Archive for October, 2009

ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಾಯಿಮಾತಲ್ಲಿ ಹೇಳಿದರಷ್ಟೇ ಸಾಕೆ ಸಿಎಂ?

Monday, October 26th, 2009
ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಾಯಿಮಾತಲ್ಲಿ ಹೇಳಿದರಷ್ಟೇ ಸಾಕೆ ಸಿಎಂ?

“ಇನ್‌ಸ್ಪೆಕ್ಟರ್ ಹಾಗೂ ಕಿರಿಯ ದರ್ಜೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರಕಾರ ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ. ವರ್ಗಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಬೋರ್ಡ್ ಮೂಲಕ ಹಿರಿಯ ಅಧಿಕಾರಿಗಳೇ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಾರೆ”.
ಹಾಗಂತ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.

ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ಜಿಹಾದ್’!!

Tuesday, October 20th, 2009
ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ಜಿಹಾದ್’!!

ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ!
“ಲವ್ ಜಿಹಾದ್” ಅಥವಾ “ರೋಮಿಯೋ ಜಿಹಾದ್” ಎಂಬ ಕಾರ್ಯಸೂಚಿ ನಿಜಕ್ಕೂ ನಡೆ ಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆಯೇ? “ಲವ್ [...]

ಶಿಕ್ಷಣದ ಕೇಸರೀಕರಣ,ಇದೆಂಥಾ ಅಪಪ್ರಚಾರದ ಪಣ?

Tuesday, October 13th, 2009
ಶಿಕ್ಷಣದ ಕೇಸರೀಕರಣ,ಇದೆಂಥಾ ಅಪಪ್ರಚಾರದ ಪಣ?

ಆ ಕಾಲದಲ್ಲಿ ಬ್ರಿಟಿಷರ ಬಗ್ಗೆ ದೇವತಾಭಾವನೆ ಹೊಂದಿದ್ದ ಭಾರತೀಯರೂ ಇದ್ದರು!
ಡಾಕ್ಟರ್ ಸಾಹಿಬ್ ದಿಟ್ಟಾ ಅಂಥವರಲ್ಲಿ ಒಬ್ಬ ರಾಗಿದ್ದರು. ಅವರು ಪಂಜಾಬ್‌ನ ಅಮೃತಸರದ ಪ್ರಸಿದ್ಧ ವೈದ್ಯರು. ವೈದ್ಯರ ತೀವ್ರ ಕೊರತೆ ಎದುರಿಸುತ್ತಿದ್ದ ಕಾಲವದು. ಸಹಜವಾಗಿಯೇ ಸಾಹಿಬ್ ದಿಟ್ಟಾ ಕೈತುಂಬಾ ಸಂಪಾದನೆ ಮಾಡುತ್ತಿದ್ದರು. ಅವರಿಗೆ ಬ್ರಿಟಿಷರ ಬಗ್ಗೆ ಎಲ್ಲಿಲ್ಲದ ಗೌರವ. ಬಹುಶಃ ದೇವರಷ್ಟೇ ಬ್ರಿಟಿಷರ ಬಗ್ಗೆಯೂ ಭಯ-ಭಕ್ತಿ ಇಟ್ಟುಕೊಂಡಿದ್ದರು. ಅಂತಹ ವ್ಯಕ್ತಿಯ ಮಗನೇ ಮದನ್‌ಲಾಲ್ ಧಿಂಗ್ರಾ. ಆತ ಹುಟ್ಟಿದ್ದು 1883ರಲ್ಲಿ. ಧಿಂಗ್ರಾಗೊಬ್ಬ ಅಣ್ಣನಿದ್ದ. ಅಪ್ಪನ ಹಾಗೇ ಆತನಿಗೂ ಬ್ರಿಟಿಷರ ಬಗ್ಗೆ [...]

ಡಾ. ಮನಮೋಹನ್, ಡಾ. ಮನಮೋಹನ್…ವೇಕ್ ಅಪ್ ನೌ!

Sunday, October 4th, 2009
ಡಾ. ಮನಮೋಹನ್, ಡಾ. ಮನಮೋಹನ್…ವೇಕ್ ಅಪ್ ನೌ!

1.1948ರಲ್ಲಿ ಭಾರತ-ಪಾಕಿಸ್ತಾನ ಯುದ್ಧ: ನಾವು ಪಾಕಿ ಸ್ತಾನವನ್ನು ಹಿಮ್ಮೆಟ್ಟಿಸಿದರೂ ಕಾಶ್ಮೀರದ ಶೇ.೩೩ರಷ್ಟು ಭೂಭಾಗ ಕೈತಪ್ಪಿ ಹೋಯಿತು.
2. 1950ರಲ್ಲಿ ಭಾರತ(ನೆಹರು) ಕೈಕಟ್ಟಿ ಕುಳಿತುಕೊಂಡ ಕಾರಣ ಸ್ವತಂತ್ರ ರಾಷ್ಟ್ರವಾಗಿದ್ದ ಟಿಬೆಟ್ ಚೀನಾದ ಕೈವಶವಾಯಿತು, ನೆರೆಯ ರಾಷ್ಟ್ರದ ಸ್ಥಾನಕ್ಕೆ ಟಿಬೆಟ್ ಬದಲು ಚೀನಾ ಬಂದು ಕುಳಿತುಕೊಂಡಿತು.
3. 1962ರಲ್ಲಿ ಭಾರತ-ಚೀನಾ ಯುದ್ಧ: ವಾಯುಸೇನೆಯನ್ನು ಬಳಸಲು ನೆಹರು ನಕಾರ. ಹೀನಾಯ ಸೋಲು, ಲದ್ದಾಕ್ ಮತ್ತು ಈಶಾನ್ಯ ಭಾಗದಲ್ಲಿ ಚೀನಿ ಅತಿಕ್ರಮಣ.