Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu

Bettale Jagattu

ಹಾಗಂತ ಹೇಳಿದವನು ಯಾವ ಬಜರಂಗಿಯೂ ಅಲ್ಲ !

ಒಬ್ಬ ಕ್ಯಾಥೋಲಿಕ್ಕನಾಗಿ ನಾನು ಪೂರ್ವಗ್ರಹಪೀಡಿತನಾಗಿದ್ದೆ. ನನ್ನ ಅಂಕಲ್ ಅಂದು ಹಾಗೂ ಇಂದಿಗೂ ಒಬ್ಬ ಮಿಷನರಿ. ಒಂದು ವೇಳೆ ದಕ್ಷಿಣ ಅಮೆರಿಕದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡದೇ ಹೋದರೆ ಅವರು ಅನಂತ ಅನಾಹುತಕ್ಕೆ ಈಡಾಗುತ್ತಾರೆ ಎಂದು ಆತ ಅಲ್ಲಿಗೆ ತೆರಳಿದ. ನಾನು ಕ್ಯಾಥೋಲಿಕ್ ಶಾಲೆಯಲ್ಲಿ ಕಲಿತವನು. ಹಿಂದೂಯಿಸಂ ಎಂದರೆ ಬಹುದೇವತಾರಾಧನೆ, ಮೂರ್ತಿಪೂಜೆ ಮತ್ತು ಮೂಢನಂಬಿಕೆ. ಹಿಂದೂಗಳಿಗೆ ಸ್ವರ್ಗದಲ್ಲಿ ಯಾವುದೇ ಜಾಗವಿಲ್ಲ ಎಂದು ನನಗೆ ಹೇಳಿಕೊಡಲಾಯಿತು. ನನ್ನ ಬಾಲ್ಯದ ಕ್ಯಾಥೋಲಿಸಂ ಅಂದರೆ ಇದಾಗಿತ್ತು, ಇಂದಿಗೂ ಹಿಂದೂಧರ್ಮವನ್ನು ಅವಹೇಳನ ಮಾಡುವ […]

Read More

ಮಮತಾ ಮೇಲೆ ನಮಗೇಕಿರಬೇಕು ಮಮತೆ?

ಅಂಥದ್ದೊಂದು ಕಾರನ್ನು ಮಾಡಲು ಸಾಧ್ಯವೇ ಇಲ್ಲ. ಒಂದು ಲಕ್ಷಕ್ಕೆ ಕಾರು ತಯಾರು ಮಾಡಲು  ಖಂಡಿತ ಆಗದು ಅಂತ ನಮ್ಮ ಇಂಜಿನಿಯರ್‌ಗಳೂ ಹೇಳಿದ್ದಾರೆ ಎಂದಿದ್ದರು ಸುಝುಕಿ ಕಂಪನಿಯ ಮುಖ್ಯಸ್ಥ ಶಿನ್ಝೋ ನಕಾನಿಶಿ. ಆದರೆ ಜನವರಿ ೧೦ರಂದು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ. ಅಂದು ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿದ್ದ ಕಾರು ಪ್ರದರ್ಶನದ ವೇಳೆ ವಿಶ್ವದ ಅತ್ಯಂತ ಅಗ್ಗದ ಕಾರಿನ ಮುಖಪರಿಚಯ ಮಾಡಿದ ರತನ್ ಟಾಟಾ, “ಈ ಕಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ […]

Read More

ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ!

