Pratap Simha » Bettale-Jagattu

ಹೇಮರೆಡ್ಡಿ ಮಲ್ಲಮ್ಮನ ಕಥೆಯು, ಸೃಷ್ಟಿಕರ್ತ ಕುಂವೀಯು!
ಕುಂಬಾರ ವೀರಭದ್ರಪ್ಪ ಆಲಿಯಾಸ್ ಕುಂ. ವೀರಭದ್ರಪ್ಪ ಅಲಿಯಾಸ್ ಕುಂವೀ!

ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್್ಕುಮಾರ್್ಗೆ  ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ  ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’  ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ  ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ ಈ ವರ್ಷದ ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು  ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ  ಪ್ರಶಸ್ತಿ ಬಂದಿದೆ. ಹದಿನಾಲ್ಕು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಹದಿನೇಳು ಕಾದಂಬರಿಗಳನ್ನು  ರಚಿಸಿದ್ದಾರೆ. ನೇತಾಜಿ ಸುಭಾಶ್್ಚಂದ್ರ ಬೋಸ್, ಚಾಪ್ಲಿನ್ ಜೀವನಕಥೆಯನ್ನೂ ಬರೆದಿದ್ದಾರೆ.  ತೆಲುಗಿನ 150 ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯೇ  ಅವುಗಳನ್ನು ಪ್ರಕಟ ಮಾಡಿದೆ.

ಅವರೊಬ್ಬ Prolific Writer ಎನ್ನಲು ಇಷ್ಟು ಸಾಕಲ್ಲವೇ?

ಬಹುಶಃ ಡಾ. ಎಸ್.ಎಲ್. ಭೈರಪ್ಪನವರನ್ನು ಬಿಟ್ಟರೆ ನಿರಂತರವಾಗಿ ಕನ್ನಡ  ಸಾರಸ್ವತ ಲೋಕಕ್ಕೆ ಹೊಸ ಹೊಸ ಕೃತಿಗಳನ್ನು ನೀಡುತ್ತಿರುವ, ಗಟ್ಟಿ ಸಾಹಿತ್ಯವನ್ನು ರಚನೆ  ಮಾಡುತ್ತಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕುಂವೀ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 2010ರಲ್ಲಿ  ‘ಗಾಂಧಿ ಕ್ಲಾಸು’ ಎಂಬ ಆತ್ಮಕಥನವನ್ನು ನೀಡಿದ್ದ ಅವರು 2012ರಲ್ಲಿ ‘ಹೇಮರೆಡ್ಡಿ ಮಲ್ಲಮ್ಮನ  ಕಥೆಯು’ ಎಂಬ ಕಾದಂಬರಿಯನ್ನು ಬಿಡುಗಡೆಗೆ ಅಣಿಗೊಳಿಸಿದ್ದಾರೆ.

“ಕಥೆಗಾರ ತನಿಕೆಳ್ಳ ಪಾರ್ಥಸಾರಥಿ ಕಾದಂಬರಿ ಬರೆಯಬಹುದೆಂದು ತೆಲುಗಿನ  ಸಾರಸ್ವತ ಪ್ರಪಂಚ ಕನಸುಮನಸಿನಲ್ಲೂ ಊಹಿಸಿರಲಿಲ್ಲ. ಆತ ತನ್ನ ಹೊಸ ಸೃಜನಶೀಲ ಸಾಹಸವನ್ನು ಯಾರೊಬ್ಬರ  ಬಳಿ ಹೇಳಿಕೊಂಡಿರದಿದ್ದರೂ ಸುದ್ದಿಯಾಯಿತು. ಅವರಿವರು ಒತ್ತಟ್ಟಿಗಿರಲಿ ಅವರ ಆರಂಭಿಕ ಕಥೆಗಳನ್ನು  ಮೆಚ್ಚಿ ವಿಮರ್ಶಿಸಿದ, ಅವುಗಳ ಪೈಕಿ ಕೆಲವನ್ನು ಇನ್ನಿತರ ಪ್ರಾದೇಶಿಕ ಭಾಷೆಗಳ ವಾಚಕರಿಗೆ  ಪರಿಚಯಿಸಿದ ಪ್ರೊ. ಕಾಶಿಬೊಟ್ಲ ವೇಣುಗೋಪಾಲ್ ಅವರಂಥ ಬಹುಶ್ರುತ ವಿದ್ವಾಂಸರಿಗೂ ಅದನ್ನು  ತೋರಿಸಿರಲಿಲ್ಲ, ಅದಕ್ಕೆ ತನ್ನ ಮೃದ್ವಂಗಿ ಜಾಯಮಾನ ಕಾರಣವಿದ್ದಿರಬಹುದು. ಆದರೆ ಅದನ್ನು ಎಷ್ಟು  ದಿವಸ ಗುಟ್ಟಾಗಿರಿಸಲಾದೀತು! ಆ ದಿವಸ ಆತನಿಂದ ನನಗೆ ದೂರವಾಣಿ ಕರೆ ಬಂತು. ಉಭಯಕುಶಲೋಪರಿಯಾದ ಬಳಿಕ  ಒಮ್ಮೆ ಕರ್ನೂಲಿಗೆ ಬಂದು ಹೋಗುವಿಯೇನು ಎಂದು ಕೇಳಿದ. ಯಾಕೆಂದು ಕೇಳಿದ್ದಕ್ಕೆ ಕಾದಂಬರಿ  ಬರೆದಿರುವುದಾಗಿಯೂ, ಇನ್ನೂ ಅಪೂರ್ಣ ಸ್ಥಿತಿಯಲ್ಲಿರುವ ಅದರ ಮೇಲೆ ಕಣ್ಣಾಡಿಸಿ ಪರಿಶೀಲಿಸಬೇಕೆಂದೂ  ಕೇಳಿಕೊಂಡ. ವಿಷಯ ತಿಳಿದಿದ್ದರೂ ನಾನು ಹೌದೇನು ಎಂದು ಆಶ್ಚರ್ಯ ವ್ಯಕ್ತಪಡಿಸಿದೆ. ನನಗಿಂತ ಮೊದಲು  ಕಾಶಿಬೊಟ್ಲ ಅವರಿಗೆ ತೋರಿಸಿದರೆ ಒಳ್ಳೆಯದೆಂದು ಹೇಳಿದೆ. ಅಂಥವರು ನೋಡುವ ಮೊದಲು ನಿನ್ನಂಥವರು  ನೋಡುವುದು ಮುಖ್ಯವೆಂದು ಹೇಳಿದ. ಅದೇ ಮಾತನ್ನು ಬೇರೆಯವರು ಕೇಳಿದ್ದಲ್ಲಿ ನಾನು  ಒಪ್ಪಿಕೊಳ್ಳುತ್ತಿರಲಿಲ್ಲವೇನೋ! ವೈಶಾಖದ ಬಿಸಿಲನ್ನು ಲೆಕ್ಕಿಸದೆ ಪತ್ತಿಕೊಂಡ ದೇವನಕೊಂಡಗಳನ್ನು  ದಾಟಿ ಕರ್ನೂಲನ್ನು ಆ ದಿವಸ ಸೇರಿಕೊಂಡೆ. ಆದರೆ ಬರೆದಿರುವನೆಂಬ ವದಂತಿಗಳು, ಬರೆದಿರುವನೋ! ಅಥವಾ  ಬರೆಯುವ ಪ್ರಯತ್ನದಲ್ಲಿರುವನೋ! ನನ್ನನ್ನಿಲ್ಲಿಗೆ ಬರಮಾಡಿಕೊಳ್ಳಲು ತಾನು ಸುಳ್ಳು  ಹೇಳಿರಲೂಬಹುದೆಂದು ಭಾವಿಸಿ ಆತನ ಕಡೆ ದೃಷ್ಟಿ ಹಾಯಿಸಿದೆ. ನನ್ನ ಮನಸ್ಸಿನ ತೊಳಲಾಟವನ್ನು ಅವನು  ಗ್ರಹಿಸಿದನೇನೋ! ಮೆಲ್ಲಗೆ ಎದ್ದು ಕಿಟಕಿ ಎದುರು ಇದ್ದ ಟೇಬಲ್ ತಲುಪಿದ, ಅದರ ಮೇಲಿದ್ದ ಕಡತವನ್ನು  ಕೈಗೆತ್ತಿಕೊಂಡು ಬಡಿದು ಸದ್ದು ಮಾಡಿದ, ಧೂಳಿನ ಘಾಟು ಆವರಿಸಿತು. ಅದನ್ನು ನನ್ನ ಕಡೆ ಚಾಚಿ ಇದೇ  ನೋಡು ಎಂದು ಹೇಳಿದ, ತೆಗೆದುಕೊಂಡೆ, ಅರಂಭದ ಪುಟದಲ್ಲಿ ಹೇಮರೆಡ್ಡಿ ಮಲ್ಲಮ್ಮನ ಕಥೆ ಎಂದು  ಇರುವುದನ್ನು ನೋಡಿ ‘ಓಹೋ ಪೌರಾಣಿಕ’ ಎಂದು ಉದ್ಗರಿಸಿದೆ. ಅದಕ್ಕೆ ಪ್ರತಿಯಾಗಿ ನಕ್ಕು ‘ಇದು ಆ  ಹೇಮರೆಡ್ಡಿಯ ಧರ್ಮಪತ್ನಿ ಶಿವಶರಣೆ ಮಲ್ಲಮ್ಮನವರ ಕಥೆ ಅಲ್ಲ. ಓದು ನಿನಗೇ ತಿಳಿಯುವುದು, ಹ್ಹಾ ಅಂದ  ಹಾಗೆ ನಾನು ಆರೋಗ್ಯದಿಂದ ಇರುವುದಕ್ಕೆ ಇದೇ ಕಾರಣ’ ಎಂದು ಹೇಳುತ್ತ ಕುರ್ಚಿಯಲ್ಲಿ ಕುಳಿತು  ನಿಟ್ಟುಸಿರುಬಿಟ್ಟನು. ನಾನು ನಿಧಾನವಾಗಿ ಓದಲಾರಂಭಿಸಿದೆನು.”

ಹೀಗೆ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಕಾದಂಬರಿಗೆ ಕುಂವೀ ‘ಪೀಠಿಕೆ’  ಹಾಕುತ್ತಾರೆ.

ಈ ಕಾದಂಬರಿಯಲ್ಲಿ ಮುಂದೆ ಕಾಣಬಹುದಾದ ಹೊಸತನ, ಹೊಸ ರೀತಿಯ ಕಾದಂಬರಿ  ರಚನೆ ಪೀಠಿಕೆಯಲ್ಲೇ ಇದೆ ಎಂಬುದು ಅರ್ಥವಾಗುವುದು ಕಾದಂಬರಿಯನ್ನು ಓದಿ ಮುಗಿಸಿದ ನಂತರವಷ್ಟೇ.  ಕುಂವೀ ಯಾವ ಕಥೆಗಾರ ತನಿಕೆಳ್ಳ ಪಾರ್ಥಸಾರಥಿಯ ಕಾದಂಬರಿಯನ್ನು ಓದಲು ಹೋಗುತ್ತಾರೋ ಆ ತನಿಕೆಳ್ಳ  ಪಾರ್ಥಸಾರಥಿ ಕುಂವೀ ಅವರ ಸೃಷ್ಟಿಯಾಗಿರುತ್ತಾನೆ. ಈ ತನಿಕೆಳ್ಳ ಪಾರ್ಥಸಾರಥಿ ಒಬ್ಬ ಕಾಲ್ಪನಿಕ  ಪಾತ್ರವಾಗಿದ್ದರೂ ಪೀಠಿಕೆಯಲ್ಲಿ ವಿಮರ್ಶಕನ ಪಾತ್ರವಹಿಸುವ ತೆಲುಗಿನ ಖ್ಯಾತ ಕಥೆಗಾರ ಪ್ರೊ.  ಕಾಶಿಬೊಟ್ಲ ವೇಣುಗೋಪಾಲ್ ಅವರೇ ಆಗಿರುತ್ತಾನೆ. ಇದೇನೇ ಇರಲಿ, ‘ಹೇಮರೆಡ್ಡಿ ಮಲ್ಲಮ್ಮನ  ಕಥೆಯು’ನಲ್ಲಿ ಏಕಕಾಲಕ್ಕೆ ಹಲವಾರು ಕಥೆಗಳನ್ನು ಕುಂವೀ ಹೇಳುತ್ತಾರೆ. ಇದರಲ್ಲಿ ಹೆಬ್ಬಟಂ ಗೌಡ  ಹಾಗೂ ಆತನ ಪುತ್ರ ಸೂರ್ಯಪ್ರತಾಪ್ ರೆಡ್ಡಿ ಪ್ರಮುಖ ಪಾತ್ರಧಾರಿಗಳು. ಶ್ರೀಮಂತ ಜಮೀನುದಾರನಾದ  ಹೆಬ್ಬಟಂ ಗೌಡ ಗುಣದಲ್ಲಿ ಲಂಪಟ. ಮಗ ಸೂರ್ಯಪ್ರತಾಪ್ ರೆಡ್ಡಿ ಜೈಲಿನಿಂದ ವಾಪಸಾಗಿರುತ್ತಾನೆ.  ಎಂ.ಎಲ್.ಎ. ಚುನಾವಣೆಗೆ ಸ್ಪರ್ಧಿಸಲು ಹವಣಿಸುತ್ತಿದ್ದ ಅಪ್ಪ ಮಗ ಇಬ್ಬರಿಗೂ ಕಾಂಗ್ರೆಸ್ ಪಕ್ಷದ  ಟಿಕೆಟ್ ತಪ್ಪಿಹೋಗಿಬಿಡುತ್ತದೆ. ಹಾಗಾಗಿ ತಮ್ಮ ಇಮೇಜನ್ನೇ ಬದಲಾಯಿಸಿಕೊಳ್ಳಬೇಕೆಂಬ ತುಡಿತ  ಇಬ್ಬರಲ್ಲೂ ಆರಂಭವಾಗಿರುತ್ತದೆ. ಅದಕ್ಕೆ ಸರಿಯಾಗಿ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಎಂಬ ನಾಟಕದ  ಶತದಿನೋತ್ಸವ ಸಮಾರಂಭ ಸಮೀಪಿಸಿರುತ್ತದೆ. ಆ ಸಮಾರಂಭವನ್ನು ತಾನೇ ಆಯೋಜಿಸಲು ಹೆಬ್ಬಟಂ ಗೌಡ  ಮುಂದಾಗುತ್ತಾನೆ. ಆ ಸಮಾರಂಭದ ಭಾಷಣವನ್ನು ಹೆಬ್ಬಟಂ ಗೌಡ ತನ್ನ ಮಗ ಸೂರ್ಯಪ್ರತಾಪ್ ರೆಡ್ಡಿಯ  ಗುಣಗಾನಕ್ಕೆ ಹಾಗೂ ಸೂರ್ಯಪ್ರತಾಪ್ ರೆಡ್ಡಿ ಅಪ್ಪ ಹೆಬ್ಬಟಂ ಗೌಡನನ್ನು ಶ್ಲಾಘನೆ ಮಾಡುವುದಕ್ಕೆ  ಬಳಸಿಕೊಳ್ಳಲು ಯೋಜಿಸುತ್ತಾರೆ. ಬಹಳ ಕುತೂಹಲಕಾರಿ ಸಂಗತಿಯೆಂದರೆ ‘ಹೇಮರೆಡ್ಡಿ ಮಲ್ಲಮ್ಮನ  ಕಥೆಯು’ನಲ್ಲಿ ಬರುವ ಹೇಮರೆಡ್ಡಿ ಕೂಡ ಹೆಬ್ಬಟಂ ಗೌಡನಂತೆಯೇ ಲಂಪಟನಾಗಿರುತ್ತಾನೆ.  ಹೇಮರೆಡ್ಡಿಯನ್ನು ಬದಲಾಯಿಸಲು, ಮನಪರಿವರ್ತಿಸಲು ಆತನ ಪತ್ನಿ ಮಲ್ಲಮ್ಮ ಪ್ರಯತ್ನಿಸುತ್ತಾಳೆ. ಇತ್ತ  ಮುಪ್ಪಡರಿದಂತೆ ಹೆಬ್ಬಟಂ ಗೌಡ ಕೂಡ ಬದಲಾಗಿದ್ದ. ಆದರೆ ಅವನಿಗಿದ್ದ ಒಂದೇ ಆತಂಕವೆಂದರೆ ತನ್ನ ಮಗನ  ವರ್ತನೆಯನ್ನು ಹೇಗೆ ಸರಿಪಡಿಸುವುದೆಂಬ ಚಿಂತೆ. ಆದರೂ ಹೆಬ್ಬಟಂ ಗೌಡ ತಾನು ಒಳ್ಳೆಯವನಾಗಲು  ಪ್ರಯತ್ನಿಸುತ್ತಿರುವಾಗಲೇ ತನ್ನ ಕೆಟ್ಟತನದ ಪ್ರತಿರೂಪದಂತೆ, ಕೆಟ್ಟತನದ ಉತ್ತರಾಧಿಕಾರಿಯಂತೆ  ಸೂರ್ಯಪ್ರತಾಪ್ ರೆಡ್ಡಿ ಹೊರಹೊಮ್ಮಲಾರಂಭಿಸುತ್ತಾನೆ. ಅದರಿಂದ ಸೃಷ್ಟಿಯಾಗುವ ತಳಮಳ, ಪಾಪಪ್ರಜ್ಞೆ  ಮುಂತಾದವುಗಳನ್ನು ಕುಂವೀ ಬಹಳ ಚೆನ್ನಾಗಿ ಸನ್ನಿವೇಶ, ಸಂವಾದಗಳಿಗಿಳಿಸಿದ್ದಾರೆ.

ಕರ್ನಾಟಕ ಹಾಗೂ ಆಂಧ್ರದ ಗಡಿ ಭಾಗಗಳಾದ ಬಳ್ಳಾರಿ, ಕರ್ನೂಲ್, ಅನಂತಪುರ  ಜಿಲ್ಲೆಗಳಲ್ಲಿ ಕುಂವೀ ಅವರ ಕಥೆಗಳು ಸಾಮಾನ್ಯವಾಗಿ ಭೂಮಿಕೆ ಪಡೆಯುತ್ತವೆ. ಬಳ್ಳಾರಿ, ಹೊಸಪೇಟೆ,  ಅದರ ಆಚೆಗಿರುವ ಗೂಳ್ಯಂ, ಕರ್ನೂಲು ಭಾಗದ ಬದುಕುಗಳ ದಾರುಣ ಕಥೆಯನ್ನು ತುಂಬ ಪರಿಣಾಮಕಾರಿಯಾಗಿ  ಬರೆಯುತ್ತಿರುವ ವ್ಯಕ್ತಿ ಕುಂ.ವೀ. ಗ್ರಾಮೀಣ ಬದುಕಿನ ಚಿತ್ರಣವನ್ನು ಶ್ರೀಕೃಷ್ಣ ಆಲನಹಳ್ಳಿ,  ಬೆಸಗರಹಳ್ಳಿ ರಾಮಣ್ಣ ಅವರ ನಂತರ, ಅವರಷ್ಟೇ ಆಪ್ತವಾಗಿ ಕಟ್ಟಿ ಕೊಡುತ್ತಿರುವ ವ್ಯಕ್ತಿ ಕುಂ.ವೀ.

ಕುಂ.ವೀ. ಶಾಲಾ ಶಿಕ್ಷಕರು. ಈಗ ಹೆಡ್್ಮಾಸ್ಟರ್ ಆಗಿರುವವರು. ಬೋರ್ಡಿನ  ಮೇಲೆ ಬರೆಯುತ್ತಾರಲ್ಲ; ಅದಕ್ಕಿಂತ ಹತ್ತುಪಟ್ಟು ವೇಗವಾಗಿ ಅವರು ಹಾಳೆಯ ಮೇಲೆ ಬರೆಯಬಲ್ಲರು. 600  ಪುಟಗಳ ಕಾದಂಬರಿ ಬರೆಯಲು ಅವರು ತೆಗೆದುಕೊಂಡಿದ್ದು ಒಂದೇ ವಾರದ ಅವಧಿ. ಈವರೆಗೆ ಬರೆದಿರುವ  ಕಥೆ/ಕಾದಂಬರಿ ಹಾಗೂ ನಾಟಕಗಳ ಪೈಕಿ ಬಹುಶಃ ‘ಅರಮನೆ’ ಎಂಬ ಕಾದಂಬರಿಯನ್ನು ಬಿಟ್ಟರೆ, ಬೇರೆ  ಯಾವುದನ್ನೂ ಕುಂವೀ ಎರಡನೇ ಬಾರಿ ತಿದ್ದಿ ಬರೆದಿಲ್ಲ. ಆ ಮಟ್ಟಿಗೆ ಅವರು ಬರೆದಿದ್ದೆಲ್ಲ ಬಂಗಾರ.

ಒಂದು ಕಾಲದಲ್ಲಿ ಕುಂ.ವೀ. ಪತ್ರಕರ್ತರಾಗಿದ್ದರು. ಆ ದಿನಗಳಲ್ಲಿ  ಕರ್ನೂಲು, ಬಳ್ಳಾರಿ ಸೀಮೆಯಲ್ಲಿ ಸೊಳ್ಳೆ ಹೊಡೆದಷ್ಟೇ ಸುಲಭವಾಗಿ ನಡೆದುಹೋಗುವ ಕೊಲೆಯ ಬಗ್ಗೆ ವರದಿ  ಕಳಿಸುತ್ತಿದ್ದರಂತೆ. ಎಷ್ಟೋ ಸಂದರ್ಭದಲ್ಲಿ ಒಂದು ಕೊಲೆಗೆ ಕಾರಣವೇ ಇರುತ್ತಿರಲಿಲ್ಲ. ಆದರೂ ಕೊಲೆ  ಆಗಿಬಿಡುತ್ತಿತ್ತು. ಇವರು ಇದ್ದುದನ್ನು ಇದ್ದ ಹಾಗೇ ಬರೆದು ಕಳಿಸಿದರು. ಅದನ್ನು ಓದಿದ ಸಂಪಾದಕರು-  ಮಹರಾಯ, ವರದಿ ಪ್ರಕಟವಾಗಲಿ ಎಂಬ ಆಸೆಗೆ ಸುಳ್ಳುಸುಳ್ಳೇ ಮರ್ಡರ್ ಸ್ಟೋರಿ ಕಳಿಸಬೇಡ. ಸರಿಯಾದ  ಕಾರಣವೇ ಇಲ್ಲದೆ ಕೊಲೆಯಾಗುತ್ತದೆ ಅಂದರೆ ಏನರ್ಥ? ಸ್ವಲ್ಪ ಗಂಭೀರವಾಗಿ ಬರೆಯಲು ಕಲಿ ಎಂದರಂತೆ.

ಈಗ ಕಾಲ ಬದಲಾಗಿದೆ. ಜನರೂ ಬದಲಾಗಿದ್ದಾರೆ. ಎಲ್ಲರೂ ಹಳ್ಳಿಗಳನ್ನು  ಮರೆತಿದ್ದಾರೆ. ನಗರಗಳಿಗೆ ಬಂದು ಮನೆ ಕಟ್ಟಿಕೊಂಡಿದ್ದಾರೆ. ಇಂಥ ಮಾತುಗಳಿಗೆ ಕುಂ.ವೀ. ಅಪವಾದ. ಆತ  ತನ್ನ ಕಥೆ, ಕಾದಂಬರಿಯ ನಾಯಕ ಪಾತ್ರಗಳಷ್ಟೇ ಅಮಾಯಕ. ಮೂರು ತಿಂಗಳಿಗೆ ಒಂದು ಬಾರಿ ಯಾವುದೋ  ಕಾರ್ಯಕ್ರಮದ ನಿಮಿತ್ತ ಒಂದೆರಡು ದಿನದ ಮಟ್ಟಿಗೆ ಬೆಂಗಳೂರಿಗೋ, ಮಂಗಳೂರು-ಮೈಸೂರಿಗೋ ಹೋಗಿ ಬಂದರೆ  ಕುಂ.ವೀ. ಖುಷಿಯಾಗುತ್ತಾರೆ. ಹೋದ ಕಡೆಯಲ್ಲೆಲ್ಲ ಅದೇ ಬಳ್ಳಾರಿಯ ಜವಾರಿ ಭಾಷೆಯಲ್ಲಿ  ಮಾತಾಡುತ್ತಾರೆ. ಯಾವುದೋ ನಾಟಕದ ಡೈಲಾಗ್ ನೆನಪಿಸಿಕೊಳ್ಳುತ್ತಾರೆ. ಜೋಕು ಹೇಳಿ ನಗಿಸುತ್ತಾರೆ.

ಕುಂ.ವೀ. ಇಷ್ಟವಾಗುವುದು ಅವರ ಅಮಾಯಕತೆಯ ಕಾರಣಕ್ಕೆ. ಸರಳತೆಯ  ಕಾರಣಕ್ಕೆ. ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರೂ, ಅದನ್ನೆಂದೂ  ಕುಂ.ವೀ. ಹೇಳಿಕೊಳ್ಳುವುದಿಲ್ಲ. ಯಾವುದೋ ಸ್ಥಾನಕ್ಕಾಗಿ ಹಾತೊರೆಯುವುದಿಲ್ಲ, ಲಾಬಿ ಮಾಡುವುದಿಲ್ಲ.  ಹಿಂಬಾಲಕರ ಮೂಲಕ ಪರಾಕು ಹೇಳಿಸಿಕೊಳ್ಳುವುದಿಲ್ಲ. ಹಾಗೆ ನೋಡಿದರೆ ಕುಂ.ವೀ.ಗೆ ಹಿಂಬಾಲಕರೇ ಕಡಿಮೆ.

ಬೇರೆ ಯಾವ ಸಾಹಿತಿಗೂ ಸಿಗದಂಥ ವಸ್ತುಗಳು, ಕಥೆಗಳು ಕುಂ.ವೀ.ಗೆ ಹೇಗೆ  ಸಿಗುತ್ತವೆ ಎಂಬುದು ಹಲವರ ಕುತೂಹಲದ ಪ್ರಶ್ನೆ. ಅದಕ್ಕೆ ಕುಂ.ವೀ. ಉತ್ತರಿಸಿರುವುದು ಹೀಗೆ: ‘ನನ್ನ  ವಾರಿಗೆಯ ಎಲ್ಲರೂ ನಗರಗಳಲ್ಲಿ ಕಥೆಗಳನ್ನು ಹುಡುಕುತ್ತಾ ಕೂತರು. ಅವರು ಸಂಕಟದ ದನಿಗೆ  ಕಿವಿಗೊಡಲಿಲ್ಲ. ಬದಲಿಗೆ, ರೊಮ್ಯಾಂಟಿಸಂ ಧ್ವನಿಗೆ ಕಾದು ಕುಳಿತರು. ನನ್ನೂರು ರಾಯಲ ಸೀಮೆಯ  ಒಂದೊಂದು ಮನೆಯಲ್ಲೂ ರಕ್ತಚರಿತ್ರೆಗೆ ಆಗುವಂಥ ಕಥೆಗಳಿವೆ. ಅವನ್ನೆಲ್ಲ ಇಂಚಿಂಚಾಗಿ ಕಂಡವನು ನಾನು.  ನಾನು ಕಂಡಿದ್ದನ್ನು ಅಷ್ಟೇ ನೇರವಾಗಿ ಬರೆದಿಡುತ್ತೇನೆ ಅಷ್ಟೆ. ಅನುಮಾನವೇ ಬೇಡ. ಗ್ರಾಮೀಣ ಭಾಗದ  ಹಳ್ಳಿಗಳಿಗೆ ಹೋಗಿ ಬಂದರೆ ನನಗೆ ಸಿಕ್ಕಿರುವಂಥ ಕಥೆಗಳು ಹಲವರಿಗೆ ಸಿಗುತ್ತವೆ. ಆದರೆ, ಹೋಗಿಬರುವ  ಅವಸರ ಯಾರಲ್ಲೂ ಕಾಣುತ್ತಿಲ್ಲ. ಹಾಗಾಗಿ ನಾನು ಗೆಲ್ಲುತ್ತಿದ್ದೇನೆ ಅನಿಸುತ್ತದೆ…’

ಅಂದಹಾಗೆ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ ಇಂದು (ಮೇ 12) ಬೆಳಗ್ಗೆ  10.30ಕ್ಕೆ ಬೆಂಗಳೂರಿನ ಗಾಂಧಿಭವನದಲ್ಲಿ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಕನ್ನಡ  ಸಾಹಿತಿಗಳಲ್ಲಿ ಹೆಚ್ಚಿನವರು ಐವತ್ತು- ಅರವತ್ತು ವರ್ಷದೊಳಗೆ ಲೇಖನಿಗೆ ನಿವೃತ್ತಿ ನೀಡಿ  ವೇದಿಕೆಯೇರಿ ಮೈಕ್ ಮುಂದೆ ನಿಂತು ನೀತಿಬೋಧೆ ಆರಂಭಿಸುತ್ತಾರೆ. ಆದರೆ 59ರ ವಯಸ್ಸಿನ ಕುಂವೀ ಮಾತ್ರ  ರಾಜಕಾರಣದಿಂದ, ಪದವಿ ಪಟ್ಟಗಳ ಲಾಲಸೆಯಿಂದ ದೂರವಿದ್ದು ಕೊಟ್ಟೂರಿನಲ್ಲೇ ಕುಳಿತು ಕನ್ನಡ ಸಾಹಿತ್ಯ  ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಅದು ಹಾಗೆಯೇ ಮುಂದುವರಿಯಲಿ, ಅವರ ಕೃತಿಗಳ ಮೂಲಕ  ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಬರುವಂತಾಗಲಿ.

ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ ಎಂದವ ರಾಷ್ಟ್ರಪ್ರೇಮಿಯಾದಾನೇ?
ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ?

ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ  ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ  ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ  ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು.  ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು  ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು ಸಮರ್ಥಿಸಿ ಬರೆದರು. ಈ ರೀತಿಯ  ವಾದ-ಪ್ರತಿವಾದ ಕಳೆದೆರಡು ತಿಂಗಳಿನಿಂದ ನಡೆಯುತ್ತಲೇ ಬರುತ್ತಿದೆ.

ಇಷ್ಟಕ್ಕೂ ವಾಸ್ತವವೇನು?

ಸರ್ ಮೊಹಮದ್ ಇಕ್ಬಾಲ್ ನಿಜಕ್ಕೂ ಒಬ್ಬ ರಾಷ್ಟ್ರಪ್ರೇಮಿಯಾಗಿದ್ದರೇ?  ಸಾರೆ ಜಹಾಂಸೆ ಅಚ್ಛಾ ಬರೆದ ಮಾತ್ರಕ್ಕೆ ಅವರನ್ನು ಒಬ್ಬ ದೇಶಪ್ರೇಮಿ ಎಂದು ನಂಬಿಬಿಡಬೇಕಾ?  ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಇಕ್ಬಾಲ್ ನಡೆದುಕೊಂಡ ರೀತಿಯಾದರೂ ಹೇಗಿತ್ತು? ಭಾರತದ ವಿಭಜನೆಗೆ  ಜಿನ್ನಾ, ಗಾಂಧಿ, ನೆಹರು ಅವರಷ್ಟೇ ಇಕ್ಬಾಲ್ ಕೂಡ ಕಾರಣರೇ?

ಹೌದು!

ಒಂದು ಕೈ ಮೇಲಾಗಿ ಹೇಳುವುದಾದರೆ ಆತನೇ ಕಾರಣಕರ್ತೃ! ಅಲಿಘಡ ಚಳವಳಿಯ  ಮೂಲಕ ಆರಂಭವಾದ ಪ್ರತ್ಯೇಕತೆಯ ಮನೋಭಾವವನ್ನು ಇಕ್ಬಾಲ್ ಹೇಗೆ ಮುಂದುವರಿಸಿದರು ಎನ್ನುವುದನ್ನು  Studies in Islamic Culture in the Indian Environment’ ಪುಸ್ತಕದಲ್ಲಿ ವಿವರಿಸಲಾಗಿದೆ-”ಸರ್ ಸಯ್ಯದ್ ಅಹಮದ್ ಖಾನ್ ಮತ್ತು ಮೊಹಮದ್ ಇಕ್ಬಾಲ್್ರ ಪ್ರತ್ಯಕ್ಷ  ಮತ್ತು ಪರೋಕ್ಷ ಪಾತ್ರದಿಂದ ಮುಸಲ್ಮಾನರಲ್ಲಿ ಕೋಮುವಾರು ಪ್ರಜ್ಞೆ ಬೆಳೆಯಿತು. ಸರ್ ಸಯ್ಯದ್ ಅಹಮದ್  ಖಾನ್ ಭವಿಷ್ಯದ ಉನ್ನತಿಗೋಸ್ಕರ ಆಧುನಿಕ ಶಿಕ್ಷಣ ಪಡೆಯಿರಿ ಎಂದು ಮುಸಲ್ಮಾನರಲ್ಲಿರುವ ಉನ್ನತ  ವರ್ಗದವರಿಗೆ ಆಗ್ರಹ ಮಾಡಿದರು. ಅವರು ಸ್ಥಾಪಿಸಿದ ಅಲಿಘಡ ಕಾಲೇಜು, ಪ್ರತ್ಯೇಕ ಹಾಗೂ ಸ್ವತಂತ್ರ  ಸ್ಥಾನ ಹೊಂದಬೇಕೆಂಬ ಪ್ರಜ್ಞೆಯನ್ನು ಮುಸ್ಲಿಮರಲ್ಲಿ ಮೂಡಿಸಿತು. 1930ರಲ್ಲಿ ನಡೆದ ಅಲಹಾಬಾದಿನ  ಮುಸ್ಲಿಂ ಲೀಗ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೊಹಮ್ಮದ್ ಇಕ್ಬಾಲ್, ಮುಸಲ್ಮಾನರು ಪ್ರತ್ಯೇಕ  ರಾಷ್ಟ್ರವಾಗಬೇಕು ಎಂದು ಒತ್ತಿಹೇಳಿದ್ದರಿಂದಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಭಿನ್ನತೆಗಳು  ಹೆಚ್ಚಿದವು. ನಂತರ ಮುಸ್ಲಿಂ ಲೀಗ್್ನ ನೇತಾರರಾದ ಮಹಮ್ಮದ್ ಅಲಿ ಜಿನ್ನಾ ದ್ವಿರಾಷ್ಟ್ರ  ಸಿದ್ಧಾಂತವನ್ನು ಪ್ರಸಾರ ಮಾಡತೊಡಗಿದರು ಮತ್ತು ಹಿಂದೂ, ಮುಸ್ಲಿಮರು ಎರಡು ಭಿನ್ನ  ರಾಷ್ಟ್ರಗಳಾಗಿದ್ದು ಒಂದಾಗಿ ಬಾಳಲಾರರು ಎಂದು ತೀರ್ಮಾನಿಸಿದರು. ಅವರ ಹಲವು ಬೇಡಿಕೆಗಳನ್ನು 1930ರ  ನಂತರ ಕಾಂಗ್ರೆಸ್ ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನವನ್ನು ಎದುರಿಸಿದ ಜಿನ್ನಾ ಅವರ  ರಾಜಕಾರಣದಲ್ಲಿ ಈ ನಿಲುವು ಮಹತ್ವ ಪಡೆಯಿತು.”

ಇಕ್ಬಾಲರ ಜೀವನ ಕಾನೂನು-ರಾಜಕೀಯದ ನಡುವೆ ಹಂಚಿಹೋಗಿತ್ತು.  ಅಂತಾರಾಷ್ಟ್ರೀಯ ರಾಜಕಾರಣವನ್ನು ಮುಸ್ಲಿಮರ ಹಿತದೃಷ್ಟಿಯಿಂದ ನೋಡುವ ದೃಷ್ಟಿಕೋನ  ಇಕ್ಬಾಲ್್ಗಿತ್ತು. ಉದಾಹರಣೆಗೆ, ಮೊದಲ ವಿಶ್ವಯುದ್ಧದಲ್ಲಿ ಭಾರತ ಭಾಗವಹಿಸಬೇಕು ಎಂದು  ಸಮರ್ಥಿಸಿದವರು ಅವರು. ಖಿಲಾಫತ್ ಚಳವಳಿಯೊಂದಿಗೆ ನಿಕಟ ಸಂಪರ್ಕವಿದ್ದ ಆತ ಆ ಚಳವಳಿಯ ಮುಂದಾಳಾದ  ಮೌಲಾನಾ ಮಹಮದ್ ಅಲಿಗೆ ಹತ್ತಿರವಾಗಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್್ನ ಬದ್ಧವೈರಿಯಾಗಿದ್ದ ಈ  ಕವಿ, ಕಾಂಗ್ರೆಸ್ಸನ್ನು ಎಂದೂ ಒಂದು ರಾಷ್ಟ್ರೀಯ ಪಕ್ಷವಾಗಿ ನೋಡಲೇ ಇಲ್ಲ. ಅವರ ಪಾಲಿಗೆ  ಕಾಂಗ್ರೆಸ್ ಎಂದರೆ ಬಹುಸಂಖ್ಯಾತ ಹಿಂದೂಗಳ ಪಕ್ಷ.

ಇನ್ನೊಂದೆಡೆ 1920ರ ಸುಮಾರಿಗೆ ಮುಸ್ಲಿಂ ಲೀಗ್ ಕೂಡ ಆಂತರಿಕ  ರಾಜಕೀಯದಿಂದ ಬಳಲತೊಡಗಿತ್ತು. ಲೀಗ್್ನೊಳಗೇ ಎರಡು ಬಣಗಳಿದ್ದವು. ಬ್ರಿಟಿಷ್ ಬೆಂಬಲಿಗ ಮಹಮ್ಮದ್  ಶಫಿ ಬಣ ಮತ್ತು ತಟಸ್ಥ ನಿಲುವಿನ ಜಿನ್ನಾ ಗುಂಪಿನ ನಡುವಿನ ಶೀತಲಸಮರ ಕಂಡು ಇಕ್ಬಾಲ್  ಕಂಗೆಟ್ಟಿದ್ದರು. ಕೇವಲ ಓದು, ಬರಹ, ಭಾಷಣದ ಮೂಲಕ ಮುಸ್ಲಿಂ ಅಸ್ತಿತ್ವವನ್ನು ಸಮರ್ಥಿಸುತ್ತಿದ್ದ  ಇಕ್ಬಾಲ್, ನೇರವಾಗಿ ಚುನಾವಣೆಯಲ್ಲೂ ಸ್ಪರ್ಧಿಸಿದರು. ಪಂಜಾಬ್ ಲೆಜಿಸ್ಲೇಟಿವ್ ಅಸೆಂಬ್ಲಿ  ಚುನಾವಣೆಗೆ 1926ರಲ್ಲಿ ಲಾಹೋರ್್ನಿಂದ ನಿಂತರು. ಅಲ್ಲದೆ 3,177 ವೋಟುಗಳ ಅಂತರದಲ್ಲಿ ವಿಜಯ  ಸಾಧಿಸಿಬಿಟ್ಟರು. ಮುಸ್ಲಿಂ ಲೀಗನ್ನು ಒಗ್ಗೂಡಿಸುವುದು ಅವರ ಮುಂದಿನ ಹೊಣೆಯಾಯಿತು. ಮುಸ್ಲಿಂ  ಲೀಗ್್ನ ಅಧ್ಯಕ್ಷರಾಗಿ ಇಕ್ಬಾಲ್ ಮಾಡಿದ ಭಾಷಣ ಪಾಕಿಸ್ತಾನ ನಿರ್ಮಾಣದ ಬೀಜ. ಅಲಹಾಬಾದ್್ನಲ್ಲಿ  ಡಿಸೆಂಬರ್ 29, 1930ರಂದು ಅವರು ಮಾಡಿದ ಭಾಷಣ ಅತ್ಯಂತ ಮಹತ್ವದ್ದು-Nations  are born in the hearts of poets, they prosper and die in the hands of  politicians!  ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ, ಅವು ರಾಜಕಾರಣಿಗಳ ಕೈಯಲ್ಲಿ ಬೆಳೆದು,  ಸಾವನ್ನಪ್ಪುತ್ತವೆ ಎಂದರು ಇಕ್ಬಾಲ್! ಸ್ವತಂತ್ರ ಸಾರ್ವಭೌಮ ಮುಸ್ಲಿಂ ರಾಜ್ಯದ ಬೇಡಿಕೆಯನ್ನು  ಜಿನ್ನಾರಿಗಿಂತ ಮೊದಲು ಎತ್ತಿದ್ದೇ ಇಕ್ಬಾಲ್. ಮುಸ್ಲಿಮರ ರಾಜಕಾರಣದ ದೃಷ್ಟಿಯಿಂದ ಖಿಲಾಫತ್ ನಂತರದ  ಅತಿಮುಖ್ಯ ಘಟ್ಟ ಮುಸ್ಲಿಂ ಲೀಗ್್ನ ಬೆಳ್ಳಿಹಬ್ಬದ ಈ ಅಧಿವೇಶನ. “ನೈತಿಕ ಆದರ್ಶ ಮತ್ತು ಒಂದು  ರೀತಿಯ ರಾಜನೀತಿಯಾಗಿರುವ ಇಸ್ಲಾಂ (ಅಂದರೆ ನನ್ನ ಪ್ರಕಾರ ಕಾನೂನು ವ್ಯವಸ್ಥೆಯ ಮೂಲಕ  ನಿಯಂತ್ರಿಸಲ್ಪಡುವ ಸಾಮಾಜಿಕ ರಚನೆ ಹಾಗೂ ನಿರ್ದಿಷ್ಟ ನೈತಿಕ ಆದರ್ಶದಿಂದ ಉಜ್ವಲಗೊಂಡಿರುವುದು)  ಭಾರತದ ಮುಸ್ಲಿಮರ ಜೀವನೇತಿಹಾಸ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಹರಿದು ಹಂಚಿಹೋಗಿರುವ  ವ್ಯಕ್ತಿಗಳು ಮತ್ತು ಗುಂಪುಗಳನ್ನು ಕ್ರಮೇಣ ಒಗ್ಗೂಡಿಸಿ, ಅಂತಿಮವಾಗಿ ನಿರ್ದಿಷ್ಟ  ವ್ಯಾಖ್ಯೆಗೊಳಪಡುವ ವ್ಯಕ್ತಿಗಳಾಗಿ ಅವರನ್ನು ಪರಿವರ್ತಿಸುವುದರ ಜೊತೆಗೆ ಅವರಿಗೆ ತಮ್ಮದೇ ಆದ  ನೈತಿಕ ಪ್ರಜ್ಞೆ ಹೊಂದಲು ಬೇಕಾದ ಮೂಲಭೂತ ಭಾವನೆಗಳು ಮತ್ತು ನಿಷ್ಠೆಯನ್ನು ಅದು(ಇಸ್ಲಾಂ) ನೀಡಿದೆ.  ಇಸ್ಲಾಂ ಇಡೀ ಜಗತ್ತಿನಲ್ಲೇ ಏನಾದರೂ ಜನ ನಿರ್ಮಾಪಕ ಶಕ್ತಿಯಾಗಿ ಉತ್ಕೃಷ್ಟವಾಗಿ ಕೆಲಸ  ಮಾಡಿರುವುದಾದರೆ ಅದು ಭಾರತದಲ್ಲೇ ಎಂದು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳಬಹುದು. ಉಳಿದೆಡೆಯಂತೆ  ಭಾರತದಲ್ಲೂ ಸಹ ಇಸ್ಲಾಂ ಒಂದು ಸಮಾಜದ ಸಂರಚನೆ ಹೊಂದಿರುವುದು ಇಸ್ಲಾಂ ನಿರ್ದಿಷ್ಟ ನೈತಿಕ  ಆದರ್ಶದಿಂದ ಸ್ಫೂರ್ತಿ ಪಡೆದು ಕೆಲಸ ಮಾಡಿರುವುದರಿಂದ. ಮುಸ್ಲಿಂ ಸಮಾಜ, ಗಣನೀಯ ಏಕರೂಪದ ಮತ್ತು  ಒಳಒಗ್ಗಟ್ಟಿನಿಂದ, ಅದರ ಸಂಸ್ಕೃತಿಯ ಕಾನೂನುಗಳು ಮತ್ತು ಸಂಸ್ಥೆಗಳ ಒತ್ತಡದ ಮೂಲಕ ಅದು ಈಗಿರುವ  ಸ್ಥಿತಿ ತಲುಪಿದೆ ಎಂಬುದು ನನ್ನ ಮಾತಿನ ಅರ್ಥ” ಎಂದರು ಇಕ್ಬಾಲ್.

‘ಭಾರತದೊಳಗಿನ ಮುಸ್ಲಿಂ ಭಾರತ’ ಎಂಬ ಉಪಶೀರ್ಷಿಕೆಯಲ್ಲಿ ಇಕ್ಬಾಲ್ ಆಡಿದ  ಮಾತುಗಳು ಪಾಕಿಸ್ತಾನ ಸೃಷ್ಟಿಯ ಮೂಲಸ್ವರೂಪವನ್ನು ಹಿಡಿದಿಟ್ಟಿವೆ-”ಭಾರತದಂಥ ದೇಶದಲ್ಲಿ ಸಾಮರಸ್ಯದ  ಅಖಂಡತೆಯನ್ನು ತರುವಲ್ಲಿ ಅದರ ಉನ್ನತ ಆಯಾಮದಲ್ಲಿ, ಕೋಮುವಾದ ಅನಿವಾರ್ಯ. ಯುರೋಪಿನ ದೇಶಗಳ  ರೀತಿಯಲ್ಲಿ ಭಾರತೀಯ ಸಮಾಜದ ಘಟಕಗಳು ಪ್ರಾದೇಶಿಕವಾಗಿಲ್ಲ. ಭಾರತವು ವಿವಿಧ ಜನಾಂಗ, ಹಲವು  ಭಾಷೆಗಳನ್ನಾಡುವುದರ, ಅನೇಕ ಮತಧರ್ಮಗಳಿಗೆ ಸೇರಿರುವ ಮನುಷ್ಯರ ಗುಂಪುಗಳಿರುವ ಖಂಡ. ಸಾಮಾನ್ಯ  ಜನಾಂಗ ಪ್ರಜ್ಞೆಯಿಂದ ಅವರ ನಡವಳಿಕೆ ನಿಯಂತ್ರಿತವಾಗುತ್ತಿಲ್ಲ. ಅಷ್ಟೇಕೆ ಹಿಂದೂಗಳು ಕೂಡ ಏಕರೂಪದ  ಗುಂಪಲ್ಲ. ಕೋಮುವಾರು ಗುಂಪುಗಳನ್ನು ಗುರುತಿಸದೆ ಯುರೋಪಿನ ಪ್ರಜಾಪ್ರಭುತ್ವದ ತತ್ತ್ವವನ್ನು  ಭಾರತಕ್ಕೆ ಅನ್ವಯಿಸುವುದು ಸಾಧ್ಯವಿಲ್ಲ. ಭಾರತದೊಳಗೇ ‘ಮುಸ್ಲಿಂ ಭಾರತ’ಕ್ಕಾಗಿ ಮುಸಲ್ಮಾನರು  ಬೇಡುತ್ತಿರುವುದು ಅತ್ಯಂತ ಸರಿಯಾಗಿದೆ.’

ಮುಸಲ್ಮಾನರಿಗೆ ಪ್ರತ್ಯೇಕ ಅಸ್ತಿತ್ವ ಬೇಕೇಬೇಕು ಎಂಬ ವಾದ ಅವರಲ್ಲಿ  ಎಷ್ಟು ಬಲವಾಗಿತ್ತೆಂದರೆ ಇದೇ ಭಾಷಣದಲ್ಲಿ ಅವರು ಹೇಳಿದರು-’“I  would never advise the Muslims of India to agree to a system, whether of British  or of Indian origin, which virtually negates the principle of true federation or  fails to recognise them as a distinct political entity.”

ಅದೇ ಭಾಷಣದ ಕಟ್ಟಕಡೆಗೆ ಹೇಳಿದ್ದೇನು ಗೊತ್ತೇ?

“I would like to see the  Punjab, North-West Frontier Province, Sindh and Bluchistan amalgamated into a  single state. Self-government within the British Empire, or without the British  Empire, the formation of a consolidated Northwest Indian Muslim state appears to  me to be the final destiny of the Muslims, at least of Northwest India.”ಪಂಜಾಬ್  ಸರಹದ್ದು ಪ್ರಾಂತ್ಯ, ಸಿಂಧ್, ಬಲೂಚಿಸ್ತಾನಗಳನ್ನು ಒಗ್ಗೂಡಿಸಿಕೊಂಡು ಅದೊಂದು ಸಂಯುಕ್ತ  ಪ್ರಾಂತ್ಯವಾಗಿ ರೂಪುಗೊಳ್ಳುವುದನ್ನು ನಾನು ಕಾಣಲಿಚ್ಛಿಸುತ್ತೇನೆ ಎಂದ ಸರ್ ಮೊಹಮದ್ ಇಕ್ಬಾಲ್  ಬಿತ್ತಿದ್ದು ಮತ್ತೇನನ್ನೂ ಅಲ್ಲ ಪ್ರತ್ಯೇಕ ರಾಷ್ಟ್ರದ ಬೀಜವನ್ನೇ! 1931ರಲ್ಲಿ ದೇಶ ಬಿಟ್ಟು  ಬ್ರಿಟನ್್ನಲ್ಲಿ ನೆಲೆಸಲು ಹೋಗಿದ್ದ ಮಹಮದ್ ಅಲಿ ಜಿನ್ನಾಗೆ “ಮುಸ್ಲಿಂ ಪಾಕಿಸ್ತಾನ ರಚನೆ  ಮಾಡಬೇಕಾದ ಅಗತ್ಯವಿದ್ದು ಆ ಕಾರ್ಯ ಸಾಧನೆಗಾಗಿ ನೀನು ಭಾರತಕ್ಕೆ ಹಿಂದಿರುಗು” ಎಂದು ಪತ್ರ ಬರೆದು  ವಾಪಸ್ ಕರೆಸಿಕೊಂಡಿದ್ದೇ ಇಕ್ಬಾಲ್. ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ಜಿನ್ನಾ  ತಾಯಿಯಾದರೆ ಇಕ್ಬಾಲರೇ ತಂದೆ. ಏನೇ ರಾಜಕೀಯ ಕುಸಿತ, ಹತಾಶೆ, ಭಿನ್ನಾಭಿಪ್ರಾಯಗಳಿದ್ದರೂ ಇಕ್ಬಾಲರು  ಜಿನ್ನಾಗೆ ಪ್ರಚೋದನೆ ನೀಡದಿದ್ದರೆ ಪಾಕಿಸ್ತಾನದ ಭ್ರೂಣ ಸಿದ್ಧವಾಗುತ್ತಿರಲಿಲ್ಲ. ನಾನು ಮತ್ತು  ಡಾ. ಜಿ.ಬಿ. ಹರೀಶ್ ಬರೆದಿರುವ “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ  ಒಡೆದನೇ?” ಪುಸ್ತಕದಲ್ಲಿ ಇಕ್ಬಾಲರು ಬರೆದಿರುವ ಪತ್ರಗಳನ್ನು ಪ್ರಕಟಿಸಲಾಗಿದೆ. ಇಕ್ಬಾಲ್  ಜಿನ್ನಾಗೆ ಬರೆದಿರುವ ಪ್ರತಿ ಪತ್ರದಲ್ಲೂ ಕಾಣುವುದು ಪ್ರತ್ಯೇಕ ರಾಷ್ಟ್ರದ ವಿಷಬೀಜವೇ.

ಇಕ್ಬಾಲ್ ಮತ್ತು ಜಿನ್ನಾರನ್ನು ಆಳವಾಗಿ ಅರಿಯಲು ‘ಸಾರೆ ಜಹಾಂಸೆ ಅಚ್ಛಾ’  ಗೀತೆಯ ಒಳಗುಟ್ಟನ್ನು ಸ್ವಲ್ಪ ಬಗೆಯಬೇಕು. ಉರ್ದುವಿನಲ್ಲಿ ಇಕ್ಬಾಲ್ ರಚಿಸಿದ ಈ ಕವಿತೆ ಮೊದಲು  ಪ್ರಕಟವಾಗಿದ್ದು 1904ರ ಆಗಸ್ಟ್ 16ರಂದು ‘ಇತ್ತೆಹಾದ್್’ ಎಂಬ ವಾರಪತ್ರಿಕೆಯಲ್ಲಿ. ಇದನ್ನು  ದೇಶಭಕ್ತಿಗೀತೆಯೆಂದು ಮುಂದೆ ಬಿಂಬಿಸಿದರೂ ಇಕ್ಬಾಲ್ ಬರೆದದ್ದು ಗಜಲ್ ಶೈಲಿಯಲ್ಲಿ, ಮಕ್ಕಳ  ಕವಿತೆಯಾಗಿ. 1905ರಲ್ಲಿ ಸ್ವತಃ ಇಕ್ಬಾಲ್ ಇದನ್ನು ಲಾಹೋರಿನ ಸರ್ಕಾರಿ ಕಾಲೇಜಿನ ಸಭೆಯೊಂದರಲ್ಲಿ  ವಾಚನ ಮಾಡಿದರು. ತಕ್ಷಣವೇ ಈ ಕವಿತೆ ಜನರ ಹೃದಯಕ್ಕೆ ಲಗ್ಗೆ ಇಟ್ಟಿತು. ತರಾನಾ-ಎ-ಹಿಂದ್ (ಭಾರತೀಯರ  ಹಾಡು) ಎಂದೇ ಪ್ರಸಿದ್ಧವಾಗಿ ಹಾಡಿನ ರೂಪ ಪಡೆಯಿತು. ಈ ಹಾಡು ಬರೆದಾಗಿನ ಇಕ್ಬಾಲೇ ಬೇರೆ, 1930ರ  ಮುಸ್ಲಿಂ ಲೀಗ್್ನ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟ ಇಕ್ಬಾಲೇ ಬೇರೆ. ಅದೇ ದೇಹ,  ಆದರೆ ಮನಸ್ಸು ಮಾತ್ರ ಭಾರತದಿಂದ ದೂರ ಹೋಗಿಬಿಟ್ಟಿತ್ತು. 1904ರಲ್ಲಿ ಈ ಕವಿತೆ ಜನರ ಕಿವಿಗೆ  ಬಿದ್ದಾಗ ಅದರ ವಿಶಾಲ ದೃಷ್ಟಿ ವಿಶೇಷವಾಗಿ ಹಲವರನ್ನು ಆಕರ್ಷಿಸಿತ್ತು.

ಮಜ್್ಹಬ್ ನಹೀಂ ಸಿಖಾತಾ ಆಪಸ್ ಮೇಂ ಬೈರ್ ರಖನಾ

ಹಿಂದೀ ಹೈ ಹಂ, ವತನ್ ಹೈ ಹಿಂದೂಸ್ತಾನ್ ಹಮಾರಾ

ನಮ್ಮ ನಮ್ಮಲ್ಲೇ ದ್ವೇಷ ತಂದುಕೊಳ್ಳುವುದನ್ನು ಮತಧರ್ಮ ಕಲಿಸುವುದಿಲ್ಲ,  ನಾವು ಹಿಂದ್, ನಮ್ಮ ಭೂಮಿ ಹಿಂದೂಸ್ತಾನ.

ಆದರೆ ಇಕ್ಬಾಲರು 1910ರಲ್ಲಿ ಬರೆದ ‘ತರಾನಾ-ಇ-ಮಿಲ್ಲಿ’ ಕವನದ ಮೊದಲ  ಚರಣದಲ್ಲಿ ಒಡಕಿನ ಅಪಸ್ವರ ಕೇಳಿಸಿತ್ತು.

ಚೀನ್-ಒ-ಅರಬ್ ಹಮಾರಾ, ಹಿಂದೂಸ್ತಾನ್ ಹಮಾರಾ

ಮುಸ್ಲಿಂ ಹೈ ಹಂ, ವತನ್ ಹೈ ಸಾರಾ ಜಹಾಂ ಹಮಾರಾ

ಅಂದರೆ ಮಧ್ಯ ಏಷ್ಯಾ ಮತ್ತು ಅರೇಬಿಯಾ ನನ್ನದು, ಹಿಂದೂಸ್ತಾನ ನಮ್ಮದು,  ನಾವು ಮುಸ್ಲಿಮರು, ಇಡೀ ಜಗತ್ತೇ ನಮ್ಮ ಭೂಮಿ. ಈ ಎರಡನೆಯ ಕವಿತೆಯಲ್ಲಿ ಒಂದು ರೀತಿ ಇಡೀ ವಿಶ್ವವೇ  ನಮ್ಮದು ಎಂಬ ವಿಶಾಲತೆ ಇದೆ ಎಂದು ಹೇಳೋಣವೇ? ಅಥವಾ ‘ನಾವು ಮುಸ್ಲಿಮರು ಇಡೀ ಜಗತ್ತು ನಮ್ಮದು’ ಎಂಬ  ಸಾಲಿನಲ್ಲಿ ಪ್ರತ್ಯೇಕತೆ ಕಾಣುತ್ತದೆಯೋ? ಅಷ್ಟಕ್ಕೂ ‘ಸಾರಾ ಜಗಕೋ ಇಸ್ಲಾಂ ಬನಾಯೇಂಗೆ’ ಎಂಬ  ಪ್ರಾಚೀನ ಇಸ್ಲಾಂನ ಘೋಷಣೆಗಿಂತ ಇದು ಯಾವ ರೀತಿ ಬೇರೆಯಾಗಿದೆ?!

ಭಾರತ ಭಕ್ತಿಯ ಪರಾಕಾಷ್ಠೆಯೆಂದು ಈಗಲೂ ‘ಸಾರೇ ಜಹಾಂಸೆ ಅಚ್ಛಾ’  ಹಾಡುವವರಿದ್ದಾರೆ. ಆದರೆ ಈ ಹಾಡು ಬರೆದಾತನೇ ಭಾರತ ವಿಭಜನೆಯ ಮೂಲ ಖಳನಾಯಕನೆಂದು ಅದೆಷ್ಟು ಜನರಿಗೆ  ಗೊತ್ತು?

ಇಂಥ ಸಂವೇದನಾಶೀಲ ಸಂಶೋಧಕರ ಸಂತತಿ ಸಾವಿರವಾಗಲಿ!
ಭಾರತ ಎಂಬುದೇ ಒಂದು ಬೆರಗು. ಈ ದೇಶದ ಉದ್ದಗಲಕ್ಕೂ ಬೆರಗಿನ ನೂರಾರು  ಉದಾಹರಣೆಗಳು ಕಾಣಸಿಗುತ್ತವೆ. ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಯಾವುದೂ  ಅಸಾಧ್ಯವಲ್ಲ ಎಂಬುದಕ್ಕೆ ಹೆಜ್ಜೆಗೊಂದು ಉದಾಹರಣೆ ಸಿಗುತ್ತದೆ. ಅತಿ ಸಾಮಾನ್ಯರು ಅಸಾಮಾನ್ಯ  ಸಂಶೋಧನೆಗಳನ್ನು ಮಾಡಿದ್ದಾರೆ. ಈ ಸಾಮಾನ್ಯರು ಸುಶಿಕ್ಷಿತ ಪಂಡಿತರಲ್ಲ. ನುರಿತ ಉದ್ಯಮಿಗಳಲ್ಲ.  ಆದರೂ ತಮ್ಮ ವಿವೇಚನೆಯ ಇತಿಮಿತಿಯಲ್ಲೇ ರಿಸ್ಕ್ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತಲ ಪರಿಸರದ  ಬಾಳು ಹಸನಾಗಿಸುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂಥವರ ಪೈಕಿ ತಮಿಳುನಾಡಿನ ಅರುಣಾಚಲಂ  ಮುರುಘನಾಥಂ ಕೂಡ ಒಬ್ಬರು. ಶಾಲೆಯನ್ನು ಅರ್ಧಕ್ಕೇ ಬಿಟ್ಟ ಈ ಆಸಾಮಿ, ಸ್ವದೇಶಿ ನಿರ್ಮಿತ  ನ್ಯಾಪ್್ಕಿನ್್ಗಳನ್ನು ತಯಾರಿಸಿದ ಧೀರ. ತುಂಬಾ ಕಡಿಮೆ ಬೆಲೆಗೆ ನ್ಯಾಪ್್ಕಿನ್ ಮಾರುತ್ತಾ  ಅಮೆರಿಕನ್ ಕಂಪನಿಯ ಉತ್ಪನ್ನಗಳಿಗೆ ಸೆಡ್ಡು ಹೊಡೆದಿರುವ ಗಟ್ಟಿಗ. ಆಂಗ್ಲ ನಿಯತಕಾಲಿಕ ‘ಓಪನ್್’  ಪ್ರಕಟಿಸಿರುವ ಲೇಖನದಲ್ಲಿನ ಅವರ ಸಾಧನೆಯ ಹಾದಿಯನ್ನು ಅವರದೇ ಮಾತುಗಳಲ್ಲಿ ಕೇಳೋಣ.

ಸಂಕೋಚವಿಲ್ಲದೆ ಹೇಳಿಬಿಡುತ್ತೇನೆ: ಮುಜುಗರವಿಲ್ಲದೆ ನ್ಯಾಪ್್ಕಿನ್  ಧರಿಸಿ ಓಡಾಡಿದ ಮೊದಲ ಪುರುಷ ನಾನೇ! ‘ಪೀರಿಯಡ್ಸ್್’ನ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ  ದೈಹಿಕ/ಮಾನಸಿಕ ಯಾತನೆ ಎಂಥದೆಂಬುದನ್ನು ಉಳಿದೆಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವನೂ ನಾನೇ.  ‘ಆ ಮೂರು ದಿನಗಳಲ್ಲಿ’ ಅವರು ಅನುಭವಿಸುವ ಕಿರಿಕಿರಿ, ನಡಿಗೆಯಲ್ಲಿನ ನಾಟಕೀಯತೆ, ಮಾತಿನಲ್ಲಿ  ಕಾಣಿಸಿಕೊಳ್ಳುವ ಸಿಡಿಮಿಡಿ… ಬಿಡಿ, ಅದನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಭಾರೀ  ಗಾತ್ರದ ಸರಪಳಿಯೊಂದನ್ನು ಕುತ್ತಿಗೆಗೆ ನೇತುಹಾಕಿಕೊಂಡು ಅಡ್ಡಾಡುವಾಗ ಗಂಡಸಿಗೆ ಆಗುವ  ಸಂಕಟವಿದೆಯಲ್ಲ; ಅಂಥದೇ ಯಾತನೆಯನ್ನು ‘ಪೀರಿಯಡ್ಸ್್’ನ ದಿನಗಳಲ್ಲಿ ಹೆಣ್ಣುಮಕ್ಕಳು  ಅನುಭವಿಸುವುದನ್ನು ಕಂಡವನು ನಾನು.

ನಮ್ಮ ದೇಶದಲ್ಲಿರುವ ಎಲ್ಲ ಹೆಣ್ಣುಮಕ್ಕಳೂ ನ್ಯಾಪ್್ಕಿನ್  ಬಳಸುವಂತಾಗಬೇಕು. ತೀರಾ ಬಡವರ ಮನೆಯ ಮಕ್ಕಳಿಗೂ ಕೈಗೆಟುಕುವಂಥ ಬೆಲೆಗೆ ನ್ಯಾಪ್್ಕಿನ್ ಮಾರಾಟ  ಸಾಧ್ಯವಾಗಬೇಕು ಎಂಬುದು ನನ್ನ ಆಸೆ, ಕನಸು. ನಿಮಗೆ ಗೊತ್ತುಂಟಾ? ನಮ್ಮ ದೇಶದ ಕೆಲವು ಬುಡಕಟ್ಟು  ಜನಾಂಗದ ಹೆಂಗಸರು ‘ಪೀರಿಯಡ್ಸ್್’ನ ದಿನಗಳಲ್ಲಿ  ಕಲ್ಮಶ ರಕ್ತ ಸಂಗ್ರಹಣೆಗೆ ತಟ್ಟೆಯಾಕಾರದ  ಎಲೆಗಳನ್ನು ಬಳಸುತ್ತಾರೆ. ಅದರರ್ಥವಿಷ್ಟೇ: ಈ ಜನ ಒಳಉಡುಪುಗಳನ್ನೇ ಧರಿಸುವುದಿಲ್ಲ! ಇಂಥವರಿಗೆಂದೇ  ವಿಶೇಷ ವಿನ್ಯಾಸದ ನ್ಯಾಪ್್ಕಿನ್್ಗಳನ್ನು ತಯಾರಿಸಬೇಕು ಎಂಬುದೂ ನನ್ನನ್ನು ಕಚ್ಚಿಕೊಂಡಿರುವ  ಇನ್ನೊಂದು ಕನಸು.

ಈ ಮನುಷ್ಯ ಹೋಗಿ ಹೋಗಿ ನ್ಯಾಪ್್ಕಿನ್್ಗೇ ಏಕೆ ಗಂಟುಬಿದ್ದ ಎಂದು  ನೀವೆಲ್ಲಾ ಕುತೂಹಲಗೊಳ್ಳುವ ಮೊದಲೇ ನನ್ನ ಹಿನ್ನೆಲೆ ಹೇಳಿಬಿಡುತ್ತೇನೆ. ತಮಿಳುನಾಡಿನ ಪುದೂಲ್ ಎಂಬ  ಪಟ್ಟಣಕ್ಕೆ ಸಮೀಪದ ಒಂದು ಹಳ್ಳಿ ನನ್ನೂರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ಜೊತೆಗೆ  ಅಮ್ಮ ಹಾಗೂ ಇಬ್ಬರು ತಂಗಿಯರಿದ್ದರು. ಹೊಟ್ಟೆಪಾಡಿಗೆಂದು ಅಮ್ಮ ಮನೆಗೆಲಸಕ್ಕೆ ಸೇರಿಕೊಂಡಳು. ಅವಳ  ಸಂಪಾದನೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಖರ್ಚಿಗೆ ಕಾಸು ಬೇಕು ಅನ್ನಿಸಿದಾಗ ಅಪ್ಪ ಬಿಟ್ಟು  ಹೋಗಿದ್ದ ಆಭರಣ, ಪಾತ್ರೆ-ಪಗಡ, ಸೈಕಲ್ಲು, ಬಟ್ಟೆ… ಹೀಗೆ ಎಲ್ಲವನ್ನೂ ಮಾರಿಕೊಂಡೆವು.  ಮಾರುವುದಕ್ಕೆ ಇನ್ನೇನೂ ಇಲ್ಲ ಅನ್ನಿಸಿದಾಗ ನನ್ನನ್ನು ಶಾಲೆ ಬಿಡಿಸಿ ಒಂದು ಫಾರ್ಮ್್ಹೌಸ್್ನಲ್ಲಿ  ಕೆಲಸಕ್ಕೆ ಸೇರಿಸಲಾಯಿತು. ಈ ಮಧ್ಯೆ ಫ್ಯಾಕ್ಟರಿ ಕೆಲಸಗಾರರಿಗೆ ಮಧ್ಯಾಹ್ನದ ಹೊತ್ತು ಊಟವನ್ನು  ಪಾರ್ಸೆಲ್್ನಲ್ಲಿ ಕೊಂಡೊಯ್ಯುವ ಮೂಲಕ ಒಂದಿಷ್ಟು ಬಿಡಿಗಾಸು ಸಂಪಾದಿಸಲು ಕಲಿತೆ. ನಂತರದ ಕೆಲವೇ  ದಿನಗಳಲ್ಲಿ ವೆಲ್ಡಿಂಗ್ ಶಾಪ್ ಒಂದರಲ್ಲಿ ಸಹಾಯಕನಾಗಿ ಸೇರಿಕೊಂಡೆ. ಒಂದೆರಡು ವರ್ಷಗಳ ನಂತರ ಕೆಲಸ  ಮತ್ತು ವ್ಯವಹಾರದ ಗುಟ್ಟು ಅರ್ಥವಾಯಿತು. ಮುಂದೆ, ನಾನೇ ಒಂದು ವೆಲ್ಡಿಂಗ್ ವರ್ಕ್್ಶಾಪ್  ಆರಂಭಿಸಿದೆ.

