Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!

ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ   ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್  ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ಆತ ನೊಗವನ್ನು  ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬ್ಯೆಗುಳಗಳ ಸುರಿಮಳೆಗೈದ  ಚಾಲಕ, ನಿಂದಿಸಿ ಹಿಂತಿರುಗಿ ಹೊರಟುಹೋದ. ಇತ್ತ ಮಾಗ೯ ಮಧ್ಯದಲ್ಲಿ ದಿಕ್ಕು ತೋಚದಂತಾದ ಬಾಲಕರು ಬಾಯಾರಿಕೆಯಿಂದ ಬಳಲಲಾರಂಭೀಸಿದರು. ಆದರೆ ಬೇಡಿ- ಕೊಂಡರೂ ಬೊಗಸೆ ನೀರು  ಸಿಗಲಿಲ್ಲ. ಬಾಯಾರಿಕೆಯನ್ನು ತಾಳಲಾರದೆ ಬಾವಿಯ ಬಳಿಗೆ ಹೋದ ಕಿರಿಯ ಸಹೋದರ ದಾಹವನ್ನು ಆರಿಸಿಕೊಂಡ. ಅದನ್ನು ಗಮನಿಸಿದ ಮೇಲ್ಜಾತಿಯವರು ಮನುಷ್ಯತ್ವವನ್ನೇ ಕಳೆದುಕೊಂಡು ಆತನನ್ನು ದಂಡಿಸಿದರು. ಹೇರ್ ಕಟ್ ಮಾಡಿಸಿಕೊಳ್ಳಲು ಹೋದರೆ ಕ್ಷೌರಿಕನಿಂದಲೂ ತಿರಸ್ಕಾರ. ಮತ್ತೊಮ್ಮೆ  ಶಾಲೆಗೆ ತೆರಳುತ್ತಿರುವಾಗ ಜೋರಾಗಿ ಮಳೆ ಬಂದ ಕಾರಣ ಬದಿಯಲ್ಲೇ ಇದ್ದ ಮನೆಯ ಗೋಡೆಯ  ಬಳಿ ನಿ೦ತಾಗ ಅದನ್ನು ಗಮನಿಸಿದ ಮನೆಯಾಕೆ ಕೋಪದಿಂದ ಕೊಚ್ಚೆಗೆ ತಳ್ಳಿದಳು.

***
ಅದೇ ಬಾಲಕ ಮುಂದೆ ಅಮೆರಿಕಕ್ಕೆ ಹೋಗಿ ಸ್ನಾತಕೋತ್ತರ ಪದವಿ ಪಡೆದುಕೊ೦ಡು 1917ರಲ್ಲಿ ಭಾರತಕ್ಕೆ ಆಗಮಿಸಿದಾಗ ಬರೋಡಾದ ಮಹಾರಾಜರು ಸೇನಾ ಕಾಯ೯ದಶಿ೯ಯಾಗಿ ನೇಮಕ ಮಾಡಿದರು. ಒಬ್ಬಂಟಿಯಾಗಿದ್ದ ಅವರು ಲಾಡ್ಜ್ ವೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಅದು ಪಾಸಿ೯ಗಳ ವಠಾರವಾಗಿತ್ತು. ಅವರಿಗೆ ಬಾಡಿಗೆಗೆ ಬಂದ ವ್ಯಕ್ತಿಯ ಜಾತಿಯ ಬಗ್ಗೆ ಅನುಮಾನ  ಶುರುವಾಯಿತು. ಅಡ್ಡಹಾಕಿ “ಯಾರು ನೀನು?’ ಎಂದು ಪ್ರಶ್ನಿಸಿದರು. “ನಾನೊಬ್ಬ ಹಿಂದು’ ಎಂದು ಉತ್ತರಿಸಿದಾಗ, “ಯಾವ ಜಾತಿಯವನು ಹೇಳು?’ ಎಂಬ ಗದರಿಕೆ. ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಗೊತ್ತಾದ ಕೂಡಲೇ ಮನೆಯಿಂದಲೇ ಹೊರಹಾಕಿದರು. ಕಚೇರಿಗೆ ಹೋದರೆ ಅವರಿಗಿಂತ ತೀರಾ ಕೆಳದಜೆ೯ಯ ನೌಕರನಿಂದಲೂ ತಿರಸ್ಕಾರ. ಹತ್ತಿರಕ್ಕೆ ಬಂದರೆ ಮ್ಯೆಲಿಗೆಯಾಗುತ್ತದೆ ಎಂಬ ಕಾರಣಕ್ಕೆ  ಕಡತಗಳನ್ನು ಮೇಜಿನ ಮೇಲೆ ಎಸೆದು ಹೋಗುತ್ತಿದ್ದ!

***
ಡಾ. ಬಿ.ಆರ್. ಅಂಬೇಡ್ಕರ್ ಬದುಕಿನ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ಇಂತಹ ನೂರಾರು  ಘಟನೆಗಳನ್ನು ಕಾಣಬಹುದು. ಆದರೆ… “ಸ೦ಸ್ಕೃತಕ್ಕೆ ಹೋಲಿಸಿದರೆ ಪಷಿ೯ಯನ್ ಏನೇನೂ ಅಲ್ಲ. ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ತಿಳಿಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ’ ಎಂದಿದ್ದು, “ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕು’ ಎಂದು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿದ್ದು  ಮಡಿವಂತರಿಂದ ದೌಜ೯ನ್ಯಕ್ಕೊಳಗಾದ ಅಂಬೇಡ್ಕರ್ ಅವರೇ ಎಂದರೆ ನಂಬುತ್ತೀರಾ?

   ಅದರ ಹಿಂದೆಯೂ ಒಂದು ಕಥೆಯಿದೆ, ಕಾರಣವೂ ಇದೆ. 1928ರಲ್ಲಿ ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ಆಯ್ಕೆಯಾಗಿ ಬಂದ ಅಂಬೇಡ್ಕರ್, ದಲಿತರಿಗೆ ದೇವಾಲಯ ಪ್ರವೇಶವನ್ನು ದೊರಕಿಸಿಕೊಡಲು ಬಹಳ ಕಾಲದಿಂದಲೂ ಹೋರಾಡುತ್ತಿದ್ದರು. ಆ ಹೊತ್ತಿನಲ್ಲಿಯೇ ಕೆಲ  ಮೇಲ್ವಗ೯ದವರು ಮಹಾತ್ಮ ಗಾಂಧೀಜಿಯವರ ಕರೆಯನ್ನು ಧಿಕ್ಕರಿಸಿ ನಾಸಿಕ್‍ನ ಕೇಲಾರಾಮ್ ದೇವಾಲಯಕ್ಕೆ ದಲಿತರು ಪ್ರವೇಶ ಮಾಡುವುದಕ್ಕೆ ಅಡ್ಡಿಪಡಿಸಿದರು. ಆಗ ಅಂಬೇಡ್ಕರ್ ಅವರೇ ದೇವಾಲಯ ಪ್ರವೇಶ ಚಳವಳಿಯ ನೇತೃತ್ವ ವಹಿಸಿಕೊಂಡರು. ಆದರೆ ದಲಿತರು ದೇವಾಲಯ ಪ್ರವೇಶ  ಮಾಡುವುದಕ್ಕೆ ಶಾಸ್ತ್ರಗಳು ಅಡ್ಡಿಬರುತ್ತವೆ ಎಂದು ಮೇಲ್ವಗ೯ದವರು ಪ್ರತಿಪಾದಿಸುತ್ತಿದ್ದರು. ಹಾಗಾಗಿ ತಾವು ಹಿಂದು ಆಗಿದ್ದರೂ ದೇವಾಲಯದೊಳಕ್ಕೆ ಹೋಗಲು ಬಾಧಕವೇನು ಎಂಬುದನ್ನು ತಿಳಿಯಲು  ಅಂಬೇಡ್ಕರ್ ಮುಂದಾದರು. ಸ್ವತಃ ಶಾಸ್ತ್ರಗಳನ್ನು ಓದಿ ಮೂಲದಿಂದಲೇ ತಿಳಿಯುವ ಮನಸು ಮಾಡಿದರು. ಅದಕ್ಕಾಗಿ ಸಂಸ್ಕೃತವನ್ನು ಕರಗತ ಮಾಡಿಕೊಳ್ಳಲು ನಿಶ್ಚಯಿಸಿ ತಕ್ಕ ಗುರುವಿನ  ಅನ್ವೇಷಣೆಯಲ್ಲಿ ತೊಡಗಿದರು.