೨೦೦೫ರಲ್ಲಿ ಸಾಯುವಾಗ ಪೋಪ್ ಜಾನ್‌ಪಾಲ್ ಮನದಲ್ಲಿ ಒಂದು ಕೊರಗು ಹಾಗೇ ಉಳಿದಿತ್ತು. ೧೯೭೯ರಲ್ಲಿ ಟರ್ಕಿ, ೧೯೮೧ರಲ್ಲಿ ಪಾಕಿಸ್ತಾನ, ಜಪಾನ್, ೧೯೮೧ ಹಾಗೂ ೧೯೯೫ರಲ್ಲಿ ಫಿಲಿಪ್ಪೀನ್ಸ್, ೧೯೮೪ ಮತ್ತು ೧೯೮೯ರಲ್ಲಿ ದಕ್ಷಿಣ ಕೊರಿಯಾ, ೧೯೮೪ರಲ್ಲಿ ಥಾಯ್ಲೆಂಡ್, ೧೯೮೬ರಲ್ಲಿ ಬಾಂಗ್ಲಾದೇಶ, ಸಿಂಗಪುರ, ೧೯೮೬ ಮತ್ತು ೧೯೯೯ರಲ್ಲಿ ಭಾರತ, ೧೯೮೯ರಲ್ಲಿ ಇಂಡೋನೇಷಿಯಾ ಮತ್ತು ಈಸ್ಟ್ ಟಿಮೋರ್, ೧೯೯೫ರಲ್ಲಿ ಶ್ರೀಲಂಕಾ, ೧೯೯೭ರಲ್ಲಿ ಲೆಬನಾನ್, ೨೦೦೧ರಲ್ಲಿ ಕಝಕಸ್ತಾನ್, ೨೦೦೨ರಲ್ಲಿ ಅಝರ್ ಬೈಜಾನ್- ಹೀಗೆ ೨೬ ವರ್ಷಗಳ ತಮ್ಮ ಪೋಪ್‌ಗಿರಿಯಲ್ಲಿ ಜಾನ್‌ಪಾಲ್ ಏಷ್ಯಾದ ೧೫ ರಾಷ್ಟ್ರಗಳಿಗೆ […]

Read More

ಆ ಕೊಳಕನ ನೆನಪುಗಳು ಹೃದಯವನೇಕೆ ಕಲಕುತಿವೆ?

ಅವನೊಬ್ಬ ಅರ್ಧ ವಯಸ್ಸು ಮೀರಿದ ವ್ಯಕ್ತಿ. ಅಗಲವಾದ ಕರಿ ಕನ್ನಡಕ ಆತನ ಕಣ್ಣುಗಳಿಗೆ ಪರದೆ ಹಾಕಿದೆ. ಕೆಂಪು ಬಣ್ಣದ ಬೇಸ್‌ಬಾಲ್ ಕ್ಯಾಪ್ ಮುಖದ ಅರ್ಧ ಭಾಗವನ್ನು ಆವರಿಸಿದೆ. ಆದರೂ ಪ್ಲಾಸ್ಟಿಕ್ ಸರ್ಜರಿಯ ಗುರುತು ಹಾಗೆಯೇ ಕಾಣುತ್ತಿದೆ. ಚರ್ಮ ಸುಕ್ಕುಗಟ್ಟಿದೆ, ನೋಟ ಕಳೆಗುಂದಿದೆ, ಕೈ ಬೆರಳಿನ ಉಗುರುಗಳು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗಿವೆ. ಆತ ಪೈಜಾಮ ಹಾಕಿಕೊಂಡಿದ್ದಾನೆ. ವ್ಹೀಲ್ ಚೇರ್ ಮೇಲೆ ಕುಳಿತಿದ್ದಾನೆ. ಆ ವ್ಹೀಲ್ ಚೇರನ್ನು ಆತನ ಸಹಾಯಕ ರಸ್ತೆ ಬದಿಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾನೆ. ಅದರ ಮುಂದೆ […]

Read More

ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.

Read More

‘ಲೆಗ್ ಶೇಕ್’ ಮಾಡಲು ಸಂಗೀತವೊಂದೇ ಸಾಕಾ ‘ನಂಬರ್ 7’?

“ಕೋಲ್ಕತಾದ ಹೋಟೆಲ್‌ನಿಂದ ನಿರ್ಗಮಿಸುವಾಗ ಲಗೇಜ್ ತುಂಬಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿಯೇ ಬಹುಶಃ ಆ ಡ್ರಗ್ಸ್ ಪ್ಯಾಕ್ ಹಾಕಿರಬೇಕು. Send-off  ಪಾರ್ಟಿ ಯೊಂದರ ಸಂದರ್ಭದಲ್ಲಿ ಸ್ನೇಹಿತರೊಬ್ಬರು ನನ್ನ ಹೋಟೆಲ್ ಕೊಠಡಿಗೆ ಆ ಡ್ರಗ್ಸನ್ನು ತಂದಿದ್ದರು. ನಾನು ಆತುರದಲ್ಲಿದ್ದ ಕಾರಣ ದುಬೈ ವಿಮಾನವೇರುವ ಮೊದಲು ಬ್ಯಾಗನ್ನು ಚೆಕ್ ಮಾಡಿಕೊಳ್ಳಲಾಗಲಿಲ್ಲ. ಆದರೆ ದುಬೈ ಏರ್‌ಪೋರ್ಟ್ ಅಧಿಕಾರಿಗಳಿಗೆ ನನ್ನ ಬ್ಯಾಗ್‌ನಲ್ಲಿ ಡ್ರಗ್ಸ್ ಸಿಕ್ಕಿದಾಗ ನಿಜಕ್ಕೂ ದಿಗ್ಭ್ರಮೆಗೊಳಗಾದೆ. ಅದು ನನ್ನ ಜೀವಮಾನದ ಅತ್ಯಂತ ಕೆಟ್ಟ ರಾತ್ರಿ”.

