Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಭಾರತವನ್ನು ಬೈಯಿರಿ, ‘ಬುಕರ್’ ಪಡೆಯಿರಿ!

ಭಾರತವನ್ನು ಬೈಯಿರಿ, ‘ಬುಕರ್’ ಪಡೆಯಿರಿ!

ಮಿಸ್ಟರ್ ಜಿಯಾಬಾವೋ,

ಇಂಟರ್‌ನೆಟ್‌ನಿಂದ ಗಗನ ನೌಕೆಗಳವರೆಗೆ ಎಲ್ಲವನ್ನೂ ಸಂಶೋಧನೆ ಮಾಡಿದ್ದು ಭಾರತೀ ಯರೇ. ಅವುಗಳನ್ನೆಲ್ಲ ಬ್ರಿಟಿಷರು ನಮ್ಮಿಂದ ಕದ್ದುಕೊಂಡು ಹೋದರು. ಇಂತಹ ಕಥೆಯನ್ನು ನೀವು ಭಾರತಕ್ಕೆ ಕಾಲಿಟ್ಟ ಕೂಡಲೇ ಹೇಳುತ್ತಾರೆ!

Nonsense. ಹತ್ತು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಕೊಟ್ಟ ಅತಿದೊಡ್ಡ ಕೊಡುಗೆಯೆಂದರೆ ಕೋಳಿಗೂಡು!

ಹಳೇ ದಿಲ್ಲಿಗೆ ಹೋಗಿ, ಜಾಮಾ ಮಸೀದಿ ಹಿಂಭಾಗದ ಮಾರುಕಟ್ಟೆಯಲ್ಲಿ ಹೇಗೆ ಕೋಳಿಗಳನ್ನು ಇಟ್ಟಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿ. ನೂರಾರು ಬಿಳಿಚಿಕೊಂಡ ಕೋಳಿಗಳನ್ನು ತಂತಿಯ ಗೂಡುಗಳಲ್ಲಿ ಬಂಧಿಸಿಟ್ಟಿರುತ್ತಾರೆ. ಅವು ಒಂದಕ್ಕೊಂದು ಅಂಟಿಕೊಂಡು ಕುಳಿತುಕೊಳ್ಳಬೇಕು. ಉಸಿರಾಡಲೂ ಜಾಗವಿರುವುದಿಲ್ಲ. ಅಂತಹ ಗೂಡಿನ ಮೇಲೆ ಕತ್ತಿಯನ್ನು ಝಳಪಿಸುತ್ತಾ ಕಟುಕ ಕುಳಿತಿರುತ್ತಾನೆ. ಅದಾಗ ತಾನೇ ಕಡಿದಿರುವ ಕೋಳಿಯ ಹಸಿ ಮಾಂಸದ ತುಣುಕುಗಳು, ಹೆಪ್ಪುಗಟ್ಟಿರುವ ರಕ್ತ ಗೂಡಿನ ಸುತ್ತ ಹರಡಿರುತ್ತದೆ. ತಮ್ಮ ಸಹೋದರರ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡರೂ, ಮುಂದಿನ ಸರದಿ ತಮ್ಮದೇ ಎಂದು ಗೊತ್ತಿದ್ದರೂ ಬದುಕಿರುವ ಕೋಳಿಗಳು ಬಂಡಾಯವೇಳುವುದಿಲ್ಲ. ಗೂಡಿನಿಂದ ಹೊರಹೋಗಲೂ ಪ್ರಯತ್ನಿಸುವುದಿಲ್ಲ.
ನಮ್ಮ ದೇಶದಲ್ಲಿ ಮನುಷ್ಯರ ಕಥೆಯೂ ಇದೇ ಆಗಿದೆ!

ಒಂದಾನೊಂದು ಕಾಲದಲ್ಲಿ ನಾನು ಹಿಂದಿ ಚಿತ್ರಗಳನ್ನು ನೋಡುತ್ತಿದ್ದೆ(ಆದರೆ ಈಗ ನೋಡುವುದಿಲ್ಲ). ಆ ಕಾಲದಲ್ಲಿ ಚಲನಚಿತ್ರ ಪ್ರಾರಂಭವಾಗುವುದಕ್ಕೆ ಮುಂಚೆ ಕಪ್ಪು ಪರದೆಯ ಮೇಲೆ ‘೭೮೬’ ಸಂಖ್ಯೆ ಮಿಂಚಿ ಮಾಯವಾಗುತ್ತಿತ್ತು. ಮುಸ್ಲಿಮರು ಅದು ತಮ್ಮ ದೇವರ ಸಂಕೇತವಾದ ಮ್ಯಾಜಿಕ್ ನಂಬರ್ ಎಂದು ಭಾವಿಸುತ್ತಿದ್ದರು. ಇಲ್ಲವಾದರೆ ಬಿಳಿ ಸೀರೆಯುಟ್ಟಿರುವ ಮಹಿಳೆಯೊಬ್ಬಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಳು. ಆಕೆಯ ಅಂಗೈನಿಂದ ಚಿನ್ನದ ನಾಣ್ಯ ಗಳು ಕೆಳಗುರುಳಿ ಪಾದದ ಮೇಲೆ ಬೀಳುತ್ತಿರುತ್ತಿದ್ದವು. ಆಕೆ ಹಿಂದೂಗಳ ಲಕ್ಷ್ಮೀ ದೇವತೆಯಾಗಿರುತ್ತಿದ್ದಳು. ಯಾವುದೇ ಕಥೆಯನ್ನು ಪ್ರಾರಂಭಿಸುವ ಮೊದಲು ದೇವರಿಗೆ ವಂದನೆ ಸಲ್ಲಿಸುವ ಪದ್ಧತಿ ನಮ್ಮ ದೇಶದಲ್ಲಿತ್ತು. ನನಗನಿಸುತ್ತದೆ ನಾನೂ ಯಾವುದಾದರೊಂದು ದೇವರ “Arse”ಗೆ(ಪೃಷ್ಠ) ಮುತ್ತಿಕ್ಕಿ ಬರೆಯಲು ಆರಂಭಿಸಬೇಕೇನೋ! ಆದರೆ ಯಾವ ದೇವರ ಪೃಷ್ಠ?!  ಮುಸ್ಲಿಮರಿಗೆ ಒಬ್ಬನೇ ದೇವರಿದ್ದಾನೆ. ಕ್ರೈಸ್ತರಿಗೆ ಮೂವರು ದೇವರಿದ್ದಾರೆ. ಹಿಂದೂಗಳಿಗೆ ಮೂರು ಕೋಟಿ ಅರವತ್ತು ಲಕ್ಷ ದೇವರಿದ್ದಾರೆ. ಎಲ್ಲವನ್ನೂ ಒಟ್ಟು ಸೇರಿಸಿದರೆ 3,60,000,04! ಸರ್, ನಾನು ಕೈಜೋಡಿಸಿ ಕಣ್ಣುಮುಚ್ಚಿ ನನ್ನ ಕರಾಳ ಕಥೆಯ ಮೇಲೆ ಬೆಳಕು ಚೆಲ್ಲು ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ. ಮಿಸ್ಟರ್ ಜಿಯಾಬಾವೋ, ದಯವಿಟ್ಟು ಸಹಕರಿಸಿ. ಎಷ್ಟು ಬೇಗ 3,60,000,04 ದೇವರುಗಳ ಪೃಷ್ಠಕ್ಕೆ ಮುತ್ತಿಕ್ಕಬಹುದು ಎಂದು ನಿಮಗನಿಸುತ್ತದೆ?”

