Archive for November, 2009

ಅಟಲ್ ಸೋಗಲಾಡಿಯೇ! ಹಾಂ, ಏನಂದ್ರಿ ಲಿಬರ್‍ಹಾನ್?

Saturday, November 28th, 2009
ಅಟಲ್ ಸೋಗಲಾಡಿಯೇ! ಹಾಂ, ಏನಂದ್ರಿ ಲಿಬರ್‍ಹಾನ್?

TRC ಅಥವಾ Truth and Reconciliation Commission!
“ಸತ್ಯ ಶೋಧನೆ ಹಾಗೂ ರಾಜಿ” ಎಂಬ ಈ ಆಯೋಗದ ಹೆಸರನ್ನು ಬಹುಶಃ ನೀವು ಕೇಳಿರಬಹುದು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅದರ ಅಧ್ಯಕ್ಷರಾಗಿದ್ದರು. ಡಾ. ಅಲೆಕ್ಸ್ ಬೊರೈನ್, ಮೇರಿ ಬರ್ಟನ್, ವಕೀಲ ಕ್ರಿಸ್ ಡಿ ಜಾಗರ್, ಬೊಂಗಾನಿ ಫಿಂಕಾ, ರೆವೆರೆಂಡ್ ಖೋಝಾ ಮೊಜೋ, ಡುಮಿಸಾ ಎನ್ಸೆಬೆಝಾ, ಯಾಸ್ಮಿನ್ ಸೂಕಾ ಮುಂತಾದ ಖ್ಯಾತನಾಮರು ಸದಸ್ಯರಾಗಿದ್ದರು. ಅದು ಮೂರು ಉಪಸಮಿತಿಗಳನ್ನು ನೇಮಕ ಮಾಡಿತು.

ಗತಿಸುತ್ತಿದೆಯೇಕೆ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’?

Tuesday, November 24th, 2009
ಗತಿಸುತ್ತಿದೆಯೇಕೆ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’?

ಇಂಥದ್ದೊಂದು ಶೀರ್ಷಿಕೆಯಡಿ ಅಕ್ಟೋಬರ್ 31ರಂದು ‘ದಿ ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ದೊಡ್ಡ ವರದಿಯೊಂದು ಪ್ರಕಟವಾಗಿತ್ತು. “ನಮ್ಮ ಮನೆ ಜನರಿಂದ ತುಂಬಿತುಳುಕದೇ ಇದ್ದ ಒಂದೇ ಒಂದು ದಿನವನ್ನೂ ನನಗೆ ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಊಟದ ಟೇಬಲ್‌ನಲ್ಲಿ ಕುಳಿತುಕೊಳ್ಳುವಾಗ ಅಚ್ಚು ಮೆಚ್ಚಿನ ಕುರ್ಚಿಯಲ್ಲೇ ಕುಳಿತುಕೊಳ್ಳಬೇಕೆಂದು ನಾನು, ನನ್ನ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಸದಾ ಕಿತ್ತಾಡುತ್ತಿದ್ದೆವು. ನನ್ನ ಗಂಡ ಅತುಲ್ ಭಾರ್ಗವ್‌ಗೆ ಕೂಡ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರನಿದ್ದಾನೆ. ಎಲ್ಲರೂ ಒಂದೇ ರೀತಿಯಲ್ಲಿ ಬೆಳೆದೆವು” ಎನ್ನುತ್ತಾರೆ ಫ್ಯಾಶನ್ ಡಿಸೈನರ್ [...]

ಕುರುಡಾಗಿರುವುದು ನ್ಯಾಯವೋ, ನ್ಯಾಯದಾನ ಮಾಡುವವರೋ?

Sunday, November 15th, 2009
ಕುರುಡಾಗಿರುವುದು ನ್ಯಾಯವೋ, ನ್ಯಾಯದಾನ ಮಾಡುವವರೋ?

“ವಕೀಲರಿಂದ ನ್ಯಾಯಾಲಯಗಳ ಕಲಾಪ ಬಹಿಷ್ಕಾರ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನಕರನ್ ವಿರುದ್ಧ ಅವಾಚ್ಯ ಪದಗಳ ನಿಂದನೆ, ನ್ಯಾಯಮೂರ್ತಿ ವಿ. ಗೋಪಾಲಗೌಡರ ಮೇಲೆ ಹಲ್ಲೆ, ಕಲಾಪಕ್ಕೂ ಅಡ್ಡಿ, ತಳ್ಳಾಟ- ನೂಕಾಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ….” ಇಂತಹ ಮುಖಪುಟದ ವರದಿಗಳು, “ನ್ಯಾಯ ಕುರುಡಾಯಿತು”, “ಗೂಂಡಾಗಿರಿ”, “ಜಡ್ಜ್‌ಗಳ ಮೇಲೆ ವಕೀಲರ ಹಲ್ಲೆ”, “ನ್ಯಾಯ ಮೂರ್ತಿಗೇ ಗೂಸಾ”, ಮುಂತಾದ ಶೀರ್ಷಿಕೆಗಳನ್ನು ನೋಡಿದ ನೀವು ನಮ್ಮ ಕರ್ನಾಟಕ ಹೈಕೋರ್ಟ್ ವಕೀಲರೆಂದರೆ ಖಂಡಿತ ಗೂಂಡಾಗಳು ಎಂಬ ನಿರ್ಧಾರಕ್ಕೆ ಬಂದಿರಬಹುದಲ್ಲವೆ?! ಎಲ್ಲರೂ ವಕೀಲರನ್ನು, ವಕೀಲರ ಸಂಘವನ್ನು [...]

‘ಕ್ಯಾಪ್ಟನ್’ನನ್ನೇ ಔಟ್ ಮಾಡಿದ ‘ಟ್ವೆಲ್ತ್‌ಮ್ಯಾನ್’ ಯಾರು?

Thursday, November 12th, 2009
‘ಕ್ಯಾಪ್ಟನ್’ನನ್ನೇ ಔಟ್ ಮಾಡಿದ ‘ಟ್ವೆಲ್ತ್‌ಮ್ಯಾನ್’ ಯಾರು?

1. ವಿ.ಪಿ. ಬಳಿಗಾರ್ ಎತ್ತಂಗಡಿಯಾಗಬೇಕು.
2. ಶೋಭಾ ಕಂರದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕು.
3. ಇತ್ತೀಚೆಗೆ ಮಾಡಿದ ಅಧಿಕಾರಿಗಳ ವರ್ಗಾವಣೆಯನ್ನು ರದ್ದು ಮಾಡಬೇಕು.
4. ನಾವು ಹೇಳಿದ ಇನ್ನೂ ಕೆಲವು ಸಚಿವರನ್ನು ಕೈಬಿಟ್ಟು, ನಾವೇ ಸೂಚಿಸಿದ ಕೆಲವರಿಗೆ ಸಚಿವ ಸ್ಥಾನ ನೀಡಬೇಕು.
5. ಸಂಪುಟ ಸಮನ್ವಯ ಸಮಿತಿ ರಚನೆಯಾಗಬೇಕು.
ಇವಿಷ್ಟು ರೆಡ್ಡಿ ಸಹೋದರರು ಮುಂದಿಟ್ಟಿದ್ದ ಒಟ್ಟಾರೆ ಬೇಡಿಕೆ ಗಳು. ಹಾಗಾದರೆ “ಕರ್ನಾಟಕ ವಿಶನ್ 20:20″ ಮೂಲಭೂತ ಅಭಿವೃದ್ಧಿ ಸಮಿತಿಯ ಛೇರ್‍ಮನ್ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಎತ್ತಂಗಡಿ ಮಾಡಿದ್ದು ಯಾರು?! ಖಂಡಿತ ರೆಡ್ಡಿ ಸಹೋದರರಿಗೆ [...]

ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

Tuesday, November 10th, 2009
ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್!
ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂ ಬತ್ತನೇ ಶತಮಾನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭೀಷ್ಮಪಿತಾಮಹನಂತಿದ್ದರು. ಮಹಾತ್ಮ ಗಾಂಧೀಜಿಯವರ ಪ್ರೀತಿಯ ‘ರಘುಪತಿ ರಾಘವ ರಾಜಾರಾಂ’ ಹಾಡಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತಗಾರ ಅವರು. ನಮ್ಮ ಶಾಸ್ತ್ರೀಯ ಸಂಗೀತವನ್ನು ಕಲಿಸಲೆಂದು 1901ರಲ್ಲಿ ಲಾಹೋರ್ ನಲ್ಲಿ ‘ಗಂಧರ್ವ ಮಹಾವಿದ್ಯಾಲಯ’ ಸ್ಥಾಪಿಸಿದ್ದರು. ಸಾರ್ವ ಜನಿಕರು ನೀಡಿದ ದೇಣಿಗೆ ಮೇಲೆ ನಡೆಯುತ್ತಿದ್ದ [...]

ದರ್ಪ ಮೆರೆದ ಇಂದಿರೆಯೊಳಗೊಬ್ಬ ದುರ್ಗೆಯೂ ಇದ್ದಳು!

Tuesday, November 3rd, 2009
ದರ್ಪ ಮೆರೆದ ಇಂದಿರೆಯೊಳಗೊಬ್ಬ ದುರ್ಗೆಯೂ ಇದ್ದಳು!

ಆಕೆಯನ್ನು ತೆಗಳಬೇಕು ಎಂದುಕೊಂಡರೆ ನೂರಾರು ಕಾರಣಗಳು ಸಿಗುತ್ತವೆ. ತುರ್ತು ಪರಿಸ್ಥಿತಿಯನ್ನು ನೆನಪಿಸಿ ಕೊಳ್ಳಬಹುದು, ಆಪರೇಶನ್ ಬ್ಲೂಸ್ಟಾರ್ ಕಣ್ಣಮುಂದೆ ಬರುತ್ತದೆ, ಆಡಳಿತದ ದುರುಪಯೋಗ, ದರ್ಪ ಎದ್ದು ಕಾಣುತ್ತದೆ, ರಾಜಕೀಯ ಪ್ರತೀಕಾರ ಎದ್ದು ನಿಲ್ಲುತ್ತದೆ. ಈ ಕಾರಣಗಳಿಗಾಗಿ ಆಕೆಯನ್ನು ಸಾಕಷ್ಟು ಬಾರಿ ಕಟಕಟೆಗೆ ತಂದುನಿಲ್ಲಿಸಿದ್ದೂ ಆಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ಮನದ ಯಾವುದೋ ಮೂಲೆಯಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಗೌರವ ಮೂಡುತ್ತದೆ. ಅವರೆಂತಹ ಗಟ್ಟಿಗಿತ್ತಿ ಎಂಬುದಕ್ಕೆ ಬಾಂಗ್ಲಾ ಯುದ್ಧವೊಂದೇ ಸಾಕು. ಅದು ಬರೀ ಒಂದು ಯುದ್ಧವಾಗಿರಲಿಲ್ಲ, ಪೌರುಷ ಪ್ರದರ್ಶನದ ವೇದಿಕೆಯೂ [...]