25 ವರ್ಷ ತುಂಬುತ್ತಿದ್ದಂತೆ ನನಗೆ ಶಾಂತಿ ಎಂಬಾಕೆಯೊಂದಿಗೆ  ಮದುವೆಯಾಯಿತು. ಹೀಗೇ ಆರು ವರ್ಷ ಕಳೆದುಹೋದವು. ಅದೊಂದು ದಿನ ನಾನು ಟೀವಿ ನೋಡುತ್ತಾ ಕುಳಿತಿದ್ದೆ.  ಆಗ ನನ್ನ ಹೆಂಡತಿ ಅದೇನನ್ನೋ ಕೈಲಿ ಹಿಡಿದು ಒಂದೊಂದೇ ಹೆಜ್ಜೆ ಹಿಂದು ಹಿಂದಕ್ಕೆ ಹೋಗತೊಡಗಿದಳು.  ಆಕೆಯ ಮುಖ ಕಳೆಗುಂದಿದಂತೆ ಕಾಣಿಸಿತು. ನಾನು ಕೂತಲ್ಲಿಂದಲೇ ಕೇಳಿದೆ: ‘ಏನದು, ನೀನು ಆ ಕೈಲಿ  ಹಿಡಿದಿರೋದು? ಅದ್ಯಾಕೆ ಅಡಗಿಸಿಕೊಂಡಿದ್ದೀಯ? ತೋರಿಸಬಾರದಾ?’ ಆಕೆ ಸಿಡಿಮಿಡಿಯಿಂದ- ಅದು ನನಗೆ  ಮಾತ್ರ ಸಂಬಂಧಿಸಿದ ವಿಷಯ. ನಿಮಗ್ಯಾಕೆ? ತೆಪ್ಪಗೆ ಕೂತ್ಕೊಂಡಿರಿ…’ ಅಂದಳು. ನಾನು  ವಾರೆಗಣ್ಣಿನಿಂದಲೇ ಗಮನಿಸಿದೆ. ಅವಳ ಕೈಲಿದ್ದುದು ಮನೆ ಒರೆಸಲು ಬಳಸುತ್ತಿದ್ದಂಥ ಬಟ್ಟೆ! ಸಂದರ್ಭ  ಏನೆಂದು ತಕ್ಷಣವೇ ಅರ್ಥವಾಯಿತು. ಈ ಹಳೆಯ ಬಟ್ಟೆ ಬಳಸುವುದರಿಂದ ಇನ್್ಫೆಕ್ಷನ್ ಆದರೆ ಗತಿ ಏನು  ಅನ್ನಿಸಿತು. ಅದನ್ನೇ ಹೆಂಡತಿಗೆ ವಿವರಿಸಿ- ‘ನೀನು ನ್ಯಾಪ್್ಕಿನ್ ಬಳಸಬಾರ್ದಾ? ಅದರಿಂದ ಎಷ್ಟೆಲ್ಲ  ಅನುಕೂಲವಿದೆ ಅಂತ ಟಿ.ವಿ.ಯಲ್ಲಿ ತೋರಿಸ್ತಾ ಇರ್ತಾರೆ. ನೋಡಿಲ್ವಾ? ಎಂದು ಪ್ರಶ್ನಿಸಿದೆ. ಹೆಂಡತಿ  ತಕ್ಷಣವೇ ಹೇಳಿದಳು: ‘ಸ್ವಾಮೀ, ಟಿ.ವಿ.ಯ ಜಾಹೀರಾತುಗಳನ್ನು ನಾನೂ ನೋಡಿದೀನಿ. ನಾವು ಮನೆಯ  ಹೆಂಗಸರೆಲ್ಲ ನ್ಯಾಪ್್ಕಿನ್ ಖರೀದಿಗೆ ಹೊರಟರೆ ಅಷ್ಟೆ: ಮನೇಲಿ ಹಾಲು ಖರೀದಿಗೆ ಅಗತ್ಯವಿರುವಷ್ಟೂ  ಕಾಸು ಉಳಿಯೋದಿಲ್ಲ…’

ಈ ಮಾತಿಂದ ನನಗೆ ಶಾಕ್ ಆಯಿತು. ನ್ಯಾಪ್್ಕಿನ್್ಗಳು ಅಷ್ಟೊಂದು ದುಬಾರಿ  ಎಂದು ಅದುವರೆಗೂ ನನಗೆ ಗೊತ್ತೇ ಇರಲಿಲ್ಲ. ದುಬಾರಿ ಬೆಲೆಗೆ ಮಾರುವಂಥ ಯಾವ ವಸ್ತು ಅದರಲ್ಲಿರುತ್ತೆ  ನೋಡಿಯೇಬಿಡೋಣ ಅನ್ನಿಸ್ತು. ಮರುದಿನವೇ ಸಮೀಪದ ಮೆಡಿಕಲ್ ಸ್ಟೋರ್್ಗೆ ಹೋದೆ. ನ್ಯಾಪ್್ಕಿನ್  ಬೇಕಿತ್ತು ಅಂತ ಕೇಳಿದೆ. ಸ್ಟೋರ್್ನ ಹುಡುಗ ನನ್ನನ್ನೇ ಮಿಕಿಮಿಕಿ ನೋಡುತ್ತಾ ಒಂದು ಪೇಪರ್್ನಲ್ಲಿ  ನ್ಯಾಪ್್ಕಿನ್ ಸುತ್ತಿ ಕೊಟ್ಟ. ಮನೆಗೆ ಬಂದು ಕುತೂಹಲದಿಂದ ಬಿಚ್ಚಿ ನೋಡಿದೆ. ನಿರಾಸೆಯಾಯಿತು.  ಏಕೆಂದರೆ, ತೀರಾ ಹಗುರವಾಗಿದ್ದ ಆ ನ್ಯಾಪ್್ಕಿನ್್ನಲ್ಲಿ ಹತ್ತಿಯ ಬಟ್ಟೆ ಮಾತ್ರ ಕಾಣಿಸಿತು. ಅದರ  ಉತ್ಪಾದನೆಗೆ ತಗಲುವುದು ತುಂಬಾ ಕಡಿಮೆ ಹಣ ಎಂಬುದು ಆಗಲೇ ಗೊತ್ತಾಯಿತು. ಆದರೆ, ಉತ್ಪಾದನೆಗೆ  ತಗಲುವ ಹಣಕ್ಕಿಂತ ಹತ್ತುಪಟ್ಟು ಹೆಚ್ಚಿನ ಹಣಕ್ಕೆ ನ್ಯಾಪ್್ಕಿನ್್ಗಳನ್ನು ಮಾರಾಟ  ಮಾಡಲಾಗುತ್ತಿತ್ತು. ತುಂಬಾ ಕಡಿಮೆ ಬೆಲೆಯ ನ್ಯಾಪ್್ಕಿನ್ ತಯಾರಿಸಬೇಕು. ಅದನ್ನು ಮೊದಲು ನನ್ನ  ಹೆಂಡತಿಗೇ ಕೊಡಬೇಕು ಎಂದು ಆಗಲೇ ನಿರ್ಧರಿಸಿದೆ.

ಮೊದಲಿಗೆ, ಹತ್ತಿರದ ಗಿರಣಿಯೊಂದರಲ್ಲಿ ಒಂದಷ್ಟು ಹತ್ತಿ ಬಟ್ಟೆ  ಖರೀದಿಸಿದೆ. ಮೆಡಿಕಲ್ ಸ್ಟೋರ್್ನಲ್ಲಿ ನೋಡಿದ್ದೆನಲ್ಲ; ಅದೇ ಶೇಪ್್ಗೆ ಈ ಬಟ್ಟೆಯನ್ನು  ಕತ್ತರಿಸಿದೆ. ಅದು ಮೆತ್ತಗಿದೆ ಎಂಬುದನ್ನೂ ಗ್ಯಾರಂಟಿ ಮಾಡಿಕೊಂಡೆ. ನಂತರ ಹೆಂಡತಿಯ ಬಳಿ ಹೋಗಿ-  ಇದು ನನ್ನದೇ ತಯಾರಿಕೆ. ನೀನು ಬಳಸು. ನಂತರ ಹೇಗಿದೆ ಅಂತ ಹೇಳು ಅಂದೆ. ಇನ್ನು ಒಂದರ್ಧ ಗಂಟೆಯ  ನಂತರ ಆಕೆ ಉತ್ತರ ಹೇಳಬಹುದು ಅಂದುಕೊಂಡರೆ, ಆಕೆ ಇಡೀ ದಿನ ಏನೂ ಹೇಳಲಿಲ್ಲ. ‘ಏನಾಯ್ತು ನಿಂಗೆ,  ಏನೂ ಹೇಳಲೇ ಇಲ್ಲವಲ್ಲ’ ಎಂದು ಕೇಳಿದೆ. ಆಕೆ ಜೋರಾಗಿ ನಕ್ಕು- ‘ಪೆದ್ದ, ನನಗೆ ಪೀರಿಯಡ್ಸ್  ಆಗಲಿಕ್ಕೆ ಇನ್ನೂ 10 ದಿನ ಬೇಕು. ಈಗಲೇ ಹೇಗೆ ಉತ್ತರ ಹೇಳಲಿ?’ ಅಂದಳು.

ಕಡೆಗೂ ಆ ದಿನ ಬಂತು. ನನ್ನ ಹೆಂಡತಿ ಮುಖ ಕಿವಿಚಿಕೊಂಡು ಬಂದು ಹೇಳಿದಳು:  ‘ಇದೆಂಥ ದರಿದ್ರ ಬಟ್ಟೆ ನೀವು ಬಳಸಿರೋದು? ತುಂಬಾ ಹಿಂಸೆ ಆಯ್ತು. ಇದರಷ್ಟು ಕೊಳಕು ಬಟ್ಟೇನ ನಾನು  ನೋಡಿರಲೇ ಇಲ್ಲ…’ ಈ ಮಾತಿಂದ ನನಗೆ ಶಾಕ್ ಅಯಿತು. ಏಕೆಂದರೆ ಕೊಯಮತ್ತೂರಿನ ಹೆಸರಾಂತ  ಫ್ಯಾಕ್ಟರಿಯಿಂದ ಅತ್ಯುತ್ತಮ ಗುಣಮಟ್ಟದ ಹತ್ತಿಬಟ್ಟೆಯನ್ನೇ ನಾನು ಖರೀದಿಸಿ ತಂದಿದ್ದೆ. ಅದು  ಕೊಳಕು ಬಟ್ಟೆಯಾಗಲು ಸಾಧ್ಯವೇ ಇರಲಿಲ್ಲ. ನಾನು ಎಲ್ಲಿ ತಪ್ಪು ಮಾಡಿದೆ ಎಂಬುದು ತಕ್ಷಣಕ್ಕೆ  ಅರ್ಥವಾಗಲಿಲ್ಲ. ಇರಲಿ, ಮತ್ತೊಮ್ಮೆ ಪ್ರಯತ್ನಿಸೋಣ ಅಂದುಕೊಂಡು ಮತ್ತೆ ನ್ಯಾಪ್್ಕಿನ್ ತಯಾರಿಸಿದೆ.  ಹೆಂಡತಿಯೇ ಮತ್ತೆ ನ್ಯಾಪ್್ಕಿನ್ ಬಳಸಲಿ ಎಂದು ಯೋಚಿಸಿದರೆ, ಒಂದಿಡೀ ತಿಂಗಳು ಕಾಯಬೇಕಿತ್ತು. ಅಂಥ  ತಾಳ್ಮೆ ನನಗಿರಲಿಲ್ಲ. ತಕ್ಷಣವೇ ತಂಗಿಯರು ನೆನಪಾದರು. ಅವರ ಮನೆಗೆ ಓಡಿದೆ. ನನ್ನ ಪ್ರಯೋಗದ ಬಗ್ಗೆ  ಹೇಳಿಕೊಂಡೆ. ಸಹಕರಿಸುವಂತೆ ಕೋರಿಕೊಂಡೆ. ಅವರಿಬ್ಬರೂ ನನಗೆ ಏನೂ ಹೇಳಲಿಲ್ಲ. ಆದರೆ ನನ್ನ  ಹೆಂಡತಿಯನ್ನು ಕರೆದು- ‘ಇಂಥ ‘ಸೂಕ್ಷ್ಮ’ ವಿಷಯವನ್ನು ಅಣ್ಣ ಅನ್ನಿಸಿಕೊಂಡವನ ಜೊತೆ ಬಿಡಿಸಿ ಹೇಳಲು  ಸಾಧ್ಯವೆ? ಅಣ್ಣನಿಗೆ ನೀವಾದ್ರೂ ಬುದ್ಧಿ ಹೇಳಿ. ಇದೇ ವಿಷಯ ಕೇಳುವುದಾದ್ರೆ ಅವನು ಮಾತಾಡುವುದೇ  ಬೇಡ’ ಅಂದುಬಿಟ್ಟರು.

ಇಂಥ ಹಿನ್ನಡೆಗಳಿಂದ ನಾನು ಎದೆಗುಂದಲಿಲ್ಲ. ಕೊಯಮತ್ತೂರಿನ ಮೆಡಿಕಲ್  ಕಾಲೇಜಿನಲ್ಲಿರುವ ವಿದ್ಯಾರ್ಥಿನಿಯರಿಗೆ ನನ್ನ ‘ಸಂಶೋಧನೆ’ಯ ಬಗ್ಗೆ ಹೇಳಿಕೊಳ್ಳಲು ನಿರ್ಧರಿಸಿದೆ.  ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದ ಹೆಂಡತಿ ಮತ್ತು ತಂಗಿಯರಿಗಿಂತ ಹೊಸ ಪರಿಚಯದ  ವಿದ್ಯಾರ್ಥಿನಿಯರೊಂದಿಗಿನ ಚರ್ಚೆಯೇ ಒಳ್ಳೆಯದು ಅನಿಸಿತ್ತು. ನನ್ನ ಪ್ರಯೋಗಕ್ಕೆ  ಪಾತ್ರಧಾರಿಗಳಾಗಲು 12 ಹುಡುಗಿಯರು ಮುಂದೆ ಬಂದರು ನಿಜ. ಆದರೆ, ನ್ಯಾಪ್್ಕಿನ್್ನ ಬಳಕೆ, ಅದರಿಂದ  ಉಂಟಾಗುವ ಅನುಕೂಲದಂಥ ವಿಷಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತು. ಅದು  ತಿಳಿದಾಕ್ಷಣ, ಒಂದು ಹಾಳೆಯಲ್ಲಿ ನನ್ನ ಪ್ರಯೋಗದ ಉದ್ದೇಶ ಏನೆಂಬುದನ್ನು ಮೊದಲು ತಮಿಳಿನಲ್ಲಿ  ಬರೆದೆ. ನಂತರ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ, ಎಲ್ಲ ವಿದ್ಯಾರ್ಥಿನಿಯರಿಗೂ ಹಂಚಿದೆ.  ನ್ಯಾಪ್್ಕಿನ್್ಗಳು ಹೇಗಿದ್ದರೆ ಚೆಂದ ಎಂದು ನಂತರ ವಿದ್ಯಾರ್ಥಿನಿಯರು ಬರೆದುಕೊಟ್ಟಿದ್ದರು.

ನ್ಯಾಪ್್ಕಿನ್್ಗಳು ತೂಕ ಅನ್ನಿಸಬಾರದು. ಅಂಟಿಕೊಳ್ಳಬಾರದು.  ಜಾರಿಹೋಗಬಾರದು… ಎಂದೆಲ್ಲ ವಿದ್ಯಾರ್ಥಿನಿಯರು ಸೂಚಿಸಿದ್ದರು. ಅಂಥದೊಂದು ಅನುಭವ ಪಡೆಯುವುದು  ಹೇಗೆ? ಆಗ ಒಂದು ಐಡಿಯಾ ಬಂತು. ಮೊದಲು ನನಗೆ ಪರಿಚಯವಿದ್ದ ಮಟನ್್ಸ್ಟಾಲ್್ನ ಮಾಲೀಕರಿಂದ ಮೇಕೆಯ  ರಕ್ತ ಸಂಗ್ರಹಿಸಿದೆ. ಅದನ್ನು ಫುಟ್ಬಾಲ್್ನ ಬ್ಲಾಡರ್್ಗೆ ತುಂಬಿದೆ. ಈ ಸಂಗ್ರಹವನ್ನು  ನ್ಯಾಪ್್ಕಿನ್ ಮೇಲಿಟ್ಟು ಅದನ್ನು ನಾನೇ ಧರಿಸಿ ಒಂದಿಡೀ ವಾರ ಓಡಾಡಿದೆ. ಒಂದೆರಡು ಕಡೆ  ಕುಳಿತುಕೊಂಡು ಪರೀಕ್ಷಿಸಿದೆ. ತುಂಬಾ ಹಿಂಸೆ ಅನಿಸಿತು. ನಿರಾಸೆಯಿಂದ ಈ ನ್ಯಾಪ್್ಕಿನ್ ಹಾಗೂ  ಬ್ಲಾಡರ್ ಅನ್ನು ಊರ ಕೆರೆಯಲ್ಲಿ ತೊಳೆಯುತ್ತಿದ್ದೆ. ಅದನ್ನು ಕಂಡವರು- ‘ಇವನಿಗೆ ಯಾವುದೋ ಗುಣವಾಗದ  ಲೈಂಗಿಕ ರೋಗ ಇರಬೇಕು, ತಕ್ಷಣವೇ ಊರಿಂದ ಹೊರಹಾಕಿ’ ಎಂದರು. ಅದು ದೊಡ್ಡ ಸುದ್ದಿಯಾಗುವ ಮೊದಲೇ  ನಾನು ಊರಿಂದ ಓಡಿಹೋದೆ.

ಈ ಎಲ್ಲ ಗೊಂದಲಗಳ ಮಧ್ಯೆಯೂ ನನ್ನ ಪ್ರಯೋಗ ನಡೆದೇ ಇತ್ತು. ನಾನು  ಮೆಡಿಕಲ್ ಕಾಲೇಜಿನ ಹುಡುಗಿಯರ ಬಳಿ ನ್ಯಾಪ್್ಕಿನ್ ಬಗ್ಗೆ ಚರ್ಚಿಸಿದ ಸುದ್ದಿ ಅದು ಹೇಗೋ ನನ್ನ  ಹೆಂಡತಿಯ ಕಿವಿಗೆ ಬಿತ್ತು. ಆಕೆ ರಣಚಂಡಿಯಂತೆ ಕೂಗಾಡಿದಳು. ನಿನ್ನಂಥವನ ಜೊತೆ ಬದುಕುವುದು  ಸಾಧ್ಯವೇ ಇಲ್ಲ ಎನ್ನುತ್ತಾ ತವರಿಗೆ ಹೋಗಿಯೇಬಿಟ್ಟಳು.

‘ಈಗಾಗಲೇ ಬಳಸಿರುವ ನ್ಯಾಪ್್ಕಿನ್್ಗಳನ್ನು ಒಮ್ಮೆ ನೋಡಿದರೆ ಹೇಗೆ?’ ಎಂಬ  ರಿಸ್ಕೀ ಯೋಚನೆಯೊಂದು ಆಗಲೇ ಬಂತು. ಆದರೆ, ಬಳಸಲಾದ ನ್ಯಾಪ್್ಕಿನ್್ಗಳನ್ನು ಹುಡುಕುವುದಾದರೂ  ಎಲ್ಲಿ?’ ಈ ಪ್ರಶ್ನೆಗೂ ನನ್ನೊಳಗೇ ಉತ್ತರವಿತ್ತು. ಮರುದಿನವೇ ಮೆಡಿಕಲ್ ಸ್ಟೋರ್್ನಿಂದ ಒಂದಿಷ್ಟು  ನ್ಯಾಪ್್ಕಿನ್ ಖರೀದಿಸಿ, ಮೆಡಿಕಲ್ ಕಾಲೇಜಿನ ಬಳಿ ಹೋದೆ. ನನ್ನ ‘ಸಂಶೋಧನೆ’ಯ ಬಗ್ಗೆ ಆಸಕ್ತಿ  ಹೊಂದಿದ್ದ ಯುವತಿಯೊಬ್ಬಳು ಸಿಕ್ಕಳು. ಅವಳಿಗೆ ಕವರ್ ಕೊಟ್ಟು ಹೇಳಿದೆ: ‘ಇದರಲ್ಲಿ  ನ್ಯಾಪ್್ಕಿನ್್ಗಳಿವೆ. ನೀವು ಬಳಸಿ ನಂತರ ಅವುಗಳನ್ನು ಇದೇ ಕವರ್್ಗೆ ಹಾಕಿ ಹಿಂದಿರುಗಿಸಿ. ಹಾಗೆ  ಮಾಡಿದರೆ, ನನ್ನ ಸಂಶೋಧನೆಗೆ ತುಂಬ ಸಹಾಯವಾಗುತ್ತದೆ.’ ಆ ಹುಡುಗಿ ಹಾಗೇ ಮಾಡಿದಳು. ಅವಳೊಂದಿಗೆ  ಮತ್ತೂ ಕೆಲವರು ಕೈಜೋಡಿಸಿದ್ದರು.

ಬಳಕೆಯಾದ ನಂತರ ನ್ಯಾಪ್್ಕಿನ್್ಗಳು ಹೇಗಿರುತ್ತವೆ? ಅವುಗಳಿಗೆ ಯಾವ  ಬಟ್ಟೆಯನ್ನು ‘ಎಕ್ಸ್್ಟ್ರಾ’ ಆಗಿ ಬಳಸಿರುತ್ತಾರೆ ಎಂದು ತಿಳಿಯಬೇಕಿತ್ತು. ಅದೊಂದು ಸಂಜೆ, ಮೂಗಿಗೆ  ಕರ್ಚಿಫ್ ಕಟ್ಟಿಕೊಂಡು, ಗ್ಲೌಸ್ ಧರಿಸಿ, ಬಳಸಲಾಗಿದ್ದ ನ್ಯಾಪ್್ಕಿನ್್ಗಳನ್ನು ಒಂದೊಂದಾಗಿ  ಪರೀಕ್ಷಿಸುತ್ತಿದ್ದೆ. ಆಗಲೇ ಹೊರಗೆ ಹೋಗಿದ್ದ ಅಮ್ಮ ಮನೆಗೆ ಬಂದಳು. ನನ್ನ ಹೊಸ ಅವತಾರ ಕಂಡು  ಆಕೆಯೂ ಹೇಸಿಕೊಂಡಳು. ಮಗನಿಗೆ ಒಂದೊ ಹುಚ್ಚು ಹಿಡಿದಿರಬೇಕು ಅಥವಾ ಅವನು ವಾಮಾಚಾರದ ಹಿಂದೆ  ಬಿದ್ದಿರಬೇಕು ಎಂದು ಆಕೆ ನಿರ್ಧರಿಸಿದಳು. ಎರಡು ದಿನಗಳ ನಂತರ, ಗಂಟುಮೂಟೆ ಕಟ್ಟಿಕೊಂಡು ಆಕೆಯೂ  ಮಗಳ ಮನೆಗೆ ಹೋಗಿಬಿಟ್ಟಳು. ಹೆಂಡತಿ-ಅಮ್ಮ ಇಬ್ಬರ ಕಾಟವೂ ತಪ್ಪಿತು. ನಾನು ತುಂಬ ಖುಷಿಯಿಂದ ನನ್ನ  ಸಂಶೋಧನೆಯಲ್ಲಿ ತೊಡಗಿಕೊಂಡೆ.

ನ್ಯಾಪ್್ಕಿನ್್ನ ಒಂದೊಂದು ಎಳೆಯನ್ನೂ ಬಿಡಿಸಿ ನೋಡಿದ ನಂತರ, ಹತ್ತಿ  ಬಟ್ಟೆಯ ನಡುವೆ ಸ್ಪಂಜ್್ನಂತಹ ಪದರುಗಳನ್ನು ಹೊಂದಿರುವ ಮತ್ತೊಂದು ತೆಳುವಾದ ಬಟ್ಟೆ  ಬಳಕೆಯಾಗಿರುವುದು ನನ್ನ ಗಮನಕ್ಕೆ ಬಂತು. ಅಮೆರಿಕ, ಕೆನಡ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಂಡುಬರುವ  ಪೈನ್ ಮರದತೊಗಟೆಗಳಿಂದ ಈ ತೆಳುವಾದ ಬಟ್ಟೆಯ ಉತ್ಪಾದನೆಯಾಗುತ್ತಿತ್ತು. ಈ ಗುಟ್ಟು ಗೊತ್ತಿಲ್ಲದ  ನಾನು ನ್ಯಾಪ್್ಕಿನ್್ಗೆ ಒಂದರ ಮೇಲೊಂದು ಹತ್ತಿ ಬಟ್ಟೆಯನ್ನೇ ಜೋಡಿಸಿ ಸೋಲು ಕಂಡಿದ್ದೆ.

ಪೈನ್ ಮರದ ತೊಗಟೆಯಿಂದ ದೊರೆವ ಕಚ್ಚಾವಸ್ತು ಹೇಗಿರುತ್ತದೆ ಎಂಬುದನ್ನು  ನಾನೀಗ ಪರೀಕ್ಷಿಸಬೇಕಿತ್ತು. ಅದಕ್ಕಾಗಿ ಅಮೆರಿಕದ ಐದಾರು ಕಂಪನಿಗಳನ್ನು ಸಂಪರ್ಕಿಸಿದೆ. ಆ  ದಿನಗಳಲ್ಲಿ ಇ-ಮೇಲ್್ನ ಭರಾಟೆ ಶುರುವಾಗಿರಲಿಲ್ಲ. ಹಾಗಾಗಿ ಐಎಸ್್ಡಿ ಕಾಲ್ ಮೂಲಕವೇ ಎಲ್ಲವನ್ನೂ  ವಿವರಿಸಬೇಕಿತ್ತು. ಕಡೆಗೂ ಒಂದಷ್ಟು ಸ್ಯಾಂಪಲ್ ಪಡೆಯುವಲ್ಲಿ ಯಶಸ್ವಿಯಾದೆ. ಆದರೆ, ಇಲ್ಲೂ  ಅಮೆರಿಕನ್ ಕಂಪನಿ ‘ಕಡ್ಡಿ ಆಡಿಸಿತ್ತು’. ಅತ್ಯಂತ ಕಳಪೆ ಗುಣಮಟ್ಟದ, ಬಳಕೆಗೆ ಯೋಗ್ಯವಲ್ಲದ  ಸ್ಯಾಂಪಲ್ ಕಳಿಸಿಕೊಟ್ಟಿತ್ತು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಬಾಳೆಹಣ್ಣಿನ ಸಿಪ್ಪೆ,  ಕತ್ತಾಳೆ ಗಿಡದ ಎಲೆ ಹಾಗೂ ಬಿದಿರಿನ ಒಳಭಾಗದಲ್ಲಿರುವ ತಿರುಳನ್ನು ಬಳಸಿ ನ್ಯಾಪ್್ಕಿನ್್ನ ಒಳಗೆ  ಬಳಕೆಯಾಗುವ ತೆಳುವಾದ ಬಟ್ಟೆಯೊಂದನ್ನು ತಯಾರಿಸಬಹುದು ಎಂಬುದನ್ನು ಅರ್ಥಮಾಡಿಕೊಂಡೆ. ನನ್ನ  ಅದೃಷ್ಟಕ್ಕೆ ಅಂಥ ಉತ್ಪನ್ನವನ್ನು ತಯಾರಿಸುವವರು ಕೊಯಮತ್ತೂರಿನಲ್ಲೇ ಸಿಕ್ಕರು.

ಆನಂತರ ನಾನು ಹಿಂತಿರುಗಿ ನೋಡಲಿಲ್ಲ. ವಿದೇಶಿ ಕಂಪನಿಗಳು ತಯಾರಿಸುವ  ನ್ಯಾಪ್್ಕಿನ್್ಗೆ ಸರಿಸಾಟಿ ಅನ್ನಿಸುವಂಥ ನ್ಯಾಪ್್ಕಿನ್್ಗಳನ್ನು ಉತ್ಪಾದಿಸಲು ತೊಡಗಿದೆ. ತುಂಬಾ  ಕಡಿಮೆ ಬೆಲೆ ಇಟ್ಟೆ. ಕೆಲವೇ ದಿನಗಳಲ್ಲಿ ನಮ್ಮ ಉತ್ಪಾದನೆಗೆ ಹೆಚ್ಚಿನ ಆರ್ಡರ್ ಬರತೊಡಗಿತು.  ದಿಢೀರನೆ ಹಣ ಸಂಪಾದಿಸಿ ಕೋಟ್ಯಧಿಪತಿ ಆಗಬೇಕೆಂಬ ಹಂಬಲ ನನಗಿರಲಿಲ್ಲ. ದೇಶದ ಎಲ್ಲ ಹೆಂಗಳೆಯರಿಗೂ  ಕೈಗೆಟುಕುವ ದರದಲ್ಲಿ ನ್ಯಾಪ್್ಕಿನ್ ಒದಗಿಸಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು.

ನನ್ನ ‘ಸಂಶೋಧನೆ’ ಹತ್ತು ಕುಟುಂಬಗಳ ಹೊಟ್ಟೆ ತುಂಬಿಸಲಿ ಎಂಬ ಯೋಚನೆ  ಬಂದಿದ್ದೇ ಆಗ. ತಕ್ಷಣವೇ ತೆಳುವಾದ ಹತ್ತಿಬಟ್ಟೆ ಉತ್ಪಾದಿಸುವ ಪುಟ್ಟ ಯಂತ್ರಗಳನ್ನು ಖರೀದಿಸಿ,  ದೇಶದ ಪ್ರಮುಖ ನಗರಗಳಿಗೆ ಹಂಚಿದೆ. ಈ ಯಂತ್ರಗಳಿಂದ ಬಟ್ಟೆ ನೂಲುವ ಹೆಂಗಸರು, ಆ ಮೂಲಕ  ಸ್ವಾವಲಂಬಿಗಳಾಗಬಹುದಿತ್ತು. ಉದ್ಯಮಿಗಳಾಗಬಹುದಿತ್ತು.

ಕಡೆಗೂ ನನ್ನ ಶ್ರಮ ವ್ಯರ್ಥವಾಗಲಿಲ್ಲ. ಈಗ ನ್ಯಾಪ್್ಕಿನ್ ತಯಾರಿಕೆಯಲ್ಲಿ  ಅಮೆರಿಕದ ಕಂಪನಿಗಳಿಗೆ ನಾವು ಭಾರೀ ಪೈಪೋಟಿ ನೀಡುತ್ತಿದ್ದೇವೆ. ತುಂಬಾ ಕಡಿಮೆ ಬೆಲೆಗೆ  ನ್ಯಾಪ್್ಕಿನ್ ಮಾರುತ್ತಿದ್ದೇವೆ. ಸಾವಿರಾರು ಮಂದಿ ಹೆಂಗಳೆಯರಿಗೆ ನಮ್ಮ ಉದ್ಯಮ ಸಂಪಾದನೆಯ ದಾರಿ  ತೋರಿಸಿದೆ. ನನ್ನ ಯಶೋಗಾಥೆ ಕೇಳಿದ ನಂತರ ತವರಿಗೆ ಹೋಗಿದ್ದ ಹೆಂಡತಿ ಮರಳಿ ಬಂದಿದ್ದಾಳೆ. ನಾನೀಗ  ಖುಷಿಯಾಗಿದ್ದೇನೆ. ಒಂದು ಮಹತ್ವದ ಸಾಧನೆ ಮಾಡಿರುವೆನೆಂಬ ಹೆಮ್ಮೆ ಖಂಡಿತ ನನಗಿದೆ.

PS: Many of the readers are seeking the address of Arunachalam Muruganantham, here is contact details- 577, KNG Pudur Road, Somayampalaym, Coimbatore 641018

Cell: 92831 55128, 94422 24069

ಪ್ರೀತಿಯ ಓದುಗರೇ
ನಮ್ಮ ಅಭ್ಯಂತರವೇನೂ ಇಲ್ಲ!

ಇದನ್ನು ಕೆಸರೆರಚಾಟ ಅನ್ನಿ, ವೈಯಕ್ತಿಕ ಆಕ್ರಮಣ ಅನ್ನಿ, ಮಾಧ್ಯಮದ ದುರ್ಬಳಕೆ ಅನ್ನಿ. ಹಾಗೆ ಅಂದುಕೊಳ್ಳುವ ಮುನ್ನ ಕೆಲ ಮೂಲಭೂತ ಪ್ರಶ್ನೆಗಳ ಬಗ್ಗೆಯೂ ಯೋಚಿಸಿ…

1. ಒಂದು ವೇಳೆ ನಿಮ್ಮ ಅಕ್ಕ, ತಂಗಿಯ ಬಗ್ಗೆ ಪತ್ರಿಕೆಗಳಲ್ಲಿ ಚಾರಿತ್ರ್ಯಹರಣ ಮಾಡಿದರೆ…

2. ನಿಮ್ಮ ತಾಯಿಯನ್ನು ನೀತಿಗೆಟ್ಟವಳು ಎಂದು ಬರೆದರೆ…

3. ನೀವೊಬ್ಬ ಯುವಕ/ಯುವತಿಯಾಗಿದ್ದರೆ ನಿಮ್ಮ ಜೀವನದಲ್ಲೂ ಅಫೇರ್ಗಳು, ಗೆಳೆಯ/ಗೆಳತಿಯರು ಇರುತ್ತಾರೆ. ಅವರ ಜತೆ ನೀವು ವಿಹರಿಸುತ್ತಿರುವುದು ಅಥವಾ ಇಂಟಿಮೇಟ್ ಆಗಿರುವುದು ಟ್ಯಾಬ್ಲಾಯ್ಡ್ಗಳಲ್ಲಿ ವರದಿಯಾಗಿ, ನಿಮ್ಮ ಖಾಸಗಿ ವಿಚಾರ ಸಾರ್ವಜನಿಕರ ಬಾಯಿಗೆ ಆಹಾರವಾದರೆ….

4. ನಿಮ್ಮ ಖಾಸಗಿ ಬದುಕು “ಕಾಸ್”ಭಾತ್ ಆದರೆ…

5. ಹೊಟ್ಟೆ-ಬಟ್ಟೆಗಾಗಿ ನಿಮ್ಮ ತಾಯಿಯೋ, ಅಕ್ಕನೋ ಲೇಡಿಸ್ ಪಿಜಿ ನಡೆಸುತ್ತಿದ್ದರೆ, ಆಕೆ “ಮಾಂಸದ ದಂಧೆ” ನಡೆಸುತ್ತಿದ್ದಾಳೆ ಎಂದು ಹಾಯ್ ಬೆಂಗಳೂರಿನಲ್ಲಿ ಬರೆದರೆ…

6. ಒಬ್ಬ ವೇಶ್ಯೆಗೂ Dignity of Living ಇದೆ. ವೇಶ್ಯೆ ಮೇಲೂ ಲೈಂಗಿಕ ದೌರ್ಜನ್ಯವೆಸಗುವಂತಿಲ್ಲ, ಅತ್ಯಾಚಾರವೆನಿಸುತ್ತದೆ. ಹಾಗಿರುವಾಗ ಒಬ್ಬ ಪತ್ರಕರ್ತ ವೇಶಧಾರಿ ವೇಶ್ಯೆಯರ ಬಗ್ಗೆ ಅಹಸ್ಯಕರವಾಗಿ ಬರೆದು, ಅವರಿಂದಲೂ ಸುಲಿಗೆ ಮಾಡಿದರೆ…

7. ನಿಮ್ಮ ಅಕ್ಕ, ತಂಗಿ ಅಥವಾ ತಾಯಿಯೋ ವಿಧವೆಯಾಗಿರಬಹುದು, ವಿಚ್ಛೇದಿತೆಯೂ ಆಗಿರಬಹುದು. ಹಾಗಂತ ಆಕೆ ರಸ್ತೆಯಲ್ಲಿ ಹೋಗುತ್ತಿರುವವರನ್ನೆಲ್ಲ ಹಾಸಿಗೆ ಕರೆಯುತ್ತಾಳೆ, ರೇಸ್ಕೋಸರ್್ ಬದಿ ನಿಂತು ಕುದುರೆ ಜೂಜಿನಲ್ಲಿ ಗೆದ್ದವರನ್ನೆಲ್ಲ ಮನೆಗೆ ಕರೆದುಕೊಂಡು ಹೋಗಿ ಸುಲಿಗೆ ಮಾಡುತ್ತಾಳೆಂದು ಬರೆದರೆ…

8. ಲೈಂಗಿಕ ಸುಖ ನೀಡುತ್ತಿಲ್ಲವೆಂಬ ಕಾರಣಕ್ಕೆ ಹೆಂಡತಿಗೆ ಗಂಡನಿಂದ, ಗಂಡನಿಂದ ಹೆಂಡತಿಗೆ ನ್ಯಾಯಾಲಯಗಳು ಡೈವೋಸರ್್ ನೀಡುತ್ತಿವೆ. ಒಂದು ವೇಳೆ, ಗಂಡನಾದವನು ಜೀವಾವಧಿ ಶಿಕ್ಷೆಗೆ ಗುರಿಯಾದ ಎಂದಿಟ್ಟುಕೊಳ್ಳಿ, ಹೆಣ್ಣಿನ ಲೈಂಗಿಕ ಹಕ್ಕಿಗೆ ಚ್ಯುತಿಯಾಗುತ್ತದೆ ಎಂಬ ಕಾರಣಕ್ಕೂ ಡೈವೋಸರ್್ ನೀಡಿದ ಘಟನೆ ವಾರದ ಹಿಂದಷ್ಟೇ ನಡೆದಿದೆ. ಒಬ್ಬಳು ವಿಧವೆ ಅಥವಾ ವಿಚ್ಛೇದಿತೆ ತನ್ನ ದೈಹಿಕ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ಅನಿವಾರ್ಯತೆಗೆ ಬೀಳುವುದನ್ನು ಪತ್ರಿಕೆಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಬಳಸಿಕೊಂಡರೆ…

9. ಪ್ರಸ್ತುತ ಸುದ್ದಿಯಲ್ಲಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನುಸಿಂಘ್ವಿ ಸೆಕ್ಸ್ ಟೇಪ್ ಪ್ರಕರಣವನ್ನು ತೆಗೆದುಕೊಳ್ಳಿ. ಅದನ್ನು ಪ್ರಸಾರ ಮಾಡದಂತೆ ದಿಲ್ಲಿ ಹೈಕೋಟರ್್ ಮಾಧ್ಯಮ ವೃಂದಕ್ಕೇ ನಿರ್ಬಂಧ ಹಾಕಿದೆ. ಸಾಮಾಜಿಕ ತಾಣಗಳೂ ಅದನ್ನು ಪ್ರಕಟಿಸುವಂತಿಲ್ಲ. ಅಷ್ಟೇಕೆ, If you’ve shared Abhishek Manu Singhvi’s leaked video with friends online, you could go to jail ಎನ್ನುತ್ತದೆ ಸೈಬರ್ ಲಾ. ಒಬ್ಬ ಸಾರ್ವಜನಿಕ ವ್ಯಕ್ತಿಯ ರಂಗಿನಾಟವನ್ನೇ ಪ್ರಕಟಿಸುವಂತಿಲ್ಲ. ಹಾಗಿರುವಾಗ ಟ್ಯಾಬ್ಲಾಯ್ಡ್ಗಳಲ್ಲಿ ಅಮಾಯಕ ಹೆಣ್ಣುಮಕ್ಕಳ ಮಾನಹರಣವಾದರೆ…

10. ನಿಮ್ಮನ್ನು ಹಡಬೆ ನಾಯಿ, ಕಜ್ಜಿನಾಯಿ, ಷಂಡ, ಸ್ವಕುಚ ಮರ್ದನ, ತಾಯಿ ಗಂಡ, ಹಾದರದ ಪಿಂಡ ಎಂದು ಬರೆದರೆ….

ನಿಮಗೆ ಒಪ್ಪಿತವೇ?

ಇಲ್ಲ ಎಂದಾದರೆ ಕ್ರೈಮ್, ಸೆಕ್ಸ್ ಬಗ್ಗೆಯೇ ಬರೆದು, ಅಮಾಯಕರ ಬಗ್ಗೆ ರಂಗುರಂಗಿನ ಕಥೆಕಟ್ಟಿ, ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡುತ್ತಿರುವ, ಪತ್ರಿಕೋದ್ಯಮವನ್ನು ಸುಲಿಗೆಕೋರರ ತಾಣವಾಗಿಸುತ್ತಿರುವ 250 ಕೋಟಿಯ ಒಡೆಯ ರವಿ ಬೆಳಗೆರೆಯವರನ್ನು ಏನು ಮಾಡಬೇಕು? ಪ್ರತಿವಾರವೂ ಹೆಣ್ಣಿನ ಚಾರಿತ್ರ್ಯವಧೆ ನಡೆಯುವುದನ್ನು ನಿಲ್ಲಿಸಬೇಕೋ ಬೇಡವೋ? ಈತನ ಟ್ಯಾಬ್ಲಾಯ್ಡ್ನ ಮುಖಪುಟ ವರದಿಯಾದ ಒಂದೇ ಒಂದು ಸಕಾರಾತ್ಮಕ ಸುದ್ದಿಯನ್ನು ಹೇಳಿ ನೋಡೋಣ? ವಾರವಾರವೂ ಒಂದಿಲ್ಲೊಂದು ಹೆಣ್ಣುಮಗಳ ಬೆಡ್ರೂಮ್ ಕಥೆ ಬರೆಯುವ ಈತನ ಟ್ಯಾಬ್ಲಾಯ್ಡ್ನಲ್ಲಿ, “ಅಗ್ನಿ-5″ ಕ್ಷಿಪಣಿಯ ಹಿಂದಿರುವ ಟೆಸ್ಸಿ ಥಾಮಸ್ಳಂಥ ಯಶಸ್ವಿ ಹೆಣ್ಣು ಮಗಳು ಯಾವತ್ತಾದರೂ ಮುಖಪುಟದ ಸುದ್ದಿಯಾಗಿದ್ದಾಳಾ? ಬೆಡ್ರೂಮ್ ಕಥೆ ಬರೆಯುವುದೂ ಒಂದು ಪತ್ರಿಕೋದ್ಯಮವಾ? ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಆದರೆ ಆ ತಪ್ಪು, ಕೃತ್ಯ ವೈಯಕ್ತಿಕ ಮಟ್ಟ, ಮಿತಿಯಲ್ಲಿದ್ದರೆ ಯಾರಿಗೂ ಸಮಸ್ಯೆಯಿಲ್ಲ. ಅದರಿಂದ ಸಮಾಜಕ್ಕೆ ಹಾನಿ, ಘಾತುಕವಾಗುವಂತಿದ್ದರೆ ಬರೆಯಲಿ ಯಾರೂ ಬೇಡವೆನ್ನುವುದಿಲ್ಲ. ಆದರೆ ಅನ್ಯರ ಮಾನಹರಾಜು ಮಾಡುವುದನ್ನೇ ದಂಧೆಯಾಗಿಸಿಕೊಂಡರೆ? ಹೆಣ್ಣು ಮಕ್ಕಳ ಬಗ್ಗೆ ಅಸಹ್ಯಕರವಾಗಿ ಬರೆಯುವ ರವಿ ಬೆಳಗೆರೆ, ರೌಡಿಗಳ ಬಗ್ಗೆ, ಸಮಾಜಬಾಹಿರ ಶಕ್ತಿಗಳ ಬಗ್ಗೆ, ಕೊಲೆಗಡುಕರ ಬಗ್ಗೆ, ಹತ್ಯೆಗಳ ಬಗ್ಗೆ ಅತಿಂರಜಕವಾಗಿ ಬರೆಯುವುದೇಕೆ? ಘನಕಾರ್ಯ ಮಾಡಿದವರಂತೆ ವೈಭವೀಕರಿಸುವುದೇಕೆ? ರೌಡಿಗಳು ಸಮಾಜಘಾತುಕ ಶಕ್ತಿಗಳು, ಅವರನ್ನು ಮಟ್ಟಹಾಕಬೇಕು ಎಂದು ಈತ ಒಮ್ಮೆಯಾದರೂ ಬರೆದಿದ್ದನ್ನು ನೋಡಿದಿರಾ?

ಬಹುಶಃ “ಆಕಸ್ಮಿಕ” ಚಿತ್ರವೆನಿಸುತ್ತದೆ. ಹೆಣ್ಣನ್ನು ಸೂಳೆಯೆಂದು ಜರಿದಿದ್ದನ್ನು ಕಂಡು ಸಿಡಿಮಿಡಿಗೊಳ್ಳುವ ಡಾ. ರಾಜ್ ಕುಮಾರ್, “ಏ ಹೆಣ್ಣನ್ನು ಸೂಳೆಯನ್ನಾಗಿ ಮಾಡಿದವನು ಯಾರೋ, ಗಂಡೇ ಅಲ್ಲವೇನೋ…?” ಅಬ್ಬರಿಸುತ್ತಾರೆ. ಈ ರವಿ ಬೆಳಗೆರೆ ಅದೆಷ್ಟು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿಲ್ಲ ಹೇಳಿ? Consensual sexನ ವಯೋಮಿತಿಯನ್ನು ಸಕರ್ಾರ 16 ವರ್ಷಕ್ಕೆ ಇಳಿಸಿದೆ, 16 ವರ್ಷದ ನಂತರ ಅದು ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು, ಅದನ್ನು ತಪ್ಪು-ಸರಿ ಎಂದು ತೀಪರ್ುಕೊಡಲು ನಾವ್ಯಾರೂ ಅಲ್ಲ. ಇವತ್ತು ಕಾಲೇಜು ವಿದ್ಯಾಥರ್ಿಗಳ ನಡುವೆ ಅದೆಷ್ಟು ಅಫೇರ್ಗಳಿಲ್ಲ ಹೇಳಿ? ಆದರೆ ಒಬ್ಬ ಹೆಣ್ಣಿನ ಬಗ್ಗೆ ಪತ್ರಿಕೆಯಲ್ಲಿ ಅವಹೇಳಕಾರಿಯಾಗಿ ಬರೆದು ಅಥವಾ ಬರೆಯುತ್ತೇನೆ ಎಂದು ಬೆದರಿಸಿ ಹಾಸಿಗೆ ಎಳೆದುಕೊಂಡು ಹೋಗುವ ಈ ವಿಕೃತ ಮನುಷ್ಯನನ್ನು ಮಟ್ಟಹಾಕಲು ಹೊರಟಿರುವುದು ತಪ್ಪಾ? ಇವತ್ತು ರವಿ ಬೆಳಗೆರೆಯಿಂದಾಗಿ ಒಂದು ಗಂಡು ಹೆಣ್ಣಿನ ನಡುವೆ ಸಹಜ ಸ್ನೇಹವನ್ನು ಇಟ್ಟುಕೊಳ್ಳುವುದಕ್ಕೂ ಅಂಜಬೇಕಾಗಿ ಬಂದಿದೆ. ನಿಮ್ಮ ಸಹೋದರಿ ಜತೆ ಕೈ ಕೈ ಹಿಡಿದು ಹೋಗುತ್ತಿದ್ದರೂ ಈತ ಸಂಬಂಧ ಕಲ್ಪಿಸಿ ಬರೆದು ಬಿಡುತ್ತಾನೆ. ಕೆಲವೊಮ್ಮೆ ಒಬ್ಬ ಮನುಷ್ಯನ ಸಹಜ ದೌರ್ಬಲ್ಯ ಕೂಡ ರವಿ ಬೆಳಗೆರೆಯ ಧೂರ್ತ ಉದ್ದೇಶಕ್ಕೆ ರಹದಾರಿಯಾಗುತ್ತಿದೆ. ಈ ರೀತಿಯ ಪತ್ರಿಕೋದ್ಯಮ ನಿಲ್ಲಬೇಕೋ ಬೇಡವೋ? “ಕಾಮರಾಜ ಮಾರ್ಗ”ದಲ್ಲಿ ಅನ್ಯರ ಹಾದರದ ಕಥೆ ಬರೆಯುವ ಈತ, ತನ್ನ ಹುಟ್ಟಿನ ಮೂಲದಲ್ಲೇ ಇರುವ ಅಂಥದ್ದೇ ಕಥೆಯ ಬಗ್ಗೆ, ತನ್ನಿಂದ ಜನಿಸಿರುವ ಮಗುವಿನ ಹುಟ್ಟಿನ ಮೂಲದಲ್ಲೂ ಇರುವ ಅದೇ ತೆರನಾದ ಗಾಥೆಯ ಬಗ್ಗೆ ಎಂದಾದರೂ ಬರೆದುಕೊಂಡಿದ್ದಾರಾ?

ಸ್ನೇಹಿತರೇ, ರವಿ ಬೆಳಗೆರೆ ಓದಿದ್ದು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ. ನಾನು ಪತ್ರಿಕೋದ್ಯಮದಲ್ಲೇ ಪದವಿ ಹಾಗೂ ಸ್ನಾತಕೋತ್ತರ ಪದವಿಗಳೆರಡನ್ನೂ ಪೂರೈಸಿದ್ದೇನೆ. ನನ್ನ 5 ವರ್ಷಗಳ ಅಧ್ಯಯನದಲ್ಲಿ ಎಲ್ಲಿಯೂ ರವಿ ಬೆಳಗೆರೆ ಬ್ರಾಂಡ್ ಆಫ್ ಜರ್ನಲಿಸಂ ಅನ್ನು ಓದಲಿಲ್ಲ. ಮಾನಹರಣ ಮಾಡುವ ಅಂಥದ್ದೊಂದು ಜರ್ನಲಿಸಮ್ಮೇ ಇಲ್ಲ, ಅದು ನಮ್ಮ ಸಮಾಜಕ್ಕೂ ಬೇಕಿಲ್ಲ. ನಾವು ಮಟ್ಟಹಾಕಲು ಹೊರಟಿರುವುದೂ ಅಂತಹ ಕೊಳಕು ಪತ್ರಿಕೋದ್ಯಮವನ್ನೇ ಹೊರತು ರವಿ ಬೆಳಗೆರೆ ಎಂಬ ವ್ಯಕ್ತಿಯನ್ನಲ್ಲ. ದುರದೃಷ್ಟವಶಾತ್, ಪಿ. ಲಂಕೇಶರು ಆರಂಭಿಸಿದ “Intellectually stimulating ” ಟ್ಯಾಬ್ಲಾಯ್ಡ್ ಜರ್ನಲಿಸಮ್ಮನ್ನು “Titillating” ಹಾಗೂ “Soft Pornography”ಯಾಗಿಸಿದ ಅಪಕೀತರ್ಿ ಬೆಳಗೆರೆಯಾದ್ದರಿಂದ ನಮ್ಮ ಹೋರಾಟದ ಗುರಿ ಅವರಾಗಿದ್ದಾರೆ. ಇದನ್ನು ಕೆಸರೆರಚಾಟ, ಇದು ನಿಲ್ಲಬೇಕು ಎನ್ನುವುದಾದರೆ ರವಿ ಬೆಳಗೆರೆ ಮಾದರಿಯ ಪತ್ರಿಕೋದ್ಯಮ ನಿಮಗೆ ಒಪ್ಪಿತವೇ? ನಿಮ್ಮ ಮಗಳ, ಅಕ್ಕ, ತಂಗಿಯ ಚಾರಿತ್ರ್ಯವಧೆಯಾಗುವುದನ್ನು ಸಹಿಸಿಕೊಳ್ಳುತ್ತೀರಾ? ಹಾಯ್ ಬೆಂಗಳೂರನ್ನು ನಿಮ್ಮ ಮಗನಿಗೋ, ಮಗಳಿಗೋ ಓದಲು ಕೊಡುತ್ತೀರಾ? ಕಾಮರಾಜ ಮಾರ್ಗ, ಪ್ರೊತಿಮಾ ಬೇಡಿ, ಕಂಪನಿ ಆಫ್ ವಿಮೆನ್ ಪುಸ್ತಕಗಳನ್ನು ನಿಮ್ಮ ಮನೆಯ ವೈಯಕ್ತಿಕ ಸಂಗ್ರಹಾಲಯದಲ್ಲಿಟ್ಟು ನಿಮ್ಮ ಮಗ/ಮಗಳಿಗೆ ಓದುವಂತೆ ಸೂಚಿಸುತ್ತೀರಾ? ಆ ಪೂಜಾ ನಿಮ್ಮ ಮಗಳೋ, ಆ ಆಶಲತಾ ನಿಮ್ಮ ತಾಯಿಯೋ ಎಂದಿಟ್ಟುಕೊಳ್ಳಿ, ಆಕೆಯನ್ನು ಬಗ್ಗೆ ರವಿ ಬೆಳಗೆರೆ ಬರೆದಿದ್ದನ್ನು ಓದಿದ ನಿಮ್ಮ ಬೀದಿಯ ಜನ ಯಾವ ದೃಷ್ಟಿಯಲ್ಲಿ ನೋಡಬಹುದು? ಹಾಯ್ ಬೆಂಗಳೂರ್ನ ಹುಸಿ ಕಥೆ ಓದಿ, ನಿಮ್ಮ ಮಗಳನ್ನು ಗಿರಾಕಿಗಳು ಬಂದು ಕರೆದರೆ ನಿಮ್ಮ ಮನಸ್ಸಿಗೆ ಅದೆಷ್ಟು ಘಾಸಿಯಾಗಬಹುದು? ಒಂದು ವೇಳೆ ನೀವು ಪೂಜಾಳ ತಂದೆ ಉಮಾಶಂಕರರ ಸ್ಥಾನದಲ್ಲಿದ್ದರೆ ಅವರ ನೋವು ಅನುಭವಕ್ಕೆ ಬರುತ್ತಿತ್ತು. ಕೆಲವೊಮ್ಮೆ ವಯಸ್ಸಿನ ಉದ್ವೇಗ, ಅಚಾತುರ್ಯಗಳಿಂದ ತಪ್ಪುಗಳಾಗುತ್ತವೆ, ಹಾಗಂತ ಮಗಳ ಅಚಾತುರ್ಯದ ಬಗ್ಗೆ ರಂಗುರಂಗಾಗಿ ಬೆಳಗೆರೆ ಬರೆದಾಗ, ಅಪ್ಪ-ಅಮ್ಮನಿಗಾಗುವ ಸಾಮಾಜಿಕ ಅವಮಾನ, ಸಂಕಟದ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದೀರಾ? ನಾವು ಬೆಳಗೆರೆಯನ್ನು ಮಟ್ಟಹಾಕಲು ಹೊರಟ ಕೂಡಲೇ ಮಾಧ್ಯಮದ ದುರ್ಬಳಕೆ ಎಂದು ಹುಯಿಲೆಬ್ಬಿಸುತ್ತಿರುವ ಮಹಾನುಭಾವರಿಗೆ, ರವಿ ಬೆಳಗೆರೆ ಕಂಡವರ ಹೆಣ್ಣುಮಕ್ಕಳ ಮಾನಹರಾಜು ಹಾಕಿ ರಾತ್ರಿ ಕುಡಿತಕ್ಕೆ ದುಡ್ಡು ಮಾಡಿಕೊಳ್ಳುತ್ತಿದ್ದಾಗ ಮಾಧ್ಯಮದ ದುರ್ಬಳಕೆಯಾಗುತ್ತಿದೆ ಎಂದನಿಸಿರಲಿಲ್ಲವೆ?

ನಿಮ್ಮ ಅಭಿಪ್ರಾಯಕ್ಕೆ ನಮ್ಮ ಗೌರವವಿದೆ, ಆದರೆ ನಾವಂತೂ ಸುಮ್ಮನಿರುವುದಿಲ್ಲ, ಇನ್ನು ಮುಂದೆ ರವಿ ಬೆಳಗೆರೆಯ ಟ್ಯಾಬ್ಲಾಯ್ಡ್ನಲಿಯಾವ ಹೆಣ್ಣುಮಗಳ ಚಾರಿತ್ರ್ಯಕ್ಕೆ ಕಳಂಕ ಅಂಟಿಸಿದರೂ ನಾವು ಸಹಿಸುವುದಿಲ್ಲ. ಅಷ್ಟೇಕೆ, ರವಿ ಬೆಳಗೆರೆಯವರು ದುಡ್ಡಿನಾಸೆ ಹಾಗೂ ವಿಕೃತ ಹತಾಶೆ ತೀರಿಸಿಕೊಳ್ಳಲು ತನ್ನ ಮಗ ಕರ್ಣನ ಕರ್ಣಕಠೋರ ಕಥೆಗಳು, ಅವರ ಅಳಿಯಂದಿರು ಹಾಗೂ ಪುತ್ರಿಯರ ರಂಗಿನಾಟಗಳ ಬಗ್ಗೆ ಹಾಯ್ ಬೆಂಗಳೂರಿನಲ್ಲಿ ಬರೆದರೂ ನಾವು ಒಪ್ಪುವುದಿಲ್ಲ!

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!
ಮೇಜರ್ ಬಾರ್ಬರಾ!

ಇದು ವಿಶ್ವವಿಖ್ಯಾತ ಲೇಖಕ, ವಿಮರ್ಶಕ, ನೊಬೆಲ್ ಪುರಸ್ಕೃತ ಜಾರ್ಜ್  ಬರ್ನಾರ್ಡ್ ಷಾ ಅವರ ನಾಟಕ. ಈ ಬರ್ನಾರ್ಡ್ ಷಾಗೂ ಬ್ರಿಟನ್್ನ ಲೆಜೆಂಡರಿ ಪ್ರಧಾನಿ ವಿನ್್ಸ್ಟನ್  ಚರ್ಚಿಲ್್ಗೂ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತಿತ್ತು. ಅದು ಬಹಳಷ್ಟು ಸಲ  ಅವಹೇಳನಕಾರಿಯಾಗಿರುತ್ತಿದ್ದರೂ ಆ ನಿಂದನೆಯಲ್ಲೂ ಒಂದು  Class, ಶ್ರೇಷ್ಠತೆ ಇರುತ್ತಿತ್ತು. ಒಮ್ಮೆ ‘ಮೇಜರ್ ಬಾರ್ಬರಾ’ ನಾಟಕ ಏರ್ಪಡಾಯಿತು.  ಸಾಮಾನ್ಯವಾಗಿ ನಾಟಕಗಳು ರಾತ್ರಿ ವೇಳೆ ನಡೆಯುತ್ತವೆ. ವಿನ್್ಸ್ಟನ್ ಚರ್ಚಿಲ್್ಗೆ ಟೆಲಿಗ್ರಾಂ  ಮಾಡಿದ ಬರ್ನಾರ್ಡ್ ಷಾ, “ಫಸ್ಟ್ ನೈಟ್್”ಗೆ (ಮೊದಲ ಪ್ರದರ್ಶನಕ್ಕೆ) ನಿಮಗಾಗಿ 2 ಆಸನಗಳನ್ನು  ಕಾದಿರಿಸಿದ್ದೀನಿ, ಜತೆಗೊಬ್ಬ ಸ್ನೇಹಿತರನ್ನೂ ಕರೆದುಕೊಂಡು ಬನ್ನಿ, ಒಂದು ವೇಳೆ ಇರುವುದೇ  ಆದರೆ… ಎಂಬ ಕುಟುಕು ಸಂದೇಶ ಕಳುಹಿಸಿದರು! ಅದಕ್ಕೆ ಪ್ರತಿಯಾಗಿ ಚರ್ಚಿಲ್ ಕೂಡ ಚಚ್ಚಿದರು-  ‘ಫಸ್ಟ್ ನೈಟ್್’ಗೆ ಬರುವುದಕ್ಕಂತೂ ಸಾಧ್ಯವಿಲ್ಲ, ‘ಸೆಕೆಂಡ್ ನೈಟ್್’ಗೆ ಖಂಡಿತಾ ಬರುತ್ತೇನೆ,  ಒಂದು ವೇಳೆ ಅದನ್ನು ನೀವು ಇಟ್ಟುಕೊಂಡರೆ…

ಇವರಿಬ್ಬರ ತಾಕಲಾಟಗಳು ಇಂದು ದಂತಕತೆಯಾಗಿವೆ. ನಮ್ಮಲ್ಲೂ ಒಬ್ಬರು  ಕರ್ನಾಟಕದ ಬರ್ನಾರ್ಡ್ ಷಾ ಎಂದು ಖ್ಯಾತರಾಗಿದ್ದರು. ಅವರೇ ರಾಯಸಂ ಭೀಮಸೇನ ರಾವ್ ಅಲಿಯಾಸ್ ಬೀChi!

ಅವರದ್ದು ದುರಂತಮಯ ಬಾಲ್ಯ. ಅದನ್ನು ಅವರ ಆತ್ಮಚರಿತ್ರೆ ‘ನನ್ನ  ಭಯಾಗ್ರಫಿ’ಯಲ್ಲಿ ಮಾರ್ಮಿಕವಾಗಿ ವರ್ಣಿಸುತ್ತಾರೆ. ‘ಅರ್ಜುನ ಅದೆಲ್ಲಿಗೋ ಹೋದ, ಚಿತ್ರಾಂಗದೆ  ಸಿಕ್ಕಿದಳು. ಅವಳೊಟ್ಟಿಗೆ ಸುಖ ಕೆಲಕಾಲ-ದೈವಾಂಶವಿರುವವ ವ್ಯವಹಾರ-ಗಾಂಧರ್ವ ವಿವಾಹ ಆದರು. ಸುಖ  ಸಾಕಾಯಿತು, ಅರ್ಜುನ ಅಲ್ಲಿಂದ ಕಾಲ್ತೆಗೆದ. ಗರ್ಭವತಿಯಾಗಿದ್ದ ಚಿತ್ರಾಂಗದಾ ಗಂಡು ಮಗುವಿಗೆ  ಜನ್ಮವಿತ್ತಳು, ಅವನೇ ಬಭ್ರುವಾಹನ. ಅರ್ಜುನನಿಗೆ ಚಿತ್ರಾಂಗದೆಯ ನೆನಪಿಲ್ಲ, ಬಭ್ರುವಾಹನ ಅಪ್ಪ  ಯಾರೆಂದು ಕೇಳಿದರೆ ಏನಾಶ್ಚರ್ಯ? ನಮ್ಮ ಪುರಾಣ ಪುಣ್ಯಕಥೆಗಳ ತುಂಬ ಬರೀ ಇಂತಹ ಕಥೆಗಳೇ. ನನ್ನ  ಕಥೆಯೂ ಈ ಒಂದು ದೃಷ್ಟಿಯಲ್ಲಿ ಪೌರಾಣಿಕವೇ- ಆದರೆ ಆ ಪುರಾಣ ಪುರುಷರಂತೆ ನನ್ನ ತಂದೆ ನನ್ನ ತಾಯಿಗೆ  ಗರ್ಭದಾನ ಉಪಕಾರದ ಹೊರೆಹೊರಿಸಿ ಓಡಿಹೋಗಲಿಲ್ಲ, ಸತ್ತುಹೋದ. ಇದು ದೈವಾಂಶವಿಲ್ಲದವರ ಕಥೆ,  ಆದುದರಿಂದ ವ್ಯಥೆ. ನಾನು ಹುಟ್ಟಿದೊಡನೆ ನನ್ನ ತಂದೆ ಸಾಯಲಿಲ್ಲ. ಆದರೆ ನಾನು ಅವರನ್ನು ಗುರುತಿಸುವ  ಒಳಗಾಗಿಯೇ ಸತ್ತರು. ಒಂದು ರೀತಿಯಿಂದ ಇದು ನನಗೆ ಒಳಿತೇ ಆಯಿತು, ಪಿತೃಶೋಕದ ಅರಿವೂ ನನಗಾಗಲಿಲ್ಲ.  ಅಪ್ಪ ಸತ್ತ ಎಂದು ನಾನಳಲಿಲ್ಲ. ಆಗ ನಾನು ಅತ್ತಿದ್ದರೆ ಹಸಿವಿನಿಂದ ಇರಬೇಕು ಅಷ್ಟೇ’ ಎನ್ನುತ್ತಾರೆ  ಬೀChi

ತಾಯಿಯ ಬಗ್ಗೆಯೂ ಅವರಿಗೆ ಅಷ್ಟಕ್ಕಷ್ಟೇ. ಆಕೆ ಸತ್ತಾಗ ಬೀChiಗೆ  ಆರೇಳು ವರ್ಷ. ಸಾವು ಎಂದರೇನು ಎಂಬುದೇ ತಿಳಿಯದ ವಯಸ್ಸು. ಅವರಿವರು ಅಳುವುದನ್ನು ನೋಡಿ ಅಳುವ ಏಜು.  ಕ್ಷಯ ರೋಗಕ್ಕೆ ತುತ್ತಾಗಿದ್ದ ತಾಯಿಯಿಂದ ಬೀChiಯವರನ್ನು  ದೂರವೇ ಇರಿಸಿದ್ದರು. ಸೋದರತ್ತೆ ರಿಂದತ್ತಿಯ ಜತೆಯೇ ಬೆಳೆದರು. ‘ಬದುಕಲ್ಲಿ ಸಾಕಷ್ಟು ನೋವು,  ಸಂಕಷ್ಟಗಳನ್ನು ಎದುರಿಸಿದ್ದ ನನ್ನ ತಾಯಿಗೆ ಮಕ್ಕಳನ್ನು ಹೊಡೆಯುವುದು ಅಭ್ಯಾಸವಾಗಿತ್ತು. ನನ್ನ  ತಾಯಿಯ ಬದಲು ರಿಂದತ್ತಿ ಸತ್ತಿದ್ದರೆ ಪ್ರಾಯಶಃ ನಾನು ಅಳುತ್ತಿದ್ದೆ’ ಎಂದು ಬರೆದುಕೊಳ್ಳುತ್ತಾರೆ  ಬೀChi ಇಂತಹ ದುರಂತಮಯ ಬಾಲ್ಯವನ್ನು ಕಂಡರೂ  ಒಬ್ಬ ಬರಹಗಾರರಾಗಿ ಬೀChi ಓದುಗರ ಮುಖದಲ್ಲಿ  ನಗು ಅರಳಿಸಲು ಪ್ರಯತ್ನಿಸಿದರು. ಬಹುಶಃ ಅವರಿಗಿದ್ದ ಹಾಸ್ಯಪ್ರಜ್ಞೆ, ವಿಡಂಬನಾಶಕ್ತಿ ಆ ಕಾಲದ ಯಾವ  ಸಾಹಿತಿಗಳಿಗೂ ಇರಲಿಲ್ಲ. ಅವರ ನಂತರ ಬಂದ ಕನ್ನಡ ಸಾಹಿತಿಗಳಲ್ಲೂ ಆ ವಿಷಯದಲ್ಲಿ ಬೀChiಗೆ  ಸರಿಸಮಾನಾಗಿ ನಿಲ್ಲುವ ಸಾಮರ್ಥ್ಯವಿಲ್ಲ.

ಇವತ್ತು ಇಂಟರ್್ನೆಟ್್ನಲ್ಲಿ ಎಲ್ಲವೂ ಲಭ್ಯವಿದೆ. ಪೋಲಿ ಜೋಕಿನಿಂದ  ಹಿಡಿದು ಎಲ್ಲವೂ ಸಿಗುತ್ತದೆ. ಆದರೆ ಆ ಕಾಲಕ್ಕೆ ಇಂಟರ್್ನೆಟ್ ಎಂಬುದು ಕಲ್ಪನೆಗೂ ನಿಲುಕದ  ವಿಷಯವಾಗಿತ್ತು. ಟಿವಿ ಕೂಡ ಶೈಶವಾವಸ್ಥೆಯಲ್ಲಿತ್ತು. ಅಂತಹ ಕಾಲದಲ್ಲಿ ಓದುಗರಿಗೆ ಕುಚುಕು ಕೊಡುವ,  ಕಚಗುಳಿ ಹಾಕುವ ಜೋಕುಗಳನ್ನು ಬರೆದವರುಬೀChi.ಅವರ  ‘ತಿಂಮನ ತಲೆ’ ಬಂದಿದ್ದು 1950ರಲ್ಲಿ. ಅದು ಹಾಗೂ ‘ಬೆಳ್ಳಿ ತಿಂಮ ನೂರೆಂಟು ಹೇಳಿದ’, ‘ತಿಂಮನ  ತಲೆ’, ‘ತಿಮ್ಮಿಕ್ಷನರಿ’ ಪುಸ್ತಕಗಳಲ್ಲಿರುವ ಅದ್ಭುತ ಜೋಕುಗಳನ್ನು ಕನ್ನಡ ಸಾರಸ್ವತ ಲೋಕದಲ್ಲಿ  ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ.

ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್್’ ಪತ್ರಿಕೆಯಲ್ಲಿ ಬರೆಯುತ್ತಿದ್ದ  ಅಂಕಣದಲ್ಲಿ ಹಾಸ್ಯಕ್ಕೆ ಹೊಸ ಭಾಷ್ಯ ಬರೆದವರು ಆರ್ಟ್ ಬುಕ್್ವಾಲ್ಡ್. ಅವರದ್ದು ರಾಜಕೀಯ ವಿಡಂಬನೆ.  ಆದರೆ ಬೀChiುವರು ಎಲ್ಲ ಗಂಭೀರ ವಿಷಯಗಳ  ಬಗ್ಗೆಯೂ ವಿಡಂಬನೆ ಮಾಡುತ್ತಿದ್ದರು.

