೧೯೫೭ರಿಂದ ೬೩ರವರೆಗೂ ಬಾಬು ಜಗಜೀವನ್ ರಾಮ್, ೧೯೬೯ರಿಂದ ೭೦ರವರೆಗೂ ಡಾ. ರಾಮ್ ಸುಭಾಗ್ ಸಿಂಗ್, ೧೯೭೩ರಿಂದ ೭೫ರವರೆಗೂ ಲಲಿತ್ ನಾರಾಯಣ ಮಿಶ್ರ, ೧೯೮೦ರಿಂದ ೮೧ರವರೆಗೂ ಕೇದಾರ್ ಪಾಂಡೆ, ೧೯೯೦ರಿಂದ ೧೯೯೧ರವರೆಗೂ ಜಾರ್ಜ್ ಫರ್ನಾಂಡಿಸ್, ೧೯೯೬ರಿಂದ ೧೯೯೮ರವರೆಗೂ ರಾಮ್ ವಿಲಾಸ್ ಪಾಸ್ವಾನ್, ೨೦೦೨ರಿಂದ ೦೪ರವರೆಗೂ ನಿತೀಶ್ ಕುಮಾರ್, ೨೦೦೪ರಿಂದ ಇಂದಿನವರೆಗೂ ಲಾಲು ಪ್ರಸಾದ್ ಯಾದವ್.
ಹೀಗೆ ಸ್ವಾತಂತ್ರ್ಯ ಬಂದಂದಿನಿಂದ ಇಲ್ಲಿಯವರೆಗೂ ಬಿಹಾರದ ಎಂಟು ಸಂಸದರು ಕೇಂದ್ರ ರೈಲ್ವೆ ಸಚಿವರಾಗಿ ದ್ದಾರೆ. ಯುನೈಟೆಡ್ ಫ್ರಂಟ್, ಎನ್‌ಡಿಎ, ಯುಪಿಎ ಹೀಗೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿ ರೈಲ್ವೆ ಇಲಾಖೆ ಮಾತ್ರ ಬಿಹಾರಿಗಳ ಪಾಲಾಗುತ್ತದೆ. ಅದೇ ಇಲಾಖೆ ಬೇಕೆಂದು ಪಟ್ಟು ಹಿಡಿದು ಪಡೆದುಕೊಳ್ಳುತ್ತಾರೆ. ಹಾಗಾಗಿ ಇಂದು ಹುಬ್ಬಳ್ಳಿ, ಹುಮನಾಬಾದ್, ಹಿಂದು ಪುರ, ತಿರುವನಂತಪುರದಂತಹ ದಕ್ಷಿಣದ ಮೂಲೆ ಗಳಿಗೂ ಹೋದರೂ ರೈಲ್ವೆ ಸ್ಟೇಷನ್‌ಗಳಲ್ಲಿ ಟಿಕೆಟ್ ನೀಡುವವರಿಂದ ತಪಾಸಣೆ ಮಾಡುವವರವರೆಗೂ ಎಲ್ಲಡೆಯೂ ಬಿಹಾರಿಗಳನ್ನು ಕಾಣಬಹುದು. ವಿಶ್ವದ ಅತಿದೊಡ್ಡ ಉದ್ಯೋಗದಾತನಾದ ರೈಲ್ವೆ ಇಲಾಖೆಯನ್ನು ಮೊದಲಿನಿಂದಲೂ ಈ ಬಿಹಾರಿ ರಾಜಕಾರಣಿಗಳು ತಮ್ಮ ಸ್ವಂತ ಆಸ್ತಿಯಂತೆ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ಅದು ಬೆಂಗಳೂರು ಇರಬಹುದು, ಮುಂಬೈ ಆಗಿರಬಹುದು ಅಥವಾ ಯಾವುದೇ ಸ್ಥಳಗಳಲ್ಲಿ ಇರುವ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡುವ ಅಗತ್ಯ ಬಂದಾಗಲೂ, ಅದರ ಜಾಹೀರಾತು ಪ್ರಕಟವಾಗುವುದು ಪಟನಾ, ಗಯಾ ಮತ್ತು ಉತ್ತರ ಪ್ರದೇಶಗಳಲ್ಲಿ ಮಾತ್ರ. ಹಾಗಾಗಿ ಅಲ್ಲಿನ ಅಭ್ಯರ್ಥಿಗಳು ನೇಮಕಾತಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಧೋರಣೆಯ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಎಲ್ಲರಲ್ಲೂ ಅಸಮಾಧಾನವಿದ್ದರೂ ಪ್ರತಿಭಟಿಸುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಆದರೆ ಪ್ರತಿಭಟಿಸುವ ಹಾಗೂ ಉಗ್ರ ಮಾರ್ಗದಿಂದಲೇ ತಕ್ಕ ಸಂದೇಶ ಮುಟ್ಟಿಸುವ ಧೈರ್ಯ ತೋರಿದ್ದು ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ. ಅಂದು ರೈಲ್ವೆ ಸಚಿವ ಲಾಲು ಯಾದವ್ ಕನ್ನಡಿಗರನ್ನು ‘ಹುಚ್ಚರು’ ಎಂದು ಕರೆದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಕೆಲಸವನ್ನೇ ಮೊನ್ನೆ ಮುಂಬೈನಲ್ಲಿ ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮಾಡಿದೆ. ಹಾಗಾಗಿ ಬೈಸಿಕೊಳ್ಳುವ ಸರದಿ ರಾಜ್ ಠಾಕ್ರೆಯದ್ದಾಗಿದೆ. ಅವರನ್ನು “ಮೆಂಟಲ್ ಕೇಸ್” ಎಂದಿದ್ದಾರೆ ಲಾಲು! ಆದರೆ ಕನ್ನಡಿಗರು ಹುಚ್ಚರು, ರಾಜ್ ಠಾಕ್ರೆ ಮೆಂಟಲ್ ಕೇಸ್ ಎಂದು ಅವಹೇಳನಕಾರಿಯಾಗಿ ಮಾತನಾಡಿದ ಲಾಲು ಯಾದವ್ ಅವರನ್ನು ಖಂಡಿಸುವ ಬದಲು ಎಲ್ಲರೂ ರಾಜ್ ಠಾಕ್ರೆಯನ್ನು ದೂಷಿಸುತ್ತಿದ್ದಾರೆ. ಈ ಮಧ್ಯೆ, ಮುಂಬೈನ ಬಸ್ ಏರಿ ನಿರ್ವಾಹಕನನ್ನು ಕಟ್ಟಿಹಾಕಿ ಪಿಸ್ತೂಲಿನಿಂದ ಜನರತ್ತ ಗುಂಡುಹಾರಿಸಿದ ಬಿಹಾರದ ಯುವಕ ರಾಹುಲ್ ರಾಜ್‌ನನ್ನು ಅನಿವಾರ್ಯವಾಗಿ ಪೊಲೀಸರು ಕೊಂದಿದ್ದನ್ನು ಬಿಹಾರಿ ರಾಜಕಾರಣಿಗಳು ದೊಡ್ಡ ವಿವಾದವನ್ನಾಗಿ ಪರಿವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದ ಸರ ಕಾರವನ್ನು ವಜಾ ಮಾಡಬೇಕೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಮೋದಿ, ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಕೇಂದ್ರ ಗಣಿಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೀಗೆ ಎಲ್ಲ ಬಿಹಾರಿ ನಾಯಕರೂ ಒಟ್ಟಾಗಿ ಒಕ್ಕೊರಲಿನಿಂದ ಕೇಂದ್ರ ಸರಕಾರದ ಒತ್ತಡ ಮೇಲೆ ಹೇರುತ್ತಿದ್ದಾರೆ.
ಏಕೆ?
ರಾಜ್ ಠಾಕ್ರೆ ಮಾಡಿದ್ದರಲ್ಲಿ ತಪ್ಪೇನಿದೆ? ನೇಮಕಾತಿಗಾಗಿ ಬಂದವರನ್ನು ಅಟ್ಟಿಸಿಕೊಂಡು ಹೋಗಿದ್ದು, ಹಿಡಿದು ಬಡಿದಿದ್ದು ತಪ್ಪಾಗಿ ಕಾಣುತ್ತಿರಬಹುದು. ಆದರೆ ಅದರ ಹಿಂದಿರುವ ನೋವು, ಹತಾಶೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಲ್ಲವೆ? ೧೯೫೬ರಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ವಿಗಂಡನೆ ಮಾಡಿದ್ದೇಕೆ? ಸ್ಥಳಿಯ ಆಶಯಗಳನ್ನು(Local Aspiration) ಈಡೇರಿಸುವುದಕ್ಕೇ ಅಲ್ಲವೆ? ಸ್ಥಳೀಯ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿ ಕೊಳ್ಳಲಿ ಎಂಬ ಕಾರಣಕ್ಕೇ ಅಲ್ಲವೆ? ಮುಂಬೈ ತುಂಬ ಅನ್ಯರಾಜ್ಯದವರೇ ತುಂಬಿಕೊಂಡರೆ, “ಛಾತ್ ಪೂಜಾ” ಹೆಸರಿನಲ್ಲಿ ಬಿಹಾರಿಗಳು ಹಾಗೂ ಉತ್ತರ ಪ್ರದೇಶದರು ಒಂದೆಡೆ ಸೇರಿ ರಾಜಕೀಯ ಮಾಡಲು ಹೊರಟರೆ ಸ್ಥಳೀಯರಾದ ಮರಾಠಿ ಜನರ ಕಣ್ಣುಕೆಂಪಾಗದೇ ಇದ್ದೀತೆ? “ಭಾರತ ಕೂಡ ಯುರೋಪ್‌ನಂತೆ. ಅಂದರೆ ಅಲ್ಲಿನ ಕರೆನ್ಸಿ ಒಂದೇ ಆಗಿದ್ದರೂ ಕಲ್ಚರ್ ಮತ್ತು ಭಾಷೆ ನೂರಾರಿವೆ! ನಮ್ಮದೂ ಕೂಡ ನೂರಾರು ಭಾಷೆ, ಸಂಸ್ಕೃತಿಗಳಿರುವ ಯುರೋಪ್!!” ಎನ್ನುವ ರಾಜ್ ಠಾಕ್ರೆಯವರ ವಾದದಲ್ಲೂ ಹುರುಳಿದೆ. ಅವರೇನು ದೇಶ ವಿಭಜನೆಯ ಮಾತನಾಡುತ್ತಿಲ್ಲ. ಆದರೆ ಬೆಂಗಾಲಿ ಜಯಾ ಬಚ್ಚನ್ ಮುಂಬೈ ಅನ್ನು ಕೇಂದ್ರಾಳಿತ ಪ್ರದೇಶ ಮಾಡಿ ಎಂದರೆ ಮರಾಠಿಗರು ಸುಮ್ಮನಿರುತ್ತಾರೆಯೇ? ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ಮಂಗನಾಟವಾಡಲು ಪ್ರಯತ್ನಿಸಿದರೆ ಪೊಲೀಸರು ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ? ಮುಂಬೈ ಅನ್ನು ಉದ್ಧಾರ ಮಾಡಿದವರಲ್ಲಿ ವಾಡಿಯಾ, ಟಾಟಾಗಳಂತಹ ಪಾರ್ಸಿಗಳು ಹಾಗೂ ಅಂಬಾನಿಗಳಂತಹ ಗುಜರಾತಿಗಳ ಕೊಡುಗೆ ಇರಬಹುದು. ಆದರೆ ಉದ್ಯಮ ವಲಯಕ್ಕೆ ಮಹಾರಾಷ್ಟ್ರ ಪ್ರಶಸ್ತ ವಾತಾವರಣವನ್ನು ನಿರ್ಮಿ ಸಿತ್ತು. ೧೯೬೦ರವರೆಗೂ ಗುಜರಾತ್ ಕೂಡ ಮಹಾರಾಷ್ಟ್ರದ ಒಂದು ಭಾಗವೇ ಆಗಿತ್ತು. ಭಾರತದ “ಫೈನಾನ್ಸಿಯಲ್ ಕ್ಯಾಪಿಟಲ್” ಎಂದು ಹೆಸರು ಪಡೆದಿರುವ ಮುಂಬೈನತ್ತ ಇಂದು ಎಲ್ಲರೂ ಮುಖ ಮಾಡುತ್ತಿರಬಹುದು. ಆದರೆ ಮುಂಬೈನಂತಹ ನಗರ ಈ ಪರಿ ಬೆಳೆಯಲು ಅಲ್ಲಿನ ಜನರ ಕೊಡುಗೆ, ಉದ್ಯಮಸ್ನೇಹೀ ವಾತಾವರಣ ಕಾರಣವಾಗಿವೆ. ಹಾಗಿರುವಾಗ ಸ್ಥಳೀಯರಿಗೆ ಸಿಗಬೇಕಾದ ಉದ್ಯೋಗಗಳನ್ನು ಅನ್ಯರಾಜ್ಯದವರು ಕಿತ್ತು ಕೊಳ್ಳಲು ಪ್ರಯತ್ನಿಸಿದರೆ, ಸ್ಥಳೀಯ ಭಾಷೆಗೆ ಬದಲಾಗಿ ಹಿಂದಿಯನ್ನು ಹೇರಲು ಹೊರಟರೆ ಸಮಸ್ಯೆಗಳೇಳದೇ ಇರುತ್ತವೆಯೇ?
ಆದರೆ ಬಿಹಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ, ಬಿಹಾರಿ ಯುವಕನನ್ನು ಕೊಂದುಹಾಕಿದರು ಎಂದು ರಾಜ್ ಠಾಕ್ರೆ ಮತ್ತು ಮಹಾರಾಷ್ಟ್ರವನ್ನು ದೂಷಿಸಲು, ಅಲ್ಲಿನ ಸರಕಾರವನ್ನು ವಜಾಮಾಡುವಂತೆ ಒತ್ತಾಯ ಮಾಡಲು ಒಂದಾಗಿರುವ ಬಿಹಾರದ ರಾಜಕಾರಣಿಗಳು ತಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಲು ಏಕೆ ಒಟ್ಟಾಗುವುದಿಲ್ಲ? ಹದಿನೈದು ವರ್ಷ ಬಿಹಾರವನ್ನು ಲೂಟಿ ಮಾಡಿದ ಲಾಲುಗೆ ಬಿಹಾರಿಗಳ ಬಗ್ಗೆ ಎಷ್ಟು ಕಾಳಜಿ ಇದೆಯೆಂಬುದು ಯಾರಿಗೂ ಗೊತ್ತಿರದ ಸಂಗತಿಯೇ? ಬಿಹಾರವನ್ನು ಡಕಾ ಯಿತರ ರಾಜ್ಯವನ್ನಾಗಿ ಪರಿವರ್ತಿಸಿದ್ದು ಇದೇ ಲಾಲು, ರಾಬ್ಡಿ, ಪಾಸ್ವಾನ್‌ಗಳೇ ಅಲ್ಲವೆ?
ಹಾಗಾಗಿಯೇ “ಕೋಲ್ಕತಾ ಬೆಂಗಾಲಿಗಳಿಗೆ, ಚೆನ್ನೈ ತಮಿಳಿಗರಿಗೆ ಎಂದಾದರೆ ಮುಂಬೈ ಮರಾಠಿಗಳಿಗೆ” ಎನ್ನುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕೂಗಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ ಠಾಕ್ರೆ ಹೇಳುತ್ತಿರುವುದೇನೋ ಸರಿ, ಆದರೆ ಹಿಡಿದಿರುವ ಮಾರ್ಗ ಸರಿಯಲ್ಲ ಎಂದು ಕೆಲವು ಬುದ್ಧಿಜೀವಿಗಳು ಬೊಟ್ಟು ಮಾಡುತ್ತಿದ್ದಾರೆ. ಆದರೆ ರಾಜ್ ಠಾಕ್ರೆಯವರೇನಾದರೂ ಶಿವಾಜಿ ಪ್ರತಿಮೆಯ ಕೆಳಗೆ ಕುಳಿತು ಸತ್ಯಾಗ್ರಹ ಮಾಡಿದ್ದರೆ ಆಳುವ ಪಕ್ಷದವರು ಸ್ಪಂದಿಸುತ್ತಿದ್ದರೆ? ಮಾಲ್ ಮಾಲೀಕರು ಅಂಗಡಿ, ಕಚೇರಿ, ಕಾರ್ಖಾನೆಗಳ ಮುಂಗಟ್ಟಿನ ಮೇಲೆ ಮರಾಠಿ ಬೋರ್ಡ್‌ಗಳನ್ನು ನೇತು ಹಾಕಿಕೊಳ್ಳುತ್ತಿದ್ದರೆ? ರಾಜ್ ಠಾಕ್ರೆ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂದು ಕೆಲವರು ದೂರುತ್ತಿದ್ದಾರೆ. ಅಂತಹ ಗಾಂಧಿ ಮಹಾತ್ಮನಿಗೂ ತನಗಿಂತ ದೊಡ್ಡ ನಾಯಕರು ಹೊರಹೊಮ್ಮಬಾರದು ಎಂಬ ಮತ್ಸರವಿದ್ದಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಿರುವಾಗ ರಾಜ್ ಠಾಕ್ರೆಯನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ.
ಅಂದಹಾಗೆ ಕನಡಿಗರಾದ ನಮಗೂ ಒಬ್ಬ ಠಾಕ್ರೆ ಬೇಕೆ?
ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಕನ್ನಡಿಗರಾದ ನಾವೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಖಂಡಿತ ಬಂದು ನಿಂತಿದೆ. ಬೆಂಗಳೂರು ಕೂಡ ಮತ್ತೊಂದು ಮುಂಬೈನಂತೆಯೇ ಆಗಿದೆ. ಆದರೆ ಒಂದೇ ವ್ಯತ್ಯಾಸ-ನಮ್ಮಲ್ಲೊಬ್ಬ ರಾಜ್ ಠಾಕ್ರೆ ತಲೆಯೆತ್ತಿಲ್ಲ ಅಷ್ಟೇ. ಮುಂಬೈನಲ್ಲಿ ಬಿಹಾರಿ ಹಾಗೂ ಉತ್ತರ ಪ್ರದೇಶವರು ಹೇಗೆ ಹೆಚ್ಚಿಕೊಂಡಿದ್ದಾರೋ ನಮ್ಮ ಬೆಂಗಳೂರಿನಲ್ಲಿ ತೆಲುಗು ಹಾಗೂ ತಮಿಳು ಭಾಷಿಕರ ದರ್ಬಾರು ಕೂಡ ಸಹನೆಯ ಕಟ್ಟೆಯೊಡೆಯುವಂತೆ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾದರು ಎಂಬುದು ಹಳೆಯ ಮಾತಾಯಿತು ಬಿಡಿ. ಆದರೆ ಹೊಸದಾಗಿ ಚುನಾಯಿತವಾಗಿ ರುವ ಈಗಿನ ವಿಧಾನಸಭೆಯಲ್ಲಿ ೧೩ ಜನ ತೆಲುಗುವಾಳ್ಳು ಶಾಸಕರಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದ ಶಾಸನಸಭೆಯಲ್ಲಿ ತೆಲುಗಿನಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಅದರಲ್ಲೂ ಈ ಬಳ್ಳಾರಿಯ ರೆಡ್ಡಿ ಸಹೋದರರು ಕರ್ನಾಟಕದ ರಾಜಕಾರಣವನ್ನು ಕುಲಗೆಡಿಸುವುದಕ್ಕೋಸ್ಕರವೇ ಜನ್ಮವೆತ್ತಿದವರಂತೆ ವರ್ತಿಸುತ್ತಿದ್ದಾರೆ. ನಾಡಿದ್ದು ನವೆಂಬರ್ ೩ರಿಂದ ನಡೆಯಲಿರುವ ಹಂಪಿ ಉತ್ಸವ ವನ್ನೇ ತೆಗೆದುಕೊಳ್ಳಿ. ಹಂಪಿ ಉತ್ಸವವನ್ನು ಆರಂಭಿಸಿದ ಹಾಗೂ ಸ್ಥಳೀಯರಾದ ಎಂ.ಪಿ. ಪ್ರಕಾಶ್ ಅವರಿಗೇ ಆಹ್ವಾನ ನೀಡಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರನ್ನೂ ಆಹ್ವಾನಿಸಿಲ್ಲ. ಈ ಜನಾರ್ದನ ಮತ್ತು ಕರುಣಾಕರ ರೆಡ್ಡಿಗಳು ಆ ಮಟ್ಟಿಗೆ ಕನ್ನಡ ನೆಲದಲ್ಲಿ ರೆಡ್ಡಿ(ದ್ವೇಷ) ರಾಜಕಾರಣ ಮಾಡುತ್ತಿದ್ದಾರೆ. ಈಗ್ಗೆ ಕೆಲವೇ ತಿಂಗಳ ಹಿಂದೆ ಬೆಂಗಳೂರಿನಲ್ಲೇ ನಡೆದ ರೆಡ್ಡಿ ಸಮಾವೇಶದಲ್ಲಿ “ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತಂದಿದ್ದೇ ನಾವು” ಎಂದು ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಹೇಳಿಕೊಂಡಿ ದ್ದರು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಭ್ಯತೆಗೆ ಹೆಸರಾಗಿದ್ದ ನಮ್ಮ ಕರ್ನಾಟಕ ರಾಜಕೀಯ ರೌಡಿಯಿಂಸಗೆ ತಿರುಗುತ್ತಿದೆ. ವೇದಿಕೆಗಳ ಮೇಲೆ ಆ ಮಗ, ಈ ಮಗ ಅಂತ ಬೈದುಕೊಳ್ಳುವ ಮಟ್ಟಕ್ಕಿಳಿಯುತ್ತಿದೆ. ಇದು ಕರ್ನಾಟಕವೋ ಆಂಧ್ರವೋ ಎಂದು ಅನುಮಾನಪಡುವಷ್ಟರಮಟ್ಟಿಗೆ ಹೊಲಸೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ತೆಲುಗುವಾಳ್ಳುಗಳೇ. ಇಂದಲ್ಲ ನಾಳೆ ಈ ಸತ್ಯ ಎಲ್ಲರ ಅನುಭವಕ್ಕೂ ಬರುತ್ತದೆ, ಕಾದು ನೋಡಿ. ಆಂಧ್ರದಲ್ಲಿ ದರ್ಬಾರು ನಡೆಸುತ್ತಿದ್ದ ರೆಡ್ಡಿ, ರಾಜು, ನಾಯ್ಡುಗಳು ನಕ್ಸಲೀಯರ ಕಾಟ ತಾಳಲಾರದೆ ಕರ್ನಾಟಕಕ್ಕೆ ಓಡಿಬಂದು ಬೆಂಗಳೂರನ್ನು ಕುಲಗೆಡಿಸುತ್ತಿದ್ದಾರೆ ಅಷ್ಟೇ. ನಮ್ಮ ನೆರೆಹೊರೆಯಲ್ಲೇ ಇರುವ ತೆಲುಗು ಭಾಷಿಕರ ಬಗ್ಗೆ ನಮ್ಮಲ್ಲಿ ಖಂಡಿತ ಒಳ್ಳೆಯ ಭಾವನೆಯೇ ಇದೆ. ಆದರೆ ಕೆಲವರು ಇಡೀ ಸಮುದಾಯವನ್ನೇ ಕಟಕಟೆಗೆ ತಂದುನಿಲ್ಲಿಸುವಂತೆ ವರ್ತಿಸುತ್ತಿದ್ದಾರೆ. ಈ ರೀತಿ ಅನ್ಯರ ದಬ್ಬಾಳಿಕೆಯಿಂದ ನಮ್ಮ ಸಾಫ್ಟ್‌ವೇರ್ ಕಂಪನಿಗಳೂ ಹೊರತಾಗಿಲ್ಲ. ಕಂಪನಿಗಳೆಲ್ಲ ಒಂದೋ ನಮ್ಮ ಕನ್ನಡಿಗರು ಸ್ಥಾಪಿಸಿದವು ಇಲ್ಲವೆ, ಕನ್ನಡಿಗರು ನಿರ್ಮಿಸಿರುವ ಉದ್ಯಮಸ್ನೇಹೀ ವಾತಾವರಣದಿಂದಾಗಿ ಇಲ್ಲಿಗೆ ಬಂದಿರುವ ವಿದೇಶಿ, ದೇಶಿ ಕಂಪನಿಗಳೇ ಆಗಿವೆ. ಆದರೆ ಟೀಮ್ ಲೀಡರ್, ಪ್ರಾಜೆಕ್ಟ್ ಮೇನೇಜರ್ ಹುದ್ದೆಗಳಲ್ಲಿರುವವರೆಲ್ಲ ತೆಲುಗು, ತಮಿಳು ಇಲ್ಲವೆ ಮಲೆಯಾಳಿಗಳು. ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಇವರು ತಮ್ಮ ರಾಜ್ಯದವರನ್ನೇ ತಂದುತುಂಬಿಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ಸಾಫ್ಟ್ ವೇರ್ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ, ಕಿರುಕುಳಕ್ಕೂ ಒಳಗಾಗುತ್ತಿದ್ದಾರೆ.
ಪರಭಾಷಿಕರ ಮೇಲೆ ನಮಗೇಕೆ ಕೋಪ ಬರುತ್ತಿದೆಯೆಂ ದರೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಕನ್ನಂಬಾಡಿ ಕಟ್ಟಿದ, ಎಚ್‌ಎಎಲ್ ಸೇರಿದಂತೆ ಹಲವಾರು ಕಚೇರಿ, ಕಾರ್ಖಾನೆಗಳನ್ನು ನಿರ್ಮಾಣ ಮಾಡಿದ ವಿಶ್ವೇಶ್ವರಯ್ಯ, ನಾರಾಯಣಮೂರ್ತಿ ಎಲ್ಲರೂ ಕನ್ನಡಿಗರೇ. ಯಾರೋ ಹೊರಗಿನವರು ಬಂದು ನಮ್ಮಲ್ಲಿ ಉದ್ಯೋಗ ಸೃಷ್ಟಿಸಿದ್ದಲ್ಲ. ಆದರೆ ಇಂದು ಬೆಂಗಳೂರಿ ನಲ್ಲಿ ಕಾಣಸಿಗುವುದು ತೆಲುಗುವಾಳ್ಳುಗಳ ರಿಯಲ್ ಎಸ್ಟೇಟ್ ಲಾಬಿ, ತಮಿಳು, ಮಲೆಯಾಳಿಗಳ ಸಣ್ಣಬುದ್ಧಿ. ಇಂತಹ ಸಂದರ್ಭದಲ್ಲಿ ನಮಗೂ ಒಬ್ಬ ರಾಜ್ ಠಾಕ್ರೆ ಬೇಕು ಎಂದನಿಸುವುದಿಲ್ಲವೆ? ನಾಳೆ ಬೆಳಗ್ಗೆ ಸಾಫ್ಟ್‌ವೇರ್ ಅಥವಾ ಇನ್ನಾವುದೇ ಕಂಪನಿಯಲ್ಲಿರುವ ಕನ್ನಡಿಗನೊಬ್ಬನಿಗೆ ತೊಂದರೆಯಾಯಿತೆಂದರೆ ಯಡಿಯೂರಪ್ಪನವರು ಸಹಾಯಕ್ಕೆ ಬರುವುದಿಲ್ಲ. ಅವರೇನಿದ್ದರೂ ಪೊಲೀಸರು, ಸರಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಖಾಸಗಿ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿರುತ್ತಾ ರಷ್ಟೇ! ಎಂತಹದ್ದೇ ಸಮಸ್ಯೆ ಎದುರಾದರೂ, ರಾಜ್ಯ ರಾಜ್ಯ ಗಳ ನಡುವೆ ಸಂಘರ್ಷಗಳೇರ್ಪಟ್ಟಾಗಲೂ ಈ ಬಿಜೆಪಿ, ಕಾಂಗ್ರೆಸ್‌ನವರು ಕೇಂದ್ರದಲ್ಲಿ ಯಾರ ಸರಕಾರವಿದೆ ಎಂಬು ದನ್ನು ನೋಡಿಕೊಂಡೇ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ನಮ್ಮ ಪರವಾಗಿ ಹೊರಾಡುವ ಒಬ್ಬ ನಾಯಕ, ಒಂದು ನೈಜ ಕನ್ನಡ ಪರ ಸಂಘಟನೆ, ಪ್ರಾದೇಶಿಕ ಪಕ್ಷದ ಅಗತ್ಯ ಖಂಡಿತ ಇದೆ.
ನೀವೇ ಯೋಚನೆ ಮಾಡಿ, “ನಿನ್ನ…ನ್… ಏ ಗಾಂಡೂ” ಮುಂತಾದ ಹೊಲಸು ಪದಗಳನ್ನು ಸಿನಿಮಾಗಳ ಮೂಲಕ ಕರ್ನಾಟಕದ ಮನೆಮನೆಗೂ ವಿತರಿಸಿದ, ‘ಕರ್ನಾಟಕದಲ್ಲಿ ಶೂಟಿಂಗ್ ಮಾಡಿದರೆ ಬರುವುದಿಲ್ಲ’ ಎಂದು ಬಹಿರಂಗ ಹೇಳಿಕೆ ನೀಡಿದ್ದ ಹಾಗೂ ‘ಇಂಡಿಪೆಂಡೆನ್ಸ್’ ಎಂಬ ಚಿತ್ರದ ಮುಹೂರ್ತವನ್ನು ತಮಿಳುನಾಡಿನಲ್ಲಿ ಮಾಡಿದ್ದ ಸಾಯಿ ಕುಮಾರ್ ಎಂಬ ತೆಲುಗು ಭಾಷಿಕನಿಗೆ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಕೊಡುವ “ಮಹಾನ್ ಮುಖ್ಯಮಂತ್ರಿ ಯಡಿಯೂರಪ್ಪ”ನವರ ಕಣ್ಣಿಗೆ, ಕಾಲು ಶತಮಾನದಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಿರುವ ನಮ್ಮ ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್ ಕಾಣುವುದೇ ಇಲ್ಲ!! ಇಂತಹ ಕೃತಘ್ನ ರಾಜಕಾರಣಿಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ನಮ್ಮ ಕನ್ನಡದ ಪರವಾಗಿ ಹೋರಾಡುವ ನಾಯಕರು ಬೇಕೆನಿಸುವುದಿಲ್ಲವೆ? ಈ ದಿಸೆಯಲ್ಲಿ ರೈತ ಸಂಘ, ವಾಟಾಳ್ ನಾಗರಾಜ್, ದಸಂಸ ಪ್ರಯತ್ನ ನಡೆಸಿ ದ್ದವು. ನಮ್ಮ ನೆಲ-ಜಲದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಹಾಗೂ ಅದೊಂದು ಸಮಗ್ರ ಹೋರಾಟವಾಗಿ ರೂಪುಗೊಳ್ಳುತ್ತಿರುವ ಹಂತದಲ್ಲೇ ನಮ್ಮವರೇ ಆದ ಹಾಗೂ “ಮುತ್ಸದ್ದಿ” ಎನಿಸಿಕೊಂಡಿದ್ದ ಗುಳ್ಳೇನರಿ ರಾಮಕೃಷ್ಣ ಹೆಗಡೆಯವರು ಹೇಗೆ ಹೊಸಕಿ ಹಾಕಿದರು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಹಿಂದೆಂದಿಗಿಂತಲೂ ತ್ವರಿತ ಹಾಗೂ ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಧ್ವನಿಯೆತ್ತಬೇಕಾದ ಅಗತ್ಯ ಎದುರಾಗಿದೆ. ಒಂದು ವೇಳೆ, ೧೯೬೦ರ ದಶಕದಲ್ಲಿ ಡಾ. ರಾಜ್, ಬಾಲಕೃಷ್ಣ, ನರಸಿಂಹ ರಾಜು, ಜಿ.ವಿ. ಅಯ್ಯರ್, ಅನಕೃ ಮುಂತಾದವರು ಅನ್ಯ ಭಾಷಾ ಚಿತ್ರಗಳ ಡಬ್ಬಿಂಗ್ ವಿರುದ್ಧ ಯಶಸ್ವಿಯಾಗಿ ಧ್ವನಿಯೆತ್ತದೇ, ಡಬ್ಬಿಂಗನ್ನು ನಿಷೇಧ ಮಾಡಿಸದೇ ಹೋಗಿದ್ದಿದ್ದರೆ ಇವತ್ತು ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳನ್ನು ನೋಡಲು ಥಿಯೇಟರ್‌ಗಳೇ ಇರುತ್ತಿರಲಿಲ್ಲ.
ನೆನಪಿನಲ್ಲಿರಲಿ, ಒಂದು ವೇಳೆ ಪರ ಭಾಷಿಕರನ್ನು ಅದರಲ್ಲೂ ತೆಲುಗುವಾಳ್ಳುಗಳನ್ನು ನಾವು ಮಟ್ಟಹಾಕದೇ ಹೋದರೆ, ಮುಂದೊಂದು ದಿನ ಬೆಳಗಾವಿಯಲ್ಲಿ ಕನ್ನಡಿಗನೊಬ್ಬನನ್ನು ಮೇಯರ್ ಮಾಡಬೇಕಾದರೆ ಹೋರಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆಯಲ್ಲಾ ಅಂಥ ಪರಿಸ್ಥಿತಿ ಬೆಂಗಳೂರಿನಲ್ಲೂ ಸೃಷ್ಟಿಯಾಗುತ್ತದೆ. ಈಗಾಗಲೇ ಬೆಂಗಳೂರಿನ ಜುಟ್ಟನ್ನು ರೆಡ್ಡಿಗಳ ಕೈಗೆ ಕೊಟ್ಟಾಗಿದೆ. ಇನ್ನು ಮೇಯರ್ ಸ್ಥಾನಕ್ಕೆ ನೇರ ಆಯ್ಕೆ ಮಾಡುವ ವ್ಯವಸ್ಥೆಯನ್ನೇನಾದರೂ ತಂದರೆ ವಿಧಾನಸಭೆ ಹಾಗೂ ಕಾರ್ಪೊರೇಶನ್‌ನಲ್ಲೂ “ಮಚ್ಚಾ, ಬಾಬು”ಗಳೇ ತುಂಬಿಕೊಳ್ಳುತ್ತಾರೆ, ಮರೆಯಬೇಡಿ.
ಹಾಗಂತ ಭಾಷೆ, ಸಂಸ್ಕೃತಿ ಹೆಸರಿನಲ್ಲಿ ದೇಶ ವಿಭಜನೆ ಮಾಡಬೇಕೆಂದು ಯಾರೂ ಕೇಳುತ್ತಿಲ್ಲ. ಭಾರತ ಅನ್ನುವ ಒಂದು ಪದಕ್ಕೆ ನಮ್ಮನ್ನೆಲ್ಲ ಭಾವನಾತ್ಮಕವಾಗಿ ಒಂದು ಮಾಡುವ ಶಕ್ತಿಯಿದೆ. ಆದರೆ “ಯೂನಿವರ್ಸಲ್ ಬ್ರದರ್‌ಹುಡ್” ಬಗ್ಗೆ ಎಷ್ಟೇ ಮಾತನಾಡಿದರೂ ಕೊನೆಗೆ ಅಪ್ಪನ ಆಸ್ತಿಗಾಗಿ ಅಣ್ಣತಮ್ಮಂದಿರೇ ಹೊಡೆದಾಡುವಂತೆ “ಸ್ಥಳೀಯರ ಕೂಗು” ಎನ್ನುವುದೂ ಇರುತ್ತದೆ. ಈ ಬೆಂಗಳೂರು ನಮ್ಮದು, ನಮ್ಮ ಕೆಂಪೇಗೌಡ ಕಟ್ಟಿದ್ದು, ನಮ್ಮ ವಿಶ್ವೇಶ್ವರಯ್ಯ ಬೆಳೆಸಿದ್ದು, ನಮ್ಮ ಕನ್ನಡನಾಡು ಎಂದು ಹಕ್ಕು ಪ್ರತಿಪಾದನೆ ಮಾಡುವುದರಲ್ಲಿ, ಪರ ಭಾಷಿಕರ ಸೊಕ್ಕು ಮುರಿಯಬೇಕೆನ್ನುವುದರಲ್ಲಿ, ಅಂಗಡಿ, ಕಾರ್ಖಾನೆಗಳ ಮುಂಗಟ್ಟಿನ ಮೇಲೆ ಕನ್ನಡ ನಾಮಫಲಕಗಳನ್ನು ಹಾಕಿ ಎಂದು ಒತ್ತಾಯಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಅಥವಾ ಯಾವ ಸಂಘಟನೆ ಬೇಕಾದರೂ ಮಾಡಲಿ. ಆದರೆ ನಮಗೆ ಕಟ್ಟಾಳುಗಳು ಬೇಕೇ ಹೊರತು ‘ಕಲೆಕ್ಟರ್’ಗಳಲ್ಲ. ಕನ್ನಡದ ಹೆಸರು ಹೇಳಿಕೊಂಡು “ಕಲೆಕ್ಟರ್” ಕೆಲಸಕ್ಕಿಳಿದರೆ ಕೆಡುವುದು ಕನ್ನಡದ ಹೆಸರೇ. ಜತೆಗೆ ಹೋರಾಟಗಳು ಹಾಗೂ ಹೋರಾಟಗಾರರ ಮೇಲೆ ಜನರಿಗೆ ವಿಶ್ವಾಸವೇ ಹೊರಟು ಹೋಗುತ್ತದೆ.
ಕನ್ನಡ ರಾಜ್ಯೋತ್ಸವದ ದಿನವಾದ ಇಂದಾದರೂ ಕನ್ನಡದ ಬಗ್ಗೆ ನೈಜ ಕಾಳಜಿ ಇರುವ ಎಲ್ಲರೂ ಚಿಂತನೆ ಮಾಡಲಿ.
November 4th, 2008 at 492030
Excellent Article!!!!!!!
You have give real picture about karnataka and companies. These tamil, telugu and malayalies domination is not tolerable everywhere. Though we have relevant experience, capacity and knowledge we are not getting support from our team lead, because he is a non-kannadia, will support only to their community.
Dont know when this descrimination will go?
November 4th, 2008 at 275430
ಸ್ವಾಮೀ,
ಯಾಕೆ ಮುಗ್ಧ ಜನರ ತಲೆಯಲ್ಲಿ ವಿಷದ ಬೀಜ ಬಿತ್ತುತ್ತಿದ್ದೀರಿ? ನೀಮಗೂ ಭಯೋತ್ಪಾದಕರನ್ನು ಹುಟ್ಟು ಹಾಕುವ ಮುಲ್ಲಾ ಗಳಿಗೂ ಅಥವಾ ಭಾಷಾ ದುರಭಿಮನಿಗಲಿಗು ಏನು ವ್ಯತ್ಯಾಸ? ಸಾಮರಸ್ಯದಿಂದ ಬದುಕುವ ಬಗೆ ಹೇಗೆಂದು ತಿಳಿದಿದ್ದರೆ ಬರೆಯಿರಿ.ಇಲ್ಲಾಂದ್ರೆ ಸುಮ್ಮನಿರಿ. ನಿಮ್ಮನ್ತವರನ್ತು ಬರೆದು , ಬೆಂಕಿ ಹಚ್ಚಿ ತಣ್ಣಗೆ ಕುಳಿತು ಚಂದ ನೋಡುತ್ತಿರಿ . ಅಮಾಯಕರು ನಿಮ್ಮಿಂದ ಪ್ರೇರಿತರಾಗಿ ಯಾರದೋ ಮೈಮೇಲೆ ಬಿದ್ದು ಸಮಾಜದ ಶಾಂತಿ ಕದದುತ್ತಾರೆ ಅಥವಾ ಜೀವ ಬಿಡುತ್ತಾರೆ. ದುರಭಿಮಾನ, ಭಯೋತ್ಪಾದನೆ ಹುಟ್ಟುವುದು ಮೊದಲು ಮನಸ್ಸಿನಲ್ಲಿ.ಪ್ರೇರಿತರದವರು ಕೆಲವರು ಚಾಕು ಬಳಸುತ್ತಾರೆ, ಕೆಲವರು ಬಾಂಬು ಹಾಕುತ್ತಾರೆ, ಅವರವರ ಯೋಗ್ಯತೆಗೆ ತಕ್ಕಂತೆ .ನಿಮ್ಮಂಥವರು ಚಂದ ನೋಡುತ್ತೀರಿ .
November 4th, 2008 at 580930
ಸ್ವಾಭಿಮಾನಿ ಕನ್ನಡಿಗರನ್ನು ಎಚ್ಚರಿಸುವ ಲೇಖನ. ಧನ್ಯವಾದಗಳು ಪ್ರತಾಪ್.
ಈಗಿರುವ ಸ್ಥಿತಿಯಲ್ಲಿ ಕನ್ನಡಕ್ಕೆ ಒಬ್ಬರಲ್ಲ ಎರಡು ಮೂರು ಜನರಾದರೂ ಖಂಡಿತಾ ರಾಜ್ ಠಾಕ್ರೆಯ೦ಥವರು ಬೇಕು. ಐಟಿ ಕಂಪೆನಿಗಳ ಒಳಗಿನ ಹುಳುಕನ್ನು ಉತ್ತಮವಾಗಿ ಹೊರಹಾಕಿದ್ದೀರಿ. ನೀವು ಹೇಳಿದಂತೆ ಹಲವಾರು ಕಂಪನಿಗಳಲ್ಲಿ ತಮಿಳು, ತೆಲುಗು ಮಲೆಯಾಳಿಗಳು ಮತ್ತು ಉತ್ತರದವರು ಆಳುತ್ತಿದ್ದರೆ. ಇದಕ್ಕೆ ಇನ್ಫೋಸಿಸ್ ಅಂಥಾ ಘನ ಕಂಪನಿಗಳೂ ಹೊರತಾಗಿಲ್ಲ ಅನ್ನುವುದು ಸತ್ಯ.
ಕೆಲವು ವರ್ಷಗಳ ಹಿಂದೆ ಹಿಡಿ ಶಾಪ ಹಾಕುತ್ತಿದ್ದ ಕನ್ನಡಿಗರು, ಇವತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಲ್ಪ ಮಟ್ಟಿಗೆ ಆ ಕೆಲಸ ಮಾಡುತ್ತಿದೆ ಎನ್ನುತ್ತಿದ್ದಾರೆ. ಆದರೆ ಅವರು ‘ಕಲೆಕ್ಟರ್’ ಗಲಾಗಬಾರದು. ಇಲ್ಲವಾದಲ್ಲಿ ಕನ್ನಡದ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಹಲವಾರು ವಾಟಾಳ್ ಗಳಂತೆ ಇವರಾಗಬಾರದು. ಇವತ್ತು ಈ ತರಹದ ಪ್ರತಿಭಟನೆ ಗಳು ಇಲ್ಲದೆ ಹೋಗಿದ್ದಾರೆ ಕನ್ನಡ ‘ಬೋರ್ಡ್’ ಗಳನ್ನೂ ನೋಡುವುದೇ ಅಪರೂಪವಾಗುತ್ತಿತ್ತು. ಇವತ್ತಿನ ಕಾಲದಲ್ಲಿ ಪ್ರತಿಯೊಂದಕ್ಕೂ ಹೋರಾಟ, ಪ್ರತಿಭಟನೆ ಅಗತ್ಯವಾಗಿದೆ. ಮೊನ್ನೆ ಮೊನ್ನೆ ‘ಮತಾಂತರ’ ದಲ್ಲೇ ನೋಡಿದೆವಲ್ಲ. ಇವತ್ತು ನಾವು ನಾವಾಗಿಯೇ ಉಳಿಯ ಬೇಕಾದರೆ ‘ನಾವಿದ್ದೇವೆ, ಸತ್ತಿಲ್ಲ’ ಎಂದು, ಗಟ್ಟಿಯಾಗಿ, ಧೈರ್ಯವಾಗಿ ಹೇಳಬೇಕಾದ ಪರಿಸ್ತಿತಿ ಬಂದಿದೆ.
ಇಲ್ಲಿ ಬರೆದಿರುವ ‘ವಿಷ್ಣು’ ಅಂತವರ ಬಲಹೀನ ಮನಸ್ಸುಗಳಿ೦ದಾಗೇ ಕನ್ನಡಿಗರು ಬೆಂಗಳೂರಲ್ಲಿ ಕಷ್ಟ ಅನುಭವಿಸುತ್ತಿರುವುದು. ಇಂಥವರು ಹಿಂದಿನಿಂದ ಮಾಡಿರುವುದೂ ಇದನ್ನೇ. ಗಾಂಧೀಜಿ ಮಾಡಿದ್ದೂ ಇದನ್ನೇ. ಅವತ್ತು ಗಾಂಧೀಜಿ ಮಾಡಿದ ತಪ್ಪಿಗೆ ಇಂದು ದೇಶ ಇನ್ನಿಲ್ಲದಂತೆ ಮುಸಲ್ಮಾನರಿಂದ ಕಷ್ಟ, ನಷ್ಟ ಅನುಭವಿಸುತ್ತಿದೆ. ಬಹುಶ ಗಾಂದೀಜಿ ಬದುಕಿದ್ದಿದ್ದರೆ ಮಾಡಿದ ತಪ್ಪಿಗೆ ಪರಿತಪಿಸುತ್ತಿದ್ದರೆನೋ?
ವಿಷ್ಣು, ಬೆಚ್ಚಗೆ ಒಲೆಯ ಮುಂದೆ ಚಳಿಕಾಸುತ್ತಾ ಕುಳಿತುಕೊಳ್ಳಿ, ನಿಮಗ್ಯಾಕೆ ಇದೆಲ್ಲ.
November 4th, 2008 at 571930
Dear Pratap,
Really Excellent and Good Article.
Namgoo obba Raj Thakre antavaroo beku.
November 5th, 2008 at 460830
Pratap I understand your concern about Kannada.But Kannada and Andhra people never had any conflicts they are together, they were together.
In vijayanagar empire Kannada and Telugu were the official labguages.
Even Raja durbhar had equal number of poets from both languages.
Hampi utsav has got such a importance because of janardhana Reddy, What
did Mr.M.P.Prakash do to hampi when he was in Power?
Reddy is recreating the legacy of Vijayanagara empire go there and enjoy the utsava.
I think your article is spreading the hatred than Hampi utsava.
Karnataka has enough number of enimies dont create fresh ones by such articles.
November 5th, 2008 at 243730
Don’t be so ignorant, “Hampi Utsav” was started by Mr. M P Prakash. We have no issues with average Telugu speaking people, but one cannot deny the fact that some Teluguites are sphere heading the hate politics of Andhra here. Remember the problem we faced at River Krishna Canal area by ur Teluguites n Govt was forced to put a ban outsiders buying land over there. Wait for few more days, I will come up with one more detailed article. And don’t preach me abt Reddy brothers n Ramulu n their politics plus background. They can’t issue a statement in Kannada without any help and reads out the prepared text in Assembly while answering questions.
November 5th, 2008 at 521730
ವೆಂಕಟೇಶ್ ಅವರೆ ಅತ್ಯುತ್ಸಾಹದಲ್ಲಿ ನೀವೇನೋ ೩ ಜನ ರಾಜ್ ಠಾಕ್ರೆ ಇರ್ಬೇಕು ಅಂದ್ರಿ. ನಮ್ಮ ಕನ್ನಡದ್ದು ಅದೆ ತಾಪತ್ರಯ. ಯಾರಾದ್ರು ಏನಾದ್ರೂ ಮಾಡಿ ಹೆಸರು ಮಾಡಿದ್ರೆ ೧೦ ಜನ ಅದನ್ನೆ ಮಾಡಿ ನಮ್ಮ ನಮ್ಮಲ್ಲೆ ರಾಜಕೀಯ ತಂದಿಟ್ಟು ಕೊನೆಗೆ ನಮಗೆ ಮುಳುವಾಗುತ್ತೆ. ಒಬ್ಬನೆ ನಾಯಕ ಹಾಗಿದ್ದಾಗ ಮಾತ್ರ ಎನಾದ್ರು ಮಾಡಕ್ಕೆ ಸಾಧ್ಯ. ಉರ್ದು ವಾರ್ತೆಗಳ ಗಲಾಟೆಯಲ್ಲಿ ಡಾ|| ರಾಜ್ ಬೀದಿಗಿಳಿಯುವ ಸುದ್ದಿ ತಿಳಿಯುತ್ತಿದ್ದಂತೆ ಅಂದಿನ ಮುಖ್ಯಮತ್ರಿ ವೀರಪ್ಪ ಮೊಯ್ಲಿ ಉರ್ದು ವಾರ್ತೆಯ ಪ್ರಸಾರವನ್ನು ಸ್ಥಗಿತಗೊಳಿಸಿದರು. ಹಾಗಿರ್ಬೇಕು ನಾಯಕತ್ವ. ಹೆಸರು ಹೇಳಿದ್ರೆ. ಭಯ ಪಡ್ಬೇಕು. ಭಯ ಅಂದ್ರೆ ಅವರು ಮಾಡುತ್ತಿರುವ ತಪ್ಪಿನ ಭಯ. ಅಮಾಯಕರಲ್ಲ.
ಪ್ರಸನ್ನ
November 5th, 2008 at 464030
Hello Pratap sir,
I am your great fan..
its really a nice article sir.
Sir neevu kelavu balaheena janara maatige worry modkobedi,
nimmondige naviddeve, nimma e kelasa nirantaravagi nadeyuttirali sadaaa…,
November 5th, 2008 at 254330
Namagoo Obba Raj Takre Beeku.
really Nice Artcle!!
November 5th, 2008 at 264730
in my previous software company, one manager was reddy and all his team were reddys. i am not sure this is accident or intention. i have seen same patterns with mallus, bengals and punjabis etc. and quite sometime i have heard these people belittling kannada and kannadigas.
November 5th, 2008 at 382530
ನಮಗೆ ರಾಜ್ tackeryginta ಅಣ್ಣಾವ್ರು ಬೇಕು..ಅಣ್ಣಾವ್ರು ಸಕಲ ಕಲ ವಲಬ್ಬ . .ಅಣ್ಣ ಮತ್ತೆ ಹುಟ್ಟಿ ಬಾ …ಈ ರಾಜ್ ತಕೆರಿ ಆದ್ರೆ ಪೋಲಿತಿಸಿಯನ್ ..ನಿಜವಾಗಲೂ ಬಾಷೆಗಾಗಿ ಹೊರಡ್ತಾ ಇದ್ದನೋ ಅಥವಾ ವೋತಿಗಗೋ ಗೊತ್ತಿಲ್ಲ..
November 5th, 2008 at 012230
ವೆಂಕಟೇಶ್ ಅವರು ಕಣ್ಣು ತೆರೆಸುವ ಮಾತು ಆಡಿದ್ದಾರೆ . ಗಾಂಧಿಜಿ ಎಂಥಹ ನಿಷ್ಪ್ರಯೋಜಕ ಕೆಲಸ ಮಾಡಿದರು. ವೆಂಕಟೇಶ್ ತರಹದ ನಾಯಕರಿಂದಾಗಿ ದೇಶ ಸ್ವತಂತ್ರ ಆಯಿತು. ಏನೋ ದೇವರ ದಯ, ಗಾಂಧಿಜಿ ಗೆ ಒಂದ್ ದಾರಿ ಮಾಡಿ ಪುಣ್ಯ ಕಟ್ಟಿಕೊಂಡರು ಕೆಲವರು. ಎಲ್ಲ ರಾಜ್ಯಗಳಲ್ಲೂ , ಧರ್ಮಗಳಲ್ಲೂ , ಜಾತಿಗಳಲ್ಲೂ ಒಬ್ಬ ರಾಜ್ ಠಾಕ್ರೆ , ಒಬ್ಬ ಮೋದಿ ಬೇಕಾಗಿದ್ದಾರೆ………ಆಗಲೇ ನಮ್ಮ ದೇಶ ಶಾಂತಿ, ಸಾಮರಸ್ಯಗಳಿಂದ ತುಂಬಿರುತ್ತದೆ. ಇಂಥವರ ಹೊರಾಟಗಲಿಂದಲೇ ಅಲ್ಲವೇ ಬಡವರಿಗೆ ಆಹಾರ, ಆಶ್ರಯ ನೀರು ಸಿಗುವುದು? ಬುದ್ದಿಹೀನ ಆಗಿರುವುದಕ್ಕಿಂತ ಬಲಹೀನ ಆಗಿರುವುದೇ ಲೇಸಲ್ಲವೇ ಸ್ವಾಮಿ.
November 6th, 2008 at 275130
Hi Pratap
A timely write-up. Hope this acts as a wake-up call. I was thinking along these lines on karnataka rajyothsava day.We have a long way to go.I do agree with your sentiments and i do share your concern. However, I beg to differ on one aspect which is the focal point of this write-up.I don’t think Karnataka needs a Raj thackeray. Raj thackeray is just toeing the line of his uncle, Balasaheb thackeray.We all know how bal thackeray pursued a vicious hate campaign against south indians in mumbai a few decades back.He called all us southies as “lungi chors” etc.Now Raj has taken a leaf out of that book. Moreover, who is being targetted by the MNS? Its the poor cab driver,the innocent vendor on the streets and others who live on a day-to-day basis.If he reallly wants to make an impression then why not target the affluent biharis and north Indians who are lobbying in favour of their clan?Go ransack the rail bhavan in new delhi instead of harassing the man on the street who is only concerned about his two-piece meals per day.I would like to reiterate that I fully agree and endorse your concerns expressed in this atricle but not about this individual.We are better off without Raj and Co. Tell me, what has maharashtra achieved out of all this?Raj Thackeray’s goondas have only managed to tarnish the image of the maharashtrians.Has this helped the marathi cause?Infact, it has only strengthened the cause of these UP-Biharis.They cry for justice and sympathy and the centre/state governments,the media and the rest are empathising with them.So what is that they have achieved from creating this ruckus?Hence I strongly feel that we need a personality like DR.Rajkumar to strengthen our cause.Let’s not forget the role of Dr.Raj’s in the Gokak movement.He was a charismatic person who had a huge following among the masses.His demise has left a vacuum which needs to be filled by an equally suitable leader.We need an Obama…yes. But a Raj Thackeray..a capital NO.
November 6th, 2008 at 225730
hi..pratap good article…
hello vishnu ega bekagirodu ninna taraha Gandhigiri alla Only DADAGIRI ayta.. e kaladalli gandhi beda…. subhashchandrabhos beku gottayta…..
November 6th, 2008 at 241930
Dear Pratap thanks for the clarification for Sree (#5). This clears the slightest doubt we had in our mind.
Reddy brothers along with other 10 MLA’s are talking in Telugu in Vidhana Soudha/Assembly? Sunil Kumar & Ravi Belegere are chelas of thees goons. So how easily they got the R’ Awards!
This is real wake-up call for Kannadigas.
We Kannadigas are most ignorant in the whole country. Am not against any language ( infacet with interst I have learnt 7 languages) but whereever we go we need to learn their language and hookup with the local culture.
I suggest friends here including #13 Kiran and #12Vishnu to go thru the interview with Raj takre in other pages of this website.
Vishnu Dude, Remember Early 90′s. How Tamilians used to look at Kannadigas? They hated any other language and culture other than of Tamilnadu’s. Riot took place, I too felt bad about it initially. But the result was over whelming!
That was the turning point.
Now tamilians are our Friends. (am not talking about politics on Hogenakal / Kaveri issues) Now they are learning other languages, culture, Dress… everything, every places! they mix very well.
Everyone knows violence is not the answer for everything. At the same time, we must know, we can remove a pin from pin only.
November 6th, 2008 at 133730
ಯಾರು ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿದ್ರೋ( ಮೊಘಲ್ ಇರಲೇ ಅಥವಾ ಪಾಶ್ಚಿಮಾತ್ಯ ಇರಲಿ) ಅಂತವರ ಜೊತೆ ಅಹಿಂಸೆ ಅಂಥ ಬೋಧನೆ ಮಾಡ್ಕೊಂಡು ನಮ್ಮ ನೆಲದಲ್ಲಿ ಗುಲಾಮರಾಗಿ ಕೆಲಸ ಮಾಡ್ಕೊಂಡು ನಮ್ಮ ಹೊಥೆನ್ನೇ ಉಪವಾಸ ಬೀಳ್ಕೊಂಡು ಸ್ವಾತಂತ್ಯ್ರ ಕೊಡಿ ಅಂತ ಬಿಕ್ಷೆ ಬೇಡ್ಕೊಂದಿವಿ..ಯಾರು ನಮ್ಮದೇ ಸಂಸ್ಕೃತಿ ಆದ್ರೆ ಬೇರೆ ಬಾಷೆ,ಮಾತುಕತೆಯಲ್ಲಿ ಮುಗಿಸುವ ವಿಷಯವನ್ನು ರಾಜಕೀಯ ಮಾಡಿ ಅದಕ್ಕೆ ಹಿಂಸೆ ಲೇಪಸಿ ನಾವೇ ಸಾಯ್ತಿವಿ..ಎತ್ತ ಸಾಗುತ್ತಿದೆ ನಮ್ಮ ಭಾರತ ? ಭಾರತಿಯರೇ ಒಗ್ಗತಾಗಿ..ಇದು ನಾವು ಜಗತ್ತನ್ನು ಅಳುವ ಸಮಯ..
November 7th, 2008 at 573630
Pratap,
If I don’t act too matured like the progrssive liberals, what you have spoken is need of the hour.
The wealth and oppurtunities of any geography are not just the results of goverment policies or the presense of industry of any kind. It is primarily ‘people’, who make it. You can extend the logic to Bangalore. The Technology and allied trades developed not just because of strategies, but because of ACCOMEDATIVE people. But this quality is understood as weakness among most migrants. I have known quite number of examples when KRV has come in rescue of pride of Kannada. Even Vatal who went total jobless has atleast did a worthy work against Laloo sending a scrum of Biharis.
A citing- Recently Austrian people welcomed the local Conservative party with swashing majority. Britain had their first ever Conservative member stepping into parliament(though one seat !). We require similar thing. In longer run each geography will develop on it’s own.
And globalization or the liberal economies will no more be escaping routs or shortcuts for welfare.
November 7th, 2008 at 380830
Just one comments Pratap, film actor Ravichandran is basically a tamilian i have heard, settled in Bengaluru from long…
Other than this info, everything is perfect and a awakening article,Good job.
November 7th, 2008 at 483530
Namma karmatakakke, bengaloorige khanditha Raj Thakery bekagilla.
Namage bekagirodu nadu nudi rakshisuvantha janare horatu vasoolige iliyuva nayakaralla. ondu hottina ootakke ee pari kashta paduva so called north indians nna badidu kole maduva neecharu namage bekagilla. thakaattiddare ide Raj Bangladeshi akrama valasigaranna Mumbai hagoo Delhi yanthaha nagaragalinda oddodisali, antha ichchashaktiulla nayakaru beku namge.
November 7th, 2008 at 434530
A great article indeed PRATHAP, A perfect call 4 all d people on d occasion of this great day. V never imagined this Great link b/w railways and bihar. I welcome d work of Narayan gouda related to railway protests. V really need a man like him until and unless he stays away from todays politics but not a Raj tackrey who is using this dirty trick for his political gain. I dont think i have heard his name before his seperation from Shivsena. V need a man who has a real concern 4 karnataka. Its so odd tat being such a big state v hardly have any voice in d centre. Not a single MP 4m here has been alloted a valuable portfolio in d cabinet now or in d past. There’s a great necessity 4 d existance of d regional party at this hour. tats y dmk’s words r heard better. Our partymen never want to protest against d central govt and get red eye 4m their High command. And oudu NAMMAGU OBBA KANNADA NAYAKA BEKU . And y not Prathap tat cant b YOU , when u have this great gift of evoking a lay mans thoughts . I think ur PEN is mightier than thier sword .
November 7th, 2008 at 101430
Kanmare aagutiruva kannada basheya bagge sariyada samayadalli ಅಂಕನ baredu jagruti mudiso nimma e karyakke vandane.aadare ninv ರಾಜ್ ಠಾಕ್ರೆ anta aayogynannu,aatana karyavannu bench mark madirodu sariyalla.ಠಾಕ್ರೆ rajakiya huddesha dind madutiruva nataka.aadare nimma e baraha anta ayogya nannu hero taraha chitrisiddu nimma loka gyanakke ಪ್ರಶ್ನೆ yagide.nimma e baraha ರೌಡಿ galannu samaja sevakaru bhasha rakshakaru anta tirmanisiro haagide.
November 7th, 2008 at 355830
Dear Raghu & Yegesh,
See basically we dont need Raj Takre in Ktk, because we are Kannadigas, agree. But if any one who wanna to protect our interests, they wil obuousely become Raj Takre. Why? You better read Takre interview on the other pages at the same site.
Narayan Gowda / KRV is OK, but he shud stop ‘collection’ business and come clean. Vatal is a similar Chameleon.
@ Pratibha, Ravichandran & Arvind Ramesh both are Tamilians in their homes, but they born and broughtup in KTK and cosiderably contributed to Kannada Cinema than Sai Kumar. Few yrs back we had similar issue with Ravichandran, but now he is pro-Kannada, talks Kannada.
Even DVG, Kailasam. Doreswamy Iyengar, RKS, Masti.. many more. But we respect them because they were like Kannadigas.
The intention here is: we are not against any language, people, but they shud respect the local culture, learn language and abide to ‘give respect and take respect’ policy, live like locals.
To control this we need a ‘Takre’ like Person thats it.
November 11th, 2008 at 240230
Friends,
It is a tragedy of our times that somebody as childish and immatured like Pratap Simha is considered a thinker or writer. His half baked idea are treated as brilliant apostles. He is just another cold blooded terrorist with very strong poison and hatred filled inside. May be a childhood problem; probably he didin’t get his mothers love much. But it is astonishing to see that a few others are influnced by this perversion. Evil drags stronger. We have the example of Hitler. Pratap Simha’s only one and final “realisation” is, – Killing each other, terrorising our fellow human beings, is the only solution for all the problems – So kill all your enemies; an eye for an eye – Following this principle, soon the human race will vanish from this earth. Then as per Pratap Simha’s wishes, there will be peace, forever! Good luck.
November 11th, 2008 at 002030
Varaha avrige namaskara.nimage ತಾಯಿ ಯ nijavada pritisikkidiya nodkolli nantara bereyavara bagge matadi.ivaga kannada kke aaguttiro anyaya,mosa, nodikondu sumne kuralu nav enu galiju tinno ‘varaaha’ galalla.namage ನಮ್ಮ ನೆಲ ಜಲ ಭಾಷೆ galu ತಾಯಿ Hage. ಜನ್ಮ kotta, priti kotta ತಾಯಿಗೆ yaro ayogya rinda ಅವಮಾನ ಅಪಮಾನ aagutirbekadre summane kuralu aagutta.ನೆಲ ಜಲ da bagge jagruti modisor bagge e riti Headless Chicken tara baribedi.namagu swabimana ide b/c namge nijavada ತಾಯಿ ಪ್ರೀತಿ Sikkide.
November 12th, 2008 at 132330
Yogesh Gowdre,
Vandanegalu. Actually, why we need only one Raj Thakre for the entire Karnataka? We need Raj Thakres one each to all our Districts, Taluks, Villages, “Keri” s, “Oni” s and houses. Actually each individual should become a Raj Thakre. (Infact Raj Thakre or his ilk won’t fight the war themselves.) Why should not we protect our Mother village or Mother Oni from outsiders or intruders? After cleansing our motherland from all intruders, we can find other reasons to fight among the remaining ourselves. Say to protect our Mother district or mother caste, mother sub caste, etc. Kumaravyasa eega iddidre “Thinikidanu Phaniraaya Raamaayanada kavigala bhaaradali” endu bareyuva badalu “Thinikidanu Phaniraaya Ammagala bhaaradali” endu bareyuththiddaneno!
In Mahabharath time also there was the infamous Yadavi Kalaha among the Yadavas. Even God Sri Krishna couldn’t stop it. Narendra Modis, Raj Thakres and Pratapsimhas were there then also!
Gowdre, tumba bhavukaragabedi. Nanna dharma athava Bhashe, athava desha sampoorna naashavadare mundenu endu yochisi. Aaga nimmalli holeyuva uttaradalli nijavaada deshprema, dharmaabhimaana, bhashaabhimana iruttade. Summane, Amma, Taayi, mother endu gogareyuvudarinda yaava prayojana illa.
November 12th, 2008 at 285730
ವಿಷ್ಣು
ನಿಮಗೆ ಬಹುಶ ಸಮಸ್ಯೆಯ ಬಗ್ಗೆ ಅರಿವೇ ಇದ್ದಂತಿಲ್ಲ, ಇದ್ದಿದ್ದಿದರೆ ಹೀಗೆ ಮಾತನಾಡುತ್ತಿರಲಿಲ್ಲ. ಈಗ ನೀವು ಶಾಂತಿ ಬೊದನೆ ಏಕೆ ಮಾಡುತ್ತೀರ ಗೊತ್ತ, ನಿಮಗೆ ಇನ್ನು ಆ ಬಿಸಿ ತಾಕಿಲ್ಲ, ಒಮ್ಮೆ ತಾಕಲಿ ಗೊತ್ತಾಗುತ್ತೆ.
ಒಂದು ತಿಳ್ಕೊಳ್ಳಿ ‘ಪಕ್ಕದಮನೆಗೆ ಬೆಂಕಿ ಬಿದ್ದಾಗ ಆರಿಸದೆ ಹೋದರೆ ಅದು ನಿಮ್ಮ ಮನೆಯನ್ನು ಸುಡುತ್ತದೆ” ನೆನಪಿರಲಿ
November 13th, 2008 at 321430
ರಾಕೇಶ್ ಅವರೇ,
ಬಹುಷ್ಯ ನಿಮ್ಮ ಮನೆಯಲ್ಲಿ ಯಾರೂ ಕೋಮು ಗಲಭೆ ಯಲ್ಲಿ ಅಥವಾ ಕಾವೇರಿ ಗಲಾಟೆಯಲ್ಲಿ ಸತ್ತಿಲ್ಲ ಎಂದು ಕಾಣುತ್ತೆ, ನಿಮಗಿನ್ನೂ ಬಿಸಿ ತಾಗಿಲ್ಲ. ಪಕ್ಕದ ಮನೆಯ ಅಮಾಯಕರು ಯಾವದೋ ರಾಜಕಾರಣಿಯ ಮಾತು ಮಾತು ಕೇಳಿ , ತಲೆಯಲ್ಲಿ ವಿಷ ತುಂಬಿಕೊಂಡು ಹೊಡೆದಾಡಿ ಸತ್ತದ್ದರಿಂದ ಪಾಠ ಕಲಿಯಿರಿ.
ಇಂಥ ಗಲಭೆಗಳನ್ನು ಹುಟ್ಟುಹಾಕಿ ಅಧಿಕಾರ ಏರುವ ರಾಜಕಾರಣಿಗಳಿಗೆ , ಭಾಷೆ , ಧರ್ಮದ ಅಳಿವೋ ಉಳಿವೋ ಅಪ್ರಸ್ತುತ . ಅವರಿಗೆ ಕಾಣುವುದು ಬರೇ ವೋಟು . ಮಹಾರಾಷ್ಟ್ರದ ಥಾಕ್ರೆಯವರು ಒಂದಾನೊಂದು ಕಾಲದಲ್ಲಿ ಮದ್ರಾಸವರನ್ನು ಕರ್ನಾಟಕದವರನ್ನು, ಮಂಗಳೂರವರನ್ನು ಬಡಿಯಲಿಲ್ಲವೇ ? ಇದು ಬಹಳ ಶ್ರೇಷ್ಠವಾದ ಕೆಲಸ ಬಿಡಿ. ಆಗ ಬಿಹಾರದವ್ರು ನಿಮ್ಮಹಾಗೆ ಬಹಳ ಖುಷಿ ಪಟ್ಟಿದ್ದರು, ‘ನಮಗೂ ಒಬ್ಬ ಠಾಕ್ರೆ ಬೇಕು ‘ ಎಂದು.ಈಗ ಕರ್ನಾಟಕದವರ ಸರದಿ ಮುಗಿಯಿತು , ಬಿಹಾರದವರು ಪೆಟ್ಟು ತಿನ್ನುತ್ತಿದ್ದಾರೆ .
ನಮಗೆ ಇಷ್ಟವಗದುದನ್ನ ಕಾನೂನು ಮೂಲಕ ಪ್ರತಿಭಟಿಸುವ ಅಭ್ಯಾಸ ಎಲ್ಲರ ಆರೋಗ್ಯಕ್ಕೂ ದೇಶದ ಆರೋಗ್ಯಕ್ಕೂ ಒಳ್ಳೆಯದು . ಇದು ಒಳ್ಳೆಯ ನಾಯಕರಲ್ಲಿರ ಬೇಕಾದ ಗುಣ ಸ್ವಭಾವ.
November 14th, 2008 at 302630
ವಿಷ್ಣು
@”ಬಹುಷ್ಯ ನಿಮ್ಮ ಮನೆಯಲ್ಲಿ ಯಾರೂ ಕೋಮು ಗಲಭೆ ಯಲ್ಲಿ ಅಥವಾ ಕಾವೇರಿ ಗಲಾಟೆಯಲ್ಲಿ ಸತ್ತಿಲ್ಲ ಎಂದು ಕಾಣುತ್ತೆ,” ಬರೆಯುವಾಗ ಯೋಚಿಸಿ ಬರೆಯಿರಿ , ಏನ್ರಿ ಇದು ‘ನಿಮ್ಮ ಮನೆಯಲ್ಲಿ’?
ಅದು ಸರಿ ನಾನು ಈ ರಾಜ್ ಠಾಕ್ರೆ ಇಲ್ಲ ಬಾಳ ಠಾಕ್ರೆಯನ್ನು ಸಮರ್ಥಿಸ್ತ ಇಲ್ಲ, ಅವರು ಹೇಳುತ್ತಿರುವುದೇನೋ ಸರಿ ಆದ್ರೆ ಇಡಿದಿರುವ ದಾರಿ ಸರಿಯಿಲ್ಲ.
ಅಷ್ಟಕ್ಕೂ ಅವರು ಹಾಗೆ ಹೇಳುತ್ತಿರುವುದು ಮುಂಬೈನ ಮೂಲ ನಿವಾಸಿಗಳಿಗೆ ಸರಿಯಾದ ಪ್ರಾತಿನಿದ್ಯತೆ ಸಿಗುತ್ತಿಲ್ಲ ಅಂತ, ಕರ್ನಾಟಕದಲ್ಲೂ ಅದೇ ಆಗುತ್ತಿದೆ ಸ್ವಾಮಿ. ಬಹುಷಃ ನೀವೆಂದು ಬೆಂಗಳೂರಿನಲ್ಲಿ ಫೈಲ್ ಹಿಡಿದುಕೊಂಡು ಮೈಲಿಗಟ್ಟಲೆ ನಡೆದು ಕೆಲಸ ಹುಡುಕೆ ಇಲ್ಲ ಅನ್ನಿಸುತ್ತೆ, ಅದಕ್ಕೆ ನಿಮಗೆ ಬೇರೆ ಕಡೆಯಿಂದ ಬಂದವರು ಕನ್ನಡಿಗರ ಮೇಲೆ ಮಾಡುವ ದೌರ್ಜನ್ಯದ ಅರಿವು ನಿಮಗಿಲ್ಲ , ನಾನು ಅದನ್ನು ಅನುಭವಿಸಿದ್ದೇನೆ.
November 14th, 2008 at 155130
Hi Prathap,
Namskara!
Nimma e article na prathiyondu padagaloo kadu sathya sangathigalu.
Thumba chennagi barediddera.
Vandanegalu.
Manju
November 14th, 2008 at 171430
ರಾಕೇಶ್ ಅವರೇ , ಇಂಥಹ ಗಲಭೆಗಳಲ್ಲಿ ತೊಂದರೆಗೊಳಗಾಗುವುದು ಅಮಾಯಕರು. ನಮ್ಮ ಮನೆಯೋ, ನಿಮ್ಮ ಮನೆಯೋ, ಇನ್ನೊಬ್ಬರ ಮನೆಯೋ , ಎಲ್ಲೇ ಆದರು ಇಂಥಹ ಘಟನೆಗಳು ಆಗಬಾರದು ಎನ್ನುವುದಕ್ಕೆ ಅಷ್ಟೆ ಹೇಳಿದೆ , ಅನ್ಯಾತ ಭಾವಿಸಬೇಡಿ .
ತುಂಬ ಉದ್ಯೋಗ ಅವಕಾಶಗಳಿರುವ ಪಟ್ಟಣದಲ್ಲಿ, ಬೇರೆ ರಾಜ್ಯಗಳಿಂದ ಜನರು ವಲಸೆ ಬರುವುದು ಹಾಗೂ ಅದರಿಂದಾಗಿ ಅದೇ ಪಟ್ಟಣದ , ರಾಜ್ಯದ ಮೂಲನಿವಾಸಿಗಳಿಗೆ ಅನನುಕೂಲವಾಗುವುದು , ಬೆಂಗಳೂರಿಗೆ ಮಾತ್ರ ಸೀಮಿತವೇ? ನಮ್ಮ ರಾಜ್ಯಕ್ಕೆ ವಲಸೆ ಬಂದ ನೆರೆ ರಾಜ್ಯದವರನ್ನು ನಾವು ಹೊರಗಟ್ಟಿದರೆ , ನಂತರ ಬೇರೆ ರಾಜ್ಯದಲ್ಲಿರುವ ಕನ್ನಡಿಗರನ್ನು ನಾವು ವಾಪಸು ಕರೆ ತರಬೇಕಾಗುತ್ತದೆ.ಆಗಲೂ ನಿರುದ್ಯೋಗ ಸಮಸ್ಯೆ ಕೊನೆಗೊಳ್ಳುವುದಿಲ್ಲ. ನಮ್ಮ ರಾಜ್ಯದಿಂದ ಹೊರಗೆ ಹೋದವರನ್ನೆಲ್ಲ ನಾವು ವಾಪಸು ಕರೆ ತಂದರೆ, ಆಗಲೂ , ನಾವು ನೀವು ಬೆಂಗಳೂರಲ್ಲಿ ಫೈಲು ಹಿಡಿದು , ಕೆಲಸಕ್ಕಾಗಿ ಮೈಲಿಗಟ್ಟಲೆ ಅಲೆಯಬೇಕಾಗುತ್ತದೆ . ಈ ಸಮಸ್ಯೆಗಳನ್ನು ಪರಿಹರಿಸಬೇಕಾದವರು, ಪರಿಹರಿಸಬಲ್ಲವರು ಎಂದರೆ ಆಯಾ ರಾಜ್ಯದ ಸರಕಾರಗಳು,ನಮ್ಮ ಜನ ಪ್ರತಿನಿಧಿಗಳು. ಭಾಷೆ ಮತ್ತು ಧರ್ಮಗಳು ರಾಜಕಿಯದಾಟದ ಸೂತ್ರಗಳು ಅಷ್ಟೆ. ಟಾಕ್ರೆಯವರು ಸಹಾ ಈ ರಾಜಕೀಯದಲ್ಲಿ ಭಾಗಿದಾರರು. ಅವರ ಉದ್ದೇಶವೂ ಅಧಿಕಾರಕ್ಕೆರುವುದೇ ಆಗಿದೆ. ಉದ್ಯೊಗವಕಶಗಳು ಇನ್ನೂ ಬೇಕು , ಆಯಾ ರಾಜ್ಯದ ಜನರಿಗೆ ಕೆಲಸಗಳಲ್ಲಿ ಕೆಲವು ಪ್ರಮಾಣದ ಮೀಸಲಾತಿ ತರಬಹುದು. ಇಂಥ ಸಮಸ್ಯೆಗಳ ಬಗ್ಗೆ ಗಂಭಿರವಾಗಿ ಚಿಂತಿಸಿ , ಸ್ಪಂದಿಸುವ ನಾಯಕರು ಮತ್ತು ಸರಕಾರಗಳು ಬೇಕು. ಬರೇ ತೋಳು ಮೇಲೆ ಸರಿಸಿ , ದೊಣ್ಣೆ ಹಿಡಿದು ಗದರಿಸುವವರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ.
November 19th, 2008 at 231630
namaskara prathap ,
article tumbha chenagide ,
November 20th, 2008 at 210630
Ravichandran may be speaking tamil in the house, but his contribution to Kannada Film Industry is some thing we can not ignore. Personalities like Ravichandran should be honoured. No doubt.
We need a matured Raj Thakre in Karnataka. Only a person like that can get Kannada its due respect in Bangalore, which is speaking more hindi, tamil and telugu
November 20th, 2008 at 560330
Alli Yanada, illi yakadda, Madhya nama kannada.
I am sure we need 1 to make
Alli kannada, illi kannada, yeleliu nama kannada.
November 20th, 2008 at 512830
@venkat:
ಇದು ಮಣ್ಣು. ಯಾವತ್ತಾದ್ರೂ ಒಂದು ದಿನ ಬೈಯಪ್ಪನಹಳ್ಲಿ / ಹಲಸೂರು ಕಡೆ ಓಡಾಡಿ ನೋಡಿ. ಎಷ್ಟು ಬೆರೆತಿದಾರೆ ಗೊತ್ತಾಗುತ್ತೆ.
November 20th, 2008 at 595630
ಉತ್ತರದಿಂದ ಬಂದಿರೋರ್ಗೆ ನಮ್ಮ ದಕ್ಷಿಣದ ಭಾಷೆ ಕಲಿಯೋದು ಸ್ವಲ್ಪ ಕಷ್ಟ, ತಡ ಅಂತ ಏನಾದ್ರೂ ಚೂರಾದ್ರೂ ಸಮರ್ಥನೆ ಕೊಡಬಹುದು, ಆದರೆ ಈ ತಮಿಳರು ಮಾತ್ರ ಇಲ್ಲಿ ಎರಡು ಜನ್ಮ ಕಳೆದ್ರೂನೂ ಒಂದು ಭಾಷೆ ನೆಟ್ಟಗೆ ಕಲಿಯೋಲ್ಲ.
Basically, ಇವರೆಲ್ಲರ ಜಾಯಮಾನವೇ ಇಷ್ಟು. ಬರಿಯೆ ನನ್ನ xenophobia ಅಲ್ಲ. ಇಬ್ಬ್ರಿಗೂ ಸ್ವಭಾಷಾ ದುರಭಿಮಾನ, ತಿ * ಕೊಬ್ಬು.
ಭಾಷೆ ಗೌರವಿಸಸಬೇಕು ಇವರೆಲ್ಲರ ಕೈಲಿ ಅಂದ್ರೆ, ಭಾಷೆ ಕಲಿಸಬೇಕು. ಕಲಿಸಬೇಕು ಅಂದ್ರೆ ಸ್ವಲ್ಪನಾದ್ರೂ compulsion ಕೊಡ್ಬೇಕು.
November 28th, 2008 at 381330
Mr. Pratap,
Karnatakakke, khandita obba Raj Thakre bekagilla..Nammalliruva chaitanya jaagratavagabekideyashte.. Namma dourbalyakke bereyavaranna dooshisi enoo prayojana illa.. Naavu avakasha kottaga maatra namma pradeshakke anyaru baruvudu saadhya.. Innobbaru namma pradeshakke bandu avara saamrajya sthapisidare adu avara saamarthya hagu namma dourbalyateyanna saaruttade.. Idakke parihaara avarannu dooshisuvudarallilla.. Namma dourbalyavannu naavu metti horabaruvudarallide.. Indu naavu Vishweshwarayyanavara hesaranna mundittukondu satyaagrahakke kulitre, adakke yaavude artha illa.. Naavugalu madariyagi nillabeku.. Yaavudo katteya mele kulitu pattanga hodeyuvadakkinta, Corporation totti saarisuva kelasa eshto pavitravaadaddu. Indina paristitiyalli namage bekagirodu obba Raj Thakre alla, Karnataka illadidre innondu rajya ennuva Narayana Moorthiyantavaroo namage bekilla.. Aadare avaralliya uttama moulyagalanna alavadisikondu kaaryaroopakkilisuva ondu chaitanyasheela, utsaahee yuvajanangada avashyakate namagide. Nammannu naavu echcharisikondare, Namma samskriti, namma bhaashe, namma jana, namma karnataka emba abhimaana ukki haridare saaku.. Matte karnataka suvarna karnatakavaagi kangolisuvudaralli yaavude sandehavilla.. Modalu maatu kritiyaagabekide ashte….. Dhanyavadagalu!
January 4th, 2009 at 472131
good article sir,,,,,,,,,,
April 3rd, 2009 at 325230
ಹೌದು ಎಲ್ಲರೂ ಹೇಳಿದ್ದು ನಿಜ. ಯಾಕೆಂದರೆ ಇಲ್ಲಿ comments ಬರಿಯೋ ಎಲ್ಲರೂ ಬುದ್ದಿ ಜೀವಿಗಳು.
ಆದ್ರೆ other angle ನಲ್ಲಿ ನಾವು ಯಾವಥಾದ್ರು ಯೋಚನೆ ಮಾಡಿದ್ಹೀವ?
I will make it short and sweet
ಕನ್ನಡ ನೆಲದಲ್ಲಿ ಅನ್ಯ ಭಾಷೆಯವರ ವಲಸೆಯನ್ನು ನಿಲ್ಲಿಸಬೇಕೆಂದರೆ ಮೊಧಲು ನಾವು local talent ಅನ್ನು ಬೆಳೆಸಬೇಕು. ಎಲ್ಲರೂ ಹಳ್ಳಿಗಳ್ಳಲ್ಲಿ ಇರುವ ಪ್ರಥಿಭಾನ್ವಂಥ ಕನ್ನಡ ಮಕ್ಕಳಿಗೆ ಸಹಾಯ ಮಾಡಬೇಕು.
@Pratap Simha : ಪ್ರತಾಪ್ ರವರೆ ನಿಮ್ಮಲ್ಲಿ ಒಂದು ಪ್ರಾರ್ಥನೆ, ಬಳ್ಳಾರಿ ಬ್ರದರ್ಸ್ ನ ಹೆಸರು ಇಟ್ಕೊಂಡು ಎಲ್ಲ ರೆಡ್ಡಿ ಜನಾಂಗದ ಮೇಲೆ ಗೂಬೆ ಕೂರಿಸುವುಧು ಸೂಕ್ತವಲ್ಲ ಎನ್ನುವುಧು ನನ್ನ ಅಭಿಪ್ರಾಯ.
July 14th, 2010 at 412131
vishnu nimma helike sari yilla, swalpa yochane madi .
July 14th, 2010 at 583731
yogesh gowda & rakesh sheety avarige nanna vandanegalu