ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?

Pros
“ಅದು ಜಗತ್ತಿನ ಅತ್ಯಂತ ಪುರಾತನ ವೃತ್ತಿ ಎಂದು ನೀವೇ ಹೇಳುವುದಾದರೆ, ಕಾನೂನಿನ ಮೂಲಕ ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ಏಕೆ ಕಾನೂನುಬದ್ಧಗೊಳಿಸಬಾರದು? ಮಹಿಳೆಯರ ಮಾರಾಟ, ಸಾಗಾಟವನ್ನು ತಡೆಯಲು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಗೊಳಿಸುವುದೇ ಯೋಗ್ಯ ಮಾರ್ಗ ಹಾಗೂ ಜಗತ್ತಿನ ಯಾವ ರಾಷ್ಟ್ರ ದಲ್ಲೂ ಕಠಿಣ ಕ್ರಮಗಳ ಮೂಲಕ ವೇಶ್ಯಾವಾಟಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ”.

ಹಾಗಂತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಳವೀರ್ ಭಂಡಾರಿ ಮತ್ತು ಎ.ಕೆ. ಪಟ್ನಾಯಕ್ ಡಿಸೆಂಬರ್ ೯ರಂದು ಕೇಂದ್ರದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರನ್ನು ಪ್ರಶ್ನಿಸಿದ್ದಾರೆ!

ನಮ್ಮ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮಾರಾಟ, ಸಾಗಾಟವನ್ನು ತಡೆಯಲು ಸೂಕ್ತಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ಕೋರಿ ‘ಬಚ್‌ಪನ್ ಬಚಾವೋ ಆಂದೋಲನ್” ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(PIL) ವಿಚಾರಣೆ ನಡೆಸುತ್ತಿದ್ದಾಗ ಸರಕಾರಕ್ಕೆ ಈ ರೀತಿಯ ಪ್ರಶ್ನೆ ಹಾಕಲಾಗಿದೆ. ಸುಪ್ರೀಂಕೋರ್ಟ್‌ನ ಈ ಪ್ರಶ್ನೆಯ ಬಗ್ಗೆ ನಾವೆಲ್ಲರೂ ಮಡಿವಂತಿಕೆಯನ್ನು ಬಿಟ್ಟು, ಹುಸಿ ನೈತಿಕ ಪ್ರeಯನ್ನು ಬದಿಗಿಟ್ಟು ಚಿಂತನೆ ನಡೆಸಬೇಕಾದ ಕಾಲ ಖಂಡಿತ ಬಂದಿದೆ. After all, there is nothing holy or unholy about sex! ಒಂದು ಜೋಕು ಕೇಳಿ… ಒಬ್ಬ ರಾಜಕುಮಾರ ಇರುತ್ತಾನೆ. ಅವನ ರಾಜ್ಯದಲ್ಲೇ ಮತ್ತೊಬ್ಬ ವ್ಯಕ್ತಿ ಇರುತ್ತಾನೆ. ಆ ವ್ಯಕ್ತಿ ಹಾಗೂ ರಾಜಕುಮಾರ ಇಬ್ಬರೂ ಒಂದೇ ರೀತಿ ಇರುತ್ತಾರೆ, ಒಬ್ಬರನ್ನೊಬ್ಬರು ನೂರಕ್ಕೆ ನೂರು ಎನ್ನುವಷ್ಟು ಹೋಲುತ್ತಿರುತ್ತಾರೆ. ಆ ವಿಷಯ ರಾಜಕುಮಾರನಿಗೂ ಗೊತ್ತಿರುತ್ತದೆ. ಕಾರಣ ತಿಳಿದುಕೊಳ್ಳಬೇಕೆಂಬ ಆಸಕ್ತಿ ಆತನಿಗಿದ್ದರೂ ಹೇಗೆ ತಾನೇ ಕೇಳುವುದು? ರಾಜಕುಮಾರನಿಗೊಂದು ಉಪಾಯ ಹೊಳೆಯುತ್ತದೆ. ಆ ವ್ಯಕ್ತಿಯನ್ನು ಅರಮನೆಗೆ ಕರೆಸುತ್ತಾನೆ. ಒಂದಿಷ್ಟು ಕುಶಲ ವಿಚಾರಣೆಯ ನಂತರ ಕೇಳುತ್ತಾನೆ.

ರಾಜಕುಮಾರ: ನಿಮ್ಮ ತಾಯಿಯೇನಾದರೂ ಅರಮನೆಗೆ ಕೆಲಸಕ್ಕೆ ಬರುತ್ತಿದ್ದಳೆ?
ವ್ಯಕ್ತಿ: ಇಲ್ಲಾ ಇಲ್ಲಾ.. ಆದರೆ ನಮ್ಮ ಅಪ್ಪ ರಾಣಿಯ ಬಟ್ಟೆ ತೊಳೆ ಯಲು ಆಗಾಗ್ಗೆ ಅಂತಃಪುರಕ್ಕೆ ಹೋಗುತ್ತಿದ್ದ!!

ಸೆಕ್ಸ್ ಅನ್ನುವುದು ಒಂದು ದೈಹಿಕ ಅಗತ್ಯ. ಅದನ್ನು ಒಂದು ದೌರ್ಬಲ್ಯ ಎನ್ನುವುದಾದರೆ ನಮ್ಮ ಋಷಿಮುನಿಗಳು, ದೇವರಲ್ಲೂ ಆ ದೌರ್ಬಲ್ಯವಿತ್ತು. ಮಹಾನ್ ತಪಸ್ವಿ ವಿಶ್ವಾಮಿತ್ರನೇ ಮೇನಕೆಗೆ ಮಾರುಹೋಗಲಿಲ್ಲವೆ? ಋಷಿಪತ್ನಿ ಅಹಲ್ಯೆ ಯನ್ನು ಇಂದ್ರ ಮೋಸದಿಂದ ಸೇರಲಿಲ್ಲವೆ? ಸ್ವಾಮಿ ವಿವೇಕಾನಂದ ಅವರಂತಹ ಕೆಲವರನ್ನು ಬಿಟ್ಟರೆ ಬೇರಾರಿಂದಲೂ ಆ ಬಯಕೆಯನ್ನು ಮೆಟ್ಟಿ ಮೀರಿ ನಿಲ್ಲಲಾಗಲಿಲ್ಲ. ಅದೊಂದು ಸ್ವಾಭಾವಿಕ ಪ್ರಕ್ರಿಯೆ. ಆದರೆ ಮದ್ಯ ಸೇವನೆ ಅಗತ್ಯವೂ ಅಲ್ಲ, ಸ್ವಾಭಾವಿಕವೂ ಅಲ್ಲ. ಹಾಗಿದ್ದರೂ ಮದ್ಯಪಾನವನ್ನು ಕಾನೂನುಬದ್ಧಗೊಳಿಸಿ, ಅದಕ್ಕೆ ತೆರಿಗೆ ಹಾಕಿ ಆದಾಯಗಳಿಸಬಹುದಾದರೆ ವೇಶ್ಯಾವಾಟಿಕೆಯನ್ನು ಏಕೆ ಲೀಗಲೈಸ್ ಮಾಡಬಾರದು? ನೀವೇ ಹೇಳಿ, ಕಾನೂನು ಅಥವಾ ಇನ್ನಾವುದೇ ಮಾರ್ಗಗಳ ಮೂಲಕ ವೇಶ್ಯಾವಾಟಿಕೆಯನ್ನು ತಡೆಗಟ್ಟಲು ಸಾಧ್ಯವೆ?

ಇದೊಂದು timeless ಚರ್ಚೆ!

ವೇಶ್ಯಾವಾಟಿಕೆಯೆಂಬುದು ಇವತ್ತು ಕೇವಲ ನೈತಿಕತೆ ಪ್ರಶ್ನೆಯಾಗಿ ಉಳಿದಿಲ್ಲ. ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ನೈತಿಕವಾಗಿ ಅಧಃಪತನಕ್ಕಿಳಿದಿರುವವರು ಹಾಗೂ ಸಾಮಾಜಿಕ ಪೀಡೆಗಳೋ? ವೇಶ್ಯಾವಾಟಿಕೆಯೆಂಬುದು ಒಂದು ರೀತಿಯ ದೌರ್ಜನ್ಯವಾಗಿದ್ದು ಅದನ್ನು ನಿಷೇಧಿಸಬೇಕೋ ಅಥವಾ ಅದೂ ಒಂದು ವೃತ್ತಿಯಾಗಿದ್ದು ಅದನ್ನು ಕಾನೂನುಬದ್ಧಗೊಳಿಸಬೇಕೋ? ಇಂಥ ವಾದಗಳೆದ್ದಿವೆ. ಇಲ್ಲೂ ಕೂಡ ‘ಐಚ್ಛಿಕ’ ಹಾಗೂ ‘ಅನಿವಾರ್ಯ’ ಎಂಬ ವಾದಗಳಿವೆ. ಅದನ್ನು ನಿಷೇಧಿಸಬೇಕು ಎನ್ನುವವರು, ಭಾರೀ ಸಂಖ್ಯೆಯಲ್ಲಿ ಹೆಣ್ಣುಮಕ್ಕಳನ್ನು ಒತ್ತಡದ ಮೂಲಕ ವೇಶ್ಯಾವಾಟಿಕೆಗೆ ದೂಡುತ್ತಿದ್ದಾರೆ ಎಂಬ ವಾದವನ್ನು ಮುಂದಿಟ್ಟರೆ, ಹಾಗೇನೂ ಇಲ್ಲ ಎಂದು ವಾದಿಸುವವರೂ ಇದ್ದಾರೆ. ಏಯ್ಡ್ಸ್ ಪೀಡಿತ ಭಾರತೀಯ ಬ್ರಾಥೆಲ್‌ಗಳನ್ನು (ವೇಶ್ಯಾಗೃಹ) ಸೇರುವ 10-12 ವರ್ಷದ ನೇಪಾಳಿ ಯುವತಿಯರು ಖಂಡಿತ ಇಂಥದ್ದೊಂದು ಗುಲಾಮಗಿರಿಯನ್ನು ದುಃಸ್ವಪ್ನದಲ್ಲೂ ಬಯಸುವುದಿಲ್ಲ. ಮಾದಕ ವ್ಯಸನಿಗಳು ದೈನಂದಿನ ‘ಡೋಸ್’ಗಾಗಿ ಪಿಂಪ್‌ಗಳು(ತಲೆಹಿಡುಕರ) ಹೇಳಿದಷ್ಟು ಗಿರಾಕಿಗಳಿಗೆ ಮನರಂಜನೆ ನೀಡುವ ಅನಿವಾರ್ಯತೆಯಲ್ಲಿರುತ್ತಾರೆ. ಹಿಂದಿನ ಸೋವಿಯತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರಗಳ ಯುವತಿಯರು ವೃತ್ತಿಯನ್ನರಸಿಕೊಂಡು ಏಷ್ಯಾ, ಯುರೋಪ್‌ಗೆ ಬಂದು ಹೊಟ್ಟೆಪಾಡಿಗಾಗಿ ವೇಶಾಗೃಹ ಸೇರುತ್ತಿರುವುದೂ ಇದೆ. Again, ಉದ್ಯೋಗವೆಂಬ ಮಾರುಕಟ್ಟೆಯಲ್ಲಿ ಯಾವತ್ತು ವೃತ್ತಿ ಆಯ್ಕೆಯ ಸ್ವಾತಂತ್ರ್ಯವಿತ್ತು? ಕೆಮಿಕಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಬಡತನ ರೇಖೆಯಿಂದ ಎಂದೂ ಮೇಲೆ ಬರಲು ಸಾಧ್ಯವಿಲ್ಲ. ಅಂತಹ ಬದುಕನ್ನು ಅವನು ಆಯ್ಕೆ ಮಾಡಿಕೊಂಡಿದ್ದನೆ? ವಿದ್ಯೆ ಅಥವಾ ಯಾವುದೇ ಕೌಶಲಗಳನ್ನು ಗಳಿಸಿಕೊಳ್ಳುವಂತಹ ಸಣ್ಣ ಅವಕಾಶವೂ ಇಲ್ಲದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣೊಬ್ಬಳು ಏನು ಮಾಡಬೇಕು? ಈ ‘ಆಯ್ಕೆ’ ಸ್ವಾತಂತ್ರ್ಯವನ್ನು ವೇಶ್ಯಾವಾಟಿಕೆಗೆ ಮಾತ್ರ ಏಕೆ ಅನ್ವಯ ಮಾಡಬೇಕು? ಹೀಗೂ ವಾದಿಸುವವರಿದ್ದಾರೆ. To get rich is to be glorious ಎಂಬ ಮಾತಿನಂತೆ ಯಾವುದೇ ಪ್ರಭಾವ, ಹಣಬಲ, ಬುದ್ಧಿಬಲ ಇಲ್ಲದ ಹುಡುಗಿಯೊಬ್ಬಳು ಶೀಘ್ರ ಸಂಪಾದನೆಗಾಗಿ ತನ್ನ ದೇಹವನ್ನೇ ಸಂಪನ್‘ಮೂಲ’ವಾಗಿ ಮಾಡಿಕೊಂಡಿರುವುದನ್ನೂ ಕಾಣಬಹುದು. ಯಾವುದೋ ಕಾರ್ಖಾನೆ, ಕಂಪನಿಯಲ್ಲಿ ಮೂರು ಕಾಸಿಗಾಗಿ ದುಡಿಯುವುದಕ್ಕಿಂತ ಈ ಮಾರ್ಗವೇ ಒಳ್ಳೆಯದೆಂಬುದು ಅವಳ ಯೋಚನೆಯಾಗಿರಬಹುದು. ದುಡ್ಡಿಗಾಗಿ ನೇರವಾಗಿ ದೇಹ ಮಾರಿಕೊಳ್ಳುವವಳಿಗೆ ವೇಶ್ಯೆ ಎನ್ನುತ್ತೀರಿ. ಆದರೆ ಯೋಗ್ಯ ಕೆಲಸದ ಹೆಸರಿನಲ್ಲಿ ಅದೇ ದಂಧೆ ನಡೆಯುತ್ತಿಲ್ಲವೆ? ಸಿನಿಮಾಗಳಲ್ಲಿ ಮೈಮಾಟ ತೋರಿಸುತ್ತಿರುವವರೂ ದುಡ್ಡಿಗಾಗಿಯೇ ಅಲ್ಲವೆ? ಇಂತಹ ಹತ್ತಾರು ಪ್ರಶ್ನೆ, ಪ್ರತಿ ಪ್ರಶ್ನೆಗಳಿಂದಾಗಿ ವೇಶ್ಯಾವಾಟಿಕೆಯ ಬಗೆಗಿನ ಚರ್ಚೆ ಕಾಲಾತೀತವಾಗಿ, never ending ಆಗಿ ಬಿಟ್ಟಿದೆ. ಇಷ್ಟಾಗಿಯೂ ಒಂದಂತೂ ಸತ್ಯ, ಇದು ಯಾವ ಕಾನೂನಿನಿಂದಲೂ ತಡೆಯಲಾಗದ, ಯಾವ ಕಾನೂನಿಗೂ ಬಗ್ಗದ ಸಮಸ್ಯೆ.

ಈ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆಯನ್ನು ಲೀಗಲೈಸ್‌ಮಾಡುವುದೇ ಯೋಗ್ಯ ಮಾರ್ಗ ಎಂದೆನಿಸುತ್ತದೆ!

