Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!

ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬೇಕಲ್ಲವೆ? ಈ ಬಾರಿ, ಅಂದರೆ 2015ರಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬರುವುದಿಲ್ಲ, ಮಾನ್ಸೂನ್ ದುರ್ಬಲವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 2015 ಮೇನಲ್ಲಿ. ಅದಾಗಲೇ 10 ಬಾರಿ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ್ಸೂನ್ ದುರ್ಬಲವಾದರೆ, ಕೃಷಿ ಉತ್ಪನ್ನ ಕಡಿಮೆಯಾದರೆ ರಾಜ್ಯದ ಅರ್ಥವ್ಯವಸ್ಥೆ, ಹಣಕಾಸು ಸ್ಥಿತಿ ಮೇಲೆ ಆಗುವ ದುಷ್ಪರಿಣಾಮ, ಬೊಕ್ಕಸದ ಮೇಲಿನ ಹೊರೆ ಹಾಗೂ ಬಡವರ ಹೊಟ್ಟೆ ಮೇಲಿನ ಬರೆಯ ಅಂದಾಜು ಆಗಲೇಬೇಕು ತಾನೇ? ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗಿದ್ದಾಗ ಇಂತಹ ಪ್ರಕೃತಿಯ ಏರುಪೇರುಗಳು, ವಿಕೋಪಗಳು ಹಾಗೂ ತುರ್ತು ಸನ್ನಿವೇಶಗಳು ಸಂಭವಿಸಿದರೆ ಕೂಡಲೇ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕಾಗಿಯೇ ಒಂದು ಆವರ್ತ ನಿಧಿಯನ್ನು ಸ್ಥಾಪನೆ ಮಾಡಿ 500 ಕೋಟಿಯನ್ನು ಕಾಪಿಟ್ಟಿದ್ದರು. ಕೇಂದ್ರ ಸರ್ಕಾರ ಅಕ್ಕಿ, ಜೋಳಕ್ಕೆ 1350 ರೂ. ಬೆಂಬಲ ಬೆಲೆಯನ್ನು ಕೊಟ್ಟಾಗ, ಅದು ಸಾಕಾಗುವುದಿಲ್ಲ ಎಂದು ರಾಜ್ಯದ ಬೊಕ್ಕಸದಿಂದ ಕ್ವಿಂಟಾಲ್ಗೆ 150 ರೂ. ಸೇರಿಸಿ 1500 ಕೊಟ್ಟು ರೈತನ ನೋವಿಗೆ ಸ್ಪಂದಿಸಿದ್ದರು. ಇನ್ನು ಹೇಳಿ ಕೇಳಿ 10 ಬಜೆಟ್ ಮಂಡಿಸಿದ ವ್ಯಕ್ತಿಗೆ, ಜತೆಗೆ ಎರಡು ಬಾರಿ ಉಪಮುಖ್ಯಮಂತ್ರಿಯೂ ಆಗಿ ದೀರ್ಘ ಅನುಭವವಿದ್ದ ಸಿದ್ದರಾಮಯ್ಯನವರಿಗೆ ಇನ್ನೆಷ್ಟು ದೂರದೃಷ್ಟಿ, ಜಾಗರೂಕತೆ ಇರಬೇಕು ಹೇಳಿ? ರಾಜ್ಯ ತುರ್ತು ವಿಕೋಪ ಪರಿಹಾರ ನಿಧಿ(ಎಸ್ ಡಿಅರ್ ಎಫ್ )ಗೆ ಒಂದಷ್ಟು ದುಡ್ಡು ಹಾಕಿ, ಕೇಂದ್ರ ಸರ್ಕಾರದ ಪಾಲನ್ನು ಪಡೆದುಕೊಂಡು ಸನ್ನದ್ಧವಾಗಿ ಇರಬೇಕಿತ್ತು ತಾನೇ?

ಆದರೆ ಸಿದ್ದರಾಮಯ್ಯನವರು ಮಾಡಿದ್ದೇನು? ಮಂಡ್ಯದಲ್ಲಿ ತಾನೇ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿಯಿಟ್ಟು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಕಳೆದ ವರ್ಷದ ಜುಲೈನಲ್ಲಿ. ರೈತರ ಆತ್ಮಹತ್ಯೆ ಸಂಖ್ಯೆ ನವಂಬರ್ ವೇಳೆಗೆ ಸಾವಿರ ದಾಟಿತು. ಬಿ.ಎಸ್. ಯಡಿಯೂರಪ್ಪನವರು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದು ಚಳಿಗಾಲದ ಅಧಿವೇಶನದಲ್ಲಿ. ಈಗ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಪೂರ್ಣಗೊಂಡು ಏಪ್ರಿಲ್ ಅರ್ಧ ಮುಗಿದಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ, 2016ರಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂಬ ಸಿಹಿ ಸುದ್ದಿ ಕೊಟ್ಟಿದೆ. ಅದರಿಂದ ಉತ್ಸುಕಗೊಂಡು ಷೇರು ಮಾರುಕಟ್ಟೆಯೂ ಪುಟಿದೆದ್ದಿದೆ. ರೈತರು ಮುಂದಿನ ಬಿತ್ತನೆ ಬಗ್ಗೆ ಚಿಂತಿಸತೊಡಗಿದ್ದಾರೆ. ಆದರೆ ಕಳೆದ ಜೂನ್ಫ ಜುಲೈನಲ್ಲೇ ಎಚ್ಚೆತ್ತುಕೊಳ್ಳಬೇಕಾಗಿದ್ದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ದೀರ್ಘ ನಿದ್ದೆಯಿಂದ ಎದ್ದು ದಿಢೀರ್ ಅಂತ ಬರಪೀಡಿತ ಪ್ರದೇಶಗಳ ಪ್ರವಾಸಕ್ಕೆ ಹೊರಟಿದ್ದಾರಲ್ಲಾ ಏನು ಕಾರಣ ಸ್ವಾಮಿ? ಅಂತ ಕಷ್ಟವಾದರೂ ಏನು ಬಂದಿದೆ ಅವರಿಗೆ? ಅಥವಾ ಯಾವುದಾದರೂ ಬರ‘ಸಿಡಿಲು’ ಬಡಿಯಿತಾ? ಕಳೆದ ಮೂರು ವರ್ಷಗಳಿಂದ ಯಾರೂ ಏನೇ ಟೀಕೆ ಮಾಡಿದರೂ ನನ್ನ ನಿದ್ರೆಗೆ ಭಂಗವಿಲ್ಲ ಎಂಬಂತಿದ್ದವರನ್ನು ಬಡಿದೆಬ್ಬಿಸಿದ ಆ ವ್ಯಕ್ತಿಯಾದರೂ ಯಾರು?

ಬಿಎಸ್ ವೈ  ಅ.ಓ.ಅ. (Also Known As) ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ! ಮಾಜಿ ಪ್ರಧಾನಿ ದೇವೇಗೌಡರು, ಹೂಬ್ಲೋ ವಾಚ್ ವಿಚಾರವಿಟ್ಟುಕೊಂಡು ಹೊರಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೂರು ವರ್ಷಗಳಲ್ಲಿ ಮಾಡಲಾಗದ ಪರಿಣಾಮವನ್ನು ‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ವೈ ’ ಎಂಬ ಯುಗಾದಿಯ ಒಂದು ಘೋಷಣೆ ಕ್ಷಣಮಾತ್ರದಲ್ಲಿ ಮಾಡಿದೆ ಎಂದರೆ ಆ ವ್ಯಕ್ತಿಯ ಬಗ್ಗೆ ಮುಖ್ಯಮಂತ್ರಿಯವರಿಗೆ ಅದೆಂಥ ಆತಂಕವಿರಬಹುದು?! ಬಿಎಸ್ ವೈ  ವಿರುದ್ಧ ದಾಖಲಾಗಿದ್ದ ಕೇಸನ್ನು ಹೈಕೋರ್ಟ್ ರದ್ದು ಮಾಡಿದ್ದು ಕಳೆದ ಡಿಸೆಂಬರ್ ನಲ್ಲಿ . ಈಗ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆಯೆಂದರೆ ಸಿದ್ದರಾಮಯ್ಯನವರಿಗೆ ನಿದ್ರೆ ಸಂಪೂರ್ಣವಾಗಿ ಬಿಟ್ಟಿದೆ ಎಂದೇ ಅರ್ಥವಲ್ಲವೆ? ಅಥವಾ ನಿದ್ರೆಯನ್ನು ಅವರು ಕಳೆದುಕೊಂಡಿರಬೇಕು ತಾನೇ? ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಮೂರು ವರ್ಷ ತುಂಬುವುದರೊಳಗೇ 2018ರಲ್ಲಿ 2008 ಪುನರಾವರ್ತನೆಯಾಗುವ ಸ್ಪಷ್ಟ ಸೂಚನೆಗಳು ಸಿಗುತ್ತಿವೆ. ಜನ ಮತ್ತೊಂದು ಚುನಾವಣೆಯನ್ನು ಈಗಾಗಲೇ ಇದಿರು ನೋಡಲಾರಂಭಿಸಿದ್ದಾರೆ.

ಹಾವೇರಿಯಿಂದ ಹೊರಟ ರೈತ ಚೈತನ್ಯ ಯಾತ್ರೆ ಮೈಸೂರಿನಲ್ಲಿ ಮುಕ್ತಾಯಗೊಂಡ ಸಂದರ್ಭದಲ್ಲಿ ನೆರೆದಿದ್ದ ೩೫ ಸಾವಿರ ಜನಸ್ತೋಮವನ್ನು ಕಂಡಾಗಲೇ ಮತ್ತೆ ರಾಜ್ಯದಲ್ಲಿ ಬಿಎಸ್ ವೈ ಹವಾ ಏಳುತ್ತಿದೆ ಎಂಬುದನ್ನು ಸಿದ್ದರಾಮಯ್ಯನವರು ಅರ್ಥಮಾಡಿಕೊಳ್ಳಬಹುದಿತ್ತು. ಬಿಜೆಪಿ ಅತ್ಯಂತ ದುರ್ಬಲ ಎನಿಸಿಕೊಂಡಿರುವ ತಮ್ಮ ತವರಿನಲ್ಲೇ ಇಷ್ಟು ಜನ ಸೇರಿದ್ದರ ಹಿಂದಿರುವ ಮರ್ಮವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬಹುದಿತ್ತು. ಈಗಂತೂ ಕಾಲ ಮೀರಿ ಹೋಗಿದೆ. ಎಲ್ಲೇ ಹೋದರೂ ಜನರ ಬಾಯಿಂದ ಬಿಎಸ್ವೈ ಹೆಸರು ಸಹಜ ಹಾಗೂ ಸ್ವಾಭಾವಿಕವಾಗಿ ಮೊಳಗುತ್ತಿದೆ. ಭಾಷಣದ ಆರಂಭದಲ್ಲಿ ವೇದಿಕೆಯ ಮೇಲಿರುವ ಗಣ್ಯರ ಹೆಸರು ಉಲ್ಲೇಖಿಸುವಾಗ ಬಿಎಸ್ ವೈ ಹೆಸರನ್ನು ಉಲ್ಲೇಖಿಸಿದರೂ ಸಾಕು ಚಪ್ಪಾಳೆ ಮುಗಿಲು ಮುಟ್ಟುತ್ತಿದೆ. ಬರೀ ವೀರಶೈವರು ಮಾತ್ರವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಬಿಎಸ್ ವೈ ಮಾತು ಕೇಳಿ ಬರುತ್ತಿದೆ.

ನಮ್ಮವರೇ ಮುಖ್ಯಮಂತ್ರಿಯಾದರೂ ನಮಗೇನು ಸಿಕ್ಕಿತು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕನಕ ಪ್ರಾಧಿಕಾರ ಸ್ಥಾಪನೆ ಮಾಡಿ 24 ಕೋಟಿ ರೂ. ಕೊಟ್ಟರು, ಕನಕ ಜಯಂತಿ ಆರಂಭಿಸಿದರು ಎಂದು ಕುರುಬ ಜನಾಂಗವೂ ಮಾತನಾಡಿಕೊಳ್ಳುತ್ತಿದೆ. ಇಷ್ಟಕ್ಕೂ ಯಾಕಾಗಿ, ಯಾವ ಕಾರಣಕ್ಕಾಗಿ ಜನ ಬಿಎಸ್ ವೈರನ್ನು ನೆನಪಿಸಿಕೊಳ್ಳುತ್ತಿದ್ದಾರೆ, ಹಳೆಯದ್ದನ್ನೆಲ್ಲ ಮರೆತಿದ್ದಾರೆ, ಅವರ ನಾಯಕತ್ವಕ್ಕಾಗಿ ಹಾತೊರೆಯುತ್ತಿದ್ದಾರೆ ಅಂದುಕೊಂಡಿರಿ?
ಖಂಡಿತ ಯಾರೂ ಅವರಿಗೆ ಶುದ್ಧಹಸ್ತತೆಯ ಸರ್ಟಿಫಿಕೆಟ್  ನೀಡುತ್ತಿಲ್ಲ. ಅವರ ತಪ್ಪನ್ನು ಟೀಕಿಸಿ ನಾನೂ ಹತ್ತಾರು ಬಾರಿ ಬರೆದಿದ್ದೇನೆ. ನಮ್ಮ ರಾಜಕಾರಣಿಗಳಲ್ಲಿ ಒಂದು ಪ್ರವೃತ್ತಿಯಿದೆ. ಏನೇ ತಪ್ಪು ಮಾಡಿದರೂ ಅದಕ್ಕೊಂದು ನೆಪ, ಸಮಜಾಯಿಷಿ ಕೊಡುತ್ತಾರೆ. ತಪ್ಪು ಒಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ಆದರೆ ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡು, ಮಾಡಿದ ಅಚಾತುರ್ಯಗಳಿಗೆ ಜನರ ಕ್ಷಮೆಯಾಚಿಸಿದಂಥ ವ್ಯಕ್ತಿ ಯಡಿಯೂರಪ್ಪನವರು. ಲೋಕಾಯುಕ್ತ ಸಂತೋಷ್ ಹೆಗ್ಡೆ ರಾಜೀನಾಮೆ ಪ್ರಕರಣ ನಡೆದಾಗ ‘ಶ್ರದ್ಧೆಯ ತಾಯಂದಿರೇ, ತತ್ವಾದರ್ಶದ ಶ್ರಾದ್ಧ ನೋಡಿಕೊಂಡು ಸುಮ್ಮನಿರಬೇಕಾ?’ ಎಂಬ ಲೇಖನದಲ್ಲಿ ಅವರನ್ನು ಟೀಕಿಸಿ ಬರೆದಿದ್ದೆ. ಲೇಖನ ಪ್ರಕಟವಾದ ದಿನ ಅವರು ಉಡುಪಿಯಲ್ಲಿದ್ದರು. ನನಗೆ ಕರೆ ಬಂತು. ಇನ್ನು ಮುಂದೆ ಸರಿಪಡಿಸಿಕೊಂಡು ಹೋಗುತ್ತೇನೆ ಎಂದರು. ಒಂದು ಪ್ರತಿಷ್ಠಿತ ರಾಜ್ಯದ ಮುಖ್ಯಮಂತ್ರಿ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಕರೆ ಮಾಡಿ ಇಂತಹ ಮಾತುಗಳನ್ನಾಡಬೇಕೆಂದರೆ ಆ ವ್ಯಕ್ತಿ ಎಂತಹ ಸಂವೇದನಾಶೀಲರೆಂಬುದನ್ನು ಊಹಿಸಿ? ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗ್ಗೆ 8 ಗಂಟೆಯ ತಿಂಡಿಗೆ ಮೊದಲು ಆ ದಿನದ ಎಲ್ಲ ಪತ್ರಿಕೆಗಳ ವರದಿಗಳನ್ನು ಪಟ್ಟಿ ಮಾಡಿ, ಸಮಸ್ಯೆ ನಿವಾರಣೆಗೆ ಯಾವ ಕ್ರಮ‘ಕೈಗೊಳ್ಳಬೇಕೆಂಬುದನ್ನು ಸಿದ್ಧಮಾಡಿ ಅಧಿಕಾರಿಗಳು ಅವರ ಟೇಬಲ್ಲಿನ ಮೇಲಿಟ್ಟಿರಬೇಕಿತ್ತು. ಸೂಕ್ತ ಕ್ರಮಕ್ಕೆ ಸೂಚನೆ ಕೊಟ್ಟ ನಂತರವೇ ಬ್ರೇಕ್ಫಸ್ಟ್. ಹೌದು,

ಯಡಿಯೂರಪ್ಪನವರ ಸಿಟ್ಟು ಸೆಡವುಗಳ ಹಿಂದೆ ಹೆಂಗರುಳೂ ಇದೆ. ಖ್ಯಾತ ವಾಗ್ಮಿಗಳೂ, ವಿಧಾನ ಪರಿಷತ್ ಸದಸ್ಯರೂ ಆದ ಗೋ. ಮಧುಸೂದನ್ ಅವರು ಯಡಿಯೂರಪ್ಪನವರ ವ್ಯಕ್ತಿತ್ವವನ್ನು ‘ಅವರು ಶೀಘ್ರ ಕೋಪಿಯೇ ಹೊರತು, ದೀರ್ಘ ದ್ವೇಷಿಯಲ್ಲ’ ಎಂದು ಒಂದೇ ವಾಕ್ಯದಲ್ಲಿ ಕಟ್ಟಿಕೊಡುತ್ತಾರೆ. ಇಂತಹ ಶೀಘ್ರ ಕೋಪ, ದುಡುಕುಗಳಿಂದ ಅವರಿಂದ ಅಚಾತುರ್ಯಗಳಾಗಿದ್ದೂ ಇದೆ. ಆದರೆ ತಪ್ಪು, ಅಚಾತುರ್ಯಗಳಿಗಿಂತ ಅವರು ವಿರೋಧಿಗಳ ಪಿತೂರಿಗೆ ಬಲಿಯಾಗಿದ್ದೇ ಹೆಚ್ಚು!

ಅವರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದ ಎಫಐಆರ್ ವಿಚಾರವನ್ನೇ ತೆಗೆದುಕೊಳ್ಳಿ. ಸಿಎಜಿ (ಮಹಾಲೆಕ್ಕ ಪರಿಶೋಧಕ) ರಿಪೋರ್ಟ್ ಬಂದಾಗ ಅದರಲ್ಲಿ ಸಾರ್ವಜನಿಕ ಹಣ ಪೋಲಾಗಿದ್ದು, ವ್ಯವಸ್ಥೆಯಲ್ಲಿ ವ್ಯತ್ಯಯಗಳಾಗಿದ್ದು ಕಂಡುಬಂದರೆ ಮೊದಲಿಗೆ ಅದು ಪಬ್ಲಿಕ್ ಅಕೌಂಟ್ಸ್ ಕಮಿಟಿ ಅಥವಾ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಹೋಗುತ್ತದೆ. ಅಲ್ಲಿಂದ ಶಾಸನಸಭೆಯ ಮುಂದೆ ಚರ್ಚೆಗೆ ಬರುತ್ತದೆ. ಅಲ್ಲೂ ವ್ಯತ್ಯಯಗಳು ಕಾಣುತ್ತಿರುವುದು ಸಾಬೀತಾದರೆ ಮುಂದಿನ ಕ್ರಮದತ್ತ ಸಾಗುತ್ತದೆ. ಆದರೆ ಬಿಎಸ್ ವೈ ವಿಷಯದಲ್ಲಿ ಈ ಯಾವ ಪ್ರಕ್ರಿಯೆಗಳೂ ನಡೆಯಲಿಲ್ಲ. ಅವರ ಮುಖ್ಯಮಂತ್ರಿ ಗಾದಿಯನ್ನು, ಇಮೇಜು, ವ್ಯಕ್ತಿತ್ವ, ವರ್ಚಸ್ಸನ್ನು ಫಸಿಗೆ ಕಳುಹಿಸುವ ಸಲುವಾಗಿ ರಾಜ್ಯದ ಪಾಲಿಗೆ ಭಾರಧ್ವಾಜರಾಗಿದ್ದ ಕಾಂಗ್ರೆಸ್ನ ಏಜೆಂಟ್ರೊಬ್ಬರು ತನಿಖೆಗೆ ಅಸ್ತು ನೀಡಿದರು, ಸುಖಾಸುಮ್ಮನೆ ಖಾಸಗಿ ದೂರು ನೀಡಿದಾಗಲೂ ಸಂವಿಧಾನಬಾಹಿರವಾಗಿ ಎಫಐಆರ್ ದಾಖಲಿಸಲು ಅನುಮತಿ ನೀಡಿದರು, ಜೈಲಿಗೆ ಹೋಗುವಷ್ಟರ ಮಟ್ಟಿಗೆ ನೋವು ತಂದರು. ಮತ್ತೊಂದು ಕಡೆ ಬಳ್ಳಾರಿಯ ಅದಿರು ಲಾಬಿ ಸತತವಾಗಿ ಬೆದರಿಸಿತು. ನಂಬಿದವರೂ ಕೈಕೊಟ್ಟರು, ದಿಲ್ಲಿಯ ಶ್ರೀರಕ್ಷೆಯಂತೂ ಅವರಿಗಿರಲಿಲ್ಲ. ಇಷ್ಟಾಗಿಯೂ ವೈಯಕ್ತಿಕ ನೋವು ಹಾಗೂ ಆತಂಕಗಳ ನಡುವೆಯೂ ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್ ವೈ ರೈತರನ್ನು ಮರೆಯಲಿಲ್ಲ.

ಉಪಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದ್ದ ಅವರು, ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದ ಸಾಲವನ್ನೂ ಒಳಪಟ್ಟಂತೆ ರೈತನ ಬಡ್ಡಿ ಮನ್ನಾ ಮಾಡಿದರು. ಕರೆಂಟಿನ ಬಿಸಿಯಲ್ಲಿ ರೈತನ ಬದುಕು ಮತ್ತು ಬೆಳೆ ಸುಟ್ಟು ಹೋಗಬಾರದೆಂದು ಭಾವಿಸಿ ಆತನ ಲಕ್ಷಾಂತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದರು.

ಇವತ್ತು ಜನ ಹಳೆಯದ್ದನ್ನು ಮರೆತು ಬಿಎಸ್ ವೈ   ಗಾಗಿ ಹಪಾಹಪಿಸುತ್ತಿರುವುದು ಇದೇ ಕಾರಣಕ್ಕೆ! ಈ ಬರವೆನ್ನುವುದು ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ತಲೆದೋರಿರುವ ಸಮಸ್ಯೆಯಲ್ಲ. ಕಳೆದ 16 ವರ್ಷಗಳಿಂದ ದೇಶ ಹಾಗೂ ನಮ್ಮ ರಾಜ್ಯದ ಒಂದಿಲ್ಲೊಂದು ಭಾಗಗಳು ಬರ, ನೆರೆಗೆ ತುತ್ತಾಗುತ್ತಲೇ ಬಂದಿವೆ. ಆದರೆ ಒಬ್ಬ ಮುಖ್ಯಮಂತ್ರಿಯಾದವರಿಗೆ ದೂರದೃಷ್ಟಿ ಇರಬೇಕಾಗುತ್ತದೆ. ಎಸ್.ಎಂ. ಕೃಷ್ಣ ಅವರು ಮೂರು ವರ್ಷಗಳ ಸತತ ಬರ ಬಂದಾಗ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿ ಹನಿ ನೀರನ್ನೂ ಕಾಪಿಟ್ಟುಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ ಕಾಯಕ ಕೆರೆ ಎಂಬ ಯೋಜನೆ ಜಾರಿಗೆ ತಂದಿದ್ದರು. ಅದೇ ರೀತಿ ಬರ ಎದುರಿಸುತ್ತಿದ್ದ ಮೈಸೂರುಫಚಾಮರಾಜನಗರ ಜಿಲ್ಲೆಗಳ ಕೆರೆಗಳು ನೀರಿಗಾಗಿ ಬಾಯ್ಬಿಟ್ಟುಕೊಂಡು ಕುಳಿತಿವೆ, ಬತ್ತಿದ ಕೆರೆಗಳಿಂದಾಗಿ ದನಕರುಗಳು ಬಳಲಿವೆ ಎಂಬುದನ್ನು ಕಂಡಕೂಡಲೇ ಎರಡೂ ಜಿಲ್ಲೆಗಳ ಕೆರೆಗಳಿಗೆ ಕಬಿನಿಯಿಂದ ನೀರು ತುಂಬಿಸಲು 219 ಕೋಟಿ ರೂಪಾಯಿಯನ್ನು ನಿಂತಲ್ಲೇ ಬಿಡುಗಡೆ ಮಾಡಿದವರು ಬಿಎಸ್ ವೈ. ಇವತ್ತು ಮೈದುಂಬಿರುವ ಕೆರೆಗಳು ಬಿಎಸ್ವೈ ಹೆಸರು ಹೇಳುತ್ತಿವೆ. ಇತ್ತ ಸಿದ್ದರಾಮಯ್ಯನವರ ಕಥೆ ಕೇಳಿ… ಇತ್ತೀಚೆಗೆ ಕೆಆರ್ಎಸ್ನಿಂದ ಚಾಮುಂಡೇಶ್ವರಿ ಕ್ಷೇತ್ರದ ೨೦ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಅಡಿಗಲ್ಲು ಇಟ್ಟರು. ಅದಕ್ಕೂ ಮೊದಲು 4 ಸಾರಿ ಅವರನ್ನು ಶಾಸಕರನ್ನಾಗಿ ಮಾಡಬೇಕಾಗಿ ಬಂತು ಆ ಕ್ಷೇತ್ರದ ಜನರ ದುರದೃಷ್ಟ! ಎರಡು ಸಾರಿ ಉಪಮುಖ್ಯಮಂತ್ರಿಯಾಗಿ, 10 ಬಜೆಟ್ ಮಂಡಿಸಿ, ಮೂರು ವರ್ಷ ಮುಖ್ಯಮಂತ್ರಿಯಾದ ನಂತರ ಇಪ್ಪತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಇಟ್ಟಿದ್ದೇ ದೊಡ್ಡ ಸಾಧನೆಯೆಂಬಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ, ಹೃದಯವನ್ನು ಆರ್ದ್ರ ಮಾಡಿಕೊಂಡು ಭಾವುಕರಾಗಿ ಮುಂದಿನ ಸಾರಿ ವರುಣಾಕ್ಕೆ ಮಗನನ್ನು ನಿಲ್ಲಿಸಿ, ತಾನು ಚಾಮುಂಡೇಶ್ವರಿಗೆ ಮತ್ತೆ ಬರುತ್ತೇನೆ ಎಂದರು! ಅಲ್ಲೂ ಸ್ವಾರ್ಥದ ದೂರದೃಷ್ಟಿಯೇ ಹೊರತು ನಿಜವಾದ ಸಂವೇದನೆಯಲ್ಲ! ಆದರೆ ಶಿವಮೊಗ್ಗವನ್ನು ಒಮ್ಮೆ ಹಿಂತಿರುಗಿ ನೋಡಿ?

ಸಿದ್ದರಾಮಯ್ಯನವರು ಪ್ರತಿನಿಧಿಸಿದ ಚಾಮುಂಡೇಶ್ವರಿಯಲ್ಲಿ ಏನು ಉಳಿದಿದೆ ಗೊತ್ತಾ? ಅಡಿಗಡಿಗೂ ರಿಯಲ್ ಎಸ್ಟೇಟ್ ಕುಳಗಳ ಬಡಾವಣೆಗಳು. ಆರು ಕಾಸಿಗೆ, ಮೂರು ಕಾಸಿಗೆ ಕೃಷಿ ಭೂಮಿಯನ್ನು ಮಾರಿಕೊಂಡು ಕೂಲಿ ಕಾರ್ಮಿಕರಾಗಿರುವ ರೈತರ ದಂಡು. ಖಾಸಗಿಯವರಿಗೆ ರೆಡ್ಕಾರ್ಪೆಟ್ ಹಾಕಿ ನಿರುಮ್ಮಳವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ). ಸಿದ್ದರಾಮಯ್ಯನವರ ಚಾಮುಂಡೇಶ್ವರಿ, ಖರ್ಗೆಯವರ ಗುರ್ಮಿಟ್ಕಲ್, ಧರ್ಮಸಿಂಗರ ಜೇವರ್ಗಿ, ಬಂಗಾರಪ್ಪನವರ ಸೊರಬದಂತೆ ಸೊರಗಿದ ಕ್ಷೇತ್ರಗಳ ಸಾಲಿಗೆ ಸೇರಿದ್ದರೆ ಮೂರು ವರ್ಷದಲ್ಲಿ ಶಿವಮೊಗ್ಗದ ಚರ್ಯೆಯನ್ನೇ ಬದಲಾಯಿಸಿದವರು ಬಿಎಸ್ ವೈ!
ಅಷ್ಟು ಮಾತ್ರವಲ್ಲ, ರೈತರ ವಿಷಯ ಬಂದರೆ ಅವರು ಮಗುವಾಗುತ್ತಿದ್ದರು. ಹಾಗಾಗಿಯೇ ರಾಜ್ಯದಲ್ಲಿರುವ ಬರಪೀಡಿತ ಪ್ರದೇಶಗಳಲ್ಲೆಲ್ಲ ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಯಕಕ್ಕೆ ಕೈಹಾಕಿದರು. ಜೋಳಕ್ಕೆ, ಭತ್ತಕ್ಕೆ ಕೇಂದ್ರ ಸರ್ಕಾರ ಕೊಡುವ ಕನಿಷ್ಟ ಬೆಂಬಲ ಬೆಲೆಗೆ 150 ರೂ. ಸೇರಿಸಿಕೊಟ್ಟು ಖರೀದಿ ಮಾಡಿದರು. ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿದರೆ ಅವಳು ಮನೆಗೆ ಭಾರವಲ್ಲ, ಅವಳು ಮನೆಯ ಭಾಗ್ಯಲಕ್ಷ್ಮಿ ಎನ್ನುತ್ತಾ ಅವಳ ಭವಿಷ್ಯಕ್ಕಾಗಿ ಒಂದು ಲಕ್ಷ ರೂಪಾಯಿಯ ಯೋಜನೆ ತಂದರು. ಆ ಹೆಣ್ಣುಮಗಳ ಶಾದಿ ಬಗ್ಗೆ ಯೋಚಿಸಲಿಲ್ಲ, ಅವಳನ್ನ ಶಾಲೆಗೆ ಸೇರಿಸಿ ವಿದ್ಯಾಲಕ್ಷ್ಮಿಯನ್ನಾಗಿ ಮಾಡುವುದಕ್ಕಾಗಿ ಸೈಕಲ್ ಕೊಟ್ಟರು. ರೆಕ್ಕೆ ಪುಕ್ಕ ಬಂದ ಮೇಲೆ ಗೂಡು ತೊರೆದು ಹಾರಿಹೋಗುವ ಹಕ್ಕಿಗಳಂತೆ ವೃದ್ಧ ತಂದೆತಾಯಂದಿರನ್ನು ಊರಲ್ಲಿ ಬಿಟ್ಟು ಮಕ್ಕಳು ಪೇಟೆ ಸೇರಿದರೇನಂತೆ ಆಳುವ ಪಕ್ಷಕ್ಕೆ ಹಿರಿಯರನ್ನು ಸಾಕಿ ಸಲಹುವ ಸಾಮಾಜಿಕ ಜವಾಬ್ದಾರಿಯಿದೆಯೆಂದು ಅರಿತು ಸಂಧ್ಯಾಸುರಕ್ಷಾ ಯೋಜನೆಯನ್ನು ಜಾರಿಗೆ ತಂದರು. ವೃದಾಟಛಿಪ್ಯ, ವಿಧವಾ ವೇತನವನ್ನು ಹೆಚ್ಚಿಸಿದರು. ನಲವತ್ತು ವರ್ಷ ದಾಟಿದ ಅವಿವಾಹಿತ ಹೆಣ್ಣುಮಕ್ಕಳನ್ನೂ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತಂದರು.

ಸಿದ್ದರಾಮಯ್ಯನವರ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲಿ ಬೆಳಗಾವಿ ಆಧಿವೇಶನದಲ್ಲಿ ಕಬ್ಬುಬೆಳೆಗಾರ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ. ಅವರು ವಾರಕ್ಕೊಮ್ಮೆ ಬರುವ ಮೈಸೂರಿನ ಮಾರ್ಗ ಮಧ್ಯದಲ್ಲಿ ಸಿಗುವ ಮಂಡ್ಯದಲ್ಲಿ ತಾನೇ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿಕೊಟ್ಟು ರೈತ ಸುಟ್ಟುಕೊಂಡು ಸಾವಾದ. ಆದರೆ ಸಿಎಂ ಸ್ಪಂದನೆ ಹೇಗಿತ್ತು? ಬಿಎಸ್ ವೈ ಕೂಡ ಕಬ್ಬು ಬೆಳೆಗಾರರ ಸಮಸ್ಯೆ ಎದುರಿಸಿದ್ದರು. ಕೂಡಲೇ ಕಬ್ಬಿನ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೈಹಾಕಿದರು. ಬರ, ನೆರೆಯಂಥ ಪ್ರಕೃತಿ ವಿಕೋಪಗಳಾದರೆ ಕೂಡಲೇ ರೈತನ ಸಂಕಷ್ಟಕ್ಕೆ ಸ್ಪಂದಿಸಲು 500 ಕೋಟಿಯನ್ನು ಮೀಸಲಿಡುವ ಆವರ್ತ ನಿಧಿಯನ್ನು ಆರಂಭಿಸಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರರ 125ನೇ ಜನ್ಮ ಜಯಂತಿಯಂದು ಬಿಎಸ್ ವೈ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ 125ನೇ ಜಯಂತಿಯನ್ನು ರಾಷ್ಟ್ರವ್ಯಾಪಿಯಾಗಿ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮುಂದಾದ ಕೂಡಲೇ ನಮ್ಮ ಮಾಧ್ಯಮಗಳು ಮೋದಿ ಹಾಗೂ ಅಮಿತ್ ಶಾ ಜೋಡಿ ಸೋಷಿಯಲ್ ಎಂಜಿನಿಯರಿಂಗ್ಗೆ ಅಂದರೆ ಎಲ್ಲ ಜಾತಿಗಳಿಗೂ ಪ್ರಧಾನ್ಯತೆ ಕೊಟ್ಟು ಸೆಳೆದುಕೊಳ್ಳುವ ತಂತ್ರಕ್ಕೆ ಕೈಹಾಕಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಿವೆ. ಈ ಸೋಷಿಯಲ್ ಎಂಜಿನಿಯರಿಂಗನ್ನು ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾದ ಕೂಡಲೇ ಆರಂಭಿಸಿದ್ದರು. ಸಣ್ಣ ಸಣ್ಣ ಜಾತಿಗಳನ್ನೂ ಗುರುತಿಸಿ ಸಮಾವೇಶ ನಡೆಸಿದರು, ಅವರ ಬೇಡಿಕೆ, ನೋವನ್ನು ಆಲಿಸಿ ಸ್ಪಂದಿಸುವ ಕೆಲಸ ಮಾಡಿದರು. ಅವರಲ್ಲಿ ನಾಯಕತ್ವ ಬೆಳೆಸುವ ಕಾರ್ಯಕ್ಕೂ ಕೈಹಾಕಿದ್ದರು. ನಮ್ಮ ಹಿಂದುಳಿದ ಜಾತಿ, ವರ್ಗ, ಜನಾಂಗಗಳಲ್ಲಿ ಹೆಮ್ಮೆಯನ್ನು ಮೂಡಿಸಬೇಕೆಂದು ಕನಕ, ವಾಲ್ಮೀಕಿ ಜಯಂತಿಯನ್ನು ಆರಂಭಿಸಿದರು. ಇಂತಹ ಆದರ್ಶ ವ್ಯಕ್ತಿಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಹೆಮ್ಮೆಯಿಂದ ಮುನ್ನಡೆಯಿರಿ ಎಂಬ ಸಂದೇಶ ಕೊಟ್ಟಿದ್ದರು. 24 ಕೋಟಿ ಕೊಟ್ಟು ಕನಕ ಪ್ರಾಧಿಕಾರ ರಚಿಸಿದರು. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಅಂಬೇಡ್ಕರ್, ಬಾಬು ಜಗಜೀವನ್ರಾಮ್, ವಾಲ್ಮೀಕಿ, ಕನಕ ಭವನಗಳ ನಿರ್ಮಾಣಕ್ಕೆ ಕೈಹಾಕುವ ಮೂಲಕ ಮದುವೆ, ಮುಂಜಿ ಅಥವಾ ಯಾವುದೇ ಸಮಾರಂಭವಿರಲಿ, ಎಲ್ಲರಂತೆ ಭವ್ಯ ಕಟ್ಟಡಗಳಲ್ಲೇ ಆಚರಿಸಿ ಎಂದು ಸಾಮಾಜಿಕ ನ್ಯಾಯ ಸ್ಥಾಪನೆಗೆ ಮುಂದಾದವರು ಬಿಎಸ್ ವೈ.

ಇತ್ತ 14ನೇ ಹಣಕಾಸು ಆಯೋಗದ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸದಲ್ಲೇ ಮೊದಲ ಭಾರಿಗೆ ಗ್ರಾಮಪಂಚಾಯಿತಿಗಳಿಗೆ ಲಕ್ಷಾಂತರ ರೂ. ಅನುದಾನವನ್ನು ನೇರವಾಗಿ ನೀಡಿದರೆ, ಅದರಲ್ಲಿ ಕರೆಂಟು ಬಿಲ್ ಬಾಕಿಯನ್ನು ಕಟ್ಟಿ ಎಂದು ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದ, ಪಂಚಾಯಿತಿಗೆ ಕೇವಲ ೫ಫ೬ ಮನೆಗಳನ್ನು, ಅಂದರೆ ಸದಸ್ಯರ ಸಂಖ್ಯೆಗಿಂತಲೂ ಕಡಿಮೆ ಮನೆ ಕೊಟ್ಟ ವ್ಯಕ್ತಿ ಸಿದ್ದರಾಮಯ್ಯನವರಾದರೆ, ಬಸವ ವಸತಿ ಯೋಜನೆ ಆರಂಭಿಸಿ ಪ್ರತಿ ಪಂಚಾಯಿತಿಗೆ ಗರಿಷ್ಠ 300 ಮನೆಗಳನ್ನು ಕೊಟ್ಟವರು ಬಿಎಸ್ವೈ.
ಅಷ್ಟೇ ಅಲ್ಲ, ಪ್ರತಿ ನಗರ ಸಭೆಗಳಿಗೆ 25 ಕೋಟಿ, ಮಹಾನಗರಪಾಲಿಕೆಗಳಿಗೆ ತಲಾ ವಾರ್ಷಿಕ 50 ಕೋಟಿ ನೀಡಿದ್ದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೋನಿಯಾ ಗಾಂಧಿ ನಿಯಂತ್ರಿತ ಯುಪಿಎ ಸರ್ಕಾರ ದುಡ್ಡೇ ಕೊಡದೇ ಹೋದಾಗ, ನೀವು ಕೊಡದಿದ್ದರೇನಂತೆ ನಾನೇ ಗ್ರಾಮಗಳ ರಸ್ತೆಯನ್ನು ಅಭಿವೃದಿಟಛಿ ಮಾಡುತ್ತೇನೆಂದು ನಮ್ಮ ಗ್ರಾಮ; ನಮ್ಮ ರಸ್ತೆ ಯೋಜನೆಯನ್ನು ಜಾರಿಗೆ ತಂದರು. 4 ಸಾವಿರ ಸುವರ್ಣ ಗ್ರಾಮಗಳನ್ನು ತಲಾ 75 ಲಕ್ಷದಿಂದ 2 ಕೋಟಿವರೆಗೂ ನೀಡಿ ಅಭಿವೃದಿಟಛಿಪಡಿಸಿದರು. ಖಂಡಿತ ಬಿಜೆಪಿಯವರು ಬೀದಿ ಜಗಳ ಮಾಡಿದ್ದಾರೆ, ಒಳಜಗಳ ಮಾಡಿದ್ದಾರೆ, ಆದರೆ ರಾಜ್ಯದ ಅಭಿವೃದಿಯ ವಿಷಯದಲ್ಲಿ ಮಾತ್ರ ಜಗಳವಾಡಲಿಲ್ಲ. ಹಾಗಾಗಿ ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲೂ ೫ ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿದ ಕನಿಷ್ಟ ನಾಲ್ಕೆ ದು ಗಣನೀಯ ಕೆಲಸ – ಕಾರ್ಯಗಳು ಕಾಣುತ್ತವೆ. ಬಹುಶಃ ಈ ಕಾರಣಕ್ಕಾಗಿಯೇ ಜನ ಮತ್ತೆ ಬಿಜೆಪಿ ಸರ್ಕಾರವನ್ನು ಬಯಸಿದ್ದಾರೆ. ಅದರ ಚುಕ್ಕಾಣಿಯನ್ನು ಬಿಎಸ್ ವೈ ಅವರೇ ಹಿಡಿಯಬೇಕೆಂದು ಇಚ್ಛಿಸಿದ್ದಾರೆ.

ಅದನ್ನು ಅರ್ಥಮಾಡಿಕೊಂಡೇ ಯಡಿಯೂರಪ್ಪನವರನ್ನು ಕೇಂದ್ರದ ನಾಯಕರು ರಾಜ್ಯಾಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದ್ದಾರೆ. ಇಷ್ಟಕ್ಕೂ ಯಾರು ಲೀಡರ್ ಅನಿಸಿಕೊಳ್ಳುತ್ತಾರೆ ಹೇಳಿ? ಬರುವಾಗ ನಾಲ್ಕಾರು ಕಾರುಗಳಲ್ಲಿ ಭಟ್ಟಂಗಿಗಳನ್ನು ಕರೆದುಕೊಂಡು ಬಂದು, ಇಳಿದ ಕೂಡಲೇ ಅಣ್ಣ ಬಂದ್ರು, ದಾರಿ ಬಿಡಿ ಅನಿಸಿಕೊಳ್ಳುವ ಪುಢಾರಿಗಳಲ್ಲ, ಕಾರಿಂದ ಇಳಿದ ಕೂಡಲೇ ಜನ ಯಾರನ್ನು ಸುತ್ತುವರಿಯುತ್ತಾರೋ ಅವರೇ ನಿಜವಾದ ಲೀಡರ್. ಅಂತಹ ಕರ್ನಾಟಕದ ಒಂದೆರಡು ನಾಯಕರಲ್ಲಿ ಬಿಎಸ್ ವೈ ಅಗ್ರಗಣ್ಯರು. ಇತ್ತ ಅಧ್ಯಕ್ಷಗಾದಿಯನ್ನು ಬಿಟ್ಟು ಕೊಟ್ಟಿರುವ ಪ್ರಹ್ಲಾದ ಜೋಶಿಯವರು, ಬಿಜೆಪಿ ವಿಪ್ಲವವನ್ನು ಎದುರಿಸುತ್ತಿದ್ದ ಕಾಲದಲ್ಲಿ ಅಧ್ಯಕ್ಷರಾದವರು. ಅದನ್ನು ಕೂಲಿಂಗ್ ಡೌನ್ ಪೀರಿಯಡ್ ಎನ್ನಬಹುದೇನೋ. ಕಷ್ಟಕಾಲದಲ್ಲಿ ಬಹಳ ಸಮಸ್ಥಿತಿಯಿಂದ ಪಕ್ಷವನ್ನು ಮುನ್ನಡೆಸಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹೇಳಬೇಕಾದುದ್ದನ್ನು ಬಹಳ ಪರಿಣಾಮಕಾರಿಯಾಗಿ ಹಾಗೂ ಆತ್ಮಸ್ಥೆ ರ್ಯದಿಂದ ಸಂಸತ್ತಿನಲ್ಲಿ ಹೇಳುವಂಥ ಒಳ್ಳೆಯ ಸಂಸದ ಜೋಶಿಯವರು. ಸಂಸತ್ತಿನಲ್ಲಿ ಅವರ ಹೋರಾಟ ಮುಂದುವರಿಯಲಿದೆ, ರಾಜ್ಯದಲ್ಲಿನ ಹೋರಾಟವೇನಿದ್ದರೂ ಬಿಎಸ್ ವೈ ಜವಾಬ್ದಾರಿ. ಇನ್ನು ಮುಂದೆ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ ಎಂದು ದೂರುವ ಪ್ರಸಂಗವೇ ಎದುರಾಗುವುದಿಲ್ಲ.

ವಿಧಾನಸಭೆಗೆ 150, ಲೋಕಸಭೆಗೆ 25 ನನ್ನ ಗುರಿ ಎಂದಿದ್ದಾರೆ ಬಿಎಸ್ವೈ, ಹಾಗಾಗಿ ಮುಖ್ಯಮಂತ್ರಿಯವರು ನಿದ್ರೆಯಿಂದೆದ್ದು ಪ್ರವಾಸಕ್ಕೆ ಹೊರಟಿದ್ದಾರೆ. ಬಹಳ ಸಕಾರಾತ್ಮಕ ಅಂಶವೆಂದರೆ ಬಿಎಸ್ವೈ ಮುಂದಿನ ರಾಜ್ಯಾಧ್ಯಕ್ಷರು ಎಂದು ದಿಲ್ಲಿಯಲ್ಲಿ ಘೋಷಣೆಯಾದ ಮರುಕ್ಷಣವೇ, ಮುಂದಿನ ಚುನಾವಣೆಯಲ್ಲಿ ಗೆದ್ದೇ ಬಿಟ್ಟೆವು ಎನ್ನವ ವಿಶ್ವಾಸ ಬಿಜೆಪಿ ಕಾರ್ಯಕರ್ತರಲ್ಲಿ ಒಂದೇ ದಿನದಲ್ಲಿ ಬಂದು ಬಿಟ್ಟಿದೆ. ಅದೇ ಬಿಎಸ್ ವೈ  ಶಕ್ತಿ. ಆದರೆ ಹಳೇ ಮೈಸೂರಿನ ಬಗ್ಗೆ ಸ್ವಲ್ಪ ಹುಷಾರು.

BSY

Comments are closed.