ಅವನು ನಿಜಕ್ಕೂ ಬೇರೆ ಗ್ರಹದಿಂದ ಬಂದವನು!

Sunday, December 23rd, 2012
ಅವನು ನಿಜಕ್ಕೂ ಬೇರೆ ಗ್ರಹದಿಂದ ಬಂದವನು!

Trickeries ಅಂತಾರಲ್ಲ, ಬ್ರೆಝಿಲ್್ನ ರೊನಾಲ್ಡೀನೋ ಥರ ನಿಂತಲ್ಲೇ ಕಾಲನ್ನು ಅಲುಗಿಸುತ್ತಾ ಎದುರಾಳಿ ತಂಡದ ರಕ್ಷಣಾ ಆಟಗಾರರನ್ನು ಮಂಗ ಮಾಡುವುದು, ದಾರಿ, ದಿಕ್ಕು ತಪ್ಪಿಸಿ”ಡಿ’ನೊಳಕ್ಕೆ ನುಗ್ಗುವುದು, ಗೋಲು ಹೊಡೆಯುವುದು ಇವು ಆತನ ಆಟದಲ್ಲಿ ಕಾಣುವುದಿಲ್ಲ. ಒಬ್ಬ ಆಕ್ರಮಣಕಾರಿ ಫುಟ್ಬಾಲ್ ಸ್ಟ್ರೈಕರ್್ಗೆ ಅತ್ಯಗತ್ಯವಾದ Dribbling, Pass, Shootಗಳಲ್ಲಿ ಆತ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನೂ ಅಲ್ಲ. ಇಬ್ರಹ್ಮೋವಿಚ್, ಎಟೋ ಥರ ಅತ್ಯಂತ ಮಾರಕ ಗೋಲು ಹೊಡೆಯುವವನೂ ಆತನಲ್ಲ. ಬ್ರೆಜಿಲ್್ನ ದಂತಕಥೆ ಲೂಯಿಸ್ ರೊನಾಲ್ಡೋ ಥರ ಫಿನಿಶಿಂಗ್ ಕೂಡ ಇಲ್ಲ. ಹಾಗಿದ್ದರೂ”ಲೂಯಿಸ್ [...]

ಅವರು ಅಡ್ಡಗಾಲು ಹಾಕದಿದ್ದರೆ ಪಟೇಲ್ ಪ್ರಧಾನಿ ಆಗಿರುತ್ತಿದ್ದರು, ದೇಶಕ್ಕೊಬ್ಬ ಧೀರ ನಾಯಕ ಸಿಕ್ಕಿರುತ್ತಿದ್ದ!

Sunday, December 23rd, 2012
ಅವರು ಅಡ್ಡಗಾಲು ಹಾಕದಿದ್ದರೆ ಪಟೇಲ್ ಪ್ರಧಾನಿ ಆಗಿರುತ್ತಿದ್ದರು, ದೇಶಕ್ಕೊಬ್ಬ ಧೀರ ನಾಯಕ ಸಿಕ್ಕಿರುತ್ತಿದ್ದ!

ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಇಂದಿಗೂ ಅವರನ್ನು ಮಾತ್ರ Man of steel‘ ಅಥವಾ “ಉಕ್ಕಿನ ಮನುಷ್ಯ’ ಎಂದು ಕರೆಯುತ್ತೇವೆ. ಅಂತಹ ಒಬ್ಬ ನಾಯಕ ಮತ್ತೆ ಜನಿಸಲೇ ಇಲ್ಲ. ಈ ಉಕ್ಕಿನ ಮನುಷ್ಯ ಬಾಲಕನಾಗಿದ್ದಾಗ ಕಂಕುಳದ ಕೆಳಗೆ ಕಜ್ಜಿಯಂಥ ಬೊಬ್ಬೆಯೊಂದು ಮೂಡಿತ್ತು. ಈ ರೀತಿಯ ಬೊಬ್ಬೆಗಳಿಗೆ ಆ ಕಾಲದಲ್ಲಿ ಕಾದ ಕಬ್ಬಿಣದ ಸಲಾಕೆಯಿಂದ ಸುಡುವ ಪದ್ಧತಿ ರೂಢಿಯಲ್ಲಿತ್ತು. ಆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ವ್ಯಕ್ತಿಯ ಬಳಿಗೆ ಬಾಲಕನನ್ನು ಕರೆದುಕೊಂಡು ಹೋದರು. ಆತ ಕಬ್ಬಿಣ ಕೆಂಪಾಗುವವರೆಗೂ ಕಾಯಿಸಿದರೂ [...]