ಇತ್ತ ಹೊಸಕೆರೆ ಪಂಡಿತ ನಾಗಪ್ಪ ಶಾಸ್ತ್ರಿಯವರು ನಮ್ಮ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಪ್ಲೀಡರ್ (ಲಾಯರ್) ಆಗಿದ್ದರು. ಸಂಸ್ಕೃತದಲ್ಲಿ ಅಸಾಧಾರಣ ಪಾಂಡಿತ್ಯ ಸಾಧಿಸಿದ್ದ ಅವರು ಪ್ಲೀಡರ್  ಪರೀಕ್ಷೆಗಾಗಿ ಓದುತ್ತಿದ್ದಾಗಲೇ ಮ್ಯೆಸೂರು ಅರಮನೆಯಲ್ಲಿ ರಾಜಕುಮಾರ, ಕುಮಾರಿಯರಿಗೆ ಪಾಠ  ಹೇಳಿದ್ದಂಥ ವ್ಯಕ್ತಿ. 1905ರಲ್ಲೇ ಪಂಡಿತ ಹಾಗೂ ಶಾಸ್ತ್ರಿ ಪರೀಕ್ಷೆಗಳಲ್ಲಿ ತೇಗ೯ಡೆಯಾಗಿದ್ದರು. ಪ್ಲೀಡರ್ ಪರೀಕ್ಷೆಯ ನಂತರ ನರಸಿಂಹರಾಜಪುರಕ್ಕೆ ಹಿಂತಿರುಗಿದ ಅವರು ಲಾಯರ್ ಗಿರಿ ಆರಂಭಿಸಿದರು. ಜತೆಗೆ ಸಂಸ್ಕೃತ  ಅಭ್ಯಾಸವೂ ನಿರಂತರವಾಗಿತ್ತು. ಶಾಸ್ತ್ರಿಗಳಿಗೆ 6 ಹೆಣ್ಣು ಹಾಗೂ 4 ಗ೦ಡು ಮಕ್ಕಳು. ಗೌತಮಬುದ್ಧನ ವಿಚಾರಧಾರೆಯನ್ನು ಮೆಚ್ಚಿದ ಈ ಮಡಿವಂತ, ಸಂಸ್ಕೃತದಲ್ಲಿ “ಬುದ್ಧ ಭಾಗವತ’ ಬರೆಯಲು ಮು೦ದಾಗಿದ್ದರು. ಇತ್ತ 1929ರಲ್ಲಿ ಕನಾ೯ಟಕಕ್ಕೆ ಆಗಮಿಸಿದ ಮದನಮೋಹನ ಮಾಳವೀಯ ಹಾಗೂ ನಾಗಪ್ಪ  ಶಾಸ್ತ್ರಿಯವರು ಚಿಕ್ಕಮಗಳೂರಿನಲ್ಲಿ ನಡೆದ ಸಭೆಯ ಸಂದಭ೯ದಲ್ಲಿ ಪರಸ್ಪರ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತು. ಶಾಸ್ತ್ರಿಗಳು ಬರೆಯುತ್ತಿದ್ದ “ಬುದ್ಧ ಭಾಗವತ’ದ ಹಸ್ತಪ್ರತಿಗಳನ್ನು ಓದಿದ ಮಾಳವೀಯ ಬೆಚ್ಚಿ ಬೆರಗಾದರು. ಮುಂಬ್ಯೆಗೆ ಬರುವಂತೆ ಶಾಸ್ತ್ರಿಗಳಿಗೆ ಆಹ್ವಾನ ನೀಡಿದರು. ಲಾಯರ್‍ಗಿರಿಯೂ ಸರಿಯಾಗಿ ನಡೆಯದ ಕಾಲವದು. ಜತೆಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಸೋತಿದ್ದ ಶಾಸ್ತ್ರಿಗಳು  ಸಂಸಾರವನ್ನು ಊರಲ್ಲಿ ಬಿಟ್ಟು 1929, ಅಕ್ಟೋಬರ್‍ನಲ್ಲಿ ಮುಂಬ್ಯೆಗೆ ತೆರಳಿದರು. ಅದೇ ವಷ೯ದ ಡಿಸೆಂಬರ್‍ನಲ್ಲಿ ಮುಂಬ್ಯೆನಲ್ಲಿ ನಡೆದ ಪ್ರಾಥ೯ನಾ ಸಭೆಯೊಂದರ ವೇಳೆ ಮಾಳವೀಯರು ನಾಗಪ್ಪ ಶಾಸ್ತ್ರಿಯವರನ್ನು ಗಾಂಧೀಜಿಯವರಿಗೆ ಪರಿಚಯ ಮಾಡಿಕೊಟ್ಟರು. ಗಾಂಧೀಜಿಯವರು ಅಲ್ಲಿಯೇ ಇದ್ದ  ಅಂಬೇಡ್ಕರ್ ಅವರನ್ನು ಕರೆದು “ತುಮ್ಹೆಗುರು ಕಾ ತಲಾಶ್ ಥಾ ನ? ಆಗಯಾ ದೇಖೋ ತುಮ್ಹಾರಾ ಗುರು’ ಎಂದು ನಗೆಯಾಡಿದರು.

ಹೀಗೆ 1930ರಲ್ಲಿ ನಾಗಪ್ಪ ಶಾಸ್ತ್ರಿಗಳಿಂದ ಅಂಬೇಡ್ಕರ್ ಅವರಿಗೆ ಸಂಸ್ಕೃತಪಾಠ ಆರ೦ಭವಾಯಿತು. ವಾರಕ್ಕೆ ಮೂರು ದಿನ ಪಾಠ, ಮುಂದಿನ ಪಾಠಕ್ಕೆ ಹೋದೊಡನೆಯೇ ಹಿಂದಿನ ಪಾಠದ ಬಗ್ಗೆ  ಅಂಬೇಡ್ಕರ್ ಅವರಿಂದ ಪ್ರಶ್ನೆಗಳ ಪಟ್ಟಿಯೇ ಸಿದ್ಧವಾಗಿರುತ್ತಿತ್ತು. ಅದಕ್ಕೆ ಉತ್ತರ ಹೇಳಿದ ಮಾತ್ರಕ್ಕೆ  ಅ ಪ್ರಶ್ನೆ ಮತ್ತೆ ಬರುವುದಿಲ್ಲವೆಂಬ ಬಗ್ಗೆ ಯಾವ ಖಾತ್ರಿಯೂ ಇರಲಿಲ್ಲ. ಅಂಬೇಡ್ಕರ್ ತಮ್ಮ ಮನದಲ್ಲಿ ಮೂಡಿದ ಸಂಶಯಗಳನ್ನೆಲ್ಲ ಮುಂದಿಟ್ಟು ಚಚಿ೯ಸುತ್ತಿದ್ದರು. ಹೀಗೆ ಎರಡು ವಷ೯ಗಳ ಕಾಲ ನಾಗಪ್ಪ ಶಾಸ್ತ್ರಿಗಳ ಬಳಿ ಸಂಸ್ಕೃತ ಕಲಿತ ಅಂಬೇಡ್ಕರ್ ಏಳು ವಷ೯ಗಳಲ್ಲಿ ಸಂಸ್ಕೃತದಲ್ಲಿ ಅಗಾಧ  ಪಾಂಡಿತ್ಯವನ್ನು ಸಂಪಾದಿಸಿದರು.

“ಜನ್ಮನಾ ಜಾಯತೇ ಶೂದ್ರಃ
ಸಂಸ್ಕಾರಾತ್ ದ್ವಿಜ ಉಚ್ಯತೇ’

  ಅಂದರೆ ಹುಟ್ಟುವಾಗ ಎಲ್ಲರೂ ಶೂದ್ರರೇ. ಆದರೆ ಸಂಸ್ಕಾರದಿಂದ ಉಚ್ಚರಾಗಬಹುದು ಎಂಬ  ಮಾತಿದೆ.
ಕದ೯ಮ, ವಸಿಷ್ಠ, ಪರಾಶರ, ಕೃಷ್ಣ,  ದ್ವೈಪಾಯನ(ವ್ಯಾಸ), ಕಪಿಲ, ದವ೯ತಿ (ಮಾತಂಗಿ), ಸತ್ಯಕಾಮ ಜಾಬಾಲಿ, ವಾಲ್ಮೀಕಿ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳ ಮೂಲವನ್ನು ಹುಡುಕಿಕೊ೦ಡು ಹೋದರೆ ಅವಯಾ೯ರೂ ಬ್ರಾಹ್ಮಣರಲ್ಲ. ಡಾಕ್ಟರ್ ಮಕ್ಕಳು ಡಾಕ್ಟರೇ ಆಗಬೇಕು, ಎಂಜಿನಿಯರ್ ಮಕ್ಕಳು ಎಂಜಿನಿಯರ್‍ಗಳೇ ಆಗಬೇಕು ಎಂದು ಹೇಗೆ ಇಲ್ಲವೋ ಅದೇ ರೀತಿ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣನಾಗುವುದೂ  ಇಲ್ಲ. ಆದರೆ ಬ್ರಾಹ್ಮಣನ ಮಗನಾಗಿ ಹುಟ್ಟುವುದರಿಂದ ಜ್ಞಾನ, ಸಭ್ಯ ನಡತೆಗಳಂತಹ ವಿಚಾರಗಳನ್ನು ಸಹಜವಾಗಿಯೇ ಪಡೆದುಕೊಳ್ಳುವ ಅನುಕೂಲವಿರುತ್ತದೆ. ಆದರೂ ಬ್ರಾಹ್ಮಣನಾಗಬೇಕಾದರೆ ಸ್ವತಃ  ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಹಾಗೆ ಜ್ಞಾನ ಸಂಪಾದನೆ ಮಾಡಿಕೊಂಡಾಗ ಆತನಿಗೆ ಮರುಹುಟ್ಟು ಲಭೀಸುತ್ತದೆ, ದ್ವಿಜನಾಗುತ್ತಾನೆ. ಮಹಷಿ೯ ಅರವಿಂದ್, ಪಂಡಿತ್ ಶ್ಯಾಮ್‍ಜಿ ಕೃಷ್ಣವಮ೯  (ಪಂಡಿತ ಪದವಿ ಪಡೆದ ಮೊದಲ ಬ್ರಾಹ್ಮಣೀತರ), ಸ್ವಾಮಿ ದಯಾನಂದ ಸರಸ್ವತಿ,  ಸ್ವಾಮಿ ವಿವೇಕಾನಂದ, ಲಾಲ್ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಕೆ.ಕೆ. ಮುನ್ಷಿ  ಇವಯಾ೯ರೂ ಬ್ರಾಹ್ಮಣರಲ್ಲ, ಕಲಿತು  ಶ್ರೇಷ್ಠರೆನಿಸಿಕೊಂಡವರು.