“ಪ್ರಾಸ್ಟಿಟ್ಯೂಶನ್ ಎಂಬುದು ಗಂಡಸು ಸೃಷ್ಟಿಸಿರುವ ಸಮಸ್ಯೆ” ಎಂದು ಚಾಣಕ್ಯ ಆ ಕಾಲದಲ್ಲೇ ಹೇಳಿದ್ದ. ಜತೆಗೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ, ತೆರಿಗೆ ವಿಧಿಸಿದ್ದ. ಇವತ್ತು ಜರ್ಮನಿ, ಗ್ರೀಸ್, ನೆದರ್ಲೆಂಡ್, ನ್ಯೂಜಿಲೆಂಡ್ ಹಾಗೂ ಟರ್ಕಿಯಂತಹ ರಾಷ್ಟ್ರ ಗಳು ಇದನ್ನು ಕಾನೂನುಬದ್ಧಗೊಳಿಸಿವೆ. ವೇಶ್ಯಾವಾಟಿಕೆಯನ್ನು ವ್ಯವಸ್ಥಿತವಾಗಿ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಭಾರತ ಕೂಡ ಈ ದಿಕ್ಕಿನಲ್ಲಿ ಯೋಚಿಸಬೇಕಾದ ತ್ವರಿತ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 25 ಲಕ್ಷ ಎಚ್‌ಐವಿ ಪೀಡಿತರಿ ದ್ದಾರೆ. ಆಫ್ರಿಕಾದ ನಂತರದ ಸ್ಥಾನ ಭಾರತಕ್ಕೆ! ನಮ್ಮ ಕಾನೂನಿನಲ್ಲಿ ವೇಶ್ಯಾವಾಟಿಕೆಗೆ ಅವಕಾಶವಿಲ್ಲ. ಆದರೂ ಇಷ್ಟೊಂದು ಜನ ರೋಗ ಪೀಡಿತರಾಗಿದ್ದಾದರೂ ಹೇಗೆ? ಮುಂಬೈ ಒಂದರಲ್ಲೇ ಒಂದೂವರೆ ಲಕ್ಷ ವೇಶ್ಯೆಯರಿದ್ದಾರೆ. ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್. ಪಾಟೀಲ್ ಬಾರ್‌ಗರ್ಲ್ಸ್‌ಗಳನ್ನು ನಿಷೇಧ ಮಾಡಿದರು. ಆದರೆ ಅವರು ಏನು ಮಾಡಬೇಕು?

ಈ ಬಗ್ಗೆಯೂ ಯೋಚನೆ ಮಾಡಿ…

ನಾವು ನೈತಿಕತೆಯ ಬಗ್ಗೆ ಎಷ್ಟೇ ಮಾತನಾಡಿದರೂ ವೇಶ್ಯಾವಾಟಿಕೆ ಯನ್ನು ತಪ್ಪಿಸಲು ಸಾಧ್ಯವಿಲ್ಲ. ಆರ್ಥಿಕ ಸಮಸ್ಯೆ, ನೈಸರ್ಗಿಕ ವಿಕೋಪಗಳಿಂದ ಎದುರಾಗುವ ಸಂಕಷ್ಟ, ರಾಜಕೀಯ ಅರಾಜಕತೆ, ಸಂಘರ್ಷ ಇಂತಹ ಸಮಸ್ಯೆಗಳು ಮಹಿಳೆಯರು ಹಾಗೂ ಮಕ್ಕಳನ್ನು ಅಪಾಯದಂಚಿಗೆ ದೂಡುತ್ತವೆ ಎಂಬುದು ಒಪ್ಪುವಂಥದ್ದೇ. ಹಾಗಂತ ದೇಹವನ್ನು ಗುಲಾಮಗಿರಿಗೆ ಇಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ದೈಹಿಕ ಕಾಮನೆಗಳನ್ನು ದೌರ್ಬಲ್ಯ ಅನ್ನುವುದಕ್ಕಿಂತ ಅನಿವಾರ್ಯ ಅಗತ್ಯ ಎನ್ನುವುದೇ ಸರಿ. ಯಾರೋ ಒಬ್ಬನಿಗೆ ಅದು ಬೇಕೆಂದರೆ ಆತ ಯಾವುದಾದರೂ ಮಾರ್ಗದಲ್ಲಿ ಅದನ್ನು ಪಡೆಯಲು ಯತ್ನಿಸುತ್ತಾನೆ. ಅಮೆರಿಕದಂತಹ ರಾಷ್ಟ್ರಕ್ಕೇ ಮಾದಕ ವಸ್ತು ಮಾರಾಟವನ್ನು ತಡೆಯಲು ಸಾಧ್ಯವಾಗಿಲ್ಲ. ಹಾಗಿರುವಾಗ ವೇಶ್ಯಾವಾಟಿಕೆಯನ್ನು ತಡೆಯಲು ಸಾಧ್ಯವೆ? ಇವತ್ತು ಭಾರತದಲ್ಲಿ ಏನಾಗುತ್ತಿದೆ ಗಮನಿಸಿ.. ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆ ದೈಹಿಕ ಹಿಂಸೆಯ ಜತೆ ಆದಾಯ ಹಂಚಿಕೆ ವಿಷಯದಲ್ಲೂ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಕಾನೂನುಬಾಹಿರವಾಗಿ ನಡೆ ಯುವ ವೇಶ್ಯಾವಾಟಿಕೆಯಿಂದ ಫಲಾನುಭವಿಗಳ ಸಂಖ್ಯೆ ಹೆಚ್ಚು. ದೇಹವನ್ನು ಗುಲಾಮಗಿರಿಗೆ ಇಡಬೇಕೆಂದರೂ ಅದನ್ನು ಕದ್ದು ಮುಚ್ಚಿ ಮಾಡಬೇಕು. ಅದಕ್ಕೆ ತಲೆಹಿಡುಕರ ಸಹಾಯ ಬೇಕು, ಅವರಿಗೆ ಪೊಲೀಸರ ಶ್ರೀರಕ್ಷೆ ಅಗತ್ಯ. ಹಾಗಾಗಿ ದೈಹಿಕ ಹಿಂಸೆ ಅನುಭವಿಸುವ ಮಹಿಳೆಗೆ ಬರುವ ಪಾಲು ಅತ್ಯಂತ ಕಡಿಮೆ. ಪೊಲೀಸರು, ಏಜೆಂಟರಿಗೆ ಸಿಂಹಪಾಲು. ಈ ದೃಷ್ಟಿಯಿಂದ ವೇಶ್ಯಾ ವಾಟಿಕೆಯನ್ನು ಲೀಗಲೈಸ್ ಮಾಡುವುದೇ ಉತ್ತಮ. ಅಷ್ಟಕ್ಕೂ ಸಲಿಂಗ ಕಾಮಕ್ಕೆ ಕಾನೂನಿನ ಮುದ್ರೆ ಒತ್ತಲು ಹೊರಟಿರುವವರಿಗೆ ವೇಶ್ಯಾವಾಟಿಕೆಯನ್ನು ಲೀಗಲೈಸ್‌ಮಾಡುವುದಕ್ಕೇಕೆ ಅಂಜಿಕೆ? ಎಚ್‌ಐವಿ ಪೀಡಿತನಿಗೆ ಘನತೆಯಿಂದ ಬದುಕುವ ಹಕ್ಕಿದೆ ಎಂದು ವಾದಿಸುವುದಾದರೆ ಒಬ್ಬ ವೇಶ್ಯೆಗೂ ಗೌರವಯುತ ಬದುಕಿನ ಹಕ್ಕಿಲ್ಲವೆ? ಕಾನೂನುಬಾಹಿರವಾಗಿ ಕಾಮಾಟಿಪುರ, ಬುಧವಾರ ಪೇಟೆಯಂತಹ ರೆಡ್‌ಲೈಟ್ ಏರಿಯಾಗಳು ಬೆಳೆಯಲು ಅವಕಾಶ ನೀಡುವುದಕ್ಕಿಂತ ಲೀಗಲೈಸ್‌ಮಾಡುವುದರಲ್ಲೇ ದೇಶ ಹಾಗೂ ಸಮಾಜದ ಒಳಿತಿದೆ.

1. ಹೀಗೆ ಮಾಡುವುದರಿಂದ ಮಕ್ಕಳ, ಮಹಿಳೆಯರ ಮಾರಾಟ, ಕಳ್ಳಸಾಗಣೆ(ಚೈಲ್ಡ್ ಟ್ರಾಫಿಕಿಂಗ್) ಮೇಲೆ ನಿಗಾ ಇಡಬಹುದು. 2. ಅಮಾಯಕ ಹೆಣ್ಣುಮಕ್ಕಳು ಪಿಂಪ್‌ಗಳ ಪಿತೂರಿಗೆ ಸಿಲುಕುವುದನ್ನು ತಪ್ಪಿಸಬಹುದು. 3. ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ತಳ್ಳಿಸಿಕೊಳ್ಳುವುದನ್ನೂ ನಿಯಂತ್ರಿಸಬಹುದು. 4. ಆದಾಯದ ವಿಷಯದಲ್ಲೂ ಮಹಿಳೆಗೇ ಸಂಪೂರ್ಣ ಫಲ ದೊರೆಯುವಂತೆ ಮಾಡಬಹುದು. 5. ಪಿಂಪ್‌ಗಳ ಕೈಯಲ್ಲಿ ಸಿಕ್ಕಿ ಶಾಶ್ವತವಾಗಿ ನರಳುವುದನ್ನು ತಡೆಯಬಹುದು. 6. ಇಂಥ ಸ್ಥಳದಲ್ಲಿ ಲಭ್ಯವಿದೆ ಎಂಬ ಮಾಹಿತಿ ಮೊದಲೇ ತಿಳಿದಿರುವುದರಿಂದ ರಸ್ತೆ ಬದಿಯಲ್ಲಿ ನಿಂತು ವಿಚಿತ್ರ ಹಾವ-ಭಾವಗಳ ಮೂಲಕ ಆತ್ಮಗೌರವ ಬಿಟ್ಟು ಗಿರಾಕಿಗಳನ್ನು ಆಕರ್ಷಿಸುವ ಅಗತ್ಯವೂ ಬರುವುದಿಲ್ಲ. 7. ಸೆಕ್ಸ್ ವರ್ಕರ್ಸ್‌ಗಳನ್ನು ಇಂತಿಷ್ಟು ಕಾಲಮಿತಿಗೊಮ್ಮೆ ಆರೋಗ್ಯ ತಪಾ ಸಣೆಗೆ ಒಳಪಡಿಸಬಹುದು. 8. ರೋಗಪೀಡಿತರಿಗೆ ಪುನರ್ವಸತಿ ಕಲ್ಪಿಸಬಹುದು. 9. ಅವರಿಗೆ ಆರೋಗ್ಯ ಸೇವೆ ನೀಡಬಹುದು. 10. ಅವರ ಮಕ್ಕಳಿಗೆ ಸರಕಾರವೇ ಸೂಕ್ತ ಶಿಕ್ಷಣ, ವಸತಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಬಹುದು. 11. ಮಕ್ಕಳನ್ನು ಶಾಲೆಗೆ ಸೇರಿಸುವಾಗಲೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಅಪ್ಪ ಯಾರೆಂದು ಕೇಳುವ, ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಇರುವುದಿಲ್ಲ. ತಾಯಿಯ ಹೆಸರೊಂದನ್ನೇ ತುಂಬುವ ಅವಕಾಶ ನೀಡಿದರೆ ಒಳ್ಳೆಯದಾಗುವುದು. 12. ಒಬ್ಬ ಡ್ರೈವರ್ ರಸ್ತೆ ಬದಿಯಲ್ಲಿ ಅಸುರಕ್ಷಿತವಾಗಿ ಕಾಮತೃಷೆ ತೀರಿಸಿಕೊಂಡು, ಹೆಂಡತಿಗೆ ರೋಗ ಅಂಟಿಸುವುದು, ಮಕ್ಕಳಿಗೂ ಬಳುವಳಿಯಾಗಿ ನೀಡುವುದನ್ನು ತಡೆಯಬಹುದು. 13. ಆ ಮೂಲಕ ಸಮಾಜದ ದೈಹಿಕ ಸ್ವಾಸ್ಥ್ಯವನ್ನೂ ಕಾಪಾಡಬಹುದು. 14. ವೇಶ್ಯಾವಾಟಿಕೆಯನ್ನು ಕಾನೂನು ವ್ಯಾಪ್ತಿಗೆ ತರುವುದರ ಮತ್ತೊಂದು ಲಾಭವೆಂದರೆ ಪೊಲೀಸರ ಜವಾಬ್ದಾರಿ ಕಡಿಮೆಯಾಗಿ ಅವರು ಇತರ ಸಮಸ್ಯೆಗಳತ್ತ ಗಮನಹರಿಸಬಹುದು.