Read More

ಇವರ ಪಾಪದ ಕೊಳೆ ತೊಳೆಯಲು ‘ಯಾವ’ ದೇವರು ಬರಬೇಕು?!

ಆಕೆ ಇಂದು ನಮ್ಮೊಂದಿಗಿಲ್ಲ. ಅಕಾಲಿಕವಾಗಿ ಕೊಲೆಯಾಗಿ ೧೬ ವರ್ಷಗಳೇ ಕಳೆದವು. ಅಂದು ಆಕೆ ಅಸಹಜವಾಗಿ ಹೆಣವಾಗಿ ಬಿದ್ದಾಗ ೧೭ ದಿನಗಳ ಕಾಲ ತನಿಖೆ ನಡೆದಿತ್ತು. ಕೊನೆಗೆ ಸತ್ಯವನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲಾಯಿತು. ಆದರೆ ವಾಸ್ತವದಲ್ಲಿ ನಡೆದಿದ್ದೇನು ಎಂಬುದನ್ನು ಬೆಳಕಿಗೆ ತರುವ ಬದಲು ಸತ್ಯವನ್ನೇ ಹೊಸಕಿ ಹಾಕಿದ ಸಿಬಿಐ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯಿತು. ಆ ತಪ್ಪಿಗಾಗಿ ಕಟಕಟೆಗೆ ತಂದು ನಿಲ್ಲಿಸುವ ಕೇಂದ್ರ ತನಿಖಾ ದಳವೇ(ಸಿಬಿಐ), ಬರುವ ಆಗಸ್ಟ್ ೧೨ರಂದು ಕೇರಳ ಹೈಕೋರ್ಟ್ ಮುಂದೆ ಕಟಕಟೆಯಲ್ಲಿ […]

Read More

ಬಾಂಬಿಡುವವರ ಬಾಯ್ಮುಚ್ಚಿಸಲು ಬೇಕೊಬ್ಬ ಬರಾಕ್ ಒಬಾಮ!

“ನನಗೆ ಅರ್ಥವಾಗುತ್ತದೆ, ಮುಷರ್ರಫ್ ಅವರಿಗೆ ಅವರದ್ದೇ ಆದ ಸಮಸ್ಯೆ, ಸವಾಲುಗಳಿವೆ. ಆದರೆ ನಾನೊಂದು ಮಾತನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಮೂರು ಸಾವಿರ ಅಮೆರಿಕನ್ನರನ್ನು ಕೊಲೆಗೈದ ಭಯೋತ್ಪಾದಕರು ಇಂದಿಗೂ ಪಾಕ್ ಹಾಗೂ ಅಫ್ಘಾನಿಸ್ತಾನದ ಪರ್ವತ ಶ್ರೇಣಿಗಳಲ್ಲಿ ಅಡಗಿ ಕುಳಿತಿದ್ದಾರೆ. ಒಸಾಮಾ ಬಿನ್ ಲಾಡೆನ್ ಹಾಗೂ ಆಯ್‌ಮನ್ ಅಲ್ ಝವಾಹಿರಿ ಸೇರಿದಂತೆ ಪ್ರಮುಖ ಅಲ್ ಖಾಯಿದಾ ನಾಯಕರು ೨೦೦೫ರಲ್ಲಿ ಪಾಕಿಸ್ತಾನದ ಗಡಿಯೊಳಗಿನ ಪ್ರದೇಶವೊಂದರಲ್ಲಿ ಸಭೆ ಸೇರಿದ್ದರು. ಈ ಬಗ್ಗೆ ಅಮೆರಿಕಕ್ಕೆ ಸ್ಪಷ್ಟ ಮಾಹಿತಿಯೂ ದೊರೆತಿತ್ತು. ಆದರೆ ಅವರ ಮೇಲೆ ದಾಳಿ ಮಾಡಿದರೆ […]

Read More

ನಿಮ್ಮನ್ನು ಅಭಿನಂದಿಸಬೇಕಿತ್ತೆ ಮುಖ್ಯಮಂತ್ರಿಯವರೇ?!

