Archive for July, 2010

ಹನ್ನೊಂದು ತುಂಬುತ್ತಿರುವ ಹೊತ್ತಿನಲಿ ಒತ್ತರಿಸಿ ಬರುತ್ತಿವೆ ನೆನಪುಗಳು!

Sunday, July 25th, 2010
ಹನ್ನೊಂದು ತುಂಬುತ್ತಿರುವ ಹೊತ್ತಿನಲಿ ಒತ್ತರಿಸಿ ಬರುತ್ತಿವೆ ನೆನಪುಗಳು!

Death… ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಪಲ್ ಕಂಪನಿಯ ಸ್ಥಾಪಕ, ಮಾಲೀಕ ಸ್ಟೀವ್ ಜಾಬ್ಸ್ ಅವರು ಯಮನ ಮನೆಯ ಕದತಟ್ಟಿ ವಾಪಸ್ ಬಂದ ಮೇಲೆ ಸಾವನ್ನು “Life’s change agent” ಎಂದು ವರ್ಣಿಸಿದ್ದರು. ಒಬ್ಬ ಸೈನಿಕನ ಪಾಲಿಗೆ ಸಾವೇ ಪ್ರಾರಬ್ಧ-Death is destiny.
ಎಷ್ಟು ನಿಜ ಅಲ್ವಾ?
ಹಾಗಂತ ಸಾವು ಇಂಥದ್ದೇ ದಿನ, ಕ್ಷಣ, ಸಂದರ್ಭದಲ್ಲಿ ಬರುತ್ತದೆ ಎಂದು ಊಹಿಸುವುದಕ್ಕಾಗುತ್ತಾ? ಬರುವ ಮುನ್ನ ಅದೇನಾದರೂ ಮುನ್ಸೂಚನೆ ಕೊಡುತ್ತದಾ? ಈ ಕೆಳಗಿನ ಪತ್ರವನ್ನೊಮ್ಮೆ ಓದಿ…

ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?

Sunday, July 18th, 2010
ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?

Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದ, ಮತಾಂತರ ಮಾಡಲು ಯತ್ನಿಸಿದ [...]

ಮೋದಿ ‘ಎನ್‌ಕೌಂಟರ್’ಗೆ ಹೊರಟವರು ಈಗೇನು ಹೇಳುತ್ತಾರೆ?

Monday, July 12th, 2010
ಮೋದಿ ‘ಎನ್‌ಕೌಂಟರ್’ಗೆ ಹೊರಟವರು ಈಗೇನು ಹೇಳುತ್ತಾರೆ?

ಗುಜರಾತ್ ಪೊಲೀಸರು ನಡೆಸಿದ ಮತ್ತೊಂದು ಎನ್‌ಕೌಂಟರ್ ಕೂಡ “ನಕಲಿ” ಎಂದು ಮಹಾನಗರ ಮ್ಯಾಜಿಸ್ಟ್ರೇಟ್ ವರದಿ ಸಾಬೀತು ಮಾಡಿದೆ. ಇನ್ನೂ ಎಷ್ಟು ಅಮಾನವೀಯರಾದಾರು ಇವರು?
No limits…
ಇಶ್ರತ್ ಜಹಾನ್ ಶಮೀಮ್ ರಾಝಾಳ ಹತ್ಯೆ ಒಂದು ನಕಲಿ ಎನ್‌ಕೌಂಟರ್ ಎಂದು ಮಹಾನಗರ ನ್ಯಾಯಾಧೀಶ ಎಸ್ಪಿ ತಮಾಂಗ್ ಅವರು 2009, ಸೆಪ್ಟೆಂಬರ್ 7ರಂದು 240 ಪುಟಗಳ ವರದಿಯನ್ನು ನೀಡಿದಾಗ ಇಂಗ್ಲಿಷ್ ಮಾಧ್ಯಮಗಳು ಈ ಮೇಲಿನಂತೆ ವರ್ಣಿಸಿದ್ದವು. ಕುಖ್ಯಾತ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ [...]

ಹತಾಶ, ನಿರ್ಲಜ್ಜ ಗಳಿಗೆಯಲ್ಲಿ ಈ ವಿಶ್ವಾಸದ “ವಾಣಿ’ ಅಗತ್ಯವಿತ್ತು!

Sunday, July 4th, 2010
ಹತಾಶ, ನಿರ್ಲಜ್ಜ  ಗಳಿಗೆಯಲ್ಲಿ ಈ ವಿಶ್ವಾಸದ “ವಾಣಿ’ ಅಗತ್ಯವಿತ್ತು!

By ಪ್ರತಾಪ್ ಸಿಂಹ, 04, July, Sunday
‘ಯಾವ ಕಾರಣಕ್ಕೂ ನಾನು ರಾಜೀನಾಮೆ ವಾಪಸು ಪಡೆಯಲಾರೆ’ ರಾಜೀನಾಮೆ ನೀಡಿದಾಗಿನಿಂದ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ನಿರಂತರವಾಗಿ ಹೇಳಿಕೊಂಡು ಬಂದ ಮಾತು  ಇದು. ಅವರ ಆ ನಿರ್ಧಾರದ ನುಡಿಯಲ್ಲಿ ಯಾವ ಅನುಮಾನಕ್ಕೂ ಆಸ್ಪದ ಇರಲಿಲ್ಲ. ಅವರ ನಿರ್ಧಾರದಲ್ಲಿ ಯಾವ ರಾಜಕೀಯ ಸೋಂಕು ಇರಲಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಎಲ್ಲ ರಾಜಕಾರಣಿಗಳೂ ಭ್ರಷ್ಟಾಚಾರದ ವಿಷಯದಲ್ಲಿ ಒಂದೇ, ಅವರೆಲ್ಲ ಒಂದೇ ಶಾಲೆಯಲ್ಲಿ ತರಬೇತಿ ಪಡೆದವರು ಎಂದು ಅವರು ಬಹಿರಂಗವಾಗಿ ಹೇಳಿಯೂ ಇದ್ದರು. ಅಷ್ಟರಮಟ್ಟಿಗೆ [...]

ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

Sunday, July 4th, 2010
ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

Reddys remain Sushma’s blue-eyed boys!
ಅದು ಬಿಜೆಪಿಯ ಅತ್ಯುನ್ನತ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಹೊರಬಿದ್ದ ಸ್ಪಷ್ಟ ಸಂದೇಶ-ಬಳ್ಳಾರಿ ರೆಡ್ಡಿ ಸಹೋದರರಷ್ಟೇ ಆಕೆಗೆ ಪ್ರೀತಿಪಾತ್ರರು! ಬಿಜೆಪಿಯ ಎರಡು ವರ್ಷಗಳ ಸಾಧನಾ ಸಮಾವೇಶದ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡ ಆಕೆ, ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಹಾಗೂ ಗಾಲಿ ಸೋಮಶೇಖರ ರೆಡ್ಡಿಯೇ ತಮ್ಮ ನಂಬಿಕಸ್ತ ಬಂಟರು ಎಂಬುದನ್ನು ಪುನರುಚ್ಚರಿಸಿದರು. ಇವರೆಲ್ಲ ಸಚಿವರಾಗಿರುವ ಆರೋಗ್ಯ, ಕಂದಾಯ, ಮೂಲಭೂತ ಸೌಕರ್ಯ ಇಲಾಖೆ ಹಾಗೂ ಕೆಎಂಎಫ್ ಅನ್ನು ಮಾತ್ರ [...]