ಇದು ನಟನೆಯಲ್ಲ

ತಿಂಮ ಕಂಡಿದ್ದ ಜೀವನದ ನಾನಾ ಮುಖಗಳಲ್ಲಿ ನಾಟಕ ಕಂಪನಿಯ ಬಾಳೂ ಒಂದು.  ಹರಿಶ್ಚಂದ್ರನಲ್ಲಿ ನಕ್ಷತ್ರಿಕ, ರಾಮಾಯಣದಲ್ಲಿ ಮಾರೀಚ, ಕೃಷ್ಣಲೀಲೆಯಲ್ಲಿ ಕಂಸ ಮುಂತಾದ  ‘ಪಾರ್ಟು’ಗಳು ತಿಂಮನವು.

ಸಿನೆಮಾ ಯುಗದಲ್ಲಿ ತಿಂಮನ ನಾಟಕವನ್ನು ಯಾರು ನೋಡಬೇಕು? ಸಾಯುವಷ್ಟು  ಜೀವವಿಲ್ಲದ ಕಾರಣ, ಹಾಗೂ-ಹೀಗೂ ಬದುಕಿದ್ದಿತು ನಾಟಕ ಕಂಪನಿ.

ಅದೇನೋ ಕಾಯಿಲೆ ಎಂದು ತಿಂಮ ಬಂದ ಡಾಕ್ಟರರ ಬಳಿ. ಕಾಂಪ್ಲಿಮೆಂಟರಿ  ‘ಪಾಸ್್’ನಿಂದ ನಾಟಕ ನೋಡಿದ್ದ ಡಾಕ್ಟರರು ಮುಲಾಜಿಗೆ ಔಷಧಿ ಕೊಡಲೇಬೇಕಾಯಿತು.

ಮೂರು ಗುಳಿಗೆಗಳನ್ನು ಕೈಗಿಟ್ಟು ಹೇಳಿದರು,

‘ಊಟವಾದ ಮೇಲೆ ಒಂದೊಂದರಂತೆ ಮೂರು ಬಾರಿ ಇವನ್ನು ತೆಗೆದುಕೊ. ಆಮೇಲೆ  ನನಗೆ ಬಂದು ಹೇಳು. ತಿಳಿಯಿತೇನಯ್ಯಾ?’

ತಲೆಯಾಡಿಸಿ ಹೋದ ತಿಂಮ. ಆಮೇಲೆ ಅವನೆಲ್ಲಿಯೋ, ಡಾಕ್ಟರೆಲ್ಲಿಯೋ!

ಎರಡು ತಿಂಗಳ ನಂತರ ರಸ್ತೆಯಲ್ಲಿ ಸಿಕ್ಕ ಡಾಕ್ಟರರು ಕೇಳಿದರು,

‘ಕಾಣಲೇ ಇಲ್ಲವಲ್ಲಯ್ಯ ಮತ್ತೆ? ನನಗೆ ಹೇಳಬೇಡವೇ ನೀನು ಗುಳಿಗೆಯ  ಪರಿಣಾಮವೇನೆಂಬುದ?’

‘ಮೂರು ಗುಳಿಗೆಗಳು ಮುಗಿದ ನಂತರ ಅಲ್ಲವೇನು ಸ್ವಾಮೀ, ನಾನು ನಿಮ್ಮನ್ನು  ಕಾಣಬೇಕಾದುದು?’

ಜೇಬಿನಿಂದ ಹೊರತೆಗೆದು ಎರಡು ಗುಳಿಗೆಗಳನ್ನು ತೋರಿಸಿದ.

‘ಏಕಯ್ಯಾ ತೆಗೆದುಕೊಳ್ಳಲಿಲ್ಲ? ನಾನು ಕೊಟ್ಟೇ ಎರಡು ತಿಂಗಳಾಗುತ್ತ  ಬಂದಿತು?’

‘ಉಂಡ ನಂತರ ತೆಗೆದುಕೋ ಎಂದು ಹೇಳಿದ್ದಿರಿ. ಊಟ…?’

ಕಡೇ ಪರೀಕ್ಷೆ

ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು  ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ-’ಅದೇನು ಅಜ್ಜ  ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?’

ತಿಂಮ ತಮ್ಮನಿಗೆ ಸಮಾಧಾನ ಹೇಳಿದ.

‘ಹೌದು. ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ- ಕಡೇ ಪರೀಕ್ಷೆ  ಬಂತಲ್ಲಾ ಅವರಿಗೆ?!’

ಮಾತು ಕೇಳುವ ಹೆಂಡತಿ

‘ತಿಂಮಾ?’

‘ಏನು ಸ್ವಾಮಿ?’

‘ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ. ನಿನ್ನ ಹೆಂಡತಿ?’

‘ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?’

‘ಹೌದು. ಕೇಳುತ್ತಾಳೇನಯ್ಯಾ ನಿನ್ನ ಮಾತು?’

‘ಏನು ಸ್ವಾಮಿ. ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು  ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಗೊಟ್ಟು ಕೇಳುತ್ತಾಳೆ ಗೊತ್ತೆ?!’

ಅನುಮಾನ ಪರಿಹಾರ

‘ನೀವು ನನಗೆ ಮೋಸ ಮಾಡಬೇಡಿ. ನನ್ನನ್ನು ಬಿಟ್ಟು ಬೇರಾರನ್ನೂ  ಪ್ರೀತಿಸುತ್ತಿಲ್ಲ ತಾನೆ?’

‘ಛೆ! ಉಂಟೆ?’

ತಿಂಮ ತನ್ನ ಪ್ರೇಯಸಿಗೆ ಸಮಾಧಾನ ಹೇಳಿದ.

‘ಹಾಗಿದ್ದರೆ ನನಗೆ ಈಗಲೇ ಹೇಳಿಬಿಡಿ. ನಂಬಿಕೆ ಹುಟ್ಟಿಸಿ ಆಮೇಲೆ ನನ್ನ  ಎದೆ ಒಡೆಯುವಂತೆ ಮಾಡಬೇಡಿ.’

‘ನಿಜವಾಗಿಯೂ ಮತ್ತಾರೂ ಇಲ್ಲ. ನೀನೇಕೆ ಹಾಗೆಲ್ಲ ಮನೋವ್ಯಥೆ  ಮಾಡಿಕೊಳ್ಳುತ್ತೀ?’

‘ಅಹುದು. ನನಗೆ ಸುಳ್ಳು-ಠಕ್ಕು, ಮೋಸ-ವಂಚನೆ ಸರಿಬರುವುದಿಲ್ಲ.  ಅಂತಹುದೇನಾದರೂ ಇದ್ದರೆ ಈಗಲೇ ಹೇಳಿಬಿಡಿ.’

‘ಯಾರನ್ನೂ ನಾನು ಕಣ್ಣೆತ್ತಿ ಕೂಡ ನೋಡುವುದಿಲ್ಲ ಮಹಾರಾಯಿತಿ. ಈ ಹುಚ್ಚು  ನಿನಗೆಲ್ಲಿಂದ ಹಿಡಿಯಿತು?’

‘ಬೇರಾರೂ ಇಲ್ಲವೆಂದು ಆಣೆ ಮಾಡಿ ಹಾಗಾದರೆ.’

ತಿಂಮ ಹತ್ತು ಬಾರಿ ಆಣೆ, ಪ್ರಮಾಣ ಮಾಡಿದ.

ಪ್ರೇಯಸಿಯ ಮನಸ್ಸಿಗೆ ಆಗ ನೆಮ್ಮದಿಯಾಯಿತು.

‘ಆ ಅನುಮಾನವೇಕೆ ಬಂತು ರಾಧಾ?’

‘ರಾಧಾ! ಅದು ಯಾರ ಹೆಸರು? ಯಾರವಳು?’

ಅದು ಮುಖ್ಯ

ಹೊಸದಾಗಿ ಮಂತ್ರಿಯಾದೊಬ್ಬರ ಸಂದರ್ಶನಕ್ಕೆ ಬಂದ, ಪತ್ರಿಕಾ ವರದಿಗಾರನಾದ  ತಿಂಮ.

‘ಏನಾದರೊಂದು ಹೇಳಿಕೆ ಕೊಡಿ, ಮಹಾಸ್ವಾಮೀ!’

‘ಏನಿದೆ ಹೇಳಲು?’

ಪ್ರಾಮಾಣಿಕವಾಗಿ ನುಡಿದು, ಕೈ ತಿರುವಿ ತಾರಮ್ಮಯ್ಯ ಆಡಿಬಿಟ್ಟರು ಆ  ಮಂತ್ರಿಗಳು.

‘ಏನೂ ಇಲ್ಲವೆಂಬುದು ಎಲ್ಲರಿಗೂ ಗೊತ್ತಿದೆ ಸ್ವಾಮೀ. ಪತ್ರಿಕೆಯಲ್ಲಿ  ಹಾಕಲಂತೂ ಬೇಕಲ್ಲ? ಏನೇ ಆದರೂ ಒಂದು ಹೇಳಿ- ಇಬ್ಬರ ಕೆಲಸವೂ ಉಳಿಯಬೇಕು, ನೋಡಿ.’

ಅಳದ ಮಗು

‘ರಾತ್ರಿ ಎಲ್ಲ ನಿದ್ರೆಯೇ ಇಲ್ಲವೋ ತಿಂಮಾ? ಸಾಕು-ಸಾಕಾಗಿ ಹೋಯಿತು.’

‘ಏಕಮ್ಮಾ, ಏನಾದರೂ ಓದುತ್ತಿದ್ದೀರಾ?’

‘ಓದು! ಈ ಮಗುವನ್ನು ಕಟ್ಟಿಕೊಂಡು ಓದಿದಂತೆಯೇ ಇದೆ. ಅತ್ತದ್ದೇ  ಅತ್ತದ್ದು ಇಡೀ ರಾತ್ರಿ ತೆರೆದ ಬಾಯಿ ಮುಚ್ಚಿಲ್ಲ ಇದು.

‘ನಮ್ಮ ಮಗುವೂ ಹಾಗೆಯೇ ಅಳುತ್ತಿತ್ತು ಆಗೆಲ್ಲವೂ.’

‘ಈಗ ಅಳುವುದಿಲ್ಲವೇ? ಏನು ಮಾಡಿದಿ?’

‘ಮುಚ್ಚಿದ ಬಾಯಿ ತೆರೆದಿಲ್ಲ ನೋಡಿ, ಅವನು.’

ಜೇಬು-ತಲೆ

ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ ಇಲ್ಲಿ  ನೋಡುತ್ತ ಊರೆಲ್ಲ ಸುತ್ತಿದ, ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು.

ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು  ಹಿಡಿದರು,

‘ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು’- ಎಂದರು.

‘ಕೊಡುವುದಿಲ್ಲ’

ತಕರಾರು ಹೂಡಿದ ತಿಂಮ.

‘ನಿನ್ನ ತಲೆ ತೆಗೆಯುತ್ತೇವೆ.’

‘ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ  ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ.’

ಜೋಕುಗಳಷ್ಟೇ ಅಲ್ಲ, ಅದ್ಭುತ ‘One  Liners’ ಗಳನ್ನೂ ಬರೆಯುತ್ತಿದ್ದರು.

- ವಿದ್ಯೆ ಎನ್ನುವುದು ಮೋಟಾರ್ ಕಾರ್ ಇದ್ದಂತೆ. ಎಲ್ಲಿಯಾದರೂ ಕೆಲಸ  ಮಾಡಲು ಹೋಗುವಾಗ ಅದನ್ನು ಹೊರಗಡೆಯೇ ಬಿಟ್ಟು ಒಳಗಡೆ ಹೋಗಬೇಕು.

- ಪ್ರತಿಯೊಬ್ಬನಿಗೂ ಗುಟ್ಟಾಗಿಡಲಾರದಂತಹದೊಂದು ಅವನ ಜೀವನದಲ್ಲಿ ಇದ್ದೇ  ಇದೆ- ತನ್ನ ಬಗ್ಗೆ ತನಗೇ ಇರುವ ತಪ್ಪು ಅಭಿಪ್ರಾಯ?

- ಆಸ್ಪದವಿಲ್ಲದಾಗ ಎಲ್ಲ ಕಳ್ಳರೂ ಪ್ರಾಮಾಣಿಕನ ಅಪ್ಪಂದಿರೇ!

- ಅನ್ನ ಕೊಡುವ ಪೈರಿನೊಡನೆ ಕಸ, ಕಡ್ಡಿ ಹುಟ್ಟುತ್ತವೆ, ಏನೂ ಕೊಡದ  ಕೀರ್ತಿಯೊಡನೆ ಚಿಕ್ಕ, ಪುಟ್ಟ ಶತ್ರುಗಳೂ ಹುಟ್ಟುತ್ತಾರೆ.

- ಯಾರ ಬಗ್ಗೆಯೇ ಆಗಲಿ, ಅವರ ಹಿಂದೆ ಆಡುವುದು ಅಷ್ಟು ಒಳ್ಳೆಯದಲ್ಲ.  ಕೆಲವರ ಬಗ್ಗೆಯಂತೂ ಇದಿರಿನಲ್ಲಿ ಆಡುವುದು ಎಷ್ಟೂ ಒಳ್ಳೆಯದಲ್ಲ.

- ನಾಗರಿಕತೆ ಒಂದನ್ನಂತೂ ತಪ್ಪದೆ ಕಲಿಸುತ್ತದೆ- ನಾಗರಿಕತೆಯನ್ನು  ಸಹಿಸುವುದು!

- ಇಂದು ಒಂದು ಶಾಲೆಯನ್ನು ಸ್ಥಾಪಿಸು. ಮುಂದೆ ಎಂದಾದರೂ ಎರಡು ಜೈಲು  ತಾವಾಗಿಯೇ ಮುಚ್ಚುತ್ತವೆ.

- ಆಳವು ಕಡಿಮೆಯಾದಂತೆಲ್ಲ ಉದ್ದದಲ್ಲಿ ಜಾಸ್ತಿಯಾಗುವ  ರಬ್ಬರ್್ನಂತಹದಕ್ಕೆ ಭಾಷಣ ಎಂದು ಹೆಸರು.

- ಮಾನವ ಜೀವನವು ಒಂದು ಟ್ಯಾಕ್ಸಿ, ಆಯುಸ್ಸು ಅದರ ಮೀಟರ್. ಓಡುತ್ತಿರಲಿ  ನಿಂತಿರಲಿ, ಅಯುಸ್ಸು ಮತ್ತು ಮೀಟರ್ ಓಡುತ್ತಲೇ ಇರುತ್ತವೆ.

- ‘ಪ್ರೈವೇಟ್ ಟ್ಯೂಷನ್್’- ವಿದ್ಯಾರ್ಥಿಗೆ ಔಷಧಿಯಾಗಿರಬೇಕು. ಔಷಧಿಯೇ  ಅನ್ನವಾದರೆ ಗತಿ?

ಇವತ್ತು ಬೀChiಯುವರ  ಚಟಾಕಿಗಳನ್ನೇ ಹಾರಿಸಿ ಪ್ರಾಣೇಶ ಆಚಾರ್ ‘ಗಂಗಾವತಿ ಬೀChi‘  ಎಂದೇ ಖ್ಯಾತರಾಗಿದ್ದಾರೆ. ಸುಧಾ ಬರಗೂರು, ರಿಚರ್ಡ್ ಲೂಯಿಸ್, ಕೃಷ್ಣೇಗೌಡ ಮುಂತಾದವರೂ ಇಂದು  ನಮ್ಮನ್ನೆಲ್ಲ ನಗಿಸುತ್ತಿರುತ್ತಾರೆ, ನಗೆಹಬ್ಬಗಳು ನಡೆಯುತ್ತಿರುತ್ತವೆ. ಆದರೆ ನಮ್ಮನ್ನೆಲ್ಲ  ಬಾಯ್ತುಂಬ ನಗಿಸಿದ ಮೊದಲ ವ್ಯಕ್ತಿ ಬೀChi.  ಅವರ ಮೊಮ್ಮಗ ರಾಯಸಂ ಉಲ್ಲಾಸ್ ಕಚೇರಿಗೆ ಬಂದಿದ್ದರು. ನಾಡಿದ್ದು 23ರಂದು ಬೀChiಯುವರ  ಜನ್ಮದಿನವಿದ್ದು, “ಬೀChi ಕನಸು-ನನಸು’ ಎಂಬ  ಪುಸ್ತಕವನ್ನು ಬೆಂಗಳೂರಿನ ಸಹಕಾರನಗರದ ಬೀChi ವಿದ್ಯಾಕೇಂದ್ರದಲ್ಲಿ ಸಂಜೆ 5.30ಕ್ಕೆ ಕಾನೂನು ಸಚಿವ ಸುರೇಶ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.  1913, ಏಪ್ರಿಲ್ 23ರಂದು ಜನಿಸಿದ ಬೀChi 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂದೂ ಸಾಯದ ತಮ್ಮ ನಗೆ ಭಂಡಾರದ ನೆನಪುಗಳ ಮೂಲಕ. ಆ  ಹಾಸ್ಯಬ್ರಹ್ಮನನ್ನು ನೆನಪು ಮಾಡಿಕೊಳ್ಳದೆ ಇರಲಾದೀತೆ?

Am challenging you again, ಚಚರ್ೆಗೆ ಬನ್ನಿ ಬೆಳಗೆರೆ
ರವಿ ಬೆಳಗೆರೆಯವರೇ,

ಬಂಗಾರಪ್ಪನವರಿಗೆ “ಬಂ”, ಗುಂಡೂರಪ್ಪನವರಿಗೆ “ಗುಮ್”, ತೆಳ್ಳಗಿನ ನಟಿ ವಿಮಲಾ ನಾಯ್ಡುಗೆ “ಹಂಚಿಕಡ್ಡಿ”, ಆರೆಸ್ಸೆಸ್ಸಿಗರಿಗೆ “ಚೆಡ್ಡಿ”… ಹೀಗೆ ತೀರಾ ಕೀಳು ಅರ್ಥ ಬರುವ, ಹೆಸರನ್ನು ತಿರುಚುವ ಪರಂಪರೆಯನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಪಿ. ಲಂಕೇಶ್. ಆ ಕೆಟ್ಟ ಪರಂಪರೆಯನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ಚಾರಿತ್ರ್ಯಕ್ಕೇ ಕಳಂಕ ಅಂಟಿಸುವಂಥ ಅಡ್ಡ ಹೆಸರುಗಳನ್ನು ಇಡಲು ಆರಂಭಿಸಿದ ಅಪಕೀತರ್ಿ ನಿಮಗೆ ಸಲ್ಲಬೇಕು. ನೀವು ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಂಸದೆ ತೇಜಸ್ವಿನಿಯವರನ್ನು ಯಾವ ಹೆಸರಿನಿಂದ ಸಂಭೋದಿಸುತ್ತೀರಿ ಎಂಬುದನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಇನ್ನು ಸ್ವಕುಚ ಮರ್ದನ, ಪಲ್ಲಂಗ, ಕಜ್ಜಿನಾಯಿ, ಶೋಭಕ್ಕನ ಲಂಗದ ಲಾಡಿ, ಹಾದರದ ಪಿಂಡ, ಹಡಬೆ ನಾಯಿ ಈ ರೀತಿಯ ವರ್ಣನೆಗಳಿಂದಲೇ ಕೂಡಿರುವ ನಿಮ್ಮ ಟ್ಲಾಬ್ಲಾಯ್ಡ್ ಭಾಷೆಯನ್ನು ಓದಿ ಬೆಳೆದು ಬಂದ ವರ್ಗದ ಬಾಯಿಂದಲೂ ಇಂತಹ ಸಂಸ್ಕಾರವಿಲ್ಲದ ನುಡಿಗಳೇ ಇಂದು ಹೊರಬರುತ್ತಿವೆ. ನನ್ನ ಹೆಸರನ್ನೂ ಸಾಕಷ್ಟು ಬಾರಿ ಕೀಳಾಗಿ ತಿರುಚಿ ಬರೆದಿದ್ದೀರಿ. ನನ್ನ ತಂದೆ ಮೈಸೂರಿನ ಫಿಲೋಮಿನಾಸ್ನಲ್ಲಿ ಬಿಎಸ್ಸಿ ಓದುತ್ತಿರುವಾಗಲೇ ಏರ್ಫೋಸರ್್ಗೆ ಹೋದವರು, ಹಾಸನ ಜಿಲ್ಲೆಯಲ್ಲಿ ಜನಸಂಘದಿಂದ ಆಯ್ಕೆಯಾಗಿ ಪಂಚಾಯಿತಿ ಚೇರಮನ್ ಆದ ಮೊದಲ ಹಾಗೂ ಅತ್ಯಂತ ಕಿರಿಯ ವ್ಯಕ್ತಿ, ರಾಣಾ ಪ್ರತಾಪ್, ಭಗತ್ ಸಿಂಗ್, ಚಂದ್ರಶೇಖರ ಆಝಾದರಿಂದ ಪ್ರಭಾವಿತರಾಗಿ ನಮಗೆಲ್ಲ ಆ ಮಹಾನ್ ಕಲಿಗಳ ಹೆಸರನ್ನೇ ಇಟ್ಟರು. ನನ್ನ ಮೇಲೆ ನಿಮಗೆ ಮತ್ಸರ, ಈಷರ್ೆ ಇದ್ದರೆ ತಾಕರ್ಿಕವಾಗಿ ನನ್ನನ್ನು ಸೋಲಿಸುವ ಬದಲು ನನ್ನ ಹೆಸರಿನ ಮೇಲೆ ನಿಮ್ಮ ಪರಾಕ್ರಮ ಪದಶರ್ಿಸುತ್ತಾ ಬಂದಿದ್ದೀರಿ. ನಿಮ್ಮ ಹೆಸರನ್ನೂ ತಿರುಚಿ ಬರೆಯುವಷ್ಟು ಬುದ್ಧಿವಂತಿಕೆ, ಅದಕ್ಕೆ ಬೇಕಾದ ಅಂಕಣ ನನ್ನ ಬಳಿಯೂ ಇದೆ. ನನ್ನ ಸಂಪಾದಕರಾದ ವಿಶ್ವೇಶ್ವರ ಭಟ್ಟರು, ಸರಿಯಾದ ಅಪ್ಪ ಇರುವವರು ಯಾರೂ ಈ ಕೆಲಸ ಮಾಡುವುದಿಲ್ಲ, ಬಿಟ್ಟುಬಿಡು ಎಂದು ಅವರು ನನ್ನನ್ನು ಸಮಾಧಾನಪಡಿಸಿದ್ದೂ ಇದೆ. ಅಷ್ಟೇಕೆ, ನಾನು ಕೆಟ್ಟ ಪದಗಳನ್ನು ಬಳಕೆ ಮಾಡಿದರೆ ನನ್ನ ಬರವಣಿಗೆಯ ಅಭಿಮಾನಿಗಳೇ ನನ್ನನ್ನು ಮೆಚ್ಚುವುದಿಲ್ಲ. ಆದರೆ ನಿಮ್ಮ ಅಭಿಮಾನಿಗಳಿಗೆ ನಿಮ್ಮ ಕೆಟ್ಟ ಮಾತುಗಳೇ ಹೆಚ್ಚು ರುಚಿಸುತ್ತವೆ, ಅವರ ನಾಲಗೆ ಮೇಲೂ ಅವುಗಳೇ ಹರಿದಾಡುತ್ತವೆ. ಕನ್ನಡ ಸಾರಸ್ವತ ಲೋಕಕ್ಕೆ ಅತಿಹೆಚ್ಚು ಹೊಲಸು ಪದಗಳನ್ನು ಸೇರ್ಪಡೆ ಮಾಡಿದ ಕೀತರ್ಿ ನಿಮಗೇ ಸಲ್ಲುತ್ತದೆ. ನಿಮ್ಮ ಬರವಣಿಗೆಯನ್ನು ಮೆಚ್ಚುವ, ನಿಮ್ಮ ಪುಸ್ತಕಗಳಿಗೆ ಮುನ್ನುಡಿ ಬರೆದುಕೊಟ್ಟ ಒಬ್ಬ ಗೌರವಾನ್ವಿತ ಸಾಹಿತಿಯನ್ನು ತೋರಿ ನೋಡೋಣ? ರವಿ ಬೆಳಗೆರೆಯವರೇ, ಒಬ್ಬ ವ್ಯಕ್ತಿ ತನ್ನ ಮಟ್ಟವನ್ನು ಎತ್ತರಿಸಿಕೊಳ್ಳಲಷ್ಟೇ ಶ್ರಮಪಡಬೇಕು, ನಿಮ್ಮ ಮಟ್ಟಕ್ಕೆ ಇಳಿಯಲು ಎಂಕಣ್ಣ, ಸೀನಣ್ಣನಿಗೂ ಆಗುತ್ತದೆ ನೆನಪಿಡಿ.

ಇನ್ನು ವಿಷಯಕ್ಕೆ ಬರೋಣ. ಬಹಿರಂಗ ಚಚರ್ೆಗೆ ಬನ್ನಿ ಎಂದು ನಿಮಗೆ ನಾನು ಪಂಥಾಹ್ವಾನ ಕೊಟ್ಟು, ಸವಾಲು ಹಾಕಿ ಬರೋಬ್ಬರಿ 10 ದಿನಗಳಾದವು!

ಇದುವರೆಗೂ ನಿಮ್ಮಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲವೇಕೆ? ಸತ್ಯಸಂಧ, ಮಹಾಮೇಧಾವಿಯಾದ ನಿಮಗ್ಯಾವ ಅಳುಕು? ಬನ್ನಿ ಸುವರ್ಣ ಚಾನೆಲ್ನಲ್ಲೇ ನೇರಪ್ರಸಾರದಲ್ಲಿ ಚಚರ್ಿಸೋಣ. ನಿಮ್ಮ ಭಾಷೆಯಲ್ಲೇ ಕರೆಯುವುದಾದರೆ, ತಾಕತ್ತಿದ್ದರೆ ಚಚರ್ೆಗೆ ಬನ್ನಿ, ನಿಮ್ಮನ್ನು ತಾಕರ್ಿಕವಾಗಿ, ಬೌದ್ಧಿಕವಾಗಿ ಮಟಾಷ್ ಮಾಡದಿದ್ದರೆ ನಾನು ಪತ್ರಿಕೋದ್ಯಮವನ್ನೇ ಬಿಟ್ಟು ಹೋಗುತ್ತೇನೆ. ನೀವು ಅದೆಂಥ ಅವಕಾಶವಾದಿ ಮಾರಾಯ್ರೇ? ನಾನು “ಮೈನಿಂಗ್ ಮಾಫಿಯಾ” ಪುಸ್ತಕ ಬರೆದು ಯಾವ ಜನಾರ್ದನ ರೆಡ್ಡಿಯ ನಿಜರೂಪವನ್ನು ಬಯಲು ಮಾಡಿದ್ದೇನೋ ಅದೇ ರೆಡ್ಡಿಯ ಬಗ್ಗೆ ನನಗೆ ಮರುಕ ಹುಟ್ಟಿದೆ. ಕುಮಾರಸ್ವಾಮಿ ವಿರುದ್ಧ ಫಿಲ್ಮ್ ಮಾಡುತ್ತೇನೆಂದು 8 ಕೋಟಿ ಪಡೆದು, ಪತ್ರಿಕೆಗಳಲ್ಲಿ ಸಕಾರಾತ್ಮಕವಾಗಿ ಬರೆಸುತ್ತೇನೆಂದು ಎಲ್ಲರ ಹೆಸರಲ್ಲೂ ಚಂದಾ ಎತ್ತಿ, ರೆಡ್ಡಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತೀರಲ್ಲಾ ನಿಮ್ಮ ಕೃತಘ್ನತೆಗೆ ಏನನ್ನಬೇಕು? ನಿಮ್ಮ ಮಗಳಿಗೆ ಜನಾರ್ದನ ರೆಡ್ಡಿ ಮದುವೆಯ ಉಡುಗೊರೆಯಾಗಿ ಕೊಟ್ಟ 40 ಲಕ್ಷದ ನೆಕ್ಲೆಸ್ ಅಷ್ಟು ಬೇಗ ನಿಮಗೆ ಮರೆತುಹೋಯಿತೆ? ನಿಮ್ಮ ಟ್ಯಾಬ್ಲಾಯ್ಡ್ ಎಂಬ ಟಾಯ್ಲೆಟ್ನಲ್ಲಿ ಹೆಣ್ಣುಮಕ್ಕಳ ಚಾರಿತ್ರ್ಯಹರಣ ಮಾಡಿ 250 ಕೋಟಿ ತಿಂದಿರಲ್ಲಾ, ಆ ಪಾಪ ನಿಮಗೆ ತಟ್ಟುವ ಕಾಲ ಬಂದಿದೆ, ಬನ್ನಿ ಚಚರ್ೆಗೆ. ನಿನ್ನೆ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು ನಮ್ಮ ಎಕ್ಸ್ಪ್ರೆಸ್ ಕ್ಯಾಂಟೀನ್ಗೆ ಬಂದಿದ್ದರು. ಸುವರ್ಣ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಆ ರವಿ ಬೆಳಗೆರೆ ಪತ್ರಿಕೋದ್ಯಮದ “Extortionist” ಅಂದ್ರು. ಕತ್ತರಿಗುಪ್ಪೆ ಬಿಗ್ಬಝಾರ್ ಬಳಿ ಇರುವ ಅಯ್ಯಪ್ಪ ದೇವಾಲಯದ ಸ್ವಾಮೀಜಿಯಿಂದ 10 ಸಾವಿರ ಸುಲಿಗೆ ಮಾಡಲು ನೀವು 15 ವರ್ಷಗಳ ಹಿಂದೆ ಬಂದಿದ್ದು, ಅವರು ಕೊಡದೇ ಹೋದಾಗ “ಮೇಕಪ್ ಸ್ವಾಮಿ” ಎಂದು ಅವಹೇಳನಕಾರಿಯಾಗಿ ಬರೆದಿದ್ದನ್ನು ನೆನಪು ಮಾಡಿಕೊಂಡರು. ಮಾನನಷ್ಟ ಮೊಕದ್ದಮೆ ಹಾಕಿರುವ ಚಿತ್ರದುರ್ಗದ ಸುನೀತಾ ಮಲ್ಲಿಕಾಜರ್ುನಪ್ಪ, ನೀವು ದುರ್ಗದ ಕೋಟರ್ಿಗೆ ಬಂದಾಗ ಚಪ್ಪಲಿ ಸೇವೆ ಮಾಡಲು ತಯಾರಾಗಿದ್ದಾರೆ. ಸುವರ್ಣ ಚಾನೆಲ್ನಲ್ಲಿ ನಡೆದ ನಿಮ್ಮ ಬಣ್ಣ ಬಯಲು ಕಾರ್ಯಕ್ರಮದ ಬಗ್ಗೆ ಇಡೀ ಕನ್ನಡ ಚಿತ್ರೋದ್ಯಮ ಮೆಚ್ಚುಗೆ ವ್ಯಕ್ತಪಡಿಸಿದೆ, ಮುಂದಿನ ಹಂತ ಚಚರ್ೆಗೆ ಬರಲು ನಾ ಮುಂದು ತಾ ಮುಂದು ಎನ್ನುತ್ತಿದೆ. ನಿಮ್ಮಿಂದ ಸಂತ್ರಸ್ತರಾಗಿರುವವರು ನಿಮ್ಮನ್ನು ಹೊಸಕಿ ಹಾಕಲು ಒಂದು ಅವಕಾಶ ಕೇಳುತ್ತಿದ್ದಾರೆ.

ಚಚರ್ೆಗೆ ಬನ್ರೀ…

“ನಿಮಗೂ ಇಬ್ಬರು ಹೆಂಡತಿಯರಿದ್ದಾರಲ್ಲಾ, ಅದನ್ನೇಕೆ ಮುಚ್ಚಿಟ್ಟಿದ್ದೀರಿ?” ಎಂದು ಟಿವಿ9ನ ಲಕ್ಷ್ಮಣ್ ಹೂಗಾರ್ ಪ್ರಶ್ನಿದರೆ, “ಯಾರೂ ಕೇಳಲಿಲ್ಲ, ಅದಕ್ಕೇ ಹೇಳಲಿಲ್ಲ” ಎಂದು ಲಜ್ಜೆಯಿಲ್ಲದೆ ಹೇಳುತ್ತೀರಲ್ಲಾ, ಬೇರೆಯವರು ಮಾತ್ರ ತಾವಾಗಿಯೇ ಬಂದು ನಿಮಗೆ ಲೆಕ್ಕ ಕೊಡಬೇಕೇನು? ನೀವು ಇಬ್ಬರನ್ನು ಮದುವೆಯಾದರೆ ಬೇರೆಯವರಿಗೇನು ತ್ರಾಸ ಎನ್ನುತ್ತೀರಲ್ಲಾ, ಬೇರೆಯವರು ಇಬ್ಬರನ್ನು ಕಟ್ಟಿಕೊಂಡರೆ ನಿಮಗೇನು ತ್ರಾಸ? ನೊಂದ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಲು ಅದೇನೋ “ಸಮಾಧಾನ” ಅಂಥ ಕಾಲಂ ಬರೆಯುತ್ತೀರಿ, ನೀವು ಕದ್ದುಮುಚ್ಚಿ ಇನ್ನೊಂದು ಮದುವೆಯಾದಿರಲ್ಲಾ ನಿಮ್ಮ ಮೊದಲ ಹೆಂಡತಿ ಲಲಿತಾ ಅವರಿಗೆ ಯಾರು “ಸಮಾಧಾನ” ಹೇಳಬೇಕು? ಸೃಷ್ಟಿಯ ನಿಯಮದಂತೆ ಎಲ್ಲರಿಗೂ ಒಬ್ಬ ತಂದೆ ಇರಬೇಕಲ್ಲವೆ, ನಿಮ್ಮ ತಂದೆ ಯಾರು? ತಂದೆ ಯಾರೆಂದು ಗೊತ್ತಿಲ್ಲದವರಿಗೆ ಏನೆಂದು ಕರೆಯುತ್ತಾರೆ ಗೊತ್ತಲ್ಲವೆ? ಅನ್ಯರ ಮಕ್ಕಳನ್ನು ಹಾದರದ ಪಿಂಡ ಎಂದು ಕರೆಯುವ ನಿಮ್ಮದು ….? ರೇಣುಕಾಚಾರ್ಯರನ್ನು ಸಂಪುಟಕ್ಕೆ ತೆಗೆದುಕೊಂಡಾಗ, “ಅವನಿಗೆ ಏಕೆ ಅಬಕಾರಿ ಖಾತೆ ಕೊಡಲಾಗಿದೆ ಎಂದರೆ ವ್ಯಭಿಚಾರ ಖಾತೆ ಇಲ್ಲ” ಎಂದು ಭಾರೀ ಭಾಷಣ ಬಿಗಿದಿದ್ದಿರಲ್ಲಾ, ಆ ವ್ಯಭಿಚಾರದ ಖಾತೆಗೆ ಅಕ್ಷರ ಹಾದರ ಮಾಡುತ್ತಿರುವ ನಿಮಗಿಂತ ಸೂಕ್ತ ವ್ಯಕ್ತಿ ಯಾರಿದ್ದಾರೆ?

ನಿಮಗೆ ನಾನು ವೈಯಕ್ತಿಕ ಬಾಕಿ ತೀರಿಸುವುದಕ್ಕಾಗಿ ಚಚರ್ೆಗೆ ಕರೆಯುತ್ತಿಲ್ಲ, ಕೋಟರ್ಿನಲ್ಲಿ ಕೇಸು ಹಾಕಿದ್ದೇನೆ, ಅಲ್ಲಿ ಹೋರಾಡಿ ನ್ಯಾಯ ಪಡೆಯುತ್ತೇನೆ. ಆ ಕಾರಣಕ್ಕೇ ಕಳೆದ 14 ತಿಂಗಳಲ್ಲಿ ನಾನೆಂದೂ ನನ್ನ ಅಂಕಣವನ್ನು ನಿಮ್ಮ ಬಾಕಿ ತೀರಿಸಲು ದುರುಪಯೋಗಪಡಿಸಿಕೊಂಡಿಲ್ಲ. ಇದು ನ್ಯಾಯ-ಅನ್ಯಾಯದ ಪ್ರಶ್ನೆ. ಸತ್ಯ ಸಾಬೀತಾಗಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ಎಲ್ಲರ ಪರವಾಗಿ, ಧ್ವನಿಯಾಗಿ ಹೋರಾಡುವುದಕ್ಕಷ್ಟೇ ಈ ಸವಾಲು ಸೀಮಿತ. ನಿಮ್ಮಂಥವರಿಂದಾಗಿ ಇಂದು ಪತ್ರಿಕೋದ್ಯಮ ಸುಲಿಗೆ, ಚಾರಿತ್ರ್ಯಹರಣದ ದಂಧೆಯಾಗಿದೆಯಲ್ಲಾ ಅದು ತಪ್ಪಬೇಕೆಂಬುದು ನಮ್ಮ ಉದ್ದೇಶ. ಇನ್ನು ಮುಂದೆ ಯಾವ ಹೆಣ್ಣುಮಗಳ ಚಾರಿತ್ರ್ಯಹರಣವೂ ನಡೆಯಕೂಡದು, ಯಾವ ಹೆಣ್ಣು ಮಗಳ ಶೀಲದ ಬಗ್ಗೆಯೂ ನೀವು ಅನುಮಾನ ಮೂಡಿಸಿ ಆಕೆ ಸಮಾಜದಲ್ಲಿ ತಲೆತಗ್ಗಿಸುವಂತಾಗಬಾರದು. ನೀವು ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ “ಹಿಸ್ಟಿರಿಕ್” ಮೇಷ್ಟ್ರಾಗಿದ್ದಾಗ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದ ವಿದ್ಯಾಥರ್ಿನಿಯನ್ನೇ ಹಾಸಿಗೆಗೆಳೆದು, ಎಬಿವಿಪಿಯಿಂದ ಗೂಸಾ ತಿಂದು ಬೆಂಗಳೂರಿಗೆ ಓಡಿ ಬಂದು ಪತ್ರಕರ್ತನ ವೇಶ ತಳೆದು ನಮ್ಮ ಕ್ಷೇತ್ರವನ್ನು ಹಾಳುಗೆಡುವುತ್ತಿದ್ದೀರಲ್ಲಾ ಅದು ನಿಲ್ಲಬೇಕು. ಬನ್ನಿ ಎಲ್ಲ ವಿಷಯಗಳ ಬಗ್ಗೆಯೂ ಚಚರ್ೆ ಮಾಡೋಣ. ವೇದಿಕೆಯನ್ನು ನಾವೇ ಕೊಡುತ್ತೇವೆ. ಇಲ್ಲ ನೀವು ಕರೆದ ಚಾನೆಲ್ಗೆ ನಾನೇ ಬರುತ್ತೇನೆ. ಇಲ್ಲ ನಿಮ್ಮ ಅಭಿಮಾನಿಗಳೇ ಒಂದು ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಲಿ, ಅಲ್ಲಿಗೇ ಬರುತ್ತೇನೆ. ಎಲ್ಲರ ಸಮ್ಮುಖದಲ್ಲೇ ಚಚರ್ೆ ನಡೆದು ಬಿಡಲಿ.

ಮತ್ತೆ ನಿಮ್ಮ ಭಾಷೆಯಲ್ಲೇ ಕರೆಯುತ್ತಿದ್ದೇನೆ. ತಾಕತ್ತಿದ್ದರೆ ಚಚರ್ೆಗೆ ಬನ್ನಿ. ನಾನೊಬ್ಬನೇ ಒಂದು ಕಡೆ, ಇನ್ನೊಂದು ಕಡೆ ನೀವು, ನಿಮ್ಮ ಪತ್ರಕತರ್ೆ ಪುತ್ರಿ, ಇಡೀ ಕುಟುಂಬ ವರ್ಗ ಹಾಗೂ ನಿಮ್ಮ ಸಮರ್ಥಕರು ಕುಳಿತುಕೊಳ್ಳಲಿ, ನೋಡೇ ಬಿಡೋಣ…

ತಾಯಿ, ಪತ್ನಿ, ಸ್ನೇಹಿತೆಯಾಗಿ ಹೆಣ್ಣು ಬೇಕು, ಮಗಳಾಗಿ ಏಕೆ ಬೇಡ?
ಕಾರ್ಯೇಷು ಮಂತ್ರಿ

ಕರಣೇಷು ದಾಸಿ

ಭುಕ್ತೌತು ಮಾತಾ

ಶಯನೇಷು ವೇಶ್ಯಾ

ಧರ್ಮೇಷು ಧರ್ಮಿ

ಕ್ಷಮಯಾ ಧರಿತ್ರಿ

ಷಟ್ಕರ್ಮ ಯುಕ್ತ

ಕುಲಂ ಉದ್ಧರಿತ್ರಿ!

ನಾವು ಹೆಣ್ಣನ್ನು ಕಾಣುವ ರೀತಿ ಹಾಗು ಹೆಣ್ಣು ನಮ್ಮ ಬದುಕು ಮತ್ತು  ಸಮಾಜದಲ್ಲಿ ಎಂತಹ ಪಾತ್ರ ವಹಿಸುತ್ತಾಳೆ ಎಂಬುದನ್ನು ವೇದಗಳೇ ಸಾರಿವೆ. ಓಶೋ ರಜನೀಶರು ತಮ್ಮ “Rising in Love’ ಪುಸ್ತಕದಲ್ಲಿ ಒಂದು ಅದ್ಭುತ  ನೀತಿಕಥೆಯನ್ನು ಹೇಳುತ್ತಾರೆ. ಅವನೊಬ್ಬನಿರುತ್ತಾನೆ. ಅವನಿಗೆ ಒಬ್ಬಾಕೆಯ ಮೇಲೆ  ಪ್ರೇಮಾಂಕುರವಾಗಿರುತ್ತದೆ. ಒಂದು ದಿನ ಆಕೆಯ ಬಳಿ ಹೋಗಿ ತನ್ನ ಪ್ರೇಮ ನಿವೇದನೆ  ಮಾಡಿಕೊಳ್ಳುತ್ತಾನೆ. ಅದಕ್ಕೆ  ಆಕೆ ಹೇಳುತ್ತಾಳೆ- ‘ನಾನು ನಿನ್ನನ್ನು ವರಿಸಲು ಸಿದ್ಧ, ಆದರೆ  ನನ್ನದೊಂದು ಷರತ್ತಿದೆ!’ ಪ್ರೀತಿಯಲ್ಲಿ ಯಾವತ್ತೂ ಷರತ್ತುಗಳಿರುವುದಿಲ್ಲ ಎಂಬ ಸರಳ ಸತ್ಯವೂ ಈ  ಮನುಷ್ಯನಿಗೆ ಅರ್ಥವಾಗದಷ್ಟು ಪ್ರೀತಿಯ ಹುಚ್ಚು ಹಿಡಿದಿರುತ್ತದೆ. ಪ್ರೀತಿಯ ಉನ್ಮಾದ  ಎಷ್ಟಿರುತ್ತದೆಂದರೆ ಆತ ಏನನ್ನೂ ಮಾಡಲು ಸಿದ್ಧನಾಗಿರುತ್ತಾನೆ. ನನ್ನ ಷರತ್ತು ಬಹಳ ಕಷ್ಟಕರವಾದುದು  ಎಂದು ಆಕೆ ಹೇಳಿದರೂ, ‘ನಿನ್ನನ್ನು ಪಡೆಯಲು ಏನು ಬೇಕಾದರೂ ಮಾಡುತ್ತೇನೆ’ ಎನ್ನುತ್ತಾನೆ.  ‘ಹಾಗಾದರೆ ನಿನ್ನ ತಾಯಿಯ ಹೃದಯವನ್ನು ತಟ್ಟೆಯ ಮೇಲಿಟ್ಟು ತಂದುಕೊಡು. ಆಗ ಮಾತ್ರ ನೀನು ನನ್ನನ್ನು  ನಿಜವಾಗಿಯೂ ಪ್ರೀತಿಸುತ್ತಿದ್ದೀಯಾ ಎಂದು ನಂಬುತ್ತೇನೆ’ ಎನ್ನುತ್ತಾಳೆ!

ಆತ ಪ್ರೀತಿಯಲ್ಲಿ ಹುಚ್ಚನಾಗಿರುತ್ತಾನೆ.

ಅವಳ ಮಾತಿಗೆ ಮಣಿದು ಮನೆಗೆ ಹೋಗುತ್ತಾನೆ. ತಾಯಿಯನ್ನು ಕೊಂದು,  ಹೃದಯವನ್ನು ಕಿತ್ತು ಪ್ಲೇಟಿನ ಮೇಲಿಟ್ಟುಕೊಂಡು ಆಕೆ ಬಳಿಗೆ ಧಾವಿಸುತ್ತಾನೆ. ಆ ಧಾವಂತದಲ್ಲಿ ಕಾಲು  ಎಡವುತ್ತದೆ, ಪ್ಲೇಟು ಕೆಳಕ್ಕೆ ಬೀಳುತ್ತದೆ, ತಾಯಿಯ ಹೃದಯ ಚೂರು ಚೂರಾಗಿ ರಸ್ತೆಯ ಮೇಲೆ  ಬೀಳುತ್ತದೆ. ಅಷ್ಟರಲ್ಲಿ ಮೆಲುದನಿಯೊಂದು ಕೇಳುತ್ತದೆ…

‘ಅಯ್ಯೋ ಮಗನೇ… ಬಿದ್ದುಬಿಟ್ಟೆಯಾ… ನೋವಾಯಿತೇ?’

‘ಮತ್ತೆ ಮನೆಗೆ ಹೋಗಿ ಹೊಸ ಪ್ಲೇಟು ತಂದು ಹೃದಯವನ್ನು ಜೋಡಿಸಿ ನಿನ್ನ  ಪ್ರಿಯತಮೆಯ ಬಳಿಗೆ ಹೋಗು…’ ಎನ್ನುತ್ತದೆ. ಅದು ಕೆಲ ಕ್ಷಣಗಳ ಹಿಂದೆ ಯಾವ ತಾಯಿಯನ್ನು  ಕೊಂದಿರುತ್ತಾನೋ ಅದೇ ತಾಯಿಯ ಕೂಗಾಗಿರುತ್ತದೆ. ತನ್ನನ್ನೇ ಕೊಂದರೂ ಕರುಳ ಕುಡಿಯ ಒಳಿತಿಗಾಗಿ  ಮಿಡಿಯುವ ಮನ ಅಮ್ಮನದ್ದು.

ಹಾಗಿರುವಾಗ….

ಹೆತ್ತ ಕುಡಿಯನ್ನು ಗಂಡನೇ ಕತ್ತು ಹಿಸುಕಿ ಸಾಯಿಸಿದರೆ ಆ ತಾಯಿಯ ಮನಸ್ಸು  ಎಷ್ಟು ನೋವನುಭವಿಸಿರಬಹುದು? ಅಪ್ಪನ ಕ್ರೌರ್ಯಕ್ಕೆ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ  ಮೂರು ತಿಂಗಳ ಹಸುಳೆ ನೇಹಾ ಅಫ್ರೀನ್ ಬಾನು ಬುಧವಾರ ಬೆಳಗ್ಗೆ 10.15 ಗಂಟೆಗೆ ತೀವ್ರ  ಹೃದಯಾಘಾತಕ್ಕೆ ತುತ್ತಾಗಿ ಮಡಿದಾಗ ಅಮ್ಮ ರೇಶ್ಮಾ ಬಾನು ರೋಧಿಸುತ್ತಿದ್ದರೆ ಟೀವಿ  ವೀಕ್ಷಿಸುತ್ತಿದ್ದವರೂ ದುಃಖದ ಮಡುವಿಗೆ ಬಿದ್ದಂತಾಗಿತ್ತು, ಆಕೆಯ ಪಾಪಿ ಗಂಡ ಉಮರ್ ಫಾರೂಕ್್ನನ್ನು  ಹೊಸಕಿ ಹಾಕಿಬಿಡಬೇಕೆನ್ನುವಷ್ಟು ಕೋಪ ನೆತ್ತಿಯನ್ನು ಆವರಿಸಿತ್ತು. ಮಲತಂದೆಯ ಕ್ರೌರ್ಯಕ್ಕೆ  ತುತ್ತಾಗಿ 56 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಮರಣವನ್ನಪ್ಪಿದ ದಿಲ್ಲಿಯ 2 ವರ್ಷದ ಬಾಲೆ  ಫಾಲಕ್್ಳ ಕರುಣಾಜನಕ ಕಥೆಯನ್ನು ಮರೆಯುವ ಮೊದಲೇ ಈ ಘಟನೆ ನಡೆದಿದೆ. ಬೆಂಗಳೂರಿನ ವಾಣಿ ವಿಲಾಸ  ಆಸ್ಪತ್ರೆಯಲ್ಲಿ ರೇಶ್ಮಾ ಬಾನು ಬಿಕ್ಕಳಿಸಿ ಅಳುತ್ತಿದ್ದರೆ ಮನಸು ಕಲ್ಲವಿಲಗೊಳ್ಳುತ್ತಿತ್ತು.  ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದ ವೈದ್ಯರ ಮುಂದೆ ನಿಂತು ‘ನನ್ನ ಮಗುವನ್ನು ಕೊಡಿ,  ತೋಳಿಂದ ಬಿಗಿದಪ್ಪಿಕೊಳ್ಳಬೇಕು’ ಎನ್ನುತ್ತಿದ್ದ ಆ ಹೃದಯವಿದ್ರಾವಕ ಚಿತ್ರಣ ಕಣ್ಣಿನಿಂದ  ಮರೆಯಾಗುತ್ತಿಲ್ಲ.

ಅಲ್ಲಾ, ಹೆಣ್ಣಾಗಿ ಹುಟ್ಟುವುದೇ ತಪ್ಪಾ?

ತಾಯಿಯಾಗಿ ಹೆಣ್ಣು ಬೇಕು, ನಾವು ಬೆಳೆಯುತ್ತಿರುವಾಗ ಸದೋದರಿಯಾಗಿ ಬೇಕು,  ಕಾಲೇಜು ಮೆಟ್ಟಿಲೇರಿದಾಗ ಸ್ನೇಹಿತೆಯಾಗಿಯೂ ಬೇಕು, ಸರಸ-ಸಲ್ಲ್ಲಾಪಕ್ಕೂ ಬೇಕು, ಮದುವೆಗಂತೂ  ಹೆಣ್ಣು ಬೇಕೇ ಬೇಕು. ಆದರೆ ಈ ನಮ್ಮ ಗಂಡಸು ಜನ್ಮಕ್ಕೆ, ಆಕೆ ಮಗಳಾಗಿ ಏಕೆ ಬೇಡ?

ಹೆಣ್ಣಲ್ಲವೆ ನಮ್ಮನ್ನೆಲ್ಲ ಹಡೆದ ತಾಯಿ

ಹೆಣ್ಣಲ್ಲವೆ ನಮ್ಮನ್ನೆಲ್ಲ ಪೊರೆದವಳು

ಹೆಣ್ಣು ಹೆಣ್ಣೆಂದೇತಕೆ ಬೀಳುಗರೆಯುವಿರಿ

ಕಣ್ಣುಕಾಣದ ಗಾವಿಲರೇ

ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಬಂದ ಕುಂದೇನು?

ಈ ಜಾನಪದ ಗೀತೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದ್ದರೂ, ಜನಮನದಲ್ಲಿ  ಹಾಸುಹೊಕ್ಕಾಗಿದ್ದರೂ ನಾವೇಕೆ ಗಂಡೇ ಬೇಕೆಂಬ ಧೋರಣೆ ಇಟ್ಟುಕೊಂಡಿದ್ದೇವೆ? ನಮ್ಮ ಸಮಾಜ  ಸುಶಿಕ್ಷಿತಗೊಳ್ಳುತ್ತಾ ಹೋದಂತೆ ಎಷ್ಟೋ ಅನಿಷ್ಟ ಪದ್ಧತಿಗಳನ್ನು ಬಿಟ್ಟಿದೆ, ಆದರೆ ಗಂಡೇ ಬೇಕೆಂಬ  ಅನಿಷ್ಟ ಮನಸ್ಥಿತಿಯನ್ನೇಕೆ ಹೊರಹಾಕಿಲ್ಲ? ಹೆಣ್ಣು ಮಗುವಿನ ಮೇಲೆ ಏಕಿಂಥ ತಾತ್ಸಾರ? ಗಂಡು ಮಗು  ಜನಿಸಿದರೆ ಮಾತ್ರ ವೃದ್ಧಾಪ್ಯದಲ್ಲಿ ನಮ್ಮ ಜವಾಬ್ದಾರಿ ಹೊರುತ್ತಾನೆ ಎಂಬ ಕ್ಷುಲ್ಲಕ, ವಿವೇಕರಹಿತ  ಮನಸ್ಥಿತಿಯನ್ನು ನಾವೇಕೆ ಇನ್ನೂ ಬಿಟ್ಟಿಲ್ಲ? ಇವತ್ತು ಹೆಣ್ಣು ಯಾವುದರಲ್ಲಿ ಕಡಿಮೆ ಇದ್ದಾಳೆ?  ಗಂಡು ಮಗ ಜನಿಸಿದರೆ ಮಾತ್ರ ಜವಾಬ್ದಾರಿ ಹೊರುತ್ತಾನೆ ಎಂಬುದು ಎಷ್ಟು ಸರಿ? ದತ್ತು  ತೆಗೆದುಕೊಳ್ಳುವವರು ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಏಕೆ ಅಡಾಪ್ಟ್ ಮಾಡಿಕೊಳ್ಳುತ್ತಾರೆ  ಅಂದುಕೊಂಡಿರಿ?

ಹೆಣ್ಣು ಹೆತ್ತರೆ ಜವಾಬ್ದಾರಿ ಜಾಸ್ತಿ ಎಂದು ಮೇಲ್ನೋಟಕ್ಕೆ ಕಂಡರೂ  ಸೂಕ್ಷ್ಮವಾಗಿ ನೋಡಿದಾಗ, ಆಳವಾಗಿ ಗಮನಿಸಿದಾಗ ಹೆಚ್ಚಾಗಿ ಜವಾಬ್ದಾರಿ ಹೊರುವವಳೇ ಹೆಣ್ಣು.  ಅಂತಃಕರಣವೆಂಬುದು ಬಹುವಾಗಿ ಇರುವುದೇ ಹೆಣ್ಣಿನಲ್ಲಿ. ಇವತ್ತು ಎಷ್ಟು ಹೆಣ್ಣು ಮಕ್ಕಳು  ತಂದೆ-ತಾಯಿಯ ಜವಾಬ್ದಾರಿ ಹೊತ್ತಿಲ್ಲ ಹೇಳಿ? ಆಕೆ ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ,  ಪತ್ನಿಯಾಗಿ ನಿರ್ವಹಿಸುವ ಪಾತ್ರದ ಬಗ್ಗೆ ನಮ್ಮ ಸಮಾಜ ಎಂದಾದರೂ ಯೋಚಿಸಿದೆಯೇ? ‘ಮಕ್ಕಳೆಂದರೆ ನಾವು  ಸುಖಪಡುವುದಕ್ಕಾಗಿ ನೆಟ್ಟ ಸಸಿಗಳಲ್ಲ, ನಮ್ಮ ಸುಖದ ಫಲಗಳು’ ಎಂದಿದ್ದರು ಬೀಚಿ. ಇದು ಗಂಡಸರಾದ  ನಮ್ಮೆಲ್ಲರ ನಿಜವಾದ ಮನಸ್ಥಿತಿ. ಆದರೆ ದಾಂಪತ್ಯದಲ್ಲಿ ಸುಖಕ್ಕಿಂತ ಸಂಕಷ್ಟ ಎದುರಿಸುವವಳು, ನಮ್ಮ  ಸುಖದ ಫಲಗಳಾದ ಮಗುವಿನ ಜವಾಬ್ದಾರಿ ಹೊರುವವಳು ಹೆಣ್ಣು. ಮಲಗಿ ಏಳುವುದಕ್ಕೆ ಗಂಡಸಿನ ಜವಾಬ್ದಾರಿ  ಮುಗಿದರೆ, ಹೆರುವುದರಿಂದ, ಸಾಕಿ ಸಲಹುವುದು, ಆ ಮಗುವನ್ನು ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರಜೆಯಾಗಿ  ರೂಪಿಸುವವರೆಗೂ ಹೆಣ್ಣೇ ಕಾರಣ. ‘ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’ ಎನ್ನುತ್ತದೆ ನಮ್ಮ  ಸರ್ಕಾರಿ ಸ್ಲೋಗನ್. ಪತ್ನಿಯಾಗಿಯೂ ಅವಳ ಪಾತ್ರ ಬಹುದೊಡ್ಡದು. ಯಾವುದೇ ಗಂಡಸು ಯಾವುದೇ ರಂಗದಲ್ಲಿ  ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ, ಸಾಧಕನಾಗಿ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದೂ  ಪತ್ನಿಯೆಂಬ ಹೆಣ್ಣೇ. ಎಳೆಪ್ರಾಯದಲ್ಲೇ ಸಾಧನೆ ಮಾಡಿದರೂ ಅಮ್ಮ ಎಂಬ ಹೆಣ್ಣಿನ ಪಾತ್ರ  ದೊಡ್ಡದಿರುತ್ತದೆ.

ಆಕೆಯಿಂದ ಇಷ್ಟೆಲ್ಲಾ ಬಯಸುವಾಗ ನಾವೇಕೆ ಹೆಣ್ಣು ಬೇಡವೆನ್ನುತ್ತೇವೆ?

ಏನಾದರೂ ಅಭದ್ರತೆ ಕಾಡುತ್ತದೆಯೇ? ಅದನ್ನೂ ಸೂಕ್ಷ್ಮವಾಗಿ ಯೋಚನೆ  ಮಾಡಿದರೆ, ವೃದ್ಧಾಪ್ಯ ಬಂದಾಗಲೂ ನಮ್ಮನ್ನು ಮಗಳು ಅಥವಾ ತಾಯಿ ಸ್ಥಾನದಲ್ಲಿ ನಿಂತು ನೋಡುವವಳು  ಸೊಸೆಯೆಂಬ ಹೆಣ್ಣೇ ಆಗಿರುತ್ತಾಳೆ. ಆದರೂ ಹೆಣ್ಣೆಂದರೆ ಅಸಡ್ಡೆಯೇಕೆ? ಹಳೆ ಕಾಲ ಬಿಡಿ, ಸಮಾಜ  ಮುಂದುವರಿದಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಗಂಡಿಗೆ ಹೆಗಲು ಕೊಟ್ಟು ದುಡಿಯುವ ಮಟ್ಟಕ್ಕೆ  ಬೆಳೆದಿದ್ದಾಳೆ. ಎಷ್ಟೋ ಹೆಣ್ಣು ಮಕ್ಕಳು ಮದುವೆಗೆ ಮುನ್ನ, ‘ನನ್ನ ತಂದೆ-ತಾಯಿಯನ್ನೂ ನಾನೇ  ನೋಡಿಕೊಳ್ಳಬೇಕು. ಆದಕ್ಕೆ ನಿನ್ನ ಒಪ್ಪಿಗೆ ಇದ್ದರಷ್ಟೇ ಮುಂದಿನ ಮಾತು…’ ಎಂದು ಷರತ್ತು ಹಾಕುವ  ಘಟನೆಗಳನ್ನು ಇಂದು ಕಾಣುತ್ತಿದ್ದೇವೆ. ಮಗನಿಗಿಂತ ಮಗಳೇ ಇಂದು ಅಪ್ಪ-ಅಮ್ಮನ ಬಗ್ಗೆ ಕಾಳಜಿ  ತೋರುತ್ತಾಳೆ. ಆದರೂ ಹೆಣ್ಣೇಕೆ ಬೇಡವೆನ್ನುತ್ತೇವೆ? ಹೆಣ್ಣು ಬೇಡವೆಂದರೆ ತಾಯ್ತನವನ್ನೇ  ಕೊಂದಂತಲ್ಲವೆ? ಹೆಣ್ಣು ಹುಟ್ಟುವ ಮೊದಲೇ ಭ್ರೂಣದಲ್ಲಿ ಚಿವುಟಿದರೆ ಒಳ್ಳೆಯ ಸಮಾಜ  ಕಟ್ಟುವುದಕ್ಕಾದರೂ ಹೇಗೆ ಸಾಧ್ಯ?

ಶೀಘ್ರಮೇವ ಪುತ್ರ ಪ್ರಾಪ್ತಿರಸ್ತು!!

ಸಾಮಾನ್ಯವಾಗಿ ನವದಂಪತಿಗಳಿಗೆ ಆಶೀರ್ವದಿಸುವಾಗ ಹೀಗೆನ್ನುತ್ತಾರೆ. ನಮ್ಮ  ಮನಸ್ಥಿತಿಯನ್ನು ಆಳುತ್ತಿರುವುದೂ ಕುಲೋದ್ಧಾರಕ ಗಂಡೆಂಬ ಇಂತಹ ಧೋರಣೆಯೇ. ಎಲ್ಲರೂ ಗಂಡು ಮಗುವೇ  ಬೇಕೆಂದು ಹೊರಟರೆ ಆತ ಬೆಳೆದು ನಿಂತಾಗ ಆತನಿಗೊಂದು ಹೆಣ್ಣನ್ನು ಎಲ್ಲಿಂದ ತರುವುದು? ತನ್ನ ಮಗ  ಮತ್ತೊಬ್ಬ ಹುಡುಗನ ಜತೆ ಸಂಸಾರ ಮಾಡಲು ಹೆಣ್ಣನ್ನು ಕೊಲ್ಲುವ ಕ್ರೂರಿ ಅಪ್ಪನ ಮನಸ್ಸು  ಒಪ್ಪುತ್ತದೆಯೇ? ಎಲ್ಲ ಅತ್ತೆ-ಮಾವಂದಿರಿಗೂ ಮೊಮ್ಮಕ್ಕಳನ್ನು ನೋಡುವ ಆಸೆ ಇರುತ್ತದೆ. ಈ  ಮೊಮ್ಮಕ್ಕಳೇನು ಮಗನ ಹೊಟ್ಟೆಯಲ್ಲಿ ಹುಟ್ಟುತ್ತವೆಯೇ? ಆಗ ಮಗನಿಗೊಂದು ಹೆಣ್ಣು ಬೇಕಲ್ಲವೆ? ವಂಶ  ಬೆಳೆಸಲು ಒಬ್ಬ ಪುತ್ರ ಬೇಕು ಎಂದು ಪ್ರತಿ ಅಜ್ಜ-ಅಜ್ಜಿಯೂ ಬಯಸುತ್ತಾರೆ. ಹಾಗೆ ವಂಶ ಬೆಳೆಸಲು,  ದೀಪ ಹಚ್ಚಲು ಮತ್ತೊಬ್ಬರ ಮನೆಯ ಹೆಣ್ಣೇ ಬೇಕಲ್ಲವೆ? ನಮ್ಮ ಮನೆ ವಂಶ ಬೆಳೆಸಲು ಮೊಮ್ಮಗ ಬೇಕು.  ಆದರೆ ನಮ್ಮ ಮಗಳು ಇನ್ನೊಬ್ಬರ ಮನೆ ವಂಶವನ್ನೇಕೆ ಬೆಳೆಸಬಾರದು? ಒಂದು ಸಮಾಜ ಮುಂದುವರಿಯಬೇಕಾದರೆ  ಒಂದು ಗಂಡಿಗೆ ಹೆಣ್ಣು ಬೇಕೆಂಬ ಅನುಪಾತವೇ ನಮ್ಮ ಮನಸ್ಥಿತಿಯಿಂದಾಗಿ ಏರುಪೇರಾಗಿದೆ.

ಒಳ್ಳೆಯ ಅಪ್ಪನಾಗಲು ಒಪ್ಪದವನು ಒಳ್ಳೆಯ ಪತಿಯಾಗಲು ಹೇಗೆ ಸಾಧ್ಯ?

ಇಂತಹ ಪರಿಸ್ಥಿತಿಯಿಂದಾಗಿಯೇ ಬಹಳಷ್ಟು ಮಹಿಳೆಯರು ತಾವು ಬಸುರಿಯಾದಾಗ  ಗಂಡುಮಗುವೇ ಜನಿಸಲಿ ಎಂದು ಬಯಸುತ್ತಾರೆ. ಅದು ಗಂಡು ಮಗುವಿನ ಮೇಲಿನ ಮೋಹದಿಂದಲ್ಲ. ತಾನು  ಅನುಭವಿಸಿದ ಕಷ್ಟ, ಕಾರ್ಪಣ್ಯವನ್ನು ಹೆಣ್ಣಾದರೆ ತನ್ನ ಮಗಳೂ ಅನುಭವಿಸಬೇಕಾಗುತ್ತದೆಂಬ ಭಯ  ಆಕೆಯನ್ನು ಕಾಡುತ್ತಿರುತ್ತದೆ.

ಒಬ್ಬ ಕೋಪಿಷ್ಟನೆನಿಸಿಕೊಂಡವನು ಕನಿಕರ ತೋರಿದರೆ, ಅವನು ಒರಟನಿರಬಹುದು,  ಆದರೆ ಆತನದ್ದು “ಹೆಂಗರುಳು” ಎನ್ನುತ್ತಾರೆ. ದೇವರು ತಾನು ಎಲ್ಲಾ ಕಡೆ ಇರುವುದಕ್ಕಾಗುವುದಿಲ್ಲ  ಎಂಬ ಕಾರಣಕ್ಕೆ ತಾಯಿಯನ್ನು ಸೃಷ್ಟಿಸಿದ ಎಂಬ ಮಾತಿದೆ. ಸುಖಕ್ಕೆ ಮಾತ್ರವಲ್ಲ, ನಾವು ಸಾಂತ್ವನ  ಬಯಸಿ ಹೋಗುವುದು ತಾಯಿ, ಹೆಂಡತಿ, ಸ್ನೇಹಿತೆ ರೂಪದಲ್ಲಿರುವ ಒಂದು ಹೆಣ್ಣಿನ ಬಳಿಗೇ ಹೊರತು  ಮತ್ತೊಬ್ಬ ಪುರುಷನ ಸನಿಹಕ್ಕಲ್ಲ. ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನೂ ಒಮ್ಮೆ ನೋಡಿ…  ಹೆಣ್ಣಿಗೆ ಎಂತಹ ಸ್ಥಾನ ಕೊಟ್ಟಿದ್ದೇವೆ? ಪ್ರಕೃತಿ ಹೆಣ್ಣು, ಭೂಮಿ ಹೆಣ್ಣು, ನದಿ ಹೆಣ್ಣು,  ವಿದ್ಯೆಗೆ ಸರಸ್ವತಿ, ದುಡ್ಡಿಗೆ ಲಕ್ಷ್ಮಿ, ಕೆಚ್ಚಿಗೆ ದುರ್ಗೆ. ಎಲ್ಲರೂ ಹೆಣ್ಣೇ. ‘ಎಲ್ಲಿ  ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ’ ಎನ್ನುತ್ತದೆ ಈ ಭರತ ಖಂಡ. ಇಂತಹ  ನಾಡಿನಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ, ನೇಹಾ ಆಫ್ರೀನ್ ಬಾನು, ಫಾಲಕ್್ಳಂಥ ಹಸುಳೆಗಳ ಹತ್ಯೆ  ನಡೆಯುತ್ತದೆಂದರೆ ಇದಕ್ಕಿಂತ ವಿಪರ್ಯಾಸ ಏನಿದೆ?

An open challenge to RB!
Part-1

www.youtube.com/watch?v=1apfXXG1KUo

Part-2

Part-3

www.youtube.com/watch?v=BpwrdHLcqkY

Part-4

www.youtube.com/watch?v=NKrJq6fGt5w

Part-5

Part-6

ಇವರಿಬ್ಬರಲ್ಲಿ ‘ಸಕಾಲ’ಗುಣ ಸಂಪನ್ನರಾರು?
ಅಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಎಲ್ಲರನ್ನೂ  ಆಶ್ಚರ್ಯಚಕಿತರನ್ನಾಗಿಸಿದ್ದರು. ಸ್ವಂತ ಪಕ್ಷದ ನಾಯಕರು, ಮಂತ್ರಿವರ್ಯರಿಗಿಂತ ವಿರೋಧ ಪಕ್ಷದ ನಾಯಕ  ಅಟಲ್ ಬಿಹಾರಿ ವಾಜಪೇಯಿಯವರ ಮೇಲೆಯೇ ಹೆಚ್ಚು ವಿಶ್ವಾಸ, ನಂಬುಗೆ ತೋರಿಸಿಬಿಟ್ಟರು. ಅದು 1994.  ವಿಶ್ವಸಂಸ್ಥೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತ ವಿರೋಧಿ ಗೊತ್ತುವಳಿಯೊಂದನ್ನು ಹೊರಡಿಸಲು  ಭೂಮಿಕೆ ಸಿದ್ಧಗೊಳ್ಳುತ್ತಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು  ಆರೋಪಿಸಿ ಜಿನೀವಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾರತವನ್ನು ಖಂಡಿಸಿ  ಗೊತ್ತುವಳಿಯೊಂದನ್ನು ಮಂಡಿಸಲು ನಮ್ಮ ಬದ್ಧ ವಿರೋಧಿ ಪಾಕಿಸ್ತಾನ ಮುಂದಾಗಿತ್ತು. ಅದಕ್ಕೆ  ಮುಖ್ಯವಾಗಿ ಮುಸ್ಲಿಂ ರಾಷ್ಟ್ರಗಳಿಂದಲೇ ಕೂಡಿರುವ 51 ಸದಸ್ಯ ರಾಷ್ಟ್ರಗಳ ‘ಆರ್ಗನೈಜೇಷನ್ ಆಫ್  ಇಸ್ಲಾಮಿಕ್ ಕಾನ್ಫೆರೆನ್ಸ್್’ (OIC)  ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ ಕಾರಣ ಭಾರತಕ್ಕೆ ಮುಖಭಂಗವಾಗುವ ಎಲ್ಲ ಸಂಕೇತಗಳೂ  ದೊರೆತವು. ಅದನ್ನು ನಿಶ್ಫಲಗೊಳಿಸಲು ಮುಂದಾದ ಪ್ರಧಾನಿ ನರಸಿಂಹರಾವ್ ಅವರಿಗೆ ಕಂಡ ಸೂಕ್ತ ವ್ಯಕ್ತಿ  ಅಟಲ್ ಬಿಹಾರಿ ವಾಜಪೇಯಿ. ಅಟಲ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ಸಾಗಿದ ಫಾರೂಕ್ ಅಬ್ದುಲ್ಲಾ,  ವಿದೇಶಾಂಗ ಸಚಿವ ದಿನೇಶ್ ಸಿಂಗ್ ಒಳಗೊಂಡ ನಿಯೋಗ ಅಂದು ಸಂಭವನೀಯ ಮುಖಭಂಗದಿಂದ ಭಾರತವನ್ನು  ಪಾರುಮಾಡಿತು.

C cohesiveness ಹೊಂದಾಣಿಕೆಯೆಂಬುದು ಎಲ್ಲ ಕ್ಷೇತ್ರಗಳಲ್ಲೂ  ಇರಬೇಕಾಗುತ್ತದೆ, ಅದರಲ್ಲೂ ಬಹುಪಕ್ಷೀಯ ರಾಜಕಾರಣದಲ್ಲಂತೂ ತೀರಾ ಅಗತ್ಯವೆನಿಸುತ್ತದೆ. ಇಲ್ಲಿ  ಮತ್ತೊಂದು ಘಟನೆ ನೆನಪಾಗುತ್ತಿದೆ. 1995ರಲ್ಲೇ ಭಾರತ ಪೋಖ್ರಾನ್್ನಲ್ಲಿ ಎರಡನೇ ಅಣು  ಪರೀಕ್ಷೆಯನ್ನು ನಡೆಸಬೇಕಿತ್ತು. ಆದರೆ ಅದರ ತಯಾರಿ ಅಮೆರಿಕದ ಉಪಗ್ರಹಗಳ ಕಣ್ಣಿಗೆ ಬಿದ್ದು,  ಅಂತಾರಾಷ್ಟ್ರೀಯ ಒತ್ತಡಕ್ಕೆ ನರಸಿಂಹರಾವ್ ಮಣಿದ ಕಾರಣ ಪರೀಕ್ಷೆ ನಿಂತುಹೋಯಿತು. 1996ರಲ್ಲಿ ಅಟಲ್  ಬಿಹಾರಿಯವರ ಅಲ್ಪಾವಧಿ ಸರ್ಕಾರ ಅಧಿಕಾರಕ್ಕೆ ಬಂತು. ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ  ಕೊಡದಿದ್ದರೇನು, ಅಂದು ವಾಜಪೇಯಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಮಾಜಿ  ಪ್ರಧಾನಿ ನರಸಿಂಹರಾವ್ ಗೌಪ್ಯ ಚೀಟಿಯೊಂದನ್ನು ಕಳುಹಿಸಿದರು. ಅದರಲ್ಲಿ ‘ಒ್ಡಡಡಿ ್ಜ್ಟ ಛಟಿಜ  ಛಿಟಛಡಡಿ’ ಎಂದು ಬರೆದಿದ್ದರು. ಅಂದರೆ ಅಣುಪರೀಕ್ಷೆಗೆ ಎಲ್ಲವೂ ಸಿದ್ಧವಾಗಿದೆ, ಕೂಡಲೇ ಮಾಡಿ  ಮುಗಿಸಿಬಿಡಿ ಎಂದು ಕಿವಿಮಾತು ಹೇಳಿದ್ದರು. ಇದು ಒಬ್ಬ ರಾಷ್ಟ್ರವಾದಿ, ಮುತ್ಸದ್ದಿ ಹಾಗೂ ಒಳ್ಳೆಯ  ರಾಜಕಾರಣಿಯಲ್ಲಿ ಕಾಣಬಹುದಾದ ಗುಣ. ಅಟಲ್ ಸರ್ಕಾರ 13 ದಿನಗಳಲ್ಲೇ ಉರುಳಿದರೂ 1998ರಲ್ಲಿ ಅಟಲ್,  ರಾವ್ ಆಸೆಯನ್ನು ಈಡೇರಿಸಿದರು. 1995ರಲ್ಲಿ ಎಲ್ಲವೂ ಸಿದ್ಧವಾಗಿತ್ತು, ಸ್ಫೋಟಿಸುವುದೊಂದನ್ನು  ಬಿಟ್ಟು. ಆದರೂ ಎಲ್ಲ ಹೆಗ್ಗಳಿಕೆ ವಾಜಪೇಯಿಯವರಿಗೆ ದೊರೆಯುತ್ತದೆ ಎಂಬ ಈರ್ಷೆ ಬೆಳೆಸಿಕೊಳ್ಳದೆ,  ರಾವ್ ರಾಷ್ಟ್ರಹಿತ ನೋಡಿದ್ದರು. ಈ ವಿಷಯವನ್ನು 2004ರಲ್ಲಿ ರಾವ್ ತೀರಿಕೊಂಡಾಗ ಸ್ವತಃ  ವಾಜಪೇಯಿಯವರೇ ರಾಷ್ಟ್ರದ ಜನಕ್ಕೆ ತಿಳಿಸಿದರು. ಅದರ ಹೆಗ್ಗಳಿಕೆಯನ್ನು ರಾವ್್ಗೇ ನೀಡಿದರು.  ರಾಜಕಾರಣದಲ್ಲಿ ಈ ರೀತಿಯ ಝಛ್ಟಜಡ್ಝಢಜಟಿಜಡಡ ಬೇಕೇ ಬೇಕು. ಆದರೆ ಅಂತಹ ಹೊಂದಾಣಿಕೆಯನ್ನು ತರುವ  ಕಟ್ಡಿಡ, ಹೊಣೆಗಾರಿಕೆ ಯಾವತ್ತೂ ಅಧಿಕಾರದ ಚುಕ್ಕಾಣಿ ಹಿಡಿದವರ ಮೇಲಿರುತ್ತದೆ.

ಎಲ್ಲ ಅನಿಷ್ಟಗಳಿಗೂ ವಿರೋಧಿಗಳು ಹಾಗೂ ವಿರೋಧ ಪಕ್ಷದವರೇ ಕಾರಣ ಎಂದು  ದೂರುತ್ತಿರುವ ಡಾ. ಬಿ.ಎಸ್. ಯಡಿಯೂರಪ್ಪನವರು ಎಂದಾದರೂ ಇಂತಹ ಗುಣವನ್ನು, ಹೃದಯ ವೈಶಾಲ್ಯತೆಯನ್ನು  ತೋರಿದ್ದರೇ ಹೇಳಿ?

ದರ್ಪ, ಹೊಣೆಗೇಡಿ ಮಾತುಗಳು, ಮೈಮೇಲೆ ಏರಿ ಹೋಗುವುದು, ಸ್ವಪಕ್ಷದ  ಶಾಸಕರನ್ನೇ ಕಾಲ ಕಸದಂತೆ ಕಾಣುವುದು, ಸ್ವಜಾತಿಯ ಭಟ್ಟಂಗಿಗಳ ಕೂಟ ರಚನೆ, ಆಡಳಿತದ ಎಲ್ಲ  ಹಂತಗಳಲ್ಲೂ ‘ವಸೂಲಿ’ ರಾಜಕಾರಣ, ಎಲ್ಲ ವ್ಯವಸ್ಥೆಗಳಿಗೂ ಸ್ವಜಾತಿಯವರ ಪ್ರತಿಷ್ಠಾಪನೆ ಇವುಗಳನ್ನು  ಬಿಟ್ಟರೆ ಯಡಿಯೂರಪ್ಪ ಮಾಡಿದ್ದೇನು? ಇಂತಹ ವ್ಯಕ್ತಿ ಇತ್ತೀಚೆಗೆ, ‘ಸದಾನಂದಗೌಡರ ಆಡಳಿತ  ಬಿಜೆಪಿ-ಕಾಂಗ್ರೆಸ್ ಜೆಡಿಎಸ್ ಒಟ್ಟು ಸೇರಿ ನಡೆಸುತ್ತಿರುವ ಸರ್ಕಾರ’ ಎಂದು ಟೀಕೆ  ಮಾಡಿದ್ದಾರಲ್ಲಾ, ಏಕಾಗಿ? ಅದಿರಲಿ, ಯಡಿಯೂರಪ್ಪನವರ ಆರೋಪದಲ್ಲಿ ಹುರುಳೇನಾದರೂ ಇದೆಯೆ? ಹೌದು,  ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಕಂಡುಬರುತ್ತಿದ್ದ ವಿರೋಧಪಕ್ಷಗಳ ಗದ್ದಲ್ಲ ಈಗ  ತಣ್ಣಗಾಗಿರುವುದೇಕೆ? ಯಡ್ಡಿ ಅಧಿಕಾರಾವಧಿಯಲ್ಲಿ ಒಮ್ಮೆಯೂ ಗಲಾಟೆ, ಗೊಂದಲ, ಕ್ಷೋಬೆಯಿಲ್ಲದೆ  ನಡೆಯದ ಅಧಿವೇಶನಗಳು ಕಳೆದ 7 ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ, ಸುಸೂತ್ರವಾಗಿ  ನಡೆಯುತ್ತಿರುವುದೇಕೆ?

ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಬಿಎಸ್. ಯಡಿಯೂರಪ್ಪ ಹಾಗೂ ಡಿ.ವಿ.  ಸದಾನಂದಗೌಡ ಇವರಿಬ್ಬರ ವ್ಯಕ್ತಿತ್ವ, ಮನಸ್ಥಿತಿ, ಯೋಗ್ಯಾಯೋಗ್ಯತೆಗಳನ್ನು ಅಳೆದು ತೂಗಲು,  ಇಬ್ಬರಲ್ಲಿ ಯಾರು ‘ಸಕಾಲ’ಗುಣ ಸಂಪನ್ನರು ಎಂದು ತಿಳಿದುಕೊಳ್ಳಲು ಇದು  ಸೂಕ್ತಕಾಲವೆನಿಸುತ್ತದಲ್ಲವೆ?

ಇವತ್ತು ಕರ್ನಾಟಕ ರಾಜಕಾರಣ ಈ ಮಟ್ಟಕ್ಕಿಳಿದಿದ್ದರೆ,  ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದ್ದರೆ, ಕರ್ನಾಟಕ ಕೆಟ್ಟ ಕಾರಣಕ್ಕಾಗಿ  ಇಂದು ಸುದ್ದಿಯಾಗುತ್ತಿದ್ದರೆ ಅದರ ಬಹುಪಾಲು ಹೊಣೆಯನ್ನು ಯಡಿಯೂರಪ್ಪನವರೇ ಹೊರಬೇಕು, ಅದಕ್ಕೆ  ಯಡಿಯೂರಪ್ಪನವರಲ್ಲಿರುವ ವಿವೇಕರಹಿತ ದರ್ಪ, ಅಸಹನೆಯೇ ಕಾರಣ. 2008, ಮೇ 28ರಂದು ಬಿಜೆಪಿ ಸರ್ಕಾರ  ಅಧಿಕಾರಕ್ಕೆ ಬಂದ ದಿನದಿಂದ ಅಧಿಕಾರದಿಂದ ಕೆಳಗಿಳಿಯುವವರೆಗೂ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಿ.  ಮೋದಿ ಮಾದರಿ ಸರ್ಕಾರ ನೀಡುವುದಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಮಾಡಿದ ಮೊದಲ  ತಪ್ಪೆಂದರೆ ಬಳ್ಳಾರಿ ಗಣಿ ಕಳ್ಳರ ದುಡ್ಡಿನ ಮದವನ್ನು ದುಡ್ಡಿನಿಂದಲೇ ಮಟ್ಟಹಾಕಲು ಹೊರಟರು. ಅವರು  ಅದಿರು ಲೂಟಿ ಮಾಡಿದರೆ ಇವರು ವರ್ಗಾವಣೆ, ಅಧಿಕಾರಿಗಳಿಂದ ಸುಲಿಗೆ, ಡಿನೋಟಿಫಿಕೇಷನ್ ಮೂಲಕ  ಶ್ರೀಮಂತರಾಗಲು ಹೊರಟರು. ಪ್ರಾಮಾಣಿಕತೆಯೇ ಒಂದು ಪ್ರಬಲ ಅಸ್ತ್ರ, ಪ್ರಾಮಾಣಿಕತೆ ಬಹುದೊಡ್ಡ  ಶಕ್ತಿಯನ್ನು ತಂದುಕೊಡುತ್ತದೆ ಎಂಬುದು ಯಡಿಯೂರಪ್ಪನವರಿಗೆ ಅರ್ಥವಾಗಲಿಲ್ಲ. ಯಾವಾಗ ದುಡ್ಡಿನ  ಹಿಂದೆ ಹೊರಟರೋ ಅಂದಿನಿಂದಲೇ ಅವರ ವ್ಯಕ್ತಿತ್ವದ ಹೊಳಪು ಮಾಸತೊಡಗಿತು, ಮುಖ್ಯಮಂತ್ರಿ ಸ್ಥಾನದ  ಘನತೆ ಕುಗ್ಗತೊಡಗಿತು. ಅದರಿಂದ ಬಳ್ಳಾರಿ ರೆಡ್ಡಿಗಳ ಸೊಕ್ಕು ಹೆಚ್ಚಾಯಿತೇ ಹೊರತು ಯಡಿಯೂರಪ್ಪನವರು  ಬಲಿಷ್ಠರಾಗಲಿಲ್ಲ. 6 ತಿಂಗಳಲ್ಲೇ ಯಡ್ಡಿ ಮಂಡಿಯೂರುವಂತೆ ಮಾಡಿದರು ರೆಡ್ಡಿಗಳು. ಇಂಧನ  ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪನವರ ಖಾತೆಯಲ್ಲಿ ಕೈಯಾಡಿಸಲು ಹೋದ ಕಾರಣ ಯಡ್ಡಿ-ಈಶು ನಡುವೆ  ವರ್ಷ ತುಂಬುವಷ್ಟರಲ್ಲಿ ‘ಮಾಮೂಲಿ’ ಗಲಾಟೆ ಆರಂಭವಾಯಿತು. ಇನ್ನಾರು ತಿಂಗಳಲ್ಲಿ ರೆಡ್ಡಿಗಳು ಮತ್ತೆ  ಯೆಡ್ಡಿ ಮುಖಭಂಗ ಮಾಡಿದರು. ಅಲ್ಲಿಗೆ ಹನಿಮೂನ್ ಅವಧಿ ಮುಗಿದು, ವಿರೋಧ ಪಕ್ಷಗಳು  ಕಾರ್ಯಪ್ರವೃತ್ತಗೊಂಡವು. ಹಗರಣಗಳು ಯಡ್ಡಿ ಕುತ್ತಿಗೆಯನ್ನು ಸುತ್ತಿಕೊಳ್ಳಲಾರಂಭಿಸಿದವು.  ಸದನದಲ್ಲಿ ಕೋಲಾಹಲ ಆರಂಭವಾಯಿತು. ಸುಮಾರು 25 ವರ್ಷ ವಿರೋಧ ಪಕ್ಷದಲ್ಲಿದ್ದರೂ, ವಿರೋಧ ಪಕ್ಷದ  ನಾಯಕನಾಗಿದ್ದರು, ತಾವು ವಿರೋಧ ಪಕ್ಷದ ನಾಯಕನಾಗಿದ್ದಾಗ ಬಾಯಿಗೆ ಬಂದಂತೆ ಆರೋಪ ಮಾಡಿದ್ದರೂ  ಮುಖ್ಯಮಂತ್ರಿಯಾದ ಕೂಡಲೇ ಯಡ್ಡಿ ವಿರೋಧ ಪಕ್ಷಗಳ ಬಗ್ಗೆ ಕೆಟ್ಟ ಅಸಹನೆ ಬೆಳೆಸಿಕೊಂಡರು.  ಪ್ರತಿಪಕ್ಷಗಳು ಕೊಡುವ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯಿಸಲಾರಂಭಿಸಿದರು. ನನಗೆ 5 ವರ್ಷಗಳಿಗಾಗಿ  ಜನಾದೇಶ ದೊರೆತಿದೆ, ಅಲ್ಲಿವರೆಗೂ ಪ್ರತಿಪಕ್ಷಗಳು ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳಬೇಕು  ಎಂಬಂತೆ ವರ್ತಿಸಲಾರಂಭಿಸಿದರು. ಒಂದು ಸಣ್ಣ ಆರೋಪ ಮಾಡಿದರೂ ಅದಕ್ಕೆ ಉಗ್ರವಾಗಿ ಉತ್ತರಿಸಲು,  ಪ್ರತಿಪಕ್ಷಗಳು ಮಾಡಿದ್ದ ಭ್ರಷ್ಟಾಚಾರದತ್ತ ಕೈತೋರಲು ಆರಂಭಿಸಿದರು. ಇದರಿಂದ ಪರಿಸ್ಥಿತಿ,  ವೈಯಕ್ತಿಕ ಸಂಬಂಧಗಳು ಹಳಸಿ, ಸಂಘರ್ಷಕ್ಕೆ ಎಡೆಮಾಡಿಕೊಟ್ಟವು. ಒಮ್ಮೆ ಸೋನಿಯಾ ಗಾಂಧಿಯವರು  ವಾಜಪೇಯಿಯವರನ್ನು ‘ಗದ್ದಾರ್್’ (ದೇಶದ್ರೋಹಿ) ಎಂದು ಕರೆದಾಗ, ‘ಕೆಲವೊಂದು ಪದಗಳು  ಶಬ್ದಕೋಶದಲ್ಲಿದ್ದರೇ ಚೆನ್ನ’ ಎಂದು ಅಟಲ್ ಪ್ರತಿಕ್ರಿಯೆ ನೀಡಿದ್ದರು. ಇಂಥ ಮೇಲ್ಪಂಕ್ತಿಯನ್ನು  ಅನುಸರಿಸುವುದು ಬಿಟ್ಟು ಯಡಿಯೂರಪ್ಪನವರು ಕೆಸರೆರಚಾಟ ಆರಂಭಿಸಿದರು. ಆಗ ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯನವರೂ ಸಿಟ್ಟಿಗೆದ್ದರು. ಭ್ರಷ್ಟಾಚಾರ ಮಾಡುತ್ತಿರುವುದಲ್ಲದೆ ಸುಭಗರಂತೆ  ವರ್ತಿಸುತ್ತಿದ್ದ ಯಡ್ಡಿಯನ್ನು ತರಾಟೆಗೆ ತೆಗೆದುಕೊಂಡರು. 2010ರಲ್ಲಿ ನಡೆದ ಅಧಿವೇಶನವೊಂದರಲ್ಲಿ  ಯಡಿಯೂರಪ್ಪನವರು ಎಷ್ಟು ವಿಚಿತ್ರವಾಗಿ, ಹುಂಬರಂತೆ ವರ್ತಿಸಿದರೆಂದರೆ ಸಿದ್ದರಾಮಯ್ಯನವರ ಮೇಲೆ  ತೋಳೇರೆಸಿಕೊಂಡು ಹೋಗಿದ್ದರು. ಅದಕ್ಕೆ ಪ್ರತಿಯಾಗಿ ಸಿದ್ದು ತೊಡೆತಟ್ಟಿ ಕುಸ್ತಿಗೆ ಕರೆದಾಗ ಯಡ್ಡಿ  ಉತ್ತರಕುಮಾರನಂತೆಆಸನಕ್ಕೆ ಮರಳಿದ್ದರು. ಮೈಮೇಲೆ ಗಣಬಂದಂತೆ ವರ್ತಿಸುವುದು, ಎಗರಿ ಹೋಗುವುದು,  ದೇವೇಗೌಡರಿಗಿಂತ ಹೊಲಸು ಜಾತಿ ರಾಜಕಾರಣ ಇಂತಹ ಧೋರಣೆ, ಮನಸ್ಥಿತಿಗಳು ಯಡ್ಡಿ ಗಾದಿಗೆ ಮುಳುವಾದರೆ  ದುಡ್ಡಿನ ಹಪಾಹಪಿ ಅವರ ಘನತೆ, ಗದ್ದುಗೆಯನ್ನು ಹಗುರವಾಗಿಸಿದವು. ‘ನನಗೆ ಅಧಿಕಾರ ನಡೆಸಲು  ಬಿಡಲಿಲ್ಲ’ ಎಂದು ಈಗ ಪ್ರತಿಪಕ್ಷಗಳನ್ನು ದೂರುತ್ತಿರುವ, ಹಲುಬುತ್ತಿರುವ ಯಡ್ಡಿ,  ಪ್ರತಿಪಕ್ಷಗಳನ್ನು, ಸ್ವಪಕ್ಷದವರನ್ನು ಯಾವ ರೀತಿ ನಡೆಸಿಕೊಂಡರೆಂಬುದನ್ನು ಮೊದಲು  ಯೋಚಿಸಬೇಕಲ್ಲವೆ? ಪ್ರತಿಪಕ್ಷಗಳ ಕೆಲಸವೇ ತಪ್ಪು ಹುಡುಕುವುದು, ಆ ಮೂಲಕ ಸರ್ಕಾರವನ್ನು  ಹದ್ದುಬಸ್ತಿನಲ್ಲಿಡುವುದು. ಅದರ ಬಗ್ಗೆ ಅಸಹನೆ ಬೆಳೆಸಿಕೊಂಡರೆ ಗತಿಯೇನು? ನೀವೇನೇ ಹೇಳಿ,  ಉಪಮುಖ್ಯಮಂತ್ರಿಯಾಗಿದ್ದ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯನವರು ಒಬ್ಬ ಒಳ್ಳೆಯ ಆಡಳಿತಗಾರ,  ದೂರದೃಷ್ಟಿ ಹೊಂದಿರುವ ವ್ಯಕ್ತಿ. ಯಡಿಯೂರಪ್ಪನವರು 4 ಬಜೆಟ್ ಮಂಡಿಸಿದ್ದರೂ ‘ಮಿಗತೆ’(ಸರ್ಪ್ಲಸ್)  ಬಜೆಟ್ ಮಂಡಿಸಿದ ವ್ಯಕ್ತಿ ಸಿದ್ದು. ಇಂತಹ ಸಿದ್ದರಾಮಯ್ಯನವರ ವಿರುದ್ಧ ಆ ಸಿದ್ಧಲಿಂಗಸ್ವಾಮಿಯೆಂಬ  ಯಕಶ್ಚಿತ್ ವ್ಯಕ್ತಿಯನ್ನು ಛೂ ಬಿಟ್ಟು, ಇಲ್ಲಸಲ್ಲದ ಹೇಳಿಕೆ ಕೊಡಿಸಿ, ಸಿದ್ದು ಅವರ ಅವಹೇಳನಕ್ಕೆ  ಪ್ರಯತ್ನಿಸಿದ ಯಡ್ಡಿಗೆ ಪ್ರತಿಪಕ್ಷಗಳು ಯಾವ ಮರ್ಯಾದೆ ತಾನೇ ಕೊಡುತ್ತವೆ?

ಇಂತಹ ಯಡ್ಡಿಗೂ ಸದಾನಂದಗೌಡರಿಗೂ ಇರುವ ವ್ಯತ್ಯಾಸವೇನು ಗೊತ್ತೆ?

ಇಂದು ಯಡ್ಡಿ ಹೇಳಿದ ಕೂಡಲೇ ಕುರ್ಚಿ ಬಿಟ್ಟುಕೊಟ್ಟಿಲ್ಲದಿದ್ದರೂ  ಸದಾನಂದಗೌಡರು ಅಧಿಕಾರದ ಹಪಾಹಪಿ ಹೊಂದಿರುವ ವ್ಯಕ್ತಿಯಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಿಂದ  ಕೆಳಗಿಳಿದಾಗ ಕೆಎಂಎಫ್ ಅಧ್ಯಕ್ಷ ಸ್ಥಾನ ಅವರಿಗೆ ಸಿಗುತ್ತದೆಂಬ ನಿರೀಕ್ಷೆ ಇತ್ತು. ಆದರೆ ಸೋಮಶೇಖರ  ರೆಡ್ಡಿ ಬಿಟ್ಟುಕೊಡಲಿಲ್ಲ. ಹಾಗಂತ ಸದಾನಂದಗೌಡರು ಯಡ್ಡಿಯಂತೆ ಕ್ಯಾತೆ ತೆಗೆಯಲ್ಲ. ಹಾಗಂತ ಸದಾನಂದ  ಗೌಡರು ಒಬ್ಬ ದೊಡ್ಡ ನಾಯಕ, ವರ್ಚಸ್ವಿ ನೇತಾರ ಎಂದು ಹೇಳುತ್ತಿಲ್ಲ. ಯಡ್ಡಿ ಇತ್ತೀಚೆಗೆ ಅವರನ್ನು  ಪದಚ್ಯುತಗೊಳಿಸಲು ಮುಂದಾದಾಗ ಒಕ್ಕಲಿಗ ಸಂಘದ ಗೋಸುಂಬೆಗಳು ಪ್ರತಿಭಟಿಸುವುದಾಗಿ ಎಚ್ಚರಿಕೆ  ನೀಡಿದರೂ ಸದಾನಂದಗೌಡರು ಪ್ರಭಾವಿ ಒಕ್ಕಲಿಗ ನಾಯಕ ಖಂಡಿತ ಅಲ್ಲ, ಅವರಿಗೆ ಜಾತಿ ಬೆಂಬಲವೂ ಇಲ್ಲ.  ಆದರೆ ಸದಾನಂದಗೌಡರು ಒಬ್ಬ ಒಳ್ಳೆಯ ವ್ಯಕ್ತಿ. ‘ಅವರು ಎಮ್ಮೆಲ್ಲೆ ಆಗುವಾಗ ಹೇಗಿದ್ದರೋ  ಮುಖ್ಯಮಂತ್ರಿಯಾದಾಗಲೂ ಹಾಗೆಯೇ ಇದ್ದಾರೆ. ಸ್ವಲ್ಪ ಕೂಡ ಬದಲಾಗಿಲ್ಲ’ ಎಂದು ಪುತ್ತೂರಿನಲ್ಲಿರುವ  ಅವರ ವೈಯಕ್ತಿಕ ದಂತವೈದ್ಯರಾದ ಶ್ರೀಕೃಷ್ಣ ಭಟ್ ಹಾಗೂ ಅವರ ಪತ್ನಿ ಲಲಿತಾ ಭಟ್ಟರು ಹೇಳುತ್ತಾರೆ.  ಇದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ. ಅವರ ದೊಡ್ಡ ಸಾಮರ್ಥ್ಯವೆಂದರೆ ನಡೆದುಬಂದ ಹಾದಿಯನ್ನು  ಮರೆಯದೇ ಇರುವುದು ಹಾಗೂ ಖಜ್ಛಜಠಡ್ಝಿಢಜ ಟ್ಝಟಿಜಡಜಡಿ, ಸ್ವೀಕರಿಸುವ ಮನೋಭಾವ. ಏಪ್ರಿಲ್ 1ರಂದು  ಜಾರಿಗೆ ಬಂದ ‘ಸಕಾಲ’ ಯೋಜನೆಯನ್ನೇ ತೆಗೆದುಕೊಳ್ಳಿ. ಇಂಥದ್ದೊಂದು ಯೋಜನೆಯನ್ನು ಜಾರಿಗೆ ತಂದು,  ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಪ್ರಸ್ತಾವವನ್ನು ಕಾನೂನು ಸಚಿವ ಸುರೇಶ್ ಕುಮಾರ್ ಮುಂದಿಟ್ಟಾಗ  ಸದಾನಂದಗೌಡರು ಆಸಕ್ತಿ ತೋರಿದ್ದು ಮಾತ್ರವಲ್ಲ, ಕಾರ್ಯಪ್ರವೃತ್ತರಾಗುವುದಕ್ಕೆ ಹಸಿರು  ನಿಶಾನೆಯನ್ನೂ ತೋರಿದರು. ಈ ‘ಸಕಾಲ’ ಮತ್ತೀನ್ನೇನೂ ಅಲ್ಲ, ಅಣ್ಣಾ ಹಜಾರೆ ಜಾರಿಗೆ ತರಬೇಕೆಂದು  ಒತ್ತಾಯಿಸುತ್ತರುವ ‘ಸಿಟಿಝೆನ್ಸ್ ಚಾರ್ಟರ್್’. ಸುರೇಶ್ ಕುಮಾರ್ ಬಹಳ ಶ್ರಮಪಟ್ಟು ಇಡೀ  ಯೋಜನೆಯನ್ನು ಸಿದ್ದಪಡಿಸಿದರು, ಸದಾನಂದಗೌಡರು ಜಾರಿಗೆ ತಂದಿದ್ದಾರೆ. ಇದರಿಂದಾಗಿ 120ಕ್ಕೂ  ಹೆಚ್ಚು ಸೇವೆಗಳು ಜನರಿಗೆ ನಿರ್ದಿಷ್ಟ ಕಾಲಾವಧಿಯಲ್ಲಿ, ಲಂಚದ ಹಾವಳಿಯಿಲ್ಲದೆ ದೊರೆಯುತ್ತವೆ.  ಸದಾನಂದಗೌಡರು ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಇಂಥ ಅದ್ಭುತ ಯೋಜನೆಯನ್ನು ಜಾರಿಗೆ ತಂದರು.  ಯಡ್ಡಿಯ ಮೂರೂವರೇ ವರ್ಷದ ಆಡಳಿತದಲ್ಲಿ ಇಂಥ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದ ಒಂದು ಉದಾಹರಣೆ  ಕೊಡಿ ನೋಡೋಣ? ಇದೇ ಯೋಜನೆಯ ಪ್ರಸ್ತಾವವನ್ನಿಟ್ಟುಕೊಂಡು ಯಡ್ಡಿ ಬಳಿಗೆ ಹೋಗಿದ್ದರೆ ಬಹುಶಃ  ತನಗೆಷ್ಟು ಬರುತ್ತದೆ ಎಂದು ಕೇಳುತ್ತಿದ್ದರೇನೋ! ಇಂತಹವುಗಳನ್ನು ಚರ್ಚಿಸಲು ಯಡ್ಡಿಗೆ  ವ್ಯವಧಾನವಾದರೂ ಯಾವಾಗ ಇತ್ತು ಹೇಳಿ?

ಸದಾನಂದಗೌಡರಲ್ಲಿ ಆಡಳಿತದ ಅನುಭವ ಖಂಡಿತ ಇಲ್ಲ. ಹಾಗಾಗಿ ಅವರಲ್ಲಿ  ದೂರದೃಷ್ಟಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಏನಾದರೂ ಬದಲಾವಣೆ ತರಬೇಕೆಂಬ, ಒಳ್ಳೆಯದೇನಾದರೂ  ಮಾಡಬೇಕೆಂಬ ಮನಸ್ಥಿತಿಯಂತೂ ಇದೆ. ಆಡಳಿತ ಪಕ್ಷದ ಪ್ರಾಮಾಣಿಕತೆಯ ಬಗ್ಗೆಯೇ ಜನರಲ್ಲಿ ಅನುಮಾನಗಳು  ಮೂಡಿವೆ ಎಂಬ ಕಾರಣಕ್ಕೆ ವಿಧಾನಸೌಧದ ಚಟುವಟಿಕೆಯ ನೇರ ಪ್ರಸಾರ ಆರಂಭಿಸಿದರು. ಅವರಲ್ಲಿ ಎದ್ದು  ಕಾಣುವ ಮತ್ತೊಂದು ಗುಣವೆಂದರೆ ಸಾರ್ವಜನಿಕ ಸಂಪರ್ಕ ಕಲೆ. ಕುಮಾರಸ್ವಾಮಿಯವರು  ಮುಖ್ಯಮಂತ್ರಿಯಾಗಿದ್ದಾಗ ಹೇಗೆ ತಮ್ಮ ವರ್ತನೆಯಿಂದ ಜನರಿಗೆ ಆಪ್ತರಾಗಿದ್ದರೋ ಸದಾನಂದಗೌಡರನ್ನು  ಕಂಡರೂ ಅದೇ ತೆರನಾದ ವಿಶ್ವಾಸ, ಭರವಸೆ ಮೂಡುತ್ತದೆ. ಅವರ ವರ್ತನೆಯನ್ನು ನೋಡಿದರೇ ಅಪ್ರೋಚೆಬಲ್  ಎನಿಸುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಾರೆ. ಇದಕ್ಕೆ  ತದ್ವಿರುದ್ಧವಾಗಿ, ಉರಿಪಿಂಡದಂತೆ ಯಡ್ಡಿ ವರ್ತಿಸುತ್ತಿದ್ದರು. ಕಳೆದ 2 ಅಧಿವೇಶನಗಳನ್ನೇ  ತೆಗೆದುಕೊಳ್ಳಿ, ಪ್ರತಿಪಕ್ಷಗಳು ಎರಗಿ ಬಂದಾಗಲೆಲ್ಲ ಮುಖ್ಯಮಂತ್ರಿ ಸದಾನಂದಗೌಡರು ಯಡ್ಡಿಯಂತೆ  ಪ್ರತಿದಾಳಿ ಮಾಡುವ ಬದಲು, ‘ಹಳೆಯದ್ದೆಲ್ಲ ಬಿಟ್ಟು ಬಿಡಿ, ನಾವು ಒಟ್ಟು ಸೇರಿ ಒಳ್ಳೆಯ ಕೆಲಸ  ಮಾಡೋಣ’ ಎನ್ನುವ ಮೂಲಕ ತಣ್ಣಗಾಗಿಸುತ್ತಾರೆ. ಅಟಲ್್ಜಿಯವರಲ್ಲೂ ಇದೇ ಗುಣವಿತ್ತು. ಹಾಗಾಗಿ ಆಡಳಿತ  ಸುಸೂತ್ರವಾಗಿ ನಡೆಯುತ್ತಿದೆಯೇ ಹೊರತು ಜೆಡಿಎಸ್, ಕಾಂಗ್ರೆಸ್ ಮೃದು ಧೋರಣೆ ತೋರಿವೆ ಎಂಬುದು  ಸುಳ್ಳು. ಇಷ್ಟಕ್ಕೂ ಯಡಿಯೂರಪ್ಪನವರು ಇರುವಾಗ ಸದಾನಂದಗೌಡರಿಗೆ ವಿರೋಧ ಪಕ್ಷಗಳೇಕೆ ಬೇಕು?  ಒಳ್ಳೆಯದನ್ನು ಮಾಡುವುದಕಾಗುತ್ತದೋ ಇಲ್ಲವೋ, ಆದರೆ ಎ್ಟ್ಟಜ ಐಟಿಡಿಜಟಿಡ್ಝ್ಟಿಟಿಡ ಇರಬೇಕು. ಅದು  ಸದಾನಂದಗೌಡರಲ್ಲಿ ಕಾಣುತ್ತದೆ.

