ಹೆತ್ತು-ಹೊತ್ತವರಿಗೆ ಕೊಡುವ ಬಳುವಳಿ ಇದೇನಾ?
Sunday, January 31st, 2010
ಅಮ್ಮಾ ನಿನ್ನ ಎದೆಯಾಳದಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳ ಬಳ್ಳಿ-
ಒಲವೂಡುತ್ತಿರುವ ತಾಯೆ
ಬಿಡದ ಬುವಿಯ ಮಾಯೆ…
ಆ ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ತಮ್ಮ ಕವಿತೆಯೊಂದರಲ್ಲಿ ಈ ರೀತಿ ಹಿಡಿದಿಟ್ಟಿದ್ದಾರೆ. ಅಮ್ಮಾ… ಅದು ಹೆಣ್ಣಿರಲಿ, ಗಂಡಾಗಿರಲಿ, ಒಂದು ಮಗು ಜಾರಿ ಬಿದ್ದಾಗ ಅಥವಾ ಎಡವಿ ಮುಗ್ಗರಿಸಿದಾಗ, ನೆಲಕ್ಕುರುಳುವಾಗ ಬಾಯಲ್ಲಿ ಬರುವ ಮೊದಲನೇ ಕೂಗು ಇದೆಯಲ್ಲಾ ಅದೇ ‘ಅಮ್ಮಾ…’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ’ ಎಂದು ಬಹಳ [...]












