Archive for October, 2011

‘ಸ್ವಾಹಾ’ ಕಾರ್ಯವನ್ನು ಬಯಲಿಗೆಳೆಯುವುದೇ ‘ಸ್ವಾಮಿ’ ಕಾರ್ಯ!

Sunday, October 30th, 2011
‘ಸ್ವಾಹಾ’ ಕಾರ್ಯವನ್ನು ಬಯಲಿಗೆಳೆಯುವುದೇ ‘ಸ್ವಾಮಿ’ ಕಾರ್ಯ!

ಅವರನ್ನು Maverick ಎನ್ನಿ, Eccentric ಅಂತ ಕರೆಯಿರಿ, ವಿವಾದಪ್ರಿಯ ಎಂದರೂ ತಪ್ಪಿಲ್ಲ, ಕೆಲವೊಮ್ಮೆ ವಿಘ್ನಸಂತೋಷಿ ಎಂಬ ಭಾವನೆ ಮೂಡಿದರೂ ಆಶ್ಚರ್ಯವಾಗದು. ಅವರು ಈ ಎಲ್ಲವೂ ಹೌದು. ಅಟಲ್ ಬಿಹಾರಿ ವಾಜಪೇಯಿ, ಜಯಲಲಿತಾ, ರಾಮಕೃಷ್ಣ ಹೆಗಡೆ, ವಿಪಿ ಸಿಂಗ್, ಚಂದ್ರಶೇಖರ್್ರಿಂದ ಎ. ರಾಜಾ, ಟಿ.ಅರ್. ಬಾಲು, ಕರುಣಾನಿಧಿ, ಚಿದಂಬರಂ ಹಾಗೂ ಸೋನಿಯಾ ಗಾಂಧಿವರೆಗೆ ಯಾರನ್ನೂ ಕಾಡದೆ ಬಿಟ್ಟಿಲ್ಲ, ಬಿಡುವ ಜಾಯಮಾನವೂ ಅವರದ್ದಲ್ಲ. ಈ ಸುಬ್ರಹ್ಮಣ್ಯನ್ ಸ್ವಾಮಿಯವರು “How to Make Enemies and Antagonise People?’ ಎಂಬ ಪುಸ್ತಕವನ್ನೇ [...]

ಇವರ ವರದಿಗಳು ಸರ್ಕಾರಕ್ಕೆ ಮಾತ್ರ ‘ವಿನೋದ’ ತರುತ್ತಿಲ್ಲ!

Tuesday, October 18th, 2011
ಇವರ ವರದಿಗಳು ಸರ್ಕಾರಕ್ಕೆ ಮಾತ್ರ ‘ವಿನೋದ’ ತರುತ್ತಿಲ್ಲ!

ನಮ್ಮ ಕೇಂದ್ರ ಸರ್ಕಾರದ ಮಂತ್ರಿಗಳು ಒಬ್ಬರ ಹಿಂದೆ ಒಬ್ಬರಂತೆ ರಾಜಿನಾಮೆ ಇತ್ತು ಕೆಳಗಿಳಿಯುತ್ತಿದ್ದಾರೆ, ಇನ್ನು ಕೆಲವರು ತಮ್ಮ ಬುಡಕ್ಕೆ ಯಾವಾಗ ಕುತ್ತು ಬರುತ್ತದೋ ಎಂದು ಆತಂಕದಿಂದ ಕುಳಿತಿದ್ದಾರೆ, ಹಾಲಿ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ತಮ್ಮ ಲಾಯರ್ ಬುದ್ಧಿ ಪ್ರಯೋಗಿಸಿ ‘ಝೀರೋ ಲಾಸ್ ಥಿಯರಿ’ ಮಂಡಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ, ಹಾಲಿ ಗೃಹ ಸಚಿವ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಮಾಡಿದ ಪಾಪ ಈಗ ಕಾಡಲು ಆರಂಭಿಸಿದೆ, ಒಂದು ವೇಳೆ ಚಿದಂಬರಂ ಅವರು ರಾಜಿನಾಮೆ ನೀಡಬೇಕಾಗಿ [...]

ಹೊಣೆಗಾರಿಕೆ ಇಲ್ಲದೇ ಪ್ರಭಾವಿಯಾಗೋದು ಹೀಗೇನಾ?

Tuesday, October 11th, 2011
ಹೊಣೆಗಾರಿಕೆ ಇಲ್ಲದೇ ಪ್ರಭಾವಿಯಾಗೋದು ಹೀಗೇನಾ?

