ನಿಮ್ಮನ್ನು ಅಭಿನಂದಿಸಬೇಕಿತ್ತೆ ಮುಖ್ಯಮಂತ್ರಿಯವರೇ?!
Saturday, July 26th, 2008“ಅಗತ್ಯ ಬಿದ್ದಾಗಲೆಲ್ಲ ನಿವೃತ್ತ ಶಿಕ್ಷಕರು, ಉಪ ನ್ಯಾಸಕರು, ವೈದ್ಯರು ಹಾಗೂ ಇತರ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಮತ್ತೆ ನೇಮಕ ಮಾಡಿಕೊಳ್ಳುತ್ತಾ ಬರಲಾಗಿದೆ. ಹಾಗೆ ನಿವೃತ್ತ ರಾಗಿರುವವರನ್ನೇ ನೇಮಕ ಮಾಡಿಕೊಳ್ಳುತ್ತಿರುವಾಗ ಹಾಲಿ ನೌಕರರ ಸೇವಾವಧಿಯನ್ನು ಎರಡು ವರ್ಷ ಹೆಚ್ಚಿಸುವುದರಲ್ಲಿ ತಪ್ಪೇನಿದೆ? ಆಡಳಿತದಲ್ಲಿ ದಕ್ಷತೆಯನ್ನು ತರಲು ಅನುಭವದ ಅಗತ್ಯವಿದೆ. ಹಾಗಾಗಿ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ೫೮ರಿಂದ ೬೦ಕ್ಕೆ ಏರಿಸಿದ್ದೇವೆ. ಅದಕ್ಕಾಗಿ ನನ್ನನ್ನು ಅಭಿನಂದಿಸುತ್ತೀರಿ ಎಂದು ಭಾವಿಸಿದ್ದೆ” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜುಲೈ ೨೦ರಂದು ಕರ್ನಾಟಕ ವಿದ್ಯುತ್ [...]










