Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu

Bettale Jagattu

ಹರೆಯದವರ ಮೇಲೆ ಹಲ್ಲೆಯಾದಾಗ ಮಾತ್ರ ನಮ್ಮ ಆತ್ಮಸಾಕ್ಷಿ ಕೆರಳುವುದೇಕೆ?

ಕೆವಿನ್ ಕಾರ್ಟರ್, ಕೆನ್ ಓಸ್ಟರ್‌ಬ್ರೋಕ್, ಗ್ರೆಗ್ ಮರಿ ನೋವಿಚ್, ಜೊಆವೋ ಸಿಲ್ವಾ. ಇವರೆಲ್ಲರೂ ದಕ್ಷಿಣ ಆಫ್ರಿಕಾದ ಫೋಟೋಗ್ರಾಫರ್‍ಸ್. ವರ್ಣಭೇದ ನೀತಿಯ ವಿರುದ್ಧ ಭುಗಿಲೆದ್ದಿದ್ದ ಜನಾಂಗೀಯ ಸಮರ, ಸಾಮಾಜಿಕ ಕಲಹ ೧೯೯೦ರ ವೇಳೆಗೆ ತುತ್ತತುದಿಗೇರಿತ್ತು. ಬಿಳಿಯರು ಕರಿಯರು ಕೊಲೆ, ಕಚ್ಚಾಟದಲ್ಲಿ ತೊಡಗಿದ್ದರು. ಅಂತಹ ಹಿಂಸೆಯ ಹಸಿ ಹಸಿ ಫೋಟೋಗಳನ್ನು ತೆಗೆಯುವುದೇ ಈ ನಾಲ್ವರು ಛಾಯಾಚಿತ್ರಕಾರರ ಮುಖ್ಯ ದಂಧೆಯಾಗಿತ್ತು. ಜೋಹಾನ್ನೆಸ್‌ಬರ್ಗ್‌ನ ಮ್ಯಾಗಝಿನ್‌ನಲ್ಲಿ ಪ್ರಕಟವಾಗುತ್ತಿದ್ದ ಹೃದಯ ವಿದ್ರಾವಕ ಚಿತ್ರಗಳೆಲ್ಲ ಇವರದ್ದೇ ಆಗಿರುತ್ತಿದ್ದವು. “The Bang-Bang Club” ಎಂದೇ ಇವರು ಹೆಸರಾಗಿ ದ್ದರು. […]

Read More

ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ!

ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ! ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು. ‘ಸಾಕ್ಷ್ಯ ಕೊಡಿ, ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ’ಎಂದಿತ್ತು.

Read More

ಭಾರತೀಯರು ಮಾತ್ರವಲ್ಲ, ಜಗತ್ತೇ ನಿಮ್ಮನ್ನು ‘ಲವ್’ ಮಾಡುತ್ತೆ!

ಮೊನ್ನೆ ಜನವರಿ ೧೨ರಂದು ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ತಮ್ಮ ಕೊನೆಯ ಪತ್ರಿಕಾಗೋಷ್ಠಿ ಕರೆದಿದ್ದರು. ಸಹಜವಾಗಿಯೇ ಎಲ್ಲ ತೆರನಾದ ಟೀಕೆ, ವಾಗ್ಬಾಣಗಳನ್ನು ಬುಷ್ ಎದುರಿಸಬೇಕಾಯಿತು. “ನೂತನ ಅಧ್ಯಕ್ಷರು ಜಾಗತಿಕ ಮಟ್ಟದಲ್ಲಿ ಅಮೆರಿಕದ ನೈತಿಕ ಸ್ಥಾನಮಾನವನ್ನು ಮರು ಸ್ಥಾಪಿಸಬೇಕಾದ ಅಗತ್ಯವಿದೆ” ಎಂದ ಪತ್ರಕರ್ತರೊಬ್ಬರು, ಜಾರ್ಜ್ ಬುಷ್ ಆಡಳಿತದಡಿ ಅಮೆರಿಕದ ಪ್ರತಿಷ್ಠೆಗೆ ಭಾರೀ ಧಕ್ಕೆಯಾಗಿದೆ ಎಂದು ಪರೋಕ್ಷವಾಗಿ ಚುಚ್ಚಿದರು.