ಹೀಗೆ ಸಾಗುತ್ತದೆ ‘ನಮ್ಮ ಕನ್ನಡಿಗ’, ‘ನಮ್ಮ ಮಂಗಳೂರು ಹುಡುಗ’ ಎಂದು  ನಾವೆಲ್ಲ ಹೆಮ್ಮೆಪಟ್ಟುಕೊಳ್ಳುತ್ತಿರುವ ಅರವಿಂದ ಅಡಿಗ ಬರೆದಿರುವ “ದಿ ವೈಟ್ ಟೈಗರ್” ಪುಸ್ತಕದ ಕಥೆ. ಮೊದಲ ಏಳೆಂಟು ಪುಟಗಳನ್ನು ಓದುವಾಗಲೇ ಮುಂದೇನು ಹೇಳಬಹುದು ಎಂಬುದರ ಸುಳಿವು ಸಿಗುತ್ತದೆ, ದೇವರ ಬಗ್ಗೆ ಅವರು ಬಳಸುವ ಪದಗಳು ವಿಡಂಬನೆ ಎನಿಸುವ ಬದಲು ಕೀಳು ಅಭಿರುಚಿ ಎನಿಸಿ ಬಿಡುತ್ತವೆ. ‘ದಿ ವೈಟ್ ಟೈಗರ್’ನ ಕಥೆ ಆರಂಭವಾಗುವುದೇ ಒಂದು ವಿಚಿತ್ರ ಸನ್ನಿವೇಶದೊಂದಿಗೆ. ‘ಚೀನಾ ಪ್ರಧಾನಿ ವೆನ್ ಜಿಯಾಬಾವೋ ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆ’ ಎಂಬ ಸುದ್ದಿ ‘ಆಲ್ ಇಂಡಿಯಾ ರೇಡಿಯೋ’ದಲ್ಲಿ ಬಿತ್ತರವಾಗುತ್ತದೆ. ಅದನ್ನು ಕೇಳಿದ ಬಲರಾಮ ಹಲವಾಯಿ ಮನದೊಳಗೆ ಅನೇಕ ಆಲೋಚನೆಗಳು ಹರಿದು ಹೋಗತೊಡಗುತ್ತವೆ. “ಪ್ರತಿ ಬಾರಿ ಮಹಾನ್ ವ್ಯಕ್ತಿಗಳು ದೇಶಕ್ಕೆ ಆಗಮಿಸಿದಾಗಲೂ ನಮ್ಮ ಪ್ರಧಾನಿ ಕರಿ ಕಾರಿನಲ್ಲಿ ಏರ್‌ಪೋರ್ಟ್‌ಗೆ ಆಗಮಿಸು ತ್ತಾರೆ. ಕಾರಿನಿಂದ ಕೆಳಗಿಳಿದು ನಿಮ್ಮ ಹಾಗೂ ಟಿವಿ ಕ್ಯಾಮೆರಾ ಗಳ ಮುಂದೆ ನಮಸ್ತೆ ಮಾಡುತ್ತಾರೆ. ಭಾರತವೆಂಥ ನೈತಿಕತೆ ಯಿಂದ ಕೂಡಿದ, ಪರಿಶುದ್ಧ, ಚಾರಿತ್ರ್ಯಯುತ ರಾಷ್ಟ್ರ ಎಂದು ವರ್ಣಿಸುತ್ತಾರೆ!

ಅದೊಂದು ದೊಡ್ಡ ಜೋಕು”.

ಹಾಗೆನ್ನುತ್ತಾನೆ ಬಲರಾಮ ಹಲವಾಯಿ. “ದಿ ವೈಟ್ ಟೈಗರ್” ಪ್ರಾರಂಭವಾಗುವುದೇ ಹೀಗೆ. ಚೀನಾದ ಪ್ರಧಾನಿ ವೆನ್ ಜಿಯಾಬಾವೋ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯನ್ನೇ ಇಟ್ಟುಕೊಂಡು ಅರವಿಂದ ಅಡಿಗ ಕಥೆ ಹೆಣೆಯುತ್ತಾರೆ. ಜಿಯಾಬಾವೋ ಆಗಮನಕ್ಕೆ ೭ ದಿನಗಳಿರುತ್ತವೆ. ಆ ಏಳು ದಿನಗಳಲ್ಲಿ ಜಿಯಾಬಾವೋಗೆ ಏಳು ಪತ್ರಗಳನ್ನು ಬರೆಯುತ್ತಾರೆ. ಆ ಪತ್ರಗಳಲ್ಲೇ ಬಲರಾಮ ಹಲವಾಯಿ ಎಂಬ ವ್ಯಕ್ತಿಯ ಪಾತ್ರ ಸೃಷ್ಟಿಸುತ್ತಾರೆ. ಆತ ಬೆಂಗಳೂರಿನಲ್ಲಿ ತಳವೂರಿರುವ ಉದ್ಯಮಿ. ವೆನ್ ಜಿಯಾಬಾವೋ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರಿನ ಆಮೋಘ ಯಶಸ್ಸಿನ ಹಿಂದಿರುವ ಸತ್ಯವನ್ನು ತಿಳಿಯುವ ಉದ್ದೇಶವನ್ನು ಹೊಂದಿದ್ದಾರೆ ಎಂಬ ರೇಡಿಯೋ ಸುದ್ದಿಯನ್ನು ಕೇಳಿ, ‘ಬೆಂಗಳೂರಿನ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ನನಗೆ ಮಾತ್ರ’ ಎಂದುಕೊಳ್ಳುವ ಬಲರಾಮ ಹಲವಾಯಿ, ಜಿಯಾಬಾವೋ ಮುಂದೆ ವಾಸ್ತವವನ್ನು ಅನಾವರಣ ಮಾಡುವ ಸಲುವಾಗಿ  ೭ ರಾತ್ರಿ ಕುಳಿತು ಉದ್ದುದ್ದದ ಪತ್ರ ಬರೆಯುತ್ತಾನೆ. ಹಾಗೆ ಬರೆಯುವ ಪತ್ರಗಳಲ್ಲಿ ಗಯಾ ಜಿಲ್ಲೆಯ ಲಕ್ಷ್ಮಣ್‌ಗಢನ ನಿವಾಸಿಯಾದ ತಾನು ಕೇವಲ ಓದಲಷ್ಟೇ ಬರುವಷ್ಟು ಓದಿದವ, ತನ್ನ ಮನೆಯ ಪರಿಸ್ಥಿತಿ ಹೇಗಿತ್ತು, ಕೊನೆಗೆ ಕಾರು ಡ್ರೈವಿಂಗ್ ಕಲಿತು ಹೇಗೆ ಚಾಲಕನ ಕೆಲಸ ಗಿಟ್ಟಿಸಿಕೊಂಡೆ,  ಆ ದೆಸೆಯಿಂದಾಗಿ ಮಾಲೀಕನ ಜತೆ ಹೇಗೆ ದಿಲ್ಲಿಗೆ ಬಂದೆ, ದಿಲ್ಲಿಗೆ ಬಂದ ನಂತರ ಹೇಗೆ ಹೊಸ ಶಿಕ್ಷಣ(ಚಾಲಾಕುತನ) ಆರಂಭವಾಯಿತು, ಆಗ ಒಬ್ಬ ನಿಷ್ಠಾವಂತ ಸೇವಕನಾಗಿರಬೇಕೋ ಅಥವಾ ಅಡ್ಡಮಾರ್ಗ ಹಿಡಿದು ದುಡ್ಡು ಮಾಡಬೇಕೋ ಎಂಬ ತಾಕಲಾಟ ಹೇಗೆ ಎದುರಾಯಿತು, ಕೊನೆಗೆ ಮಾಲೀಕನನ್ನೇ ಕೊಂದು, ಒಂದಿಷ್ಟು ಹಣ ಲಪಟಾಯಿಸಿ ಹೇಗೆ ಬೆಂಗಳೂರಿಗೆ ಬಂದು ಐಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಪಿಕ್ ಅಪ್, ಡ್ರಾಪ್ ಕಾಂಟ್ರಾಕ್ಟ್ ಪಡೆದು ಟ್ರಾವೆಲ್ ಏಜೆನ್ಸಿಯ ಮೂಲಕ ದುಡ್ಡು ಮಾಡಿ ದೊಡ್ಡ ಶ್ರೀಮಂತನಾದೆ ಎಂಬುದನ್ನು ವಿವರಿಸುತ್ತಾನೆ. ಆದರೆ ಒಂದೊಂದು ಪತ್ರಗಳಲ್ಲೂ ನಾಮ್ ಕೆ ವಾಸ್ತೆಗಾಗಿ ತನ್ನ ಕಥೆಯನ್ನು ಫ್ಲಾಶ್ ಬ್ಲಾಕ್‌ನಲ್ಲಿ ಹೇಳುವ ಬಲರಾಮ ಹಲವಾಯಿ, ಭಾರತವನ್ನು ಕೆಟ್ಟದಾಗಿ ಚಿತ್ರಿಸಲು ಕಥೆಯನ್ನು ಬಳಸಿಕೊಳ್ಳುತ್ತಾನೆ. ಕಥೆಗಿಂತ ಹೆಚ್ಚಾಗಿ ಕೊಳಕುಗಳನ್ನೇ ಹೇಳುತ್ತಾ ಹೋಗುತ್ತಾನೆ. ‘ಗಂಗಾ ನದಿ ಬಹಳ ಪವಿತ್ರ ಎನ್ನುತ್ತಾರೆ. ಅವರ ಮಾತು ಕೇಳಿಕೊಂಡು ಗಂಗೆಯಲ್ಲಿ ಮಿಂದರೆ ಹುಶಾರ್! ಅದರಲ್ಲಿ ಬರೀ ಹೆಣ ಮತ್ತು ಹೊಲಸೇ ತುಂಬಿದೆ’ ಎಂದು ಜಿಯಾಬಾವೋ ಅವರನ್ನು ಬಲರಾಮ ಎಚ್ಚರಿಸುತ್ತಾನೆ.

ಹಾಗೆ ಭಾರತದ ಕಟ್ಟಾವೈರಿ ಚೀನಾದ ಪ್ರಧಾನಿಗೆ ಭಾರತದ ಬಗ್ಗೆ ಕೆಟ್ಟ ಚಿತ್ರಣವನ್ನು ಕೊಡುವುದನ್ನು ಓದುವಾಗ ಇದೇನು ಅರವಿಂದ ಅಡಿಗ ಬರೆದಿರುವುದೋ ಅಥವಾ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಅರವಿಂದ ಅಡಿಗನೊಳಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೋ ಎಂಬ ಅನುಮಾನ ಕಾಡುತ್ತದೆ. ನಮ್ಮ ಪೊಲೀಸರೆಂದರೆ ಭ್ರಷ್ಟರು, ನಮ್ಮ ದೇಶದ ತುಂಬೆಲ್ಲ ಕೊಳಕು, ವಂಚನೆಯೇ ತುಂಬಿದೆ, ಶ್ರೀಮಂತರೆಲ್ಲರೂ ಅಡ್ಡಮಾರ್ಗದಿಂದಲೇ ದುಡ್ಡು ಮಾಡಿ ದವರು ಎಂಬಂತೆ ಚಿತ್ರಿಸುತ್ತಾರೆ. “ದಿ ವೈಟ್ ಟೈಗರ್” ಒಂದು ಫಿಕ್ಷನ್ ಆಗಿದ್ದಿದ್ದರೆ ಕಾಲ್ಪನಿಕ ಕಥೆ ಎಂದು ನಾವೂ ಸುಮ್ಮನಾಗಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಿಸ್ಟರಿಯನ್ನು ಫಿಕ್ಷನ್‌ನಂತೆ, ಫಿಕ್ಷನ್ ಅನ್ನು ಹಿಸ್ಟರಿಯಂತೆ ಓದಿಕೊಳ್ಳಬೇಕಾಗಿದೆ. ಏಕೆಂದರೆ “ವೈಟ್ ಟೈಗರ್” ಫಿಕ್ಷನ್ ಆಗಿದ್ದರೂ ಅದರೊಳಗಿರುವುದೇ “ರಿಯಲ್ ಇಂಡಿಯಾ” ಎಂದು ಅರವಿಂದ ಅಡಿಗ ಪ್ರತಿಪಾದಿಸುತ್ತಾರೆ. ಕೊಲಂಬಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಓದಿಕೊಂಡಿದ್ದು, ಸ್ವದೇಶಕ್ಕೆ ಬಂದಾಗ ಬರೀ ಟ್ಯಾಕ್ಸಿಗಳಲ್ಲಿ ಓಡಾಡಿಕೊಂಡೇ ಭಾರತವನ್ನು ಅರೆದು ಕುಡಿದಂತೆ ಬರೆಯುತ್ತಾರೆ. ಪುಸ್ತಕದ ಪ್ರಾರಂಭದಲ್ಲಿ “ನಾನು ಹಿಂದಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿದ್ದೇನೆ” ಎಂದು ಅಡಿಗ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಅವರು ಹಿಂದಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸದೇ ಹೋಗಿದ್ದಿದ್ದರೆ “ದಿ ವೈಟ್ ಟೈಗರ್” ಬರೆಯಬೇಕಾದ ಶ್ರಮವನ್ನೇ ತೆಗೆದುಕೊಳ್ಳ ಬೇಕಿರಲಿಲ್ಲ!

“ಇದು ಯಾವುದೋ ಬಾಲಿವುಡ್ ಚಿತ್ರದ ‘ಸ್ಕಿನ್ ಪ್ಲೇ’ಯ ರಫ್ ಕಾಪಿಯಂತಿದೆ. ಪ್ರತಿ ಪಾತ್ರಗಳೂ ಕ್ಲೀಶೆಯಾಗಿ ಕಾಣಿಸುತ್ತವೆ, ಹಾಸ್ಯ ಕಹಿಯಾಗಿದೆ, ಸೂಕ್ಷ್ಮತೆಯೇ ಅದರ ಲ್ಲಿಲ್ಲ. ಬರವಣಿಗೆಯಂತೂ ಮರೆತುಬಿಡುವಂಥದ್ದು” ಎಂದು “ದಿ ಡೈಲಿ ಟೆಲಿಗ್ರಾಫ್”ನಲ್ಲಿ ಸಮೀರ್ ರಹೀಮ್ ಬರೆದಿರುವ ವಿಮರ್ಶೆಯನ್ನು ಓದಿದ ನಂತರ ‘ವೈಟ್ ಟೈಗರ್’ ಅನ್ನು ಕೈಗೆತ್ತಿಕೊಂಡರೆ ಪ್ರತಿ ಪ್ಯಾರಾ ಮುಗಿದಾಗಲೂ ಮನಸು ಅಹುದಹುದೆನ್ನುತ್ತದೆ!

ಪ್ರತಿಪುಟಗಳಲ್ಲೂ ಭಾರತದ ಅವಹೇಳನ, ನಾವು ಸುಳ್ಳು ಗಾರರು ಎಂಬಂತೆ ಪ್ರತಿಪಾದಿಸುವುದು, ತೆಗಳುವುದೇ ಕಾಣುತ್ತದೆ. ನಡುನಡುವೆ ವಿನಾಕಾರಣವಾಗಿ ಮುಸ್ಲಿಮ್ ಹೆಸರುಗಳನ್ನು ಎಳೆದುಕೊಂಡು ಬಂದು ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ಅಂತರ್ಗತ ಪೂರ್ವಗ್ರಹ, ಕೀಳಭಿಪ್ರಾಯ ವಿದೆ ಎಂಬಂತೆ ಪ್ರತಿಬಿಂಬಿಸುತ್ತಾರೆ. ಒಮ್ಮೆ, ಬಲರಾಮ ಹಲವಾಯಿಗೆ ಕೆಲಸ ನೀಡಿದ್ದ ಮಿಸ್ಟರ್ ಅಶೋಕ್ ಅವರ ಸಹೋದರ ಮುಕೇಶ್ ಮಗ ರೋಶನ್ ಕೆಲಸದಾಳು ಗಳ ಜತೆ ಕ್ರಿಕೆಟ್ ಆಡುತ್ತಿರುತ್ತಾನೆ. ಆತ ಪ್ರತಿ ಬಾರಿ ಸಿಕ್ಸ್ ಅಥವಾ ಫೋರ್ ಹೊಡೆದಾಗಲೂ “ನಾನು ಮೊಹಮ್ಮದ್ ಅಜರುದ್ದೀನ್, ಭಾರತದ ನಾಯಕ” ಎಂದು ಜೋರಾಗಿ ಹೇಳುತ್ತಿರುತ್ತಾನೆ. ಅದನ್ನು ಕಂಡು “ನಿನ್ನನ್ನು ಗವಾಸ್ಕರ್ ಎಂದು ಕರೆದುಕೋ, ಮೊಹಮ್ಮದ್ ಅಜರುದ್ದೀನ್ ಒಬ್ಬ ಮುಸ್ಲಿಮ” ಎಂದು ಅಜ್ಜ  ಗದರಿಸುತ್ತಾನೆ. ಆದರೆ ನಾವು ಸಚಿನ್ ತೆಂಡೂಲ್ಕರ್‌ನನ್ನು ಎಷ್ಟು ಇಷ್ಟಪಡುತ್ತೇವೆಯೋ ಅಷ್ಟೇ ಪ್ರೀತಿ ಅಜರ್ ಮೇಲೆಯೂ ಇದೆ. ಹಿಂದೂಗಳು ಆತನನ್ನು ಮುಸ್ಲಿಮನೆಂಬಂತೆ ಕಂಡಿದ್ದರೆ ಅಜರ್ ಭಾರತದ ನಾಯಕನೇ ಆಗುತ್ತಿರಲಿಲ್ಲ. ಅಜರುದ್ದೀನ್, ಲಿಯಾಂಡರ್ ಪೇಸ್, ತೆಂಡೂಲ್ಕರ್ ಇವರನ್ನು ನಾವೆಂದೂ ಜಾತಿ, ಧರ್ಮ ನೋಡಿ ಪ್ರೀತಿಸಿದವರಲ್ಲ. ಅಡಿಗ ಅವರಿಗೆ ಈ ಸತ್ಯವೇ ಅರ್ಥವಾಗಿಲ್ಲ.

