ಆ… ಮಗ, ಈ…ಮಗ, ಹ…ಮಗ, ರ…ಮಗ… ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ.
ಈ Federphiles, Fed freaks ಅಥವಾ ಫೆಡರರ್ ಅವರ ಹುಚ್ಚು ಅಭಿಮಾನಿಗಳಿದ್ದಾರಲ್ಲಾ ಇವರು, ಕಳೆದ ಭಾನುವಾರದಿಂದ ತಮ್ಮ ಆರಾಧ್ಯ ದೈವವೇ “Best Ever’, “Best Ever’ ಎಂದು ಹಿಂದೆಂದಿಗಿಂತಲೂ ಜೋರಾಗಿ ಬೊಬ್ಬೆಹಾಕಲಾ ರಂಭಿಸಿದ್ದಾರೆ. ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್‌ನೇ ‘ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂಬ ವಾದವನ್ನು ಈ ಹಿಂದೆಯೇ ಆರಂಭಿಸಿದ್ದರು. ಆದರೆ ಫ್ರೆಂಚ್ ಓಪನ್ ಅವರ ವಾದಕ್ಕೆ ಅಡ್ಡವಾಗಿ, ಅಡ್ಡಿಯಾಗಿ ನಿಂತಿತ್ತು. ಸ್ಪೇನ್‌ನ Clay King (ಮಣ್ಣಿನ ಮಗ) ರಾಫೆಲ್ ನಡಾಲ್ ಪೆಡಂಭೂತವಾಗಿ ಇವರನ್ನು ಕಾಡುತ್ತಿದ್ದ. [...]
ಈ ಘಟನೆ ನಡೆದಿದ್ದು 1978ರಲ್ಲಿ. ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ವರ್ಷವಷ್ಟೇ ಕಳೆದಿತ್ತು. ಅದಾಗಲೇ ಪ್ರಧಾನಿ ಸ್ಥಾನಕ್ಕೆ ಕಂಟಕ ಎದುರಾಗಿತ್ತು. ಮತ್ತೊಬ್ಬ ಪ್ರಭಾವಿ ಜನತಾ ನಾಯಕ ಹಾಗೂ ಗೃಹ ಸಚಿವ ಚೌಧರಿ ಚರಣ್ ಸಿಂಗ್ ಮೊದಲಿನಿಂದಲೂ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಜತೆಗೆ ಬಾಬು ಜಗಜೀವನ್ ರಾಮ್ ಕೂಡ ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಹಾಗಾಗಿ ಬಂಡಾಯದ ಹೊಗೆಯಾಡುತ್ತಿತ್ತು. ಚರಣ್ ಸಿಂಗ್ ಅವರು ಮುರಾರ್ಜಿ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿ ಪ್ರಧಾನಿ ಸ್ಥಾನವನ್ನೇ ಕಿತ್ತುಕೊಳ್ಳಬಹುದು ಎಂಬ ಗುಸು ಗುಸು ಕೇಳಿ [...]
ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಡೆವಿಡ್ ಬೆಕಮ್, ಹಾಲಿವುಡ್ ತಾರೆಗಳಾದ ಸ್ಕಾರ್ಲೆಟ್ ಜೊಹಾನ್ಸನ್. ಟೋನಿ ರಾಬಿನ್ಸನ್, ಜೋಆನ್ನಾ ಲುಮ್ಲೆ ಅಂತಹ ಖ್ಯಾತನಾಮರೇ ಆಕೆಯ ಅಭಿಮಾನಿಗಳಾಗಿದ್ದಾರೆ, ಆಕೆಯ ಪರವಾಗಿ ಆಗಾಗ್ಗೆ ಧ್ವನಿಯೆತ್ತುತ್ತಾರೆ. ಆಕೆಯನ್ನು ಭೇಟಿ ಮಾಡಲು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯೇ ಅಣಿಯಾಗುತ್ತಿದ್ದಾರೆ. ಹಾಗಿರುವಾಗ ಒಬ್ಬ ಭಾವುಕ ಅಭಿಮಾನಿ ಜೀವದ ಹಂಗುತೊರೆದು ತನ್ನ ಆರಾಧ್ಯ ದೈವವನ್ನು ಕಾಣಲು ಬಂದಿದ್ದರಲ್ಲಿ ಯಾವ ಆಶ್ಚರ್ಯವಿದೆ? ಮೊನ್ನೆ ಮೇ 3ರಂದು ನಡೆದಿದ್ದು ಇಷ್ಟೇ.