Archive for December, 2009

ಅದೇನು ಕೆಟ್ಟ ಕೆಲಸವನ್ನು ಸಮರ್ಥಿಸಿಕೊಳ್ಳಲು ಇರುವ ‘ಪರ್ಮಿಟ್ಟಾ’?

Tuesday, December 29th, 2009
ಅದೇನು ಕೆಟ್ಟ ಕೆಲಸವನ್ನು ಸಮರ್ಥಿಸಿಕೊಳ್ಳಲು ಇರುವ ‘ಪರ್ಮಿಟ್ಟಾ’?

1.ಆದಾಯವನ್ನು ಮೀರಿ ಸಂಪತ್ತು ಸಂಗ್ರಹ 2. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಮಂಡಳಿಯ ೫ ನಿವೇಶನಗಳ ಖರೀದಿ 3. 1988ರ ಬೇನಾಮಿ ಹಣ ವರ್ಗಾವಣೆ ತಡೆ ಕಾಯಿದೆಯಡಿ ಯಾವುದನ್ನು ನಿಷೇಧಿಸಲಾಗಿದೆಯೋ ಹಾಗೂ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆಯೋ ಅಂತಹ ಬೇನಾಮಿ ಹಣಕಾಸು ವಹಿವಾಟು 4. 1961ರ ತಮಿಳುನಾಡು ಆಸ್ತಿ ಮಿತಿ ಕಾಯಿದೆ ಉಲ್ಲಂಘಿಸಿ ಕೃಷಿ ಭೂಮಿ ಸ್ವಾಧೀನ 5. ಸರಕಾರಿ ಹಾಗೂ ಸಾರ್ವಜನಿಕ ಆಸ್ತಿಯ ಒತ್ತುವರಿ 6. ಆ ಮೂಲಕ ದಲಿತರ [...]

ರಾಯರನು ನೆನೆ ನೆನೆದು…

Thursday, December 24th, 2009
ರಾಯರನು ನೆನೆ ನೆನೆದು…

ಅವರು 1990ರ ಹೊತ್ತಿಗಾಗಲೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದರು. ರಾಜಧಾನಿ ದಿಲ್ಲಿಯಲ್ಲಿದ್ದ ತಮ್ಮ ಬಂಗಲೆಯನ್ನು ಬಿಟ್ಟು ಹೈದರಾಬಾದ್‌ಗೆ ತೆರಳಲು ಅಣಿಯಾಗಿದ್ದರು. ಹಾಗೆಂದುಕೊಂಡು ಗಂಟುಮೂಟೆ ಕಟ್ಟಿ ರೆಡಿಯಾಗಿ 18 ತಿಂಗಳುಗಳೇ ಆಗಿದ್ದವು. ಇನ್ನೇನೂ ಸಾಮಾನು ಸರಂಜಾಮು ಹಾಗೂ ಪುಸ್ತಕ ಭಂಡಾರದೊಂದಿಗೆ ಕಾಲ್ಕೀಳಬೇಕು ಅಷ್ಟರಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು. 1984ರಲ್ಲಿ ಇಂದಿರಾ ಹತ್ಯೆಯಾಗಿದ್ದರು, 1991ರಲ್ಲಿ ರಾಜೀವ್ ಬಲಿಯಾದರು. ಅದರೊಂದಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಳಿತಪ್ಪಿದಂತಾಯಿತು. ಪಕ್ಷವನ್ನು ಮತ್ತೆ ಹಳಿಗೆ ತರಲು ಒಬ್ಬ [...]

ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?

Saturday, December 19th, 2009
ಕಾಮವೆಂಬುದು ಸತ್ಯವೆಂದ ಮೇಲೆ ವೇಶ್ಯಾವಾಟಿಕೆಯೇಕೆ ಅಪಥ್ಯ?

“ಅದು ಜಗತ್ತಿನ ಅತ್ಯಂತ ಪುರಾತನ ವೃತ್ತಿ ಎಂದು ನೀವೇ ಹೇಳುವುದಾದರೆ, ಕಾನೂನಿನ ಮೂಲಕ ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ಏಕೆ ಕಾನೂನುಬದ್ಧಗೊಳಿಸಬಾರದು? ಮಹಿಳೆಯರ ಮಾರಾಟ, ಸಾಗಾಟವನ್ನು ತಡೆಯಲು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಗೊಳಿಸುವುದೇ ಯೋಗ್ಯ ಮಾರ್ಗ ಹಾಗೂ ಜಗತ್ತಿನ ಯಾವ ರಾಷ್ಟ್ರ ದಲ್ಲೂ ಕಠಿಣ ಕ್ರಮಗಳ ಮೂಲಕ ವೇಶ್ಯಾವಾಟಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ”. ಹಾಗಂತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಳವೀರ್ ಭಂಡಾರಿ ಮತ್ತು ಎ.ಕೆ. ಪಟ್ನಾಯಕ್ ಡಿಸೆಂಬರ್ ೯ರಂದು ಕೇಂದ್ರದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರನ್ನು ಪ್ರಶ್ನಿಸಿದ್ದಾರೆ! ನಮ್ಮ ದೇಶದಲ್ಲಿ [...]

‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು!

Saturday, December 12th, 2009
‘ಪಾ’ ನೋಡಿದರೆ ಜೀವನವನ್ನು ನೋಡುವ ದೃಷ್ಟಿಯೇ ಬದಲಾದೀತು!

‘ಪಾ‘! ಒಂದು ವೇಳೆ ನೀವು ಈಗಾಗಲೇ ಈ ಚಿತ್ರವನ್ನು ನೋಡಿದ್ದರೆ ನಿಮಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲವಾದರೆ ಅದರ ಒಂದೊಂದು ದೃಶ್ಯಗಳಲ್ಲೂ ಮೈತೆರೆದುಕೊಳ್ಳುತ್ತಾ ಹೋಗುವ ಜೀವನ ಪ್ರೀತಿಯ ಬಗ್ಗೆ ತಿಳಿದುಕೊಳ್ಳುವ ಮೊದಲು ಸ್ವಲ್ಪ ಚಿತ್ರಕಥೆಯನ್ನೂ ಕೇಳಿ. ಹೆಸರು ಆರೋ. ವಯಸ್ಸು 13. ‘ಪ್ರೊಜೇರಿಯಾ’ ಅಂದರೆ ಎಳೆಯ ವಯಸ್ಸಿನಲ್ಲೇ ಮುದಿತನ ತರುವ ಒಂದು ವಿಚಿತ್ರ ಕಾಯಿಲೆ. ಆರೋ ನರಳುತ್ತಿದ್ದುದು ಅದೇ ಕಾಯಿಲೆಯಿಂದ. ಆದರೆ ನೋಡಲು 70 ವರ್ಷದ ಮುದುಕನಂತೆ ಕಂಡರೂ ಅವನ ವರ್ತನೆಯಲ್ಲಿ ಅಂತಹ ಯಾವ ಲಕ್ಷಣಗಳೂ ಕಾಣುತ್ತಿರಲಿಲ್ಲ. [...]

ನೋ..ನೋ..ನೋ.. ವಾಚ್ ದಿ ಬಾಲ್, ಹಿಟ್ ದಿ ಬಾಲ್!

Tuesday, December 8th, 2009
ನೋ..ನೋ..ನೋ.. ವಾಚ್ ದಿ ಬಾಲ್, ಹಿಟ್ ದಿ ಬಾಲ್!

“ಸಚಿನ್ ತೆಂಡೂಲ್ಕರ್‌ನನ್ನು ನಾನು ಮೊದಲ ಬಾರಿಗೆ ಟಿವಿ ಪರದೆ ಮೇಲೆ ನೋಡಿದ್ದು 1992ರಲ್ಲಿ. ಅದು ವಿಶ್ವಕಪ್ ಪಂದ್ಯಾವಳಿ. ನಾನಾಗ ೭ನೇ ತರಗತಿಯಲ್ಲಿದ್ದೆ. ಪರೀಕ್ಷೆ ನಡೆಯುತ್ತಿತ್ತು. ಚಕ್ಕರ್ ಹೊಡೆದಿದ್ದೆ. ಏಕೆಂದರೆ ವಿಶ್ವಕಪ್ ನಡೆಯುತ್ತಿದ್ದುದು ಆಸ್ಟ್ರೇಲಿಯಾದಲ್ಲಿ. ಪಂದ್ಯಗಳು ಬೆಳಗಿನ ಜಾವ ಪ್ರಾರಂಭವಾಗುತ್ತಿದ್ದವು. ಸ್ಕೂಲ್ ಟೈಮಿಗೂ ಕ್ರಿಕೆಟ್ ಮ್ಯಾಚುಗಳಿಗೂ ಮಧ್ಯೆ ಸಮಯ ಹೊಂದಾಣಿಕೆ ಯಾಗುತ್ತಿರಲಿಲ್ಲ. ಹಾಗಾಗಿ ಪರೀಕ್ಷೆಗೆ ಶರಣುಹೊಡೆದಿದ್ದೆ. ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡುತ್ತಿದ್ದ ವಿಧಾನ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನೆನಪಿನ ಬುತ್ತಿಯೊಳಗೆ ಇನ್ನೂ ಹಸಿಹಸಿಯಾಗಿದೆ. ನಜಾಫ್‌ಗಢದ ನಮ್ಮ ಹಳೇ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >