Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu

Bettale Jagattu

ಕಡೆಗೂ ಹೋಗುತ್ತಿದೆ, ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ಕಾಲ!

ನಾವು ತಮಿಳರಿಗೆ ‘ಕೊಂಗಾ’, ತೆಲುಗು ಭಾಷಿಕರಿಗೆ ‘ವಾಳ್ಳು’, ಮಲೆಯಾಳಿಗಳಿಗೆ ‘ಕುಟ್ಟಿ’ ಎಂದು ಹೇಗೆ ಕಿಚಾಯಿಸುತ್ತೇವೋ ಹಾಗೆಯೇ ಹಾಲಿವುಡ್‌ನಲ್ಲಿ ಯಾರನ್ನಾದರೂ, ಯಾವ ದೇಶದವರನ್ನಾದರೂ ಕಾಲೆಳೆಯಬೇಕಾದರೆ ಕೆಲವು ‘ಅಡ್ಡ’ ಹೆಸರುಗಳಿಂದ ಕರೆಯುತ್ತಾರೆ. ಅವು ಕೆಲವೊಮ್ಮೆ ಅವಮಾನಕಾರಿಯಾಗಿಯೂ, ಜನಾಂಗೀಯ ನಿಂದನೆ ಎನಿಸಿಕೊಳ್ಳುವಂತಹ ಪದಗಳಾಗಿರುತ್ತವೆ. ಕಪ್ಪುವರ್ಣೀಯರಿಗೆ ‘ನಿಗ್ಗರ್’, ಇಟಾಲಿಯನ್ಸ್‌ಗೆ ‘ಡ್ಯಾಗೋಸ್’, ಏಷ್ಯನ್ನರಿಗೆ ಅದರಲ್ಲೂ ವಿಯೆಟ್ನಾಮಿಯರಿಗೆ  ‘ಗೂಕ್ಸ್’, ಜಪಾನಿಯರಿಗೆ ‘ಸ್ಲಿಟ್ ಐಯ್ಡ್  ಜಾಪ್ಸ್’ ಅಥವಾ ‘ನಿಪ್,  ಪಿಲಿಪ್ಪೀನ್ಸ್‌ನವರಿಗೆ ‘ಪಿಲಿಪ್ಪೀನೋ’, ಚೀನಿಯರಿಗೆ ‘ಚಿನ್ಕ್ ’, ಇರಾಕಿಯರಿಗೆ ‘ಹಾಜಿ’-ಇಂತಹ ‘ಪದ’ಪ್ರಯೋಗಗಳನ್ನು ಹಾಲಿವುಡ್ ಚಿತ್ರ ಗಳಲ್ಲಿ ಸಾಮಾನ್ಯವಾಗಿ ಕಾಣಬಹುದು.

Read More

ಜಫ್ರಾನಾಳಿಗೆ ಮರುಗಿದ ಮನ ಸರಬ್‌ಜಿತ್‌ಗೂ ಮಿಡಿಯುತ್ತದೆ!

ನಮಗೆ ಆಗಸ್ಟ್ ೧೫ ಹೇಗೋ ಪಾಕಿಸ್ತಾನಿಯರಿಗೆ ಆಗಸ್ಟ್ ೧೪  ಹಾಗೇ. ಅದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಲಭಿಸಿದ ದಿನ. ಕಳೆದ ಆಗಸ್ಟ್ ೧೪ರಂದು ಬೆಳಗ್ಗೆ ಮಕ್ಕಳೆಲ್ಲಾ ಸಮವಸ್ತ್ರ ತೊಟ್ಟು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಶಾಲೆಯತ್ತ ತೆರಳುತ್ತಿದ್ದರೆ, ಸ್ನೇಹಿತರ ಜತೆ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಬಿದ್ದ ೧೫ ವರ್ಷದ ನಾಸಿರ್ ಸುಲ್ತಾನ್ ಸಂಜೆಯಾದರೂ ಹಿಂದಿರುಗಲಿಲ್ಲ.

Read More

ಆ ಮಾತುಗಳನ್ನು ಕೇಳುತ್ತಿದ್ದರೆ ಮಾರ್ಟಿನ್ ಲೂಥರ್ ನೆನಪಾಗುತ್ತಿದ್ದ!

ನನ್ನಲ್ಲೊಂದು ಕನಸಿದೆ… ನನ್ನ ನಾಲ್ವರು ಪುಟ್ಟ ಮಕ್ಕಳನ್ನು ಅವರ ಚರ್ಮದ ಬಣ್ಣಕ್ಕೆ ಬದಲು ಚಾರಿತ್ರ್ಯದಿಂದ ಅಳೆ ಯುವ ಕಾಲ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ನನ್ನಲ್ಲೊಂದು ಕನಸಿದೆ… ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾ ಮರು ಹಾಗೂ ಅವರನ್ನು ಗುಲಾಮರನ್ನಾಗಿ ಮಾಡಿದವರ ಮಕ್ಕಳು ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ ಕುಳಿತು ಮಾತನಾಡಿಕೊಳ್ಳುವಂತಹ ಕಾಲ ಬಂದೇ ಬರು ತ್ತದೆ. ನನ್ನಲ್ಲೊಂದು ಕನಸಿದೆ… ಈ ರಾಷ್ಟ್ರ ಒಂದಲ್ಲ ಒಂದು ದಿನ ‘ಎಲ್ಲರೂ ಸಮಾನರು’ ಎಂಬ ಮಾನವತೆಯ ನೈಜ […]

Read More

ಕರ್ನಾಟಕಕ್ಕೂ ಒಬ್ಬ ರಾಜ್ ಠಾಕ್ರೆ ಬೇಡವೆ?!

೧೯೫೭ರಿಂದ ೬೩ರವರೆಗೂ ಬಾಬು ಜಗಜೀವನ್ ರಾಮ್, ೧೯೬೯ರಿಂದ ೭೦ರವರೆಗೂ ಡಾ. ರಾಮ್ ಸುಭಾಗ್ ಸಿಂಗ್, ೧೯೭೩ರಿಂದ ೭೫ರವರೆಗೂ ಲಲಿತ್ ನಾರಾಯಣ ಮಿಶ್ರ, ೧೯೮೦ರಿಂದ ೮೧ರವರೆಗೂ ಕೇದಾರ್ ಪಾಂಡೆ, ೧೯೯೦ರಿಂದ ೧೯೯೧ರವರೆಗೂ ಜಾರ್ಜ್ ಫರ್ನಾಂಡಿಸ್, ೧೯೯೬ರಿಂದ ೧೯೯೮ರವರೆಗೂ ರಾಮ್ ವಿಲಾಸ್ ಪಾಸ್ವಾನ್, ೨೦೦೨ರಿಂದ ೦೪ರವರೆಗೂ ನಿತೀಶ್ ಕುಮಾರ್, ೨೦೦೪ರಿಂದ ಇಂದಿನವರೆಗೂ ಲಾಲು ಪ್ರಸಾದ್ ಯಾದವ್.

Read More

‘ದಿ ಹಿಂದು’ ಪತ್ರಿಕೆಯಲ್ಲಿ ‘ದಿ ವೈಟ್ ಟೈಗರ್’

“ಭಾರತವನ್ನು ಬೈಯ್ಯಿರಿ, ‘ಬುಕರ್’ ಪಡೆಯಿರಿ” ಎಂಬ ನನ್ನ ಲೇಖನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂತು. ಆದರೆ ಕೆಲವೇ ಕೆಲವು ಜನರು ಅಪಸ್ವರವನ್ನೂ ಎತ್ತಿದರು. ನಮ್ಮ ದೇಶದ ಹುಳುಕನ್ನು ಎತ್ತಿತೋರಿಸುವುದರಲ್ಲಿ ತಪ್ಪೇನಿದೆ? ತಪ್ಪನ್ನೇ ಎತ್ತಿ ತೋರಿಸಬಾರದು ಎಂದರೆ ಹೇಗೆ?