ಮೊದಲೇ ಹೇಳಿದಂತೆ ಭಾರತದಲ್ಲಿ 25 ಲಕ್ಷ ಎಚ್‌ಐವಿ ಪೀಡಿತ ರಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮತ್ತೊಂದು ಆಫ್ರಿಕಾ ವಾದೀತು ಎಂದು ಭಯಪಡುವುದಕ್ಕಿಂತ ಮಾನ್ಯತೆ ನೀಡುವುದೇ ಒಳಿತು. ರೋಗಪ್ರಸರಣವನ್ನಾದರೂ ತಡೆಯಬಹುದು. ಲೀಗಲೈಸ್ ಮಾಡಿ, ಕಾಂಡೋಮ್ ವಿತರಣೆ ಮೂಲಕ ರೋಗ ಹರಡುವಿಕೆ ಯನ್ನು ಗಣನೀಯವಾಗಿ ನಿಯಂತ್ರಣ ಮಾಡಿರುವ ಥಾಯ್ಲೆಂಡ್ ಉದಾಹರಣೆ ನಮ್ಮ ಕಣ್ಣಮುಂದಿದೆ. ಆಸ್ಪತ್ರೆಗಳ ಮುಂದೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ನೇತುಹಾಕುವುದಕ್ಕಿಂತ ಇದು ಉತ್ತಮ ಮಾರ್ಗ. ಹಾಗೆ ಮಾಡಿದ ಮಾತ್ರಕ್ಕೆ ಸಮಾಜ ಹಾಳಾಗಿ ಹೋಗುತ್ತದೆ, ಉಳಿದವರೂ ಪ್ರೋತ್ಸಾಹಿತರಾಗಿ ವೇಶ್ಯಾವೃತ್ತಿಗೆ ಇಳಿದು ಬಿಡುತ್ತಾರೆ ಎಂದು ಭಾವಿಸಬೇಡಿ. ಅದೊಂದು ಮಿಥ್ ಅಷ್ಟೇ. ದೇಹ ಮಾರಿಕೊಳ್ಳಬೇಕೆಂದುಕೊಂಡವರಿಗೆ ಮಾರ್ಗಗಳು ನೂರಾರಿವೆ.

ಇವತ್ತು ಸೆಕ್ಸ್ ಕೂಡ ಒಂದು ಸರ್ವೀಸ್ ಇಂಡಸ್ಟ್ರಿ. ಅದನ್ನು ‘ಫಿಸಿಕಲ್ ಪ್ರಾಸ್ಟಿಟ್ಯೂಶನ್’ ಅನ್ನುವುದನ್ನು ಬಿಟ್ಟರೆ ಬೇರಾವ ವ್ಯತ್ಯಾಸಗಳೂ ಇಲ್ಲ. ನಮ್ಮ ವಿವಿಗಳಲ್ಲಿ ಐಡಿಯಲಾಜಿಕಲ್, ಇಂಟೆಲೆಕ್ಚುವಲ್ ಪ್ರಾಸ್ಟಿಟ್ಯೂಶನ್ ಮಾಡುವವರು ಅದೆಷ್ಟು ಜನರಿಲ್ಲ ಹೇಳಿ?! ಕೃಷ್ಣ ದೇವರಾಯನಿಗೆ 500 ಪತ್ನಿಯರಿದ್ದರು ಎಂದು ನಮ್ಮ ಇತಿಹಾಸದ ಪುಟಗಳು ಹೇಳುತ್ತವೆ. ೫೦೦ ಪತ್ನಿಯರು ಎಂದರೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರದಂತೆ ಶೌರ್ಯ ಪ್ರಶಸ್ತಿಗಳೇನು? ಈಗಂತೂ ಕಚೇರಿಯಲ್ಲಿರುವ ಕೆಳಸ್ತರದ ಉದ್ಯೋಗಿಗಳನ್ನು ಪುಸಲಾಯಿಸುವುದು, ಪೀಡಿಸುವುದು, ಬಾಲಿವುಡ್ ನಟ ಶೈನಿ ಅಹುಜಾನಂತೆ ಮನೆಗೆಲಸದವಳನ್ನು ಮಂಚಕ್ಕೆ ಎಳೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಅಮರ ಪ್ರೇಮದ ಕಥೆ ಹೇಳುತ್ತಾ ಹೆಂಡತಿ ಇರುವಾಗಲೇ ಮತ್ತೊಬ್ಬಳನ್ನು ಕದ್ದುಮುಚ್ಚಿ ಕಟ್ಟಿಕೊಂಡು ಪುತ್ರಕಾಮೇಷ್ಠಿ ಯಾಗ ಮಾಡಿ, ‘ರಾಧಿಕಾ ಮತ್ತೆ ಮರಿ ಹಾಕಿದಳಾ?’ ಎಂದು ಅನ್ಯರಿಗೆ ನೈತಿಕ ಪಾಠ ಹೇಳುವ ಪತ್ರಕರ್ತರೂ ಕಡಿಮೆಯೇನಿಲ್ಲ! ಆದರೆ ಹೆಣ್ಣನ್ನು ವೇಶ್ಯೆ ಮಾಡಿರುವವನೇ ಗಂಡಸು ಎಂಬುದನ್ನು ಮರೆಯದಿರಿ. ಆಕೆಯ ಬಗ್ಗೆ ಲಘುವಾಗಿ ಮಾತನಾಡುವ, ವೇಶ್ಯೆ ಎಂದು ಜರಿಯುವ ಬದಲು ಗೌರವಿಸುವುದನ್ನೂ ಕಲಿಯಿರಿ.

If woman walk protected on streets today it is because of the brothel in the corner- ವೇಶ್ಯೆಯರಿರುವುದರಿಂದಲೇ ಮರ್ಯಾದಸ್ಥರು ಬೀದಿ ಯಲ್ಲಿ ಗೌರವಯುತವಾಗಿ ಓಡಾಡಲು ಸಾಧ್ಯವಾಗಿದೆ ಎಂಬ ಮಾತು ನಿಜವೆನಿಸುವುದಿಲ್ಲವೆ?

14 Responses to ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?

  1. Yogesh

    Legalization/ decriminalization of prostitution may lead to following problems:
    1. May become a gift to pimps, traffickers and the sex industry. Pimps may turn into entrepreneurs or third party businessmen. Men who buy women for sexual activity may be legitimate consumers.
    2. Sex industry may promote sex trafficking. After the legalization of prostitution, 80% of women in the brothels in the Netherlands are trafficked from other countries, with 70% from Central and Eastern European countries. 75% of the prostituted women in Germany are from Latin American countries, Eastern Europe and former Soviet countries. In Australia, trafficking in East Asian women for the sex trade is a growing problem.
    3. Increases clandestine, hidden illegal and street prostitution.
    4. The sex industry increases child prostitution. Child prostitution in the Netherlands has increased dramatically and a great number of children are trafficked from Africa. More children from Laos, Burma, Cambodia and China is trafficked to Thailand and within the country from the rural areas to big cities.
    5. May not protect the women in prostitution. Studies indicate that prostitution establishments do little to protect prostituted women; they only protect the customers. Behind closed doors anything can happen- there is no one to “protect” the women.
    6. Increases the demand for prostitution. It boosts the motivation of men to buy women for sex in a much wider and more permissible range of socially acceptable settings. When the legal barriers disappear, so too do the social and ethical barriers to treating women as sexual commodities. Legalization of prostitution sends the wrong message to men and boys that women are sexual commodities and that prostitution is harmless fun.
    7. May not promote women’s health. The mandated health checks and certification are required only for women and not for clients. Women are not protected from HIV/AIDS or STDs. A survey of young Thai HIV-positive males showed that condoms were not used at all during their sexual activities.

    So before making prostitution legal, its better government should think over these problems.

  2. Arvind

    ಇನ್ನು ಅಮರ ಪ್ರೇಮದ ಕಥೆ ಹೇಳುತ್ತಾ ಹೆಂಡತಿ ಇರುವಾಗಲೇ ಮತ್ತೊಬ್ಬಳನ್ನು ಕದ್ದುಮುಚ್ಚಿ ಕಟ್ಟಿಕೊಂಡು ಪುತ್ರಕಾಮೇಷ್ಠಿ ಯಾಗ ಮಾಡಿ, ‘ರಾಧಿಕಾ ಮತ್ತೆ ಮರಿ ಹಾಕಿದಳಾ?’ ಎಂದು ಅನ್ಯರಿಗೆ ನೈತಿಕ ಪಾಠ ಹೇಳುವ ಪತ್ರಕರ್ತರೂ ಕಡಿಮೆಯೇನಿಲ್ಲ! Sir, please tell us who is this journalist?

