Archive for April, 2010

ಜನ್ಮಾಂತರ, ಜ್ಯೋತಿಷ್ಯದ ಜಡಮನಸುಗಳಿಗೆ ಈಕೆಯ ಜೀವನೋತ್ಸಾಹವೇ ಪಾಠ!

Sunday, April 25th, 2010
ಜನ್ಮಾಂತರ, ಜ್ಯೋತಿಷ್ಯದ ಜಡಮನಸುಗಳಿಗೆ ಈಕೆಯ ಜೀವನೋತ್ಸಾಹವೇ ಪಾಠ!

ತಮಿಳುನಾಡಿನ ಈ ಮುತ್ತಜ್ಜಿಯ ಹೆಸರು ಕರುಪ್ಪಾಯಿ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (NREGS) ಕಚೇರಿ ಎದುರು ಕೆಲಸಕ್ಕಾಗಿ ಸಾಲುಗಟ್ಟಿ ನಿಲ್ಲುವ ಮೊದಲಿಗರಲ್ಲಿ ಆಕೆಯೂ ಒಬ್ಬಳಾಗಿರುತ್ತಾಳೆ. ವರ್ಷಕ್ಕೆ 100 ದಿನ ಕೆಲಸ ಕೊಡುವ ಈ ಯೋಜನೆಯ ಕೆಲಸಗಾತಿಯ ವಯಸ್ಸು 101!! ಆಕೆಯ ನಿರ್ದಿಷ್ಟ ವಯಸ್ಸನ್ನು ತೋರಿಸುವ ಯಾವುದೇ ದಾಖಲೆಗಳಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಬಂದಾಗ ತನಗೆ 110 ವರ್ಷ ಎಂದಿದ್ದಳು. ಆಕೆಯ ಹಿರಿಯ ಮಗನ ವಯಸ್ಸು 82. ಅದನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಿ ಆಕೆಯ [...]

ಆಕೃತಿಗಳನ್ನು ವಿರೂಪಗೊಳಿಸುವ ವಿಕೃತಿಗೆ ಕೊನೆಯೆಂದು?

Sunday, April 18th, 2010
ಆಕೃತಿಗಳನ್ನು ವಿರೂಪಗೊಳಿಸುವ ವಿಕೃತಿಗೆ ಕೊನೆಯೆಂದು?

ಒಮ್ಮೆ ದೂರದ ಶಾಲೆಯಲ್ಲಿ ಕಲಿಯುತ್ತಿದ್ದ ಸಹೋದರರಿಬ್ಬರಿಗೆ ಅಪ್ಪನನ್ನು ನೋಡುವ ಬಯಕೆಯುಂಟಾಯಿತು. ರೈಲಿನಲ್ಲಿ ಬಂದಿಳಿದ ಅವರು ಕುದುರೆಗಾಡಿಯನ್ನು ಗೊತ್ತುಮಾಡಿ ಮನೆಯತ್ತ ಹೊರಟರು. ಗಾಡಿ ಮುಂದೆ ಮುಂದೆ ಸಾಗಿತು, ಅದರ ಚಾಲಕನ ಜತೆ ಮಾತೂ ಆರಂಭವಾಯಿತು. ಮಾತಿನ ಮಧ್ಯೆ ಆತನಿಗೆ ಬಾಲಕರಿಬ್ಬರು ದಲಿತ(ಮಹರ್) ಸಮುದಾಯಕ್ಕೆ ಸೇರಿದವರು ಎಂದು ತಿಳಿಯಿತು. ಕೂಡಲೇ ಬಂಡಿಯಿಂದ ಕೆಳಗಿಳಿದ ಆತ ನೊಗವನ್ನು ಮೇಲೆತ್ತಿದ. ಆಯತಪ್ಪಿದ ಹುಡುಗರು ಅನಾಮತ್ತಾಗಿ ನೆಲಕ್ಕುರುಳಿದರು. ಅಷ್ಟೇ ಅಲ್ಲ, ಬಾಲಕರು ಅಂಗಲಾಚುತ್ತಿದ್ದರೂ ಬಾಯಿಗೆ ಬಂದಂತೆ ನಿಂದಿಸಿದ ಆತ ಮಾರ್ಗ ಮಧ್ಯದಲ್ಲೇ ಬಿಟ್ಟು ವಾಪಸ್ [...]

ಬಿಜೆಪಿ=ಬಳ್ಳಾರಿ ಜನಾರ್ದನರೆಡ್ಡಿ ಪಾರ್ಟಿ?!

Tuesday, April 13th, 2010
ಬಿಜೆಪಿ=ಬಳ್ಳಾರಿ ಜನಾರ್ದನರೆಡ್ಡಿ ಪಾರ್ಟಿ?!

ಬಳ್ಳಾರಿಯ ಮಾಜಿ ಮೇಯರ್ ಪದ್ಮಾವತಿ ಯಾದವ್ ಕೊಲೆ ಯಾಗಿ ಇಂದಿಗೆ 65 ದಿನಗಳಾದವು, ಟಪಾಲ್ ಗಣೇಶ್ ಹಾಗೂ ಇಬ್ಬರು ಟಿವಿ ವರದಿಗಾರರ ಮೇಲೆ ಹಲ್ಲೆ ನಡೆದು 13 ದಿನ ಕಳೆದವು. ಇದುವರೆಗೂ ಎಷ್ಟು ಜನರನ್ನು ಅರೆಸ್ಟ್ ಮಾಡಲಾಗಿದೆ? ತನಿಖೆಗೆ ಎಲ್ಲಿವರೆಗೆ ಬಂದಿದೆ? ಅಪರಾಧಿಗಳ ಸುಳಿವು ಸಿಕ್ಕಿ ದೆಯೇ? ಈ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಉತ್ತರ ಸಿಕ್ಕುವುದೂ ಇಲ್ಲ. ಇಷ್ಟಕ್ಕೂ ಪದ್ಮಾವತಿ ಯಾದವ್ ಯಾರ ಕುಟುಂಬಕ್ಕೆ ಆಪ್ತರಾಗಿ ದ್ದರು? ಟಪಾಲ್ ಗಣೇಶ್ ಎದುರು ಹಾಕಿಕೊಂಡಿರುವುದಾದರೂ ಯಾರನ್ನು?

ಸಾನಿಯಾ ನಿಖಾದಲ್ಲೂ ಹುಳುಕು ಹುಡುಕಬೇಕಾ?

Sunday, April 4th, 2010
ಸಾನಿಯಾ ನಿಖಾದಲ್ಲೂ ಹುಳುಕು ಹುಡುಕಬೇಕಾ?

ಅವಳಿಗೆ ಯಾರೂ ಭಾರತೀಯರು ಸಿಗಲಿಲ್ಲವೆ? ಆ ಪಾಕಿ ಸ್ತಾನಿಯೇ ಆಗಬೇಕಿತ್ತೆ? ಆಕೆಯೆಷ್ಟು ಧರ್ಮಾಂಧಳು ಎಂಬುದಕ್ಕೆ ಶೋಯೆಬ್ ಮಲಿಕ್‌ನನ್ನು ಮದುವೆಯಾಗು ತ್ತಿರುವುದೇ ದೊಡ್ಡ ಉದಾಹರಣೆಯಲ್ಲವೆ? ಇಂತಹ ತರ್ಕಗಳು ಒಂದೆಡೆಯಾದರೆ ಸಾನಿಯಾ ವಿವಾಹಕ್ಕೆ ತಮಿಳುನಾಡು-ಆಂಧ್ರಪ್ರದೇಶದಲ್ಲಿ ವಿಎಚ್‌ಪಿ ಹಾಗೂ ಇತರ ಬಲಪಂಥೀಯ ಸಂಘ ಟನೆಗಳ ವಿರೋಧ…, ಆಕೆಗೆ ಹೆಸರು, ಖ್ಯಾತಿ, ಕಾಸು ಕೊಟ್ಟಿದ್ದು ಭಾರತ, ಆದರೆ ವಿವಾಹವಾಗುತ್ತಿರುವುದು ಭಾರತದ ಬದ್ಧವೈರಿ ಪಾಕಿಸ್ತಾನದ ವ್ಯಕ್ತಿಯನ್ನು ಎಂಬ ತಗಾದೆ, ತಕರಾರುಗಳು ಮತ್ತೊಂದೆಡೆ!
ಅಬ್ಬಬ್ಬಾ…