*/
Date : 26-05-2013 | 11 Comments. | Read More
“ಆ ಕರಾಳ ರಾತ್ರಿ ಕಳೆದು ಮೂವತ್ತೈದು ವರ್ಷಗಳೇ ಆದವು. ಕಾಲ ಉರುಳೇ ಬಿಟ್ಟಿತು ಎಂಬಂತೆ ಭಾಸವಾಗುತ್ತಿದೆ. ಆದರೆ ಹಸಿ ನೆನಪುಗಳು ಇನ್ನೂ ದಿಟ್ಟಿಸಿ, ದುರುಗುಟ್ಟಿ ನೋಡುತ್ತಿವೆ. ನನ್ನ ಮಟ್ಟಿಗೆ ನೌಕಾಪಡೆಯೆಂಬುದು ಮನೆಯಾಚೆಗಿನ ಮನೆ. ಯಾವತ್ತೂ ನೆರವಿಗೆ ಬಂದಿದೆ. ಸಹೋದರತ್ವ, ಕೌಟುಂಬಿಕ ಬೆಸುಗೆ ಮತ್ತು ರಾಷ್ಟ ರೂಪಿಸುವುದು- ಇವುಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಸೇನಾ ಪಡೆ. ಇಂತಹ ಮಹಾನ್ ಸೇನಾ ಕುಟುಂಬದ ಭಾಗವಾಗಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು”.
Date : 05-05-2013 | 19 Comments. | Read More
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಯಾವ ಮುಖವಿಟ್ಟುಕೊಂಡು ಬಂದು ಪ್ರಚಾರ ಮಾಡುತ್ತಾರೆ? ಇಂಥದ್ದೊಂದು ಭ್ರಷ್ಟ ಆಡಳಿತವನ್ನು ಕೊಟ್ಟ ಸರ್ಕಾರಕ್ಕೆ ಮತ್ತೆ ಮತ ಕೊಡಿ, ಪುನರಾಯ್ಕೆ ಮಾಡಿ ಎಂದು ಹೇಗೆ ತಾನೇ ಕೇಳಿಯಾರು? ಮತ ಕೊಡಿ ಎಂದು ಕೇಳುವಾಗ ಕೊಡಲು ಕಾರಣಗಳಾದರೂ ಯಾವಿವೆ ಹೇಳಿ? ಹಾಗಂತ ಕೆಲವರು ಕುಹಕವಾಡುತ್ತಿದ್ದರು.
Date : 01-05-2013 | 21 Comments. | Read More
ಖ್ಯಾತ ಸಾಹಿತಿ ಬೀChiಯುವರ ‘ಬೆಳ್ಳಿ ತಿಂಮ ನೂರೆಂಟು ಹೇಳಿದ’ ಪುಸ್ತಕದಲ್ಲಿ ಒಬ್ಬ ರಾಜಕಾರಣಿಯ ಕಥೆ ಬರುತ್ತದೆ. ಮೈದಾನಕ್ಕೆ ಕಾಪೌಂಡ್ ಇಲ್ಲ, ಭಾಷಣಕ್ಕೆ ಇತಿಮಿತಿಯಿಲ್ಲ, ಹೇಳುವವರಿಗೆ ಬೇಸರವಿಲ್ಲ, ಕೇಳುವವರಿಗೆ ಬೇರೆ ಕೆಲಸವಿಲ್ಲ. ರಾಜಕಾರಣಿಯ ಭಾಷಣ ಹರಿಯಿತು, ಊರ ಮಧ್ಯೆಯ ಗಟಾರದಂತೆ. ರಾಜಕಾರಣಿ: ಇಂದು ನಮ್ಮ ಜನಕ್ಕೆ ಏನು ಬೇಕು ಹೈಡ್ರೋಜನ್, ಆಟಂ ಬಾಂಬುಗಳೇನು? ‘ಅಲ್ಲ, ಅಲ್ಲ..’ ಎಂದು ಒಕ್ಕೊರಲಿನಿಂದ ಕೂಗಿತು ಸಭೆ. ರಾಜಕಾರಣಿ: ಸಾವಿರಾರು ಮೈಲು ಸಮುದ್ರವನ್ನು ಹಾರುವ ವಿಮಾನವೇನು? ಜನ: ಅಲ್ಲ, ಅಲ್ಲ! ಅದರಿಂದ ಉತ್ತೇಜಿತನಾದ ರಾಜಕಾರಣಿ […]