“ಅಗತ್ಯ ಬಿದ್ದಾಗಲೆಲ್ಲ ನಿವೃತ್ತ ಶಿಕ್ಷಕರು, ಉಪ ನ್ಯಾಸಕರು, ವೈದ್ಯರು ಹಾಗೂ ಇತರ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಮತ್ತೆ ನೇಮಕ ಮಾಡಿಕೊಳ್ಳುತ್ತಾ ಬರಲಾಗಿದೆ. ಹಾಗೆ ನಿವೃತ್ತ ರಾಗಿರುವವರನ್ನೇ ನೇಮಕ ಮಾಡಿಕೊಳ್ಳುತ್ತಿರುವಾಗ ಹಾಲಿ ನೌಕರರ ಸೇವಾವಧಿಯನ್ನು ಎರಡು ವರ್ಷ ಹೆಚ್ಚಿಸುವುದರಲ್ಲಿ ತಪ್ಪೇನಿದೆ? ಆಡಳಿತದಲ್ಲಿ ದಕ್ಷತೆಯನ್ನು ತರಲು ಅನುಭವದ ಅಗತ್ಯವಿದೆ. ಹಾಗಾಗಿ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ೫೮ರಿಂದ ೬೦ಕ್ಕೆ ಏರಿಸಿದ್ದೇವೆ. ಅದಕ್ಕಾಗಿ ನನ್ನನ್ನು ಅಭಿನಂದಿಸುತ್ತೀರಿ ಎಂದು ಭಾವಿಸಿದ್ದೆ” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜುಲೈ ೨೦ರಂದು ಕರ್ನಾಟಕ ವಿದ್ಯುತ್ […]

Read More

ನಾವೇನು ಅವರ ಸ್ವಂತ ಆಸ್ತಿ ಕೇಳಿದ್ದೆವಾ?

ನಾವೇನು ಅವರ ಸ್ವಂತ ಆಸ್ತಿ ಕೇಳಿದ್ದೆವಾ?

ಅದೇನು ಇದ್ದಕ್ಕಿದ್ದಂತೆಯೇ ಬೆಳಕಿಗೆ ಬಂದ ವಿಷಯವೂ ಅಲ್ಲ, ಕದ್ದುಮುಚ್ಚಿ ಕಬಳಿಸಿದ ಭೂಮಿಯೂ ಅಲ್ಲ. ಕಳೆದ ಮೂರು ವರ್ಷಗಳಿಂದಲೂ ವಿಷಯ ನನೆಗುದಿಗೆ ಬಿದ್ದಿತ್ತು. ಬಲ್ತಾಲ್ ಬಳಿ ಭೂಮಿ ಕೊಡಿ ಎಂದು ‘ಶ್ರೀ ಅಮರನಾಥ್ ಶ್ರೈನ್ ಬೋರ್ಡ್’ ೨೦೦೫ರಲ್ಲೇ ಸರಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಅದಕ್ಕೂ ಕಾರಣವಿದೆ. ಅಮರನಾಥ ಗುಹೆ ಇರುವುದು ಶ್ರೀನಗರದಿಂದ ೧೪೧ ಕಿ.ಮೀ. ದೂರದಲ್ಲಿ, ೧೨,೭೬೦ ಅಡಿ ಎತ್ತರದಲ್ಲಿ. ಪ್ರತಿವರ್ಷ ಮೇ ಬಂತೆಂದರೆ ಅಲ್ಲಿನ ಗುಹೆಯಲ್ಲಿ ಹಿಮದ ಶಿವಲಿಂಗ ಉದ್ಭವವಾಗ ತೊಡಗುತ್ತದೆ ಹಾಗೂ ಆಗಸ್ಟ್‌ನಲ್ಲಿ ಕರಗುತ್ತದೆ. ಇಂತಹ […]

Read More