The Story of India ಹೆಸರಿನಡಿ ಮೈಕೆಲ್‌ವುಡ್ ಎಂಬಾತ ಸಾಕ್ಷ್ಯಚಿತ್ರ(ಡಾಕ್ಯೂಮೆಂಟರಿ)ವೊಂದನ್ನು ರೂಪಿಸಿದ್ದಾರೆ. ಅದಕ್ಕೂ ಮೊದಲು ೨೦ ತಿಂಗಳ ಕಾಲ ಭಾರತವನ್ನು ಸಮಗ್ರವಾಗಿ ಸುತ್ತಿದ್ದಾರೆ. ಎಲ್ಲಾ ಲೈಬ್ರರಿಗಳಿಗೂ ಅಲೆದಿ ದ್ದಾರೆ. ಮಾಹಿತಿ, ಪುಸ್ತಕಗಳನ್ನು ಕಲೆಹಾಕಿ ೧೫ ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಅಂತಹ ಸಂಶೋಧನೆಯ ನಂತರ ರೂಪಿಸಿರುವ ‘ದಿ ಸ್ಟೋರಿ ಆಫ್ ಇಂಡಿಯಾ’ ಎಂಬ ೬ ಗಂಟೆಗಳಷ್ಟು ದೀರ್ಘವಾದ  ಸಾಕ್ಷ್ಯಚಿತ್ರ ಭಾರತದ ಇತಿಹಾಸ, ಪರಂಪರೆ ಹಾಗೂ ಹಾಲಿ ಪರಿಸ್ಥಿತಿಯನ್ನು ಹಂತ ಹಂತವಾಗಿ ತೆರೆದಿಡುತ್ತಾ ಸಾಗುತ್ತದೆ. ಹಾಗೆ ಒಂದು ಸಮಗ್ರವಾದ ಸಾಕ್ಷ್ಯಚಿತ್ರವನ್ನು ತಯಾರಿಸಿದರೂ ಭಾರತಕ್ಕೆ ನ್ಯಾಯ ಒದಗಿಸಿಕೊಡಲು ನನಗೆ ಸಾಧ್ಯವಾಗಿಲ್ಲ ಎಂದು ಮೈಕೆಲ್ ವುಡ್ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾರೆ. ಆದರೆ ಅಕ್ಟೋಬರ್ ೧೫ರಂದು ‘ಬುಕರ್’ ಪ್ರಶಸ್ತಿ ಪಡೆದಿರುವ ಅರವಿಂದ ಅಡಿಗ, “ವೈಟ್ ಟೈಗರ್”ನ ೩೨೧ ಪುಟಗಳಲ್ಲಿ ಭಾರತವೆಂದರೆ ಹೀಗೆಯೇ ಎಂದು ಜಡ್ಜ್‌ಮೆಂಟ್  ಪಾಸು ಮಾಡಿ ಬಿಡುತ್ತಾರೆ! ಬಹುಶಃ ಅದನ್ನು ಗಮನಿಸಿಯೇ “ಇದು ಮೂಲತಃ ಒಬ್ಬ ಬಾಹ್ಯ ವ್ಯಕ್ತಿಯ ಟಿಪ್ಪಣಿ ಹಾಗೂ ಜಾಳು ಅಭಿಪ್ರಾಯ ಎಂದು ನನಗನಿಸುತ್ತದೆ. ಭಾರತದಲ್ಲಿ ಕಂಡು-ಕೇಳರಿಯದ ಸಾಕಷ್ಟು ಅಂಶಗಳಿವೆ. ಅಡಿಗ ಅವರಲ್ಲಿ ಪ್ರತಿಭೆ ಇದೆ. ಮೊದಲು ಅವರು ತಮ್ಮನ್ನು ದೇಶದೊಳಗೇ ಅದ್ದಿಕೊಂಡು, ನಂತರ ಇತರ ವಿಚಾರಗಳತ್ತ ಗಮನಹರಿಸ ಬೇಕು. ವಿದೇಶಗಳಲ್ಲಿ ನೆಲೆಸಿರುವ ಹಾಗೂ ಅಡಿಗರಂತೆ ವಿದೇಶಗಳಲ್ಲಿ ವ್ಯಾಸಂಗ ಮಾಡಿರುವ ಬಹಳಷ್ಟು ಭಾರತೀಯ ಲೇಖಕರು ಸ್ವದೇಶವನ್ನು ಕ್ರೂರ ಅನ್ಯಾಯ ಹಾಗೂ ಕೊಳಕು ಭ್ರಷ್ಟಾಚಾರದ ತಾಣ ಎಂಬಂತೆಯೇ ಸಾಮಾನ್ಯವಾಗಿ ಚಿತ್ರಿಸುತ್ತಾರೆ” ಎಂದು ಕೆವಿನ್ ರಶ್ಬೈ ಅವರು ‘ವೈಟ್ ಟೈಗರ್’ ಬಗ್ಗೆ  ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಬರೆದಿದ್ದಾರೆ.

ಕೆವಿನ್ ರಶ್ಬೈ ಮಾತು ನಿಜಕ್ಕೂ ಅರ್ಥಗರ್ಭಿತ.

ಭಾರತವೆಂದರೆ ಎತ್ತಿನ ಬಂಡಿಗಳ, ರಿಕ್ಷವಾಲಾಗಳ, ಹಾವಾ ಡಿಗರ ರಾಷ್ಟ್ರ. ಇಲ್ಲಿನ ನೀರನ್ನು ಕುಡಿದರೆ ಡಯೇರಿಯಾ ಬರುವುದು ಗ್ಯಾರಂಟಿ ಎಂಬ ತಲತಲಾಂತರದಿಂದ ಬಂದ ವಿದೇಶಿಯರ ಅಭಿಪ್ರಾಯವನ್ನು ‘ವೈಟ್ ಟೈಗರ್’ ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತದೆಯೇ ಹೊರತು ಎಲ್ಲ ರೀತಿಯ ಅಡ್ಡಿ-ಅಡಚಣೆಗಳ ಹೊರತಾಗಿಯೂ ಭಾರತ ಹೇಗೆ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂಬುದರ ಬಗ್ಗೆ ಅಭಿಮಾನಪೂರ್ವಕವಾಗಿ ಕಿಂಚಿತ್ತನ್ನೂ ಹೇಳುವುದಿಲ್ಲ. ಅಲ್ಲದೆ ಅವರ ತೆಗಳಿಕೆಗಳಲ್ಲೂ ಹೊಸತನವಿಲ್ಲ, ಸವಕಲು ಟೀಕೆಗಳೇ. ಶ್ರೀಮಂತರೆಲ್ಲ ದಗಾಕೋರರೇ, ಶ್ರೀಮಂತಿಕೆಯ ಹಿಂದೆ ಮೋಸ, ವಂಚನೆ, ನಿರ್ದಯತೆ, ಡಕಾಯಿತಿಗಳಿವೆ ಎಂಬಂತೆ ಅಡಿಗ ಬರೆಯುತ್ತಾರೆ. ಆದರೆ ಒಂದು ಉದ್ಯಮವನ್ನು ಪ್ರಾರಂಭಿಸಿ ಶ್ರೀಮಂತರಾದ ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರಂತಹವರ ಪ್ರಗತಿಯ ಹಿಂದೆ ಪರಿಶ್ರಮ, ಅಪಾಯವನ್ನು ಮೇಲೆ ಎಳೆದುಕೊಂಡು ಯಶಸ್ಸನ್ನು ಅರಸುವುದು ಹೇಗೆಂಬುದನ್ನು ಕಾಣಬಹುದು. ಹಾಗೆ ಪರಿಶ್ರಮದ ಫಲವಾಗಿ ಬಂದ ಯಶಸ್ಸಿನ ಫಲವನ್ನು ಅವರೊಬ್ಬರೇ ಅನುಭವಿಸಿಲ್ಲ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಎಷ್ಟೋ ಜನರು ನಾರಾಯಣಮೂರ್ತಿಯವರಿಂದಾಗಿ ಮಿಲಿಯನೇರ್‌ಗಳೂ ಆಗಿದ್ದಾರೆ. ಜಗತ್ತಿನ ಯಾವ ದೇಶವೂ ಬಡತನ, ನಿರುದ್ಯೋಗ, ದೌರ್ಜನ್ಯ, ಅನ್ಯಾಯ, ಅನಾಚಾರಗಳಿಂದ ಮುಕ್ತವಾಗಿಲ್ಲ. ಭಾರತದಲ್ಲಿ ಇವುಗಳು ತುಸು ಹೆಚ್ಚಾಗಿಯೇ ಇದ್ದರೂ ಅವುಗಳನ್ನೆಲ್ಲ ಮೀರಿ ನಾವೊಂದು ಬಲಿಷ್ಠ ರಾಷ್ಟ್ರ ವಾಗಿ ಹೊರಹೊಮ್ಮಿದ್ದೇವೆ.

ಭಾರತದಲ್ಲಿ ಶೋಧಿಸುವಂಥದ್ದು, ಗುರುತಿಸುವಂಥದ್ದು, ಹೆಮ್ಮೆಪಟ್ಟುಕೊಳ್ಳುವಂಥದ್ದು ಸಾಕಷ್ಟಿದೆ. ಹಾಗಾಗಿಯೇ ಫ್ರೆಂಚ್ ಲೇಖಕ ಜೀನ್ ಮರೀ ಗುಸ್ತಾವೋ ಲೆ ಕ್ಲೆಝಿಯೋ, ರೋಮಾ ರೋಲ್ಯಾಂಡ್, ಜರ್ಮನ್ ಸಾಹಿತಿ ಹರ್ಮನ್ ಹೆಸ್ಸಿ ಮುಂತಾದವರು ಭಾರತದ ಬಗ್ಗೆ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ. ರೋಮಾ ರೋಲ್ಯಾಂಡ್ ಅವರು ‘ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಆಂಡ್ ದಿ ಯೂನಿವರ್ಸಲ್ ಗಾಸ್ಪೆಲ್’ ಎಂಬ ಪುಸ್ತಕವನ್ನೇ ಬರೆದಿದ್ದರೆ ಹೆಸ್ಸಿ ಹಾಗೂ ಕ್ಲೆಝಿಯೋ ತಮ್ಮ ಕೃತಿಗಳಲ್ಲಿ ಭಾರತದ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಇವರೆಲ್ಲ ಸಾಮಾನ್ಯ ವ್ಯಕ್ತಿಗಳಲ್ಲ. ಈ ಮೂವರೂ ಸಾಹಿತ್ಯಕ್ಕಾಗಿ ನೊಬೆಲ್ ಪಡೆದಿದ್ದಾರೆ. ಆದರೆ ಅರುಂಧತಿ ರಾಯ್, ವಿ.ಎಸ್. ನೈಪಾಲ್ ಅವರಂತಹವರು ಭಾರತವನ್ನು ಬೈದೇ ‘ಬುಕರ್’ ಪಡೆದರು. ಅರವಿಂದ ಅಡಿಗ ಹೊಸ ಸೇರ್ಪಡೆಯಷ್ಟೆ. ಅಷ್ಟಕ್ಕೂ ‘ಬುಕರ್’ ಕೊಡುವವರು ಭಾರತದ ಮಾಜಿ ಧಣಿಗಳು. ಬ್ರಿಟಿಷರಿಗೆ ಇಂದಿಗೂ ಭಾರತದ ಬಗ್ಗೆ ಕೀಳಭಿಪ್ರಾಯವಿದೆ. ಅಕ್ಟೋಬರ್ ೨೨ರಂದು ಯಶಸ್ವಿಯಾಗಿ ಉಡಾವಣೆ ಮಾಡಿದ ‘ಚಂದ್ರಯಾನ’ವನ್ನೇ ತೆಗೆದುಕೊಳ್ಳಿ. “ಪ್ರತಿ  ಭಾರತೀಯನಿಗೂ ಮೂಲಭೂತ ಸೌಕರ್ಯವನ್ನೇ ಒದಗಿಸಲು ಸಾಧ್ಯವಾಗಿಲ್ಲ. ಅಂತಹವರಿಗೆ ಚಂದ್ರಯಾನ ಬೇರೆ ಬೇಕೆ?” ಎಂದು ಬಿಬಿಸಿ ಚಾನೆಲ್ ಟೀಕೆ ಮಾಡಿದೆ. ನಮ್ಮ ವಿeನಿಗಳು ೧೦೦ ಕೋಟಿ ಭಾರತೀಯರು ಹೆಮ್ಮೆಪಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದರೂ ಅದರಲ್ಲೂ ಹುಳುಕು ಹುಡುತ್ತಿದೆ ಬಿಬಿಸಿ. ಅಡಿಗ ಕೂಡ ಅದೇ ವರ್ಗಕ್ಕೆ ಸೇರಿದವರಂತೆ ಕಾಣುತ್ತದೆ. ಪುಸ್ತಕವನ್ನು ಓದಿದ ನಂತರ ನಮ್ಮ ಕನ್ನಡಿಗ, ನಮ್ಮ ಮಂಗಳೂರು ಹುಡುಗ ಎಂಬ ಯಾವ ಅಭಿಮಾನಗಳೂ ಮೂಡುವುದಿಲ್ಲ. ಅರುಂಧತಿ ರಾಯ್ ಅವರಂತೆ ಬುಕರ್ ಪಡೆದ ಕೂಡಲೇ ತನಗೆ ಜಡ್ಜ್‌ಮೆಂಟ್ ಕೊಡುವ, ಎಲ್ಲದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಸಿಕ್ಕಿದೆ ಎಂಬಂತೆ ಅಡಿಗ ಈಗಾಗಲೇ ವರ್ತಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಚರ್ಚ್ ದಾಳಿ ತನಗೆ ಅತೀವ ನೋವುಂಟು ಮಾಡಿದೆ ಎಂದಿರುವ ಅಡಿಗ ಮತ್ತೊಬ್ಬ ತಥಾಕಥಿತ ಬುದ್ಧಿಜೀವಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

Watch Out!

30 Responses to “ಭಾರತವನ್ನು ಬೈಯಿರಿ, ‘ಬುಕರ್’ ಪಡೆಯಿರಿ!”

  1. Pratap Simha says:

    For further reading-

    The Alleged Booker Prize

    It’s less Orientalist and doesn’t trap you in the little-brown-man box

    BY- Jason Overdorf

    Normally, when an Indian wins the Booker Prize, the country rallies round to cheer, and even the most dubious “voracious readers” from the pages of Stardust suddenly develop an interest in literature. But Aravind Adiga’s The White Tiger was never a book Indians wanted to read, and even with the much-coveted stamp of approval from abroad, it’s hard telling whether it will get the 1,00,000-copy boost in sales experienced by Kiran Desai’s Inheritance of Loss.

    Consider the front-page Times of India story that announced the news. The first paragraph cites as the reason for the win Adiga’s “alleged ability to offer insights into the struggle of a developing nation on the rise”—effectively condemning the Booker winner as a fake. The conventional and obviously objective alternative would have been to say, “In awarding the prize, the judges praised Adiga’s skill in providing insight into the struggle of….” ‘Alleged’, which to the newspaper man implies somebody is being accused of a crime and the lawyers are worried about a case of libel, is a word used to skewer. Any editor will tell you that its use here was no accident.

    From the beginning, The White Tiger received an uncomfortable reception. The author (a friend of mine) is, if not actually a foreigner, then foreign-returned, which my wife tells me ranks even lower on the totem pole. Worse still, regardless of his ethnicity, he was a writer for Time magazine, and therefore guilty of writing bad stuff about India: that the people here are poor; they suffer from diseases like polio and tuberculosis that have been eliminated across much of the world and similar nonsense. And he did it in the book, too! The White Tiger is about a guy from Bihar, for goodness sake! Naturally, the reviews, and even some of the news articles, are peppered with backhanded compliments.

    But there are worse things than being called poor. Compared with Inheritance of Loss, The White Tiger is more compelling, better written, and—and this is the really important thing—less Orientalist.

    Inheritance of Loss infuriatingly propagates the “little brown men doing cute little things” rubbish, that by all rights should have disappeared with India’s colonists. But Indian readers overlooked this allegedly cute stuff about Anglo-Indians and Nepali immigrants and their silly ways, because of the book’s nostalgic, patriotic content. Though The White Tiger has its own broad brush moments, that kind of pandering—cheap, tired jokes about “peculiar” Indian English and the like, with which that schlocky, much-praised tome Shantaram was chock-full—is largely absent. The trouble is that The White Tiger is gleefully vicious in lampooning the middle class who are, regardless of the tired accusations about “writing for the foreign market,” Aravind’s true audience.