ಶತಾವಧಾನಿ ಎಂಬ ವಿದ್ವತ್ ಶಿಖರ, ಒಡಲಲ್ಲಿ ಮಾತೃ ಪ್ರೀತಿಯ ಸಾಗರ!

Monday, December 3rd, 2012
ಶತಾವಧಾನಿ ಎಂಬ ವಿದ್ವತ್ ಶಿಖರ, ಒಡಲಲ್ಲಿ ಮಾತೃ ಪ್ರೀತಿಯ ಸಾಗರ!

ಒಮ್ಮೆ ಸುರತ್ಕಲ್್ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಇನ್ಸ್್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್್ಐಟಿಕೆ) ‘ಅವಧಾನ’ ನಡೆಯುತ್ತಿತ್ತು. ಶತಾವಧಾನಿ ಆರ್. ಗಣೇಶರ ಬರವಣಿಗೆ ಕ್ಲಿಷ್ಟವಾದರೂ ಮಾತುಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಅಂದು ಎನ್್ಐಟಿಕೆಯಲ್ಲೂ ಅಂಥದ್ದೇ ವಾತಾವರಣ ಸೃಷ್ಟಿಯಾಗಿತ್ತು. ಅವಧಾನವೆಂದರೆ ಪ್ರಶ್ನೆಗಳಿಗೆ ಚೌಕಟ್ಟು ಇರುವುದಿಲ್ಲ, ಧರ್ಮ-ಶಾಸ್ತ್ರಗಳಿಂದ ಲೌಕಿಕ ವಿಷಯಗಳವರೆಗೂ ಏನನ್ನು ಬೇಕಾದರೂ ಕೇಳಬಹುದು. ಧರ್ಮ-ಅಧರ್ಮ, ಯುದ್ಧ-ಅಹಿಂಸೆ ಯಾವ ವಿಷಯಗಳ ಬಗ್ಗೆ ಕೇಳಿದರೂ ಅವಧಾನಿಗಳು ಸಮರ್ಥವಾಗಿ ಉತ್ತರಿಸಬೇಕು.

ಇಷ್ಟಕ್ಕೂ ಯಡಿಯೂರಪ್ಪನವರು ಮಾಡಿದ ತಪ್ಪಾದರೂ ಏನು?

Wednesday, November 7th, 2012
ಇಷ್ಟಕ್ಕೂ ಯಡಿಯೂರಪ್ಪನವರು ಮಾಡಿದ ತಪ್ಪಾದರೂ ಏನು?

ಬಿಎಸ್್ವೈ, A.K.A. (Also known as) ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ನಿಜಕ್ಕೂ ಯಾರು? ಈಗ ನೋಡುತ್ತಿರುವ ವ್ಯಕ್ತಿ, ವ್ಯಕ್ತಿತ್ವವೇ ನಿಜವಾದ ಯಡಿಯೂರಪ್ಪನವರೇ? ಅವರು ಇಂದು ಆಡುತ್ತಿರುವ ಹತಾಶೆಯ ಮಾತುಗಳಿಂದ ಅವರನ್ನು ಅಳೆಯಬೇಕೋ ಅಥವಾ ಆ ಮಾತುಗಳ ಹಿಂದಿರುವ ನೋವನ್ನು ಅರ್ಥಮಾಡಿಕೊಂಡರೆ ನಿಜವಾದ ಯಡಿಯೂರಪ್ಪ ಗೋಚರಿಸುತ್ತಾರಾ? ಪಕ್ಷದೊಳಗೇ ಇರುವ ಅಸಹನೀಯ ಮನಸ್ಸುಗಳು, ಅವರ ಏಳಿಗೆಯನ್ನು ಸಹಿಸದ ಅತೃಪ್ತ ಆತ್ಮಗಳು ಅವರನ್ನು ಹೀಗೆ ಮಾಡಿದವಾ? ಅವರು ನಿಜಕ್ಕೂ ಭ್ರಷ್ಟರಾ ಅಥವಾ ಪರಿಸ್ಥಿತಿ ಅವರನ್ನು ಭ್ರಷ್ಟರನ್ನಾಗಿ ಮಾಡಿತಾ? ಅವರು ಪರಿಸ್ಥಿತಿಯ ಕೈಗೊಂಬೆಯಾಗಿ [...]

ಮಲಾಲಾ ಪ್ರಕರಣದಲ್ಲಿ ಭಾರತದ ಮತಾಂಧರಿಗೂ ಒಂದು ಮೆಸೇಜ್ ಇದೆಯಲ್ಲವೆ?

Saturday, October 20th, 2012
ಮಲಾಲಾ ಪ್ರಕರಣದಲ್ಲಿ ಭಾರತದ ಮತಾಂಧರಿಗೂ ಒಂದು ಮೆಸೇಜ್ ಇದೆಯಲ್ಲವೆ?

ಮೊದಲಿಗೆ ರಿಮ್ಷಾ ಮಸೀಹ ಈಗ ಮಲಾಲಾ ಯುಸಫ್್ಜಾಯಿ ಇವರಿಬ್ಬರೂ 14 ವರ್ಷದ ಬಾಲಕಿಯರೇ. ಮೊದಲನೆಯವಳು ಧರ್ಮನಿಂದನೆ ನೆಪದಲ್ಲಿ ಅನ್ಯಧರ್ಮಿಯರನ್ನು ಹೊಸಕಿ ಹಾಕುತ್ತಿರುವ ಪಾಕಿಸ್ತಾನದ ಮತಾಂಧ ಮುಖವನ್ನು ಜಗತ್ತಿಗೆ ಪರಿಚಯಿಸಿದರೆ, ಎರಡನೆಯವಳು ಪಾಕಿಸ್ತಾನಿಯರಿಗೇ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿರುವ ಸ್ವಧರ್ಮೀಯರ ಕರಾಳ ಮುಖವನ್ನು ಪರಿಚಯಿಸಿದ್ದಾಳೆ. ಈಗಾಗಲೇ ನಿಮಗೆ ತಿಳಿದಿರುವಂತೆ ಇಂಗ್ಲೆಂಡ್್ನ ಬರ್ಮಿಂಗ್ ಹ್ಯಾಮ್ ಕ್ವೀನ್ ಎಲಿಝಬೆತ್ ಆಸ್ಪತ್ರೆಯಲ್ಲಿ ಮಲಾಲಾ ಜೀವನ್ಮರಣದ ನಡುವೆ ಹೋರಾಡುತ್ತಿದ್ದರೆ, ಇತ್ತ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಿರುವ ರಿಮ್ಷಾ ಮಸೀಹ ಹತ್ಯೆಯಿಂದ ಬಚಾವಾಗಿದ್ದರೂ ಯಾವ ಕ್ಷಣದಲ್ಲೂ ತಲೆಗೆ [...]

ಭಾರತವನ್ನೇ ವಿದೇಶಿ ಕಂಪನಿಗಳ ನಿಯಂತ್ರಣಕ್ಕೆ ಕೊಡುವುದು “ಚಿಲ್ಲರೆ” ವಿಷಯವೇ?

Friday, September 28th, 2012
ಭಾರತವನ್ನೇ ವಿದೇಶಿ ಕಂಪನಿಗಳ ನಿಯಂತ್ರಣಕ್ಕೆ ಕೊಡುವುದು “ಚಿಲ್ಲರೆ” ವಿಷಯವೇ?

1. ವಾಲ್್ಮಾರ್ಟ್ 2. ಕ್ಯಾರ್್ಫೋರ್ 3. ಮೆಟ್ರೋ 4. ಟೆಸ್ಕೋ 5. ಲಿಡ್ಲ್್ಸ್ಟಿಫುಂಗ್ ಆ್ಯಂಡ್ ಕಂಪನಿ 6. ದಿ ಕ್ರೋಗರ್ ಕಂಪನಿ 7. ಕಾಸ್ಟ್್ಕೋ 8. ಆಲ್್ಡಿ (Albrecht Discout) 9. ಹೋಮ್ ಡಿಪೋ 10. ಟಾರ್ಗೆಟ್ ಕಾರ್ಪೊರೇಷನ್

ಏನು ಹೇಳುತ್ತಿದ್ದೀರಿ ಬುದ್ಧಿಜೀವಿಗಳೇ, ಸಂಬಳಕ್ಕಾಗಿ ದುಡಿಯಲು ವಿಶ್ವೇಶ್ವರಯ್ಯನವರೇನು ಕೆಲಸ ಕೇಳಿಕೊಂಡು ಬಂದಿದ್ದರೆ?!

Friday, September 28th, 2012
ಏನು ಹೇಳುತ್ತಿದ್ದೀರಿ ಬುದ್ಧಿಜೀವಿಗಳೇ, ಸಂಬಳಕ್ಕಾಗಿ ದುಡಿಯಲು ವಿಶ್ವೇಶ್ವರಯ್ಯನವರೇನು ಕೆಲಸ ಕೇಳಿಕೊಂಡು ಬಂದಿದ್ದರೆ?!

1909, ಏಪ್ರಿಲ್ 10ರಂದು ಅಮೆರಿಕ ಪ್ರವಾಸವನ್ನು ಮುಗಿಸಿ ಮುಂಬೈಗೆ ಬಂದಿಳಿದರು ವಿಶ್ವೇಶ್ವರಯ್ಯ. 1909, ಮಾರ್ಚ್ 31ರವರೆಗೂ ಮೈಸೂರು ದಿವಾನರಾಗಿದ್ದ ವಿ.ಪಿ. ಮಾಧವರಾವ್ ಅದಾಗಲೇ ವಿಶ್ವೇಶ್ವರಯ್ಯನವರ ಮುಂಬೈ ವಿಳಾಸಕ್ಕೆ ಟೆಲಿಗ್ರಾಮ್್ವೊಂದನ್ನು ಕಳುಹಿಸಿದ್ದರು. ಮೈಸೂರಿನ ಮುಖ್ಯ ಎಂಜಿನಿಯರ್ ಆಗಿ ಸೇವೆಗೆ ಸೇರುವಂತೆ ಅದರಲ್ಲಿ ಕೋರಿದ್ದರು. ಇಷ್ಟಕ್ಕೂ 1909, ಜೂನ್್ನಲ್ಲಿ ಮೈಸೂರಿನ ಮುಖ್ಯ ಎಂಜಿನಿಯರ್ ಆಗಿದ್ದ ಮ್ಯಾಕ್ ಹಚಿನ್್ರವರು ನಿವೃತ್ತಿ ಹೊಂದುವವರಿದ್ದರು. ಹಾಗಾಗಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಯೋಗ್ಯ ವ್ಯಕ್ತಿಯ ಶೋಧನೆಯಲ್ಲಿ ತೊಡಗಿದ್ದರು.

ಬಾಯ್ಬಿಟ್ಟರೆ ಬಣ್ಣ ಬಯಲಾಗುತ್ತೆಂಬ ಭಯವೇ ಮನಮೋಹನ್ ಸಿಂಗ್?

Monday, September 10th, 2012
ಬಾಯ್ಬಿಟ್ಟರೆ ಬಣ್ಣ ಬಯಲಾಗುತ್ತೆಂಬ ಭಯವೇ ಮನಮೋಹನ್ ಸಿಂಗ್?

ಹಝಾರೋ ಜವಾಬೋನ್ ಸೆ ಅಚ್ಛಿ ಹೈ ಖಾಮೋಶಿ ಮೇರಿ ನ ಜಾನೆ ಕಿತ್ನೆ ಸವಾಲೋ ಕೀ ಆಬ್ರೂ ರಖೇ… ಇತಿಹಾಸ ಕಂಡು ಕೇಳರಿಯದ 1.85 ಲಕ್ಷ ಕೋಟಿ ಮೊತ್ತದ ಕಲ್ಲಿದ್ದಲು ಹಗರಣ ನಿಮ್ಮ ಮೂಗಿನ ಕೆಳಗೇ ಹೇಗೆ ಸಂಭವಿಸಿತು ಹೇಳಿ? ಈ ದೇಶದ ಪ್ರಜೆಗಳಿಗೆ, ನಿಮ್ಮನ್ನು ಆಯ್ಕೆ ಮಾಡಿರುವ ಮತದಾರರಿಗೆ ಉತ್ತರ ಕೊಡಿ? ಎಂದು ಕೇಳಿದರೆ ‘ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಮೇಲು’ ಎನ್ನುತ್ತಾರಲ್ಲಾ…. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯೊಬ್ಬರು ಹೇಳುವಂಥ ಮಾತೇ ಇದು?! ಇದಕ್ಕಿಂತ [...]

ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!

Monday, September 3rd, 2012
ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!

ಸ್ವಗತ ಎಂದೆನಿಸಿದರೂ ಅಡ್ಡಿಯಿಲ್ಲ, ಸ್ವಂತ ಅನುಭವ ಹೇಳಿಕೊಂಡೇ ಈ ವಾರದ ಅಂಕಣ ಎದುರಿಗಿಡುತ್ತಿದ್ದೇನೆ. ಬಂಧಿತ ಉಗ್ರರ ಗುರಿಗಳ ಪೈಕಿ ನಾನೂ ಪ್ರಮುಖನಾಗಿದ್ದೆ ಎಂಬ ಸುದ್ದಿ ಬಿತ್ತರವಾಗುತ್ತಲೇ, ಫೋನ್ ಮಾಡಿ ಕಾಳಜಿ- ಒತ್ತಾಸೆಗಳನ್ನು ನೀಡಿದವರ ಸಂಖ್ಯೆ ದೊಡ್ಡದು. ಇಂಥದೊಂದು ವಿದ್ಯಮಾನ ಹುಟ್ಟುಹಾಕುವ ಸಹಜ ತಳಮಳಗಳು, ಕೌಟುಂಬಿಕ ಹಂತದಲ್ಲಿ ಉಂಟಾಗುವ ಆತಂಕ ಇವುಗಳ ಹೊರತಾಗಿ ‘ನಡುಗು’ ಅನ್ನುವಂಥ ಅಧೀರತೆಯೇನೂ ನನ್ನನ್ನು ಕಾಡುತ್ತಿಲ್ಲ. ‘ಸಾರಿ, ಐ ಹ್ಯಾವ್ ದ ಆರ್ಡರ್ಸ್. ನಾನು ನಿನ್ನನ್ನು ಕೊಲ್ಲಲೇಬೇಕು’ ಎಂದು ಗಾಯಗೊಂಡ ಚೆಗೆವೆರಾ ಎದುರು ಬೊಲಿವಿಯನ್ [...]

ಹಿಂದುಗಳೇ ಹೇಡಿಗಳಾಗಿರುವಾಗ ಅನ್ಯರನ್ನು ದೂರಿ ಫಲವೇನು?

Monday, August 27th, 2012
ಹಿಂದುಗಳೇ ಹೇಡಿಗಳಾಗಿರುವಾಗ ಅನ್ಯರನ್ನು ದೂರಿ ಫಲವೇನು?

ಅದನ್ನು Brain Drain ಅಥವಾ ಪ್ರತಿಭಾ ಪಲಾಯನ ಎಂದು ಕರೆದಿದ್ದೂ ಇದೆ, ಅದರ ವಿರುದ್ಧ ದೊಡ್ಡ ಗುಲ್ಲೆಬ್ಬಿಸಿದ್ದೂ ಇದೆ, ಅದೇ ಈ ದೇಶದ ಹಿಂದುಳಿಯುವಿಕೆಗೆ ಕಾರಣವೆಂದು ಗೂಬೆ ಕೂರಿಸಿದ್ದೂ ಇದೆ. ಆದರೇನಂತೆ 1970, 80, 90ರ ದಶಕದಲ್ಲಿ ಭವ್ಯ ಭವಿಷ್ಯದ ಕನಸು ಕಟ್ಟಿಕೊಂಡು, ಹೊಸ ಉದ್ಯೋಗಾವಕಾಶಗಳನ್ನು ಅರಸಿಕೊಂಡು, ತಮ್ಮ ಪ್ರತಿಭೆಗೆ ಭಾರತದಲ್ಲಿ ಸೂಕ್ತ ವೇದಿಕೆ, ಅವಕಾಶದ ಕೊರತೆಯಿದೆಯೆಂದುಕೊಂಡು, ಮೀಸಲಾತಿ ನೀತಿಯ ಉರುಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ನಮ್ಮ ಎಂಜಿನಿಯರ್್ಗಳು, ಡಾಕ್ಟರ್್ಗಳು, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತವರು [...]

download movies
buy retin a online
buy strattera
buy viagra online
buy cialis online
buy levitra online
buy zithromax online
buy topamax