಂತು. ಹಾಗೆಂದು ನನ್ನ ತಪ್ಪನ್ನು ಮನವರಿಕೆ ಮಾಡಿಕೊಟ್ಟ. ಈ ಬಾರಿಯೂ ಸಿಕ್ಸ್ ಹೊಡೆಯಲು ಯತ್ನಿಸಿದರೆ ತಿಕಕ್ಕೆ ಹೊಡೆಯುತ್ತೇನೆ ಎಂದು ಗದರಿಸಿಯೂ ಬಿಟ್ಟ. ನಾನು ಆ ಟೆಸ್ಟ್‌ನಲ್ಲಿ ೯೦ರ ಗಡಿಯಲ್ಲಿ ಸಿಕ್ಸ್ ಹೊಡೆಯಲೇ ಇಲ್ಲ. ಆದರೆ 300 ರನ್ ಹತ್ತಿರಕ್ಕೆ ಬಂದಾಗ ತಡೆದುಕೊಳ್ಳಲಾಗಲಿಲ್ಲ. ಸಚಿನ್ ಬಳಿಗೆ ಹೋಗಿ, ನೀನು ಬೇಕಾದರೆ ನನ್ನ ತಿಕಕ್ಕೆ ಹೊಡೆ. ಆದರೆ ನಾನು ಸಿಕ್ಸ್ ಹೊಡೆಯುವುದು ಹೊಡೆಯುವುದೇ ಎಂದೆ. ಹಾಗೆಯೇ ಸಕ್ಲೇನ್ ಮುಷ್ತಾಕ್ ಬಾಲಿಗೆ ಸಿಕ್ಸ್ ಹೊಡೆದು ಮೊದಲ ಟ್ರಿಪಲ್ ಸೆಂಚುರಿ ಮುಗಿಸಿದೆ”!!

ಎರಡು ಬಾರಿ ಟ್ರಿಪಲ್ ಸೆಂಚುರಿ ಹೊಡೆದಿರುವ, ಮೂರನೆಯ ದ್ದನ್ನು ನಿನ್ನೆ ಶುಕ್ರವಾರ 7 ರನ್‌ಗಳ ಅಂತರದಿಂದ ಕಳೆದುಕೊಂಡಿರುವ ವೀರೇಂದ್ರ ಸೆಹವಾಗ್ ಟ್ರಿಪಲ್ ಸೆಂಚುರಿ ಬಾರಿಸಿರುವ ಏಕೈಕ ಭಾರತೀಯ. ಎರಡು ಬಾರಿ ಟ್ರಿಪಲ್ ಸೆಂಚುರಿ ಬಾರಿಸಿರುವವರು ಡಾನ್ ಬ್ರಾಡ್ಮನ್ ಹಾಗೂ ಬ್ರಯಾನ್ ಲಾರಾ ಬಿಟ್ಟರೆ ಸೆಹವಾಗ್ ಮಾತ್ರ. ಆತನ ಆರಾಧ್ಯದೈವ ಸಚಿನ್‌ಗೂ ಸಾಧ್ಯವಾಗದ ಸಾಧನೆಯನ್ನು ಸೆಹವಾಗ್ ಮಾಡಿದ್ದಾನೆ. ಆತನ ಆಟವನ್ನು ಧೈರ್ಯ ಅನ್ನಬೇಕೋ, ಹುಚ್ಚಾಟಿಕೆ ಅಂತ ಕರೆಯಬೇಕೋ ಗೊತ್ತಾಗುವುದಿಲ್ಲ, ಆದರೆ ಸೆಹವಾಗ್ ಇದ್ದರೆ ಟಾರ್ಗೆಟ್ ೫೦೦ ರನ್‌ಗಳಾದರೂ ಬೆನ್ನಟ್ಟಬಹುದು ಎಂಬ ಆತ್ಮವಿಶ್ವಾಸವನ್ನು ದೇಶವಾಸಿಗಳ ಮನದಲ್ಲಿ ತುಂಬಿದ್ದಾನೆ. ಲಹರಿಯಲ್ಲಿರುವಾಗ ಸೆಹವಾಗ್‌ನನ್ನು ಯಾರಿಗೂ ಕಟ್ಟಿಹಾಕಲು ಸಾಧ್ಯವಿಲ್ಲ. ವಿಕೆಟ್ ಕೊಟ್ಟಾನು, ಆದರೆ ಸುಮ್ಮನೆ ಕುಟ್ಟುವವನಲ್ಲ. ಸಾಮಾನ್ಯವಾಗಿ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳನ್ನು ಕೆಣಕುತ್ತಾರೆ, ಬಾ… ಹೊಡೆ ನೋಡೋಣ ಎಂದು ಪ್ರಚೋದಿಸುತ್ತಾರೆ. ಆದರೆ ಸೆಹವಾಗ್‌ನನ್ನು ಯಾರಾದರೂ ಒಂದೇ ಕಡೆ ಬಾಲ್ ಹಾಕಿ ಕಟ್ಟಿಹಾಕಲು ಪ್ರಯತ್ನಿಸಿದರೆ ಆತನೇ ಬೌಲರ್‌ಗೆ ಸವಾಲು ಹಾಕುತ್ತಾನೆ.

ಆತ ಎರಡನೇ ಟ್ರಿಪಲ್ ಸೆಂಚುರಿ ಬಾರಿಸಿದಾಗ ಇಂಥದ್ದೇ ಒಂದು ಘಟನೆ ನಡೆಯಿತು.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಆರುನೂರು ಚಿಲ್ಲರೆ ರನ್ ಬೆನ್ನುಹತ್ತಿ ಹೊರಟಿದ್ದ ಭಾರತ ಸೆಹವಾಗ್‌ನ ಅದ್ಭುತ ಆಟದ ಬಲದಿಂದ ಉತ್ತಮ ಸ್ಥಿತಿಯಲ್ಲೇ ಇತ್ತು. ಸೆಹವಾಗ್ 291ರಲ್ಲಿದ್ದ. ಆತನನ್ನು ಕಟ್ಟಿಹಾಕಲೇಬೇಕು ಎಂಬ ಉದ್ದೇಶದಿಂದ ದಕ್ಷಿಣ ಆಫ್ರಿಕಾದ ನಾಯಕ ಗ್ರಹಾಂ ಸ್ಮಿತ್, ಪಾಲ್ ಹ್ಯಾರಿಸ್‌ರಿಂದ ನೆಗೆಟಿವ್ ಲೈನ್‌ನಲ್ಲೇ ಬೌಲಿಂಗ್ ಮಾಡಿಸತೊಡಗಿದರು. ಆ ಮೂಲಕ ಸೆಹವಾಗ್‌ನನ್ನು ಹತಾಶೆಗೊಳಿಸಲು ಮುಂದಾದರು. ಬಾಲ್‌ಗಳು ಪ್ಯಾಡ್‌ಗೆ ಬಡಿಯಲಾರಂಭಿಸಿದವು. ಹೀಗೇ ಬೌಲಿಂಗ್ ಮಾಡುತ್ತಿದ್ದರೆ ಟ್ರಿಪಲ್ ಸೆಂಚುರಿ ಪೂರ್ಣಗೊಳಿಸಲು ಇನ್ನೂ 10-15 ನಿಮಿಷ ಬೇಕಾಗುತ್ತದೆ ಎಂದು ಭಾವಿಸಿದ ಸೆಹವಾಗ್, ‘ನೀನು ರೌಂಡ್ ದಿ ವಿಕೆಟ್ ಬಂದು ಬಾಲ್ ಹಾಕಿದರೆ ಮೊದಲ ಬಾಲಿಗೇ ಸಿಕ್ಸ್ ಹೊಡೆಯುತ್ತೇನೆ’ ಎಂದು ಪಾಲ್ ಹ್ಯಾರಿಸ್‌ಗೆ ಸವಾಲು ಹಾಕಿದ. ಆತ ಕೂಡ ಸವಾಲು ಒಪ್ಪಿಕೊಂಡು ರೌಂಡ್ ದಿ ವಿಕೆಟ್ ಬಾಲ್ ಹಾಕಿದ, ಸೆಹವಾಗ್ ಚೆಂಡನ್ನು ಬೌಲರ್ ತಲೆಮೇಲೆತ್ತಿ ಸಿಕ್ಸ್ ಹೊಡೆದ! ಕೆಲ ಕ್ಷಣಗಳಲ್ಲೇ ಟ್ರಿಪಲ್ ಸೆಂಚುರಿ ಕೂಡ ಪೂರೈಸಿದ.

ಆತನನ್ನು ಕಿಚಾಯಿಸಿ ಗೂಸಾ ತಿಂದು ಮೆಚ್ಚುಗೆ ಸೂಚಿಸಿದ ಬೌಲರ್‌ಗಳೂ ಇದ್ದಾರೆ.

ಮೊದಲ ತ್ರಿಶತಕ ಹೊಡೆದ ಮುಲ್ತಾನ್ ಟೆಸ್ಟ್‌ನಲ್ಲಿ ಆಡುತ್ತಿರುವಾಗ, “ಬರೀ ಥರ್ಡ್ ಮ್ಯಾನ್‌ನಲ್ಲೇ ಏಕೆ ಹೊಡೆಯುತ್ತೀಯಾ?” ಎಂದು ಶೋಯೆಬ್ ಅಖ್ತರ್ ಕಿಚಾಯಿಸಿದರು. ಅಂದರೆ ಆ ಶಾಟ್ ಬಿಟ್ಟರೆ ಬೇರಾವುವೂ ಗೊತ್ತಿಲ್ಲವೆ ಎಂಬಂತಿತ್ತು ಅಖ್ತರ್ ಪ್ರಶ್ನೆ. ಮುಂದಿನ ಬಾಲನ್ನು ಸ್ಟ್ರೈಟ್ ಡ್ರೈವ್ ಮಾಡಿ ಬೌಂಡರಿಗಟ್ಟಿದ ಸೆಹವಾಗ್, “ಅದು ಒಳ್ಳೆಯ ಹೊಡೆತ ಎಂಬುದನ್ನು ನೀನಿಗ ಒಪ್ಪಿಕೊಳ್ಳಲೇಬೇಕು” ಎಂದಾಗ ಶೋಯೆಬ್ ಅಖ್ತರ್ ತಲೆಯಾಡಿಸಿ ಹೋಗಿದ್ದರು. ಸೆಹವಾಗ್ ಹೇಗೆ ಯೋಚಿಸುತ್ತಾನೆ ಎಂಬುದನ್ನು ಮಾಜಿ ನಾಯಕ ಸೌರವ್ ಗಂಗೂಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದರು.

“ಸೆಹವಾಗ್‌ನ ತಲೆ ಹೇಗೆ ವರ್ಕ್ ಆಗುತ್ತಿರುತ್ತದೆ ಎಂಬುದನ್ನು ತಿಳಿಯಬೇಕೆಂದರೆ ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ ಪೆವಿಲಿಯನ್‌ನಲ್ಲಿ ಸೆಹವಾಗ್ ಪಕ್ಕ ಕುಳಿತುಕೊಳ್ಳಿ… ಪ್ರತಿಕ್ಷಣಕ್ಕೂ, ‘ಚೌಕಾ ಗಯಾ’… ‘ಛಕ್ಕಾ ಗಯಾ’… ಎಂದು ತಲೆಯಾಡಿಸುತ್ತಾ ಇರುತ್ತಾನೆ. ಅಂದರೆ ಆತನ ಪ್ರಕಾರ ಬೌಂಡರಿಗೆ, ಸಿಕ್ಸರ್‌ಗೆ ಹೊಡೆ ಯಬಹುದಾದ ಬಾಲಿನ ಲಾಭ ಪಡೆಯಲು ಬ್ಯಾಟ್ಸ್‌ಮನ್ ವಿಫಲನಾದಾಗ ಅಯ್ಯೋ… ಫೋರ್ ಮಿಸ್ಸಾಯ್ತು, ಸಿಕ್ಸ್ ಮಿಸ್ಸಾಯ್ತು ಎಂದು ತನ್ನ ನಿರಾಸೆ ವ್ಯಕ್ತಪಡಿಸುತ್ತಿರುತ್ತಾನೆ”.

ಸೆಹವಾಗ್ ಆಡುವುದೇ ಹಾಗೆ. ಇವತ್ತು ಆತ ಎರಡು ಟ್ರಿಪಲ್, 6 ಡಬಲ್ ಸೆಂಚುರಿಗಳನ್ನು ಬಾರಿಸಿದ್ದರೆ ಅದಕ್ಕೆ ಇಂತಹ ಮನಃಸ್ಥಿತಿಯೇ ಕಾರಣ. Life is all about living on the edge ಅಂತಾರಲ್ಲಾ ಆ ಮಾತು ಕ್ರಿಕೆಟ್ ವಿಷಯದಲ್ಲಿ ಸೆಹವಾಗ್‌ಗೆ ಹೇಳಿ ಮಾಡಿಸಿದಂತಿದೆ. ಮೊದಲ ಬಾಲ್‌ಗೆ ಸಿಕ್ಸ್ ಹೊಡೆದು, ನೆಕ್ಸ್ಟ್ ಬಾಲ್‌ಗೆ ಬೌಲ್ಡ್ ಆಗಬಹುದು. ಆದರೆ ಔಟಾಗಬಹುದು ಎಂಬ ಸಣ್ಣ ಅನುಮಾನ, ಅಳುಕು ಆತನ ಮನದೊಳಕ್ಕೆ ನುಸುಳಲು ಸಾಧ್ಯವಿಲ್ಲ. ೨೦೦೭, ಸೆಹವಾಗ್ ಪಾಲಿಗೆ ದುಃಸ್ವಪ್ನವೆಂದೇ ಹೇಳಬಹುದು. ಆತನ ಫಾರ್ಮ್ ಎಷ್ಟು ಕುಸಿದು ಹೋಯಿತೆಂದರೆ ತಂಡದಲ್ಲಿ ಸ್ಥಾನ ಕೂಡ ಕಳೆದುಕೊಳ್ಳಬೇಕಾಯಿತು. ಅಂದು ಸಹಾಯಕ್ಕೆ ಬಂದವರು ಹಾಲಿ ಮುಖ್ಯ ಆಯ್ಕೆದಾರ ಹಾಗೂ ಮೊನ್ನೆ ದ್ವಿಶತಕ ಪೂರೈಸಿದಾಗ ಸಣ್ಣಮಕ್ಕಳಂತೆ ಶಿಳ್ಳೆ ಹಾಕುತ್ತಿದ್ದ ಕೃಷ್ಣಮಾಚಾರಿ ಶ್ರೀಕಾಂತ್. “ನೀನೊಬ್ಬ bloody talented player. ಕೆಟ್ಟ ಕಾಲ ಮುಗಿದ ನಂತರ ನೀನು ಡಬಲ್ ಏಕೆ ಟ್ರಿಪಲ್ ಸೆಂಚುರಿ ಕೂಡ ಹೊಡೆಯುತ್ತೀಯಾ. ಕುಟುಂಬದವರ ಜತೆ ಸಾಕಷ್ಟು ಸಮಯ ಕಳೆ. ಕಾಲ ಬಂದಾಗ ಒಳ್ಳೆಯ ಸ್ಕೋರ್ ಮಾಡುತ್ತೀಯಾ” ಎಂದು ಶ್ರೀಕಾಂತ್ ಹೇಳಿದ್ದರಂತೆ. 2008ರಲ್ಲಿ ತಂಡಕ್ಕೆ ಮರಳಿದ ಸೆಹವಾಗ್ ಶ್ರೀಲಂಕಾ ವಿರುದ್ಧ ಡಬಲ್, ದಕ್ಷಿಣ ಆಫ್ರಿಕಾದ ವಿರುದ್ಧ ಟ್ರಿಪಲ್ ಸೆಂಚರಿ ಬಾರಿಸಿದ!

ಒಮ್ಮೆ ಇಂಗ್ಲೆಂಡ್‌ನ ಖ್ಯಾತ ಬ್ಯಾಟ್ಸ್‌ಮನ್ ಪಾಲ್ ಕಾಲಿಂಗ್‌ವುಡ್, “ಬೌಲರ್ ಬಾಲ್ ಎಸೆಯಲು ಓಡಿಬರುತ್ತಿರುವಾಗ ನಿನ್ನ ತಲೆಯಲ್ಲಿ ಯಾವ ಆಯೋಚನೆ ಬರುತ್ತದೆ? ಈ ಬಾರಿ ಉತ್ತಮ ಶಾಟ್ ಹೊಡೆಯಲೇಬೇಕು ಎಂದನಿಸುತ್ತಿರುತ್ತದೆಯೇ?” ಎಂದು ಸೆಹವಾಗ್‌ನನ್ನು ಕೇಳಿದಾಗ, “ನೋ… ನೋ…. ನೋ… ವಾಚ್ ದಿ ಬಾಲ್, ಹಿಟ್ ದಿ ಬಾಲ್….!” ಎಂದಿದ್ದ ನಮ್ಮ ಸೆಹವಾಗ್!

Keep hitting Sehwag!!

ಅಟಲ್ ಸೋಗಲಾಡಿಯೇ! ಹಾಂ, ಏನಂದ್ರಿ ಲಿಬರ್‍ಹಾನ್?
TRC ಅಥವಾ Truth and Reconciliation Commission!

“ಸತ್ಯ ಶೋಧನೆ ಹಾಗೂ ರಾಜಿ” ಎಂಬ ಈ ಆಯೋಗದ ಹೆಸರನ್ನು ಬಹುಶಃ ನೀವು ಕೇಳಿರಬಹುದು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅದರ ಅಧ್ಯಕ್ಷರಾಗಿದ್ದರು. ಡಾ. ಅಲೆಕ್ಸ್ ಬೊರೈನ್, ಮೇರಿ ಬರ್ಟನ್, ವಕೀಲ ಕ್ರಿಸ್ ಡಿ ಜಾಗರ್, ಬೊಂಗಾನಿ ಫಿಂಕಾ, ರೆವೆರೆಂಡ್ ಖೋಝಾ ಮೊಜೋ, ಡುಮಿಸಾ ಎನ್ಸೆಬೆಝಾ, ಯಾಸ್ಮಿನ್ ಸೂಕಾ ಮುಂತಾದ ಖ್ಯಾತನಾಮರು ಸದಸ್ಯರಾಗಿದ್ದರು. ಅದು ಮೂರು ಉಪಸಮಿತಿಗಳನ್ನು ನೇಮಕ ಮಾಡಿತು.

1. 1960ರಿಂದ 1994ರವರೆಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳ ಪರಿಶೋಧನೆ ಹಾಗೂ ತನಿಖಾ ಸಮಿತಿ

2. ವರ್ಣಭೇದ ನೀತಿಯಿಂದಾಗಿ ಸಂತ್ರಸ್ತರಾಗಿದ್ದ ಜನರಿಗೆ ಪುನರ್ವಸತಿ ಕಲ್ಪಿಸುವ ಸಮಿತಿ

3. ಕ್ಷಮಾದಾನ ಯಾಚಿಸಿದವರ ಅಹವಾಲನ್ನು ಪರಿಗಣಿಸಿ ಜೀವದಾನ ನೀಡುವ ಸಮಿತಿ

ಆ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದವರನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಲಾಯಿತು, ವರ್ಣ ಭೇದ ನೀತಿಯ ಕಾಲದಲ್ಲಿ ದೌರ್ಜನ್ಯವೆಸಗಿದವರನ್ನು ಕಟಕಟೆಗೆ ಕರೆತಂದು ನಿಲ್ಲಿಸಲಾಯಿತು. ತಪ್ಪನ್ನು ಒಪ್ಪಿಕೊಂಡವರಿಗೆ ಕ್ಷಮಾ ದಾನ ನೀಡುವ ಅಧಿಕಾರವನ್ನೂ ಆಯೋಗಕ್ಕೆ ನೀಡಲಾಗಿತ್ತು. ಈ ಆಯೋಗ ರಚನೆಯಾಗಿದ್ದು 1995ರಲ್ಲಿ. ಅದಕ್ಕೂ ಮೊದಲು 1994, ಏಪ್ರಿಲ್ 27ರಂದು ನಡೆದ ದಕ್ಷಿಣ ಆಫ್ರಿಕಾದ ಮೊಟ್ಟ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ) ಶೇ. 62ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿತ್ತು. 1994, ಮೇ 10ರಂದು ದೇಶದ ಮೊದಲ ಕಪ್ಪುವರ್ಣೀಯ ಅಧ್ಯಕ್ಷರಾಗಿ ನೆಲ್ಸನ್ ಮಂಡೇಲಾ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲಿಗೆ ವರ್ಣಭೇದ ಸಮಸ್ಯೆ ಮುಗಿಯಿತೆಂದು ಅವರು ಭಾವಿಸಲಿಲ್ಲ. ಸುಮಾರು ಮೂರೂವರೆ ದಶಕಗಳ ಕಾಲ ಪರಸ್ಪರ ಬಡಿದಾಡುತ್ತಿದ್ದ ಬಿಳಿಯರು ಹಾಗೂ ಕರಿಯರ ನಡುವಿನ ಕಿತ್ತಾಟಕ್ಕೆ ಕಾರಣ ಹುಡುಕಿ, ತಪ್ಪಿತಸ್ಥರನ್ನು ಗುರುತಿಸಿ, ಮುಂದೆ ಅಂತಹ ಸಂಘರ್ಷವೇರ್ಪಡದಂತೆ ತಡೆಯಲು ನೆಲ್ಸನ್ ಮಂಡೇಲಾ ಅವರು “ಸತ್ಯ ಶೋಧನೆ ಹಾಗೂ ರಾಜಿ” ಎಂಬ ಈ ಆಯೋಗವನ್ನು ರಚನೆ ಮಾಡಿದ್ದರು. 1998, ಅಕ್ಟೋಬರ್ 28ರಂದು ವರದಿಯನ್ನು ಸಲ್ಲಿಸಿದ ಈ ಆಯೋಗ ಯಾರೋ ಒಬ್ಬರನ್ನು ತಪ್ಪಿತಸ್ಥರನ್ನಾಗಿ ಮಾಡಲಿಲ್ಲ, ಯಾವುದೋ ಒಂದು ವರ್ಗದತ್ತ ಬೆರಳು ಮಾಡಲಿಲ್ಲ. ಮೂರೂವರೆ ದಶಕಗಳ ಕಾಲ ನಡೆದ ವರ್ಣಭೇದ ನೀತಿ, ಅದರಡಿ ನಡೆದ ದೌರ್ಜನ್ಯ, ಅದರಿಂದ ಸೃಷ್ಟಿಯಾದ ಭೀಕರ ಹಿಂಸಾಚಾರಗಳಿಗೆ ಕರಿಯರು ಹಾಗೂ ಬಿಳಿಯರಿಬ್ಬರನ್ನೂ ಹೊಣೆಗಾರರನ್ನಾಗಿ ಮಾಡಿತು, ಎರಡೂ ಪಂಗಡಗಳನ್ನು ಖಂಡಿಸಿತು. ಕರಿಯರು ಹಳೆಯ ವೈಷಮ್ಯವನ್ನು ಮರೆತು ಒಟ್ಟಾಗಿ ದೇಶಕಟ್ಟಬೇಕು ಎಂದು ಕಿವಿಮಾತು ಹೇಳಲಾ ಯಿತು. ಹಾಗಾಗಿ ದಕ್ಷಿಣ ಆಫ್ರಿಕಾದಲ್ಲಿ ಇಂದು ಶಾಂತಿ ನೆಲೆಸಿದೆ. ಒಂದು ವೇಳೆ, ಆಯೋಗವೇನಾದರೂ ಜನಾಂಗೀಯ ಸಮರಕ್ಕೆ ಒಂದು ವರ್ಗವನ್ನು ಮಾತ್ರ ದೋಷಿಯನ್ನಾಗಿ ಮಾಡಿ, ಗೂಬೆ ಕೂರಿಸಿದ್ದರೆ ಪರಸ್ಪರ ವೈಷಮ್ಯ, ಅಸಮಾಧಾನ ಇಂದಿಗೂ ಮುಂದುವರಿದುಕೊಂಡು ಬರುತ್ತಿತ್ತೇನೋ.

ಧರ್ಮಗುರು ಡೆಸ್ಮಂಡ್ ಟುಟು ಹಾಕಿಕೊಟ್ಟ ಇಂತಹ ಮಾದರಿ ಮೇಲ್ಪಂಕ್ತಿ ಮುಂದಿದ್ದರೂ ಬಾಬರಿ ಮಸೀದಿ ಧ್ವಂಸ ಪ್ರಕರಣದ ‘ಸತ್ಯಶೋಧನೆ’ ಮಾಡಲು ನೇಮಕವಾಗಿದ್ದ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್‍ಹಾನ್ ಆಯೋಗ ಮಾಡಿದ್ದೇನು?

ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ(17 ವರ್ಷ) ತೆಗೆದುಕೊಂಡು, 48 ತನಿಖಾ ಅವಧಿ ವಿಸ್ತರಣೆಗಳನ್ನು ಪಡೆದು ಕೊಂಡು ಲಿಬರ್‍ಹಾನ್ ಕೊಟ್ಟ ವರದಿಯಾದರೂ ಎಂಥದ್ದು? ವರದಿಯ 1029 ಪುಟಗಳಲ್ಲಿ ಶೋಧಿಸಿರುವ ಸತ್ಯವಾದರೂ ಏನು?  “ಲಾಲ್ ಕೃಷ್ಣ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ ಮುಂತಾದವರಿಗೆ ಸಂಘಪರಿ ವಾರದ ಕಾರ್ಯಸೂಚಿಯೇನೆಂದು ತಿಳಿದಿರಲಿಲ್ಲ ಎಂದು ಒಂದು ಕ್ಷಣಕ್ಕೂ ಅಂದುಕೊಳ್ಳಬೇಡಿ. ‘ಸೋಗಲಾಡಿ ಸೌಮ್ಯವಾದಿಗಳು’ ಎಂದು ಕರೆಯಬಹುದಾದ ಈ ನಾಯಕರು ಖಂಡಿತ ಸಂಘ ಪರಿವಾರದ ಆeಯನ್ನು ಪಾಲಿಸದೇ ಇರುತ್ತಿರಲಿಲ್ಲ. ಇವರೆಲ್ಲಾ ಸಂಘಪರಿವಾರದ ಮುಖವಾಡಗಳು”.

“ಇವರಿಗೆ ಸಂಶಯದ ಲಾಭ ಕೊಡುವುದಕ್ಕಾಗಲಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಡುವುದಕ್ಕಾಗಲಿ ಆಗುವುದಿಲ್ಲ. ಈ ನಾಯಕರುಗಳು ಮತದಾರರ ವಿಶ್ವಾಸಕ್ಕೆ ದ್ರೋಹಬಗೆದಿದ್ದಾರೆ. ಪ್ರಜಾತಂತ್ರದಲ್ಲಿ ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ. ಹಾಗಾಗಿ ಇವರನ್ನು, ಇವರು ಮಾಡಿದ ಪಾಪಕಾರ್ಯಕ್ಕಾಗಿ ಸೋಗಲಾಡಿ ಸೌಮ್ಯವಾದಿಗಳು ಎಂದು ಕರೆಯಲು ಆಯೋಗಕ್ಕೆ ಯಾವ ಅಂಜಿಕೆಯೂ ಇಲ್ಲ”.

ಹಾಗಂತ ನ್ಯಾಯಮೂರ್ತಿ ಎಂ.ಎಸ್. ಲಿಬರ್‍ಹಾನ್ ತಮ್ಮ ವರದಿಯಲ್ಲಿ ಹೇಳಿದ್ದಾರೆ!

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನಾಗಲಿ, ಅಥವಾ ಯಾರನ್ನೇ ಆಗಲಿ ‘ಸೋಗಲಾಡಿ ಸೌಮ್ಯವಾದಿಗಳು’ ಎಂದು ಕರೆಯಲು ಲಿಬರ್‍ಹಾನ್‌ಗೆ ಯಾವ ಹಕ್ಕಿದೆ? ಅಷ್ಟಕ್ಕೂ ಲಿಬ ರ್‍ಹಾನ್ ಯಾರು? ಲಿಬರ್‍ಹಾನ್ ಆಯೋಗ ಒಂದು ಸತ್ಯಶೋಧನೆ ಅಥವಾ ಫ್ಯಾಕ್ಟ್ ಫೈಂಡಿಂಗ್ ಸಮಿತಿಯೇ ಹೊರತು, ಮುಂಬೈ ಸ್ಫೋಟದ ಬಗ್ಗೆ ತನಿಖೆ ಹಾಗೂ ವಿಚಾರಣೆ ನಡೆಸಿದ ಜಸ್ಟಿಸ್ ಶ್ರೀಕೃಷ್ಣ ಆಯೋಗದಂತೆ ನ್ಯಾಯಾಂಗೀಯ ತನಿಖಾ ಆಯೋಗವಲ್ಲ. ಒಂದು ವೇಳೆ ಅಟಲ್, ಆಡ್ವಾಣಿ, ಜೋಶಿ ಅಥವಾ ಇನ್ನಾವುದೇ ನಾಯಕರು ಬಾಬರಿ ಮಸೀದಿ ಧ್ವಂಸದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆಂದಾದರೆ ಅದಕ್ಕೆ ಸೂಕ್ತ ಸಾಕ್ಷ್ಯ, ಸಾಂದರ್ಭಿಕ ಆಧಾರಗಳನ್ನು ಕಲೆಹಾಕಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಲಿಬರ್‍ಹಾನ್ ಸೂಚಿಸಬಹುದಿತ್ತು. ಒಂದು ಸತ್ಯಶೋಧನಾ ಆಯೋಗ ಮಾಡಬೇಕಾದ ಕೆಲಸವೂ ಅದನ್ನೇ. ಅದನ್ನು ಬಿಟ್ಟು, ಸೋಗಲಾಡಿ ಸೌಮ್ಯವಾದಿಗಳು ಎಂದು ಯಾವ ಆಧಾರದ ಮೇಲೆ ಕರೆದಿದ್ದಾರೆ? ಕೆಟ್ಟ ಉದ್ದೇಶ ವಿದ್ದರಷ್ಟೇ ಸಾಲದು, ಕೆಟ್ಟ ಕೆಲಸವನ್ನೂ ಮಾಡಿದರೆ ಮಾತ್ರ ಅದು ಶಿಕ್ಷಾರ್ಹ (Bad intention coupled with bad act is punishable) ಎಂದು ನಮ್ಮ ಕಾನೂನು ಮತ್ತು ನ್ಯಾಯಾಂಗ ಎರಡೂ ಹೇಳುತ್ತವೆ. ಅಟಲ್‌ಗೆ ಬಾಬರಿ ಮಸೀದಿ ಧ್ವಂಸಗೊಳಿಸುವ ಉದ್ದೇಶವಿತ್ತು, ಅವರು ಸಂಘಪರಿವಾರದ ಉದ್ದೇಶಕ್ಕೆ ಅನುಗುಣ ವಾಗಿ ನಡೆದುಕೊಂಡಿದ್ದಾರೆ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ? ಅಷ್ಟಕ್ಕೂ ಅಟಲ್ ಯಾವ ವಿಧ್ವಂಸಕ ಕೃತ್ಯವೆಸಗಿದ್ದಾರೆ? ತನ್ನ 17 ವರ್ಷಗಳ ಸುದೀರ್ಘ ಅವಧಿಯಲ್ಲಿ ಲಿಬರ್‍ಹಾನ್ ಎಂದಾದರೂ ಅಟಲ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆಯೇ? 1952ರ ತನಿಖಾ ಆಯೋಗ ಕಾಯಿದೆಯ 8ಬಿ ವಿಧಿಯಡಿ ಅಟಲ್ ಅವರನ್ನು ಕರೆಸಿಕೊಂಡು, ವಿಚಾರಣೆ ಮಾಡಿ, ಅಟಲ್ ಕೂಡ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ಭಾಗಿಯಾಗಿದ್ದರೆಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಾಧಾರ ನೀಡಿ ತಪ್ಪಿತಸ್ಥ ಎಂದು ಕರೆದಿದ್ದರೆ ಒಪ್ಪಿಕೊಳ್ಳಬಹುದಿತ್ತು. ಒಬ್ಬ ನಿವೃತ್ತ ನ್ಯಾಯಾಧೀಶರಾಗಿ ಲಿಬರ್‍ಹಾನ್ ಇಂತಹ ಯಾವುದೇ ಪ್ರಕ್ರಿಯೆಗಳನ್ನು ಮಾಡದೆ ಗೂಬೆ ಕೂರಿಸುವುದು ಎಷ್ಟು ಸರಿ?

ಅಟಲ್ ಅವರನ್ನೂ ವಿಚಾರಣೆಗೆ ಗುರಿಪಡಿಸಬೇಕೆಂದು ಮೊಹಮದ್ ಅಸ್ಲಾಂ ಭುರೆ ಎಂಬವರ ಪರವಾಗಿ ವಕೀಲ ಓ.ಪಿ. ಶರ್ಮಾ ಅರ್ಜಿ ಹಾಕಿದ್ದು ನಿಜ.  “ಆ ಅರ್ಜಿಯ ಬಗ್ಗೆ ವಿವರಣಾತ್ಮಕ ವಾದ ವಾದವನ್ನು ಆಲಿಸಲಾಯಿತು. ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ವಾಜಪೇಯಿಯವರನ್ನು ಹೊಣೆಗಾರರನ್ನಾಗಿ ಮಾಡಲು ಯಾವ ಆಧಾರಗಳೂ ಇಲ್ಲ. ಅವರನ್ನು ವಿಚಾರಣೆಗೆ ಕರೆಸುವ ಅಗತ್ಯವಿಲ್ಲ ಎಂಬ ನನ್ನ ವಾದವನ್ನು 2003, ಜುಲೈ 22ರಂದು ಒಪ್ಪಿಕೊಂಡ ಆಯೋಗ ಅರ್ಜಿಯನ್ನು ತಿರಸ್ಕರಿಸಿತ್ತು” ಎಂದು ಲಿಬರ್‍ಹಾನ್ ಆಯೋಗದ ಅಂದಿನ ವಕೀಲರಾಗಿದ್ದ ಅನುಪಮ್ ಗುಪ್ತಾ ಅವರು ‘ದಿ ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, “ಕರೆಸಿ ವಿಚಾರಣೆ ಮಾಡದೆ ವಾಜಪೇಯಿಯವರನ್ನು ದೂಷಿಯೆಂದು ಹೇಳುವುದು ಕಾನೂನುಬಾಹಿರ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಾಗಿಯೂ ಅಟಲ್ ಮೇಲೆ ಕೆಸರೆರಚಿದ್ದೇಕೆ?