Who matter? ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ವಿಶ್ವವಿಖ್ಯಾತ”ಫೋರ್ಬ್ಸ್್’ ಮ್ಯಾಗಝಿನ್ ಪ್ರತಿವರ್ಷ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯ, ಪ್ರಭಾವಗಳನ್ನು ಅಳೆದು ತೂಗುತ್ತದೆ. ಕೊನೆಗೆ ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಒಂದರಿಂದ 10 ಸ್ಥಾನಗಳನ್ನು ಸಾಮಾನ್ಯವಾಗಿ ರಾಜಕಾರಣಿಗಳೇ ಅಂದರೆ ಪ್ರಧಾನಿ, ರಾಷ್ಟ್ರಾಧ್ಯಕ್ಷ ಇಂತಹ ಸ್ಥಾನಗಳಲ್ಲಿರುವವರು ಆಕ್ರಮಿಸಿರುತ್ತಾರೆ. ಇಷ್ಟಕ್ಕೂ ಪ್ರಭಾವಿ, ಬಲಶಾಲಿ ಎನಿಸಿಕೊಳ್ಳಲು ಹಣವೊಂದೇ ಇದ್ದರೆ ಸಾಲದು. ಹಾಗಾಗಿ ಒಂದು ದೇಶದ ರಾಜಕೀಯ ಅಧಿಕಾರ, ಅರ್ಥವ್ಯವಸ್ಥೆ, ಸೇನೆ, ಅಧಿಕಾರಶಾಹಿ ವರ್ಗ ಮುಂತಾದುವುಗಳ ಮೇಲೆ ಹೊಂದಿರುವ [...]

ಲೋಕಪಾಲ ವ್ಯಾಪ್ತಿಗೆ ನ್ಯಾಯಾಂಗ ಸೇರುವುದು ಬೇಡ!

Sunday, October 2nd, 2011
ಲೋಕಪಾಲ ವ್ಯಾಪ್ತಿಗೆ ನ್ಯಾಯಾಂಗ ಸೇರುವುದು ಬೇಡ!

ಪ್ರಸ್ತುತ ನನೆಗುದಿಗೆ ಬಿದ್ದಿರುವ ಜನ ಲೋಕಪಾಲ್ ಮಸೂದೆಯ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಜತೆ ಅರುಣಾ ರಾಯ್ ಹಾಗೂ ಡಾ. ಜಯಪ್ರಕಾಶ್ ನಾರಾಯಣ್ ಹೆಸರುಗಳೂ ಚಾಲ್ತಿಯಲ್ಲಿವೆ. ಇಂದಿರಾ ಗಾಂಧಿಯವರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ರೂಪಿಸಿದ ಮಹಾನ್ ನೇತಾರ ಜೆಪಿಯವರ ಹೆಸರನ್ನೇ ಹೊಂದಿರುವ ಈ ಜಯಪ್ರಕಾಶ್ ನಾರಾಯಣ್ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆಂಧ್ರದ ಗುಂಟೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿ ಪಡೆದ ಡಾ. ಜಯಪ್ರಕಾಶ್ ನಾರಾಯಣ್ ಲೋಕಸೇವಾ ಆಯೋಗದತ್ತ ಆಕರ್ಷಿತರಾದರು. 1980ರ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲಿಗರಾಗಿ ಪಾಸಾಗಿ [...]

ಈ ವಿಷಯಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದಾರಾ?

Saturday, October 1st, 2011
ಈ ವಿಷಯಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದಾರಾ?

ನಾಳೆ ಗಾಂಧಿ ಜಯಂತಿ. ಕಳೆದ ಏಪ್ರಿಲ್್ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಉಪವಾಸ ಕುಳಿತಂದಿನಿಂದ ಗಾಂಧೀಜಿ ಬಹುಚರ್ಚಿತ ವಿಷಯವಾಗಿಬಿಟ್ಟಿದ್ದಾರೆ. ಉಪವಾಸದಂತಹ ಗಾಂಧಿ ಮಾರ್ಗದ ಬಗ್ಗೆ ಕಾಂಗ್ರೆಸ್ಸೇ ಸಣ್ಣದಾಗಿ ಅಪಸ್ವರವೆತ್ತಿದ್ದನ್ನೂ ನಾವು ನೋಡಿದ್ದಾಯಿತು. ಇನ್ನು ಗಾಂಧೀಜಿಯವರನ್ನು ಮೆಚ್ಚುವವರ ಬಗಲಲ್ಲೇ ಟೀಕಿಸುತ್ತಾ ಬಂದವರೂ ಸಾಕಷ್ಟಿದ್ದಾರೆ. ಹಾಗೆ ಟೀಕಿಸಿದವರನ್ನು”ಗೋಡ್ಸೆ ಸಂಸ್ಕೃತಿ’ಯವರು ಎಂದು ಬಹಳ ಆಕ್ರಮಣಕಾರಿಯಾಗಿ ಹರಿಹಾಯುವವರೂ ನಮ್ಮ ನಡುವೆ ಇದ್ದಾರೆ. ಇಂಥದ್ದೊಂದು ಆಕ್ರೋಶ, ಕೋಪತಾಪ ಪ್ರದರ್ಶಿಸುವ ಗಾಂಧಿವಾದಿಗಳು, ಗಾಂಧಿ ಟೋಪಿಧಾರಿಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ? ತಮ್ಮ ಮಾತು-ನಡತೆಯಲ್ಲಿ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >