ರಾಜ್ಯದ ಪಾಲಿಗೆ ಇವರು ‘ಭಾರದ್ವಾಜ!
Friday, January 21st, 2011
ಇಡೀ ಒಂದು ರಾಜ್ಯವೇ ಕಾಶ್ಮೀರದ ರೂಪದಲ್ಲಿ ಸಿಡಿದು ಸ್ವತಂತ್ರಗೊಳ್ಳಲು, ಭಾರತದಿಂದ ಪ್ರತ್ಯೇಕಗೊಳ್ಳಲು ಹೊರಟಿದೆ. ಈ ದೇಶದ ಮುಡಿಯೇ ಮುನಿದು ಬೇರ್ಪ ಡಲು ಮುಂದಾಗಿದೆ. ಒಂದೂವರೆ ತಿಂಗಳಾದರೂ ಹಿಂಸೆ ನಿಂತಿಲ್ಲ. ಸಾವಿನ ಸಂಖ್ಯೆ 200 ಸಮೀಪಿಸುತ್ತಿದೆ. ಕಾಶ್ಮೀರಿ ಮುಸ್ಲಿಮರ ಕಲ್ಲು ತೂರಾಟಕ್ಕೆ ಸಿಕ್ಕಿ 1300 ಸೈನಿಕರು ಆಸ್ಪತ್ರೆ ಸೇರಿದ್ದಾರೆ. 2010, ಆಗಸ್ಟ್ 11ರಂದು ವಿದ್ಯಾರ್ಥಿಗಳು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನದ ಬಾವುಟ ಹಾರಿಸುವ ಮೂಲಕ ದೇಶದ್ರೋಹಿ ಕೆಲಸ ಮಾಡಿದರು. ಅದರ ಬೆನ್ನಲ್ಲೇ ಮೊನ್ನೆ ಸೆಪ್ಟೆಂಬರ್ 11 ರಂದು ಈದ್ ಉಪವಾಸ [...]













