ಕಡೆಗೂ ಹೋಗುತ್ತಿದೆ, ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ಕಾಲ!
Monday, November 24th, 2008ನಾವು ತಮಿಳರಿಗೆ ‘ಕೊಂಗಾ’, ತೆಲುಗು ಭಾಷಿಕರಿಗೆ ‘ವಾಳ್ಳು’, ಮಲೆಯಾಳಿಗಳಿಗೆ ‘ಕುಟ್ಟಿ’ ಎಂದು ಹೇಗೆ ಕಿಚಾಯಿಸುತ್ತೇವೋ ಹಾಗೆಯೇ ಹಾಲಿವುಡ್‌ನಲ್ಲಿ ಯಾರನ್ನಾದರೂ, ಯಾವ ದೇಶದವರನ್ನಾದರೂ ಕಾಲೆಳೆಯಬೇಕಾದರೆ ಕೆಲವು ‘ಅಡ್ಡ’ ಹೆಸರುಗಳಿಂದ ಕರೆಯುತ್ತಾರೆ. ಅವು ಕೆಲವೊಮ್ಮೆ ಅವಮಾನಕಾರಿಯಾಗಿಯೂ, ಜನಾಂಗೀಯ ನಿಂದನೆ ಎನಿಸಿಕೊಳ್ಳುವಂತಹ ಪದಗಳಾಗಿರುತ್ತವೆ. ಕಪ್ಪುವರ್ಣೀಯರಿಗೆ ‘ನಿಗ್ಗರ್’, ಇಟಾಲಿಯನ್ಸ್‌ಗೆ ‘ಡ್ಯಾಗೋಸ್’, ಏಷ್ಯನ್ನರಿಗೆ ಅದರಲ್ಲೂ ವಿಯೆಟ್ನಾಮಿಯರಿಗೆ ‘ಗೂಕ್ಸ್’, ಜಪಾನಿಯರಿಗೆ ‘ಸ್ಲಿಟ್ ಐಯ್ಡ್ ಜಾಪ್ಸ್’ ಅಥವಾ ‘ನಿಪ್, ಪಿಲಿಪ್ಪೀನ್ಸ್‌ನವರಿಗೆ ‘ಪಿಲಿಪ್ಪೀನೋ’, ಚೀನಿಯರಿಗೆ ‘ಚಿನ್ಕ್ ’, ಇರಾಕಿಯರಿಗೆ ‘ಹಾಜಿ’-ಇಂತಹ ‘ಪದ’ಪ್ರಯೋಗಗಳನ್ನು ಹಾಲಿವುಡ್ ಚಿತ್ರ ಗಳಲ್ಲಿ ಸಾಮಾನ್ಯವಾಗಿ ಕಾಣಬಹುದು.