Read More

ಭಾರತವನ್ನು ಬೈಯಿರಿ, ‘ಬುಕರ್’ ಪಡೆಯಿರಿ!

ಮಿಸ್ಟರ್ ಜಿಯಾಬಾವೋ, ಇಂಟರ್‌ನೆಟ್‌ನಿಂದ ಗಗನ ನೌಕೆಗಳವರೆಗೆ ಎಲ್ಲವನ್ನೂ ಸಂಶೋಧನೆ ಮಾಡಿದ್ದು ಭಾರತೀ ಯರೇ. ಅವುಗಳನ್ನೆಲ್ಲ ಬ್ರಿಟಿಷರು ನಮ್ಮಿಂದ ಕದ್ದುಕೊಂಡು ಹೋದರು. ಇಂತಹ ಕಥೆಯನ್ನು ನೀವು ಭಾರತಕ್ಕೆ ಕಾಲಿಟ್ಟ ಕೂಡಲೇ ಹೇಳುತ್ತಾರೆ! Nonsense. ಹತ್ತು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಕೊಟ್ಟ ಅತಿದೊಡ್ಡ ಕೊಡುಗೆಯೆಂದರೆ ಕೋಳಿಗೂಡು!

Read More

ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ!

ಅಂಕಿತ್ ಗುಜರಾತಿನವನು. ಆತನ ವಿವಾಹ ನಿಶ್ಚಿತಾರ್ಥವಾಯಿತು. ಅದರ ಜತೆಗೆ ವಿಚಿತ್ರ ಸಮಸ್ಯೆಯೂ ಶುರುವಾಯಿತು. ಅಂಕಿತ್‌ನ ಸೆಲ್‌ಫೋನ್‌ಗೆ ಆತ ವಿವಾಹವಾಗಲಿದ್ದ ವಧುವಿನ ಸೆಲ್‌ನಿಂದ ದಿನಕ್ಕೆ ಐದಾರು ಎಸ್ಸೆಮ್ಮೆಸ್‌ಗಳು ಬರಲಾರಂಭಿಸಿದವು. ಆದರೆ ಅವು ಪ್ರೀತಿ, ಕಾಳಜಿಯ ಸಂದೇಶಗಳಾಗಿರಲಿಲ್ಲ. ಎಚ್ಚರಿಕೆಯ ಗಂಟೆಗಳಾಗಿದ್ದವು. ನನಗೆ ಬೇರೊಬ್ಬನ ಜತೆ ಸಂಬಂಧವಿದೆ. ನನ್ನನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹುಶಾರ್. ಇಂತಹ ಎಸ್ಸೆಮ್ಮೆಸ್‌ಗಳನ್ನು ಕಂಡು ಆಶ್ಚರ್ಯಚಕಿತನಾದ ಅಂಕಿತ್, ಕಾರಣ ತಿಳಿದುಕೊಳ್ಳುವ ಸಲುವಾಗಿ ನೇರವಾಗಿ ವಧುವನ್ನು ಕಂಡು ವಿಚಾರಿಸಿದಾಗ ಅಂತಹ ಎಸ್ಸೆಮ್ಮೆಸ್‌ಗಳನ್ನು ಆಕೆ ಕಳುಹಿಸಿಯೇ ಇರಲಿಲ್ಲ!

Read More

ಬೆಹನ್‌ಜಿಯ ಪರ್ದಾನಿ ಕನಸು!