Read More

ಗಣೇಶ್ ಮಾತಾಡಿದರೆ ಚಂಪಾ ನಾಲಗೆಯೇಕೆ ತುರಿಸುತ್ತದೆ?

ನಾಲ್ಕೂವರೆ ವರ್ಷಗಳ ಹಿಂದಿನ ಮಾತು. ೨೦೦೪, ಆಗಸ್ಟ್‌ನಲ್ಲಿ ಖ್ಯಾತ ‘ಔಟ್‌ಲುಕ್’ ವಾರಪತ್ರಿಕೆ ಒಂದು ವಿಶೇಷ ಸಂಚಿಕೆಯನ್ನು ಹೊರ ತಂದಿತು. “What if” ಎಂಬ ಅದರ ಶೀರ್ಷಿಕೆಯೇ ಸಾಕಿತ್ತು ಓದುಗರ ಗಮನ ಸೆಳೆಯಲು, ಆಸಕ್ತಿ ಹುಟ್ಟಿಸಲು. ಇಂತಹ ಒಂದು ಸಂಚಿಕೆಯನ್ನು ಹೊರತರುವ ಕಲ್ಪನೆ ಹೊಳೆ ದಿದ್ದು ಕರ್ನಾಟಕ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾದ ಮೈಸೂರಿನ ಕೃಷ್ಣ ಪ್ರಸಾದ್ ತಲೆಯಲ್ಲಿ. ಆ ಸಂಚಿಕೆಗೆ ಕೃಷ್ಣ ಪ್ರಸಾದ್ ಅವರೇ ಸಂಪಾದಕರು. ಒಂದು ವೇಳೆ ಭಾರತ ಇಬ್ಭಾಗವಾಗದೇ […]

Read More

ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಸದಾ ಅವರು ನಮ್ಮೊಡನಿರಬೇಕು

ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು… ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?

Read More

ಈಗಾಗಲೇ 3ನ್ನು ಕಳೆದುಕೊಂಡಿದ್ದೀರಿ, ಉಳಿದಿರುವುದೊಂದೇ!

ಸ್ವಾಮಿ ಯಡಿಯೂರಪ್ಪನವರೇ, ಏಕೋ ನಿಮ್ಮನ್ನು ‘ಮುಖ್ಯಮಂತ್ರಿ’ ಎಂದು ಸಂಬೋಧಿಸಲು ಮನಸ್ಸಾಗುತ್ತಿಲ್ಲ. ‘ಮುಖ್ಯಮಂತ್ರಿ’ ಸ್ಥಾನಕ್ಕೆ ಒಂದು ಘನತೆ, ಪಾವಿತ್ರ್ಯತೆ, ಹಿರಿಯಣ್ಣನ ಹೃದಯ ವೈಶಾಲ್ಯತೆ ಇರುತ್ತದೆ. ನಿಮ್ಮಲ್ಲಿ ಅವ್ಯಾವುವೂ ಕಾಣುತ್ತಿಲ್ಲ. ಹಾಗಾಗಿ ನಿಮ್ಮನ್ನು ಯಡಿಯೂರಪ್ಪ ನವರೇ ಎಂದರೆ ಹೆಚ್ಚು ಸೂಕ್ತವಾದೀತು.

Read More

ಡಿಸೆಂಬರ್ 7 ಬಂದು ಹೋಯಿತು, ಅಂದೇ ಅವರ ನೆನಪಾಗಿತ್ತು, ಆದರೆ…

(Photo: Master Hirannaiah, Beechi and Uday Shankar) ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi  ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.

Read More

ಆ ಕೆಟ್ಟ ಘಟನೆ ಒಂದು ಒಳ್ಳೆಯ ಬದಲಾವಣೆಗೆ ಭಾಷ್ಯ ಬರೆಯುತ್ತಿದೆಯೇ?

