ದೇಶ ವಿಭಜನೆಗೆ ಒಪ್ಪಿದ್ದಷ್ಟೇ ಗಾಂಧಿ-ನೆಹರು-ಪಟೇಲ್ ಮಾಡಿದ ತಪ್ಪೆ?
Tuesday, September 29th, 2009
ಇತಿಹಾಸವನ್ನು Dispassionate ಅಥವಾ ನಿರ್ಭಾ ವುಕರಾಗಿಯೇ ಓದಬೇಕಾಗುತ್ತದೆ. ಹಾಗೆ ಓದಿದರೂ ಪುಸ್ತಕ ಕೆಳಗಿಟ್ಟ ನಂತರ ಮನಸ್ಸು ಕೆಲವೊಮ್ಮೆ ಉದ್ವೇಗಕ್ಕೊಳಗಾಗುತ್ತದೆ. ನಮ್ಮ ನಾಯಕರು ಏಕೆ ಆ ತಪ್ಪು ಗಳನ್ನೆಸಗಿದರು? ಅವರು ಎಸಗಿದ ತಪ್ಪಿನಿಂದಾಗಿಯೇ ಅಲ್ಲವೆ ನಾವೀಗ ಕಷ್ಟ ಅನುಭವಿಸುತ್ತಿರುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?” ಪುಸ್ತಕವನ್ನು ಬರೆದು, ಬಿಡುಗಡೆ ಮಾಡಿಯಾದ ನಂತರವೂ ಒಂದಿಷ್ಟು ಪ್ರಶ್ನೆಗಳು ಕಾಡುತ್ತಾ ಇವೆ. ಪಾಕ್‌ಸ್ತಾನ್! ಪಂಜಾಬ್, ಅಫ್ಘಾನಿಸ್ತಾನ್, ಕಾಶ್ಮೀರ, ಸಿಂಧ್ ಹಾಗೂ ಬಲೂಚಿಸ್ತಾನ್ [...]