ಠಾಕೂರ್, ಬನಿಯಾ, ಬ್ರಾಹ್ಮಣ್ ಚೋರ್ ಬಾಕಿ ಸಬ್ ಹೈ ದುಶ್ವರ್ ತಿಲಕ್, ತರಾಜು ಔರ್ ತಲ್ವಾರ್ ಇನ್‌ಕೋ ಮಾರೋ ಜೂತಾ ಚಾರ್ ಹಾಗಂತ ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಠಾಕೂರರ ವಿರುದ್ಧ ದ್ವೇಷ ಕಾರಿಕೊಳ್ಳುತ್ತಿದ್ದ ಕುಮಾರಿ ಮಾಯಾವತಿ ಅವರಿಗೆ, ಬರೀ ಮೇಲ್ಜಾತಿ ದೂಷಣೆ ಹಾಗೂ ದಲಿತರ ಮತ ಗಳಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅರಿವಾದ ಕೂಡಲೇ ಅದೆಷ್ಟು ಚೆನ್ನಾಗಿ ಬಣ್ಣ ಬದಲಾಯಿಸಿದರೆಂದರೆ –

Read More

ಮುರಿದ ಕೈಯಲ್ಲೇ ಕಾಶ್ಮೀರಕ್ಕಾಗಿ ಕಾದಾಡಿದವನ ನೆನಪೇಕೋ ಕಾಡುತಿದೆ

“ಒಬ್ಬ ಸೈನಿಕನ ಎದೆಗಾರಿಕೆ ಹಾಗೂ ಗಟ್ಟಿತನ ೧೯೪೭ರಲ್ಲಿ ಕಾಶ್ಮೀರದ ಇತಿಹಾಸವನ್ನೇ ಬರೆ ಯಿತು. ಒಂದು ವೇಳೆ, ಆತ ಪ್ರಾಣದ ಹಂಗು ತೊರೆದು ಹೋರಾಡದಿದ್ದರೆ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡದೇ ಹೋಗಿದ್ದಿದ್ದರೆ ಕಾಶ್ಮೀರದ ಇತಿಹಾಸವೇ ಬದಲಾಗುತ್ತಿತ್ತು, ಪಾಕಿಸ್ತಾನದ ಕೈವಶವಾಗುತ್ತಿತ್ತು” . ೨೦೦೬, ಆಗಸ್ಟ್ ೨೨ರಂದು “ಬದ್ಗಾಂ ವಾರ್ ಮೆಮೋರಿ ಯಲ್” ಅನ್ನು ಉದ್ಘಾಟನೆ ಮಾಡಿದ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಭಾವುಕರಾಗಿ ಮಾತನಾಡುತ್ತಿದ್ದರು.

Read More

ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನಾ ಬಿಶಪ್?

City of God. ಜೆರುಸಲೇಂ ಅನ್ನು ಕ್ರೈಸ್ತರು ಕರೆಯುವುದೇ ಹಾಗೆ. ಅವರ ಆರಾಧ್ಯದೈವ ಜೀಸಸ್ ಜನಿಸಿದ್ದು ಜೆರುಸಲೇಂ ಬಳಿಯ ಬೆತ್ಲಹೇಮ್‌ನಲ್ಲಿ. ಬಾಲ್ಯವನ್ನು ಕಳೆದಿದ್ದು ಜೆರುಸಲೇಂನಲ್ಲಿ. ಜೀಸಸ್‌ನನ್ನು ಶಿಲುಬೆಗೆ ಏರಿಸಿದ ಕ್ಯಾಲ್‌ವರಿ ಹಿಲ್ ಇರುವುದೂ ಜೇರುಸಲೇಂನಲ್ಲೇ. ಈ ಎಲ್ಲ ಕಾರಣ ಗಳಿಂದಾಗಿ ಕ್ರೈಸ್ತರಿಗೆ ಜೆರುಸಲೇಂಗಿಂತ ಪವಿತ್ರ ಸ್ಥಳ ಜಗತ್ತಿನಲ್ಲಿ ಬೇರೊಂದಿಲ್ಲ. ಇಂತಹ ಜೇರುಸಲೇಂ 1076ರಲ್ಲಿ ಮುಸ್ಲಿಮರ ವಶವಾಯಿತು.

Read More