ದೇಶಕ್ಕೆ ಹೆಮ್ಮೆ ತಂದವನನ್ನು ನಿನ್ನ ದೇಶ ಯಾವುದೆಂದು ಕೇಳುವುದಾ?!
Monday, August 30th, 2010
I want my country back! ಹಾಗಂತ ಈ ದೇಶದ ಹೆಮ್ಮೆಯ ಪುತ್ರನೇ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತೆ? ಈ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಚೆಸ್ ತಾರೆ, ತಾನು ಯಾವ ದೇಶದ ಪ್ರಜೆ ಎಂದು ಸಾಬೀತುಪಡಿಸಬೇಕಾದ ಸನ್ನಿವೇಶ ಸೃಷ್ಟಿಯಾಯಿತೆ? ಏನಾಗಿದೆ ಕಾಂಗ್ರೆಸ್ ನೇತೃತ್ವದ ಈ ಕೇಂದ್ರ ಸರಕಾರಕ್ಕೆ? ಒಂದು ಕಡೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭ್ರಷ್ಟಾಚಾರವೆಸಗುವ ಮೂಲಕ, ಕಳಪೆ ಕಾಮಗಾರಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಳಂಕ ತರುತ್ತಿದೆ. ಇನ್ನೊಂದೆಡೆ ಭಾರತಕ್ಕೆ ವಿಶ್ವಮನ್ನಣೆ ಗಳಿಸಿಕೊಟ್ಟಿರುವ ಕ್ರೀಡಾತಾರೆಯಾದ ವಿಶ್ವನಾಥನ್ [...]