ಅಟಲ್‌ಗೆ ಬಾಬರಿ ಮಸೀದಿಯನ್ನು ಧ್ವಂಸ ಮಾಡಬೇಕೆಂಬ ಉದ್ದೇಶ ಇತ್ತೋ, ಇಲ್ಲವೋ… ಆದರೆ ಜಸ್ಟಿಸ್ ಲಿಬರ್‍ಹಾನ್ ಅವರು ಬಳಸಿರುವ ಪದಗಳು ಹಾಗೂ ಮಾಧ್ಯಮಕ್ಕೆ ವರದಿ ಸೋರಿಕೆಯಾಗಿದ್ದನ್ನು ನೋಡಿದರೆ ಇಲ್ಲೇನೋ ಉದ್ದೇಶವಿದೆ ಯೆಂಬುದು ಮಾತ್ರ ಸ್ಪಷ್ಟವಾಗುತ್ತದೆ.

ಹೀಗೆ ಸಂಶಯ ಪಡುವುದಕ್ಕೂ ಕಾರಣವಿದೆ!

ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದಾದರೆ 80 ಸಂಸದರನ್ನು ಆಯ್ಕೆಮಾಡುವ ಉತ್ತರ ಪ್ರದೇಶವನ್ನು ಗೆಲ್ಲಲೇ ಬೇಕೆಂಬ ಮಾತು ಹಿಂದೆಯೂ ಇತ್ತು, ಈಗಲೂ ಇದೆ. ಉತ್ತರ ಪ್ರದೇಶದಲ್ಲಿ ಶೇ. 19ರಷ್ಟು ಮುಸ್ಲಿಮರಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿ ತೆಕ್ಕೆಯಲ್ಲಿರುವ ಮುಸ್ಲಿಮರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಹಾಗೂ ಬಿಜೆಪಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಕಾಂಗ್ರೆಸ್‌ಗೆ ಸೂಕ್ತ ಕಾರ್ಯತಂತ್ರದ ಅಗತ್ಯವಿದೆ. ಅದರಲ್ಲೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗದ್ದುಗೆ ಹಿಡಿದೇ ಹಿಡಿಯುತ್ತೇನೆ ಎಂದು ಹೊರಟಿರುವ ರಾಹುಲ್‌ಗಾಂಧಿಯವರಿಗೆ ಮುಸ್ಲಿಮರನ್ನು ಸೆಳೆಯಲು ಬಲವಾದ ಅಸ್ತ್ರವೊಂದು ಬೇಕಿತ್ತು.  ಇತ್ತ ಬೆಲೆಯೇರಿಕೆ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಸೃಷ್ಟಿಸಿರುವ ಹಗರಣ, ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದೇ ಇರುವುದು, ಲಷ್ಕರೆ ತಯ್ಬಾದ ಪಿತೂರಿದಾರ ಹೆಡ್ಲಿ ಟೇಪ್ ಹಾಗೂ ಆತ ನುಣುಚಿಕೊಂಡ ಪ್ರಕರಣ, ಅದರ ಬೆನ್ನಲ್ಲೇ ಬರಲಿದ್ದ ಮುಂಬೈ ದಾಳಿಯ ವಾರ್ಷಿಕ ದಿನ ಇವುಗಳನ್ನಿಟ್ಟುಕೊಂಡು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರವನ್ನು ಪ್ರತಿಪಕ್ಷಗಳು ಪೇಚಿಗೆ ಸಿಲುಕಿಸುವುದು ಖಚಿತ ಎಂದು ಕಾಂಗ್ರೆಸ್‌ಗೆ ಚೆನ್ನಾಗಿಯೇ ಗೊತ್ತಿತ್ತು. ಆಗ ರೂಪುಗೊಂಡ ಮಾಸ್ಟರ್ ಪ್ಲಾನ್ ಏನಿದೆಯಲ್ಲಾ ಅದೇ ‘ಲಿಬರ್‍ಹಾನ್ ಆಯೋಗದ ವರದಿ ಸೋರಿಕೆ”! ಅದರಲ್ಲೂ ರಾಷ್ಟ್ರದ ಗಮನವನ್ನು ಮುಖ್ಯ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ತಂತ್ರದಲ್ಲಿ ಕಾಂಗ್ರೆಸ್ ಎಂದೋ ಪರಿಣತಿ ಸಾಧಿಸಿದೆ. ಆಡ್ವಾಣಿ, ಜೋಶಿಯವರನ್ನು ಟಾರ್ಗೆಟ್ ಮಾಡಿದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ಅವರ ಪಾತ್ರ ಎಲ್ಲರಿಗೂ ತಿಳಿದಿರುವಂಥದ್ದೇ, ಆದರೆ ಅಟಲ್ ಮೇಲೆ ಆರೋಪ ಮಾಡಿದರೆ ಎಲ್ಲರೂ ಮುಗಿಬೀಳುತ್ತಾರೆ ಎಂದು ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿತ್ತು.  ಈಗ ಕಾಣುತ್ತಿರುವುದೂ ಅಂತಹ ತಂತ್ರವನ್ನೇ. ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ಅಟಲ್ ಬಿಹಾರಿ ವಾಜಪೇಯಿಯವರನ್ನು ಒಮ್ಮೆ “ಸುಳ್ಳುಗಾರ” ಎಂದು ಕರೆದಿದ್ದ ಸೋನಿಯಾಗಾಂಧಿಯವರ ಪಕ್ಷದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಒಂದು ವೇಳೆ ಕಾಂಗ್ರೆಸ್‌ಗೆ ಉದ್ದೇಶ ಶುದ್ಧಿ ಇದ್ದಿದ್ದೇ ಆದರೆ, ಆಯೋಗ ಕಳೆದ ಜೂನ್‌ನಲ್ಲೇ ವರದಿಯನ್ನು ಸಲ್ಲಿಸಲಾಗಿದ್ದರೂ ಇಷ್ಟು ದಿನ ಏಕೆ ಸಂಸತ್ತಿನ ಮುಂದಿಟ್ಟಿರಲಿಲ್ಲ? ಮಳೆಗಾಲದ ಅಧಿವೇಶನದಲ್ಲೇ ಸಂಸತ್ತಿನ ಮುಂದಿಡಬಹುದಾಗಿತ್ತಲ್ಲವೆ? ಕನಿಷ್ಠ ಬಹಿರಂಗವನ್ನಾ ದರೂ ಏಕೆ ಮಾಡಲಿಲ್ಲ? ಗೃಹ ಸಚಿವ ಪಿ. ಚಿದಂಬರಂ ಹೇಳುವಂತೆ ವರದಿಯ ಒಂದೇ ಕಾಪಿಯಿದ್ದು, ಅದು ಅವರ ಬಳಿಯೇ ಇದೆ ಎಂದಾಗಿದ್ದರೆ ಅದು ಮಾಧ್ಯಮಗಳಿಗೆ ಸಿಕ್ಕಿದ್ದಾದರೂ ಹೇಗೆ? ಅದರಲ್ಲೂ ಕಾಂಗ್ರೆಸ್‌ಗೆ ಅಪ್ತರಾಗಿರುವ ಪತ್ರಿಕೆ, ಚಾನೆಲ್ ಹಾಗೂ ಪತ್ರಕರ್ತರಿಗೇ ಆ ವರದಿ ಸೋರಿಕೆಯಾಗಿದ್ದೇಕೆ?

ಅದಿರಲಿ, ಯಾವನೋ ಮೀರ್ ಬಾಕಿ ಕಟ್ಟಿದ ಒಂದು ಗೋರಿ ಬಗ್ಗೆ ಇವರಿಗೆ ಇಷ್ಟೊಂದು ಪ್ರೇಮವೇಕೆ? ಅದೇನು ಮೆಕ್ಕಾವೂ ಅಲ್ಲ, ಮದೀನಾನೂ ಅಲ್ಲ, ಅಲ್ ಅಕ್ಷಾ ಕೂಡ ಅಲ್ಲ. ಪ್ರಾರ್ಥನಾ ಮಂದಿರ ಎಂದು ಕರೆಯಲು ಅಲ್ಲೆಂದೂ ನಮಾಜ್ ಕೂಡ ನಡೆದಿಲ್ಲ. ಯಾವುದೋ ಒಂದು ಕಳಂಕಿತ ಕಟ್ಟಡವನ್ನು ಕೆಡವಿದ ಮಾತ್ರಕ್ಕೆ ‘ನ್ಯಾಷನಲ್ ಮಾನ್ಯುಮೆಂಟ್’ ಅನ್ನು ಕೆಡವಿದರೇನೋ ಎಂಬಂತೆ ವರ್ತಿಸುತ್ತಿರುವುದೇಕೆ? ಬಾಬರಿ ಮಸೀದಿಯನ್ನು ಕೆಡವಿದ್ದು ತಪ್ಪು ಎನ್ನುವುದಾದರೆ ರಾಮನ ದೇವಾಲಯದ ಮೇಲೆ ಮಸೀದಿ ಕಟ್ಟಿದ್ದು ಮೊದಲನೇ ತಪ್ಪು. ಇದರ ಬಗ್ಗೆ ಸತ್ಯಶೋಧನೆ ಮಾಡಲು ಹೊರಟ ಸಮಿತಿ, ದಕ್ಷಿಣ ಆಫ್ರಿಕಾದ Truth and Reconciliation Commissionನಂತೆ ಎರಡೂ ವರ್ಗಗಳನ್ನು ತಪ್ಪಿತಸ್ಥರನ್ನಾಗಿ ಮಾಡಿ, ಸಾಮರಸ್ಯದ ಪಾಠ ಹೇಳಬಹುದಿತ್ತು ಅಲ್ಲವೆ? ಅಟಲ್ ಅವರಂತಹ ನಾಯಕನನ್ನು ‘ಸುಳ್ಳುಗಾರ’ ಎಂದಿದ್ದ ಸೋನಿಯಾಗಾಂಧಿ ಎಂಬ ರಾಜಕಾರಣಿಗೂ, ‘ಸೋಗಲಾಡಿ ಸೌಮ್ಯವಾದಿ’ ಎಂದಿರುವ ನ್ಯಾಯಮೂರ್ತಿ ಲಿಬರ್‍ಹಾನ್‌ಗೂ ಏನು ವ್ಯತ್ಯಾಸ? ಇಂಥವರು ಸಮಾಜವನ್ನು ಒಡೆಯುತ್ತಾರೆಯೇ ಹೊರತು, ಒಂದುಗೂಡಿಸುವುದಿಲ್ಲ. ಅದಿರಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹುತಾತ್ಮರಾಗಿ 25 ವರ್ಷಗಳಾದ ಸಂದರ್ಭದಲ್ಲಿ (ಅಕ್ಟೋಬರ್ 31ರಂದು) ಇಂದಿರಾ ಅವರನ್ನು ಮಹಾನ್ ನಾಯಕಿ ಎಂದು ಹೊಗಳಿ ರಾಷ್ಟ್ರದ ಎಲ್ಲ ಪತ್ರಿಕೆ, ಚಾನೆಲ್‌ಗಳಿಗೂ ಕೋಟ್ಯಂತರ ರೂಪಾಯಿ ಜಾಹೀರಾತು ನೀಡಿದ ಕೇಂದ್ರ ಸರಕಾರ ಇಂದಿರಾ ಹತ್ಯೆ ನಂತರ ನಡೆದ 3600 ಸಿಖ್ಖರ ಮಾರಣಹೋಮದ ಬಗ್ಗೆ ಕನಿಷ್ಠ ಮರುಕವನ್ನೂ ವ್ಯಕ್ತಪಡಿಸಲಿಲ್ಲವೇಕೆ? 3600 ಜನರ ಪ್ರಾಣದ ಬಗ್ಗೆ ಇಲ್ಲದ ಕಾಳಜಿ, ಪಾಳುಬಿದ್ದಿದ್ದ ಕಟ್ಟಡದ ಮೇಲೇಕೆ? ಬಾಬರನ ಕಮಾಂಡರ್ ಕಟ್ಟಿದ ಕಟ್ಟಡದ ಮೇಲೆ ಮುಸ್ಲಿಮರಿಗೆ ಅಷ್ಟು ಅಭಿಮಾನವಿರುವಾಗ, ರಾಮನ ಜನ್ಮಸ್ಥಳವೆಂದು ನಂಬಿಕೊಂಡು ಬಂದಿರುವ ಹಿಂದೂಗಳಿಗೆ ಅಯೋಧ್ಯೆಗೆ ಬಗ್ಗೆ ಇನ್ನೆಷ್ಟು ಅಭಿಮಾನವಿರಬೇಕು ಹೇಳಿ?

ಇಂತಹ ಸೂಕ್ಷ್ಮ ಲಿಬರ್‍ಹಾನ್ ಹಾಗೂ ಕೇಂದ್ರ ಸರಕಾರಕ್ಕೆ ಅರ್ಥವಾಗಿದ್ದರೆ ಅಯೋಧ್ಯೆ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು, ಅಟಲ್ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರಲಿಲ್ಲ.

ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಾಯಿಮಾತಲ್ಲಿ ಹೇಳಿದರಷ್ಟೇ ಸಾಕೆ ಸಿಎಂ?
“ಇನ್‌ಸ್ಪೆಕ್ಟರ್ ಹಾಗೂ ಕಿರಿಯ ದರ್ಜೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರಕಾರ ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ. ವರ್ಗಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ಮೂಲಕ ಹಿರಿಯ ಅಧಿಕಾರಿಗಳೇ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಾರೆ”.

ಹಾಗಂತ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.

ಬೆಂಗಳೂರಿನ ಸಿಎಆರ್ ಕೇಂದ್ರ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಅವರು ಇಂತಹ ಭರವಸೆ ನೀಡಿದ್ದಾರೆ. ಆ ಮೂಲಕ ಸರಕಾರ ಪೊಲೀಸ್ ವರ್ಗಾವಣೆಯಲ್ಲಿ ಈವರೆಗೂ ಹಸ್ತಕ್ಷೇಪ ಮಾಡುತ್ತಿತ್ತು ಎಂಬ ಅಂಶವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇಲ್ಲಿ ಒಬ್ಬ ಯಡಿಯೂರಪ್ಪನವರನ್ನು ದೂರಿ ಲಾಭವಿಲ್ಲ. ನೀವು ‘ಮಿನಿಟ್’ ಎಂಬ ಪದವನ್ನು ಖಂಡಿತ ಕೇಳಿರುತ್ತೀರಿ. ಈ ‘ಮಿನಿಟ್’ ಪದ್ಧತಿಯೆಂಬ ಕೆಟ್ಟಚಾಳಿಯನ್ನು ಹುಟ್ಟುಹಾಕಿದ್ದು ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರು. ಏಕೆ ಹಾಗೆ ಮಾಡಿದರು ಎಂಬುದಕ್ಕೂ ಹಲವು ಕಥೆಗಳಿವೆ. ಅವು ಇಲ್ಲಿ ಅನಗತ್ಯ ಬಿಡಿ. ಒಂದು ಠಾಣೆಗೆ ಒಬ್ಬ ಪೊಲೀಸ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ನನ್ನು ವರ್ಗ ಅಥವಾ ಪೋಸ್ಟ್ ಮಾಡುವ ಮೊದಲು ಅದಕ್ಕೆ ಸ್ಥಳೀಯ ಶಾಸಕ ಅಸ್ತು ನೀಡಬೇಕು. ಅಂದರೆ ನೀವೊಬ್ಬ ಸಬ್‌ಇನ್‌ಸ್ಪೆಕ್ಟರ್ ಆಗಿದ್ದು, ಉದಾಹರಣೆಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವರ್ಗಾವಣೆ ಬಯಸಿದರೆ ಸ್ಥಳೀಯ ಎಮ್ಮೆಲ್ಲೆ ಬಾಟ್ಲಿ ರವಿ ಅಲಿಯಾಸ್ ರವಿ ಸುಬ್ರಹ್ಮಣ್ಯ ಅವರಿಂದ ಮೊದಲು ‘ನೋ ಅಬ್ಜೆಕ್ಷನ್ ಸರ್ಟಿಫಿಕೆಟ್’(ಮಿನಿಟ್) ಪಡೆದುಕೊಂಡು ಬರಬೇಕು!! ಸಮಸ್ಯೆ ಇರುವುದೇ ಇಲ್ಲಿ. ಎಮ್ಮೆಲ್ಲೆ ಯಾರಿಗೆ ‘ಮಿನಿಟ್’ ಕೊಡುತ್ತಾನೆ? ತನಗೆ ಬೇಕಾದವರಿಗೆ, ಹೆಚ್ಚು ಕಪ್ಪ ಕಾಣಿಕೆ ಕೊಟ್ಟವರಿಗೆ, ತಾನು ಹೇಳಿದಂತೆ ಕೇಳಿಕೊಂಡಿರುವವರಿಗೆ. ಅಲ್ಲವೆ? ಪೊಲೀಸರನ್ನು ಭ್ರಷ್ಟಾತಿಭ್ರಷ್ಟರನ್ನಾಗಿ, ನಿಷ್ಕ್ರಿಯರು, ಅಸಮರ್ಥರು ಆಗುವಂತೆ ಮಾಡಿದ್ದೇ ಈ ಮಿನಿಟ್ ಪದ್ಧತಿ. ದುಡ್ಡು ಕೊಟ್ಟು ಇಂಥದ್ದೇ ಠಾಣೆಗೆ ವರ್ಗ ಮಾಡಿಸಿಕೊಂಡ ಇನ್‌ಸ್ಪೆಕ್ಟರ್ ಸುಮ್ಮನಿರುತ್ತಾನೆಯೇ? ಕೊಟ್ಟ ದುಡ್ಡನ್ನು ಮರಳಿ ಗಳಿಸಲೇಬೇಕಲ್ಲವೆ? ಇನ್ನೂ ಹೆಚ್ಚನ್ನು ಕೂಡಿಕೊಳ್ಳದೇ ಇರಲು ಸಾಧ್ಯವೆ? ಎಮ್ಮೆಲ್ಲೆ ಅಸ್ತು ಕೇಳಬೇಕಾದವನು ಮುಂದೆ ಹೇಗೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ? ಜತೆಗೆ ವರ್ಗಾ ವಣೆ ಮಾಡಲು ದುಡ್ಡು ಕಿತ್ತುಕೊಳ್ಳುವ ಸರಕಾರ ಅಧಿಕಾರಿಗಳಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಇದು ಯಾವುದೇ ಒಂದು ಜಿಲ್ಲೆ, ಇಲಾಖೆ, ಕಚೇರಿ, ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಇರುವ ಎಲ್ಲ ರಾಜ್ಯಗಳಲ್ಲೂ ಒಂದಲ್ಲ ಒಂದು ವಿಧದಲ್ಲಿ ಪೊಲೀಸರನ್ನು ರಾಜಕಾರಣಿಗಳು ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದಾರೆ. ಪೊಲೀಸ್ ಇಲಾಖೆ ಇರಬಹುದು ಅಥವಾ ಇತರ ಸರಕಾರಿ ಕಚೇರಿಗಳಿರಬಹುದು, ನೌಕರ ವರ್ಗವನ್ನು, ಅಧಿಕಾರಿಗಳನ್ನು ಮೂಲತಃ ಭ್ರಷ್ಟಗೊಳಿಸಿದ್ದೇ ಸರಕಾರ. ಅದರಲ್ಲೂ ಪೊಲೀಸರದಂತೂ ಒಂಥರಾ ಪ್ರಾಣಸಂಕಟ. ದುಡ್ಡು ಕೊಡದಿದ್ದರೆ ಠಾಣೆ ಸಿಕ್ಕುವುದಿಲ್ಲ, ಶಾಸಕ-ಸಂಸದರ ಮಾತು ಕೇಳದಿದ್ದರೆ ಠಾಣೆ ಉಳಿಯುವುದಿಲ್ಲ. ಕಳ್ಳರು, ಭ್ರಷ್ಟರು, ಅಸಮರ್ಥರು ಅಂತ ಜನರಿಂದ ಬೈಯ್ಯಿಸಿ ಕೊಳ್ಳುವುದೂ ತಪ್ಪಲ್ಲ.

ಈ ಖಾಕಿ ಬಗೆಗೆ ನಮ್ಮಲ್ಲಿರುವ ಅನುಮಾನ, ವಾಕರಿಕೆಗಳು ಇಂದು-ನಿನ್ನೆಯದ್ದಲ್ಲ. ಬ್ರಿಟಿಷರು ಭಾರತವನ್ನಾಳಿದ್ದೇ ಈ ಖಾಕಿಧಾರಿಗಳನ್ನಿಟ್ಟುಕೊಂಡು?!

1857ರ ಕ್ರಾಂತಿಯನ್ನು ನಾವು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎನ್ನುತ್ತೇವೆ. ಬ್ರಿಟಿಷರು ಅದನ್ನು ‘ಸಿಪಾಯಿ ದಂಗೆ’ ಎಂದಿದ್ದರು. ಅಂದು ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರು ದಂಗೆಯೇಳುವ ಮೂಲಕ ಬ್ರಿಟಿಷ್ ಚಕ್ರಾಧಿಪತ್ಯವನ್ನು ಅಲುಗಾಡಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು 1861ರಲ್ಲಿ ಬ್ರಿಟಿಷರು ‘ಪೊಲೀಸ್ ಕಾಯಿದೆ’ಯನ್ನು ಜಾರಿಗೆ ತಂದರು. ಒಂದೆಡೆ ಸೇನೆ ಇದ್ದರೂ ಮತ್ತೊಂದೆಡೆ ಪೊಲೀಸ್ ಪಡೆಯನ್ನೂ ಕಟ್ಟಿದರು. ಪೊಲೀಸ್ ಪಡೆ ತಮ್ಮ ಆಡಳಿತಕ್ಕೆ ವಿಧೇಯವಾಗಿರುವಂತೆ ಮಾಡಲು, ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲ ನೀತಿ-ನಿಯಮಗಳನ್ನೂ ಪೊಲೀಸ್ ಕಾಯಿದೆಯಲ್ಲಿ ಸೇರಿಸಿದರು. ಹೀಗೆ ಭಾರತೀಯರನ್ನು(ಪೊಲೀಸರು) ಬಳಸಿಕೊಂಡು ಭಾರತೀ ಯರ ಸ್ವಾತಂತ್ರ್ಯ ಸಮರವನ್ನೇ ಹತ್ತಿಕ್ಕುತ್ತಾ, ತುಳಿಯುತ್ತಾ ಬಂದರು.  ಬ್ರಿಟಿಷರು 1947ರವರೆಗೂ ಭಾರತವನ್ನಾಳಿದ್ದೇ ಖಾಕಿಧಾರಿ ಪೊಲೀಸರ ಬಲದಿಂದ. 1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದರೂ, ದುರದೃಷ್ಟವಶಾತ್ ಪೊಲೀಸ್ ವ್ಯವಸ್ಥೆ ಮಾತ್ರ ಬದಲಾಗಲಿಲ್ಲ. ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರಿಗೆ ಅಧೀನರಾಗಿದ್ದ ಪೊಲೀಸರು, ಸ್ವಾತಂತ್ರ್ಯಾನಂತರ ನಮ್ಮನ್ನಾಳುವ ರಾಜಕಾರಣಿಗಳ ಕೈಗೊಂಬೆಗಳಾಗಿ ಬಿಟ್ಟರು. ಅಂದೇ 1861ರ ಪೊಲೀಸ್ ಕಾಯಿದೆಗೆ ತಿದ್ದುಪಡಿ ತಂದು ಪೊಲೀಸರನ್ನು ಜನರಿಗೆ ಹೊಣೆಗಾರರನ್ನಾಗಿ ಮಾಡಬಹುದಿತ್ತು. ಆದರೆ ಯಾವ ರಾಜಕಾರಣಿ ಆ ಕೆಲಸ ಮಾಡುತ್ತಾನೆ? 1975ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದ ಪ್ರಧಾನಿ ಇಂದಿರಾಗಾಂಧಿಯವರು ಬ್ರಿಟಿಷರಿಗಿಂತ ತಾವೇನು ಕಡಿಮೆಯಲ್ಲ ಎಂಬಂತೆ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಪ್ರಯತ್ನಿಸಿದರು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರಕಾರ, ಕೊನೆಗೂ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಯಿತು. 1977ರಲ್ಲಿ ‘ರಾಷ್ಟ್ರೀಯ ಪೊಲೀಸ್ ಆಯೋಗ’ ರಚನೆಯಾಯಿತು. ಅದು 1979-81ರ ನಡುವೆ ೮ ವಿಸ್ತೃತ ವರದಿಗಳನ್ನು ನೀಡಿತು. ಆ ವೇಳೆಗಾಗಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಿತ್ತು. ವರದಿ ಮೂಲೆ ಸೇರಿತು. 1983ರಲ್ಲಿ ವರದಿಯ ಪ್ರತಿಯನ್ನು ಎಲ್ಲ ರಾಜ್ಯ ಸರಕಾರಗಳಿಗೂ ಕಳುಹಿಸಲಾಯಿತಾದರೂ ಯಾವೊಂದೂ ಶಿಫಾರಸುಗಳು ಜಾರಿಯಾಗಲಿಲ್ಲ. 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ನಾನಾವತಿ ಆಯೋಗ, “ಪೊಲೀಸ್ ಇಲಾಖೆ ರಾಜಕೀಯ ಪ್ರಭಾವದಿಂದ ಮುಕ್ತವಿರಬೇಕು ಹಾಗೂ ಶೀಘ್ರ ಮತ್ತು ಪರಿಣಾಮ ಕಾರಿಯಾಗಿ ಕ್ರಮ ತೆಗೆದುಕೊಳ್ಳಲು ಅವರನ್ನು ಸಜ್ಜುಗೊಳಿಸಬೇಕು” ಎಂದು ಹೇಳಿತು.

ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಸ್ವಾತಂತ್ರ್ಯ ಬಂದು 5 ದಶಕಗಳು ಕಳೆದರೂ ಪೊಲೀಸರು ಮಾತ್ರ ಬಂಧಮುಕ್ತರಾಗಲಿಲ್ಲ ಎಂದು ನೊಂದುಕೊಂಡ ಇಬ್ಬರು ಮಾಜಿ ಡಿಜಿಪಿಗಳಾದ ಪ್ರಕಾಶ್ ಸಿಂಗ್ ಮತ್ತು ಎನ್.ಕೆ. ಸಿಂಗ್, 1996ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದರು. “ಭಾರತೀಯ ಪೊಲೀಸ್ ಇಲಾಖೆಯ ಅತಿದೊಡ್ಡ ಸಮಸ್ಯೆಯೆಂದರೆ ರಾಜಕೀಯ-ಆಡಳಿತಶಾಹಿ ವ್ಯವಸ್ಥೆ. ಈ ರಾಜಕಾರಣಿಗಳು ಹಾಗೂ ಅಧಿಕಾರಶಾಹಿ ಪೊಲೀಸರ ಮೇಲೆ ಹೊಂದಿರುವ ಬಿಗಿ ನಿಯಂತ್ರಣವನ್ನು ಬಿಟ್ಟುಕೊಡಲು ತಯಾರಿಲ್ಲ. ಪೊಲೀಸರನ್ನು ಆಗಾಗ್ಗೆ ಬಳಕೆ, ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಪೊಲೀಸ್ ಇಲಾಖೆಯನ್ನು ಆಡಳಿತಶಾಹಿಗಳಿಂದ ಬಂಧಮುಕ್ತಗೊಳಿಸಬೇಕಾದ ಅಗತ್ಯವಿದೆ. ಅದೊಂಥರಾ ಜಮೀನುದಾರಿ ಪದ್ಧತಿಯನ್ನು ನಿಷೇಧ ಮಾಡಿ, ಜಮೀನುದಾರರಿಂದ ಭೂಮಿಯನ್ನು ಕಿತ್ತುಕೊಳ್ಳುವುದಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಸೇವೆ ಮಾಡಿಕೊಂಡಿರುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾದ 150 ವರ್ಷಗಳ ಹಿಂದಿನ ಪೊಲೀಸ್ ಕಾಯಿದೆಗೆ ತಿದ್ದುಪಡಿ ತರದ ಹೊರತು ನಮ್ಮ ವ್ಯವಸ್ಥೆ ನವಭಾರತದ ಜತೆ ಹೆಜ್ಜೆಹಾಕಲು ಸಾಧ್ಯವಿಲ್ಲ” ಎಂದು ಮೊಕದ್ದಮೆಯಲ್ಲಿ ವಾದಿಸಿದರು. ಇದು “ಪ್ರಕಾಶ್ ಸಿಂಗ್ ಮತ್ತು ಇತರರು /ಖ ಕೇಂದ್ರ ಸರಕಾರ” ನಡುವಿನ ಮೊಕದ್ದಮೆ ಎಂದೇ ಪ್ರಸಿದ್ಧವಾಗಿದೆ.

ಎಲ್ಲ ಅಂಶಗಳನ್ನೂ ಪರಿಗಣಿಸಿದ, ಪರಾಮರ್ಶೆ ನಡೆಸಿದ ಭಾರತದ ಸುಪ್ರೀಂಕೋರ್ಟ್ 2006, ಸೆಪ್ಟೆಂಬರ್ 22ರಂದು ಒಂದು ಅಭೂತಪೂರ್ವ ತೀರ್ಪು ನೀಡಿತು!

ಸುಪ್ರೀಂಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರ್‌ವಾಲ್ ಹಾಗೂ ನ್ಯಾಯಮೂರ್ತಿಗಳಾದ ಸಿ.ಕೆ. ಥಕ್ಕರ್ ಮತ್ತು ಪಿ.ಕೆ. ಬಾಲಸುಬ್ರಮಣ್ಯಂ ನೇತೃತ್ವದ ಪೀಠ ನಿಜಕ್ಕೂ ಕೆಲವು ಗಮನಾರ್ಹ ಟಿಪ್ಪಣಿಗಳನ್ನು ಮಾಡಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದ ವ್ಯಕ್ತಿಗಳ ಘನತೆಯ ಬಗ್ಗೆಯೂ ಒಂದೆರಡು ಮಾತನಾಡಿತು! “ಮೊದಲ ಅರ್ಜಿದಾರ(ಪ್ರಕಾಶ್ ಸಿಂಗ್) ಒಬ್ಬ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿದ್ದ ವ್ಯಕ್ತಿ. ಅವರ ಸೇವೆಗಾಗಿ 1991ರಲ್ಲಿ ಪದ್ಮಶ್ರೀ ಪುರಸ್ಕಾರವನ್ನೂ ನೀಡಲಾಗಿದೆ. ಐಪಿಎಸ್ ಅಧಿಕಾರಿಯಾದ ಅವರು ಮೂರೂವರೆ ದಶಕಗಳ ಕಾಲ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಸ್ಸಾಂ ಮತ್ತು ಉತ್ತರ ಪ್ರದೇಶದ ಡಿಜಿಪಿಯಾಗಿದ್ದ ವ್ಯಕ್ತಿಯೂ ಹೌದು. ಜತೆಗೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯಲ್ಲೂ ಸೇವೆ ಸಲ್ಲಿಸಿದ್ದಾರೆ. ಎರಡನೇ ಅರ್ಜಿದಾರ (ಎನ್.ಕೆ. ಸಿಂಗ್) ಕೂಡ ಪೊಲೀಸ್ ಇಲಾಖೆಯಲ್ಲಿ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿದಾತ. ಮೂರನೇ ಅರ್ಜಿದಾರ ಸಾರ್ವಜನಿಕ ಹಿತಾಸಕ್ತಿ ಹೊಂದಿದ ಹಲವಾರು ಪ್ರಕರಣಗಳನ್ನು ಕೈಗೆತ್ತಿಕೊಂಡು ಹೋರಾಡಿದ ಸ್ವಯಂಸೇವಾ ಸಂಸ್ಥೆ(ಮಾಯಾ ಧಾರುವಾಲಾ ಅವರ). ಮೊದಲಿನ ಇಬ್ಬರಿಗೆ ಪೊಲೀಸರ ಕಾರ್ಯನಿರ್ವಹಣೆ ಹಾಗೂ ಸಂಕಷ್ಟಗಳ ಬಗ್ಗೆ ವೈಯಕ್ತಿಕ ಅನುಭವವಿದೆ”.

“ಸಾರ್ವಜನಿಕರ ಮಾನವ ಹಕ್ಕು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾನೂನಿನ ಅಸಮರ್ಪಕ ಹಾಗೂ ತಾರತಮ್ಯಯುತ ಜಾರಿಯೇ ಕಾರಣ. ಕಾನೂನನ್ನು ಉಲ್ಲಂಘಿ ಸಿದರೂ ಪ್ರಭಾವಿ ವ್ಯಕ್ತಿಗಳು ತಪ್ಪಿಸಿಕೊಳ್ಳುತ್ತಾರೆ. ಅಕ್ರಮ ಬಂಧನ, ಹಿಂಸೆ, ದೌರ್ಜನ್ಯ, ಸಾಕ್ಷಿಗಳ ನಾಶ ಮತ್ತು ತಿರುಚುವಿಕೆ ಇವೆಲ್ಲದಕ್ಕೂ ರಾಜಕೀಯ ಪ್ರಭಾವವೇ ಕಾರಣ. ಅರ್ಜಿದಾರರು ಕೆಲವು ಕಣ್ಣುಕುಕ್ಕುವಂತಹ ಉದಾಹರಣೆಗಳನ್ನು ನೀಡಿದ್ದಾರೆ. 1861ರ ಪೊಲೀಸ್ ಕಾಯಿದೆಯೇ ಎಲ್ಲ ಸಮಸ್ಯೆಗಳ ಮೂಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಹಳೆಯ ಕಾಯಿದೆ ಮಾತ್ರ ಬದಲಾಗಿಲ್ಲ ಎಂದು ಅರ್ಜಿದಾರರು ಬೆರಳು ತೋರುತ್ತಿದ್ದಾರೆ”.

ಹೀಗೆ ಅರ್ಜಿದಾರರ ವಾದವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್, 1977-81ರ ರಾಷ್ಟ್ರೀಯ ಪೊಲೀಸ್ ಆಯೋಗದ ಶಿಫಾರಸು, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಕಾನೂನು ಆಯೋಗ, ರಿಬೇರೋ ಸಮಿತಿ ವರದಿ, ಕ್ರಿಮಿನಲ್ ನ್ಯಾಯ ಸುಧಾರಣೆ ಬಗ್ಗೆ ಮಳಿಮಠ್ ಸಮಿತಿ ನೀಡಿದ ವರದಿ, ಹೊಸ ಪೊಲೀಸ್ ಕಾಯಿದೆಯ ಕರಡು ರೂಪಿಸಲು 2005ರಲ್ಲಿ ನೇಮಕ ಗೊಂಡಿದ್ದ ಸೋಲಿ ಸೊರಾಬ್ಜಿ ಸಮಿತಿ ವರದಿಗಳನ್ನು ಕೂಲಂಕಷವಾಗಿ ಪರಿಗಣಿಸಿ 2006ರಲ್ಲಿ ಒಂದು ಗಮನಾರ್ಹ ತೀರ್ಪು ನೀಡಿತು. ಅದರಲ್ಲಿನ ಕೆಲವು ಅಂಶಗಳು ತೀರಾ ಮಹತ್ವದ್ದೆನಿಸುತ್ತವೆ.

1. ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್: ಪ್ರತಿ ರಾಜ್ಯ ಗಳಲ್ಲೂ ಒಂದು ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ರಚನೆ ಮಾಡಬೇಕು. ಈ ಮಂಡಳಿ ಡಿವೈಎಸ್ಪಿ ರ್‍ಯಾಂಕಿಗಿಂತ ಕೆಳಹಂತದ ಪೊಲೀಸರ ವರ್ಗಾವಣೆ, ಪೋಸ್ಟಿಂಗ್, ಬಡ್ತಿ ಹಾಗೂ ಸೇವೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸಬೇಕು ಹಾಗೂ ನಿರ್ಧರಿಸಬೇಕು. ಮಂಡಳಿ ತೆಗೆದುಕೊಳ್ಳುವ ನಿರ್ಧಾರದ ವಿಷಯದಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಮಾಡಬಹುದಾಗಿದ್ದರೂ ಅದಕ್ಕೆ ಕಾರಣವೇನೆಂಬುದನ್ನು ದಾಖಲಿಸಬೇಕು. ಎಸ್ಪಿ ಹಾಗೂ ಮೇಲ್‌ಸ್ತರದ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಈ ಮಂಡಳಿ ರಾಜ್ಯ ಸರಕಾರಕ್ಕೆ ಸಲಹೆ ನೀಡಬಹುದು. ಸಲಹೆಗೆ ಸರಕಾರ ಸೂಕ್ತ ಆದ್ಯತೆ ನೀಡಬೇಕು, ಮಾನ್ಯ ಮಾಡಲೂಬೇಕು. ಅಲ್ಲದೆ ಎಸ್ಪಿ ಮತ್ತು ಅದಕ್ಕೂ ಮೇಲ್‌ಸ್ತರದ ಅಧಿಕಾರಿಗಳ ಬಡ್ತಿ, ವರ್ಗಾವಣೆ, ಶಿಸ್ತುಕ್ರಮ, ಅಕ್ರಮ ಮುಂತಾದುವುಗಳ ವಿಷಯದಲ್ಲೂ ಈ ಮಂಡಳಿ ಮೇಲ್ಮನವಿ ಸ್ವೀಕರಿಸುವ, ಪರಾಮರ್ಶೆ ನಡೆಸುವ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು.

2. ಪೊಲೀಸ್ ದೂರು ಪ್ರಾಧಿಕಾರ: ಪೊಲೀಸರಿಗೇ ಸಂಪೂರ್ಣವಾಗಿ ಅಧಿಕಾರ ಕೊಟ್ಟರೆ ಗತಿಯೇನು? ಅವರಿಗೆ ಲಂಗುಲಗಾಮು ಹಾಕುವುದಕ್ಕೆಂದು ಒಂದು ವ್ಯವಸ್ಥೆ ರಚನೆಯಾಗಬೇಕು. ಅದೇ ಪೊಲೀಸ್ ದೂರು ಪ್ರಾಧಿಕಾರ. ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಪೊಲೀಸ್ ದೂರು ಪ್ರಾಧಿಕಾರಗಳನ್ನು ರಚನೆ ಮಾಡಬೇಕು. ಅಲ್ಲಿ ಡಿವೈಎಸ್ಪಿವರೆಗಿನ ಅಧಿಕಾರಿಗಳ ವಿರುದ್ಧದ ದೂರುಗಳನ್ನು ನೀಡಬಹುದು. ರಾಜ್ಯ ಮಟ್ಟದಲ್ಲಿ ಮತ್ತೊಂದು ಪ್ರಾಧಿಕಾರವನ್ನು ರಚನೆ ಮಾಡಿ ಎಸ್ಪಿ ಮತ್ತು ಮೇಲ್‌ಸ್ತರದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸಬೇಕು. ಜಿಲ್ಲಾ ಮಟ್ಟದ ಪ್ರಾಧಿಕಾರಗಳನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ರಾಜ್ಯ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರು ಅಲಂಕರಿಸುವ ಮೂಲಕ ದೂರುಗಳನ್ನು ಪರಿಶೀಲಿಸಿ  ನ್ಯಾಯದಾನ ಮಾಡಬೇಕು. ಈ ಪ್ರಾಧಿಕಾರಕ್ಕೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಇರುತ್ತದೆ.

ಇಷ್ಟೇ ಅಲ್ಲ, ಡಿಜಿ, ಐಜಿ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡ ಬೇಕು, ಅವರಿಗೆ ಕನಿಷ್ಠ ಎಷ್ಟು ವರ್ಷ ಅಧಿಕಾರಾವಧಿ ನೀಡಲೇಬೇಕು, ಒಂದು ಸ್ಥಳದಿಂದ ಒಬ್ಬ ಅಧಿಕಾರಿಯನ್ನು ಕನಿಷ್ಠ ಎಷ್ಟು ವರ್ಷಗಳವರೆಗೆ ಎತ್ತಂಗಡಿ ಮಾಡಬಾರದು ಎಂದೂ ಸುಪ್ರಿಂಕೋರ್ಟ್ ತನ್ನ ತೀರ್ಪಿನಲ್ಲಿ ಮಾರ್ಗದರ್ಶನ ನೀಡಿತು. ಆದರೆ ತೀರ್ಪು ಹೊರಬಿದ್ದು 3 ವರ್ಷ ಕಳೆಯುತ್ತಾ ಬಂದಿದ್ದರೂ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಮುಂತಾದ ಕೆಲವೇ ರಾಜ್ಯಗಳನ್ನು ಬಿಟ್ಟರೆ ಬೇರಾವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವ  ಔದಾರ್‍ಯ ತೋರಿಲ್ಲ, ಶಿಫಾರಸುಗಳನ್ನು ಜಾರಿಗೆ ತರುವ ಮನಸ್ಸು ಮಾಡಿಲ್ಲ!

ಏಕೆ?

ಪೊಲೀಸರು ಸ್ವತಂತ್ರರಾದರೆ ರಾಜಕಾರಣಿಗಳಿಗೆ ಒಂದು ದೊಡ್ಡ ‘ಆದಾಯ’ ಮೂಲ’ವೇ(ವರ್ಗಾವಣೆ) ನಿಂತುಹೋದಂತಾ ಗುತ್ತದೆ. ಪೊಲೀಸರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವುದಕ್ಕೂ ಕಡಿವಾಣ ಬಿದ್ದಂತಾಗುತ್ತದೆ. ಯಾವ ರಾಜಕಾರಣಿ ತಾನೇ ತನ್ನ ನಿಯಂತ್ರಣ, ಅಧಿಕಾರ, ಪ್ರಭಾವವನ್ನು ಕಳೆದುಕೊಳ್ಳಲು ಬಯಸುತ್ತಾನೆ? ಹಾಗಂತ ರಾಜಕಾರಣಿಗಳು ಎಷ್ಟು ದಿನ ಅಂತ ‘ರಿಂಗ್ ಮಾಸ್ಟರ್’ಗಳಂತೆ ವರ್ತಿಸುತ್ತಾರೆ? ಇವತ್ತು ಭಯೋತ್ಪಾದಕರು, ನಕ್ಸಲರು ಮಾತ್ರವಲ್ಲ, ಕೆಲ ವ್ಯಕ್ತಿ, ಸಂಘಟನೆಗಳೂ ದೇಶದ ಆಂತರಿಕ ಭದ್ರತೆಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಗೆ, 1861ರ ಪೊಲೀಸ್ ಕಾಯಿದೆಗೆ ತಿದ್ದುಪಡಿ ತರಬೇಕಾದ, ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೆ ತರಬೇಕಾದ ತ್ವರಿತ ಅಗತ್ಯವಿದೆ. ಆಂತರಿಕ ಭದ್ರತೆಯ ವಿಚಾರದಲ್ಲಿ ನಮ್ಮ ಮಿಲಿಟರಿಗಿಂತ ಪೊಲೀಸರೇ ಹೆಚ್ಚು ಸಮರ್ಥವಾಗಿ ಕೆಲಸ ಮಾಡಬಲ್ಲರು! ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ನಮ್ಮ ಮಿಲಿಟರಿ ಕೈಯಿಂದ ಸಾಧ್ಯವಾಗಿಲ್ಲ. ಆದರೆ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದವನ್ನು ಜೂಲಿಯಸ್ ರಿಬೇರೋ, ಕೆ.ಪಿ.ಎಸ್. ಗಿಲ್, ಎ.ಎಸ್. ಸಂಧು ನೇತೃತ್ವದಲ್ಲಿ ಪೊಲೀಸರೇ ಮಟ್ಟಹಾಕಿದರು. ಏಕೆಂದರೆ ಪೊಲೀಸರು ಜನರ ಮಧ್ಯೆಯೇ ಇರುತ್ತಾರೆ. ಯಾರು ಕಳ್ಳರು, ಖದೀಮರು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ರಾಜಕಾರಣಿಗಳ ಒತ್ತಡಕ್ಕೆ ಹೆದರಿ, ವರ್ಗಾವಣೆಯ ಭಯದಿಂದ ನಮಗೇಕೆ ಬೇಡದ ಉಸಾಬರಿ ಎಂದು ಒಂದಿಷ್ಟು ಪುಡಿಗಾಸು ಮಾಡಿಕೊಂಡು ನಿರಾಳವಾಗಿ ಕುಳಿತುಕೊಂಡಿರುತ್ತಾರೆ ಅಷ್ಟೇ. ಆದರೆ ನಮ್ಮ ದೇಶದ ನಾಗರಿಕರನ್ನೇ ದಾಳ, ಅಸ್ತ್ರಗಳನ್ನಾಗಿ ಮಾಡಿಕೊಂಡು ನಡೆಯುತ್ತಿರುವ ಭಯೋತ್ಪಾದನೆ, ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ ಪೊಲೀಸ್ ಪಡೆಯನ್ನು ಕ್ರಿಯಾಶೀಲ ಗೊಳಿಸಬೇಕಾದ, ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪ ಮಾಡಬೇಕಾದ ಅನಿವಾರ್ಯತೆಯೂ ಇದೆ.

ಪೊಲೀಸರ ‘POT belly” (ಡೊಳ್ಳು ಹೊಟ್ಟೆ )  ನಮಗೆ ತಮಾಷೆಯ ವಸ್ತುವಾಗಬಹುದು. ಆದರೆ ಅವರಿಗೆ ನಿತ್ಯ ವ್ಯಾಯಾಮ ಮಾಡುವುದಕ್ಕೂ ಸಮಯವಿರುವುದಿಲ್ಲ. ಹೊತ್ತಿಗೆ ಸರಿಯಾಗಿ ಊಟ ಮಾಡುವುದಕ್ಕೂ ಆಗುವುದಿಲ್ಲ. ಸರಿಯಾದ ನಿದ್ರೆಗೂ ಕೊರತೆಯಿದೆ. ಅವರಿಗೆ ಕೊಡುವ ಸಂಬಳ ಹೇಗಿದೆಯೆಂದರೆ ಸತ್ಯಹರಿಶ್ಚಂದ್ರನೂ ಭ್ರಷ್ಟನಾಗಿ ಬಿಡುತ್ತಾನೆ. ಪೊಲೀಸರ ನಿರ್ದಯದ ಬಗ್ಗೆ ನಾವು ಮಾತನಾಡುತ್ತೇವಲ್ಲಾ, ಪೊಲೀಸರ ಬಗ್ಗೆ ಕೆಲವೊಮ್ಮೆ ಸಮಾಜ ಹಾಗೂ ಸರಕಾರಗಳೂ ಅಷ್ಟೇ ನಿರ್ದಯವಾಗಿ ನಡೆದುಕೊಂಡು ಬಿಡುತ್ತವೆ. ಉದಾಹರಣೆಗೆ ನಕ್ಸಲ್ ಹಿಂಸಾಚಾರವನ್ನೇ ತೆಗೆದುಕೊಳ್ಳಿ. ಭಯೋತ್ಪಾದಕರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡರೆ ನಕ್ಸಲರ ಟಾರ್ಗೆಟ್ ಮಾತ್ರ ಪೊಲೀಸರು. ಮೊನ್ನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳಿ. 17 ಪೊಲೀಸರ ಮಾರಣಹೋಮ ನಡೆಯಿತು. ನಕ್ಸಲರು ಕೆಲವರನ್ನು ಶಿರಚ್ಛೇದ ಮಾಡಿಹೋದರು. ಆದರೆ ನಮ್ಮ ಸಮಾಜವಾಗಲಿ, ಸರಕಾರವಾಗಲಿ ಹೇಗೆ ನಡೆದುಕೊಂಡಿತು? ಸರಕಾರ ಒಂದಿಷ್ಟು ಪರಿಹಾರ ಘೋಷಿಸಿ ಕೈತೊಳೆದುಕೊಂಡರೆ ಪೊಲೀಸರ ಹತ್ಯೆ ಬಗ್ಗೆ ನಮ್ಮ ಸಮಾಜದ ಸಾಕ್ಷಿಪ್ರeಗೆ ನೋವೂ ಆಗಲಿಲ್ಲ, ಸಿಟ್ಟೂ ಬರಲಿಲ್ಲ! ಮಾಧ್ಯಮಗಳೂ ಅದನ್ನು ಒಂದು ಸುದ್ದಿಯಾಗಿ ನೋಡಿದವೇ ಹೊರತು ಹೆಣಭಾರದ ರೈಫಲ್ ಇಟ್ಟುಕೊಂಡು ಎ.ಕೆ.-47 ಜತೆ ಹೋರಾಡುವ ಪೊಲೀಸರ ಕಷ್ಟಕಾರ್ಪಣ್ಯದ ಬಗ್ಗೆ ಯಾರಿಗೂ ಮರುಕವುಂಟಾಗಲಿಲ್ಲ! ಕಳೆದು 10 ವರ್ಷಗಳಲ್ಲಿ ನಕ್ಸಲ್ ಹಿಂಸಾಚಾರಕ್ಕೆ ಸಿಕ್ಕಿ ಸತ್ತವರಲ್ಲಿ ಪೊಲೀಸರೇ ಹೆಚ್ಚು. ಅವರ ಕುಟುಂಬವರ್ಗದ ಅಳಲಿನ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ? ಮೊದಲನೇ ವಿಶ್ವಯುದ್ಧದ ಕಾಲದಲ್ಲಿ ಬಳಸುತ್ತಿದ್ದ ಬಂದೂಕುಗಳನ್ನು 21ನೇ ಶತಮಾನದಲ್ಲಿ ಹೆಗಲಿಗೇರಿಸಿ ಕೊಂಡು ನಕ್ಸಲರ ‘ಕೂಂಬಿಂಗ್ ಆಪರೇಶನ್’ಗೆ ಹೊರಡುವ ಪೊಲೀಸರಿಗೂ ಜೀವ-ಜೀವನ ಪ್ರೀತಿ  ಇದೆ, ಅವರ ಮನೆಗಳಲ್ಲೂ ಹೆಂಡತಿ ಮಕ್ಕಳಿದ್ದಾರೆ ಎಂದು ನಾವೇಕೆ ಯೋಚಿಸುವುದಿಲ್ಲ?

ಪ್ರಸ್ತುತ ನನೆಗುದಿಗೆ ಬಿದ್ದಿರುವ ಹಾಗೂ ಯಡಿಯೂರಪ್ಪನವರು ಮೊನ್ನೆ ಉಲ್ಲೇಖಿಸಿರುವ “ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್” ಈ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ. ಇಂದು ‘ಮಿನಿಟ್’ ತಲೆಬಾಧೆ ಪರೋಕ್ಷವಾಗಿ ಡಿಸಿ, ಎಸಿ, ಎಸ್ಪಿಗಳಿಗೂ ಆವರಿಸಿ ಬಿಟ್ಟಿದೆ. ತಮಗೆ ಬೇಕಾದವರನ್ನೇ ಡಿಸಿ, ಎಸ್ಪಿಯಾಗಿ ಹಾಕಿ ಎಂದು ಶಾಸಕ, ಸಂಸದರು ಪ್ರಭಾವ ಬೀರುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಚಾಳಿ ಹೀಗೆಯೇ ಮುಂದುವರಿದರೆ ತಾಲೂಕು, ಜಿಲ್ಲಾ ನ್ಯಾಯಾಧೀಶರೂ ಸ್ಥಳೀಯ ಶಾಸಕ, ಸಂಸದನ ‘ಮಿನಿಟ್’ ಕೇಳಬೇಕಾಗಿ ಬರಬಹುದು! ಮುಖ್ಯಮಂತ್ರಿಯವರೇ, ಸುಪ್ರೀಂಕೋರ್ಟನ್ನು ಮೆಚ್ಚಿಸುವುದಕ್ಕಾಗಿ, ಕೋರ್ಟ್ ತೀರ್ಪು ಉಲ್ಲಂಘನೆ ಅಪರಾಧದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬರೀ ಹೇಳಿಕೆ ಕೊಟ್ಟರಷ್ಟೇ ಸಾಲದು. ‘ಪೊಲಿಟಿಸೈಜೇಶನ್ ಆಫ್ ಪೊಲೀಸಿಂಗ್’ ಮೊದಲು ನಿಲ್ಲಬೇಕು. ಪದೇ ಪದೆ ಪೊಲೀಸ್ ವರ್ಗಾವಣೆ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ ದೋಚಿದ್ದು ಸಾಕು, ಇನ್ನಾದರೂ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ವೃತ್ತಿ ಸ್ವಾತಂತ್ರ್ಯ ನೀಡಿ. ಅವರ ಸಂಬಳ ಸವಲತ್ತನ್ನು ಮೊದಲು ಹೆಚ್ಚಿಸಿ, ನಂತರ ಪ್ರಾಮಾಣಿಕತೆ ಹಾಗೂ ವೃತ್ತಿಕ್ಷಮತೆ ಯನ್ನು ನಿರೀಕ್ಷಿಸಿ.

ನಮ್ಮ ಕರ್ನಾಟಕ ಪೊಲೀಸ್ ವ್ಯವಸ್ಥೆಯನ್ನು ಒಂದು ಮಾದರಿ ಪಡೆಯಾಗಿ ರೂಪಿಸಿ ಕರ್ನಾಟಕವನ್ನು ಭಯೋತ್ಪಾದನೆ ಮತ್ತು ಆಂತರಿಕ ಅಪಾಯಗಳಿಂದ ಸಂರಕ್ಷಿಸುವಂತಹ ಸುವರ್ಣಾವಕಾಶ ನಿಮಗಿದೆ. ಅಜಯ್ ಕುಮಾರ್ ಸಿಂಗ್ ಅವರಂತಹ ಕಾನೂನಿಗೆ ಮಾತ್ರ ತಲೆಬಾಗುವ ಅಧಿಕಾರಿ ಇರುವವರೆಗೂ ಸುಮ್ಮನಿದ್ದು ಆನಂತರ ನಮ್ಮ ಆಟ ಆಡೋಣ ಎಂಬಂತೆ ವರ್ತಿಸಬೇಡಿ. ಅವರ ನಂತರವೂ ಒಳ್ಳೆಯ ವ್ಯವಸ್ಥೆ, ಪಾರದರ್ಶಕ ವರ್ಗಾವಣೆ ಪದ್ಧತಿ ಮುಂದುವರಿಯಬೇಕು. ಮುಂದಿನ ತಲೆಮಾರು ಹಾಗೂ ಸಮಾಜದ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು, ಸುಪ್ರೀಂಕೋರ್ಟ್ ತೀರ್ಪಿನ ಆಶಯವನ್ನು ಅರ್ಥಮಾಡಿಕೊಂಡು ಪೊಲೀಸರಿಗೆ ವೃತ್ತಿ ಸ್ವಾತಂತ್ರ್ಯ ನೀಡುವಂತಹ ಕನಿಷ್ಠ ಉದಾರತೆಯನ್ನಾದರೂ ತೋರಿ ಮುಖ್ಯಮಂತ್ರಿಗಳೇ…