I take instructions from God! ನನ್ನನ್ನು ದೇವರೇ ಮುನ್ನಡೆಸುತ್ತಿದ್ದಾನೆ, ನನಗೆ ದೇವರೇ ಮಾರ್ಗ ತೋರುತ್ತಿದ್ದಾನೆ, ನಾನು ದೇವರಿಂದ “ನೇರವಾಗಿ” ಆe ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಳು ಫ್ರಾನ್ಸ್‌ನ ದಂತಕಥೆ ಜೋನ್ ಆಫ್ ಆರ್ಕ್. ಆದರೆ ಆಕೆ ಹಾಗೆ ಹೇಳಿದ್ದು ಕ್ಯಾಥೋಲಿಕ್ ಪಾದ್ರಿಗಳ ದೃಷ್ಟಿಯಲ್ಲಿ ಕ್ಷಮಿಸಲಾರದ ತಪ್ಪಾಗಿತ್ತು. ಅಷ್ಟಕ್ಕೂ ೧೪, ೧೫ನೇ ಶತಮಾನದಲ್ಲಿ ಎಂತಹ ಪರಿಸ್ಥಿತಿಯಿತ್ತೆಂದರೆ, ಯಾರಾದರೂ ದೇವರನ್ನು ಕಾಣಬೇಕಿದ್ದರೆ, ದೇವರಿಗೆ ಮೊರೆಯಿಡಬೇಕಾಗಿದ್ದರೆ ಪಾದ್ರಿಗಳ ಮುಖಾಂತರವೇ ದೇವರನ್ನು Contact ಮಾಡಬೇಕಿತ್ತು!

Read More

ಸಂಕಷ್ಟಕ್ಕೆಲ್ಲಾ ಕಾರಣ ಶನೇಶ್ವರನಲ್ಲ, ಸೋನಿಯಾ!

The Arabs will stop fighting us when they love their children more than they hate Jews! ಹಾಗಂತ ಹೇಳಿದ್ದು ಇಸ್ರೇಲ್‌ನ ಮಾಜಿ ಪ್ರಧಾನಿ ದಿವಂಗತ ಗೋಲ್ಡಾ ಮೈಯರ್. ಮಾರ್ಗರೆಟ್ ಥ್ಯಾಚರ್‌ಗಿಂತ ಮೊದಲು “Iron Lady” ಎಂದು ಕರೆಯುತ್ತಿದ್ದುದು ಗೋಲ್ಡಾ ಮೈಯರ್ ಅವರನ್ನೇ. ಇಸ್ರೇಲ್‌ನ ಮೊದಲ ಪ್ರಧಾನಿ ಬೆನ್ ಗುರಿಯನ್ ಅವರಂತೂ “The only man in the Cabinet” ಎಂದು ಆಕೆಯನ್ನು ವರ್ಣಿಸಿದ್ದರು.

Read More

ಅವರ ನಿಧನ ‘ತುಂಬಲಾರದ ನಷ್ಟ’ವೋ, ಅವರಿಂದಾದ ನಷ್ಟ ‘ತುಂಬಲಾರ’ದ್ದೋ?

Even the rain couldn’t dampen the spirits of thousands of cricket fans… ಅದು ಎಂಥದ್ದೇ ಸಂದರ್ಭವಾಗಿರಬಹುದು, ಯಾವುದೇ ಸ್ಥಳವಾಗಿರಬಹುದು. ಭಾರತ ಭಾಗಿಯಾಗಿರುವ ಕ್ರಿಕೆಟ್ ಪಂದ್ಯವೊಂದರ ವೇಳೆ ಮಳೆ ಬಂದರೂ ನಮ್ಮ ಕ್ರಿಕೆಟ್ ಪ್ರಿಯ ವೀಕ್ಷಕರು ಮಾತ್ರ ಜಾಗ ಬಿಟ್ಟು ಕದಲುವುದಿಲ್ಲ. ಮಳೆಯನ್ನೂ ಲೆಕ್ಕಿಸದೆ ಮತ್ತೆ ಪಂದ್ಯ ಆರಂಭವಾಗುವುದನ್ನೇ ಇದಿರು ನೋಡುತ್ತಾ ಕುಳಿತುಕೊಳ್ಳುತ್ತಾರೆ.

Read More