  3. Soori

    Sir,

    Sakkattaagi kottiddeera aa Ravi Belagerege. Neevu hELOdu nija sir, ooravarigellaa neeti paaTha hELtaane, aadre maaDOdu, halkaa kelasa. Avanannu expose maaDi sir, naaviddeevi bembalakke. Iduvaregoo yaava journalist kooDaa avana bagge maataaDtaa iralilla, adakke avanu underworld DON tarahaa rule maaDtaa idaane. We are happy someone like you has taken a bold step in cleansing the dirty atmosphere.

  4. Anil

    Sir,

    The real Ravi Belagere is out with his programs/articles supporting ministers Sriramulu and Janardhana Reddy. He is doing this campaign shamelessly (and who says he has any SHAME?). It is unfortunate that a powerful/ intersting writer like Ravi Belagere has SOLD himself to the Mining Mafias. We all foolishly believed him and his writings for a decade or so. Now the whole world knows him. Thanks for your unbiased and courageous comment on Ravi Belagere. How can he beget a child from a woman (much younger to him) when his own children are delivering kids. He is becoming appa and taata at the same time. He claims and praises his wife Lalitha who has sacrificed all her life for the betterment of this fellow, who was literally in gutters. Is this the way he is showing respects to that lady? Shameful sir. We had only heard rumours about Ravi Belagere having an affair with his office staff and made that poor girl pregnant. Now the truth is out. This man must be exposed. And no one other than courageous writer like you can take on him, head on.

    your fan since your first column

    anil

  5. Ajit

    sir, i dont think so our pepole so grown to expect sex as a bussiness or ligle activity……we are yeet not so ready to make this as an income of a women.
    but the point is ture in it s way, but there stands many que from society.if it s made ligle from present government sure there will be opposition from others.

  6. Aveen

    ಹಾಯ್ ಪ್ರತಾಪ್ [Hope, u dont mind If I call like this]
    ನಿಜಕ್ಕೂ ಅದ್ಭುತ, ಪ್ರಾಮಾಣಿಕ, ಕಳಕಳಿಯ ಲೇಖನ.. ಇದೇ ವಿಷಯ ಕುರಿತು ನಾನು ಹಲವು ಸಲ ಯೋಚಿಸಿದ್ದೆ. ಪರಿಹಾರ ಹೊಳೆದಿರಲಿಲ್ಲ.. ನೀವು ಸಮಸ್ಯೆಯ ಆದಿ, ಇದಮಿತ್ತಂ, ಅಂತ್ಯ ಎಲ್ಲವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದೀರ. ತಮ್ಮನ್ನು ಸಾಚ ಎಂದು ಫೋಸು ಕೊಡುವ ಜನಕ್ಕೆ ಜಗತ್ತಿನಲ್ಲಿ ಬರವಿಲ್ಲ… ಕಾಲ ಇನ್ನೂ ಮೀರಿಲ್ಲ. ಎಮ್ಮೆ ಚರ್ಮದ ನಮ್ಮ ರಾಜಕಾರಣಿಗಳು ಮರೆತಾದರೂ ಈ ಅಂಕಣ ಓದಿದರೆ ಎಷ್ಟೋ ಉಪಯೋಗವಾಗುತ್ತದೆ. ನಿಜಕ್ಕೋ ಇಂಥಾ ಸಾಮಾಜಿಕೆ ಕಳಕಳಿಯ ಲೇಖನಗಳನ್ನು ಕೊಡುವುದರಿಂದಲೇ ನೀವು ನಮ್ಮಂತಹ ಯುವ ಜನತೆಯ ಕಣ್ಮಣಿಯಾಗಿರುವುದು.
    ಇನ್ನೂ ಹತ್ತು ಹಲವು ಲೇಖನಗಳ ನಿರೀಕ್ಷೆಯಲ್ಲಿ
    ನಿಮ್ಮ
    ಅವೀನ್

  7. Rajendra Bajarangi

    LAINGIKA KARYAKARTEYARU NAMMANTE NOVU NALIVU GALULLA MANUSHYA JIVIGALU AVRIGU KUDA ATMAGOWRAVA(DIGNITY) IDE. OLLEYA MANAVIYA LEKANA

  8. Hope u Remeber me

    U………

  9. Anil.B.Ramdas

    Why kannada film”Mukymantri I love You” is not released yet even after so much publicity has been made on this film.
    I think there should be some golmal happened to stop this film. If you could break this secrate i think this will become one more big scandle of the same writer which you have mentioned in your article. Thankyou sir for writing such a meaningfull article.

  10. mahantesh

    ನೀವು ಹೇಳಿರೋ ಒಂದೊಂದು ಮಾತು ನೂರಕ್ಕೆ ನೂರರಷ್ಟು ಸತ್ಯ ಆದರೆ …ಈ ಮೂರ್ಖ ರಾಜಕಾರಣಿಗಳಿಗೆ ಅರ್ಥ ಮಾಡಿಸೋದು ಹೇಗೆ..?

  11. Arjun

    namaskara sir,

    I believe legalising prostitution is not a solution. Prostitution is easy money and women are ready to bear the physical pain to gain that easy money. It is just another way of enjoying it. People always find a solution to take advantage from it. The roots of prostitution are poverty, unemployment and illiteracy. All this can be cured by our own Gandhian principles- concept of Swaraj and importance of primary education. The development must start from grass root level- i.e. village. This is mainly to divert the attention from resolving to prostitution to other forms of legal employment which helps in creating a healthy society.

  12. Ranjana

    Dear Pratap it is a very dood article

  13. Ranjana

    It is a good article

  14. vivek rc

    sir thank you

Leave a Reply