“ಸರಕಾರ ನೆಲ, ಜಲ, ವಿದ್ಯುತ್ ಹಾಗೂ ಶಿಕ್ಷಣ ವಲಯವನ್ನು ಖಾಸಗೀಕರಣ ಮಾಡುತ್ತಿದೆ. ಉದಾರೀಕರಣ, ಜಾಗತೀಕರಣದ ಕಪಿಮುಷ್ಟಿ ಯಲ್ಲಿ ಸಿಲುಕಿ ಈಗಾಗಲೇ ನಲುಗಿದ್ದೇವೆ. ಕಳ್ಳಕಾಕರು, ಮಠಾಧೀಶರು ಹಾಗೂ ಉಳ್ಳವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಜನರ ಬದುಕಿಗೆ ಸಂಬಂಧಿಸಿದ ನೆಲ, ಜಲ , ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ. ಈ ಕೆಲಸವನ್ನು ಕಳ್ಳಕಾಕರಿಗೆ ವಹಿಸಬೇಡಿ. ಈ ಕೆಲಸ ಮಾಡಿದರೆ ನೀವು ಪುನಃ ಅಧಿಕಾರಕ್ಕೆ ಬರುವುದು ಖಚಿತ. ಇದು ನನ್ನ ಭವಿಷ್ಯವಾಣಿ”.
ಕಳೆದ ವಾರ ಚಿತ್ರದುರ್ಗದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಪ್ರೊ. ಎಲ್. ಬಸವರಾಜು ಸರಕಾರಕ್ಕೆ ಹೇಳಿದ ಕಿವಿಮಾತಿದು.
“ಮಠಗಳು, ಮಠಾಧೀಶರು ನಮ್ಮ ಶತ್ರುಗಳು” ಎಂದು ಹೇಳಿಕೆ ನೀಡುವ ಮೂಲಕ ಸಮ್ಮೇಳನಕ್ಕೂ ಮುನ್ನವೇ ಒಂದಿಷ್ಟು ಅನಗತ್ಯ ಚರ್ಚೆ, ವಿವಾದಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಬಿಟ್ಟರೆ ಬಸವರಾಜು ಅವರು ಎತ್ತಿರುವ ವಿಚಾರಗಳ ಬಗ್ಗೆ ನೈಜ ಕಾಳಜಿ ಇರುವವರೆಲ್ಲ ಖಂಡಿತ ಯೋಚಿಸಬೇಕಾದ ಅಗತ್ಯವಿದೆ.
ಬಹುಶಃ ನೀವು Jim Crow laws ಬಗ್ಗೆ ಕೇಳಿರಬಹುದು.
ಹದಿನೆಂಟನೇ ಶತಮಾನದಲ್ಲಿ ಅಮೆರಿಕದಲ್ಲಿ ಕರಿಯರನ್ನು ಮಾರುಕಟ್ಟೆಯಲ್ಲಿ ಹರಾಜಿಗಿಟ್ಟು ಮಾರಾಟ ಮಾಡುತ್ತಿದ್ದರು. ಇಂತಹ ಗುಲಾಮಗಿರಿ ಹಾಗೂ ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದ್ದ ನೀತಿಯ ವಿರುದ್ಧ ೧೮೬೧ರಿಂದ ೬೫ರವರೆಗೂ ಅಮೆರಿಕದಾದ್ಯಂತ ಒಂದು ಯಶಸ್ವಿ ‘ಸಿವಿಲ್ ವಾರ್’ ನಡೆಯಿತು. ಆನಂತರ ಗುಲಾಮಗಿರಿಯನ್ನು ನಿಷೇಧಿಸಿದ್ದಲ್ಲದೆ, ಕರಿಯರಿಗೆ ರೈಲು, ಬಸ್, ಶಾಲೆ, ಕಾಲೇಜು ಸೇರಿದಂತೆ ಎಲ್ಲ ಸಾರ್ವಜನಿಕ ಸೇವೆಗಳಲ್ಲೂ “ಪ್ರತ್ಯೇಕ, ಆದರೆ ಸಮಾನ”(Separate but Equal) ವ್ಯವಸ್ಥೆಯನ್ನು ಮಾಡಲಾಯಿತು. ಅವುಗಳನ್ನೇ ‘ಜಿಮ್ ಕ್ರೋ ಲಾ’ ಎನ್ನುವುದು. ಈ ಕಾನೂನಿನ ಪ್ರಕಾರ ಕರಿಯರಿಗೂ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಶಾಲೆ, ಕಾಲೇಜುಗಳನ್ನು ತೆರೆಯಲಾಯಿತು. ಉಚಿತ ಶಿಕ್ಷಣ ಸೇವೆ ಆರಂಭವಾಯಿತು. ತೊಗಲಿನ ಬಣ್ಣದ ಸಲುವಾಗಿ ಶಿಕ್ಷಣದಿಂದಲೇ ವಂಚಿತರಾಗಿದ್ದ ಕರಿಯರಿಗೆ ಪ್ರತ್ಯೇಕ ಶಾಲೆ, ಕಾಲೇಜುಗಳ ಸ್ಥಾಪನೆಯಿಂದಾಗಿ ವಿದ್ಯೆ ಸಿಗುವಂತಾಯಿತು. Historically Black Colleges and Universities (ಎಚ್‌ಬಿಸಿಯು) ಸ್ಥಾಪನೆಯಿಂದಾಗಿ ಕರಿಯರು ಬಿಳಿಯರ ಜತೆ ಸ್ಪರ್ಧೆ ಮಾಡುವಷ್ಟರ ಮಟ್ಟಿಗೆ ಬೆಳೆಯಲು ಅನುಕೂಲವಾಯಿತು. ಎಲ್ಲದರಲ್ಲೂ ಕರಿಯರನ್ನು ಪ್ರತ್ಯೇಕವಾಗಿಡಲು ಆರಂಭಿಸಿದ ಈ ಕಾಯಿದೆ ಕಾಲಾಂತರದಲ್ಲಿ ಅರ್ಥ ಕಳೆದುಕೊಂಡು ಕರಿಯರೇ ಅದನ್ನು ವಿರೋಧಿಸುವಂತಾದರೂ, ೧೯೫೪ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಈ ಕಾಯಿದೆಗೆ ತಡೆಹಾಕಿದರೂ ಶಿಕ್ಷಣದ ವಿಷಯದಲ್ಲಿ ಕಾಯಿದೆಯಿಂದ ಕರಿಯರಿಗೆ ಅಪಾರ ಲಾಭವಾಗಿದ್ದಂತೂ ನಿಜ. ಇಂದಿಗೂ ಅಮೆರಿಕದಲ್ಲಿ ೧೦೩ ಎಚ್‌ಬಿಸಿಯುಗಳಿವೆ. ಅವುಗಳಲ್ಲಿ ದೊರೆಯುತ್ತಿರುವ ಗುಣ ಮಟ್ಟದ ಶಿಕ್ಷಣ ಎಷ್ಟು ಹೆಸರುವಾಸಿಯಾಗಿದೆಯೆಂದರೆ ಬಿಳಿಯರೂ ಎಚ್‌ಬಿಸಿಯುಗಳನ್ನು ಸೇರಿದ್ದಾರೆ. ಅಲ್ಲಿ ಕಲಿತು ಮೇಲೆ ಬಂದ ವಿದ್ಯಾರ್ಥಿಗಳು ಪ್ರತಿಯಾಗಿ ನೀಡುತ್ತಿರುವ ದೇಣಿಗೆ ಸರಕಾರದ ಸಹಾಯ ಧನಕ್ಕಿಂತ ಹೆಚ್ಚಾಗಿದೆ. ಅಂದರೆ ಸರಕಾರದಿಂದ ಉಚಿತವಾಗಿ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ನಿಂತ ಮೇಲೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಕಾಲೇಜುಗಳಿಗೆ ಸಹಾಯ ನೀಡುವ ಮೂಲಕ ಸಮಾಜದ ಋಣಭಾರವನ್ನು ತೀರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, “ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ” ಎಂಬ ಬಸವರಾಜು ಅವರ ಕೂಗಿನ ಹಿಂದೆಯೂ ಒಂದು ತರ್ಕವಿದೆ, ದಲಿತರ ಆರ್ತನಾದವಿದೆ. ಅಷ್ಟಕ್ಕೂ ಪ್ರತ್ಯೇಕ ಶಾಲೆಗಳೆಂದರೆ ಸಾಮಾಜಿಕವಾಗಿ ದೂರವಿಡುವುದೆಂದಲ್ಲ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ದೀನ-ದಲಿತರಿಗೆ ಉತ್ತಮ ದರ್ಜೆಯ ಶಿಕ್ಷಣ ಉಚಿತವಾಗಿ ಸಿಗುವಂತೆ ಮಾಡುವ ವ್ಯವಸ್ಥೆ ಯಷ್ಟೇ.
ಇಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸ್ವಾತಂತ್ರ್ಯ ಬಂದು ೬೨ ವರ್ಷಗಳ ನಂತರ ಕರೆ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ?
ತುಂಬಾ ಹೆಚ್ಚು ಹಿಂದಕ್ಕೆ ಹೋಗುವುದು ಬೇಡ. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ. ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆ ಕಟಾವಾಗಿ, ಸಂಕ್ರಾಂತಿ ಕಳೆದ ನಂತರ ನಮ್ಮ ಕಿರಿಯ ಮಠಾಧೀಶರು ಊರೂರು ಗಳಿಗೆ ಬರುತ್ತಿದ್ದರು. ಅವರ ಜತೆ ಒಂದು ದೊಡ್ಡ ದಂಡೂ ಬರುತ್ತಿತ್ತು. ಒಂದು ಊರಿನಲ್ಲಿ ಒಂದೆರಡು ದಿನ ಮೊಕ್ಕಾಂ ಹೂಡಿ, ನೆರೆಯ ಹಳ್ಳಿಗಳಿಗೂ ಭೇಟಿಕೊಟ್ಟು ಸಂಜೆ ಬೀಡಿಗೆ ಮರಳುತ್ತಿದ್ದರು. ಹಾಗೆ ಆಗಮಿಸಿದ ಸ್ವಾಮೀಜಿ ಯಾವ ಜಾತಿ, ಮಠದವರು ಎಂದು ಯಾರೂ ಕೇಳುತ್ತಿರಲಿಲ್ಲ. ಸ್ವಾಮೀಜಿಗಳೂ ತಮ್ಮ ಜಾತಿಯವರನ್ನು ಮಾತ್ರ ಕಾಣಲು ಆಗಮಿಸುತ್ತಿರಲಿಲ್ಲ. ಒಬ್ಬ ಸ್ವಾಮೀಜಿ ಬಂದಿದ್ದಾರೆ ಎಂದರೆ ಎಲ್ಲ ಮನೆಯವರೂ ತಮ್ಮ ಶಕ್ತಿಗನುಸಾರ ದವಸ-ಧಾನ್ಯ, ಕಾಣಿಕೆಗಳನ್ನು ತಂದು ಒಪ್ಪಿಸುತ್ತಿದ್ದರು. ಸಂಜೆಯ ವೇಳೆ ಧಾರ್ಮಿಕ ಕಾರ್ಯಕ್ರಮ, ಪ್ರವಚನ ನಡೆಯುತ್ತಿತ್ತು. ಅವತ್ತು ಜನ ಕೊಟ್ಟ ದವಸ-ಧಾನ್ಯ, ಕಾಣಿಕೆಯಿಂದ ಮಠಗಳು ವರ್ಷ ಕಳೆಯುತ್ತಿದ್ದವು. ಜನ ಕೂಡ ಆ ಜಾತಿ, ಈ ಜಾತಿ ಎನ್ನದೆ ಎಲ್ಲರೂ ಏಕೆ ಕಾಣಿಕೆ ನೀಡುತ್ತಿದ್ದರು ಎಂದರೆ ಮಠಗಳು ಯಾವುದೇ ಜಾತಿಗಳದ್ದಾಗಿದ್ದರೂ ಸಮಾಜದ ಎಲ್ಲರ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು.
‘ಇವನಾರವ ಇವನಾರವ ಎನ್ನದಿರು, ಇವ ನಮ್ಮವ’ ಎಂದು ಬಸವಣ್ಣ ಹೇಳಿದಂತೆ ಮಠಗಳೂ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಮಕ್ಕಳಿಗೆ ಮೂಲ ಶಿಕ್ಷಣವನ್ನು (ಫಂಡಮೆಂಟಲ್ ಎಜುಕೇಶನ್) ಹೇಳಿಕೊಡುತ್ತಿದ್ದವು. ಧಾರ್ಮಿಕ ಪಾಠದ ಜತೆಗೆ “”3 R’s” ಅಂದರೆ ಓದು, ಬರಹ, ಲೆಕ್ಕ (Reading, Writing, Arithmetics) ಮುಂತಾದ ಬದುಕಿಗೆ ಬೇಕಾದ ಪ್ರಾಥಮಿಕ ವಿದ್ಯೆಯನ್ನು ಹೇಳಿ ಕೊಡುವ ಕೆಲಸ ಮಾಡುತ್ತಿ ದ್ದವು. ಹಾಗಾಗಿ ಮಠಗಳೆಂದರೆ ಸಮಾಜದ ಎಲ್ಲರೂ ಗೌರವಿ ಸುವ ಕೇಂದ್ರಗಳಾಗಿದ್ದವು. ‘ಮಠಕ್ಕೆ ಹಾಕಿದರೆ ಮಗ ಉದ್ಧಾರ ಆಗುತ್ತಾನೆ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಒಂದು ವೇಳೆ, ಮಠದಲ್ಲಿ ಕಲಿತು ಹೊರಬಂದವನೊಬ್ಬ ಸಣ್ಣ ತಪ್ಪು ಮಾಡಿದರೂ ಅದು ಅಕ್ಷಮ್ಯ ಅಪರಾಧವೆನಿಸುತ್ತಿತ್ತು. ಅಂದರೆ ಮಠದಲ್ಲಿ ಕಲಿತವನೆಂದರೆ ಆತ ಎಲ್ಲ ಸದ್ಗುಣಗಳನ್ನೂ ರೂಢಿಸಿಕೊಂಡವನೆಂಬ ನಂಬಿಕೆ ಇತ್ತು. ಹೀಗೆ ನಮ್ಮ ಜನ ಮಠ-ಮಂದಿರಗಳಲ್ಲಿ ತಮ್ಮ ವಿಶ್ವಾಸದ ಗಂಟನ್ನಿಟ್ಟಿದ್ದರು.
ಆದರೆ ಇಂದು ಆ ಮಾತನ್ನು ಹೇಳಲು ಸಾಧ್ಯವಿದೆಯೇ?
ಯಾವ ಮಠಾಧೀಶರೂ ಸಂಕ್ರಾಂತಿ ಕಳೆದ ನಂತರ ಊರೂರು ಸುತ್ತಲು ಬರುವುದಿಲ್ಲ. ಜನರೇ ಶಾಲೆ, ಕಾಲೇಜು ಪ್ರಾರಂಭ ವಾಗುವ ಮುನ್ನ ಮಗ, ಮಗಳಿಗೆ ಅಡ್ಮಿಶನ್ ಕೋರಿ ಸ್ವಾಮೀಜಿಗಳ ಕಾಲ ಬಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅಂದು ಸ್ವಾಮೀಜಿಗಳ ಕಾಲಿಗೆ ನಮಸ್ಕರಿಸಿದರೆ ಭಸ್ಮ ಕೊಡುತ್ತಿದ್ದರು, ಇಂದು ನಮಸ್ಕರಿಸಿ ನೋಟು, ಚೆಕ್ಕು ಇಟ್ಟರೆ ‘ಸೀಟು’, ಸೇಬು, ಮೂಸಂಬಿ ಅಥವಾ ಕಿತ್ತಳೆ ಹಣ್ಣನ್ನು ನಿಮ್ಮ ಕೈಗಿಡುತ್ತಾರೆ.
ಇಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು?
ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಿಕ್ಷಣದ ವಿಚಾರ ಬಂದಾಗ “Profit is a dirty word” ಎನ್ನುತ್ತಿದ್ದರು. ಅಂದರೆ ವಿದ್ಯೆ ಎಂಬುದು ಲಾಭದ ಉದ್ದೇಶ ಇಟ್ಟುಕೊಂಡು ಮಾಡುವ ಉದ್ದಿಮೆಯಲ್ಲ. ಅದಕ್ಕೇ ನಮ್ಮಲ್ಲಿ ‘ವಿದ್ಯಾದಾನ’ ಎನ್ನುತ್ತಿದ್ದುದು. ಆದರೆ ಸರಕಾರವೊಂದರಿಂದಲೇ ಹತ್ತಾರು ಕೋಟಿ ಭಾರತೀಯರಿಗೆ ವಿದ್ಯಾದಾನ ಮಾಡಲು ಸಾಧ್ಯವಿಲ್ಲ ಎಂದರಿತ ಸರಕಾರ, ಸಾಮಾಜಿಕ ಕಾಳಜಿ ಇರುವವರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು, ಸ್ವತಂತ್ರವಾಗಿ ನಡೆಸಲು ಧಾರಾಳವಾಗಿ ಅನುಮತಿ ಕೊಡಲು ಆರಂಭಿಸಿತು. ಇದರ ಲಾಭವನ್ನು ದುಡ್ಡಿದ್ದವರು ಹಾಗೂ ಮಠಗಳು ಪಡೆದುಕೊಳ್ಳಲಾರಂಭಿಸಿದವು. ಆದರೆ ಯಾವಾಗ ಮಠಗಳು ಬದುಕಿಗೆ ಬೇಕಾದ ಮೂಲ ಶಿಕ್ಷಣದ ಬದಲು ಉನ್ನತ ಶಿಕ್ಷಣದತ್ತ ಹೆಚ್ಚು ಹೆಚ್ಚು ಗಮನಹರಿಸಲು ಪ್ರಾರಂಭಿಸಿದವೋ ಆಗ ನೆಹರು ಹೇಳಿದ್ದ ಮಾತು ಅರ್ಥಕಳೆದುಕೊಳ್ಳಲಾರಂಬಿಸಿತು. ಇವತ್ತು ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಡಿ (ವಿಟಿಯು) ೧೫೯ ಎಂಜಿನಿಯರಿಂಗ್ ಹಾಗೂ ಬ್ಯುಸಿನೆಸ್ ಮೇನೇಜ್‌ಮೆಂಟ್ ಕಾಲೇಜುಗಳಿವೆ. ಅವುಗಳಲ್ಲಿ ಎಷ್ಟು ಸರಕಾರಿ ಕಾಲೇಜುಗಳಿವೆ ಹಾಗೂ ಎಷ್ಟು ಕಾಲೇಜುಗಳು ಮಠಗಳು ಹಾಗೂ ದುಡ್ಡಪ್ಪಗಳ ನಿಯಂತ್ರಣದಲ್ಲಿವೆ ಎಂಬುದನ್ನು ಲೆಕ್ಕಹಾಕಿ. ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಬಲ ಎನಿಸಿಕೊಂಡ ಎಲ್ಲ ಮಠಗಳ ಬಳಿಯಲ್ಲೂ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಎರಡೂ ಕಾಲೇಜುಗಳಿವೆ. ಅವುಗಳಿಗೆ ಪ್ರಾಬಲ್ಯ ಬಂದಿದ್ದೇ ಇಂತಹ ಕಾಲೇಜುಗಳಿಂದ. ಹೀಗೆ ಕಾಲೇಜುಗಳನ್ನೇ ಕಾಮಧೇನುಗಳನ್ನಾಗಿ ಮಾಡಿಕೊಂಡ ಮಠಗಳು ‘ಪವರ್ ಸೆಂಟರ್’ಗಳಾದವು. ಅಂದು ರಾಜಕಾರಣಿಗಳು ಎಲ್ಲರಿಗೂ ಸರಕಾರವೇ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಠಗಳಿಗೆ ಜವಾಬ್ದಾರಿ ಕೊಟ್ಟರು. ಇವತ್ತು ಮಠಗಳು ರಾಜಕಾರಣವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗಿ ಬೆಳೆದಿವೆ. ನೀವೇ ಯೋಚನೆ ಮಾಡಿ, ರಾಮಕೃಷ್ಣ ಮಠದಂತಹ ಕೆಲವನ್ನು ಬಿಟ್ಟು ಯಾವುದೇ ಮಠವನ್ನು ಹೆಸರಿಸಿ, ಕೂಡಲೇ ‘ಇಂತಹ ಜಾತಿಯದ್ದು’ ಎಂಬ ಯೋಚನೆ ಅರಿವಿಲ್ಲದಂತೆಯೇ ನಿಮ್ಮ ಮನಸ್ಸಿಗೆ ಬರುತ್ತದೆ. ಅಂದರೆ ಹಿಂದೆ ಸರ್ವಜನರ ಅಭ್ಯುದಯದ ಗುರಿ ಇಟ್ಟುಕೊಂಡಿದ್ದ ಮಠಗಳ ಕೈಗೆ ಉನ್ನತ ಶಿಕ್ಷಣದ ‘ಫಲ’ ಸಿಕ್ಕಿದ ನಂತರ ದುಡ್ಡು ಹರಿದು ಬಂತು. ಆ ದುಡ್ಡು ಎಷ್ಟು ಪ್ರಚೋದಕವಾಗಿತ್ತೆಂದರೆ ಮಠಗಳಿಗೆ “”3 R’s” ಇತ್ತಲ್ಲ ಅದು “”Rs” ಥರಾ ಕಾಣಲಾರಂಭಿಸಿತು. ಹೀಗೆ ಮೂಲ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗುತ್ತಾ ಹೋದ ಮಠಗಳು ಹಾಗೂ ಜನರ ನಡುವೆ ಅಂತರ ಸೃಷ್ಟಿಯಾಗತೊಡಗಿತು. ಕಾಲಕ್ರಮೇಣ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಎಲ್ಲ ಮಠಗಳಿಗೂ ಹೋಗುತ್ತಿದ್ದ ಕಾಲ ಬದಲಾಗಿ ಅವು ಜಾತಿ ಮಠಗಳಾಗತೊಡಗಿದವು. ಹೀಗೆ ಮಠಗಳು ಆಯಾ ಜಾತಿಗಳಿಗೆ ಸೀಮಿತವಾಗಿದ್ದು ಸಮಾಜಕ್ಕೆ ನಷ್ಟವಾದರೂ, ಮಠಗಳಿಗೆ ಮಾತ್ರ ವರದಾನವಾಯಿತು. ಅಂದರೆ ಮಠಗಳೂ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೆಸಲು ಅವಕಾಶ ಲಭ್ಯವಾಯಿತು. ಇಂತಹ ಸ್ವಾಮೀಜಿಯವರನ್ನು ಎದುರು ಹಾಕಿಕೊಂಡರೆ ಅವರ ಸಮುದಾಯದವರು ಮುನಿಸಿಕೊಳ್ಳುತ್ತಾರೆ, ಇಂತಹ ಜಾತಿಯ ಮತಗಳು ಕೈತಪ್ಪಿ ಹೋಗುತ್ತವೆ ಎಂಬ ಭಯ ನಮ್ಮ ರಾಜಕಾರಣಿಗಳನ್ನು ಕಾಡು ವಂತೆ ಮಾಡಿದರು. ಹೀಗೆ ಮಠಗಳು ಇಂದು ರಾಜಕೀಯದ ಮೇಲೆಯೂ ನಿಯಂತ್ರಣ ಸಾಧಿಸಿವೆ.
ಈ ರೀತಿ ಸರಕಾರ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು ವಿದ್ಯಾದಾನದ ಜವಾಬ್ದಾರಿಯನ್ನು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು, ದುಡ್ಡಪ್ಪಗಳು ಮತ್ತು ಮಠಗಳಿಗೆ ವಹಿಸಿದ್ದು ಹಾಗೂ ವಹಿಸಿಕೊಂಡವರು ಅದನ್ನು ಉದ್ಯಮದಂತೆ ನಡೆಸಿಕೊಂಡಿದ್ದರ ಪರಿಣಾಮವಾಗಿ ದೀನ ದಲಿತರು ಮೂಲ ಹಾಗೂ ಉನ್ನತ ಶಿಕ್ಷಣ ಎರಡರಿಂದಲೂ ವಂಚಿತರಾಗಬೇಕಾಗಿ ಬಂತು. ಇತ್ತ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರೆಂಬ ಹಣೆ ಪಟ್ಟಿ ಹಾಕಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿರುವವರು ‘ನಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್. ನಾವು ಮೀಸಲಾತಿ ಕೊಡಬೇಕೆಂದಿಲ್ಲ’ ಎಂದು ವಾದಿಸಿ ಗೆದ್ದರು. ಇನ್ನೊಂದೆಡೆ ದುಡ್ಡಪ್ಪಗಳು ಹಾಗೂ ಮಠಗಳು ರಾಜಕೀಯದ ಮೇಲೆ ತಾವು ಸಾಧಿಸಿರುವ ನಿಯಂತ್ರಣವನ್ನು ಉಪಯೋಗಿಸಿಕೊಂಡು ತಮ್ಮ ಶಿಕ್ಷಣ ಸಂಸ್ಥೆಗಳನ್ನು “ಡೀಮ್ಡ್ ಯೂನಿವರ್ಸಿಟಿ”ಗಳೆಂದು ಘೋಷಿಸಿಕೊಳ್ಳುತ್ತಿದ್ದಾರೆ, ಇಲ್ಲವೇ “ಸ್ವಾಯತ್ತ ಸಂಸ್ಥೆ”(ಅಟಾನಮಸ್ ಸ್ಟೇಟಸ್) ಎಂಬ ಸ್ಥಾನಮಾನ ಪಡೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸರಕಾರಿ ಸೀಟುಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿವೆ. ಹೀಗೆ ಎಲ್ಲರೂ ತಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್, ರಿಸರ್ವೇಶನ್ ಕೊಡುವುದಿಲ್ಲ ಎನ್ನಲು ಆರಂಭಿಸಿದರೆ, ಡೀಮ್ಡ್ ಹಾಗೂ ಆಟಾನಮಸ್ ಎಂಬ ತಡೆಗೋಡೆ ಕಟ್ಟಿಕೊಂಡರೆ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿ, ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತನಾಗಿರುವ ದಲಿತರು ಎಲ್ಲಿಗೆ ಹೋಗಬೇಕು? ಅವರ ನೋವು ನಮಗೇಕೆ ಅರ್ಥವಾಗುವುದಿಲ್ಲ?
“ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ”, “ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ” ಎಂದಿರುವ ಬಸವರಾಜು ಅವರ ಕೂಗಿನ ಹಿಂದೆ ಇಂತಹ ಹಾಲಿ ಪರಿಸ್ಥಿತಿಯ ಕ್ರೂರ ಅಣಕವಿದೆ, ದಲಿತ ಹಾಗೂ ಎಲ್ಲ ಜಾತಿಯ ಬಡಬಗ್ಗರ ಹತಾಶೆಯಿದೆ ಎಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?
ಖಂಡಿತ ಮಠಗಳು ಏನನ್ನೂ ಮಾಡಿಲ್ಲ ಎಂದು ಸಾರಾ ಸಗಟಾಗಿ ಇಲ್ಲಿ ಹೇಳುತ್ತಿಲ್ಲ.
ಒಂದು ವೇಳೆ, ಬಸವರಾಜು ಅವರ ಮಾತು, ಟೀಕೆಯಲ್ಲಿ ಹುರುಳಿಲ್ಲ ಎನ್ನುವುದಾದರೆ ಎಲ್ಲ ಮಠಗಳೂ ತಮ್ಮ ಆದಾಯ ಮತ್ತು ಬಡವರ ಕಲ್ಯಾಣಕ್ಕಾಗಿ ಇದುವರೆಗೂ ಮಾಡಿರುವ ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಲಿ? ಒಬ್ಬ ಸಾಮಾನ್ಯ ನಾಗರಿಕ ಸರಕಾರಕ್ಕೆ ತನ್ನ ಆದಾಯ ಹಾಗೂ ವೆಚ್ಚದ ಲೆಕ್ಕ ಕೊಡುತ್ತಾನೆ. ಆ ಕೆಲಸವನ್ನು ಮಠಗಳೂ ಮಾಡಲಿ. ಅವು ನಡೆಸುತ್ತಿರುವ ಉಚಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನೂ ತೆರೆದಿಡಲಿ.
ಇವತ್ತು ಶಿಕ್ಷಣ ವ್ಯವಸ್ಥೆ ಮೇಲೆ ಮಠಗಳ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ ತಮ್ಮ ಪ್ರಾಬಲ್ಯವಿರುವ, ಶಿಕ್ಷಣ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಕನಿಷ್ಠ ಸೌಲಭ್ಯಗಳ ಸರಕಾರಿ ಕಾಲೇಜುಗಳನ್ನು ಸ್ಥಾಪಿಸುವುದಕ್ಕೂ ಅಡ್ಡಿ ಬಂದಿವೆ. ಇನ್ನು ವೃತ್ತಿಪರ ಕಾಲೇಜುಗಳೆಂಬ ಕಾಮಧೇನು ನೀಡುವ ಫಲವನ್ನು ಕೆಳಸ್ತರಕ್ಕೆ ಹಂಚುವ ಕೆಲಸವನ್ನಾದರೂ ಮಠಗಳು ಮಾಡುತ್ತಿವೆಯೇ? ಎಷ್ಟು ಮಠಗಳು ಎಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳನ್ನು ಕನಿಷ್ಠ ಮಟ್ಟದ ಸುಶಿಕ್ಷಿತರನ್ನಾಗಿಸುವ ಪ್ರಯತ್ನ ನಡೆಸಿವೆ? ಮಠಮಾನ್ಯಗಳು ಈ ಸಾಮಾಜಿಕ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಅಂಗನವಾಡಿಗಳ ಅಗತ್ಯವಾದರೂ ಏನಿತ್ತು? ಕ್ಯಾಪಿಟೇಶನ್ ವಿರುದ್ಧ ವೀರಪ್ಪ ಮೊಯಿಲಿ ಅವರು ಕೆಂಡಕಾರಿ ಅದರ ನಿಷೇಧಕ್ಕೆ ಕರೆ ನೀಡಿದಾಗ ರೌದ್ರಾವತಾರ ತಳೆದ ಈ ‘ಉಳ್ಳವರ’ ಮಠಗಳು ಸರಕಾರವನ್ನು ಕಿತ್ತೊಗೆಯಲು ಪಣತೊಟ್ಟಿದ್ದನ್ನು ಮರೆಯಲಾದೀತೆ? ಅಷ್ಟೇ ಏಕೆ, ಮಠಗಳು ಸ್ವಜಾತಿಯ ಬಡವರಿಗೇ ಸಹಾಯ ಮಾಡುತ್ತಿಲ್ಲ ಎಂಬ ಆರೋಪ ವನ್ನು ಅಲ್ಲಗಳೆಯಲು ಸಾಧ್ಯವಿದೆಯೆ?
ಅಂದ ಮಾತ್ರಕ್ಕೆ “ಮಠಗಳಿಂದ ಶಿಕ್ಷಣವನ್ನು ಕಿತ್ತುಕೊಳ್ಳಬೇಕು ಎಂದಲ್ಲ”, ನರ್ಸಿಂಗ್, ಮೆಡಿಕಲ್, ಎಂಜಿನಿಯರಿಂಗ್, ಬ್ಯುಸಿನೆಸ್ ಮೇನೇಜ್‌ಮೆಂಟ್ ಮುಂತಾದ ಉನ್ನತ ಶಿಕ್ಷಣದ ಮೋಹವನ್ನು ಸ್ವಲ್ಪ ಕಡಿಮೆ ಮಾಡಿ “”Back to roots” ಎಂಬಂತೆ ಮಕ್ಕಳಿಗೆ ಓದು, ಬರಹ, ಲೆಕ್ಕವನ್ನು ಕಲಿಸುವಂತಹ ಮೂಲ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಎಲ್ಲ ಮಕ್ಕಳೂ ಒಟ್ಟಿಗೆ ಕುಳಿತು ಧಾರ್ಮಿಕ ಹಾಗೂ ಲೌಖಿಕ ಪಾಠವನ್ನು ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಿ ಜಾತಿರಹಿತ ಭಾವನೆ ಮೂಲದಲ್ಲೇ ಮೈಗೂಡುವಂತೆ ಮಾಡಬೇಕು. ಅಂತಹ ಸಮಾನ ಶಿಕ್ಷಣ ವ್ಯವಸ್ಥೆ ಸಿಕ್ಕಾಗ ಮಾತ್ರ ಒಂದು ಸ್ವಸ್ಥ ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.
ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಬಹುಮುಖ್ಯ ವಾದ ಅಂಶವಿದೆ.
ಒಬ್ಬ ದಲಿತ ಮತಾಂತರಗೊಂಡ ಕೂಡಲೇ ನಮಗೆ ಸಿಟ್ಟು ಬರುತ್ತದೆ. ಮಿಷನರಿಗಳನ್ನು ದೂಷಿಸಲಾರಂಭಿಸುತ್ತೇವೆ. ಆದರೆ ಆ ದಲಿತ ಮಾತೃಧರ್ಮ ತೊರೆಯುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವರಾರು? ಮತಾಂತರಗೊಳ್ಳುವವರೇನೂ ದಡ್ಡರಲ್ಲ. ಯೇಸುವನ್ನು ಪ್ರಾರ್ಥಿಸಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ, ಪಾದ್ರಿಗಳು ಹೇಳುತ್ತಿರುವುದೆಲ್ಲ ಪೊಳ್ಳು ಎಂಬುದು ಅವರಿಗೂ ಗೊತ್ತು. ಆದರೂ ಸಾಮಾಜಿಕ ಅಸಮಾನತೆ, ತಾರತಮ್ಯಗಳಿಲ್ಲದ ಒಂದು Better life ಎಂಬ ಮರೀಚಿಕೆಯನ್ನರಸಿಕೊಂಡು, ತಮ್ಮ ಮಕ್ಕಳಿಗೆ ಕಾನ್ವೆಂಟ್‌ಗಳಲ್ಲಿ ಪ್ರವೇಶ ಹಾಗೂ ಪುಕ್ಕಟೆ ಶಿಕ್ಷಣ ಸಿಗುತ್ತದೆ, ನಮ್ಮ ಮಕ್ಕಳಿಗಾದರೂ ಒಂದು ಒಳ್ಳೆಯ ಭವಿಷ್ಯ ಸೃಷ್ಟಿಯಾಗುತ್ತದೆ ಎಂಬ ಆಸೆಯಿಂದ ಹೋಗುತ್ತಾರೆ. ಅಂತಹ ಅನುಕೂಲಗಳನ್ನು ಸ್ವಧರ್ಮೀಯರೇ ಏಕೆ ಸೃಷ್ಟಿಸಬಾರದು? ಆಗಾಧ ಆದಾಯವನ್ನು ಹೊಂದಿರುವ ನಮ್ಮ ಮಠ-ಮಂದಿರಗಳೇಕೆ ಆ ಕೆಲಸ ಮಾಡಬಾರದು? ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಲಾಗದು. ಅಷ್ಟಕ್ಕೂ, ಸರಕಾರ ದಲಿತರಿಗೆ ಒಂದಿಷ್ಟು ಮೀಸಲು ನೀಡಬಹುದು, ಒಂದು ಹಂತದವರೆಗೂ ಪುಕ್ಕಟೆ ಶಿಕ್ಷಣ ಕೊಡಬಹುದು. ಆದರೆ ಮನಸ್ಸು-ಮನಸ್ಸುಗಳ ನಡುವೆ ಇರುವ ಕಂದಕವನ್ನು ಯಾವ ಕಾನೂನಿನಿಂದಲೂ ಮುಚ್ಚಲು ಸಾಧ್ಯವಿಲ್ಲ. ಆ ಕೆಲಸ ವನ್ನು ಮಠ-ಮಂದಿರಗಳು ಮಾಡಬೇಕು. ಹೀಗಿದ್ದರೂ ‘ಮತಾಂತರಗೊಳ್ಳಬೇಡಿ, ನಿಮ್ಮನ್ನೆಲ್ಲ ಒಪ್ಪಿಕೊಳ್ಳುತ್ತೇವೆ, ಅಪ್ಪಿಕೊಳ್ಳುತ್ತೇವೆ’ ಎಂದು ಭಾಷಣ ಕೊಟ್ಟು, ಸಹಪಂಕ್ತಿ ಬೋಜನ ಮಾಡೋಣ ಬನ್ನಿ ಎಂದ ಕೂಡಲೇ ಮೌನಕ್ಕೆ ಶರಣಾಗುತ್ತಾರೆ. ಹಾಗಾದರೆ ಒಬ್ಬ ಶಂಕರಾಚಾರ್ಯ, ವಿವೇಕಾನಂದ ಯಾವ ಉದ್ದೇಶಕ್ಕಾಗಿ ದೇಶ ಸುತ್ತಿದರು? ಶ್ರೀ ನಾರಾಯಣ ಗುರುಗಳು ಯಾವ ಕಾರಣಕ್ಕಾಗಿ ನಾಡನ್ನಲೆದರು? ಅವರೂ ಪೀಠದ ಮೇಲೆ ಕುಳಿತುಕೊಂಡು ನೋಟು ಮುಂದಿಟ್ಟವರಿಗೆ ಸೀಟು, ಸೇಬು, ಮೂಸಂಬಿ, ಕಿತ್ತಳೆ ಹಣ್ಣು ಕೊಡಬಹುದಿತ್ತಲ್ಲವೆ? ಹಾಗೆ ಕೊಟ್ಟಿದ್ದರೆ ಅವರು ದೇಹಬಿಟ್ಟ ನಂತರವೂ ಬದುಕಿರುತ್ತಿರಲಿಲ್ಲ.
ಇದು ಎಲ್ಲ ಮಠಾಧೀಶರಿಗೂ ಅರ್ಥವಾಗಬೇಕು. ಮಠ ಎಂದರೆ ಪೀಠದ ಮೇಲೆ ಆಸೀನರಾಗಿ, “ರೆವಿನ್ಯೂ ಜನರೇಟಿಂಗ್ ಸ್ಕೂಲ್, ಕಾಲೇಜು”ಗಳನ್ನು ಸ್ಥಾಪಿಸಿ, ಗಂಟಿದ್ದವರಿಗೆ ಮಾತ್ರ ತಮ್ಮ ಕಾಲೇಜುಗಳ ಬಾಗಿಲು ತೆರೆಯುವುದಲ್ಲ.
ಈ ಹಿನ್ನೆಲೆಯಲ್ಲಿ, ಎಲ್ಲ ಮಠಗಳನ್ನೂ ಒಂದೇ ತಕ್ಕಡಿಗೆ ಹಾಕಿ, ಮಠಗಳೆಂದರೆ ಸಮಾಜ ವಿರೋಧಿಗಳು ಎಂದು ಏಕಾಏಕಿ ತೀರ್ಪು ಕೊಟ್ಟ ಬಸವರಾಜು ಅವರ ಆ ಮಾತನ್ನು ನಿರ್ಲಕ್ಷಿಸಿ, ಬಸವರಾಜು ಅವರನ್ನೂ ನಿಮಿತ್ತವಾಗಿಟ್ಟುಕೊಂಡು ಅವರು ಎತ್ತಿರುವ ಕೆಲವು ಪ್ರಶ್ನೆಗಳ ಹಿಂದೆ ಇರುವ ಸಾಮಾಜಿಕ ಪರಿಸ್ಥಿತಿ ಹಾಗೂ ಅದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ದಲಿತರು ಮತ್ತು ಎಲ್ಲ ಜಾತಿಗಳ ಹಿಂದುಳಿದವರನ್ನು ಕಡೆಗಣಿಸಿದರೆ ಮುಂದೆ ಎಂತಹ ಅಪಾಯ ಎದುರಾಗಬಹುದು ಎಂಬುದನ್ನು ಊಹೆ ಮಾಡಿಕೊಳ್ಳಿ.
ಎಲ್ಲವೂ ನಿಮ್ಮ ವಿವೇಚನೆಗೆ ಬಿಟ್ಟಿದ್ದು.
February 16th, 2009 at 221528
thanks for superb article………it is a well know fact that matas are there for making money……..tey have their own medical and engineering colleges…..they r doing 24 hours politics……
only ramakrishna mutt is doing real service to people from all catagories……..
casteism will destroy india one day……….these mutts r doing caste politics……
pejavara swamy is not ready to eat food with dalit boys………he has only statements to say not any work for upliftment of dalits……..
February 16th, 2009 at 403428
s.. u are absolutely right… i know a college of engineering SJCIT headed by bal gangadarnath swamiji… here if u have money u will get any seat!!!!
February 16th, 2009 at 582428
This is one of the best articles from you Pratap, when others were degrading the Prof. you presented his arguments better than him. The truth is always bitter but if all the Mutts go back to providing basic primary education to all economically backward and socially downtrodden then they can reclaim the same respect once accorded to them. Pratap, please continue your work to make this society a better place for all.
February 17th, 2009 at 475928
Nice One Mr. Prataap
February 17th, 2009 at 543728
thanks for writing on this topic. it cant be denied that the mutts have been instumental in providing basic education in rural karnataka. but today all the jagadgurus seem to be on a marathon to flex their muscles nd show their power. with the spiritual and money power they have they can do lots of things which elected govts cant. unfortunately the vasted interests in the society, so called dhureenas shun any new swamiji who tries to do some good. not to forget the endless trips abroad, let them clean the mess here first.
February 17th, 2009 at 230128
I was expected V day articles. Not all famous Math have college. for ex all 8 math of Udupi, Raghavendra swamy math mantralayam, shankara math don,t have any college even schools. why you have forgotten to mention those things.
February 17th, 2009 at 240128
I was expected V day articles. Not all famous Math have college. for ex all 8 math of Udupi, Raghavendra swamy math mantralayam, shankara math don,t have any college even ( so called international)schools. why you have forgotten to mention those things.
February 17th, 2009 at 090628
ನಾಯಿಗೆ ಒಂದು ಸಲ ನೀವು ಬಿಸ್ಕಿಟ್ ಹಾಕಿದರೆ ಅದು ಪ್ರತಿ ಬಾರಿ ನಿಮ್ಮನ್ನು ಹಿಂಬಾಲಿಸುತ್ತದೆ. ಬಿಸ್ಕಿಟ್ ಸಾಕು ಎಂದರೂ ತಾನು ಕೇಳುವ ಚಾಳಿ ಬಿಡುವುದಿಲ್ಲ . ಹಾಗೆಯೇ ದಲಿತರಿಗೆ ಬರೋಬ್ಬರಿ ೬೦ ವರ್ಷಗಳಿಂದ Reservation ಕೊಡುತ್ತಾ ಬಂದರೂ ಇನ್ನೂ ತೃಪ್ತಿಯಾಗಿಲ್ಲ.3 generation ಗಳಿಂದ ಒಂದು ಸಮಾಜವನ್ನು ಚಿನ್ನದ ತಕ್ಕಡಿಯಲ್ಲಿಟ್ಟರೂ atleast ಚಿನ್ನದ ವಾಸನೆಯನ್ನಾದರೂ ಮೈಗೂಡಿಸಿಕೊಳ್ಳ ಲಾಗಲಿಲ್ಲವೆಂದರೆ ತಪ್ಪು ಸಮಾಜದ್ದೆ ಹೊರತು ಚಿನ್ನದ್ದಲ್ಲ .
reservation! reservation !reservation !!!!ಪ್ರಾಥಮಿಕ ಶಾಲೆ ಫ್ರೀ ಶಿಕ್ಷಣ
ಮಾಧ್ಯಮಿಕ ಶಾಲೆ ಉಚಿತ ಶಿಕ್ಷಣ
ಪ್ರೌಢ ಶಾಲೆ ಅದೂ ಉಚಿತ
P U C ಉಚಿತ
ಇದೇನು retail ಶಾಪ್ ಕೊಡುಗೆ ಎಂದು ಭಾವಿಸಬೇಡಿ . ಇದು ದಲಿತರೋದ್ಧಾರ ಕೊಡುಗೆ . ಇರಲಿ ಒಪ್ಪಿಕೊಳ್ಳೋಣ ..ನಂತರ ಕಾಲೇಜು .. ಪದವಿ .. PhD .. & so on
ಎಸ್ಟೆಲ್ಲ ಕಡೆ reservation ಕೊಟ್ಟೂ ನಂತರ ಉದ್ಯೋಗ ? ಅಲ್ಲೂ ರೆಸೆರ್ವಶನ್ !!!
ನೀವೇ ಹೇಳಿ … ರೆಸೆರ್ವಶನ್ ಕೊಡುವ ಉದ್ದೇಶ ಏನು?.. ಒಬ್ಬ ಹಿಂದುಳಿದ ಮನುಷ್ಯನನ್ನು ಸಮಾಜದಲ್ಲಿ ಎಲ್ಲರಂತೆಯೇ ಜೀವಿಸಲು ಅವಕಾಶ ಕೊಡುವುದು ತಾನೇ? ೧೫ ವರುಷಗಳಲ್ಲಿ ಒಬ್ಬ ಸರಿ ದಾರಿಗೆ ಬರಲಾಗುವುದಿಲ್ಲವೇ? ಪುಣ್ಯ ಸಾಯುವಾಗ ಒಂದು reservation ಇಲ್ಲ!!
ಹಾಗಾಗಿ ನನ್ನ ಅನಿಸಿಕೆ ಏನೆಂದರೆ ೬೦ ವರ್ಷಗಳಿಂದ ತಿಂದು ಕೊಬ್ಬಿದಂತಹ so caled ಮುಂದುವರಿದ ದಲಿತರಿಗೆ reservation ಕೊಡುವ ಬದಲು ಸಮಾಜದಲಿರುವ ಎಲ್ಲ ಬಡವರಿಗೆ ಶಿಕ್ಷಣ ಕೊಡುವುದು ಲೇಸು..
ಮಠಗಳು ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತಿದ್ದವೆಯೇ ಹೊರತು,ಕೂಡಿಟ್ಟು switzerland ನಲ್ಲಿ ಇಡುತ್ತಿಲ್ಲವಲ್ಲ. ಸಮಾಜ ಬದಲಾಗುತ್ತಿದೆ . ನೀರಿನ ಜೊತೆಯಲ್ಲಿ ಹರಿಯುವುದು ವಸ್ತುವಿನ ಗುಣಧರ್ಮ..
February 17th, 2009 at 311428
Dear Pratap, you must be receiving possitive comments always. Am I correct? you must be strong enough to accept the negative comments too and give the right answers to those who send the negative comments.
February 18th, 2009 at 582328
ಲೇಖನವೇನೋ ಚೆನ್ನಾಗಿದೆ, ಸಮಾಜದ ಕಣ್ಣು ತೆರೆಸುವಂತಿದೆ, ಹಿಂದುಳಿದವರಿಗೆ ಅಶೋತ್ತರವಾಗಿದೆ ಎಂದೆಲ್ಲ ಅನ್ನಬಹುದು.
ಆದರೆ ಇನ್ನೊಂದು ಕೋನದಲ್ಲಿ ನೋಡಿದಾಗ ಇದು ಎಷ್ಟರ ಮಟ್ಟಿಗೆ ನಿಜ?
ಇಂದು ನಾವು ‘ಜಾತಿಯ’ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತೇವೆ, ಲೇಖನ ಬರೆಯುತ್ತೇವೆ, ಮೇಲ್ವರ್ಗದವರನ್ನು ಬಾಯಿಗೆ ಬಂದ ಹಾಗೆ ಬೈಯ್ಯುತ್ತೇವೆ. ಆದರೆ ‘ಜಾತಿ’ ಎಂಬ ಹಣೆಪಟ್ಟಿ ಬೇಕಾಗಿರುವುದು ನಿಜವಾಗಿಯೂ ಯಾರಿಗೆ?
ಇವತ್ತಿನ ಪತ್ರಿಕೆ ನೋಡಿ, ಮೈಸೂರಿನಲ್ಲಿ ‘ಜಾತಿ ಪ್ರಮಾಣ ಪತ್ರಕ್ಕೆ’ ಒತ್ತಾಯ… ಈ ಗಲಾಟೆಯನ್ನ ಮೇಲ್ವರ್ಗದವರು ಮಾಡಿದ್ರ? ಅಥವಾ ‘ಒಳ ಮೀಸಲಾತಿ’ ಎಂದು ಬೊಬ್ಬಿರಿಯುವವರು ಮೇಲ್ಜಾತಿಯವರ?
ನಮ್ಮ ದೇಶ ಮುಂದುವರೆಯುತ್ತಿದೆಯ ಇಲ್ಲಾ ಮತ್ತಷ್ಟು ಹಿಂದೆ ಹೋಗುತ್ತಿದೆಯ?
‘ದಲಿತ’ ಎಂದು ಹಣೆಪಟ್ಟಿ ಕಟ್ಟಿ, ರಿಸರ್ವೇಶನ್ ಇನ್ನೂ ಹೆಚ್ಚಿಸಿದರೆ ಈಗಾಗಲೆ ಸೋಮಾರಿಗಳಾಗಿರುವ ಇವರು ಇನ್ನಷ್ಟು ಸೋ೦ಭೇರಿಗಳಾಗುವುದು ನಿಶ್ಚಿತ. ಮತಾಂತರ ತಡೆಗಟ್ಟಲೆಂದೇ ಇವರನ್ನು ಈ ರೀತಿ ‘ವಿಶೇಷವಾಗಿ’ ನೋಡಬೇಕೇ?. ಅಥವಾ ಮತಾಂತರ ತಡೆಗಟ್ಟಲು ಬೇರೆ ಕಾನೂನು ತರಬೇಕ?
ಹೋಗಲಿ ಕೊನೆ ಪಕ್ಷ, ಇವರು ಈಗ ೬೦ ವರ್ಷದಿಂದ ಎಷ್ಟು ಉದ್ದಾರ ಆಗಿದ್ದಾರೆ ಎಂದು ಅಂಕಿ-ಅಂಶದೊಂದಿಗೆ ತಿಳಿಸಲಿ. ರಾಜ ಕಾರಣಿಗಳಿ೦ದಾಗಿ ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ನಿಮಗೇ ಗೊತ್ತಾಗುತ್ತದೆ. ಹುಲುಸಾದ ಸರಕಾರಿ ಸೌಲಭ್ಯದಲ್ಲಿ ಓದಿದ ‘ದಲಿತ’ ವಿದ್ಯಾರ್ಥಿ ಮತ್ತೆ ರಿಸರ್ವೆಶನ್ನಲ್ಲಿ ಕೆಲಸ ಗಿಟ್ಟಿಸುತ್ತಾನೆ. ನಂತರ ಲಂಚ ತೆಗೆದುಕೊಂಡರೂ ಅವನನ್ನು ಅಷ್ಟು ಸುಲಭವಾಗಿ ಶಿಕ್ಷಿಸಲಾಗುವುದಿಲ್ಲ. ಇನ್ನು ಅವನ ಕೆಳಗಿನ ಅಧಿಕಾರಿಗಳೂ ಪ್ರತಿಭಟಿಸಲಾಗದು. ಮೇಲಾಧಿಕಾರಿಯಂತೂ ಸುಮ್ಮನಿದ್ದರೆ ಬಚಾವ್. ಅಷ್ಟೇಕೆ, ಒಬ್ಬ ಕಸಗುಡಿಸುವವನು ಒಂದು ಕಂಪ್ಲೇಂಟ್ ಕೊಟ್ಟರೂ ಯಾವುದೇ ‘ಮೇಲ್ವರ್ಗದವರನ್ನು’ ಪೋಲಿಸರು ಕೈಕೋಳ ಹಾಕಬಹುದು. ಇವತ್ತು ವರದಕ್ಷಿಣೆ ಕಾನುನಿನಷ್ಟೇ ‘ ಭಯಂಕರ’ ವಾಗಿದೆ ಇದರ ಆರ್ಭಟ.
ಅರವತ್ತು ವರ್ಷದಿಂದ ಮಿಸಲಾತಿ ಸೌಲಭ್ಯ ತೆಗೆದುಕೊಂಡ ಎಷ್ಟು ಜನ ದಲಿತ ವಿಜ್ನ್ಯಾನಿ ಇದ್ದಾರೆ ತಿಳಿಸಿ? ಎಷ್ಟು ದಲಿತರು ಅತ್ಯುತ್ತಮ ಡಾಕ್ಟರು, ಇಂಜಿನಿಯರು, ಕುಶಲ ಪೈಲಟ್ ಗಳು ಇದ್ದಾರೆ ತಿಳಿಸಿ. ಅದೇ ಡೊನೇಶನ್ ಕೊಟ್ಟಾದರೂ ಸ್ವಂತ ಬುದ್ದಿಯಿಂದ ಕಷ್ಟಪಟ್ಟು ಓದಿ, ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ ಸಾವಿರಾರು ಮಂದಿ ಮೇಲ್ವರ್ಗದವರು ಇಂದು ದೇಶದ ಆಸ್ತಿಯಾಗಿದ್ದಾರೆ.
ಇಂದು ಬಡವರು ಅನ್ನುವುದಕ್ಕೆ ಅರ್ಥವೇ ಇಲ್ಲ. ಕಪ್ಪಗಿರುವವರೆಲ್ಲ ಹಿಂದುಳಿದವರು. ಹಸಿರು ಕಾರ್ಡ್ ಹಿಡಿದವರೆಲ್ಲ ಬಡವರು.’ದಲಿತ’ ರಂತೂ ಕಡುಬಡವರು. ಮಲ್ಲಿಕಾರ್ಜುನ ಕರ್ಗೆ, ಮುನಿಯಪ್ಪನ ಮಕ್ಕಳೆಲ್ಲ ರೆಸರ್ವೇಶನ್ ಗೆ ಅರ್ಹರು.
‘ ಆರ್ಥಿಕವಾಗಿ ಬಡವರು ‘ ಎಂದು ಹುಡುಕಿದರೆ, ಎಲ್ಲ ಜಾತಿ, ಮತಗಳಲ್ಲೂ ಬಡವರಿದ್ದಾರೆ. ‘ಮೇಲ್ವರ್ಗ’ ಎಂದು ಹೆಸರಿಸುವ ಜಾತಿಗಳಲ್ಲೂ ೩೦-೪೦ ಭಾಗ ಒಂದು ಹೊತ್ತಿನ ಊಟಕ್ಕೂ ಕಷ್ಟವಿರುವರು ಇದ್ದಾರೆ.
ಬಸವರಾಜರ ಮಾತು ಕಟ್ಟಿಕೊಂಡು ‘ದಲಿತರಿಗೆ’ ಎಲ್ಲ ಪ್ರತ್ಯೇಕ ವ್ಯವಸ್ಥೆ ಮಾಡುತ್ತ ಬೇರೆಯವರನ್ನು ಕಡೆಗಣಿಸಿದರೆ, ಅವರೆಲ್ಲ ಎಲ್ಲಿ ಹೋಗಬೇಕು? ಅವರ ಜೀವನ ನಿರ್ವಹಣೆ ಎಂಥದು?
ಅಷ್ಟಕ್ಕೂ ಯಾವಾಗಲೂ ಹಿಂದು ಮಠಗಳನ್ನು ದೂಷಿಸುವ ಪತ್ರಿಕೆಗಳು ಕ್ರೈಸ್ತರ, ಮುಸಲ್ಮಾನರ ಆಸ್ತಿ, ಅಧಿಕಾರಗಳ ಬಗ್ಗೆ ಯಾಕೆ ಸೊಲ್ಲೆತ್ತುವುದಿಲ್ಲ? ಭಾರತದಲ್ಲಿ ಕ್ರಿಶ್ಚಿಯನ್ನರ ಆಸ್ತಿ ಎಷ್ಟಿದೆಯೆಂದರೆ, ಮಠ-ಮಂದಿರ ಬಿಟ್ಟಾಕಿ, ರಕ್ಷಣಾ ಪಡೆಗಳ ನಂತರ ಇರುವ ಅತ್ಯಂತ ಹೆಚ್ಚು ಆಸ್ತಿ, ಭೂಮಿ ಇವರ ಒಡೆತನದಲ್ಲಿದೆ. ಮುಸಲ್ಮಾನರದ್ದು ಕಡಿಮೆ ಏನಿಲ್ಲ. ಹಾಗಿದ್ದೂ ಇವರು ‘ಅಲ್ಪಸಂಖ್ಯಾತರು’ ಹೆಸರಿನಲ್ಲಿ ಎಲ್ಲಾ ಸೌಲಭ್ಯಗಳನ್ನೂ ಪಡೆಯುತ್ತಾರೆ. ಮತ್ತೆ ತಿರುಗಾ, ಮತಾ೦ತರವಾದ ‘ದಲಿತರಿಗೆ’ ರೆಸರ್ವೇಶನ್.
ಹೀಗಾದರೆ ಬೇರೆ ವರ್ಗದವರು ಏನು ಮಾಡಬೇಕು?
ಹಾಗೇ, ಎಲ್ಲಾ ಮಠಗಳೂ ನೀತಿಯನ್ನು ಕಳೆದುಕೊಂಡಿಲ್ಲ ಎಂದು ನಮಗೆ ಮನವರಿಕೆಯಾಗಬೇಕಿದೆ.
ತುಮಕೂರಿನ ಸಿದ್ದಗಂಗಾ ಮಠ, ಶಿವಮೊಗ್ಗದ ರಾಮಚಂದ್ರಾಪುರ ಮಠ, ಸಿರಿಗೆರೆಯ ಮಠ….ಇವು ಉತ್ತಮ ನಿರ್ವಹಣೆಗೆ ಉದಾಹರಣೆಗಳು. ಇವು ಜೀವನ ನಿರ್ವಹಣೆಗೆ ಬೇಕಾದ ಕನಿಷ್ಠ ವಿದ್ಯೆಯನ್ನು ಪ್ರಾಥಮಿಕದಲ್ಲಿ ಹೇಳಿಕೊಡುತ್ತವೆ. ಬೇರೆ ಮಠಗಳು ಸೀಟುಕೊಡುವಾಗ ಮಠಗಳು ಕ್ಯಾಪಿಟೇಶನ್/ಡೊನೇಶನ್ ತೆಗೆದು ಕೊಳ್ಳಬಹುದು. ಆದರೆ ಅವು ಯಾವ ವಿದ್ಯಾಸಂಸ್ಥೆಯು ಮಾಡದ ಕೆಟ್ಟ ಕೆಲಸ ಮಾಡುತ್ತಿವೆಯ? ೮೦-೮೫% ತೆಗೆದುಕೊಂಡೂ ಸರಕಾರಿ ಸೀಟು ಪಡೆಯಲಾರದ ‘ಮೇಲ್ವರ್ಗದ’ ವಿದ್ಯಾರ್ಥಿ ಇನ್ನೇನು ಮಾಡಿಯಾನು? ಎಲ್ಲಾದರೂ ಸಾಲ-ಸೋಲ ಮಾಡಿ ಡೊನೇಶನ್ ಕೊಟ್ಟು ವಿದ್ಯಾರ್ಜನೆ ಮಾಡುತ್ತಾನೆ. ಅಂಥಾ ಪ್ರತಿಭಾವಂತರಿಗೆ ಕೊನೇಪಕ್ಷ ಒಂದು ದಾರಿ ಇದೆ.
ಸರಕಾರಿ ಹಣ ತೆಗೆದುಕೊಂಡ ಮುಸ್ಲಿಮರ ಮದರಸಾಗಳು ಇಂದು ಮಕ್ಕಳಿಗೆ ಏನು ಹೇಳಿಕೊಡುತ್ತಿವೆ? ಇದರ ಬಗ್ಗೆ ಪತ್ರಿಕೆಗಳು ಯಾಕೆ ಜಾಣ ಮೌನ? ‘ವಿಚಾರ ವಾದಿಗಳು’ ಎಲ್ಲಿ?
ಅಷ್ಟು ಆಸ್ತಿಯಿರುವ ಕ್ರಿಶ್ಚಿಯನ್ ಸಂಸ್ಥೆಗಳು ಅಪ್ಲಿಕೇಶನ್ ಹಾಕಿದಗೆಲ್ಲ ಹೆಕ್ಟೇರ್ ಗಟ್ಟಲೆ ಜಾಗ ಮಂಜೂರು ಮಾಡುವ ಸರಕಾರಗಳು, ಹಿಂದೂ ಸಂಸ್ಥೆಗಳು ಸಣ್ಣ ಜಾಗ ಕೇಳಿದಾಗ ಮೀನ-ಮೇಷ ಎಣಿಸುವುದು ಏಕೆ?
ಸರಕಾರಿ ಹಣದಿಂದಲೇ, ಸರಕಾರಿ (ದಲಿತ) ಅಧಿಕಾರಿಗಳಿಂದಲೇ ನೆಡೆಯುವ ದಲಿತರ ಹಾಸ್ಟೆಲ್ ಗೆ ಒಮ್ಮೆ ಭೇಟಿ ಕೊಟ್ಟು ನೋಡಿ, ಅಲ್ಲಿಯ ಅವಸ್ಥೆಯನ್ನು. ಇದು ‘ಪ್ರತ್ಯೇಕ’ ವ್ಯವಸ್ಥೆಯ ಒಂದು ಉದಾಹರಣೆ. ಹೀಗಾದರೆ ಅವರು ಸಮಾಜದಿಂದ ಮತ್ತಷ್ಟು ದೂರ ಸರಿಯುವ ಅಪಾಯವಿದೆ.
ದಲಿತರು ಹಲವು ಕೆಲಸಗಳಲ್ಲಿ ಕುಶಲರಿದ್ದಾರೆ. ಅವರು ಬುಟ್ಟಿ ಹೆಣೆಯುವುದರಿಂದ ಹಿಡಿದು ಹಲವು ಕರ ಕುಶಲ ಕಲೆಗಳಲ್ಲಿ ಚಾಣಾಕ್ಷರಿದ್ದಾರೆ.ಅವರಿಗೆ ಇದೇ ವಿಷಯದಲ್ಲಿ ಇನ್ನು ಹೆಚ್ಚಿನ ತರಬೇತಿ ಕೊಟ್ಟು, ಸೌಲಭ್ಯ ಕೊಟ್ಟು, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದರೆ ಹಳ್ಳಿಗಳಲ್ಲಿರುವ ದಲಿತರ ಉದ್ದಾರ ತಾನಾಗೆ ಆಗುತ್ತದೆ, ಅವರು ನಮ್ಮ ದೇಶದ ಅಮೂಲ್ಯ ಆಸ್ತಿ ಆಗ ಬಲ್ಲರು. ಇದಕ್ಕೆ ಪ್ರಾಥಮಿಕದಿಂದ ಪ್ರೌಢಶಾಲೆಯ ವರೆಗಿನ ಶಿಕ್ಷಣ ಸಾಕು. ಇದನ್ನು ಬಿಟ್ಟು ಓದಲು ಮನಸ್ಸಿರದ ಅವರನ್ನು ಕರೆದುಕೊಂಡು ಬಂದು, ಒತ್ತಾಯ ಮಾಡಿ ಡಾಕ್ಟರನ್ನು, ಪೈಲೆಟ್ಟನ್ನು ಮಾಡಲು ಹೊರಟರೆ ಆಗುವ ನಷ್ಟ ಯಾರಿಗೆ?
ಇನ್ನು, ನಗರದಲ್ಲಿರುವ ದಲಿತ ಮಕ್ಕಳಿಗೆ, ಬೇರೆ ಮಕ್ಕಳಿಗೆ ಏನು ವ್ಯತ್ಯಾಸ?
ಇಷ್ಟಾಗಿಯೂ ಪ್ರತಾಪ ಸಿಂಹರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಸಾಮಾಜಿಕ ಕಳಕಳಿ ಮೆಚ್ಚುವಂಥಾದ್ದು.
ಆದರೆ ಇನ್ನು ಮುಂದೆ ‘ಪಾರ್ಶಿಯಲ್’ ಆಗದಿರಲಿ, ಬೇರೆ ವರ್ಗದವರೂ ಇದೇ ನಾಡಿನ ಮಕ್ಕಳು…
February 18th, 2009 at 081028
Kindly refer to his study, you can know how christians treat Dalits after conversion.
http://indianhope.free.fr/site_eng/article_5.php3
let the news papers know that, ‘not only in Hinduism but also Dalits in all religions descriminate Dalits’
So, journalists, pls use your pen for the right purpose, not only on soft Hindus, as its always.
By the by where is that “AMBADAS”?
You can understand his purpose is only to abuse Hindus… otherwise, he woluld have thanked Pratap for this article.
February 19th, 2009 at 410428
very nice article
February 19th, 2009 at 485128
ನನ್ನದು ಒಂದೇ ಪ್ರಶ್ನೆ ಏನಂದರೆ ” ಇದೆ ರೀತಿ ದಲಿತರ ಬಗ್ಗೆ ಮಾತಾಡಿದ್ರೆ ಜನ ಸುಮ್ನೆ ಬಿಡ್ತಾ ಇದರ ಸ್ವಾಮಿ”
ಅದರಲ್ಲೂ ಈ ಬುದ್ದೀ ಜೀವಿಗಳು ಸುಮ್ನೆ ಕುರ್ತಿದ್ರ? ನಾಡಿಗೆ ನಡೆ ಅರುಚುವ ಹಾಗೆ ಮಾತಾಡ್ತಾ ಇದ್ರೂ ”
ದಲಿತ ಸಂಘರ್ಷ ಸಮಿತಿ ಗಳಂತಹ ಸಂಸ್ಥೆಗಳು ಕೂಗಾಡಿದ್ದೆ ಕೂಗಾಡಿದ್ದು .
ಇಂತಹವರಿಂದಲೇ ಅಲ್ವೇ ಭಾರತ ಮಾತೆಗೆ ಚಪ್ಪಲಿ ಹಾರ ಹಾಕಿದ್ದು, ಸ್ವಲ್ಪ ಯೋಚನೆ ಮಾಡಬೇಕು
ನೀವು ಬರೆದಿದ್ದು ತಪ್ಪು ಅಂತ ಹೇಳಿಲ್ಲ,ನಮ್ಮಲ್ಲಿ ಒಂದೇ ದೋಷ ಏನಂದರೆ ಜಾತೀಯತೆ , ನಮ್ಮ ಉಡುಪಿ ಮಠದ ಸ್ವಾಮಿಗಳು ಪಂಕ್ತಿ ಭೋಜನಕ್ಕೆ ಮಾತ್ರ ಬರುವುದಿಲ್ಲ ಎಲ್ಲವನ್ನು ಚಾಲೆಂಜ್ ಅಂತ ತೆಗೆದು ಕೊಂಡರೆ ಚಾಲೆಂಜ್ ಮಾಡಬೇಕು ಅವರು ಅದಕ್ಕೆ ಹೆದರುತ್ತಾರೆ ಅದರಿಂದ ನಮ್ಮ ದೋಷವನ್ನು ಗುರುತು ಹಿಡಿದು ಅದನ್ನೇ ದೊದ್ದುದು ಮಾಡ್ತಾ ಇದ್ದಾರೆ ಇ ನಮ್ಮ ಲದ್ದಿ ಜೀವಿಗಳು
February 19th, 2009 at 191328
Realy Nice Comment, and truth Opinion ಪ್ರತಾಪಸಿಂಹರ ಅಭಿಮಾನಿ.[ What is your good name ]
February 19th, 2009 at 534628
Every one talks about the problem itself,Nobody strives to improve this version era.Pratap points out,where the problem is under our system and i feel it would be better enough ,if he brief more on how we can tackle these uneven events,atleast from now onwards we people think about doing some thing in new change in these areas.At the most if we can’t change it,we can do implement some ways which stops these kind of activities ,if we encounter in our way. I am not talking against this article but what i am expecting is,we together can minimise this kind of mishandling of the laws in future.
February 19th, 2009 at 242628
HI PRATAP,
TO WHOME YOU ARE TRYING TO IMPRESS HERE. WHY CANT YOU THINK LET THIS BLOODY SOCIETY SEPERATE AS RICH AND POOR . LET THE POOR GET ALL THE FACILYTIES LIKE EDUCATION,JOB AND OTHER STUFFS WITH FREE OF COST. WHY THE RICH BACKWORD CLASS PEOPLE GET ALL THESE FACILITIES??????
DO YOU MEAN TO SAY KHARGE SO CALLED CONGRESS ELDEST LEADER AND A ORDINARY TEMPLE POOJAARI ARE SAME??? NEVER RIGHT…….
BEING AN AGGRESSIVE WRITER DONT TRY TO IMPRESS SO CALLED DHALITS OK .
HUMAN RIGHTS PEOPLE ARE THERE TO SPEAK AGAINST YOU . THEY WILL BE THERE FOR EVER AND APART FROM SPEAKING THEY CANT DO ANY CONSTRUCTIVE JOB. YOU JUST GO TO YOUR PRVIOUS WRITINGS YOU ARE GRADUALLY LOOSING YOUR AGGRESSIVENESS . IF IT CONTINOUS ONE DAY YOU WILL BECOME ONE MORE RAVI BELEGERE ASHTE.
BE CHOOSY IN TAKING TOPICS DEAR . IN THE FORCE OF IMPRESSING DHALITS YOU HAVE FORGOTTEN WHAT YOU WROTE IN YOUR PREVIOUSE ARTICLES.
I AM JUST EXPECTING ALSO REQUESTING BE AGGRESSIVE AND AGGRESSIVE
NEVER TRY TO IMPRESS A PART OF SOCIETY. TRY TO IMPRESS WHOLE SOCIETY.
February 20th, 2009 at 133428
ಪ್ರತಾಪಸಿಂಹರ ಅಭಿಮಾನಿ and ಪ್ರತಾಪಸಿಂಹ have brought out very contrasting yet truthful fact. I really see a very horrifying future to my country. I feel another freedom moment is required to free ourselves from our own politicians and build a nation with morality
February 20th, 2009 at 490028
@ಪ್ರತಾಪಸಿಂಹರ ಅಭಿಮಾನಿ
Thanks for matured comment. Your comment is eye opener for the present system.
February 21st, 2009 at 005328
ನಮ್ಮ ೭೫ ನೆ ಕನ್ನಡ ಸಾಹಿತ್ಯ ಸಂಮೇಳನಾದ್ಯಕ್ಷರಿಗೆ ಈ ವಿಚಾರ ಹೇಳಲು ಇಷ್ಟು ವರ್ಷ ಕಾಯುವ ಅಗತ್ಯವಿತ್ತ ? ಈ ವಿಷಯವನ್ನ ಬೇರೆ ವೇದಿಕೆಗಳಲ್ಲಿ ಮಂಡಿಸಬಹುದಿತ್ತಲ್ಲ.ಇಂತಹ ಸಾಹಿತಿಗಳಿಂದ ನಮ್ಮ ಕನ್ನಡ ಸಾಹಿತ್ಯ ಉದ್ದಾರವದಂತೆಯೇ! ಕನ್ನಡ ಸಾಹಿತಿಗಳೇ,ನಿಮ್ಮ ಕೈಲಾದರೆ ಕನ್ನಡ ಸರಸ್ವತಿಯ ಸೇವೆ ಮಾಡಿರಿ ಇಲ್ಲವಾದರೆ ರಾಜಕೀಯ ಸೇರಿ ದೇಶ ಉದ್ದಾರ ಮಾಡಿ.ಬರಿ ಬಾಷಣದಿಂದ ದೇಶ ಉದ್ದಾರವಾಗೊಲ್ಲ.
February 21st, 2009 at 120228
ಕರ್ನಾಟಕದ ಮಠಗಳ,ಸಮಾಜ ಸೇವೆ ಅಪಾರ. ತಲೆ ಹರಟೆ,ಕಾಮಾಲೆ ಕಣ್ಣಿನ ಸಾಹಿತಿಗಳಿಗೆ ಒಳ್ಳೆಯದು ಕಾಣಿಸೋಲ್ಲ.ಸಾಹಿತಿಗಳು ಎಷ್ಟು ಜನಕ್ಕೆ ಅನ್ನದಾನ, ವಿದ್ಯಾದಾನ ಮಾಡಿದ್ದಾರೆ ? ನಮ್ಮ ದೇಶಕ್ಕೆ,ನಮ್ಮ ಸಮಾಜಕ್ಕೆ ಸಾಹಿತಿಗಳ ಕೊಡುಗೆ ಏನು ? ನನ್ನ ಅಭಿಪ್ರಾಯದಲ್ಲಿ ನಮ್ಮ ಸಾಹಿತಿಗಳು ಜನಗಳ ದಾರಿತಪ್ಪಿಸುತ್ತಿದ್ದಾರೆ ಅಷ್ಟೆ.
February 21st, 2009 at 321228
ನಮ್ಮ ದೇಶದಲ್ಲಿ ಇನ್ನು ನಮ್ಮ ಧರ್ಮವೇನಾದರು ಉಳಿದಿದ್ದರೆ ನಮ್ಮ ಮಠ ಗಳೇ ಕಾರಣ.ಒಂದು ಪಕ್ಷ ಮಠ ಗಳೆನಾದರು ಇಲ್ಲದಿದ್ದಲ್ಲಿ, ಹೊರಗಿನವರ,ಅನ್ಯ ಧರ್ಮಧವರ ಕುತಂತ್ರ ಗಳಿಗೆ ನಾವು,ನೀವೆಲ್ಲ ಇಂದು ಬಲಿಪಶುಗಲಾಗಿರುತ್ತಿದ್ದೆವು.ಬಾಬ ರಾಮ್ದೇವ್ ರವರ ಬಗ್ಗೆ ನಮ್ಮ ಸಾಹಿತಿಗಳು,ಮಾದ್ಯಮದವರು ಏಕೆ ಕುರುಡರಾಗಿದ್ದಾರೆ,ಅವರ ಸಮಾಜ ಸೇವೆಗಳ ಬಗ್ಗೆ ಏಕೆ ನಮ್ಮ ಸಾಹಿತಿಗಳು ಮಾತನಾಡೋಲ್ಲ? ನಮಗೆ ನಮ್ಮ ದೇಶ, ಧರ್ಮ, ಬಾಷೆ ಇವುಗಳು ಮುಖ್ಯ,ಇವುಗಳ ಮುಂದೆ ಇತರವು ನಗಣ್ಯ
“ಜೈ ಹಿಂದ್” ” ಜೈ ಕರ್ನಾಟಕ” ” ಜೈ ಕನ್ನಡ”
February 25th, 2009 at 132128
Hi Pratap.
This is not an your regular article.
Specal Tahnks to #10 ಪ್ರತಾಪಸಿಂಹರ ಅಭಿಮಾನಿ and #13 ಪರಮೇಶ್ವರ
February 27th, 2009 at 210928
Hello every one
I wish to thank Pratap as well as commenter #10, for wonderful view about our country.
Lets join hands together to make these views implemented in a proper way.
Discus on how to start with …
Discuss on how to implement this ….
This will give a good start for the Young India .
Lets understand our roles and responsibilities as a citizen !!!!!!!