My Name Is Khan. ಕಳೆದ ವಾರ ಬಿಡುಗಡೆಯಾದ ಈ ಚಿತ್ರವನ್ನು ಒಂದೇ ಪದದಲ್ಲಿ ವರ್ಣಿಸುವುದಾದರೆ ‘Horrible’. ಎರಡು ಪದಗಳಲ್ಲಿ ಹೇಳುವುದಾದರೆ ‘Bull shit’, ಮೂರು ಪದಗಳಲ್ಲಿ ವಿಮರ್ಶಿಸುವುದಾದರೆ ‘It’s a torture’, ನಾಲ್ಕು ಪದಗಳಲ್ಲಿ ಷರಾ ಬರೆಯುವುದಾದರೆ, ‘Pain in the ass’! ಮೂರು ತಾಸು ಕುಳಿತು ನೋಡಿ, ಹೀಗನಿಸದೇ ಹೋದರೆ ಹೇಳಿ. ಬೆಂಗಳೂರಿನ ಊರ್ವಶಿ ಥಿಯೇಟರ್‌ಗೆ ‘ಅವತಾರ್’ ಚಿತ್ರ ನೋಡಲು ಕಳೆದ ಬಾರಿ ಹೋದಾಗ ಒಂದು ಕಪ್ ಕೋಕ್ ಹಾಗೂ ಪಾಪ್ ಕಾರ್ನ್ ಫ್ರೀ [...]
ಕರ್ನಾಟಕದ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳೆದ ಶನಿವಾರ(Feb 6) ಮಾತಿಗೆ ನಿಂತಿದ್ದರು…
“ನಾನು 18 ಜನರ ತಂಡ ಕಟ್ಟಿಕೊಂಡು ಏಪ್ರಿಲ್-ಮೇ ತಿಂಗಳ ಸುಡು ಬಿಸಿಲಿನಲ್ಲಿ ಬಳ್ಳಾರಿಯ ಬೆಟ್ಟ-ಗುಡ್ಡಗಳನ್ನು ಅಲೆದು 1600 ಪುಟಗಳ ವರದಿ ತಯಾರಿಸಿದೆ. ಒಂದು ಟನ್ ಅದಿರಿಗೆ ಗಣಿ ಮಾಲೀಕರು ನೀಡುವ ರಾಜಸ್ವ ಧನ ಕೇವಲ 22 ರೂ! ಒಂದು ಟನ್ ಅದಿರನ್ನು ಅಗೆದು, ತೆಗೆದು ಲಾರಿಗೆ ತುಂಬಿಸಲು ಹೆಚ್ಚೆಂದರೆ 150 ರೂ.ಗಳಾಗಬಹುದು. ಅದನ್ನು ಬಂದರಿಗೆ ಸಾಗಿಸಿ ಚೀನಾದ ಹಡಗುಗಳಿಗೆ ಲೋಡ್ ಮಾಡಲು, ದಾರಿಯುದ್ದಕ್ಕೂ [...]
ಪ್ರತಿ ಶನಿವಾರ ನಾನು ಆಫೀಸಿಗೆ ಬರುವುದಿಲ್ಲ. ನನಗದು ವಾರದ ರಜಾ ದಿನ. ಮತ್ತೆ ವಾರದ ಕೆಲಸ ಆರಂಭವಾಗುವುದು ಭಾನುವಾರದಿಂದ. ಕಳೆದ ಭಾನುವಾರ ಎಂದಿನಂತೆ ಕಚೇರಿಗೆ ಕಾಲಿಡುತ್ತಲೇ ನಮ್ಮ ಸೆಕ್ಯುರಿಟಿ ಯವರು ಮಾತು ಆರಂಭಿಸಿದರು. “ಸಾರ್, ನಿನ್ನೆ ನೀವು ರಜೆ ಇದ್ರಲ್ಲಾ, ತುಂಬಾ ಫೋನ್‌ಗಳು ಬಂದಿದ್ದವು. ಅಶ್ವಿನಿ ಪ್ರೇಮ ಪ್ರಕರಣದ ಬಗ್ಗೆ ನೀವು ಬರೆದಿದ್ದ ಲೇಖನ ಓದಿ ಸುಮಾರು ಜನ ಕಾಲ್ ಮಾಡಿದ್ದರು. ನಿಮ್ಮ ಜತೆ ಮಾತನಾಡಬೇಕು ಎಂದು ಕೇಳಿದರು. ನಾಳೆ ಹನ್ನೆರಡೂವರೆ ಗಂಟೆ ನಂತರ ಕಾಲ್ ಮಾಡಿ, [...]