    It’s a familiar reaction. The critics of the foreign correspondent corps insist we are always banging on about poverty and filth, when we should be pointing out the five-star hotels. But stories about India’s slowness in eradicating poverty, malnutrition, disease and the like are rarer than you think. Aravind has called The White Tiger “a result of my secret, uncensored articles”, because it is almost impossible to get anything into Time or The Economist or Newsweek about the problems that India has had for decades and—because they are too big, or the system is too flawed, or whatever—hasn’t been able to solve. Poverty is bad. It is everywhere. But it is not news. When articles on these topics appear, nobody should be surprised. The same thing appears in the Times of India every day and Outlook every week.Nor should they be angry, unless the writer tries to imply that some white guy could step in and sort the mess out in a year or two.

    It’s the other kind of foreign correspondent rubbish, the Orientalist crap, that ought to get people incensed. Why does every article have to begin with a woman in a colourful sari, squatting in the dust? Why are western readers so concerned with the fate of tame elephants, snake-charmers and eunuchs? And why do we always find somebody to quote who speaks in Indian English as unbelievable as that invented by Gregory David Roberts? Because it’s exotic, because it’s allegedly cute. But it makes you all out to be little brown folks, funny but inscrutable.

    I, for one, would rather be called poor. And I’d rather have somebody, like Aravind, to make me angry about it.

    (Jason Overdorf is a frequent contributor to Newsweek and other leading foreign journals.)

  2. Praveen Manja says:

    Well said. There is nothing to be proud of this Adiga.

  3. Ashwini Bhat says:

    Nice article Sir……

  4. ವೆಂಕಟೇಶ್ says:

    ಒಹ್! ಧನ್ಯವಾದಗಳು ಪ್ರತಾಪ್ ಸಿಂಹ, ನೀವು ನಮ್ಮ ಕಣ್ಣು ತೆರೆಸಿದಿರಿ.
    ಬೂಕರ್ ಪ್ರಶಸ್ತಿ ಸಿಕ್ಕಿದವಾಗ ಅರವಿಂದನನ್ನು ಅಭಿನಂದಿಸಿದವರಲ್ಲಿ ನಾನೂ ಒಬ್ಬ. ಛೆ, ಇಂಥವನಿಗೆ ನಾನು ಅಭಿನಂದಿಸಿದೆ? ಇಂಥ ಕೆಟ್ಟ ಮನಸ್ಸು ಇರುವ ಈ ಎಳೇ ಕಾದಂಬರಿ ಕಾರ ಇನ್ನೂ ಹಲವು ವರ್ಷ ಬದುಕಿ ಇನ್ನೆಷ್ಟು ಅನಾಹುತ ಮಾಡುತ್ತಾನೋ? ಇವನೂ ಇತರ ‘ತರಲೆ ಬುದ್ಧಿ’ ಗಳಾದ ಅನಂತ, ಕಾರ್ನಾಡ, ಜಿ.ಕೆ.ಗೋವಿಂದ, ರವಿ ಮುಂತಾದವರ ತರ ಆಗುವುದರಲ್ಲಿ ಸಂಶಯವೇ ಇಲ್ಲ.

    ಈ ಬೂಕರ್ ಪ್ರಶಸ್ತಿ ಪಡೆದವರನ್ನು ಗಮನಿಸಿ. ಸಲ್ಮಾನ್ ರಶ್ದಿ, ಕಿರಣ್ ದೇಸಾಯಿ, ಸುಜಾನ ಅರುಂಧತಿ ರಾಯಿ ಎಲ್ಲರೂ ಭಾರತದ, ಮತ್ತು ಕ್ರಿಸ್ಚಿಯನ್ನರಲ್ಲದ ಧರ್ಮದ ವಿರುದ್ದ ಕೆಟ್ಟದಾಗಿ, ಬ್ರಿಟಿಷರಿಗೆ ಸಂತೋಷವಾಗುವ ರೀತಿಯಲ್ಲಿ ಬರೆದಿದ್ದರೆ. ಮುಂದಿನ ವರ್ಷ ಬಾಂಗ್ಲಾದ ತಸ್ಲಿಮಾ ನಸ್ರೀನ್ಗೆ ಬೂಕರ್ ಪ್ರಶಸ್ತಿ ಕಟ್ಟಿಟ್ಟ ಬುತ್ತಿ (ಅಷ್ಟರಲ್ಲಿ ನಮ್ಮ ಅನಂತು ಹಿಂದೂ ಗಳ ಬಗ್ಗೆ ಕೃತಿ ಬರೆಯದೇ ಇದ್ರೆ!).

    ಈ ಬೂಕರ್ ಪ್ರಶಸ್ತಿ ಕ್ರಿಶ್ಚಿಯನ್ ಮಿಷನರಿಗಳ ಪ್ರಾಯೋಜಿತ ಬ್ರಿಟಿಷ್ ಸಂಸ್ಥೆಯಿಂದ ಕೊಡಮಾಡುವ ಒಂದು ‘ಹಣದ ಬುಟ್ಟಿ’. ನೀವೂ ಬೂಕರ್ ಪ್ರಶಸ್ತಿ ಪಡೆಯ ಬೇಕೆ, ಸಿಂಪಲ್,
    ಭಾರತವನ್ನು, ನಿಮ್ಮ ಧರ್ಮವನ್ನು (ಕ್ರಿಶ್ಚಿಯನ್ ಬಿಟ್ಟು) ಬಾಯಿಗೆ ಬಂದಂತೆ ಬೈಯ್ಯಿರಿ, ಒಂದು ಕಾಲ್ಪನಿಕ ಕಥೆ ಹೆಣೆಯಿರಿ, ಅಲ್ಲಲ್ಲಿ ಯಾವುದೋ ಸ್ಲಂನ ಚಿತ್ರಣವನ್ನು ಸೇರಿಸಿರಿ. ಮುಂದಿನವರ್ಷ ಬೂಕರ್ ಫೈನಲಿಸ್ಟ್ ಗಳಲ್ಲಿ ನೀವೂ ಒಬ್ಬರು! ಅದರಲ್ಲಿ ಪ್ರಶಸ್ತಿ ಸಿಗುವುದು, ಯಾರು ಹೆಚ್ಚು ಬೈದಿದ್ದಾರೆ, ಯಾರ ಬರಹ ಅತ್ಯಂತ ‘ಮನರಂಜನೆ’ ಅಂತ ಬ್ರಿಟಿಷ್ ಪಾದ್ರಿಗಳು ನಿರ್ಧರಿಸುತ್ತಾರೆ.

    ಶುರು ಹಚ್ಚಿಕೊಳ್ಳಿ, ಭಾರತವನ್ನು , ಹಿಂದೂ ಗಳನ್ನೂ ಬಾಯಿಗೆ ಬಂದಂತೆ ಬೈದು ಬರೆಯಲು. ಹ್ಯಾಗಿದ್ದರೂ ಇವೆರಡಕ್ಕೂ ಯಾರೂ ‘ಕಾಪಾಡುವವರು’ ಇಲ್ಲ.

  5. Narayan says:

    Pratap,
    Thanks for this article and unfolding the truth.

  6. DMS says:

    I trust the translations from the book by Pratap are correct. Being said that, I strongly oppose the language/approach used by Aravinda adiga regarding hinduism, hindu gods in general. God is, broadly speaking, an object of gratitude for providing us an opportunity to live on this earth with all the comforts. We all use earth, water, fire, wind and other forms of energy. Our religion taught us that there is a way to thank the super power which gave us all the necessary energy and matter forms.

  7. Hello Pratap,
    Once a again very good Article.
    -Raghavendra Shet

  8. Sushrut says:

    Once again a very well article sir,,,,

  9. Abhishek says:

    hello sir,
    I am your great fan..
    its really a nice article sir.
    i thought he is great but he is not.

  10. seshadri says:

    “atta boy” or “atta girl” — from an american or european outfit , is what is being longed for by our “intellectuals”. Physical occupation of our dear Land of Indiaby Europeans may be over. But “preoccupation” of the minds of Indians – especially English only reading and writing “intellectuals”- with Western View of the world ( this includes Communist view) is in full force and growing stronger. Adiga is a specimen of that sort. One need not be impressed and in fact refuse to be impressed by Adiga type – people with mediocre and mean thoughts able to weave a web of flashy words with a sole purpose of impressing their “euro-american or communist mental masters”. There are scores of people like Adiga active in the “intellectual” world of our India. This frustrated lot want to arrogantly promote their view of the world. But their concoction fails them more often than not. So they turn to denigrating the time tested civilizational roots of our people with a “drainage inspectors'” mindset ( as Gandhiji put it). I am reminded of a comment one of my colleagues made – LIES MAY HAVE SPEED but TRUTH HAS ENDURANCE. Thank you Pratap.

  11. Venkat says:

    Hi Pratap,

    Truly a very good article. There are so many good things to mention about India, its culture instead of pointing out the poverty, diseases and targeting hinduism.

  12. Suki says:

    ಪ್ರತಾಪ್,

    ನೀವು ತುಂಬಾ ಒಳ್ಳೆಯ ಅಂಕಣ ಬರಿದಿದ್ದಿರ…ನಮ್ಮ ದೇಶದವರಾಗಿಯೇ ಇರುವ ಅರವಿಂದ ಅಡಿಗರವರು ಎಷ್ಟು ಕೆಟ್ಟದಾಗಿ ಭಾರತವನ್ನು ಬಿಂಬಿಸಿದ್ದರಲ್ವ …. ತುಂಬಾ ಅಸಯ್ಯ ಅನ್ನಿಸುತ್ತೆ …

    ಶುಭಾಷಯಗಳೊಂದಿಗೆ,
    ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ

    ಸುಕಿ

  13. prasadhegde says:

    ಪ್ರತಾಪ್, ನಿಮ್ಮ ಲೇಖನ ಅರ್ಧ ಸತ್ಯ ಮಾತ್ರ ಹೇಳುತ್ತೆ..ನೀವು ಒಮ್ಮೆ ಬಿಹಾರ್, ಉತ್ತರ ಪ್ರದೇಶ್, ತಮಿಳು ನಾಡು ಕಡೆ ಒಮ್ಮೆ ಪ್ರವಾಸ ಮಾಡಿ ಬಂದ್ರೆ ನಿಮಗೆ ಅಲ್ಲಿನ ಮೋಸ,ವಂಚನೆಯ ಅತ್ಯದಿಕ ಅನುಭವ ಆಗುತ್ತದೆ..ಆ ಲೆಕ್ಖದಲ್ಲಿ ಕರ್ನಾಟಕ ಸ್ವಲ್ಪ ಸೇಫ್..ಅಡಿಗರು ಕೆಲವೊಂದು ಕಟು ಸತ್ಯಗಳನ್ನು ಹೇಳಿದ್ದಾರೆ..ಯಾರೋ ಒಬ್ಬ ತನ್ನ ಅಬಿಪ್ರಾಯ ಹೇಳಿಕೊಂಡರೆ ತಮ್ಮಂತ ಪ್ರಬುದ್ಧ ಲೇಖಕರು ಆವೇಶದಲ್ಲಿ ಪ್ರತಿಕ್ರಯಿಸೋದು ಮೂರ್ಖತನ..ನಮ್ಮ ದೇಶದ ರಾಜಕಾರಣಿಗಳನ್ನು ನೋಡಿದರೆ ಸಾಕು ಎಂತವರಿಗೂ ಅಸಹ್ಯ ಬರುತ್ತೆ..ಬರೀ ಬೊಗಳೆ ಮಾತುಗಳೇ..ಎಲ್ಲ ದೇಶದಲೂ ಇಂಥಹ ಜನ ಇರ್ತಾರೆ..ಆದ್ರೆ ನಮದ್ರಲ್ಲಿ ಸ್ವಲ್ಪ ಜಾಸ್ತಿ…ನಮ್ಮ ದೇಶ ಹೆಮ್ಮೆ ಪಡುವಂತಹ ಸಾಧನೆಯೂ ಮಾಡಿದೆ..ಹಾಗೇ ತುಂಬಾ ಅವಮಾನ ಪಡುವಂತಹುದು ಮಾಡಿದೆ..ನಮ್ಮ ಮಹಾನ್ ಭಾರತದಲ್ಲಿ ಇನ್ಫಿ ಮುರ್ತಿನೂ ಇದ್ದಾರೆ..ಹಾಗೆ ಅಮರ್ ಸಿಂಗ್ ಇದ್ದಾನೆ..ಲಾಲೂ ಇದ್ದಾನೆ..ವಾಜಪೇಯಿ ಸಹ ಇದ್ದಾರೆ..but sad part here laloo can rule bihar for 15 yrs but vajapeyi is jst 5 yrs..

  14. Ramya says:

    Well Mr. Prasad Hegde, there are both Good and Bad about everything and every country.
    You cannot say that whole country is full of only bad people just because of some of them. And moreover there are certain qualities and behaviors which are true to nature of people, irrespective of the nation they belong to. It is those qualities that author is highlighting.
    Discrimination by religion is there in whole world in every country.

    Country is made of PEOPLE and not machines, for someone to say that this is how the whole country is and this is how this country behaves. People are dynamic and different from each other. So you cannot generalize saying that whole country is bad.

  15. Havyaka says:

    ಹೆಗಡೆಯವರೇ, ನೀವು ನಿಮ್ಮ ಅಭಿಪ್ರಾಯ ಹೇಳುತ್ತಾ, ಪ್ರತಾಪ ಸಿಂಹರನ್ನು
    “ತಮ್ಮಂತ ಪ್ರಬುದ್ಧ ಲೇಖಕರು ಆವೇಶದಲ್ಲಿ ಪ್ರತಿಕ್ರಯಿಸೋದು ಮೂರ್ಖತನ..” ಎಂದು ದೂಷಿಸುವ ದೂಷಿಸುವ ಅಗತ್ಯವೇನಿತ್ತು?
    ಭಾರತದಲ್ಲೇನು, ಜಗತ್ತಿನ ಎಲ್ಲಕಡೆಯೂ ಒಳ್ಳೆಯದು – ಕೆಟ್ಟದ್ದು ಎರಡೂ ಇದೆ. ಅಮೆರಿಕದಂತ ಮುಂದುವರಿದ, ಜಗತ್ತಿನ ಅತ್ಯುತ್ತಮ ವಾಸಸ್ಥಳದಲ್ಲೂ ಕೂಡ ಅದರದ್ದೇ ಆದ ಸಮಸ್ಯೆಗಳು, ಹುಳುಕುಗಳು ಇವೆ.ಆದರೆ ಅದನ್ನೇ ಕೆಟ್ಟದಾಗಿ ಪ್ರತಿಬಿಂಬಿಸಿ ವಿದೇಶೀಯರಿಗೆ, ಅನ್ಯ ಧರ್ಮೀಯರಿಗೆ ಮನರಂಜನೆಯಾಗಿ ಅರ್ಪಿಸಿದರೆ ಹೇಗಿರುತ್ತೆ? ಅದನ್ನೇ ಮಾಡಿರುವು ಈ ಅರವಿಂದ ಅಡಿಗ ಅನ್ನೋ ಅಪ್ರಾಪ್ತ ಮತ್ತು ಕೊಳೆತ ಮನಸ್ಸಿನ ಹುಡುಗ ಬರೆದಿರೋದು.

    ಅದನ್ನೇ ಇಲ್ಲಿ ಎಲ್ಲರೂ ಮತ್ತು ಶ್ರೀ ಪ್ರತಾಪ ಸಿಂಹರು ಕೂಡ ಹೇಳಿದ್ದು.

    ಹೆಗ್ಡೇರು, ಒಂದು ನೆನಪು ಇಟ್ಕೊಳ್ರಾ, ಈ ತರ ಸಾಬರು, ಕ್ರಿಸ್ಚೆನ್ರು ಗಳ ಆರ್ಭಟ ಹೆಚ್ಚಾದಾಗ ಪ್ರತಾಪಸಿಂಹ ಅಂತವ್ರಿಂದಲೇ ಅಲ್ದಾ ನಂಗಕ್ಕೆಲ್ಲ ಸ್ವಲ್ಪ ಧೈರ್ಯ ಬಂದಿದ್ದು? ಈ ಪ್ರತಾಪ ಎಂತಾ ಬರದ್ರೂ ಅವುಂಗೆ ದೇಶಪ್ರೇಮ, ಧರ್ಮನಿಷ್ಠೆ ಇದ್ದು, ಹಂಗಾಗಿ ನಂಗ ಎಲ್ಲ ಸಪೋರ್ಟ್ ಮಾಡಕ್ಕೆ ಹೊರ್ತು, ಸಣ್ಣ ಪುಟ್ಟ ತಪ್ಪಾದರೆ ಅದನ್ನೆಲ್ಲಾ ಹೈಲೈಟ್ ಮಾಡಲಾಗ, ಅಕ್ಕಾ…? (friends, this is Havigannada, the language of Havyaks)

  16. prasadhegde says:

    Mrs Ramya,
    “People are dynamic and different from each other. So you cannot generalize saying that whole country is bad”. Yes,itz valid point. But why do you forget this important message while critizing any muslim or christian religion ppl/nation? At that time,why no one objects about so called “Generalization”. I dont like to defend Adiga or anybody hre but we ppl should be ready to accept some of the bad truths of our society and need to correctify those mistakes.

