ಮಲಾಲಾ ಪ್ರಕರಣದಲ್ಲಿ ಭಾರತದ ಮತಾಂಧರಿಗೂ ಒಂದು ಮೆಸೇಜ್ ಇದೆಯಲ್ಲವೆ?
Saturday, October 20th, 2012
ಮೊದಲಿಗೆ ರಿಮ್ಷಾ ಮಸೀಹ ಈಗ ಮಲಾಲಾ ಯುಸಫ್್ಜಾಯಿ ಇವರಿಬ್ಬರೂ 14 ವರ್ಷದ ಬಾಲಕಿಯರೇ. ಮೊದಲನೆಯವಳು ಧರ್ಮನಿಂದನೆ ನೆಪದಲ್ಲಿ ಅನ್ಯಧರ್ಮಿಯರನ್ನು ಹೊಸಕಿ ಹಾಕುತ್ತಿರುವ ಪಾಕಿಸ್ತಾನದ ಮತಾಂಧ ಮುಖವನ್ನು ಜಗತ್ತಿಗೆ ಪರಿಚಯಿಸಿದರೆ, ಎರಡನೆಯವಳು ಪಾಕಿಸ್ತಾನಿಯರಿಗೇ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿರುವ ಸ್ವಧರ್ಮೀಯರ ಕರಾಳ ಮುಖವನ್ನು ಪರಿಚಯಿಸಿದ್ದಾಳೆ. ಈಗಾಗಲೇ ನಿಮಗೆ ತಿಳಿದಿರುವಂತೆ ಇಂಗ್ಲೆಂಡ್್ನ ಬರ್ಮಿಂಗ್ ಹ್ಯಾಮ್ ಕ್ವೀನ್ ಎಲಿಝಬೆತ್ ಆಸ್ಪತ್ರೆಯಲ್ಲಿ ಮಲಾಲಾ ಜೀವನ್ಮರಣದ ನಡುವೆ ಹೋರಾಡುತ್ತಿದ್ದರೆ, ಇತ್ತ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಿರುವ ರಿಮ್ಷಾ ಮಸೀಹ ಹತ್ಯೆಯಿಂದ ಬಚಾವಾಗಿದ್ದರೂ ಯಾವ ಕ್ಷಣದಲ್ಲೂ ತಲೆಗೆ [...]









