Archive for May, 2009

2014ರಲ್ಲೂ ಸೋಲಿಗೆ ಬಿಜೆಪಿ ಕಾರಣ ಹುಡುಕಬಾರದು ಅಂದ್ರೆ?

Wednesday, May 27th, 2009

ಡುಬಾಯ್ಸ್, ಮಾಲ್ಕಮ್ ಎಕ್ಸ್ , ರೋಜರ್ ವಿಲ್ಕಿನ್ಸ್,  ಮಾರ್ಟಿನ್ ಲೂಥರ್ ಕಿಂಗ್,   ಜೆಸ್ಸಿ ಜಾಕ್ಸನ್… ಯಾವುದೇ ಹೆಸರು ಹೇಳಿ, ಯಾರ ಹೆಸರನ್ನು ಬೇಕಾದರೂ ತೆಗೆದುಕೊಳ್ಳಿ. ಇವರೆಲ್ಲರೂ ಅತ್ಯಂತ ಜನಪ್ರಿಯ ಕರಿಯ ನಾಯಕರಾಗಿದ್ದವರೇ. ಡುಬಾಯ್ಸ್ ಅವರಂತೂ ೨೦ನೇ ಶತಮಾನದ ಪ್ರಭಾವಿ ಕರಿಯ ನಾಯಕರೆನಿಸಿಕೊಂಡಿದ್ದವರು. ಇನ್ನು ಮಾಲ್ಕಮ್ ಎಕ್ಸ್ ಅವರು ಕರಿಯರಿಗಾಗಿಯೇ ಪ್ರತ್ಯೇಕ (Blacks-Only) ರಾಜ್ಯ ಅಥವಾ ರಾಷ್ಟ್ರ ರಚನೆಗಾಗಿ ಕರೆಕೊಟ್ಟವರು. ಅಮೆರಿಕದಲ್ಲಿ ಸಮಾನ ಹಕ್ಕಿಗಾಗಿ ನಡೆದ ಕರಿಯರ ಹೋರಾಟದಲ್ಲಿ ರೋಜರ್ ವಿಲ್ಕಿನ್ಸ್‌ರದ್ದೂ ಸಣ್ಣ ಹೆಸರಲ್ಲ. ಮಾರ್ಟಿನ್ ಲೂಥರ್ ಕಿಂಗ್ [...]

ಹತ್ತು ವರ್ಷಗಳ ಹಿಂದೆ ಈ ಹೊತ್ತಿಗೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು

Thursday, May 21st, 2009

Being the largest party, BJP, should have been in the POSITION, but it is in the OPPOSITION. In contrast the second largest party, Congress, which should have been in the OPPOSITION, is neither in the POSITION nor in the OPPOSITION. Those who are in the POSITION deserve neither POSITION nor OPPOSITION.
ಪ್ರಮೋದ್ ಮಹಾಜನ್ ಇಂದು ನಮ್ಮೊಂದಿಗಿಲ್ಲ, ಆದರೆ [...]

ಮತ್ತೆ ಕದಡಿದ ನೇಪಾಳ, ಭಾರತಕ್ಕೂ ಕೇಡುಗಾಲ!

Wednesday, May 13th, 2009

ಕ್ಯೂಬಾ ರಷ್ಯಾಕ್ಕೆ ಹತ್ತಿರವಾದರೆ ಅಮೆರಿಕ ಕ್ಕೇನು ತ್ರಾಸ, ಮೆಕ್ಸಿಕೊ ಮಾದಕ ವಸ್ತು ಉತ್ಪಾದನೆ ಮಾಡಿದರೆ ಅಮೆರಿಕದ ಅಧ್ಯಕ್ಷರಿಗೇಕೆ ಕೋಪ, ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದರೆ ಜಪಾನ್ ಹಾಗೂ ದಕ್ಷಿಣ ಕೊರಿಯಾಗಳಿಗೇನು ಚಿಂತೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತನಗೆ ಖಾಯಂ ಸ್ಥಾನ ನೀಡಬೇಕೆಂದು ಬ್ರೆಝಿಲ್ ಬೇಡಿಕೆಯಿಟ್ಟರೆ ಅರ್ಜೆಂಟೀನಾವೇಕೆ ವಿರೋಧಿಸುತ್ತದೆ, ಇರಾಕ್ ಅಣುಸ್ಥಾವರ ನಿರ್ಮಾಣ ಮಾಡಲು ಹೊರಟಾಗ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿ ನಾಶಪಡಿಸಿದ್ದೇಕೆ, ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡಲು ಹೊರಟರೆ ಅಮೆರಿಕ-ಇಸ್ರೇಲ್‌ಗಳೇಕೆ ವಿರೋಧಿಸುತ್ತಿವೆ?

ಸ್ವಿಸ್ ಹೆಸರೆತ್ತಿದರೆ ಕಾಂಗ್ರೆಸ್‌ಗೇಕೆ ಹೆಗಲು ಮುಟ್ಟಿಕೊಳ್ಳುವ ದಿಗಿಲು?

Wednesday, May 6th, 2009

LOTUS-POTUS!
ಹಾಗೆಂದರೆ ಈಗಿನ ತಲೆಮಾರಿನವರಿಗೆ ಅರ್ಥವಾಗೊಲ್ಲ ಬಿಡಿ. ಇಂದಿರಾ ಗಾಂಧಿಯವರು ಪ್ರಧಾನಿ ಯಾಗಿದ್ದ ಕಾಲದಲ್ಲಿ ಪತ್ರಕರ್ತರು ‘ಲೋಟಸ್-ಪೋಟಸ್’ ಎಂದು ಜೋಕ್ ಮಾಡುತ್ತಿದ್ದರು. ಆ ಜೋಕಿಗೆ ಕಾಲು-ಬಾಲ ಎಲ್ಲ ಸೇರಿಕೊಂಡು ಜಾನಪದ ಕಥೆಗಳಂಥ ಸ್ಟೋರಿಗಳು ಸೃಷ್ಟಿ ಯಾಗಿದ್ದವು. ಅವತ್ತು ಸಂಜಯ್ ಗಾಂಧಿಯವರ ಹೆಲಿಕಾಪ್ಟರ್ ದುರಂತಕ್ಕೀಡಾದಾಗ, ಘಟನೆ ನಡೆದ ಸ್ಥಳಕ್ಕೆ ಓಡಿಬಂದ ಇಂದಿರಾ ಗಾಂಧಿಯವರು ಮಗನ ಸಾವಿಗೆ ದುಃಖಿಸುವ ಬದಲು ಸಂಜಯ್ ಕೈಯಲ್ಲಿದ್ದ ವಾಚ್ ಹುಡುಕುತ್ತಿದ್ದರಂತೆ! ಅದರೊಳಗೆ ಸ್ವಿಸ್ ಬ್ಯಾಂಕ್‌ನಲ್ಲಿಟ್ಟಿರುವ ಕಳ್ಳ ಹಣದ ಕೋಡ್ ಇತ್ತಂತೆ. ಆ ಕೋಡ್ ಮೊದಲ ಮಗ [...]

ಮತ್ತೆ ಎದ್ದಿರುವ ಹಳೆ ವಿವಾದದ ನೆಪದಲ್ಲಾದರೂ ಅವರನ್ನು ನೆನಪಿಸಿಕೊಳ್ಳಬೇಕೆನಿಸಿತು, ಅಷ್ಟೇ!

Friday, May 1st, 2009

ಕಳೆದ ಜನವರಿಗೂ ಮೊದಲೇ ಗುಸು ಗುಸು ಆರಂಭವಾಗಿತ್ತು. ಕಲ್ಯಾಣ್ ಸಿಂಗ್ ಪಕ್ಷ ಬಿಡುತ್ತಾರಂತೆ, ಪಕ್ಷದ ಇತರ ನಾಯಕರ ಧೋರಣೆಗಳ ಬಗ್ಗೆ ಬೇಸತ್ತಿ ದ್ದಾರಂತೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರ ನ್ನಾಗಿ ಮಾಡಿದ್ದರೂ ತಕ್ಕ ಮನ್ನಣೆ ನೀಡುತ್ತಿಲ್ಲವಂತೆ, ಅವರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆಯಂತೆ, ಪರ್ಯಾಯ ಮಾರ್ಗ ಹುಡುಕಲಾರಂಭಿಸಿದ್ದಾರಂತೆ, ಮುಲಾಯಂ ಸಿಂಗ್ ಜತೆ ಈಗಾಗಲೇ ಗೌಪ್ಯ ಮಾತುಕತೆ ನಡೆಸಿದ್ದಾರಂತೆ, ಸದ್ಯದಲ್ಲೇ ಸಮಾಜ ವಾದಿ ಪಕ್ಷವನ್ನು ಸೇರಿಕೊಳ್ಳುತ್ತಾರಂತೆ…