    To Pratap,
    “ತಮ್ಮಂತ ಪ್ರಬುದ್ಧ ಲೇಖಕರು ಆವೇಶದಲ್ಲಿ ಪ್ರತಿಕ್ರಯಿಸೋದು ಮೂರ್ಖತನ..” If this msg really hurts,then im apologising for my words..But when I went to some of d holy places like Gokarna,Mathura,Vrindavana really i was irritated by seeing ppl’ greedyness..In mathura,jst for so called “archane” they were demanding 6oors..whtz going on? They were simply encashing ppl’ weakness towards religion nd god. Do we need this? If we tells this truth do u think that im against our religion or nation? Everyone has their own voice.

  17. Ravikiran says:

    I had the shock of my life when i saw the film Indiana jones, wherein indians were potrayed as tribals, snake charmers and snake eaters(alive).aarghhh….
    With a lot of outsourcing to India, the strides India has made in the IT sector, the acquisitions of foreign companies by the Tata’s and Mittal’s and the latest chandrayaan, we have made a GLOBAL presence. So, anybody who derives joy from reading Namma mangalore hudugana version of India will be in for a rude shock seeing India in the times to come. I personally have nothing against namma huduga. Well, in future he might write about the true spirit of india, how this ancient civilization still exists and thrives.

  18. Raj says:

    Good article Prathap..when that idiot(Mr. Adiga) got the award I was happy but was not aware about the inside stories…but after reading your article I was very upset. Adiga is an psycho who never understand about India..these people are good for nothing…

    Adiga go to hell…who cares…I am proud to be an Indian..you bark as much you can

  19. avinash baburao says:

    to PRATAP SIMHA SIR………………why adiga is bad???????????/R U perfect …is u r pejavara swami is perfect????????adiga has correctly pointed out wrong things in india…..ie poverty,social inequality,brutal caste system,discrimination…when pejavara swamy tells tat MANUSMRITI is PERFECT!!!!!!!!!!!U ppl never make any arguements!!!!!!!!!!!!what t hell is tis???????????
    Kindly reply sir
    is MANUSMRITI IS RIGHT?????????IT IS T BOOK TO BE JUSTIFIED?????????WHICH DIDVIDED T PPL FOR 3000 YEARS>>>WHY THESE THINGS NEVER COME TO U R MIND???????????WHY R U BLAMING GREAT GREAT ARVIND ADIGA WHO HAS DONATED HIS PRIZE MONEY TO HIS SCHOLL TO HELP POOR CHILDREN>>>>>>>>>>>HE IS REALLY GREAT>>>>>>>>>>>

  20. Pratap Simha says:

    Mr. Baburao n Prashanth Hegde, please go through the below given link n refresh your mind-

    http://ibnlive.in.com/blogs/dpsatish/237/52797/aravind-adiga–the-white-tiger-or-just-a-paper-tiger.html

  21. ರಾಕೇಶ್ ಶೆಟ್ಟಿ says:

    @ ಪ್ರಸಾದ್,

    ಹೌದು ನೀವು ಹೇಳಿದ್ದು ಸರಿ ಇಲ್ಲಿ ಲಾಲುನೂ ಇದ್ದಾನೆ, ವಾಜಪೇಯಿನೂ ಇದ್ದಾರೆ. ಕೆಟ್ಟದ್ದು ಇರುವ ಕಡೆ ಅದನ್ನು ನಾಶ ಮಾಡಲು ಒಳ್ಳೆಯದು ಇರುವಂತೆ ಅಲ್ಲವೇ? ೧೦೬ ಕೋಟಿ ಜನ ಸಂಖ್ಯೆಯಲ್ಲಿ ೬ ಕೋಟಿ ಜನರು ಕೆಟ್ಟವರಾದರೆ ಇಡಿ ದೇಶವೇ ಕೆಟ್ಟದ?
    ಅಲ್ಲಾರಿ ದೇವರ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತನಾಡುವ ಆ ಅಡಿಗನ ಹೇಗೆ ಸಮರ್ಥಿಸ್ತಿರ? ರಾಜಕಾರಣಿಗಳನ್ನು ನೋಡಿದರೆ ಅಸಹ್ಯವಾಗುತ್ತೆ ಅಂದ್ರಿ, ಅಲ್ಲ ಸ್ವಾಮಿ ಅವರು ಕೆಟ್ಟ ಹುಳಗಳು ಸರಿ, ಅದಕ್ಕೆ ಇಡಿ ದೇಶನ ಬಯ್ಯೋದಾ?
    ಒಂದು ಹೇಳ್ತೀನಿ ಕೇಳಿ ಎಲ್ಲರ ಮನೆ ದೊಸೇನು ತೂತೆ, ನಮ್ಮ ಕೈಯಲ್ಲಿ ಆದರೆ ಅದನ್ನ ಮುಚ್ಚಬೇಕು, ಇನ್ನು ದೊಡ್ಡದಾಗಿ ಮಾಡುವುದಲ್ಲ , ಹಾಗೆ ಯಾವ ತಲೆ ಸರಿಯಿರುವ ಮನುಷ್ಯ ತನ್ನ ಮನೆಯ ಹುಳುಕನ್ನ ಜಗತ್ತಿನ ಮುಂದೆ ಸಾರಿ ಹೇಳುತ್ತಾನೆ ಹೇಳಿ?

    @ ಅವಿನಾಶ್
    ಅಡಿಗ ಓದಿದ ಶಾಲೆಗೆ ದುಡ್ಡು ಕೊಟ್ಟಿದ್ದಾರೆ ಸರಿ, ಒಪ್ಪುವಂತಹ ಕೆಲಸವೇ, ಬುಕ್ ಬರೆದು ಅಂಟಿದ ಪಾಪವನ್ನು ದಾನ ಮಾಡಿ ಕಳೆದುಕೊಳ್ಳುವ ಆಸೆ ಅಷ್ಟೆ.
    ಅಡಿಗರ ಬಗ್ಗೆ ವೈಯುಕ್ತಿಕವಾಗಿ ಇಲ್ಲಿ ಯಾರಿಗೂ ದ್ವೇಷವಿಲ್ಲ , ಆದರೆ ನಿಮ್ಮ ಮನೆಯ ಬಗ್ಗೆ ಯಾರಾದರು ಕೆಟ್ಟದಾಗಿ ಮಾತನಾಡಿದರೆ ನೀವು ಸುಮ್ಮನೆ ಇರ್ತಿರಾ?

    @ ಪ್ರತಾಪ್
    ‘ವೈಟ್ ಟೈಗರ್’ ನ ಬಣ್ಣ ಬಯಲು ಮಾಡಿದ್ದಕ್ಕೆ ಧನ್ಯವಾದಗಳು

  22. Vikram says:

    He has written about what he thinks about India, it is his views and probably what British think about India (that is how they try to hide thier Guilt). I think time will tell this world the truth about India, a White Tiger can probably tell an Half truth, which is more dangerous than a lie…

  23. Tushar says:

    Dear Pratap ,
    When I first heard the news of Adiga (an indian) getting booker prize I told my friend that again western world is trying to creat another intellectual like roy, rushdie who never loose single opportunity to curse Indian. Now my doubt is a true fact. If you want to get booker write against India
    thank you

    Tushar

  24. H.S.Vivekananda says:

    Dear Mr.Pratap

    Very rightly said. I also felt very uncomfortable reading the book. It depicts India as a land of animals and snake charmers, which I beg to differ. Rightly said, India has survived the test of time and has emerged as a world leader in terms of economic and intellectual growth. Adiga needs to ponder more on this.

  25. rangaraju says:

    hmmmm!

  26. M Akshay Ballal says:

    This is why the reason SLUMDOG MILLIONAIRE also got Oscar Award.. if u possitively watch that movie, there is nothing in that..Totally bakwaas..

  27. Arunkumar says:

    @ M Akshay Ballal

    Well said….. thats why Slumdog Millionaire got Oscar prize…