ಇದೇನೇ ಇದ್ದರೂ, ಎಲ್ಲ ದೌರ್ಬಲ್ಯಗಳ ನಡುವೆಯೂ ಯಡಿಯೂರಪ್ಪನವರು ಒಬ್ಬ  ಪ್ರಭಾವಿ ನಾಯಕ, ಮಾಸ್ ಲೀಡರ್. ಸದ್ಗುಣಗಳು ಎಷ್ಟೇ ಇದ್ದರೂ ಸದಾನಂದಗೌಡರಿಗೆ ಪಕ್ಷಕ್ಕೆ ವೋಟು  ತಂದುಕೊಡುವ ಸಾಮರ್ಥ್ಯವಿಲ್ಲ. ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಹಾಸನದ ಗೌಡರು  ಚುನಾವಣೆಯಲ್ಲಿ ಕೃಷ್ಣ ಅಥವಾ ದೇವೇಗೌಡರಿಗೆ ವೋಟು ಹಾಕುತ್ತಾರೆಯೇ ಹೊರತು ಸದಾನಂದಗೌಡರನ್ನು ತಮ್ಮ  ನಾಯಕರೆಂದು ಒಪ್ಪಿಕೊಳ್ಳುವುದಿಲ್ಲ. ಆದರೆ ವರ್ಚಸ್ಸು, ಬೆನ್ನಿಗೆ ಜಾತಿ ಬೆಂಬಲ ಇಟ್ಟುಕೊಂಡಿರುವ  ಯಡಿಯೂರಪ್ಪನವರಿಗಷ್ಟೇ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಇದೆ. ಪಕ್ಷದ ಹಿತದೃಷ್ಟಿಯಿಂದ  ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು.ಆದರೆ ಅದಕ್ಕಾಗಿ ಅವರು ಹಿಡಿದಿರುವ ಮಾರ್ಗ  ಮಾತ್ರ ಹೇಸಿಗೆ ಹುಟ್ಟಿಸುತ್ತಿದೆ. ‘ನಾನು ಅಧಿಕಾರದಲ್ಲಿದ್ದಾಗ ಮಳೆ ಚೆನ್ನಾಗಿ ಆಗುತ್ತಿತ್ತು,  ನಾನಿಲ್ಲದ ಕಾರಣ ಬರ ಎದುರಾಗಿದೆ’ ಎಂಬ ಚಿಲ್ಲರೆ ಮಾತುಗಳನ್ನು, ಸಣ್ಣತನವನ್ನು  ಬಿಡಬೇಕು. ಅಟಲ್  ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ 2001ರಿಂದ 2003ರವರೆಗೂ ಸತತ 3 ವರ್ಷ ಬರಗಾಲ  ಎದುರಾಗಿತ್ತು. ಇತ್ತ ರಾಜ್ಯದಲ್ಲೂ ಬರ ಎದುರಾಗಿತ್ತು. ಅವುಗಳ ನಡುವೆಯೂ ಕೇಂದ್ರದಲ್ಲಿ ವಾಜಪೇಯಿ  ಒಳ್ಳೆಯ ಕೆಲಸ ಮಾಡಿದರು, ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ವಿತ್ತೀಯ  ಹೊಣೆಗಾರಿಕೆ ಕಾಯಿದೆ, ಕರ್ನಾಟಕ ಬೆವರೇಜಸ್ ಕಾರ್ಪೊರೇಶನ್, ಭೂಮಿ ಯೋಜನೆ, ಐಟಿಗೆ ಉತ್ತೇಜನದಂಥ  ಅದ್ಭುತ ಕೆಲಸ ಮಾಡಿದ್ದರು. 2004ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ  ರಾಷ್ಟ್ರಾದ್ಯಂತ ಒಳ್ಳೆಯ ಮಳೆಯಾಗುತ್ತಿದೆ. ಅಂದಮಾತ್ರಕ್ಕೆ ಕಾಂಗ್ರೆಸ್ ಒಳ್ಳೆಯ ಆಡಳಿತ  ನೀಡುತ್ತಿದೆ ಎನ್ನಲು ಸಾಧ್ಯವೇ? ಇನ್ನು ಈ ಆಣೆ, ಪ್ರಮಾಣ, ವಾಗ್ದಾನದ ಕಥೆಯನ್ನು ಯಡ್ಡಿ ಮೊದಲು  ನಿಲ್ಲಿಸಬೇಕು. ರೈತನ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ರೈತರ ಮೇಲೆ ಗೋಲಿಬಾರ್ ಮಾಡಿಸಿದ  ಯಡಿಯೂರಪ್ಪನವರು ಆಣೆಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲವೇ? ಇಷ್ಟಾಗಿಯೂ,   ತಮ್ಮ ದಾಹ ತೀರಿಸಿಕೊಳ್ಳವುದಕ್ಕಲ್ಲ, ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಕಾರಣಕ್ಕೆ ಅಧಿಕಾರ  ಬೇಕು ಎಂಬ ಭಾವನೆಯನ್ನು ಯಡ್ಡಿ ಮೂಡಿಸಬೇಕು. ಸದಾನಂದಗೌಡರನ್ನು ಸಾರ್ವಜನಿಕವಾಗಿ ಹೀಗಳೆಯುವುದು,  ಟೀಕಿಸುವುದನ್ನು ಬಿಟ್ಟು ಅವರಲ್ಲಿರುವ ಜನಪರ ಕಾಳಜಿಯನ್ನು ರೂಢಿಸಿಕೊಳ್ಳಬೇಕು. ಏನಂತೀರಿ?

ಬಿದರಿ ಸದ್ದಾಂ ಆದರೆ, ಸೇನಾ ನಾಯಕರನ್ನು ಯಾರಿಗೆ ಹೋಲಿಸುತ್ತೀರಿ?
ಗೃಹ ಸಚಿವ ಪಿ. ಚಿದಂಬರಂ ಅವರಿಗೇ ದಿಗ್ಭ್ರಮೆಯುಂಟಾಗಿದೆ! ಪ್ರತಿಕ್ರಿಯೆ  ಕೇಳಿದರೆ, ‘ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ವಿಚಾರದ ಬಗ್ಗೆ ಹೇಗೆ ತಾನೇ  ಪ್ರತಿಕ್ರಿಯಿಸಲಿ? ಆದರೆ… ಹೈಕೋರ್ಟ್್ನಂಥ ನ್ಯಾಯದಂಗಳದ ತೀರ್ಪಿನಲ್ಲಿ ಈ ರೀತಿಯ ಹೋಲಿಕೆ  ಮಾಡಿರುವುದು ದುರದೃಷ್ಟಕರ’ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ತಕರಾರೂ  ಅದೇ. ಈ ಕ್ಷಣಕ್ಕೆ ಕರ್ನಾಟಕದ ಒಬ್ಬ ಸಾಮಾನ್ಯ ಮನುಷ್ಯನ ಮನವನ್ನೂ ಕಾಡುತ್ತಿರುವುದೂ ಇದೇ ವಿಷಯ.  ಹಾಗಂತ ಯಾರೂ ತೀರ್ಪಿನ ಬಗ್ಗೆ ಅಸಮಾಧಾನವನ್ನಾಗಲಿ, ಅಪಸ್ವರವನ್ನಾಗಲಿ ಎತ್ತುತ್ತಿಲ್ಲ. ಆದರೆ  ತೀರ್ಪು ನೀಡುವಾಗ ಬಳಸಿರುವ ಭಾಷೆ, ಮಾಡಿರುವ ಟೀಕೆ-ಟಿಪ್ಪಣಿಗಳು ಯಾವ ಮಟ್ಟದ್ದಾಗಿವೆ?

ಸಿಎಟಿ ಆದೇಶಕ್ಕೆ ತಡೆಕೋರಿ ಶಂಕರ್ ಬಿದರಿ ಹಾಗೂ ಸರ್ಕಾರ ಸಲ್ಲಿಸಿದ್ದ  ಮೇಲ್ಮನವಿಯನ್ನು ವಜಾಮಾಡಿದ ಹೈಕೋರ್ಟ್್ನ ವಿಭಾಗೀಯ ಪೀಠ, ‘ಬಿದರಿ ನೇತೃತ್ವದ ವಿಶೇಷ  ಕಾರ್ಯಪಡೆ(ಎಸ್್ಟಿಎಫ್) ಎಸಗಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ನ್ಯಾ. ಎ.ಜೆ. ಸದಾಶಿವ ನೇತೃತ್ವದ  ವಿಚಾರಣಾ ಆಯೋಗದ ಮುಂದೆ ಬುಡಕಟ್ಟು ಮಹಿಳೆಯರು ನೀಡಿರುವ ಅಫಿಡವಿಟ್್ಗಳು ನಿಜವೆಂದಾದರೆ ಶಂಕರ್  ಬಿದರಿ ಲಿಬಿಯಾದ ಸರ್ವಾಧಿಕಾರಿ ಕರ್ನಲ್ ಗಡಾಫಿ ಹಾಗೂ ಇರಾಕ್್ನ ಸದ್ದಾಂ ಹುಸೇನ್್ಗಿಂತ ಕಡೆ,  ಕೀಳು’ ಎಂದಿದೆ!

ಇಂಥದ್ದೊಂದು ಹೋಲಿಕೆಯನ್ನು ಮಾಡಲೇಬೇಕಾದ ಅಗತ್ಯವಾದರೂ ಏನಿತ್ತು ಹೇಳಿ?

ನಲವತ್ತೊಂದು ವರ್ಷಗಳ ಕಾಲ ಲಿಬಿಯಾವನ್ನು ತನ್ನ  ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಗಡಾಫಿಯಿಂದ ಹತ್ಯೆಗೊಳಗಾದವರ ಸಂಖ್ಯೆ ಲೆಕ್ಕಕ್ಕೇ ಸಿಗುವುದಿಲ್ಲ.  ಜನರ ಧ್ವನಿಯನ್ನೇ ಉಡುಗಿಸಿದ್ದ, ಪ್ರಜಾತಂತ್ರವನ್ನೇ ಕೊಲೆಗೈದಿದ್ದ, ಸ್ವಂತ ಸುಖಕ್ಕೆ ದೇಶವನ್ನೇ  ಭೋಗಕ್ಕಿಟ್ಟುಕೊಂಡಿದ್ದ, ವಿರೋಧಿಗಳನ್ನು ನಿರ್ದಯವಾಗಿ ಮಟ್ಟಹಾಕಿದ ಪಾತಕಿ ಆತ. ಇನ್ನು 24 ವರ್ಷ  ಇರಾಕನ್ನಾಳಿದ ಸದ್ದಾಂ ಹುಸೇನ್ ಹುಚ್ಚಾಟಕ್ಕೆ ತುತ್ತಾದ ಕುರ್ದಿಶ್ ಮುಸ್ಲಿಮರ ಸಂಖ್ಯೆ 2 ಲಕ್ಷ!  ಇರಾನ್ ಮೇಲೆ ಯುದ್ದ ಸಾರಿದಾಗ ಸತ್ತವರ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು. ಒಟ್ಟು ಇಪ್ಪತ್ತು  ಲಕ್ಷಕ್ಕೂ ಹೆಚ್ಚು ಜನರ ಮಾರಣಹೋಮಕ್ಕೆ ಕಾರಣರಾದ ಆರೋಪ ಅವರ ಮೇಲಿದೆ. ಮುಸ್ಲಿಂ ರಾಷ್ಟ್ರವೇ ಆದರೂ  ಕುವೈತನ್ನು ಕಬಳಿಸಿ ಅಪಾರ ಸಾವು ನೋವಿಗೆ ಕಾರಣರಾದ, ಸ್ವಂತ ಅಳಿಯಂದಿರನ್ನೇ ಕೊಲ್ಲಿಸಿದ್ದ ಸದ್ದಾಂ  ಹುಸೇನ್ ಈ ಮನುಕುಲ ಕಂಡ ಮಹಾನ್ ಪಾಪಿಗಳಲ್ಲಿ ಒಬ್ಬ. ಇಂತಹ ವ್ಯಕ್ತಿಗಳ ಜತೆ ವೀರಪ್ಪನ್್ನ  ಜಂಘಾಬಲವನ್ನೇ ಉಡುಗಿಸಿದ, ರಾಜ್ಯದ ಸಂಪತ್ತಿನ ಲೂಟಿಯನ್ನು ನಿಲ್ಲಿಸಿದ, 4 ಬಾರಿ ರಾಷ್ಟ್ರಪತಿ ಪದಕ  ಪಡೆದ, ಕಾರ್ಯದಕ್ಷತೆಗೆ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿರುವ ಶಂಕರ್ ಮಹಾದೇವ ಬಿದರಿಯವರನ್ನು  ಹೋಲಿಸಿದ್ದು ಎಷ್ಟು ಸರಿ? ಸದ್ದಾಂ, ಗಡಾಫಿ ಮಾಡಿದಂಥ ಯಾವ ಪಾಪ ಕಾರ್ಯವನ್ನು ಬಿದರಿ ಎಸಗಿದ್ದಾರೆ?  ಖಂಡಿತ Words are free.. ಪದಗಳು  ಪುಕ್ಕಟೆಯಾಗಿ ಸಿಗುತ್ತವೆ ಅಂತ ಏನು ಬೇಕಾದರೂ ಮಾತನಾಡಬಹುದೇ?

ಸುಪ್ರೀಂಕೋರ್ಟ್್ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕೆ.ಜಿ.ಬಾಲಕೃಷ್ಣನ್,  ವೈ.ಕೆ. ಸಬರ್್ವಾಲ್್ರಂಥವರ ನ್ಯಾಯಪರತೆ, ಸಮಗ್ರತೆ, ವಿಶ್ವಾಸಾರ್ಹತೆಯ ಬಗ್ಗೆಯೇ  ಅನುಮಾನಗಳೆದಿದ್ದರೂ ನಮ್ಮ ಸಮಾಜ ನ್ಯಾಯಾಲಯಗಳ ಬಗ್ಗೆ ದೈವೀ ಭಾವನೆ, ಗೌರವ, ವಿಶ್ವಾಸವನ್ನು  ಹೊಂದಿದೆ.

ನ್ಯಾಯಾಲಯಗಳಿಂದ ಬಂದಿದ್ದಷ್ಟೇ “ವೇದವಾಕ್ಯ”ವಾಗುತ್ತದೆ, ಆದರೆ ನಮ್ಮ  ಹೈಕೋರ್ಟ್ ವಿಭಾಗೀಯ ಪೀಠದ ಮಾತುಗಳನ್ನು ವೇದವಾಕ್ಯಗಳೆಂಬಂತೆ ಕಾಣಲು, ಆದರ್ಶವಾಗಿಟ್ಟುಕೊಳ್ಳಲು  ಸಾಧ್ಯವೆ? ನ್ಯಾಯಾಲಯಗಳು ಮೇಲ್ಪಂಕ್ತಿ ಹಾಕಿಕೊಡುವುದನ್ನು ಬಿಟ್ಟು ತಮ್ಮ ಭಾಷೆಯನ್ನು  ಲೇಮ್ಯಾನ್  ಮಟ್ಟಕ್ಕೆ ಇಳಿಸಿಕೊಳ್ಳಲು ಹೊರಟರೆ ಸಮಾಜಕ್ಕೆ ಯಾವ ಸಂದೇಶ ದೊರೆಯುತ್ತದೆ?

ಹಾಗಂತ ನಾವ್ಯಾರೂ ತೀರ್ಪನ್ನು ಪ್ರಶ್ನಿಸುತ್ತಿಲ್ಲ. ಆದರೆ ತೀರ್ಪು  ನೀಡುವಾಗ ಮಾಡಿರುವ ಟಿಪ್ಪಣಿ, ಅದರ ಹಿಂದಿರುವ ಧ್ವನಿ, “ದೃಷ್ಟಿ”ಕೋನ, ಇಂಗಿತ ಎಂಥದ್ದು? ಇಂಥ  ಹೋಲಿಕೆಗಳು ಇಡೀ ತೀರ್ಪಿಗೆ ನಂಜನ್ನು ಅಂಟಿಸುವುದಿಲ್ಲವೆ? “ನಾನೇನು ಸರ್ವಾಧಿಕಾರ ಮೆರೆದಿರಲಿಲ್ಲ.  ವೀರಪ್ಪನ್ ಕಾರ್ಯಾಚರಣೆ ವೇಳೆ ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದರೆ ನನ್ನೊಂದಿಗಿದ್ದ  ಎಡಿಜಿಪಿ, ಡಿಸಿಪಿಗಳೂ ಸಮಾನ ಪಾಲುದಾರರಾಗುತ್ತಾರೆ” ಎಂದು ಬಿದರಿಯವರು ಮಾಡಿಕೊಂಡಿದ್ದ ಸಮರ್ಥನೆಯ  ಬಗ್ಗೆ ಕಿಡಿ ಕಾರುತ್ತಾ, “ಇದು ಬಿದರಿ ಮನಸ್ಥಿತಿಯ ಪ್ರತಿಬಿಂಬ. ಅವರಿಗೆ ಪಾಪಪ್ರಜ್ಞೆಯೇ  ಕಾಡುತ್ತಿಲ್ಲ. ಬಡವರು, ಅಸಹಾಯಕರ ಬಗ್ಗೆ ಕನಿಕರವಿಲ್ಲದವರು ಗಡಾಫಿಗಿಂತ ಹೀನ. ಇಂತಹ ವ್ಯಕ್ತಿಗಳು  ಪೊಲೀಸ್ ವ್ಯವಸ್ಥೆಯ ನೇತೃತ್ವ ವಹಿಸಲು ಅರ್ಹರಲ್ಲ” ಎಂದಿದೆ!

ಒಂದು ವೇಳೆ ಇದೇ ತರ್ಕವನ್ನು ಇಟ್ಟುಕೊಂಡು ಹೋದರೆ ಕಾಶ್ಮೀರದಲ್ಲಿ,  ಮಣಿಪುರದಲ್ಲಿ ನಮ್ಮ ಸೇನಾಪಡೆಗಳ ಮೇಲೂ ಇದೇ ತೆರನಾದ ಆರೋಪಗಳಿವೆ. ಕಾಶ್ಮೀರದಲ್ಲಿ ಅಮಾಯಕರು  ಬಲಿಪಶುಗಳಾದ ನೂರಾರು ಉದಾಹರಣೆಗಳಿವೆ, ಅಲ್ಲೂ ಸೈನಿಕರಿಂದ ಅತ್ಯಾಚಾರಗಳು ನಡೆದಿವೆ, ಇಂದಿಗೂ  ನಡೆಯುತ್ತಲೇ ಇವೆ. ಹಾಗೆ ಆದ ತಪ್ಪುಗಳಿಗೆಲ್ಲ ಸೇನಾ ಮುಖ್ಯಸ್ಥರನ್ನು ಹೊಣೆ  ಮಾಡುವುದಕ್ಕಾಗುತ್ತದೆಯೇ? ಮಣಿಪುರದಲ್ಲಿ ಸೇನೆಯಿಂದ ನಡೆಯುತ್ತಿರುವ ದೌರ್ಜನ್ಯ ಹಾಗೂ ಸೇನೆಗೆ  ಸರ್ವಾಧಿಕಾರ ಕೊಟ್ಟಿರುವ 1958ರ ವಿಶೇಷ ಕಾಯಿದೆಯನ್ನು(AFSPA) ಹಿಂದೆ ತೆಗೆದುಕೊಳ್ಳುವಂತೆ ಎರಡು ದಿನಗಳ ಹಿಂದಷ್ಟೇ ವಿಶ್ವಸಂಸ್ಥೆಯೇ ಭಾರತವನ್ನು ಒತ್ತಾಯಿಸಿದೆ.  ಇದಕ್ಕೆಲ್ಲ ಯಾರನ್ನು ಹೊಣೆ ಮಾಡಬೇಕು? 1990ರ ದಶಕದಲ್ಲಂತೂ ಪ್ರತಿವರ್ಷವೂ ಅಂತಾರಾಷ್ಟ್ರೀಯ ಮಾನವ  ಹಕ್ಕು ಸಂಸ್ಥೆ “ಅಮ್ನೆಸ್ಟಿ ಇಂಟರ್್ನ್ಯಾಷನಲ್್” ಕಾಶ್ಮೀರದಲ್ಲಿ ಸೇನೆಯಿಂದ ಮಾನವಹಕ್ಕು  ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸುತ್ತಿತ್ತು. ಹಾಗಾದರೆ ನಮ್ಮ ಸೇನಾ ಜನರಲ್್ಗಳನ್ನೂ ಸದ್ದಾಂ,  ಗಡಾಫಿಗೆ ಹೋಲಿಸುತ್ತೀರಾ? ಇನ್ನು ಮೂರೂ ಪಡೆಗಳ ಸುಪ್ರೀಂ ಕಮಾಂಡರ್ ಆದ ರಾಷ್ಟ್ರಪತಿಯವರನ್ನು  ಯಾರಿಗೆ ಹೋಲಿಸಬೇಕು? ವಿಭಾಗೀಯ ಪೀಠದ ಮಾತುಗಳನ್ನೇ ಮಾನದಂಡವಾಗಿಟ್ಟುಕೊಂಡು ಹೋದರೆ ಕಾಶ್ಮೀರದಲ್ಲಿ  ಸೇವೆ ಸಲ್ಲಿಸುವ ಮೇಜರ್ ಜನರಲ್್ಗಳು ಎಷ್ಟೇ ಯೋಗ್ಯತೆ, ಅರ್ಹತೆ ಇದ್ದರೂ ಆರ್ಮಿಯ ಜನರಲ್ ಆಗಲು  ಸಾಧ್ಯವಿಲ್ಲ ಅಲ್ಲವೆ? ಇಂದು ಸೇನಾ ಪಡೆಗಳ ಮುಖ್ಯಸ್ಥರ ಆಯ್ಕೆಯಲ್ಲೂ ಸೇವಾ ಹಿರಿತನವೊಂದೇ  ಮಾನದಂಡವಲ್ಲ. ದಕ್ಷತೆ ಹಾಗೂ ಸಮರ್ಥತೆಗೆ ಹೆಚ್ಚಿನ ಆದ್ಯತೆಗಳನ್ನು ನೀಡುತ್ತಾರೆ. ಈ  ಹಿನ್ನೆಲೆಯಲ್ಲಿ ಯೋಚಿಸಿದರೆ ಬಿದರಿಯವರಿಗಿಂತ ಸಮರ್ಥ ವ್ಯಕ್ತಿ ಯಾರಿದ್ದಾರೆ? ಡಿಜಿ ಆಯ್ಕೆಯಲ್ಲಿ  ಅಂತಿಮ ನಿರ್ಧಾರ ಯಾವತ್ತೂ ಆಳುವ ಸರ್ಕಾರದ ಕೈಯಲ್ಲಿರುತ್ತದೆ. ದೇಶದ ಮೊದಲ ಮಹಿಳಾ ಐಪಿಎಸ್  ಅಧಿಕಾರಿ ಕಿರಣ್ ಬೇಡಿ ದಿಲ್ಲಿ ಪೋಲಿಸ್ ಕಮಿಷನರ್ ಆಯ್ಕೆ ವೇಳೆ ತಮ್ಮನ್ನು ಕಡೆಗಣಿಸಲಾಗಿದೆ ಎಂಬ  ಕಾರಣಕ್ಕೆ 2007ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡ ಉದಾಹರಣೆಯೂ ಇದೆ.

ಒಂದು ನ್ಯಾಯಾಲಯ ಕೊಟ್ಟ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ  ಪ್ರಶ್ನಿಸುವುದು ಒಂದು ಸಹಜ ಪ್ರಕ್ರಿಯೆ. ಅಲ್ಲಿ ವ್ಯತಿರಿಕ್ತವಾದ ತೀರ್ಪು ಬಂದು ಗೆದ್ದಿರುವ,  ಕೆಲವೊಮ್ಮೆ ಸೋತಿರುವ ಉದಾಹರಣೆಗಳು ಸಾಕಷ್ಟಿವೆ. ಇದಮಿತ್ಥಂ ಎಂಬುದು ಯಾವುದೂ ಇಲ್ಲ. ನಾವು  ಹೇಳಿದ್ದೇ ಸರಿ, ಸತ್ಯ ಎಂಬ ಆರೋಗೆನ್ಸ್ ನ್ಯಾಯಾಂಗಗಳಿಗೂ ಒಳಿತಲ್ಲ. ಕಳೆದ ವರ್ಷ ಬಿಜೆಪಿಯ 11  ಬಂಡಾಯ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿದ ಸ್ಪೀಕರ್ ಆದೇಶವನ್ನು ರಾಜ್ಯ ಹೈಕೋರ್ಟ್  ಎತ್ತಿಹಿಡಿದರೆ ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದಿತು. ಮೊನ್ನೆ ತಾನೇ ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪನವರ ಲಂಚ ಪ್ರಕರಣಕ್ಕೆ ಸಂಬಂಧಿಸಿದ ಕೇಸನ್ನೇ ಹೈಕೋರ್ಟ್ ವಜಾ ಮಾಡಿದರೆ, ಸುಪ್ರೀಂ  ಕೋರ್ಟ್ ನೇಮಕ ಮಾಡಿರುವ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ), ಲಂಚ ತೆಗೆದುಕೊಂಡಿರುವುದು ಖರೆ,  ಹೆಚ್ಚಿನ ತನಿಖೆಯಾಗಬೇಕು ಎಂದಿದೆ. ಹಾಗೆಯೇ ಬಿದರಿಯವರು ಸಲ್ಲಿಸಿದ ಮೇಲ್ಮನವಿಯ ಬಗ್ಗೆಯೂ ಯಾವ  ಕಾರಣಕ್ಕೆ ಡಿಜಿಯಾಗಿ ನೇಮಕ ಮಾಡಿದ್ದು ಅಸಂವಿಧಾನಿಕ ಎಂದಷ್ಟೇ ವಿವರಿಸಿದ್ದರೆ ಯಾರೂ  ಬೇಡವೆನ್ನುತ್ತಿರಲಿಲ್ಲ. ಅದನ್ನು ಬಿಟ್ಟು ಸುಖಾಸುಮ್ಮನೆ ಸದ್ದಾಂ ಹುಸೇನ್್ಗೆ ಹೋಲಿಸಿರುವುದನ್ನು  ನೋಡಿದರೆ ಉದ್ದೇಶ ಶುದ್ಧಿಯ ಬಗ್ಗೆಯೇ ಅನುಮಾನಗಳೇಳುವುದಿಲ್ಲವೆ? ನಿವೃತ್ತಿಯ ಅಂಚಿನಲ್ಲಿರುವ ಒಬ್ಬ  ದಕ್ಷ ಅಧಿಕಾರಿಯ ಚಾರಿತ್ರ್ಯಕ್ಕೇ ಕಳಂಕ ಅಂಟಿಸುವ ಉದ್ದೇಶವಿತ್ತೇನೋ ಎಂಬಂತೆ ಭಾಸವಾಗುವುದಿಲ್ಲವೆ?  1999ರಲ್ಲಿ ಕೇಂದ್ರ ಮಾನವ ಹಕ್ಕು ಆಯೋಗ ನೇಮಕ ಮಾಡಿದ್ದ, ನಿವೃತ್ತ ನ್ಯಾಯಾಧೀಶ ಎಜೆ ಸದಾಶಿವ ಹಾಗೂ  ಸಿಬಿಐನ ಮಾಜಿ ನಿರ್ದೇಶಕ ಸಿಎಲ್ ನರಸಿಂಹನ್ ಇದ್ದ ಆಯೋಗವೇ ಬಿದರಿಯವರಿಗೆ ಕ್ಲಿನ್ ಚಿಟ್  ಕೊಟ್ಟಿರುವಾಗ ಈ ಪಾಪಪ್ರಜ್ಞೆಯ ಪ್ರಶ್ನೆ ಎಲ್ಲಿಂದ ಉದ್ಭವಿಸಿತು? ಸದ್ದಾಂಗಿಂತ ಹೀನ ಎಂಬ  ವೈಯಕ್ತಿಕ ದಾಳಿಯ ಅಗತ್ಯವೇನಿತ್ತು? ಸದ್ದಾಂ, ಗಡಾಫಿಗೆ ಹೋಲಿಸುವಾಗ ಬಹುಶಃ ಇದಿ ಅಮಿನ್ ಹೆಸರು  ನೆನಪಿಗೆ ಬರಲಿಲ್ಲವೆನಿಸುತ್ತದೆ, ಇಲ್ಲವಾದರೆ ಬಿದರಿಯವರನ್ನು ಆತನಿಗೂ ಹೋಲಿಸುತ್ತಿದ್ದರೇನೋ!  ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಪಡೆದಿರುವ ಬಿದರಿಯವರಿಗೂ ನ್ಯಾಯ-ಅನ್ಯಾಯಗಳ ಅರಿವಿದೆ.  ಇಷ್ಟಕ್ಕೂ ಬಿದರಿಯವರೇನು “ಇನ್್ಫ್ಯಾಂಟ್್”(ಬಾಲಕ) ಅಲ್ಲ! ವೀರಪ್ಪನ್ ವಿರುದ್ಧದ  ಕಾರ್ಯಾಚರಣೆಯಲ್ಲಿ ಸ್ವಂತ ಪ್ರಾಣವನ್ನು ಅಪಾಯಕ್ಕೆ ಒಡ್ಡಿ ಹೋರಾಡಿದ ವ್ಯಕ್ತಿ ಅವರು.

ವೀರಪ್ಪನ್ 2000 ಆನೆಗಳನ್ನು ಸಾಯಿಸಿದ್ದ ಕ್ರೂರಿ. 250 ಕೋಟಿ ರು.ಗಳಿಗೂ  ಹೆಚ್ಚು ಅರಣ್ಯ ಲೂಟಿ ಮಾಡಿದ್ದ. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೂ  ಸಿಂಹಸ್ವಪ್ನನಾಗಿದ್ದ. ಅಂತಹ ವೀರಪ್ಪನ್್ನ ‘ಜಂಗಲ್ ರಾಜ್್’ ಅನ್ನು ನಾಶಪಡಿಸಿದ್ದೇ ಶಂಕರ್ ಬಿದರಿ.  ಇಂತಹ ಬಹದ್ದೂರಿಕೆಯನ್ನು ಗುರುತಿಸಿದ ವೀರಪ್ಪನ್್ನ ಹುಟ್ಟೂರಾದ ಗೋಪಿನಾಥಂನ ಜನರೇ ಬಿದರಿಯವರನ್ನು  ಕರೆಸಿ ಸನ್ಮಾನ ಮಾಡಿದ್ದರು. ಇವತ್ತಿಗೂ ಅಲ್ಲಿನ ಜನ ಬಿದರಿಯವರನ್ನು ಗೌರವ, ವಿಶ್ವಾಸಗಳಿಂದ  ಕಾಣುತ್ತಾರೆ. ದುರದೃಷ್ಟವಶಾತ್ ಟೀಕಿಸಲು ಹೊರಟವರಿಗೆ ಇದೆಲ್ಲಾ ಕಾಣುವುದೇ ಇಲ್ಲ.

ಇದೇನೇ ಇರಲಿ, ಅದು  ಪ್ರಜಾಪ್ರಭುತ್ವದ ಯಾವುದೇ ಅಂಗವಾಗಿರಬಹುದು, ಈ “”Holier  than thou”“ಆ್ಯಟಿಟ್ಯೂಡನ್ನು  ಬಿಡಬೇಕು. ನ್ಯಾಯಾಂಗವನ್ನೂ ಲೋಕಪಾಲದಡಿ ತರಬೇಕು ಎಂಬ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಅದರ  ಪರಿಣಾಮವಾಗಿ ಸರ್ಕಾರ “ನ್ಯಾಯಾಂಗೀಯ ಉತ್ತರದಾಯಿತ್ವ ಕಾಯಿದೆ”ಯನ್ನು ಜಾರಿಗೆ ತರಲು ಹೊರಟಿದೆ.  ಅದರಲ್ಲಿ ನ್ಯಾಯಾಧೀಶರೂ ಹತೋಟಿ ಮೀರಕೂಡದು ಎಂಬ ಎಲ್ಲೆಯನ್ನೂ ನಿಗದಿ ಪಡಿಸುತ್ತಿದ್ದಾರೆ.  ಗೊತ್ತಿದೆಯಲ್ಲವೆ?