ಅಂಬೇಡ್ಕರ್ ಕೂಡ ಅದೇ ಸಾಲಿಗೆ ಸೇರುತ್ತಾರೆ. ಅಧ೯ ವಯಸ್ಸು ಕಳೆದ ಮೇಲೆ ಸಂಸ್ಕೃತ ಅಧ್ಯಯನ ಮಾಡಿ ಪಾಂಡಿತ್ಯ ಸಾಧಿಸಿದರು. ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿ, ವಿಶ್ಲೇಷಿಸುವ  ಸಾಮಥ್ಯ೯ ಪಡೆದರು. ಅದರ ಫಲವೇ “Riddles in Hinduism’ ಪುಸ್ತಕ. ವೇದಗಳ ಕಾಲದಲ್ಲಿ  ಜಾತಿ ಪದ್ಧತಿಯಿರಲಿಲ್ಲ. ಅಸ್ಫೃಶ್ಯತೆಯೂ ಇರಲಿಲ್ಲ. ಹಾಗಾದರೆ ಜಾತಿ ವ್ಯವಸ್ಥೆ ಹಿಂದು ಸಮಾಜದಲ್ಲಿ ಹೇಗೆ ಸೇರಿಕೊಂಡಿತು? ಮುಂತಾದ 24 ಒಗಟುಗಳನ್ನು ಪಟ್ಟಿ ಮಾಡಿರುವ ಅಂಬೇಡ್ಕರ್, ನಮ್ಮ  ಪ೦ಡಿತ-ಪಾಮರ ವಗ೯ದ ವಂಚನೆಗಳನ್ನು ಈ ಪುಸ್ತಕದಲ್ಲಿ ಬಯಲುಗೊಳಿಸಿದರು. ಹಾಗಂತ?

    ಅವರು ಯಾರ ಮೇಲೂ ದ್ವೇಷ ಕಾರಲಿಲ್ಲ. “ಸಂಸ್ಕೃತವನ್ನೇ ಅಧಿಕೃತ ಭಾಷೆಯಾಗಿ ಸ್ವೀಕರಿಸುವಂತೆ’ 1949, ಸೆಪ್ಟೆಂಬರ್ 10ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮುಂದಿಟ್ಟಿದ್ದು ಅಂಬೇಡ್ಕರ್ ಅವರೇ.  ಅಂಬೇಡ್ಕರ್ ಎಂದರೆ ಹಿಂದು ಧಮ೯ದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌಜ೯ನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ  ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು.  ಸ್ವಾತಂತ್ರ ಹೋರಾಟಕ್ಕೆ ಅವರ ಕೊಡುಗೆ ಅಷ್ಟಿಲ್ಲವಾದರೂ ದೇಶ ವಿಭಜನೆ ಅನಿವಾಯ೯ವಾದಾಗ ಭೂಭಾಗವನ್ನು ಹಂಚಿಕೊಳ್ಳುವ ಜತೆಗೆ “ಪಾಪುಲೇಷನ್ ಎಕ್ಸ್‍ಚೇಂಜ್’ (ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಹಿಂದುಗಳನ್ನು ಭಾರತಕ್ಕೆ ಕರೆಸಿಕೊಳ್ಳಿ) ಕೂಡ ಮಾಡಿಕೊಳ್ಳಿ, ಹಿಂದು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ, ಮುಸಲ್ಮಾನರ ವಿಶ್ವಭ್ರಾತೃತ್ವವೆನ್ನುವುದು ಇಸ್ಲಾಮಿಕ್ ಬ್ರದರ್ ಹುಡ್ಡೆೀ ಹೊರತು, ಯೂನಿವಸ೯ಲ್ ಬ್ರದರ್‍ಹುಡ್ ಅಲ್ಲ ಎಂಬ ಕಟುಸತ್ಯವನ್ನು ದಿಟ್ಟವಾಗಿ ಹೇಳಿದವರು  ಅವರು ಮಾತ್ರ! ಅವರ “ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕವನ್ನು ಓದಿದರೆ ನಿಮಗೆ ಇದೆಲ್ಲ  ಅಥ೯ವಾಗುತ್ತದೆ!

   ನೀವು ಬಾಳಾಸಾಹೇಬ್ ಗಂಗಾಧರ್ ಖೇರ್ ಅಥವಾ ಬಿ.ಜಿ. ಖೇರ್ ಹೆಸರು ಕೇಳಿದ್ದೀರಾ?

ಅವರು ಈಗ ಮಹಾರಾಷ್ಟ್ರವಾಗಿರುವ ಅಂದಿನ ಬಾಂಬೆ ರಾಜ್ಯದ  (ಮಹಾರಾಷ್ಟ್ರಗುಜರಾತ್) ಮೊದಲ ಮುಖ್ಯಮಂತ್ರಿ. ಮುಂಬ್ಯೆನಲ್ಲೊಂದು ಸಾವ೯ಜನಿಕ ಸಭೆ ಆಯೋಜನೆಯಾಗಿತ್ತು. ಪಂಡಿತ್ ನೆಹರು, ಮೊರಾಜಿ೯ ದೇಸಾಯಿ ಅವರಂಥ ಗಣ್ಯರು ಉಪಸ್ಥಿತರಿದ್ದರು. ಮಾತಿಗೆ ನಿಂತ ಬಿ.ಜಿ. ಖೇರ್ ಭಾಷಣದ ಮಧ್ಯೆ,”I am an Indian first and a Maharashtrian next’ ನಾನು ಮೊದಲು ಭಾರತೀಯ, ನಂತರ ಮಹಾರಾಷ್ಟ್ರಿಗ’ ಎಂದುಬಿಟ್ಟರು. ತಮ್ಮ ಸರದಿ ಬಂದಾಗ ಬಿ.ಜಿ. ಖೇರ್ ಅವರ ಮಾತನ್ನು ದೃಷ್ಟಿಯಲ್ಲಿಟ್ಟುಕೊ೦ಡು, “I am an Indian first and Indian last’ ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ’ ಎಂದರು ಡಾ. ಅಂಬೇಡ್ಕರ್!

   ಅಷ್ಟೇ ಅಲ್ಲ….
ಭಾರತದೊಂದಿಗೆ 1947, ಅಕ್ಟೋಬರ್ 25ರಂದು ಮಹಾರಾಜ ಹರಿಸಿಂಗ್ ಸಹಿ ಹಾಕುವುದರೊಂದಿಗೆ ಭಾರತದ ಒಕ್ಕೂಟದೊಳಗೆ ಸೇಪ೯ಡೆಯಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ  ವಿಧಿಯಡಿ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಗಿನ ಕಾನೂನು ಸಚಿವ ಸಂವಿಧಾನ ಶಿಲ್ಪಿ  ಅಂಬೇಡ್ಕರ್ ಖಡಾಖಂಡಿತವಾಗಿ ವಿರೋಧಿಸಿದ್ದರು. ಎಲ್ಲ ರಾಜ್ಯಗಳೂ ಸಮಾನ ಹಾಗೂ ಸಮಾನ  ಹಕ್ಕುಅವಕಾಶಗಳನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಹೀಗೆ ಅಂಬೇಡ್ಕರ್ ನಮಗೆ ಬಗ್ಗುವುದಿಲ್ಲ ಎಂದು ತಿಳಿದ ನೆಹರು ನರಿ ಉಪಾಯ ಮಾಡಿದರು.

  “ಅನಾರೋಗ್ಯ’ದ ಕಾರಣ ಮರುದಿನ ಅಂಬೇಡ್ಕರ್ ಸದನಕ್ಕೆ ಬರಲೇ ಇಲ್ಲ, ಅವರ ಅನುಪಸ್ಥಿತಿಯಲ್ಲಿ  370 ವಿಧಿಗೆ ಅನುಮೋದನೆ ದೊರೆತು ಸಂವಿಧಾನ ಸೇರಿತು. ಈ ಘಟನೆ ನಡೆದ ಮಾರನೇ ದಿನವೇ ಸದನಕ್ಕೆ ಆಗಮಿಸಿದ ಅಂಬೇಡ್ಕರ್‍ರನ್ನು ಕಾರಣ ಕೇಳಿದಾಗ “ಬರಬೇಡ’ ಎಂದು ನೆಹರು ಅವರೇ ಹೇಳಿದ್ದರು ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ನೆಹರು ಬಣ್ಣ ಬಯಲಾಯಿತು, ಕಾಶ್ಮೀರ ಶಾಶ್ವತವಾಗಿ ಭಾರತಕ್ಕೆ ಮಗ್ಗುಲ ಮುಳ್ಳಾಯಿತು, ದೇಶದ್ರೋಹಿಗಳ ನೆಲೆವೀಡಾಯಿತು. ಇದೆಲ್ಲವೂ ಸಂವಿಧಾನದ  ಕರಡು ಸಮಿತಿಯ ಚಚೆ೯ಗಳಲ್ಲಿ ದಾಖಲಾಗಿವೆ.

ಇಂತಹ ಮಹಾನ್ ವ್ಯಕ್ತಿಗೆ, ಅವರ ನೇರ ನಡೆ ನುಡಿಗೆ ಗಾಂಧೀಜಿ ಹಾಗೂ ಸದಾ೯ರ್ ಪಟೇಲ್   ಮರಣಾನಂತರ ಕಾಂಗ್ರೆಸ್ ಸ್, ಅದರಲ್ಲೂ ಮೊದಲ ಪ್ರಧಾನಿ ನೆಹರು ಮಹಾಶಯರು ಕೊಟ್ಟ ಬಳುವಳಿಯೇನು ಗೊತ್ತೆ? ಹಿಂದು ಕೋಡ್ ಬಿಲ್ ತರುವ ವೇಳೆಯಲ್ಲಿ ಹೆಣ್ಣುಮಕ್ಕಳಿಗೂ ಆಸ್ತೀ ಹಕ್ಕು ಕೊಡಬೇಕು, “ಹಿಂದು’ ಎಂಬ ಹೆಮ್ಮರದಡಿ ಮುಸೀಂ, ಕ್ರೆçಸ್ತ, ಪಾಸಿ೯ಗಳನ್ನು ಹೊರತುಪಡಿಸಿ ಎಲ್ಲರೂ  ಇರಬೇಕೆಂಬ ಕಾನೂನು ಸಚಿವ ಅಂಬೇಡ್ಕರ್ ಪ್ರತಿಪಾದನೆಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ  ಅವರ ವಿಧೇಯಕ ಅಸೆಂಬ್ಲಿಯಲ್ಲಿ ಸೋಲುವಂತೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ  ಮಾಡಿದರು ನೆಹರು!
ಅಷ್ಟು ಮಾತ್ರವಲ್ಲ,

1952ರಲ್ಲಿ ಮೊದಲ ಸಾವ೯ತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಮುಂಬ್ಯೆ ಉತ್ತರದಿಂದ ಸ್ಪಧಿ೯ಸಿದಾಗ ಅವರ ಸಹಾಯಕನನ್ನೇ ಕಣಕ್ಕಿಸಿದ ಕಾಂಗ್ರೆ ಸ್ ಅಂಬೇಡ್ಕರರನ್ನು ಸೋಲಿಸಿ ಅವಮಾನಿಸಿತು! 1954ರಲ್ಲಿ ಮುಂಬ್ಯೆ ಭಂಡಾರದಲ್ಲಿ ಉಪಚುನಾವಣೆ ಏಪ೯ಟ್ಟಾಗ ಅಂಬೇಡ್ಕರ್ ಮತ್ತೆ ಸ್ಪಧಿ೯ಸಿದರು. ಆಗಲೂ ಕಾಂಗ್ರೆಸ್ ಅಂಬೇಡ್ಕರರನ್ನು ಸೋಲಿಸಿತು. ಆದರೆ ಕುತೂಹಲಕಾರಿ ಸಂಗತಿಯೇನೆಂದು  ಗೊತ್ತಾ? ಆಗ ಅಂಬೇಡ್ಕರ್ ಅವರ ಚುನಾವಣಾ ಏಜೆಂಟ್ ಆಗಿದ್ದ ವ್ಯಕ್ತಿ ತಥಾಕಥಿಕ ವಿರೋಧಿಗಳು ಯಾರನ್ನು ಸಂಘಗಳು ಎಂದು ಆಚಾರವಿಲ್ಲದೆ ಮಾತನಾಡುತ್ತಾರೋ ಅಂಥ ಸಂಘದ ಸ್ವಯಂಸೇವಕ ದತ್ತೋಪಂತ ಠೇಂಗಡಿ!

  ಕಾಂಗ್ರೆಸಿನ ಅಂಬೇಡ್ಕರ್ “ಪ್ರೀತಿ’ಗೆ ಇನ್ನೂ ಉದಾಹರಣೆ ಬೇಕಾ? 1955ರಲ್ಲಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೆಹರು ಅವರಿಗಾಗಲಿ, 1971ರಲ್ಲಿ ಅದೇ ಕೆಲಸ ಮಾಡಿಕೊಂಡ ಇಂದಿರಾ ಗಾಂಧಿಯವರಿಗಾಗಲಿ ಡಾ. ಅಂಬೇಡ್ಕರ್‍ಗೆ  ಭಾರತ ರತ್ನ ಕೊಡಬೇಕು ಅಂತ ಎಂದೂ ಅನಿಸಲಿಲ್ಲ! ಅಂಬೇಡ್ಕರ್‍ಗೆ 1990ರಲ್ಲಿ ಭಾರತ ರತ್ನ  ಕೊಡಲು ವಿ.ಪಿ. ಸಿಂಗ್ ಬಿಜೆಪಿ ಸಕಾ೯ರವೇ ಬರಬೇಕಾಯಿತು! ಪಾಲಿ೯ಮೆಂಟಿನ ಸೆಂಟ್ರಲ್ ಹಾಲ್‍ಲ್ಲಿ  ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡಿದ್ದೂ ಬಿಜೆಪಿ ಬೆಂಬಲಿತ ಸಕಾ೯ರವೇ. ಉನ್ನತ ವ್ಯಾಸಂಗಕ್ಕೆಂದು ಬ್ರಿಟನ್‍ಗೆ ಹೋಗಿದ್ದಾಗ ಅಂಬೇಡ್ಕರ್ ತಂಗಿದ್ದ ಲಂಡನ್ನಿನ ಕಿಂಗ್ ಹೆನ್ರಿ ರಸ್ತೆಯಲ್ಲಿರುವ ಮನೆ ಮಾರಾಟಕ್ಕೆ ಬಂದರೂ 10 ವಷ೯ಗಳ ಯುಪಿಎ ಆಡಳಿತವಾಗಲಿ, ಮಹಾರಾಷ್ಟ್ರದ ಕಾಂಗ್ರೆಸ್ ಸ್ ಸಕಾ೯ರವಾಗಲಿ ಖರೀದಿಸುವ ಮನಸ್ಸು ಮಾಡಲಿಲ್ಲ! ಅದನ್ನೂ 32 ಕೋಟಿ ರೂ. ಕೊಟ್ಟು ಖರೀದಿಸಲು ಬಿಜೆಪಿಯ  ದೇವೇಂದ್ರ ಫಡ್ನವೀಸ್ ಬರಬೇಕಾಯಿತು!

ಇಂದು ಅಂಬೇಡ್ಕರ್ ಅವರ 125ನೇ ಜನ್ಮದಿನ. ಇಂತಹ  ಪುಣ್ಯದಿನವನ್ನು ರಾಷ್ಟ್ರಾದ್ಯಂತ ಆಚರಿಸಲು, ಅಂಬೇಡ್ಕರ್‍ರ ಕೊಡುಗೆಯನ್ನು ಜಗತ್ತಿಗೆ ಸಾರಲು ನರೇಂದ್ರ ಮೋದಿ ಬಂದಿದ್ದಾರೆ. ಇದೇನೇ ಇರಲಿ, ಜ್ಯೋತಿಬಾ ಫುಲೆ, ಶಾಹು ಮಹಾರಾಜ್, ಅಗಕ೯ರ್  ಮುಂತಾದವರು ದಲಿತರ ವೇದನೆಯನ್ನು, ಅವರಿಗಾಗುತ್ತಿದ್ದ ಅವಮಾನವನ್ನು ಅಥ೯ಮಾಡಿಕೊಂಡು ಕೆಲಸ ಮಾಡಿದ್ದಿದೆ. ಆದರೆ ಸಾಮಾಜಿಕ ಪರಿವತ೯ನೆಯ ಯಾತ್ರೆಯಲ್ಲಿ ಅಂಬೇಡ್ಕರ್  ಏಕಮೇವಾದ್ವಿತೀಯರಾಗಿ ಕಾಣಬರುತ್ತಾರೆ.

dr br am

Comments are closed.