Archive for July, 2011

ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!

Saturday, July 30th, 2011
ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!

ಅವರೊಬ್ಬ ಹುಟ್ಟು ಹೋರಾಟಗಾರ, ಅವರ ಸಿಡುಕು ಮುಖದ ಹಿಂದಿದ್ದಿದ್ದು ಸಾತ್ವಿಕ ಸಿಟ್ಟು, ಮೂವತ್ತು ವರ್ಷ ಪರಿಶ್ರಮಪಟ್ಟು ಪಕ್ಷ ಕಟ್ಟಿದ್ದೇ ಅವರು. ಇಂತಹ ಹೊಗಳಿಕೆ ಗುಣವಾಚಕಗಳನ್ನು ನಾವು ಇದುವರೆಗೂ ಓದುತ್ತಾ ಕೇಳುತ್ತಾ ಬಂದಿದ್ದೆವು. ಹಾಗೆಂದೇ ನಂಬಿದ್ದೆವು. ಆದರೆ… ನಮ್ಮ ನಂಬಿಕೆ ನಿಜವಾಗಿತ್ತಾ? ನಾವು ಭಾವಿಸಿದಂತೆಯೇ ಇದ್ದರಾ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ? ಅವರ ಸಿಡುಕು ಮುಖದ ಹಿಂದೆ ಇದ್ದಿದ್ದು ನಿಜಕ್ಕೂ ಸಾತ್ವಿಕ ಸಿಟ್ಟಾ? ಇಷ್ಟಕ್ಕೂ ನಿಜವಾದ ಯಡಿಯೂರಪ್ಪ ಯಾರು? ನಾವು ನಂಬಿಕೊಂಡು, ಕಲ್ಪಿಸಿಕೊಂಡು, ಗೌರವಿಸಿಕೊಂಡು ಬಂದಿದ್ದ ವ್ಯಕ್ತಿಯಾ ಅಥವಾ ಈಗ [...]

“ಭೂಮಿ”ಗೀತೆ ಪಠಿಸುತ್ತಿರುವವರ ಬಾಯಲ್ಲಿ ಭಗವದ್ಗೀತೆ?!

Friday, July 22nd, 2011
“ಭೂಮಿ”ಗೀತೆ ಪಠಿಸುತ್ತಿರುವವರ ಬಾಯಲ್ಲಿ ಭಗವದ್ಗೀತೆ?!

‘The Gita is the universal mother. She turns away nobody. Her door is wide open to anyone who knocks. A true votary of Gita does not know what disappointment is… When disappointment stares me in the face and all alone I see not one ray of light, I go back to the Bhagavad-Gita…’ ಹಾಗೆಂದಿದ್ದು ಯಾರೆಂದುಕೊಂಡಿರಿ? [...]

ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

Friday, July 15th, 2011
ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

ಇಬ್ರಾಹಿಂ ಖಾನ್ ಇಕ್ಲಾಕ್ ಅಹ್ಮದ್ ಮೊಹಮದ್ ಜಹೀರ್ ಖುರ್ಷಿದ್ ಲಾಲಾ ಇವರನ್ನು ಬಚಾವ್ ಮಾಡುವುದಕ್ಕಲ್ಲ, ಬಡಿದು ಸಾಯಿಸಲು ನಾನು ಬಯಸಿದ್ದೆ ರಾಥೋಡ್ ಸಾಬ್! Infact, ಆ ಕೆಲಸವನ್ನು ನೀವಿಂದು ಪೂರ್ಣಗೊಳಿಸಲಿದ್ದೀರಿ, ಈಗಲೇ… ಇಷ್ಟಕ್ಕೂ ನಿಮ್ಮ ಮನೆಗೆ ಜಿರಲೆಗಳು ಬಂದರೆ ಏನು ಮಾಡುತ್ತೀರಿ? ಅವುಗಳನ್ನು ಸಾಕಿ ಸಲಹುವುದಿಲ್ಲ, ಬಡಿದು ಸಾಯಿಸುತ್ತೀರಿ. ಈ ನಾಲ್ಕೂ ಜಿರಲೆಗಳು ನನ್ನ ಮನೆಯನ್ನು ಕೊಳಕು ಮಾಡುತ್ತಿದ್ದವು. ಅದನ್ನಿಂದು ಸ್ವಚ್ಛ ಮಾಡುತ್ತಿದ್ದೇನಷ್ಟೇ. ಅಷ್ಟರಲ್ಲಿ ಮಾತನ್ನು ತುಂಡರಿಸಿದ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಕೇಳುತ್ತಾರೆ, ‘ನೀನ್ಯಾರು?’  

ಅಂದಹಾಗೆ “ಕಾಮರಾಜ’ ಯಾರೆಂದುಕೊಂಡಿದ್ದೀರಿ?

Friday, July 15th, 2011
ಅಂದಹಾಗೆ “ಕಾಮರಾಜ’ ಯಾರೆಂದುಕೊಂಡಿದ್ದೀರಿ?

ಅವರ ಶಾಲೆಯಲ್ಲಿ ಗಣೇಶ ಚತುರ್ಥಿಯಂದು ವರ್ಷ ವರ್ಷವೂ ಗದ್ದಲ, ಗೌಜು. ಬಹಳ ಭಕುತಿಯಿಂದ ಗಣೇಶನ ಆರಾಧನೆ ನಡೆಯುತ್ತಿತ್ತು. ಮಕ್ಕಳಿಗದು ಸಂಭ್ರಮದ ಕ್ಷಣ. ಪ್ರಸಾದದ ಸ್ವಾದ ಮಕ್ಕಳಲ್ಲಿ ಹೊಸ ಉಮೇದು ಸೃಷ್ಟಿಸುತ್ತಿತ್ತು. ಪೂಜೆಗಾಗಿ ಮಕ್ಕಳಿಂದಲೇ ಒಂದೂವರೆ ಆಣೆ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಇತ್ತ ಅಸಾಧ್ಯ ತಲೆನೋವೆಂದು ಹಾಸಿಗೆ ಹಿಡಿದ ಅಪ್ಪ ಕುಮಾರಸಾಮಿ ಮತ್ತೆಂದೂ ಮೇಲೇಳದ ಸ್ಥಳ ಸೇರಿದ್ದ. ಬೆನ್ನಲ್ಲೇ ಅಜ್ಜ ಚಿನ್ನಪ್ಪ ನಾಡರ್ ಕೂಡ ಅಗಲಿದ್ದ. ಅಂತಹ ಕಷ್ಟದ ಸ್ಥಿತಿಯಲ್ಲೂ ಒಂದೂವರೆ ಆಣೆ ಕೊಟ್ಟ ಬಾಲಕನೊಬ್ಬ ದೇವರಿಗೆ ವಂದಿಸಿ ಪ್ರಸಾದದ [...]

ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

Friday, July 8th, 2011
ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ರಾಹುಲ್ ಗಾಂಧಿ! ಇಷ್ಟಕ್ಕೂ ಈತ ಯಾರು? ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ನಿಂತ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್್ನೋ? ಅಹಿಂಸಾ ಚಳವಳಿ ಆರಂಭಿಸಿದ ಮಹಾತ್ಮ ಗಾಂಧಿಯೋ? ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ ಸುಭಾಶ್್ಚಂದ್ರ ಬೋಸ್ ಅವರೋ? ಕುಣಿಕೆಗೆ ತಲೆಕೊಟ್ಟ ಭಗತ್ ಸಿಂಗ್್ನೋ? ಈ ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ರೋ? ಅಣುಶಕ್ತಿಯ ಮೂಲ ಪ್ರತಿಪಾದಕ ಹೋಮಿ ಜಹಾಂಗೀರ್ ಭಾಭಾನೋ? ಶ್ರೀನಗರದ ವಾಯುನೆಲೆಯನ್ನು ಉಳಿಸಿದ ಸೋಮನಾಥ ಶರ್ಮನೋ? ಕಾರ್ಗಿಲ್್ನಲ್ಲಿ ಜೀವಕೊಟ್ಟ ವಿಕ್ರಂ ಭಾತ್ರಾ, ಸೌರಭ್ ಕಾಲಿಯಾನೋ? ಯಾರೀತ?

ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜತೆ ದಲಿತರು ಸಂಬಂಧ ಬೆಳೆಸುವಂತಾಗಬೇಕು!

Thursday, July 7th, 2011
ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರ ಜತೆ ದಲಿತರು ಸಂಬಂಧ ಬೆಳೆಸುವಂತಾಗಬೇಕು!

ಭಾರತದಲ್ಲಿ ದಲಿತ ಚಿಂತನೆ ಎಂದರೆ ಅದನ್ನು ಕಡ್ಡಾಯವಾಗಿ ಮಾರ್ಕ್ಸ್್ವಾದದೊಂದಿಗೆ ತಳಕು ಹಾಕುವುದು, ಮೇಲ್ವರ್ಗವನ್ನು ನಿಂದಿಸುವುದು ಎಂಬ ಕಲ್ಪನೆ ಲಾಗಾಯ್ತಿನಿಂದ ಬೆಳೆದುಬಿಟ್ಟಿದೆ. ಈ ಚೌಕಟ್ಟಿನ ಹೊರಗೆ ನಿಂತು, ಶಿಕ್ಷಣ ಹಾಗೂ ಉದ್ಯಮಶೀಲತೆಯ ಮುಖಾಂತರವೇ ದಲಿತ ವಿಮೋಚನೆಗೆ ರಾಷ್ಟ್ರಮಟ್ಟದಲ್ಲಿ ಪ್ರಯತ್ನಕ್ಕೆ ಇಳಿದಿರುವ ವಿಶಿಷ್ಟ ಚಿಂತಕ ಚಂದ್ರಭಾನ್ ಪ್ರಸಾದ್. “ಪಯೋನೀರ್್’ನಲ್ಲಿ ಪ್ರತಿವಾರ “ದಲಿತ್ ಡೈರಿ’ ಅಂಕಣ ಬರೆಯುವ ಅವರು ದೇಶದ ಮೊದಲ ದಲಿತ ಅಂಕಣಕಾರರೂ ಹೌದು. “ಕನ್ನಡ ಪ್ರಭ’ ಓದುಗರಿಗೂ ಇವರು ತಮ್ಮ ಬರಹಗಳ ಮೂಲಕ ಪರಿಚಿತರು. ಇದೀಗ ದಲಿತ ಉದ್ಯಮಿಗಳನ್ನು [...]

ಆ ಯೇಸುವಿನಂತೆಯೇ ದಯಾಮಯಿ ಈ ಯೇಸುಪುತ್ರಿ!

Friday, July 1st, 2011
ಆ ಯೇಸುವಿನಂತೆಯೇ ದಯಾಮಯಿ ಈ ಯೇಸುಪುತ್ರಿ!

ಅವರು ಪರಿಚಯವಾಗಿದ್ದೇ ಒಂದು ರೀತಿಯ ಅಸಹಜ ಸನ್ನಿವೇಶದಲ್ಲಿ! ಅನ್ಯ ಧರ್ಮಗಳನ್ನು ನುಂಗಿ ತನ್ನ ಹೊಟ್ಟೆ ದಪ್ಪ ಮಾಡಿಕೊಳ್ಳುವ ಮತಗಳನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು “Predatory religions’ ಎನ್ನುತ್ತಾರೆ. ಅರಬ್್ನಲ್ಲಿ ಹುಟ್ಟಿ ಜಗದುದ್ದಗಲಕ್ಕೂ ಹರಡಿದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ಈ ಮಾತು ಬಹುವಾಗಿ ಅನ್ವಯವಾಗುತ್ತದೆ. Number gameನಲ್ಲಿ ಈ ಎರಡು ಮತಗಳಿಗೆ ಇರುವಷ್ಟು ನಂಬಿಕೆ ಬಹುಶಃ ಮತ್ತಾವ ಧರ್ಮಗಳಿಗೂ ಇಲ್ಲ. ಬೌದ್ಧ ಧರ್ಮ ಬೆಳೆದಿದ್ದೂ ಅನ್ಯ ನಂಬಿಕೆಗಳನ್ನು ಹೊಡೆದೇ ಎಂಬುದು ನೈಜ ಸಂಗತಿಯಾದರೂ ಅದೆಂದೂ ಬೇಟೆಯಾಡಲಿಲ್ಲ. [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >